ಕೆಮ್ಮು, ಶೀತಕ್ಕೆ ಶುಂಠಿ ಎಂಬ ಮನೆ ಮದ್ದು
ಮಳೆಗಾಲ ಬಂತೆಂದರೆ ಹಲವಾರು ರೋಗಗಳು ಕಾಡುತ್ತವೆ. ಅವುಗಳಲ್ಲಿ ಮುಖ್ಯವಾಗಿ ಶೀತ-ಕೆಮ್ಮು. ಇನ್ನು ಶ್ವಾಸಕೋಶದ ಸಮಸ್ಯೆ ಇರುವವರಂತೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿದ್ದರೆ, ಮಳೆಗಾಲದ ಈ ತೇವ ಭರಿತ ವಾತಾವರಣದಿಂದ ಆರೋಗ್ಯ ಮತ್ತಷ್ಟೂ ಬಿಗಡಾಯಿಸಬಹುದು. ಒಂದು ವೇಳೆ ನಿಮಗೆ ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬಂದರೆ ಇಲ್ಲಿದೆ ಸಿಂಪಲ್ ಮನೆ ಮದ್ದು..
• ಒಣ ಕೆಮ್ಮಿದ್ದರೆ, ಶುಂಠಿ ರಸಕ್ಕೆ ಜೇನು, ತುಳಸಿ ರಸ ಹಾಗೂ ಕರಿಮೆಣಸಿನ ಪುಡಿ ಹಾಕಿ ಸೇವಿಸಿ.
• ಶುಂಠಿ ರಸ ಮತ್ತು ದಾಳಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ಒಂದಿಷ್ಟು ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
• ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಈ ನೀರನ್ನು ತಣ್ಣಗಾದ ಮೇಲೆ ಸೇವಿಸಿ. ಇದರಿಂದ ಕಫ ನಿವಾರಣೆಯಾಗುತ್ತದೆ.
• ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ, ಅದಕ್ಕೆ ಅರ್ಧ ಈರುಳ್ಳಿ, ಬೆಲ್ಲ, ಕರಿಮೆಣಸು ಹಾಕಿ ಕುದಿಸಿ. ಅದನ್ನು ಸೋಸಿ ಕುಡಿದರೆ ಗಂಟಲು ನೋವು, ಕೆಮ್ಮು, ಶೀತ, ಗಂಟಲು ಕೆರೆತ ಸಮಸ್ಯೆಗಳಿಂದ ಮುಕ್ತರಾಗಬಹುದು.
• ರಾತ್ರಿ ಮಲಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇದನ್ನು ಟ್ರೈ ಮಾಡಿ. ಮೆಂತೆ ಕಾಳುಗಳನ್ನು ನೀರಿಗೆ ಹಾಕಿ ಕುದಿಸಿ. ನಂತರ ಅದಕ್ಕೆ ಅರ್ಧ ಚಮಚ ಶುಂಠಿ ರಸ ಮತ್ತು ಜೇನು ಬೆರೆಸಿ ಸೇವಿಸಿ. ರಾತ್ರಿ ಈ ಸಮಸ್ಯೆ ಮತ್ತೆ ಮರುಕಳಿಸುವುದಿಲ್ಲ.
• ಕಾಲು ಕಪ್ ಹಾಲಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕುದಿಸಬೇಕು. ಉಗುರು ಬಿಸಿಯಾಗಿರುವಾಗಲೇ ಕುಡಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ.
*************
SEARCH HERE
Sunday, 7 March 2021
ಶುಂಠಿ ಕೆಮ್ಮು ಶೀತಕ್ಕೆ ಶುಂಠಿ
ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ
ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನವೂ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ.
******
Subscribe to:
Post Comments (Atom)
No comments:
Post a Comment