the dates are simply not true, they are pegged for the convience of western social engineers.
A couple of years ago in a off shore exploration off the coast of Gujarat nat Geo has assertained that Krishna's two cities were submerged around 38000 years ago, and this is in sync with our Sanathana Dharma books and literature which also dates the time frame of Krishna's end on earth approx 38000 to 40000 years.
So the data being circulated is hoax,
We should be careful and should not fall pray to such social engineering.
ನಂದೇನದೋ ಸ್ವಾಮಿ ನಿಂದೇ ಇದೆಲ್ಲವು...
🙏🙏🙏ಭಾಗ೨
✍ಹಿಂದಿನ ಸಂಚಿಕೆಯಲ್ಲಿ ಸ್ಯಮಂತಕ ಮಣಿಯನ್ನು
ಭಗವಂತನು ಕೇಳಿದರು ಸಹ ಸತ್ರಾಜಿತ ಅದನ್ನು ಕೊಡದೇ ಇರುವುದು. ಮತ್ತು ಅವನು ಮಾಡಿದ ಈ ತಪ್ಪು. ಅದರಿಂದ ಆದ ಅನಾಹುತ ಇವುಗಳ ಬಗ್ಗೆ ತಿಳಿದೆವು.
ಸ್ಯಮಂತಕ ಮಣಿಯನ್ನು ಕಳೆದುಕೊಂಡ ಸತ್ರಾಜಿತ ನಿಗೆ ಮತ್ತೆ ಶ್ರೀ ಕೃಷ್ಣ ಅದನ್ನು ಹುಡುಕಿ ತಂದುಕೊಟ್ಟ.
ಅದೇ ರೀತಿಯಲ್ಲಿ
ನಮಗೆ ಸಂಪತ್ತು ಯಾವುದೇ ಇರಲಿ ಅದನ್ನು ಕಳೆದುಕೊಂಡಾಗ ಅವನೇ ನಮಗೆ ಅನುಗ್ರಹ ಮಾಡಿ ಕೊಡಬೇಕು.
ಕಳೆದುಕೊಂಡ ಅಂದರೆ ನಮ್ಮ ಬಳಿ ಇರಲಾರದ್ದು. ಅದು ಜ್ಞಾನ, ಧನ, ಯಾವುದಾದರು ಸರಿಯೇ ಇವುಗಳನ್ನು ನಮಗೆ ಕೊಡಲು ಶ್ರೀ ಕೃಷ್ಣ ಪರಮಾತ್ಮನು ಬರಬೇಕು ಮತ್ತು ಅವನ ಅನುಗ್ರಹ ಇರಬೇಕು. ಅವನ ವಿನಃ ಬೇರೆ ಯಾರು ನಮಗೆ ಯಾವುದೇ ಸಂಪತ್ತು ಕೊಡಲು ಸಾಧ್ಯವಿಲ್ಲ.
ಶ್ರೀ ಕೃಷ್ಣ ಪರಮಾತ್ಮನನಿಗೆ ಕೊಡದ ಸ್ಯಮಂತಕ ಮಣಿಯನ್ನು ಮನೆಯಲ್ಲಿಇಟ್ಟ ಸತ್ರಾಜಿತ. ಅವನ ತಮ್ಮ ಪ್ರಸೇನ ಅದನ್ನು ಧರಿಸಿಕೊಂಡು ಅಡವಿಗೆ ಬೇಟೆಯಾಡಲು ಹೋದ.ಅಶುಚಿಯಾದ ಕಾರಣದಿಂದಾಗಿ ಅವನು ಸಿಂಹ ದಿಂದ ಹತನಾದ.
ಭಗವಂತನಿಗೆ ಕೊಡುವುದಿಲ್ಲ ಎಂದು ಹೇಳಿದ್ದರ ಪರಿಣಾಮ,ಅವನ ಸಂಪತ್ತನ್ನು ಅವನಿಗೆ ಹಿಂತಿರುಗಿ ಕೊಡದೇ ದ್ರೋಹ ಮಾಡಿದ ಪರಿಣಾಮ ಸತ್ರಾಜಿತ ನಿಗೆ ಆದ ದುಷ್ಟ ಪರಿಣಾಮವೇ ಪ್ರಸೇನನ ಸಾವು.
ಸ್ಯಮಂತಕ ಮಣಿಯನ್ನು ಧರಿಸಿದ್ದರು ಅವನಿಗೆ ಅಪಾಯದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ.
ದೇವರಿಗೆ ಕೊಡದ ಸಂಪತ್ತು ಎಂದಿಗೂ ನಮ್ಮ ಬಳಿ ಉಳಿಯಲು ಸಾಧ್ಯವಿಲ್ಲ ಎನ್ನುವ ಘಟನೆ ಮೇಲೆ ನಾವು ನೋಡಬಹುದು.
ಮೇಲಾಗಿ ಅವನು ಅಶುಚಿಯಾಗಿ ಇದ್ದ.
ಅಶುಚಿ ಎಂದರೆ ಶುಚಿಯಾಗಿ ಇರದವನು.
ಸ್ಯಮಂತಕ ಮಣಿಯನ್ನು ತಂದು ಶ್ರೀ ಕೃಷ್ಣ ಸತ್ರಾಜಿತನಿಗೆ ಹಿಂತಿರುಗಿ ಕೊಡುವನು.
ಸತ್ರಾಜಿತನಿಗೆ ಮಾಡಿದ ತಪ್ಪಿನ ಅರಿವಾಗಿ ತನ್ನ ಮಗಳಾದ ಸತ್ಯಭಾಮೆ ದೇವಿಯನ್ನು ಆ ಮಣಿಯೊಂದಿಗೆ ಶ್ರೀ ಕೃಷ್ಣ ಪರಮಾತ್ಮನಿಗೆ ಕೊಟ್ಟು ವಿವಾಹ ಮಾಡುತ್ತಾನೆ.
ದೇವರಿಗೆ ಅಥವಾ ಧರ್ಮಕಾರ್ಯಗಳಿಗೆ ನಮ್ಮಬಳಿ ಸಂಪತ್ತು ಇದ್ದರು ಸಹ, ಯಾರಾದರೂ ಸಹಾಯ ಕೇಳಿದಾಗ , ಮಾಡದೇ ಹಾಗೇ ಇದ್ದರೆ ಅಥವಾ,ನಮ್ಮ ಸಂಪತ್ತು ಒಂದು ವೇಳೆ ಕಳೆದುಕೊಂಡಾಗ,ಹಿಂತಿರುಗಿ ಸಂಪತ್ತು ಬಂದಾಗ ಹಿಂದೆ ಮಾಡಿದ ಭಗವಂತನಿಗೆ ಕೊಡದ ಅಪರಾಧದ ಪಾಪವನ್ನು ನಾವು ಮತ್ತೆ ತಪ್ಪು ಕಾಣಿಕೆಗಳನ್ನು ಕೊಟ್ಟು ಪರಿಹಾರ ಮಾಡಿಕೊಳ್ಳಲು ಬೇಕು.
ಶ್ರೀ ಕೃಷ್ಣನಿಗೆ ಸತ್ರಾಜಿತಕೊಟ್ಟ ಮಣಿಯನ್ನು ಮತ್ತೆ ಭಗವಂತ ಹಿಂತಿರುಗಿ ಅವನಿಗೆ ಕೊಡುತ್ತಾನೆ.
ಮೊದಲು ಅವನು ಅದೇ ಕೆಲಸ ಮಾಡಿದ್ದರು ಸಹ ಸ್ವಾಮಿ ಹಿಂತಿರುಗಿ ಕೊಡುತ್ತಾ ಇದ್ದ.
ಅವನ ಲೋಭತನವನ್ನು ಜಗತ್ತಿಗೆ ತೋರಿಸಲೋಸುಗ ಭಗವಂತ ಮಾಡಿದ ಲೀಲೆಗಳಲ್ಲಿ ಇದು ಒಂದು.
ನಾವು ಭಗವಂತನಿಗೆ ಅಥವಾ ಮಠಕ್ಕೆ ಅಥವಾ ಅವನ ಭಕ್ತರಿಗೆ ಏನಾದರು ಕಿಂಚಿತ್ತೂ ಕೊಟ್ಟರೇ ಅಯ್ಯೋ!! ಇಷ್ಟು ಖರ್ಚಾಯಿತೇ?? ಖರ್ಚಾಗುತ್ತದೆ ಅಂತ ಗೊತ್ತಿದ್ದರೆ ಇಲ್ಲಿ ಬರುತ್ತಾ ಇರಲಿಲ್ಲ ಎಂದು ಹಲವಾರು ಬಾರಿ ಪೇಚಾಡುತ್ತೇವೆ.
ನಿಸ್ವಾರ್ಥ ದಿಂದ ಮಾಡಿದ ದಾನ,ಸಹಾಯ ಇವುಗಳನ್ನು ಭಗವಂತ ಸ್ವೀಕರಿಸಿ ನಮಗೆ ಅದರ ಎರಡು ಪಟ್ಟು ಸಂಪತ್ತು ಕೊಡುವ.
ಶ್ರೀ ಜಗನ್ನಾಥ ದಾಸರು ಹೇಳಿದಂತೆ ಕೊಟ್ಟುದದು ಅನಂತ ಮಡಿ ಮಾಡಿಕೊಡುವವ ಅವನೊಬ್ಬನೇ ಈ ಜಗತ್ತಿನ ಒಳಗೆ.
ಕೊನೆಯಲ್ಲಿ ಭಗವಂತನಿಗೆ ನಮ್ಮ ಈ ಸಂಪತ್ತು ಗಳಿಂದ ಅವನಿಗೆ ಏನು ಆಗಬೇಕಾದದ್ದು ಇಲ್ಲ.
ಇಡೀ ಜಗತ್ತು ಅವನದ್ದು.ಇಡೀ ಸಂಪತ್ತು ಅವನದ್ದು.
ಸಂಪತ್ತಿನ(ಅದು ಧನ ಅಥವಾ ಜ್ಞಾನ ) ಅಧಿದೇವತೆಯಾದ ಆ ಶ್ರೀ ಲಕ್ಷ್ಮಿ ದೇವಿಯು ಅವನ ಚರಣದಾಸಿ.ಅಂತಹ ಶ್ರೀಲಕ್ಷ್ಮಿ ಪತಿಯ ಅನುಗ್ರಹ ಪಡೆಯಲು ಕಿಂಚಿತ್ತೂ ಪ್ರಯತ್ನ ಪಡೋಣ.
ಅವನು ಕೊಟ್ಟ ಸಂಪತ್ತು ಅದು ಧನ ಅಥವಾ ಜ್ಞಾನ ಯಾವುದೇ ಆಗಿರಲಿ ಅದು ಅವನಿಗೆ ಮೀಸಲಾಗಿರಬೇಕು ಹೊರತಾಗಿ ನಮ್ಮ ಸ್ವಂತಕ್ಕೆ ಸ್ವಾರ್ಥ ಕಾರ್ಯಗಳಿಗೆ ಅಲ್ಲ.
ಸತ್ರಾಜಿತನ ಕತೆ ನಮಗೆ ಒಂದು ಪಾಠ.
ಇದು ಬಲ್ಲವರಿಂದ ಕೇಳಿದ್ದು.
ಯಥಾವತ್ತಾಗಿ ಇಲ್ಲಿ ಬರೆದು ಹಾಕುವ ಪುಟ್ಟ ಪ್ರಯತ್ನ .
ಇಷ್ಟು ಕಿಂಚಿತ್ತು ಜ್ಞಾನ ಕೊಟ್ಟ ಭಗವಂತನಿಗೆ ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏
ಕೆರೆಯ ನೀರನು ಕೆರೆಗೆ ಚೆಲ್ಲಿ|
ವರವ ಪಡೆದವರಂತೆ ಕಾಣಿರೋ||
🙏ಅ.ವಿಜಯವಿಠ್ಠಲ🙏
ರಥದ ತುದಿಯಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ - ಕೃಷ್ಣಾರ್ಜುನರ ಮಹಾರಥ !
ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ, ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ, ಹೋಗುತ್ತಿತ್ತು.
ಪ್ರತಿಬಾರಿ ಕರ್ಣನ ಬಾಣ ತಾಗಿ, ಅರ್ಜುನನ ರಥವು ಏಳು ಅಡಿ, ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀ ಕೃಷ್ಣನು ಹೇಳುತ್ತಿದ್ದ - " ಎಷ್ಟು ವೀರಾಶಾಲಿಯಾಗಿದ್ದಾನೆ ಕರ್ಣ...!
"ಅರ್ಜುನನ ಬಾಣ ತಾಗಿ, ಕರ್ಣನ ರಥವು ಬಹಳ ದೂರ ಹಿಂದಕ್ಕೆ, ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ, ಸುಮ್ಮನೆ ಇರುತ್ತಿದ್ದ.
ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ತಿಕ್ಷ್ಣವಾಗಿ, ಕೃಷ್ಣನಿಗೆ ಹೇಳುತ್ತಾನೆ -ಓ ವಾಸುದೇವ ಕೃಷ್ಣ ಪರಮಾತ್ಮ ತಾವು ಎಂತಹ ಪಕ್ಷಬೇದ ಮಾಡುತ್ತಿದ್ದೀರಾ?
ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ,ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ, ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು "ಮಹಾವೀರ ಕರ್ಣ" ಅಂತ ಹೊಗುಳುತ್ತಿರುವುದೇಕೆ?
ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ - " ಏಯ್ ಪಾರ್ಥಾ ನಾನು ಹೇಳಿದ್ದು ಸರಿ. ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ, ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ. ಆದರೆ, ನಾವು ಇರದಿದ್ದರೆ, ನಿನ್ನ ರಥವು ಇಲ್ಲದಾಗುತ್ತಿತ್ತು. "
ಸತ್ಯವನ್ನು ಅರಿತಾಗ ಅರ್ಜುನ ತೆಪ್ಪಗಾದ. ಆದರೆ ತನ್ನ ಪ್ರತಿಭೆಯಲ್ಲಿ, ತುಂಬಾ ವಿಶ್ವಾಸ ಇಟ್ಟಿದ್ದ. ಅರ್ಜುನನಿಗೆ ಯುದ್ಧದ ಕೊನೆಯ ದಿನ ಶ್ರೀ ಕೃಷ್ಣ ನಿಂದ ಒಂದು ಸತ್ಯದ ಅರಿವಾಯಿತು.
ಸಾಧಾರಣವಾಗಿ, ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ.
ಆದರೆ , ಯುದ್ದದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ, ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ.
ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಬಸ್ಮವಾಯಿತು.
ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ. ಕೃಷ್ಣ ಹೇಳುತ್ತಾನೆ - " ಅರ್ಜುನಾ ನಿನ್ನ ರಥವು ಭೀಷ್ಮ , ಕೃಪಾಚಾರ್ಯ, ದ್ರೋಣ, ಕರ್ಣ ಮೊದಲಾದ ಅತಿರಥರುಗಳ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ಮಹಾರಥವನ್ನು ಸೃಷ್ಟಿಸಿದೆ. ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ, ಹೋಗುವ ಹಾಗೇ, ಅನಿಸಿತು.
ನಾನು ಎಂಬ" ಅಹಂ" ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಪರಿಧಿಯಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ.
ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥದಿಂದ ಇಳಿಯುವುದು. ನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು.
ಭಗವಂತನ ಯೋಗಶಕ್ತಿಯ "ಶ್ರೀರಕ್ಷೆ "ಇಲ್ಲದಿದ್ದರೆ ಕರ್ಣನ ಅತಿರಥದ ಮುಂದೆ, ಅರ್ಜುನನ ರಥ ಸೋಲುತಿತ್ತು. ಕೃಷ್ಣನ ಕೃಪಾಕಟಾಕ್ಷದಿಂದ ಅರ್ಜುನನ ರಥ ಮಹಾರಥವಾಯಿತು.
ಸಂಜೀವಿನಿ ಕುಡಿದವನು ಸಾಯಲಾರ ಹಾಗೆಯೇ, ನಾನು ಎಂಬ ಆಹಂಕಾರವಿದ್ದವನು ಎಂದು ಗೆಲ್ಲಲಾರ.
ಕೃಷ್ಣನ ತಂತ್ರ, ವಿಧುರನ ನೀತಿ, ಕರ್ಣನ ಧಾನ, ಭೀಮನ ಬಲ,ದುರ್ಯೋಧನನ ಛಲ, ಶಕುನಿಯ ಕುತಂತ್ರ, ಈ ಎಲ್ಲ ಕಲೆಗಳನ್ನು ಕಲಿತು ಜೀವನದ ಸಂದಿಗ್ದ ಪರಿಸ್ಥಿತಿಯಲ್ಲಿ, ಬಳಸಿಕೊಂಡವನು ಮಾತ್ರ ನಿಜವಾಗಿಯೂ ಎಲ್ಲವನ್ನು ಗೆಲ್ಲಬಲ್ಲ ಮಹಾರಥನಾಗುತ್ತಾನೆ.
ಕೃಷ್ಣಾರ್ಪಣಮಸ್ತು
****************
ಶ್ರೀ ಕೃಷ್ಣ ಲೀಲೆಗಳು
ಬಾಯಿಯಲ್ಲಿ ಬ್ರಹ್ಮಾಂಡ ಕಂಡವಳು.
ಭಾಗ 1
ಜಗವ ಆತ ಆಡಿಸುತ್ತಾನೆ.
ಆತನನ್ನು ಈಕೆ ಆಡಿಸುತ್ತಾಳೆ.
ಎತ್ತಿ ಮುದ್ದಾಡುತ್ತಾಳೆ.
ಜಗದ ತಾಯಿ ಆತ.
ಆತನ ತಾಯಿ ಈ ಯಶೋಧೆ.
ಇದನ್ನೆಲ್ಲ ಕಂಡ ದಾಸರು ಬೆರಾಗಾಗುತ್ತಾರೆ.
ಬಾಯ ತೆರೆದು ಉದ್ಗರಿಸುತ್ತಾರೆ.
'ಏನು ಪುಣ್ಯವ ಮಾಡಿದಳು ಈ ಯಶೋಧೆ!
ಜಗದೋದ್ಧಾರನ ಆಡಿಸುತ್ತಾಳೆ!'
ಊರಿಗೆ ದೊರೆ. ತಾಯಿಗೆ ಮಗ.
ಬ್ರಹ್ಮಾಂಡದ ಒಡೆಯ.
ಯಶೋಧೆಯ ಸುತ.
ಬಾಲಲೀಲೆಗಳ ನೋಡುವ ಭಾಗ್ಯ ಬಾಲೆಯದು.
ಅಂದು ಒಂದು ಶುಭದಿನ.
ಯಶೋಧೆಯ ಪುಣ್ಯದ ಹಾಲು ಹೆಪ್ಪಾಗಿತ್ತು. ಕೆನಗಟ್ಟಿತ್ತು.
ಪಕ್ವ ಕಾಲ. ಭಗವದಿಚ್ಛೆ ಬಲ.
ಬಾಲರೆಲ್ಲ ಬಯಲಿಗೆ ಬಂದಿದ್ದರು.
ಮೋಜಿನ ಆಟಗಳು.
ರಾಮ,ದಾಮ, ಗೋಪ, ಕೃಷ್ಣ ಎಲ್ಲ ಗೋಪಬಾಲರು ಮೈದಾನದಲ್ಲಿ.
ಬ್ರಹ್ಮಾಂಡದ ಹೊರಗೆ ನಿಲ್ಲುತ್ತಾನೆ.
ಬ್ರಹ್ಮಾಂಡ ಸೃಷ್ಟಿಸುತ್ತಾನೆ.
ಚರಾಚರ ವಸ್ತು, ಚೇತನರಿಂದ ಬ್ರಹ್ಮಾಂಡ ತುಂಬಿಸುತ್ತಾನೆ.
ಲೀಲಯಾ ಬ್ರಹ್ಮಾಂಡದ ಜೊತೆ ಆಟವಾಡುತ್ತಾನೆ.
ಇಂಥ ನಮ್ಮ ಸ್ವಾಮಿ!
ಇದಾದರೋ ಸೀಮಿತ.
ಮೈದಾನ.
ಅದೆಂತು ಆಟ ಆಡುವ?
ದೇವತೆಗಳಿಗೆ ಕೌತುಕ!
ನೋಡ ಬಯಸಿದರು.
ಪತ್ನಿ ಸಹಿತ ರಥದಲ್ಲಿ ಬಂದರು.
ಗಗನದಲ್ಲಿ ಕಿಕ್ಕಿರಿದು ನೆರೆದರು.
ತಮ್ಮ ತಂದೆಯ, ಮಕ್ಕಳಾಟ ನೋಡಲು!
ಅತ್ತ ತಾಯಿ ಯಶೋಧೆ ಅಡುಗೆ ಮನೆಯಲ್ಲಿ.
ಮಗ ಬಾಲಕೃಷ್ಣನ ಲೀಲೆಗಳ ಇಂಪಾಗಿ ಹಾಡುತ್ತಿದ್ದಳು.
ಮನದ ತುಂಬ ಕೃಷ್ಣ.
ಮನೆಕೆಲಸದಲ್ಲಿ ಮೈ ಮರೆತಿದ್ದಳು.
ಇತ್ತ ಮಕ್ಕಳೆಲ್ಲ ಆಟದಲ್ಲಿ ಮಗ್ನ.
ಕೃಷ್ಣ ಮಧ್ಯೆ. ಬಾಲರೆಲ್ಲ ಅವನ ಸುತ್ತ.
ಎಲ್ಲಿ ಹೋದರೂ ಅಷ್ಟೇ! ದೇವಲೋಕದಲ್ಲೂ ಹಾಗೇ.
ಪರಮಾತ್ಮ ಕೇಂದ್ರ.
ದೇವತೆಗಳೆಲ್ಲ ಪರಿಧಿ.
ಆಟದ ಮಧ್ಯೆ, ಅದ್ಭುತ ಘಟಿಸಿತು.
ಗೆಳೆಯರೆಲ್ಲ ನೋಡುತ್ತಿದ್ದರು.
ಬಾಲಕೃಷ್ಣ ಬಗ್ಗಿದ. ನೆಲ ಮುಟ್ಟಿದ.
ಮುಷ್ಟಿ ಮಣ್ಣು ತೆಗೆದ.
ಕಣ್ಣು ಮುಚ್ಚಿದ. ಬಾಯಿ ತೆರೆದ.
ಮಣ್ಣು ಬಾಯಿಯಲ್ಲಿ ಹಾಕಿ ಕೊಂಡ.
ಬಾಯಿ ಮುಚ್ಚಿದ. ಕಣ್ಣು ತೆರೆದ.
ಸುತ್ತ ನೋಡಿದ.
ಸಖರೆಲ್ಲ ಒಳಗೆ ಓಡಿದ್ದಾರೆ.
ಯಶೋಧೆ ಬಳಿ ಬಂದಿದ್ದಾರೆ.
ಸುತ್ತಗಟ್ಟಿ ನಿಂತಿದ್ದಾರೆ. ತನ್ನ ಮೇಲೆ ತಾಯಿಗೆ ತಕರಾರಿನ ಸುರಿಮಳೆ.
'ಕೃಷ್ಣೋ ಮೃದಂ ಭಕ್ಷಿತವಾನ್' - ಭಾಗವತ.
' ಅಮ್ಮ, ಈ ಕೃಷ್ಣ ಮಣ್ಣು ತಿಂದ '
ಬಲರಾಮ ಹೇಳಿದ.
ಉಳಿದವರು ಬೆಳೆಸಿದರು.
'ಮತ್ತೆ ಮತ್ತೆ ತಿಂದ'
ಮತ್ತೊಬ್ಬ ಹೇಳಿದ .
ಬೇಡವೆಂದರೂ ಕೃಷ್ಣ ಮಣ್ಣು ತಿಂದ. - ಮಗದೊಬ್ಬನ ಮಾತು.
'ಮಣ್ಣು ತಿನ್ನುವ ಚಟ ಕೃಷ್ಣನಿಗೆ.'
ಇನ್ನೊಬ್ಬ ಹೇಳಿದ.
ಎಲ್ಲ ಕೇಳಿದಳು. ಕೃಷ್ಣನ ಮೇಲೆ ದೂರು ಕೇಳಿ ಕೇಳಿ ಅಭ್ಯಾಸ ಅವಳಿಗೆ.
ದೂರು ಪ್ರತಿದಿನದ. ದಿನಚರಿ.
ಮೂಡುವ ಸೂರ್ಯನ ಜೊತೆ
ಗೋಪಿಯರ ಆಗಮನ.
ಕೃಷ್ಣನ ಮೇಲೆ ಆರೋಪಗಳ ಧಾರೆ.
ಯಾಕಾದರೂ ಬೆಳಗಾಯಿತೋ ಎನ್ನುತ್ತಿದ್ದಳು ಯಶೋಧೆ.
ಮಗನನ್ನು ನೋಡಿದಳು.
ಬಂದ ಕೋಪ ಮಾಯ.
ಉಕ್ಕೇರಿದ ಮಮತೆ.
ಯಾವಾಗಲೂ ಅಷ್ಟೇ.
ಬೆಣ್ಣೆ ಜೊತೆ ಕೋಪ, ಮತ್ಸರಾದಿ
ಷಡ್ ವೈರಿಗಳನ್ನೂ ಕದಿಯುವ ಜಗದೇಕ ಕಳ್ಳ - ಕೃಷ್ಣ.
ಭಾಗ 2
ಮುದ್ದು ಕೃಷ್ಣ. ಮುಂಗುರುಳು ಹಣೆಯನ್ನು ಮುತ್ತಿಕ್ಕುತ್ತಿದೆ. ನೀಲಮೇಘಶ್ಯಾಮ.
ಅರಳಿದ ತಾವರೆ ಕಣ್ಣುಗಳು. ನೀಳ ನಾಸಿಕ.
ಪುಟ್ಟ ಬಾಯಿ. ಕೆಂದುಟಿಗಳು. ಮಾಸದ ಮುಗುಳು ನಗೆ.
ಮುಖದಲ್ಲಿ ತೇಜಸ್ಸು. ಕಾಂತಿ ತುಂಬಿ ಉಕ್ಕುತ್ತಿದೆ. ತಾನೇ ಉಡಿಸಿದ ಪುಟ್ಟ ದಟ್ಟ ಪೀತಾಂಬರ. ತಲೆಯ ಮೇಲೆ ಸಿಗಿಸಿದ ನವಿಲುಗರಿ.
ಓಡಿ ಬಂದಿದ್ದಕ್ಕೆ ಜಾರಿ ಹೋದ ಶಲ್ಯೆ.
ಯಾರೇ ಕೃಷ್ಣನನ್ನು ನೋಡಲಿ.
ಪ್ರೀತಿ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಎತ್ತಿ ಮುದ್ದಾಡದೇ ಇರುವದಿಲ್ಲ.
ಅಂಥ ಸೂಜಿಗಲ್ಲು ಬಾಲಕೃಷ್ಣ.
ಜಗವ ಮೋಹಿಸುವ ಮಾಯಾವಿ.
ಅದ್ಭುತ ಆಕರ್ಷಣೆ.
ಮಣ್ಣು ತಿನ್ನಲು ಸಹಾಯ ಮಾಡಿತ್ತು
ಕೃಷ್ಣನ ಕೈ.
ಅದನ್ನೇ ಹಿಡಿದಳು ಯಶೋಧೆ.
ಇಲ್ಲದ ಸಿಟ್ಟು ಮಖದ ಮೇಲೆ ತಂದುಕೊಂಡಳು.
ತನ್ನ ಕೈ ಮೇಲೆತ್ತಿದಳು.
'ಮಣ್ಣು ತಿಂದೆಯಾ ಕೃಷ್ಣ?'
ತಾಯಿಯ ಪ್ರಶ್ನೆ.
ಬೆದರಿದ ಕೃಷ್ಣ.
ಹಣೆಯ ಮೇಲೆ ಬೆವರಿನ ಹನಿ.
ತಾಯಿಯ ಭಯ.
ಕಣ್ಣಂಚಿನಲ್ಲಿ ಕಣ್ಣೀರು.
ಕಣ್ಣೀರಿನಿಂದ, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗಿದೆ.
ಜಾರಿ ತುಂಬು ಕೆನ್ನೆ ಮೇಲೆ ಇಳಿದಿದೆ.
'ಎಂಥ ಕಪಟ ನಾಟಕ.
ಸ್ಮರಿಸಿದವರ ಭಯ ನಿವಾರಕ. ಈತನಿಗೆಲ್ಲಿಯ ಭಯ ' ಎಂದರು ಆಕಾಶದಲ್ಲಿದ್ದ ದೇವತೆಗಳು.
'ನಾ ಅಹಂ ಭಕ್ಷಿತವಾನ್ ಅಂಬ'
'ತಾಯೇ ನಾನು ಮಣ್ಣು ತಿಂದಿಲ್ಲ'
ಕೃಷ್ಣನ ಉತ್ತರ.
'ಮತ್ತೆ ಎಲ್ಲರೂ ಹೇಳುತ್ತಿದ್ದಾರಲ್ಲ ಮಗೂ'
ತಾಯಿಯ ಮಾತು.
'ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ'
ಮಗನ ಉತ್ತರ.
ಸೂರ್ಯ,ಚಂದ್ರ,ವಾಯು ಆದಿ ಎಲ್ಲ ದೇವತೆಗಳು ದಿಗ್ಭ್ರಾಂತರಾದರು.
ತಾವೇ ಸಾಕ್ಷಿ. ಸ್ವತಃ ನೋಡಿದ್ದೇವೆ.
ಮಣ್ಣು ತಿಂದು ಇಲ್ಲ ಎನ್ನುತ್ತಿದ್ದಾನೆ.
ಸುಳ್ಳು ಹೇಳುವವನಲ್ಲ. ಸತ್ಯ ಸಂಕಲ್ಪನೀತ.
ಏನಿದು ಕೃಷ್ಣನ ವರಸೆ.
ವಿಚಾರಿಸಿದರು. ಚಿಂತಿಸಿದರು.
ಎರಡು ಉತ್ತರ.
'ನಾ ಅಹಂ ಭಕ್ಷಿತವಾನ್'
ನಾ ಎಂದರೆ ನಾರಾಯಣ.
ನಾರಾಯಣನ ಅವತಾರವೇ ಕೃಷ್ಣ.
ಪರಮಪರುಷ ನಾರಾಯಣನಾದ ನಾನು ಮಣ್ಣು ತಿಂದಿದ್ದೇನೆ.
ಸತ್ಯವಾಗಿದೆ. ಎಂದರು ದೇವತೆಗಳು.
ಮತ್ತೆ -
ಮಣ್ಣು ಪಂಚಭೂತಗಳ ಸಂಕೇತ.
ಪಂಚಭೂತಗಳಿಂದಾದದ್ದು ಬ್ರಹ್ಮಾಂಡ.
ಬ್ರಹ್ಮಾಂಡ ಇರುವದೇ ಪರಮಾತ್ಮನ ಉದರದಲ್ಲಿ.
ಮಣ್ಣು ಎಲ್ಲಿರಬೇಕೋ ಅಲ್ಲಿದೆ.
ಕೃಷ್ಣನ ಮಾತು ಸತ್ಯ.
ಉಳಿದವರು ಮಾತು ಮಿಥ್ಯ.
'ಹಾಗಾದರೆ ಬಾಯಿ ತೆಗೆ. ತೋರಿಸು'
ಮಾತೆಯ ಮಾತು.
'ಸರಿ. ಅವರಿವರ ಮಾತಿನ ಮಾತೇಕೆ? ನಾನಿರುವೆ. ನೀನಿರುವಿ
ನಾನು ಬಾಯಿ ತರೆವೆ. ನೀನೇ ನೋಡು.'
ಬಾಲಕೃಷ್ಣ ಪುಟ್ಟ ಬಾಯಿ ಅಷ್ಟು ತೆಗೆದ.
ದಿಟ್ಟಿಸಿ ನೋಡಿದಳು ಯಶೋಧೆ.
ಅದ್ಭುತ! ಅತ್ಯದ್ಭುತ. ವಿಸ್ಮಯ!
' ಸಾ ತತ್ರ ದದೃಶೇ ವಿಶ್ವಂ ಜಗತ್ ಸ್ಥಾಸ್ನು ಚ ಖಂ ದಿಶಃ'
ಮೂರ್ಜಗನೊಡೆಯನ ಮುಖದಲ್ಲಿ
ತ್ರಿಜಗವ ಕಂಡಳು.
ಜಗನ್ನಾಥನ ಕಂಡಳು.
ವಿಶ್ವೇಶನ ಬಾಯಲ್ಲಿ ವಿಶ್ವವ ಕಂಡಳು.
ವಿಶ್ವಂಭರನ ವಿರಾಟ್ ರೂಪವ ಕಂಡಳು.
ಪುಟ್ಟ ಬಾಯಲ್ಲಿ ದಿಟ್ಟ ಬ್ರಹ್ಮಾಂಡ ಕಂಡಳು.
ಪೊಳ್ಳು ಬಿಡದೇ ಎಲ್ಲ ಠಾವಿನಲ್ಲಿ ವ್ಯಾಪ್ತನಾದ ಲಕ್ಷ್ಮೀ ನಲ್ಲನ ಕಂಡಳು.
ಜಗದುದರನ ಅತಿ ವಿಮಲ ಗುಣ ರೂಪಗಳ
ಕಂಡಳು.
ಪರಬ್ರಹ್ಮನ ಅನಂತ ಅವತಾರಗಳ ಕಂಡಳು.
ಅನೇಕ ಅವಸ್ಥೆಯ ಅನಂತ ಜೀವಿಗಳ ಕಂಡಳು.
ಅಷ್ಟದಿಕ್ಕುಗಳ ಕಂಡಳು.
ಚತುರ್ದಶ ಲೋಕಗಳ ಕಂಡಳು.
ಮೇಲೆ ಸ್ವರ್ಗಾದಿ ಸತ್ಯ ಲೋಕಗಳು.
ಅಂತರಿಕ್ಷ, ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ಜ್ಯೋತಿರ್ಮಂಡಲಗಳು ಸಕಲವ ಕಂಡಳು.
ಮಧ್ಯೆ ಭೂಲೋಕ.
ಕೆಳಗೆ ಅತಳದಿಂದ ಪಾತಾಳ.
ಭೂಲೋಕದಲ್ಲಿ ಜಂಬೂ, ಪುಷ್ಕರಾದಿ ಸಪ್ತ ದ್ವೀಪಗಳು. ಲವಣ, ಕ್ಷೀರಾದಿ ಸಪ್ತಸಮುದ್ರಗಳು.
ಮಧ್ಯೆ ಬಂಗಾರದ ಮೇರು ಪರ್ವತ.
ಸುತ್ತಲು ಸುತ್ತಿರುವ ಸಾಲು ಸಾಲು ಪರ್ವತಗಳು. ಗಂಗಾದಿ ಸಕಲ ನದಿಗಳು.
ಮತ್ತೆ ಅಲ್ಲಿ ಭರತಖಂಡ.
ಅದರಲ್ಲಿ ಭಾರತದೇಶ.
ಮತ್ತೆ ಯಮುನಾ ನದಿ ತೀರ.
ತೀರದಲ್ಲಿ ತಮ್ಮ ಗೋಕುಲ, ಬೃಂದಾವನ.
ಅಲ್ಲಿ ತನ್ನ ಮುದ್ದುಕೃಷ್ಣ.
ತೆರೆದ ಬಾಯಿ.
ಒಳಗೆ ಇಣುಕಿ ನೋಡುತ್ರಿರುವ ತಾನು.
ಎಲ್ಲ ನೋಡಿದಳು.
ದಿಗ್ಭ್ರಾಂತಳಾದಳು. ವಿಸ್ಮಿತಳಾದಳು. ಏನೂ ತಿಳಿಯದಾಯಿತು. ಗರ ಬಡಿದಂತಾಯಿತು ಯಶೋಧೆಗೆ.
ಕನಸೋ ನನಸೋ ಒಂದೂ ತಿಳಿಯದು.
ಭಯಭೀತಳಾಗಿ ನಡುಗಿದಳು. ಬೆವರಿದಳು.
ಸಾಕಿನ್ನು ಈ ಚಿತ್ರ! ವಿಚಿತ್ರ!
ಕಣ್ಣು ಮುಚ್ಚಿದಳು.
'ಮಣ್ಣು ಕಂಡಿತಾ?' ಮುದ್ದು ಕೃಷ್ಣನ ಪ್ರಶ್ನೆ.
ಕಣ್ಣು ತೆರೆದಳು.
ಎದುರಿಗೆ ಕೇವಲ ಮುಗುಳುನಗೆಯ ಬಾಲಕೃಷ್ಣ.
ಕಾಣಲಾರದ್ದೆಲ್ಲ ಕಂಡಿತ್ತು
ಕಂಡಿದ್ದೆಲ್ಲ ಈಗ ಮಾಯವಾಗಿತ್ತು.
ಏನಿದು? ತನ್ನ ಭ್ರಮೆಯ ಬುದ್ಧಿಯೋ,
ಮಗ ಕೃಷ್ಣನ ಸಿದ್ಧಿಯೋ!
ಈತ ಸಾಮಾನ್ಯ ಮಗನಲ್ಲ. ವಾಸ್ತವಿಕವಾಗಿ ಈತ ನಮ್ಮ ಮಗನೇ ಅಲ್ಲ.
ನಾವು ಅವನ ತಂದೆ ತಾಯಿಗಳೂ ಅಲ್ಲ.
ಈತ ಪರಬ್ರಹ್ಮ.
ನಿಶ್ಚಿತವಾಯಿತು ಯಶೋಧೆಗೆ.
ಯಾವ ಜನುಮಗಳ ಪುಣ್ಯವೋ!
ಈಗ ಫಲಿಸಿದೆ.
ಮಗನಾಗಿ ಬಂದಿದ್ದಾನೆ.
ಎಂದುಕೊಂಡಳು ಯಶೋಧೆ.
ಸರ್ವಜ್ಞ ಶ್ರೀ ಕೃಷ್ಣ. ಎಲ್ಲ ಗಮನಿಸಿದ.
ಇನ್ನು ಸಾಕು ಎಂದ.
ಯಶೋಧೆಯ ನೋಡಿದ.
ಮಾಯಾ ಜಾಲ ಹಿಂತೆಗೆದ.
ಬ್ರಹ್ಮಾಂಡ, ವಿಶ್ವ ರೂಪ ಎಲ ಮಾಯ.
ತಾನು ಮಗ, ಆಕೆ ತಾಯಿ
ತನ್ನ ಮಾಯೆವ ಆವರಿಸಿದ.
ಈ ಪ್ರಜ್ಞೆ ಮುಂದುವರಿಸಿದ
ಯಶೋಧೆಗೆ ನಡೆದಿದ್ದಿಲ್ಲ ಮರೆಸಿದ.
'ಕೃಷ್ಣ ಮಣ್ಣು ತಿಂದಿಲ್ಲ'
ಎಂದಳು ಯಶೋಧೆ. ಒಳಗೆ ಹೋದಳು.
ಕೃಷ್ಣನಿಗೆ ಪ್ರಿಯ ಬೆಣ್ಣೆ ತಂದಳು.
ಎಲ್ಲ ಮಕ್ಕಳಿಗೆ ಹಂಚಿದಳು.
ಮಕ್ಕಳೆಲ್ಲ ಬೆಣ್ಣೆ ತಿಂದರು.
ಮತ್ತೆ ಆಡಲು ಹೋದರು.
ಯಶೋಧೆಯೂ ಒಳಗೆ ಹೋದಳು.
ಮನೆ ಕೆಲಸದಲ್ಲಿ ಮೈ ಮರೆತಳು.
ಮತ್ತೆ ಎಲ್ಲವೂ ನಿತ್ಯದಂತೆ!
ಅಘಟಿತ ಘಟಿಸಿತ್ತು ಎಂಬುದೇ
ಜಗ ಮರೆಯಿತು.
'ಇದು ಕೃಷ್ಣ ಲೀಲೆ.
ಇದು ಹೆದ್ದೈವನ ಹಿರಿದಾದ ಲೀಲೆ'
ಎಂದು ಕೊಂಡರು ದೇವತೆಗಳು.
ಶ್ರೀ ಕೃಷ್ಣನಿಗೆ ಮನಸಾರೆ ನಮಿಸಿದರು. ಮರಳಿದರು.
ನಾವೂ ಯದುಕುಲತಿಲಕನಿಗೆ ಸಹಸ್ರ ಸಹಸ್ರ ನಮಿಸೋಣ. ಅವನ
ಅನುಗ್ರಹ. ಪ್ರಾರ್ಥಿಸೋಣ.
🙏🙏🙏🙏🙏
ಶ್ರೀ ಕೃಷ್ಣಾರ್ಪಣಮಸ್ತುn
****************
ಶ್ರೀ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರಕ್ಕೂ ಹೆಚ್ಚು ಪತ್ನಿಯರಿದ್ದರು. ಅದರಲ್ಲಿ ಅಷ್ಟ ಮಹಾಮಹಿಷಿಯರು ರುಕ್ಮಿಣೀ, ಸತ್ಯಭಾಮ, ನೀಲ, ಮಿತ್ರವೃಂದ, ಜಾಂಬವತಿ, ಭದ್ರ, ಲಕ್ಷ್ಮಣ, ಕಾಲಿಂದೀ ಸೇರಿದ್ದಾರೆ.
ರುಕ್ಮಿಣೀ ಸತ್ಯಭಾಮ ದೇವಿಯರು ಸಾಕ್ಷಾತ್ ಲಕ್ಷ್ಮೀದೇವಿಯ “ಶ್ರೀ ” ಮತ್ತು “ಭೂ” ರೂಪಗಳು. ಉಳಿದ ಆರು ಕೃಷ್ಣಪತ್ನಿಯರು ಗರುಡ ಶೇಷ ರುದ್ರರಿಗಿಂತ ಕಡಿಮೆ ಕಕ್ಷೆಯಲ್ಲಿ ಬರುವವರು.
ನೀಲಾದೇವಿ – ಯಶೋದೆಯ ಅಣ್ಣನಾದ ಕುಂಭಕ ಎಂಬ ಹೆಸರುಳ್ಳ ಗೋಪಾಲನ ಮಗಳಾಗಿ “ನೀಲಾ” ಎಂಬ ನಾಮಧೇಯದಿಂದ ಹುಟ್ಟಿದ್ದಳು. ಅವಳು ಹಿಂದಿನ ಜನ್ಮದಲ್ಲೇ ಪರಮಾತ್ಮನನ್ನೇ ಪತಿಯಾಗಿ ಪಡೆಯಬೇಕೆಂದು ತಿರುಪತಿಯಲ್ಲಿ ಕಪಿಲತೀರ್ಥದಲ್ಲಿ , ಪಾಪನಾಶಿನಿಯ ಸ್ನಾನಗೈದು , ನಾರಾಯಣ ದೇವರನ್ನು ಕುರಿತು ತಪಗೈದಳು. ನಾನು ನಿನ್ನ ಪತ್ನಿಯಾಗಬೇಕೆಂದು ಕೋರಿದಳು. ಕೃಷ್ಣನು ತನ್ನ ಉಪನಯನ ಪೂರ್ವದಲ್ಲೇ ಏಳು ದೈತ್ಯ ವೃಷಭಗಳನ್ನು ಕೊಂದು ನೀಲಾಳನ್ನು ವಿವಾಹವಾದನು. ಆ ಕುಂಭಕನೇ ನಗ್ನಜಿತ್ ರಾಜನಾಗಿ ಜನಿಸಿದನು. ಅ ಕನ್ಯೆಯೇ ಮತ್ತೊಮ್ಮೆ ನೀಲಾದೇವಿಯೆಂಬ ಹೆಸರಿನಲ್ಲಿ ಇನ್ನೊಂದು ರೂಪದಲ್ಲಿ ಹುಟ್ಟಿದಳು. ಆ ನೀಲಾದೇವಿಯ ಸ್ವಯಂವರದಲ್ಲಿ ಮತ್ತೊಮ್ಮೆ ರುದ್ರದೇವರ ವರಬಲದಿಂದ ಹುಟ್ಟಿದ್ದ ಏಳು ದೈತ್ಯ ವೃಷಭಗಳನ್ನು ಕೊಂದು ನೀಲಾದೇವಿಯನ್ನು ವಿವಾಹವಾದನು. ಆಗ ಕುಂಭಕನ ಮಗಳಾದ ನೀಲಾದೇವಿಯೂ ರಾಜಪುತ್ರಿಯಾದ ನೀಲಾದೇವಿಯಲ್ಲಿ ಪ್ರವೇಶಿಸಿ ಒಂದೇ ರೂಪವುಳ್ಳವಳಾದಳು .
ಭದ್ರಾದೇವಿ – ಇವಳು ಹಿಂದಿನ ಜನ್ಮದಲ್ಲಿ ನಳನ ಮಗಳಾಗಿದ್ದಳು. ಅವಳೂ ಭಗವಂತನೇ ತನ್ನ ಪತ್ನಿಯಾಗಬೇಕೆಂದು ಕೋರಿದ್ದಳು. ಅವಳು ಭಗವಂತನ ನಾಮಸ್ಮರಣೆ ಮಾಡಿ ಪ್ರಾಣ ಬಿಟ್ಟಳು. ಅವಳು ಮುಂದಿನ ಜನ್ಮದಲ್ಲಿ ವಸುದೇವನ ತಂಗಿಯಾದ ಕೈಕೇಯಿಯಲ್ಲಿ “ಭದ್ರಾ” ಎಂಬ ಹೆಸರಿಂದ ಹುಟ್ಟಿದಳು. ಮತ್ತು ಶ್ರೀ ಕೃಷ್ಣನನ್ನು ವಿವಾಹವಾದಳು.
ಮಿತ್ರವಿಂದಾದೇವಿ – ಮಿತ್ರವಿಂದೆಯು ಹಿಂದಿನ ಜನ್ಮದಲ್ಲಿ ಅಗ್ನಿಷ್ಪಾತ್ತ ಎಂಬ ಪಿತೃದೇವತೆಯ ಮಗಳಾಗಿ ಜನಿಸಿ, “ಮಿತ್ರ” ಎಂಬ ಹೆಸರಿನ ಭಗವಂತನ ಹೊಂದಲು ಸಾತ್ವಿಕ ಪುರಾಣಗಳನ್ನು ಅನವರತ ಕೇಳಿ ಭಗವತ್ಕಥಾಶ್ರವಣದ ಫಲವಾಗಿ ಮುಂದೆ ವಸುದೇವನ ತಂಗಿಯಾದ ಸುಮಿತ್ರೆಯ ಮಗಳಾಗಿ “ಮಿತ್ರವಿಂದೆ” ಎಂಬ ಹೆಸರಿನಿಂದ ಜನಿಸಿ, ಸ್ವಯಂವರದಲ್ಲಿ ಕೃಷ್ಣನ ಕೊರಳಲ್ಲಿ ಮಾಲೆಯನ್ನು ಹಾಕಿ ವಿವಾಹವಾದಳು.
ಕಾಳಿಂದೀದೇವಿ – ಇವಳು ಸೂರ್ಯ ಪುತ್ರಿ, ಯಮುನೆಯ ತಂಗಿ. ಇವಳೂ ಕೃಷ್ಣನನ್ನೇ ವಿವಾಹವಾಗಬಯಸಿ ಯಮುನೆಯ ತೀರದಲ್ಲಿ ತಪಸ್ಸು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಕೃಷ್ಣಾರ್ಜುನರು ಬೇಟೆಗಾಗಿ ಯಮುನಾತೀರಕ್ಕೆ ಬಂದರು. ಅಲ್ಲಿ ತಪಸ್ಸು ಮಾಡುತ್ತಿದ್ದ ಅ ಕನ್ಯೆಯನ್ನು ಅರ್ಜುನನು ಏಕೆ ತಪಸ್ಸು ಮಾಡುತ್ತಿರುವೆ ಎನ್ನಲು ಅವಳು ಕೃಷ್ಣನ ವಿವಾಹವಾಗುವ ಬಯಕೆಯನ್ನು ಹೇಳಿದಳು. ಅವಳ ಅನುಗ್ರಹಿಸಲು ಕೃಷ್ಣನು ಕಾಲಿಂದಿಯನ್ನು ವಿವಾಹವಾದಳು.
ಲಕ್ಷಣಾದೇವಿ – ಮದ್ರದೇಶದ ರಾಜನ ಮಗಳಾಗಿ ಜನಿಸಿ, ಅವಳ ಸ್ವಯಂವರದಲ್ಲಿ ಕೃಷ್ಣನು ಮತ್ಸ್ಯಯಂತ್ರವನ್ನು ಭೇದಿಸಿ, ಯುದ್ಧಕ್ಕೆ ಬಂದ ಎಲ್ಲಾ ರಾಜರುಗಳನ್ನೂ ಗೆದ್ದು ಲಕ್ಷಣಾದೇವಿಯನ್ನು ವಿವಾಹವಾಗಿ ದ್ವಾರಕಾ ಪಟ್ಟಣಕ್ಕೆ ಕರೆದುಕೊಂಡು ಹೋದನು.
ಜಾಂಬವತೀದೇವಿ – ಇವಳ ನಿಜವಾದ ಹೆಸರು “ರೋಹಿಣಿ”. ಜಾಂಬವಂತನ ಮಗಳಾದ್ದರಿಂದ “ಜಾಂಬವತಿ”. ಸ್ಯಮಂತಕಮಣಿಯ ಅರಸಿ ಬಂದ ಕೃಷ್ಣನು ಜಾಂಬವಂತನೊಂದಿಗೆ ಹದಿನೆಂಟು ದಿನ ಯುದ್ಧ ಮಾಡಿ, ಅವನ ಪರಾಕ್ರಮವನ್ನು ಜಗತ್ತಿಗೆ ತೋರಿಸಿ, ನಂತರ ತನ್ನ ರಾಮರೂಪವನ್ನು ತೋರಿಸಿ, ಸಂತಸಗೊಂಡ ಜಾಂಭವಂತ ತನ್ನ ಮಗಳಾದ ಜಾಂಬವತಿಯನ್ನು ಕೊಟ್ಟು ವಿವಾಹ ಮಾಡಿದನು.
ಜಾಂಬವತಿಯು ಉಳಿದ ಷಣ್ಮಹಿಷಿಯರಿಗಿಂತ ಶ್ರೇಷ್ಟಳು. ಎಲ್ಲಾ ಷಣ್ಮಹಿಷಿಯರಲ್ಲಿ ರಮಾದೇವಿಯರ ಸನ್ನಿಧಾನ ಇರುವ ಸಂದರ್ಭದಲ್ಲಿ ಮಾತ್ರ ಕೃಷ್ಣನು ಅವರನ್ನು ಸೇರುವನು.
ನರಹರಿ ಸುಮಧ್ವ.
**************
#ದಾರಿದ್ರ್ಯ ಬದಲಾಗಿ ಭಾಗ್ಯ#
------------------------------------------
ಒಂದು ದಿನ ಕೃಷ್ಣ ಹಾಗೂ ಅರ್ಜುನ, ಇಬ್ಬರೂ ವಾಯುವಿಹಾರ ಮಾಡುತ್ತಿರುವಾಗ, ಒಬ್ಬ ಬಡ ಬ್ರಾಹ್ಮಣ ಭಿಕ್ಷೆ ಬೇಡುತ್ತಿರುವದು ಕಾಣಿಸಿತು, ಅದನ್ನು ನೋಡಿ ಅರ್ಜುನನಿಗೆ ಕನಿಕರ ಬಂದು, ಒಂದೇ ಸಲಕ್ಕೆ ಅವನ ದಾರಿದ್ರ್ಯ ನಿವಾರಣೆ ಮಾಡಬೇಕೆಂದು, ಅವನಿಗೆ ಸ್ವರ್ಣ ಮುದ್ರೆಗಳು ತುಂಬಿದ ಚೀಲವನ್ನು ದಾನ ಮಾಡುತ್ತಾನೆ. ಅಷ್ಟೊಂದು ಸ್ವರ್ಣ ಮುದ್ರೆಗಳನ್ನು ಪಡೆದ ಬ್ರಾಹ್ಮಣ ಬಹು ಸಂತೋಷದಿಂದ ಅವರಿಗೆ ವಂದಿಸಿ, ಇನ್ನು ತನ್ನ ದಾರಿದ್ರ್ಯವೆಲ್ಲ ಪರಿಹಾರವಾಯಿತು ಎಂದು ತನ್ನ ಮನೆಯ ಕಡೆಗೆ ನಡೆಯತೊಡಗಿದ.
ಕಾಡಿನ ಸ್ವಲ್ಪ ಪ್ರದೇಶ ದಾಟಿಕೊಂಡು ಹರಿಯುವ ನದಿ ಪಕ್ಕದಲ್ಲಿ ಬ್ರಾಹ್ಮಣನ ಗುಡಿಸಲು ಮನೆ ಇತ್ತು, ಬೇಗ ಬೇಗ ಮನೆ ಸೇರಬೇಕೆಂದು ಹಣದ ಚೀಲದೊಂದಿಗೆ ಬ್ರಾಹ್ಮಣ ಸಾಗುತ್ತಿದ್ದಾಗ, ಅವನ ಎದಿರು ಕಳ್ಳನೊಬ್ಬ ಧುತ್ತೆಂದು ಪ್ರತ್ಯಕ್ಷನಾಗಿ, ಅವನನ್ನು ಬೆದರಿಸಿ ಅವನ ಬಳಿ ಇರುವ ಹಣದ ಚೀಲವನ್ನು ಕಿತ್ತುಕೊಂಡು ಓಡಿಹೋಗುತ್ತಾನೆ. ಬಯಸದೆ ಬಂದ ಭಾಗ್ಯ ದೂರವಾಗಿ ಮತ್ತೆ ದಾರಿದ್ರ್ಯ ಬ್ರಾಹ್ಮಣನಿಗೆ ಅಂಟಿಕೊಂಡಿತ್ತು.
ಮರುದಿನ ಮತ್ತೆ ಬ್ರಾಹ್ಮಣ ಭಿಕ್ಷೆ ಬೇಡುತ್ತಾ ಅಲೆದಾಡುತ್ತಿದ್ದ, ಪ್ರತಿ ದಿನದಂತೆ ಅಂದೂ ಕೂಡಾ ಕೃಷ್ಣ ಅರ್ಜುನ ಇಬ್ಬರೂ ವಾಯು ವಿಹಾರಕ್ಕೆ ಬಂದಾಗ, ಭಿಕ್ಷೆ ಬೇಡುತ್ತಿದ್ದ ಅದೇ ಬ್ರಾಹ್ಮಣನನ್ನು ನೋಡಿ, ಅರ್ಜುನನಿಗೆ ಆಶ್ಚರ್ಯವಾಗುತ್ತದೆ, " ನಿನ್ನೆ ತಾನೇ ಅಷ್ಟೊಂದು ಸ್ವರ್ಣ ಮುದ್ರಿಕೆಗಳನ್ನು ಕೊಟ್ಟಿದ್ದೇನೆ, ಆದರೂ ಕೂಡಾ ಭಿಕ್ಷೆ ಬೇಡುತ್ತಿದ್ದಾನಲ್ಲ " ಎಂದು ಪರಮಾತ್ಮನಿಗೆ ಕೇಳಿದಾಗ, ಕೃಷ್ಣ ಹೇಳುತ್ತಾನೆ " ಅವನ ಭಾಗ್ಯದ ಬಾಗಿಲು ಇನ್ನೂ ತೆರೆದಿಲ್ಲ, ಅದಕ್ಕೆ ಕಾಲ ಕೂಡಿ ಬರಬೇಕಾಗಿದೆ ", ಇದನ್ನು ಕೇಳಿದ ಅರ್ಜುನ, " ಅವನ ಭಾಗ್ಯದ ಬಾಗಿಲನ್ನು ಇವತ್ತು ನಾನೇ ತೆರೆಯುತ್ತೇನೆ ನೋಡು " ಎಂದು ಕೃಷ್ಣ ನಿಗೆ ಹೇಳಿ, ಬ್ರಾಹ್ಮಣನನ್ನು ಕರೆದು ಅತೀ ಬೆಲೆ ಬಾಳುವ ಮಾಣಿಕ್ಯವನ್ನು ನೀಡುತ್ತಾನೆ, ಒಂದು ಮಾಣಿಕ್ಯ ಲಕ್ಷಾಂತರ ಸ್ವರ್ಣ ಮುದ್ರಿಕೆಗಳಿಗೆ ಸಮನಾಗಿರುತ್ತದೆ, ಅತ್ಯಂತ ಆನಂದದಿಂದ ಇಬ್ಬರಿಗೂ ನಮಸ್ಕರಿಸಿದ ಬ್ರಾಹ್ಮಣ ಮಾಣಿಕ್ಯದೊಂದಿಗೆ ಗುಡಿಸಲಿಗೆ ಬರುತ್ತಾನೆ, ಮರುದಿನ ಶ್ರೇಷ್ಠಿ ಗೆ ಭೇಟಿಯಾಗಿ ಮಾಣಿಕ್ಯವನ್ನು ಮಾರಿ, ಅದರಿಂದ ಬರುವ ಹಣದಿಂದ ಜೀವನ ಪೂರ್ತಿ ಸುಖವಾಗಿ ಬಾಳಬಹುದು ಎಂದುಕೊಂಡು, ಗುಡಿಸಲಲ್ಲಿ ಅದನ್ನು ಅಡಗಿಸಿ ಇಡಲು ಆಚೆ ಈಚೆ ನೋಡಿದಾಗ, ಅವನಿಗೆ ಹಳೆಯ ಬಿಂದಿಗೆ ಕಾಣುತ್ತದೆ, ಬಿಂದಿಗೆಯಲ್ಲಿ ಮಾಣಿಕ್ಯವನ್ನು ಅಡಗಿಸಿ ಇಟ್ಟು, ತನ್ನ ಪತ್ನಿಗೆ ಈ ವಿಷಯವನ್ನು ತಿಳಿಸಲು ಪತ್ನಿಯನ್ನು ಹುಡುಕುತ್ತಾ ಹೊರಗೆ ಹೋಗುತ್ತಾನೆ, ಅದೇ ಸಮಯದಲ್ಲಿ ನೀರು ತರಲು ನದಿಗೆ ಹೋಗಿ ಮರಳಿ ಬರುತ್ತಿದ್ದ ಬ್ರಾಹ್ಮಣನ ಪತ್ನಿಯ ಕೈಯಿಂದ ಆಕಸ್ಮಿಕವಾಗಿ ಮಣ್ಣಿನ ಬಿಂದಿಗೆ ಜಾರಿ ಬಿದ್ದು ಒಡೆದು ಹೋಗುತ್ತದೆ, ಅವಳು ಮರಳಿ ಮನೆಗೆ ಬಂದು ಇನ್ನೊಂದು ಬಿಂದಿಗೆಗಾಗಿ ಹುಡುಕಾಡುವಾಗ, ಮಣ್ಣಿನ ಬಿಂದಿಗೆ ಯಾವುದು ಇಲ್ಲದ ಕಾರಣ, ಕೈಗೆ ಸಿಕ್ಕ ಅದೇ ಹಳೆಯ ಬಿಂದಿಗೆಯನ್ನು ಎತ್ತಿಕೊಂಡು ನೀರು ತರಲು ಮತ್ತೆ ನದಿಯ ಕಡೆಗೆ ಬಂದು, ಬಿಂದಿಗೆಯನ್ನು ನೀರಲ್ಲಿ ಮುಳುಗಿಸಿ ತುಂಬುವಾಗ, ಅದರಲ್ಲಿದ್ದ ಮಾಣಿಕ್ಯ ಅವಳಿಗೆ ಗೊತ್ತಾಗದಂತೆ ನೀರಲ್ಲಿ ಮುಳುಗಿಹೋಗುತ್ತದೆ, ಇತ್ತ ಪತ್ನಿಯನ್ನು ಕಾಣದೆ ಮನೆಗೆ ಬಂದ ಬ್ರಾಹ್ಮಣ, ಮನೆಯಲ್ಲಿ ಹಳೆಯ ಬಿಂದಿಗೆ ಇಲ್ಲದಿರುವದನ್ನು ನೋಡಿ ಕಂಗಾಲಾಗುತ್ತಾನೆ, ಅಷ್ಟರಲ್ಲಿ ನೀರು ತುಂಬಿಕೊಂಡು ಅದೇ ಬಿಂದಿಗೆಯೊಂದಿಗೆ ಮನೆಗೆ ಬಂದ ಪತ್ನಿಯನ್ನು ನೋಡಿ ಸಮಾಧಾನವಾದರೂ , ಬಿಂದಿಗೆಯಲ್ಲಿ ಮಾಣಿಕ್ಯ ಇಲ್ಲದಿರುವುದು ನೋಡಿ , ಅವನಿಗೆ ಗೊತ್ತಾಗಿಹೋಗುತ್ತದೆ ಮಾಣಿಕ್ಯ ನದಿಯಲ್ಲಿ ನೀರು ತುಂಬುವಾಗ ಬಿದ್ದು ಹೋಗಿದೆ ಎಂದು, ಬಯಸದೆ ಬಂದ ಭಾಗ್ಯ ದೂರವಾಗಿ ಮತ್ತೆ ದಾರಿದ್ರ್ಯ ಬ್ರಾಹ್ಮಣನಿಗೆ ಅಂಟಿಕೊಂಡಿತ್ತು.
ಮರುದಿನ ಮತ್ತೆ ಬ್ರಾಹ್ಮಣ ಭಿಕ್ಷೆ ಬೇಡುತ್ತಾ ಅಡ್ಡಾಡುತ್ತಿದ್ದ , ಪ್ರತಿ ದಿನದಂತೆ ಅಂದೂ ಕೂಡಾ ಕೃಷ್ಣ ಅರ್ಜುನ ಇಬ್ಬರೂ ವಾಯು ವಿಹಾರಕ್ಕೆ ಬಂದಾಗ, ಭಿಕ್ಷೆ ಬೇಡುತ್ತಿದ್ದ ಅದೇ ಬ್ರಾಹ್ಮಣನನ್ನು ನೋಡಿ,ಅರ್ಜುನನಿಗೆ ಇನ್ನೂ ಆಶ್ಚರ್ಯವಾಗುತ್ತದೆ, " ಕೃಷ್ಣಾ ಇದೇನಿದು ಇವನಿಗೆ ನಿನ್ನೆ ತಾನೇ ಅಮೂಲ್ಯವಾದ ಮಾಣಿಕ್ಯ ಕೊಟ್ಟಿದ್ದೆ, ಆದರೂ ಭಿಕ್ಷೆ ಬೇಡುತ್ತಿದ್ದಾನಲ್ಲ " ಅದಕ್ಕೆ ಕೃಷ್ಣ ಹೇಳುತ್ತಾನೆ " ನಾನು ಮೊದಲೇ ಹೇಳಿದ್ದೇನೆ ಕರ್ಮದ ಫಲಗಳು ಅಷ್ಟು ಬೇಗನೆ ಎಲ್ಲರಿಗೂ ಸಿಗುವದಿಲ್ಲ, ಕರ್ಮವನ್ನು ಯಾವ ಉದ್ದೇಶಕ್ಕೆ ಮಾಡುತ್ತಿರೋ ಅದರ ಆಧಾರದ ಮೇಲೆ ಮನುಷ್ಯನಿಗೆ ಫಲಗಳು ಸಿಗುತ್ತವೆ, ಕರ್ಮ ಮಾಡಿದರೆ ಇನ್ನೊಬ್ಬರಿಗೆ ಒಳಿತು ಆಗಬೇಕು,ಹಾಗೆ ಕರ್ಮ ಮಾಡಬೇಕು, ಇವನು ಭಿಕ್ಷೆ ಬೇಡಿ ಕರ್ಮ ಮಾಡುತ್ತಿದ್ದಾನೆ, ಅದರಿಂದ ಇನ್ನೊಬ್ಬರಿಗೆ ಒಳಿತು ಹೇಗೆ ಆಗುತ್ತದೆ, ಅದಕ್ಕೆ ಕಾಲ ಕೂಡಿ ಬರಬೇಕು " ಎಂದು ಹೇಳಿ, ಕೃಷ್ಣ ಆ ಬ್ರಾಹ್ಮಣನನ್ನು ಕರೆದು ಅವನಿಗೆ ಎರಡು ತಾಮ್ರದ ನಾಣ್ಯಗಳನ್ನು ಭಿಕ್ಷೆಯ ರೂಪದಲ್ಲಿ ನೀಡುತ್ತಾನೆ, ಜಗತ್ತನ್ನೇ ಕಾಯುವ ಪರಮಾತ್ಮ ಕೇವಲ ಎರಡು ನಾಣ್ಯಗಳನ್ನು ನೀಡಿದ್ದು ಅರ್ಜುನನಿಗೆ ಸರಿ ಬರಲಿಲ್ಲ, ಬ್ರಾಹ್ಮಣನೂ ನಿರಾಸೆಯಿಂದ ಪರಮಾತ್ಮ ನೀಡಿದ ಆ ಎರಡು ದುಡ್ಡನ್ನು ತೆಗೆದುಕೊಂಡು, ತನ್ನ ದಾರಿದ್ರ್ಯವನ್ನು ಹಳಿಯುತ್ತಾ, ಬಂದ ದುಡ್ಡಿನಲ್ಲಿ ಸ್ವಲ್ಪ ಅಕ್ಕಿಯನ್ನು ಖರೀದಿಸಿ ಮನೆಯ ಕಡೆಗೆ ನಡೆಯತೊಡಗಿದ.
ಕೃಷ್ಣ, ಅರ್ಜುನನ್ನು ಕರೆದುಕೊಂಡು ಬ್ರಾಹ್ಮಣನಿಗೆ ಗೊತ್ತಾಗದಂತೆ ಅವನನ್ನು ಹಿಂಬಾಲಿಸತೊಡಗಿದ, ಮನೆಯ ಕಡೆಗೆ ಹೊರಟ ಬ್ರಾಹ್ಮಣನಿಗೆ ಮನದಲ್ಲಿ ಸಾಕಷ್ಟು ನೋವು ಚಿಂತೆ ಆವರಿಸಿಕೊಂಡು ಬಿಟ್ಟಿತ್ತು, "ಪರಮಾತ್ಮನೂ ಕೂಡಾ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿಲ್ಲ, ಇನ್ನು ಬದುಕಿ ಪ್ರಯೋಜನವಿಲ್ಲ " ಎಂದುಕೊಂಡು ನದಿ ತೀರದ ಕಡೆಗೆ ನಡೆಯತೊಡಗಿದ, ನದಿಯ ದಂಡೆಗೆ ತುಸು ದೂರದಲ್ಲಿ ಮೀನಿನ ಬಲೆಯಲ್ಲಿ ಮೀನೊಂದು ಸಿಲುಕಿ ಒದ್ದಾಡುತ್ತಿತ್ತು, ಅಲ್ಲಿ ಯಾರೂ ಇರಲಿಲ್ಲ, ಬ್ರಾಹ್ಮಣನಿಗೆ ಸಾಯುವ ಮುಂಚೆ ಆ ಮೀನನ್ನು ಬದುಕಿಸಬೇಕೆಂಬ ಹಂಬಲವುಂಟಾಗಿ, ಅಲ್ಲಿಯೇ ಸಿಕ್ಕ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಕೊಂಡು, ತಾನು ತಂದ ಅಕ್ಕಿಯನ್ನು ಅದರಲ್ಲಿ ಹಾಕಿ, ನಿಧಾನವಾಗಿ ಮೀನನ್ನು ಬಲೆಯಿಂದ ಬಿಡಿಸಿ, ಪಾತ್ರೆಯಲ್ಲಿ ತೇಲಿಬಿಟ್ಟು ನದಿಯಲ್ಲಿ ಮೀನನ್ನು ತೇಲಿಬಿಡುವಷ್ಟರಲ್ಲಿ, ಆ ಮೀನು ಬುಳಕ್ಕನೆ ತನ್ನ ಬಾಯಿಯಿಂದ ಮಾಣಿಕ್ಯವನ್ನು ಪಾತ್ರೆಯಲ್ಲಿ ಬೀಳಿಸಿ, ನದಿಯಲ್ಲಿ ಕಣ್ಮರೆಯಾಯಿತು, ಬ್ರಾಹ್ಮಣನ ಪತ್ನಿ ಬಿಂದಿಗೆಯನ್ನು ಬಾಗಿಸಿ ನೀರು ತುಂಬುವಾಗ, ಇದೇ ಮೀನು ಮಾಣಿಕ್ಯವನ್ನು ನುಂಗಿತ್ತು. ಪಾತ್ರೆಯಲ್ಲಿ ಸಿಕ್ಕ ಮಾಣಿಕ್ಯವನ್ನು ನೋಡುತ್ತಲೇ ಬ್ರಾಹ್ಮಣನಿಗೆ ನಿಧಿ ಸಿಕ್ಕಷ್ಟು ಆನಂದವಾಗಿ, ಮಾಣಿಕ್ಯವನ್ನು ತಗೆದುಕೊಂಡು ಪಾತ್ರೆಯನ್ನು ನೀರಿನಲ್ಲಿ ತೇಲಿಬಿಟ್ಟ, ಅದರಲ್ಲಿನ ಅಕ್ಕಿಯನ್ನು ನೂರಾರು ಮೀನುಗಳು ತಿನ್ನತೊಡಗಿದವು, ಕೈಯಲ್ಲಿ ಮಾಣಿಕ್ಯವನ್ನು ಹಿಡಿದುಕೊಂಡು ಅತೀವ ಸಂತೋಷದಿಂದ " ಸಿಕ್ಕಿತು ಸಿಕ್ಕಿತು " ಎಂದು ಬ್ರಾಹ್ಮಣ ಜೋರಾಗಿ ಕೂಗತೊಡಗಿದ, ಆಗ ಅಲ್ಲಿಯೇ ಬೇರೊಬ್ಬರನ್ನು ದೋಚಿಕೊಂಡು ಸಾಕಷ್ಟು ಹಣದ ಚೀಲಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಕಳ್ಳನಿಗೆ, ಈ ಬ್ರಾಹ್ಮಣ ಜೋರಾಗಿ ಕೂಗುವದು ಕೇಳಿಸುತ್ತದೆ ಹಾಗೆಯೇ ಇವನ ಹಿಂದೆ ಬರುತ್ತಿದ್ದ ಕೃಷ್ಣ, ಅರ್ಜುನರು ಕಾಣಿಸುತ್ತಾರೆ, ಆದರೆ ಕಳ್ಳನಿಗೆ ಅವರಿಬ್ಬರು ಯಾರೋ ರಾಜಭಟರಂತೆ ಕಾಣುತ್ತಾರೆ, ತನ್ನನ್ನು ಹಿಡಿಯುವದಕ್ಕಾಗಿ ಬ್ರಾಹ್ಮಣ ಇವರನ್ನು ಕರೆದುಕೊಂಡು ಬಂದಿದ್ದಾನೆ ಅದಕ್ಕಾಗಿ " ಸಿಕ್ಕಿತು ಸಿಕ್ಕಿತು " ಎಂದು ಕೂಗುತ್ತಿದ್ದಾನೆ, ಎಂದು ತಿಳಿದುಕೊಂಡ ಕಳ್ಳ, ಬ್ರಾಹ್ಮಣನ ಬಳಿ ಓಡುತ್ತಾ ಬಂದು ತನ್ನಲ್ಲಿದ್ದ ಎಲ್ಲ ಹಣದ ಚೀಲಗಳನ್ನು ಅವನಿಗೆ ಒಪ್ಪಿಸಿ, ' ಈ ಹಿಂದೆ ನಿಮ್ಮ ಹಣದ ಚೀಲ ಕದ್ದಿದ್ದೇ ಈಗ ಇವೆಲ್ಲ ಹಣದ ಚೀಲಗಳನ್ನು ಒಪ್ಪಿಸಿಕೊಳ್ಳಿ, ನನ್ನನ್ನು ರಾಜಭಟರಿಗೆ ಹಿಡಿದು ಕೊಡಬೇಡಿ" ಎಂದು ಬೇಡಿಕೊಂಡು ಅಲ್ಲಿಂದ ಓಡಿಹೋಗುತ್ತಾನೆ.
ಬ್ರಾಹ್ಮಣನ ಭಾಗ್ಯದ ಬಾಗಿಲು ತೆರೆದಿರುತ್ತದೆ, "ಪರಮಾತ್ಮಾ ನಿನ್ನ ಲೀಲೆ ಎಷ್ಟು ಕೊಂಡಾಡಿದರೂ ಸಾಲದು, ನನ್ನ ದಾರಿದ್ರ್ಯ ನಿವಾರಣೆ ಮಾಡಿದೆ " ಎನ್ನುತ್ತಾ ಬ್ರಾಹ್ಮಣ ಹಣದ ಚೀಲಗಳನ್ನು ಮಾಣಿಕ್ಯವನ್ನು ಹಿಡಿದುಕೊಂಡು ಮನೆಯ ಕಡೆಗೆ ನಡೆಯತೊಡಗಿದ.
ಇದೆಲ್ಲವನ್ನು ನೋಡುತ್ತಾ ನಿಂತ ಅರ್ಜುನ ಕೃಷ್ಣನಿಗೆ ಕೇಳುತ್ತಾನೆ "ಕೃಷ್ಣಾ ಏನಿದು ನಿನ್ನ ಲೀಲೆ," ಆಗ ಕೃಷ್ಣ ಹೇಳುತ್ತಾನೆ,
" ನಾನು ಮೊದಲೇ ಹೇಳಿದ್ದೇನೆ, ಬ್ರಾಹ್ಮಣ ಬರಿ ತನ್ನ ತುತ್ತಿಗಾಗಿ ಭಿಕ್ಷೆಯ ಕರ್ಮ ಮಾಡುತ್ತಿದ್ದ, ಅದರಲ್ಲಿ ಸ್ವಲ್ಪ ಭಾಗವಾದರೂ ಇನ್ನೊಬ್ಬರ ಸಹಾಯಾರ್ಥವಾಗಿ ಬಳಸಿಕೊಂಡಿದ್ದಿಲ್ಲ, ಕೊನೆಗೆ ಸಾಯಲು ನಿರ್ಧರಿಸಿದಾಗ ಒಂದು ಜೀವವನ್ನು ಉಳಿಸಿದ, ನೂರಾರು ಜೀವಿಗಳಿಗೆ ಅನ್ನ ಹಾಕಿದ, ಅದರ ಫಲವಾಗಿ ಅವನ ಕರ್ಮ ಇಂದು ಅವನನ್ನು ಕಾಪಾಡಿತು, ದಾರಿದ್ರ್ಯ ಬದಲಾಗಿ ಭಾಗ್ಯ ಬಂದಿತು ".
( ಕೀರ್ತನೆಯಲ್ಲಿ ಕೇಳಿದ್ದು ).
****
ಕಥೆ ಮತ್ತು ನಂಬಿಕೆ
ಓರ್ವ ಬ್ರಾಹ್ಮಣ, ಪಾಠ ಪ್ರವಚನ ಹರಿಕಥೆಗಳನ್ನು ನಡೆಸಿಕೊಡುತ್ತಾ ದೇವರ ಲೀಲೆಗಳನ್ನು ಹಾಡುಗಳ ಮೂಲಕ ಇತರರಿಗೆ ತಿಳಿಸಿಕೊಡುತ್ತಾ ಜೀವನಯಾಪನೆ ಮಾಡುವವರು; ಒಬ್ಬ ಧನಿಕನ ಮನೆಯಲ್ಲಿ ಶ್ರೀಮದ್ಭಾಗವತದ ಉಪನ್ಯಾಸ ಮಾಡುತ್ತಿದ್ದರು.
ಅದೇ ಸಮಯದಲ್ಲಿ ಕಳ್ಳನೊಬ್ಬ ಆ ಧನಿಕನ ಮನೆಗೆ ನುಗ್ಗಿದ, ಒಂದು ಮೂಲೆಯಲ್ಲಿ ಅಡಗಿ ಕುಳಿತ. ಸಹಜವಾಗಿ ಶ್ರೀಮದ್ಭಾಗವತದ ಕತೆಯು ಕಳ್ಳನ ಕಿವಿಗೆ ಬೀಳುತ್ತಿತ್ತು.
ಶ್ರೀಮದ್ಭಾಗವತವೆಂದರೆ ಶ್ರೀಕೃಷ್ಣನ ಅಪಾರ ಮಹಿಮೆಯ ಅದ್ಬುತ ಕಥೆಗಳ ಸಂಗ್ರಹ.
ಆ ಬ್ರಾಹ್ಮಣರು ಬಾಲಕೃಷ್ಣನು ಧರಿಸಿದ ಸುಂದರ ಆಭರಣಗಳನ್ನು ವರ್ಣಿಸುತ್ತಿದ್ದರು.
ತಾಯಿ ಯಶೋದೆ ಪುಟ್ಟ ಕೃಷ್ಣನನ್ನು ಯಾವ ರೀತಿ ಶೃಂಗಾರ ಮಾಡಿ ಗೋವುಗಳೊಂದಿಗೆ ಕಳುಹಿಸುತ್ತಿದ್ದಳು ಎಂಬುದನ್ನು ಮನಮುಟ್ಟುವಂತೆ ವರ್ಣಿಸುತ್ತಿದ್ದರು.
ಇದನ್ನೆಲ್ಲಾ ವಿಸ್ಮಿತನಾಗಿ ಕೇಳುತ್ತಿದ್ದ ಕಳ್ಳ, ಹೇಗಾದರೂ ಆ ಹುಡುಗನನ್ನು ಹುಡುಕಿ ಅವನು ಧರಿಸಿರುವ ಆಭರಣಗಳನ್ನೆಲ್ಲಾ ಸೆಳೆದು ನನ್ನದಾಗಿಸಿಕೊಂಡರೆ ಪ್ರತಿನಿತ್ಯ ಸಣ್ಣಪುಟ್ಟ ಕಳ್ಳತನ ಮಾಡುವ ಕಷ್ಟ ತಪ್ಪುವುದು ಎಂದು ಯೋಚಿಸಿದ.
ಶ್ರೀಮದ್ಭಾಗವತ ಪ್ರವಚನ ಮುಗಿಯುವತನಕ ಅಲ್ಲಿಯೇ ಇದ್ದು ನಂತರ ಅಲ್ಲಿಂದ ತೆರಳಿದ.
ಆ ಪುಟ್ಟ ಹುಡುಗ ಎಲ್ಲಿರುತ್ತಾನೆ ಎಂಬುದನ್ನು ತಿಳಿಯಬಯಸಿದ ಕಳ್ಳ ಬ್ರಾಹ್ಮಣರನ್ನು ಹಿಂಬಾಲಿಸಿ ನಡೆದ.
ಕಳ್ಳನನ್ನು ಕಂಡ ಬ್ರಾಹ್ಮಣ ಪ್ರವಚನದಲ್ಲಿ ದೊರೆತ ಅಲ್ಪ ದಕ್ಷಿಣೆಯನ್ನೂ ಕಳೆದುಕೊಳ್ಳವ ಭಯದಲ್ಲಿ ಕಂಗಾಲಾಗಿ "ನನ್ನಲ್ಲಿ ಏನೂ ಇಲ್ಲ" ಎಂದು ಬಡಬಡಿಸಿದರು.
"ನನಗದೆಲ್ಲ ಏನೂ ಬೇಡ. ಆಗಲೇ ನೀನು ಹೇಳಿದ ಆ ಗೋಪಾಲಕ ಬಾಲಕೃಷ್ಣ ಎಲ್ಲಿ ಸಿಗುತ್ತಾನೆ ? ಆ ಸ್ಥಳದ ಗುರುತು ಹೇಳು, ನಾ ಅಲ್ಲಿಗೆ ಹೋಗಬೇಕು."
ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯೋಚನೆಯಿಂದ ವಿಪ್ರರು ಹೇಳಿದರು,
"ವೃಂದಾವನದಲ್ಲಿ ಯಮುನಾನದಿಯ ದಡದಲ್ಲಿ ಇಬ್ಬರು ಬಾಲಕರು ಗೋವುಗಳನ್ನು ಮೇಯಿಸುತ್ತಿರುತ್ತಾರೆ.
ಒಬ್ಬ ಬೆಳ್ಳಗಿದ್ದಾನೆ, ಮತ್ತೊಬ್ಬ ಕಪ್ಪಗಿದ್ದಾನೆ. ಕಪ್ಪು ಹುಡುಗನ ಕೈಯಲ್ಲಿ ಒಂದು ಕೊಳಲು ಇದೆ, ತಲೆಯಲ್ಲೊಂದು ನವಿಲುಗರಿ. ಅವನೇ ಶ್ರೀಕೃಷ್ಣ."
ಇದನ್ನು ಸಂಪೂರ್ಣವಾಗಿ ನಂಬಿದ ಕಳ್ಳ ಕೂಡಲೇ ವೃಂದಾವನದ ಕಡೆಗೆ ತೆರಳಿದ.
ಭಾಗವತದಲ್ಲಿ ವಿವರಿಸಿದಂತೆ ಬ್ರಾಹ್ಮಣರು ಹೇಳಿದ ಆ ಸುಂದರವಾದ ಸ್ಥಳವನ್ನು ಹುಡುಕಿ ಅಲ್ಲಿಯೇ ಮರ ಹತ್ತಿ ಹುಡುಗರಿಗಾಗಿ ಕಾದು ಕುಳಿತ.
ಸೂರ್ಯೋದಯವಾಯಿತು.
ಇಂಪಾದ ಮುರಳಿಯ ನಾದ ಬೆಳಗನ್ನು ಮತ್ತಷ್ಟು ಸುಂದರಗೊಳಿಸಿತ್ತು.
ಅದನ್ನು ಹಿಂಬಾಲಿಸಿ ಹುಡುಗರಿಬ್ಬರೂ ಬರುವುದನ್ನು ನೋಡಿ ಕಳ್ಳ ಮರದಿಂದ ಕೆಳಗಿಳಿದ.
ಹುಡುಗರ ಬಳಿಸಾರಿದ.
ಮನಮೋಹಕ ಬಾಲಕೃಷ್ಣನ ಕಂಡು ಮೈಮರೆತ.
ತನಗೇ ಗೊತ್ತಿಲ್ಲದೇ ಕೈಗಳನ್ನೆತ್ತಿ ಜೋಡಿಸಿದ.
ಕಣ್ಣುಗಳು ಆನಂದದಿಂದ ತುಂಬಿಬಂದವು.
ಶ್ರೀಕೃಷ್ಣನ ಮೇಲಿಂದ ಕಣ್ಣುಗಳನ್ನು ಬೇರೆಡೆಗೆ ಸೆಳೆಯುವುದು ಅವನಿಗೆ ಸಾಧ್ಯವೇ ಆಗಲಿಲ್ಲ.
ಇಂತಹ ತೇಜಮೂರ್ತಿಗಳನ್ನು ಇಷ್ಟೊಂದು ಬೆಲೆಬಾಳುವ ಅಮೂಲ್ಯ ಆಭರಣಗಳಿಂದ ಅಲಂಕರಿಸಿ ನದೀತೀರಕ್ಕೆ ಕಳುಹಿಸಿದ ಆ ತಾಯಿಯನ್ನು ನೆನೆದು ದಿಗ್ಭ್ರಮೆಗೊಂಡ.
"ನಿಲ್ಲು" ಎನ್ನುತ್ತಾ ಶ್ರೀಕೃಷ್ಣನ ಕೈಹಿಡಿದು ಕೂಗಿದ.
ಗೋವಿಂದನನ್ನು ಸ್ಪರ್ಶಿಸಿದ ಆ ಕ್ಷಣ ಅವನ ಹಿಂದಿನ ಎಲ್ಲಾ ಪಾಪಗಳು ಕ್ಷಣಾರ್ಧದಲ್ಲಿ ಬೆಂಕಿಯಲ್ಲಿ ಸುಟ್ಟ ಹತ್ತಿಯ ಉಂಡೆಯಂತೆ ಸುಟ್ಟುಹೋದವು.
ಮನದೊಳಗೆ ಮೂಡಿದ ದೈವಿಕ ಆರ್ದ್ರತೆಯೊಂದಿಗೆ ಭಕ್ತಿಪರವಶನಾಗಿ ಕೇಳಿದ, "ಯಾರು ನೀನು ?"
ಕಪಟನಾಟಕಸೂರ್ತಧಾರಿ ಶ್ರೀಕೃಷ್ಣ ಕಳ್ಳನನ್ನೇ ನೋಡುತ್ತಾ ಮುಗ್ಧಭಾವದಿಂದ "ನೀವು ಹೀಗೆ ನೋಡುತ್ತಿದ್ದರೆ ನನಗೆ ಭಯವಾಗುತ್ತಿದೆ. ದಯವಿಟ್ಟು ನನ್ನ ಕೈ ಬಿಡಿ" ಎನ್ನಲು, ಅದೇ ಪರವಶತೆಯಿಂದ ಕೃಷ್ಣನ ಬಿಡಲೊಲ್ಲದ ಕಳ್ಳ, "ನನ್ನ ಕ್ರೂರ ಮನಸ್ಸು ನನ್ನ ಮುಖದಲ್ಲಿ ಕಾಣಿತ್ತಿದೆಯಷ್ಟೇ..
ನಿನಗೆ ಭಯವಾದರೆ ನಾನು ದೂರ ಹೋಗುತ್ತೇನೆ, ಆದರೆ ನಿನ್ನನ್ನು ಬಿಡಲು ಮಾತ್ರ ಹೇಳಬೇಡ.." ಎಂದುಬಿಟ್ಟ..
ತುಂಟ ಕೃಷ್ಣ ಕಳ್ಳನು ಅಲ್ಲಿಗೆ ಬಂದ ಉದ್ದೇಶವನ್ನು ನೆನಪಿಸುವಂತೆ, "ನನ್ನ ಈ ಎಲ್ಲಾ ಆಭರಣಗಳನ್ನು ತೆಗೆದುಕೋ" ಎಂದು ಕೊಟ್ಟುಬಿಟ್ಟ.
ಕಳ್ಳ ಗೊಂದಲಗೊಂಡ, "ಹೀಗೆ ಎಲ್ಲವನ್ನೂ ನನಗೆ ಕೊಟ್ಟರೆ ನಿನ್ನ ತಾಯಿ ನಿನ್ನನ್ನು ಗದರುವುದಿಲ್ಲವೇ ?"
ನಗುನಗುತ್ತಾ ಕೃಷ್ಣ ಹೇಳಿದ,
"ನಾನು ನಿನಗಿಂತ ದೊಡ್ಡ ಕಳ್ಳ. ಇಂಥವು ನನ್ನಲ್ಲಿ ಹೇರಳವಾಗಿವೆ, ಅದರ ಬಗ್ಗೆ ಚಂತೆ ಮಾಡಬೇಡ.
ಆದರೆ ನನಗೂ ನಿನಗೂ ಒಂದು ವ್ಯತ್ಯಾಸ ಇದೆ, ಏನೆಂದರೆ ನಾನು ಕದ್ದರೆ ಯಾರೂ ದೂರುವುದಿಲ್ಲ.
ಹಾಗಾಗಿಯೇ ನಾನು "ಚಿತ್ತಚೋರ"..
ನಿನಗೆ ಇದು ಗೊತ್ತಿಲ್ಲ.
ಎಲ್ಲರ ಚಿತ್ತವನ್ನು ಕದ್ದು ನನ್ನಲ್ಲೇ ಇಟ್ಟುಕೊಳ್ಳುವ ಕಳ್ಳ ನಾನು"..
ಇಬ್ಬರೂ ಹುಡುಗರು ಅಲ್ಲಿಂದ ಮಾಯವಾದರು.
ಆಶ್ಚರ್ಯ, ಕಳ್ಳನ ಕೈಯಲ್ಲಿ ಆಭರಣಗಳಿಂದ ತುಂಬಿದ ಚೀಲವೊಂದಿತ್ತು.
ಕೃಷ್ಣನ ಕತೆ ಹೇಳಿದ ಬ್ರಾಹ್ಮಣರ ಮನೆಗೆ ಬಂದು ನಡೆದದ್ದೆಲ್ಲವನ್ನೂ ವಿವರಿಸಿ ಹೇಳಿದ.
ಸಜ್ಜನ ಬ್ರಾಹ್ಮಣರು ಆನಂದಾಶ್ಚರ್ಯದಿಂದ ಕಳ್ಳನನ್ನು ಮನೆಯೊಳಗೆ ಕರೆದು ಚೀಲವನ್ನು ತೆರೆದು ನೋಡಿದರೆ, ತಾವು ಶ್ರೀಮದ್ಭಾಗವತ ಕಥೆಯಲ್ಲಿ ವರ್ಣಿಸಿದ ಎಲ್ಲಾ ಗುಣಗಳನ್ನು ಹೊಂದಿರುವ ಅಮೂಲ್ಯ ರತ್ನಗಳನ್ನೊಳಗೊಂಡ ಹೊಳೆಹೊಳೆಯುವ ಆಭರಣಗಳು ಆ ಚೀಲದಲ್ಲಿದ್ದವು.
ಆನಂದಭಾಷ್ಪಭರಿತರಾಗಿ ಸಜ್ಜನ ಬ್ರಾಹ್ಮಣರು ಆ ಕಳ್ಳನನ್ನು, ಆ ಕಪ್ಪು ಹುಡುಗನನ್ನು ನೋಡಿದ ಸ್ಥಳಕ್ಕೆ ಕರೆದೊಯ್ಯಲು ಕೇಳಿಕೊಂಡರು.
" ಇದೇ ಆ ಸ್ಥಳ" ಎಂದು ಕಳ್ಳ ತೋರಿಸಿದ ಜಾಗದಲ್ಲಿ ಬ್ರಾಹ್ಮಣರಿಗೆ ಏನೂ ಕಾಣಲಿಲ್ಲ, ಯಾರೂ ಕಾಣಲಿಲ್ಲ..
"ಹೇ ದೇವದೇವ ! ಕಳ್ಳನಿಗೆ ಕಂಡವ ನನಗೆ ಕಾಣಿಸಲಾರೆಯಾ ?"
ಕೃಷ್ಣ ಕಾಣಿಸಲಿಲ್ಲ, ಧ್ವನಿ ಕೇಳಿಸಿತು..
"ನೀನು ಶ್ರೀಮದ್ಭಾಗವತದ ಕತೆಯನ್ನು ಎಲ್ಲಾ ಇತರ ಕಥೆಗಳಂತೆಯೇ ಓದಿದೆ. ಆದರೆ ನೀನು ಓದಿ ಹೇಳಿದ ಕಥೆಯನ್ನು ಮತ್ತು ನನ್ನ ಬಗೆಗಿನ ವಿವರಗಳನ್ನು ಈ ಕಳ್ಳ ಕಳ್ಳನಾದರೂ ನಂಬಿ ನಡೆದ, ಅದನ್ನು ಒಪ್ಪಿ ನನ್ನನ್ನು ನೋಡಲು ಬಂದ.."
"ನನ್ನನ್ನು ನಂಬಿದವರಿಗೆ ನಾನು ಖಂಡಿತಾ ಕಾಣಿಸುವೆ. ನಂಬಿ ನಡೆದರೆ ನಿನ್ನೊಳಗೆ ನೆಲೆಸುವೆ"
ಭಗವಂತನ ಕಥೆಗಳನ್ನು ಶುಷ್ಕವಾಗಿ ಓದಿ ಕೇಳಿ ಮರೆತುಬಿಡುವುದು ವ್ಯರ್ಥ ಕಾಲಹರಣ..
ನಂಬಿ ನಡೆಯೋಣ, ಶ್ರೀಕೃಷ್ಣನನ್ನು ಒಳಗಣ್ಣಿಂದ ಕಾಣುವ ಭಾಗ್ಯ ನಮ್ಮದಾದೀತು.🙏💐🙂
**********
Jambavanta tunnel guha near Porbandar, Gujarat
Krishna and jambavanta fought here..
******
..
..ಶ್ರೀಕೃಷ್ಣಜಯಂತಿ
ಈ ಬಾರಿ ತಾ. ೨೯-೮-೨೦೨೧ ಜನ್ಮಾಷ್ಟಮಿಯ ಆಚರಣೆಯನ್ನು ಕೆಲವರು ತಿಳಿಸಿದ್ದರೆ ಇನ್ನೂ ಕೆಲವು ಪಂಚಾಂಗಗಳು ತಾ. ೩೦-೮-೨೦೨೧ ಜಯಂತಿಯ ಆಚರಣೆಯನ್ನು ವಿಧಿಸಿವೆ. ಅವರವರು ಆಯಾಯ ಗುರುಮಠವನ್ನು ಅನುಸರಿಸುವುದು ಸೂಕ್ತವಾದರೂ ಯಾವ ದಿನ ಸರಿ ಎಂಬ ಜಿಜ್ಞಾಸೆ ಸಹಜ. ತಾರೀಕು ೨೯-೮-೨೧ ರಂದು ದೃಗ್ಗಣಿತ ಅಥವಾ ಆರ್ಯಭಟೀಯ ಎರಡೂ ಪಂಚಾಂಗ ರೀತ್ಯಾ ಚಂದ್ರೋದಯ ಕಾಲದಲ್ಲಿ ಅಷ್ಟಮಿಯಿದೆ. ಆದರೆ ರೋಹಿಣೀ ನಕ್ಷತ್ರ ಇರುವುದಿಲ್ಲ. ಶ್ರೀಮದಾಚಾರ್ಯರು ಜಯಂತೀ ನಿರ್ಣಯದಲ್ಲಿ ಹೇಳುವಂತೆ -
रोहिण्यां अर्धरात्रे तु यदा कालाष्टमी भवेत् ।
जयन्ती नाम सा प्रोक्ता सर्वपापप्रणाशिनी ।
यस्यां जातो जगन्नाथः निशीथे भगवानजः ॥
ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು ಆ ಸಮಯದಲ್ಲಿ ಅಷ್ಟಮಿಯು ಒದಗಿದರೆ ಜಯಂತಿ ಎಂದು ನಿರ್ಣಯಿಸಿದ್ದಾರೆ. ೨೯ ರಂದು ರೋಹಿಣೀ ನಕ್ಷತ್ರವಿಲ್ಲ. ಹಾಗೆಂದು ಕೇವಲ ಅಷ್ಟಮಿಯನ್ನು ಆಚರಿಸಬಹುದೇ ಎಂದು ಪ್ರಶ್ನಿಸಿದರೆ ಶ್ರೀಮದಾಚಾರ್ಯರ ಪೂರ್ವಾಶ್ರಮದ ಸಹೋದರರೂ ಶಿಷ್ಯರೂ ಆದ ಶ್ರೀವಿಷ್ಣುತೀರ್ಥರು -
सिंहमासे तु रोहिण्यायुतां कृष्णाष्टमीं पुमान् ।
उपोष्य मध्यरात्रे तु पूजयेत् नन्दनन्दनम् ॥
ಸಿಂಹಮಾಸದಲ್ಲಿ ರೋಹಿಣೀ ಸಹಿತವಾದ ಅಷ್ಟಮೀ ಒದಗಿದಂದೇ ಜಯಂತಿಯನ್ನು ಆಚರಿಸಬೇಕೆಂದು ನಿರ್ಣಯವನ್ನು ಕೊಟ್ಟಿದ್ದಾರೆ. ಆದ್ದರಿಂದ ೨೯ ರಂದು ಅಷ್ಟಮಿ ಮಾತ್ರವಾದ್ದರಿಂದ ಆಚರಣೆಗೆ ಸೂಕ್ತವಲ್ಲ. ಭವಿಷ್ಯತ್ಪುರಾಣದಲ್ಲೂ -
सत्यष्टममुहूर्ते वा *रोहिणीसहिताष्टमी ।
श्रावणे मासि सिंहार्के क्वचित्सापि च शस्यते ।।
एकादशीनां कोटीनां व्रतैश्च लभते फलम्।
अतो दशगुणं प्रोक्तं कृत्वैतत्फलमाप्नुयात् ।।
ಸಿಂಹಮಾಸದಲ್ಲಿ ಒದಗಿದ ಶ್ರಾವಣ ಮಾಸದಲ್ಲಿ ರೋಹಿಣೀ ಸಹಿತವಾದ ಅಷ್ಟಮಿಯನ್ನು ಆಚರಿಸಬೇಕು. ಅಂದು ಹತ್ತು ಕೋಟಿ ಏಕಾದಶಿ ಉಪವಾಸ ಮಾಡಿದಷ್ಟು ಪುಣ್ಯ ಉಪವಾಸದಿಂದ ಸಿಗುತ್ತದೆ ಎಂದಿದೆ. ಗರುಡ ಪುರಾಣದಲ್ಲೂ,
कृष्णाष्टम्यां च रोहिण्यां अर्धरात्रेऽर्चनं हरेः ।
कार्याविद्धापि सप्तम्यां हन्तिपापं त्रिजन्मनः॥
ಕೃಷ್ಣಪಕ್ಷದ ಅಷ್ಟಮಿಯಿಂದ ಕೂಡಿದ ರೋಹಿಣಿಯನ್ನು ಆಚರಿಸುವಂತೆ ತಿಳಿಸಿದ್ದಾರೆ. ಶ್ರೀವಿಷ್ಣುತೀರ್ಥರಾಗಲಿ ಗರುಡಪುರಾಣವಾಗಲಿ ಅರ್ಧರಾತ್ರಿಯಲ್ಲಿ ಪೂಜಿಸಬೇಕೆಂದು ಹೇಳಿದ್ದಾರೆಯೇ ಹೊರತು ಅರ್ಧರಾತ್ರಿಯಲ್ಲಿ ಅಷ್ಟಮೀ ಯೋಗವನ್ನು ಕಡ್ಡಾಯವಾಗಿ ಹೇಳಿಲ್ಲ. ಆದರೆ ರೋಹಿಣೀ ಸಹಿತವಾದ ಅಷ್ಟಮಿಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಹೇಳಿದ್ದಾರೆ.
रोहिण्याश्च यदा कृष्णपक्षेऽष्टम्यांद्विजोत्तम।
जयन्ती नाम सा प्रोक्ता सर्वपापहरातिथिः॥ - विष्णुधर्म
कृष्णाष्टम्यां भवेद्यत्र कलैका रोहिणी नृप।
जयन्ती नाम सा प्रोक्ता उपोष्या सा प्रयत्नतः
- आग्नेय
ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಕಲೆಯಷ್ಟಾದರೂ ರೋಹಿಣಿಯು ಒದಗಿದರೆ ಅಂದು ಉಪವಾಸಕ್ಕೆ ಪ್ರಾಶಸ್ತ್ಯಕೊಟ್ಟಿದ್ದಾರೆ. ಆದ್ದರಿಂದ ತಾ. ೩೦-೮-೨೦೨೧ ರಂದೇ ಜಯಂತಿಯ ಆಚರಣೆ ಶಾಸ್ತ್ರಸಮ್ಮತವಾಗಿದೆ. ೨೯ ರ ಆಚರಣೆ ಪ್ರಶಸ್ತವಲ್ಲ.
उदये अष्टमी किञ्चित्
नवमी सकलायदि।
भवेद्भुदेन्दुसंयुक्ता प्रजापत्यर्क्ष्यसंयुता॥
अपि वर्षशतेनापि लभ्यते वा न लभ्यते।
व्रतं तत्र व्रती कुर्यात्पुंसां कोटिं समुद्धरेत् ॥
ಎಂಬ ಬ್ರಹ್ಮವೈವರ್ತವಚನದಂತೆ ಉದಯದಲ್ಲಿ ಅಷ್ಟಮಿ ಮತ್ತು ರೋಹಿಣಿಯಿದ್ದು ಅಂದು ಸೋಮವಾರ ಅಥವಾ ಬುಧವಾರವಾಗಿದ್ದರೆ ಅಂತಹ ಯೋಗವು ಅಲಭ್ಯ ,ಅಮೂಲ್ಯ, ಅಂದು ಜಯಂತಿಯನ್ನು ಆಚರಿಸಬೇಕೆಂದು ಹೇಳಿದ್ದಾರೆ. ತಾ. ೩೦-೮-೨೦೨೧ ರಂದು ಅಷ್ಟಮೀ ಸಹಿತವಾದ ರೋಹಿಣಿಯ ಯೋಗವಿದೆ, ಸೋಮವಾರವು ಒದಗಿ ಅತ್ಯಮೂಲ್ಯವಾಗಿದೆ. ಆಚಾರ್ಯರು ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣಿಯಿದೆ. ಚಂದ್ರನು ರೋಹಿಣೀ ಸಹಿತನಾಗಿ ಇರುವುದರಿಂದ गृहाणार्घ्यं मयादत्तं रोहिण्या सहितः शशिन् । ಎಂದು ಕೊಡುವ ಚಂದ್ರಾರ್ಘ್ಯಪ್ರಧಾನ ಹೆಚ್ಚು ಮಹತ್ವಪೂರ್ಣವೆನಿಸಿರುತ್ತದೆ.ಅರ್ಥಪೂರ್ಣವೂ ಹೌದು. ಹೀಗೆ ಶ್ರೀಮದಾಚಾರ್ಯರು, ಶ್ರೀವಿಷ್ಣುತೀರ್ಥರು, ಹಾಗೆಯೇ ಪುರಾಣವಚನಗಳ ಅನುಸಾರ ೩೦-೮-೨೦೨೧ ರಂದು ಹಗಲು ಉಪವಾಸವಿದ್ದು ರಾತ್ರಿ ಚಂದ್ರೋದಯಕ್ಕೆ ಅಂದರೆ ಸುಮಾರು, ರಾತ್ರಿ 12-15 ರ ಹೊತ್ತಿಗೆ ಅರ್ಘ್ಯಪ್ರದಾನದ ಆಚರಣೆಯು ಸೂಕ್ತ. ಹಾಗೆಯೇ ಪಾರಣೆಯ ವಿಷಯದಲ್ಲೂ ೩೦-೮-೨೦೨೧ ರಾತ್ರಿ ತಿಥ್ಯಂತಪಾರಣೆಯನ್ನು ಹೇಳಿದ್ದಾರೆ. ಆದರೆ -
पारणं पावनं पुंसां सर्वपापप्रणाशनम् ।
उपवासाङ्गभूतं च
फलदं सिद्धिकारणम्।।
सर्वेष्वेवोपवासेषु
दिवा पारणमिष्यते ।
अन्यया फलहानिः स्यात्कृते घारणपारणे ।।
न रात्रौ पारणं कुर्याह्यते वै रोहिणीव्रतम्।
ಎಂಬ ಬ್ರಹ್ಮವೈವರ್ತಪುರಾಣದ ವಚನದ ಅನುಸಾರ ಹಾಗೆಯೇ,
सर्वेष्वेवोपवासेषु पूर्वाह्णे पारणं भवेत् ।
अन्याया तु फलस्यार्धं धर्ममेवोपसर्पति।।
ಎಂಬ ದೇವಲರ ವಚನದಂತೆ ಪ್ರಾತಃ ಕಾಲದಲ್ಲೇ ಪಾರಣೆಯನ್ನು ಎಲ್ಲಾ ಉಪವಾಸಗಳಲ್ಲಿ ಮಾಡಬೇಕು. ಇಲ್ಲವಾದರೆ ವ್ರತದ ಫಲವು ಹಾನಿಯಾಗಿ ಅಪೂರ್ಣವಾಗುತ್ತದೆ. ಆದ್ದರಿಂದ ೨೯-೮-೨೦೨೧ ಉಪವಾಸ ಮಾಡಿ "ತಿಥಿಭಾಂತೇ ಚ ಪಾರಣಂ" ಎಂಬ ನಿಯಮದವರು ೩೧-೮-೨೦೨೧ ಬೆಳಿಗ್ಗೆಯೇ ತಿಥಿ ಹಾಗೂ ನಕ್ಷತ್ರ ಮುಗಿದ ಮೇಲೆ ಅಭಿಷೇಕ ನೈವೇದ್ಯಾದಿಗಳನ್ನು ಪೂರೈಸಿ ತದನಂತರವೇ ಪಾರಣೆಯನ್ನು ಮಾಡಬೇಕಾಗುತ್ತದೆ. ಆದರೆ
ವಿ, ಸೂ:-ಉತ್ತರಾದಿ ಮಠ ಹಾಗೂ ಒಂಟಿಕೊಪ್ಪಲು ಪ್ರಕಾರ ಭಾನುವಾರ ಅಂದರೆ ೨೯-೦೮-೨೦೨೧ ರಂದು ಕೃಷ್ಣಾಷ್ಟಮೀ ಆಚರಣೆ .ರಾತ್ರಿ ಅರ್ಘ್ಯಪ್ರದಾನ, ಉತ್ತರಾದಿ ಮಠದವರು ಮರುದಿನ ಸೋಮವಾರವೂ ಉಪವಾಸವಿದ್ದು ರಾತ್ರಿ ಅಷ್ಟಮೀ ಮುಗಿದ ನಂತರ ಪೂಜೆ ಪಾರಣೆ ಮಾಮಾಡುವರುಆದರೆ ನಕ್ಷತ್ರ ರೋಹಿಣಿಯು ಮಂಗಳವಾರದ ಬೆಳಗಿನವರೆಗೂ ಇರುತ್ತದೆ.ಇದನ್ನು ಪರಿತ್ಯಜಿಸಿ ಪಾರಣೆ ಮಾಡುವಂತಿಲ್ಲ. ರೋಹಿಣೀ ನಕ್ಷತ್ರ ಮುಗಿಯುವುದು ಮಂಗಳವಾರ ಬೆಳಿಗ್ಗೆ 09-40 ಕ್ಕೆ.
ಶ್ರೀಮಧ್ವೇಶಾರ್ಪಣಮಸ್ತು
ಅರ್ಘ್ಯ ಸಮಯ.
ARGHYA TIMINGS.
FOR SRSM (ಶ್ರೀಗುರುರಾಘವೇಂದ್ರಸ್ವಾಮಿಗಳವರ ಮಠ) 12:02PM (ರಾತ್ರಿ ೧೨:೦೨ ನಿಮಿಷಕ್ಕೆ)
FOR SVM ಸೋಸಲೆ ಶ್ರೀ ವ್ಯಾಸರಾಜರ ಮಠ 12:10PM (ರಾತ್ರಿ ೧೨:೧೦ ನಿಮಿಷಕ್ಕೆ)
FOR SPRM ಮುಳಬಾಗಿಲು ಶ್ರೀಶ್ರೀಪಾದರಾಜರ 12:02PM ಮಠ (ರಾತ್ರಿ ೧೨:೦೨ ನಿಮಿಷಕ್ಕೆ)
FOR SKM ಶ್ರೀಕಣ್ವಮಠ 11:52PM (ರಾತ್ರಿ ೧೧:೫೨ ನಿಮಿಷಕ್ಕೆ)
ಶ್ರೀ ರಾಯರ ಮಠಕ್ಕೆ 30 th monday
ಶ್ರೀ ಕೃಷ್ಣ ಜಯಂತಿ
ಮಂಗಳವಾರ 31 st ಪಾರಣೆ.
ಉತ್ತರಾದಿ ಮಠಕ್ಕೆ
29 th sunday.
ಶ್ರೀ ಕೃಷ್ಣ ಜಯಂತಿ .
30.08.2021
ರಾತ್ರಿ 11.45 pm ಮೇಲೆ ಪಾರಣೆ .
https://maps.app.goo.gl/kseHsSWLfF9sTk3R9
***
For elaborate reading related to Krishna Jayanthi, you may refer to the below write-up
ಶ್ರೀಕೃಷ್ಣಜಯಂತಿ ಎಂದು !?🌸
ಈ ಬಾರಿಯ ಪಂಚಾಂಗಗಳಲ್ಲಿ ಕೆಲವು ತಾ. ೨೯-೮-೨೦೨೧ ಜಯಂತಿಯ ಅಥವಾ ಜನ್ಮಾಷ್ಟಮಿಯ ಆಚರಣೆಯನ್ನು ತಿಳಿಸಿದ್ದರೆ ಇನ್ನೂ ಕೆಲವು ಪಂಚಾಂಗಗಳು ತಾ. ೩೦-೮-೨೦೨೧ ಜಯಂತಿಯ ಆಚರಣೆಯನ್ನು ವಿಧಿಸಿದೆ. ಅವರವರು ಆಯಾಯ ಗುರುಮಠವನ್ನು ಅನುಸರಿಸುವುದು ಸೂಕ್ತವಾದರೂ ಯಾವತ್ತು ಸರಿ ಎಂಬ ಜಿಜ್ಞಾಸೆ ಸಹಜ. ಇದರ ಬಗ್ಗೆ ನೋಡೋಣ. ತಾರೀಕು ೨೯-೮-೨೧ ರಂದು ದಗ್ಗಣಿತ ಅಥವಾ ಆರ್ಯಭಟೀಯ ಎರಡೂ ಪಂಚಾಂಗರೀತ್ಯಾ ಅರ್ಧರಾತ್ರಿಯ ವೇಳೆಗೆ ಅಷ್ಟಮಿಯಿದೆ. ಆದರೆ ರೀಹಿಣೀನಕ್ಷತ್ರ ಇರುವುದಿಲ್ಲ. ಶ್ರೀಮದಾಚಾರ್ಯರು ಜಯಂತೀನಿರ್ಣಯದಲ್ಲಿ ಹೇಳುವಂತೆ -
रोहिण्यां अर्धरात्रे तु यदा काळाष्टमी भवेत् ।
जयन्ती नाम सा प्रोक्ता सर्वपापप्रणाशिनी ।
यस्यां जातो जगन्नाथः निशीथे भगवानजः ॥
ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು ಆ ಸಮಯದಲ್ಲಿ ಅಷ್ಟಮಿಯು ಒದಗಿದರೆ ಜಯಂತಿ ಎಂದು ನಿರ್ಣಯಿಸಿದ್ದಾರೆ. ೨೯ ರಂದು ರೋಹಿಣೀನಕ್ಷತ್ರವಿಲ್ಲ. ಹಾಗೆಂದು ಕೇವಲ ಅಷ್ಟಮಿಯನ್ನು ಆಚರಿಸಬಹುದೇ ಎಂದು ಪ್ರಶ್ನಿಸಿದರೆ ಶ್ರೀಮದಾಚಾರ್ಯರ ಪೂರ್ವಾಶ್ರಮದ ಸಹೋದರರೂ ಶಿಷ್ಯರೂ ಆದ ಶ್ರೀವಿಷ್ಣುತೀರ್ಥರು -
सिंहमासे तु रोहिण्यायुतां कष्णाष्टमीं पुमान् ।
उपोष्य मध्यरात्रे तु पूजयेत् नन्दनन्दनम् ॥
ಸಿಂಹಮಾಸದಲ್ಲಿ ರೋಹಿಣೀಸಹಿತವಾದ ಅಷ್ಟಮಿ ಒದಗಿದಂದೇ ಜಯಂತಿಯನ್ನು ಆಚರಿಸಬೇಕೆಂದು ನಿರ್ಣಯವನ್ನು ಕೊಟ್ಟಿದ್ದಾರೆ. ಆದ್ದರಿಂದ ೨೯ ರಂದು ಅಷ್ಟಮಿಮಾತ್ರವಾದ್ದರಿಂದ ಆಚರಣೆಗೆ ಸೂಕ್ತವಲ್ಲ. ಭವಿಷ್ಯತ್ಪುರಾಣದಲ್ಲೂ -
सत्यष्टममुहूर्ते वा रोहिणीसहिताष्टमी ।
श्रावणे मासि सिंहार्के क्वचित्सापि च शस्यते ।।
एकादशीनां कोटीनां व्रतैश्च लभते फलम् ।
अतो दशगुणं प्रोक्तं कृत्वैतत्फलमाप्नुयात् ।।
ಸಿಂಹಮಾಸದಲ್ಲಿ ಒದಗಿದ ಶ್ರಾವಣಮಾಸದಲ್ಲಿ ರೋಹಿಣೀಸಹಿತಾವಾದ ಅಷ್ಟಮಿಯನ್ನು ಆಚರಿಸಬೇಕು. ಅಂದು ಹತ್ತು ಕೋಟಿ ಏಕಾದಶಿ ಉಪವಾಸ ಮಾಡಿದಷ್ಟು ಪುಣ್ಯ ಉಪವಾಸದಿಂದ ಸಿಗುತ್ತದೆ ಎಂದಿದೆ. ಗರುಡಪುರಾಣದಲ್ಲೂ,
कृष्णाष्टम्यां च रोहिण्यां अर्धरात्रेऽर्चनं हरेः ।
कार्याविद्धापि सप्तम्यां हन्तिपापं त्रिजन्मनः ॥
ಕೃಷ್ಣಪಕ್ಷದ ಅಷ್ಟಮಿಯಿಂದ ಕೂಡಿದ ರೋಹಿಣಿಯನ್ನು ಆಚರಿಸುವಂತೆ ತಿಳಿಸಿದ್ದಾರೆ. ಶ್ರೀವಿಷ್ಣುತೀರ್ಥಾರಾಗಲಿ ಗರುಡಪುರಾಣವಾಗಲಿ ಅರ್ಧರಾತ್ರಿಯಲ್ಲಿ ಪೂಜಿಸಬೇಕೆಂದು ಹೇಳಿದ್ದಾರೆಯೇ ಹೊರತು ಅರ್ಧರಾತ್ರಿಯಲ್ಲಿ ಯೋಗವು ಕಡ್ಡಾಯವಾಗಿ ಹೇಳಿಲ್ಲ. ಆದರೆ ರೋಹಿಣೀಸಹಿತವಾದ ಅಷ್ಟಮಿಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಹೇಳಿದ್ದಾರೆ.
रोहिण्याश्च यदा कृष्णपक्षेऽष्टम्यां द्विजोत्तम ।
जयन्ती नाम सा प्रोक्ता सर्वपापहरातिथिः ॥
- विष्णुधर्म
कृष्णाष्टम्यां भवेद्यत्र कलैका रोहिणी नृप ।
जयन्ती नाम सा प्रोक्ता उपोष्य सा प्रयत्नतः
- आग्नेय
ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಕಲೆಯಷ್ಟಾದರು ರೋಹಿಣಿಯು ಒದಗಿದರೆ ಅಂದು ಉಪವಾಸಕ್ಕೆ ಪ್ರಾಶಸ್ತ್ಯಕೊಟ್ಟಿದ್ದಾರೆ. ಆದ್ದರಿಂದ ತಾ. ೩೦-೮-೨೦೨೧ ರಂದು ಜಯಂತಿಯ ಆಚರಣೆ ಶಾಸ್ತ್ರಸಮ್ಮತವಾಗಿದೆ. ೨೯ ರ ಆಚರಣೆ ಪ್ರಶಸ್ತವಲ್ಲ.
उदये अष्टमी किञ्चित् नवमी सकलायदीम् ।
भवेद्भुदेन्दुसंयुक्ता प्रजापत्यर्क्ष्यसंयुता ॥
अपि वर्षशतेनापि लभ्यते वा न लभ्यते ।
व्रतं तत्र व्रती कुर्यात्पुंसां कोटिं समुद्धरेत् ॥
ಎಂಬ ಬ್ರಹ್ಮವೈವರ್ತವಚನದಂತೆ ಉದಯದಲ್ಲಿ ಅಷ್ಟಮಿ ಮತ್ತು ರೋಹಿಣಿಯಿದ್ದು ಅಂದು ಸೋಮವಾರ ಅಥವಾ ಬುಧವಾರವಾಗಿದ್ದರೆ ಅಂತಹ ಯೋಗವು ಅಲಭ್ಯ ಅಮೂಲ್ಯ ಅಂದು ಜಯಂತಿಯನ್ನು ಆಚರಿಸಬೇಕೆಂದು ಹೇಳಿದ್ದಾರೆ. ತಾ. ೩೦-೮-೨೦೨೧ ರಂದು ಅಷ್ಟಮಿಸಹಿತವಾದ ರೋಹಿಣಿಯ ಯೋಗವಿದೆ, ಸೋಮವಾರವು ಒದಗಿ ಅತ್ಯಮೂಲ್ಯವಾಗಿದೆ. ಆಚಾರ್ಯರು ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣಿಯಿದೆ. ಚಂದ್ರನು ರೋಹಿಣೀಸಹಿತನಾಗಿ ಇರುವುದರಿಂದ गृहाणार्घ्यं मयादत्तं रोहिण्या सहितः शशिन् । ಎಂದು ಕೊಡುವ ಚಂದ್ರಾರ್ಘ್ಯಪ್ರಧಾನ ಹೆಚ್ಚು ಮಹತ್ವಪೂರ್ಣವೆನಿಸಿರುತ್ತದೆ. ಹೀಗೆ ಶ್ರೀಮದಾಚಾರ್ಯರು, ಶ್ರೀವಿಷ್ಣುತೀರ್ಥರು, ಹಾಗೆಯೇ ಪುರಾಣವಚನಗಳ ಅನುಸಾರ ೩೦-೮-೨೦೨೧ ರಂದು ಆಚರಣೆಯು ಸೂಕ್ತ. ಹಾಗೆಯೇ ಪಾರಣೆಯ ವಿಷಯದಲ್ಲೂ ೩೦-೮-೨೦೨೧ ರಾತ್ರಿ ತಿಥ್ಯಂತಪಾರಣೆಯನ್ನು ಹೇಳಿದ್ದಾರೆ. ಆದರೆ -
पारणं पावनं पुंसां सर्वपापप्रणाशनम् ।
उपवासाङ्गभूतं च फलदं सिद्धिकारणम् ।।
सर्वेष्वेवोपवासेषु दिवा पारणमिष्यते ।
अन्यया फलहानिः स्यात्कृते घारणपारणे ।।
न रात्रौ पारणं कुर्याह्यते वै रोहिणीव्रतम् ।
ಎಂಬ ಬ್ರಹ್ಮವೈವರ್ತಪುರಾಣದ ವಚನದ ಅನುಸಾರ ಹಾಗೆಯೇ,
सर्वेष्वेवोपवासेषु पूर्वाह्णे पारणं भवेत् ।
अन्याया तु फलस्यार्धं धर्ममेवोपसर्पति ।।
ಎಂಬ ದೇವಲರ ವಚನದಂತೆ ಪ್ರಾತಃ ಕಾಲದಲ್ಲೇ ಪಾರಣೆಯನ್ನು ಎಲ್ಲಾ ಉಪವಾಸಗಳಲ್ಲಿ ಮಾಡಬೇಕು. ಇಲ್ಲವಾದರೆ ವ್ರತದ ಫಲವು ಹಾನಿಯಾಗಿ ಅಪೂರ್ಣವಾಗುತ್ತದೆ. ಆದ್ದರಿಂದ ೨೯-೮-೨೦೨೧ ಉಪವಾಸ ಮಾಡಿ ತಿಥ್ಯಂತೇ ಪಾರಣೆಯನ್ನು ಮಾಡುವವರು ೩೧-೮-೨೦೨೧ ಬೆಳಿಗ್ಗೆಯೇ ಪಾರಣೆಯನ್ನು ಮಾಡಬೇಕಾಗುತ್ತದೆ. ಎರಡುದಿನಗಳ ಉಪವಾಸಮಾಡಿದಂತೆ ಆಗುವುದು. ೩೦-೮-೨೦೨೧ ರಂದು ಆಚರಣೆಯು ಪ್ರಶಸ್ತವು ಮರುದಿವಸ ಪಾರಣೆಯು ಯಾವುದೇ ತೊಂದರೆ ಇಲ್ಲದೆ ಆಚರಣೆಗೂ ಅನುಕೂಲವಾಗಿದೆ.
ಶ್ರೀಕೃ಼ಷ್ಣಾರ್ಪಣಮಸ್ತು
- ಬೆಳ್ಳೆ ಸುದರ್ಶನ ಆಚಾರ್ಯ
No comments:
Post a Comment