SEARCH HERE

Thursday, 25 June 2020

ಗೆಜ್ಜೆವಸ್ತ್ರ gejje vastra



ಗೆಜ್ಜೆ ವಸ್ತ್ರ ಮಹತ್ವ

ದೇವರಿಗೆ ಸಲ್ಲಿಸುವ ಕೆಲವು ಸೇವೆಗಳಲ್ಲಿ ಇದೊಂದು ಉತ್ತಮ ಸೇವೆ.
ದೇವರಿಗೆ ಅಭಿಷೇಕದ ನಂತರ ವಸ್ತ್ರ ಧಾರಣೆ.ಇಲ್ಲಿ ವಸ್ತ್ರಗಳ ಬದಲಿಗೆ ಗೆಜ್ಜೆ ವಸ್ತ್ರ ದೇವರಿಗೆ ಏರಿಸುತ್ತಾರೆ. ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಇದು ದೇವರಿಗೆ ಅತ್ಯಂತ
ಶ್ರೇಷ್ಠವು ಹೌದು.
ಪ್ರತಿದಿನ ಪೂಜೆಯಲ್ಲಿ ದೇವರಿಗೆ ಸ್ನಾನದ ನಂತರ ವಸ್ತ್ರಮ್ ಸಮರ್ಪಯಾಮಿ ಅಂತ ತುಳಸಿ ಅಥವಾ ಅಕ್ಷತೆ ಹಾಕುತ್ತೇವೆ.
ಆದರೆ ವಿಶೇಷ ಪೂಜೆ ;ಹೋಮ ,ಹವನ , ಸತ್ಯನಾರಾಯಣ ಪೂಜೆ , ಗೌರಿ ಪೂಜೆ ,ಲಕ್ಷ್ಮೀ ಪೂಜೆ , ಕಲಶವಿಟ್ಟು ಪೂಜೆ ಮಾಡುವಾಗ , ಹಬ್ಬಹರಿದಿನಗಳಲ್ಲಿ ಕಲಶಕ್ಕೆ (ದೇವರಿಗೆ) ಗೆಜ್ಜೆವಸ್ತ್ರವನ್ನು ಹಾಕುತ್ತಾರೆ.
ಗೆಜ್ಜೆ ವಸ್ತ್ರ ದೇವರಿಗೆ ಅರ್ಪಿಸುವುದರಿಂದ ಜನ್ಮಾಂತರ ಗಳಲ್ಲಿ ಎಂದೂ ವಸ್ತ್ರ ದಾರಿದ್ರ್ಯ ಕಾಡುವುದಿಲ್ಲ.
ವಸ್ತ್ರಕ್ಕೆ ಇನ್ನೊಂದು ಅರ್ಥ ಮಾರ್ಗ. ಜೀವನದಲ್ಲಿ ಒಳ್ಳೆಯ ಮಾರ್ಗದರ್ಶನಕ್ಕಾಗಿ ; ಸಂಸ್ಕಾರಕ್ಕಾಗಿ ದೇವರಿಗೆ ನಾವು ಈಗ ವಸ್ತ್ರವನ್ನು ಸಮರ್ಪಣೆ ಮಾಡಬೇಕು.

ಒಂದು ಗೆಜ್ಜೆ ವಸ್ತ್ರವನ್ನು ಮಾತ್ರ ದೇವರಿಗೆ ಇರಿಸಬೇಡಿ 
ಉತ್ತರೀಯಕ್ಕಾಗಿ ಇನ್ನೊಂದು ಗೆಜ್ಜೆ ವಸ್ತ್ರ ವನ್ನು ಇಡಬೇಕು
ಯಾರಿಗಾದರೂ ನೀವು ಮುತ್ತೈದೆಯರಿಗೆ ಸೀರೆ ಉಡುಗೊರೆ ಕೊಡುವಾಗ ಖಣವಿಲ್ಲದೆ(ಬ್ಲೌಸಪೀಸ) , ಕೇವಲ ಸೀರೆಯನ್ನು ಕೊಡಬೇಡಿ.
ಯಾವುದೇ ಬ್ರಾಹ್ಮಣನಿಗೆ ವಸ್ತ್ರ ದಾನ ಮಾಡುವಾಗ ಪಂಚೆಯ ಜೊತೆ ಉಪ ವಸ್ತ್ರವನ್ನು ಕೊಡಬೇಕು. ಒಂಟಿ ವಸ್ತ್ರವನ್ನು ಕೊಡಬೇಡಿ. ಅಕಸ್ಮಾತ್ತಾಗಿ ಬರೀ ಶರ್ಟ್ ಪೀಸ್ ಕೊಡುವಾಗ ವೀಳ್ಯದೆಲೆ ಮೇಲೆ ಕಿಂಚಿತ್ ದಕ್ಷಿಣೆ ಯನ್ನಾದರೂ ಇಟ್ಟು ಕೊಡಿ.

ದೇವರಿಗೆ 16 ತಂತುಗಳ ಗೆಜ್ಜೆವಸ್ತ್ರ (ಷೋಡಶ)

ದೇವಿಗೆ 18 ತಂತುಗಳು ಇರುವ ಗೆಜ್ಜೆವಸ್ತ್ರ (ಹದಿನೆಂಟು ಮೊಳ ಸೀರೆಯ ಸಂಕೇತ).
ತುಂಬಾ ದಿನಗಳ ಹಿಂದೆ ಮಾಡಿದ ಗೆಜ್ಜೆ ವಸ್ತ್ರವನ್ನು ಇಡುವುದು ಬೇಡ. ಪೂಜೆಯ ಒಂದು ದಿನದ ಹಿಂದೆ ಗೆಜ್ಜೆ ವಸ್ತ್ರವನ್ನು ತಯಾರಿಸಬಹುದು.

ಮನೆಯಲ್ಲಿಯೇ ತಯಾರಿಸಿದ ಗೆಜ್ಜೆ ವಸ್ತ್ರ ಅತ್ಯಂತ ಶ್ರೇಷ್ಠ.
ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ದೇವರಿಗೆ ಕುಂಕುಮ ಮಿಶ್ರಿತ ಹತ್ತಿಯ ಗೆಜ್ಜೆ ವಸ್ತ್ರ
ದೇವಿಗೆ ಹಳದಿ ಕುಂಕುಮ ಮಿಶ್ರಿತ ಗೆಜ್ಜೆ ವಸ್ತ್ರ
ನಾಗದೇವರ ಪೂಜೆ ಮಾಡುವಾಗ ಗೆಜ್ಜೆವಸ್ತ್ರಕ್ಕೆ ಅರಿಷಿಣ ಹಚ್ಚಿ ಹಳದಿ ಗೆಜ್ಜೆವಸ್ತ್ರ ಏರಿಸಬೇಕು.
***

#ಗೆಜ್ಜೆ_ವಸ್ತ್ರ

 ದೇವರಿಗೆ ಸಲ್ಲಿಸುವ ಕೆಲವೆ ಕೆಲವು ಸೇವೆಗಳಲ್ಲಿ ಇದೊಂದು ಉತ್ತಮ ಸೇವೆ..
ಸ್ನೇಹಿತರೇ ನೀವು ದೇವಸ್ಥಾನಗಳಲ್ಲಿ  ನೋಡಿರಿತಿರಾ ಅಭಿಷೇಕ ನಂತರ , ಶುದ್ಧೋದಕ ಸ್ನಾನ , ನಂತರ  ವಸ್ತ್ರ ಧಾರಣೆ ವಸ್ತ್ರ ಧಾರಣೆ ಅಂದರೆ ಗಂಡು ದೇವರಿಗೆ ಪಂಚೆ ಉಡಿಸಿ ಉತ್ತರಿಯನ್ನು ಹೊದೆಸುತ್ತಾರೆ , ಅದೆ ಹೆಣ್ಣು ದೇವರಿಗೆ ಕಚ್ಛೆ ಸೀರೆ ಅಂದರೆ ಹದಿನೆಂಟು ಮೊಳದ ಸೀರೆಯನ್ನು ಡಿಸಿ  ಖಣವನ್ನು ಹಾಕುತ್ತಾರೆ.. . ವಸ್ತ್ರ ಧಾರಣೆ ಮಾಡಿದ ಮೇಲೂ ಕೂಡಾ ದೇವರಿಗೆ ಗೆಜ್ಜೆ ವಸ್ತ್ರ ನನ್ನು ಏರಿಸುತ್ತಾರೆ  ಅಲಂಕಾರಕ್ಕಲ್ಲ ಗೆಜ್ಜೆ ವಸ್ತ್ರ ಅತ್ಯಂತ ಶ್ರೇಷ್ಠ ಅಂತ ...
ಇನ್ನು ನಾವು ಮನೆಗಳಲ್ಲಿ ಪ್ರತಿ ದಿನ  ಪೂಜೆ ಮಾಡಿದಾಗ ..ಸೀರೆ ಪಂಚೆ ಉಡಿಸಲ್ಲ , ಪರ್ಯಾಯವಾಗಿ ಗೆಜ್ಜೆ ವಸ್ತ್ರ ನನ್ನು ಏರಿಸುತ್ತೇವೆ...
ಇನ್ನು ಪ್ರತಿದಿನ ಗೆಜ್ಜೆವಸ್ತ್ರ ಎರಿಸಬೇಕಾ ? ಅನ್ನುವ ಪ್ರಶ್ನೆ ನಿಮ್ಮಲ್ಲಿ ಉದ್ಭವ ಆಗುತ್ತೆ .. 
ಹಾಗೇನೂ ಪದ್ದತಿ ಇಲ್ಲ , ಅದು ಅವರವರ ಅನಕೂಲ , ನಾವು ಪ್ರತಿದಿನ ಮನೆ ದೇವರಿಗೆ ಏರಿಸುತ್ತೇವೆ... ಇನ್ನು ಕೆಲವರು , ಶುಕ್ರವಾರ , ಶನಿವಾರ  ವಾರಗಳನುಸಾರ ಆಯಾದೇವರಿಗೆ  ಏರಿಸುತ್ತಾರೆ
ಪ್ರತಿದಿನ  ಪೂಜೆಯಲ್ಲಿ ಸ್ನಾನದ ನಂತರ  ವಸ್ತ್ರಮ್ ಸಮರ್ಪಯಾಮಿ ಅಂತ ಅಕ್ಷತೆ ಹಾಕಿದರೂ ನಡೆಯುತ್ತೆ.ನಂತರ  ಗಂಧ ಅಕ್ಷತೆ ಹೂ ಏರಿಸಿ  ಪೂಜೆ ಮಾಡಿ 
ಆದರೆ  ಏನಾದರೂ ಪೂಜೆ ಹೋಮ ,ಹವನ , ಸತ್ಯನಾರಾಯಣ ಪೂಜೆ , ಗೌರಿ ಪೂಜೆ ,ಲಕ್ಷ್ಮೀ ಪೂಜೆ , ಕಲಶವಿಟ್ಟು ಪೂಜೆ ಮಾಡುವಾಗ , ಹಬ್ಬಹರಿದಿನಗಳಲ್ಲಿ  ವ್ರತನೇಮದ  ಪೂಜೆ  ಇಂತಹ ಪೂಜೆಗಳಲ್ಲಿ  ದೇವರಿಗೆ ವಸ್ತ್ರವಿಲ್ಲದ  ಪೂಜೆ ಮಾಡಬಾರದು  ಪೂಜೆ ಮಾಡಿದರೆ ಖಂಡಿತಾ ದಾರಿದ್ರ್ಯ  ಕಾಡುತ್ತೆ  ಅದಕ್ಕೆ ಯಾವುದೇ  ವಿಶೇಷ ಪೂಜೆಗೆ ಗೆಜ್ಜೆವಸ್ತ್ರ  ಏರಿಸಿಯೇ ಪೂಜೆ ಮಾಡಬೇಕು ...
ಗೆಜ್ಜೆ ವಸ್ತ್ರ ಎರಿಸುವದರಿಂದ  , ಗೆಜ್ಜೆ ವಸ್ತ್ರ ದಾನ  ಮಾಡುವುದರಿಂದ ಜನ್ಮಾಂತರ ಗಳಲ್ಲಿ ಎಂದೂ ವಸ್ತ್ರ ದಾರಿದ್ರ್ಯ ಕಾಡುವುದಿಲ್ಲ . ಹೊಟ್ಟೆ ಬಟ್ಟೆಗೆ ಯಾವತ್ತೂ ದಾರಿದ್ರ್ಯ  ಬರಲ್ಲ...
 ಇನ್ನು ಗೆಜ್ಜೆ ವಸ್ತ್ರ ನನ್ನು  ಎಷ್ಟು ಏರಿಸಬೇಕು.. ಹೇಳ್ತೇನೆ  ಕೇಳಿ ...

ಕಾಳು ಬಿಡಿಸಿ ಹತ್ತಿಯಿಂದ ನೀವೇ ಮಾಡಿದ ಗೆಜ್ಜೆ ವಸ್ತ್ರ ಬಹಳ ಶ್ರೇಷ್ಠ .... ಬೇಕಾದರೆ ಅಂಗಡಿಯಿಂದ ತಂದ ಗೆಜ್ಜೆ ವಸ್ತ್ರ ಅಲಂಕಾರಕ್ಕೆ ಏರಿಸಿ ... ಹತ್ತಿಯಿಂದ ಬಿಡಿಸಿದ ಹತ್ತಿಕಾಳುಗಳನ್ನು ಕಸದ ಡಬ್ಬಿಗೆ ಹಾಕಿದೆ ಹಾಗೆ ಕೂಡಿ ಇಟ್ಟು ಒಂದು ತುಂಡು ಬೆಲ್ಲ ದ ಜೊತೆ ಆಕಳಿಗೆ ತಿನ್ನಿಸಿದರೆ ವಿಶೇಷ ಫಲ ಪ್ರಾಪ್ತಿ

#ಎಷ್ಟುಗೆಜ್ಜೆವಸ್ತ್ರ_ಏರಿಸಬೇಕು

ಹೆಣ್ಣು ದೇವರಿಗೆ ಹದಿನೆಂಟು ಗೆಜ್ಜೆ  ಜೊತೆಗೆ ಎರಡು  ಗೆಜ್ಜೆ ಖಣ (ಖಣ ಅಂದರೆ ಕೆಲವರಿಗೆ ಗೊತ್ತಾಗಲ್ಲ   ಬ್ಲೌಸ್ ಪೀಸ) ಅಂತ , ಯಾಕೆ ಹದಿನೆಂಟು ಅಂದರೆ ಹೆಣ್ಣು ದೇವರಿಗೆ ಹದಿನೆಂಟು ಮೊಳದ ಸೀರೆಯನ್ನು  ಉಡಿಸುತ್ತಾರೆ  ಅದೆ ಶ್ರೇಷ್ಠ ..

ಇನ್ನು ಗಂಡು ದೇವರ ಪೂಜೆ ಮಾಡಿದಾಗ ಹದಿನಾರು ಗೆಜ್ಜೆ  ಇರುವ ವಸ್ತ್ರ  ಜೊತೆಗೆ ಎರಡು ಗೆಜ್ಜೆ ಉತ್ತರಿಯಗೆ 
ಯಾಕೆ ಅಂದ್ರೆ ಹದಿನಾರು ಮೊಳದ ಪಂಚೆ  ಗಂಡು ದೇವರಿಗೆ ಉಡಿಸುತ್ತಾರೆ , ಉತ್ತರಿ ಹೆಗಲು ಮೇಲೆ ಹೊದಿಕೆ..

ಇನ್ನೊಂದು ವಿಷಯ ಹೇಳ್ತೇನೆ  ಕೇಳಿ ಯಾವತ್ತೂ ದೇವರಿಗೆ ಒಂಟು ಪದರಿನಲ್ಲಿ ಗೆಜ್ಜೆ ವಸ್ತ್ರ ಏರಿಸಬಾರದು ಮತ್ತು  ಒಂಟಿ  ವಸ್ತ್ರವನ್ನು ಏರಿಸಬಾರದು , ಜೊತೆಗೆ ಎರಡು ಖಣ , ಇಲ್ಲ ಉತ್ತರಿ  ಜೊತೆಗೆ ಏರಿಸಬೇಕು ....

ಯಾಕೆ ಒಂಟಿ ವಸ್ತ್ರ ಎರಿಸಬಾರದು ಅಂದರೆ ಸತ್ತಮೈಲಿಗೆ ಬಿಡಿಸುವಾಗ ಒಂಟಿ ವಸ್ತ್ರವನ್ನು ಕೊಡುತ್ತೇವೆ ಅವರಿಗೆ ಹೊದೆಯುತ್ತೇವೆ .. ಅದಕ್ಕೆ ಯಾರಿಗಾದರೂ ನೀವು   ಮುತ್ತೈದೆಯರಿಗೆ ಸೀರೆ ಉಡುಗೊರೆ ಕೊಡುವಾಗ ಖಣವಿಲ್ಲದೆ(ಬ್ಲೌಸಪೀಸ) ,ಒಂಟು ಸೀರೆಯನ್ನು ಕೊಡಬೇಡಿ ಇದರಿಂದ  ನಿಮಗೆ ವೈಧವ್ಯ ಪ್ರಾಪ್ತಿ ಯಾಗುತ್ತದೆ ..
ಯಾವುದೇ ಬ್ರಾಹ್ಮಣನಿಗೆ ವಸ್ತ್ರ  ದಾನ ಮಾಡುವಾಗ ಒಂಟಿ ವಸ್ತ್ರವನ್ನು ಕೊಡಬೇಡಿ  ಅಕಸ್ಮಾತ್ತಾಗಿ ಬರೀ ಶರ್ಟ್ ಪೀಸ್ ಕೊಡುವಾಗ ವಿಳೆದೆಲೆ ಮೇಲೆ ಶಕ್ತ್ಯಾನುಸಾರ ದಕ್ಷಿಣೆ ಇಟ್ಟು ಕೊಡಬೇಕು.. ಹಾಗೆ ಕೊಟ್ಟರೆ ನಿಮಗೆ ಖಂಡಿತಾ ಒಳ್ಳೆಯದಾಗಲ್ಲ....

ಇನ್ನು ಕೆಲವರು ಕೇಳುತ್ತಾರೆ ಬರೀ ಹದಿನೆಂಟು ಗೆಜ್ಜೆ ವಸ್ತ್ರ   ದೇವರಿಗೆ  ಸಾಲಲ್ಲ ಅಂತ  , ಆಗ ನೀವು ಹೆಣ್ಣು ದೇವರ ಮತ್ತು ಗಂಡು ದೇವರಿಗೆ ಶಾಸ್ತ್ರ ಅನುಸಾರ , ಹದಿನೆಂಟು , ಹದಿನಾರು ಏರಿಸಿ ಅಲಂಕಾರಕ್ಕೆ ಮತ್ತೆ ದೊಡ್ಡ ಗೆಜ್ಜೆ ವಸ್ತ್ರ ಏರಿಸಿ ಬಹುದು...

ನಾಗದೇವರ ಪೂಜೆ ಮಾಡುವಾಗ ಗೆಜ್ಜೆವಸ್ತ್ರಕ್ಕೆ  ಅರಿಷಿಣ ಹಚ್ಚಿ ಹಳದಿ ಗೆಜ್ಜೆವಸ್ತ್ರ  ಏರಿಸಬೇಕು ,   ಶಿವನಿಗೆ ಬಿಳಿಗಂಧವನ್ನು  ಹಚ್ಚಿ ಏರಿಸಬೇಕು ಉಳಿದ ದೇವರಿಗೆ ಅರಿಷಿಣ ಕುಂಕುಮ ಗಂಧದ ಜೊತೆ ಸೇರಿಸಿ ಹಚ್ಚಿ  ಏರಿಸಬೇಕು...
ಇನ್ನೊಂದು ವಿಷಯ  ಗೆಜ್ಯೆವಸ್ತ್ರ , ಬತ್ತಿ ಇವುಗಳನ್ನು ಸೋಮವಾರ,  ಅಮಾವಾಸ್ಯೆ  ಸೂರ್ಯಾಸ್ತದ ನಂತರ ಮಾಡಬಾರದು ,.. ಹತ್ತಿ ಹಿಡಿಯಬಾರದು

ಕೆಲವರು ಲಕ್ಷ  ಗೆಜ್ಜೆ ವಸ್ತ್ರವ್ರತ  ಹಿಡಿಯುತ್ತಾರಲ್ಲ ಅವರು ಆ ಗೆಜ್ಜೆ ವಸ್ತ್ರ  ಎಲ್ಲವನ್ನು ಕೂಡಿ ಇಟ್ಟು ರೆಷ್ಮೆ ವಸ್ತ್ರ ದಿಂದ ಚೀಲ ಮಾಡಿಸಿ   ಆ ಗೆಜ್ಜೆ ವಸ್ತ್ರವನ್ನು  ಬಿಡಿಸಿ ಹತ್ತಿಯಿಂದ ಯಾವ ದೇವರಿಗೆ  ವ್ರತ ಹಿಡಿದಿರುತ್ತಾರೊ. ಆ ದೇವರ ಪಾಲಿಕೆಗೆ  ಗಾದೆಯನ್ನು ಮಾಡಿ ಕೊಡಬೇಕು....
✍️✍️✍️ ವೀಣಾ ಜೋಶಿ
**********

No comments:

Post a Comment