ಪುರೋಹಿತ ಶಬ್ಧಪದದ ಪರಿಶೋಧ - ವ್ಯಾಖ್ಯಾನ ಹಾಗೂ ಅಥ೯ಗಳು :
ಪುರುಷಾತ್ ರೋಹಿಣಿ ಪುತ್ರಾತ್ ಹಿಮಾಂಶೋಃ ತರಣೇಃ ಸುತಾತ್ l
ಆದ್ಯಕ್ಷರಾಣಿ ಸಂಗೃಹ್ಯ ವೇಧಾಶ್ಚಕೇ ಪುರೋಹಿತಮ್ ll
ಅಥಾ೯ತ್ ಪುರುಷ , ರೋಹಿಣಿ ಪುತ್ರ ( ಬುಧ ) , ಹಿಮಾಂಶು ( ಚಂದ್ರ ) ಮತ್ತು ತರಣಿಸುತ ( ಶನಿ ) , ಈ ನಾಲ್ಕೂ ಜನರ ಗುಣದಿಂದ ಕೂಡಿದವನಿಗೆ ಆ ನಾಲ್ಕೂ ಜನರ ಹೆಸರಿನ ಮೊದಲಿನ ಅಕ್ಷರಗಳನ್ನು ಕೂಡಿಸಿದಂತೆ ಬ್ರಹ್ಮನು ಪುರೋಹಿತನೆಂದು ನಾಮಕರಣವನ್ನು ಮಾಡಿದನು.
ಪು - ಪುರದ ಹಿತವನ್ನು ಬಯಸುವ , ಚೇತನೋದ್ಧಾರಕ್ಕಾಗಿಯೇ ಇರುವ ಪರಮ ಪುರುಷ
ರೋ - ರೋಹಿಣಿಯ ಪುತ್ರನಾದ ಬುಧನಂತೆ ತನ್ನನ್ನು ಆಶ್ರಯಿಸಿ ಬಂದ ಜನರಿಗೆ ಮನವೊಪ್ಪುವಂತೆ ಧಮ೯ಬೋಧೆ ಮಾಡುವ
ಹಿ - ಹಿಮಾಂಶು ಅಂದರೆ ಚಂದ್ರನಂತೆ ಆಹ್ಲಾದದಾಯಕನಾದ
ತ - ತನ್ನನ್ನು ಆಶ್ರಯಿಸಿದವರು ಧಮ೯ ವಿರುದ್ಧವಾಗಿ ನಡೆದುಕೊಂಡಾಗ ಸೂಯ೯ ಪುತ್ರನಾದ ಶನಿಯಂತೆ ಅವರನ್ನು ತೀಷ್ಕ್ಣವಾದ ಮಾತುಗಳಿಂದ ಶಿಕ್ಷಿಸಿ ತಿದ್ದುವನು ಆಗಿದ್ದು , ಒಟ್ಟಾರೆ ಅದರಂತೆ ಪುರೋಹಿತನು ಆಗಿರುತ್ತಾನೆ.
ಪುರೋಹಿತ ಎನ್ನುವ ಶಬ್ಧಪದವು ನಿರ್ದಿಷ್ಟವಾದ ಸಮುದಾಯವನ್ನು ಸೂಚಿಸು ವಂಥದಲ್ಲ , ಇದೊಂದು ಉಪಾಧಿ - ಇದೊಂದು ಗುರುತು ಆಗಿರುತ್ತದೆ.
ಪ್ರಾಚೀನ ಗ್ರಂಥಗಳಲ್ಲಿ ವೇದಮಂತ್ರಗಳಲ್ಲಿ ಇದರ ಸಂಬಂಧಿತ ಈ ಕೆಳಗಿನ ವ್ಯಾಖ್ಯಾನಗಳು ಹಾಗೂ ಅರ್ಥಗಳು ಇರುತ್ತವೆ.
ವಾಚಸ್ಪತ್ಯಮ್ : ಪುರೋ ಧೀಯತೇಽಸೌ ಧಾಕ್ತ |
ಪುರಃ ಧೀಯತೇ :- ಪುರಃ ಎಂಬ ಪದಕ್ಕೆ ಮುಖ್ಯಾರ್ಥ ದೇಹ. ಧೀಯತೇ ಎಂದರೇ ದೇಹಕ್ಕೆ ಚೈತನ್ಯಪ್ರಾಯವಾಗಿ ಯಾವುದು ಇರುವುದೋ ಅದು. ಆದ್ದರಿಂದ ಚೈತನ್ಯಯುಕ್ತವಾದ ದೇಹವನ್ನು ಸಾಧನಾರೂಪದಿಂದ ಉಪಯೋಗಿಸಿಕೊಂಡು ಅಭ್ಯುದಯ ನಿಶ್ರೇಯಸ ಮಾರ್ಗವನ್ನು ತೋರಿಸಿಕೊಡುವನೋ ಅವನೇ ಪುರೋಹಿತ.
ದೇವಕೃತ್ಯಾದೌ ಅಗ್ರೇ ಧಾರ್ಯ್ಯೇ | ಪುರೋಧಸಿ ತಞ್ಜಕ್ಷಣಂ | ಯಥಾ
“ಪುರೋಹಿತೋ ಹಿತೋ ವೇದಸ್ಮೃತಿಜ್ಞಃ ಸತ್ಯವಾಕ್ ಶುಚಿಃ | ಬ್ರಹ್ಮಣ್ಯೋ ವಿಮಲಾಚಾರಃ ಪ್ರತಿಕರ್ತ್ತಾಽಽಪದಾಮೃಜುಃ” | “ವೇದವೇದಾಙ್ಗ ತತ್ತ್ವಜ್ಞೋ ಜಪಹೋಮಪರಾಯಣಃ |ಇತಿ ಕವಿಕಲ್ಪಲತಾಯಾಂ ಚಾಣಕ್ಯಃ ||
ದೇವತಾಕಾರ್ಯಗಳಲ್ಲಿ ಮಂಚೂಣಿಯಲ್ಲಿ ನಿಂತು ವಿಧಿಪೂರ್ವಕವಾಗಿ ಶಾಸ್ತ್ರಕರ್ಮಗಳನ್ನು ನಡೆಸುವವನೇ ಪುರೋಹಿತ .ಅರ್ಥಾತ್ ಯಜಮಾನನು ಸ್ವರ್ಗಲೋಕ ಕಾಮ್ಯನಾದರೇ ಜ್ಯೋತಿಷ್ಟೋಮ ಯಜ್ಞವನ್ನೂ , ಗೋವುಗಳೇ ಮುಂತಾದ ಪಶುಗಳನ್ನು ಪಡೆಯುವ ಇಚ್ಛೆಯಿದ್ದರೇ ಚಿತ್ತಿ ಎಂಬ ಯಜ್ಞವನ್ನೂ ಹಾಗೂ ಮುಂತಾದ ಇಹಪರಲೋಕ ಕಾಮ್ಯಗಳನ್ನು ಇಟ್ಟುಕೊಂಡವನು ಆಯಾ ದೇವತೆಗಳ ಆರಾಧನೆಯನ್ನು ಯಜ್ಞಯಾಗಾದಿಗಳ ಮೂಲಕವೇ ಪಡೆದುಕೊಳ್ಳಬೇಕು. ಇಂಥ ಕಾಮ್ಯಕರ್ಮಗಳಲ್ಲಿ ಸತ್ಯವಾಚಿಯಾದ, ಅಂತಃಕರಣಶುದ್ಧಿಯುಳ್ಳ , ವೇದಗಳನ್ನೂ ಧರ್ಮಸೂತ್ರಗೃಹ್ಯಸೂತ್ರಗಳನ್ನೂ ಆಮೂಲಾಗ್ರ ಅಧ್ಯಯನದಿಂದ ಮನನಮಾಡಿಕೊಂಡ, ಸದಾಚಾರವುಳ್ಳ ,ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪರೋಪಕಾರ ಹಾಗೂ ಋಜುಮಾರ್ಗದಲ್ಲಿಯೇ ನಿರತನಾಗಿರುವ, ವೇದಗಳನ್ನೂ ವೇದಾಂಗಗಳ ಮೂಲತತ್ತ್ವವನ್ನೂ ತಪಸ್ಸಿನಿಂದ ತಿಳಿದುಕೊಂಡಂಥ ಯಾವಾತನು ತಾನೇ ಮಂಚೂಣಿಯಲ್ಲಿ ನಿಂತು ವಿಧಿಪೂರ್ವಕವಾಗಿ ಶಾಸ್ತ್ರಕರ್ಮಗಳನ್ನು ಯಜಮಾನನ ಅಭ್ಯುದಯದಕ್ಕಾಗಿ ನಡೆಸಿಕೊಡುವನೋ ಅವನೇ ಪುರೋಹಿತ ಎನಿಸಿಕೊಳ್ಳುತ್ತಾನೆ ಎಂಬುದಾಗಿ ಚಾಣಕ್ಯನು ತನ್ನ ಕವಿಕಪಲತಾ ಎಂಬ ಗ್ರಂಥದಲ್ಲಿ ಹೇಳಿದ್ದಾನೆ.
ಆಶೀರ್ವಾದವಚೋಯುಕ್ತ ಏವ ರಾಜಪುರೋಹಿತಃ” | ತಸ್ಮಾತ್ ಧರ್ಮಪ್ರಧಾನಾತ್ಮಾ ವೇದಧರ್ಮವಿದೀಪ್ಸಿತಃ || ಬೋಧಾಯನ ಧರ್ಮ ಸಂಹಿತಾ || ೧೬.೦೨ ||
ಈ ರೀತಿಯಾಗಿ ವೇದಗಳು ಸಾರುತ್ತಿರುವ ಧರ್ಮವನ್ನೇ ಸದಾಕಾಲಕ್ಕೂ ಚಿಂತಿಸುತ್ತಿರುವ, ಸಮಸ್ತ ಪ್ರಜೆಗಳ ಅವರನ್ನಾಳುವ ರಾಜರುಗಳ ಒಳಿತನ್ನು ಅನವರತ ಯೋಚಿಸುವವನೇ ರಾಜಪುರೋಹಿತ.
ಬ್ರಾಹ್ಮಣೋ ಗುಣವಾನ್ ಕಞ್ಚಿತ್ ಪುರೋಧಾಃ ಪ್ರತಿದೃಶ್ಯತಾಮ್ | ಧರ್ಮಾತ್ಮಾ ಮನ್ತ್ರವಿದ್ಯೇಷಾಂ ರಾಜ್ಞಾಂ ರಾಜನ್ | ರಾಜ್ಞಾಂ ಪುರೋಹಿತಾಧೀನಃ ವಿಜಯಾದಿಃ ತತ್ರೋಕ್ತೋ ದೃಶ್ಯಃ | ಪುರೋಹಿತಃ || ಬೋಧಾಯನ ಧರ್ಮ ಸಂಹಿತಾ || ೧೬.೦೩ ||
ಮೇಲೆ ಹೇಳಿದಂಥಹ ಸಕಲ ಗುಣವಂತನಾದ , ಮಂತ್ರವಿದ್ಯೆಗಳನ್ನು ತಿಳಿದುಕೊಂಡು ತಾನೂ ಧರ್ಮಾತ್ಮನಾಗಿ, ರಾಜರನ್ನೂ ಪ್ರಜೆಗಳನ್ನೂ ಧರ್ಮಮಾರ್ಗದಲ್ಲಿ ಕರೆದೊಯ್ಯುವ ಬ್ರಾಹ್ಮಣನಿಂದಲೇ ಪುನಃ ಪುನಃ ಸತ್ಕಾರ್ಯಗಳನ್ನು ಯಜಮಾನನು ಮಾಡಿಸಿಕೊಳ್ಳಬೇಕು. ಅರ್ಥಾತ್ ಈ ಸಂದರ್ಭದಲ್ಲಿ ಪುರೋಧಾ ಎಂಬ ಪದಕ್ಕೆ “ಕುಲಪುರೋಹಿತ ಅಥವಾ ಆಸ್ಥಾನ ರಾಜಪುರೋಹಿತ ಎಂಬುದಾಗಿ ವಾಚಸ್ಪತ್ಯಾಚಾರ್ಯರು ನಿರ್ವಚನ ಮಾಡಿದ್ದಾರೆ. ಇದಲ್ಲದೇ ಇಂಥ ಗುಣವಂತನಾದ ಬ್ರಾಹ್ಮಣನ ಮಾರ್ಗದರ್ಶನದಲ್ಲಿಯೇ ರಾಜರುಗಳ ಜಯಾಪಜಯ ಹಾಗೂ ಇತರ ಆಗುಹೋಗುಗಳನ್ನು ಇತಿಹಾಸದಲ್ಲಿ ಕಂಡಿದ್ದೇವೆ. ಹೀಗೆ ಬೋಧಾಯನಾಚಾರ್ಯರು ಹೇಳಿದ್ದಾರೆ.
ಅಗ್ನಿಪುಂ “ತ್ರಯ್ಯಾಞ್ಚ ದಣ್ಡನೀತ್ಯಾಂ ಚ ಕುಶಲಃ ಸ್ಯಾತ್ ಪುರೋಹಿತಃ |
ವೇದತ್ರಯಗಳನ್ನೂ , ರಾಜ್ಯಭಾರ, ಶಾಸನಾದಿ ದಂಡನೀತಿಗಳನ್ನೂ ಪರಿಣಿತನಾದವನೇ ಪುರೋಹಿತನೆಂಬುದಾಗಿ ಅಗ್ನಿಪುರಾಣದಲ್ಲಿ ಹೇಳಿದೆ.
ಪುರೋಹಿತಸ್ಯ ಧರ್ಮ್ಯಂ ಸಹಿಷ್ಯಾಂ | ಇತಿ ಚ ಪುರೋಹಿತಧರ್ಮ್ಯೇ |
ಆತ್ಯಂತಿಕವಾದ ಸಹಿಷ್ಣುತತೆಯೇ ಪುರೋಹಿತನ ಆದ್ಯ ಧರ್ಮ ಎಂಬುದಾಗಿ ಪುರೋಹಿತ ಧರ್ಮದಲ್ಲಿ ಹೇಳಿದೆ.
ಶಬ್ದಕಲ್ಪದ್ರುಮ ಹೇಳುವಂತೆ :
ಪುರೋ ದೃಷ್ಟಾದೃಷ್ಟಫಲೇಷು ಕರ್ಮ್ಮಸು ಧೀಯತೇ ಆರೋಪ್ಯತೇ ಯಃ |ಕುಮಾರಿಲ ಭಟ್ಟಃಟುಪ್ಟೀಕಾ ||
ನಿತ್ಯನೈಮಿತ್ತಿಕ ಹಾಗೂ ಕಾಮ್ಯಕರ್ಮಗಳ ದೃಷ್ಟ ಮತ್ತು ಅದೃಷ್ಟ ಫಲಗಳನ್ನು ಆಯಾಕರ್ಮಗಳಿಗನುಗುಣವಾಗಿ ಯಾವಾತನು ತಿಳಿಸಿಕೊಡುತ್ತಾನೋ ಅವನೇ ಪುರೋಹಿತ ಎಂಬುದಾಗಿ ಮೀಮಾಂಸಾ ದಿಗ್ಗಜರಾದ ಕುಮಾರಿಲ ಭಟ್ಟರು ಹೇಳಿದ್ದಾರೆ.
ರಕ್ಷೇತಾಂ ನೃಪತಿಂ ನಿತ್ಯಂ ಯತ್ನಾದ್ವೈದ್ಯಪುರೋಹಿತೌ || ಇತಿ ಸುಶ್ರುತೇ ಸೂತ್ರಸ್ಥಾನೇ ಚತುಸ್ತ್ರಿಂಶೇಽಧ್ಯಾಯೇ ||
ಯಾವಾತನು ವೈದ್ಯಶಾಸ್ತ್ರದಲ್ಲಿ ನುರಿತನಾದವನೋ, ತನ್ನ ಚಿಕಿತ್ಸೆಯಿಂದ ಪ್ರಜೆಗಳ ಹಾಗೂ ರಾಜರುಗಳ “ಪುರ” ಅರ್ಥಾತ್ ದೇಹದ ಆರೋಗ್ಯವನ್ನು ಕಾಪಾಡುತ್ತಾನೋ ಅಂಥ ವೈದ್ಯನೂ ಪುರೋಹಿತನೇ. ಹೀಗೆಂದು ಸುಶೃತಮಹರ್ಷಿಯು ತನ್ನ ಆಯುರ್ವೇದ ಸೂತ್ರಗಳಲ್ಲಿ ಹೇಳಿದ್ದಾನೆ.
ಹೀಗೆ ಪುರೋಹಿತ ಪದವು ವಿಸ್ತೃತ ವ್ಯಾಖ್ಯಾನ ಹೊಂದಿದ್ದು, ಪ್ರತಿಯೊಂದು ಧರ್ಮದಲ್ಲೂ ಈ ಕರ್ತವ್ಯಗಳನ್ನು ನಿರ್ವಹಿಸುವವರನ್ನು ಆಯಾ ದೇಶಭಾಷೆಗಳಲ್ಲಿ ಪುರೋಹಿತರೆಂದೇ ಕರೆಯಲಾಗಿದೆ.
ಪ್ರಜೆಗಳನ್ನು ಪ್ರೀತಿಯಿಂದ ಪರಿಪಾಲಿಸಬೇಕಾದ ರಾಜ ತನ್ನ ಕರ್ತವ್ಯವನ್ನು ಉಪೇಕ್ಷಿಸಿ ದಬ್ಬಾಳಿಕೆ ನಡೆಸಿದರೆ ಅದನ್ನು ‘ಸರ್ವಾಧಿಕಾರ’ ಎಂದು ಕರೆಯಲಾಗುತ್ತದೆ. ಹಾಗೆಯೇ, ಪುರೋಹಿತ ವರ್ಗ ತನ್ನ ಕರ್ತವ್ಯವಾದ ಸಕಲ ಜನಹಿತದ ವಿಶಾಲ ಮನೋಭಾವ ಬಿಟ್ಟು ಪಕ್ಷಪಾತ ಮತ್ತು ಹೇರಿಕೆಯ ಧೋರಣೆಯನ್ನು ತೋರಿದರೆ ಅದನ್ನು ‘ಪುರೋಹಿತಶಾಹಿ’ ಎಂದು ಕರೆಯುವ ರೂಢಿಯು ಇರುತ್ತದೆ.
***
**
ಪುರಕ್ಕೆ ಹಿತ ಬಯಸುವ ಪುರೋಹಿತ
• ನಮಸ್ತೇ ಸದಾ ವತ್ಸಲೇ ಮಾತೃ ಭೂಮೆ.....ಫೋನ್ ರಿಂಗಣಿಸಿತು.
ಫೋನ್ ಎತ್ತಿದ ನಾನು
- " ಹಲೋ- ಹೇಳಿ "
ಆ ಕಡೆ ಇಂದ -" ಹುಡುಗಿಗೆ ಇಂಜಿನಿಯರ್ ಹುಡುಗ ಬೇಕಂತೆ"
ಆಶ್ಚರ್ಯವಲ್ಲದ ಉತ್ತರ.ಸ್ವಲ್ಪ ಅಹಂಕಾರ,ಕೋಪ,ಏರು ಧ್ವನಿಯಲ್ಲಿ ನಾನು ಉತ್ತರಿಸಿದೆ.
"ನನಗೆ ಇನ್ನೂ 27 ವರ್ಷ.35 ಅಲ್ಲ.ಹಾಗೆ ನಾನು ವೃತ್ತಿಯಲ್ಲಿ ಶಿಕ್ಷಕ.ಪೌರೋಹಿತ್ಯ ಬಿಡಲ್ಲ.ನನಗಾಗಿ ಹುಡುಗಿ ಇರುತ್ತಾಳೆ. ಸಿಗುತ್ತಾಳೆ" ಎಂದು ಫೋನ್ cut ಮಾಡಿದೆ.
ಆಮೇಲೆ 2 ದಿನದ ನಂತರ ಯೋಚಿಸುತ್ತಾ ಕುಳಿತಾಗ ಬರೆಯಬೇಕು ಎಂದು ಎನಿಸಿತು.ಯೋಚಿಸುವುದು ಸುಲಭ..
ಕೆಲವೊಮ್ಮೆ ಅನಿಸಿದ್ದು ಇದೆ. engineer girl want engineer only... doctor wants doctor boy only.
ಬ್ಯಾಂಕ್ ಕೆಲಸ ಮಾಡೋ ಹುಡುಗಿಗೆ ಬ್ಯಾಂಕ್ ಹುಡುಗ ಬೇಕು...ಹಾಗಾಗಿ ಪೌರೋಹಿತ್ಯವನ್ನು ಹುಡುಗಿಯರಿಗೆ ಕಲಿಸಿದರೆ ಅವರಾದರೂ ಪುರೋಹಿತರನ್ನು ಮದುವೆ ಆಗಬಹುದು ಎಂದು..
ಕಾಲ ವ್ಯತ್ಯಾಸ ಆಗುತ್ತಿದ್ದಂತೆ ವ್ಯಕ್ತಿಗಳು,ಪರಿಸರ,ಬದಲಾಗುತ್ತದೆ.ಹುಡುಗಿಯರಿಗೆ ಶಿಕ್ಷಣ ಕೊಟ್ಟು ತಪ್ಪಾಯಿತೋ, ಅಥವಾ ಸಂಸ್ಕಾರ ಇಲ್ಲದ ಶಿಕ್ಷಣದಿಂದ ಹೀಗಾಗಿದೆಯೇ??
ಒಬ್ಬ ವ್ಯಕ್ತಿಯ ಜೀವನದುದ್ದಕ್ಕೂ ಹುಟ್ಟಿನಿಂದ ಸಾವಿನ ತನಕ ಬರುವ ವ್ಯಕ್ತಿಗಳು 3 ಜನ.. 1.ದೇವರು 2.ಧರ್ಮ. 3. ಪುರೋಹಿತ.
ಪ್ರತಿ ಒಬ್ಬ ವ್ಯಕ್ತಿಯು 16 ಸಂಸ್ಕಾರ( ಬ್ರಾಹ್ಮಣ ಸಂಪ್ರದಾಯದಲ್ಲಿ) ಪಡೆದರೆ ಅವನು ದ್ವಿಜ.ಅಂತಹ ಸಂಸ್ಕಾರಗಳಿಗೆ ಆನಂತರ ಆ ವ್ಯಕ್ತಿ ಮರಣ ಹೊಂದಿದಾಗ ಸ್ಮಶಾನದ ತನಕ, ಅನಂತರ ಆ ವ್ಯಕ್ತಿಯ ಶ್ರಾದ್ಧ ಮೊದಲಾದ ಕರ್ಮಗಳಿಗೂ ಮುಖ್ಯವಾಗಿ ಬೇಕಾದವರು ಪುರೋಹಿತರು. ಹುಟ್ಟಿನಿಂದ ಸಾವಿನ ತನಕ ಮನೆಗಳಲ್ಲಿ ನಡೆಯುವ ಪ್ರತಿಯೊಂದು ಶುಭಾಶುಭ ಕಾರ್ಯಗಳಿಗೂ ಪುರೋಹಿತ ಬಹಳ ಮುಖ್ಯ ಪಾತ್ರ ವಹಿಸುತ್ತಾನೆ. ಅಂತಹ ಪುರೋಹಿತರ ಅವಹೇಳನ ಮಾಡಿದವರು ಈಗ ಸಾಮಾಜಿಕ ಹೀರೋಗಳು.
ಕೆಲವೊಂದು ಸನ್ನಿವೇಶ
1.ಮನೆಯಲ್ಲಿ ಪೂಜೆ ಪುನಸ್ಕಾರ.ಮಾಡಿಸುವ ಪುರೋಹಿತ ಬರಲಿಲ್ಲವೆಂದು 10-15 ಬಾರಿ ಫೋನ್ ಕೂಡ ಮಾಡುವುದಿದೆ.ಅವರು ಬರದೆ ನಿಮ್ಮ ಮನೆಯ ಪೂಜೆಯು ಇಲ್ಲ...ಬಂದಿರುವ ಸಂಬಂಧಿಗಳಿಗೆ ಸರಿ ಸಮಯಕ್ಕೆ ಊಟವೂ ಇಲ್ಲ.
ಆದರೂ कार्यान्ते अप्रयोजकाः ಎನ್ನುವಂತೆ ಕೆಲಸ ಮುಗಿದ ಮೇಲೆ ಪುರೋಹಿತ ಯಾರೋ ,ನಾವಾರೋ
2.ಈಗ ಇನ್ನೊಂದು ಶುರುವಾಗಿದೆ.ಪುರೋಹಿತರ ಸಂಭಾವನೆ. ಎಂಜಿನಿಯರ್ ಆಗಿ ಲಕ್ಷ ಲಕ್ಷ ಹಣ ಎಣಿ ಸುವ ವ್ಯಕ್ತಿ ಗೆ ಪುರೋಹಿತರಿಗೆ ಸಹಸ್ರ ರುಪಾಯಿ ದೊಡ್ಡ ಮೊತ್ತವಾಗುತ್ತದೆ.ಪಾರ್ಟಿ,ಬಾರ್ ಗಳಲ್ಲಿ ವ್ಯರ್ಥವಾಗಿ ಆರೋಗ್ಯ ಹಾಳುಮಾಡಿಕೊಳ್ಳಲು ಹಣವಿದ್ದರೂ,,ಪುರೋಹಿತರಿಗೆ ಇರುವುದಿಲ್ಲ.
3.ಕೆಲವು ದಿನಗಳ ಹಿಂದೆ ಒಂದು ಕಡೆ ಹೋಮಕ್ಕೆಂದು ಹೋದಾಗ ಕೋಟಿ ಕೋಟಿ ಹಣ ಇಟ್ಟಿರುವ ಯಜಮಾನ ಚಿಲ್ಲರೆ ಕೇಳಿದರೆ 25 ಪೈಸೆ, 50 ಪೈಸೆ ತಂದಿಡುತ್ತಾನೆ.ಯಾವ ಅಂಗಡಿಯಲ್ಲಿ ಆ ನಾಣ್ಯಕ್ಕೆ ಬೆಲೆ ಇದಿಯೋ ಅವನೇ ಬಲ್ಲ...4.ಹೋಗಲಿ..ಈ ಪುರೋಹಿತರಿಗೆ ಯಾವುದಾದರೂ ಅಂಗಡಿಯಲ್ಲಿ ವಿನಾಯಿತಿ ಇದಿಯೋ...ಯೋಚಿಸಿದರೂ ಕಾಣಸಿಗುವುದಿಲ್ಲ..ಬ್ರಾಹ್ಮಣರ ಅಂಗಡಿಯಲ್ಲೇ ಸಿಗುವುದಿಲ್ಲ ಬಿಡಿ.
ಇನ್ನು ನೀವೇ ಕೂಲಂಕುಷವಾಗಿ ಯೋಚಿಸಿ ನೋಡಿ.ಯಾವ engineer ಯಾವ doctor ಆಗಬಹುದು,ಈ ಸಮಾಜಕ್ಕೆ ಅದೆಷ್ಟು ಸಹಾಯ ಮಾಡುತ್ತಾರೋ ಅದರ 80% ಜಾಸ್ತಿ ಸಹಾಯ ಪುರೋಹಿತರಿಂದ ಆಗುತ್ತದೆ... ಯಾವೊಬ್ಬ ದೊಡ್ಡ ಮಟ್ಟದ ವ್ಯಕ್ತಿಯೂ ಕೂಡ ಮಾಡದ ಸಹಾಯ ಮಾಡುತ್ತಾರೆ... ನೀವೇ ಗಮನಿಸಿ
1. ಹಬ್ಬದ ಸಮಯ ಇರಬಹುದು,ಮನೆಯಲ್ಲಿ ಹೋಮದ ಸಮಯ ಇರಬಹುದು,ಅಥವಾ ದೇವಸ್ತಾನ ಪೂಜೆಗೆ ಇರಬಹುದು.ಎಲ್ಲಾ ಕಡೆಯೂ ಪುಷ್ಪ (ಹೂವು) ಹಣ್ಣು ಬೇಕೆ ಬೇಕು.70% ಮಾರ್ಕೆಟ್ ನಲ್ಲಿ ಇರುವ ವ್ಯಕ್ತಿಗಳು ಜೀವನ ಸಾಗಿಸುತ್ತಿರುವ ಕಾರಣ ಈ ಪುರೋಹಿತರು..ಬೆಳಗ್ಗೆ 4 ಗಂಟೆಗೆ ಎದ್ದು ಯಾವ ಮನೆಯಲ್ಲಿ ಹೋಮ ಪೂಜೆ ಒಪ್ಪಿಕೊಂಡಿರುತ್ತಾರೋ ಅವರಿಗಾಗಿ ಹೂವು,ಹಣ್ಣು ತರಲು ಹೋಗುತ್ತಾರೆ. ಚಕ್ರವ್ಯೂಹ ಭೇದಿಸಿ ಒಳಗೆ ಹೋದ ಅಭಿಮನ್ಯುವಿಗೆ ಕೂಡ ಮಾರ್ಕೆಟ್ ಒಳಗೆ ಹೋಗಿ ಬರುವುದು ಕಷ್ಟ ಸಾಧ್ಯ...ಆದರೂ ತಾವು ಒಪ್ಪಿಕೊಂಡಿರುವ ಯಜಮಾನನ ಏಳಿಗೆಗಾಗಿ 4 ಗಂಟೆ ಇಂದ ಕಷ್ಟ ಪಡುತ್ತಾರೆ. ತುಳಸಿ,ಮಾವಿನ ಎಲೆ ಇಂದ ಹಿಡಿದು ಪ್ರತಿಯೊಂದು ಚಿಕ್ಕ ಚಿಕ್ಕ ವ್ಯಾಪಾರಿಗಳಿಗೂ ಪುರೋಹಿತರಿಂದ ಲಾಭವಿದೆ.
2.ಹಾಲಿನ ವ್ಯಾಪಾರಿಗಳು, ಗೋಮೂತ್ರ,ಗೋಮಯ ವ್ಯಾಪಾರಿಗಳು, ಪಂಚೆ , ಪಟ್ಟೇಮಡಿ ತಯಾರಿಸುವ ಕಂಪನಿಗಳು , ತೆಂಗಿನಕಾಯಿ,ಅಕ್ಕಿ,ರಂಗೋಲಿ ,ಬಣ್ಣಗಳು, ಸಮಿಧೆ ಗಳನ್ನು ತಯಾರಿಸುವ ವ್ಯಕ್ತಿಗಳಿಗೆ, ಕಟ್ಟಿಗೆ ವ್ಯಾಪಾರಿಗಳಿಗೆ, ಅಗರಬತ್ತಿ, ಹೂ ಬತ್ತಿ,ದೀಪದ ಎಣ್ಣೆ, ಆರತಿ ಬತ್ತಿಗಳು,ಕಲಶಗಳನ್ನು, ತಾಮ್ರದ ಹರಿವಾಣಗಳು,ತಿನ್ನಲು ಬಳಸದೇ ಇರುವ ನವಗ್ರಹ ಧಾನ್ಯಗಳ ತಯಾರಕರು,ತುಪ್ಪ.......ಹೇಳುತ್ತಾ ಹೋದರೆ ನಿಲ್ಲಿಸಲು ಸಾಧ್ಯವಿಲ್ಲ...ಈ ಮೇಲಿನ ಎಲ್ಲಾ ತಯಾರಕರು ಅವರ ಜೀವನಕ್ಕಾಗಿ ಅವರಿಗೂ ಗೊತ್ತಾಗದ ರೀತಿಯಲ್ಲಿ ಪುರೋಹಿತರನ್ನು ಅವಲಂಬಿಸಿದ್ದಾರೆ..ನಾವು ಬೆಳೆದು 10 ಜನರನ್ನು ಬೆಳೆಸುವವರು ಪುರೋಹಿತರು.ನೀವೇ ಯೋಚಿಸಿ ನೋಡಿ...ನಮ್ಮ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಹಾಗೆಯೇ ಹಣವು ಒಂದೇ ಕಡೆ ಕೊಳೆಯದಿರುವಲ್ಲಿ ಪುರೋಹಿತರ ಪಾಲು ಅತೀ ದೊಡ್ಡದಾಗಿದೆ...ಆದರೆ ಅಗೋಚರವಾಗಿ ಹೋಗಿದೆ..
ಪುರಕ್ಕೆ ಹಿತವನ್ನು ಬಯಸುವ ಪುರೋಹಿತರಿಗೆ ಹಿತವನ್ನು ಬಯಸುವ ವ್ಯಕ್ತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಪುರೋಹಿತರು ಕೇಳುವ ಸಂಭಾವನೆ ಜಾಸ್ತಿ ಎಂದು ಕೆಲವರಿಗೆ ಅನಿಸಿದರೆ ,ಪುರೋಹಿತ ಎನ್ನುವುದು ಶಾಲೆಗೆ ಹೋಗಿ ವಿದ್ಯೆ ಬಾರದೆ ಮಾಡುವಂತಹ ವೃತ್ತಿ ಎಂದು ಇನ್ನೂ ಕೆಲವರು.ಅಂತಹ ಪುರೋಹಿತರಿಗೆ ಮದುವೆ ವಿಷಯ ಬಂದಾಗ ಆಗುವ ಅವಮಾನಗಳು...12 puc ಓದಿದ ಹುಡುಗಿಗೂ engineer ಬೇಕು. ಕೆಲವು ಪುರೋಹಿತರ ಹೆಣ್ಣು ಮಕ್ಕಳಿಗೆ ಬ್ರಾಹ್ಮಣರೇ ಆಗುವುದಿಲ್ಲ...ಏನು ವಿಧಿ ಆಟವೋ...
ಹಾಗಂತ ಪುರೋಹಿತರಿಗೆ ಸ್ವಾತಂತ್ರ್ಯ ಇದೆಯೇ...ಹೋಟೆಲ್ಗಳಲ್ಲಿ ತಿನ್ನುವುದು ತಪ್ಪಿರಬಹುದು...ಆದರೆ ಸಿನಿಮಾಗಳಿಗೆ ಹೋಗುವುದು..ಎಲ್ಲಿಗಾದರೂ ಸಂತೋಷದಿಂದ ಸುತ್ತಿದರೂ ಕೆಲವರ ಕಣ್ಣು ಕೆಂಪಾಗುತ್ತದೆ..ಪುರೋಹಿತರ ಭಾವನೆಗಳು ಬಾವಿ ಒಳಗಿನ ಕಪ್ಪೆ ರೀತಿ...ಅಲ್ಲೇ ಇರಬೇಕು.ಹೊರತು ಹೊರಗೆ ಬಂದು ಪ್ರಪಂಚ ನೋಡಬಾರದು..
ಕೊನೆಯಲ್ಲಿ ಹೇಳುವುದು ಇಷ್ಟೇ...ನಿಮ್ಮ ಮಕ್ಕಳನ್ನು ಪುರೋಹಿತರಿಗೆ ಮದುವೆ ಮಾಡಿಕೊಡಿ ಎಂದು ಹೇಳುವ ಅಧಿಕಾರ ನಮಗಿಲ್ಲ. ಆದರೆ ಪುರೋಹಿತರಿಗೆ ಕೊಡುವ ಬಗ್ಗೆ ಯೋಚಿಸಿದಾಗ ನಿಮಗೆ ಹೌದು ಎನಿಸಬಹುದು...ಬೆಳಗ್ಗೆ ಬೇಗ office ಹೋಗಿ ರಾತ್ರಿ 10ಕ್ಕೆ ಮನೆಗೆ ಬಂದು ಹೆಂಡತಿ ಮೇಲೆ ಸಿಡಿಯುವುದು ಇಲ್ಲ..
ಪರಾಮರ್ಶಿಸಿ ನೋಡಿ..ಪುರೋಹಿತರಲ್ಲಿ ವಿಚ್ಛೇದನ ಪ್ರಕರಣ ಕೂಡ ತೀರಾ ವಿರಳ.
ನಿಮ್ಮ ಮಕ್ಕಳಿಗೆ ಬರೀ ವಿದ್ಯೆ ಕೊಡಬೇಡಿ.ಹೊರತು ಸಂಸ್ಕಾರ ಕೂಡಿರುವ ವಿದ್ಯೆ ಕೊಡಿ.ನಮ್ಮ ಮಕ್ಕಳು ಸಂಸ್ಕಾರ ಕೊಡಲಿಲ್ಲ ಎಂದು ಮುಂದೊಂದು ದಿನ ನಿಮ್ಮನ್ನು ದೂರಬಾರದು.ಹಾಗೆ ನಿಮ್ಮ ಮೊಮ್ಮಕ್ಕಳಿಗೆ ಸಂಸ್ಕಾರ ಕೊಡಲಿಲ್ಲ ಎಂದು ನಿಮಗೂ ಹೇಳುವ ಅಧಿಕಾರ ಇರುವುದಿಲ್ಲ. ಪುರೋಹಿತರು ಸಮಾಜದ ಪ್ರಮುಖ ವ್ಯಕ್ತಿಗಳು. ವ್ಯಕ್ತಿಯ ಪಾಪಗಳನ್ನು ತಾನು ಸ್ವೀಕರಿಸಿ ಯಜಮಾನನಿಗೆ ಒಳ್ಳೆಯದನ್ನು ಹರಿಸುವವರು.
ನಿಮ್ಮ ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಬಯಸುವ ಇಚ್ಛೆ ನಿಮಗಿದ್ದರೆ ಪುರೋಹಿತರನ್ನು ಹಾಗೂ ಪೌರೋಹತ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿ ಒಬ್ಬ ಬ್ರಾಹ್ಮಣನ ಕರ್ತವ್ಯ.. ದೇಶ ಅಭಿವೃದ್ಧಿ ಹೊಂದಲು ಪ್ರತಿ ಒಬ್ಬರ ಸೇವೆ ಮುಖ್ಯ..ಹಾಗಂತ ಪುರೋಹಿತರು ಪ್ರಧಾನ.ಬೇರೆ ಎಲ್ಲಾ ಅಪ್ರಧಾನ ಎಂದಲ್ಲ..
ಪೂಜೆ ಪುನಸ್ಕಾರ ಮಾಡಿಸುವ ಯಜಮಾನನು ಮುಖ್ಯ , ಪುರೋಹಿತರಿಗೆ ಸಹಾಯ ಮಾಡುವ ಮೇಲಿನ ಕೆಲವು ವ್ಯಕ್ತಿಗಳು ಪ್ರಧಾನ.ಸಮಾಜದ ಒಳಿತಿಗಾಗಿ ಬದುಕುತ್ತಿರುವ ಜನರಲ್ಲಿ ಅಗೋಚರವಾಗಿ ಪ್ರಧಾನ ಪಾಲು ಸೇರುವುದು ಪುರೋಹಿತರಿಗೆ...
ಧನ್ಯವಾದ..
***********
No comments:
Post a Comment