SEARCH HERE

Wednesday, 3 March 2021

ಯಾವ ಹೊತ್ತಿನಲ್ಲಿ ಯಾವ ದೇವರ ಧ್ಯಾನ


ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವೆನು. ...
  ಹರಿಪ್ರೀತಕರವಾದ
           ಧರ್ಮ
   ಒಂದೊಂದು ಕಾಲದಲ್ಲಿ ಧ್ಯಾನಮಾಡಬೇಕಾಗಿರುವ ಮೂರ್ತಿಗಳು :~
1)ಮುಂಜಾವಿನಲ್ಲಿ ಎದ್ದು ನಾರಾಯಣನನ್ನು ಚಿಂತಿಸಬೇಕು. 
2)ತುಲಸಿಯನ್ನು ವಂದಿಸುವಾಗ ಶ್ರೀಕೃಷ್ಣ.
3)ಮಲಮೂತ್ರವಿಸರ್ಜನ ಕಾಲದಲ್ಲಿ ಅಪಾನಾತ್ಮಕ ಕೇಶವ.
4)ಮೃತ್ತಿಕಾ ಶೌಚ ಕಾಲದಲ್ಲಿ ಗಂಗಾಜನಕವಾದ ತ್ರಿವಿಕ್ರಮ.
5)ದಂತಧಾವನದಲ್ಲಿ ಚಂದ್ರಾಂತರ್ಯಾಮಿಯಾದ ಹರಿ.
6)ಮುಖವನ್ನು ಪ್ರಕ್ಷಾಲಿಸುವಾಗ (ತೊಳೆಯುವಾಗ) ಮಾಧವ.
7)ಗೋವುಗಳನ್ನು ತುರಿಸುವಾಗ ಗೋವರ್ಧನಧಾರಿ.
8)ವತ್ಸಕ್ಕೆ ಮೊಲೆಯುಣಿಸುವಾಗ ಬಾಲಕೃಷ್ಣ.
9)ಗೋವುಗಳನ್ನು ಕರೆಯುವಾಗ (ಹಿಂಡುವಾಗ) ಗೋಪಾಲಕೃಷ್ಣ.
10)ಮೊಸರು ಕಡೆಯುವಾಗ ಕಡಗೋಲ ಕೃಷ್ಣ.
11)ಮೃತ್ತಿಕಾ ಸ್ಥಾನದಲ್ಲಿ ವರಾಹ.
12)ಊರ್ಧ್ವಪುಂಡ್ರಧಾರಣ ಕಾಲದಲ್ಲಿ ಕೇಶವ ಮುಂತಾದ 12 ರೂಪಗಳು.
13)ಚಕ್ರ ಮುಂತಾದ ಪಂಚಮುದ್ರಾಧಾರಣ ಕಾಲದಲ್ಲಿ ಕೃದ್ಧೋಲ್ಕ ಮುಂತಾದ ಪಂಚ ಮೂರ್ತಿಗಳು.
14)ಪ್ರಾಣಾಗ್ನಿಹೋತ್ರ ಕಾಲದಲ್ಲಿ ಅನಿರುದ್ಧ ಮುಂತಾದ ಪಂಚ ಮೂರ್ತಿಗಳು.
15)ವಸ್ತ್ರಪ್ರಾವರಣದಲ್ಲಿ (ಹೊದಿಸುವಾಗ-ಹೊದಿಯುವಾಗ) ವಾಸುದೇವನು.
16)ಷಂಧ್ಯಾವಂದನ ಕಾಲದಲ್ಲಿ ಶ್ರೀ ರಾಮನು.
17)ಶ್ರಾದ್ಧ ಕಾಲದಲ್ಲಿ ಅಚ್ಯುತಾನಂತ ಗೋವಿಂದರು.
18)ಮೊದಲಿನ ಹಾಗೂ ಕೊನೆಯ ಆಪೋಶನಗಳಲ್ಲಿ ಎರಡು ಪ್ರಾಣರೂಪಗಳು.
19)ವಸ್ತ್ರ ಧಾರಣ ಕಾಲದಲ್ಲಿ ಉಪೇಂದ್ರ.
20)ಯಜ್ಞೋಪವೀತಧಾರಣ ಕಾಲದಲ್ಲಿ ನಾರಾಯಣ ವಾಮನ ರೂಪಗಳು.
21)ಆರ್ತಿಕ್ಯವನ್ನು ಸ್ವೀಕರಿಸುವಾಗ ಪರಶುರಾಮನು.
22)ಔಪಾಸನ ವೈಶ್ಯದೇವ ಹೋಮ ಭಸ್ಮಧಾರಣ ಈ ಕಾಲಗಳಲ್ಲಿ ಪರಶುರಾಮ.
23)ಮೂರು ಸಲ ತೀರ್ಥವನ್ನು ಸ್ವೀಕರಿಸುವಾಗ ರಾಮಕೃಷ್ಣ ವಾಸುದೇವ ರೂಪಗಳು.
24)ಶಂಖೋದಕವನ್ನು ಧರಿಸುವಾಗ ಮುಕುಂದ.
25)ಒಂದೊಂದು ತುತ್ತು ತಿನ್ನುವಾಗ ಗೋವಿಂದ.
26)ಭಕ್ಷಗಳನ್ನು ಭಕ್ಷಿಸುವಾಗ ಅಚ್ಯುತ.
27)ಕಾಯಿಪಲ್ಯಗಳನ್ನು ತಿನ್ನುವಾಗ ಧನ್ವಂತರಿ.
28)ಪರಮಾನ್ನವನ್ನು ಭುಂಜಿಸುವಾಗ ಪಾಂಡುರಂಗ.
29)ನವನೀತ ಭಕ್ಷಣದಲ್ಲಿ ತಾಂಡವ ಕೃಷ್ಣ.
30)ಮೊಸರು ಬುತ್ತಿಯಲ್ಲಿ ಗೋಪಾಲಕೃಷ್ಣ.
31)ಹಾಲು ಅನ್ನು ಭೋಜನದಲ್ಲಿ ಶ್ರೀನಿವಾಸನು.
32)ತುಪ್ಪ ಎಣ್ಣೆಗಳಲ್ಲಿ ಸಿದ್ಧ ಪಡಿಸಿದುದನ್ನು ತಿನ್ನುವಾಗ ವೆಂಕಟೇಶನು.
33)ಬಾಳೆಹಣ್ಣು, ನೇರಲ, ಖರ್ಜೂರ, ಮಾವು, ನಾರಂಗಿ(ಕಿತ್ತಳೆ), ಅಡಿಕೆ, ದಾಳಿಂಬ, ಖೊಬ್ಬರಿ, ನೆಲ್ಲಿಗಳ  ಫಲಗಳನ್ನು ತಿನ್ನುವಾಗ ಬಾಲಕೃಷ್ಣ.
34)ಪಾನಕವನ್ನು ಕುಡಿಯುವಾಗ ನರಸಿಂಹ.
35)ಗಂಗಾಪಾನದಲ್ಲಿ, ಗಂಗಾಜನಕ ತ್ರಿವಿಕ್ರಮ.
36)ಪ್ರಯಾಣ ಕಾಲದಲ್ಲಿ ಗರುಡ ಧ್ವಜ ನಾರಾಯಣ.
37) ಮಕ್ಕಳನ್ನು ಮುದ್ದಿಸುವಾಗ ವೇಣಧರ ಕೃಷ್ಣನು.
38)ಸ್ವಸ್ತ್ರೀ ಸಂಭೋಗ ಕಾಲದಲ್ಲಿ ಗೋಪಿಕಾರಮಣ ಗೋಪಾಲಕೃಷ್ಣ.
39) ತಾಂಬೂಲವನ್ನು ಸೇವಿಸುವಾಗ ಪ್ರದ್ಯುಮ್ನ ವಾಸುದೇವ ರೂಪಗಳು.
40) ಶಯನದಲ್ಲಿ ಸಂಕರ್ಷಣ - ವಿಷ್ಣು ರೂಪಗಳು.
41) ನಿದ್ರೆಯಿಂದ ಏಳುವಾಗ ಪದ್ಮನಾಭ .
42) ಕಥೆಯನ್ನು ಹೇಳುವಾಗ ವ್ಯಾಸ-ಕೃಷ್ಣ-ಹಯಗ್ರೀವ ರೂಪಗಳು.
43) ಗಾನಕಾಲದಲ್ಲಿ ಲಕ್ಷ್ಮೀಕಾಂತನು (ಯೋಗೇಶ್ವರನು).
44)ದಕ್ಷಿಣೆಯನ್ನು ಕೊಡುವಾಗ ಶ್ರೀ ಲಕ್ಷ್ಮೀಪತಿಗಳು.
45)ಹೂವು ಕೊಯ್ಯುವಾಗ ಕೃಷ್ಣ.
46)ಪತ್ರಗಳನ್ನು ಹರಿಯುವಾಗ ಅನಂತ ಶಯನ.
47)ಗರಿಕೆ(ದುರುವಾ)ಯನ್ನು  ಹರಿಯುವಾಗ ಕಪಿಲ.
48)ಪ್ರದಕ್ಷಿಣ ಕಾಲದಲ್ಲಿ ಗರುಡಾಂತರ್ಗತಹರಿ.
49)ನಮಸ್ಕರಿಸುವಾಗ ಶೇಷಾಂತರ್ಯಾಮಿ ಸಂಕರ್ಷಣ ರೂಪ.
50)ಭಯ ಬಂದಾಗ ನರಸಿಂಹ.
51) ಎಲ್ಲ ಕಾಲಗಳಲ್ಲಿ ನಾರಾಯಣ.
52)ಉದರ ಪೂರ್ಣವಾಗುವಾಗ ವಾಸುದೇವ ಹೀಗೆ ರೂಪಗಳನ್ನು ಚಿಂತಿಸಬೇಕು.  ಈ ಮುಂತಾದ ಕರ್ಮಗಳು ವಿಷ್ಣುವಿನಪ್ರೀತಿಯನ್ನುಂಟು ಮಾಡುವವು. 
ಶ್ರೀ ಹಯಗ್ರೀವಾಯ ನಮಃ
ಶ್ರೀ ವಾದಿರಾಜ ಗುರುಭ್ಯೋ ನಮಃ

 ‌(received in WhatsApp)

🍁🙏🙏🙏🍁
********

No comments:

Post a Comment