19.10.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-293
✍️: ಇಂದಿನ ವಿಷಯ:
ಸೊಂಟದ ನೋವನ್ನು ಸುಲಭವಾಗಿ ತಡೆಯಿರಿ.
◆ ರಾತ್ರಿಯವರೆಗೂ ಚೆನ್ನಾಗಿದ್ದೆ, ಬೆಳಗ್ಗೆ ಎದ್ದಾಗ ಸೊಂಟ ಹಿಡಿದುಕೊಂಡಿತ್ತು.
◆ ಸ್ವಲ್ಪ ಬಲಕ್ಕೆ/ಎಡಕ್ಕೆ ತಿರುಗಿದೆ ಅಷ್ಟೆ, ಇದ್ದಕ್ಕಿದ್ದಂತೆ ಸೊಂಟ ಹಿಡಿಯಿತು.
◆ ಕಸ ಗುಡಿಸುವಾಗ ಇದ್ದಕ್ಕಿದ್ದಂತೆ ಸೊಂಟ ಹಿಡಿಯಿತು.
ಈ ತರಹದ ತಕ್ಷಣ ಹಿಡಿದುಕೊಳ್ಳುವ ಮತ್ತು ತೀವ್ರ ವೇದನೆಕೊಡುವ ಸೊಂಟದ ನೋವಿಗೆ ನಿಜವಾದ ಕಾರಣ ಬಹಳಷ್ಟು ಜನರಿಗೆ ತಿಳಿದಿಲ್ಲ.
◆ ಸಾಮಾನ್ಯವಾಗಿ ಗ್ರಹಿಸುವ ಎರಡು ಕಾರಣಗಳೆಂದರೆ:
>> ಸೊಂಟದ ಮೂಳೆಗೆ ಅಥವಾ ಡಿಸ್ಕ್ ಗೆ ಪೆಟ್ಟುಬಿದ್ದಿರಬಹುದು
ಅಥವಾ
>> ಮಾಂಸಖಂಡಗಳು ಹಿಡಿದುಬಿಟ್ಟಿರಬಹುದು
ಈ ಎರೆಡೂ ಸಂದರ್ಭಗಳನ್ನು ತುಲನೆಮಾಡಿದಲ್ಲಿ ಮಾಂಸಖಂಡಗಳ ಸೆಳೆತವೇ ಪ್ರಧಾನ ಕಾರಣವಾಗಿರುತ್ತದೆ. ಹೀಗೆ ಉಂಟಾದ ಸೆಳೆತವು ಮನುಷ್ಯನನ್ನು ಹಾಸಿಗೆಯಿಂದ ಅಲುಗಾಡಿಸಲೂ ಬಿಡುವುದಿಲ್ಲ. ಮೂರರಿಂದ ಏಳು ದಿನಗಳವರೆಗೆ ಚೆನ್ನಾಗಿ ಕಾಡುತ್ತದೆ.
ಒಂದೆರಡು ರೂಪಾಯಿಗಳ ಸಣ್ಣ ಚಿಕಿತ್ಸೆಯಿಂದ ಹಿಡಿದು MRI Scan ಮಾಡಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದವರ ಬಹುದೊಡ್ಡ ಪಟ್ಟಿ ಸಿಗುತ್ತದೆ.
ಈ ಅವಸ್ಥೆಯಲ್ಲಿ MRI scan ಮಾಡಿಸುವ ಪ್ರಕ್ರಿಯೆಯನ್ನು ಕನಿಷ್ಠ ಒಂದು ವಾರಕ್ಕೆ ಮುಂದೂಡಿ. ರೆಷ್ಟ್ ಮಾಡಿ ಅಷ್ಟು ಸಮಯಕ್ಕಾಗಲೇ ಸೊಂಟದ ಸೆಳೆತ ಶೇಕಡಾ 90 ಕ್ಕಿಂತ ಹೆಚ್ಚು ನಿವೃತ್ತಿಯಾಗಿರುತ್ತದೆ.
🔺 ವಿಶೇಷ ಗಮನ:
ಆರೋಗ್ಯವಂತರೂ ಸಹ ಸುಮ್ಮನೆ ಪರೀಕ್ಷೆಗೆಂದು Lumbar spine MRI (ಸೊಂಟದ MRI) ಮಾಡಿಸಿದರೆ ರಿಪೋರ್ಟ್ ನಲ್ಲಿ ಕನಿಷ್ಠ ಎರಡು ತೊಂದರೆಗಳಾದರೂ ಕಾಣಸಿಗುತ್ತವೆ. ಅದನ್ನು ನಂಬಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಜೀವಮಾನವಿಡೀ ಸೊಂಟದ ಅಶಕ್ತತೆಯನ್ನು ಉಳಿಸಿಕೊಂಡಿರುವುದನ್ನು ಕಂಡಿದ್ದೇವೆ.
◆ ತಡೆಯುವುದು ಹೇಗೆ?
ವಾಸ್ತವದಲ್ಲಿ ತಕ್ಷಣವೇ ಸೊಂಟ ಹಿಡಿದುಕೊಳ್ಳಲು ಕಾರಣವನ್ನು ಕಂಡುಕೊಂಡರೆ ಇದು ಆಗದಂತೆ ನೋಡಿಕೊಳ್ಳಬಹುದು.
ಸೊಂಟ ಹಿಡಿದುಕೊಳ್ಳುವ ಮೂರ್ನಾಲ್ಕು ದಿನಗಳಿಂದ ಉದರದಲ್ಲಿ ಗ್ಯಾಸ್ ತುಂಬಿಕೊಂಡಿರುವ ಸಾಧ್ಯತೆ ಶೇಕಡಾ 90ಕ್ಕಿಂತಲೂ ಹೆಚ್ಚು.
"ಇಂತಹ ಸಂದರ್ಭದಲ್ಲಿ ತೂಕಎತ್ತುವ, ತುಂಬಾ ಸಮಯ ಬಗ್ಗಿ ಕೆಲಸಮಾಡುವ, ಸೊಂಟವನ್ನು ತಿರುಗಿಸಿ ಯಾವುದೇ ಸಣ್ಣ ಕೆಲಸವನ್ನು ಮಾಡುವ..... ಮುಂತಾದ ಕ್ರಿಯೆಗಳಿಂದ ದೂರವಿರುವುದೇ ಸರಳ ಪರಿಹಾರ."
ಹೀಗೆ ಗ್ಯಾಸ್ ಆದಾಗ ರಾತ್ರಿ ಮಲಗುವ ಮುನ್ನ ಅರ್ಧ ಚಮಚ ಹರಳೆಣ್ಣೆಯನ್ನು ಬಿಸಿಹಾಲಿಗೆ ಅಥವಾ ಬಿಸಿನೀರಿಗೆ ಕದಡಿ ಕುಡಿದರೆ ಒಂದೇ ದಿನದಲ್ಲಿ ಗ್ಯಾಸ್ ಪರಿಹಾರವಾಗಿ ಸೊಂಟದ ಬಿಗಿಹಿಡಿತ ನಿವಾರಣೆಯಾಗುತ್ತದೆ.
ಹಾಗೆಯೇ, ಇಡೀ ಬೆನ್ನಿಗೆ ಯಾವುದೇ ತೈಲವನ್ನು ಬಿಸಿಮಾಡಿ ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಿದರೆ ಉತ್ತಮ.
ಆತ್ಮೀಯರೇ,
ಕೇವಲ ಈ ಲೇಖನ ಓದಿದರೆ ಉಪಯೋಗವಿಲ್ಲ, ಸಾಂದರ್ಭಿಕವಾಗಿ ಅಳವಡಿಸಿಕೊಳ್ಳಿ ಖಂಡಿತಾ ಪರಿಹಾರ ಸಾಧ್ಯ.
*********
No comments:
Post a Comment