Following is from internet sources and from WhatsApp
Srinivasa Kalyana
ಶ್ರೀನಿವಾಸ ಕಲ್ಯಾಣ
ವೈಶಾಖ ಮಾಸ ಶುಕ್ಲ ಪಕ್ಷ ಪ್ರತಿಪದಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣ ಕೇಳುವ, ಹೇಳುವ ವಾಡಿಕೆಯಿದೆ. ಇದೇ ಸಂದರ್ಭದಲ್ಲಿ ಜಗಜ್ಜನ್ಮಾದಿಕಾರಣನಾದ ಶ್ರೀನಿವಾಸ ಮತ್ತು ಪದ್ಮಾವತಿ - ಶ್ರೀನಿವಾಸ ಕಲ್ಯಾಣ ನಡೆದಿದ್ದು.
ಆನಂದತೀರ್ಥ ವರದೇ ದಾನವಾರಣ್ಯ ಪಾವಕೇ |
ಜ್ಞಾನದಾಯಿನಿ ಸರ್ವೇಶೇ ಶ್ರಿನಿವಾಸೇಸ್ತು ಮೇ ಮನಃ |
ಶ್ರೀ ವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಂ ಅಭೀಷ್ಟದಂ |
ಚತುರ್ಮುಖೇರ ತನಯಂ ಶ್ರೀನಿವಾಸಂ ಭಜೇ ನಿಶಂ |
आनंदतीर्थ वरदे दानवारण्य पावके ।
ज्ञानदायिनि सर्वेशे श्रिनिवासेस्तु मे मनः ।
श्री वॆंकटेशं लक्ष्मीशं अनिष्टघ्नं अभीष्टदं ।
चतुर्मुखेर तनयं श्रीनिवासं भजे निशं ।
Srinivasa Kalyana is available in Bhavishyottara purana and Skanda Puranam, Aditya Purana, etc., all written by Sri Vedavyasa Devaru.
ಶ್ರೀನಿವಾಸ ಕಲ್ಯಾಣ ಕಥೆಯು ಭವಿಷ್ಯೋತ್ತರ ಪುರಾಣ, ಸ್ಕಂಧ ಪುರಾಣ, ಆದಿತ್ಯ ಪುರಾಣಗಳಲ್ಲಿ ಲಭ್ಯವಿದೆ. ಶ್ರೀನಿವಾಸ ಕಲ್ಯಾಣ ವನ್ನು ಪ್ರತಿವರ್ಷ ಎರಡು ಸಾರಿ ನಡೆಸುವ ಸಂಪ್ರದಾಯವಿದೆ – ವೈಶಾಖ ಶುದ್ಧ ದಶಮಿ ಮತ್ತು ಆಶ್ವೀಜ ಶುದ್ಧ ದಶಮಿ. ವೈಶಾಖ ಶುದ್ಧ ದಶಮಿ ಶ್ರೀನಿವಾಸ ಪದ್ಮಾವತಿಯನ್ನು ವಿವಾಹವಾದ ದಿನವಾದರೆ, ಆಶ್ವಯುಜ ಶುದ್ಧ ದಶಮಿ ತಿರುಪತಿಯಲ್ಲಿ ಬ್ರಹ್ಮೋತ್ಸವದ ದಿನ. ಶ್ರೀನಿವಾಸ ವೈಶಾಖದಲ್ಲಿ ಕಲ್ಯಾಣದ ನಂತರ ಆರು ತಿಂಗಳು ಬೆಟ್ಟ ವನ್ನು ಏರಬಾರದು ಎಂದು ಮಂಗಾಪುರದಲ್ಲಿ ಅಗಸ್ತ್ಯಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದನು. ನಂತರ ಆಶ್ವಯುಜ ಮಾಸದಲ್ಲಿ ಹತ್ತು ದಿನಗಳ ಕಾಲ ಶ್ರೀನಿವಾಸನು ಪದ್ಮಾವತಿಯೊಂದಿಗೆ ತಿರುಮಲಕ್ಕೆ ವಿಶ್ವಕರ್ಮನಿಂದ ಮಾಡಲ್ಪಟ್ಟ ವಿಶೇಷ ರಥದಲ್ಲಿ ಪ್ರಯಾಣಿಸಿದನು. ಅದರ ನಿಮಿತ್ತ ಹತ್ತು ದಿನಗಳ ಕಾಲ ತಿರುಪತಿಯಲ್ಲಿ ಬ್ರಹ್ಮೋತ್ಸವ ವನ್ನು ನಡೆಸುವ ವಾಡಿಕೆಯಿದೆ.
Why Srinivasa Kalyana is being observed twice, once in Vaishaka Shudda Dashami and once in Ashwayuja Shudda Dashami?
Vaishaka Shudda Dashami is the day on which the Kalyanotsava of Srinivasa – Padmavathi was held. Ashwayuja Shudda Dashami is the Brahmotsava day. After kalyana with Padmavathi Srinivasa stayed in Mangapura @ Agastyashrama for 6 months, loka shikshanaartham that the new wedded couple must not climb hill after the marriage for six months. Ofcourse Srinivasa – Padmavathi does not have any such formalities, it is just for the shikshana of the public that he has done. After six months, Srinivasa sat in the Chariot made by Vishwakarma, for the ten days Brahma did the procession. That is why even today Brahmotsava is being observed. We call this period as Brahmotsava period, as Brahma himself does the Utsava for Srinivasa during the period. That is why Srinivasa Kalyanotsava is being observed in both the periods once in Vaishaka Maasa and once in Ashwayuja Maasa.
SRINIVASA KALYANA – PRATHAMA ADHYAYA
ಬ್ರಹ್ಮರುದ್ರಾದಿವಂದ್ಯಂ ತ್ವಾಂ ಭಜೇ ವೇಂಕಟನಾಯಕಂ|
ನಿವಾರಯಸ್ವಾನಿಷ್ಠಾನಿ ಸಾಧಯೇಷ್ಠಾನಿ ಮಾಧವ |
ब्रह्मरुद्रादिवंद्यं त्वां भजे वेंकटनायकं ।
निवारयस्वानिष्ठानि साधयेष्ठानि माधव ।
ಶೌನಕ ಸೂತಾಚಾರ್ಯರ ಸಂಭಾಷಣೆಯ ಮೂಲಕ ಶ್ರೀನಿವಾಸಕಲ್ಯಾಣದ ಕಥೆಯನ್ನು ಶ್ರೀ ವೇದವ್ಯಾಸರು ರಚಿಸಿದ್ದಾರೆ. ಶೌನಕರು ಶ್ರೀನಿವಾಸನ ಮಹಿಮೆ ಕೇಳಲು ಅಪೇಕ್ಷೆಯನ್ನು ಸೂತಾಚಾರ್ಯರಲ್ಲಿ ಭಿನ್ನವಿಸಲು, ಅವರು ತಾವು ವೇದವ್ಯಾಸರಿಂದ ಕೇಳಲ್ಪಟ್ಟ ಕಥಾಭಾಗವನ್ನು ಹೇಳಿದರು.
It is a conversation between Shounaka and Sootacharya. Sage Shounaka asked Sage Soothacharya to tell about Srinivasa’s mahime. Then Soothacharya told him that he will tell what he had heard from Sri Vedavyasa devaru.
Once there lived a king by name Seeradwaja (Janakaraja), who was a very good administrator, sarvashastra pandita, without anger, without ahankara. He had a brother by name “Kushadwaja”. Janaka Maharaja had a daughter in the form Saakshat Lakshmidevi by name Janaki. One day his brother Kushadwaja died and his wife followed him. Even after 80000 years also he had never faced any sorrow. Now, he is facing sorrow with the death of brother. At this time Shatananda Muni came near Janakaraja. Then Janakaraja told the Muni that now he is very aged, and he has unmarried children. Ravana, Kumbakarna are trying to kidnap his children. He is full of sorrow (Dukha) about three main things, i.e.,
1. – At this age, how can I fight with Ravana?
2. He is worried about Seethadevi, his daughter as to how to get a suitable groom.
3. As his Brother is also dead, he has to get married all four children (his and his brother’s). He has to give all the four children to the sons of a single king. He asked him as to how these can be fulfilled.
Shatananda Rushi told it is better to hear the Bhavishyottara purana’s Vikuntaparvata mahime. In Kaliyuga, by hearing this all the sorrows will be removed. By hearing this Brahma got Brahma padavi, Rudra lost the Samudramathana Visha Baadhe, Indra got Swargadhipatya, In this way Shatananda started telling the Janakaraja as to the Venkata parvatha.
Different names in different yugas for Venkatadri parvatha –
In Krutayuga, it was called as Vrushabachala – wherein Vrushabasura was defeated by Srihari.
In Tretayuga, it was called as Anjanachala – wherein Anjana, the mother of Anjaneya did the penance in this hill
In Dwaparayuga, it was called as Sheshachala – Wherein Sheshadevaru, was defeated by Vayudevaru, when Sheshadevaru, because of Asuravesha, told that he is supreme than Vayu.
In Kaliyuga, it was called as Venkatachala – Wherein Srinivasa married Padmavathi.
Vrushabaachala in Krutayuga –
Once there lived a daithya by name Vrushabaasura. He used to give nuisance to penancing Muni and other sages. They approached Srihari to kill him. This Vrushabaasura used to worship Narasimha Saligrama daily by having trikala snaana with full devotion. After the pooja is over he used to offer his own head by cutting from his sword to Nrusimha. But the head used to come back immediately. He did like this for 5000 years. Pundarikaksha Srihari came near him, and this daithya did saastanga namaskara. Srihari asked him to seek some boon. But this daithya asked Srihari to fight with him as a boon.
The fight started between Vrushabasura and Srinivasa. Whatever Srinivasa used to do, this daithya also used to do. This Srihari asked Garuda to come, and he sat on him and removed his head with Sudarshana Chakra. Before his death, Vrushabasura asked Srihari to keep his name for the hill where he stayed so long. So, in Krutayuga this Venkatachala was called as Vrushabaadri.
Who is this Vrushabhasura ? – In Vrushabasura, there are two jeevas (jeevadwayavesha), one is “Dharma”, who in Vaivaswatha Manvantara did the penance and Mahavaraha blessed him that his name will be used for the hill with Vrushaba. The other is Vrushabasura, a daithya. Only because the jeeva Dharma was there in one jeevavesha, this daithya used to do Saaligrama shilapooja, with trikala snaana. Because he was having Rakshasavista, he used to give nuisance to Rushi, Muni.
***
Following is the
writeup from prasadacharya +91 95358 37843
|ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ| ಸುಲಭ ದೇವರ ದೇವ ವಿಜಯವಿಠಲ ವೆಂಕಟ||
✍️ಜಗತ್ತಿನೊಡೆಯನಾದ ಶ್ರೀನಿವಾಸ ದೇವರ ಕಲ್ಯಾಣವನ್ನು ಪ್ರತಿವರ್ಷ ಎರಡು ಬಾರಿ ನಡೆಸಲಾಗುವುದು.
ವೈಶಾಖ ಶುದ್ಧ ದಶಮಿಯಂದು ಶ್ರೀಶ್ರೀನಿವಾಸ ದೇವರು ಶ್ರೀಪದ್ಮಾವತಿ ದೇವಿಯ ಪಾಣಿಗ್ರಹಣ ಮಾಡಿದ ಪುಣ್ಯ ಕಾಲ.
ಶ್ರೀಪದ್ಮಾವತಿ ದೇವಿಯನ್ನು ಪಾಣಿಗ್ರಹಣ ಮಾಡಿದ ಶ್ರೀನಿವಾಸ ದೇವರು ತಾನು ಸರ್ವತ್ರ ವ್ಯಾಪ್ತನಾಗಿದ್ದರು ಲೋಕ ಶಿಕ್ಷಣ ಕ್ಕಾಗಿ ಅಗಸ್ತ್ಯ ಮಹರ್ಷಿಗಳ
ಆಶ್ರಮದಲ್ಲಿ ಆರು ತಿಂಗಳುಗಳ ಕಾಲ ತಂಗಿ,ಅವರಿಗೆ ಅನುಗ್ರಹಿಸಿದ..,
ಆರು ತಿಂಗಳ ನಂತರ ಪರ್ವತ ಏರಿ ಬಂದ ಆದಿದಂಪತಿಗಳಿಗೆ ದೇವಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿಸಿದ ರಥದಲ್ಲಿ ಕುಳ್ಳಿರಿಸಿಕೊಂಡು ಶ್ರೀಬ್ರಹ್ಮ ದೇವರು ಹತ್ತು ದಿನಗಳ ಕಾಲ ಮೆರವಣಿಗೆ ಯನ್ನು ಮಾಡಿದರು.
ಆಶ್ವೀಜ ಶುದ್ಧ ದಶಮಿಯಂದು ಬ್ರಹ್ಮೋತ್ಸವ.
ಸಾಧ್ಯ ವಾದರೆ ಇವೆರಡು ಮಾಸದಲ್ಲಿ ಅಂದರೆ ವೈಶಾಖ ಮತ್ತು ಆಶ್ವೀಜ ಮಾಸದಲ್ಲಿ ವೆಂಕಟಪರ್ವತಕ್ಕೆ ಹೋಗಿ ಆ ಪರಬ್ರಹ್ಮ ನಾದ ಶ್ರೀನಿವಾಸದೇವರ ದರ್ಶನ ಮಾಡಬೇಕು.
ಕಲಿಯುಗದಲ್ಲಿ ಈ ಮಂಗಳಮಯ ಹಾಗು ಪುಣ್ಯಕರವಾದ ಈತನ ಚರಿತ್ರೆಯನ್ನು ಭಕ್ತಿ ಶ್ರದ್ಧೆ ಇಂದ ಕೇಳಿದರೆ,ಹೇಳಿದರೆ,ಓದಿದರೆ ಎಲ್ಲಾ ದುಃಖ ಗಳು ಪರಿಹಾರವಾಗುವವು...
ಲೌಕಿಕದ ಎಲ್ಲಾ ಅಪೇಕ್ಷೆ ಗಳನ್ನು ಸ್ವಾಮಿ ನೆರವೇರಿಸುವ.
ಬೆಟ್ಟ ಕ್ಕೆ,ಹೋಗಲು ಸಾಧ್ಯ ವಾಗದೇ ಇದ್ದರೆ ಈ ಹತ್ತು ದಿನಗಳ ಕಾಲ ಮೇಲೆ ಹೇಳಿದ ವೈಶಾಖ ಹಾಗು ಆಶ್ವೀಜ ಮಾಸಗಳಲ್ಲಿ ಶ್ರೀನಿವಾಸ ಪದ್ಮಾವತಿ ಯರ ಕಲ್ಯಾಣ ಕತೆಯನ್ನು ಕೇಳಬೇಕು.ನಿತ್ಯದಂತೆ ಶ್ರೀ ಮದ್ ಭಾಗವತದ ಜೊತೆಗೆ ಶ್ರೀನಿವಾಸ ಕಲ್ಯಾಣವನ್ನು ಬರೆಯಬೇಕು ಎನ್ನುವ ಸಂಕಲ್ಪ.
***
ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ| ಸುಲಭ ದೇವರ ದೇವ ವಿಜಯವಿಠಲ ವೆಂಕಟ||
✍️ಜಗತ್ತಿನೊಡೆಯನಾದ ಶ್ರೀನಿವಾಸ ದೇವರ ಕಲ್ಯಾಣವನ್ನು ಪ್ರತಿವರ್ಷ ಎರಡು ಬಾರಿ ನಡೆಸಲಾಗುವುದು.
ವೈಶಾಖ ಶುದ್ಧ ದಶಮಿಯಂದು ಶ್ರೀಶ್ರೀನಿವಾಸ ದೇವರು ಶ್ರೀಪದ್ಮಾವತಿ ದೇವಿಯ ಪಾಣಿಗ್ರಹಣ ಮಾಡಿದ ಪುಣ್ಯ ಕಾಲ.
ಶ್ರೀಪದ್ಮಾವತಿ ದೇವಿಯನ್ನು ಪಾಣಿಗ್ರಹಣ ಮಾಡಿದ ಶ್ರೀನಿವಾಸ ದೇವರು ತಾನು ಸರ್ವತ್ರ ವ್ಯಾಪ್ತನಾಗಿದ್ದರು ಲೋಕ ಶಿಕ್ಷಣ ಕ್ಕಾಗಿ ಅಗಸ್ತ್ಯ ಮಹರ್ಷಿಗಳ
ಆಶ್ರಮದಲ್ಲಿ ಆರು ತಿಂಗಳುಗಳ ಕಾಲ ತಂಗಿ,ಅವರಿಗೆ ಅನುಗ್ರಹಿಸಿ,
ವಿವಾಹವಾದ ಹೊಸ ದಂಪತಿಗಳಿಗೆ ಪರ್ವತಾರೋಹಣ ನಿಷಿದ್ಧ ಎಂಬ ನೀತಿ ತಿಳಿಸಿಕೊಟ್ಟ.
ಆರು ತಿಂಗಳ ನಂತರ ಪರ್ವತ ಏರಿ ಬಂದ ದಂಪತಿಗಳಿಗೆ ದೇವಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿಸಿದ ರಥದಲ್ಲಿ ಕುಳ್ಳಿರಿಸಿಕೊಂಡು ಶ್ರೀಬ್ರಹ್ಮ ದೇವರು ಹತ್ತು ದಿನಗಳ ಕಾಲ ಮೆರವಣಿಗೆ ಯನ್ನು ಮಾಡಿದರು.
ಆಶ್ವೀಜ ಶುದ್ಧ ದಶಮಿಯಂದು ಬ್ರಹ್ಮೋತ್ಸವ.
ಸಾಧ್ಯ ವಾದರೆ ಇವೆರಡು ಮಾಸದಲ್ಲಿ ಅಂದರೆ ವೈಶಾಖ ಮತ್ತು ಆಶ್ವೀಜ ಮಾಸದಲ್ಲಿ ವೆಂಕಟಪರ್ವತಕ್ಕೆ ಹೋಗಿ ಆ ಪರಬ್ರಹ್ಮ ನಾದ ಶ್ರೀನಿವಾಸದೇವರ ದರ್ಶನ ಮಾಡಬೇಕು.
ಕಲಿಯುಗದಲ್ಲಿ ಈ ಮಂಗಳಮಯ ಹಾಗು ಪುಣ್ಯಕರವಾದ ಈತನ ಚರಿತ್ರೆಯನ್ನು ಭಕ್ತಿ ಶ್ರದ್ಧೆ ಇಂದ ಕೇಳಿದರೆ,ಹೇಳಿದರೆ,ಓದಿದರೆ ಎಲ್ಲಾ ದುಃಖ ಗಳು ಪರಿಹಾರವಾಗುವವು...
ಲೌಕಿಕದ ಎಲ್ಲಾ ಅಪೇಕ್ಷೆ ಗಳನ್ನು ಸ್ವಾಮಿ ನೆರವೇರಿಸುವ.
ಬೆಟ್ಟ ಕ್ಕೆ,ಹೋಗಲು ಸಾಧ್ಯ ವಾಗದೇ ಇದ್ದರೆ ಈ ಹತ್ತು ದಿನಗಳ ಕಾಲ ಮೇಲೆ ಹೇಳಿದ ವೈಶಾಖ ಹಾಗು ಆಶ್ವೀಜ ಮಾಸಗಳಲ್ಲಿ ಶ್ರೀನಿವಾಸ ಪದ್ಮಾವತಿ ಯರ ಕಲ್ಯಾಣ ಕತೆಯನ್ನು ಕೇಳಬೇಕು.
ಇವಿಷ್ಟು ಬಲ್ಲವರಿಂದ ತಿಳಿದು ನನ್ನ ಅಲ್ಪ ಮತಿಗೆ ಬಂದಷ್ಟು ತಿಳಿಸುವ ವಿಷಯ.
🙏🙏🙏🙏
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ|
ನಿನ್ನ ವಿಸ್ಮರಣೆಯ ಕೊಡದಿರು
ಶ್ರೀನಿವಾಸ ದಯಾನಿಧೆ|
🙏ಹರೇ ಶ್ರೀನಿವಾಸ🙏
ನಾಳೆ ಇಂದ ನಿತ್ಯದಂತೆಶ್ರೀ ಮದ್ ಭಾಗವತದ ಜೊತೆಗೆ ಶ್ರೀನಿವಾಸ ಕಲ್ಯಾಣವನ್ನು ಬರೆದು ಹಾಕುವ ಅಂತ ಸಂಕಲ್ಪ ಮಾಡಿದ್ದೇನೆ.
ನಿರ್ವಿಘ್ನವಾಗಿ ಈ ಕಾರ್ಯ ನಡೆದು ಸ್ವಾಮಿ ಪ್ರೀತಿಯಾಗಲಿ. ಎಂದು ತಾವು ತುಂಬು ಮನಸ್ಸಿನಿಂದ ಹಾರೈಯಿಸಿ ಆಶೀರ್ವಾದ ಮಾಡಬೇಕೆಂದು ತಮ್ಮ ಬಳಿ ಸವಿನಯ ಪೂರ್ವಕ ಪ್ರಾರ್ಥನೆ.
🙏🙏🙏🙇♂🙇♂👏👏
ವೆಂಕಟೇಶನೆ ನಮೊ| ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙇♂day 1
ಶ್ರೀನಿವಾಸನು ಸಕಲ ಸನ್ಮಂಗಳಪ್ರದನಾದ ಸರ್ವೋತ್ತಮನಾದ ದೇವರು...
ಸಕಲ ಪುರಾಣಾದಿಗಳು ಆ ಶ್ರೀನಿವಾಸನೇ ಜಗಜನ್ಮಾದಿಕಾರಣನಾದ ಸಕಲ ಗುಣಪೂರ್ಣನಾದ,ದೋಷವಿದೂರನಾದ,ಸರ್ವ ಸ್ವತಂತ್ರ ನಾದ,ರಮಾ ಬ್ರಹ್ಮ ರುದ್ರ, ಇಂದ್ರಾದಿ,ದೇವತೆಗಳಿಂದ,ಋಷಿ ಮುನಿಗಳಿಂದ,ಅವನ ದಾಸರಿಂದ ಸದಾ ಪೂಜೆಗೊಂಬುವ,ಚತುರ್ವಿಧ ಪುರುಷಾರ್ಥ ಪ್ರದನಾದ ,ಆ ವೆಂಕಟೇಶ ನನ್ನು ಅವನ ಮಹಾತ್ಮೆಯನ್ನು ತಿಳಿದು ಜ್ಞಾನ ಪೂರ್ವಕವಾಗಿ ಅವನನ್ನು ಆರಾಧಿಸುವದರಿಂದ ಸುಪ್ರಸನ್ನನಾದ ಶ್ರೀ ಹರಿಯು ಸಮಸ್ತ ಕಾಮನೆಗಳನ್ನು,ಸನ್ಮಂಗಳವನ್ನು ಇತ್ತು ಕರುಣಿಸಿ ಕಾಪಾಡುವವ ಅಂತ ಸಾರುತ್ತಿವೆ..
ಅಶ್ವಯುಜ ಮಾಸದ ಪ್ರಾರಂಭದ ಈ ಶುಭದಿನದಲ್ಲಿ ಮಹಾಮಹಿಮನಾದ ಪದ್ಮಾವತಿಯ ಪತಿಯ ಕಲ್ಯಾಣ ಮಹೋತ್ಸವ ವನ್ನು(ವೈಶಾಖ ಶುದ್ದ ದಶಮಿ ಸ್ವಾಮಿ ಕಲ್ಯಾಣವಾದ ದಿನ.)
ತನ್ನ ಮದುವೆಗೆ ತಾನೇ ದಿನವನ್ನು ನಿಶ್ಚಿತ ಮಾಡಿಕೊಂಡ,ಮತ್ತು ಅದರ ಹಿನ್ನೆಲೆ ನಿರೂಪಿಸುವ ಭವಿಷ್ಯೊತ್ತರ ಪುರಾಣಾಂತರ್ಗತವಾದ ವೆಂಕಟೇಶ ಮಹಾತ್ಮೆ ಯನ್ನು ತಿಳಿಸುವ ಪುಟ್ಟ ಪ್ರಯತ್ನ.
✍ಪುಣ್ಯ ಭೂಮಿಯಾದ ಭರತವರ್ಷದಲ್ಲಿ ಮನುಕುಲದ ಉದ್ದಾರ ಕ್ಕಾಗಿ ಪರಮ ಕೃಪಾಳುಗಳಾದ ಭಗವಾನ್ ಶ್ರೀ ವೇದವ್ಯಾಸ ದೇವರು ಅನೇಕ ಪುರಾಣಗಳನ್ನು ರಚಿಸಿ ಮಹೋದುಪಕಾರ ಮಾಡಿದ್ದಾರೆ. ಅದರಲ್ಲಿ ಭವಿಷ್ಯೊತ್ತರಪುರಾಣದಲ್ಲಿ ಶ್ರೀ ವೆಂಕಟೇಶ ಮಹಾತ್ಮೆ ಯನ್ನು ಹೇಳಿದ್ದಾರೆ.
ಒಮ್ಮೆ ಶೌನಕರು ಸೂತ ಮುನಿಗಳ ಬಳಿ ಬಂದು
ಹಿಂದೆ ನಿಮ್ಮಿಂದ ಅನೇಕ ಭಗವಂತನ ಮಹಿಮೆಯನ್ನು ಸಾರುವ ವಿಷಯಗಳನ್ನು ತಿಳಿದು ಸುಕೃತಿಗಳಾಗಿದ್ದೇವೆ..
ಇವಾಗ ವೆಂಕಟಾಚಲಪತಿಯಾದ ಶ್ರೀ ಹರಿಯ ಮಹಿಮೆಯನ್ನು ಕೇಳಲು ಆಶಿಸಿದ್ದೇವೆ.ಅದನ್ನು ತಿಳಿಸಬೇಕು ಎಂದು ಕೇಳಲು,
ಅವಾಗ ಸೂತರು ಹೇಳುತ್ತಾರೆ.
ಮುನಿವರ್ಯರೆ!! ಬಹಳ ಆನಂದದಾಯಕವಾದ ಪ್ರಶ್ನೆ ಯನ್ನು ಕೇಳಿದ್ದೀರಿ.
ಶ್ರೀ ವೇದವ್ಯಾಸ ದೇವರು ನನಗೆ ಉಪದೇಶ ಮಾಡಿದ ಕ್ರಮದಲ್ಲಿ ನಿಮಗೆ ಹೇಳುತ್ತೇನೆ ಕೇಳಿ.
ಪೂರ್ವದಲ್ಲಿ ಧರ್ಮಿಷ್ಟನಾದ ಜನಕ ರಾಜನು ಧರ್ಮದಿಂದ ರಾಜ್ಯಭಾರ ಮಾಡುತ್ತಾ
ಇದ್ದನು. ಅವನಿಗೆ ಕುಶಕೇತುವೆಂಬ ತಮ್ಮ ಇದ್ದನು.ಅವನಪತ್ನಿ ಬಹು ಪತಿವ್ರತೆಯು.ಆ ದಂಪತಿಗಳಿಗೆ ಮೂರು ಜನ ಪುತ್ರಿ ಯರು.ಜನಕರಾಜನಿಗೆ ಜಾನಕಿ ಎಂಬ ನಾಮದಿಂದ ಕರೆಯಲ್ಪಡುವ ಜಗನ್ಮಾತೆ ಪುತ್ರಿಯಾಗಿದ್ದಾಳೆ.
ಹೀಗೆ ಜನಕರಾಜನು ಪತ್ನಿ ಪುತ್ರಿ ಮತ್ತು ಸಹೋದರನ ಜೊತೆಯಲ್ಲಿ ಆನಂದವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು.
ಒಂದು ದಿನ ಜನಕರಾಜನ ಮನಸ್ಸಿನಲ್ಲಿ ನಾನು ಎಂಭತ್ತು ಸಹಸ್ರ ವರ್ಷ ನನ್ನ ಎರಡು ಕಣ್ಣುಗಳು ಸರ್ವದಾ ಸುಖವನ್ನು ನೋಡಿವೆ.ದುಃಖ ವನ್ನು ಒಂದು ಕಣ್ಣು ಸಹ ನೋಡಿಲ್ಲ.ಮುಂದೆಯೂ ಸಹ ಹೀಗೆ ಸುಖವಾಗಿಯೇ ಇರಬೇಕು.. ದುಃಖ ಗಳನ್ನು ಕಣ್ಣಿನಿಂದ ನೋಡಬಾರದು ಎಂದು ಅಪೇಕ್ಷೆ ಪಟ್ಟನು..
ಅವನ ಅಪೇಕ್ಷೆ ಪಟ್ಟಿದ್ದು ಶಾಸ್ತ್ರ ಸಮ್ಮತವಲ್ಲ ವಾದುದರಿಂದ ಭಗವಂತನು ಅವನಿಗೆ ದುಃಖ ಪ್ರದರ್ಶನ ಮಾಡಿದನು.
ರಾಜ್ಯ ಮದ ಮತ್ತನಾಗಿ ಸಾಧುವಾದ ಜನಕರಾಜನ ಬಾಯಲ್ಲಿ ಅಸಾಧುವಾದ ಮಾತುಗಳನ್ನು ಕೇಳಿ ಶ್ರೀ ಹರಿಯು ಅವನಿಗೆ ಸ್ವಲ್ಪ ದುಃಖವನ್ನು ತೋರಿಸಿದನು.
ಜನಕರಾಜನ ತಮ್ಮ ಕುಶಕೇತು ಮರಣ ಹೊಂದಿದ. ಅವನ ಪತ್ನಿ ಸಹ ಅವನ ಜೊತೆಗೆ ಸಹಗಮನ ಮಾಡಿದಳು.
ಅನಾಥರಾದ ಮಕ್ಕಳನ್ನು ಕಂಡು ಕಡು ದುಃಖಿತನಾದ ಜನಕರಾಜನು ಅನ್ನಾಹಾರಗಳನ್ನು ತ್ಯಜಿಸಿ ದನು.
ಆಗ ದೈವಯೋಗದಿಂದ ಕುಲಪುರೋಹಿತರು,
ವಾಮದೇವ ಮುನಿಗಳ ಸಹೋದರರು ಆದ ಶತಾನಂದರು ಮಿಥಿಲೆಗೆ ಬಂದರು.ಅರ್ಘ್ಯ ಪಾದಾದಿಗಳಿಂದ ಅವರನ್ನು ಪೂಜಿಸಿ ಸತ್ಕರಿಸಿ ತನಗೆ ಪ್ರಾಪ್ತ ವಾದ ದುಃಖ ವನ್ನು ಅವರ ಬಳಿ ಹೇಳಿಕೊಂಡನು.
ನಾನು ಮುದುಕನಾಗಿದ್ದೆನೆ.ಮಕ್ಕಳು ಚಿಕ್ಕವರಿದ್ದಾರೆ.ನನ್ನ ಮಕ್ಕಳನ್ನು ವಿವಾಹವಾಗಲು ಹಲವಾರು ರಾಜರು ಹೊಂಚು ಹಾಕುತ್ತಾಇದ್ದಾರೆ.ರಾವಣನು ಸಹ ಅದಕ್ಕೆ ಪ್ರಯತ್ನ ಮಾಡುತ್ತಾ ಇದ್ದಾನೆ.
ಇದು ಮೊದಲನೆಯ ದುಃಖ.
ಎರಡನೆಯ ದುಃಖ ನನ್ನ ಮಗಳಾದ ಸೀತಾದೇವಿಯು ಅಪ್ರತಿಮ ಸುಂದರಿ.ಅವಳಿಗೆ ಅತೀ ಸುಂದರನಾದ ವರ ಸಿಗಬೇಕು. ಇದು ಹೇಗೆ ಸಾಧ್ಯ ಎಂದು ಯೋಚನೆ ಯಾಗಿದೆ.
ಇನ್ನೂ ಮೂರನೆಯ ದುಃಖ
ನನ್ನ ಈ ನಾಲ್ಕು ಜನ ಹೆಣ್ಣು ಮಕ್ಕಳು ಒಂದೇ ದೇಶದ ಅರಸನಿಗೆ ಸೊಸೆಯಾಗಬೇಕು.ನನಗೆ ಬರುವ ಅಳಿಯಂದಿರು ಸಹ ಒಬ್ಬ ಅರಸನ ಮಕ್ಕಳಾಗಿರಬೇಕು.ಭಗವಂತನ ಭಕ್ತರಾದವರೇ ನನ್ನ ಮಕ್ಕಳ ಕೈ ಹಿಡಿಯಬೇಕು.ಮುಂದೆ ಅವರಿಂದ ನನಗೆ ಹಿತ ಉಂಟಾಗಬೇಕು.
ಇವೆಲ್ಲವೂ ಯಾವುದರಿಂದ ಆಗುತ್ತದೆ ತಿಳಿಸಿ ಎಂದು ಕೇಳಿದಾಗ
ಆವಾಗ ಶತಾನಂದರು ಹೇಳುತ್ತಾರೆ..
ರಾಜನ್ !ಕಲಿಯುಗದಲ್ಲಿ ವೆಂಕಟಗಿರಿ ಮಹಾತ್ಮೆ ಯನ್ನು ಶ್ರವಣ ಮಾಡುವದರಿಂದ ಸರ್ವಪಾಪವು,ಸರ್ವ ದುಃಖವು ಪರಿಹಾರವಾಗುವದು..
ಯಾವ ಭಗವಂತನ ಚರಿತ್ರೆ ಯನ್ನು ಕೇಳಿ ಸಕಲ ದೇವತೆಗಳು ತಮ್ಮ ತಮ್ಮ ಪದವಿಯನ್ನು ಹೊಂದಿದರೋ
ಅಂತಹ ಆ ವೈಕುಂಠ ಗಿರಿಯ ಚರಿತ್ರೆ ನಿನಗೆ ಹೇಳುವೆನು
ಸಂತಾನ, ಸಂಪತ್ತು,ರೋಗಭಯ,ಜ್ಞಾನ ಸಿದ್ದಿ,ಸಕಲರಿಗು ಮಂಗಳವನ್ನು ಉಂಟುಮಾಡುವ ಬೆಟ್ಟದೊಡೆಯನ ಚರಿತ್ರೆ ಯನ್ನು ನಿನಗೆ ಹೇಳುವೆನು.
ನಿನಗೆ ಶತೃನಾಶ,ಪುತ್ರಿಯರ ವಿವಾಹ, ಸಕಲ ಶ್ರೇಯಸ್ಸು ಗಳು ಅದರ ಶ್ರವಣದಿಂದ ದೊರಕುತ್ತವೆ.
ಈ ಪರ್ವತಕ್ಕೆ ಕೃತಯುಗದಲ್ಲಿ ವೃಷಭಾಚಲವೆಂದು,
ತ್ರೇತಾಯುಗ ದಲ್ಲಿ ಅಂಜನಾಚಲವೆಂದು,
ದ್ವಾಪರದಲ್ಲಿ ಶೇಷಾಚಲವೆಂದು, ಕಲಿಯುಗದಲ್ಲಿ ವೆಂಕಟಾಚಲವೆಂದು ಯುಗಭೇದದಿಂದ ಹೆಸರುಂಟಾಗಿದೆ.ಅಂತ ಹೇಳುತ್ತಾರೆ.
ಆ ಪರ್ವತಕ್ಕೆ ನಾಲ್ಕು ಹೆಸರುಗಳು ಬಂದ ಹಿನ್ನೆಲೆ ನಂತರ ತಿಳಿಯೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಒಂದೊಂದು ಯುಗಗೆ ಒಂದೊಂದು ಪೆಸರು|
ಚಂದವಾಗಿಪ್ಪವು ಪೊಗಳಿದವರಿಗೀಗಾ|
ನಂದವೇ ಕೊಡುತಲಿ ಅತಿಶಯವೆನಿಸಿ ವಸುಂಧರದದೊಳಗೆ ಸುಲಭವಾಗಿದೆ ಕೇಳಿ|
..
ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|
ಕಾಣಿಸಿ ಕೊಂಬನು ಈ ಗಿರಿಯ ಸ್ಮರಿಸಿ ದವರಿಗೆ|
🙏ಹರೇ ಶ್ರೀನಿವಾಸ🙏
*******
🙏🙇♂day 2
2
||ಶ್ರೀನಿವಾಸ ಕಲ್ಯಾಣ ಚರಿತ್ರೆ||day 2
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||.
✍ಹಿಂದಿನ ಸಂಚಿಕೆಯಲ್ಲಿ ಶತಾನಂದರು ಜನಕ ಮಹಾರಾಜನಿಗೆ
ಶ್ರೀ ವೆಂಕಟಗಿರಿಯ ಮಹಾತ್ಮೆ ಶ್ರವಣ ಮಾಡುವದರಿಂದ ಅವನ ದುಃಖ,ಕಷ್ಟ ಪರಿಹಾರವಾಗಿ ಮಂಗಳವಾಗುತ್ತದೆ ಅಂತ ಹೇಳುತ್ತಾರೆ.
ಅದಕ್ಕೆ ಯುಗಭೇದದಿಂದ ನಾಲ್ಕು ಹೆಸರು ಬಂದ ಬಗೆಯನ್ನು ಹೇಳುತ್ತಾರೆ.
ಕೃತಯುಗದಲ್ಲಿವೃಷಭಾಚಲ
ತ್ರೇತಾಯುಗದಲ್ಲಿ ಅಂಜನಾಚಲ,
ದ್ವಾಪರಯುಗದಲ್ಲಿ ಶೇಷಾಚಲ,
ಕಲಿಯುಗದಲ್ಲಿ
ವೆಂಕಟಾಚಲವೆಂದು, ಹೇಳುತ್ತಾರೆ.
ಅದಕ್ಕೆ ಜನಕನು
ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು ಕೇಳಿದಾಗ
ಅದಕ್ಕೆ ಶತಾನಂದರು
ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸ ನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು.
ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ.
ಅವಾಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರಮಾಡುವೆನೆಂದು
ಹೇಳುತ್ತಾನೆ.
ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥ ದಲ್ಲಿ ಸ್ನಾನ ಮಾಡಿ ,ಅವನ ಬಳಿಯಿರುವ ನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ,ಪೂಜೆ ಮುಗಿದ ಮೇಲೆ ,ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀ ಹರಿಗೆ ಸಮರ್ಪಣೆ ಮಾಡುತ್ತಾ ಇದ್ದ.
ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.
ಈ ರೀತಿಯಲ್ಲಿ ೫ ಸಹಸ್ರ ವರ್ಷಗಳ ಕಾಲ ಪೂಜೆ ಯನ್ನು ಮಾಡಿದನು..
ಸರಿಯಾಗಿ ೫ಸಹಸ್ರ ವರ್ಷಗಳಾಗುವ ಸಮಯಕ್ಕೆ ಶ್ರೀ ಹರಿ ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ..
ಭಗವಂತನ ದರ್ಶನ ದಿಂದ ಆನಂದ ತಡೆಯಲಾರದೆ ಮೂರ್ಛೆ ತಾಳುತ್ತಾನೆ.
ನಂತರ ಎಚ್ಚರವಾದ ಮೇಲೆ ಭಗವಂತನ ಬಳಿ ಹೀಗೆಂದು ಕೇಳುತ್ತಾನೆ.
ಹೇ ನಾರಾಯಣ!! ನೀನು ದೋಷ ರಹಿತನು,.
ರಮಾ,ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವನು ಮತ್ತು ಎಲ್ಲರಿಗಿಂತ ಅತ್ಯುತ್ತಮ ನಾದವನು ಆಗಿದ್ದೀಯಾ.
ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆಉಂಟಾಗಿದೆ.ಅದನ್ನು ನಡೆಸಿಕೊಡಲು ಕೇಳುತ್ತಾನೆ.
ಭಗವಂತನು ತಥಾಸ್ತು! ಅಂತ ಹೇಳಿ ಅವನ
ಜೊತೆಯಲ್ಲಿ ಯುದ್ಧ ವನ್ನು ಮಾಡುತ್ತಾನೆ.
ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ.
ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರ ವನ್ನು ಪ್ರಯೋಗ ಮಾಡಲು ಸಿದ್ದನಾಗುತ್ತಾನೆ.
ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ
ಸ್ವಾಮಿ! ನಿನ್ನ ಚಕ್ರದ ಪ್ರಭಾವಕೇಳಿದ್ದೇನೆ.ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ..
ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಅಂತ ಪ್ರಾರ್ಥನೆ ಮಾಡಿದ..
ಅವಾಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರ ದಿಂದ ಅವನನ್ನು ಸಂಹರಿಸಿ,ಮುನಿಗಳ ಕಷ್ಟ ವನ್ನು ಪರಿಹರಿಸಿದನು.. ಹಾಗಾಗಿ ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಅಂತ ಹೆಸರು ಬಂದಿತು. ಅಂತ ಹೇಳುತ್ತಾರೆ.
(೨)ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠ ನಾದ ಕೇಸರಿಯ
ಪತ್ನಿಯಾದ ಅಂಜನಾ ದೇವಿಯು ಪುತ್ರ ಸಂತಾನಕ್ಕಾಗಿ ಮತಂಗ ಮುನಿಗಳ ಆದೇಶದಂತೆ ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥ ಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ ಆಚರಿಸಿ ವಾಯುದೇವರ ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು..
ಹಾಗಾಗಿ ಇದು ಅಂಜನಾದ್ರಿ ಅಂತ ಹೆಸರು ಬಂದಿತು.
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|
ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|
🙏ಶ್ರೀವೆಂಕಟೇಶಾಯ ನಮಃ🙏
|ಶ್ರೀನಿವಾಸ ಕಲ್ಯಾಣ ಚರಿತ್ರೆ||day 2 continued
||ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
||ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍️ಇಂದು ಬೆಳಿಗ್ಗೆ ಪೋಸ್ಟ್ನಲ್ಲಿ ಶ್ರೀ ವೆಂಕಟಗಿರಿಗೆ ಕೃತಯುಗದಲ್ಲಿ ವೃಷಭಾಚಲ ಮತ್ತು ತ್ರೇತಾಯುಗದಲ್ಲಿ ಅಂಜನಾಚಲ ಹೆಸರು ಹೇಗೆ ಬಂದಿದೆ ಅನ್ನುವ ಬಗ್ಗೆ ತಿಳಿದುಕೊಂಡೆವು.
ಮುಂದೆ
ದ್ವಾಪರ ಯುಗದಲ್ಲಿ ಶೇಷಾಚಲ ಎನ್ನುವ ಹೆಸರು ಬಂದ ಬಗ್ಗೆ ಮಾಹಿತಿ.
೩)ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠ ದಲ್ಲಿ ಏಕಾಂತದಲ್ಲಿ ಇದ್ದನು.
ಅಂತಃ ಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು.
ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆ ಯಂತೆ ಕಾಯುತ್ತಿದ್ದರು..
ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ.
ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ ತಡೆಯಬೇಡ!! ಅಂತ ವಾಯುದೇವರು ಹೇಳಿದರು ಸಹ,
ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು ಅಂತ ಹೇಳುತ್ತಾರೆ.
ಅದಕ್ಕೆ ವಾಯುದೇವರು
ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆ ಯನ್ನು ನೆನಪು ಮಾಡಿಕೊಡುತ್ತಾರೆ..
ಆದರು ಸಹ ಶೇಷದೇವನು ಕೋಪದಿಂದ
ಸಕಲ ಜೀವ ನಿಯಾಮಕರಾದ ಮುಖ್ಯ ಪ್ರಾಣದೇವರನ್ನು ನಿಂದಿಸುತ್ತಾ
ಎಲೈ !!ವಾಯುದೇವ !!ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ?ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು??
ಕೇಳು! ನನ್ನ ಶಕ್ತಿ ಸಾಮರ್ಥ್ಯ ದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರು ಇಲ್ಲ .ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು.ಅಂತ
ತನ್ನ ಬಗ್ಗೆ ತಾನೇ ಸ್ವಪ್ರಶಂಶೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ.
ಹೇ ಶೇಷದೇವನೇ! ಅರಮನೆಯಲ್ಲಿ ಇರುವ ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ ಮಾತ್ರಕ್ಕೆ ಪಟ್ಟದ ಆನೆಗೆ ಸಮವಾದೀತೇ??
ಮಹಾರಾಜನ ಸೇವೆಗೆ ಇರುವ ಸೇವಕನು ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ??..
ಅದು ಅವನ ದೊಡ್ಡಸ್ತಿಕೆಯೆ ??
ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??.
ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು ಅಂತ ವಾಯುದೇವರು ಉಪದೇಶ ಮಾಡುತ್ತಾರೆ.
ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು.
ಆವಾಗ ಶ್ರೀಹರಿಯು ಹೊರಗಡೆ ಬಂದು
ಶೇಷ !!ಏಕಿಂತು ಕೂಗಾಡುತ್ತಿರುವೆ!!ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ?? ಎಂದು ಪ್ರಶ್ನಿಸಲು
ಅದಕ್ಕೆ ಶೇಷದೇವನು
ಪ್ರಭು ಮಲಯಾಚಲವಾಸಿಯು, ಬಹು ಗರ್ವಿಷ್ಟನು, ದುರಭಿಮಾನಿಯು,ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ.
ಅದಕ್ಕಾಗಿ ಈ ಕಲಹಎಂದು ಹೇಳುತ್ತಾನೆ..
ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು..
ಭಗವಂತನು ಮುಖ್ಯ ಪ್ರಾಣನನ್ನು ಕಂಡು ಕುಮಾರ!! ಪವಮಾನ!!
ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ??ಎಂದು ಮಧುರವಾಣಿ ಇಂದ ನುಡಿದನು.
ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು.
ಅಹಂಕಾರದಿಂದ ತಾನು ಮಹಾನ್ ಶಕ್ತಿ ಶಾಲಿ.ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ ಎಂದು ಹೇಳುವನು.
ಅದಕ್ಕೆ ಭಗವಂತನು
ಶೇಷ !!ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ..
ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು..
ಆದ್ದರಿಂದ ನಿಮ್ಮಿಬ್ಬರಿಗೂ ಒಂದು ಪರೀಕ್ಷೆ ಇಡುವೆನು..
ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತ ರಾಜಕುಮಾರನಾದ ಆನಂದಾದ್ರಿ ಬೆಟ್ಟ ವಿದೆ.ನೀನು ನಿನ್ನ ದೇಹವೆಂಬ ಹಗ್ಗದಿಂದ ಅದನ್ನು ಬಿಗಿಯಾಗಿ ಸುತ್ತುವರೆದು ಕುಳಿತಿಕೊ.ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ.ಅದರಿಂದ ಯಾರು ಶ್ರೇಷ್ಠ ರು ಅಂತ ತಿಳಿಯುತ್ತದೆ ಅಂತ ಆಜ್ಞೆ ಮಾಡಿದನು.
ಅದರಂತೆ
ಶೇಷದೇವನು ತಾನೇ ಶಕ್ತಿ ಶಾಲಿ.ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು..
ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯ ವನ್ನು ನೋಡಲು ನಿಂತರು.
ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ..
ಏನಾಶ್ಚರ್ಯ!!
ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರ ದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು.
ತನ್ನ ಪುತ್ರ ನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು
ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು ಶೇಷದೇವರ ಸಹಿತವಾಗಿ ನದಿಯ ದಡದ ಮೇಲೆ ಇರಿಸಿದರು..
ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ. ನಿರ್ಣಯ ಮಾಡುತ್ತಾರೆ.
ಶೇಷದೇವರ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು ಹೋಗಿ
ಜಗತ್ಪ್ರಾಣನಾದ,
ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ
ನಾನು ಮಾಡಿದ ನಿಂದಾರೂಪ,ಕಾರ್ಯವನ್ನು ಕ್ಷಮಿಸಿ
ಅಂತ ಪ್ರಾರ್ಥನೆ ಮಾಡುತ್ತಾರೆ.
ವಾಯುದೇವರು ಪರಮಕರುಣಾಳುಗಳು,ಯಾರಲ್ಲಿಯು ದ್ವೇಷವಿಲ್ಲದವರು, ಶೇಷದೇವನ ಅಪರಾಧವನ್ನು ಕ್ಷಮಿಸಿ, ಅನುಗ್ರಹ ಮಾಡಿ
"ಶೇಷದೇವನೇ ! ಇದೆಲ್ಲಾ ಶ್ರೀಹರಿಯ ಇಚ್ಚೆಯ ಪ್ರಕಾರ ನಡೆದಿದೆ.ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು.ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತ ವಾಗುವದು ಅಂತ ಹೇಳಿ" ಅವರನ್ನು ಆನಂದಗೊಳಿಸಿದರು.
ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು.ಎಂದು ಶತಾನಂದರು ಜನಕರಿಗೆ ಹೇಳಿದರು.
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|
ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|
🙏ಶ್ರೀವೆಂಕಟೇಶಾಯ ನಮಃ🙏
**********
||ಶ್ರೀನಿವಾಸ ಕಲ್ಯಾಣ ಚರಿತ್ರೆ||Day 3
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಹಿಂದಿನ ಎರಡು ಸಂಚಿಕೆಗಳಲ್ಲಿ
ಶತಾನಂದರು ಜನಕರಾಜನಿಗೆ ವೆಂಕಟಗಿರಿಯ ಮಹಾತ್ಮೆ ಹೇಳುತ್ತಾ ಆ ಪರ್ವತಕ್ಕೆ ಯುಗ ಭೇದ ದಿಂದ,ವೃಷಭಾಚಲ ಅಂಜನಾಚಲ,ಶೇಷಾಚಲ ಎಂದು ಹೆಸರು ಬಂದ ಹಿನ್ನೆಲೆ ಯನ್ನು ಹೇಳುತ್ತಾ ನಂತರ ಕಲಿಯುಗದಲ್ಲಿ ಅದಕ್ಕೆ ವೆಂಕಟಾಚಲ ಎನ್ನುವ ಹೆಸರು ಹೇಗೆ ಬಂತು ಅನ್ನುವದನ್ನು ಮುಂದೆ ಹೇಳುತ್ತಾರೆ.
ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು.
ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣ ನಿದ್ದನು.ಅವನಿಗೆ ಮಾಧವ ಎಂಬ ಮಗನಿದ್ದನು.
ಅವನ ಪತ್ನಿ ಚಂದ್ರ ರೇಖೆ.
ವೇದವೇದಾಂಗ ಪಾರಂಗತನು,ಸದಾಚಾರ ರತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷಿತ ಪಡಲು ಅದಕ್ಕೆ ಅವನ ಪತ್ನಿಯು ಅದು ಯೋಗ್ಯವಲ್ಲ ಈ ಸಮಯದಲ್ಲಿ ಅಂತ ಬಹು ಹಿತನುಡಿಗಳನ್ನು ಹೇಳಿದರು ಮಾಧವನು ಒಪ್ಪದೇ ವಿಹಾರಕ್ಕೆ ಕರೆದನು.
ಆಗ ಅವನ ಪತ್ನಿಯು ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು.
ಅದೇ ಸಮಯದಲ್ಲಿ ವನದಲ್ಲಿ ಶ್ವೇತ ವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಚಂಡಾಲ ಕನ್ಯೆ ಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು.
ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ
ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿ ಗೆ ಬರಹೇಳಿದ್ದು.ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು ಎಂದು ಹೇಳಲು ಹರ್ಷಿತಳಾದ ಅವಳು ಮನೆಗೆ ತೆರಳಿದಳು.
ನಂತರ ಪತ್ನಿ ಹೋಗಿದ್ದ ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು.
ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ
ಚಂಡಾಲ ಸ್ತ್ರೀ ಯ ಸಂಗಮ ನಿನಗೆ ವಿಹಿತ ವಲ್ಲವೆಂದು ಹೇಳಿದರು ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ.
ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ. ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಚಂಡಾಲ ಕರ್ಮವನ್ನು ಸ್ವೀಕರಿಸು" ಅಂತ ಹೇಳಿದಳು.ವಿಧಿಯಿಂದ ಪ್ರೇರಿತನಾದ ವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು,ತಲೆಯನ್ನು ಬೋಳಿಸಿಕೊಂಡು,ಮಾಂಸ ಮಧ್ಯ ವನ್ನು ಸೇವಿಸುತ್ತಾ ಅವಳ ಜೊತೆಯಲ್ಲಿ ವಾಸ ಮಾಡಿದ.
ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ.
"ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು" ಅನ್ನುವಂತೆ,ಈ ದೇಹವು ಅಶಾಶ್ವತ ವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು..
ಪ್ರಿಯಕರಳ ಮರಣದಿಂದ
ದುಃಖದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ.
ಅವರು ಉಂಡು ಉಳಿಸಿದ ಭಗವಂತನ ಪ್ರಸಾದವನ್ನು, ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ.
ಆ ರಾಜರು ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಭಕ್ತಿ ಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ.
ಮಾಧವನು ಸಹ ಅವರಂತೆ ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಶಿರೋಮುಂಡನ ಮಾಡಿಸಿಕೊಂಡು ತನ್ನ ಪಿತೃಗಳಿಗೆ ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು.
ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲವೋ ಅವನ ಪಾಪಗಳೆಲ್ಲ ಪರಿಹಾರವಾಯಿತು.
ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥ ದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪ ರಾಶಿ ನಾಶವಾಗುವದು..
ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿ ಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು..
ಮರುದಿನರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ
ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ ,ಆ ಪರ್ವತದ ಸ್ಪರ್ಶ ಮಾತ್ರ ದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು..
" ನೊಣವನ್ನು ನುಂಗಿದ ವ್ಯಕ್ತಿಯು ಹೇಗೆ ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆ ಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು..
ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ ,ಮಾಂಸ ,ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು.ಆಗ ಬಂದ ದುರ್ವಾಸನೆಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು.ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲು ,ಶ್ರೀಬ್ರಹ್ಮ ರುದ್ರಾದಿ ಸಕಲ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿ ಗೆ ಆಗಮಿಸಿದರು..
ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು.
ವೇದಪ್ರತಿಪಾದ್ಯನು, ಕಾಂತಿ ಸಂಪನ್ನನು, ಸರಸ್ವತಿ ದೇವಿಯ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಬ್ರಹ್ಮ ದೇವನು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ..
"ವತ್ಸ!!ಮಾಧವ!!ನಿನ್ನ ಪಾಪಗಳು ಪರಿಹಾರವಾದವು.ನೀನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು...
ಮುಂದೆ ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜ ನಾಗಿ ರಾಜ್ಯ ಭಾರವನ್ನು ಮಾಡುತ್ತೀಯಾ..
ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ..
ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!!
ಲೋಕಕ್ಕೆ, ಹಾಗು ನನಗು ಜನನಿಯಾದ, ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು..
ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ, ನನ್ನ ಪಿತನಾದ, ಆ ದೇವ ದೇವನಾದ ಶ್ರೀ ಮನ್ ನಾರಾಯಣನು ನಿನಗೆ ಅಳಿಯನಾಗುವನು..
ಬಹುಕಾಲ ರಾಜ್ಯದ ಭಾರವನ್ನು ಮಾಡಿಅನಂತರ ಮೋಕ್ಷ ವನ್ನು ಪಡೆಯುತ್ತೀಯೇ ಅಂತ ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಶ್ರೀಬ್ರಹ್ಮ ದೇವರು ಅದೃಶ್ಯ ರಾದರು.
ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲ ವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು.ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತ ವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು ಬಂದಿತು.
ಸಕಲ ಪಾಪ ಪರಿಹಾರಕವಾದ್ದರಿಂದಲೇ ವೆಂಕಟಶೈಲವೆಂದು ಈ ಪರ್ವತಕ್ಕೆ ಹೆಸರು.
ಪ್ರಸ್ತುತಃ ಮಾಧವನ ಪಾಪ ಪರಿಹಾರವಾದ್ದರಿಂದ ಮಾಧವಾದ್ರಿ ಎಂಬ ಹೆಸರು ಬರಬೇಕಿತ್ತು ಅನ್ನುವ ಸಂದೇಹ ಬರಬಹುದು.
"ಮಾಧವಾದ್ರಿ ಎಂಬ ಹೆಸರು ಇದ್ದರೆ ಬರಿಯ ಮಾಧವನ ಪಾಪವನ್ನು ಮಾತ್ರ ಪರಿಹರಿಸಲು ಸಮರ್ಥ.ಬೇರೆಯವರ ಪಾಪವಲ್ಲ ಅನ್ನುವ ರೀತಿಯಲ್ಲಿ ಅರ್ಥ ಬರಬಹುದು."
ಈ ಪರ್ವತದ ಸ್ಪರ್ಶವನ್ನು ಮಾಡಿದವರು ಯಾರೇ ಆಗಿರಲಿ, ಅವರ ಪಾಪಗಳನ್ನುಅದು ಪರಿಹರಿಸುತ್ತದೆ.
"ವೇಂ ..ಎಂದರೆ ಸಕಲ ಪಾಪಗಳು.."
"ಕಟ ..ಎಂದರೆ ಆ ಪಾಪಗಳನ್ನು ಸುಡುವದು.."
ಎಂಬ ಅರ್ಥ ಇರುವದರಿಂದ ಅದಕ್ಕೆ ದೇವತೆಗಳು ವೆಂಕಟಾಚಲವೆಂದು ಕರೆದರು.
ನಾಲ್ಕು ಯುಗದಲ್ಲಿ ಈ ಗಿರಿಗೆ ಹೆಸರು ಬಂದ ಬಗೆಯನ್ನು,ಈ ಮೂರು ದಿನಗಳ ಕಾಲ ಶ್ರೀ ವೆಂಕಟೇಶ ಮಹಾತ್ಮೆ ಯಲ್ಲಿ ತಿಳಿದಿರುತ್ತೇವೆ.
ಮತ್ತು
ವೆಂಕಟಗಿರಿ ಮಹಾತ್ಮೆ ಯನ್ನು ಯಾರು ಪ್ರಾತಃ ಕಾಲದಲ್ಲಿ ಪಠಣ ಮಾಡುವರೋ,ಅವರಿಗೆ ಗಂಗಾಸ್ನಾನ ಫಲ,ಬರೆದರೆ ಗಂಗಾಜನಕ ಶ್ರೀ ಕೃಷ್ಣನ ಸಹಸ್ರ ಬಾರಿ ಪ್ರದಕ್ಷಿಣೆ ರೂಪವಾದ ಫಲ ಲಭಿಸುತ್ತದೆ.
ಈ ಕಾರಣದಿಂದ ವೆಂಕಟಾಚಲವು ಲೋಕದಲ್ಲಿ ಪ್ರಸಿದ್ದವಾದ ಕೀರ್ತಿ ಉಳ್ಳದ್ದಾಯಿತು..
ಇದು ಪುಣ್ಯಕರ,ಮಂಗಳಕರ.ಮತ್ತುಇದನ್ನು ಕೇಳುವದರಿಂದ, ಬರೆದು ಓದುವರಿಂದ, ಶ್ರೇಯಸ್ಸನ್ನು ಕೊಡುವಂತಹದು.
"ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ,ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು ಕೇಳು".
"ಸಮಗ್ರಭೂಮಿ,ಗಂಗಾನದಿ ,ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯವು ಬರುವದು.
ಬಹು ಪುಣ್ಯ ಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆ ಯನ್ನು ನಿನಗೆ ಹೇಳಿದ್ದೇನೆ."
ಇದಕ್ಕೆ ಸಂದೇಹ ವಿಲ್ಲ.. ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು" ಎಂದು ಹೇಳಿದರು.
ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿದಿದು..
ಇದನ್ನು ಕೇಳಿ ಸಂತುಷ್ಟನಾದ ಜನಕರಾಜನು ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು ಕೇಳುತ್ತಾನೆ.
ನಾಳೆ ಅದರ ಬಗ್ಗೆ ತಿಳಿಸುವ ಪ್ರಯತ್ನ.
🙏ಶ್ರೀ ಕೃಷ್ಣಾ ರ್ಪಣ ಮಸ್ತು🙏
ಈ ಗಿರಿ ಯಾತ್ರಿಯಾ ಮಾಡಿದ ಜನರಿಗೆ|
ನಾಗಶಯನ ವಿಜಯವಿಠ್ಠಲ ವೆಂಕಟ ಒಲಿವಾ||
🙏ಅ.ವಿಜಯವಿಠ್ಠಲ🙏
***************
||ಶ್ರೀ ಶ್ರೀನಿವಾಸ ಕಲ್ಯಾಣ ಚರಿತ್ರೆ|| day4
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಹಿಂದಿನ ಅಧ್ಯಾಯ ದಲ್ಲಿ ಚತುರ್ಯುಗದಲ್ಲಿ ವೆಂಕಟಗಿರಿಗೆ ಬಂದ ನಾಲ್ಕು ಹೆಸರುಗಳ ಕಾರಣ ಮುಂತಾದವನ್ನು ಕೇಳಿದ ಜನಕಮಹಾರಾಜನು ಅತೀ ಸಂತುಷ್ಟನಾಗಿ
ಸ್ವಾಮಿ!! ಹಿಂದೆ ನೀವು ವಾಯುದೇವರು ಶೇಷದೇವನಿಗೆ ಭಗವಂತನು ಇಲ್ಲಿ ಬಂದು ವಾಸ ಮಾಡುತ್ತಾನೆ ಅಂತ ಹೇಳಿದ್ದೀರಿ..
ಯಾವ ಕಾರಣದಿಂದಾಗಿ ಭಗವಂತ ವೈಕುಂಠ ವನ್ನು ಬಿಟ್ಟು ಇಲ್ಲಿ ನೆಲೆಸಿದ??ಅದರಂತೆ ಆಕಾಶರಾಜನ ಚರಿತ್ರೆ,ಮತ್ತು ಸಾಕ್ಷಾತ್ ಮಹಾಲಕ್ಷ್ಮೀ ದೇವಿಯು ಅವನಿಗೆ ಹೇಗೆ ಮಗಳಾದಳು??ಭಗವಂತನು ಆಕಾಶರಾಜನಿಗೆ ಹೇಗೆ ಅಳಿಯನಾದ?? ಕತೆಯನ್ನು ದಯವಿಟ್ಟು ಅದರ ಬಗ್ಗೆ ತಿಳಿಸಬೇಕು ಅಂತ ಕೇಳಿಕೊಂಡನು.
ಅದಕ್ಕೆ ಶತಾನಂದರು
ಹೇ ರಾಜನ್!! ಕೇಳು! ಪೂರ್ವದಲ್ಲಿ ಸಕಲ ಮುನಿಶ್ರೇಷ್ಟರು ಗಂಗಾನದಿಯ ತಟದಲ್ಲಿ ಒಂದು ಶ್ರೇಷ್ಠ ವಾದ ಯಜ್ಞ ವನ್ನು ಆಚರಿಸಿದರು..
ಆ ಯಾಗ ನಡೆಯುವ ಸುಸಂಧರ್ಭದಲ್ಲಿ ದೇವರ್ಷಿಯಾದ ನಾರದರು ಅಲ್ಲಿಗೆ ಆಗಮಿಸಿ ಕಶ್ಯಾಪಾದಿ ಋಷಿಗಳನ್ನು ನೋಡಿ ಈ ಉತ್ತಮವಾದ ಯಜ್ಞ ವನ್ನು ಯಾವ ಉದ್ದೇಶದಿಂದ ಮಾಡುವಿರಿ??ಈ ಯಜ್ಞಕ್ಕೆ ದೇವತೆ ಯಾರು?? ಮತ್ತು ಈ ಯಜ್ಞ ದ ಫಲವನ್ನು ಯಾವ ಸರ್ವೋತ್ತಮ ದೇವತೆಗೆ ಅರ್ಪಿಸುವಿರಿ?? ಶ್ರೀಹರಿಗೋ??ವಾರಿಜೋದ್ಬವನಿಗೋ??ಅಥವಾ ಶಂಕರನಿಗೋ??ಅಂತ ಕೇಳಿದಾಗ
ಸಕಲ ಮುನಿಗಳಲ್ಲಿ ಇದರ ಬಗ್ಗೆ ಚರ್ಚೆ ಯಾಗಿ ನಿಜ ಇದನ್ನು ಯಾರಿಗೆ ಅರ್ಪಿಸಬೇಕು ಅಂತ ವಿಚಾರಿಸಿ ಕೊನೆಗೆ ಸಾಧ್ಯವಾಗದೇ ಋಷಿಗಳ ಸಮೂಹದಲ್ಲಿ ಶ್ರೇಷ್ಠ ರಾದ ಭೃಗು ಮುನಿಗಳ ಹತ್ತಿರ ಬಂದು ಸ್ವಾಮಿ ಭೃಗುಮುನಿಗಳೇ!!ದೇವತೆಗಳಲ್ಲಿ ಉತ್ತಮನಾದ ಪರಮ ಪುರುಷನು ಯಾರೆಂದು ತಿಳಿದು ಬರಲು ದಯಮಾಡಿ ಹೊರಡಿರಿ ಎಂದು ಕೋರಿದರು..
ಆಗ ಭೃಗು ಮುನಿಗಳು ಅವರ ಕೋರಿಕೆಯನ್ನು ಮನ್ನಿಸಿ ಸರ್ವೋತ್ತಮ ದೇವತೆ ಯಾರೆಂದು ತಿಳಿಯಲು ಕಮಲ ಮಂದಿರನಾದ ಸತ್ಯಲೋಕದಲ್ಲಿ ಸರಸ್ವತಿ ಸಮೇತ ನಾಗಿ ಇರುವ ಶ್ರೀಬ್ರಹ್ಮ ದೇವರ ಬಳಿ ಬಂದರು..
ಆ ಸಮಯದಲ್ಲಿ ನಾಲ್ಕು ಮುಖಗಳಿಂದ ಶ್ರೀಬ್ರಹ್ಮ ದೇವರು ವೇದಘೋಷವನ್ನು ಮಾಡುತ್ತಾ ಇದ್ದರು..
ಅವರಿಗೆ ಭಕ್ತಿ ಇಂದ ನಮಸ್ಕರಿಸಿ ದರು ಸಹ
ಶ್ರೀಬ್ರಹ್ಮ ದೇವರು ಭೃಗು ಋಷಿಗಳ ಕಡೆ ಗಮನ ಹರಿಸಲಿಲ್ಲ.
ನೋಡಿದರು, ಮಾತನಾಡಿಸದೆ ಸುಮ್ಮನೆ ಮೌನ ವಹಿಸಿದರು..
ಶ್ರೀ ಹರಿ ಸರ್ವೋತ್ತಮ ಸಿದ್ದಾಂತ ಸ್ಥಾಪಿಸಲೋಸುಗ ಅವರು ಸುಮ್ಮನೆ ಸರಸ್ವತಿ ದೇವಿಯರೊಡನೆ ಧ್ಯಾನಾಸಕ್ತರಾಗಿ ಕುಳಿತಿದ್ದರು.
ಇದನ್ನು ಕಂಡ ಭೃಗು ಮುನಿಗಳು ಈ ಬ್ರಹ್ಮ ದೇವನು ಸ್ವಲ್ಪ ಅಜ್ಞಾನ ಉಳ್ಳವನಾಗಿದ್ದಾನೆ, ಆದ್ದರಿಂದ ಇವನು ಸರ್ವೋತ್ತಮ ದೇವತೆ ಅಲ್ಲವೆಂದು ತಿಳಿದು ಕಲಿಯುಗದಲ್ಲಿ ಇವರ ಪೂಜೆ ಆಗದಿರಲಿ ಎಂದು ಶಾಪವನ್ನು ಕೊಟ್ಟು ಮುಂದೆ ಕೈಲಾಸ ಪರ್ವತಕ್ಕೆ ಬರುವರು.
ಭೃಗುಋಷಿಗಳು ಸತ್ಯಲೋಕದಿಂದ ಕೈಲಾಸ ಪರ್ವತಕ್ಕೆ ಹೋದಾಗ
ಅಲ್ಲಿ ಶ್ರೀರುದ್ರದೇವರು ತಮ್ಮ ಪತ್ನಿಯಾದ ಪಾರ್ವತಿದೇವಿಯರೊಂದಿಗೆ ಏಕಾಂತದಲ್ಲಿದ್ದರು...
ಅಲ್ಲಿಯು ಸಹ ಶ್ರೀರುದ್ರದೇವರು "ಶ್ರೀಹರಿಯೇ ಸರ್ವೋತ್ತಮ"ನೆಂದು ತಮ್ಮಿಂದಲೂ ಸ್ಥಾಪಿಸಬೇಕೆಂದು ಭೃಗುಋಷಿಗಳು ಬಂದದ್ದನ್ನು ನೋಡದಂತೆ ನಟಿಸಿ,ಅವರ ಯೋಗ-ಕ್ಷೇಮವನ್ನು ವಿಚಾರಿಸದೆ,ತಮ್ಮ ಪತ್ನಿಯೊಡನೆಯಿರುವ ಏಕಾಂತಕ್ಕೆ ಭಂಗ ತಂದಿರುವಿರೆಂದು ಋಷಿಗಳಿಗೆ ತಮ್ಮ ತ್ರಿಶೂಲದಿಂದ ಸಂಹರಿಸಲು ಹೋದಂತೆ ನಟಿಸಿದಾಗ,
ಅಗ ಭೃಗು ಋಷಿಗಳು ಕೋಪದಿಂದ "ಭೋಗಾಸಕ್ತರಾದ ನಿಮಗೆ ಇನ್ನು ಮುಂದೆ ಭೂ-ಲೋಕದಲ್ಲಿ ನಿಮ್ಮ ಮೂರ್ತಿಯನ್ನು ಪೂಜಿಸದೆ ಲಿಂಗ ಪೂಜೆಯಾಗಲಿ"ಎಂದು ಶಾಪವನ್ನು ಕೊಡುತ್ತಾರೆ. ಅವರು ಕೊಟ್ಟು ಶಾಪವನ್ನು ತೆಗೆದುಕೊಂಡು ಪರಮ ವೈಷ್ಣವಾಗ್ರೇಸರಾದ ಹಾಗು ಮನೋನಿಯಾಮಕರಾದ ಶ್ರೀರುದ್ರದೇವರೆ ವೈಕುಂಠ ಲೋಕಕ್ಕೆ ಹೋಗುವಂತೆ ಭೃಗುಋಷಿಗಳಿಗೆ ಮನಃ ಪ್ರೇರಿಸಿದರು..
ಆ ನಂತರ ವೈಕುಂಠಕ್ಕೆ ಬಂದರು.
ಅಲ್ಲಿ ಶ್ರೀ ಮನ್ನಾರಾಯಣನು ಶೇಷಮಂಚದಲ್ಲಿ ಸುಪ್ಪತ್ತಿಗೆ ಮೇಲೆ ನಿದ್ರಾ ವಶದವನಂತೆ ನಟನೆ ಮಾಡುತ್ತಾ ಪವಡಿಸಿದ್ದನು.ಇದನ್ನು ಕಂಡ ಭೃಗು ಋಷಿಗಳು ಪರಮ ಕೋಪದಿಂದ ಶ್ರೀ ಹರಿಯ ವಕ್ಷಸ್ಥಳಕ್ಕೆ ತಮ್ಮ ಪಾದದಿಂದ ತಾಡನೆ ಮಾಡಿದರು..
ತಕ್ಷಣ ರಮಾಪತಿಯು ಮೇಲೆದ್ದು ತಾನು ಅಪರಾಧ ಮಾಡಿದವನಂತೆ ಕ್ಷಮೆ ಯಾಚಿಸುತ್ತಾ
"ಯಾಕೆನ್ನ ಮೇಲೆ ಇಷ್ಟು ಸಿಟ್ಟು?? ನೀ ಬೇಕಾದ್ದು ಕೇಳು ಕೊಡುವೆನು ಕಾಲಕಾಲಕ್ಕೆ...
ಸುಮ್ಮನೆ ಯಾರಿಗು ತಿಳಿಸದೇ ನನ್ನ ಮನೆಗೆ ಬಂದು ಒದ್ದ ಕಾರಣವೇನು??ನನ್ನ ವಜ್ರ ಕಠಿಣವಾದಂತಹ ಎದೆಗೆ ಒದ್ದು ನಿಮ್ಮ ಮೃದುವಾದ ಕೋಮಲವಾದ ಪಾದ ಎಷ್ಟು ನೊಂದಿತೋ ನಾನರಿಯೇ!! ಅಂತ ಚತುರತನದ ಮಾತುಗಳನ್ನು ಆಡಿ ಅವರನ್ನು ಸಂತೈಸಿ
ಭೃಗು ಋಷಿಗಳ ನ್ನು ಅರ್ಘ್ಯ ಪಾದಾದಿಗಳಿಂದ ಸತ್ಕರಿಸಿ ಆ ಪಾದೋದಕ ವನ್ನು ತಾನು ಶಿರಸ್ಸಿನಲ್ಲಿ ಧರಿಸಿ,ತನ್ನ ಪತ್ನಿಯಾದ ರಮಾದೇವಿಯರಿಗು ಪ್ರೋಕ್ಷಣೆ ಮಾಡಿ, ಮನೆಯಲ್ಲಿ ಎಲ್ಲಾ ಕಡೆಗೆ,ತನ್ನ ಸಕಲ ಪರಿವಾರದವರಿಗು ಪ್ರೋಕ್ಷಣೆಯನ್ನು ಶ್ರೀ ಹರಿಯು ಮಾಡುತ್ತಾನೆ.
ಬಂದ ಕಾರ್ಯವಾಗಿದ್ದನ್ನು ತಿಳಿದು ಭೃಗು ಋಷಿಗಳು ಭೂಲೋಕಕ್ಕೆ ಬಂದು
ಶ್ರೀ ಹರಿಯೇ ಸರ್ವೋತ್ತಮ ನೆಂದು ಹೇಳಿ ಇದು ಸತ್ಯ ಅಂತ ಎಲ್ರಿಗು ಉಪದೇಶ ವನ್ನು ಮಾಡಿದರು..
ಶ್ರೀ ಹರಿಯು ಸಕಲ ದೇವತಾ ಸಾರ್ವಭೌಮ ನು.ನಂತರ ಲಕ್ಷ್ಮೀ ದೇವಿಯರು ತಾರತಮ್ಯ ದಲ್ಲಿ ಕಿರಿಯಳು.ಆ ನಂತರ ಸಕಲ ದೇವತಾ ಪರಿವಾರ ತಾರತಮ್ಯ ದಲ್ಲಿ ಬರುತ್ತಾರೆ ಅಂತ ಹೇಳಿ ಪರಮ ಪುರುಷನಾದ ಆ ಶ್ರೀ ಹರಿಗೆ ಯಜ್ಞ ಫಲವನ್ನು ಸಮರ್ಪಣೆ ಮಾಡಿದರು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಈ ಗಿರಿ ಯಾತ್ರಿಯಾ ಮಾಡಿದ ಜನರಿಗೆ|
ನಾಗಶಯನ ವಿಜಯವಿಠ್ಠಲ ವೆಂಕಟ ಒಲಿವ||
🙏ಶ್ರೀ ವೆಂಕಟೇಶಾಯ ನಮಃ🙏
**********
|ಶ್ರೀನಿವಾಸ ಕಲ್ಯಾಣ ಚರಿತ್ರೆ||day 5
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙇♂
ಇತ್ತ ಭೃಗು ಋಷಿಗಳು ವೈಕುಂಠ ದಿಂದ ಹೊರಟು ಹೋದ ಮೇಲೆ, ಏಕಾಂತದಲ್ಲಿ ಶ್ರೀರಮಾದೇವಿಯ ಜೊತೆಯಲ್ಲಿ ಭಗವಂತನು ಇರುವಾಗ
ಶ್ರೀಮಹಾಲಕ್ಷ್ಮಿ ದೇವಿಯು
"ಜಗನ್ನಿಯಾಮಕನಾದ, ದೇವೋತ್ತಮನಾದ ಪ್ರಭುವೇ, ನಾನು ನಿನ್ನನ್ನು ತೊರೆದು ಹೋಗುವೆನು..
ನಿನ್ನ ಶ್ರೀವತ್ಸ ಸದಾ ಎನ್ನ ಆಲಿಂಗನವನ್ನು ಮಾಡಿಕೊಂಡಿರುವದು.
ಅಂತಹ ಸ್ಥಳ ಭೂಸುರನಿಂದ ಪಾದದಿಂದ ಸ್ಪರ್ಶವಾಗಿದೆ.ಹಾಗಾಗಿ ನಾನು ಇಲ್ಲಿ ಇರುವುದಿಲ್ಲ..
ಎಲ್ಲರಿಗಿಂತ ಉತ್ತಮನು ನೀನು ಎಂದುಇಲ್ಲಿ ಇದ್ದೆ. ನಿನಗೆ ಭಕ್ತ ವತ್ಸಲ ಎಂಬ ಬಿರುದು ಬೇಕಾಗಿತ್ತು ಅಂದರೆ ಈ ತರ ಮಾನವ ಚರಣವನ್ನು ಎದೆಯಲ್ಲಿ ಧರಿಸುವದು ಸರಿಯೇ!! ಕರವೀರಪುರಕ್ಕೆ ಹೋಗುತ್ತೇನೆ ಅಂತ ಹೇಳಿ ಜಗನ್ಮಾತೆ ಯು ಪ್ರೇಮ ಕಲಹವನ್ನು ಮಾಡಿ (ಕಲಹ ಮಾಡಿದಂತೆ ನಟಿಸಿ)ವೈಕುಂಠ ಪುರವನ್ನು ಬಿಟ್ಟು ಕರವೀರಪುರಕ್ಕೆ ಬರುತ್ತಾಳೆ..
ಅವಿಯೋಗಿಗಳು ಅವರು...
ಅವರಿಬ್ಬರಿಗೂ ವಿಯೋಗ ಎನ್ನುವುದು ಯಾವ ಕಾಲಕ್ಕೆ ಸಹ ಇಲ್ಲ.
ಭಾವಿ ಲೋಕ ಕಲ್ಯಾಣಕ್ಕಾಗಿಯು, ಭಗವಂತನ ಸಂಕಲ್ಪ ಮಹತ್ವವನ್ನು ಜಗತ್ತಿನಲ್ಲಿ ತೋರಿಸಲು ವೈಕುಂಠ ದಿಂದ ತನ್ನ ತವರು ಮನೆಯಾದ ಕರವೀರಪುರಕ್ಕೆ ದಯ ಮಾಡಿಸಿದಳು..
ಭಗವಂತನಿಗೆ ಸದಾ ಆಭರಣವಾಗಿ,ಅವನ ಎದೆಯಲ್ಲಿ ಸದಾ ವಾಸ ಮಾಡುವಂತಹವಳು ಶ್ರೀಲಕ್ಷ್ಮೀ ದೇವಿಯು.. ..
ಹೇಗೆ ಸೂರ್ಯನಿಗು ಅವನ ಕಿರಣಗಳಿಗು ಹೇಗೆ ಅವಿಭಾಜ್ಯ ಸಂಭಂದವಿದೆಯೋ ಅಂತೆಯೇ ಶ್ರೀ ಲಕ್ಷ್ಮೀ ನಾರಾಯಣರ ನಡುವೆಯೂ ಇದೆ.ಒಂದು ರೂಪದಿಂದ ಭಗವಂತನ ಜೊತೆಯಲ್ಲಿ ಇದ್ದು,ಇನ್ನೊಂದು ರೂಪದಿಂದ
ಭಗವಂತನ ಜೊತೆಯಲ್ಲಿ ಪ್ರೇಮ ಕಲಹವಾಡಿದಂತೆ ನಟಿಸಿ ಶ್ರೀರಮಾದೇವಿಯು ಭೂಲೋಕಕ್ಕೆ ಬಂದಳು..
ಹೇಗೆ ಸಮುದ್ರ ಮಥನ ಸಮಯದಲ್ಲಿ ಒಂದು ರೂಪದಿಂದ ವೈಕುಂಠ ದಲ್ಲಿ ಇದ್ದಳೊ, ಅದೇ ರೀತಿಯಲ್ಲಿ ಇನ್ನೊಂದು ರೂಪದಿಂದ ಸಮುದ್ರ ದಲ್ಲಿ ಕಾಣಿಸಿಕೊಂಡಳೊ ಹಾಗೇ ಸದಾ ಭಗವಂತ ನ ಬಿಟ್ಟು ಒಂದು ಕ್ಷಣವು ಶ್ರೀಲಕ್ಷ್ಮಿ ದೇವಿಯು ಇರುವುದಿಲ್ಲ..
ಶ್ರೀರಮಾದೇವಿ ಬಿಟ್ಟು ಹೋದದ್ದಕ್ಕೆ ಭಗವಂತನು ಪತ್ನಿ ವಿಯೋಗ ವಾಯಿತೆಂದು, ನಟಿಸಿದ ಹೊರತು ನಿಜವಾಗಿಯೂ ಅವರಿಬ್ಬರಿಗೂ ಎಂದಿಗು ವಿಯೋಗ ಇಲ್ಲ.
ಒಟ್ಟಾರೆ ತಿಳಿದು ಕೊಳ್ಳುವ ದು ಇಷ್ಟೇ.
ಒಂದು ರೂಪದಿಂದ ವೈಕುಂಠ ದಲ್ಲಿ ಶ್ರೀವಿಷ್ಣು ವನ್ನು ಸೇವಿಸುತ್ತಾ ಇನ್ನೊಂದು ರೂಪದಿಂದ ಶ್ರೀರಮಾದೇವಿ ಭೂಲೋಕಕ್ಕೆ ಬಂದಳು ಅಂತ ಚಿಂತನೆ ಮಾಡಬೇಕು.
ಸಾಮಾನ್ಯ ಸ್ತ್ರೀ ಯಂತೆ,ಕಲಹಮಾಡಿಕೊಂಡು ಭಗವಂತನ ಬಿಟ್ಟು ಹೋದಳು ಅಂತ ಚಿಂತನೆ ಮಾಡಬಾರದು. ಮಹಾ ದೋಷ ಬರುತ್ತದೆ.
ಅಸುರೀ ಜನ ಮೋಹಕ್ಕಾಗಿ ಈ ರೀತಿಯಾಗಿ ಪ್ರೇಮ ಕಲಹವನ್ನು ಮಾಡಿ ಭೂಲೋಕಕ್ಕೆ ಜಗನ್ಮಾತೆಯು ಬರುತ್ತಾಳೆ.
೨೮,ನೆಯ ದ್ವಾಪರಯುಗದ ಕೊನೆಯ ಭಾಗದಲ್ಲಿ ಕಲಿಯುಗದಲ್ಲಿ ಮಹಾಲಕ್ಷ್ಮಿ ಯು ಕರವೀರಪುರಕ್ಕೆ ತೆರಳಿದ ಮೇಲೆ
ಭಗವಂತನು ಸಿರಿ ಇಲ್ಲದ ವೈಕುಂಠ ಸರಿ ಬಾರದು ಎನಗೆ, ಏನು ಮಾಡಲಿ !!ನನ್ನ ಕಣ್ಣಿಗೆ ವೈಕುಂಠ ಅರಣ್ಯ ದಂತೆ ತೋರುತ್ತಿದೆ!!...
ಎಲ್ಲಿ ಹೋಗಲಿ?? ಅಂತ ಚಿಂತೆ ಮಾಡುವರಂತೆ, ನಟಿಸುತ್ತಾ
ಯಾವುದೇ ಚಿಂತೆ, ಸಂತಾಪ, ಮುಂತಾದ ದೋಷ ವಿದೂರನಾಗಿದ್ದರು, ಸ್ವರಮಣನಾದ ಶ್ರೀ ಹರಿಯು ಶ್ರೀರಮಾದೇವಿ ಯ ವಿರಹ ದುಃಖವನ್ನು ತಾಳದವನಂತೆ ನಟಿಸುತ್ತಾ ಆಜ್ಞ ಜನರನ್ನು ಮೋಹಗೊಳಿಸುತ್ತಾ ,ವೈಕುಂಠ ವನ್ನು ಬಿಟ್ಟು ಸುವರ್ಣಮುಖಿ ನದಿಯ ತಟದಲ್ಲಿ ಹಿಂದೆ ವಾಯುದೇವರು ಶೇಷದೇವನ ಗರ್ವಭಂಗವನ್ನು ಮಾಡಿದ ಶೇಷಾಚಲಕ್ಕೆ ಬಂದು ಸ್ವಾಮಿ ಪುಷ್ಕರಣಿ ತೀರದಲ್ಲಿ ಹುಣಿಸೇ ಮರದ ಬುಡದಲ್ಲಿ ಇರುವ ವಲ್ಮೀಕದಲ್ಲಿ ಅವಿತುಕೊಂಡು ರಹಸ್ಯ ವಾಗಿ ವಾಸಮಾಡತೊಡಗಿದನು.
ಭಕ್ತರ ಮೂಲಕ ಸಾಧನೆ, ನಡೆಯುವಂತೆ ಮಾಡಿ ಆ ಪ್ರಯುಕ್ತ ಪುಣ್ಯ, ಮತ್ತು ಕೀರ್ತಿಗಳಿಂದ, ಅವರನ್ನು ಅವರವರ ಯೋಗ್ಯತೆನುಗುಣವಾಗಿ ಅನುಗ್ರಹ ಮಾಡುವದೇ, ಭಗವಂತನ ಎಲ್ಲಾ ಅವತಾರಗಳ ಹಿನ್ನೆಲೆ..
ನಿತ್ಯ ಶ್ರೀಲಕ್ಷ್ಮೀ ಯನ್ನು ಹೊಂದಿದ್ದು ,ತನಗಾಗಿ ಹೊಂದಬೇಕಾದದ್ದು, ಮಾಡಬೇಕಾದದ್ದು ,ಏನು ಇಲ್ಲವಾದರು ಭಗವಂತನು ಶ್ರೀಲಕ್ಷ್ಮೀ ದೇವಿ,ಶ್ರೀಬ್ರಹ್ಮ, ರುದ್ರಾದಿ ದೇವತೆಗಳು, ಶುಕಾಚಾರ್ಯರು,ಆಕಾಶರಾಜ,ಬಕುಲಾ ದೇವಿ,ಮುಂತಾದ ಭಕ್ತರಿಂದ ಆಯಾ ಸಾಧನೆ ಮಾಡಿಸಿ, ಪುಣ್ಯ, ಮತ್ತು ಸತ್ಕೀರ್ತಿಗಳಿಂದ, ಅವರಿಗೆ ಅನುಗ್ರಹ ಮಾಡಬೇಕೆಂಬ ಸಂಕಲ್ಪ ದಿಂದ ವೆಂಕಟೇಶ ನಾಗಿ ವೆಂಕಟಾದ್ರಿ ಗೆ ಬಂದನು..
ಈ ಪರ್ವತದ ವರ್ಣನೆ.👇
"ಈ ವೆಂಕಟಾಚಲವೇ ಶ್ರೀ ಶೇಷದೇವರ ಮುಖವು",
"ನೃಸಿಂಹಾಚಲವೇ (ಅಹೋಬಲ ಪರ್ವತವೇ)ಮಧ್ಯಭಾಗ"
"ಬಾಲದಂತಿರುವ ಕೊನೆಯ ಭಾಗವೇ ಶ್ರೀಶೈಲ ಪರ್ವತವು".
ಇಂತಹ ಶೇಷಾಚಲವು ಪುಣ್ಯ ಪ್ರದವಾಗಿದೆ.ಅದರ ವರ್ಣನೆ ಬಲು ರಮಣೀಯ.
ಅನೇಕ ಜಾತಿಯ ಗಿಡ ಮರಗಳಿಂದ,ಫಲ ಪುಷ್ಪ ಗಳಿಂದ, ವೃಕ್ಷ ಭರಿತವಾದ ಪರ್ವತ ಅದು..
ಅನೇಕ ಜಾತಿಯ ಪಕ್ಷಿಗಳು, ಮೃಗಗಳು ಮತ್ತು ಅನೇಕ ಬಗೆಯ ಹೂ ಬಳ್ಳಿ ಗಳು ಹೀಗೆ ಅದರಲ್ಲಿ ಅಲಂಕೃತ ವಾಗಿದೆ.
ಇಂತಹ ಮನೋಹರವಾದ ನಯನಾನಂದವಾದ ಸಕಲ ವೃಕ್ಷ, ಸಂಪತ್ತನ್ನು ಹೊಂದಿದ ವೆಂಕಟಾಚಲಕ್ಕೆ ಸ್ವಾಮಿ ಆಗಮಿಸಿ ಹತ್ತು ಸಾವಿರ ವರ್ಷಗಳ ಕಾಲ ಹುತ್ತದಲ್ಲಿ ವಾಸ ಮಾಡಿದನು..
"ಇಲ್ಲಿ ಇರುವ ವೃಕ್ಷಗಳೇ ದೇವತೆಗಳ ಸಮೂಹವು.",
ಮೃಗಗಳೇ ಮುನಿಶ್ರೇಷ್ಟರು.,
ಪಕ್ಷಿ ಗಳೇ ಪಿತೃದೇವತೆಗಳು.
ಅಲ್ಲಿ ಇರುವ ಸಕಲ ಕಲ್ಲು ಬಂಡೆಗಳೇ ಸಕಲ ಯಕ್ಷ ಕಿನ್ನರರು ಎಂದು ತಿಳಿಯಬೇಕು.
ಮೇರು ಪರ್ವತನ ಕುಮಾರನಾದ
ಕಾಂತಿ ಸಂಪನ್ನವಾದ ಈ ವೆಂಕಟಾಚಲದ ಹಾಗು
ಶ್ರೀ ಹರಿಯ ಮಹಿಮೆಯನ್ನು ಬ್ರಹ್ಮ ಮುಂತಾದ ದೇವತೆಗಳು ಮಾತ್ರ ಬಲ್ಲರು ಹೊರತು ಅಲ್ಪಶಕ್ತರಾದ ನಮ್ಮಂತಹ ಮಾನವರು ತಿಳಿಯಲು ಅಶಕ್ಯ...
🙏🙏
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಯ ಶೇಷಗಿರಿ ಪರ್ವತದ ವರ್ಣನೆ ಎಂಬ ಎರಡನೆಯ ಅಧ್ಯಾಯ ಮುಗಿದಿದು.
🙏ಶ್ರೀ ಕೃಷ್ಣಾ ರ್ಪಣಮಸ್ತು🙏
ವಾಯುವಂದಿತ ವಿಜಯವಿಠಲ ವೆಂಕಟಗಿರಿ
ರಾಯ|
ತನ್ನ ಶರಣರಿಗೆ ಭೀತಿ ಬರಗೊಡನು||
🙏ಅ.ವಿಜಯವಿಠ್ಠಲ🙏
**********
ಶ್ರೀನಿವಾಸ ಕಲ್ಯಾಣ ಮಹಾತ್ಮೆಯಲ್ಲಿ ವಿಷ್ಣು ಸಹಸ್ರನಾಮ ಪದದ ಚಿಂತನೆ||
ನೆನ್ನೆ ಪೋಸ್ಟ್ ಮಾಡಿದ ಶ್ರೀನಿವಾಸ ಕಲ್ಯಾಣ ಮಹಾತ್ಮೆ ಯಲ್ಲಿ ಕೆಲವು ವಿಚಾರಗಳು ಶ್ರೀ ವಿಷ್ಣು ಸಹಸ್ರನಾಮ ನಾಮಗಳಲ್ಲಿ ಹೇಗೆ ಪ್ರತಿಬಿಂಬ ವಾಗಿದೆ ಎಂಬುದನ್ನು ತಿಳಿಯೋಣ.
ಆ ಜಗತ್ಸ್ವಾಮಿಯಾದ ಶ್ರೀನಿವಾಸನ ದಯೆಯಿಂದ.
🙏🙇♂️🙇♂️
| |ಸದಾಯೋಗಿ| ಲಕ್ಷ್ಮೀ ವಾನ್||
ಸದಾಯೋಗಿ
ಅನಾದಿ ಕಾಲದಿಂದಲೂ ಶ್ರೀ ಲಕ್ಷ್ಮೀ ದೇವಿಯ ಸಂಭಂದವನ್ನು ಯಾವಾಗಲೂ ಹೊಂದಿರುವವನು.
ಅದಕ್ಕೆ ದಾಸರು ವರ್ಣನೆ ಮಾಡುತ್ತಾರೆ.
ಹರಿಯು ನಿನ್ನ ಬಿಡದಿಪ್ಪಂತೆ ಮರಳು ಮಾಡಿಕೊಂಡಿಯಲ್ಲೆ ಮಾಯಾದೇವಿಯೇ..
||ಲಕ್ಷ್ಮೀ ವಾನ್||
ನಿತ್ಯವೂ ಲಕ್ಷ್ಮೀ ಯನ್ನು ಹೊಂದಿರುವವನು.
ದಾಸರು ಹೇಳಿದಂತೆ
ಹಲವು ಆಭರಣಗಳು ಜಲವು ಆಗಿ ಜಾಣತನದಿ
ಮತ್ತು ಏನು ಧನ್ಯಳೊ ಲಕುಮಿ
ಇದರಲ್ಲಿ ಸಹ ಲಕ್ಷ್ಮೀ ದೇವಿಯನ್ನು ಛತ್ರ ಚಾಮರ ವ್ಯಜನ ಪಾತ್ರ ಆಭರಣ ವಾಗಿಭಗವಂತನಿಗೆ ಸೇವೆ ಯನ್ನು ಮಾಡುತ್ತಾ ಅವನನ್ನು ಕ್ಷಣ ಬಿಡದಲೆ ಇರುವವಳು.ಎಂದು ವರ್ಣನೆ ಮಾಡಿದ್ದಾರೆ.
ಭಗವಂತನಿಗೆ ಸದಾ ಆಭರಣವಾಗಿ,ಅವನ ಎದೆಯಲ್ಲಿ ಸದಾ ವಾಸ ಮಾಡುವಂತಹವಳು ಲಕ್ಷ್ಮೀ ದೇವಿಯು..ಹೇಗೆ ಸೂರ್ಯನಿಗು ಅವನ ಕಿರಣಗಳಿಗು ಹೇಗೆ ಅವಿಭಾಜ್ಯ ಸಂಭಂದವಿದೆಯೋ ಅಂತೆಯೇ ಶ್ರೀ ಲಕ್ಷ್ಮೀ ನಾರಾಯಣರ ನಡುವೆಯೂ ಇದೆ.ಒಂದು ರೂಪದಿಂದ ಭಗವಂತನ ಜೊತೆಯಲ್ಲಿ ಇದ್ದು,ಇನ್ನೊಂದು ರೂಪದಿಂದ ಭಗವಂತನ ಜೊತೆಯಲ್ಲಿ ಇದ್ದು ಮತ್ತು ಹೇಗೆ ಸಮುದ್ರ ಮಥನ ಸಮಯದಲ್ಲಿ ಒಂದು ರೂಪದಿಂದ ವೈಕುಂಠ ದಲ್ಲಿ ಇದ್ದಳೊ, ಅದೇ ರೀತಿಯಲ್ಲಿ ಇನ್ನೊಂದು ರೂಪದಿಂದ ಸಮುದ್ರ ದಲ್ಲಿ ಕಾಣಿಸಿಕೊಂಡಳೊ ಹಾಗೇ ಸದಾ ಭಗವಂತ ನ ಬಿಟ್ಟು ಒಂದು ಕ್ಷಣವು ಲಕ್ಷ್ಮಿ ದೇವಿ ಇರುವುದಿಲ್ಲ..
🙏ಶ್ರೀ ಕೃಷ್ಣಾರ್ಪಣಮಸ್ತು🙏
|ನಿನ್ನ ಅಗಣಿತ ಮಹಿಮೆಗೆ ನಮೋ ನಮೋ|
🙏ಶ್ರೀನಿವಾಸ ದಯಾನಿಧೆ🙏
********
||ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ|| day6
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಶತಾನಂದರು ಜನಕರಾಜನ ಪ್ರಾರ್ಥನೆ ಯಂತೆ ಭಗವಂತನು ಭೂಲೋಕಕ್ಕೆ ಬಂದ ಬಗ್ಗೆ ಮತ್ತು ವೆಂಕಟ ಗಿರಿಯ ಮಹಿಮೆಯನ್ನು ಹೇಳಿ ಮುಂದೆ ಅಲ್ಲಿ ಇರುವ ತೀರ್ಥಾದಿಗಳ ವೈಶಿಷ್ಟ್ಯ ಹಾಗು ಮುಂದಿನ ಕತೆಯನ್ನು ನಿರೂಪಣೆ ಮಾಡುತ್ತಾರೆ.
ರಾಜನೇ! ಕೇಳು.
ಶ್ರೀ ವೆಂಕಟ ಗಿರಿಯ ಮೇಲ್ಭಾಗದಲ್ಲಿ ಸ್ವಾಮಿ ಪುಷ್ಕರಣಿ ಎಂಬ ಪವಿತ್ರ ತೀರ್ಥವು ವಿರಾಜಿಸುತ್ತಿದೆ.ಅದು ಬಹು ಉತ್ತಮ ವಾದ ತೀರ್ಥವು..
ಸಕಲ ಜಲಚರಗಳಿಂದ ಅದುಕೂಡಿದೆ.ಸಕಲ ನದಿ ತೀರ್ಥಗಳಿಂದ ಕೂಡಿದ ಆ ಪುಷ್ಕರಣಿ ಯಲ್ಲಿ ಸ್ನಾನ ಮಾಡುವವರು ಕೃತಾರ್ಥರು ಮತ್ತು ಪುಣ್ಯ ಶಾಲಿಗಳು..
ಸೂರ್ಯನು ಧನು ರಾಶಿಯಲ್ಲಿ ಇರುವಾಗ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಅರುಣೋದಯ ಕಾಲದಲ್ಲಿ ಸಮಸ್ತ ದೇವತೆಗಳು, ಋಷಿಗಳು ಪರಮ ಮಂಗಳಕರವಾದ ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಲು ಅಪೇಕ್ಷಿತ ಪಡುತ್ತಾರೆ..
ಅಂದಮೇಲೆ ಮಾನವರು ಸ್ನಾನ ಮಾಡುವದು ಅವಶ್ಯಕ ಎಂದು ಬೇರೆ ಹೇಳಬೇಕಾಗಿಲ್ಲ.
ಶ್ರೀ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಬ್ರಾಹ್ಮಣರು ಪಿತೃಗಳ ತೃಪ್ತಿ ಗಾಗಿ ಶ್ರಾದ್ಧ ತರ್ಪಣಾದಿ ಕರ್ಮಗಳನ್ನು ನೆರವೇರಿಸಿದರೆ ಅಂತಹವರ ಪಿತೃಗಳು ಸಂತುಷ್ಟರಾಗಿ ಶ್ರೀ ಹರಿಯ ವೈಕುಂಠ ಲೋಕದಲ್ಲಿ ನರ್ತಿಸುವರು..
ಒಂದು ವೇಳೆ ಅವರು ನೆರವೇರಿಸದಿದ್ದಲ್ಲಿ ಭಗವಂತನ ಅನುಗ್ರಹದಿಂದ ದೊರಕಿದ ಮಾನವ ಜನ್ಮದಿಂದ ಪ್ರಯೋಜನ ವೇನು??..
ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ??..
ಆ ಪವಿತ್ರ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಮಾನವರು ಭಾಗ್ಯ ಶಾಲಿಗಳಾಗುವರು.
(೧)ಹಿಂದೆ ಶಂಖನೆಂಬ ರಾಜನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿದ ಮಾತ್ರ ದಿಂದಲೇ ಸ್ವರ್ಗಲೋಕವನ್ನು ಪಡೆದನು..
(೨)ಪೂರ್ವ ದಲ್ಲಿ ನಾರಾಯಣ ನೆಂಬ ಹೆಸರಿನ ಅಂಗಿರಸರಿಗೆ ಪುತ್ರನಾದ ಭೂಸುರನು ಸ್ನಾನ ಮಾಡಿದರ ಫಲದಿಂದ ಭಗವಂತನ ದರುಶನ ವಾಗಿ ಮೋಕ್ಷ ವನ್ನು ಪಡೆದನು..
(೩)ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಸಹ ಇಲ್ಲಿ ಬಂದು ಸ್ನಾನ ಮಾಡಿದ ಫಲದಿಂದ ರಾವಣನ ಸಂಹಾರ ಮಾಡಿ ಸೀತಾದೇವಿ ಯನ್ನು ಪಡೆದನು.
ಇಂತು ಶುಭಕರವಾದ ಸ್ವಾಮಿ ಪುಷ್ಕರಣಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ವಾಗಿ ಕಂಗೊಳಿಸುತ್ತದೆ.
ಆ ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ತನ್ನ ಸತಿಯಾದ ಭೂದೇವಿಯನ್ನು ಆಲಂಗಿಸಿಕೊಂಡು ವರಾಹರೂಪಿಯಾದ ಶ್ರೀಹರಿ ಅಶ್ವತ್ಥ ವೃಕ್ಷ ದಿಂದ ಶೋಭಿಸುವ ಆ ಸ್ಥಳ ದಲ್ಲಿ ವಿರಾಜಿಸಿದ್ದಾನೆ..
ಮೂರು ಕೋಟಿ ಸಂಖ್ಯೆಯ ವಿವಿಧ ತೀರ್ಥ ಗಳಿಗೆ ಈ ವೆಂಕಟ ಗಿರಿಯು ಮಾತೃ ಸ್ಥಾನವಾಗಿದೆ..
ಇಂತಹ ಶ್ರೇಷ್ಠ ವಾದ ವೆಂಕಟಾಚಲಕ್ಕೆ ಬಂದು ಸ್ವಾಮಿಯು ಇದು ವೈಕುಂಠಕ್ಕಿಂತ ಮಿಗಿಲೆಂದೂ ತೋರಿಸಲೋಸುಗ ಅಲ್ಲಿ ವಿಹಾರ ಮಾಡುತ್ತಾ ಇದ್ದನು. ಇಂತು ತಿರುಗಾಡುತ್ತಿರುವ ಶ್ರೀ ರಮಾ ಪತಿಯು ರಹಸ್ಯ ವಾಗಿ ವಾಸಿಸಲು ಸರಿಯಾದ ಜಾಗವು ದೊರಕಲಿಲ್ಲ ವಲ್ಲಾ ಎಂದು ಯೋಚಿಸುತ್ತಿರುವಾಗ ಸ್ವಾಮಿ ಪುಷ್ಕರಣಿಯ ದಕ್ಷಿಣ ಭಾಗದಲ್ಲಿ ನಿರ್ಮಲವು,ದೇವತಾ ಯೊಗ್ಯವು ಆದ ಹುಣಸೇಮರದ ಅಡಿಯಲ್ಲಿ ಇರುವ ಒಂದು ಹುತ್ತವನ್ನು ಕಂಡು ಜಗತ್ ಪ್ರಭು ವಾದ ಭಗವಂತನು ಇದೇ ತಾನು ಗುಪ್ತ ವಾಗಿರಲು ಯೋಗ್ಯವಾದ ಸ್ಥಳವೆಂದು ಆಲೋಚಿಸಿ ಆ ಹುತ್ತದಲ್ಲಿ ಮರೆಯಾದನು..
ಇಂತು ಭಗವಂತನು ೧೦,೦೦೦ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದ ನು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ|
ದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದು|
ನಿಷ್ಕಾಮ ವರವೆ ಉಂಟು| ನಿತ್ಯಾ ಮುಕ್ತಿಗೆ ಗಂಟು|
...
ಪುಷ್ಕರಾಕ್ಷ ತಿಮ್ಮ ವಿಜಯವಿಠ್ಠಲ ಒಡೆಯ|
ಪುಷ್ಕರಣಿಯ ಮತಿ ಪುಷ್ಕಳವಾಗಿ ಕೊಡುವ|
🙏 ಹರೇಶ್ರೀನಿವಾಸ🙏
|ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ||* day6 part#2
||ವೆಂಕಟೇಶನೆ ನಮೊ ವೆಂಕಟೇಶನೆ ನಮೊ||
||ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
ಸ್ವಾಮಿ ಪುಷ್ಕರಣಿಯ ಚರಿತ್ರೆ ಅಥವಾ ಹುಟ್ಟು.
✍️ಹಿಂದೆ ಶ್ರೀಸರಸ್ವತಿ ದೇವಿಯು ತಾನು ಗಂಗಾದಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ಳಾಗಬೇಕೆಂದು ಬ್ರಹ್ಮಾವರ್ತದಲ್ಲಿ ತಪಸ್ಸು ಆಚರಣೆ ಮಾಡುತ್ತಾ ಇದ್ದಳು.ಆಗ ಪುಲಸ್ತ್ಯ ಋಷಿಗಳು ಅಲ್ಲಿ ಗೆ ಬಂದರು.ಪುಲಸ್ತ್ಯನು ತನ್ನ ಮಗನೆಂದು ಶ್ರೀಸರಸ್ವತಿ ದೇವಿಯು ಉದಾಸೀನ ಭಾವದಿಂದ ಇದ್ದುದ್ದನ್ನು ಕಂಡು ಪುಲಸ್ತ್ಯನು
"ನೀನು ಯಾವ ಉದ್ದೇಶದಿಂದ ತಪಸ್ಸು ಮಾಡುತ್ತಾ ಇರುವೆ ಅದು ಸಫಲವಾಗದೇ ಹೋಗಲಿ" ಅಂತ ತನ್ನ ತಾಯಿಗೆ ಶಾಪ ಕೊಟ್ಟನು.
ಅವಾಗ ಶ್ರೀಸರಸ್ವತಿ ದೇವಿಯು ಸಹ "ನಿನ್ನ ವಂಶದಲ್ಲಿ ರಾಕ್ಷಸರೇ ಹುಟ್ಟಲಿ "
ಅಂತ ಶಾಪ ಕೊಟ್ಟಳು.
ಆ ನಂತರ ಪುನಃ ಶ್ರೀಸರಸ್ವತಿ ದೇವಿಯು ತಪಸ್ಸು ಆಚರಿಸಿ ಭಗವಂತನ ಸಾಕ್ಷತ್ಕಾರ ಮಾಡಿಕೊಂಡು ಅವನಲ್ಲಿ ತನ್ನ ನಿರಂತರ ಸಾನಿಧ್ಯ ಬೇಡಿದಳು.
ಗಂಗಾ ನದಿಗಿಂತ ಶ್ರೇಷ್ಠ ವಾದ ಸ್ಥಾನ ವನ್ನು ಫಲಿಸದೇ ಹೋಗಲಿ ಅಂತ ಶಾಪತನಗೆ ಬಂದ ಬಗ್ಗೆ ಹೇಳಿದಾಗ
ಅದಕ್ಕೆ ಭಗವಂತನು
"ನದಿಗಳಲ್ಲಿ ಶ್ರೇಷ್ಠತೆ ಬೇಡ ಅಂತ ಶಾಪ ಇದೆ ಹೊರತು ಪುಷ್ಕರಣಿ ಯಲ್ಲಿ ಅಲ್ಲ.ನೀನು ಶೇಷಗಿರಿ ಪರ್ವತಕ್ಕೆ ಹೋಗು.ಆ ಗಿರಿಯ ದಕ್ಷಿಣ ಭಾಗ ದಲ್ಲಿ ಸುಖವಾಗಿ ನೆಲೆಸು.ನಾನು ಸಹ ನಿನ್ನ ಪಕ್ಕದಲ್ಲಿ ವಾಸ ಮಾಡುವೆ ಅಂತ ಹೇಳುವನು.
ಇದು ಸ್ವಾಮಿ ಪುಷ್ಕರಣಿ ತೀರ್ಥ ದ ಹಿನ್ನೆಲೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
*************
|ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ|| day7
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||.
🙏
ಹಿಂದಿನ ಸಂಚಿಕೆಯಲ್ಲಿ ಭಗವಂತನು ಭೂಲೋಕಕ್ಕೆ ಬಂದು ವೆಂಕಟಗಿರಿಯಲ್ಲಿ ಇರುವ ಸ್ವಾಮಿ ಪುಷ್ಕರಣಿ ತಟದಲ್ಲಿ ಇರುವ ಹುತ್ತದಲ್ಲಿ ಗುಪ್ತ ವಾಗಿ ವಾಸ ಮಾಡುತ್ತಾನೆ.
ಹೀಗೆ ದ್ವಾಪರಯುಗ ಕಳೆದು ೨೮ನೆಯ ಕಲಿಯುಗದಲ್ಲಿ ಕೆಲ ಸಂವತ್ಸರಗಳು ಗತಿಸಿದ ನಂತರ ನಾಗಕನ್ನಿಕೆಯ ಉದರದಲ್ಲಿ ಚೋಳರಾಜನೆಂಬ ಒಬ್ಬ ರಾಜೋತ್ತಮನು ಜನಿಸಿದನು. ಅವನು ಪುಣ್ಯ ಪ್ರದವಾದ ಆ ಭೂಭಾಗ ದಲ್ಲಿ ಸಕ್ರಮವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು. ಅವನ ರಾಜ್ಯ ವು ಕಾಲಕಾಲಕ್ಕೆ ಮಳೆ ಬೆಳೆಗಳಿಂದ ಸಮೃದ್ಧವಾಗಿ ಇತ್ತು.
ಹೀಗಿರುವಾಗ ಶ್ರೀಲಕ್ಷ್ಮೀ ದೇವಿಯು ಲೋಕ ವಿಡಂಬನಾರ್ಥವಾಗಿ ತನ್ನ ಪತಿಯನ್ನು ಹುಡುಕುವ ಪ್ರಯುಕ್ತ ಮತ್ತು ಭಗವಂತನ ಸೇವೆಗಾಗಿ ಗೊಲ್ಲತಿಯ ವೇಷ ಧರಿಸಿ ಶ್ರೀಬ್ರಹ್ಮ ದೇವರನ್ನು, ಆಕಳನ್ನಾಗಿಯು ಮತ್ತು ಶ್ರೀರುದ್ರ ದೇವರನ್ನು ಕರುವನ್ನಾಗಿ ಮಾಡಿಕೊಂಡು ಚೋಳರಾಜನ ಅರಮನೆಗೆ ಬರುತ್ತಾಳೆ.
ಬಂದಂತಹ ಗೊಲ್ಲತಿಯನ್ನು ನೋಡಿ ರಾಜನು
"ಈ ಆಕಳು ಕರುವಿನ ಬೆಲೆ ಎಷ್ಟು" ಎಂದು ಕೇಳಿದಾಗ ಅದಕ್ಕೆ ಶ್ರೀರಮಾದೇವಿಯು
ಇದನ್ನು ನಿನಗೆ ಉಚಿತವಾದ ಮೌಲ್ಯಕ್ಕೆ ಮಾರುತ್ತೇನೆ.ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗು ಸಂಪತ್ತಿನ ಒಡತಿಯಾದ ನನಗೆ ನಿನ್ನ ಧನವು ಬೇಡ.ಆದರೆ ಒಂದು ಶರತ್ತು.ಮಾಮೂಲಿ ಆಕಳಲ್ಲ,ಇದು
ಹತ್ತರಲ್ಲಿ ಹನ್ನೊಂದು ಅಂತ ಪಾಲನೆ ಮಾಡುವ ಹಾಗಿಲ್ಲ. ಚೆನ್ನಾಗಿ ಪಾಲಿಸಬೇಕು.
ಈ ಆಕಳು ಕೇಳಿದಷ್ಟು ಹಾಲನ್ನು ಕರೆಯುತ್ತದೆ.
ಇದರ ಹಾಲನ್ನು ಕುಡಿದವರಿಗೆ ರೋಗ ರುಜಿನಗಳ ಭಯವಿಲ್ಲ.
ಈ ಹಾಲನ್ನು ತನ್ನ ಸ್ವಂತಕ್ಕೆ ಬಳಸಬಾರದು.
ಹಾಗೇನಾದರು ಬಳಸುವೆ ಅಂದರೆ ಬೇರೆ ಕಡೆ ಮಾರಲು ಹೋಗುತ್ತೇನೆ.
ಈ ಗೋವಿನ ಹಾಲನ್ನು ಭಗವಂತನಿಗೆ ಗೊಸ್ಕರವೇ ಮೀಸಲಿಡಬೇಕು.ಇದೇ ಇದರ ಬೆಲೆ.ಅಂತ ಹೇಳಿದಾಗ,
ಆ ಶರತ್ತಿಗೆ ರಾಜ ಒಪ್ಪಿ ಒಪ್ಪಂದಕ್ಕೆ ಬರುವನು.ನಂತರ ಅವನಿಗೆ ಕೊಟ್ಟು ಶ್ರೀರಮಾದೇವಿ ಕೊಲ್ಹಾಪುರ ಕ್ಕೆ ಹೊರಡುವಳು.
ಭಗವಂತನ ಅನುಗ್ರಹದಿಂದ ಶ್ರೀಬ್ರಹ್ಮದೇವನಿಗೆ ಬ್ರಹ್ಮ ಪದವಿ ಮತ್ತು ಶ್ರೀರುದ್ರಾದಿ ಗಳಿಗೆ ಮೋಕ್ಷ ವನ್ನು ಕೊಡುವವಳಿಗೆ ಅವರನ್ನು ಆಕಳು ಕರುವನ್ನು ಮಾಡುವದು ಶ್ರೀರಮಾದೇವಿಗೆ ಅಸಾಧ್ಯ ವಾದ ಕಾರ್ಯವಲ್ಲ.
ಮೇಲಾಗಿ ಶ್ರೀಬ್ರಹ್ಮ ದೇವರು ಜೇಷ್ಠ ರು ಹಾಗಾಗಿ ಅವರನ್ನು ಆಕಳ ರೂಪದಿಂದ ಮತ್ತು ರುದ್ರ ದೇವರಿಗೆ ಕರುವನ್ನು ಮಾಡಿದಳು.
ಹೀಗಿರುವಾಗ ಶ್ರೀಬ್ರಹ್ಮ ದೇವರು ಗೋ ರೂಪದಿಂದ ಅ ರಾಜನ ಎರಡುಸಾವಿರ ಗೋವುಗಳ ಹಿಂಡಿನಲ್ಲಿ ಸೇರಿಕೊಂಡು ಭಗವಂತನು ಇರುವ ಸ್ಥಳವನ್ನು ಹುಡುಕಿಕೊಂಡು ಹೊರಟರು.
ತಾಯಿಯ ಆಜ್ಞೆಯಂತೆ ಆಕಳು-ಕರು ವೇಷ ಧಾರಿಗಳಾದ ಶ್ರೀಬ್ರಹ್ಮ-ರುದ್ರದೇವರು ಜಗತ್ಪತಿಯನ್ನು ಹುಡುಕುವ ಹಾಗೆ ನಟಿಸುತ್ತ, ಸ್ವಾಮಿಯು ಕುಳಿತಿರುವ ಹುತ್ತಿನಲ್ಲಿಗೆ ಬಂದು,ಆ ಹುತ್ತಿನಲ್ಲಿರುವ ತನ್ನ ಮತ್ತು ಜಗತ್ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುತ್ತಾ,ರಾಜನ ಮನೆಯವರಿಗೆ ಹಾಲನ್ನು ಕೊಡದ ಹಾಗಾಯಿತು..
ಇಲ್ಲಿ "ಗೋ"ಎಂದರೆ ಸರ್ವ ವೇದ ಮಂತ್ರಗಳೆಂದರ್ಥ,
"ಕ್ಷೀರ"ಎಂದರೆ ಸರ್ವ ವೇದಗಳಿಂದ ಪ್ರತಿಪಾದ್ಯನಾದ ಎಲ್ಲರಿಂದಲೂ,ಎಲ್ಲಾ ಕಾಲಗಳಲ್ಲಿಯು ನವರಸ ಭರಿತವಾದ ನವವಿಧ ಭಕ್ತಿಯು, ಧ್ಯಾನಕ್ಕೆ ಮಾಧ್ಯಮವಾಗಿ ಬಿಂಬಾಪರೋಕ್ಷವನ್ನು ಉಣಿಸುವ ಅಮೃತ ರಸವೆಂದರ್ಥ..
ಈ ರಸವನ್ನು ಜಗತ್ಸ್ವಾಮಿಗೆ ಒಂದು ಬಿಟ್ಟು ಬೇರೆಯವರು ಅನರ್ಹರು ಎಂಬ ಉದ್ದೇಶದಿಂದ ಆಕಳ ರೂಪದಿಂದಯಿರುವ ಶ್ರೀಬ್ರಹ್ಮದೇವರು ರಾಜನ ಮನೆಯಲ್ಲಿ ಒಂದು ದಿನವು ಹಾಲು ಕೊಡುವುದಿಲ್ಲ..
ಆ ಹುತ್ತಕ್ಕೆ ಅದರಲ್ಲಿ ಅಡಗಿರುವ ಸ್ವಾಮಿಗೆ ತನ್ನ ಕೆಚ್ಚಲು ಹಾಲಿನಿಂದ ಧಾರಾಕಾರವಾಗಿ ಅಭಿಷೇಕ ವನ್ನು ಮಾಡಿ ಹೋಗುತ್ತಾ ಇದ್ದರು..
ಶ್ರೀಬ್ರಹ್ಮ ದೇವರು ಆಕಳ ರೂಪದಿಂದ ಬಂದು ಚೋಳರಾಜನ ಅರಮನೆಯಲ್ಲಿದ್ದುಕೊಂಡೆ ಅಲ್ಲಿರುವ ಬೇರೆ ಹಸುವಿನೊಂದಿಗೆ ಬೆರೆತು, ಪರಮಾತ್ಮನಿಗೆ ನಿತ್ಯದಲ್ಲಿಯೂ ಕ್ಷೀರಾಭಿಷೇಕವನ್ನು ಮಾಡತೊಡಗಿದರು.ಆದ ಕಾರಣ ಮನೆಯಲ್ಲಿ ಚೋಳರಾಜನಿಗೆ ಒಂದು ದಿವಸವು ಕೂಡಾ ಹಾಲನ್ನು ಕೊಡದಂತಾಯಿತು.ಆಗ ಚೋಳರಾಜನ ಪತ್ನಿಯು ಗೋಪಾಲಕನನ್ನು ಕರೆದು "ಅದರ ಕ್ಷೀರವನ್ನು ನೀನೇ ಕುಡಿಯುತ್ತಿಯೋ?ಅಥವಾ ಬೇರೆ ಯಾರಿಗಾದರು ಕೊಡುತ್ತಿಯೋ?"ಎಂದು ಕೋಪಿಸಿಕೊಂಡು ಅವನಿಗೆ ದಂಡಿಸಿ ಬೆದರಿಸಿದಳು.ಅದಲ್ಲದೆ ಇದೆ ರೀತಿಯು ಮುಂದುವರಿಸಿದರೆ ನಿನ್ನನ್ನು ಉಗ್ರವಾಗಿ ದಂಡಿಸಬೇಕಾಗುವದೆಂದು ಗದರಿಸಿದಳು.
ಆಗ ಮರುದಿನ ಗೋ- ಪಾಲಕನು ಆ ಹಸುವಿನ ಹಿಂದೆಯೆ ಹೋಗಿ,ಪ್ರತಿನಿತ್ಯ ಹಾಲು ಕರೆಯುವಂತೆ ಕರೆಯುವದನ್ನು ಕಂಡು,ಕುಪಿತನಾಗಿ ಹಸುವನ್ನು ತನ್ನಲ್ಲಿರುವ ಕೊಡಲಿಯಿಂದ ಹೊಡೆಯಲು ಹೋದಾಗ ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವು| ಇಂದಿರಾ ರಮಣಗರ್ಪಿಸಲು
ಎಂಬಂತೆ ಹಸುವಿನ ರೂಪದಿಂದಿರುವ ಶ್ರೀಬ್ರಹ್ಮದೇವರನ್ನು ರಕ್ಷಿಸಿ,ಆಕಳಿಗೆ ಬೀಳುವ ಕೊಡಲಿ ಪ್ರಹರವನ್ನು ತಾನೆ ಸ್ವತಃ ತೆಗೆದುಕೊಂಡನು.*.
ಆಗ ದೇವರ ತಲೆಯಿಂದ ಸಪ್ತ ತಾಳ ಪ್ರಮಾಣದಷ್ಟುರಕ್ತವು ಚಿಲುಮೆಯಾಗಿ ಹರಿಯ ತೊಡಗಿತು.ಇಲ್ಲಿ ತಾಳ ಎಂಬ ಅಳತೆಯು "ಒಂದು ಮೊಳ,ಪ್ರಾದೇಶ ಪ್ರಮಾಣ ಮಾತ್ರವೆಂದು ತಿಳಿಯುವದು"...
ಆ ರಕ್ತದ ಚಿಲುಮೆಯನ್ನು ಕಂಡ ಗೋಪಾಲಕನು ಮೂರ್ಛಿತನಾಗಿ ಬಿದ್ದು ಅಲ್ಲಿಯೆ ಅಸು ನೀಗಿದನು..
ಇದನ್ನು ಕಂಡ ಹಸುವು ಅರಮನೆಗೆ ಬಂದು ಚೋಳರಾಜನನ್ನು ಆ ಬೆಟ್ಟಕ್ಕೆ ಕರೆದೊಯ್ದು ,ನಡೆದ ವೃತ್ತಾಂತವನ್ನು ಶ್ರೀವೆಂಕಟೇಶನಿಂದಲೇ ತಿಳಿಸಿತು.
ಆಗ ಜಗತ್ಪ್ರಭುವಾದ ಸ್ವಾಮಿಯು ತನ್ನ ಭಕ್ತರಿಗಾದ ಅವಮಾನವನ್ನು ಸಹಿಸಲಾರದೆ ಚೋಳರಾಜನಿಗೆ
"ನೀನು ಮಾಡಿದ ಅಪರಾಧಕ್ಕೆ ಪಿಶಾಚಿ ಜನ್ಮವನ್ನು ತಾಳು"ಎಂದು ಶಾಪವನ್ನಿತ್ತನು.ಆಗ ರಾಜನು ಈ ಶಾಪದಿಂದ ನಮಗೆ ಹೇಗೆ ಮುಕ್ತಿಯೆಂದು ಕೇಳಿದಾಗ ಒಂದು ವರವನ್ನು ಕೊಟ್ಟನು.ಅದೆನೆಂದರೆ
ಮುಂದೆ ಇಲ್ಲಿ ಆಕಾಶರಾಜನು ಬಂದಾಗ, ಪದ್ಮಾವತಿಯೆಂಬ ಲಕ್ಷ್ಮೀ ಸ್ವರೂಪಳಾದ ಕನ್ಯೆಯನ್ನು ನನಗೆ ಪಾಣಿಗ್ರಹಣ ಮಾಡುವನು. ಆಗ ರಾಜನು ನನಗೆ ಒಂದು ಶತಭಾರದ ಕಿರಿಟವನ್ನು ದಾನ ಮಾಡುವ.ಅದನ್ನು ಪ್ರತಿ ಶುಕ್ರವಾರದಂದು ಧರಿಸಿದಾಗ ನನ್ನ ಕಣ್ಣಲ್ಲಿ ನೀರು ಬರುವವು.ಆಗ ನಿನಗೆ ನನ್ನಿಂದ ಸಂತೋಷ ಉಂಟಾಗುತ್ತದೆಂದು ಹೇಳಿ"ವರವನ್ನು ಕೊಟ್ಟು ಉದ್ಧರಿಸಿದನು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ವಾಯುವಂದಿತ ವಿಜಯವಿಠಲ|
ವೆಂಕಟಗಿರಿ ರಾಯ ತನ್ನ ಶರಣರಿಗೆ ಭೀತಿ ಬರಗೊಡನು|
🙏ಹರೇ ಶ್ರೀನಿವಾಸ🙏
***************
[5:12 PM, 10/24/2020] Prasad Karpara Group: ||ಶ್ರೀವೆಂಕಟೇಶ ಮಹಾತ್ಮೆ||
Day8
✍ ಶ್ರೀ ವೆಂಕಟೇಶ ಮಹಾತ್ಮೆ ಯಲ್ಲಿ ಶ್ರೀಲಕ್ಷ್ಮಿ ದೇವಿಯು ಶ್ರೀಬ್ರಹ್ಮ ರುದ್ರಾದಿಗಳನ್ನು ಗೋವು ಮತ್ತು ಅದರ ಕರುವನ್ನಾಗಿ ಮಾಡಿಕೊಂಡು ಚೋಳರಾಜನ ಅರಮನೆ ಗೆ ಬರುತ್ತಾಳೆ.
ರಾಜನು ಇವುಗಳ ಮೌಲ್ಯ ಕೇಳಿದಾಗ
ಅವಾಗ ಶ್ರೀಲಕ್ಷ್ಮಿ ದೇವಿಯು
ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರು ಮೂರು ನಿಯಮಗಳಿವೆ.
೧.ಇದು ಗೋವು ಕಾಮಧೇನು ವಿನಂತೆ.ಏನು ಬೇಕಾದರು ಸೇವೆ ಮಾಡಿ ಪಡೆಯಬಹುದು..
೨.ಇದನ್ನು ಮಾಮೂಲು ಗೋವಿನ ಹಾಗೇ ಪರಿಗಣಿಸದೇ ಪ್ರತ್ಯೇಕ ವಾಗಿ ಪೋಷಿಸಬೇಕು.
ಮತ್ತು
ಇದರ ಹಾಲನ್ನು ನನ್ನ ಯಜಮಾನನ ಯೋಗಕ್ಷೇಮ ಕ್ಕಾಗಿ ನಿನಗೆ ವಿಕ್ರಯ ಮಾಡುತ್ತಾ ಇದ್ದೀನಿ.
೩)ಭಗವಂತನಿಗೆ ಹೊರತಾಗಿ ಇದರ ಹಾಲನ್ನು ಬೇರೆ ಯಾರಿಗು ಮೀಸಲು ಮಾಡತಕ್ಕದ್ದಲ್ಲ. ನನಗೆ ನಿನ್ನ ಧನವು ಬೇಡ.ಇದೇ ಇದರ ಬೆಲೆ ಅಂತ ಹೇಳಿ ಹೊರಟು ಹೋಗುವಳು.
ಹಸುವಿನ ರೂಪವನ್ನು ತಾಳಿದ ಶ್ರೀಬ್ರಹ್ಮ ದೇವರು ನೆಲವನ್ನು ಮೂಸಿ ನೋಡುತ್ತಾ ಭಗವಂತನ ಹುಡುಕಾಟ ಮಾಡಲು
ನಂತರ ಸ್ವಾಮಿ ಪುಷ್ಕರಣಿ ಬಳಿ ಹುತ್ತ ದ ಒಳಗಡೆ ಇರುವ ತನ್ನ ಸ್ವಾಮಿ ಯನ್ನು ಕಂಡು ಆನಂದ ಗೊಂಡರು.
ಮೂಸಿ ನೋಡುವದು ಪ್ರಾಣಿಗಳ ಸ್ವಭಾವ...
ಮಧ್ವ ಶಾಸ್ತ್ರದ ಮೂಲಕ ಭಗವಂತನನ್ನು ಕಾಣಬೇಕು ಅಂತ ಇಲ್ಲಿ ಸೂಚನೆ..
ನಂತರ
ಗೋ ಅಂದರೆ ವೇದಗಳು ಅವುಗಳನ್ನು ಅವಲಂಬಿಸಿದರೆ ಭಗವಂತನು ಸಿಗುತ್ತಾನೆ ಎಂದು ಇನ್ನೊಂದು ಅರ್ಥ.
ಗೋ ಸೇವೆ ಮಾಡುವದರಿಂದ ಭಗವಂತನ ದರುಶನ ಸಾಧ್ಯ ವೆಂದು ಸೂಚನೆ.
ನಿತ್ಯ ಗೋವು ಹಾಲು ಕೊಡದೇ ಇರುವುದು ನೋಡಿ ರಾಣಿಯು ಗೋಪಾಲಕನಿಗೆ ದಂಡಿಸುವಳು.
ಪೆಟ್ಟು ತಿಂದ ಗೋಪಾಲಕ ಸಿಟ್ಟಿ ನಿಂದ ಮರುದಿನ ಆಕಳ ರೂಪದಲ್ಲಿ ಇರುವ ಶ್ರೀಬ್ರಹ್ಮ ದೇವರ ಕುತ್ತಿಗೆ ಹಾಗು ಕಾಲಿಗೆ ಹಗ್ಗವನ್ನು ಕಟ್ಟಿ ಅದರ ಹಿಂದೆಯೆ ಹೋಗುವನು.
ಅಲ್ಲಿ ಹುತ್ತ ಕ್ಕೆ ಹಾಲು ಸುರಿಸುವದು ನೋಡಿ ಕೋಪದಿಂದ ಕೊಡಲಿ ಎತ್ತಿ ಆಕಳನ್ನು ಸಂಹರಿಸಲು ಹೋಗುವನು.
ಗೋಪಾಲಕನು ಗೋವನ್ನು ಕೊಲ್ಲಲು ಸಿದ್ದನಾದಾಗ
ಶ್ರೀನಿವಾಸನು ತನ್ನ ಭಕ್ತ ರಲ್ಲಿ ತನಗಿರುವ ವಾತ್ಸಲ್ಯ ವನ್ನು ತೋರಿಸಲೋಸುಗ ಮತ್ತು ಲೋಕದಲ್ಲಿ ಯಾರೇ ಆಗಲಿ ತನ್ನ ಭಕ್ತರು ಯಾರು ಇದ್ದಾರೆ ಅವರನ್ನು ಕಣ್ಣು ಮುಂದೆ ಸಂಹಾರ ಮಾಡುವದನ್ನು ನೋಡಿಯು ಸುಮ್ಮನೆ ಇದ್ದರೆ ಸೂರ್ಯ ಚಂದ್ರ ಇರುವವರೆಗು ನರಕವಾಸಿಯಾಗಿ ಅಲ್ಲಿ ಶಿಕ್ಷೆ ಅನುಭವಿಸುವ ಎನ್ನುವ ತನ್ನ ಮಾತಿನಂತೆ
ಹಾಗು
ಒಂದೇ ಒಂದು ತುಳಸಿ ದಳದಿಂದ ಭಕ್ತಿ ಇಂದ ಯಾರು ನನ್ನ ಪೂಜಿಸುವರೊ ಅಂತಹ ಭಕ್ತ ನನ್ನು ಕಾಪಾಡುವೆನು ಎನ್ನುವ ನನ್ನ ಪ್ರತಿಜ್ಞೆ ಇದೆ.
ಆದ್ದರಿಂದ
ಮೇಲಾಗಿ ನನ್ನ ಮಗ,ಪರಮ ಭಾಗವತರಾದ ಶ್ರೀಬ್ರಹ್ಮದೇವನಿಗೆ ರಕ್ಷಣೆ ಮಾಡಬೇಕೆಂದು ನಿಶ್ಚಯಿಸಿ ಕೊಲ್ಲಲು ಹೊರಟ ಆ ಗೋಪಾಲಕನ ಕೊಡಲಿ ಏಟನ್ನು ತಾನು ತೆಗೆದುಕೊಂಡ.
ಮತ್ತು
ಗೋವಿನ ಸಂಹಾರ ಯಾರೇ ಮಾಡಲು ಹೊರಟಾಗ ಅದನ್ನು ತಡೆದು ಅದರ ರಕ್ಷಣೆ ಮಾಡುವ ಬಗ್ಗೆ ನಮಗೆ ಇಲ್ಲಿ ಸೂಚನೆ ಕೊಟ್ಟ.
ತಕ್ಷಣವೇ
ಶ್ರೀನಿವಾಸನ ತಲೆ ಹೊಡೆತದಿಂದ ಭಿನ್ನವಾಯಿತು.
ಏಳು ತಾಳೆಯ ಮರದಷ್ಟು ಎತ್ತರಕ್ಕೆ ರಕ್ತ ಚಿಮ್ಮಿತು.
ಭಗವಂತನ ಶರೀರ ಅಭೇದ್ಯವಾಗಿದ್ದು ಇದನ್ನು ಯಾರು ಸೀಳಲು ಸಾಧ್ಯವಿಲ್ಲ.
ವಾಮನ ಅವತಾರದಲ್ಲಿ ಇವನ ಎಡಗಾಲಿನ ಅಂಗುಷ್ಟ ಉಗುರು ನೂರು ಕೋಟಿ ಯೋಜನ ದಪ್ಪ ಇರುವ ಬ್ರಹ್ಮಾಂಡದ ಕಟಾಹವನ್ನು ಸೀಳಿದರು,ಅದು ಬೆರಳು ಬಗ್ಗಿಹೋದ ಬಗ್ಗೆ ದಾಖಲೆ ಇಲ್ಲ.
ನೇರವಾಗಿ ವೈಕುಂಠ ದಿಂದ ಬಂದ ಭಗವಂತನಿಗೆ, ಅಪ್ರಾಕೃತ ಶರೀರಧಾರಿಯಾದ ಅವನಿಗೆ ನಮ್ಮ ಹಾಗೆ ಪ್ರಾಕೃತ ದೇಹದ ತರಹ ರಕ್ತ ಬರುವದಾದರು ಹೇಗೆ ಸಾಧ್ಯ??
ಮತ್ತೆ ಇಲ್ಲಿ ಹೇಗೆ ಬಂತು?? ಅಂದರೆ
ಆ ಕಾಲದಲ್ಲಿ ಅಸುರಿ ಜನ ಮೋಹನಕ್ಕಾಗಿ ಸೃಷ್ಟಿಸಿದ ಹೊರತಾಗಿ
ಮತ್ತು ಅಜ್ಞಾನ ಉಳ್ಳವರಿಗೆ ನಮ್ಮ ಹಾಗೇ ಅವನ ದೇಹ ಎನ್ನುವ ಭಾವನೆಗಳನ್ನು ಬರುವ ಹಾಗೆ ಮಾಡಿದ ಹೊರತಾಗಿ ಅವನಿಗೆ ಯಾವುದೇ ಗಾಯಗಳು ಆಗಿಲ್ಲ.
ಭಗವಂತನ ತಲೆಯಿಂದ ರಕ್ತ ಹರಿಯುವಿಕೆ ಕಂಡು ಗೋಪಾಲಕನು ತಕ್ಷಣ ಅಲ್ಲಿ ಪ್ರಾಣ ಬಿಟ್ಟನು.ನಂತರ ಗೋವು ಬೆಟ್ಟ ದಿಂದ ಕೆಳಗಡೆ ಇಳಿದು ಚೋಳರಾಜನ ಅರಮನೆ ಬಂದು ಕೆಳಗೆ ಬಿದ್ದು ಹೊರಳಾಡಹತ್ತಿತು.
ರಾಜನು ಸೇವಕನನ್ನು ಕರೆದು ಈ ಆಕಳನ್ನು ಅದರ ಗುಂಪಿಗೆ ಸೇರಿಸು ಎನ್ನಲು ಅವನು ಆಕಳ ಹಿಂದೆ ಹೋಗಿ ನಡೆದ ದೃಶ್ಯಗಳನ್ನು ನೋಡಿ ರಾಜನಿಗೆ ಬಂದು ಹೇಳುತ್ತಾನೆ. ತಕ್ಷಣ ರಾಜನು ಆ ಜಾಗಕ್ಕೆ ಬಂದು ನೋಡಿ ಆಶ್ಚರ್ಯ ಹೊಂದಿ ಏನಿದು ವಿಚಿತ್ರ ಎನ್ನಲಾಗಿ
ತಕ್ಷಣ ಹುತ್ತ ದೊಳಗಿಂದ ಸ್ವಾಮಿ ಎದ್ದು ಬಂದು ರಾಜನಿಗೆ ರಾಕ್ಷಸ ನಾಗು ಎಂದು ಶಾಪ ಕೊಡುವನು.
ರಾಜನಿಗೆ ಶಾಪ ಕೊಡಲು ಕಾರಣ ಬಗ್ಗೆ ನಂತರ ತಿಳಿಯೋಣ.
ಮುಂದಿನ ಭಾಗ ನಾಳೆ
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ತಿಳಿಯದೋ ನಿನ್ನಾಟ| ತಿರುಪತಿಯ ವೆಂಕಟ||
[5:12 PM, 10/24/2020] Prasad Karpara Group: ||ಶ್ರೀನಿವಾಸ ಕಲ್ಯಾಣ ಮಹಾತ್ಮೆ||day 8 part #2
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಗೋ ರೂಪದಲ್ಲಿ ಇದ್ದ ಬ್ರಹ್ಮ ದೇವರು ಭಗವಂತನಿಗೆ ಹಾಲನ್ನು ಕರೆಯುವುದು ಕಂಡು ಗೋಪಾಲಕನು ಹುತ್ತ ದಲ್ಲಿ ಯಾವುದೋ ಪಿಶಾಚಿ ಇರಬೇಕು. ಅದು ಗೋವನ್ನು ವಶಪಡಿಸಿಕೊಂಡು ಅದರಿಂದ ಹಾಲನ್ನು ಈ ರೀತಿಯಲ್ಲಿ ತೆಗೆದುಕೊಳ್ಳುತ್ತದೆ.
ಗೋವಿನ ಅಪರಾಧ ಏನು ಇಲ್ಲ ಅಂತ ತಿಳಿದುಕೊಂಡು
ಎಲೈ ಪಿಶಾಚಿ ಯೇ !!ಹೊರಗೆ ಬಾ..ನೀನು ಬರದಿದ್ದರೆ ನಿತ್ಯ ನಿನಗೆ ಹಾಲನ್ನು ಕೊಡುವ ಆಕಳನ್ನು ಸಂಹಾರ ಮಾಡುವೆ ಅಂತ ಕೋಪದಿಂದ ಕೊಡಲಿಯನ್ನು ಎತ್ತಿ ಸಂಹರಿಸಲು ಹೋದಾಗ ಅವಾಗ್ಗೆ ಭಗವಂತನು ತನ್ನ ಭಕ್ತರಲ್ಲಿ ಇರುವ ವಾತ್ಸಲ್ಯ ವನ್ನು ತೋರಿಸುತ್ತಾ,
ತನ್ನ ಸ್ವಾರ್ಥ ದಿಂದ ಯಾವ ಮನುಷ್ಯ ನು ನನ್ನ ಭಕ್ತನನ್ನು ಕಣ್ಣಿನ ಎದುರಿಗೆ ಕೊಲ್ಲಲು ಪಡುತ್ತಾಇರುವದನ್ನು ಕಂಡು ನೋಡಿ ಸುಮ್ಮನೆ ಇರುವನೊ ಅಂಥವನು ಸೂರ್ಯ ಚಂದ್ರ ಇರುವವರೆಗು ನರಕವನ್ನು ಅನುಭವಿಸುವನು..
ನೀಚನಾದ ಈ ದನಗಾಹಿಯು ನನಗೆ ಹಾಲು ಕೊಡುವ ಕಾರಣದಿಂದಾಗಿ ಈ ಗೋವನ್ನು ಅನ್ಯಾಯವಾಗಿ ಕೊಲ್ಲಲು ಸಿದ್ದನಾಗಿದ್ದಾನೆ.
ಒಂದೇ ಒಂದು ತುಳಸಿದಳ ದಿಂದ ನನ್ನನ್ನು ಭಕ್ತಿಯಿಂದ ಪೂಜಿಸಿದರು ಸಾಕು ಅಂತಹ ಭಕ್ತರನ್ನು ಕಾಪಾಡುವೆಎಂದು ನನ್ನ ಪ್ರತಿಜ್ಞೆ ಇದೆ.
ಹೀಗಿರುವಾಗ ನನ್ನ ಮಗನಾದ ಬ್ರಹ್ಮದೇವನು ನನ್ನ ಅಚ್ಛಿನ್ನ ಭಕ್ತನಾಗಿರುವನು.ಮತ್ತು ಗೋವಿನ ರೂಪ ಧರಿಸಿ ನನ್ನ ಸೇವೆ ಮಾಡಲು ಬಂದಿರುವನು.ಮೇಲಾಗಿ ನನ್ನ ಪುತ್ರನು.ಹಾಗಾಗಿ ಅವನ ರಕ್ಷಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ ಭಗವಂತನು ಆ ಕೊಡಲಿಯ ಪೆಟ್ಟಿಗೆ ತನ್ನ ಶಿರವನ್ನು ಒಡ್ಡಿ ಆ ಪೆಟ್ಟು ಸ್ವೀಕಾರ ಮಾಡಿದನು.
ಕಠಿಣವಾದ ಕುಠಾರದಿಂದ ಹೊಡೆಯಿಸಿಕೊಂಡ ಶ್ರೀನಿವಾಸನ ತಲೆಯು ತೀಕ್ಷ್ಣ ವಾದ ಆ ಕೊಡಲಿಯ ಹೊಡೆತದಿಂದ ಭಿನ್ನ ವಾಯಿತು.
ಶ್ರೀನಿವಾಸನ ತಲೆಯೊಡೆದು ಏಳು ತಾಳೆಯ ಮರದಷ್ಟು ಎತ್ತರಕ್ಕೆ ರಕ್ತ ವು ಚಿಮ್ಮಿತು.
ಭಗವಂತನ ಶರೀರ ಅಚ್ಛೇದ್ಯ ಹಾಗು ಅಭೇದ್ಯವಾಗಿದ್ದು ಯಾರು ಸೀಳಲು ಸಾಧ್ಯವಿಲ್ಲ..
ಇವನ ಎಡಗಾಲಿನ ಅಂಗುಷ್ಟದ ಉಗುರು ನೂರು ಕೋಟಿ ಯೋಜನ ದಪ್ಪ ಇರುವ ಬ್ರಹ್ಮಾಂಡದ ಕಠಾಹವನ್ನು ಸೀಳಿದ್ದರು ಅದು ಬಗ್ಗಿಹೋದ ಬಗ್ಗೆ ದಾಖಲೆ ಇಲ್ಲ.ಹೀಗಿರುವಾಗ ತಲೆಯನ್ನು ಸೀಳುವದು ಹೇಗೆ??
ನೇರವಾಗಿ ವೈಕುಂಠ ದಿಂದ ಬಂದ ಅಪ್ರಾಕೃತನಿಗೆ ಪ್ರಾಕೃತ ಶರೀರ ದಂತೆ ರಕ್ತ ಬರುವದು ಹೇಗೆ??
ಇದೆಲ್ಲಾ ಅವನ ನಟನೆ.ಅವನು ಅಪ್ರಾಕೃತನಾದರು ಪ್ರಾಕೃತ ರಕ್ತವನ್ನು ಆ ಕಾಲದಲ್ಲಿಸೃಷ್ಟಿಸಿ ತನ್ನ ಸ್ವರೂಪದ ಬಗ್ಗೆ ಅಯೋಗ್ಯ ವ್ಯಕ್ತಿಗಳಿಗೆ ತಪ್ಪು ಕಲ್ಪನೆ ಉಂಟಾಗಿಸುವದು ಮತ್ತು ಯೋಗ್ಯ ವ್ಯಕ್ತಿಗಳು ತನ್ನ ಈ ವಿಡಂಬನೆಯ ಲೀಲಾ ವೈಭವವನ್ನು ಅನುಭವಿಸುವಂತೆ ಮಾಡುವದು ಇದರ ಉದ್ದೇಶ.
ಈ ಹಿನ್ನೆಲೆ ಯಲ್ಲಿ ವೆಂಕಟೇಶ ನು ಗೋಪಾಲನ ಕೊಡಲಿನ ಏಟಿಗೆ ತನ್ನ ತಲೆಗೆ ಗಾಯವಾದಂತೆ ನಟಿಸಿದನು.
ಭಗವಂತನ ತಲೆಯಿಂದ ಬಂದ ರಕ್ತ ವನ್ನು ನೋಡಿ ಗೋಪಾಲಕನು ಮರಣ ಹೊಂದಿದನು.
ಗೋಪಾಲಕನು ಮೃತಿಹೊಂದಿದ್ದನ್ನು ಕಂಡು ಆ ಗೋವು ಬೆಟ್ಟ ದಿಂದ ಇಳಿದು ಚೋಳರಾಜನ ಬಳಿಗೆ ಬಂದು ಅತಿ ದುಃಖದಿಂದ ಹೊರಳಾಡಹತ್ತಿತು.ಅವಾಗ್ಗೆ ರಾಜನು ದೂತನನ್ನು ಆಕಳ ಹಿಂದೆ ಕಳುಹಿಸಿ ಏನಾಗಿದೆಎಂದು ನೋಡಿ ಬರಲು ಕಳುಹಿಸಿದನು.ಆ ದೂತನು ಪರ್ವತಕ್ಕೆ ಹೋಗಿ,ಅಲ್ಲಿ ಹುತ್ತದಿಂದ ರಕ್ತ ಹರಿಯುತ್ತಾ ಇರುವುದನ್ನು ಕಂಡು ಬಂದು ರಾಜನಿಗೆ ಹೇಳುತ್ತಾನೆ.
ತಕ್ಷಣ ಚೋಳರಾಜನು ಮೇನೆಯಲ್ಲಿ ಕುಳಿತು ಆ ಪರ್ವತಕ್ಕೆ ಆಗಮಿಸಿದ. ನೋಡಿ ಆಶ್ಚರ್ಯಕರವಾಗಿ ಯಾರು ಇದನ್ನು ಮಾಡಿರಬಹುದು ಅಂತ ತನ್ನಲ್ಲಿ ಮಾತನಾಡುತ್ತಾ ಇರುವಾಗ
ಹುತ್ತದಿಂದ ಹಾವು ಹೇಗೆ ಹೊರಗಡೆ ಬರುವದೊ ಅದೇ ರೀತಿ ಯಲ್ಲಿ ಸರಸರಸನೇ ಶ್ರೀನಿವಾಸ ಬಂದನು.
ತನ್ನ ಶಿರಸ್ಸಿನ ಮೇಲೆ ಅಂಗೈಯನ್ನು ಇಟ್ಟು ಕೊಂಡು ಗಾಯವನ್ನು ಒತ್ತುತ್ತಾ ಕಣ್ಣೀರು ಸುರಿಸುತ್ತಾ ನುಡಿದ.
ಎಲವೋ ಪಾಪಿ!ಚೋಳರಾಜನೆ ಕೇಳು.
ಮಂದಮತಿಯೇ, ಮಧಾಂದನಾಗಿರುವೆಯಲ್ಲ.
ತಂದೆ ತಾಯಿಗಳಿಲ್ಲ ,ಬಂಧು ಬಳಗವಿಲ್ಲ ,ನನಗೆ..ಸದಾ ಎಡತೊಡೆಯ ಮೇಲೆ ಒಪ್ಪುವ ಎನ್ನ ಮಡದಿಯು ಎನ್ನನ್ನು ಬಿಟ್ಟು ಸಿಟ್ಟು ಮಾಡಿಕೊಂಡು ದೂರ ನಡೆದಳು.ಪತ್ನಿ ಪುತ್ರರಿಂದ ಬಿಡಲ್ಪಟ್ಟಿರುವ ನನಗೆ ನಿನ್ನ ಗೋಪಾಲಕನು ನನ್ನ ತಲೆಯನ್ನು ಕೊಡಲಿಯಿಂದ ಒಡೆದನು.ಈ ಅಘಾತದಿಂದ ನನಗೆ ದುಃಖ ವಾಗುವಂತೆ ಮಾಡಿದ ನೀನು ಪಿಶಾಚಿ ಯಾಗು ಅಂತ ಶಾಪವನ್ನು ಕೊಡುತ್ತಾನೆ.
ಶ್ರೀ ಹರಿಯ ಶಾಪವನ್ನು ಪಡೆದ ಚೋಳರಾಜನು ಮೂರ್ಚಿತನಾಗಿ ಧರಾಶಾಯಿಯಾಗಿ ಬಿದ್ದನು.ಕೆಲ ಸಮಯದ ನಂತರ ಪರಮಾತ್ಮನ ಬಳಿ ಪ್ರಾರ್ಥನೆ ಮಾಡಿದನು.
ನಾ ಮಾಡಿದ ತಪ್ಪು ಆದರು ಏನು??ಯಾಕೆ ಶಾಪವನ್ನು ಕೊಟ್ಟಿದ್ದು??ಇದರಿಂದ ವಿಮುಕ್ತಿ ಹೇಗೆ??ಅಂತ ಕೇಳಿದಾಗ ಅದಕ್ಕೆ ಭಗವಂತನು ಹೇಳುತ್ತಾನೆ.
ಎಲೈ !!ರಾಜನೇ ಕೇಳು!! ನನ್ನ ಶಾಪವು ಎಂದಿಗು ಹುಸಿಯಾಗದು.ಯಾವ ಯಜಮಾನನು ತನ್ನಹೆಂಡತಿ ಮಕ್ಕಳು ಯಾವುದೇ ಕಾರ್ಯವನ್ನು ಮಾಡುವಾಗ ಧರ್ಮ, ಅಧರ್ಮಗಳನ್ನು ವಿಚಾರ ಮಾಡುವದಿಲ್ಲವೋ ಅವನು ಅವನ ಹೆಂಡತಿ ಮಕ್ಕಳು ಮಾಡಿದ ಪಾಪಕ್ಕೆ ಗುರಿಯಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಸೇವಕನು ಮಾಡಿದ ತಪ್ಪಿಗೆ ಯಜಮಾನ ಹೊಣೆಯಾಗುವನು..
ಇದರ ಅಭಿಪ್ರಾಯ ಇಷ್ಟೇ.
ನೀನು ನನ್ನ ಭಕ್ತನೆಂದು ತಿಳಿದು ಶ್ರೀಲಕ್ಷ್ಮೀ ದೇವಿಯು ಗೋ ರೂಪದಲ್ಲಿದ್ದ ಬ್ರಹ್ಮ ರುದ್ರಾದಿಗಳನ್ನ ನೀಡಿದರೆ ಅದನ್ನು ನಿನ್ನ ಹೆಂಡತಿಯು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು, ಬಲವಂತವಾಗಿ ಆ ಆಕಳ ಹಾಲನ್ನು ಕರೆಸಿಕೊಂಡು ತನ್ನ ಮಗನಿಗೆ ಬಳಸಿದಳು.
ಈ ಮೂಲಕ ಶ್ರೀರಮಾದೇವಿಯು ಹೇಳಿದ ಮಾತು
"ಭಗವಂತನಿಗೆ ಗೊಸ್ಕರವೇ ಇದರ ಹಾಲನ್ನು ಬಳಸಬೇಕೆಂದು ಹೇಳಿದ" ಮಾತನ್ನು ಉಲ್ಲಂಘನೆ ಮಾಡಿದಳು.
ನಂತರ ಹಾಲು ಕೊಡದೆ ಇದ್ದುದ್ದನ್ನು ನೋಡಿ ಗೋಪಾಲಕನಿಗೆ ತಾಡನೆ ಮಾಡಿದಾಗ,ಅವನು ಗೋವನ್ನು ಕೊಲ್ಲುವ ದುರ್ಭುದ್ದಿ ಬರುತ್ತದೆ..
ನೀನಾದರು ಸಹ ಗೋವು ಹಾಲನ್ನು ಏಕೆ ಕೊಡಲಿಲ್ಲ!! ಅಂತ ವಿಚಾರಣೆ ಮಾಡಲಿಲ್ಲ.
ಹೀಗಾಗಿ ನೀನು ಪರೋಕ್ಷವಾಗಿ ಕಾರಣವಾಗಿರುವೆ.
ಆದ್ದರಿಂದ ಶ್ರೀರುದ್ರ ದೇವರ ಪರಿವಾರದಲ್ಲಿ ಒಬ್ಬನಾಗು ಅಂದರೆ ಪಿಶಾಚಿ ಯಾಗು ಅಂತ ಶಾಪ ಕೊಟ್ಟಿದ್ದು.
ಆದರು ನೀನು ಮಾಮೂಲಿನ ಪಿಶಾಚಿ ಯಂತೆ ರಕ್ತ ಮಾಂಸ ತಿನ್ನುವ ಪಿಶಾಚಿ ಗಳ ಹಾಗೆ ನೀನಲ್ಲ.ಇದು ನಾನು ಮಾಡುವ ಅನುಗ್ರಹ.
ಈ ಪಿಶಾಚಿ ರೂಪವು ಕಲಿಯುಗ ಪೂರ್ತಿ ಇರುತ್ತದೆ..
ಮುಂದೆ ಆಕಾಶರಾಜ ಎಂಬ ರಾಜನು ಜನಿಸಿ ಅವನ ಮಗಳನ್ನು ನನಗೆ ಕೊಟ್ಟು ಕನ್ಯಾದಾನ ಮಾಡುವನು.ಆ ಸಮಯದಲ್ಲಿ ವರದಕ್ಷಿಣೆ ರೂಪವಾಗಿ ಎರಡು ಸಾವಿರ ತೊಲೆಗಳಷ್ಟು ತೂಕವಿರುವ ನವರತ್ನ ಖಚಿತವಾದ ಕಿರೀಟ ವನ್ನು ಕೊಡುವನು..
ನಾನದನ್ನು ಶುಕ್ರವಾರ ಧರಿಸುವೆನು. ಆ ಸಮಯದಲ್ಲಿ ನನ್ನ ಕಣ್ಣಿಂದ ಆನಂದಾಶ್ರು ಬರುವದು.ಅದನ್ನು ನೋಡಿದ ನಿನಗೆ ಸುಖವುಂಟಾಗುವದು..
ಆ ಸಂಧರ್ಭದಲ್ಲಿ ಆರು ಘಳಿಗೆ ನಿನಗೆ ಸುಖ ವುಂಟಾಗುವದು ಅಂತ ಹೇಳಿ ಚೋಳರಾಜನಿಗೆ ಸಮಾಧಾನ ಮಾಡುವನು.
ಆರು ಘಳಿಗೆ ಅಂದರೆ ದೇವ ಮಾನದ ಆರು ಘಳಿಗೆ..
ಶನಿವಾರದಿಂದ ಹಿಡಿದು ಗುರುವಾರದವರೆಗು ಆರು ದಿನ ಪರ್ಯಂತ ಸುಖವು ವ್ಯಾಪಿಸಿರುತ್ತದೆ.ಶುಕ್ರವಾರ ಪುನಃ ಕಿರೀಟವನ್ನು ಧರಿಸುವನು. ಅಂತು ಜೀವನ ಪೂರ್ತಿಯಾಗಿ ಚೋಳರಾಜನಿಗೆ ಸುಖವನ್ನು ಅನುಭವಿಸುವಂತೆ ಮಾಡಿದ್ದಾನೆ.
ಚೋಳರಾಜನಿಗೆ ಶಾಪವನ್ನು ಕೊಟ್ಟು ಭಗವಂತನು ಅದರ ಪರಿಹಾರವನ್ನು ಹೇಳುತ್ತಾನೆ.
ಅದೇ ಸಮಯದಲ್ಲಿಯೇ ಶ್ರೀನಿವಾಸನಿಗೆ ವರಾಹರೂಪಿ ಪರಮಾತ್ಮನ ಭೇಟಿಯಾಯಿತು...
ನಡೆದ ವೃತ್ತಾಂತವನ್ನು ವರಾಹ ದೇವರಿಗೆ ತಿಳಿಸಿದನು. ಅವರಿಬ್ಬರ ಪರಸ್ಪರ ಸಂಭಾಷಣೆ ನಡೆಯಿತು.ಲೋಕ ಶಿಕ್ಷಣಾರ್ಥವಾಗಿ ಶ್ರೀನಿವಾಸನು ವರಾಹರೂಪಿ ಪರಮಾತ್ಮನಿಂದ ತಾನು ನೆಲೆಸುವ ಸ್ಥಳವನ್ನು ಸ್ವೀಕರಿಸಿದ ಪ್ರಯುಕ್ತ
"ನನಗಿಂತ ಮೊದಲು ಪೂಜೆ-ನೈವೇದ್ಯಾದಿ ಸರ್ವ ಪೂಜಾದಿ ಗೌರವಾದಿಗಳು ನಿನಗೆ ಆಗಲೆಂದು ವಚನವಿತ್ತು ಅಲ್ಲಿಯೆ ನೆಲಿಸಿದನು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ತಿಳಿಯದೋ ನಿನ್ನಾಟ| ತಿರುಪತಿಯ ವೆಂಕಟ||
🙏ಹರೇ ಶ್ರೀನಿವಾಸ🙏
*************
ಶ್ರೀ ಶ್ರೀನಿವಾಸ ಕಲ್ಯಾಣ ಚರಿತ್ರೆ||day9
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಹಿಂದಿನ ಸಂಚಿಕೆಯಲ್ಲಿ ಚೋಳರಾಜನಿಗೆ ಶಾಪವನ್ನು ಕೊಟ್ಟು ಭಗವಂತನು ಅದರ ಪರಿಹಾರವನ್ನು ಹೇಳುತ್ತಾನೆ.
ಅದೇ ಸಮಯದಲ್ಲಿಯೇ ಶ್ರೀನಿವಾಸ ನಿಗೆ ವರಾಹರೂಪಿ ಪರಮಾತ್ಮನ ಭೇಟಿಯಾಯಿತು,ನಡೆದ ವೃತ್ತಾಂತವನ್ನು ವರಹಾ ದೇವರಿಗೆ ತಿಳಿಸಿದನು. ಅವರಿಬ್ಬರ ಪರಸ್ಪರ ಸಂಭಾಷಣೆ ನಡೆಯಿತು.ಲೋಕ ಶಿಕ್ಷಣಾರ್ಥವಾಗಿ ಶ್ರೀನಿವಾಸ ನು ವರಾಹರೂಪಿ ಪರಮಾತ್ಮನಿಂದ ತಾನು ನೆಲೆಸುವ ಸ್ಥಳವನ್ನು ಸ್ವೀಕರಿಸಿದ ಪ್ರಯುಕ್ತ
"ನನಗಿಂತ ಮೊದಲು ಪೂಜೆ-ನೈವೇದ್ಯಾದಿ ಸರ್ವ ಪೂಜಾದಿ ಗೌರವಾದಿಗಳು ನಿನಗೆ ಆಗಲೆಂದು ವಚನವಿತ್ತು ಅಲ್ಲಿಯೆ ನೆಲಸಿದನು.ಆಗ ವರಾಹದೇವನು ಶ್ರೀನಿವಾಸನ ಶುಶ್ರೂಶೆ ಪ್ರಯುಕ್ತ ತನ್ನಲ್ಲಿರುವ ಬಕುಲಮಾಲಿಕ ಎಂಬ ತಾಯಿಯ ಸ್ವರೂಪದಂತಿರುವ ಹೆಣ್ಣು ಮಗಳನ್ನು ಶ್ರೀನಿವಾಸ ನೊಂದಿಗೆ ಕಳುಹಿಸಿಕೊಟ್ಟನು.
ನಂತರ ಗೋಪಾಲಕನಿಂದಾದ ತಲೆಯ ಪೆಟ್ಟನ್ನು ಅತ್ತಿ-ಎಕ್ಕೆ ಮುಂತಾದ ವನಸ್ಪತಿಗಳ ಮುಖಾಂತರ ಗುಣವಾದಂತೆ ನಟಿಸಿ,ತನ್ನ ತಾಯಿಯ ಸ್ಥಾನದಲ್ಲಿರುವ ಬಕುಲಮಾಲಿಕೆಗೆ ತನ್ನ. ಪರಿಚಯವನ್ನು ಹೇಳಿ,ಅವಳ ವೃತ್ತಾಂತವನ್ನು ಲೋಕ ವಿಡಂಬನಾರ್ಥವಾಗಿ ತಿಳಿದುಕೊಂಡನು.
ಒಮ್ಮೆ ಆಕಾಶ ರಾಜನು ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಟಿ ಯಾಗವನ್ನು ಮಾಡಲು ಯಾಗ ಸ್ಥಳ ಶುದ್ಧ ಮಾಡಲೋಸುಗ ಸುವರ್ಣ ನಿರ್ಮಿತ ನೇಗಿಲಿನಿಂದ ಭೂಮಿಯನ್ನು ಉಳುತ್ತಿರುವಾಗ ಆ ಸ್ಥಳದಲ್ಲಿ ತಾವರೆಯಲ್ಲಿ ಮಲಗಿದ್ದ ಕೂಸು ಸಿಗುತ್ತದೆ. . ಮಕ್ಕಳಿಲ್ಲದೇ ಅಸಂತುಷ್ಟನಾದ ರಾಜನು ಮಗುವನ್ನು ತನ್ನ ಪಟ್ಟದರಸಿಗೆ ತಂದೊಪ್ಪಿಸಿ ಮಗುವು ಕಮಲದಲ್ಲಿ ದೊರಕಿರುವುದರಿಂದ "ಪದ್ಮಾವತಿ"ಯೆಂದು ನಾಮಕರಣ ಮಾಡಿದರು..
ಪದ್ಮಾವತಿಯು ಪ್ರಾಪ್ತವಯಸ್ಕಳಾದಾಗ ಒಮ್ಮೆ ಗೆಳತಿಯರೊಡನೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿಗೆ ಬಂದ ನಾರದಮಹರ್ಷಿಗಳು ಅವಳ ಹಸ್ತ ಸಾಮುದ್ರಿಕಾ ಮುಖೇನ "
ಶ್ರೀಮನ್ನಾರಾಯಣನೆ ನಿನ್ನ ಪತಿಯಾಗುವನೆಂದು ಭವಿಷ್ಯವನ್ನು ನುಡಿಯುವರು..
ಇದಾದ ನಂತರ ಪದ್ಮಾವತಿಯು ಮತ್ತೊಮ್ಮೆ ತನ್ನ ಸಖಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸಲು ಹೋದಾಗ,ಇತ್ತಕಡೆ ಶ್ರೀನಿವಾಸನು ಬೇಟೆಗೆ ಕಾಡಿಗೆ ಬಂದಾಗ ಒಂದು ಆನೆಯನ್ನು ಬೆನ್ನಟ್ಟಿಕೊಂಡು ಹೋದನು.ಆಗ ಆನೆಯು ಸಖಿಯರಿದ್ದ ಉದ್ಯಾನವನದಲ್ಲಿ ಪ್ರವೇಶಿಸಿ ಪದ್ಮಾವತಿಯೆಂಬ ಕನ್ಯೆಗೆ ವಂದಿಸಿ ಮುಂದೆ ಹೋಯಿತು.ಆಗ ಅಲ್ಲಿ ಪರಸ್ಪರ ಪದ್ಮಾವತಿಯ ವೆಂಕಟೇಶನ ಭೇಟಿಯಾಯಿತು.
ಆನೆಯನ್ನು ಕಂಡು ಹೆದರಿದ ಪದ್ಮಾವತಿ ಮತ್ತು ಅವರ ಸಖಿಯರ ಗುಂಪಿನ ಬಳಿಗೆ ವೆಂಕಟೇಶನು ಕುದುರೆ ಏರಿ ಅವರ ಬಳಿಗೆ ಬಂದನು.ಆಗ ವೆಂಕಟೇಶನು ಹಾಗು ಪದ್ಮಾವತಿಯು ಪರಸ್ಪರ ಅವರವರ ಕುಲಗೋತ್ರಗಳನ್ನು ತಿಳಿಸಿದರು.ತನ್ನ ಮೇಲೆ ಪ್ರೇಮವನ್ನು ತೋರಿಸಿದ ವೆಂಕಟೇಶ್ವರನ ಮೇಲೆ ಪದ್ಮಾವತಿಗೆ ಕೋಪ ಬಂದಂತೆ ನಟಿಸಿದಳು. ಇದರ ಅಂತರಂಗ ಮರ್ಮವನ್ನರಿಯದ ಸಖೀಯರು ಕೋಪಿಸಿಕೊಂಡು ಕುದುರೆಗೆ ಕಲ್ಲನ್ನು ಎಸೆದರು.ಆಗ ಪದ್ಮಾವತಿ ಯು ತಾನೇ ಸ್ವತಃ ವೆಂಕಟೇಶ್ವರನಿಗೆ ಕಲ್ಲನ್ನು ಎಸೆದಳು. ಆಗ ಕುದುರೆಯು ಅಲ್ಲಿಯೇ ಮರಣ ಹೊಂದಿತು.ಶ್ರೀನಿವಾಸನಿಗೆ ತಲೆಯು ಒಡೆಯಿತು.
ಇದರ ಗುಹ್ಯಾರ್ಥವೆನೆಂದರೆ
"ವರದೋ ವಾಯು ವಾಹನ" ಎಂಬಂತೆ ವಾಯುದೇವರು ಜಗದೊಡೆಯನಾದ ನಾರಾಯಣನು ಪತ್ನಿಯ ಸಂಗಡವಿರುವಾಗ ನನ್ನ ಕೆಲಸ ಏನು ಇಲ್ಲವೆಂದು,ವಾಹನರಾಗಿ ಬಂದಿದ್ದ ವಾಯುದೇವರು ಸಖಿಯರ ಕೋಪವನ್ನು ನಿಮಿತ್ತ ಮಾಡಿಕೊಂಡು ಅಲ್ಲಿಂದ ಅದೃಶ್ಯ ರಾದರು..
ಪದ್ಮಾವತಿ ವರ್ತನೆಯಿಂದ ಶ್ರೀನಿವಾಸನು ವ್ಯಥೆಗೊಂಡಂತೆ ನಟನೆ ಮಾಡುವ.,
ಮನೆಗೆಬಂದು ಮುಸುಗು ಹೊದ್ದು ಮಲಗಿದ್ದ ಮಗನನ್ನು ಕಂಡು ತಾಯಿ ಆತಂಕದಿಂದ ವಿಚಾರಿಸಲು, ಬಕುಲಾದೇವಿಯೊಡನೆ ಅಲ್ಲಿ ನಡೆದ,ವೃತ್ತಾಂತವನ್ನು ತಿಳಿಸಿ ಪದ್ಮಾವತಿಯ ಪೂರ್ವ ಚರಿತ್ರೆಯನ್ನು ತಿಳಿಸಿದನು.
ರಾವಣನು ಹಿಂದೆ ವೇದವತಿಯ ರೂಪದಲ್ಲಿದ್ದ ಲಕ್ಷ್ಮೀಯನ್ನು ಮೋಹಿಸಲು ಹೋಗಿ,ತನ್ನ ವಂಶ ಸ್ತ್ರೀ-ಅಪಹರಣದಿಂದಲೇ ನಾಶವಾಗುವಂತೆ ಶಾಪವನ್ನು ಪಡೆದಿದ್ದನು.ಆ ವೇದವತಿಯು ತನ್ನ ರಕ್ಷಣೆಗೋಸ್ಕರ ಅಗ್ನಿಯಲ್ಲಿ ಪ್ರವೇಶ ಮಾಡಿದಳು.ರಾವಣನು ಸೀತಾಪಹರಣ ಕಾಲದಲ್ಲಿ ಅಗ್ನಿ ದೇವನು ವೇದವತಿಯೇ ಸೀತೆಯಾಗಿರುವಳೆಂದು ಬೋಧಿಸಿ ವೇದವತಿಯನ್ನೆ ರಾವಣನಿಗೆ ಅರ್ಪಿಸಿ ನಿಜವಾದ ಸೀತೆಯನ್ನು ತನ್ನಲ್ಲಿಯೇ ಉಳಿಸಿಕೊಂಡು ಕೆಲಕಾಲ ಜಗನ್ಮಾತೆಗೆ ಸೇವೆಮಾಡಿದನು..ರಾವಣನ ಸಂಹಾರವಾದ ಬಳಿಕ ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸಲು ಬಂದಾಗ,ಸೀತೆಯು ತನ್ನ ಪತಿಯಾದ ರಾಮದೇವರಿಗೆ ನಿಜವಾದ ಐತಿಹ್ಯವನ್ನು ತಿಳಿಸಿ,ವೇದವತಿಯನ್ನು ವಿವಾಹವಾಗಲು ಕೇಳಿಕೊಂಡಳು.
ಆಗ ಏಕಪತ್ನಿ ವೃತಸ್ಥನಾದ ನಾನು ನಿನ್ನ ಇಚ್ಛೆಯನ್ನು ಮುಂದೆ ಇಪ್ಪತ್ತೆಂಟನೆ ಕಲಿಯುಗದಲ್ಲಿ ಪೂರ್ತಿಗೊಳಿಸುವೆನೆಂದು ಹೇಳಿದ ವಚನವನ್ನು ಸ್ಮರಣೆಗೆ ತಂದುಕೊಂಡ. ಪದ್ಮಾವತಿಯು ಶ್ರೀನಿವಾಸನ ಸ್ಮರಣೆಯಲ್ಲಿ ನಿರತಳಾಗಿ,ತನ್ನ ತಂದೆ-ತಾಯಿಗೆ, ಬಂಧು-ಬಾಂಧವರಿಗೆ ಹಾಗೂ ಸಖಿಯರಿಗೆ ಮನೋರೋಗ ಬಾಧೆಗೆ ಪೀಡಿತಳಾದಂತೆ ವರ್ತಿಸಿದಳು.
ಆಕಾಶರಾಜ ಮಾತ್ತು ಧರಣಿದೇವಿಯು ಮಗಳ ವೇದನೆಯನ್ನು ನೋಡಲಾಗದೆ ದೇವಗುರುಗಳಾದ ಬೃಹಸ್ಪತ್ತ್ಯಾಚಾರ್ಯರೊಂದಿಗೆ ತಮ್ಮ ಸಂಕಟ ಹೇಳಿಕೊಂಡಾಗ,ಅದನ್ನರಿತ ಅವರು ಮನೋನಿಯಾಮಕರಾದ ಪರಮ ವೈಷ್ಣವರಾದ ರುದ್ರದೇವರಾರಾಧನೆ ಮಾಡಲು ಹೇಳಿದರು..ಗುರುಗಳ ಸಲಹೆಯಂತೆ ರಾಜನು ಅಲ್ಲಿರುವ ಅಗಸ್ತೇಶ್ವರನ ದೇವಾಲಯಕ್ಕೆ ತಮ್ಮ ಪರಿಚಾರಕಿಯರ ಮೂಲಕ ಪೂಜೆಗೆಂದು ಕಳುಹಿಸಿದನು.ಇತ್ತಕಡೆ ಶ್ರೀನಿವಾಸನು ಬಕುಲಮಾಲಿಕೆಯನ್ನು ಆಕಾಶರಾಜನ ಪಟ್ಟಣಕ್ಕೆ ಕಳುಹಿಸಿ ಕೊಟ್ಟಿದ್ದನು.ಆಗ ರಾಜನ ಸೇವಕಿಯರ ಗುಂಪಿನ ಭೇಟಿಯು ಬಕುಲಮಾಲಿಕೆಗೆ ಆಗಿ,ಇದ್ದ ವೃತ್ತಾಂತ ತಿಳಿಸಿದಳು.
ಅಷ್ಟರ ಮಧ್ಯ ವೇಳೆಯಲ್ಲಿ ಶ್ರೀನಿವಾಸನು ಕೊರವಂಜಿಯ ವೇಷವನ್ನು ಧರಿಸಿ ಬ್ರಹ್ಮದೇವರನ್ನು ಕೂಸು ಮಾಡಿಕೊಂಡು, ರುದ್ರದೇವರನ್ನು ಊರುಗೋಲಾಗಿ ಮಾಡಿಕೊಂಡು,ಬ್ರಹ್ಮಾಂಡವನ್ನೇ ಬುಟ್ಟಿಯನ್ನಾಗಿ ಮಾಡಿಕೊಂಡು ಆಕಾಶರಾಜನ ಅರಮನೆಗೆ ಬಂದು ಪದ್ಮಾವತಿಯ ಭವಿಷ್ಯವನ್ನು ಹೇಳುವುದರೊಂದಿಗೆ ಬಕುಲಮಾಲಿಕೆಯ ಕಾರ್ಯವು ಬೇಗನೆ ಸಿದ್ಧಿಸುವಂತೆ ಅವರ ಮನದಲ್ಲಿ ಮೂಡಿಸಿ ಆಕೆಯು ತಂದ ವರನಿಗೆ ಕನ್ಯಾದಾನ ಮಾಡಲು ಭಾಷೆ ತೆಗೆದುಕೊಂಡು ತನ್ನ ಸ್ವ-ಸ್ಥಾನಕ್ಕೆ ಬಂದನು.ರಾಜನಾಜ್ಞೆಯಂತೆ ಅಗಸ್ತೇಶ್ವರ ದೇವಾಲಯಕ್ಕೆ ಹೋದ ಸೇವಕಿಯರ ಸಂಗಡ ಬಂದ ಬಕುಲಮಾಲಿಕೆಯನ್ನು ಕಂಡು ಕೊರವಂಜಿಯ ಮಾತು ನಿಜವಾಯಿತೆಂದು ಸಂತೋಷಪಟ್ಟರು.
🙏ಶ್ರೀ ಕೃಷ್ಣಾ ರ್ಪಣ ಮಸ್ತು🙏
ಶ್ರೀನಿವಾಸನೆ ಭಕ್ತ ಪೋಷಕ|
ಜ್ಞಾನಿ ಕುಲಗಳಿಗೆ ಅಭಯದಾಯಕ|
ದೀನ ಬಾಂದವ ನೀನೆ| ಎನ್ನ ಮನದರ್ಥ ಪೂರೈಸು||
🙏ಅ.ವಿಜಯವಿಠ್ಠಲ🙏
********
||ಶ್ರೀನಿವಾಸ ಕಲ್ಯಾಣ ಮಹಾತ್ಮೆ|| Day 10
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಆಕಾಶರಾಜನು ಬಕುಲದೇವಿಯು ಬಂದುದನ್ನು ಕಂಡು ಗುರುಗಳಾದ ಬೃಹಸ್ಪತ್ತ್ಯಾಚಾರ್ಯರನ್ನು,
ಶುಕಾಚಾರ್ಯರನ್ನು ಬರಮಾಡಿಕೊಂಡು ವಿವಾಹ ಸಂಸ್ಕಾರಕ್ಕೆ ಅವಶ್ಯವಾಗಿ ಬೇಕಾಗುವ ಘಟಿತಾರ್ಥ ನಿರ್ಣಯಗಳನ್ನು ತಮ್ಮ ಕುಲಗೋತ್ರಾ-ಬಕುಲಮಾಲಿಕೆಯ ಕುಲ-ಗೋತ್ರಾದಿಗಳನ್ನು ಕೂಡಿಸಿ ನೋಡುವುದರ ಮೂಲಕ ನಿಶ್ಚಯ ಪತ್ರವನ್ನು ಬರೆಯಲು ನಿರ್ಧರಿಸಿ,ಆ ಪತ್ರನ್ನು ಶ್ರೀನಿವಾಸನಿಗೆ ತಲುಪಿಸಲು ಶುಕಾಚಾರ್ಯರಿಗೆ ವಿಜ್ಞಾಪಿಸಿದನು.ಅದರಂತೆ ರಾಜನು ತಮ್ಮಬಂಧು-ಬಾಂಧವರನ್ನು ಕೂಡಿಕೊಂಡು,ತಮ್ಮ ಕುಲ ಗುರುಗಳ ಸಮ್ಮುಖದಲ್ಲಿ ವಿವಾಹ ನಿಶ್ಚಯ ಪತ್ರ ಬರೆದು ಶುಕಾಚಾರ್ಯರೊಂದಿಗೆ ಶ್ರೀನಿವಾಸದೇವರಿಗೆ ಕಳುಹಿಸಿಕೊಟ್ಟನು.
ಅದನ್ನು ಶುಕಾಚಾರ್ಯರು ತಮ್ಮ ಶಿರಸ್ಸಿನಲ್ಲಿಟ್ಟಕೊಂಡು ಸ್ವಾಮಿಗೆ ತಲುಪಿಸಿ,ಇಲ್ಲಿಯ ಒಪ್ಪಿಗೆಯನ್ನು ರಾಜನಿಗೆ ಹೇಳಿ,ಮುಂದಿನ ವಿವಾಹ ಕಾರ್ಯಾರಂಭಗಳನ್ನು ಮಾಡಲು ಅನುಮತಿ ಕೊಟ್ಟರು.
ಆ ನಂತರ ಶ್ರೀನಿವಾಸನು ತನ್ನ ತಾಯಿಯಾದ ಬಕುಳೆಗೆ
ನನಗೀ ವಿವಾಹವು ಬೇಡವೆನಿಸಿದೆ.ನನಗೆ ಯಾರು ಬಂಧು, ಬಳಗ ಇಲ್ಲ.ಏಕಾಂಗಿ ನಾನು. ಮದುವೆ ನಿಬ್ಬಣಕ್ಕೆ ನಾವಿಬ್ಬರೇ ಹೋಗುವದು ಸರಿಯೇ!!.ಆಕಾಶರಾಜ ಮಹಾರಾಜ. ಅವನಿಗೆ ಬಂಧು ಬಳಗ ಎಲ್ಲಾ ಇದೆ.ಬಂಧು ಬಳಗ ಇಲ್ಲದ ನಾನು ಹೇಗೆ ಸಂಬಂಧ ಬೆಳೆಸಲಿ??ಅದಕ್ಕೆ ಚಿಂತೆ ಆಗಿದೆ ಎಂದು ಸಾಮಾನ್ಯ ಮಾನವನಂತೆ ನಟಿಸುತ್ತಾ ಹೇಳಿದ.
ಅದಕ್ಕೆ ಬಕುಳೆಯು
ಇದೆಂತಹ ಮಾತು!!ನಿನ್ನಂತಹ ಪುರುಷರು ಸುಳ್ಳು ಹೇಳಬಾರದು..
ನೀನು ಹೇಳುವದೆಲ್ಲ ಸುಳ್ಳು.
ನೀನು ಜಗತ್ಕುಟುಂಬಿ. ರಮಾ,ಬ್ರಹ್ಮ ರುದ್ರಾದಿ ದೇವತೆಗಳೇ ನಿನಗೆ ಪರಿವಾರ.ಜಗತ್ತಿನ ಸುಜೀವರೆಲ್ಲರೂ ನಿನ್ನ ಬಂಧುಗಳು.ಇಂತಹ ನೀನು ನಾನು ಒಬ್ಬೊಂಟಿಗ.ನನಗಾರು ಇಲ್ಲ ಅಂತ ಏಕೆ ನಟಿಸುವಿ??..
ನಿನ್ನ ಕಪಟನಾಟಕವನ್ನು ಸಾಕುಮಾಡು.ಬ್ರಹ್ಮ,ವಾಯು,ರುದ್ರಾದಿ ದೇವತೆಗಳನ್ನು, ಮತ್ತು ನಿನ್ನ ಸೊಸೆಯರು,ಮೊಮ್ಮಕ್ಕಳು, ಮರಿ ಮಕ್ಕಳು ಇವರೆನೆಲ್ಲ ಸ್ಮರಿಸು ಅಂತ ಪ್ರಾರ್ಥನೆ ಮಾಡಿದಾಗ ತಕ್ಷಣ ಗರುಡ,ಶೇಷರನ್ನು ಸ್ಮರಿಸಿದನು.
ಅವರಿಬ್ಬರೂ ಬಂದ ಕೂಡಲೆ ಗರುಡನಿಗೆ ಬ್ರಹ್ಮ ದೇವರನ್ನು,ಶೇಷನಿಗೆ ರುದ್ರ ದೇವರನ್ನು ನನ್ನ ವಿವಾಹ ಕಾರ್ಯಕ್ರಮಕ್ಕೆ ಬರಲು ಅವರ ಮುಖಾಂತರ ಪತ್ರ ಮುಖೇನ ಆಹ್ವಾನವನ್ನು ನೀಡಿದನು.
ಬ್ರಹ್ಮ ದೇವರು ತನ್ನ ತಂದೆಯು ಬರೆದ ಪತ್ರ ವನ್ನು ಓದಿ ಕೇಳಿ ತನ್ನ ಸತಿಯರಾದ ಸರಸ್ವತಿ, ಗಾಯತ್ರಿ, ಸಾವಿತ್ರಿ ದೇವಿಯರೊಡನೆ ,ತನ್ನ ಮಕ್ಕಳು ಮೊಮ್ಮಕ್ಕಳು ಅವರ ಪರಿವಾರದೊಡನೆ ಶೇಷಗಿರಿ ಕಡೆ ಪಯಣ ಬೆಳೆಸಿದನು.
ಅದೇ ಕಾಲಕ್ಕೆ ವಾಯುದೇವರು ಭಾರತಿದೇವಿಯರ ಸಹಿತವಾಗಿ,ರುದ್ರದೇವರು ಪಾರ್ವತಿ ಸಹಿತವಾಗಿ ಇಂದ್ರಾದಿ ದೇವತೆಗಳು ತಮ್ಮ ಪತ್ನಿಯರು ಸಮೇತವಾಗಿ, ಸಕಲ ಋಷಿಗಳು ಅವರ ಪರಿವಾರ ಸಮೇತರಾಗಿ ವೆಂಕಟಾದ್ರಿ ಗೆ ಬಂದರು.
ಭಗವಂತನನ್ನು ಕಂಡು ಬ್ರಹ್ಮ ದೇವನು ಪಾದಕ್ಕೆ ಎರಗಿದಾಗ ಪ್ರೀತಿಯಿಂದ ಆಲಂಗಿಸಿ
ಕುಮಾರ!! ನಿನಗೆ ಮಂಗಳವಾಗಲಿ.ಬಹುಕಾಲವಾದ ಮೇಲೆ ನನ್ನ ನೋಡಲು ಬಂದಿರುವೆಯಲ್ಲ.ಒಮ್ಮೆ ಯಾದರು ನನ್ನನ್ನು ನೋಡಬೇಕು ಎಂಬ ಕೂತುಹಲ ನಿನಗೆ ಬರಲಿಲ್ಲ ವಲ್ಲ!ಇವಾಗ ಬಂದೆಯಲ್ಲ! ಅದೇ ದೊಡ್ಡದು. ನಿನ್ನನ್ನು ಬಿಟ್ಟು ನನಗೆ ಜಗತ್ತಿನಲ್ಲಿ ಯಾವುದು ಇಲ್ಲ ಅಂತ ಕಣ್ಣೀರು ಹಾಕುತ್ತಾ ಆಲಂಗಿಸಿಕೊಂಡನು..
ಸಕಲ ದೇವತೆಗಳು ಈ ಲೀಲೆಯನ್ನು ನೋಡಿ ಆನಂದ ಭರಿತರಾದರು.
ಆನಂತರ ಮಗನನ್ನು ಕೂಡಿಸಿಕೊಂಡು ಹಿಂದೆ ನಡೆದ ವಿಷಯವನ್ನು ಹೇಳಿ ನನ್ನ ಸಲುಹಿದ ಈ ತಾಯಿ ಯಾದ ಬಕುಳೆಗೆ ನಮಸ್ಕಾರ ಮಾಡು ಎಂದು ಹೇಳುತ್ತಾನೆ.
ಆ ಸಮಯದಲ್ಲಿ ಸಕಲ ವಾಧ್ಯಗಳ ಧ್ವನಿ ಕೇಳಲು ಬಂದವರು ಯಾರು?? ಎಂದು ಕೇಳಲು
ಜಿಂಕೆಯನ್ನು ಏರಿಕೊಂಡು ಸುವಾಸನೆಯನ್ನು ಬೀರುತ್ತಾ ಭಾರತಿಪತಿಯಾದ ಮುಖ್ಯ ಪ್ರಾಣದೇವರು ತಮ್ಮ ಸತಿಯಾದ ಭಾರತಿದೇವಿಯರೊಡನೆ ಅಲ್ಲಿಗೆ ಬರುತ್ತಾರೆ..
ತನ್ನ ಮಗನಾದ ವಾಯುದೇವರ ಆಗಮನದಿಂದ ಸಂತಸ ಗೊಂಡಂತೆ ನಟಿಸಿದ.ನಂತರ ಕೆಲ ಕ್ಷಣದಲ್ಲಿ ರುದ್ರ ದೇವರು ಸಹ ಅಲ್ಲಿ ಗೆ ಬರುತ್ತಾರೆ.ಹೀಗೆ ಸಕಲ ದೇವತಾ ಪರಿವಾರದವರು ಬಂದಾಗ ಸಂತೋಷ ದಿಂದ ಎಲ್ಲರನ್ನೂ ಆದರಿಸಿ ಭಗವಂತನು ಸತ್ಕಾರ ಮಾಡುತ್ತಾನೆ.
ನಂತರ ದೇವಶಿಲ್ಪಿಯಾದ ವಿಶ್ವ ಕರ್ಮನ ಮೇಲೆ ಸಿಟ್ಟು ಬಂದಂತೆ ನಟಿಸಿ ಆನಂತರ ಅನುಗ್ರಹಿಸಿ ಇಂದ್ರದೇವರ ಮುಖಾಂತರ ನಾರಾಯಣ ಪುರದಲ್ಲಿ ಉಳಿದುಕೊಳ್ಳಲು ದೊಡ್ಡ ಸೌಧವನ್ನು ನಿರ್ಮಿಸಿದನು.ಸಕಲ ದೇವತೆಗಳಿಗೆ ಅವರವರ ಯೋಗ್ಯತೆ ಅನುಗುಣವಾಗಿ ಕಾರ್ಯವನ್ನು ಒಪ್ಪಿಸಿದನು.
ವಿವಾಹಾಂಗವಾಗಿ ಪುಣ್ಯಾಹ,ನಾಂದೀ ಮುಂತಾದ ಶುಭಕಾರ್ಯಗಳನ್ನು ಮಾಡುವ ಸಮಯದಲ್ಲಿ ತನ್ನ ಪತ್ನಿ ಯಾದ ಲಕ್ಷ್ಮೀ ದೇವಿಯನ್ನು ನೆನೆಸಿ ಕೊಂಡು ಸಾಮಾನ್ಯ ಮಾನವನಂತೆ ಶೋಕಿಸತೊಡಗಿದ..
ನಂತರ ಬ್ರಹ್ಮ ದೇವನ ಕುರಿತು
ಸಿರಿ ಇಲ್ಲದ ಸಭೆಯು ಸರಿಬಾರದಯ್ಯ.ಗಗನದಲ್ಲಿ ನಕ್ಷತ್ರಗಳು ,ಚಂದ್ರ ಇಲ್ಲದೇ ಹೇಗೆ ಶೋಭಿಸದೋ,ಮರಗಳು ಇಲ್ಲದ ಅರಣ್ಯ,ರೆಕ್ಕೆ ಇಲ್ಲದ ಪಕ್ಷಿಗಳು, ಅದೇ ರೀತಿ ಲಕ್ಷ್ಮೀ ದೇವಿ ಇಲ್ಲದ ಈ ಸಭೆ ಶೋಭಿಸದು ಅಂತ ಹೇಳಿದನು.
ಅದಕ್ಕೆ ರುದ್ರ ದೇವನು ಭಗವಂತನಿಗೆ ಹೇಳುವರು. ನೀನು ಸ್ವರಮಣನು,ಸಂಗ ರಹಿತನು.ಕ್ಲೇಶವೆಂಬುವದೇ ನಿನ್ನ ಬಳಿ ಇಲ್ಲ.ಯಾಕೆ ಈ ರೀತಿಯಲ್ಲಿ ಕಣ್ಣೀರು ಹಾಕುವದು?? ಅಂತ ಕೇಳಿದಾಗ
ನೀನಿನ್ನು ಬಾಲಕ!!.ನಿನಗೇನು ತಿಳಿಯದು.ಪ್ರಳಯ ಕಾಲದಲ್ಲಿ ನನ್ನ ಜೊತೆಯಲ್ಲಿ ನನಗೆ ಹಾಸಿಗೆಯಾಗಿ,ಆಭರಣವಾಗಿ ಗೆಳತಿಯಾಗಿ ನನ್ನೊಡನೆ ಸದಾ ಇರುವಂತಹ ಲಕ್ಷ್ಮೀ ಯನ್ನು ಬಿಟ್ಟು ನನಗೆ ಇರಲು ಆಗುವುದಿಲ್ಲ ಅಂತ ಹೇಳಿ
ಸೂರ್ಯದೇವನನ್ನು ಕರೆದು ಕೊಲ್ಹಾಪುರಕ್ಕೆ ಲಕ್ಷ್ಮೀ ಯನ್ನು ಕರೆತರಲು ಹೇಳುತ್ತಾನೆ.
ಅದಕ್ಕೆ ಸೂರ್ಯನು
ನಾನು ಕರೆದರೆ ಹೇಗೆ ಜಗನ್ಮಾತೆ ಬರುವಳು ಪ್ರಭು!!?? ಎನ್ನುವನು.ಅದಕ್ಕೆ ಭಗವಂತನು ಯುಕ್ತಿಯನ್ನು ಹೇಳುವ..
ನೀನು ಕಣ್ಣೀರು ಸುರಿಸುತ್ತಾ,ಒರೆಸಿಕೊಳ್ಳುತ್ತಾ ರಮಾದೇವಿಯ ಮನೆ ಬಾಗಿಲಲ್ಲಿ ನಿಂತು ಕರೆದಾಗ ಬಂದು ಸಮಾಧಾನ ಮಾಡುವಳು..
ಅವಾಗ ನೀನು
ತಾಯಿ! ನಿನ್ನ ಪತಿಯಾದ ನಾರಾಯಣ ನು ಹಾಸಿಗೆ ಹಿಡಿದು ಮಲಗಿದ್ದಾನೆ.ಬದುಕುವನೋ ಅಥವಾ ಇಲ್ಲವೊ ತಿಳಿಯದು ಬಹಳ ಅಶಕ್ತನಾಗಿದ್ದಾನೆ ಬೇಗ ಹೊರಡು ಅಂತ ಅವಸರಿಸು.. ಎಂದು ಹೇಳುವನು.
ಅದಕ್ಕೆ ಸೂರ್ಯನು
ಸ್ವಾಮಿ!! ಸಕಲಲೋಕಗಳಲ್ಲಿಯು ಸರ್ವಜ್ಞೆಯಾದ ಸಕಲವನ್ನು ತಿಳಿದ ಆ ತಾಯಿ ನನ್ನ ಮಾತನ್ನು ಹೇಗೆ ನಂಬುವಳು??
ಯಾವಾತನ ನಾಮ ಸ್ಮರಣೆ ಇಂದ ಸಕಲ ರೋಗ ನಿವಾರಣೆ ಆಗುವದೋ ಅವನು ರೋಗಗ್ರಸ್ಥ ಅಂತ ಹೇಳಿದರೆ ತಾಯಿ ನಂಬುವಳೇ?? ಎಂದಾಗ ವತ್ಸ!!ಸೂರ್ಯನೇ ಚಿಂತಿಸಬೇಡ.ನನ್ನ ಮಾಯೆಇಂದ ಲಕ್ಷ್ಮೀ ದೇವಿಯು ಮೋಹಿತಳಾಗಿ ನಿನ್ನ ಜೊತೆ ಬರುವಳು ಎಂದು ಹೇಳಿ ರಥವನ್ನು ಕೊಟ್ಟು ಕಳುಹಿಸುವನು.
ಅದರಂತೆ ಲಕ್ಷ್ಮೀ ದೇವಿಯು
ಶ್ರೀಹರಿಯ ಆದೇಶದಂತೆ ದೇಶ ಕಾಲಗಳಿಗೆ ತಕ್ಕಂತೆ ಶ್ರೀ ಹರಿಯ ಆಚರಣೆಗೆ ತಕ್ಕಂತೆ ತಾನು ಸಹ ಅವನ ಮಾತನ್ನು ನಂಬಿದವಳಂತೆ ನಟಿಸುತ್ತಾ ಶೀಘ್ರವಾಗಿ ರಥದಲ್ಲಿ ಕುಳಿತು ಬರುವಳು.
ರಮಾದೇವಿ ಬಂದ ವಿಚಾರವನ್ನು ತಿಳಿದು ಭಗವಂತನು ಅಶಕ್ತನು, ರೋಗಗ್ರಸ್ತ ನು ಆದವನಂತೆ ಆಕಾರಧರಿಸಿ ತನ್ನ ಬಲತೋಳನ್ನು ಬ್ರಹ್ಮ ದೇವನಮೇಲೆ,ಎಡತೋಳನ್ನು ರುದ್ರ ದೇವನ ಮೇಲೆ ಇಟ್ಟು ಕೊಂಡು ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಾ ಬಂದನು..
ತನಗೆ ಬೇಕಾದ ಹಾಗೆ ರೂಪಧಾರಣೆ ಮಾಡುವ ಭಗವಂತನ ಈ ನಾಟಕವು ಸಕಲ ದೇವತೆಗಳಿಗು ಋಷಿಗಳಿಗು ಆಶ್ಚರ್ಯಕರವಾಗಿ ತೋರಿತು.
ಬಂದ ರಮಾದೇವಿ ಈ ರೂಪ ವನ್ನು ಕಂಡು ಭಗವಂತನಿಗೆ ನಮಸ್ಕರಿಸಿ ಅವನನ್ನು ಆಲಂಗಿಸಿಕೊಂಡಳು.ಕೆಲ ಕ್ಷಣದಲ್ಲಿ ಭಗವಂತನುಅತೀ ಪುಷ್ಟಿ ಉಳ್ಳವನಾಗಿ ಸುಂದರವಾಗಿ ಪತ್ನಿ ಸಮೇತ ಸಿಂಹಾಸನದ ಮೇಲೆ ಕುಳಿತನು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ತಿಳಿಯದೊ ನಿನ್ನಾಟ|
ತಿರುಪತಿ ಯ ವೆಂಕಟ|
🙏ಹರೇ ಶ್ರೀನಿವಾಸ🙏
ಶ್ರೀನಿವಾಸ ಕಲ್ಯಾಣ ಮುಂದುವರೆದ ಭಾಗ
Day 10 part#2
🙏🙇♂️🙇♂️
✍️ಶ್ರೀ ಶ್ರೀನಿವಾಸ ದೇವರು ತನ್ನ ವಿವಾಹಕ್ಕೆ ಅತಿ ಮುಖ್ಯವಾಗಿ ಬೇಕಾಗುವ ದ್ರವ್ಯರಾಶಿ ನಾಲ್ಕು ಲಕ್ಷ ಸುವರ್ಣವನ್ನು ಕುಬೇರನಿಂದ ಸಾಲವಾಗಿತೆಗೆದುಕೊಂಡನು.ನಂತರ ವಿವಾಹ ಸಂಸ್ಕಾರಕ್ಕೆ ಪೂರಕವಾದ ಸುರಗಿಯ, ಮಂಗಳಸ್ನಾನ,ಅಲಂಕಾರ ಮಾಡಿಕೊಂಡು ,ಮಂಟಪ-ಕುಲದೇವತಾ ಸ್ಥಾಪನೆಯನ್ನು ಶ್ರೀವರಾಹಸ್ವಾಮಿಯ ಗುಡಿಯಲ್ಲಿ ಪ್ರತಿಷ್ಠಾಪಿಸಿ,ತಾನೇ ತನ್ನ ಕುಲದೈವವೆಂದು ಹೇಳಿಕೊಂಡ ಅಹೋಬಲ ಶ್ರೀಲಕ್ಷ್ಮೀ ನರಸಿಂಹದೇವರಿಗೆ ಭೂರಿಭೋಜನದ ಅಡುಗೆಯನ್ನು ಸಮರ್ಪಣೆ ಮಾಡಿ,ದೇವತೆಗಳಿಗೆ ಭೂರಿ ಭೋಜನಾದಿಗಳನ್ನು ಮಾಡಿಸಿ,ದೇವತೆಗಳ ಸಂಗಡ ಆಕಾಶರಾಜನ ಪಟ್ಟಣಕ್ಕೆ ತನ್ನ ಬಂಧು-ಬಾಂಧವರ ಜೊತೆಗೂಡಿ ಬಂದು ನವಮಿ ದಿನ ಅಂದರೆ ವಿವಾಹಕ್ಕೆ ಹಿಂದಿನ ದಿನದಲ್ಲಿ ಆತಿಥ್ಯ ಸ್ವೀಕಾರ ಮಾಡುವನು. .
ಶ್ರೀನಿವಾಸದೇವರು ಆಕಾಶರಾಜನಿಂದ ದಿಬ್ಬಣ ಪೂಜೆಯನ್ನು ಮುಗಿಸಿಕೊಂಡು,ರಾಜಗೃಹಕ್ಕೆ ಬಂದು, ಆ ರಾತ್ರಿಯ ಆದರ-ಆತಿಥ್ಯಗಳನ್ನು ಸ್ವಿಕರಿಸಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡರು.
ಮರುದಿನ
ವೈಶಾಖ ಶುದ್ಧ ದಶಮಿಯಂದು ಬ್ರಹ್ಮಾದಿ ಸರ್ವ ದೇವತೆಗಳ ಅಧಿಷ್ಠಾನದಲ್ಲಿ ಬೃಹಸ್ಪತ್ತ್ಯಾಚಾರ್ಯಾದಿ ಅನೇಕ ಋಷಿಮುನಿಗಳ ಅಧ್ವರ್ಯದಲ್ಲಿ "ದೇವಾಗ್ನಿ ದ್ವಿಜ ಸನ್ನಿಧೌ"ಎಂದು ಮುಂದಿನ ಜನಾಂಗದ ಅನುಕರಣೆಗೊಸ್ಕರ ನಮಗೆ ವಿವಾಹದ ಕ್ರಮ ತಿಳಿಸಲೋಸುಗ ಶ್ರೀಪದ್ಮಾವತಿಯನ್ನು ಶ್ತೀಶ್ರೀನಿವಾಸದೇವರು ಪಾಣಿಗ್ರಹಣವನ್ನು ಮಾಡಿಕೊಂಡು,ಮಾವನೊಂದಿಗೆ ಎಲ್ಲಾ ಗೌರವಾದಿಗಳನ್ನು ಸ್ವಿಕರಿಸಿ ಅಗಸ್ತ್ಯಾಶ್ರಮಕ್ಕೆ ಬಂದು ಆರು ತಿಂಗಳುಗಳ ಕಾಲ ಅಲ್ಲಿಯೇ ಇದ್ದು ನಂತರ ಬೆಟ್ಟವನ್ನೇರಿ ತನ್ನ ಸ್ವಸ್ಥಾನವನ್ನು ಅಲಂಕರಿಸಿ ಅಂದಿನಿಂದ ಇಂದಿಗೂ ಭಕ್ತರನ್ನು ಉದ್ದರಿಸುತ್ತ ವೆಂಕಟಾದ್ರಿಯಲ್ಲಿ ನೆಲಸಿರುವನು..
ಶತಾನಂದರು ಜನಕರಾಜನಿಗೆ ಈ ಶ್ರೀನಿವಾಸ ಕಲ್ಯಾಣವನ್ನು ಶ್ರವಣ ಮಾಡಿದರ ಫಲವನ್ನು ಹೇಳುತ್ತಾರೆ.
ಕೋಟಿ ಕನ್ಯಾದಾನ ಮಾಡಿದ ಫಲ,ಭೂದಾನ ಮಾಡಿದ ಫಲ, ಈ ಕಥೆಯನ್ನು ಕೇಳುವದರಿಂದ ಬರುವದು..
ಇದನ್ನು ಶ್ರವಣ ಮಾಡಿಸಿದವರಿಗು,ಕಥೆಯನ್ನು ಹೇಳಿದವರಿಗು,ಕೇಳಿದವರಿಗು ಸಹ ಸಮಸ್ತ ಅಭೀಷ್ಟಗಳು ನೆರವೇರುತ್ತದೆ..
ಸರ್ವರಿಗು ಇದರಿಂದ ಮಂಗಳುಂಟಾಗುವದು.ಅಂತ ಹೇಳಿ ಮಂಗಳವನ್ನು ಆಚರಿಸಿದರು..
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಸಂಪೂರ್ಣ ವಾದುದು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ|
ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟ||
🙏ಹರೇ ಶ್ರೀನಿವಾಸ🙏
******
No comments:
Post a Comment