ಗುರು ಪುಷ್ಯಾಮೃತ ಯೋಗ
28 ಜನೇವರಿ 2021
🌺🌺🌺🌺🌺
ಪುಷ್ಯ ನಕ್ಷತ್ರದ ಅರ್ಥ ಸಂತೃಪ್ತಿ ಹಾಗೂ ಸಮೃದ್ಧಿ ಎಂಬುದು. ಪಂಡಿತರು ಹಾಗೂ ಗುರುಹಿರಿಯರು ಈ ನಕ್ಷತ್ರವನ್ನು ಶುಭ ಲಾಭ ತರುವ ನಕ್ಷತ್ರ ಎಂದು ಪರಿಗಣಿಸುತ್ತಾರೆ.
ಪುಷ್ಯ ನಕ್ಷತ್ರವು ಚಂದ್ರ ಬಲದಿಂದ ಸಂಪತ್ತು ಮತ್ತು ಜ್ಞಾನ ಎರಡನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ನಕ್ಷತ್ರಗಳಲ್ಲಿ ಚಂದ್ರನು ಬಂದಾಗ ಬೇರೆ ಬೇರೆ ರೀತಿಯ ಪರಿಣಾಮಗಳು ಬರುತ್ತವೆ...
ಪುಷ್ಯ ನಕ್ಷತ್ರ ಇರುವ ಮಹೂರ್ತದಲ್ಲಿ ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ ಆ ಕಾರ್ಯ ಸಿದ್ಧಿಸುತ್ತದೆ ಎಂದು ಪಂಚಾಂಗದಲ್ಲಿ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ಅಪರೂಪಕ್ಕೆ ಗುರುವಾರ ಬೀಳುವ ಗುರು ಪುಷ್ಯಾಮೃತ ಯೋಗವನ್ನು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ.
ಈ ಯೋಗದಲ್ಲಿ ಕೈ ಹಾಕುವ ಕೆಲಸಗಳು ಯಶಸ್ವಿಯಾಗುತ್ತದೆ. *ಉದ್ಯಮಿಗಳಿಗೆ ಅಥವಾ ವ್ಯಾಪಾರ ಮಾಡುವವರಿಗೆ ಈ ಗುರುಪುಷ್ಯಾಮೃತ ಯೋಗವು ಲಾಭವನ್ನುಂಟುಮಾಡುತ್ತದೆ.
ಸೋಮವಾರ, ಗುರುವಾರ ಹಾಗೂ ಭಾನುವಾರ ಪುಷ್ಯ ನಕ್ಷತರ ಬಿದ್ದರೆ ಅದನ್ನು ವರ ನಕ್ಷತ್ರ ಯೋಗ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಕೈ ಹಾಕುವ ಕೆಲಸಗಳು ಸಿದ್ಧಿಸುತ್ತವೆ. ಅದರಲ್ಲೂ ಗುರುವಾರ ಬೀಳುವ ಗುರು ಪುಷ್ಯ ಯೋಗವು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.
ಈ ಸಮಯದಲ್ಲಿ ಪುಷ್ಯ ನಕ್ಷತ್ರವು ಎಂಟನೇ ಸ್ಥಾನದಲ್ಲಿರುವ ಕಾರಣ ಅದು ಶುಭಕರ ಎಂದು ಹೇಳುತ್ತಾರೆ.
ಗುರು ಪುಷ್ಯ ನಕ್ಷತ್ರದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿದರು ಆದು ದ್ವೀಗುಣ ಹಾಗೂ ಶುಭಗಳಿಗೆ ಎಂದು ಹೇಳಬಹುದು...
ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ದಿನ ತುಂಬಾ ಶುಭಕರ
● ಪ್ರವಾಸ ಆರಂಭಿಸಲು ಹೊಸ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು
● ಗುರುವಿನಿಂದ ಮಂತ್ರಗಳನ್ನು ಕಲಿಯಲು
● ಕಾರ್ಯಕ್ರಮಗಳನ್ನು ಆಯೋಜಿಸಲು.
● ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು. ತುಂಬಾ ಅನಕೂಲಕರವಾಗಿದೆ...
ಈ ನಕ್ಷತ್ರದ ಶುಭ ಮುಹೂರ್ತದಲ್ಲಿ ಖರೀದಿಸಿದ ವಸ್ತುಗಳು ದೀರ್ಘಕಾಲದವರೆಗೆ ಉಪಯುಕ್ತ ಮತ್ತು ಎಂದು ಹೇಳಲಾಗುತ್ತದೆ.
ಪುಷ್ಯ ನಕ್ಷತ್ರದ ದೇವರನ್ನು ಗುರು ಎಂದು ಪರಿಗಣಿಸಲಾಗುತ್ತದೆ ಮತ್ತು ಶನಿಯು ಈ ನಕ್ಷತ್ರಪುಂಜದ ನಿರ್ದೇಶನ ಪ್ರತಿನಿಧಿಯಾಗಿ ಪರಿಗಣಿಸಲ್ಪಡುತ್ತಾನೆ. ಬೃಹಸ್ಪತಿ ಶುಭ, ಬುದ್ಧಿವಂತ ಮತ್ತು ಜ್ಞಾನವನ್ನು ನೀಡುತ್ತಾನೆ. ಆದರೆ ಶನಿ ಸ್ಥಿರತೆಯ ಸಂಕೇತವಾಗಿದ್ದಾನೆ ಆದ್ದರಿಂದ ಈ ಎರಡು ರಾಶಿಗಳ ಶುಭ ಯೋಗ `ಪುಶ್ಯ ನಕ್ಷತ್ರ`ವನ್ನು ಶುಭ ಮತ್ತು ಶಾಶ್ವತವಾಗಿಸುತ್ತದೆ.
ಈ ಯೋಗದಲ್ಲಿ ಮಂತ್ರ ಪಠಣೆ, ಧ್ಯಾನ ಹಾಗೂ ದಾನ ಮಾಡಿದರೆ ತುಂಬಾ ಒಳ್ಳೆಯ ಫಲಗಳು ಸಿಗುತ್ತವೆ.
ಮೇಲೆ ತಿಳಿಸಿರುವ ಹಾಗೆ ಬರುವ ಜನೇವರಿ 28 ನೇ ತಾರಿಖನಂದು ಬನದ ಹುಣ್ಣಿಮೆ, ಗುರುವಾರ ಹಾಗೂ ಪುಷ್ಯ ನಕ್ಷತ್ರ ಬಂದಿರುತ್ತದೆ...
ಗುರು ಪುಷ್ಯಾಮೃತ ಯೋಗ ಎಂದು ಈ ದಿನ ಹೇಳುತ್ತಾರೆ, ಆದ್ದರಿಂದ ಈ ದಿನ ಶ್ರೀ ರಾಘವೇಂದ್ರ ಸ್ತೋತ್ರ 108 ಸಲ ಪಠಣ ಮಾಡಬೇಕು...
ಈ ರೀತಿ ಪಠಣ ಮಾಡಿದರೆ ನಮ್ಮ ಕಠಿಣವಾದ ಕೆಲಸಗಳು ಅಥವಾ ಸಮಸ್ಯೆಗಳು ದೂರವಾಗತ್ತವೆ...
ಮಕ್ಕಳಿಗೆ ಗುರು ಭೋಧನೇ ಮಾಡಿಸಲು ತುಂಬಾ ಯೋಗ್ಯವಾದ ದಿನ....
ಬ್ರಾಹ್ಮಣ ರಿಗೆ ಧವಸಧಾನ್ಯ ಗಳನ್ನು ದಾನ ಮಾಡಿದರೆ ನಮ್ಮ ಗಳ ಕೆಲವು ಅನಾರೋಗ್ಯ ದ ಸಮಸ್ಯೆಗಳು ದೂರವಾಗುತ್ತವೆ...
ಗುರು ಪುಷ್ಯಾಮೃತ ಯೋಗ ಪೂಜೆ ಮಾಡುವ ವಿಧಾನ
ಅಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸ್ನಾನ ಮುಗಿಸಿ, ನಿತ್ಯ ಸಂಧಾವಂಧನೆ ಕರ್ಮಾದಿಗಳು ಮುಗಿಸಬೇಕು...
ತದನಂತರ ಒಂದು ಮಣೆ ಹಾಕಿ ಅದರ ಮೇಲೆ ರಾಯರ ಫೋಟೋ ಇಡಿ. ಹೂ ಮಾಲೆ ಹಾಕಿ. ಎರಡು ತುಪ್ಪದ ದೀಪಗಳನ್ನು ಹಚ್ಚಿ.. ಕೆಂಪು ಕಲ್ಲುಸಕ್ಕರೆ ಹಾಗೂ ಬಾಳೆಹಣ್ಣು ನೇವಿದ್ಯ ಕ್ಕೆ ಇಟ್ಟುಕೊಳ್ಳಿ...
ಸಾದ್ಯವಾದರೆ ಮನೆಯ ಪುರುಷ ಸದಸ್ಯರೆಲ್ಲರೂ ಶ್ರೀ ರಾಘವೇಂದ್ರ ಸ್ತೋತ್ರ ವನ್ನೂ 54 / 108 ಸಲ ಹೇಳಿ... ತುಂಬಾ ಒಳ್ಳೆಯ ಫಲಗಳು ಲಭೀಸುತ್ತವೆ... ಸಾದ್ಯವಾದಷ್ಟೂ ಪ್ರಯತ್ನ ಮಾಡಿ...
||ಲೋಕಾ ಸಮಸ್ತಾಃ ಸುಖಿನೋ ಭವಂತು||
-------------------------------------------------------------
*Vidyavaschaspati Vinith*
-------------------------------------------------------------
************
ಗುರು ಪುಷ್ಯ ಅಮೃತ ಯೋಗ: ಏನಿದರ ವಿಶೇಷ?
🌸🌸🌸🌸🌸🌸🌸
ಈ ಯೋಗವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಂಥ ಕಷ್ಟವಲ್ಲ. ಇದರ ಹೆಸರು ಗುರು ಪುಷ್ಯ ಅಮೃತ ಯೋಗ. ಗುರುವಾರದಂದು ಪುಷ್ಯ ನಕ್ಷತ್ರವೂ ಬಂದರೆ ಆ ದಿನದ ಯೋಗವನ್ನು ಹೀಗೆ ಕರೆಯಲಾಗುತ್ತದೆ
* ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುವುದಕ್ಕೆ
* ಹಿರಿಯರು, ಗುರುಗಳು ಅಥವಾ ಜ್ಞಾನಿಗಳಿಂದ ಮಂತ್ರ ಮತ್ತು ತಂತ್ರದ ಜ್ಞಾನವನ್ನು ಕಲಿಯುವುದಕ್ಕೆ
* ಹೊಸ ವ್ಯಾಪಾರ ಆರಂಭಿಸುವುದಕ್ಕೆ
* ಚಿನ್ನ ಅಥವಾ ಬೆಳ್ಳಿ ಖರೀದಿಸುವುದು ಅದೃಷ್ಟ ತರುತ್ತದೆ
* ಹೊಸ ವಾಹನ ಖರೀದಿ ಮಾಡುವುದಕ್ಕೆ
* ಹೊಸ ಮನೆಗೆ ಪ್ರವೇಶ ಮಾಡುವುದಕ್ಕೆ
ಹೀಗೆ ವೃದ್ಧಿ ಕಾರ್ಯಗಳು ಎಂದು ಯಾವುದೆಲ್ಲವನ್ನೂ ಪರಿಗಣಿಸುತ್ತಾರೋ ಅಂಥ ಕೆಲಸಗಳನ್ನು ಮಾಡುವುದಕ್ಕೆ ಈ ದಿನ ಬಹಳ ಸೂಕ್ತವಾದದ್ದು. ಚಿನ್ನ- ಬೆಳ್ಳಿ ಖರೀದಿ ಮಾಡುವುದಕ್ಕೆ ಈ ದಿನಕ್ಕಾಗಿ ಕಾಯುವಂಥವರು ಬಹಳ ಮಂದಿ ಇರುತ್ತಾರೆ
*******
.......ಪುಷ್ಯಾರ್ಕಾದಿ ಸಮಾಗಮೇ
(ಒಂದುಬಾರಿ ಓದೋಣ)
ಪ್ರತೀ ದಿನವನ್ನು ನಾವು, ನಮಗಾಗಿ ಹೇಗೆ ಬಳಿಸಿಕೊಳ್ಳಬಹುದು ಎನ್ನುವದಕ್ಕೆ ಗುರು ಪುಷ್ಯಾಮೃತ ಯೋಗವಿರುವ ಈ ದಿನವೂ ಒಂದು ನಿದರ್ಶನ.
ಇಂದು ನಮಗೆ ಕಷ್ಟಗಳು ತುಂಬ. ಅಪತ್ತುಗಳು ಅಪಾರ. ಈಗಿನ ಕೆಲ ದಿನಗಳಲ್ಲಿ, ಪ್ರತಿನಿತ್ಯವೂ ಕನಿಷ್ಟ ಎರಡರೆ ಕೆಟ್ಟ ಸುದ್ದಿ ಕಿವಿಗೆ ಬಿದ್ದಿರ್ತಾವ. ಸ್ವಯಂ ನಾವು ಆಪತ್ತುಗಳ ಸುಳಿಗಳಲ್ಲಿ ಇದ್ದೇವೆ. ಆದಾಯ ಕುಂಠಿತವಾಗಿದೆ. ಬರುವ ಆದಾಯ ಸರಿಯಾಗಿ ಹೊಂದಿಸಲು ಕಷ್ಟವಾಗಿದೆ. ಜಪ ಪಾರಾಯಣಗಳೂ ಕುಂಠಿತವಾಗಿವೆ. ಘೋರದಿನಗಳ ಅರಿವು ಅಂತೂ ನಮಗಾಗಿದೆ. ಹೀಗಿರುವಾಗ.....
ನಾಳೆಯದಿನವನ್ನೂ ಯಾಕೆ ಬಳಿಸಿಕೊಳ್ಳಬಾರದು......
ಅನುಭವಿಸಿದ ಒಳ್ಳೆಯ ದಿನಗಳು ಬರಲು, ಅತ್ಯುತ್ತಮ ಸುದ್ದಿಗಳು ಕೇಳಲು, ಉತ್ತಮ ವಿಚಾರ ರೂಢಿಸಿಕೊಳ್ಳಲು, ಜಪ ಪಾರಾಯಣ ಸುಸೂತ್ರವಾಗಿ ನಡೆಯಲು, ಸಂಪಾದನೆ ಸರಾಗವಾಗಿ ಆಗಲು, ಅನಿಷ್ಟ ಕಳೆದುಕೊಳ್ಳಲು, ಆಪತ್ತುಗಳಿಂದ ಗೆದ್ದುಬರಲು, ದೇವರ ದೇವತೆಗಳ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಲು ನಾಳೆಯ ದಿನವನ್ನು ಬಳಿಸಿಕೊಳ್ಳಣ ಅಲ್ಲವೇ...
ಹೇಗೆ ಬಳಿಸಿಕೊಳ್ಳುವದು.....
ದೇವರ ಗುರುಗಳ ಅನುಗ್ರಹದಿಂದ ನಾಳೆ ಗುರು ಪುಷ್ಯಾಮೃತ ಯೋಗ ಒದಗಿದೆ. ಪ್ರಾತಃಸ್ಮರಣೀಯ ಅಪ್ಪಣ್ಣಾಚಾರ್ಯರು ತಿಳಿಸುತ್ತಾರೆ ಈ ದಿನದಂದು ರಾಯರ ಸ್ತೋತ್ರ ಪಾರಾಯಣ ಮಾಡುವದರಿಂದ ರಾಯರ ಪರಮಾನುಗ್ರಹ ಆಗತ್ತೆ ಎಂದು. ದೈವ ವಶಾತ್ ನಮಗೆಲ್ಲ ರಾಯರ ಸ್ತೋತ್ರವೂ ಬರುತ್ತದೆ ಹೀಗಿರುವಾಗ ಯಾಕೆ ನಾಳೆ ಪಾರಾಯಣ ಮಾಡಬಾರದು.... ???? ಕನಿಷ್ಟ ಹತ್ತು ಬಾರಿ ಪಾರಾಯಣ ಮಾಡಲು ಕೇವಲ ಇಪ್ಪತ್ತು ನಿಮಿಷ, ಮೂವತ್ತು ನಿಮಷಗಳು ಬೇಕಾಗುತ್ತದೆ. ಅಷ್ಟು ಸಮಯವೂ ಇದ್ದೇ ಇದೆ. ಹಾಗಾಗಿ ನಾವೆಲ್ಲರೂ ಸೇರಿ ಯಾಕೆ "ರಾಯರ ಸ್ತೋತ್ರ" ಪಾರಾಯಣ ಮಾಡಿ ನಾಳೆಯ ದಿವನ್ನು ಬಳಿಸಿಕೊಂಡು ಸಾರ್ಥಕ ಮಾಡಿಕೊಳ್ಳಬಾರದು... ????
ಈ ಲೆಖನ ಕನಿಷ್ಟ 3000 ಜನರಿಗೂ ಹೆಚ್ಚಿನ ಜನರಿಗೆ ತಲುಪತ್ತದೆ. ಓದಿದ ನೂರೇ ಜನರು ಹತ್ತುಬಾರಿ ಪಾರಾಯಣ ಮಾಡಿದರೂ ಸಾವಿರದೆಂಟು ಸಲ ಪಾರಾಯಣ ಮಾಡಿದ ಸೌಭಾಗ್ಯಕ್ಕೆ ಭಾಗಿಯಾಗುತ್ತದೆ ಈ ನಮ್ಮ ಭವ್ಯ ಸಮಾಜ.
ನಮ್ಮ ನಮ್ಮ ಆಪತ್ತುಗಳ, ನಮ್ಮ ವಿಶಾಲ ಕುಟುಂಬದ ಆಪುತ್ತುಗಳ, ಭವ್ಯ ಸಮಾಜದ ಆಪತ್ತುಗಳ ಪರಿಹಾರಕ್ಕೆ ರಾಯರ ಸ್ತೋತ್ರ ದ ಪಾರಾಯಣ ಮಾಡೋಣ. ರಾಯರ ಅಂತರ್ಯಾಮಿ ದೇವತೆಗಳ ಅಂತರ್ಯಾಮಿ ವಾಯುದೇವರ ಅಂತರ್ಯಾಮಿ ಲಕ್ಷ್ಮೀ ನಾರಾಯಣರ ಅನುಗ್ರಹಕ್ಕೆ ಪಾತ್ರರಾಗೋಣ.
✍🏽✍🏽ನ್ಯಾಸ..
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
****
No comments:
Post a Comment