Do anyone in India know this piece of history?
Answer must be a firm "No" from most of us! Now please read on.
Remembered in Japan, forgotten in India........
The day was 12 November, 1948. Tokyo Trials are going on in a huge garden house on the outskirts of Tokyo, the trial of fifty-five Japanese war criminals including Japan's then Prime Minister Tojo, after losing WWII.
Of these, twenty-eight people have been identified as Class-A (crimes against peace) war criminals. If proved, the only punishment is the "death penalty".
Eleven international judges from all over the world are announcing......"Guilty".... "Guilty"...... "Guilty"......... Suddenly one thundered, "Not Guilty!"
A silence came down in the hallway. Who was this lone dissenter?
His name was Radha Binod Pal a Judge from India.
Born in 1886 in the Kumbh of East Bengal, his mother made a living by taking care of a household and their cow. For feeding the cow, Radha used to take the cow to the land near a local primary school.
When the teacher taught in school, Radha used to listen from outside. One day the school inspector came to visit the school from the city. He asked some questions of the students after entering the class. Everyone was silent. Radha said from outside the classroom window.... "I know the answer to all your questions." And he answered all the questions one by one. Inspector said... "Wonderful!.. Which class do you read?"
The answer came, "... I do not read...I graze a cow."
Everyone was shocked to hear that. Calling the head teacher, the school inspector instructed the boy to take admission in school as well as provide some stipend.
This is how education of Radha Binod Pal started. Then after passing the school final with the highest number in the district, he was admitted to Presidency College. After taking M Sc. from the University of Calcutta, he studied law again and got the Doctorate title. In the context of choosing the opposite of two things he once said, "law and mathematics are not so different after all.”
Coming back again to the International Court of Tokyo.
In his convincing argument to the rest of the jurists he signified that the Allies, (winners of WWII), also violated the principles of restraint and neutrality of international law. In addition to ignoring Japan's surrender hints, they killed two hundred thousand innocent people using nuclear bombardment.
The judges were forced to drop many of the accused from Class-A to B, after seeing the logic written on twelve hundred thirty-two pages by Radha Binod Pal. These Class-B war criminals were saved by him from a sure death penalty. His verdict in the international court gave him and India a world-famous reputation.
Japan respects this great man. In 1966 Emperor Hirohito awarded him the highest civilian honor of the country, 'Kokko Kunsao'. Two busy roads in Tokyo and Kyotto have been named after him. His verdict has been included in the syllabus of law studies there. In front of the Supreme Court of Tokyo, his statue has been placed. In 2007, Prime Minister Shinzo Abe expressed his desire to meet his family members in Delhi and met his son.
Dr. Radha Binod Pal (27 January 1886 - 10 January 1967) name is remembered in the history of Japan. In Tokyo, Japan, he has a museum and a statue in Yasukuni shrine.
Japan University has a research center in his name. Because of his judgment on Japanese war criminals, Chinese people hate him.
He is the author of many books related to law. In India, almost nobody knows him and perhaps not even his neighbors know him! A hindi movie was made on him, Tokyo Trials, starring Irfan Khan but that movie never made headlines.
....just one of the many many underrated & unknown Indians.
Must read article for every self respecting Indian.
******
ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ
ಕೃಪೆ: ಕರ್ಮವೀರ ನವೆಂಬರ್ 4, 2012ರ ಸಂಚಿಕೆ - ಒಮ್ಮೆ ಎಲ್ಲೆಡೆ ಪ್ರಸಿದ್ಧವಾಗಿದ್ದ ಆ ಸಂಸ್ಥೆಗೆ ಹಿರಿಯ ಮಹನೀಯರೊಬ್ಬರು ಅತಿಥಿಗಳಾಗಿ ಆಗಮಿಸುವವರಿದ್ದರು. ರೈಲ್ವೇ ನಿಲ್ದಾಣದಲ್ಲಿ ಅವರನ್ನು ಒಬ್ಬ ಸಾಧಾರಣವಾದ ಕೂಲಿಯಂತಿದ್ದ ವ್ಯಕ್ತಿ ಬಂದು ತಾನು ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಅವರ ಸಾಮಾನು ಸರಂಜಾಮುಗಳನ್ನು ಬಲಭೀಮನಂತೆ ತಾನೇ ಹೊತ್ತ. ಅವರನ್ನು ಸಂಸ್ಥೆಯಲ್ಲಿ ಕರೆದುತಂದು ವಸತಿ ಸೌಕರ್ಯಗಳನ್ನೆಲ್ಲಾ ಪರಿಚಯ ಮಾಡಿಕೊಟ್ಟು ವಿಶ್ರಮಿಸಲು ಹೇಳಿ ಹೊರಡಲನುವಾದ. ಆಗ ಅತಿಥಿಗಳು ಕೇಳಿದರು, "ನಾನು ಬುದ್ಧಿಯವರನ್ನು ಯಾವಾಗ ಭೇಟಿ ಮಾಡಬಹುದು?". "ತಾವು ವಿಶ್ರಮಿಸಿ ಸ್ನಾನ, ತಿಂಡಿ ಮುಗಿಸಿ ಅವರೇ ತಮ್ಮನ್ನು ಕಾಣುತ್ತಾರೆ" ಎಂದ ಈತ ಅಲ್ಲಿಂದ ಹೊರಟ. ಬಂದ ಗಣ್ಯ ಅತಿಥಿಗಳು ತಿಂಡಿ ಮುಗಿಸಿದರು, ಮಧ್ಯಾಹ್ನ ಊಟವೂ ಆಯಿತು, ಸಂಜೆಯೂ ಆಯ್ತು. ಎಲ್ಲಿ ನೋಡಿದರೂ ಬೆಳಿಗ್ಗೆ ಇವರನ್ನು ಕರೆತಂದವ ಎಲ್ಲರೊಂದಿಗೆ ಕೆಲಸ ಮಾಡುತ್ತಿದ್ದನೇ ಹೊರತು ಇವರು ಊಹಿಸಿದ್ದ ಮುಖ್ಯಸ್ಥ ಮಾತ್ರ ಕಾಣಲೇ ಇಲ್ಲ. ಮತ್ತೊಮ್ಮೆ ಆತನನ್ನೇ ಕೇಳಿದರು "ನಾನು ಬುದ್ಧಿಯವರನ್ನು ಭೇಟಿ ಆಗೋದು ಯಾವಾಗ?". ಸಂಜೆ ಪ್ರಾರ್ಥನೆಯ ನಂತರ ಅವರು ನಿಮ್ಮನ್ನು ಭೇಟಿಯಾಗುತ್ತಾರೆ ಉತ್ತರ ಬಂತು. ಪ್ರಾರ್ಥನೆ ಮುಗಿದಾಗ ಇವರು ಕಾಯುತ್ತಿದ್ದ ಹಾದಿಯಲ್ಲಿ ಆ ಬುದ್ಧಿಯವರ್ಯಾರೂ ಕಾಣದೆ, ಇತ್ತ ಬರುತ್ತಿದ್ದುದು ಅದೇ ಕೂಲಿಯವ. ಇವನನ್ನು ನಂಬಿದರೆ ಉಪಯೋಗವಿಲ್ಲ ಎಂದು ಅಲ್ಲೇ ಹತ್ತಿರದಲ್ಲಿದ್ದ ಮತ್ತೊಬ್ಬನನ್ನುಅತಿಥಿಗಳು ಕೇಳಿದರು. ಏನಪ್ಪಾ'ನನಗೆ ಬುದ್ಧಿಯವರು ಬೆಳಗ್ಗಿನಿಂದ ಕಾಣಿಸ್ತಾನೇ ಇಲ್ವಲ್ಲ?" ಆ ವ್ಯಕ್ತಿ ಅಚ್ಚರಿಯಿಂದ ಉತ್ತರಿಸಿದ "ಅವರು ಆಶ್ರಮ ಬಿಟ್ಟು ಎಲ್ಲೂ ಹೊಗಿಲ್ವಲ್ಲ ಸ್ವಾಮಿ, ನೋಡಿ ಇಲ್ಲೇ ಬರುತ್ತಿದ್ದಾರೆ ಎಂದು ಅದೇ ಕೂಲಿಯವನಂತಿದ್ದ ವ್ಯಕ್ತಿಯತ್ತ ಕೈತೋರಿದ." ಬಂದಿದ್ದ ಅತಿಥಿಗಳು ತಲ್ಲಣಿಸಿದರು. "ಬೆಳಗ್ಗೆ ಕೂಲಿಯಂತೆ ಬಂದು ಹಗಲಿರುಳೂ ಎಲ್ಲರೊಂದಿಗೆ ಒಬ್ಬನಾಗಿ ಬಿಡುವಿಲ್ಲದೆ ಶ್ರಮಿಸುತ್ತಿದ್ದ ಇವರೇ ತಾವು ಭೇಟಿಯಾಗಲು ಹಂಬಲಿಸುತ್ತಿದ್ದ 'ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳೇ!" ಅವರ ಮನಸ್ಸು ಮೂಖವಾಗಿತ್ತು.
ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಮಲ್ಲಾಡಿಹಳ್ಳಿ ಸ್ವಾಮಿಗಳೆಂದೇ ಖ್ಯಾತನಾಮರು. ‘ತಿರುಕ’ ಇವರ ಕಾವ್ಯನಾಮ. ಸದಾ ಶ್ವೇತವಸ್ತ್ರಧಾರಿಗಳಾಗಿ, ಹಸನ್ಮುಖರಾಗಿದ್ದವರು. ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು. ಒಂದು ವಾಸ್ತವ ಸಂಗತಿಯೆಂದರೆ ತಮ್ಮನ್ನು ಕಾಡುತ್ತಿದ್ದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇವರು ಯೋಗಕ್ಕೆ ಮೊರೆಹೋದರು. ನಿರಂತರ ಯೋಗಾಭ್ಯಾಸದಿಂದಾಗಿ ಅವರ ಅನೇಕ ಕಾಯಿಲೆಗಳು ದೂರವಾದವು. ಅವರ ಶಿಸ್ತುಬದ್ಧ ಯೋಗಾಸನಗಳೇ ಅವರ ಆರೋಗ್ಯದ ಗುಟ್ಟು; ಶತಾಯುಷಕ್ಕೆ ಕಾರಣ. ಮಲ್ಲಾಡಿಹಳ್ಳಿಯಲ್ಲಿ ಅನಂತ ಸೇವಾಶ್ರಮವನ್ನು ಸ್ಥಾಪಿಸಿದರು. ಜನರಿಂದ ‘ಸ್ವಾಮೀಜಿ’ ಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ. ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯ, ಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿನ ಬದುಕು.
ಮಲ್ಲಾಡಿಹಳ್ಳಿ ಸ್ವಾಮಿಗಳು ಜನಿಸಿದ ದಿನ 18.03.1891. ಮೂಲತಃ ಕೇರಳದಲ್ಲಿ ಹುಟ್ಟಿದರೂ ಮಲ್ಲಾಡಿಹಳ್ಳಿ ಸ್ವಾಮಿಗಳು ತಮ್ಮ ಸಂಬಂಧವನ್ನು ಮಲ್ಲಾಡಿಹಳ್ಳಿಯಲ್ಲಿ ಮಿಳಿತಗೊಳಿಸಿ, ಕನ್ನಡ ನೆಲದ ಮಣ್ಣಿನ ಮಗನಾದರು. 106 ವರ್ಷಗಳ ಕಾಲ ಸುದೀರ್ಘವಾಗಿ ಬದುಕಿ, ಅನೇಕರನ್ನು ತಮ್ಮ ಮಾರ್ಗದರ್ಶನದಿಂದ ಬದುಕಿಸಿದ ಮಲ್ಲಾಡಿಹಳ್ಳಿಯ ಈ ಸ್ವಾಮಿಗಳು 1996ರಲ್ಲಿ ಬೆಂಗಳೂರಿನಲ್ಲಿ ತಮ್ಮ ಲೌಕಿಕದ ವ್ಯಾಪಾರವನ್ನು ಮುಗಿಸಿದರು.
ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೊಗಾಚಾರ್ಯರು, ಮಹಾಸಂಘಟಕರು, ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ. ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ‘ಅಭಿನವ ಧನ್ವಂತರಿ’ಯೆಂದೇ ಜನಪ್ರಿಯರು. ಚಿತ್ರದುರ್ಗ ಜಿಲ್ಲೆಯ ‘ಹೊಳಲ್ಕೆರೆ ತಾಲ್ಲೂಕಿರುವ – ಮಲ್ಲಾಡಿಹಳ್ಳಿಗೆ ಅವರು ಬಂದದ್ದು, ಅಲ್ಲಿನ ಜನರ ಪಾಲಿಗೆ ವರದಾನವಾಯಿತು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.
ಮಲ್ಲಾಡಿಹಳ್ಳಿ ಸ್ವಾಮಿಗಳವರ ತಂದೆ ಅನಂತ ಪದ್ಮನಾಭ ನಂಬೂದರಿ, ಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರು, ಮಹಾಪಂಡಿತರು; ತಮ್ಮ ಬಳಿಗೆ ಬರುತ್ತಿದ್ದ ಜನಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ‘ಪದ್ಮಾಂಬಾಳ್’ ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು ‘ಕುಮಾರಸ್ವಾಮಿ’ ಎಂದು. ಹುಟ್ಟಿದಾಗಲೇ ಆ ಶಿಶು, ‘ಬಾಲರೋಗ’ಕ್ಕೆ ತುತ್ತಾಯಿತು. ಸುಮಾರು 14 ವರ್ಷ, ಯಾವ ಭಾವನೆಯನ್ನೂ ಅನುಭವಿಸದ, ಆ ಪ್ರಜ್ಞಾಶೂನ್ಯ ಮಗುವಿನ ಮಾತೆ, ದೂರದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯುತ್ತಾರೆ. ಪದ್ಮಾಂಬ ಹಾಗೂ ನಂಬೂದರಿಯವರು ನಿಶ್ಯಕ್ತಿ, ವೃದ್ಧಾಪ್ಯ ಹಾಗೂ ರೋಗಗಳಿಂದ ಬೆಂಡಾಗಿ ಹೋಗಿದ್ದರು. ಆದರೂ 14 ವರ್ಷದ ಮಗನನ್ನು ಎತ್ತಿಕೊಂಡೇ ಕಾಡಿನ ದುರ್ಗಮ ಹಾದಿಯಲ್ಲಿ ಅವರ ‘ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ’ ಸಾಗಿತ್ತು. ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಬಂದು, ಶ್ರೀ ನರಸಿಂಹಯ್ಯನವರ ಮನೆಯಲ್ಲಿ ತಂಗಿದರು.
ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು, ಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದ ಮೇಲೆ, ತಾಯಿ ಪದ್ಮಾಂಬಾಳ್ ಅವರಿಗೆ ಸ್ವಲ್ಪ ಸಮಾಧಾನವಾಯಿತು. ಮಂತ್ರಾಲಯದ ಯತಿಗಳು ಆ ಬಾಲಕನನ್ನು ‘ರಾಘವೇಂದ್ರ’ ಎಂದು ಕರೆದರು. ಅಷ್ಟು ಹೊತ್ತಿಗೆ ಪದ್ಮಾಂಬಾಳ್ ಅವರ ಆರೋಗ್ಯ ತೀರ ಹದಗೆಟ್ಟಿದ್ದು, ಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆ, ಮಗನ ಈ ಸ್ಥಿತಿಯನ್ನು ನೋಡಲಾರದೆ ಕೊರಗುತ್ತಾ ಬಾರಕೂರಿನಲ್ಲೆ ಅಸುನೀಗಿದರು. ನಂಬೂದರಿಯವರು ಆ ಬಾಲಕನನ್ನು ಗೆಳೆಯ ಭಿರ್ತಿಯ ರಾಮಚಂದ್ರಶಾಸ್ತ್ರಿಗಳ ಸಲಹೆಯಂತೆ ಯಕ್ಷಗಾನ ಪಂಡಿತ, ವಾಗ್ಮಿ, ರಾಮಾಯಣ ಮಹಾಭಾರತ ವ್ಯಾಖ್ಯಾನಕಾರ ನರಸಿಂಹಯ್ಯ ಮತ್ತು ಅವರ ಮಡದಿ ಪುತ್ಥಲೀಬಾಯಿಗೆ ಕ್ರಿ.ಶ. 1906ರ ಯುಗಾದಿಯಂದು ಒಪ್ಪಿಸಿ ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು.
ಕುಮಾರಸ್ವಾಮಿಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ ಪುತ್ಥಲೀಬಾಯಿ ಅವನಲ್ಲಿ ಗಮನಾರ್ಹ ಬದಲಾವಣೆ ಮೂಡಿಸಿದರು. ದಿನ ಕಳೆದಂತೆ ಹುಡುಗನಲ್ಲಿ ಪವಾಡಸದೃಶ ಬದಲಾವಣೆ ಉಂಟಾಯಿತು. ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದ.
ರಾಘವೇಂದ್ರರ ಜೀವನದಲ್ಲಿ ಹೊಸ ತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ, ಅವರ ಬಾಲ್ಯದ ಗುರುಗಳಾದ, ಶಿವರಾಮಯ್ಯ, ‘ತಾರಕಮಂತ್ರ’ ಉಪದೇಶಿಸಿದ ನಿತ್ಯಾನಂದಸ್ವಾಮಿ, ರಂಗನಾಥಭಟ್ಟರು, ವರೂಢದ ಶಿವಾನಂದ ಶ್ರೀಗಳು, ಬರೋಡದ ಪ್ರೊ. ಮಾಣಿಕ್ಯರಾವ್, ಪಳನಿಸ್ವಾಮಿ ಬಹಳ ಮುಖ್ಯರು. ತಾರಕಮಂತ್ರ (ಶಕ್ತಿಪಾತ ಯೋಗ)ವನ್ನು ಉಪದೇಶಿಸುವಾಗ, ಸ್ವಾಮಿ ನಿತ್ಯಾನಂದರು, ರಾಘವರ ಮಸ್ತಕದ ಮೇಲೆ ತಮ್ಮ ಕೈ ಇಟ್ಟರು. ಅನೇಕ ಯೋಗಿವರ್ಯರೂ ಅವರಿಗೆ ಬೋಧಿಸಿದರು. ‘ದೇವರು’ ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದವರು ಯತಿವರ್ಯ ಸ್ವಾಮಿ ಶಿವಾನಂದರು. ರೋಗಿಗಳಲ್ಲಿ, ದೀನರಲ್ಲಿ, ಆರ್ತರಲ್ಲಿ ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು, ದೇವರು – ಎಂಬುದು ಒಂದು ದೃಷ್ಟಿಕೋನ – ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು ಭಾವಶುದ್ಧಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗಾಗಿತ್ತು.
ರಾಘವೇಂದ್ರರ ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸ ಕುಂದಾಪುರದಲ್ಲಾಯಿತು. ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ, ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು. ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು. ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದ, ಸಿದ್ಧವಿದ್ಯೆ, ಅಸ್ತಿ ಸಂಧಾನ ಕಲೆ, ಯುನಾನಿ ವೈದ್ಯ ಪದ್ಧತಿ ಕಲಿತರು. ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು. ಸೂರ್ಯನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆ, ಯೋಗವಿದ್ಯೆಯಲ್ಲಿ ನಿಷ್ಣಾತರಾದರು. ರಾಘವೇಂದ್ರರಲ್ಲಿ ದಿವ್ಯ ತೇಜಸ್ಸಿತ್ತು. ಯೋಗಾಭ್ಯಾಸದಿಂದ ವಜ್ರಕಾಯರಾಗಿದ್ದರು. ಅವರ ಅಂಗಸೌಷ್ಟವ, ಶರೀರದ ಆಕೃತಿ, ಶಿಲ್ಪಿಗಳಿಗೂ, ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು.
ಭಟ್ಕಳದಲ್ಲಿ ಮಾರುತಿ ವ್ಯಾಯಾಮಶಾಲೆ ಉದ್ಘಾಟಿಸಿದರು. ರಾಘವೇಂದ್ರರು ಸ್ಥಾಪಿಸಿದ ‘ಅನಂತ ಸೇವಾಶ್ರಮ’ ಅನಾಥರಿಗೆ, ಬಡಮಕ್ಕಳಿಗೆ, ಒಂದು ‘ಸೇವಾಕುಟೀರ’ವಾಗಿ ಬೆಳೆಯಿತು. ಅವರ ಶಿಷ್ಯ ‘ಸೂರದಾಸ ಜೀ’ (ಪೂರ್ವಾಶ್ರಮದಲ್ಲಿ ಸೂರ್ಯನಾರಾಯಣ) ಅವರೊಡಗೂಡಿ ಅನಾಥಸೇವಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.
ತಂತ್ರ ಯೋಗಶಾಸ್ತ್ರದ ‘ಅಷ್ಟಾಂಗ ಯೋಗ’ಗಳನ್ನು ಆಸಕ್ತರಿಗೆ, ಆಸ್ತಿಕರಿಗೆ ತಿಳಿಯಹೇಳಿದರು.
ಪ್ರತೀವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ‘ಮೌನವ್ರತ’ ಧಾರಣೆಮಾಡುತ್ತಿದ್ದರು.
ಮಲ್ಲಾಡಿಹಳ್ಳಿಯ ಸ್ವಾಮಿಗಳು ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. 4 ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3 ಕಥಾ ಸಂಕಲನ, 4 ಆಯುರ್ವೇದ, 4 ಯೋಗ (ಇದರಲ್ಲಿ “ಬೃಹತ್ ಯೋಗ ದರ್ಶನ” ಯೋಗ ಸಂಪುಟವೂ ಇದೆ) 5 ವ್ಯಾಯಾಮ, 2 ಇತರೆ 1 ಆತ್ಮ ನಿವೇದನೆ 3 ಜೋಳಿಗೆ ಪವಾಡ – ಇದು ರಾಘವೇಂದ್ರರ ಆತ್ಮಚರಿತ್ರೆ.
ಕರ್ನಾಟಕ ಸರ್ಕಾರ, ಇವರನ್ನು ಸನ್ಮಾನಿಸಲು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳ ಬಗ್ಗೆ ಬಹಳ ಸಾರಿ ಪ್ರಸ್ತಾಪಿಸಿದಾಗ ಅವರ ಉತ್ತರ, “ಅವೆಲ್ಲಾ ನನಗೆ ಬೇಡ; ಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆ ಇದೆ. ಅದನ್ನು ಕೊಡಿ”. ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಬಗ್ಗೆ ತಿಳಿಸಿದಾಗಲೂ ಅವರ ನಿಲುವು ಬದಲಾಗಲಿಲ್ಲ. ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು. ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ. ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ ಅಲ್ಪಸ್ವಲ್ಪ ಹಣ ಅವರ ಸರ್ವೋದಯ ಮುದ್ರಣಾಲಯದಿಂದ ಬರುತ್ತಿತ್ತು. ತಮ್ಮ ಜೋಳಿಗೆ ತಗಲುಹಾಕಿಕೊಂಡು ಭಿಕ್ಷೆಗೆ ಹೋಗುತ್ತಿದ್ದರು.
1991ರಲ್ಲಿ ರಾಘವೇಂದ್ರರ 100ನೇ ಹುಟ್ಟಿದ ಹಬ್ಬವನ್ನು ಊರಿನ ಜನ ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು. ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ ‘ಆತ್ಮ ನಿವೇದನೆ’ ಹೊರಗೆ ಬಂತು. ಆತ್ಮಚರಿತ್ರೆ, ‘ಜೋಳಿಗೆಯ ಪವಾಡ’ ಬರೆದರು. ಆಗಲೇ ಹೃದಯಾಘಾತದಿಂದ ನರಳಿದ್ದರು. ಪುನಃ 1996ರಲ್ಲಿ ಅವರಿಗೆ ಮತ್ತೆ ‘ಹೃದಯಾಘಾತವಾಯಿತು.
ತಿಂಗಳ ಮೇಲೆ ‘ಕೋಮಾ’ದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ. ‘ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ’ ಎನ್ನುತ್ತಾ ಆಗಸ್ಟ್ 31, 1996ರಂದು ಇಹ ತೊರೆದು ಪರದೆಡೆಗೆ ನಡೆದರು.
ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿ, ಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದು, ತಮ್ಮ ಜೀವನವನ್ನು ‘ಸಾರ್ಥಕ’ಗೊಳಿಸಿದ ಮಹಾಚೇತನ, ಅನಂತದಲ್ಲಿ ಲೀನವಾಯಿತು.
ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳು, ಮಕ್ಕಳ ವಸತಿ ಗೃಹಗಳು, ಬನಶಂಕರಿ ಅಮ್ಮನ ದೇವಸ್ಥಾನ, ಕಾಲೇಜುಗಳು, ದೈಹಿಕ ಶಿಕ್ಷಣ ಕಾಲೇಜು, ಆಯುರ್ವೇದ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು ಇಂದು ವಿಸ್ತೃತವಾಗಿ ಬೆಳೆದು ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.
***********
ಮಾಹುಲಿ ವಿದ್ಯಾಸಿಂಹಾಚಾರ್ಯ
ಪೂಜ್ಯ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯರಿಗೆ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ'ಯ ಗೌರವ ದೊರೆತಸಂದರ್ಭದಲ್ಲಿ ಶ್ರೀಆಚಾರ್ಯರನ್ನು ಕುರಿತು ಹಿಂದೆ 'ಸಾರಸ್ವತಸಾನ್ನಿಧ್ಯ' ಲೇಖನಮಾಲಿಕೆಯಲ್ಲಿ ಪ್ರಕಟವಾದ ಲೇಖನ- ಅಭಿವಂದನಾ ಪೂರ್ವಕ ವಾಗಿ
'ಸಾರಸ್ವತ ಸಾನ್ನಿಧ್ಯ'ಲೇಖನ ಮಾಲಿಕೆಯ ತೊಂಬತ್ತೊಂಬತ್ತನೆಯ ಲೇಖನ- ಮಹಾಮಹೋಪಾಧ್ಯಾಯ' ಕುಲಪತಿ ಮಾಹುಲಿ ವಿದ್ಯಾಸಿಂಹಾಚಾರ್ಯರು
ಅಸಂಖ್ಯವಿದ್ಯಾರ್ಥಿಗಳಿಗೆ ಅಶನ,ವಸನಗಳ ವ್ಯವಸ್ಥೆಯನ್ನು ಮಾಡಿ, ವಿದ್ಯೆಯನ್ನು ಬೋಧಿಸುವ ಗುರುವಿಗೆ 'ಕುಲಪತಿ' ಎಂದುಹೇಳುವ ಪರಿಪಾಠವಿದೆ. ಮುಂಬಯಿಯಂತಹ ಮಹಾನಗರದಲ್ಲಿ ಅಂತಹ ಒಂದು ವ್ಯವಸ್ಥೆ ಮಾಡುವುದು ಎಷ್ಟು ಕಠಿಣವೆಂದು ಸರ್ವರಿಗೂ ವಿದಿತ. ಹಾಗಿದ್ದಾಗ್ಯೂ ಮುಂಬಯಿಯ ಶ್ರೀಸತ್ಯಧ್ಯಾನವಿದ್ಯಾಪೀಠದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಊಟ,ವಸತಿಗಳನ್ನು ನೀಡಿ, ವಿದ್ಯೆಯನ್ನು ಬೋಧಿಸುತ್ತಿರುವ ಮಹಾವಿದ್ವಾಂಸರು 'ಕುಲಪತಿ' ಮಾಹುಲಿ ವಿದ್ಯಾಸಿಂಹಾಚಾರ್ಯರು. ಮುಂಬಯಿಯಲ್ಲಿ ಮಧ್ವಸಿದ್ಧಾಂತದ ವಾಣೀವಿಹಾರವನ್ನು ಮಾಡಿಸಿದ ಪೂಜ್ಯ ಮಾಹುಲಿ ಗೋಪಾಲಾಚಾರ್ಯರು ಹಾಗೂ ಶ್ರೀಮತಿ ವಿದ್ಯಾವತೀದೇವಿಯವರ ಸುಪುತ್ರರಾಗಿ 1960ರಲ್ಲಿ ಜನಿಸಿದ ಶ್ರೀ ವಿದ್ಯಾಸಿಂಹಾಚಾರ್ಯರ ತಂದೆ ಐನಾಪುರದ ಪ್ರತಿಷ್ಠಿತ ಮಾಹುಲಿ ವಂಶದವರಾದರೆ, ತಾಯಿ ಪ್ರತಿಷ್ಠಿತ ಪಾಚ್ಛಾಪುರವಂಶದವರು. ತಂದೆ ಹಾಗೂ ತಾಯಿಯಿಂದ ಬಹಳಷ್ಟು ಪ್ರಭಾವಿತರಾದ ಶ್ರೀವಿದ್ಯಾಸಿಂಹಾಚಾರ್ಯರಿಗೆ ತಮ್ಮ ಜೀವನದ ಪ್ರಾರಂಭಿಕ ಹಂತದಿಂದಲೂ ಅಧ್ಯಯನದಲ್ಲಿ ಅಪಾರವಾದಂತಹ ಶ್ರದ್ಧೆ ಮತ್ತು ಆಸಕ್ತಿ. ಮಹಾವಿದ್ವಾಂಸರಾಗಿದ್ದ ತಂದೆ ಶ್ರೀಮಾಹುಲಿ ಗೋಪಾಲಾಚಾರ್ಯರು ಹಾಗೂ ಹಿರಿಯ ಬಂಧುಗಳಾದ ಶ್ರೀ ಅಶ್ವತ್ಥಾಮಾಚಾರ್ಯರು ಹಾಗೂ ಶ್ರೀಕೃಷ್ಣಾಚಾರ್ಯರಲ್ಲಿ ಅಧ್ಯಯನಮಾಡಿದ ಶ್ರೀವಿದ್ಯಾಸಿಂಹಾಚಾರ್ಯರು ಕೇವಲ 19 ವರ್ಷದಲ್ಲಿ ಶ್ರೀಮನ್ನ್ಯಾಯಸುಧಾ ಪರೀಕ್ಷೆಯನ್ನು ನೀಡಿದರು. 21 ನೆಯ ವರ್ಷದಲ್ಲಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಶ್ರೀವಿದ್ಯಾಸಿಂಹಾಚಾರ್ಯರ ಧರ್ಮಪತ್ನಿ ಶ್ರೀಸತ್ಯನಾಥತೀರ್ಥಶ್ರೀಪಾದಂಗಳವರ ವಂಶಸ್ಥರಾದ ಶ್ರೀಮತಿ ಪ್ರಜ್ಞಾದೇವಿಯವರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಶ್ರೀಮತಿ ಪ್ರಜ್ಞಾದೇವಿಯವರು ಶಾಸ್ತ್ರ ಹಾಗೂ ಹರಿದಾಸಸಾಹಿತ್ಯದಲ್ಲಿ ಅಪಾರವಾದಂತಹ ಪರಿಣತಿಯನ್ನು ಹೊಂದಿದ್ದಾರೆ. ಪೂಜ್ಯ ಮಾಹುಲಿ ಗೋಪಾಲಾಚಾರ್ಯರು ಶ್ರೀಹರಿಯ ಸಾನಿಧ್ಯವನ್ನು ಸೇರಿದಾಗ ಶ್ರೀವಿದ್ಯಾಸಿಂಹಾಚಾರ್ಯರಿಗೆ ಕೇವಲ 24 ವರ್ಷ. ಅಷ್ಟು ಚಿಕ್ಕ ಹರಯದಲ್ಲಿಯೇ, 'ಕುಲಪತಿ'ಯಾಗಿ ವಾಣೀವಿಹಾರ ವಿದ್ಯಾಲಯ ಹಾಗೂ ಶ್ರೀಸತ್ಯಧ್ಯಾನ ವಿದ್ಯಾಪೀಠಗಳನ್ನು ನಡೆಸುವ ಮಹತ್ತರವಾದ ಹೊಣೆಗಾರಿಕೆಯನ್ನು ಹೊತ್ತ ಶ್ರೀವಿದ್ಯಾಸಿಂಹಾಚಾರ್ಯರು ಶ್ರೀಹರಿ,ವಾಯುಗಳ ಅನುಗ್ರಹದಿಂದ ಅತ್ಯಂತ ಯಶಸ್ವಿಯಾಗಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದರು ಮಾತ್ರವಲ್ಲ ವಿದ್ಯಾಪೀಠಗಳನ್ನು ನಭೂತೋ ನಭವಿಷ್ಯತಿ ಎಂಬಂತೆ ಬೆಳೆಸಿದರು.
ಒಂದು ಜನ್ಮದಲ್ಲಿ ಒಂದು ಶಾಸ್ತ್ರದ ಪ್ರಾವೀಣ್ಯಪಡೆಯುವುದೇ ಕಷ್ಟವಿರುವಾಗ ಪೂಜ್ಯ ಮಾಹುಲಿ ವಿದ್ಯಾಸಿಂಹಾಚಾರ್ಯರು ನ್ಯಾಯ,ವೇದಾಂತ,ವ್ಯಾಕರಣ, ಸಾಹಿತ್ಯ, ಮೀಮಾಂಸಾ ಮೊದಲಾದ ಅನೇಕಶಾಸ್ತ್ರಗಳ ವೈದುಷ್ಯವನ್ನು ಹೊಂದಿರುವುದು ಮಾತ್ರವಲ್ಲದೆ, ಪೌರಾತ್ಯ,ಪಾಶ್ಚಾತ್ಯ ತತ್ತ್ವಜ್ಞಾನಗಳ ಆಳವಾದ ಅಧ್ಯಯನ ಮಾಡಿದವರು. ವಿದ್ಯಾಪೀಠದಲ್ಲಿರುವ ಸಹಸ್ರಸಹಸ್ರಸಂಖ್ಯೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದ ಗ್ರಂಥಭಂಡಾರ ಆಚಾರ್ಯರ ವಿದ್ಯಾಪ್ರೇಮಕ್ಕೆ ಸಾಕ್ಷಿಯಾಗಿದೆ. ಅನೇಕ ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳ ಪಂಡಿತರು ಮಾತ್ರವಲ್ಲದೆ, ಶ್ರೀವಲ್ಲಭಾಚಾರ್ಯಸಂಪ್ರದಾಯದ ಮಠಾಧಿಪತಿಗಳು ಸಹಾ ಶ್ರೀವಿದ್ಯಾಸಿಂಹಾಚಾರ್ಯರ ವಿದ್ಯಾ ಶಿಷ್ಯರು ಎಂಬುದನ್ನು ಗಮನಿಸಿದಾಗ ಮಾಹುಲಿ ಆಚಾರ್ಯರ ವಿದ್ಯೆಯ ಮಹತಿ ತಿಳಿಯುತ್ತದೆ. ಒಬ್ಬಗುರು ಎಂತಹ ಗುರು ಎಂದು ತಿಳಿಯಬೇಕಾದರೆ ಆತನ ಶಿಷ್ಯರು ಎಂತಹವರು ಎಂದು ನೋಡಬೇಕು ಎಂಬ ಮಾತಿದೆ. ಸಮಕಾಲೀನ ಮಹಾವಿದ್ವಾಂಸಮಾಧ್ವಮಠಾಧೀಶರಲ್ಲಿ ಒಬ್ಬರೂ,ಪರಮಪೂಜ್ಯ ಶ್ರೀಉತ್ತರಾದಿ ಮಠಾಧೀಶರೂ ಆದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮದಲ್ಲಿ ಪೂಜ್ಯ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯರಲ್ಲಿ ಅಧ್ಯಯನ ಮಾಡಿದ್ದರು ಎಂದಮೇಲೆ ಶ್ರೀವಿದ್ಯಾಸಿಂಹಾಚಾರ್ಯರ ವಿದ್ಯಾಪ್ರೌಢಿಮೆಯ ಬಗ್ಗೆ ಹೆಚ್ಚಿಗೆ ಹೇಳಬೇಕಾದಂತಹ ಅವಶ್ಯಕತೆಯೇ ಇರುವುದಿಲ್ಲ.
ಹದಿನೆಂಟು ಬಾರಿ ಶ್ರೀಮನ್ನ್ಯಾಯಸುಧಾ ಮಂಗಳವನ್ನು ನೆರವೇರಿಸಿ, 200 ಕ್ಕೂ ಹೆಚ್ಚಿನ ವಿದ್ವಾಂಸರನ್ನು ಸಿದ್ಧಗೊಳಿಸಿ, ವಿಷ್ಣು,ವೈಷ್ಣವಪ್ರಜ್ಞೆಯ ಜಾಗೃತಿಗಾಗಿ ಸಮರ್ಪಿಸಿದ ಧನ್ಯಜೀವಿ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯರು. ಆಚಾರ್ಯರ ಪ್ರವಚನಗಳೆಂದರೆ ಎಲ್ಲಿಯೂ ವಿಷಯಾಂತರವಿಲ್ಲ. ಕೆಲವು ಪಂಡಿತರು ಮಾಡುವಂತೆ ಮನರಂಜನೆಯ ಕಾಲಕ್ಷೇಪವಲ್ಲ. ಪ್ರವಚನದ ಪ್ರತಿಯೊಂದೂ ವಾಕ್ಯವೂ ಅರ್ಥಗರ್ಭಿತ. ಶ್ರುತಿ,ಸ್ಮೃತಿ,ಶ್ರೀಮದಾಚಾರ್ಯರ, ಶ್ರೀಟೀಕಾಕೃತ್ಪಾದರಾದಿ ಅನೇಕ ಪೂರ್ವಾಚಾರ್ಯರ ಉಕ್ತಿಗಳ ಸಂದರ್ಭೋಚಿತ ಉಲ್ಲೇಖ.ತಮ್ಮ ಮಾತಿಗೆ ಪುಷ್ಟಿ ನೀಡುವಂತೆ ಪೌರಾತ್ಯ,ಪಾಶ್ಚಾತ್ಯ ಉದ್ಗ್ರಂಥಗಳ ಉಲ್ಲೇಖ. ಶ್ರೀವೇದವ್ಯಾಸ, ಶ್ರೀಮಧ್ವ, ಜಯತೀರ್ಥರಂತೆ- ಫ್ರಾಯ್ಡ್, ಯೂಂಗ್, ಮಾರ್ಕ್ಸ್ ಮೊದಲಾದ ಪಾಶ್ಚಾತ್ಯ ಚಿಂತಕರೂ ಪ್ರವಚನದಲ್ಲಿ ಸುಳಿಯುವುದುಂಟು. ಪ್ರಪಂಚದಾದ್ಯಂತದ ಚಿಂತನೆಗಳು ಪ್ರವಚನದಲ್ಲಿ ಸುಳಿದರೂ ಪೂರ್ಣಪ್ರಜ್ಞಶಾಸ್ತ್ರದ ಬಗೆಗಿನ ನಿಶ್ಚಿತವಾದ ನಿಷ್ಟೆಗೆ ಕಿಂಚಿತ್ತೂ ವ್ಯತ್ಯಯವಿಲ್ಲ. ಭಾಗವತವಿರಲಿ, ಭಾರತವಿರಲಿ, ರಾಮಾಯಣವಿರಲಿ, ದೇವರು, ಮುಕ್ತಿ, ಭಕ್ತಿಯ ಬಗ್ಗೆ ಚಿಂತನೆಯಿರಲಿ ಆಚಾರ್ಯರ ಚಿಂತನೆ ಸರ್ವಂಕಷ. ಐತರೇಯವಿರಲಿ, ಬೃಹದಾರಣ್ಯಕವಿರಲಿ ಉಪನಿಷತ್ತಿನ ಆಳಕ್ಕಿಳಿದು ಪ್ರವಚನ ಮಾಡುವ ವೈದುಷ್ಯ ಪ್ರಾಯ: ಪೂಜ್ಯ ಬನ್ನಂಜೆಗೋವಿಂದಾಚಾರ್ಯರಿಗೆ ಮತ್ತು ಪೂಜ್ಯ ಶ್ರೀವಿದ್ಯಾಸಿಂಹಾಚಾರ್ಯರಿಗೆ ಮಾತ್ರವೇ ಸಿದ್ಧಿಸಿರುವ ಭಗವತ್ಪ್ರಸಾದವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. 'ಸೃಷ್ಟಿರಹಸ್ಯ' ಎಂಬ ಕೃತಿಯಲ್ಲಿ ಸೃಷ್ಟಿಯ ಬಗ್ಗೆ ಇರುವ ಪೌರಾತ್ಯ, ಪಾಶ್ಚಾತ್ಯ ಅಭಿಪ್ರಾಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ, ಸೃಷ್ಟಿಯ ರಹಸ್ಯ ಹೇಗಿರಬಹುದು ಎಂಬುದನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಶ್ರೀಆಚಾರ್ಯರು ಮಾಡಿದ್ದಾರೆ. 'ಪೂಜಾರಹಸ್ಯ'ವೆಂಬ ಕೃತಿಯಲ್ಲಿ ದೇವಪೂಜೆಯಲ್ಲಿ ಬಳಸುವ ಮಂತ್ರಗಳ ಅಧ್ಯಾತ್ಮಿಕವಿವರಣೆಯೊಂದಿಗೆ, ಪೂಜಾಕಾಲದಲ್ಲಿ ಬಳಸುವ ತಂತ್ರಗಳು, ವಿಧಾನಗಳು , ವೈಶ್ವದೇವ, ಬಲಿಹರಣ,ಬ್ರಹ್ಮಯಜ್ಞಗಳ ವಿವರಣೆಯನ್ನೂ ನೀಡಿದ್ದಾರೆ. ಶ್ರೀವಿಷ್ಣುತೀರ್ಥರ 'ಅಧ್ಯಾತ್ಮ ರಸರಂಜನಿ'ಯನ್ನು ಕನ್ನಡಕ್ಕೆ ಅನುವಾದಿಸಿರುವ ಆಚಾರ್ಯರು 'ಸುಧಾವಿಶಾರದ', ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರಿಂದ 'ಶ್ರೀಪೂರ್ಣಪ್ರಜ್ಞಪ್ರಶಸ್ತಿ' ಹಾಗೂ ಕವಿಕುಲಗುರು ಕಾಳಿದಾಸ ವಿಶ್ವವಿದ್ಯಾನಿಲಯದಿಂದ 'ಮಹಾಮಹೋಪಾಧ್ಯಾಯ' ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಧ್ಯಯನ,ಅಧ್ಯಾಪನ, ಜ್ಞಾನ ಪ್ರಸಾರವನ್ನೇ ಜೀವನದ ಪರಮಮುಖ್ಯವ್ರತವಾಗಿರಿಸಿಕೊಂಡಿರುವ ಋಷಿಸದೃಶ ಆಚಾರ್ಯರಿಗೆ ಅನಂತ ನಮನಗಳು. ಶ್ರೀಕೃಷ್ಣ,ಪೂರ್ಣಪ್ರಜ್ಞರು ಪ್ರೀತರಾಗಲಿ.ವೇಣುಗೋಪಾಲ ಬಿ.ಎನ್.
***
ಕರ್ನಾಟಕ ಸರ್ಕಾರದಿಂದ ಆಯೋಜಿಸಿದ, ಕರ್ನಾಟಕ ಸರ್ಕಾರದ ಅತ್ಯುತ್ತಮ ಪ್ರಶಸ್ತಿ ಎಂದೇ ಪ್ರಸಿದ್ಧವಾದ ರಾಜ್ಯೋತ್ಸವ ಪ್ರಶಸ್ತಿಗೆ ಅತ್ಯಂತ ಅರ್ಹವಾಗಿಯೇ ಭಾಜನರಾದ.....
ಮಹಾರಾಷ್ಟ್ರದಲ್ಲಿ ಇದ್ದುಕೊಂಡೇ ಕನ್ನಡದ ಅಭಿವೃದ್ಧಿಯ ಹರಿಕಾರರಾದ, ಕನ್ನಡ ಹರಿದಾಸಸಾಹಿತ್ಯದ ಹರಿಕಾರರೂ ಆದ, ಸ್ವಯಂ ಕನ್ನಡ ಸಾಹಿತ್ಯದಲ್ಲಿ ವಿಲಕ್ಷಣ ವಿದ್ವಾಂಸರಾದ, ನೂರಾರು ಪ್ರಶಸ್ತಿಗಳಿಗೆ ಭಾಜನಾರಾದ,
ನೂರಾರು ವಿದ್ವಾಂಸರನ್ನು ಸಿದ್ಧಪಡಿಸಿ, ನಾಡಿನ ಉದ್ದಗಲದಲ್ಲಿಯೂ ಆ ವಿದ್ವಾಂಸರುಗಳನ್ನು ಸಂಸ್ಥಾಪಿಸಿ, ಕನ್ನಡ ಸಾಹಿತ್ಯದ ಪರಿಮಳವನ್ನು ಪಸರಿಸುವ ಮಹಾ ಕಸ್ತೂರಿಕಣ್ಮಣಿಗಳಾದ,
ದೇಶದ ಉದ್ದಗಲದಲ್ಲಿಯೂ ಕನಿಷ್ಠ ಐದಾರು ಸಾವಿರ ತಾಸುಗಳಲ್ಲಿ ಮಹಾಭಾರತ ಭಾಗವತ ಹರಿಕಥಾಮೃತಸಾರ ಹರಿಭಕ್ತಿ ಸಾರ ಮೊದಲಾದ ಉದ್ಗ್ರಂಥಗಳನ್ನು ಸರಳವಾದ ಕನ್ನಡದಲ್ಲಿ ಉಪನ್ಯಾಸ ಮಾಡುವ ಮುಖಾಂತರ ಜ್ಙಾನಸುಧೆಯೆಂಬ ಗಂಗೆಯನ್ನು ಹರಿಸಿದ.
ಮುಂಬಾಪುರಿಯಲ್ಲಿ ಇರುವ, ಅತ್ಯಂತ ಪ್ರಾಚೀನವಾದ ಸತ್ಯಧ್ಯಾನವಿದ್ಯಾಪೀಠ ದ ಕುಲಪತಿಗಳೂ ಆದ, ಇಂದಿಗೂ ನೂರಾರು ವಿದ್ಯಾರ್ಥಿಗಳಿಗೆ ಪ್ರಾಚೀನ ಸಂಸ್ಕೃತಿಯ ಸಂಸ್ಕಾರ ಹಾಗೂ ವಿದ್ಯೆ ಇವುಗಳನ್ನು ಧಾರೆಯೆರೆಯುವ, ಅನ್ನ ವಸ್ತ್ರ ವಸತಿಗಳನ್ನು ಕೊಟ್ಟು ಹದಿನಾಲ್ಕವರ್ಷಗಳ ಕಾಲ ಪಾಲನೆ ಪೋಷಣೆ ಮಾಡುತ್ತಾರೆ.
********
ಟಿ.ಕೆ. ರಾಮರಾಯ
ಪತ್ತೇದಾರಿ ಕಾದಂಬರಿ ಕರ್ತೃ ಟಿ.ಕೆ. ರಾಮರಾಯರ ಜನ್ಮದಿನವಿಂದು. ಇವರು ೦೭-೧೦-೧೯೩೧ ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ತಂದೆ ಟಿ. ಕೃಷ್ಣಮೂರ್ತಿ ಹಾಗೂ ತಾಯಿ ನಾಗಮ್ಮ ದಂಪತಿಗಳಿಗೆ ಜನಿಸಿದರು.
ತಂದೆ ಟಿ. ಕೃಷ್ಣಮೂರ್ತಿಯವರು ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು. ಪ್ರಾರಂಭಿಕ ಶಿಕ್ಷಣ ಕಡೂರು, ಅರಸೀಕೆರೆ ಮುಂತಾದೆಡೆ ಆಯಿತು. ಹೈಸ್ಕೂಲಿಗೆ ಸೇರಿದ್ದು ಕೋಲಾರದಲ್ಲಿ. ಹೈಸ್ಕೂಲಿನಲ್ಲಿದ್ದಾಗಲೇ ವಿಪರೀತ ಓದಿನ ಹುಚ್ಚು. ಆಗಲೇ ಬರೆದ ಪತ್ತೇದಾರಿ ಕಾದಂಬರಿ ಭಾಸ್ಕರ ಅಥವಾ ಸೇಡು. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ ಮುಂತಾದವರು ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವಿ ಪಡೆದ ನಂತರ ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರೂ ಎರಡು ತಿಂಗಳಲ್ಲೇ ಅದನ್ನು ಬಿಟ್ಟು ಮದರಾಸಿನಲ್ಲಿ ರೈಲ್ವೆಗಾರ್ಡ್ ಕೆಲಸಕ್ಕೆ ಸೇರಿದರು. ರೈಲ್ವೆಯಲ್ಲಿ ಸ್ಟೇಷನ್‌ಮಾಸ್ಟರಾಗಿದ್ದ ತಂದೆಯವರ ಅಕಾಲ ಮರಣದಿಂದ ಮಾನವೀಯ ದೃಷ್ಟಿಯಿಂದ ದೊರೆತ ಉದ್ಯೋಗವಾಗಿತ್ತದು. ಆದರೆ ಇದಕ್ಕೆ ಮೊದಲು ಅಣ್ಣನೊಬ್ಬನ ಮರಣದಿಂದ ಸಂಸಾರದ ಹೊಣೆ ಇವರ ಮೇಲೆ ಬಿದ್ದು, ತಮ್ಮ – ತಂಗಿ – ತಾಯಿ. ಇವರೆಲ್ಲರ ಜವಾಬ್ದಾರಿ ಹೊರಲು ಮದರಾಸಿನ ಕೆಲಸ ತೊರೆದು, ಚನ್ನಪಟ್ಟಣದಲ್ಲಿ ನೆಲೆಸಿ ಟ್ಯೂಟೋರಿಯಲ್ಸ್ ತೆರೆದು ತರಗತಿಗಳನ್ನು ಪ್ರಾರಂಭಿಸಿದರು. ಎಸ್.ಎಸ್.ಎಲ್.ಸಿ., ಪಿ.ಯು., ಪಾಲಿಟೆಕ್ನಿಕ್ ತರಗತಿಯ ವಿದ್ಯಾರ್ಥಿಗಳಿಗೆ ೨೦ ವರ್ಷಗಳ ಕಾಲ ಪಾಠ ಹೇಳಿದರು. ನಂತರ ಪ್ರಾರಂಭಿಸಿದ್ದು ಔಷಧಿ ಅಂಗಡಿ. ಇವರು ಬರೆದ ಮೊಟ್ಟಮೊದಲ ಕಾದಂಬರಿ ದೂರ ಗಗನ. ಆಗ ಅವರಿಗೆ ೩೫ರ ಪ್ರಾಯ. ರಂಜನೀಯವಾಗಿ, ಸೊಗಸಾಗಿ ಬರೆದ ಕಾದಂಬರಿ ಓದುಗರ ಗಮನ ಸೆಳೆದ ನಂತರ ಹಲವಾರು ಕಾದಂಬರಿಗಳನ್ನು ಬರೆದರು. ಮೊದಲು ಪ್ರಕಟಿಸಲಾಗದೆಂದು ವಿಷಾದ ಪತ್ರ ಬರೆದ ಸಂಪಾದಕರೆ ಕ್ಯೂನಲ್ಲಿ ಕಾಯ್ದು ಕಾದಂಬರಿ ಬರೆಸಿ ತಮ್ಮ ಪತ್ರಿಕೆಯಲ್ಲಿ ಧಾರಾವಾಹಿಯ ಆಗಿ ಪ್ರಕಟವಾಗಬೇಕೆಂದು ಆಶಿಸಿದರು. ೧೯೬೯ರಲ್ಲಿ ಗ್ರೀಸ್, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ಕೆನಡಾ, ಜಪಾನ್, ಹಾಂಕಾಂಗ್, ಥಾಯ್‌ಲ್ಯಾಂಡ್, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿಬಂದು ರಚಿಸಿದ ಪ್ರವಾಸಾನುಭವದ ಕೃತಿ ಗೋಳದ ಮೇಲೊಂದು ಸುತ್ತು, ನಾಲ್ಕು ಮುದ್ರಣಗಳನ್ನು ಕಂಡ ಕೃತಿ. ಕರ್ನಾಟಕ ಸರಕಾರವು ರಾಮರಾಯರನ್ನು ಸಾಹಿತ್ಯ ಅಕಾಡಮಿಯ ಸದಸ್ಯರನ್ನಾಗಿ ನೇಮಿಸಿತು. ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮರಳು ಸರಪಳಿ, ಮೂರುಜನ್ಮ, ಸೇಡಿನ ಹಕ್ಕಿ, ಸೀಳು ನಕ್ಷತ್ರ, ವರ್ಣ ಚಕ್ರ, ಹಿಮಪಾತ, ಮಣ್ಣಿನ ದೇೂಣಿ ಮುಂತಾದ ಕಾದಂಬರಿಗಳು ಚಲನಚಿತ್ರವಾಗಿ ಅಪಾರ ಯಶಸ್ಸನ್ನು ತಂದುಕೊಟ್ಟಿದ್ದಲ್ಲದೆ ಬಂಗಾರದ ಮನುಷ್ಯ ಕಾದಂಬರಿಯು ಚಲನಚಿತ್ರವಾಗಿ ಎರಡು ವರ್ಷಗಳ ಕಾಲ ಪ್ರದರ್ಶಿತಗೊಂಡಿತು. ವರನಟ ಡಾ.ರಾಜ್‌ಕುಮಾರ್ ಅಭಿನಯದಲ್ಲಿ, ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ- ಬಂಗಾರದ ಮನುಷ್ಯ. ಭಾರತೀಯ ಚಿತ್ರರಂಗ ಕಂಡ ಈ ಅತ್ಯುತ್ತಮ ಸಾಮಾಜಿಕ ಚಿತ್ರ, ಬರೆದ ದಾಖಲೆಗಳೂ ಒಂದೆರೆಡಲ್ಲ. ಕುಟುಂಬ ಪರಿಕಲ್ಪನೆಯ ಮಾನವ ಸಂಬಂಧವನ್ನು ಗಟ್ಟಿಗೊಳಿಸಿದ ಈ ಚಿತ್ರಕ್ಕೆ- ಕೃಷಿ ಕ್ಷೇತ್ರಕ್ಕೆ ವಿದ್ಯಾವಂತರನ್ನು ವಾಪಸ್ ಕರೆತಂದ ಶ್ರೇಯವೂ ಸಲ್ಲುತ್ತದೆ. ಇಂಥ ಸಾರ್ವಕಾಲಿಕ ಶ್ರೇಷ್ಠ ಚಿತ್ರ- ಟಿ.ಕೆ.ರಾಮರಾವ್ ಅವರ ಬಂಗಾರದ ಮನುಷ್ಯ ಕಾದಂಬರಿ ಆಧಾರಿತ. ಇವತ್ತು ಬಂಗಾರದ ಮನುಷ್ಯ ಎನ್ನುತ್ತಿದ್ದಂತೆ- ಅಣ್ಣಾವ್ರ ನೆನಪಾಗುತ್ತಾರೆ. ಚಿತ್ರದ ಹಾಡು, ಸಂಭಾಷಣೆ ನೆನಪಾಗುತ್ತದೆ. ಚಿತ್ರ ಸಾರಿದ ಸಂದೇಶವೂ ನಮ್ಮನ್ನು ಚಿಂತೆಗೆ ಹಚ್ಚುತ್ತದೆ. ಆದರೆ, ಇದಕ್ಕೆ ಮೂಲ ಕಾರಣರಾದ ರಾಮರಾವ್ ಬಗ್ಗೆ ಯಾರಿಗೂ ನೆನಪು ಮೂಡುವುದಿಲ್ಲ.
ಇದೇ ಕಾದಂಬರಿಯು ತೆಲುಗು ಭಾಷೆಯಲ್ಲಿ ದೇವುಡುಲಾಂಟಿ ಮನಿಷಿ ಹೆಸರಿನ ಚಲನಚಿತ್ರವಾಗಿ ಆಂಧ್ರದಾದ್ಯಂತ ಪ್ರದರ್ಶಿತವಾಗಿ ಶತದಿನೋತ್ಸವ ಕಂಡರೆ ಕಾದಂಬರಿ ರೂಪದಲ್ಲಿ ಬಂಗಾರು ಮನಿಷಿ ಹೆಸರಿನಿಂದ ತೆಲುಗು ಭಾಷೆಗೂ ಅನುವಾದಗೊಂಡಿತು. ಹಿಂದಿ ಭಾಷೆಯಲ್ಲಿಯೂ ಚಲನಚಿತ್ರವಾಗಿ ತೆರೆಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿತು. ರಾಮರಾಯರು ಸುಮಾರು ೫೩ ಕಾದಂಬರಿಗಳು, ೧೪ ಕಥಾ ಸಂಕಲನಗಳು, ೫ ಕಿಶೋರ ಸಾಹಿತ್ಯ, (ಜೆ.ಎನ್.ಟಾಟಾ, ಲಾಲಾ ಲಜಪತರಾಯ್, ಟಿ.ವಿ. ಸುಂದರಂ ಐಯ್ಯಂಗಾರ್, ಶಾಮ ಪ್ರಸಾದ ಮುಖರ್ಜಿ, ಸ್ವಾಮಿ ಶಿವಾನಂದ) ಜಗದೇವರಾಯ ಎಂಬ ಐತಿಹಾಸಿಕ ಕಾದಂಬರಿ ಮತ್ತು ಒಂದು ವಿದೇಶಿ ಪ್ರವಾಸ ಕೃತಿಯೂ ಸೇರಿ ೭೪ ಕೃತಿಗಳನ್ನು ರಚಿಸಿದ್ದಾರೆ. ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆ.ನ.ಕೃ., ತ.ರಾ.ಸು., ಮ. ರಾಮಮೂರ್ತಿ ಮುಂತಾದವರುಗಳಂತೆ ಟಿ.ಕೆ. ರಾಮರಾಯರು ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದರು. ಇವರಿಗೆ ಹಲವು ಪ್ರಶಸ್ತಿ, ಗೌರವಗಳು ಬಂದಿವೆ.
೧೧-೧೧- ೧೯೮೮ ರಂದು ನಿಧನರಾದ, ಕನ್ನಡದ ಪತ್ತೆದಾರಿ ಕಾದಂಬರಿಕಾರರಲ್ಲಿ ಪ್ರಮುಖರಲ್ಲೊಬ್ಬರಾದ, ರೋಚಕ ಶೈಲಿ, ತೀಕ್ಷ್ಣವಾದ, ಲಯಬದ್ಧವಾದ ವಾಕ್ಯಸರಣಿ, ವಿಸ್ಮಯಕಾರಿ ತಿರುವುಗಳು, ರಹಸ್ಯವನ್ನು ಕೊನೆಯವರೆಗೂ ಕಾಯ್ದಿಟ್ಟು ಓದುಗರನ್ನು ಬೆರಗಾಗುವಂತೆ ಮಾಡುವ ತಂತ್ರಗಾರಿಕೆಯ ಬರಹಗಳಿಂದ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದ, ವಿಶಿಷ್ಟ ರೀತಿಯ ಪತ್ತೆದಾರಿ ಕಾದಂಬರಿ ಕತೃ , ಈ ಪ್ರಕಾರಕ್ಕೊಂದು ಘನತೆ, ಗೌರವಗಳನ್ನು ತಂದುಕೊಟ್ಟ ಟಿ. ಕೆ.ರಾಮರಾಯರಿಗೆ ಗೌರವಪೂರ್ವಕವಾದ ಪ್ರಣಾಮಗಳು.
**********
E Shridharan TN Sheshan KP Unnikrishnan
This is the true story of three friends
First one was brilliant ,never gave up the first position in his school . Topper in every exam held in School, College and the University.
Second one was average , wouldn't fail but pushed to the next class by default.
Third one was a trickster , a cheat and was an expert manipulator.
But these three were great friends , thick as thieves.
Once their education was over.....
The first one , the brilliant guy as expected became an excellent engineer. He gave Indian Engineering Services exam, was chosen as Class one officer. He became a Chief Engineer in Indian railways later.
Second one graduated with Physics major and appeared for Civil Services exam, passed and was appointed as the head of the department (HoD) where his first friend was working at a lower level !!
Third one didn't bother to study further after school, chose the right party at the right time ,fought the elections , won ,and became an MP , and later became a cabinet minister and under him were the Departments where two of his school friends were working.
This is not a fictional story.
First one is E Shridharan .. Metro man.
Second one is TN Sheshan Chief Election Commissioner.
Third one is KP Unnikrishnan who got elected five times as MP for Lok-sabha,and also became a cabinet minister during VP Singh's tenure as PM.
Three friends- from the same school, the same teachers, but destiny chartered different paths !!!
********
"ಬಳೆಗಾರನ ಮಗ" ರನ್ನ
ಒಂದೇ ಅಳತೆಯ, ಒಂದೇ ಬಣ್ಣಗಳ, ಒಂದೇ ಬಗೆಯ ಬಳೆಗಳನನ್ನು, ಹೊಂದಿಸಿಡಲು ಹೆಂಡತಿಗೆ ಹೇಳಿ, ಸೂಕ್ಷ್ಮ ಮತ್ತು ಚಿಕ್ಕ ಬಳೆಗಳನ್ನು ವಿಂಗಡಿಸಿ ಬೇರೆ ಬೇರೆ ಮಾಡಿ, ಚಿಕ್ಕ ಹಗ್ಗದಂತಿರುವ ದಪ್ಪ ದಾರದಲ್ಲಿ , ಬಳೆಗಳನ್ನು ಪೋಣಿಸಲು ಮಕ್ಕಳಿಗೆ ಹೇಳಿ, ತಾನು ಎತ್ತಿನ ಮೈತೊಳೆಯಲು ಹೋಗುತ್ತಾನೆ. ಯಜಮಾನ.
ಎತ್ತಿನ ಮೈತೊಳೆದು ಸ್ವಚ್ಛವಾಗಿ ಒರೆಸಿ, ಎತ್ತಿನ ಡುಬ್ಬದಮೇಲೆ ದಪ್ಪವಾಗಿದ್ದ ಬಟ್ಟೆಯನ್ನು ಹಾಕಿ, ಪೋಣಿಸಿದ ಬಳೆ ಸರಗಳನ್ನು ಎರಡೂ ಬದಿಗೆ ಸಮನಾಗುವಂತೆ ಎತ್ತಿನ ಮೇಲೆ ಹೊರಿಸಿದನು.
ಬಳೆ ಮಾರುವುದೇ ಆತನ ಮನೆತನದ ಸಾಂಪ್ರದಾಯಿಕ ವೃತ್ತಿಯಾಗಿದೆ. ನಾಲ್ಕು ಜನ ಗಂಡು ಮಕ್ಕಳು, ತುಂಬು ಸಂಸಾರ, ಬಳೆಗಳನ್ನು ಮಾರಿ, ಬಂದ ಹಣದಲ್ಲಿಯೇ ಬದುಕು ಸಾಗಬೇಕು.
ಈ ಸಲ, ಬೇರೆ ಬೇರೆ ಪ್ರಾಂತ್ಯದಲ್ಲಿ ಬಳೆಗಳನ್ನು ಮಾರಿಬರಬೇಕೆಂದು ನಿಶ್ಚಯಿಸಿ, ನಾಲ್ಕೈದು ದಿನ ಕೆಡಲಾರದಂತಹ ಆಹಾರವನ್ನು ಕಟ್ಟಿಸಿಕೊಂಡು, ಹಿರಿಯ ಮಗನನ್ನು ಕರೆದುಕೊಂಡು ಹೊರಡಲು, ಒಂಭತ್ತು ವರ್ಷದ ಕಿರಿಯ ಮಗ, ತಾನೂ ಬರುವೆನೇಂದು ಹಟಹಿಡಿದನು, ಆಗ ಅವನನ್ನೂ ಜೊತೆಗೆ ಕರೆದುಕೊಂಡು ಬಳೆ ಮಾರಲು ಹೊರಟನು.
ಬಳೇ ಬೇಕಮ್ಮ ಬಳೇ ಎಂದು ಕೂಗುತ್ತಾ ಊರಿಂದ ಊರಿಗೆ ಹೋಗುತ್ತಾ, ರಾತ್ರಿವೇಳೆ ದೇವಾಲಯದಲ್ಲಿ ತಂಗಿ, ಮಾರನೆ ದಿವಸ ಮತ್ತೆ ಬಳೇ ಬೇಕಮ್ಮ ಬಳೇ ಎಂದು ಕೂಗುತ್ತಾ , ಕಲ್ಯಾಣ ಚಾಲುಕ್ಯರ ಪ್ರಾಂತ್ಯದ ಲಕ್ಕುಂಡಿಗೆ ಬಂದನು.
ಬಳೇ ಬೇಕಮ್ಮ ಬಳೇ , ಮಿಂಚು ಬಳೇ , ಸಾಣೆ ಬಳೇ, ರೇಷ್ಮೇ ಬಳೇ, ಮುತ್ತೈದೆ ಬಳೇ ಬಣ್ಣ ಬಣ್ಣದ ಬಳೇ ಎಂಬ ಕೂಗು ಕೇಳಿ, ಚಾಳುಕ್ಯ ಚಕ್ರವರ್ತಿ, ತೈಲಪನ ಮಹಾಮಂತ್ರಿಯ ಸೊಸೆಯಾದ, ಅತ್ತಿಮಬ್ಬೆಯು, ಸೇವಕಿಯನ್ನು ಕಳೆಸಿ, ಬಳೆಗಾರನನ್ನು ತನ್ನ ಮನೆಗೆ ಕರೆಸಿಕೊಂಡಳು.
ಬಳೆಗಾರನು ತನ್ನ ಹೆಗಲ ಮೇಲಿದ್ದ ಕಂಬಳಿಯನ್ನು ಹಾಸಿ, ಉಸ್ಸಪ್ಪ ಎಂದು ಕುಳಿತುಕೊಳ್ಳಲು, ಬಹಳ ದೂರದಿಂದ ಬಂದಹಾಗಿದೆ ಎಂದಳು ಅತ್ತಿಮಬ್ಬೆ. ಹೊಟ್ಟೆಪಾಡು ಬರಬೇಕಲ್ಲ ತಾಯಿ ಎಂದ ಬಳೆಗಾರ. ಪಕ್ಕದಲ್ಲಿ ಕುಳಿತ ಮಗು, ಅಪ್ಪಯ್ಯ ಎಂತಹ ವಿಶಾಲವಾದ ದೊಡ್ಡ ಮನೆ. ಎಷ್ಟು ದಪ್ಪ ದಪ್ಪವಾದ ಕಂಬಗಳು ಅಂತಾ, ಅರಮನೆಯಂತಹ ಮನೆಯನ್ನು ದಂಗಾಗಿ ನೋಡುತ್ತಲೇ ಇದ್ದ. ಅತ್ತಿಮಬ್ಬೆಯು ಆ ಬಾಲಕನ ಮಾತು, ನೋಟವನ್ನೆಲ್ಲ, ತದೇಕಚಿತ್ತದಿಂದ ನೋಡುತ್ತ, ಯಾವೂರಿಂದ ಬಂದಿರುವಿರಿ ಅಂದಳು.
ಬಹುದೂರ ತಾಯಿ,
" ಜಮಖಂಡಿ ಹತ್ತಿರ ಮುದುವೊಳಲು " ಎಂದ.
ಅಬ್ಬ ಎಷ್ಟು ದೂರದಿಂದ ಬಂದಿರುವಿರಿ.
"ನಿಮ್ಮ ಹೆಸರೇನು?"
"ಜಿನವಲ್ಲಭ ತಾಯಿ " ಎಂದ.
ಬಳೆಗಳು ಚೆನ್ನಾಗಿವೆ ತಾನೆ ?
ಅನುಮಾನ ಬೇಡ ತಾಯಿ. ನಮ್ಮ ಮನೆತನದ ಸಾಂಪ್ರದಾಯಿಕ ಕಸುಬೇ ಇದು, ಎಂದ.
ಮೊದಲು ಬಾಯಾರಿಕೆ ತೀರಿಸಿಕೊಳ್ಳಿ , ನೀರುಮಜ್ಜಿಗೆಯನ್ನು ಕುಡಿದು, ದಣಿವಾರಿಸಿಕೊಂಡಮೇಲೆ ನಮಗೆಲ್ಲ ಬಳೆ ತೊಡಿಸುವಿರಂತೆ, ನಂತರ ನಮ್ಮಲ್ಲಿಯೇ ಊಟಮಾಡಿಕೊಂಡು ಹೋಗಬೇಕು, ಎಂದಳು ಅತ್ತಿಮಬ್ಬೆ.
ಹಿರಿಯ ಮಗ ಎತ್ತಿನ ಮೇಲಿನ ಬಳೆಗಳನ್ನೆಲ್ಲ ತೆಗೆದು, ತಂದೆಯ ಮುಂದೆ ತಂದಿಟ್ಟ . ಅಕ್ಕ ತಂಗಿಯರು ಬಳೆಗಳನ್ನು ಆರಿಸುತ್ತಿರುವಾಗ, ಬಳೆಗಾರನ ಮಗು, ತಂದೆಗೆ ಏನೇನೋ ಪ್ರಶ್ನೆಗಳನ್ನು ಕೇಳುತ್ತಾ , ಅಮ್ಮಯ್ಯ ಈ ಬಳೆಗಳು ಚೆನ್ನಾಗಿವೆ, ಈ ಬಳೆಗಳು ಚಂದ ಇವೆ ಅಂತಾ ಸ್ಪುಟವಾಗಿ, ಮುದ್ದು ಮುದ್ದಾಗಿ ಕನ್ನಡವನ್ನು ಮಾತನಾಡುವುದು ಕಂಡು, ಅತ್ತಿಮಬ್ಬೆಗೆ ಇಂತಹ ಚುರುಕಾದ ಜಾಣ ಮಗುವಿಗೆ , ವಿದ್ಯಾಭ್ಯಾಸ ಕೊಡಿಸದೆ , ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ತಿರುಗುತ್ತಿದ್ದಾರಲ್ಲ ಏಕೆ? ಎಂಬ ಆಲೋಚನೆ ಆಯಿತು.
ಬಳೆ ತೊಡಿಸಿಯಾದಮೇಲೆ, ಮಗುವಿಗೆ ವಿದ್ಯಾಭ್ಯಾಸ ಕೊಡಿಸದೆ, ನಿಮ್ಮೊಂದಿಗೇಕೆ ಕರೆದುಕೊಂಡು ತಿರುಗುತ್ತಿದ್ದೀರಿ ಎಂದು ಬಳೆಗಾರನಿಗೆ, ಅತ್ತಿಮಬ್ಬೆ ಕೇಳಿದಳು. ತಾಯಿ ವಿದ್ಯಾಭ್ಯಾಸ ಕೊಡಿಸುವಷ್ಟು ಧನಿಕನಲ್ಲ ಎಂದ. ನಿಮ್ಮ ಒಪ್ಪಿಗೆ ಇದ್ದರೆ, ಈ ಮುದ್ದಾದ ಮಗುವನ್ನು ನನ್ನ ಹತ್ತಿರ ಬಿಟ್ಟುಹೋಗಿ, ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದಳು. ಹಾಗೆ ಆಗಲಿ ತಾಯಿ ಅಂತಾ ಬಳೆಗಾರನು, ಒಪ್ಪಿಗೆ ಸೂಚಿಸಿದನು.. ಈ ಎಲ್ಲ ಸಂಭಾಷಣೆ ಕೇಳಿ ಮಗು ಹರುಷಗೊಂಡಿತು.
ಮಗುವಿಗೆ ಗುರುಕುಲದ ಆಚಾರ್ಯರಿಂದ ಒಳ್ಳೆಯ ಶಿಕ್ಷಣವನ್ನು ಕೊಡಿಸಿದಳು, ಅತ್ತಿಮಬ್ಬೆ. ಚುರುಕಾಗಿದ್ದ ಮಗು, ಉತ್ಸಾಹದಿಂದ , ಎಲ್ಲ ವಿದ್ಯೆಯನ್ನು ಸಂಪೂರ್ಣವಾಗಿ, ಮನಸಾರೆ ಕಲಿತು, ಕನ್ನಡದಲ್ಲಿ ಮಹಾಕಾವ್ಯಗಳನ್ನು ರಚಿಸಿ
" ಕವಿಚಕ್ರವರ್ತಿ " ಎನಿಸಿಕೊಂಡ. ಆ ಕವಿಚಕ್ರವತಿ೯ಯೇ , ಬಳೆಗಾರನ ಮಗ ಮದುವೊಳಲಿನ " ರನ್ನ ".
( ಮುದುವೊಳಲು ಅಂದರೆ ಈಗಿನ ಮುಧೋಳ )
ಕವಿಚಕ್ರವತಿ೯ ರನ್ನನು," ಅಜಿತ ತೀಥ೯ಕರ ಪುರಾಣ ", " ಸಾಹಸ ಭೀಮ ವಿಜಯ" " ( ಗದಾಯುದ್ಧ) ಪರಶುರಾಮ ಚರಿತ, ಚಕ್ರೇಶ್ವರ ಚರಿತ , ಹೀಗೆ ಅನೇಕ ಮಹಾ ಕೃತಿಗಳನ್ನು ರಚಿಸಿ, ಕನ್ನಡದ ರತ್ನವೇ ಆಗಿದ್ದಾನೆ .
ರನ್ನನನ್ನು ಮಹಾಕವಿಯನ್ನಾಗಿ ಮಾಡಿದ ಅತ್ತಿಮಬ್ಬೆಯು, ಪಂಪ, ರನ್ನ, ಪೊನ್ನ, ರಾದಿಯಾಗಿ,ಎಲ್ಲರ ಗ್ರಂಥಗಳನ್ನು ಸಾವಿರ ಸಾವಿರ ಪ್ರತಿಗಳನ್ನು ಮಾಡಿಸಿ, ಮುತ್ತೈದೆಯರಿಗೆ, ಬಾಗಿನದ ಜೊತೆಗೆ, ಗ್ರಂಥಗಳನ್ನೂ ಉಡಿತುಂಬಿದಳು.
ಮೊಟ್ಟ ಮೊದಲು, ಕನ್ನಡ ಗ್ರಂಥಗಳನ್ನು ಉಡಿತುಂಬುವ ಪರಿಪಾಠ ಹಾಕಿಕೊಟ್ಟವಳು ಅತ್ತಿಮಬ್ಬೆ. ಹೀಗೆ ಮಹಾದಾನಿಯಾಗಿದ್ದ ಅತ್ತಿಮಬ್ಬೆ, " " ದಾನಚಿಂತಾಮಣಿ ಅತ್ತಿಮಬ್ಬೆ " ಎಂದೇ ಪ್ರಸಿದ್ದಿಯಾದಳು.
ವೀರ ಕನ್ನಡಿಗರೆ, ನಾವೂ ಕೂಡ ನಮ್ಮ ಮನೆಯಲ್ಲಿಯ ಸಮಾರಂಭಗಳಲ್ಲಿ ಕನ್ನಡ ಗ್ರಂಥಗಳನ್ನು ಉಡಿತುಂಬೋಣ.
**********
ವೇದಾಂತ ದೇಶಿಕ
******
ಭಾರತದ ಹೆಮ್ಮೆಯ ವಿಜ್ಞಾನ ಸಂಸ್ಥೆಯಾದ ಭಾರತೀಯ ವಿಜ್ಞಾನ ಮಂದಿರದಲ್ಲಿ ಪದವಿ, ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ, ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಮೂರೂವರೆ ದಶಕಗಳ ಕಾಲ ಇಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪನ, ಪ್ಯಾಟರ್ನ್ ರೆಕಗ್ನಿಷನ್ ಮತ್ತು ಮೆಷಿನ್ ಇಂಟೆಲಿಜೆನ್ಸ್ ವಿಭಾಗಗಳಲ್ಲಿ ಉದ್ದಾಮ ಸಂಶೋಧನೆ, ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್‍ಗಳಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಪ್ರಕಟಣೆ, 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಜೆ.ಸಿ. ಬೋಸ್ ಎವಾರ್ಡ್, ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಕಾನ್ಫರೆನ್ಸ್ ನಲ್ಲಿ ಬೆಸ್ಟ್ ಪೇಪರ್ ಎವಾರ್ಡ್ ಇತ್ಯಾದಿ ಸಾಲು ಸಾಲು ಪ್ರಶಸ್ತಿ-ಪುರಸ್ಕಾರಗಳು, 50 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಮಾರ್ಗದರ್ಶನ.
ಇಷ್ಟೆಲ್ಲ ಸಾಧನೆ ಮಾಡಿರುವ ಡಾ. ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಅದು ಬಂದದ್ದು ಅವರ ಮೇಲೆ ಉಲ್ಲೇಖಿಸಿದ ಸಾಧನೆಗಳಿಗಾ? ಅಲ್ಲ! ಮತ್ಯಾವುದಕ್ಕೆ ಎನ್ನುತ್ತೀರಾ?
ಪ್ರಶಸ್ತಿ ಬಂದಿರುವುದು ಕಶ್ಯಪರ ವೇದ ಸಾಧನೆಗೆ. ಋಗ್ವೇದ, ಕೃಷ್ಣ ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳ ಸಂಹಿತಾ ಭಾಗಗಳಿಗೆ ಇಂಗ್ಲೀಷ್‍ನಲ್ಲಿ ಭಾಷಾಂತರ, ವಿವರಣೆ, ಭಾಷ್ಯ ಬರೆದ ಜಗತ್ತಿನ ಏಕಮೇವ ವ್ಯಕ್ತಿ ಈ ಕಶ್ಯಪರು! ಪರ್ಡ್ಯೂದಲ್ಲಿದ್ದಾಗ ಕಶ್ಯಪರು ಒಮ್ಮೆ ಲೈಬ್ರರಿಯ ಧಾರ್ಮಿಕ ಗ್ರಂಥಗಳ ವಿಭಾಗದತ್ತ ಕಣ್ಣುಹಾಯಿಸಿದರು. ಅಲ್ಲಿ ಬೈಬಲ್, ಖುರಾನ್, ಝೆಂಡ ಅವೆಸ್ತ... ಎಲ್ಲ ಗ್ರಂಥಗಳ ಇಂಗ್ಲೀಷ್ ಅನುವಾದಗಳಿದ್ದವು. ಭಾರತದ್ದೇನಿದೆ ಎಂದು ಹುಡುಕಹೊರವರಿಗೆ ಕವಿದಿದ್ದು ಗಾಢ ನಿರಾಶೆ. ಭಾರತೀಯ ಮೂಲದ ಯಾವ ಕೃತಿಯ ಇಂಗ್ಲೀಷ್ ಅನುವಾದಗಳೂ ಅಲ್ಲಿ ಲಭ್ಯವಿರಲಿಲ್ಲ. ಹೀಗಾದರೆ ನಮ್ಮ ಅಧ್ಯಾತ್ಮ ಸಂಪತ್ತು ವಿದೇಶೀಯರನ್ನು ಮುಟ್ಟುವುದಾದರೂ ಹೇಗೆ ಎಂದು ಚಿಂತಿಸಿದ ಕಶ್ಯಪ್, ಅದಕ್ಕಾಗಿ ಯಾರಾದರೂ ಬಂದು ಆ ಕೆಲಸ ಮಾಡಲಿ ಎಂದು ಕಾಯಲಿಲ್ಲ. ನಾನೇ ಮಾಡುತ್ತೇನೆ ಎಂದು ಸಂಕಲ್ಪಿಸಿ, ಜಿಗಿದೇಬಿಟ್ಟರು. ಹಲವು ವರ್ಷ ಹಗಲಿರುಳು ವೇದಗಳ ಸಮುದ್ರದಲ್ಲಿ ಮುಳುಗಿಹೋದರು. ವೇದಸಂಸ್ಕೃತ ಕಲಿತರು. ಋಕ್ಕುಗಳನ್ನು ಧ್ಯಾನಿಸಿದರು. ಅರ್ಥ ಬರೆದರು. ಅರ್ಥ ಹೇಳುವ ಪಂಡಿತರಲ್ಲಿ ದಿನ-ವಾರಗಳನ್ನು ಕಳೆದರು. ನೂರಾರು ಪುಸ್ತಕಗಳನ್ನು ಎಡತಾಕಿದರು. ಬರೆಯುತ್ತ ಬರೆಯುತ್ತ ಇಪ್ಪತ್ತೈದು ಸಾವಿರ ಮಂತ್ರಗಳಿಗೆ ಅರ್ಥ-ಭಾಷ್ಯ ಬರೆದುಬಿಟ್ಟರು. ಚತುರ್ವೇದಗಳಿಗೂ ಇಂಗ್ಲೀಷಿನಲ್ಲಿ ಭಾಷ್ಯ ಬರೆದ ಮೊದಲ ಮತ್ತು ಇದುವರೆಗಿನ ಏಕೈಕ ವ್ಯಕ್ತಿಯಾಗಿ ಹೊಮ್ಮಿದರು! ವೇದ-ಉಪನಿಷತ್ತುಗಳ ಮೇಲೆ ಕಶ್ಯಪರು ಬರೆದ ಮೂವತ್ತಕ್ಕೂ ಹೆಚ್ಚಿನ ಗ್ರಂಥಗಳನ್ನು ಸುಮ್ಮನೇ ಅಧ್ಯಯನ ಮಾಡಲು ಕೂರುವುದಾದರೂ ಹತ್ತಾರು ವರ್ಷಗಳನ್ನು ಅದಕ್ಕೇ ವಿನಿಯೋಗಿಸಬೇಕು!
ಅಂಥ ಅಪರೂಪದ ವ್ಯಕ್ತಿಯೊಬ್ಬರು ನಮ್ಮ ನಡುವೆ ಇದ್ದಾರೆ, ನಮ್ಮ ಬೆಂಗಳೂರಲ್ಲೇ ಇದ್ದಾರೆ ಎಂಬುದು ನಮ್ಮ ಹೆಮ್ಮೆ. ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ಇದೀಗ ಪದ್ಮಶ್ರೀ ನೀಡಿ ಗೌರವಿಸಿದೆ. ಇದು ಕನ್ನಡಿಗರ ಪೇಟಕ್ಕೆ ಸಿಕ್ಕಿರುವ ಹೊಸ ತುರಾಯಿ. ವೇದಗುರುಗಳೊಬ್ಬರಿಗೆ ಪ್ರಶಸ್ತಿ ಬಂದು ಅದರ ಗುರುತ್ವವೂ ಹೆಚ್ಚಾಗಿದೆ.
- ರೋಹಿತ್ ಚಕ್ರತೀರ್ಥ
******
ಶತಾವಧಾನಿ ಗಣೇಶ
'ಬ್ರಾಹ್ಮಣರ ಇಡ್ಲಿ ಹೋಟೆಲ್'ಗೆ ಶತಾವಧಾನಿ ಗಣೇಶ ಅವರು ಉಪಾಹಾರಕ್ಕೆ ಹೋಗಿದ್ದರು. ಮಾಣಿ ಪ್ರತ್ಯಕ್ಷನಾದ. ಅವನಿಗೆ ಇವರ ಮುಖ ಪರಿಚಯ ಇತ್ತು. 'ಸ್ವಾಮಿ, ನೀವು ಶತಾವಧಾನಿಗಳು. ಅಲ್ದಾ?' ಹೌದೆಂದರು ಗಣೇಶ್. ಸಂಭಾಷಣೆ ಹೀಗೆ ಮುಂದುವರೆಯಿತು.
'ನಾನೊಂದು ಸಮಸ್ಯೆ ಕೊಡ್ತೆ. ಉತ್ರ ಕೊಡಿ, ಕಾಂಬ'.
'ಹೇಳಿ, ಅಪ್ಪಾ'
'ಒಂದು ಪದ್ಯ ಮಾಡಿ. ಅದರಲ್ಲಿ ನಾನು ಹೇಳೋ ಐಟಮ್ ಅಷ್ಟೂ ಇರ್ಲಕ್ಕು. ಅದೇ ಸರದಿಯಲ್ಲೂ ಬಪ್ಲಕ್ಕು'.
'ಹೇಳಿ'.
'ಸಾಂಬಾರು, ಚಟ್ನಿ, ವಡೆ, ಇಡ್ಲಿ'.
ಮಾಣಿಯ ಮುಖದಲ್ಲಿ ಗೆದ್ದ ನಗು. ಶತಾವಧಾನಿಗಳು ಅರ್ಧ ನಿಮಿಷ ಕಣ್ಣುಮುಚ್ಚಿ ಯೋಚಿಸಿ, ಗಂಟಲು ಸರಿಪಡಿಸಿಕೊಂಡು ಮಾತು ಶುರು ಮಾಡಿದರು:
'ಹೇ, ಸಾಂಬಾ, ರುದ್ರಾ!
ಚಟ ಚಟ್ ನಿಟಿಲಾಕ್ಷಾ!
ಜಗದೆಲ್ಲೆಡೆ ನೀನಿರುವಡೆ,
ನಾ ಕಾಲೆಲ್ಲಿಡ್ಲಿ?'
ಸುಸ್ತಾದ ಮಾಣಿ 'ನಿಮಗೆ ಒಂದು ಪೆಷಲ್ ಕಾಪಿ ತರ್ತೆ' ಅಂತ ಓಡಿದ! . ನಿಜಕ್ಕೂ ಸುಂದರ.
**********
2019
MIRACLE WITNESSED
This interesting scene was in Supreme Court of India where the Bench was hearing the issue of Shree Ram Janma Bhoomi!
There were counsels representing both the sides and each side had their own witnesses to provide the Court with evidences!
While Shri Parasaran was putting forth the justifications for Ayodhya as Shree Rama Janma Bhoomi, the Honourable Judge intervened:
He asked “You quote from the Vedas and Scriptures for proving that Shree Rama existed, and other relevant issues! Is there any evidence in the Scriptures that specify the place of birth of Shri Rama?”
An old gentleman rose from the group of witnesses. He was one of the Pragyasakshi (Chief Witness) and his parents had named him Giridhar!
He said “Honourable Sir, I request you to refer to Rig Veda!”
He specified the chapter and shloka (verse) and said, “There it is mentioned in Rig Veda, Gaiminiya Samhita! These shlokas specify the directions and distances from a specific point on the banks of River Sarayu, to reach the birth place of Shri Rama. If one follows those directions, one reaches a specific spot in Ayodhya!”
The bench ordered for immediate verification, and it was done to realise that Shri Giridhar was very precise and right!
There it was glaring at them from Rig Veda! And this person was quoting the shloka (verse) verbatim from memory!
The bench remarked, “This is a Miracle we have witnessed today.!”
But the witness who was christened Giridhar was very calm and serene, as if it is a chore in the office on a normal working day!
To understand the wonder expressed by the Judge, one has to go back in Indian History, which needs overhauling at the earilest!
The year was 1950. Month January. 14th day of the month. In the village Jaunpur in Uttar Pradesh! The Mishra couple - Pandit Rajdev Mishra and Shachidevi (It is nice to note that that child became a main Sakshi later in life, to reclaim Shree Ram Janma Bhoomi) – were waiting for the birth of their child!
A very hale and healthy child was born that day and they named him Giridhar!
Giridhar Mishra was fine, till a cruel hand af fate played with him when he was 2 months old! That changed the life of the parents and the child!
Imagine a child who was eager to acquire and improve his knowledge, but just could not read or write! Pandit Rajdev would sit besides the child, and recite shlokas from the Vedas, explaining each word in each shloka! He was delighted to find that Giridhar had a great grasp, memory and retaining capacity, and could memorise every single word taught to him orally!
After imparting whatever knowledge he could, Rajdev admitted his son to one of the Mutts of Ramanand Sampradaya!
He was taken in as a disciple, and he was given a new name - RAMABHADRA!
And the child got a Guru ji who could teach him and encourage him to expand his knowledge beyond the limits of any normal human being!
Ramabhadra, in his zeal to explore the universe of knowledge, learnt and mastered 22 languages, including a few ancient ones! He could not read or write, and had to depend on his memory and its retention power!
He learnt the Scriptures and modern verses, too! He became a fan of Sant Tulsidas and explored the world of Rama Charit Manas!
Just Imagine! Somebody would read these epics and Scriptures, and he would store them in his memory for further understanding and analysis! He excelled in his work, often dictating to people, and getting the feedback orally!
At the age of 38, in 1988, he was crowned JAGADGURU RAMABHADRA ACHARYA, one of the four Jagadgurus of Ramananda Ashram!
You must have guessed by this time, why he could not read or write. Yes. HE LOST HIS EYESIGHT COMPLETELY, WHEN HE WAS TWO MONTHS OLD!
It is really staggering to learn about his achievements!
The blind Jagadguru, in addition to mastering 22 languages, is also famous as a Spiritual Leader, Educator, Sanskrit Scholar, Polyglot, Poet, Author, Textual commentator, Philosopher, Composer, Singer, Playwright and Story Teller (Katha Vachak - Artist)!
He has authored more than 100 books, such as Gita Ramayanam, Shri Bhargava Raghaviyam, Arundhati, Ashtavakra, Kaka Vidura among others!
He composed Shri Sitarama Suprabhatam!
As a poet, he produced 28 famous sets of poems (Sanskrit and Hindi) including four epics!
Authored 19 famous commentaries on various Scriptures, the popular ones being on Rama Charit Manas by Sant Tulsidas!
Composer of 5 Music Albums!
And 9 very popular discourses!
Founder of Jagadguru Ramabhadracharya University for the Handicapped!
Lifelong Chancellor of Tulsi Peeth (named after Sant Tulsidas)!
He was decorated with PADMA VIBHUSHAN in 2015!
I was filled with amazement as I was collecting information about him! A child who became blind, and fought his way up, to reach the pinnacle of knowledge and education, and its propagation!
What a marvellous example to inspire one and all! I felt very very small and insignificant! I am sharing this with you all as it amazed me no end!
There is a niggling thought, though! How many of us were aware of this great blind man?
While Helen Keller was propagated for her achievements as a blind person, and lessons are taught on her, Jagadguru Ramabhadra Acharya is a non entity in our education system That's how we are!
*No wonder the Judge remarked “I witnessed a Miracle in my Court!"
*****
No comments:
Post a Comment