ಆಶ್ವಯುಜ or ಆಶ್ವೀನ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು
ಶರನ್ನವರಾತ್ರಿ (ಶುಕ್ಲ ಪಾಡ್ಯ- ನವಮಿ)
ಸರಸ್ವತಿ ಪೂಜೆ (ಶುಕ್ಲ ಸಪ್ತಮಿ)
ದುರ್ಗಾಷ್ಟಮಿ
ಮಹಾನವಮಿ, ಆಯುಧಪೂಜೆ (ಶುಕ್ಲ ನವಮಿ)
ವಿಜಯದಶಮಿ / ಬನ್ನಿವೃಕ್ಷ ಪೂಜೆ (ಶುಕ್ಲ ದಶಮಿ)
ಮಧ್ವ ಜಯಂತಿ
ಪಾಶಾಂಕುಶಾ ಏಕಾದಶಿ (ಶುಕ್ಲ ಏಕಾದಶಿ)
ಶರತ್ ಪೂರ್ಣಿಮ / ಸೀಗೆ ಹುಣ್ಣಿಮೆ / ಕಾರ್ತಿಕ ಸ್ನಾನಾರಾಂಭ (ಹುಣ್ಣಿಮೆ)
ರಮಾ ಏಕಾದಶಿ (ಕೃಷ್ಣ ಏಕಾದಶಿ)
ಧನ ತ್ರಯೋದಶಿ (ಕೃಷ್ಣ ತ್ರಯೋದಶಿ)
ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ)
ನರಕ ಚತುರ್ದಶಿ, ಯಮ ತರ್ಪಣ (ಕೃಷ್ಣ ಚತುರ್ದಶಿ)
ದೀಪಾವಳಿ ಅಮಾವಾಸ್ಯೆ (ಅಮಾವಾಸ್ಯೆ)
ಈ ಮಾಸದಲ್ಲಿ ಭಾರತದ ವಿಶೇಷ ಹಬ್ಬ/ದಿನಗಳಾದ ಕಾರ್ತೀಕ ಸ್ನಾನ, ನವರಾತ್ರಿ ಮತ್ತು ದೀಪಾವಳಿ ಬರುತ್ತದೆ. ಇವುಗಳ ಬಗ್ಗೆ ಪ್ರತ್ಯೇಕವಾಗಿ ಲೇಖನಗಳನ್ನು ಓದಲು ಸಂಗ್ರಹಿಸಿ ಕೊಡಲಾಗಿದೆ.
*****
ಆಶ್ವಯುಜ ಶುಕ್ಲ ಪೂರ್ಣಿಮಾ
ಕಾರ್ತೀಕ ಸ್ನಾನ, ನಕ್ಷತ್ರ ದೀಪಾರಂಭ ಇಂದಿನಿಂದ (ಆಶ್ವಯುಜ ಶುಕ್ಲ ಪೂರ್ಣಿಮಾ) ಆರಂಭವಾಗ್ತಿರುವ ಕಾರಣ... ಎಲ್ಲರಿಗೂ ರಾಧಾ ದಾಮೋದರನ ಅನುಗ್ರಹವಾಗಲಿ ಸದಾ..
***
ಆಶ್ವೀನ ಮಾಸದ ಮಹತ್ವ
|| ಸಂಚಿಕೆ-1 ||
ಆಶ್ವೀನ ಮಾಸಕ್ಕೆ ಪದ್ಮಾನಾಭರೂಪಿ ಪರಮಾತ್ಮನು ನಿಯಾಮಕ
ಆಶ್ವೀನ ಮಾಸದ ಪ್ರತಿಪತ್ತಿನಂದು ನವರಾತ್ರಿ ಉತ್ಸವವು ಪ್ರಾರಂಭವಾಗುತ್ತದೆ .
ಆಶ್ವೀನ ಮಾಸದ ಪಾಡ್ಯದಿಂದ ದಶಮಿಯವರೆಗೂ ಶ್ರೀನಿವಾಸ ಕಲ್ಯಾಣದ ಪ್ರವಚನ ಪಾರಾಯಣ ಮಾಡಬೇಕು . ವೈಶಾಖ ಮಾಸದ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೆ ಭಗವಂತ ಶ್ರೀನಿವಾಸನು ಪದ್ಮಾವತಿಯನ್ನು ಪಾಣಿಗ್ರಹಣ ಮಾಡಿದ ದಿವಸ ವೈಶಾಖ ಶುದ್ಧ ದಶಮಿಯಂದೇ ಸಂಜೆ , ವಿವಾಹವಾಯಿತು . ಹೀಗೆ ವಿವಾಹವನ್ನು ಮಾಡಿಕೊಂಡ ಶ್ರೀನಿವಾಸ -ಪದ್ಮಾವತಿಯರು ನೂತನ ದಂಪತಿಗಳು ಆರು ತಿಂಗಳು ಪರ್ವತವನ್ನು ಹತ್ತಬಾರದೆಂಬ ಶಿಕ್ಷಣವನ್ನು ಕೊಡಲೆಂದು ಪರ್ವತವನ್ನು ಹತ್ತದೆ ಶ್ರೀನಿವಾಸ ಮಂಗಾಪುರದಲ್ಲಿ ವಾಸ ಮಾಡಿದರು.
ವೈಶಾಖದಿಂದ ಆಶ್ವೀನ ಮಾಸದ ವರೆಗೂ ಅಲ್ಲಿಯೇ ವಿಹರಿಸಿ ಪರ್ವತವನ್ನು ಏರಿದರು ಹೀಗೆ ವಿವಾಹವಾದ ಆರು ತಿಂಗಳ ನಂತರ ಬಂದ ದಂಪತಿಗಳನ್ನು ಬ್ರಹ್ಮದೇವರು ಶಮಿಯಿಂದ ತಯಾರಿಸಿದ ರಥದಲ್ಲಿ ಕೂಡಿಸಿ ರಥೋತ್ಸವವನ್ನು ಮಾಡಿದರು ಇದೇ ಬ್ರಹ್ಮರಥೋತ್ಸವ.
ಈ ನವರಾತ್ರಿ ಸಮಯದಲ್ಲಿ ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಬೇಕು . ಭಾಗವತಾದಿ ಗ್ರಂಥಗಳ ಪ್ರವಚನ ಮತ್ತು ಶ್ರವಣಮಾಡಬೇಕು .
ವೇದ ಪಾರಾಯಣಗಳನ್ನು ಮಾಡಿದರೆ ಕಲ್ಯಾಣವಾಗುವುದು ಮತ್ತು ವಿಶೇಷ ಫಲವಿದೆ ಎಂದು ಆಶ್ವೀನಮಾಸ ಮಹಾತ್ಮೇಯಲ್ಲಿ ಹೇಳಿದೆ .
***
Karthika snaana
Kartika snaana starts from Ashwayuja Hunnime to Karthika Hunnime.
ಕಾರ್ತೀಕ ಸ್ನಾನಾರಂಭ – ಆಶ್ವಯುಜ ಶುದ್ಧ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯವರೆಗೆ
ಶ್ರೀ ಕಾವೇರಿ ಗಂಗಾದಿ ನದಿ ದೇವಿಯರನ್ನು ಹೇಗೆ ನೋಡಬೇಕು ?
ನಾವು ಕಾಣುವ ಮಿಂದುವ ನೀರೇ ಕಾವೇರಿಯೋ, ಗಂಗೆಯೋ, ಯಮುನೆಯೋ ಅಥವಾ ಬೇರೆ ರೂಪವೂ ಇರುತ್ತದೋ ಎಂದರೆ ೨ ರೂಪವೂ ಉಂಟು. ಅದರಲ್ಲಿ ನೀರು ಜಡವಾದ ರೂಪ, ಅದಕ್ಕಿಂತ ಭಿನ್ನವಾದ ಮತ್ತೊಂದು ಚೇತನ ರೂಪ, ಇವೆರಡೂ ಪರಮಾದರಣೀಯವಾದವು. ಅದರಲ್ಲೂ ತಾರತಮ್ಯವುಂಟು.
ಸಾಮಾನ್ಯವಾಗಿ ನಾವು ಕಾವೇರಿ ಇತ್ಯಾದಿ ಸ್ನಾನ ಮಾಡುವಾಗ ಗಂಗಾಸ್ನಾನ ಮಾಡಿದ ಫಲ ಬರುವುದೆಂದು ತಿಳಿದು ಸ್ನಾನ ಮಾಡುತ್ತೇವೆ. ಆದರೆ ಈ ಕಾವೇರಿಯೇ ಗಂಗೆಯೇ?…. ನಾವು ಕಾಣುವ ಕಾವೇರಿಯಾಗಲೀ, ಯಮುನೆಯಾಗಲೀ, ಗೋದಾವರಿಯಾಗಲಿ, ತುಂಗೆಯಾಗಲೀ ಗಂಗೆಯಲ್ಲ.
ನಾವು ಅನುಸಂಧಾನ ಮಾಡಬೇಕಾದ ವಿಧಾನ – ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಗಂಗಾ ದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯ ಇರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು. ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಶ್ಮಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.
ನದಿಗಳಲ್ಲಿ ಮಾಡಬಾರದ್ದು :
ನದಿಯಲ್ಲಿ ಉಗುಳಬಾರದು, ನದಿಯಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು, ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು. ಬೇರೆಯವರು ಮಾಡುತ್ತಾರಲ್ಲ ಅಂತ ಭಾವಿಸಬೇಡಿ – ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ, ಅವರು ಮಾಡುತ್ತಾರೆ, ನಾವು ಅವರನ್ನು ಅನುಸರಿಸಬಾರದು. ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.
ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ಹೊರಗಡೆ ತೊಳೆದುಕೊಂಡು ಬಂದು ಶುಚಿರ್ಭೂತರಾಗಿ, ಒಮ್ಮೆ ನೀರನ್ನು ಕೈಯಿಂದ ತೆಗೆದುಕೊಂಡು ಪ್ರೋಕ್ಷಿಸಿಕೊಂಡು ನಂತರ ನದಿಯಲ್ಲಿ ನಾವು ಸ್ನಾನಕ್ಕೆ ಇಳಿಯಬೇಕು.
ನದಿಯಲ್ಲಿ ಸ್ನಾನ ಮಾಡುವಾಗ ಎಲ್ಲ ನದಿ ದೇವತೆಗಳನ್ನೂ ಸ್ಮರಿಸಬೇಕು.
ಗಂಗಾಸಿಂಧುಸರಸ್ವತೀಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾಭೀಮರತೀ ಚ ಫಲ್ಘುಸರಯೋ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ: ಶ್ರೀಹರಿಪಾದಪಂಕಜಭವಾ: ಕುರ್ವಂತು ನೋರ್ಮಂಗಲಂ ||
गंगासिंधू सरस्वती च यमुना गोदावरी नर्मदा ।
कृष्णा भीमरती च फल्घुसरयू श्री गंडकी गोमती ।
कावेरी कपिलाप्रयाग विनता नेत्रावतीत्यादयो
नद्य: श्री हरिपादपंकज भवा: कुर्वंतुनो मंगळं ।
ನಂತರ ಒಮ್ಮೆ ನೀರಿನಲ್ಲಿ ಮುಳುಗಿ; Prokshana mantra
apavitra: pavitrOvaa sarvaavasthaaM gatOpivaa |
ya: smarEt puMDarIkaakShaM sa baahyaabhyaMtarashuchi:|
अपवित्र: पवित्रोवा सर्वावस्थां गतोपिवा ।
य: स्मरेत् पुंडरीकाक्षं स बाह्याभ्यंतरशुचि:।
ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶುಚಿ: |
ಎಂಬ ಮಂತ್ರದಿಂದ ಪ್ರೋಕ್ಷಿಸಿಕೊಳ್ಳಬೇಕು.
ಸಾಧ್ಯವಾದರೆ ವಾದಿರಾಜ ಗುರುಸಾರ್ವಭೌಮರ
“ತೀರ್ಥಪ್ರಬಂಧ”ವನ್ನು ಒಮ್ಮೆ ಅಧ್ಯಯನ ಮಾಡಿ ಆ ತೀರ್ಥಕ್ಷೇತ್ರದ ಬಗ್ಯೆ ಮಾಹಿತಿಯನ್ನು ತಿಳಿದುಕೊಂಡು ಅವರು ಹೇಳಿದಂತೆ ಅನುಸಂಧಾನ ಮಾಡಬೇಕು.
ಕಾರ್ತೀಕ ಸ್ನಾನ ಸಂಕಲ್ಪ – ಶ್ರೀರಂಗಪಟ್ಟಣದಲ್ಲಿ (ಬೇರೆ ಬೇರೆ ಕ್ಷೇತ್ರಗಳಲ್ಲಿ ಹೋದಾಗ ಅಲ್ಲಿನ ದೇವರನ್ನು ಸ್ಮರಿಸಬೇಕು)
ಪ್ರಣವಸ್ಯ…………ಶ್ರೀ …. ನಾಮಸಂವತ್ಸರೇ, ದಕ್ಷಿಣಾಯಣೇ, ಶರದೃತು, ಕಾರ್ತೀಕಮಾಸೇ,……… ಪಕ್ಷೇ……ತಿಥೌ, …….ವಾಸರೇ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೇರಣೆಯ,……ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ಶ್ರೀರಂಗನಾಥ ಸನ್ನಿಧೌ, ಅಶ್ವತ್ಥ ಸನ್ನಿಧೌ, ಕಾರ್ತೀಕ ತುಲಾಮಾಸ ಪ್ರಯುಕ್ತ ಗಂಗಾಸ್ನಾನಮಹಂ ಕರಿಷ್ಯೇ.
ಕಾರ್ತೀಕ ಸ್ನಾನ ಮಂತ್ರ :
ಕಾರ್ತಿಕೇಹಂ ಕರಿಷ್ಯಾಮಿ ಪ್ರಾತಸ್ನಾನಂ ಜನಾರ್ದನ,
ಪ್ರೀತ್ಯರ್ಥಂ ತವ ದೇವೇಶ ದಾಮೋದರ ತ್ವಯಾ ಸಹ |
ಧ್ಯಾತ್ವಾಹಂ ತ್ವಾಂಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತ
ತವ ಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು |
कार्तिकेहं करिष्यामि प्रातस्नानं जनार्दन,
प्रीत्यर्थं तव देवेश दामोदर त्वया सह ।
ध्यात्वाहं त्वांच देवेश जलेस्मिन् स्नातुमुद्यत
तव प्रसादात् पापं मे दामोदर विनश्यतु ।
ಅರ್ಘ್ಯಮಂತ್ರ*
ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |
ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |
ವ್ರತಿನ: ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ಮಮ |
ಗೃಹಾಣಾರ್ಘ್ಯಂ ಮಯಾದತ್ತಂ ದನುಜೇಂದ್ರನಿಷೂದನ |
ನಿತ್ಯನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೇ |
ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ ||
नम: कमलनाथाय नमस्ते जलशायिने ।
नमस्तेस्तु हृशीकेश गृहाणार्घ्यम् नमोस्तु ते ।
व्रतिन: कार्तिके मासि स्नातस्य विधिवन्मम ।
गृहाणार्घ्यम् मया दत्तं दनुजेंद्र निशूदन ।
नित्य नैमित्तिके कृष्ण कार्तिके पाप नाशिने ।
गृहाणर्घ्यम् मया दत्तं राधया सहितो हरे ।
ಕಾವೇರಿ ನದಿ ಸ್ತೋತ್ರ –
“ಓಂ ಕಾವೇರ್‍ಯೈ ನಮ:” “ಓಂ ಅಗಸ್ತ್ಯ ಪತ್ನ್ಯೈ ನಮ:” “ಓಂ ಸರ್ವಪಾವನ್ಯೈ ನಮ:” “ಓಂ ಮಹಾ ಪುಣ್ಯಾಯೈ ನಮ:”
“ಓಂ ಸ್ನಾನ ಮಾತ್ರೇಣ ಸರ್ವ ಪಾಪ ಪ್ರಸಮನ್ಯೈ ನಮ:” “ಓಂ ಮೋಕ್ಷದಾತ್ರ್ಯೈ ನಮ:”
ನದಿ ಸ್ನಾನ ಚಿಂತನೆ– ಪ್ರಾಥಸ್ಮರಣೀಯ ಶ್ರೀ ದೇವೇಂದ್ರ ತೀರ್ಥ ಶ್ರೀಪಾದರು ತಮ್ಮ ಉಪನ್ಯಾಸದಲ್ಲಿ ಹೇಳುತ್ತಿದ್ದ ರೀತಿ.
by NARAHARI SUMADHWA
***
ಆಶ್ವೀನಮಾಸದ ಆಚರಣೆ - ಪರಿಚಯ
************
ಆಶ್ವಿನ ಮಾಸದ ಶುಕ್ಲ ಪ್ರತಿಪದೆಯಿಂದ "ನವರಾತ್ರಿ" ಉತ್ಸವವು ಪ್ರಾರಂಭವಾಗುತ್ತದೆ. ಈ ಉತ್ಸವವು ಶರದ್ಋತುವಿನಿಂದ ಪ್ರಾರಂಭವಾಗುವುದರಿಂದ ಇದಕ್ಕೆ "ಶರನ್ನವರಾತ್ರಿ" ಎಂಬುದಾಗಿ ಕರೆಯುವುದುಂಟು.
"ರತಿ ದತ್ವಾತ್ ರಾತ್ರಿ" ಎಂಬ ಐತರೇಯ ಉಪನಿಷತ್ತಿನ ವಾಕ್ಯದಂತೆ ಜೀವರಿಗೆ ಸುಖವನ್ನು ಕೊಡುವುದರಿಂದ ಭಗವಂತನಿಗೆ "ರಾತ್ರಿ" ಎಂದು ಹೆಸರು. ಹಾಗಾಗಿ ಈ ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಭಗವಂತನ "ಆರಾಧನೆಯನ್ನು ಮಾಡಬೇಕು.
ಇಷೇ ಮಾಸಿ ಮುನಿಶ್ರೇಷ್ಠ ಪ್ರಾತಃಸ್ನಾನಂ ಮಹಾಫಲಂ |
ದಾನಂ ಚ ಪೂಜನಂ. ಚಾಪಿ ಸರ್ವಪಾಪ ಪ್ರಣಾಶನಂ ||
ಆಶ್ವಿನ ಮಾಸದಲ್ಲಿ ಪ್ರಾತಃಸ್ನಾನವು ಮಹಾಫಲದಾಯಕವಾಗಿದೆ. ಈ ಮಾಸದಲ್ಲಿ ಮಾಡಿದ ಜಪ, ದಾನ, ಶ್ರೀಹರಿಪೂಜೆ ಇವು ಸಕಲ ಪಾಪಪರಿಹಾರಕವಾಗಿವೆ.
-ಆಶ್ವೀನಮಾಸ ಮಹಾತ್ಮೆ 1-30
ತಸ್ಯಾನುಷ್ಠಾನಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ |
ಲಭತೇ ಪರಮಂ ಸೌಖ್ಯಂ ನಾತ್ರಕಾರ್ಯವಿಚಾರಣ ||
ಮಾಸಧರ್ಮಗಳ ಅನುಷ್ಠಾನ ಮಾಡುವುದರಿಂದ ಜನರು ಸರ್ವಪಾಪಗಳಿಂದ ಮುಕ್ತರಾಗುತ್ತಾರೆ.ಈ ವಿಷಯದಲ್ಲಿ ಸಂದೇಹ ಮಾಡುವ ಕಾರಣವಿಲ್ಲ.
-ಆಶ್ವೀನಮಾಸ ಮಹಾತ್ಮೆ 1 -31
ಅತ್ರೈವ ಚ ವಿಶೇಷೇಣ ದ್ವಿಜೈಭಕ್ತ್ಯಾ ಪ್ರಪಾಲನಾತ್ |
ವೇದಪಾರಾಯಣಂ ಕಾರ್ಯಂ ಸಾಂಗಂ ನಿಯಮಮಾಸ್ಥಿತೈಃ |
ಸರ್ವಪಾಪವಿನಿರ್ಮುಕ್ತೋ ದುರ್ಯೋನೇಶ್ಚ ತಥೈವಚ ||
ಆಶ್ವಿನಮಾಸದಲ್ಲಿ ವಿಶೇಷವಾಗಿ ವೇದಪಾರಾಯಣವನ್ನು ಸಾಂಗವಾಗಿ ಮಾಡಬೇಕು. ವ್ರತಿಯಾಗಿ ವೇದಪಾರಾಯಣ ಮಾಡಿದರೆ ಅವನು ಸರ್ವಪಾಪಗಳಿಂದ ಮತ್ತು ಮುಂದೆ ಬರಬಹುದಾದ ದುರ್ಯೋನಿಗಳಿಂದ ಮುಕ್ತನಾಗುವನು.
-ಆಶ್ವೀನಮಾಸ ಮಹಾತ್ಮೆ 2 -1
ಅಶಕ್ತೋ ವಿಧಿವತ್ ರಾಜನ್ ಕ್ರೀಯಾ ಭಾಗವತಸ್ಯ ಚ |
ಶ್ರುತಂ ಭಾಗವತಂ ತಚ್ಚ ಸಮಂ ಪಾರಾಯಣಂ ಮತಂ ||
ವೇದಪಾರಾಯಣ ಮಾಡಲು ಆಗದಿದ್ದರೆ ಭಾಗವತವನ್ನಾದರೂ ಶ್ವಣ ಮಾಡಬೇಕು. ಏಕೆಂದರೆ ಭಾಗವತವು ವೇದಕ್ಕೆ ಸಮಾನವೆಂದೂ, ಭಾಗವತ ಶ್ರವಣವು ವೇದಪಾರಾಯಣಕ್ಕೆ ಸಮವೆಂದೂ ಜ್ಞಾನಿಗಳಿಂದ ತಿಳಿಯಲ್ಪಡುತ್ತದೆ ಎಂದು ಭವಿಷ್ಯೋತ್ತರಪುರಾಣದ ಆಶ್ವೀನ ಮಾಸ ಮಹಾತ್ಮೈಯಲ್ಲಿ ಶ್ರೀವಿಷ್ಣುರೂಪಿಪರಮಾತ್ಮನು ನಾರಾದರಿಗೆ ಉಪದೇಶಿಸಿದ್ದಾನೆ.
ಆಶ್ವೀನಮಾಸ ಮಹಾತ್ಮೆ 5 -1
"ಆಶ್ವಿನ ಶುಕ್ಲ ಪ್ರತಿಪದೆಯಿಂದ ಹತ್ತು ದಿನಗಳವರೆಗೆ ಶ್ರೀಭವಿಷ್ಯೋತ್ತರಪುರಾಣದ ಶ್ರೀವೇಂಕಟೇಶ ಮಹಾತ್ಮೆ ಶ್ರವಣ ಮಾಡಬೇಕು."
"ಆಶ್ವಿನ ಶುಕ್ಲ ಪ್ರತಿಪದೆಯಿಂದ ಶ್ರೀನಿವಾಸದೇವರ ಪ್ರೀತ್ಯರ್ಥವಾಗಿ ನವರಾತ್ರಿ ಉತ್ಸವವನ್ನು ಪ್ರಾರಂಭಿಸಬೇಕು."
ಈ ನವರಾತ್ರಿ ಉತ್ಸವದಲ್ಲಿ ಕುಮಾರಿ ಪೂಜೆಯನ್ನು ಮಾಡಬೇಕು. ಈ ಪೂಜೆಯಲ್ಲಿ ಎರಡು ವರ್ಷದ ಹುಡುಗಿಯಿಂದ ಪ್ರಾರಂಭಿಸಿ ಹತ್ತು ವಯಸ್ಸಿನ ಕುಮಾರಿಯರವರೆಗೆ ಪ್ರತಿದಿನವೂ ಪೂಜೆ ಮಾಡಬೇಕು. ಒಂಭತ್ತು ಕುಮಾರಿಯರ ಪೂಜೆ ಮಾಡುವುದರಿಂದ ಭೂಮಿ ಐಶ್ವರ್ಯಾದಿಗಳ ಪ್ರಾಪ್ತಿಯಾಗುತ್ತದೆ.
( ಕುಮಾರಿಪೂಜೆಯ ಬಗ್ಗೆ ಪ್ರತ್ಯೇಕ ಪೋಷ್ಟ್ ಮಾಡಲಾಗುವುದು .
ಮುಂಬರುವ ಲೇಖನಗಳಲ್ಲಿ ಇದರ ಬಗ್ಗೆ ವಿವರವಾಗಿ ಪ್ರಸ್ತಾಪ ಮಾಡಲಾಗುವುದು )
🌷ರಮಾಮಹೋತ್ಸವ🌷
ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೇಗೂ ರಮಾ ಮಹೋತ್ಸವದ ಕಾಲವೆಂದು , ಈ ದಿವಸಗಳು ಮಹಾಪರ್ವಕಾಲಗಳೆಂದು ತಿಳಿಸಲಾಗಿದೆ .ಈ ದಿವಸಗಳಲ್ಲಿ ಸಂಪದಭಿವೃದ್ಧಿಗಾಗಿ ಶ್ರೀಲಕ್ಷ್ಮೀದೇವಿಯನ್ನು ಜ್ಞಾನಭಿವೃದ್ಧಿಗಾಗಿ ವೇದವ್ಯಾಸತ್ಮಕ ನಾರಾಯಣನನ್ನು ಪೂಜಿಸಬೇಕು .
ಭಗವಂತನ ಇಚ್ಛೆಯಂತೆ ಶ್ರೀಲಕ್ಷ್ಮೀಯು ದುಷ್ಟಸಂಹಾರ-ಶಿಷ್ಟರಕ್ಷಣೆಗಾಗಿ ಶ್ರೀ ,ಭೂ,ದುರ್ಗೆಯಾಗಿ ಅವತರಿಸುವಳು
ಈ ಅವಧಿಯಲ್ಲಿ ನಾರಾಯಣ ಹೃದಯ ,ಲಕ್ಷ್ಮೀ ಹೃದಯ ,ಪುನಃ ನಾರಾಯಣ ಹೃದಯ ಹೀಗೆ ಸಂಪುಟೀಕರಣ ಅಥವ ಸಂಕಲಿಕರಣ ಅಥವ ಸಕೃದ್ ಆವರ್ತನದಿಂದ ಸ್ತುತಿಸಿ ಪೂಜಿಸುವವರಿಗೆ ರಮಾ -ನಾರಾಯಣರು ತುಷ್ಟರಾಗುವರು.
( ಸ್ತ್ರೀ ಯರು ವೆಂಕಟೇಶ ಸ್ತವರಾಜ ಮತ್ತು ಲಕ್ಷ್ಮಿಹೃದಯದ ಪಾರಾಯಣವನ್ನು ಸಂಪುಟಿಕರಣ ರೀತ್ಯ ಮಾಡಬೇಕು )
ಯಃ.ಆಶ್ವಿನೇ ಮಾಸಿಚ ಶುಕ್ಲಪಕ್ಷೇ ರಮೋತ್ಸವೇ ಸನ್ನಿಹಿತೈಕ ಭಕ್ತ್ಯಾ |
ಶರತ್ಕಾಲೇ ಮಹಾಪೂಜಾo ಕ್ರಿಯತೇ ಯಾ ಚ ವಾರ್ಷಿಕೀ ||
ಶರಧೃತುವಿನಲ್ಲಿ ಮಹಾಪೂಜೆ ಮಾಡಿದವನ ಶತೃವಿಗೆ ಭಾದೆಯುಂಟು ಮಾಡುವೆನೆಂದು ಲಕ್ಷ್ಮೀ ದೇವಿಯು ಅಭಯನೀಡಿರುವಳು ಹೀಗೆ ರಮಾ-ನಾರಾಯಣರನ್ನು ಕಳಶ, ಪ್ರತಿಮೆ ,ಬೊಂಬೆಗಳಲ್ಲಿ ಆವಾಹಿಸಿ ಮುಂದೆ ಒಂಬತ್ತು ದಿವಸಗಳಲ್ಲಿಯೂ ಭಗವಂತ ಹಾಗೂ ದುರ್ಗೆಯರನ್ನು ಸರಸ್ವತಿ -ಕುಮಾರಿ ಇತ್ಯಾದಿ ನಾಮಗಳಿಂದ ಪೂಜಿಸಬೇಕು .
|| ಶ್ರೀಕೃಷ್ಣಾರ್ಪಣಮಸ್ತು ||
✍️ ಫಣೀಂದ್ರಕೌಲಗಿ
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****
ಆಶ್ವೀನಮಾಸದ ಮಹತ್ವ
|| ಸಂಚಿಕೆ-2 ||
🌷ನವರಾತ್ರಿ ಮಹಿಮೆ🌷
ನವರಾತ್ರಿಯಲ್ಲಿ ವೇದ ಪಾರಾಯಣ ಮತ್ತು
ಭಾಗವತ ಪಾರಾಯಣ ಮಹಿಮೆ
ನವರಾತ್ರಿಯಲ್ಲಿ ಚತುರ್ವೇದ ಪಾರಾಯಣಕ್ಕೆ ಅಧಿಕ ಫಲವಿದೆ ನವರಾತ್ರಿಯಲ್ಲಿ ಮಾಡಿದ ವೇದ ಪಾರಾಯಣವು ಗಯಾ ಶ್ರಾದ್ಧಗಳು ವಿಷ್ಣುದರ್ಶನದಿoದಾಗುವ ಪುಣ್ಯಗಳನ್ನು ಕೊಡುವುದು ಶ್ರೀಸೂಕ್ತ , ರಾತ್ರಿ ಸೂಕ್ತ ಸರಸ್ವತಿ ಸೂಕ್ತ ,ದುರ್ಗ ಸಪ್ತಶತೀಗಳ ಪಾರಯಣ ಮಾಡಬೇಕು ದುರ್ಗಾ ಸುಳಾದಿ ಲಕ್ಷ್ಮೀ ಶೋಭಾನ ವೆಂಕಟೇಶ ಸ್ತವರಾಜ ಲಕ್ಷ್ಮೀಹೃದಯ ಇವುಗಳನ್ನು ಪಠಿಸಿದರೆ ಸೌಭಾಗ್ಯ ಪ್ರಾಪ್ತಿಯು .
ಚತುರ್ವೇದ ಪಾರಾಯಣವು ಅಶಕ್ಯ ವಾದಾಗ ಭಾಗವತ ಪಾರಾಯಣವನ್ನು ಮಾಡಬೇಕು ಭಾಗವತ ಶ್ರವಣವು ವಿಹಿತವಾಗಿದೆ.
********
::ದೇವಿ ಪೂಜೆ ಮಹತ್ವ::
********
ನವರಾತ್ರಿಯಲ್ಲಿ ಒಂಬತ್ತು ದಿವಸಗಳು ದೇವಿಪೂಜೆಯನ್ನು ಮಾಡಬೇಕು ಅದರಲ್ಲಿಯೂ ಅಷ್ಟಮೀ ನವಮಿಯಂದು ದೇವಿ ಪೂಜೆಯನ್ನು ಆಚರಿಸಲೆಬೇಕು ,ಇಲ್ಲಿ ದೇವಿ ಎಂದರೆ ದ್ಯೋತನಾದಿಗುಣವುಳ್ಳ ಭಗವಂತನ ಶಕ್ತಿಯಾಗಿದೆ ನವರಾತ್ರಿಯಲ್ಲಿ ದೇವಿಯ ಪೂಜೆಯಿoದ ಮನುಷ್ಯರು ಶೋಕ ರಹಿತರಾಗುವರು .
ಅಷ್ಟಮ್ಯಾo ಚ ನವಮ್ಯಾo ಚ ಜಗನ್ಮಾತರಮಂಬಿಕಾo |
ಪೂಜಯಿತ್ವಾ sಶ್ವಿನೇ ಮಾಸಿ ವಿಶೋಕೋ ಜಾಯತೇ ನರ: ||
****
::ಪುತ್ಥಲಿಕಾಪೂಜೆ -ಬೊಂಬೆಪೂಜೆಯ ಮಹತ್ವ::
ನವರಾತ್ರಿಯಲ್ಲಿ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೂ.ಬೊಂಬೆ ಗಳನ್ನಿಡುವ ಪದ್ದತಿಯಿದೆ..ಕಳಶವನ್ನು. ಸ್ಥಾಪಿಸಿ ,ಬೊಂಬೆಯಲ್ಲಿ ಲಕ್ಷ್ಮೀ ನಾರಾಯಣರನ್ನು ಆವಾಹಿಸಿ ಅವರ ಆಡಳಿತಕ್ಕೆ ಒಳಪಡುವ ಸಮಸ್ತವಸ್ತುಗಳನ್ನೂ ಬೊಂಬೆ ಪ್ರತಿರೂಪಗಳಿಂದ ಚಿಂತಿಸಿ,ಪೂಜಿಸುವುದು ,ಬೊಂಬೆಗಳಲ್ಲಿ ದಶಾವತಾರಗಳು ,ವಿವಿಧ ಧಾನ್ಯಗಳು ,ರಾಗಿಯ ಪೈರು ,ಇವೇ ಮೊದಲಾದ ವಸ್ತುಗಳಲ್ಲವೂ ಲಕ್ಷ್ಮೀನಾರಾಯಣರ ಆಧಿಪತ್ಯಕ್ಕೆ ಒಳಗೂಂಡಿವೆ ಎಂದು ಚಿಂತಿಸಿ ಮರದ ಬೊಂಬೆಯನ್ನು ಮೇಲೆ ಉಳಿದ ಬೊಂಬೆಗಳನ್ನು ಅದರ ಕೇಳಗೆ ಇಟ್ಟು ಪುತ್ಥಾಲಿಕಾ(ಬೊಂಬೆ) ಪೂಜೆಯನ್ನು ನವರಾತ್ರಿಯಲ್ಲಿ ಮಾಡಬೇಕು.
****
ನಾರಿಕೇಲ - ಬಾಗಿಣ ದಾನ
ನವರಾತ್ರಿಯಲ್ಲಿ ಪ್ರತಿದಿವಸವೂ ನಾರಿಕೇಲ(ತೆಂಗಿನಕಾಯಿ)ವನ್ನು ಒಂಬತ್ತು ನಾರಿಯರಿಗೆ ದಾನವನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಒಂಭತ್ತು ಒಂಭತ್ತರಂತೆ ದಾನ ಮಾಡಬೇಕು. ನವನಾರಿಕೇಲವನ್ನು ಕೊಡಲು ಅಶಕ್ಯವಾದರೆ ಕದಲೀ(ಬಾಳೆಹಣ್ಣು) ಫಲಗಳನ್ನಾದರೂ ಒಂಭತ್ತರಂತೆ ದಾನವನ್ನು ಮಾಡಬಹುದು.
ನಾರಿಕೇಲ ಫಲಾದೀನಿ ನವಕಂ ನವಕಂ ಪ್ರಿಯೇ ||
ಬಿದಿರಿನ ಪಾತ್ರೆಯಲ್ಲಿ (ಮೊರ) ನಾನಾ ವಿಧವಾದ ಸೌಭಾಗ್ಯ ದ್ರವ್ಯಗಳನ್ನು ವಸ್ತ್ರಗಳನ್ನು ಇಟ್ಟು ದುರ್ಗೆಯ ಪ್ರೀತಿಗಾಗಿ ಬಾಗಿಣವನ್ನು ಕೊಡಬೇಕು.
ವಂಶಪಾತ್ರಾಣಿ ವಸ್ತ್ರಾಣಿ ಭಕ್ಷ್ಯಭೋಜ್ಯಾನ್ವಿತ್ವಾನಿ ಚ | ಸೌಭಾಗ್ಯ ಪಾತ್ರಾಣ್ಯಥವಾ ಕುಂಕುಮ ಪ್ರಭೃತೀನಿ ಚ | ದುರ್ಗಾದೇವಿ ಪ್ರೀಯತಾಂ ಮೇ ಇತ್ಯುಕ್ತ್ವಾ ವಿಧಿವದ್ ದದೇತ್ ||
****
|| ನವರಾತ್ರಿಯಲ್ಲಿ ಮುತೈದೆಯರಿಗೆ ಕೂಡಬೇಕಾದ ದಾನಗಳು ||
ಪ್ರತಿಪತ್ತಿನಿಂದ ಹಿಡಿದು ಒಂಭತ್ತು ದಿವಸಗಳಲ್ಲಿ ಕೇಶಸಂಸ್ಕಾರ ವಸ್ತುಗಳನ್ನು ಮುತ್ತೈದೆಯರಿಗೆ ಕೊಡಬೇಕು.
ಕೇಶಸಂಸ್ಕಾರ ದ್ರವ್ಯಾಣಿ ಪ್ರದದ್ಯಾತ್ ಪ್ರತಿಪತ್ ದಿನೇ |
ದ್ವಿತೀಯಾ ದಿನದಂದು ರೇಷ್ಮೆ ವಸ್ತ್ರ ರೇಷ್ಮೆಯ ತಲೆ ಕಟ್ಟಿಕೊಳ್ಳುವ ದಾರ (ಪಟ್ಟಿ ದೋರ- ಟೇಪು) ವನ್ನು ದಾನ ಕೊಡಬೇಕು. ಇದು
" ಪ್ರೀತಿ ದ್ವಿತೀಯ " ಎನಿಸಿದೆ. ತೃತೀಯಾದಲ್ಲಿ ಕನ್ನಡಿಯನ್ನು, ಸಿಂಧೂರ, ಗೋರಂಟಿಯನ್ಶು ದಾನ ಮಾಡಬೇಕು. ಚತುರ್ಥಿಯಲ್ಲಿ ಮಧುಪರ್ಕವನ್ನು ಕಾಡಿಗೆ, ತಿಲಕವನ್ನು ದಾನ ಮಾಡಬೇಕು.
ಪಟ್ಟದೋರಂ ದ್ವಿತೀಯಾಯಾಂ ಕೇಶಸಂಚಯ ಹೇತವೇ|| ದರ್ಪಣಂ ಚ ತೃತೀಯಾಯಾಂ ಸಿಂಧೂರಾಲಕ್ಷಕಂ ತಥಾ | ಮಧುಪರ್ಕಂ ಚತುರ್ಥ್ಯಾಂತು ತಿಲಕಂ ನೇತ್ರಮಂಡನಂ ||
ಪಂಚಮಿಯಲ್ಲಿ ನಾನಾ ವಿಧ ಅಂಗರಾಗಗಳು ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು. ಷಷ್ಠಿಯಂದು ತುಲಸಿಯ ಬುಡದಲ್ಲಿ ದೇವಿಯನ್ನು ಅರ್ಚಿಸಿ ಸಪ್ತಮಿಯಂದು ಮನೆಯೊಳಗೆ ಪೂಜಿಸಬೇಕು. ಅಷ್ಟಮಿಯಂದು ವಿಶೇಷವಾಗಿ ದುರ್ಗೆಯನ್ನು ಪೂಜಿಸಿ ನಂತರ ನವಮಿಯಂದು ಮರದ, ಕತ್ತಿ, ಮುಂತಾದ ಜೀವನೋಪಾಯ ವಸ್ತುಗಳನ್ನು ತದಂತರ್ಯಾಮಿಯಾದ ದುರ್ಗಾಂತರ್ಯಾಮಿ ಪರಶುರಾಮನನ್ನು ಪೂಜಿಸಿ, ದಶಮಿಯಂದು ವಿಜಯೋತ್ಸವವನ್ನು ಆಚರಿಸಿದರೆ ದುರ್ಗೆಯು ಸ್ಕಂಧನಂತೆ ಪಾಲಿಸುವಳು
ಅನೇನ ವಿಧಿನಾ ಯಸ್ತು ದೇವೀಂ ಪೂಜಯಂತೇ ನರಃ |
ಸ್ಕಂಧವತ್ ಪಾಲಯೇತ್ ತಂ ದೇವೀ ಸರ್ವಾಪದಿ ಸ್ಥಿತಮ್ ||
|| ಶ್ರೀಕೃಷ್ಣಾರ್ಪಣಮಸ್ತು ||
✍️ ಫಣೀಂದ್ರಕೌಲಗಿ
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***
ಆಶ್ವೀನಮಾಸದ ಮಹತ್ವ
🌹ಸಂಚಿಕೆ-3🌹
🌷 ನವರಾತ್ರಿ ಮಹಿಮೆ🌷
🌷🌹 ಕುಮಾರಿ ಪೂಜಾ ಮಹಿಮೆ🌹🌷
ಆಶ್ವೀನಮಾಸದನವರಾತ್ರಿ ಉತ್ಸವ ದಲ್ಲಿ ಪ್ರತಿದಿನ ಎರಡು ವರ್ಷದಿಂದ ಹತ್ತುವರ್ಷದವರೆಗಿನ ಕುಮಾರಿಯರಿಗೆ ಗಂಧ ,ಪುಷ್ಪ ಫಲಾದಿಗಳನ್ನು ಕೂಟ್ಟು ,ಅವರು ಸಂತೋಷಪಡುವ ಹಾಡುಗಳನ್ನು ಹೇಳಿ ಅವರನ್ನು ಪೂಜಿಸಬೇಕು .
ಗಂಧಪುಷ್ಪಫಲಾಧೀನಾಂ ಪ್ರೀತಿಸ್ತವನಪೂರ್ವಕಂ
ದ್ವಿವರ್ಷಕನ್ಯಾರಭ್ಯ ದಶವರ್ಷಾವಧಿ ಕ್ಷಮಾತ್ ಪೂಜಯೇತ್|
ಈ ಕುಮಾರಿಯನ್ನು ಕ್ರಮವಾಗಿ ಕುಮಾರೀ , ತ್ರಿಮೂರ್ತಿನೀ , ಕಲ್ಯಾಣಿ , ರೋಹಿಣೀ , ಕಾಲೀ , ಚಂಡಿಕಾ , ಶಾಂಭವೀ , ದುರ್ಗಾ, ಭದ್ರಾ ಎಂದು ಕರೆಯಲಾಗಿದೆ . ಈ ಹೆಸರಿನ ದೇವಿಯನ್ನು ಎರಡು ವರ್ಷದಿಂದ ಹತ್ತು ವರ್ಷದ ಕುಮಾರಿಯರಲ್ಲಿ ಆವಾಹಿಸಿ ಪೂಜಿಸಬೇಕು. ಭಕ್ಷ್ಯಾದಿಗಳಿಂದ ತೃಪ್ತಿಪಡಿಸಬೇಕು. ಅಲಂಕಾರಾದಿ ವಸ್ತುಗಳನ್ನು ಕುಮಾರಿಯರಿಗೆ ನೀಡಬೇಕು. ಇದರಿಂದ ಆಯುಷ್ಯಾದಿಗಳು ಅಭಿವೃದ್ಧಿಯಾಗುವವು. ಕುಮಾರೀ ಪೂಜೆಯಿಂದ ಅಷ್ಟವಸುಗಳು , ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ
ಪಿತರೋ ವಸವೋ ರುದ್ರಾ ಆದಿತ್ಯಾ ಗಣಲೋಕಪಾಃ |
ಸರ್ವೇ ತೇ ಪೂಜಿತಾಸ್ತೇನ ಕುಮಾರ್ಯೋ ಯೇನ ಪೂಜಿತಾಃ ||
ನವರಾತ್ರಿಯಲ್ಲಿ ಕಡೇಪಕ್ಷ ಒಬ್ಬ ಕನ್ಯೆಯನ್ನು ಪೂಜಿಸಿದರೂ , ಊಟವನ್ನು ಮಾಡಿಸಿದರೂ, ತಿಂಡಿ, ತಿನಿಸು , ಭಕ್ಷ್ಯ ಭೋಜ್ಯಾದಿಗಳನ್ನು ನೀಡಿದರೂ ಐಶ್ವರ್ಯಾದಿಗಳನ್ನು ಹೊಂದಬಹುದು.
ಏಕಾಂ ಕನ್ಯಾಂ ಭೋಜಯಿತ್ವಾ ಐಶ್ವರ್ಯಂ ಲಭತೇ ನರಃ ||
ನವರಾತ್ರಿಯಲ್ಲಿ ಒಂಬತ್ತು ದಿವಸಗಳಲ್ಲಿ ಪೂಜಿಸಲು ಅಸಾಧ್ಯವಾದರೆ ಮೂರು, ಐದು, ಏಳು ದಿವಸಗಳಲ್ಲೂ ಪೂಜಿಸಬಹುದು. ಇದನ್ನೇ ತ್ರೀರಾತ್ರೋತ್ಸವ , ಪಂಚ ರಾತ್ರೋತ್ಸವ , ಸಪ್ತರಾತ್ರೋತ್ಸವ ಎನ್ನಲಾಗಿದೆ.
****
ನವರಾತ್ರಿಯಲ್ಲಿ ಕುಮಾರಿ ಪೂಜಾಫಲ
************
1) ಎರಡು ವರ್ಷದ ಕನ್ಯೆಗೆ ‘ಕುಮಾರಿಕೆ’ ಎಂದು ಹೆಸರು ಇವಳನ್ನು ಪೂಜಿಸುವುಧರಿಂದ ದುಃಖ ದಾರಿದ್ರ್ಯ ನಾಶ ಆಯುಷ್ಯ ಬಲಗಳ ವೃದ್ಧಿಯಾಗುವುದು.
2) ಮೂರು ವರ್ಷಗಳ ಕನ್ಯೆಗೆ ‘ತ್ರಿಮೂರ್ತೀನಿ’ ಎಂದು ಹೆಸರು ಇವಳ ಪೂಜಿಸುವುದರಿಂದ ಆಯುವೃದ್ಧಿ ವ್ಯಾಧಿಪೀಡಪರಿಹಾರ ಧುಃಖಗಳ ನಿವರಣೆಯಾಗುವುದು .
3) ನಾಲ್ಕುವರ್ಷಗಳ ಕನ್ಯೆಗೆ. ‘ಕಲ್ಯಾಣಿ’ ಎಂದು ಹೆಸರು ಇವಳ ಪೂಜೆ ಯಿಂದ ಸೌಖ್ಯ ಧನ ಧನ ಧಾನ್ಯ ಪುತ್ರ ಪೌತ್ರಾಭಿ ವೃದ್ಧಿಯಾಗುತ್ತದೆ
4) ಐದು ವರ್ಷಗಳ ಕನ್ಯೆಗೆ ‘ರೋಹಿಣಿ’ ಎಂದು ಹೆಸರು ಇವಳ ಪೂಜೆ ಯಿಂದ ಆರೋಗ್ಯ, ಸುಖ ಧನ ಯಶಸ್ಸುಲಭಿಸುತ್ತದೆ
5) ಆರು ವರ್ಷಗಳ ಕನ್ಯೆಗೆ ‘ಕಾಲಿಕಾ’ ಎಂದು ಹೆಸರು ವಿದ್ಯಾ ಜಯ ರಾಜ್ಯಾಲಾಭ ಶತ್ರುನಾಶವಾಗುತ್ತದೆ
6) ಏಳು ವರ್ಷಗಳ ಕನ್ಯೆಗೆ ‘ಚಂಡಿಕಾ’ ಎಂದು ಹೆಸರು ಇವಳ ಪೂಜೆ ಯಿಂದ ಸಂಗ್ರಮದಲ್ಲಿ ಜಯ ದುಃಖ ದಾರಿದ್ರ್ಯನಾಶ
7) ಎಂಟು ವರ್ಷಗಳ ಕನ್ಯೆಗೆ ‘ಶಾಂಭವಿ’ ಎಂದು ಹೆಸರು ಇವಳ ಪೂಜೆ ಯಿಂದ ಮ಼ಹಾಪಾಪನಾಶ ಉಗ್ರಕಾರ್ಯಸಾಧನೆ ಯಾಗುತ್ತದೆ
8) ಒಂಬತ್ತು ವರ್ಷಗಳ ಕನ್ಯೆಗೆ ‘ದುರ್ಗಾ’ ಎಂದು ಹೆಸರು ಇವಳ ಪೂಜೆಯಿಂದ ಜ್ಞಾನಪ್ರಾಪ್ತಿ ದುರ್ಗತಿ ನಾಶ, ಸೌಭಾಗ್ಯ. ಧನ ,ಧಾನ್ಯ , ಇಷ್ಟಾರ್ಥಗಳಪ್ರಾಪ್ತಿಯಾಗುತ್ತದೆ
9) ಹತ್ತು ವರ್ಷಗಳ ಕನ್ಯೆಗೆ ‘ಸುಭದ್ರಾ’ ಎಂದು ಹೆಸರು ಇವಳ ಪೂಜೆ ಯಿಂದ ದಾಸ ದಾಸಿಯರ ಹೆಚ್ಚಳವಾಗುತ್ತದೆ.
**
:ಕುಮಾರಿ ಪೂಜಾ ಮಂತ್ರಗಳು:
1. ಜಗತ್ಪೂಜ್ಯೇ ಸರ್ವ ವಂದ್ಯೇ ಸರ್ವ ಶಕ್ತಿ ಸ್ವರೂಪಿಣೀ |
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಸ್ತುತೇ ||
2. ತ್ರಿಪುರಾಂ ತ್ರಿಪುರಧಾರಾಂ ತ್ರಿವರ್ಗ ಜ್ಞಾನರೂಪಿಣಿಂ |
ತ್ರೈಲೋಕ್ಯ ವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಂ ||
3. ಕಾಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಂ |
ಕಲ್ಯಾಣ ಜನನೀಂ ನಿತ್ಯಂ ಕಲ್ಯಾಣೀಂ ಪೂಜಯಾಮ್ಯಹಂ ||
4. ಅಣಿಮಾದಿ ಗುಣಾಧಾರಾಮ ಕಾರಾಧ್ಯಕ್ಷರಾತ್ಮಿಕಾಂ |
ಅನಂತ ಶಕ್ತಿಕಾಂ ಲಕ್ಷ್ಮೀಂ ರೋಹಿಣಿಂ ಪೂಜಯಾಮ್ಯಹಂ ||
5. ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರ ಸ್ವರೂಪಿಣೀಂ |
ಕಾಮದಾಂ ಕರುಣೋದಾರಂ ಕಾಲೀಂ ಸಂಪೂಜಯಾಮ್ಯಹಂ ||
6. ಚಂಡಾಚಾರಂ ಚಂಡಮಾಯಾಂ ಚಂಡಮುಂಡ ಪ್ರಭಂಜನೀಂ |
ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಂ ||
7. ಸದಾನಂದಕರೀಂ ಶಾಂತಾಂ ಸರ್ವ ದೇವ ನಮಸ್ಕೃತಾಂ |
ಸರ್ವ ಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಂ ||
8. ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಂ|
ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿಹಾರಿಣೀಂ ||
9. ಸುಂದರೀಂಸ್ವರ್ಣವರ್ಣಾಭಾಂ ಸುಖಸೌಖ್ಯ ಪ್ರದಾಯಿನೀಂ |
ಸುಭದ್ರಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ ||
ಮೇಲೆ ತಿಳಿಸಿದಂತೆ ಮನುಷ್ಯರು ಕುಮಾರೀ ಪೂಜೆಯನ್ನು ವಿಧಿಪೂರ್ವಕವಾಗಿ ಆಚರಿಸಬೇಕು.
|| ಕುಮಾರಿಪೂಜೆಯ ಮಹತ್ವ ಮುಗಿಯಿತು||
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****
ಆಶ್ವೀನಮಾಸದ ಮಹತ್ವ
🌹ಸಂಚಿಕೆ-4 🌹
🌷ನವರಾತ್ರಿ ಮಹಿಮೆ 🌷
ಶ್ರೀನವರಾತ್ರಿ ಸಂಕಲ್ಪ ಮತ್ತು ಅಖಂಡ ದೀಪಸ್ಥಾಪನವಿಧಿ.
ಶ್ರೀನವರಾತ್ರಿ ಉತ್ಸವವನ್ನು ಆಶ್ವೀನ ಶುಕ್ಲ ಪ್ರತಿಪದೆಯ ದಿನ ಸಂಕಲ್ಪ ಪೂರ್ವಕವಾಗಿ ಪ್ರಾರಂಭಿಸಬೇಕು .
ಅಚಮನ ಪ್ರಾಣಾಯಾಮ ಸಂಕಲ್ಪ - ಶುಭೆ ಶೋಭನೆ ಮಹೂರ್ತೇ - ಏವಂಗುಣವಿಶೆಷಣವಿಶಿಷ್ಟಯಾಂ ಆಶ್ವೀನ ಪ್ರತಿಪತ್ ಪುಣ್ಯತಿಥೌ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೆಂಕಟೇಶ ಫ್ರೇರಣಯಾ ತತ್ಪ್ರೀತ್ಯರ್ಥಂ
ಶ್ರೀ -ಭೂ -ದುರ್ಗಾ ಬ್ರಹ್ಮಾ ,ಪ್ರಾಣ ,ಸರಸ್ವತಿ , ಭಾರತೀ ಶೇಷ ಗರುಡಾದಿ ಸಹಿತಸ್ಯ
ಶ್ರೀಶ್ರೀನಿವಾಸಸ್ಯ ಅದ್ಯ ಪ್ರಾತರಾರಭ್ಯ ಆಗಮಿ ದಶಮಿ ಪರ್ಯಂತಂ
( ತ್ರಿರಾತ್ರೋತ್ಸವ , ಪಂಚರಾತ್ರೋತ್ಸವ , ಸಪ್ತರಾತ್ರೋತ್ಸವ ) ನವರಾತ್ರೋತ್ಸವಾಖ್ಯಂ ಕರ್ಮಕರಿಷ್ಯಮಾಣಃ ಘೃತದೀಪಸಂಯೋಜನಂ ,(ಅಖಂಡದೀಪ ಸ್ಥಾಪನಂ) ತೈಲದೀಪ ಸಂಯೋಜನಂ ,ಪ್ರತಿದಿನಂ ಮಧ್ಯಾಹ್ನೇ ಮಹಾಪೂಜಾಂ , ಸಾಯಾಹ್ನೇ ಸಚ್ಛಾಸ್ತ್ರಶ್ರವಣಂ ,ಶ್ರೀನಿವಾಸಕಲ್ಯಾಣ ಪಾರಾಯಣಂ ಚ ಕರಿಷ್ಯೇ | ಘಟಸ್ಥಾಪನಂ ಚ ಕರಿಷ್ಯೇ | ಎಂದು ಸಂಕಲ್ಪಮಾಡಿ ಮಂತ್ರಾಕ್ಷತೆ ನೀರು ಬಿಡುವುದು .
ಘಟಸ್ಥಾಪನ ಸಂಪ್ರದಾಯವಿದ್ದವರು
ಆಕಲಶೇಷುಧಾವತಿ , ಗೃಹಾವೈಪ್ರತಿಷ್ಠಾ ಸೂಕ್ತಂ ಮುಂತಾದ ಕಲಶಸ್ಥಾಪನ ಮತ್ತು ಪ್ರಾಣಪ್ರತಿಷ್ಠಾಪನ ಮಂತ್ರಗಳಿಂದ ಘಟಸ್ಥಾಪನೆಮಾಡಿ ಕುಲದೇವರನ್ನು ಸ್ಥಾಪಿಸಿ ನವರಾತ್ರಿಯಲ್ಲಿ ಪ್ರತಿನಿತ್ಯ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಹಾನೀರಾಜನಾದಿಗಳನ್ನು ಮಾಡಬೇಕು. ಪ್ರತಿನಿತ್ಯ ಸಂಜೆ ಶ್ರೀನಿವಾಸಕಲ್ಯಾಣ ಕಥೆಯನ್ನು ಓದಬೇಕು
|| ದೀಪಸ್ಥಂಭಪೂಜಾ ||
ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ |
ನಾಲೇ.ವಾಸುಕಿ ದೇವತಾಯೈನಮಃ |ಪಾದೇ ಚಂದ್ರಾರ್ಕಭ್ಯಾಂ ನಮಃ |
ಎಂದು ದೀಪಸ್ಥಂಭವನ್ನು ಪೂಜಿಸಿ.ಮಂತ್ರಾಕ್ಷತೆ ಹಾಕಿ ದೀಪಸ್ಥಂಭಕ್ಕೆ ಶ್ಯಾವಂತಿಕೆ ಹೂವಿನ ಹಾರವನ್ನು ಸುತ್ತಿ ಒಂದು ಎಣ್ಣೆ ಯ ದೀಪ ಇನ್ನೋಂದು ತುಪ್ಪದ ದೀಪವನ್ನು ಅಗ್ನಿ ನಾಗ್ನಿಃ ಸಮಿಧ್ಯತೆ ಎಂಬ ಮಂತ್ರದಿಂದ ಹಚ್ಚಬೇಕು ಈ ದೀಪಗಳನ್ನು ನಂದದಂತೆ ನೋಡಿಕೊಳ್ಳಬೇಕು . ಇದನ್ನೇ ಅಖಂಡದೀಪವೆನ್ನಲಾಗಿದೆ .
ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ |
ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ ||
🌹ದೇವಪ್ರಾರ್ಥನಾ ಮಂತ್ರಃ🌹
ಆನಂದತೀರ್ಥವರದೇ ದಾನವರಾಣ್ಯಪಾವಕೇ |
ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇsಸ್ತುಮೇ ಮನಃ ||
ಶ್ರೀವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭಿಷ್ಟದಂ |
ಚತುರ್ಮುಖೇರತನಯಂ ಶ್ರೀನಿವಾಸಂ ಭಜೇsನಿಷಮ್ ||
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ. ಚಿಂತನ ಗ್ರೂಪ್
****
ಆಶ್ವೀನಮಾಸದ ಮಹತ್ವ🌺🌷
🌺ಸಂಚಿಕೆ- 5🌺
🌹ದುರ್ಗಾಷ್ಟಮಿ ಮಹತ್ವ🌹
ದುರ್ಗೆಯು ಭಗವಂತನ ಪತ್ನಿಯೇ ಆಗಿದ್ದಾಳೆ. ಈ ದುರ್ಗೆಯ ಪೂಜೆಯನ್ನು ನವರಾತ್ರಿಯಲ್ಲಿ ದುರ್ಗಾಷ್ಟಮಿಯ ದಿನ ಮಾಡುವುದು ವಿಹಿತವಾಗಿದೆ.
ಶ್ರೀವಾದಿರಾಜಪೂಜ್ಯ ಚರಣರು ದುರ್ಗಾದೇವಿಯನ್ನು ಹೀಗೆ ಸ್ತುತಿಸಿದ್ದಾರೆ .
ದುರ್ಜ್ಞೇಯತ್ವಾತ್ ದುಃಖದತ್ವಾತ್ ದುಷ್ಪ್ರಾಪ್ಯತ್ವಾಚ್ಚ ದುರ್ಜನೈಃ |
ಸತಾಮಭಯಭೂಮಿತ್ವಾತ್ ದುರ್ಗಾತ್ವಂ ಹೃದ್ಗುಹಾಶ್ರಯಾತ್ ||
- ಪಶ್ಚಿಮಪ್ರಬಂಧ
1) ಸಾಕಲ್ಯೇನ ಬ್ರಹ್ಮಾದಿಗಳಿಂದ ತಿಳಿಯಲಶಕ್ಯಳಾದ್ದರಿಂದ ಲಕ್ಷ್ಮೀದೇವಿಯರಿಗೆ ದುರ್ಗಾ ಎಂದು ಹೆಸರು.
2) ದುಷ್ಟಜನರಿಗೆ ದುಃಖವನ್ನು ಕೊಡುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.
3) ದುಷ್ಟ ಜನರಿಂದ ಹೊಂದಲು ಅಶಕ್ಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.
4) ಸಜ್ಜನರಿಗೆ ಶ್ವೇತದ್ವೀಪ, ಅನಂತಾಸನ, ವೈಕುಂಠಗಳೆಂಬ ತ್ರಿಧಾಮರೂಪಳಾಗಿ ಅಭಯಸ್ಥಾನೀಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.
5) ಸಕಲ ಜೀವರ ಹೃದಯಗಳಲ್ಲಿ ನಿಯಾಮಕತ್ವೇನ ನೆಲೆಸಿರುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.
ದುರ್ಗಾ ಮಂತ್ರವು ಹೀಗಿದೆ -
ಜಾತವೇದಸೇ...ವೇದಃ
ಸರ್ವಜ್ಞನಾದ ಅಗ್ನ್ಯಂತರ್ಗತ ಪರಶುರಾಮನಿಗೆ, ದುರ್ಗೆಗೆ ಸೋಮರಸವನ್ನು ಹಿಂಡಿ ಕೊಡುತ್ತೇವೆ. ನಾವಿಕನು ಹಡಗಿನ ಮೂಲಕ ಸಮುದ್ರವನ್ನು ದಾಟಿಸುವಂತೆ ಅಗ್ನಿನಾಮಕ ಭಗವಂತನು ನಮ್ಮನ್ನು ಆಪತ್ತುಗಳೆಂಬ ಸಮುದ್ರದಿಂದ ದಾಟಿಸಲಿ. ಎಲ್ಲ ಪಾಪಗಳನ್ನು ಪರಿಹರಿಸಲಿ.
ಮೊದಲು ಗಣಪತಿ ಪೂಜೆಯನ್ನು ಮಾಡಿ ನಂತರದಲ್ಲಿ ದುಂ ದುರ್ಗಾಯೈ ನಮಃ ಮಂತ್ರದಿಂದ ಕಲಶದಲ್ಲಿ ದುರ್ಗೆಯನ್ನು ಆವಾಹಿಸಿ ಪೂಜಿಸಬೇಕು.
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರಿದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****
🌺ಆಶ್ವೀನಮಾಸದ ಮಹತ್ವ 🌺
🌷ಸಂಚಿಕೆ-6🌷
🌹ನವರಾತ್ರಿ ಮಹಿಮೆ🌹*
ಮಹಾನವಮಿ ಮಹತ್ವ ಮತ್ತು ಆಯುಧಪೂಜಾವಿಧಿ
ಆಶ್ವಿನಮಾಸದ ಶುಕ್ಲಪಕ್ಷ ನವಮೀದಿನ ಶಸ್ತ್ರಾಸ್ತ್ರ, ಹಯ, ಗಜ, ವಾಹನ , ಯಂತ್ರಗಳ ಪೂಜೆಯನ್ನು ಮಾಡಬೇಕು.
ಮಹಾದಾನಾನಿ ಕುರ್ವೀತ ನವಮ್ಯಾಂ ಭಕ್ತೀಮಾನ್ ನರಃ
ಈ ನವಮಿಯ ದಿನದಂದು ಮಾನವನು ಭಕ್ತಿಯುಕ್ತನಾಗಿ ಮಹಾದಾನವನ್ನು ಮಾಡಬೇಕು.
ಶಂಭಾಸುರ ವಧಾರ್ಥಾಯಾ ರಕ್ತಬೀಜೋ ಮಹಾsಸುರಃ |
ಅಷ್ಟಾಮ್ಯಾಂ.ನಿಹತೋ ದೇವ್ಯಾ ರಾತ್ರೌ ಚೈವಾರುಣೋದಯೇ ||
ದುರ್ಗಾದೇವಿಯು ಶಂಭಾಸುರ , ರಕ್ತಬೀಜಾಸುರ ಇವರನ್ನು ಅರುಣೋದಯಕಾಲದಲ್ಲಿ ಸಂಹರಿಸಿದಳು. ಆದ್ದರಿಂದ ಉದಯದಿಂದ ಆರು ಘಳಿಗೆ ಅಷ್ಟಮೀಯುಕ್ತವಾಗಿದ್ದಲ್ಲಿ ಅದು ಮಹಾನವಮೀ ಎನಿಸುತ್ತದೆ.
ಆಶ್ವಯುಕ್ ಶುಕ್ಲನವಮೀ ದುರ್ಗಾದ್ಯಾರಾಧನೇ ಶುಭಾ |
ಉದಯವ್ಯಾಪಿನೀ ಗ್ರಾಹ್ಯಾ ಲಕ್ಷ್ಮೀ ವಿದ್ಯಾ ಜಯಾರ್ಥೀಭಿಃ ||
ಆಶ್ವಿನಶುಕ್ಲ ನವಮಿಯು ದುರ್ಗಾರಾಧನೆಗೆ ಪ್ರಶಸ್ತವಾಗಿದೆ. ನವಮೀ ತಿಥಿಯು ಸೂರ್ಯೋದಯಸವರೆಗೂ ವ್ಯಾಪಿಸಿರಬೇಕು. ಇದರಿಂದ ವಿದ್ಯೆ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ.
ಅಶ್ವಾನಾಂ ಚ.ಗಜಾನಾಂ ಚ ಶಕ್ತೀನಾಂ ಶಸ್ತ್ರ ಪೂಜನೇ |
ಆಶ್ವಯುಕ್ ಶುಕ್ಲನವಮೀ ರಾತ್ರಿ ಯುಕ್ತಾ ವಿಶಿಷ್ಯತೇ ||
ಆಶ್ವಿನಶುಕ್ಲನವಮಿಯು ರಾತ್ರಿಯವರೆಗೂ ವ್ಯಾಪಿಸಿದ್ದರೆ ಅದು ಕುದುರೆ, ಆನೆ, ಶಸ್ತ್ರಾಸ್ತ್ರಗಳ ಪೂಜೆಗೆ ಯೋಗ್ಯವಾಗುತ್ತದೆ.
ವಿಜಯದಶಮೀ ದಿನದಂದು ದುರ್ಗೆಯ ವಿಸರ್ಜನೆಯನ್ನು ಮಾಡಬೇಕು.
******************
🌹ಮಹಾನವಮಿ ಆಯುಧ ಪೂಜಾವಿಧಿ🌹
ದುರ್ಗಾದೇವಿಯು ಅಷ್ಟಭುಜಗಳಿಂದ ಕೂಡಿದವಳಾಗಿ ಅವತರಿಸಿದಳು.ಇಂತಹ ದುರ್ಗೆಯನ್ನು ಅವಳು ಧರಿಸಿರುವ ಆಯುಧಗಳಾದ ಬಿಲ್ಲು ,ಶೂಲ ,ಬಾಣ ,ಗುರಾಣಿ ,ಕತ್ತಿ ,ಶಂಖ ,ಚಕ್ರ , ಗದೆಗಳನ್ನು ಮಹಾನವಮಿಯಂದು ಪೂಜಿಸಬೇಕು .
ಆಯುಧಪೂಜೆ -
ಛುರಿಕಾ ಪೂಜಾ
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ ||
ಛುರಿಕೆ ರಕ್ಷ ಮಾಂ ನಿತ್ಯಂ ಶಾಂತಿ ಯಚ್ಛ ನಮೋಸ್ತು ತೇ ||
ಕಠಾರಿಕಾ ಪೂಜೆ -
ರಕ್ಷಾಂಗಾನಿ ಗಜಾನ್ ರಕ್ಷ ರಕ್ಷ ವಾಜಿಧನಾನಿ ಚ |
ಮಮ ದೇಹಂ ಸದಾ ರಕ್ಷ ಕಟ್ಟಾರಕ ನಮೋಸ್ತುತೇ ||
ಶಂಖ ಪೂಜಾ -
ಪುಣ್ಯಸ್ತ್ವಂ ಶಂಖ ಪುಣ್ಯಾನಾಂ ಮಂಗಲಾನಾಂ ಚ ಮಂಗಲಂ |
ವಿಷ್ಣುನಾ ವಿಧೃತೋ ನಿತ್ಯಮತಃ ಶಾಂತಿಂ ಪ್ರಯಚ್ಛ ಮೇ ||
ಇಂತಹ ದಿವಸಗಳಲ್ಲಿ ಆಯುಧಗಳನ್ನು ಇರಿಸಿ ಕಲಶವನ್ನು ಸ್ಥಾಪಿಸಿ ದುರ್ಗಾ ದೇವಿಹಾಗೂ ನರಸಿಂಹದೇವರನ್ನು ಶೋಡಷೋಚಾರಪೂಜೆಗಳಿಂದ ಪೂಜಿಸಬೇಕು.
ಕಲಶ ಪ್ರಾರ್ಥನ ಮಂತ್ರ
ದೇವದಾನವ ಸಂವಾದೇ ಮಥ್ಯಮಾನಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣುನಾ ಸ್ವಯಂ ||
ತ್ವಯಿ ತಿಷ್ಠಂತಿ ಭೂತಾನಿ ತ್ವಯಿ ಪ್ರಾಣಾಃ ಪ್ರತಿಷ್ಠಿತಾಃ |
ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮೀಹೇ ಜಲೊಧ್ಭವ ||
ದುರ್ಗಾ ವಿಸರ್ಜನೆ
ವಿಜಯದಶಮಿಯಂದು ದುರ್ಗಾದೇವಿಯ ವಿಸರ್ಜನೆಯನ್ನು ಮಾಡಬೇಕು.
ಎರಡು ದಿವಸ ದಶಮಿ ಯೋಗವಿದ್ದರೆ ಹಿಂದಿನ ದಿನದ ಶ್ರವಣಾನಕ್ಷತ್ರದ ಅಂತ್ಯಭಾಗದಲ್ಲಿ ವಿಸರ್ಜನೆ. ತಮಗೆ ಜೀವನ ನೀಡುವ ಯಂತ್ರಗಳು, ವಾಹನಗಳು ಮುಂತಾದ ಜೀವನೋಪಾಯ ಸಾಧನಗಳನ್ನು ಮಹಾನವಮಿಯದಿನ ಪೂಜಿಸಬೇಕು.
ಮಹಾನವಮಿಯಲ್ಲಿ ಪೂಜಿಸಲ್ಪಡುವ ದುರ್ಗಾರೂಪವು ಸುಭದ್ರಾ ಎಂದು ಹೆಸರು ಈ ಸುಭದ್ರೆಯು ಉಪಯುಕ್ತವಾದ ಸಾಧನಗಳಲ್ಲಿ ಇದ್ದು. ನಮಗೆ ಜಯಾದಿಗಳನ್ನು. ನೀಡಿ ಸುಭದ್ರವಾದ ಜೀವನಕೂಡುವಳು ಎಂದೇ ಸುಭದ್ರೆ ಎಂದು ಕರೆಯಲ್ಪಡುವಳು ಮಹನವಮಿಯ ದಿನ ಮಹಿಷಾಸುರಮರ್ಧಿನಿಯು ಅವತರಿಸಿ ಲೋಕೋದ್ಧಾರವನ್ನು ಮಾಡಿದಳು .
ಭವಿಷ್ಯತಿ ನ ದಾರಿದ್ರ್ಯಂ ನ ಚೈವಾಷ್ಟ ವಿಯೋಜನಂ |
ಶತ್ರುತೋ ನ ಭಯಂ ತಸ್ಯ ದಸ್ಯುತೋ ವಾ ನ. ರಾಜತಃ
ಆಯುಧಾದಿಗಳನ್ನು ಪೂಜಿಸುವುಧರಿಂದ ಇಷ್ಟಾರ್ಥ ಗಳು ಸಿದ್ಧಿಸುವುವು ದಾರಿದ್ರ್ಯ ,ಪರಿಹಾರ ,ಇಷ್ಟ ವಸ್ತುವು ನಮ್ಮನ್ನು ಬಿಟ್ಟು ಹೋಗದೆ ಇರುವುದು .ಶತ್ರು ,ಬೆಂಕಿ ,ನೀರು ,ಗಾಳಿ.,ಕಳ್ಳ , ಶತ್ರುಗಳಿಂದ ಭಯವಿರುವುದಿಲ್ಲ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ. ಚಿಂತನ ಗ್ರೂಪ್
****
🌷ಆಶ್ವೀನಮಾಸದ ಮಹತ್ವ 🌷
🌺ನವರಾತ್ರಿ ಮಹಿಮೆ🌺
🌹ಸಂಚಿಕೆ-7🌹
ವಿಜಯದಶಮಿ ಮಹತ್ವ
ಆಶ್ವೀನ ಶುದ್ಧದಶಮಿಯನ್ನು ವಿಜಯದಶಮಿ ಎಂದು ಕರೆಯುವರು ವಿಜಯವನ್ನು ಕೊಡುವ ದಶಮಿ ಇದಾಗಿದೆ .
ತತಃ ಸೀಮಾಂತಮುಲ್ಲಂಘ್ಯ ವಿಜಯಂ ಚ ದ್ವಿಜರ್ಷಭಾಃ.|
ಆಶ್ವೀನಸ್ಯಸಿತೇ ಪಕ್ಷೇ ದಶಮ್ಯಾಂ ತಾರಾಕೋದಯೇ ||
ಆಶ್ವೀನ ಮಾಸಮಹಾತ್ಮೆ(12 -4)
ಬ್ರಾಹ್ಮಣರು ಆಶ್ವೀನ ಶುದ್ಧ ದಶಮಿದಿನ ನಕ್ಷತ್ರಗಳು ಉದಯ ವಾಗುವಾಗ ಸೀಮೋಲಂಘನ ಮಾಡಿ ವಿಜಯೋತ್ಸವವನ್ನು ಆಚರಿಸಬೇಕು .ಅಂದು ನಕ್ಷತ್ರ ಗಳು ಉದಯವಾಗುವ ಸಮಯವು ವಿಜಯವೆಂದು ಪ್ರಸಿದ್ಧವಾಗಿದ್ದು ಸರ್ವಕಾರ್ಯಗಳ ಸಿದ್ಧಿಗೆ ಸಾಧಕವಾಗಿದೆ .
ಸ ಕಾಲೋ ವಿಜಯೋ ನಾಮ ಸರ್ವಕಾರ್ಯಾರ್ಥ ಸಾಧಕಃ |
ಈಷತ್ಸಂಧ್ಯಾಮತಿಕ್ರಾಂತಃ ಕಿಂಚಿದುಚ್ಛಿನ್ನಕಾರಕಃ ||
ವಿಜಯೋನಾಮ ಕಾಲೋsಯಂ ಸರ್ವಕಾರ್ಯಾರ್ಥಸಾಧಕಃ ||
ವಿಜಯದಶಮಿದಿನದಂದು ಸಜ್ಜನರು ಭಗವಂತನನ್ನು ಭಕ್ತಿಯಿಂದ ವಿಶೇಷವಾಗಿ ಪೂಜಿಸಬೇಕು .
ಮಂತ್ರರ್ವೈದಿಕಪೌರಾಣೈಃ ಪೂಜಯೆಚ್ಚ ಶಮೀಂತರುಂ
ಈದಿನ ವೈದಿಕ ಮತ್ತು ಪೌರಾಣಿಕ ಮಂತ್ರಗಳಿಂದ ಶಮಿ ವೃಕ್ಷವನ್ನು ಪೂಜಿಸಬೇಕು .
ನವಮೈರ್ವ ಯುತಾ ಕಾರ್ಯಾ ಶುದ್ಧಾ ವಾ ಸರ್ವದಾಶುಭ |
ದಾನೇ ಕೂಟಿಗುಣಂ ಪುಣ್ಯಂ ತಥೈವ ದಶಮಿದಿನೇ ||
ವಿಜಯಾ ದಶಮೀ ಪ್ರೂಕ್ತಾ ಸ ಪುಣ್ಯಾ ಜಯದಾ ನೃಣಾಂ ||
ವಿಜಯದಶಮಿಯನ್ನು ನವಮಿತಿಥಿಯಿಂದ ವಿದ್ಧವಾದ ದಶಮಿಯಂದೆ ಆಚರಣೆ ಮಾಡಬೇಕು ಈದಶಮಿಯು ಪರಮಪವಿತ್ರವಾಗಿದ್ದು ಇಂದು ಮಾಡಿದ ದಾನಾದಿ ಪುಣ್ಯಕಾರ್ಯಗಳಿಗೆ ಕೂಟಿಪಟ್ಟು ಫಲವಿದೆ .
ನವಮಿ ಶೇಷ ಸಂಯುಕ್ತಾ ದಶಮ್ಯಮಪಾರಾಜಿತ |
ದದಾತಿ ವಿಜಯಂ ದೇವಿ ಪೂಜಿತಾ ಜಯವರ್ಧನಿ ||
ವಿಜಯದಶಮಿಯಂದು ವಿಜಯವನ್ನು ನೀಡುವ ಅಪರಾಜಿತ ಎಂಬ ಹೆಸರುಳ್ಳ ಲಕ್ಷ್ಮೀದೇವಿಯನ್ನು ಪೂಜಿಸಬೇಕು.
ವಿಜಯದಶಮಿ ದಿನ ಅಷ್ಟ ದಳ ಪದ್ಮವನ್ನು ಬರೆದು ಪದ್ಮದಲ್ಲಿ ಅಪರಾಜಿತಾಯೈನಮಃ ಎಂದು ದುರ್ಗಾ ದೇವಿಯನ್ನು ಆವಾಹಿಸಿ ಷೋಡಶೋಪಚಾರ ಪೂಜಿ ಮಾಡಿ ಹೀಗೆ ಪ್ರಾರ್ಥಿಸಬೇಕು .
ಇಮಾಂ ಪೂಜಾಂ ಮಯ ದೇವಿ ಯಥಾಶಕ್ತಿ ನಿವೇದಿತಾಂ |
ರಕ್ಷಣಾರ್ಥಂ ಸಮಾದಾಯ ವ್ರಜ ಸ್ವಸ್ಥಾನ ಮುತ್ತಮಮ್ ||
ವಿಜಯಾಚ ಮಹಾಭಾಗಾ ದದಾತು ವಿಜಯಂ ಮಮ ||
ಇಂದು ಶಮಿಪೂಜೆಯನ್ನು ಪ್ರತಿಯೋಬ್ಬರು ನೆರವೇರಿಸುವುದು ಅತಿ ಅವಶ್ಯ ವಾಗಿದೆ.
ವಿಜಯದಶಮಿಯಂದು ನವರಾತ್ರಿಕಾಲದಲ್ಲಿ ಪ್ರತಿನಿತ್ಯ ಮಾಡಿದ ಪೂಜಾ ಪಾರಾಯಣ ಗಳನ್ನು ಶ್ರೀನಿವಾಸ ದೇವರಿಗೆ ಮತ್ತು ಲಕ್ಷ್ಮೀ (ದುರ್ಗಾ)ದೇವಿಗೆ ಸಮರ್ಪಣೆಮಾಡಬೇಕು .
( ಶಮಿಪೂಜಾವಿಧಿ ಪ್ರತ್ಯೇಕ ಪೋಷ್ಟ್ ಕಳಿಸಲಾಗುವುದು )
|| ಶ್ರೀಕೃಷ್ಣಾರ್ಪಣಮಸ್ತು| |
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****
ಆಶ್ವೀನಮಾಸದ ಮಹತ್ವ🌷
🌹ಸಂಚಿಕೆ- 8🌹
ನವರಾತ್ರಿ ಮಹಿಮೆ ಕೂನೆಯ ಭಾಗ
🌿ಶಮೀಪೂಜಾವಿಧಿ 🌿
ಆಶ್ವಿನ ಶುಕ್ಲ ದಶಮೀ ದಿನದಂದು ಶಮೀಪೂಜೆಯನ್ನು ಮಾಡಬೇಕು.
ಶಮೀಯುಕ್ತಂ ಜಗನ್ನಾಥಂ ಭಕ್ತಾನಾಮಭಂಕರಂ |
ಅರ್ಚಯಿತ್ವಾ ಶಮೀವೃಕ್ಷಂ ಅರ್ಚಯೇಚ್ಚ ತತಃ ಪುನಃ ||
ಪುರಾಣವಚನ
ಈ ಪುರಾಣವಚನದಂತೆ ಶಮೀಯುಕ್ತನಾದ ಜಗನ್ನಾಥನನ್ನು ಪೂಜಿಸಬೇಕು.
ಈ ದಿನದಂದು ಗ್ರಾಮದ ಜನರೆಲ್ಲರೂ ಊರ ಹೊರಗೆ ಹೋಗಿ ಈಶಾನ್ಯ ದಿಕ್ಕಿನಲ್ಲಿರುವ ಶಮೀವೃಕ್ಷವನ್ನು ಪೂಜಿಸಬೇಕು. ಅಶಕ್ಯವಾಗಿದ್ದಲ್ಲಿ ಆ ಶಮೀವೃಕ್ಷದ ರೆಂಬೆಯನ್ನು ತಂದು ಗುಡಿಯಲ್ಲಿಟ್ಟು ಪೂಜಿಸಬಹುದು.
ಪೂಜಾವಿಧಾನ
ಆಚಮನ, ಪ್ರಾಣಾಯಾಮ ಮಾಡಿ, ದೇಶಕಾಲಗಳನ್ನು ಉಚ್ಚರಿಸಿ - ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ ಶಮೀಪೂಜಾಂ ಕರಿಷ್ಯೇ ||
ಮೊದಲು ಹೀಗೆ ಪ್ರಾರ್ಥಿಸಬೇಕು.
ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ |
ದುಃಸ್ವಪ್ನ ನಾಶನೀಂ ಧನ್ಯಾಂ ಪ್ರಪದ್ಯೇಽಹಂ ಶಮೀಂ ಶುಭಾಂ ||
ಶಮೀ ಶಮಯಮೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಶಮೀ ಕಮಲಪತ್ರಾಕ್ಷೀ ಶಮೀ ಕಂಟಕದಾರಿಣೀ |
ಅಪನೋದಯ ಮೇ ಪಾಪಂ ಆಯುಃ ಪ್ರಾಣಾಂಸ್ತು ರಕ್ಷತು ||
ಕರಿಷ್ಯಮಾಣಾಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತೀ ತ್ವಂ ಭವ ಶ್ರೀರಾಮ ಪೂಜಿತೇ ||
ನಂತರ ಶಮೀವೃಕ್ಷದ ಅಂತರ್ಯಾಮಿಯಾದ ಭಗವಂತನನ್ನು ಷೋಡಶೋಪಚಾರಗಳಿಂದ ಪೂಜಿಸಿ "ಬನ್ನಿ"ಯನ್ನು ಬಿಡಿಸಿ ಮಂಗಳವಾದ್ಯಗಳೊಂದಿಗೆ ಮನೆಗೆ ತಂದು ಗುರು, ಹಿರಿಯರಿಗೆ, ಬ್ರಾಹ್ಮಣರಿಗೆ ದಕ್ಷಿಣಾಸಹಿತವಾಗಿ ಕೊಟ್ಟು ಅವರ ಆಶೀರ್ವಾದವನ್ನು ಪಡೆದುಕೊಂಡು ಉಳಿದ ಜನರೆಲ್ಲರಿಗೂ ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. (ಪಾಂಡವರು ತಮ್ಮ ಆಯುಧಗಳನ್ನು ಶಮೀವೃಕ್ಷದಲ್ಲಿ ಇಟ್ಟಿದ್ದರೆಂಬುದನ್ನು ಇಲ್ಲಿ ಸ್ಮರಿಸಬೇಕು.)
ಅಂದು ಸಾಯಂಕಾಲ ಶ್ರೀವೇಂಕಟೇಶ ಪದ್ಮಾವತಿಯರ "ಕಲ್ಯಾಣಮಹೋತ್ಸವ" ಕಥೆಯನ್ನು ಶ್ರವಣ ಮಾಡಬೇಕು.
ಈ ದಿನ "ಮಧ್ವಜಯಂತೀ" ಉತ್ಸವವನ್ನು ಆಚರಿಸಬೇಕು. ಶ್ರೀಮತ್ ಸುಮಧ್ವವಿಜಯ, ವಾಯುಸ್ತುತಿ,
(ಸ್ತ್ರೀ ಯರು ಮಧ್ವನಾಮ ಮತ್ತು ಹರಿದಾಸರು ರಚಿಸಿದ ಶ್ರೀಮದಾಚಾರ್ಯರ ಪದ ಸುಳಾದಿಗಳನ್ನು ಪಾರಾಯಣ ಮಾಡಬೇಕು) ಇತ್ಯಾದಿಗಳ ವಿಶೇಷ ಪಾರಾಯಣ ಮಾಡಿ, ಶ್ರೀಸರ್ವಮೂಲ ಗ್ರಂಥಗಳ ಪಾರಾಯಣವನ್ನೂ ಯಥಾಶಕ್ತಿಯಾಗಿ ಮಾಡಿ ಶ್ರೀಮದಾಚಾರ್ಯರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕು.
ಆಶ್ವೀನಮಾಸ ಮಹತ್ವ ಪೋಷ್ಟ್ ಲಿ ನವರಾತ್ರಿ ಮಹಿಮೆ ಮುಗಿಯಿತು
ಹರೇಶ್ರೀನಿವಾಸ
ನವರಾತ್ರಿ ಲೇಖನಮಾಲಿಕೆಯೊಂದಿಗೆ ನಾಲ್ಕುವರ್ಷಗಳ ಕಾಲ ಕಳುಹಿಸಿದ ಮಾಸಧರ್ಮ ಮತ್ತು ವ್ರತಹಬ್ಬಗಳ ಲೇಖನಮಾಲಿಕೆಯನನು ಅಸ್ಮದ್ಗುರ್ವಂತರ್ಗತ ಶ್ರೀಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀನಿವಾಸದೇವರಿಗೆ ಸಮರ್ಪಣೆ ಮಾಡುತಿದ್ದೇನೆ🙏🙏
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****
( ನವರಾತ್ರಿ ವಿಶೇಷ ಲೇಖನಮಾಲಿಕೆ )
|| ಕೊನೆಯ ಸಂಚಿಕೆ ||
|| ಸಂಚಿಕೆ- 9 ||
ದೋಷಗಳನ್ನು ಪರಿಹರಿಸು
ಅಜ್ಞಾನಿನಾ ಮಯದೋಷಾ ಅಶೇಷಾ ವಿಹಿತಾಶ್ಚಯೇ |
ಕ್ಷಮಸ್ವತ್ವಂ ಕ್ಷಮಸ್ವತ್ವಂ ಶೇಷಶೈಲಶಿಖಾಮಣೇ ||
ಶೇಷಶೈಲದ ಶಿಖಾಮಣಿಯಂತೆ ಮರೆಯುತ್ತಿರುವ ಶ್ರೀನಿವಾಸ ! ಅಜ್ಞಾನಿಯಾದ ನಾನು ಅಂತಹ ಅಜ್ಞಾನಪ್ರಯುಕ್ತವಾಗಿ ಎಲ್ಲದೋಷಗಳನ್ನೂ ಎಸಗಿರುವೆನು ನೀನು ಅವನ್ನೆಲ್ಲ ಕ್ಷಮಿಸಬೇಕು ; ದಯವಿಟ್ಟು ಕ್ಷಮಿಸಬೇಕು .ಕ್ಷಮಿಸು ,.ಕ್ಷಮಿಸು -ಎಂದು ಮತ್ತೆ ಮತ್ತೆ ನಿನ್ನಲ್ಲಿ ನಿವೆದಿಸಿಕೊಳ್ಳುವ ಮೂಲಕ ನನ್ನ ಆ ಬಗೆಗಿನ ಹಂಬಲವನ್ನು ನಿನ್ನೆದುರು ತೋಡಿಕೊಳ್ಳುತ್ತಿರುವೆನು .
ಭಕ್ತರು ತಮ್ಮ ದೋಷಗಳ ಪ್ರಮಾರ್ಜನೆಗಾಗಿ ಸಲ್ಲಿಸಿದ ಈ ಪ್ರಾರ್ಥನೆಯನ್ನು ನಾವೂ ನಮ್ಮ ದೋಷಗಳನ್ನೆಲ್ಲ ಶ್ರೀನಿವಾಸನೆದುರು ಹೇಳಿಕೊಂಡು ಅವುಗಳ ಪರಿಹಾರಕ್ಕಾಗಿ ಪ್ರಾರ್ಥಿಸಿಕೊಳ್ಳಬಹುದಾಗಿದೆ .
**********
ನಿನ್ನ ಸೇವೆಯನಿತ್ತು ಎನಗೇ
ನಿನ್ನ ಪದಯುಗ ಭಕ್ತಿ ನೀಡಿ
ನಿನ್ನ ಗುಣಗಣಸ್ತವನ ಮಾಡುವ ಜ್ಞಾನನೀನಿತ್ತು |
ಎನ್ನ ಮನದಲ್ಲಿ ನೀನೇ ನಿಂತೂ
ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ ||
-ಶ್ರೀಗುರುಜಗನ್ನಾಥದಾಸರು
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ ....
***
No comments:
Post a Comment