PLEASE consult doctor before administering
24 June 2020
ಆಯುರ್ವೇದ ಔಷಧಿ-Above medicine was released by Baba Ramadev from his company, Patanjali on 24 June 2020. The cost of the kit is arround RRs.450/-. But, the Central Government instructed not to sell without taking their approval.
********
[8:53 PM, 6/17/2020] +91 93438 55135:
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
16.06.2020. ಸಂಚಿಕೆ-168
ಕೊರೋನಾ ಭಾಗ-1
ಕೊರೋನಾ ವ್ಯಾಪಿಸವುದನ್ನು ಸುಲಭವಾಗಿ ತಡೆಯೋಣ
***********
ಮತ್ತೆ ಕರೋನಾ ಮುಂಚೂಣಿಗೆ ಬರತೊಡಗಿದೆ, ವಿಶ್ವದ ಪಟ್ಟಿಯಲ್ಲಿ ಭಾರತ ಮೇಲಕ್ಕೇರುತ್ತಿದೆ.
ವ್ಯಾಪಕವಾಗಿ ಹರಡುತ್ತಿರುವುದು ಜನರಲ್ಲಿ ಆತಂಕ ತರುತ್ತಿದೆ.
ಬನ್ನಿ ನಮ್ಮ ಮನೆಗೆ ಬಾರದಂತೆ ತಡೆಯೋಣ.
ಪ್ರೋಟೀನ್ ಮತ್ತು ಕೊಬ್ಬಿನ ಮಾಲಿಕ್ಯೂಲ್ ಗಳಿಂದಾದ ದೊಡ್ಡ ಪೊರೆಯೊಳಗೆ ಸುರಕ್ಷಿತವಾಗಿದ್ದು ಆತಂಕ ತರುತ್ತಿರುವ ಈ ವೈರಸ್ ನೇರ ತೀಕ್ಷ್ಣ ಸಿಂಗಲ್ ಕೆಮಿಕಲ್ ಮಾಲಿಕ್ಯೂಲ್ ಔಷಧಿಗಳಿಗಿಂತ ಮಲ್ಟಿಪಲ್ ಮತ್ತು ಕಾಂಪ್ಲೆಕ್ಸ್ ಮಾಲಿಕ್ಯೂಲ್ ಗಳು ಉತ್ತಮ ಎಂಬುದು ಸಿದ್ಧಾಂತ.
ಈ ಸಿದ್ಧಾಂತದ ಅಡಿಯಲ್ಲಿ ವೈರಾಣುವಿನಿಂದ ನಮ್ಮನ್ನು ಸುರಕ್ಷಿತವಾಗಿಡಲು ನಮ್ಮ ನಮ್ಮ ಅಡುಗೆ ಮನೆಯಲ್ಲಿರುವ ತೀಕ್ಷ್ಣ ಮಸಾಲೆಗಳೇ ಸಾಕು ಎಂದಾಯಿತು!!!
ಈ ಮಸಾಲೆಗಳು ಹೇಗೆ ಕೆಲಸ ಮಾಡುತ್ತವೆ ನೋಡೋಣ:
ಮೂಗು, ಬಾಯಿ ಮೂಲಕ ದೇಹ ಸೇರುವ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಾಣುಗಳು ನಮ್ಮ ಶರೀರದ ಸೈನಿಕರೊಂದಿಗೆ ಮೊದಲು ಹೋರಾಡಬೇಕಾಗಿರುವುದು ಗಂಟಲೆಂಬ ಮಹಾದ್ವಾರದಲ್ಲಿ.
ನಮ್ಮ ಗಂಟಲಿನ ಸೈನ್ಯವನ್ನು ಬಲಪಡಿಸುವುದು
ಮತ್ತು
ವೈರಾಣುಗಳಿಗೆ ಅಲ್ಲಿ ಉಳಿಯಲು ಆಹಾರ, ಸ್ಥಳ ಕೊಡದಂತೆ ನೋಡಿಕೊಂಡರೆ ಯುದ್ಧದ ಮೊದಲೇ ಗೆದ್ದಂತೆ.
ಭಾರತದ ಎಲ್ಲರ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಅರಿಶಿಣ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಇವುಗಳಿಂದ ಗಂಟಲಿನಲ್ಲಿ ಅಭೇದ್ಯ ಕೋಟೆಯನ್ನೇ ಕಟ್ಟಿ ವೈರಾಣುಗಳನ್ನು ತಡೆದುಬಿಡಬಹುದು. ಅದರಲ್ಲೂ ಕಾಳು ಮೆಣಸು ವೈರಾಣುವಿನ ಪ್ರೋಟೀನ್ & ಲಿಪಿಡ್ ಪೊರೆಯನ್ನು ಹರಿದು ಹಾಕುತ್ತದೆ, ಅಲ್ಲಿಗೆ ವೈರಸ್ ನ ಅವನತಿ ಆರಂಭವಾಗುತ್ತದೆ. ನಮ್ಮ ಒಳಗಿನ ಸ್ವಲ್ಪವೇ ಇಮ್ಯೂನಿಟಿ ವೈರಾಣುವನ್ನು ಕೊಂದುಹಾಕುತ್ತದೆ. ಅಥವಾ ಅದಕ್ಕೂ ಸಹಕಾರ ಬೇಕಾದಲ್ಲಿ ಸರಕಾರ ನಿರ್ಧರಿಸಿದ ಇಮ್ಯೂನಿಟಿ ವರ್ಧಿಸುವ ಚವನಪ್ರಾಶವನ್ನು(ಉತ್ತಮ ಕಂಪನೆಯ ಉತ್ಪಾದನೆ ಬಳಸಿ) ಸೇವಿಸಿ ಗೆಲ್ಲಬಹುದು.
ಪೇಯ ತಯಾರಿಸುವ ವಿಧಾನ:
ಶುದ್ಧ ಅರಿಶಿಣ- ಒಂದು ಚಿಟಿಗೆ
ಶುಂಠಿ- ಸಣ್ಣ ಚೂರು
ಬೆಳ್ಳುಳ್ಳಿ- 2 ಬೇಳೆ
ಕಾಳುಮೆಣಸು- 4
ನೀರು- ½ ಟೀ ಕಪ್
ಕೆಲ ಕಾಲ ಕುದಿಸಿ ¼ ಕಪ್ ಗೆ ಇಳಿಸಿ ಸೋಸಿ ನಂತರ ಸ್ವಲ್ಪವೇ ಬೆಲ್ಲ ಬೆರೆಸಿ ಕುಡಿಯಿರಿ.
ಇದನ್ನು ಪ್ರತಿ 2-3 ತಾಸುಗಳಿಗೊಮ್ಮೆ ಸೇವಿಸಿ.
ಕಾಳು ಮೆಣಸು ಸೇವಿಸಿ ವೈರಾಣು ಪೊರೆ ಹರಿದುಹಾಕಿ:
ಮರೀಚಂ......ಜಂತು ಸಂತಾನ ನಾಶನಂ.....ಭೂತನಾಶನಂ.......||
-ಭಾವಪ್ರಕಾಶ ನಿಘಂಟು
ವಿಧಾನ
1 ಅಥವಾ 2 ಕಾಳು ಮೆಣಸುಗಳನ್ನು ಹಿಂದಿನ ದವಡೆಹಲ್ಲಿನಿಂದ ಕಚ್ಚಿ ನಿಧಾನವಾಗಿ ಗಂಟಲಿಗೆ ಇಳಿಸಿ, ಇದರಿಂದ ಗಂಟಲಿನಲ್ಲೇನಾದರೂ ವೈರಾಣುಗಳಿದ್ದರೆ ಅವುಗಳ ಪೊರೆ ಹರಿದು ಹೋಗುತ್ತದೆ.
ಎಲ್ಲವೂ ಪ್ರಾಕೃತಿಕ ದ್ರವ್ಯಗಳು ಮತ್ತು ನಿತ್ಯಸೇವನೆಯ ಅಡುಗೆ ಮಸಾಲೆಗಳಾದ್ದರಿಂದ ಯಾವುದೇ ಅಪಾಯ ಇಲ್ಲ.
*
ಇದರಿಂದ ಹೀಟ್ ಆಗಿ ಬಿಕ್ಕಳಿಕೆ ಬಂದರೆ "ಆ" ಎಂಬ ಅಕ್ಷರವನ್ನು ಆಳವಾಗಿ ಉಸಿರು ಮುಗಿವವರೆಗೆ ಹೇಳಬಹುದು.
ಉರಿ ಮೂತ್ರ ಬಂದರೆ ಪೇಯವನ್ನು ಸ್ವಲ್ಪ ಕಡಿಮೆ ಮಾಡಿ ಮತ್ತು 4-5 ತಾಸಿಗೊಮ್ಮೆ ಸೇವಿಸಬಹುದು.
ಪಥ್ಯ ಪಾಲನೆ ನೋಡೋಣ:
ಪ್ರೋಟೀನ್ ಮತ್ತು ಕೊಬ್ಬಿನ ಅಂಶವನ್ನು ಬಳಸಬೇಡಿ. ಅಂದರೆ,
ಹಾಲು
ಮೊಳಕೆ ಕಾಳು
ತುಪ್ಪ
ಮಾಂಸಾಹಾರ
ಕೊಬ್ಬರಿ
ಶೇಂಗಾ
ಕರಿದ ಮತ್ತು ವಗ್ಗರಣೆ ಕಲಸಿದ ಅನ್ನಗಳು.
ಪೇಯತಯಾರಿಕೆಗಾಗಿ-
ಇದರೊಂದಿಗೆ ಕಳಿಸಿರುವ ಧ್ವನಿಯನ್ನು ಕೇಳಬಹುದು.
***********
ಈ ನೀಲಿ ಸಾಲನ್ನು ಒಮ್ಮೆ ಮುಟ್ಟಿದರೆ "ಆಸ್ಪತ್ರೆ ರಹಿತ ಜೀವನ" ಲೇಖನಗಳನ್ನು ನೀವು ಪ್ರತಿ ದಿನವೂ ಪಡೆಯಬಹುದು 👇
https://t.me/hospitalfreelife_kan
ಮತ್ತು ನಂತರ
ನಿಮ್ಮ ಆಪ್ತ ಬಳಗವನ್ನು ನೀವೇ ನೇರವಾಗಿ ಸೇರಿಸಬಹುದು.
***********
[6:12 AM, 6/18/2020] +91 93438 55135:
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
17.06.2020. ಸಂಚಿಕೆ-169
ಕೊರೋನಾ ಭಾಗ-2
ಅಪಾಯದ ಮುನ್ಸೂಚನೆ ಇದೆ ; ಕರೋನಾವನ್ನು ತಡೆಯಿರಿ
ಯಾವುದೇ ಒಂದು ಪದ್ಧತಿಯನ್ನು ನಂಬಿ ಕೂಡುವ ಕಾಲ ಇದಲ್ಲ. ಹೇಗಾದರೂ ವೈರಸ್ ಹರಡುವುದನ್ನು ತಡೆಯೋಣ, ಇಲ್ಲದಿದ್ದಲ್ಲಿ ಅಪಾಯ ಜೋರಾಗಿ ಬರುತ್ತದೆ.
ಭಾರತದಲ್ಲಿ ಸಾವಿನ ಸಧ್ಯಕ್ಕೆ ಪ್ರಮಾಣ ಕಡಿಮೆ ಇರಬಹುದು ಆದರೆ ಒಂದೊಮ್ಮೆ ನಮಗೇ ಕೊರೋನಾ ಬಂದಿದೆ ಎಂದಾದರೆ ನಮ್ಮ ಮನದಲ್ಲಿ, ನಮ್ಮ ಕುಟುಂಬದಲ್ಲಿ ಎಷ್ಟು ಆತಂಕ ಮನೆಮಾಡುತ್ತದೆ!!! ಗುಣಮುಖರಾದರೂ ಮತ್ತೆ ಬರಲಾರದೆಂದೂ ಇಲ್ಲ.
ಈ ಯೋಚನೆಗಳ ನಡುವೆ ನಿತ್ಯವೂ ಭಯರಹಿತವಾಗಿ ಬದುಕಲು ಏನು ಮಾಡಬಹುದೆಂದು ಆಯುರ್ವೇದ ಆಚಾರ್ಯರು ಏನು ಹೇಳಿದ್ದಾರೆ ನೋಡೋಣ.
ಈ ರೀತಿಯ ರೋಗಗಳು ಬರುವ ಕಾರಣಗಳನ್ನು ಬಹು ಸೂಕ್ಷ್ಮವಾಗಿ ಹೇಳಿದ್ದಾರೆ.
ಸಧ್ಯಕ್ಕೆ ಹರಡುವ ವಿಧಾನಗಳನ್ನು ತಡೆಯಲು ಆಯುರ್ವೇದ ಏನು ಹೇಳುತ್ತದೆ ನೋಡೋಣ.
A) ಸೋಂಕು ಹರಡುವಿಕೆಯನ್ನು ತಡೆಯುವ ವಿಧಾನ:
• ಗಾತ್ರ ಸಂಸ್ಪರ್ಶಾತ್- ನೇರವಾಗಿ ಮುಟ್ಟುವುದನ್ನು, ಯಾವುದೇ ರೀತಿಯ ಶಾರೀರಿಕ ಸಂಬಂಧ ಇಟ್ಟುಕೊಳ್ಳುವುದು ಬೇಡ.
• ಸಹಾಸನ- ಅಂದರೆ ಸಂಬಂಧಿಗಳೂ, ಪರಿಚಯದವರೆಂದರೂ ಅತಿ ಹತ್ತಿರದಿಂದ ಒಂದೇ ಆಸನದಲ್ಲಿ ಕುಳಿತುಕೊಳ್ಳುವುದು ಬೇಡ.
• ಸಹಶಯ್ಯಾ- ಅಂದರೆ ಒಂದು ಹಾಸಿಗೆಯಲ್ಲೇ ಇಬ್ಬರು ಮಲಗುವುದು
• ಸಹಭೋಜನ- ಒಂದೇ ತಟ್ಟೆಯಲ್ಲಿ ಊಟ ಮಾಡುವುದು/ಮಾಡಿಸುವುದು ಬೇಡ
• ಸಹಪಾನ- ಒಂದೇ ಕಪ್ ನಲ್ಲಿ ಇಬ್ಬರು ಪಾನೀಯ ಸೇವಿಸುವುದು ನಿಶಿದ್ಧ
• ಉಡುಪುಗಳನ್ನು ಆಭರಣಗಳನ್ನು ಹಂಚಿಕೊಳ್ಳುವುದು ಸಲ್ಲದು.
ಇವುಗಳಿಂದ ಜನಸಮೂಹವನ್ನು ಧ್ವಂಸಮಾಡುವ ಸೋಂಕು ಹರಡುತ್ತವೆ, ಇಂತಹ ರೋಗಗಳನ್ನು ಜನಪದೋಧ್ವಂಸ ವ್ಯಾಧಿಗಳೆಂದು ಕರೆಯುತ್ತಾರೆ.
B) ವೈರಾಣು ಶರೀರದೊಳಗೆ ಬೆಳೆಯುವಿಕೆಯನ್ನುಬತಡೆಯಿರಿ:
ಸೋಂಕು ತಗುಲಿದರೂ ಸಹ ಎಲ್ಲರೂ ಧ್ವಂಸಗೊಳ್ಳುತ್ತಾರೆ ಅಥವಾ ಮರಣಿಸುತ್ತಾರೆ ಎಂದೇನೂ ಇಲ್ಲ. ಏಕೆಂದರೆ ಆ ವೈರಾಣು ಮಾನವನ ಶರೀರದಲ್ಲಿ ತನ್ನ ಸಂತತಿಯನ್ನು ಬೆಳೆಸಿ, ಆ ಶರೀರವನ್ನು ನಾಶ ಮಾಡಲು ಸೂಕ್ತ ಆಂತರಿಕ ವಾತಾವರಣ ಬೇಕೇಬೇಕು. ಅದಕ್ಕೆ ಪೂರಕ ಅಂಶಗಳೆಂದರೆ-
1) ಕಾರ್ಬನ್ ಡೈಆಕ್ಸೈಡ್
2) ಜೀರ್ಣವಾಗದೇ ಉಳಿದ ಪ್ರೋಟೀನ್ & ಕೊಬ್ಬು
ಮತ್ತು
3) ಸರ್ವಧಾತುಗತ ಶುಕ್ತಪಾಕ (ವ್ಯತ್ಯಾಸವಾದ ಪಿ.ಹೆಚ್ ಎನ್ನಬಹುದು)
ಈ ಮೂರೂ ಉತ್ಪತ್ತಿಯಾಗಲು ನಮ್ಮ ಕಲವು ತಪ್ಪುಗಳೇ ನೇರ ಕಾರಣ, ಅವುಗಳನ್ನು ಇಂದೇ ನಿಲ್ಲಿಸೋಣ-
• ಅಜೀರ್ಣಾಶನ- ಆಹಾರ ಜೀರ್ಣವಾಗದೇ ಇದ್ದರೂ ಸಮಯವಾಯ್ತೆಂದು ತಿನ್ನುವುದು
• ವಿಶಮಾಶನ- ಹಸಿವಾಗದೇ ತಿನ್ನುವುದು
• ಅದ್ಯಶನ- ಅಗತ್ಯವಿಲ್ಲದೇ ಮೇಲಿಂದ ಮೇಲೆ ತಿನ್ನುವುದು
• ರಾತ್ರಿ ಹೊಟ್ಟೆ ಬಿರಿಯುವಂತೆ ತಿಂದು ತಡವಾಗಿ ಮಲಗುವುದು.
• ವರ್ಷಕ್ಕೊಮ್ಮೆ ಪಂಚಕರ್ಮದಿಂದ ಶರೀರ ಶೋಧನ ಮಾಡಿಕೊಳ್ಳದೇ, ವ್ಯಾಧಿಗೆ ಪೂರಕಅಂಶಗಳನ್ನು ಶರೀರದಲ್ಲಿ ಇಟ್ಟುಕೊಂಡಿರುವುದು.
ವೈರಾಣು ಹರಡುವಿಕೆ ಮತ್ತು ಬೆಳೆಯುವಿಕೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ತಡೆಯುವ ವಿಧಾನಗಳನ್ನು ಪಾಲಿಸಿದಲ್ಲಿ ಕೊರೋನಾ ಒಂದೇ ಏಕೆ, ಮುಂದೆ ಬರಬಹುದಾದ ಸೋಂಕುಗಳನ್ನು ಅಲ್ಲೇ ತಡೆಯಬಹುದು.
***********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
18.06.2020. ಸಂಚಿಕೆ-170
ಕೊರೋನಾ ಭಾಗ-3
ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.
ಮತ್ತೆ ಕರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಲವು ಕಡೆ ಸೀಮಿತವಾಗಿರುವ ನಿರ್ದಾಕ್ಷಿಣ್ಯ ಲಾಕ್ ಡೌನ್ ಎಲ್ಲಕಡೆ ಲಾಕ್ ಡೌನ್ ಮಾಡುವ ಆತಂಕವೂ ಇದೆ.
ಹಾಗಾದರೆ ಪರಿಹಾರವೇನು? ಎಂದರೆ, ನಾವು ಅತ್ಯಗತ್ಯ ಕೆಲಸಗಳಿಗಾಗಿ ಹೊರಹೋಗಲೇಬೇಕಾದ ಪರಿಸ್ಥಿತಿಯಲ್ಲಿ ವೈರಾಣು ಗೊತ್ತಲ್ಲದಂತೆ ಸೋಂಕಲು ಬಂದರೆ ಅದನ್ನು ನಮ್ಮ ಗಂಟಲಿಂದ ಒಳಗಿಳಿಯದಂತೆ ತಡಡದುಬಿಡೋಣ.
ಆತ್ಮೀಯರೇ,
ಪ್ರಕೃತಿ ನಮ್ಮ ಆಸೆಗಳನ್ನು ಸಂಪೂರ್ಣವಾಗಿ ಪೂರೈಸಲು ಸಮರ್ಥವಾಗಿದೆ ಆದರೆ ದುರಾಸೆಯನ್ನಲ್ಲ.
ಮೊದಲು ಅತ್ಯಾವಶ್ಯಕವಾಗಿ ಬೇಕಾದ ಕೆಲಸಗಳನ್ನು ಮಾತ್ರ ಮಾಡುವ ಸಂಕಲ್ಪ ಮಾಡೋಣ.
ನಮ್ಮದು ಶೇ 75 ಕ್ಕಿಂತ ಹೆಚ್ಚು
• ಅನಗತ್ಯ ಮಾತು
• ಅನಗತ್ಯ ಓಡಾಟ
• ಅನಗತ್ಯ ದುಡಿಮೆ ಹಿಂದಿನ ಓಟ
ಹೌದೋ ಅಲ್ಲವೋ ಒಮ್ಮೆ ಪರಿಶೀಲಿಸಿ ನೋಡಿಕೊಳ್ಳೋಣ.
ಅದೇನೇ ಇರಲಿ,
ಮನುಷ್ಯ ತನ್ನ ಅಗತ್ಯಕ್ಕಾದರೂ ಹೊರ ಬರಲೇ ಬೇಕಲ್ಲ ಆಗ ಈ ಕೆಳಗಿನ ಒಂದಂಶ ಪಾಲಿಸಿದರೆ ವೈರಾಣು ಸೋಂಕನ್ನು ಎಷ್ಟೋ ಪಾಲು ತಡೆದಂತೆಯೇ ಸರಿ.
ಈ ಸಂಧರ್ಭದಲ್ಲಿ-
ಅಮೃತಸಮಾನವಾಗಿ ನಮ್ಮನ್ನು ರಕ್ಷಿಸುವ 2 ದ್ರವ್ಯಗಳೆಂದರೆ:
ತುಳಸಿ ಮತ್ತು ಜೇಷ್ಠ ಮಧು......
ಈ ಎರೆಡೂ ಯಾವುದೇ ತೆರನಾದ ವೈರಾಣುಗಳನ್ನು ತಡೆಯಲು ಅತ್ಯಂತ ಶ್ರೇಷ್ಠ ಎಂದು ಸಂಶೋಧನೆಗಳಿಂದ ದೃಢವಾಗಿದೆ.
ಇವುಗಳನ್ನು ಹೇಗೆ ಬಳಸಬೇಕೆಂದು ನೋಡೋಣ-
ಜೇಷ್ಠಮಧು ಫಾಂಟಾ ತಯಾರಿಕಾ ವಿಧಾನ:
(ನಾಲ್ಕು ಜನರಿಗೆ)
ರಾತ್ರಿ ಮಲಗುವ ಮೊದಲು 150 ಮಿ.ಲೀ ನೀರನ್ನು ಒಲೆಯಮೇಲೆ ಇಟ್ಟು ಅದು ಕುದಿಯಲು ಆರಂಭಿಸಿದೊಡನೆ 25ಗ್ರಾಂ ಜೇಷ್ಠಮಧು ಪುಡಿಯನ್ನು ಹಾಕಿ ಒಲೆಯನ್ನು ಆರಿಸಿ, ಸ್ವಲ್ಪ ಕದಡಿ ಮುಚ್ಚಿಟ್ಟು ಬಿಡಿ.
ಮರುದಿನ ಬೆಳಿಗ್ಗೆ ಅದನ್ನು ಮತ್ತೊಮ್ಮೆ ಕದಡಿ, ಸೋಸಿ ತೆಗೆಯಿರಿ, ಬಂದ ದ್ರವವೇ "ಜೇಷ್ಠಮಧು ಫಾಂಟಾ" ಇದಕ್ಕೆ 10 ತುಳಸಿ ಎಲೆಗಳನ್ನು ಹಾಕಿ ಅದನ್ನುನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಬಳಸಬೇಕು.
ಬಳಸುವ ವಿಧಾನ:
"ಸುಮಾರು 10ಮಿ.ಲೀ. ಬೆಚ್ಚಗಿನ ಫಾಂಟಾವನ್ನು ಬಾಯಿಯಲ್ಲಿ ಹಾಕಿಕೊಂಡು ಗಂಟಲನ್ನು 60-120 ಸೆಕೆಂಡುಗಳ ಕಾಲ ತೊಳೆದುಕೊಳ್ಳಬೇಕು."
ಈ ವಿಧಾನವನ್ನು ಮನೆಯಿಂದ ಹೊರಗೆ ಹೋಗುವಾಗ, ಹೊರಗಿನಿಂದ ಬಂದ ತಕ್ಷಣ ಸಂಜೆ ಮತ್ತು ರಾತ್ರಿ ಮಲಗುವಾಗ ಅನುಸರಿಸಿದರೆ ಯಾವುದೇ ತೆರನಾದ ವೈರಾಣು ಗಂಟಲಿನಿಂದ ಪುಪ್ಪುಸಕ್ಕೆ ಇಳಿಯುವುದೇ ಇಲ್ಲ. ಏಕೆಂದರೆ ಎರೆಡೂ ದ್ರವ್ಯಗಳು ಶ್ರೇಷ್ಠ ವೈರಾಣುನಾಶಕಗಳಾಗಿವೆ ಮತ್ತು ಗಂಟಲಿನ ಕಫವನ್ನು ಛೇದಿಸಿ ಸೋಂಕಿಗೆ ಬೇಕಾದ ಮೂಲ ವಾತಾವರಣವನ್ನೇ ಇಲ್ಲವಾಗಿಸುತ್ತವೆ.
ವಿಶೇಷ ಎಂದರೆ, ಒಂದೊಮ್ಮೆ ಈ ವೈರಾಣುಗಳು ಹೊಟ್ಟೆಯೊಳಕ್ಕೆ ಹೋದರೆ ಅಲ್ಲಿನ ಆಮ್ಲೀಯತೆಗೆ ಸತ್ತುಹೋಗುತ್ತವೆ.
ವಿಶೇಷ ಸೂಚನೆ:
ಬೆಳಿಗ್ಗೆ ಎದ್ದನಂತರ ಹಲ್ಲುಜ್ಜಲು ಯಾವ ಕಾರಣಕ್ಕೂ ಟೂತ್‌ಪೇಸ್ಟ್ ಬಳಸಬೇಡಿ. ಇದೊಂದು ಅನೇಕ ರೋಗಗಳ ಮೂಲ. ಅದರ ಬದಲು ಬೇವಿನಕಡ್ಡಿ, ಉಪ್ಪುನೀರಿನಿಂದ ಹಲ್ಲುಜ್ಜಿದರೆ ನೂರು ಪಾಲು ಉತ್ತಮ ದಂತಾರೋಗ್ಯ, ಜೀರ್ಣಶಕ್ತಿಯನ್ನು ಪಡೆಯಬಹುದು.
*********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
20.06.2020. ಸಂಚಿಕೆ-172
ಕೊರೋನಾಗೆ ಆಯುರ್ವೇದ ಚಿಕಿತ್ಸೆ.
"ಅಭಿನಂದಾರ್ಹ ವಿವೇಕಾನಂದ ಆಶ್ರಮದ ಸ್ವಾಮೀಜಿ"
ಶ್ರೀ ಗುರು ದಿವ್ಯ ಚೇತನ ಡಾ.ಎಂ.ಈಶ್ವರ ರೆಡ್ಡಿ ಅವರ ಶ್ರೀ ಚರಣಕ್ಕೆ ಅರ್ಪಣೆ.
ಇಂದು ಸಂಜೆ ಟಿ.ವಿ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ
10.06.2020 ರಂದು ಕೊರೋನಾ ಸೋಂಕಿಗೆ ಒಳಗಾಗಿದ್ದ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವಿನಯಾನಂದ ಸರಸ್ವತಿ ಅವರಿಗೆ ಅಂದಿನಿಂದಲೇ ಆಯುರ್ವೇದ ಚಿಕಿತ್ಸೆ ಆರಂಭಿಸಲಾಗಿತ್ತು, ಕೇವಲ ಒಂದು ವಾರದಲ್ಲಿ ಕೊರೋನಾ ಸೋಂಕಿನಿಂದ ಮುಕ್ತರಾಗಿ ಗುಣಮುಖರಾಗಿ 19.06.2020 ರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ನಮಗೆ ಆಯುರ್ವೇದ ಚಿಕಿತ್ಸೆಯೇ ಬೇಕೆಂದು ಸಂವಿಧಾನಾತ್ಮಕ ಹಕ್ಕನ್ನು ಉಲ್ಲೇಖಿಸಿ ಪಟ್ಟು ಹಿಡಿದದ್ದೂ ಅಲ್ಲದೇ. ಆಯುರ್ವೇದ ಚಿಕಿತ್ಸೆಯಿಂದ ಏನಾದರೂ ಅಪಾಯವಾದರೆ ನಾವೇ ಹೊಣೆ ಎಂಬ ದೃಢ ಲಿಖಿತ ಪತ್ರವನ್ನು ರವಾನಿಸಿ ಚಿಕಿತ್ಸೆ ಪಡೆದಿದ್ದರು. ಈ ಧೈರ್ಯ ತೋರಿದ ಸ್ವಾಮಿ ವಿನಯಾನಂದಜೀ ಅವರು ಅಭಿನಂದನಾರ್ಹರು. ತನ್ಮೂಲಕ ಜಗತ್ತಿಗೆ ಒಂದು ದೃಢ ಸಂದೇಶವನ್ನು ರವಾನಿಸಿದರು.
ಕೊನೆಗೂ ಆಯುರ್ವೇದ ವಿಧಾನಗಳಿಂದಲೇ ಸಂಪೂರ್ಣ ಗುಣಮುಖರಾಗಿದ್ದು ಹೆಮ್ಮೆಯ ಸಂಗತಿ.
ಶ್ರೀ ಸದ್ಗುರು ಆಯುರ್ವೇದ ಧನ್ವಂತರಿ ನಿತ್ಯಚೇತನ ಡಾ.ಎಂ.ಈಶ್ವರ ರೆಡ್ಡಿಯವರ ಕೃಪಾಶೀರ್ವಾದದ ದೆಸೆಯಿಂದ ಆಯುರ್ವೇದದ ಎಲ್ಲಾ ಕೋನಗಳನ್ನೂ ಬಳಸಿ ಯಶಸ್ಸನ್ನು ಕಾಣಲಾಯಿತು.
ಇಲ್ಲಿ
1. ಆಹಾರ
2. ವಿಹಾರ
3. ಔಷಧಿ
ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.
ಆಯುರ್ವೇದ ಎಂದರೆ ಕೇವಲ ಔಷಧವಲ್ಲ ಅದೊಂದು ಆರೋಗ್ಯಯುತ ಜೀವನ ವಿಧಾನ ಎಂಬ ನಮ್ಮ ಮತ ಸಾಬೀತಾಗಿದೆ.
ಅವರು ಔಷಧಗಳ ಜೊತೆ ಆಯುರ್ವೇದೋಕ್ತ ಆಹಾರವಿಧಿ, ನಿಯಮಿತ ವ್ಯಾಯಾಮ, ಪ್ರಣಾಯಾಮಗಳನ್ನು ಪಾಲಿಸುತ್ತಿದ್ದುದು ಇಲ್ಲಿ ಗಮನಿಸಲೇಬೇಕಾದ ಅಂಶವಾಗಿದೆ.
ವೈದ್ಯರಾಗಿ ನಮ್ಮ ಕರ್ತವ್ಯವನ್ನು ಶ್ರದ್ಧೆ ಭಕ್ತಿ ಮತ್ತು ಶ್ರೀ ಗರುವಿಗೆ ಅರ್ಪಣೆಯಿಂದ ಪೂರೈಸಲಾಗಿದೆ.
ಇನ್ನು ಇದನ್ನು ಅನುಸರಿಸಬೇಕಾದ ಕೆಲಸ ಜನಸಾಮಾನ್ಯರದ್ದು, ಮತ್ತು ಈ ಜಗತ್ತಿನದ್ದು.
ಆರೋಗ್ಯವಂತರಾಗಿರಲು ಆಹಾರ ವಿಹಾರ ಜೀವನ ಸದೃತ್(ಜೀವನ ಶೈಲಿ) ಕಾರಣ, ರೋಗ ಬಂದಾಗ ಆಯುರ್ವೇದ ಔಷಧ ಅತ್ಯಂತ ಸಮರ್ಥವಾಗಿ ಕೆಲಸಮಾಡುತ್ತದೆ.
*********
No comments:
Post a Comment