SEARCH HERE

Friday 9 April 2021

ಶಿವದ್ರೂಪ ಹನೂಮ

 ಶಿವದ್ರೂಪ ಹನೂಮ


✍✍✍  ವೀಣಾ ಜೋಶಿ..

ಹನುಮಂತನನ್ನು ಪುರಾಣಗಳಲ್ಲಿ ಶಿವನ ಒಂದು ಅಂಶ , ಶಿವದ್ರೂಪ ಅಂತ ಹೇಳುತ್ತೇವೆ , ಹೇಗೆ ಅನ್ನುವದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ ಅಲ್ಲವೇ ?

ಇವತ್ತು ಈ ವಿಷಯವನ್ನು ತಿಳಿಸುತ್ತೇನೆ ಕೇಳಿ...

ಸಮುದ್ರ ಮಂಥನ ಸಮಯದಲ್ಲಿ ಧನ್ವಂತರಿ ಅಮೃತ ಕಲಶವನ್ನು ಹಿಡಿದು ಬಂದಾಗ ರಾಕ್ಷಸರೆಲ್ಲ ಅವನನ್ನು ಬೆನ್ನಟ್ಟಿದರು , ಆಗ ವಿಷ್ಣು ಹೆಣ್ಣು ರೂಪವನ್ನು ಧರಿಸಿ ಅವರನ್ನೆಲ್ಲ ತನ್ನ ಮೊಹಕ ರೂಪದಲ್ಲಿ ಮೋಹಗೊಳಸಿದ . ಆ ಮೋಹಿನಿ ರೂಪವನ್ನು ಕಂಡು ಸಾಕ್ಷಾತ್ ಲಕ್ಷೀ ಕೂಡಾ ಇವನಿಗೆ ಅನ್ಯರೇಕೆ ಎಂದು ಬೆರಗುಗೊಂಡಳು..‌‌...

ಒಂದಾನೊಂದು ಸಮಯದಲ್ಲಿ ಶಂಭುವಿಗೆ ವಿಷ್ಣುವಿನ ಮೋಹಿನಿ ರೂಪದ ದರ್ಶನ ವಾಯಿತು.  ಅವನು ಕೂಡಾ ಮೋಹಿನಿ ರೂಪಕ್ಕೆ ಮೋಹಿತನಾದನು.  ಕಾಮಬಾಣದಿಂದ  ಆಹತನಾದ ಶಂಭುವಿನ  ವೀರ್ಯಪಾತವಾಯಿತು. ಆಗ ಸಪ್ತ ಋಷಿಗಳು  ಆ ವೀರ್ಯ ವನ್ನು ಪತ್ರ ಸಂಪುಟದಲ್ಲಿಟ್ಟು  ಜತನ ಮಾಡಿದರು .  ಮುಂದೆ  ವಿಷ್ಣು ರಾಮನವತಾರದಲ್ಲಿ  ಭೂಲೋಕದಲ್ಲಿ ಜನ್ಮ ತಾಳಿದಾಗ ಶಿವನ  ಪ್ರೇರಣೆಯಂತೆ  ರಾಮ ಕಾರ್ಯ ದುರಂಧರನ  ನಿರ್ಮಾಣಕ್ಕಾಗಿ  ಆ ವೀರ್ಯವು  ಗೌತಮ ಪುತ್ರಿ  ಅಂಜನಾದೇವಿ  ಕರ್ಣದ್ವಾರವಾಗಿ  ಅವಳ ದೇಹದಲ್ಲಿ ಸ್ಥಾಪಿಸಲ್ಪಟ್ಟಿತು. ಯೋಗ್ಯ ಕಾಲದಲ್ಲಿ  ಅವಳು ಹನೂಮಂತನನ್ನು ಪ್ರಸವಿಸಿದಳು.  ಆಂಜನೇಯನು ಅದ್ಭುತ ಕಾರ್ಯವನ್ನು ಮಾಡಿದನು . ಅವನು ರಾಮಕಾರ್ಯಕ್ಕಾಗಿ ಜನ್ಮ ತಾಳಿದ್ದರಿಂದ ಅತ್ಯಂತ ನಿಷ್ಠೆಯಿಂದ ರಾಮನ ಸೇವೆ ಮಾಡಿದನು. ಇವನು ಸುಗ್ರೀವ ನ ಮಂತ್ರಿಯಾಗಿಯೂ ರಾಮನ ಸೇವಕನಾಗಿಯೂ ದುಡಿದನು . ಇವನಿಂದಲೇ ಲಕ್ಷ್ಮಣನು ಮರು ಜನ್ಮ ಪಡೆದನು.  ಭೂಮಂಡಲದಲ್ಲಿ ಶ್ರೀರಾಮ ಭಕ್ತನೆನಿಸಿದ..... 

ಜೈ ಶ್ರೀರಾಮ
*****
 

No comments:

Post a Comment