SEARCH HERE

Saturday, 1 January 2022

Parabhava Samvatsara panchanga 2026-2027 ಪರಾಭವ ಸಂವತ್ಸರ ಪಂಚಾಂಗ पराभवव संवत्सर 2026-2027 panchanga


CLICK-->  uttaradi mutt Sanskrit





***

पराभवनाम संवत्सर चैत्र मास (शुक्ल पक्ष) १९.०३.२०२६ से ०२.०४.२०२६) का दिन विशेषता.

ಪರಾಭವ ನಾಮ ಸಂವತ್ಸರ ಚೈತ್ರ ಮಾಸದ (ಶುಕ್ಲ ಪಕ್ಷ) ೧೯.೦೩.೨೦೨೬ ರಿಂದ ೦೨.೦೪.೨೦೨೬) ದಿನ ವಿಶೇಷಗಳು.

Special Event's Of CHAITRA MAASA (SHUKLA PAKSHA) From 19.03.2026 To 02.04.2026) Of PARABHAVA NAAMA SAMVATSARA


19.03.2026
इष्टि, विष्णुपंचक, (श्रीमदुत्तरादिमठ के लिए - विष्णुपंचकाभाव - द्वारका, जामनगर, सोमनाथ, जूनागढ़, और पोरबंदर नगर के लिए), श्रीसत्यसंतुष्टतीर्थर पु (मैसूरु), युगादि अमावास्या, पद्मकयोग, नूतन संवत्सरारंभ चांद्रमान युगादि, अभ्यंग, निंबपुष्पभक्षण (निंबकंदळ भक्षण), बालेंदुपूजा, पंचांगपूजन, पंचांगश्रवण, रामनवरात्रारंभ, ध्वजारोहण, श्वेतवराहकल्पादि, इष्टि, वत्सराधिपपूजे, नववस्त्रधारण, दधिक्षीरघृतवर्जन, शकुन निरीक्षण, मासपर्यंत दंपति पूजनात्मक गौरीव्रत , मासपर्यंत धर्मघटदान, प्रपादान, श्वेतवराहकल्पादि, श्रीपुरुषोत्तमतीर्थर गुहा प्रवेश (अब्बूरु), सोसले श्रीव्यासराजमठ में श्रीनीलादेवि करार्चित मूलगोपालादि प्रतिमाओं को महाभिषेक.
ಇಷ್ಟಿ, ವಿಷ್ಣುಪಂಚಕ, (ಶ್ರೀಮದುತ್ತರಾದಿಮಠಕ್ಕೆ - ವಿಷ್ಣುಪಂಚಕಾಭಾವ - ದ್ವಾರಕಾ, ಜಾಮ್ ನಗರ್, ಸೋಮನಾಥ್, ಜುನಾಗಡ್ ಮತ್ತು ಪೊರಬಂದರ ನಗರಗಳಿಗೆ) ಶ್ರೀಸತ್ಯಸಂತುಷ್ಟತೀರ್ಥರ ಪು (ಮೈಸೂರು), ಯುಗಾದಿ ಅಮಾವಾಸ್ಯಾ, ಪದ್ಮಕಯೋಗ, ನೂತನ ಸಂವತ್ಸರಾರಂಭ, ಚಾಂದ್ರಮಾನ ಯುಗಾದಿ,ಅಭ್ಯಂಗ (ಅಭ್ಯಂಜನ), ನಿಂಬಪುಷ್ಪಭಕ್ಷಣ (ನಿಂಬಕಂದಳ ಭಕ್ಷಣ),ಬಾಲೇಂದುಪೂಜಾ,ಪಂಚಾಂಗಪೂಜನ, ಪಂಚಾಂಗಶ್ರವಣ, ವತ್ಸರಾಧಿಪಪೂಜೆ, ನವವಸ್ತ್ರಧಾರಣ, ದಧಿಕ್ಷೀರಘೃತವರ್ಜನ, ಶಕುನನಿರೀಕ್ಷಣ, ಮಾಸಪರ್ಯಂತ ದಂಪತಿ ಪೂಜನಾತ್ಮಕ ಗೌರೀವ್ರತ, ಮಾಸಪರ್ಯಂತ  ಧರ್ಮಘಟದಾನ, ಪ್ರಪಾದಾನ, ರಾಮನವರಾತ್ರಾರಂಭ,ಧ್ವಜಾರೋಹಣ, ಶ್ವೇತವರಾಹಕಲ್ಪಾದಿ, ಇಷ್ಟಿ, ಶ್ರೀಪುರುಷೋತ್ತಮ ತೀರ್ಥರ ಗುಹಾಪ್ರವೇಶ (ಅಬ್ಬೂರು), ಸೋಸಲೆ ಶ್ರೀವ್ಯಾಸರಾಜರ ಮಠದಲ್ಲಿ ಶ್ರೀನೀಲಾದೇವಿ ಕರಾರ್ಚಿತ ಮೂಲಗೋಪಾಲಕೃಷ್ಣಾದಿ ಪ್ರತಿಮೆಗಳಿಗೆ ಮಹಾಭಿಷೇಕ.
ISHTI, VISHNUPANCHAKA, (FOR SMUM - VISHNUPANCHAKABHAVA - Cities Of DWARKA, JAMNAGAR, SOMANATH, JUNAGADH AND PORBANDAR) , SHRI SATYASANTUSHTA Theertara Pu (MYSORE), UGAADI AMAVASYA, PADMAKAYOGA, NOOTANA SAMVATSARA Start's, CHANDRAMANA UGADI, ABHYANGA(ABHYANJANA), NIMBAPUSHPA BHAKSHANA (NIMBAKADALA BHAKSHANA), PANCHANGA POOJANA, PANCHANGA SHRAVANA, VASTARADIPAPOOJE, NAVAVASTRA DHARANA, DADHIKSHEERAGHRATAVARJANA, SHAKUNA NIRIKSHANA, MAASA PARYANTA DAMPATI POOJANATMAKA GOURIVRATA, MAASA PARYANTA DHARMAGHATADANA, PRAPADANA,  RAMA NAVARATRI Start's, DWAJAROHANA, SHWETAVARAHAKALPADI, SHRI PURUSHOTTAMA Theertara Guha PRAVESHA (ABBURU).



20.03.2026
चंद्रदर्शन, श्रीवेदव्यास तीर्थर पु (पेनगुंडि), श्रीसत्यप्रज्ञतीर्थर पु (आतकूर), श्रीसच्चिदानंद नृसिंह भारती महास्वामीगळवरपु (श्रृंगेरी) ,गौरि शिव को दमनार्पणे.
ಚಂದ್ರದರ್ಶನ, ಶ್ರೀವೇದವ್ಯಾಸತೀರ್ಥರ ಪು (ಪೆನಗುಂಡಿ), ಶ್ರಿಸತ್ಯಪ್ರಜ್ಞತೀರ್ಥರ ಪು (ಆತಕೂರ), ಶ್ರೀಸಚ್ಚಿದಾನಂದ ನೃಸಿಂಹ ಭಾರತೀ ಮಹಾಸ್ವಾಮಿಗಳವರ ಪು (ಶೃಂಗೇರಿ) ಗೌರೀ ಶಿವರಿಗೆ ದಮನಾರ್ಪಣೆ.
CHANDRA DARSHANA, SHRI VEDAVYASA Theeetara Pu (PENAGUNDI), SHRI SATYAPRAJNA Theeetara Pu (ATKUR), SHRI SACCHIDANANDA NRASIMHA BHARATI MAHASWAMYGALA Pu (SHRINGERI), DAMANARPANE TO GOURI SHIVA.


21.03.2026
मत्स्य जयंती, गौरी तृतीया,  आंदोलिका गौरी व्रत, मासपर्यंत चैत्रगौरी व्रत, उत्तम मन्वादि, श्रीरामडोलोत्सव, श्रीकृष्ण वर्धंति (अल्लिपुर).
ಮತ್ಸ್ಯ ಜಯಂತಿ, ಗೌರೀ ತೃತೀಯಾ,  ಆಂದೋಲಿಕಾಗೌರೀ ವ್ರತ , ಮಾಸಪರ್ಯಂತ ಚೈತ್ರಗೌರೀ ವ್ರತ, ಉತ್ತಮ ಮನ್ವಾದಿ, ಶ್ರೀರಾಮಡೋಲೋತ್ಸವ, ಶ್ರೀಕೃಷ್ಣ ವರ್ಧಂತಿ (ಅಲ್ಲಿಪುರ).
MATSYA JAYANTI, GOURI TRATIYA,  ANDOLIKA GAURI VRATA, MAASA PARYANTA CHAITRAGOURI VRATA, UTTAMA MANVADI, SHRIRAMA DOLOTSAVA, SHRIKRISHNA VARDHANTI (ALLIPURA).


22.03.2026
विनायकि चतुर्थी, गणेश जी को दमनार्पणे.
ವಿನಾಯಕೀಚತುರ್ಥೀ, ಗಣೇಶನಿಗೆ ದಮನಾರ್ಪಣೆ.
VINAYAKI CHATURTHI,  DAMANARPANE TO GANESHA.


23.03.2026
उदान कल्पादि (कूर्मकल्पादि), हयव्रत, नाग जि को दमनार्पणे, लक्ष्मी पूजा, श्रीविष्णुडोलोत्सव,.
ಉದಾನ ಕಲ್ಪಾದಿ(ಕೂರ್ಮ ಕಲ್ಪಾದಿ), ಹಯವ್ರತ, ನಾಗನಿಗೆ ದಮನಾರ್ಪಣೆ, ಲಕ್ಷ್ಮೀಪೂಜ, ಶ್ರೀವಿಷ್ಣುಡೋಲೋತ್ಸವ.
UDANA KALPADI (KOORMA KALPADI), HAYAVRATA, DAMANARPANE TO NAGADEVARU, LAXMI POOJA, SHRIVISHNU DOLOTSAVA.


24.03.2026
स्कंद जि को दमनार्पणे, श्रीभारतीतीर्थ महास्वामीगळ वर्धंति (श्रृंगेरी).
ಸ್ಕಂದನಿಗೆ ದಮನಾರ್ಪಣೆ, ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ವರ್ಧಂತಿ (ಶೃಂಗೇರಿ).
DAMANARPANE TO SKANDA, SHRI BHARATI Teertha MAHASWAMYGALA VARDHANTI (SHRINGERI).


25.03.2026
सूर्य जि को दमनार्पणे.
ಸೂರ್ಯನಿಗೆ ದಮನಾರ್ಪಣೆ.
DAMANARPANE TO SURYA.


26.03.2026
भोगापुरेश रथोत्सव (नवलि), भवानी जयंती, भवान्युत्पत्ति, श्रीसत्यध्यानतीर्थर पु (पंढरपुर), दुर्गाष्टमी, अशोककलिकाप्राशन, ब्रम्हपुत्रा नदी स्नान करने से विशेष फल.
ಭೋಗಾಪುರೇಶ ರಥೋತ್ಸವ (ನವಲೀ), ಭವಾನೀ ಜಯಂತಿ, ಭವಾನ್ಯುತ್ಪತ್ತಿ, ಶ್ರೀಸತ್ಯಧ್ಯಾನತೀರ್ಥರ ಪು (ಪಂಢರಪುರ), ದುರ್ಗಾಷ್ಟಮೀ, ಅಶೋಕಕಲಿಕಾಪ್ರಾಶನ ಬ್ರಹ್ಮಪುತ್ರಾನದೀಸ್ನಾನದಿಂದ ವಿಶೇಷ ಫಲ.
BHOGAPURESHA RATHOTSAVA (NAVALI), BHAVANI JAYANTI (BHAVANYUTPATTI), SHRI SATYADHYANA Theertara Pu (PANDARAPURA), DURGASHTAMI (ASHOKASHTAMI), ASHOKAKALIKAPRASHANA, VISHESHAPHALA BY DOING BRAHMAPUTRA RIVER SNANA.


27.03.2026
श्रीरामनवमी, श्रीमदुत्तरादिमठे महाभिषेकोत्सव, श्रीकवींद्रतीर्थर पु (नववृंदावन), दुर्गादेवी को दमनार्पणे, पंचमुखी में महारथोत्सव, आज से वैशक शुक्ल पूर्णिमा पर्यंत वसंतपूजा, सोसले मठ में श्रीमूलपट्टाभिराम और दिग्विजयरामदेव जी को पंचाम्रताभिषेक.
ಶ್ರೀರಾಮನವಮೀ, ಶ್ರೀಮದುತ್ತರಾದಿಮಠೇ ಮಹಾಭಿಷೇಕೋತ್ಸವ:, ಶ್ರೀಕವೀಂದ್ರತೀರ್ಥರ ಪು (ನವವೃಂದಾವನ),  ದುರ್ಗಾದೇವಿಗೆ ದಮನಾರ್ಪಣೆ, ಪಂಚಮುಖಿ ಯಲ್ಲಿ ಮಹಾರಥೋತ್ಸವ, ಇಂದಿನಿಂದ ವೈಶಾಖ ಶುಕ್ಲ ಪೂರ್ಣಿಮಾ ಪರ್ಯಂತ ವಸಂತ ಪೂಜಾ, ಸೋಸಲೆ ಮಠದಲ್ಲಿ ಶ್ರೀಮೂಲಪಟ್ಟಾಭಿರಾಮ ಮತ್ತು ಶ್ರೀದಿಗ್ವಿಜಯ ರಾಮದೇವರಿಗೆ ಪಂಚಾಮೃತಾಭಿಷೇಕ.
SHRIRAMA NAVAMI, SHRI MADHUTTARADIMATHE MAHABHISHEKOTSAVA, SHRI KAVINDRA Theertara Pu (NAVA VRANDAVANA),  DAMANARPANE TO DURGADEVI, MAHARATHOTSAVA IN PANCHAMUKHI, VASANTA POOJA UP TO VAISHAKHA SHUKLA POURNIMA FROM TODAY, PANCHAMRATA ABHISHEKA FOR SHRI MOOLA PATTABHIRAMA DEVARU AND SHRI DIGVIJAYARAMA DEVARIGE IN SVM.


28.03.2026
प्राणदेव रथोत्सव (कोरवार), धर्मराज को दमनार्पणे.
ಪ್ರಾಣದೇವ ರಥೋತ್ಸವ (ಕೋರವಾರ), ಧರ್ಮರಾಜನಿಗೆ ದಮನಾರ್ಪಣೆ.
PRANADEVA RATHOTSAVA (KORAWARA), DAMANARPANE TO DHARMARAJA.


29.03.2026
सर्वेषां एकादशी  (कामदा), श्रीकृष्ण डोलोत्सव.
ಸರ್ವೇಷಾಂ ಏಕಾದಶೀ (ಕಾಮದಾ), ಶ್ರೀಕೃಷ್ಣಡೋಲೋತ್ಸವ.
SARVESHAM EKAADASHI (KAMADA), SHRI KRISHNA DOLOTSAVA.


30.03.2026
पारणे, साधनी द्वादशी, प्रदोष (सोमप्रदोष), अनंग त्रयोदशी अनंगपूजा, विष्णु को दमनार्पणे, मन्मथ को दमनार्पणे.
ಪಾರಣೆ, ಸಾಧನೀ ದ್ವಾದಶೀ, ಪ್ರದೋಷ (ಸೋಮಪ್ರದೋಷ), ಅನಂಗ ತ್ರಯೋದಶೀ, ಅನಂಗ ಪೂಜಾ, ಶ್ರೀವಿಷ್ಣುವಿಗೆ ದಮನಾರ್ಪಣೆ, ಮನ್ಮಥನಿಗೆ ದಮನಾರ್ಪಣೆ.
PARANE, SADHANI DWADASHI, PRADOSHA (SOMA PRADOSHA), ANANGA TRAYODASHI, ANANGAPOOJA, DAMANARPANE TO SHRIVISHNU, DAMANARPANE TO MANMATHA.


31.03.2026
श्रीसत्यप्रियतीर्थर पु (मानामधुरै), शिव जी को दमनार्पणे, श्री नृसिंह डोलोत्सव.
ಶ್ರೀಸತ್ಯಪ್ರಿಯತೀರ್ಥರ ಪು (ಮಾನಾಮಧುರೈ), ಶಿವನಿಗೆ ದಮನಾರ್ಪಣೆ, ಶ್ರೀನೃಸಿಂಹಡೋಲೋತ್ಸವ.
SHRI SATYAPRIYA Theertara Pu (MANAMADURAI), DAMANARPANE TO SHIVA, SHRI NARASIMHA DOLOTSAVA.


01.04.2026
श्रीहनुमज्जयंती (श्रीमदुत्तरादिमठ के लिए), देवसावर्णीमन्वादी, विष्णुपंचक अभाव, अन्वाधान, दवनद पूर्णिमा (श्रीमदुत्तरादिमठ के लिए), पूज्य श्रीसुबुदेंद्रतीर्थर वर्धांत्युत्सव.
ಶ್ರೀಹನುಮಜ್ಜಯಂತೀ(ಶ್ರೀಮದುತ್ತರಾದಿಮಠ ಕ್ಕೆ), ದೇವಸಾವರ್ಣಿಮನ್ವಾದಿ, ವಿಷ್ಣುಪಂಚಕ ಅಭಾವ, ಅನ್ವಾದಾನ, ದವನದ ಹುಣ್ಣಿಮೆ (ಶ್ರೀಮದುತ್ತರಾದಿ ಮಠಕ್ಕೆ), ಪೂಜ್ಯ ಶ್ರೀಸುಬುದೇಂದ್ರತೀರ್ಥರ ವರ್ಧಂತ್ಯುತ್ಸವ.
SHRI HANUMAJJAYANTI(FOR SMUM), DEVASAVARNI MANVADI, NO VISHNUPANCHAKA, ANWADHANA, DAVANADA POURNIMA (For SMUM), VARDHANTI UTSAVA Of POOJYA SHRI SUBHUDENDRA Theertaru.


02.04.2026
श्रीहनुमज्जयंती (श्रीराघवेंद्र स्वामीगळवरमठ और सोसले श्रीव्यासराजमठ के लिए), इष्टि, विष्णुपंचकाभाव, वैशाख स्नानारंभ, देवसावर्णीमन्वादी (रौच्छकसावर्णीमन्वादी) दवनद पूर्णिमा (चित्रा पूर्णिमा -  हंपी पूर्णिमा), हंपी वीरूपाक्ष रथोत्सव, यवाग्रयण, चित्रवस्त्र - चित्रान्न  दद्यन्नदान, सर्व देवताओं को दमनार्पणे, श्रीलक्ष्मीवेंकटेश्वर रथोत्सव (बागलवाड),  बेंगळूरु करग, श्रीमुनींद्रतीर्थर पु (श्रीरंग).
ಶ್ರೀಹನುಮಜ್ಜಯಂತೀ(ಶ್ರೀರಾಘವೇಂದ್ರ ಸ್ವಾಮಿಗಳವರಮಠ  ಮತ್ತು ಸೋಸಲೆ ಶ್ರೀವ್ಯಾಸರಾಜರಮಠಕ್ಕೆ), ಇಷ್ಟಿ, ವಿಷ್ಣುಪಂಚಕಾಭಾವ, ವೈಶಾಖ ಸ್ನಾನಾರಂಭ, ದೇವಸಾವರ್ಣಿ (ರೌಚ್ಚಕ) ಮನ್ವಾದಿ, ದವನದ ಹುಣ್ಣಿಮೆ (ಚಿತ್ರಾ ಪೂರ್ಣಿಮಾ - ಹಂಪಿ ಪೂರ್ಣಿಮಾ), ಹಂಪಿ ವಿರೂಪಾಕ್ಷ ರಥೋತ್ಸವ, ಯವಾಗ್ರಯಣ, ಚಿತ್ರವಸ್ತ್ರ - ಚಿತ್ರಾನ್ನ - ದದ್ಯನ್ನ ದಾನ, ಸರ್ವದೇವತೆಗಳಿಗೆ ದಮನಾರ್ಪಣೆ, ಶ್ರೀಲಕ್ಷ್ಮಿವೆಂಕಟೇಶ್ವರ ರಥೋತ್ಸವ (ಬಾಗಲವಾಡ), ಬೆಂಗಳೂರು ಕರಗ, ಶ್ರೀಮುನೀಂದ್ರತೀರ್ಥರ ಪು (ಶ್ರೀರಂಗ).
SHRI HANUMAJJAYANTI(FOR SRSM And SVM), ISHTI, NO VISHNUPANCHAKA, VAISHAKHA SNANA Start's, DEVASAVARNI (ROUCCHAKA)  MANVADI, DAVANADA POURNIMA (CHITRA POURNIMA- HAMPI POURNIMA), HAMPI VIRUPAKSHA RATHOTSAVA, YAVAGRAYANA, CHITRAVASTRA, CHITRANNA - DADYANNADANA, DAMANARPANE TO SARVADEVATEGALU, SHRI LAXMI VENKATESHWARA RATHOTSAVA (BAGALWADA), BENGALURU KARAGA, SHRI MUNINDRA Theertara Pu (SHRIRANGA).

***

click->

***


ಪರಾಭವ ಸಂವತ್ಸರ

ತಿಥೇಶ್ಚ ಶ್ರಿಯಮಾಪ್ನೋತಿ  ಪಂಚಾಂಗಂನಫಲಂವಾರಣಂನಂ |

ನಕ್ಷತ್ರಾದ್ಧರತೇ ಪಾಪಂ  ಪಂಚಾಂಗಂನಫಲಂವಾರಣಂ ||

ಕರಣಾತ್ ಕಾರ್ಯಸಿದ್ದ್ಯರ್ಥಂ ಪಂಚಾಂಗಂ ಫಲಮುತ್ತಮಂ |

ಏತೇಷಾಂ ಶ್ರವಣಾನ್ನಿತ್ಯಂ  ಪಂಚಾಂಗಂನಫಲಂ ಲಭೇತ್ ||

ಪಂಚಾಂಗ ಅಂದರೆ ಐದು ಅಂಗಗಳು - ತಿಥಿ, ವಾರ, ನಕ್ಷತ್ರ, ಯೋಗ, ಕರಣ.

ನಾವು ಪ್ರತಿನಿತ್ಯ ಅವತ್ತಿನ ಪಂಚಾಂಗ ಪಠಿಸಬೇಕು.  ಅದರಿಂದ ಬರುವ ಫಲವೇನೆಂದರೆ :-

ತಿಥಿಯನ್ನು ತಿಳಿಯುವುದರಿಂದ ಸಂಪತ್ತು ಪ್ರಾಪ್ತಿ.

ವಾರವನ್ನು ತಿಳಿಯುವುದರಿಂದ ಆಯುಷ್ಯ ವೃದ್ಧಿ.

ನಕ್ಷತ್ರ ತಿಳಿಯುವುದರಿಂದ ಪಾಪ ಹಾನಿ.

ಯೋಗ ತಿಳಿಯುವುದರಿಂದ ರೋಗ ನಾಶ.

ಕರಣ ತಿಳಿಯುವುದರಿಂದ ಕಾರ್ಯ ಸಿದ್ಧಿ.

ಚಾಂದ್ರಮಾನ, ಸೌರಮಾನ, ಸಾವನ, ನಾಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ಸಂವತ್ಸರಗಳು ಐದು ವಿಧ.  

ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಇತ್ಯಾದಿ ಹೆಸರುಗಳಿಂದ ಕರೆಯಲ್ಪಟ್ಟು ಕೊನೆಯ ಅಂದರೆ ೬೦ನೇ ಸಂವತ್ಸರವನ್ನು ಕ್ಷಯ ಎಂದು ಕರೆಯಲಾಗಿದೆ.

ಒಂದು ಚಾಂದ್ರಮಾನ ಮಾಸವು 29.5 ದಿನಗಳು ಮತ್ತು ಒಂದು ವರ್ಷವು 365 ದಿನಗಳೆಂದರೆ, 11 ಹೆಚ್ಚುವರಿ ದಿನಗಳು ಉಳಿದುಕೊಳ್ಳುತ್ತವೆ. (29.5 X 12 = 354, 365-254 = 11).   ಉದಾಹರಣೆಗೆ ಕಳೆದ ವರ್ಷ ಯುಗಾದಿ  ಮಾರ್ಚ್ 30, ಈ ವರ್ಷ ಮಾರ್ಚ್ 19.  ಇಲ್ಲಿ ಹನ್ನೊಂದು ದಿನಗಳ ವ್ಯತ್ಯಾಸವಿದೆ.  ಇದೇ ರೀತಿ ಮೂರು ವರ್ಷಗಳಲ್ಲಿನ ಹೆಚ್ಚುವರಿ ದಿನಗಳನ್ನು ಕೂಡಿಸಿ ಅಧಿಕ ಮಾಸ ಆಚರಿಸುತ್ತಾರೆ.

ಇದೇ ರೀತಿ ಸೌರ ಮಾನದಲ್ಲಿ ಮೂವತ್ತು ದಿನಗಳಿಗೊಮ್ಮೆ ಸೂರ್ಯನು ಹನ್ನೆರಡು ರಾಶಿಗಳ ಸುತ್ತು ಹೊಡೆಯುತ್ತಾನೆ.

ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನು ಪರಿಗಣಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ.   ಪ್ರತಿವರ್ಷ ಸೌರಮಾನ ರೀತ್ಯಾ ಏಪ್ರಿಲ್ 14 ರಂದೇ ಯುಗಾದಿ ಆಚರಣೆಯಾಗುತ್ತದೆ.  ಸೌರಮಾನ ರೀತ್ಯಾ ಅಧಿಕ ಮಾಸವಿರುವುದಿಲ್ಲ.

ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ + ಆದಿ" - ಹೊಸ ಯುಗದ ಆರಂಭ ಎಂದು.  ಬ್ರಹ್ಮದೇವನು ಈ ದಿನದಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. 

ಪರಾಭವ ಎಂದರೆ "ಸೋಲು" ಎಂದು ಸಾಮಾನ್ಯ ಅರ್ಥ.  ಯಾರಿಗೆ ಸೋಲು ? ನಮ್ಮ ಅಹಂಕಾರ,  ನಮ್ಮ ದುಶ್ಚಟ, ನಕಾರ ಮೊದಲಾದವನ್ನು ಸೋಲಿಸಬೇಕು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಏನು ನಮ್ಮಲ್ಲಿ ಪ್ರಗತಿಯಾಗಿದೆ, ಯೋಚಿಸಿ.

ಸಂಧ್ಯಾವಂದನೆ ಮಾಡದಿದ್ದವರು ಮಾಡಲು ಆರಂಭಿಸಬೇಕು.  ಒಪ್ಪೊತ್ತು ಮಾಡುತ್ತಿದ್ದವರು ಎರಡು ಹೊತ್ತು ಮಾಡಬೇಕು. ತುಳಸಿ ಪೂಜೆ ಮಾಡದಿದ್ದವರು ತುಳಸಿ ಪೂಜೆ ಮಾಡಬೇಕು.

ಏಕಾದಶಿ ಊಟ ಮಾಡುತ್ತಿದ್ರವರು ಕನಿಷ್ಠ ಫಲಾಹಾರಕ್ಕೆ ಬನ್ನಿ,  ಫಲಾಹಾರ ಮಾಡುತ್ತಿದ್ದವವರು ನಿರಾಹಾರ ಮಾಡಲಿ. 

ಹೀಗೆ ನಾವು ನಮ್ಮಲ್ಲಿರುವ ತಪ್ಪನ್ನು ಪರಾಭವಗೊಳಿಸಿ ಮುಂದುವರಿಯಬೇಕು.

by -ನರಹರಿ ಸುಮಧ್ವ 

ಸುಮಧ್ವ ಸೇವಾ

***

ಪರಾಭವ ಸಂವತ್ಸರ!!😱  ಈ ವರುಷ ಕೆಟ್ಟದಾಗುತ್ತಾ?

 ಹೌದು!!

ದುಷ್ಟಶಕ್ತಿಗಳಿಗೆ ಪರಾಭವ!

ದುರ್ಜನರಿಗೆ ಪರಾಭವ!

ಅರಿಷಡ್ವರ್ಗಗಳಿಗೆ ಪರಾಭವ!

ಅಧರ್ಮಕ್ಕೆ ಪರಾಭವ!

ಇವಕ್ಕೆಲ್ಲಾ ಪರಾಭವವನ್ನು(ಸೋಲನ್ನು) ಕೊಟ್ಟು ಸಜ್ಜನರನ್ನು ಸಲಹುವ

ನೂತನ ಸಂವತ್ಸರದ ಶುಭಾಶಯಗಳು

***

ಪಂಚಾಂಗ ಒಂದು ಮಾಹಿತಿ


ಪಂಚಾಂಗವೆಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣವೆಂಬ ಐದು ಅಂಗಗಳಿಂದ ಕೂಡಿರುವುದು ಎಂದರ್ಥ. ಇವು ಕಾಲಗಣನೆಯ ಪ್ರಮುಖ ಅಂಗಗಳಾಗಿರುತ್ತದೆ.
ಪ್ರತಿ ನಿತ್ಯವೂ ಈ ಐದು ಅಂಗಗಳನ್ನೊಳಗೊಂಡು ರಚಿತವಾದ ಪುಸ್ತಕರೂಪವೇ ಪಂಚಾಂಗ ಎನ್ನಬಹುದು. ಇದು ಅಲ್ಲದೇ ಹಬ್ಬ ಹರಿದಿನಗಳು, ಗ್ರಹಣಗಳು , ಉಪಯುಕ್ತ ಧರ್ಮಶಾಸ್ತ್ರ ವಿಚಾರಗಳು ಹಾಗೂ ಜೋತಿಷ್ಯ ಫಲಶಾಸ್ತ್ರವು ಕೂಡ ಪಂಚಾಂಗ ಪುಸ್ತಕದ ಪ್ರಮುಖ ಭಾಗವಾಗಿರುತ್ತದೆ.

ತಿಥಿ; ಪಕ್ಷ; ಚಾಂದ್ರಮಾಸ:
ಸದಾ ಸಂಚಾರಶೀಲನಾಗಿರುವ ಸೂರ್ಯ ಮತ್ತು ಚಂದ್ರರ ಅಂತರವನ್ನು ತಿಥಿಯೆಂಬುದಾಗಿ ಕರೆಯುತ್ತಾರೆ. ಸೂರ್ಯಚಂದ್ರರು ಜೊತೆಗಿರುವುದೇ ಅಮಾವಾಸ್ಯೆ ಎಂದು ಹೆಸರು. ಚಾಂದ್ರಮಾಸದ ಕೊನೆಯದಿನ ಅಂದರೆ ಅಮಾವಾಸ್ಯೆಯಂದು ಸೂರ್ಯಚಂದ್ರರು ಜೊತೆಗಿರುತ್ತಾರೆ.
ಅಮಾವಾಸ್ಯೆಯಂದು ಒಂದಾದ ಸೂರ್ಯಚಂದ್ರರು ಪೂರ್ವ ದಿಕ್ಕಿನಲ್ಲಿ ಚಲನೆಯನ್ನು ಆರಂಭಿಸುತ್ತಾರೆ. ಚಂದ್ರನ ಚಲನೆ ಸೂರ್ಯನ ಚಲನೆಗಿಂತ ವೇಗವಾಗಿರುವುದರಿಂದ ಅವರಿಬ್ಬರ ಅಂತರ ಜಾಸ್ತಿಯಾಗುತ್ತಾ ಹೋಗುತ್ತದೆ. ಈ ಅಂತರವನ್ನು ಅಂಶಗಳ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಂಡಾಗ ಒಂದನೆಯ ಹನ್ನೆರಡು ಅಂಶಗಳ ಅಂತರವು ಒಂದನೇ ತಿಥಿಯಾದ ಪ್ರತಿಪತ್/ ಪಾಡ್ಯ ವೆಂತಲೂ ಕರೆಯಲ್ಪಡುತ್ತದೆ. ಚಂದ್ರನು ಈ ಸಂದರ್ಭದಲ್ಲಿ ಬಿಳಿಯಾಗಿ ಕಾಣಲು ಪ್ರಾರಂಭಿಸುತ್ತಾನೆ. ಇದನ್ನು ಪ್ರಥಮ ಕಲೆ ಎಂತಲೂ ಕರೆಯುತ್ತಾರೆ.
ಅಂತರಗಳು ಹೆಚ್ಚಾದಂತೆ ತದಿಗೆ, ಚೌತಿ, ಪಂಚಮಿ, ಷಷ್ಟಿ, ಸಪ್ತಮಿ, ಅಷ್ಟಮಿ, ನವಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ತಿಥಿಗಳಾಗುತ್ತದೆ.
ನೂರಅರವತ್ತೆಂಟರಿಂದ ನೂರಎಂಬತ್ತು ಅಂಶಗಳ ಅಂತರವಿರುವಾಗ ಪೂರ್ಣಚಂದ್ರನು ಅಂದರೆ ಹುಣ್ಣಿಮೆಯೂ ಪುನಃ ಮುನ್ನೂರಅರವತ್ತು ಅಂಶಗಳಿಗೆ ಒಗ್ಗೂಡುವ ಸೂರ್ಯಚಂದ್ರರಿಂದ ಉಂಟಾದ ಕತ್ತಲೆಯು ಅಮವಾಸ್ಯಾ ಎಂದು ಕರೆಯಲ್ಪಟ್ಟು ಚಕ್ರದಂತೆ ಸುತ್ತಲು ಆರಂಭವಾಗುತ್ತದೆ. ಇದಕ್ಕೆ ತಿಥಿಚಕ್ರವೆಂದು ಕರೆಯುತ್ತಾರೆ.
ಖಗೋಳ ವಿಜ್ಞಾನದ ಪ್ರಕಾರ ಹಿಂದೂ ಪದ್ದತಿಯಂತೆ ತಿಥಿ ಅಥವಾ ಚಾಂದ್ರದಿನದ ಗಣನೆ ಬಹಳ ಮುಖ್ಯ. ತಿಥಿಯೇ ಎಲ್ಲಾ ಹಬ್ಬ ಹರಿದಿನಗಳನ್ನು ನಿರ್ಧರಿಸುವುತ್ತದೆ. ಹನ್ನೆರಡು ಅಂಶಗಳನ್ನೊಳಗೊಂಡ ೩೦ ತಿಥಿಗಳು ಒಂದು ಚಾಂದ್ರಮಾಸವನ್ನು ಸಂಪೂರ್ಣಗೊಳಿಸುತ್ತದೆ. ಕೆಲವು ವೇಳೆ ಒಂದು ಪಕ್ಷದಲ್ಲಿ ೧೩, ೧೪, ೧೬ ದಿನಗಳು ಬರುವುದು ಉಂಟು. ಪಾಡ್ಯದಿಂದ ಹುಣ್ಣಿಮೆಯವರೆಗೆ ಶುಕ್ಲಪಕ್ಷವೆಂತಲೂ ಪುನಃ ಪಾಡ್ಯದಿಂದ ಅಮಾವಾಸ್ಯೆವರೆಗೆ ಕೃಷ್ಣಪಕ್ಷವೆಂತಲೂ ಕರೆಯಲ್ಪಟ್ಟು ಒಂದು ಚಾಂದ್ರಮಾಸ ಪೂರ್ಣಗೊಳ್ಳುತ್ತದೆ.

ವಾರ:
ಸೂರ್ಯನಿಂದ ಆರಂಭಿಸಿ ಶನಿಯ ತನಕ ಏಳು ಗ್ರಹಗಳು ಅಧಿಪತಿಗಳಾಗಿರುವ ಏಳು ದಿನಗಳೇ ಏಳು ವಾರಗಳು. ಒಂದು ದಿನದ ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗಿನ ಕಾಲವನ್ನು ಇಪ್ಪತ್ತನಾಲ್ಕು ವಿಭಾಗಗಳಾಗಿ ಮಾಡಲಾಗಿದೆ. ಈ ವಿಭಾಗಗಳಿಗೆ ಹೋರಾ ಎಂದು ಹೆಸರು. ಪ್ರತಿಯೊಂದು ವಾರವು ಆರಂಭವಾಗುವ ಕಾಲದಲ್ಲಿರುವ ಹೋರೆಯ ಅಧಿಪತಿ ಆ ವಾರದ ಅಧಿಪತಿಯಾಗಿರುತ್ತಾನೆ.
ಉದಾಹರಣೆಗೆ ಆದಿತ್ಯವಾರವು ಆದಿತ್ಯ ಹೋರೆಯಿಂದ ಆರಂಭವಾಗಿ ಮುಂದಿನ ಸೂರ್ಯೋದಯದ ತನಕ ೨೪ ಹೋರೆಗಳನ್ನು ಒಳಗೊಂಡಿರುತ್ತದೆ. ಸೋಮವಾರವು ಚಂದ್ರ ಹೋರೆಯಿಂದ ಆರಂಭಗೊಳ್ಳುತ್ತದೆ. ಹೀಗೆಯೇ ಮಂಗಳವಾರವು ಬುಧ. ಗುರು, ಶುಕ್ರ, ಶನಿವಾರಗಳು ಮುಂದುವರಿಯುತ್ತದೆ.

ನಕ್ಷತ್ರ; ನಕ್ಷತ್ರ ಪಾದ; ರಾಶಿ; ಸೌರಮಾಸ:
ನಕ್ಷತ್ರವೆನ್ನುವುದು ಪಂಚಾಂಗದ ಮೂರನೆಯ ಅಂಗವಾಗಿದೆ. ಒಟ್ಟು ೨೭ ನಕ್ಷತ್ರಗಳಿದ್ದು ಅಶ್ವಿನಿಯಿಂದ ರೇವತಿಯವರೆಗೆ ನಾಮಾಂಕಿತವಾಗಿದೆ. ಸುಮಾರು ೨೭ ದಿನದಲ್ಲಿ ಚಂದ್ರನು ಆಕಾಶದಲ್ಲಿ ಒಂದು ಸುತ್ತು ಬರುತ್ತಾನೆ. ಆಗ ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಂದ್ರನು ದಿನಕ್ಕೆ ಒಂದೊಂದು ನಕ್ಷತ್ರದ ಸಮೀಪ ಬರುತ್ತಾನೆ. ಚಂದ್ರನ ಸಮೀಪ ನಕ್ಷತ್ರವು ಚಂದ್ರ ನಕ್ಷತ್ರವಾಗಿ ಕರೆಸಿಕೊಳ್ಳುವುದು.
ಮುನ್ನೂರ ಅರವತ್ತು ಅಂಶವಿರುವ ಕಾಂತಿವೃತ್ತವನ್ನು ಇಪ್ಪತ್ತೇಳು ವಿಭಾಗಗಳಾಗಿ ಮಾಡಿ ಒಂದೊಂದು ವಿಭಾಗಕ್ಕೆ ಅಶ್ವಿನ್ಯಾದಿ ಇಪ್ಪತ್ತೇಳು ಹೆಸರುಗಳನ್ನು ಇಟ್ಟರು. ಒಂದೊಂದು ವಿಭಾಗಕ್ಕೂ ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳಿರುವುವು. ಈ ವಿಭಾಗಾತ್ಮಕವಾದ ಒಂದೊಂದು ನಕ್ಷತ್ರವನ್ನು ಅಂದರೆ ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ನಾಲ್ಕು ಪಾಲು ಮಾಡಿದಾಗ ಪ್ರತಿಯೊಂದು ಪಾಲಿಗೆ ಮೂರು ಅಂಶ ಮತ್ತು ಇಪ್ಪತ್ತು ಕಲೆಗಳು ಆಗುವುವು. ಇದನ್ನು ನಕ್ಷತ್ರ ಪಾದವೆಂದು ಕರೆಯುತ್ತಾರೆ.
ಈ ರೀತಿಯ ನಕ್ಷತ್ರ ಪಾದಗಳಲ್ಲಿ ಒಂಭತ್ತು ಪಾದಗಳಿಗೆ ಒಂದು ರಾಶಿಅಥವಾ ಎರಡು ಕಾಲು ನಕ್ಷತ್ರಕ್ಕೆ ಒಂದು ರಾಶಿಯಾಗುವುದು.
ಒಂದು ರಾಶಿಯೆಂದರೆ ಮೂವತ್ತು ಅಂಶಗಳು. ಹನ್ನೆರಡು ರಾಶಿಗಳಿಗೆ ಮುನ್ನುರರವತ್ತು ಅಂಶಗಳಾಗುವುವು. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ,ಕುಂಭ, ಮೀನಗಳೆಂದು ಹನ್ನೆರಡು ರಾಶಿಗಳು ಹೆಸರಿಸಲ್ಪಟ್ಟಿದೆ.
ಚಂದ್ರನಿರುವ ನಕ್ಷತ್ರವು ನಿತ್ಯ ನಕ್ಷತ್ರವಾದರೆ ಸೂರ್ಯನೀರುವ ನಕ್ಷತ್ರವುಮಹಾನಕ್ಷತ್ರವೆನಿಸುವುದು, ಸೂರ್ಯನು ಸುಮಾರು ಹದಿಮೂರುವರೆ ದಿನಗಳಲ್ಲಿ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಸಂಚರಿಸುವನು.
ಸೂರ್ಯನು ಕ್ರಾಂತಿ ವೃತ್ತದಲ್ಲಿ ಮೇಷ ರಾಶಿಯನ್ನು ಮೊದಲುಗೊಂಡು , ಹನ್ನೆರಡು ರಾಶಿಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ದಾಟುವ ಕಾಲವನ್ನು ಸಂಕ್ರಮಣಅಥವ ಸಂಕ್ರಾಂತಿಎಂದು ಕರೆಯುತ್ತಾರೆ.
ಸೂರ್ಯನು ಮಂದಗತಿಯಲ್ಲಿದ್ದರೆ ಅವನಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಮೂವತ್ತು, ಮೂವತ್ತೊಂದು ಅಥವಾ ಮೂವತೆರಡು ದಿನಗಳು ಬೇಕಾಗುತ್ತದೆ. ಅವನು ಶೀಘ್ರಗತಿಯಲ್ಲಿದ್ದರೆ, ಅವನಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಇಪ್ಪತ್ತೊಂಬತ್ತು ದಿನಗಳು ಬೇಕಾಗುತ್ತದೆ.
ಸೂರ್ಯನು ಒಂದು ರಾಶಿಯಲ್ಲಿರುವಷ್ಟು ಕಾಲ ಒಂದುಸೌರಮಾಸವಾಗುವುದು. ಇಂತಹ ೧೨ ಸಂಕ್ರಮಣಗಳಿಂದ (ಮೇಷ, ವೃಷಭ ....) ೧೨ ಸೌರಮಾಸಗಳಾಗುವುವು. ೧೨ ಸೌರಮಾಸಗಳಿಂದ ಒಂದು ಸೌರವರ್ಷವಾಗುವುದು.
ಸೂರ್ಯನ ಗತಿಯಲ್ಲಿ ದಿಕ್ಕು ಬದಲಾವಣೆಯಾಗುವುದರಿಂದ ಕರ್ಕಟಾ (ದಕ್ಷಿಣಾಯಣ) ಮತ್ತು ಮಕರ (ಉತ್ತರಾಯಣ) ಸಂಕ್ರಮಣಗಳನ್ನು ವಿಶೇಷವಾಗಿ ಪರಿಗ್ರಹಿಸುವರು.

ಯೋಗ:
ಇಪ್ಪತ್ತೇಳು ನಕ್ಷತ್ರದಂತೆಯೇ ಇಪ್ಪತ್ತೇಳು ಯೋಗಗಳಿರುತ್ತದೆ. ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ಕಾಂತಿವೃತ್ತದಲ್ಲಿರುವ ಮುನ್ನೂರ ಅರವತ್ತು ಅಂಶಗಳನ್ನು ವಿಭಜಿಸಿದ್ದಲ್ಲಿ ೨೭ ಯೋಗಗಳಾಗುತ್ತವೆ. ಯೋಗ ವೆಂದರೆ ಒಗ್ಗೂಡುವಿಕೆ ಎಂದರ್ಥ. ಸೂರ್ಯ ಚಂದ್ರರ ಗತಿಯನ್ನು ಒಟ್ಟೂ ಸೇರಿಸಿದರೆ ಆಗುವುದು ಯೋಗ. ಈ ಒಟ್ಟುಗೂಡುವಿಕೆಯು ೧೩ ಅಂಶ ಮತ್ತು ೨೦ ಕಲೆಗಳಾಗುತ್ತದೆ.

ಕರಣ:
ಇದು ಪಂಚಾಂಗದ ೫ನೇ ಅಂಗ. ತಿಥಿಯ ಅರ್ಧಭಾಗ ಕರಣವಾಗಿರುತ್ತದೆ. ಶುಕ್ಲಪಕ್ಷದ ಪಾಡ್ಯದಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ೩೦ ತಿಥಿಗಳಿರುತ್ತದೆ. ತಿಥಿಯ ಅರ್ಧ ಭಾಗ ಕರಣವೆನಿಸಿದಾಗ ಅರವತ್ತು ಕರಣಗಳಿರುತ್ತದೆ. ಆದರೆ ೬೦ ಕರಣಗಳಿಗೆ ಪ್ರತ್ಯೇಕ ಹೆಸರು ಇರುವುದಿಲ್ಲ. ಕರಣಗಳಿರಿವುದು ೧೧ ಮಾತ್ರ. ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ.ಪೂರ್ವಾರ್ಧದ ಅಂತ್ಯದ ತನಕ ಬವ, ಬಾಲವ ಕೌಲವ, ತೈತಿಲ, ಗರಜೆ, ವಣಜೆ ಮತ್ತು ಭದ್ರಾಗಳೆಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲಪರಿವರ್ತಿಸಿ ಬರುತ್ತದೆ. ಈ ಕಾರಣದಿಂದ ಇವುಗಳಿಗೆ ಚರಕರಣಗಳೆಂದು ಪೆಸರು. ಶುಕ್ಲ ಪ್ರಥಮ ತಿಥಿಯ ಮೊದಲ ಭಾಗ (ಮೊದಲ ಅರ್ಧಭಾಗ) ಕಿಂಸ್ತುಘ್ನವೆಂಬ ಕರಣ. ಕೃಷ್ಣ ಚತುರ್ದಶಿಯ ಉತ್ತರಾರ್ಧದ ಆರಂಭದಿಂದ (ಎರಡನೆಯ ಅರ್ಧ) ಶಕುನಿ ಎಂಬ ಕರಣ. ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್ ಮತ್ತು ನಾಗವಾನ್ ಎಂಬ ಕರಣಗಳಿವೆ. ಇವು ತಿಂಗಳೊಂದರ ಒಳಗೆ ಪುನರಾವರ್ತಿಸದಿರುವುದರಿಂದಸ್ಥಿರಕರಣಗಳು. ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಕರಣಗಳು ಆಗುತ್ತದೆ. ಇದಕ್ಕೆ ನಾಲ್ಕು ಸ್ಥಿರ ಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುವುವು.

ವಿಷ ಮತ್ತು ಅಮೃತ: 
ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ನಮೂದಿಸಿದ ನಂತರ ವಿಷ ಅಮೃತಗಳ ತಿಳುವಳಿಕೆಯು ಮುಖ್ಯವಾಗಿದೆ. ಪ್ರತಿ ನಕ್ಷತ್ರದಲ್ಲಿಯೂ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳಿಗೆ ವಿಷಕಾಲವೆಂಬ ಸಂಜ್ಞೆಯಿದೆ. ಇದನ್ನು ವಿಷಎನ್ನುತ್ತಾರೆ. ಅಂತಯೇ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳ ಕಾಲವನ್ನು ಅಮೃತ ಅಥವಾ ಅಮೃತಕಾಲವೆನ್ನುತ್ತಾರೆ.
ಇದು ಆಯಾ ನಕ್ಷತ್ರದ ಪರಮ ಘಟಿಯು ಅರವತ್ತು ಇದ್ದಾಗಿನ ಲೆಕ್ಕಾಚಾರ. ಪರಮಘಟಿಯಲ್ಲಿ ಹೆಚ್ಚು ಕಡಿಮೆಯಾದಾಗ ತ್ರೈರಾಶಿಕ ವಿಧಾನದಿಂದ ವಿಷ ಮತ್ತು ಅಮೃತ ಕಾಲವನ್ನು ನಿರ್ಧರಿಸಲಾಗುವುದು. ಕೆಲವು ಪಂಚಾಂಗದಲ್ಲಿ ವಿಶೇ, ಅಶೇ ಎಂದು ಬರೆದಿರುತ್ತದೆ. ಇವುಗಳಿಗೆ ವಿಷ ಶೇಷ, ಅಮೃತ ಶೇಷವೆಂದು ಅರ್ಥ. ವಿಷಕಾಲವು ದೋಷಗಳಲ್ಲಿ ಸೇರಿರುವುದರಿಂದ ಶುಭ ಕಾರ್ಯಗಳಿಗೆ ವರ್ಜ್ಯವಾದುದು ಮತ್ತು ಅಮೃತಕಾಲವು ಯೋಗ್ಯವಾಗಿರುತ್ತದೆ.
ಸಂಗ್ರಹಿತ..
ಪ್ರಶಾಂತಭಟ್
ಕೋಟೇಶ್ವರ
***

ಪಂಚಾಂಗವೆಂದರೇನು ?


ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು ಪಂಚಾಂಗ ಭಾರತೀಯರ ವೈಜ್ಞಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ.

 #ಮಹೂರ್ತ ಎಂದರೇನು?
ಮಹೂರ್ತ ಎಂದರೆ ಸಮಯ  ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1ಮಹೂರ್ತವಾಗುತ್ತದೆ.

#30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. #18_ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ.

  #ತಿಥಿ ಎಂದರೇನು ?
ತಿಥಿಯೆಂದರೆ ದಿವಸ  30 ಮಹೂರ್ತಗಳು ಸೇರಿ ದಿವಸ  ಅಹೋರಾತ್ರ

 #ವಾರ ಎಂದರೇನು?
ಏಳು ಗ್ರಹಗಳ ಹೆಸರನ್ನೊಳಗೊಂಡ ಏಳು ದಿವಸಗಳು

  #ಪಕ್ಷ ಎಂದರೇನು ?
ತಿಂಗಳ 15 ದಿವಸಗಳನ್ನು ಪಕ್ಷ ಎನ್ನುವರು. ಎರಡು ಪಕ್ಷಗಳಿವೆ  ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷ

  #ಮಾಸ ಎಂದರೇನು ?
30 ದಿವಸಗಳನ್ನು ಮಾಸ ಎನ್ನುವರು 

#ಋತು ಎಂದರೇನು?
2 ಮಾಸಗಳು ಸೇರಿ ಒಂದು ಋತು

#ಆಯನ ಎಂದರೇನು?
6 ಮಾಸಗಳು ಸೇರಿ 1ಆಯನ ಆಗ ಸೂರ್ಯನು ಪಥ ಬದಲಾಯಿಸುವುದರಿಂದ ಉತ್ತರಾಯನ ದಕ್ಷಿಣಾಯನ ಎನ್ನುವರು

#ಸಂವತ್ಸರ ಎಂದರೇನು?
12 ಮಾಸಗಳು ಸೇರಿ 1 ಸಂವತ್ಸರ

ಒಂದು ವರ್ಷದ ಕ್ಯಾಲೆಂಡರ್ ಆಚೆಗೂ ನಮ್ಮ ಪೂರ್ವಜರು ಕಾಲಗಣನೆ ಮಾಡಿದ್ದರು ಏಕೆಂದರೆ ಗಣಿತ ಮತ್ತು ಖಗೋಳದಲ್ಲಿ ಭಾರತೀಯರು ಗ್ರೀಕ್ ರೋಮನ್ನರಿಗಿಂತ ಮುಂದುವರೆದಿದ್ದರು

ವರ್ಷದಿಂದ ಆಚೆಗೆ ದಿವ್ಯ ವರ್ಷವಿದೆ

#ದಿವ್ಯ_ವರ್ಷ ಎಂದರೇನು ?
360 ಸಂವತ್ಸರಗಳು 1ದಿವ್ಯವರ್ಷ

#ಯುಗ ಎಂದರೇನು ?
12 ಸಾವಿರ ದಿವ್ಯವರ್ಷಗಳು ಸೇರಿ ಯುಗ

#ಮನ್ವಂತರ ಎಂದರೇನು ?
71ದಿವ್ಯಯುಗಗಳು ಸೇರಿ ಮನ್ವಂತರ

#ಬ್ರಹ್ಮದಿನ ಎಂದರೇನು ?*
1ಸಾವಿರ ದಿವ್ಯಯುಗಗಳು ಸೇರಿ ಬ್ರಹ್ಮದಿನ

#ಕಲ್ಪ ಎಂದರೇನು ?
ಗಣನೆಗೆ ಸಿಗದ ಕಾಲವನ್ನು ಮಹಾಪ್ರಳಯ ಕಲ್ಪ ಎನ್ನುವರು

ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಪಂಚಾಂಗ ಇರಬೇಕು ಏಕೆಂದರೆ ಅದು ನಮ್ಮ ಕ್ಯಾಲೆಂಡರ್

ಧರ್ಮೋ ರಕ್ಷತಿ ರಕ್ಷಿತಃ 🙏🙏
***

ಪಂಚಾಂಗ

ತಿಥಿ,ವಾರ,ನಕ್ಷತ್ರ, ಯೋಗ,ಕರಣ ಸೇರಿದಾಗ ಪಂಚಾಂಗ

📌ಜಂಬೂ ದ್ವೀಪ = ಏಷ್ಯಾ ಖಂಡ 
📌ಭರತಖಂಡೆ = ಭಾರತ ಉಪಖಂಡ
📌ಭರತವರ್ಷೆ = ಭರತ ಚಕ್ರವರ್ತಿ ಆಳಿದ ದೇಶ
📌ದ್ವಿತೀಯ ಪರಾರ್ದೆ = ಬ್ರಹ್ಮ ದೇವನ ಒಟ್ಟು  100  ವರ್ಷಗಳಲ್ಲಿ ಈಗ 50 ವರ್ಷ ಕಳೆದು 51 ವರ್ಷ ನಡೆಯುತ್ತಿದೆ.
📌ಒಂದು ಕಲ್ಪ = ಬ್ರಹ್ಮನ ಒಂದು ದಿನ ( ಈ ಲೆಕ್ಕದಲ್ಲಿ 100 ವರ್ಷ)
📌ಒಂದು ಕಲ್ಪ = 14 ಮನ್ವಂತರಗಳು ಅಥವಾ 1000 ಮಹಾಯುಗಗಳು
📌1ಮನ್ವಂತರ = 71 ಮಹಾ ಯುಗಗಳು
📌ಒಂದು ಮಹಾಯುಗ(ಚತರ್ಯುಗ)= 4 ಯುಗಗಳು (43 ಲಕ್ಷ 32 ಸಾವಿರ ವರ್ಷಗಳು)
📌ಮನ್ವಂತರಗಳು ಒಟ್ಟು 14 
ಈಗ ನಡೆಯುತ್ತಿರುವುದು ವೈವಸ್ವತ ಮನ್ವಂತರ
📌ಚತುರ್ಯುಗಳಲ್ಲಿ 27 ಮುಗಿದು 28 ನೇ ಚತುರ್ಯುಗ ನಡೆಯುತ್ತಿದೆ.
📌ಕಲಿಯುಗದಲ್ಲಿ ಒಟ್ಟು 4 ಲಕ್ಷ 32 ವರ್ಷಗಳು ಅದರಲ್ಲಿ 5122 ವರ್ಷಗಳಷ್ಟೆ ಕಳೆದಿದ್ದೆವೆ...
📌ಶಾಲಿವಾಹನ ಎಂದರೆ ಒಬ್ಬ ರಾಜ  ಕ್ರಿಸ್ತ ಶಕ ಮತ್ತು ಶಾಲಿವಾಹನ ಶಕಕ್ಕೆ 77 ವರ್ಷಗಳ ವ್ಯತ್ಯಾಸ

📌ಶಾಲಿವಾಹನ ಶಕ 1944
ಕ್ರಿಸ್ತ ಶಕ 2021

📌ತಿಥಿಗಳು ಒಟ್ಟು 16
ಸೂರ್ಯೋದಯ ಕಾಲದಲ್ಲಿ ಯಾವ ತಿಥಿ ಇರತ್ತದೆ ಅದನ್ನು ಆ ದಿನದ ತಿಥಿಯಾಗಿ ಪರಿಗಣಿಸುತ್ತಾರೆ.ಕೆಲವು ಸಲ ಒಂದೇ ದಿನ ಎರಡು ತಿಥಿಗಳು ಬರುತ್ತದೆ.

📌ಚಂದ್ರನಿರುವ ನಕ್ಷತ್ರವನ್ನು ನಿತ್ಯ ನಕ್ಷತ್ರ ಎನ್ನುತ್ತೇವೆ.
ಸಂವತ್ಸರ ಗಳು ಒಟ್ಟು 60 ಈಗ ಪ್ಲವ ನಾಮ ಸಂವತ್ಸರ
📌ಕರಣಗಳು ಒಟ್ಟು 18
ಒಂದು ತಿಥಿಗೆ ಎರಡು ಕರಣಗಳು
📌27 ಯೋಗಗಳು
📌ಎರಡು ಆಯನಗಳು
***

ಪ್ರಭವೋ ವಿಭವಃ ಶುಕ್ಲಃ ಪ್ರಮೋದೋsಥ ಪ್ರಜಾಪತಿಃ | ಅಂಗಿರಾಃ ಶ್ರೀಮುಖೋ ಭಾವೋ ಯುವಾ ಧಾತಾ ತಥೈವ ಚ ||೧||

ಈಶ್ವರೋ ಬಹುಧಾನ್ಯಶ್ಚ ಪ್ರಮಾಥೀ ವಿಕ್ರಮೋ(s)ವೃಷಃ |  ಚಿತ್ರಭಾನುಃ ಸ್ವಭಾನುಶ್ಚ ತಾರಣಃ ಪಾರ್ಥಿವೋ ವ್ಯಯಃ ||೨||

ಸರ್ವಜಿತ್ ಸರ್ವಧಾರೀ ಚ ವಿರೋಧೀ ವಿಕೃತಿಃ ಖರಃ | ನಂದನೋ ವಿಜಯಶ್ಚೈವ ಜಯೋ ಮನ್ಮಥ-ದುರ್ಮುಖೌ||೩||

ಹೇಮಲಂಬೋ ವಿಳಂಬೋsಥ ವಿಕಾರೀ ಶಾರ್ವರೀ ಪ್ಲವಃ | ಶುಭಕೃತ್ ಶೋಭನಃ ಕ್ರೋಧೀ ವಿಶ್ವಾವಸು - ಪರಾಭವೌ ||೪||

ಪ್ಲವಂಗಃ ಕೀಲಕಃ ಸೌಮ್ಯಃ ಸಾಧಾರಣ - ವಿರೋಧಕೃತ್ | ಪರಿಧಾವೀ ಪ್ರಮಾದೀ ಚ ಆನಂದೋ ರಾಕ್ಷಸೋsನಲಃ ||೫||

ಪಿಂಗಲಃ ಕಾಲಯುಕ್ತಶ್ಚ ಸಿದ್ದಾರ್ಥೀ ರೌದ್ರ-ದುರ್ಮತೀ | ದುಂದುಭೀ ರುಧಿರೋದ್ಗಾರೀ ರಕ್ತಾಕ್ಷೀ ಕ್ರೋಧನಃ ಕ್ಷಯಃ ||೬||

 ಯುಗಾದಿ ನಮ್ಮ ವರ್ಷಾದಿ

***

 

Parabhava Samvatsara ಪರಾಭವ ಸಂವತ್ಸರ  पराभव संवत्सर

Parabhava Nama Samvatsara ಪರಾಭವ ನಾಮ ಸಂವತ್ಸರ  पराभव नाम संवत्सर


No comments:

Post a Comment