SEARCH HERE

Monday, 8 March 2021

ಹೋಮಗಳು ಮತ್ತು ವಿಚಾರಗಳು


ಹೋಮಗಳು ಮತ್ತು ವಿಚಾರಗಳು..


"ಹೋಮ ಮಾಡಿಸುವ ಪುರೋಹಿತರು " ಹೇಗಿರಬೇಕು..?

(ಕೆಲವು ಗ್ರಂಥದಲ್ಲಿ ಇರೋದು ಹೇಳುತ್ತಿರೋದು ತಪ್ಪು ತಿಳಿಯಬೇಡಿ)


೧. ಪ್ರತಿದಿನ ಸಂಧ್ಯಾವಂದನೆ ಮಾಡುವ ಬ್ರಾಹ್ಮಣರಿಂದ ಮಾತ್ರ ಹೋಮ ಮಾಡಿಸಬೇಕು..


೨. ಹೋಮ ಮಾಡಿಸುವ ಪುರೋಹಿತರಿಗೆ ವಿವಾಹವಾಗಿ, ಹೆಂಡತಿ ಮಕ್ಕಳಿರಬೇಕು..


೩. ವಿದುರರು ಹೋಮ ಮಾಡಿಸಲು ಅನರ್ಹರಾಗಿರುತ್ತಾರೆ..


೪. ದೇವರ ಪೂಜೆ ಮತ್ತು ಹೋಮ ಮಾಡಿಸುವಾಗ ಪುರೋಹಿತರಿಗೆ ಅಥವಾ ಕರ್ತೃವಿಗೆ ನಿದ್ದೆ, ಆಕಳಿಕೆ ಬಂದರೆ, ದೇವತೆಗಳು ಒಲಿಯೋದು ಕಷ್ಟ..

ದೇವತೆಗಳಿಗೆ ಸೋಮಾರಿತನ ಇಷ್ಟ ಇರೋದಿಲ್ಲ..


೪. ಯಾವುದೇ ಜಪವಾಗಲಿ, ಸ್ತೋತ್ರವಾಗಲೀ,  ಮಂತ್ರವಾಗಲೀ ಪೂಜೆ ಮಾಡಿಸುವವರಿಗೆ ಅಥವಾ ಮಾಡುವವರಿಗೆ ನಿದ್ದೆ ಬಂದರೆ ತೂಕಡಿಸಿಬಂದರೆ ಅಂತಹ ಪೂಜೆಗೆ "ಮೈಲಿಗೆಪೂಜೆ" ಎಂದು ಹೆಸರು..

ಪೂಜಾಫಲ ದೊರೆಯುವುದಿಲ್ಲ..


೬. ಪೂಜೆ ಮಾಡಿಸುವವರಿಗೆ ಹೆಂಡತಿ ಬಿಟ್ಟಿದ್ದರೆ, ಹೆಂಡತಿ ತೀರಿ ಹೋಗಿದ್ದರೆ, ಇಂತಹವರು ಮಾಡಿಸುವ ಪೂಜೆಗೆ "ವಿಧುರಪೂಜೆ" ಎಂದು ಹೆಸರು..


೭. ಹೋಮಗಳನ್ನು ಮಾಡುವಾಗ ಪುರೋಹಿತರು ಮತ್ತು ಕರ್ತೃ ಇಬ್ಬರೂ ಉಪವಾಸ ಇರಬೇಕು, ಇಲ್ಲದಿದ್ದರೆ ಫಲ ಕೊಡುವುದಿಲ್ಲ..

(ಅಶಕ್ತರನ್ನು ಬಿಟ್ಟು)


೮. ದಂಪತಿಗಳು ಪರದಾಡಿ, ಜಗಳ ಮಾಡಿಕೊಂಡು, ಹೋಮಕ್ಕೆ ಕುಳಿತುಕೊಳ್ಳಬಾರದು..

ಶಾಂತಿಯಾದ ವಾತಾವರಣ ಇರಬೇಕು..


೯. ತಂದೆ ತಾಯಿ ಸೇವೆ ಮಾಡಿರಬೇಕು, ಗುರುಹಿರಿಯರಲ್ಲಿ ದೇವರಲ್ಲಿ ನಂಬಿಕೆ ಇರಬೇಕು ..

ಸ್ತ್ರೀಗೆ  ಗೌರವ ಕೊಡುವವರಿಗೆ, ದುಶ್ಚಟ ಇಲ್ಲದವರಿಗೆ ಮಾತ್ರ ಫಲ ಕೊಡುತ್ತದೆ..


೧೦. ಇಟ್ಟಿಗೆಯ ಹೋಮದ ಕುಂಡ ಹಾಕಿ ಹೋಮ ಮಾಡಿದರೆ ಮಾತ್ರ ಫಲ ಕೊಡುತ್ತದೆ..

ಕಬ್ಬಿಣದ ಹೋಮದ ಕುಂಡದಿಂದ ಹೋಮ ಮಾಡಿದರೆ ದಾರಿದ್ರ್ಯ ..

ಕಬ್ಬಿಣ ಅಂದರೆ ಶನಿದೇವರು..

ಕಬ್ಬಿಣ ದಲ್ಲಿ ಹೋಮ ಮಾಡೋವಾಗ ಕಿಡಿ ಜಾಸ್ತಿ ಬರುತ್ತೆ, ಇದರಿಂದ ಬಂಧು ಬಳಗದಲ್ಲಿ ಶತೃತ್ವ ಉಂಟಾಗುವುದು. ಮ


೧೧. ಹೋಮದ ಪದಾರ್ಥಗಳನ್ನು ಚೆಲ್ಲಬಾರದು, ದಾಟಬಾರದು ..

ದಾಟಿದರೆ ಅಥವಾ ಚೆಲ್ಲಿದರೆ ದೋಷ ಆಗುತ್ತದೆ, ಪ್ರಾಯಶ್ಚಿತ್ತ ತಾಂಬೂಲ ಕೊಟ್ಟು ಮುಂದುವರಿಯಬೇಕು..


೧೨. ದೇವರ ಕಲಶಗಳಿಗೆ ಪೂರ್ಣವಾದ ಬಟ್ಟಲು ಅಡಿಕೆ ಹಾಕಬೇಕು, ಚೂರು ಅಡಿಕೆ ಹಾಕಬಾರದು..,

ಹಸಿರು ಬಣ್ಣದ ಎಳೆಯ ವೀಳ್ಯದೆಲೆ ಮಾತ್ರ ಉಪಯೋಗಿಸಬೇಕು..


೧೩. ಕಲಶಗಳ ಕೆಳಗೆ ಅಷ್ಟದಳ ಪದ್ಮ ಹಾಕಿರಬೇಕು..

ಕಲಶಗಳಿಗೆ ನೀರಿರುವ ಕಾಯಿಗಳನ್ನು ಮಾತ್ರ ಉಪಯೋಗಿಸಬೇಕು ..


೧೪. ಪುರೋಹಿತರಿಗೆ ಪೂಜೆಯ  contract ಕೊಡಬೇಡಿ,

ಕೆಲವು ಪುರೋಹಿತರು ಪೂಜೆ ಮಾಡಿದ ಸಾಮಗ್ರಿಗಳನ್ನೇ ತಂದು ನಿಮ್ಮ ಮನೆಯಲ್ಲೂ ಅದೇ ಸಾಮಗ್ರಿ ಇಟ್ಟು ಪೂಜೆ ಮಾಡುತ್ತಾರೆ..

ನವಗ್ರಹ ಧಾನ್ಯಗಳಿಗೆ ಒಂದು ಸಾರಿ ಮಾತ್ರ ಪೂಜೆ, ಅದು ಮತ್ತೆ ಪೂಜೆಗೆ ಬರೋಲ್ಲ, ಅದೇ ಧಾನ್ಯ ತಂದು ನಿಮ್ಮ ಮನೆಯಲ್ಲಿ ಪೂಜೆ ಮಾಡಿದರೆ, ನಿಮ್ಮ ಮನೆ ದೋಷ ಹೋಗೋದು ಇರಲಿ, ಅವರ ಮನೆಯ ದೋಷನೂ ನಿಮಗೆ ಬರುತ್ತದೆ ...

(ಕೆಲವು ಪುರೋಹಿತರು ಮಾತ್ರ ಹೀಗೆ ಮಾಡುತ್ತಿದ್ದಾರೆ)


೧೫. ಹೋಮದ ಸಾಮಗ್ರಿಗಳು ಪೂಜಾ ಸಾಮಗ್ರಿಗಳನ್ನು ದಾಟಬಾರದು ..

ವೀಳ್ಯದೆಲೆ, ಅಡಿಕೆ, ಹಾಲು, ತುಪ್ಪ, ಜೇನುತುಪ್ಪ,  ಗಂಧ, ಭಸ್ಮ , ಊದುಕಡ್ಡಿ , ಕರ್ಪೂರ, ಪೂಜಾ ಸಾಮಗ್ರಿಗಳು ....ಇತ್ಯಾದಿ ದಾಟಬಾರದು ..

ಇಂತಹ ವಸ್ತುಗಳು ದೇವ ಸಾಮಗ್ರಿಗಳು ಅಂತ ಹೆಸರು.

***


ಹೋಮಗಳು ದೋಷ ಪರಿಹಾರಗಳು 


🌟 ಮಹಾ ಸುದರ್ಶನ ಹೋಮ - ಅಬಿಚಾರ ದೋಷ, ಪ್ರೇತಬಾಧೆ, ಸಂಮೋಹನಕ್ರಿಯೆಗೆ.


🌟 ಮಹಾ ಮೃತ್ಯುಂಜಯ ಹೋಮ - ಮರಣಾವಸ್ಥೆಯಲ್ಲಿರುವವರಿಗೆ (ತೀವ್ರತರದ ವ್ಯಾಧಿಗಳಿಗೆ).


🌟 ಅಭಯಂಕರ ಹೋಮ - ದೀರ್ಘವ್ಯಾಧಿ, ಕುಷ್ಟ, ಚರ್ಮವ್ಯಾಧಿಗಳಿಗೆ.


🌟 ತ್ರಯಂಭಕ ಹೋಮ - ಆಕಸ್ಮಿಕ ಮರಣಗಳಿಗೆ.


🌟 ದುರ್ಗಾ ಹೋಮ - ಕೃತ್ರಿಮ(ಮಾಟ)ಮಹಾ ಅನಿಷ್ಟಗಳಿಗೆ.


🌟 ಅಶ್ಲೇಷಬಲಿ - ಸರ್ಪದೋಷ ಶ್ರೀಘ್ರವಿವಾಹ.


🌟 ಸುಬ್ರಹ್ಮಣ್ಯಹೋಮ - ಶಸ್ತ್ರ ಚಿಕಿತ್ಸೆ, ವಾಹನ ಅಪಘಾತದಿಂದ ನಿವಾರಣೆಗಾಗಿ.


🌟 ವರುಣ ಹೋಮ - ಸಾಲ ಬಾಧೆನಿವಾರಣೆಗಾಗಿ.


🌟 ವಹ್ನಿಹೋಮ - ಶಸ್ತ್ರಾಪಘಾತ, ವಾಹನಾಪಗಾತಗಳಿಂದ ಪಾರಾಗುವುದ್ದಕ್ಕೆ.


🌟 ನಿರುತಿ ಹೋಮ - ಗೃಹದಲ್ಲಿ ದುಷ್ಟಶಕ್ತಿ ನಿಗ್ರಹಕ್ಕೆ.


🌟 ಗಣಪತಿ ಹೋಮ - ಸಕಲ ಕಾರ್ಯಗಳ ಸಾದನೆ, ಸಸ್ಪೆನ್ಷನ್ ಗಳಿಂದ ಮುಕ್ತಿ, ಇಚ್ಚಾಪೂರ್ತಿಗಾಗಿ.


🌟 ಪುರುಷ ಸೂಕ್ತ ಹೋಮ - ನೆನಪಿನ ಶಕ್ತಿ, ತೊದಲುಮಾತು ನಿವಾರಣೆಗಾಗಿ.


🌟 ಶ್ರೀ ದುರ್ಗಾ ಹೋಮ - ಅಪಘಾತ, ರಾಹುಗ್ರಹಪೀಡೆ ಪರಿಹಾರಗಳಿಗೆ, ಗರ್ಭದೋಷಗಳಿಗೆ.


🌟 ಶ್ರೀ ರುದ್ರ ಹೋಮ - ಕಠಿಣಜ್ವರಬಾದೆ, ಶರೀರಸೌಖ್ಯಕ್ಕೆ.


🌟 ನವಗ್ರಹ ಹೋಮ - ಸಕಲ ಆರೋಗ್ಯ, ಸಂಕಷ್ಟಗಳಿಗೆ, ನವಗ್ರಹದೋಷಗಳಿಗೆ.


🌟 ನಾರಾಯಣ ಬಲಿ ಹೋಮ - ಪ್ರೇತಬಾದೆಗೆ, ಪ್ರಕೃತಿ ವಿರೋಧ, ಮರಣಗಳಿಗೆ ಶಾಂತಿಗಾಗಿ.


🌟 ಅಘೊರ ಹೋಮ - ಪ್ರಾಣಿ, ಪಕ್ಷಿಗಳು ಗೃಹ ಪ್ರವೇಶದಿಂದ ಉಂಟಾಗುವ ದೋಷಗಳ ನಿವಾರಣೆಗಾಗಿ.


🌟 ಸಂತಾನ ಗೋಪಾಲ ಹೋಮ - ಸಂತಾನಕ್ಕಾಗಿ (ಪುರುಷಸೂಕ್ತ ಹೋಮ).


🌟 ಗೋಮುಖಪ್ರಸವಶಾಂತಿ ಹೋಮ - ದುಷ್ಟನಕ್ಷತ್ರದಲ್ಲಿ ಜನನ ಶಾಂತಿಗಾಗಿ.


🌟 ಕೂಷ್ಮಾಂಡ ಹೋಮ - ಮಹಾ ಪ್ರಾಯಶ್ಚಿತ್ತಕ್ಕೆ.


🌟 ಷಷ್ಟಿಪೂರ್ತಿ ಶಾಂತಿ ಹೋಮ - 60ನೇ ವರ್ಷದಲ್ಲಿ.


🌟 ಉಗ್ರ ರಥ ಶಾಂತಿ ಹೋಮ - 70ನೇ ವಯಸ್ಸಿನಲ್ಲಿ.


🌟 ಭೀಮರಥ ಶಾಂತಿ - 75ನೇ ವರ್ಷದಲ್ಲಿ.


🌟 ಸಹಸ್ರ ಚಂದ್ರ ದರ್ಶನ ಶಾಂತಿ ಹೋಮ - ೮೦ನೇ ವಯಸ್ಸಿನಲ್ಲಿ.


🌟 ರಕ್ಷೋ ಗಣ ಹೋಮ - ಮನೆ ನಿರ್ಮಾಣ ಕಾಲದಲ್ಲಿ ಬಲಿಯಾದ ಜೀವ ಜಂತುಗಳ ಆತ್ಮಶಾಂತಿಗಾಗಿ.


🌟 ಸೂರ್ಯ ನಾರಾಯಣ ಹೋಮ - ಆರೋಗ್ಯವೃದ್ದಿಗಾಗಿ, ದೇಹ ಬಲಕ್ಕೆ, ದೃಷ್ಟಿ ದೋಷನಿವಾರಣೆಗೆ.


🌟 ತ್ರಿಪುರದಲ ಹೋಮ - ಶಸ್ತ್ರಚಿಕಿತ್ಸೆ (ಆಪರೇಷನ್ ಗಳ ಯಶಕ್ಕಾಗಿ).


🌟 ದನ್ವಂತ್ರಿ ಹೋಮ - ಆರೋಗ್ಯ ವೃದ್ದಿಗಾಗಿ.


🌟 ಗರುಡ ಹೋಮ - ಸರ್ಪಪೀಡೆ ತಪ್ಪಿಸಲು, ಕಾರ್ಯ ಯಶಸ್ಸಿಗಾಗಿ.


🌟 ತ್ವರಿತ ಹೋಮ - ಕೆಟ್ಟ ಕನಸು, ಪ್ರೇತಬಾಧೆ, ಗಾಳಿಸೋಕುಗಳನಿವಾರಣೆಗಾಗಿ.


🌟 ವೈವಸ್ವತಹೋಮ - ಪಿತಿಶಾಪ, ಮಾತೃಶಾಪನಿವಾರಣೆಗಾಗಿ.


🌟 ಚಂಡಿಕೇಶ್ವರ ಹೋಮ - ಬಾಲಗ್ರಹ ದೋಷ ನಿವಾರಣೆಗಾಗಿ.


🌟 ಗುಹ್ಯ ಕಾಳಿ ಹೋಮ - ಸ್ತ್ರೀ - ಪುರುಷರ ಗುಪ್ತಾಂಗ ರೋಗ ನಿವಾರಣೆಗಾಗಿ.


🌟 ವಾಯು ಹೋಮ - ವಾಯು ಸಂಬಂದ ವ್ಯಾಧಿಗಳ ನಿವಾರಣೆಗಾಗಿ.


🌟 ಶ್ರೀ ಲಲಿತ ಹೋಮ - ಮನೆಯ ನೆಮ್ಮದಿಗಾಗಿ.


🌟 ಮನೋ ವಾಂಚಿತ ಗಣಹೋಮ - ಇಚ್ಚಾಪೂರ್ಣತೆಗಾಗಿ.


🌟 ಶ್ರೀ ಗಾಯತ್ರಿ ಹೋಮ - ಸಕಲ ಪಾಪಗಳ ನಿವೃತ್ತಿಗಾಗಿ, ದುಷ್ಟರ ನಾಶಕ್ಕಾಗಿ.

***


1.. ಗಣಪತಿ/ಗಂ ಹೋಮ:


ಈ ಹೋಮ ಮಾಡುವುದರಿಂದ ಎಲ್ಲ ಕಷ್ಠ, ನಷ್ಠ, ತೊಂದರೆ ನಿವಾರಣೆಯಾಗುವುದಕ್ಕೆ ಮಾಡುವ ಹೋಮ.


2. ನವಗ್ರಹ ಹೋಮ:


ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋಷಗಳಿಗೆ ಹಾಗೂ ನವಗ್ರಹಗಳಲ್ಲಿ ತೊಂದರೆ ತಾಪತ್ರಯವಿದ್ದಾಗ ಸಕಲ ಕಷ್ಟಗಳನ್ನು ಹೋಗಲಾಡಿಸಲು ಮಾಡುವ ಹೋಮ.


3. ಪುರುಷ ಸೂಕ್ತ ಹೋಮ:


ಎಲ್ಲ ಆಸೆ ಈಡೇರುವುದಕ್ಕೆ, ಮನೆ, ವಿದ್ಯಾಭ್ಯಾಸದಲ್ಲಿ ತೊಂದರೆ ಆದ ಕಾರಣ ಬುಧಗ್ರಹ ದೋಷವಿದ್ದು ನಿವಾರಣೆಗಾಗಿ, ವ್ಯಾಪಾರದಲ್ಲಿ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು, ಏಳಿಗೆ ದೊರೆಯುತ್ತದೆ.


4.ಅರುಣ ಹೋಮ:


ಸದಾ ಕಾಯಿಲೆಯಿಂದ ನರಳುವಿಕೆ, ಸಂತಾನಭಾಗ್ಯವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ದಿ, ಯಶಸ್ಸು, ಏಳಿಗೆ ದೊರೆಯುತ್ತದೆ.


5. ತಿಲ ಹೋಮ:


ಪಿತೃ ಶಾಪ ನಿವಾರಣೆ ಹಾಗೂ ಪಿತೃಶಾಪದಿಂದ ಮಕ್ಕಳ ಫಲವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಫಲ ದೊರೆಯುತ್ತದೆ.


6. ಚಮಕ ಹೋಮ:


ಅಂದುಕೊಂಡ ಕಾರ್ಯದಲ್ಲಿ ಹಿನ್ನಡೆ ಯಾವ ಕೆಲಸ ಮಾಡಲು ಹೋದರು ಈಡೇರುವುದಿಲ್ಲ . ಆ ಸಂದರ್ಭದಲ್ಲಿ ಈ ಹೋಮ ಮಾಡಿದರೆ ಎಲ್ಲ ಕಾರ್ಯದಲ್ಲಿ ಹಾಗೂ ಎಲ್ಲ ಬೇಡಿಕೆಗಳು ಈಡೇರುತ್ತದೆ.


7.ಭೂ ಸೂಕ್ತ ಹೋಮ:


ಎಷ್ಟೆ ಬೆಳೆ ಬೆಳೆದರು ಬೆಳೆ ಕೈಗೆ ಬರುವುದಿಲ್ಲ ನಷ್ಠ ಮನೆಯಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ. ವಾಸ್ತು ದೋಷದಿಂದ ಬರುವ ತೊಂದರೆಗಳು, ಆರೋಗ್ಯ ಬಲವಿರುವುದಿಲ್ಲ. ಅಂತಹ ಸಂಧರ್ಭದಲ್ಲಿ ಈ ಹೋಮ ಮಾಡಿದರೆ ಶುಭ.


8. ಆಯಸ್ಸು ಹೋಮ:


ಸದಾಭಯ, ಆರೋಗ್ಯದಲ್ಲಿ ಏರುಪೇರು, ದಶಾಬುಕ್ತಿಕಾಲದಲ್ಲಿ ಆಗುವ ತೊಂದರೆ ಗಂಡಾಂತರಗಳು, ಇದ್ದಾಗ ಆಯಸ್ಸು, ಆರೋಗ್ಯ, ನೆಮ್ಮದಿ ದೊರಕಲು ಈ ಹೋಮ ಮಾಡಿದರೆ ಶುಭ.


9. ಮಹಾ ರಕ್ಷೋಘ್ನ ಹೋಮ

ಮಾಟ, ಮಂತ್ರ, ಅಭಿಜಾರ, ಸದಾ ಕಾಯಿಲೆ, ಕೆಟ್ಟಕನಸ್ಸು, ಮನೆಯಲ್ಲಿ ಜಗಳ, ಕದನ, ಕಲಹ, ಗಂಡ ಹೆಂಡತಿಯಲ್ಲಿ ವಿರಸ, ಆತ್ಮಹತ್ಯೆಯಾದ ಮನೆ, ಶತೃಭಯ, ಅಕಾಲ ಮರಣ,ಚೋರಭಯ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.


10. ಶ್ರೀ ಗಾಯತ್ರಿ ಹೋಮ:


ಬ್ರಹ್ಮಹತ್ಯೆ, ಭ್ರೂಣಹತ್ಯೆ, ಶರೀರದಲ್ಲಿ ಬೇರೆ ಆತ್ಮ ಸೇರುವುಕೆ, ಮಾಟ, ಮಂತ್ರ, ಅಭಿಚಾರ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ-ಲಾಭ.


11. ಸರ್ಪಸೂಕ್ತ ಹೋಮ:


ಮಕ್ಕಳ ಫಲ ಇಲ್ಲದವರಿಗೆ, ಚರ್ಮದ ಕಾಯಿಲೆ ಇದ್ದರೆ ಈ ಹೋಮವನ್ನು ಮಾಡಿದರೆ ಶುಭ.


12. ಧನ್ವಂತ್ರಿ ಹೋಮ:


ಯಾವಾಗಲು ಕಾಯಿಲೆಯಿಂದ ನರಳುವಿಕೆ, ಎಷ್ಟೇ ಔಷಧಿ ಉಪಚಾರ ಮಾಡಿದರು. ಕಾಯಿಲೆವಾಸಿಯಾಗದಿದ್ದರೆ, ಕಾಯಿಲೆ ನಿವಾರಣೆಗೆ ಆರೋಗ್ಯಭಾಗ್ಯಕ್ಕೆ ಈ ಹೋಮವನ್ನು ಮಾಡಿಸಿದರೆ ಸೂಕ್ತ.


13.ಭಾಗ್ಯ ಸೂಕ್ತ ಹೋಮ:


ಕಷ್ಠ, ನಷ್ಠ, ದಾರಿದ್ರ್ಯತೆಯ ನಿವಾರಣೆಗೆ ಹಾಗೂ ಎಲ್ಲ ರೀತಿಯ ಸುಖ, ಸಂತೋಷ, ಸೌಭಾಗ್ಯ ದೊರಕಲು ಈ ಹೋಮವನ್ನು ಮಾಡಿದರೆ ಶುಭ.


14. ತ್ರಿಸುಪರ್ಣ ಮಂತ್ರ ಹೋಮ:


ಗರ್ಭನಿಲ್ಲದಿದ್ದಾಗ ಯಾವಾಗಲು ಗರ್ಭಪಾತವಾಗುತ್ತಿದ್ದರೆ ಗರ್ಭರಕ್ಷಣೆಗೆ ಈ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ.


15. ಮರಣ ಸೂಕ್ತ ಹೋಮ:


ಮೂತ್ರ ಪಿಂಡಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದಾಗ ಮೂತ್ರ ಪಿಂಡ ರಕ್ಷಣೆಗೆ ಈ ಹೋಮ ಮಾಡಿದರೆ ಅನುಕೂಲವಾಗುತ್ತದೆ.


16. ಅನ್ನ ಸೂಕ್ತ ಹೋಮ:


ಭೋಜನಕ್ಕೆ ಕುಳಿತಾಗ ಅನ್ನವನ್ನು ತಿನ್ನಬೇಕೆಂದು ಅನಿಸಿದರು ಅನ್ನ ತಿನ್ನುವುದಕ್ಕೆ ಆಗುವುದಿಲ್ಲ ನಿರಾಕರಣೆ ಮಾಡುವ ಸಂದರ್ಭದಲ್ಲಿ ಈ ಹೋಮ ಮಾಡಬೇಕು.


17. ರುದ್ರ ಸೂಕ್ತ ಹೋಮ:


ಜೀವನದಲ್ಲಿ ಬರಿ ಸಾಕಷ್ಟು ತೊಂದರೆಗಳು ಕಷ್ಠ, ನಷ್ಠ, ವಿಪರೀತ ಕೋಪ, ಉನ್ನತ ಪದವಿ ದೊರಕದಿದ್ದಾಗ, ಈ ಹೋಮ ಮಾಡಿದರೆ ಶುಭ.


18.ಅಗ್ನಿ ಸೂಕ್ತ ಹೋಮ:


ಆರೋಗ್ಯದಲ್ಲಿ ತೊಂದರೆ ಎದೆಉರಿ, ಹೊಟ್ಟೆಉರಿ, ಹೊಟ್ಟೆ ಉಬ್ಬರ, ಅಜೀರ್ಣದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.


19. ಮನ್ಯು ಸೂಕ್ತ ಹೋಮ:


ಮನೆಯಲ್ಲಿ ಸದಾ ಭಯದ ವಾತಾವರಣ, ಗಾಭರಿ, ಭಯ ಮಾಡುವ ಕೆಲಸದ ಜಾಗದಲ್ಲಿ ಕಿರುಕುಳ, ಆಪ-ಆದನೆ, ಶತೃಗಳಿಂದ ತೊಂದರೆ ಇದ್ಧಾಗ ಈ ಹೋಮವನ್ನು ಮಾಡಿದರೆ ಶುಭ.


20. ಪವಮಾನ ಸೂಕ್ತ ಹೋಮ:


ಆತ್ಮಗಳಿಂದ ತೊಂದರೆ, ತಿಳಿದೂ ತಿಳಿಯದೂ ಮಾಡಿದ ಪಾಪ ಕರ್ಮಗಳು, ಸದ್ಗತಿ ಮೋಕ್ಷ ಪಡೆಯಲ್ಲು ಈ ಹೋಮವನ್ನು ಮಾಡಿದರೆ ಶುಭ.


21. ಕುಬೇರ ಹೋಮ:


ಮಾಡುವ ವ್ಯಾಪಾರದಲ್ಲಿ ನಷ್ಠ, ಕೊಟ್ಟ ಹಣ ವಾಪಸು ಬರದೇ ಇರುವುಕೆ, ಹಣ ವಸೂತಿಗೆ, ವ್ಯಾಪಾರದಲ್ಲಿ ಲಾಭ ದೊರಕುವುದಕ್ಕೆ ಈ ಹೋಮ ಮಾಡಿದರೆ ಶುಭ.


22.ಸ್ವಯಂವರ ಕಾಳ ಹೋಮ:


ಎಷ್ಟೇ ಪ್ರಯತ್ನ ಮಾಡಿದರೂ ವಿವಾಹದ ಕಾರ್ಯದಲ್ಲಿ ವಿಳಂಬ, ಹಾಗೂ ದಾಂಪಾತ್ಯದ ವಿಚಾರದಲ್ಲಿ ಸದಾ ಜಗಳ ಕಲಹ, ಅನ್ಯೋನ್ಯತೆ ಇಲ್ಲದಿದ್ದಾಗ ಈ ಹೋಮ ಮಾಡಿಸಿದರೆ ಶುಭ.


23.ದುರ್ಗಾ ಸೂಕ್ತ ಹೋಮ:


ಭಾನಾಮತಿ ಮಾಟಮಂತ್ರ ಪ್ರಯೋಗ, ದೇಹದಲ್ಲಿ ಬಲವಿಲ್ಲದೆ ಇರುವುದು ಆತ್ಮಗಳಿಂದ ಆಗುವ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿಸಿದರೆ ಶುಭ.


24. ಬಾಲಗ್ರಹ ಹೋಮ: 


ಮಕ್ಕಳು ಬೆಚ್ಚಿ ಬೀಳುವುದು, ಸದಾ ಹಟ,ಅಳು ಚಂಡಿ ಹಿಡಿಯುವುದು, ಅನ್ನವನ್ನು ತಿನ್ನಲು ನಿರಾಕರಿಸುವುದು ವಾಂತಿ ಮಾಡಿಕೊಳ್ಳುವುದು, ಜ್ವರದ ತೊಂದರೆ ಇದ್ದಾಗ ಈ ಹೋಮ ಮಾಡಿಸಿದರೆ ಶುಭ.


25. ಸುಬ್ರಹ್ಮಣ್ಯ ಹೋಮ:


ಅಪರೇಷನ್‌ ಮಾಡುವ ಸಂದರ್ಭದಲ್ಲಿ ತೊಂದರೆ ಆಗದೆ ಇರುವುದಕ್ಕೆ ಅಪಘಾತವಾಗಿದ್ದಾಗ ಬೇಗ ವಸಿಯಾಗಲು ಬೆಂಕಿಯಿಂದ ತೊಂದರೆಯಾಗಿದ್ದಾಗ ಬೇಗ ಗುಣಮುಖರಾಗಲು ಈ ಹೋಮವನ್ನು ಮಾಡಿಸಬೇಕು.

****


No comments:

Post a Comment