ಸೋಮಪಾನಾರ್ಹರು ಎಂದರೆ ಯಾವ ದೇವತೆಗಳು ಮತ್ತು ಏಕೆ ಅವರಿಗೆ ಈ ಹೆಸರು ಬಂತು ?
ಪರಮಾತ್ಮನೊಬ್ಬನೇ ತಮ್ಮ ಪುರುಷಾರ್ಥ ಎಂದು ನಂಬಿದ ಬ್ರಹ್ಮ, ವಾಯು ಮೊದಲು ಎಲ್ಲಾ ಏಕಾಂತ ಭಕ್ತರಾದ ದೇವತೆಗಳು ಸೋಮಪಾನಾರ್ಹರು. 🙏🏽
ಇನ್ನೂ ಸ್ವಲ್ಪ ವಿವರವಾಗಿ ಹೇಳಬೇಕೆಂದರೆ...
ಒಟ್ಟಾರೆ ಭಕ್ತರಲ್ಲಿ ಐದು ವಿಭಾಗಗಳನ್ನು ಮಾಡಿದ್ದಾರೆ
ಶ್ರೀ ದಾಸಾರ್ಯರು ಹರಿಕಥಾಮೃತಸಾರ ದಲ್ಲಿ
ಮೂರನೆಯ ಕಕ್ಷೆಯಿಂದ
ಅರ್ಥಾತ್ (ಬ್ರಹ್ಮವಾಯುದೇವರಿಂದ) ಪ್ರಾರಂಭ ಮಾಡಿ
ಹದಿನೆಂಟನೆಯ ಕಕ್ಷೆಯವರೆಗೂ
ಅರ್ಥಾತ್
(ವಿಶ್ವಕ್ಸೇನ ಗಣಪ* ಧನಪ( ಕುಬೇರ ) ಅಶ್ನಿನಿದೇವತೆಗಳು)
ಎಲ್ಲ ದೇವತೆಗಳೂ ಸೋಮಪಾನಾರ್ಹ ದೇವತೆಗಳು
ಅರ್ಥಾತ್ ಏಕಾಂತ ಭಕ್ತರು
ಅರ್ಥಾತ್ ಚ್ಛಿನ್ನ ಭಕ್ತರು
ಅದರಲ್ಲೂ ಬ್ರಹ್ಮ ವಾಯು ಸರಸ್ವತಿ ಭಾರತೀದೇವಿಯರು
ಮಾತ್ರ ಅಚ್ಛಿನ್ನ ಭಕ್ತರು
ಅರ್ಥಾತ್ ಪ್ರಲಯಕಾಲದಲ್ಲಿಯೂ ಕೂಡ ಅಪರೋಕ್ಷಜ್ಞಾನ ತಿರೋಹಿತವಾಗುವುದಿಲ್ಲ
ಅದಕ್ಕೇ ಇವರನ್ನು ವಿಶೇಷವಾಗಿ
ಪರಶುಕ್ಲತ್ರಯರು ಎಂದು ಕರೆಯಲಾಗುತ್ತದೆ
ಅನಾದಿಕಾಲದಿಂದಲೂ ಕಲಿ ಸ್ಪರ್ಶವಿಲ್ಲ ಎಂಬುದೇ ಮುಖ್ಯ ಕಾರಣ ಅಷ್ಟೇ...
ಇವರನ್ನು
ವಿಶೇಷ ಭಕ್ತಿಯೋಗಿಗಳು
ಅರ್ಥಾತ್ ( ಅಚ್ಛಿನ್ನಭಕ್ತರು) ಎಂದೂ.....
ಗರುಡ ಶೇಷ ರುದ್ರರಿಂದ ಪ್ರಾರಂಭ ಮಾಡಿ
ವಿಶ್ವಕ್ಸೇನ ಗಣಪ ರವರೆಗೆ
ಭಕ್ತಿ ಯೋಗಿಗಳು
ಅರ್ಥಾತ್ ಚ್ಛಿನ್ನ ಭಕ್ತರು
ಎಂದು ಕರೆಯುವದುಂಟು
ಇನ್ನು ಹತ್ತೊಂಭತ್ತನೆಯ ಕಕ್ಷೆ
ಅರ್ಥಾತ್
(ಕರ್ಮಜದೇವತೆಗಳಿಂದ ಪ್ರಾರಂಭ ಮಾಡಿ )
ಇಪ್ಪತ್ತಾರನೆಯ ಕಕ್ಷೆಯವರೆಗೆ
ಅರ್ಥಾತ್
(ಕರ್ಮಾಭಿಮಾನಿ ಪುಷ್ಕರ ವರೆಗೆ)
ವಿಶೇಷಜ್ಞಾನ ಯೋಗಿಗಳು
ಎಂದೂ
ಇಪ್ಪತ್ತೇಳನೆಯ ಕಕ್ಷೆಯಿಂದ
ಅರ್ಥಾತ್
ಅಜಾನಜದೇವತೆಗಳಿಂದ ಪ್ರಾರಂಭ ಮಾಡಿ
ಇಪ್ಪತ್ತರೊಂಭತ್ತರವರೆಗೆ
ಅರ್ಥಾತ್
ದೇವಗಂಧರ್ವರ ವರೆಗೆ
ಜ್ಞಾನ ಯೋಗಿಗಳು
ಎಂದೂ ಅಷ್ಟೇ ಅಲ್ಲದೇ
ಬ್ರಹ್ಮವಾಯುದೇವರಿಂದ
ದೇವಗಂಧರ್ವರವರೆಗೂ
ಎಲ್ಲ ದೇವತೆಗಳೂ ಸಾಂಶಜೀವರೆಂದೂ
ಕರೆಸಿಕೊಳ್ತಾರೆ
ಇನ್ನು
ಮೂವತ್ತನೆಯ ಕಕ್ಷೆಯಿಂದ
ಅರ್ಥಾತ್
( ಮನುಷ್ಯಗಂಧರ್ವರಿಂದ ಪ್ರಾರಂಭಮಾಡಿ
ಮೂವತ್ತೆರಡನೆಯ ಕಕ್ಷದವರೆಗೂ
ಅರ್ಥಾತ್
ಮನುಷ್ಯಗಂಧರ್ವರು ಚಕ್ರವರ್ತಿಗಳು
ಮನುಷೋತ್ತಮರವರೆಗೂ)
ಕರ್ಮಯೋಗಿಗಳು ಮತ್ತು
ನಿರಂಶ ಜೀವರೆಂದು
ಕರೆಸಿಕೊಳ್ತಾರೆ...
ಒಟ್ಟಾರೆ ತಾತ್ಪರ್ಯ ಇಷ್ಟೇ
ಸೋಮ ಅಂದರೆ ಅಮೃತ
ಪಾನ ಮಾಡಲು ಅರ್ಹರಾದ ದೇವತೆಗಳು ಅಂತರ್ಥ...
ಒಟ್ಟಾರೆ ಐದು ಪ್ರಮುಖವಾದ ಪ್ರಭೇದಗಳು ಇವೆ ಅನ್ನೋದು ಅತ್ಯಂತ ಸೂಕ್ಷ್ಮವಾದ ವಿಚಾರ...
ಯಥಾಮತಿ ಯಥಾಶಕ್ತಿ ಅತ್ಯಲ್ಪ ಪ್ರಯತ್ನ...
🙏ಶ್ರೀನಿವಾಸ ದಯಾನಿಧೇ🙏
ಹರೇ ಶ್ರೀನಿವಾಸ..
ಸಮುದ್ರ ಮಥನದಲ್ಲಿ ಅಮೃತಪಾನಕ್ಕೆ ದೇವತೆಗಳಿಗೆ ನೆರವಾದವ..
.ದುಷ್ಟ ರಾಕ್ಷಸರ ಸಂಹಾರ ಮಾಡಿದವ ಅಮೃತಪ :
ಮುಕ್ತ ರನ್ನು ದೇವತೆಗಳನ್ನು ಬ್ರಹ್ಮ ವಾಯು ದೇವರನ್ನು ಸಲಹುವ ಭಗವಂತ ಅಮೃತಪ:
ಸೋಮನಾಮಕ ಭಗವಂತ ಮನೋ ನಿಯಾಮಕ ಚಂದ್ರ ರುದ್ರರಲ್ಲಿ ಸನ್ನಿಹಿತ
ಉತ್ಕೃಷ್ಟ ಜ್ಞಾನ ದ
ಪವಮಾನ ನ ಒಳಗೆ ವಿಶೇಷ ಸನ್ನಿಹಿತ..
. ಸೋಮರು ಎಂದರೆ ಉತ್ಕೃಷ್ಟ ಜ್ಞಾನ ಉಳ್ಳವರು.. ಇವರನ್ನು ಸದಾ ರಕ್ಷಣಾ ಮಾಡುವವ..
ಸೋಮರಸ ಅಂದರೆ ಭಕ್ತಿ ಪೂರ್ವಕ ಭಗವಂತನ ಲ್ಲಿ ಹರಿಯುವ ಮನಸು...
ತಾರತಮ್ಯೇನ ಬ್ರಹ್ಮ ವಾಯುಗಳಿಂದ ಪ್ರಾರಂಭಿಸಿ ಅಮೃತಪಾನಕ್ಕೆ ಅರ್ಹ ದೇವತೆಗಳು ತಮ್ಮ ತಮ್ಮ ಯೋಗ್ಯತೆಯಂತೆ ಭಗವಂತನ ಲ್ಲಿ ಭಕ್ತಿ ಮಾಡುವವರು.. ಸೋಮ ಅಮೃತ.. ಅಮರತ್ವ ಪ್ರದಾಯಕ..ಸೋಮ ನಾಮಕ ಭಗವಂತನ ವರಪ್ರಸಾದದಿಂದ
ಯಥಾಮತಿ ಪ್ರಯತ್ನ
🙇🏻♀🙇🏻♀🙏🙏
ತಮ್ಮ ಉತ್ತಮ ನಿರೂಪಣೆಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಾ , ಶ್ರೀಜಗನ್ನಾಥದಾಸಾರ್ಯರ ಸೇವಾರೂಪದಲ್ಲಿ ನನ್ನ ಅಲ್ಪಮತಿಗೆ ಅನುಸಾರವಾಗಿ ಶ್ರೀಹರಿವಾಯುಗುರುಗಳು ಪ್ರೇರೇಪಿಸಿದಷ್ಟು ನಿವೇದಿಸೊಕೊಳ್ಳಲು ಪ್ರಯತ್ನಿಸುವೆ .
ಕೃಷ್ಣಯಜುರ್ವೇದತೈತ್ತರೀಯ ಸಂಹಿತಾ ಚತುರ್ಥ ವೈಶ್ವದೇವ ಕಾಂಡದ ರುದ್ರಪ್ರಶ್ನದ ಚಮಕದಲ್ಲಿ -
"ನಮೋ ಯಾಮ್ಯಾಯ ಚ ಕ್ಷೇಮ್ಯಾಯ ಚ ನಮ ಉರ್ವರ್ಯಾಯ ಚ ಖಲ್ಯಾಯ ಚ ......." ಎಂಬುದಾಗಿ ಶ್ರೀರುದ್ರಾಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನರಸಿಂಹದೇವರ ನಾಮಗಳಲ್ಲಿ ಈ ಹೆಸರು ಬಂದಿದೆ . ಉರ್ವರಿ ಅಂತ ವೇದಮಂತ್ರದಲ್ಲಿ ಹೇಳಿದ ಹೆಸರನ್ನೇ ಶ್ರೀಜಗನ್ನಾಥದಾಸಾರ್ಯರು ಇಲ್ಲಿ ಔರ್ವರಿ ಎಂಬುದಾಗಿ ಸ್ತೋತ್ರ ಮಾಡಿದ್ದಾರೆ .
ಉರ್ವರಿ ಅಥವಾ ಔರ್ವರಿ ಎಂಬುದು ರುದ್ರದೇವರು ಭೃಗುವಂಶದಲ್ಲಿ ಬರುವ ಚ್ಯವನ ಮಹರ್ಷಿಯ ಪತ್ನಿಯ ತೊಡೆಯಿಂದ ಅವತಾರ ಮಾಡಿದ್ದರಿಂದ ಅವರಿಗೆ ಉರ್ವರಿ ಅಥವಾ ಔರ್ವರಿ ಅಂತ ಹೆಸರು . ಈ ಅವತಾರ ಮಾಡಲು ಕಾರಣ ಏನು ಅಂದ್ರೆ ತನ್ನ ವಂಶದವರನ್ನು ಹಿಂಸಿಸಿದ ದುಷ್ಟ ರಾಜರನ್ನು ನಾಶಪಡಿಸಲು ಮಾಡಿದ ಅವತಾರ . ಈ ಔರ್ವರಿ ಋಷಿಗಳು ತಮ್ಮ ಮೂಲರೂಪದ ಸಹಜ ಸ್ವಭಾವದಂತೆ , ತನ್ನ ವಂಶದವರನ್ನು ಹಿಂಸಿಸಿದ ರಾಜರುಗಳನ್ನು ತನ್ನ ಕೋಪಾಗ್ನಿಯಿಂದ ನಾಶಪಡಿಸಿದ ನಂತರ ಆ ಕೋಪಾಗ್ನಿ ಇನ್ನೂ ಹಾಗೇ ಧಗಧಗನೇ ಉರೀತಾಯಿತ್ತು ಅದನ್ನು ಶಾಂತ ಮಾಡುವ ಬಗೆ ಸ್ವತಃ ರುದ್ರದೇವರ ಅವತಾರರಾದ ಔರ್ವರಿಗೇ ತೋಚಲಿಲ್ಲ , ಆಗ ಔರ್ವರೀ ನಾಮಕ ಭಗವಂತನಿಂದ ಪ್ರೇರಿತರಾದ ಪಿತೃದೇವತೆಗಳ ಸೂಚನೆಯಂತೆ ತನ್ನ ಕೋಪವನ್ನು ಸಮುದ್ರದಲ್ಲಿ ಬಿಡಲಾಗಿ ಅದು ಕುದುರೆಯ ರೂಪದಿಂದ ಸಮುದ್ರವನ್ನು ಪ್ರವೇಶಿಸಿ ವಡವಾಗ್ನಿಯಾಯಿತು .
ಹೀಗೆ ಔರ್ವರಿ ಎಂಬ ಋಷಿಯಾಗಿ ಅವತಾರ ಮಾಡಿ ಸಜ್ಜನರಿಗೆ ಕಂಟಕರಾದ ದುಷ್ಟರಾಜರನ್ನು ಭಗವದಾಜ್ಞೆಯಂತೆ ನಾಶಮಾಡಿ ಆ ಔರ್ವರಿ ನಾಮಕ ಭಗವಂತನ ಸೇವೆಯನ್ನು ಮಾಡಿ ಆತನ ಚರಣಾರವಿಂದಗಳಲ್ಲಿ ಭಕ್ತಿಪೂರ್ವಕ ಆ ಸೇವೆಯನ್ನು ಸಲ್ಲಿಸಿದ್ದರಿಂದ ದಾಸಾರ್ಯರು ಇಲ್ಲಿ , ಔರ್ವರಿಯ ಪರಿಯಿತ್ತು ಹರಿಯ ಮೆಚ್ಚಿಸಿದೆ ಎಂದು ಪಂಪಾಪುರ ನಿವಾಸನನ್ನು ಭಕ್ತಿಪೂರ್ವಕ ಸ್ತೋತ್ರ ಮಾಡಿದ್ದಾರೆ .
🙏🏼🙇 ಜೈ ಹರ ನಮಃ ಪಾರ್ವತೀಪತಯೇ ಹರ ಹರ ಮಹಾದೇವ🙇🙏🏼
ಅತ್ಯದ್ಭುತ ಅತ್ಯಂತ ಸ್ಫುಟವಾದ ನಿರೂಪಣೆ ಆಚಾರ್ಯರೇ...
ಚ್ಯವನ ಋಷಿಗಳ ಪತ್ನಿ ಅರ್ಥಾತ್ ಸುಕನ್ಯಾಳ ತೊಡೆಯಿಂದ ಹುಟ್ಟಿದ್ದು
ಊರು ಅಂದ್ರೆ ತೊಡೆ
ಆ ಊರಿನಿಂದ ಹುಟ್ಟಿದ್ದರಿಂದ ಊರ್ವರಿ ಅಥವಾ ಔರ್ವರಿ
ಎಂಬುದು ಅನ್ವರ್ಥಕ ನಾಮ ಅಲ್ವ ರೀ...
ಇದರ ಹಿನ್ನೆಲೆಯಲ್ಲಿ ಪ್ರವಚನದಲ್ಲಿ ಕೇಳಿದ್ದು ಸ್ಮರಣೆಗೆ
ಬರ್ತಾಯಿದೆ
ಯಥಾಮತಿ ಯಥಾಸ್ಮೃತಿ ಅತ್ಯಲ್ಪ ಪ್ರಯತ್ನ ಆಚಾರ್ಯರೇ...
ಚ್ಯವನ ಋಷಿಗಳ ಪತ್ನಿ ಸುಕನ್ಯಾ
ಗರ್ಭವತಿಯಾದಾಗ ಕಾರ್ತವೀರ್ಯಾರ್ಜುನ ನ ವಿಪರೀತ ಹಿಂಸೆಯಿಂದ ಭಯಭೀತಗೊಂಡಾಗ ಅವಳ ಗರ್ಭಪಾತವಾಯ್ತು ಆಗ ಮತ್ತೇ
ಗರ್ಭವನ್ನು ತನ್ನ ತೊಡೆಯಲ್ಲಿಟ್ಟುಕೊಂಡು ಅದನ್ನು ರಕ್ಷಣೆ ಮಾಡಿ ಪ್ರಸವದ ಕಾಲಕ್ಕೆ ತಕ್ಕಂತೆ ತೊಡೆಯಿಂದ ಮಗು ಹುಟ್ಟಿದಾಗ ಅದಕ್ಕೆ
ಉರ್ವರಿ ಅಂತಲೂ
ಮತ್ತೊಂದು ಹೆಸರು ಔರ್ವರಿ ಅಂತಲೂ ಕರೆಯಲ್ಪಟ್ಟಿತು
ಔರ್ವರಿ ಋಷಿಗಳ ಕೋಪ ಮುಂದೆ ತಾವು ಹೇಳಿದಂತೆ
ಸಮುದ್ರದಲ್ಲಿ ವಡವಾನಲ
ರೂಪ ತಾಳಿತು
ಅನಂತ ಧನ್ಯತಾಪೂರ್ವಕ
🙏🙇♀🙇♀🙏
No comments:
Post a Comment