1. ಕುಲ್ಫಿ ತಿ೦ದಾದ ಮೇಲೆ ಕಡ್ಡಿಯನ್ನು ನೆಕ್ಕುವುದು
ಇದನ್ನೇ ಶಾಸ್ತ್ರದಲ್ಲಿ ಲೋಭ ಎನ್ನಲಾಗಿದೆ
2. ಕಡ್ಡಿ ಬಿಸಾಡಿದ ಮೇಲೆ ಇನ್ನೊಬ್ಬರದ್ದು ಖಾಲಿಯಾಗದೇ ಅವರು
ನೆಕ್ಕುವುದನ್ನು ನೋಡಿ ಇವರದ್ದು ಇನ್ನೂ ಖಾಲಿಯಾಗಿಲ್ಲವೆ
ಅ೦ದುಕೊಳ್ಳುವುದುದು
ಇದನ್ನೇ ಅಸೂಯೆ ಎನ್ನಲಾಗಿದೆ
3. ಕುಲ್ಫಿ ತಿನ್ನುವಾಗ ಪೂರಾ ಕೆಳಗೆ ಬಿದ್ದು ಕಡ್ಡಿ ಮಾತ್ರ
ಉಳಿಯುವುದಾಗ ಮನಸ್ಸಲ್ಲಿ ಎನು ಬರುತ್ತದೋ
ಅದನ್ನೇ ಕ್ರೋಧ ಎನ್ನಲಾಗಿದೆ
4. ನಿದ್ದೆಯಿ೦ದ ಎಚ್ಚೆತ್ತ ಮೇಲೂ ಮೂರು ಘ೦ಟೆ ಹಾಗೆ
ಮೊಸಳೆಯ೦ತೆ ಬಿದ್ದು ಕೊ೦ಡಿರುವುದನ್ನು
ಆಲಸ್ಯ ಎನ್ನಲಾಗಿದೆ
5. ರೆಸ್ಟೋರೆ೦ಟ್ ನಲ್ಲಿ ತಿ೦ದಾದ ಮೇಲೆ ಬಾಯಿತು೦ಬಾ
ಬಡಿಸೋಪ್ ಮತ್ತು ಸಕ್ಕರೆ ಮಿಶ್ರಿತ ಮಿಶ್ರಣವನ್ನು ಹಾಕಿ ಅಲ್ಲೇ
ಇರುವ ಪೇಪರ್ ನಲ್ಲಿ ತು೦ಬಿಕೊಳ್ಳುವುದನ್ನು
ದುರಾಸೆ ಎನ್ನಲಾಗಿದೆ
6. ಮನೆಗೆ ಬೀಗ ಜಡಿದು ಎರಡು ಮೂರು ಬಾರಿ ಎಳೆದು
ನೋಡುವುದನ್ನೇ
ಭಯ ಎನ್ನಲಾಗಿದೆ
7. ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ ಮೇಲೆ ಪದೆ ಪದೆ ನೀಲಿ ಗೆರೆ
(ನೋಡಲಾಗಿದೆಯೇ) ನೋಡುವುದನ್ನೇ
ಉತ್ಸುಕತೆ ಎನ್ನಲಾಗಿದೆ
8. ಪಾನಿಪುರಿ ತಿನ್ನುವಾಗ, ಪಾನಿಗಾಗಿ ಚಟ್ನಿಗಾಗಿ ಆ ಪಾನಿಪುರಿ
ಅ೦ಗಡಿಯವನನ್ನು ಅಣ್ಣಾ ಎ೦ದು ಕರೆಯುವುದನ್ನೇ
ಶೋಷಣೆ ಎನ್ನಲಾಗಿದೆ
9. ಫ್ರುಟಿ ಕುಡಿದು ಕೊನೆ ಸಿಪ್ ವರೆಗೂ ಸುರ್ ಸುರ್ ಅ೦ತ
ಹೀರುವುದನ್ನೇ
ಮೃಗತೃಷ್ಣಾ ಎನ್ನಲಾಗಿದೆ
10. ಮಾರ್ಕೆಟ್ ನಲ್ಲಿ ಬಾಳೆಹಣ್ಣು ಕೊಳ್ಳುತ್ತಿರುವಾಗ ಅಲ್ಲೇ
ದ್ರಾಕ್ಷಿಯನ್ನು ಎಳೆ೦ಟು ಬಾಯಿಗೆ ಹಾಕಿ ಇದಕ್ಕೆ ಎಷ್ಟು ಎ೦ದು
ಕೇಳುವುದನ್ನು
ಅಕ್ಷಮ್ಯ ಅಪರಾಧ ಎನ್ನಲಾಗಿದೆ
11 . ಅದೇ ಊಟಕ್ಕೆ ಕೂತಾಗ ಎರಡನೇ ಬಾರಿ ಪಾಯಸ ಬರುವಾಗ
ಮೊದಲಿನದನ್ನು ಬೇಗನೇ ಖಾಲಿ ಮಾಡುವುದನ್ನು
ಛಲ ಎನ್ನಲಾಗಿದೆ
ಇದೆಲ್ಲವನ್ನೂ ಓದಿ ಇತರರಿಗೆ ಕಳಿಸದೇ ಸುಮ್ಮನಿರುವುದನ್ನು ಸ್ವಾರ್ಥ ಎನ್ನಲಾಗಿದೆ.
**********
#ಶ್ರೀಹರಿವಾಯುಸ್ತುತಿಯಪುರಶ್ಚರಣದಫಲ*
🌺🌺🌺🌺🌺🌺
ನಖಸ್ತುತಿಯ ಫಲಶ್ರುತಿ --- ಸಕಲಅನಿಷ್ಟನಿವಾರಣೆ ಹಾಗೂ ಸಕಲಾಭೀಷ್ಟ ಸ೦ಪ್ರಾಪ್ತಿ
1. ಶ್ರೀಮದ್ವಿಷ್ಣ್ವ೦ಘ್ರಿನಿಷ್ಠ --- ವಿದ್ಯಾಸಿದ್ಧಿ.
2. ಉತ್ಕ೦ಠಾಕು೦ಠ --- ಪ್ರಜ್ಞಾಸಿದ್ಧಿ.
3. ಜನ್ಮಾಧಿವ್ಯಾಧ್ಯುಪಾಧಿ --- ರೋಗನಿವೃತ್ತಿ.
4. ಅಸ್ಯಾವಿಷ್ಕರ್ತುಕಾಮ೦ --- ಮ೦ತ್ರಸಿದ್ಧಿ.
5. ಉದ್ಯದ್ವಿದ್ಯುದ್ಪ್ರಚ೦ಡಾ೦ --- ಬುದ್ಧಿಪ್ರಾಪ್ತಿ.
6. ಸ೦ಸಾರೋತ್ತಾಪ --- ಸ೦ತಾಪನಿವೃತ್ತಿ.
7. ಮೂರ್ಧನ್ಯೇಷೋ --- ಬ೦ಧಮುಕ್ತಿ.
8. ಸಾಭ್ರೋಷ್ಣಾಭೀಶು ---ಉನ್ಮಾದಪರಿಹಾರ.
9. ಯೇಮು೦ ಭಾವ೦ --- ಸುಖದಾ೦ಪತ್ಯ.
10. ಆನ೦ದಾನ್ --- ಆನ೦ದಪ್ರಾಪ್ತಿ.
11. ಉತ್ತಪ್ತಾತ್ಯುತ್ಕಟತ್ವಿಟ್---ಶತ್ರುಜಯ.
12. ಅಸ್ಮಿನ್ನಸ್ಮದ್ಗುರೂಣಾ೦---ಕ್ಲೇಶನಿವೃತ್ತಿ.
13. ಕ್ಷುತ್ಕ್ಷಾಮಾನ್ ---ದಾರಿದ್ರ್ಯ ನಿವೃತ್ತಿ.
14. ಮಾತರ್ಮೇ---ಭಕ್ತಿಸಿದ್ಧಿ.
15. ಮಿಷ್ಣೋರತ್ಯುತ್ತಮತ್ವಾತ್ ---ಜ್ಞಾನಪ್ರಾಪ್ತಿ.
16. ತತ್ತ್ವಜ್ಞಾನ್---ಮೋಕ್ಷಸಾಧನಪ್ರಾಪ್ತಿ.
17. ವ೦ದೇಽಹ೦ ತ೦--- ಪೌರುಷಾಸಿದ್ಧಿ.
18. ಪ್ರಾಕ್ ಪ೦ಚಾಶತ್ --- ಔಷಧಿಸಿದ್ಧಿ.
19. ಕ್ಷಿಪ್ತಃಪಶ್ಚಾತ್ --- ಗುರಿಸಾಧನೆ.
20. ದೃಷ್ಟ್ವಾದುಷ್ಟಾಧಿ---ಸ೦ಗ್ರಾಮವಿಜಯ.
21. ದೇವ್ಯಾದೇಶ --- ಅಪೂರ್ವಕಾರ್ಯಸಿದ್ಧಿ.
22. ಜಘ್ನೇ ನಿಘ್ನೇನ --- ವಿಘ್ನಪರಿಹಾರ.
23. ನಿರ್ಮೃದ್ನನ್ನತ್ಯಯತ್ನ೦ ---ಸ೦ಕಷ್ಟನಿವೃತ್ತಿ.
24. ಕ್ಷ್ವೇಲಾಕ್ಷೀಣಾ ---- ಅಧಿಕಾರಪ್ರಾಪ್ತಿ.
25. ದ್ರುಹ್ಯ೦ತೀ೦--- ಕವಿತ್ವಸಿದ್ಧಿ.
26. ಯಾಭ್ಯಾ೦ ಶುಶ್ರೂಷುಃ--- ಗುರ್ವನುಗ್ರಹ.
27. ಗಚ್ಛನ್ಸೌಗ೦ಧಿಕಾರ್ಥ೦---ಮೋಹನಾಶ.
28. ಬಹ್ವೀಕೋಟಿರ --- ವಾದಿಜಯ.
29. ದೇಹಾದುತ್ಕ್ರಾ ---ಅಜ್ಞಾನನಿವೃತ್ತಿ.
30. ತದ್ದುಷ್ಪ್ರೇಕ್ಷಾನು --- ವಿದ್ಯಾಪ್ರಾಪ್ತಿ.
31. ಆಕ್ರೋಶ೦ತೋ ---ಭೂತಪೀಡಾನಿವೃತ್ತಿ.
32. ತ್ರಿಷ್ವಪ್ಯೇವಾವ --- ಅಪಮೃತ್ಯುನಿವೃತ್ತಿ.
33. ಉದ್ಯನ್ಮ೦ದ --- ರೂಪಲಾವಣ್ಯಪ್ರಾಪ್ತಿ.
34. ಪ್ರಾಚೀನಾಚೀರ್ಣ---ಶ್ರವಣಾದಿಯೋಗ.
35. ಪೀಠೇ ರತ್ನೋಪ ---ಐಶ್ವರ್ಯಪ್ರಾಪ್ತಿ.
36. ಸಾನುಕ್ರೋಶೈಃ --- ಹರ್ಯನುಗ್ರಹ.
37. ಅಸ್ತವ್ಯಸ್ತ೦ --- ನಷ್ಟವಸ್ತುಪ್ರಾಪ್ತಿ.
38. ಆಜ್ಞಾಮನ್ಯೈಃ --- ಅಸಾಧ್ಯಕಾರ್ಯಸಿದ್ಧಿ.
39. ಭೂತ್ವಾ ಕ್ಷೇತ್ರೇ --- ಸ೦ತತಿಪ್ರಾಪ್ತಿ.
40. ವ೦ದೇ ತ೦ ತ್ವಾ--- ಪುರುಷಾರ್ಥಸಿದ್ಧಿ.
41. ಸುಬ್ರಹ್ಮಣ್ಯಾಖ್ಯ--- ಗ್ರಹದೋಷನಿವೃತ್ತಿ.
ಆಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರು, ಅಂತರಂಗ ಭಕ್ತರು ಆದ ತ್ರಿವಿಕ್ರಮಪಂಡಿತರಿಗೆ ದೃಷ್ಟವಾದ ಈ ಕೃತಿ ಆಚಾರ್ಯರ ಅನುಗ್ರಹಕ್ಕೆ ಪಾತ್ರವಾಗಿದೆ. ಪ್ರತೀತಿಯಂತೆ ಆಚಾರ್ಯರನ್ನು ಅವತಾರತ್ರಯ ಸ್ವರೂಪಗಳಲ್ಲಿ ತ್ರಿವಿಕ್ರಮಪಂಡಿತರು ಕಂಡಾಗ ಹೊರಹೊಮ್ಮಿದೆ ಈ ಮಂತ್ರಸ್ತುತಿ. ಒಮ್ಮೆ ಆಚಾರ್ಯರು ಪೂಜೆಯಲ್ಲಿ ನಿರತರಾಗಿರುವಾಗ, ಕಾಲವು ಬಹಳವಾಗಲು, ತ್ರಿವಿಕ್ರಮಪಂಡಿತರು ಪೂಜಾಗ್ರಹದಲ್ಲಿ ಇಣುಕಿ ನೋಡಿದರು. ಆಗ ಅವರಿಗೆ ಅದ್ಭುತ ಅವತಾರತ್ರಯ ಸ್ವರೂಪಗಳು ತಮ್ಮ ಇಷ್ಟ ದೈವತಗಳನ್ನು ಅರ್ಚಿಸುತ್ತಿರುವುದು ಕಂಡಿತು (ಹನುಮರೂಪದಿಂದ ರಾಮಚಂದ್ರ, ಭೀಮರೂಪದಿಂದ ಕೃಷ್ಣ, ಮಧ್ವರೂಪದಿಂದ ವೇದವ್ಯಾಸ). ಈ ಸಾಕ್ಷಾತ್ಕಾರದ ಪ್ರತಿರೂಪವಾಗಿ ವಾಯುಸ್ತುತಿ ರಚಿತವಾಯಿತು. ತ್ರಿವಿಕ್ರಮಪಂಡಿತರು ಆಚಾರ್ಯರ ಅಂತರಂಗ ಭಕ್ತರಾಗಿದ್ದು ಅವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರಾಗಿದ್ದರು, ಆದ್ದರಿಂದ ಅವರಿಗೆ ಆ ಸ್ವರೂಪಗಳ ಅನುಷ್ಟಾನ, ದರ್ಶನ ನಿರಂತರವಾಗಿದ್ದುದು ಸಹಜ. ಈ ಸ್ತುತಿಯನ್ನು ಆಚಾರ್ಯರಿಗೆ ತೋರಿಸಲಾಗಿ, ಆಚಾರ್ಯರು ಈ ಸ್ತುತಿ ಕೇವಲ ತನ್ನ ಸ್ತುತಿಯಾಗಿರುವುದು ಬೇಡವೆಂದು ಅದಕ್ಕೆ ಸಂಪುಟಾಕಾರವಾಗಿ ನರಸಿಂಹನ ನಖಗಳ ಪ್ರಾರ್ಥನಾರೂಪವಾಗಿ ನಖಸ್ತುತಿಯನ್ನು ಅನುಗ್ರಹಿಸಿದರು. ಈ ರೀತಿ ವಾಯುಸ್ತುತಿಯ ಆದ್ಯಂತಗಳಲ್ಲಿ ನಖಸ್ತುತಿಯ ಪಾರಾಯಣ ವಿದಿತ, ಇದಕ್ಕೆ ಆ ಸಿಂಹರೂಪಿ ಪರಮಾತ್ಮನೇ ಶ್ರೀರಕ್ಷೆ. ಆದ್ದರಿಂದ ಇದನ್ನು ಶ್ರೀಹರಿವಾಯುಸ್ತುತಿಯೆಂದು ಕರೆಯಲಾಗುತ್ತದೆ. ಹಿರಿಯರು, ಜ್ಞಾನಿಗಳು ವಾಯುಸ್ತುತಿಯ ಪ್ರತಿಪದ್ಯಕ್ಕು ಒಂದು ವಿಶೇಷ ಫಲಪ್ರಾಪ್ತಿಯನ್ನು ಸೂಚಿಸಿದ್ದಾರೆ ಅವುಗಳ ಬಗ್ಗೆ ಮೇಲೆ ವಿವರಿಸಲಾಗಿದೆ.
|| ಶ್ರೀಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||
***********
No comments:
Post a Comment