ಆರಂಕುಶಮಿಟ್ಟೊಡಂ ನೆನವುದೇನ್ನಮನಂ ಬನವಾಸಿ ದೇಶಮಂ ಅಂದೊಡನೆ ನಮಗೆ ನೆನಪಾಗುವುದು ಆದಿ ಕವಿ ಪಂಪ. ಹಾಗೇ ನೀರಿಳಿಯದ ಗಂಟೆಲೊಳ್ ಕಡುಬಂ ತುರುಕಿದಂತಾಯತ್ತು, ಕತ್ತೂರಿಯಲ್ತೆ, ಪದ್ಯo, ಹೃದ್ಯo, ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು, ಸಪ್ತಾಕ್ಷರೀ ಮಂತ್ರ ಮುಂತಾದ ಮಾತುಗಳನ್ನು ಕೇಳಿದಾಗ ನಮಗೆ ನೆನಪಾಗುವುದು ಕನ್ನಡ ಹೊಸ ಸಾಹಿತ್ಯದ ಮುಂಗೋಳಿ ಎಂದೇ ಹೆಸರಾಗಿದ್ದ ಮುದ್ದಣ್ಹ(ನಂದಳಿಕೆ ಲಕ್ಷೀನಾರಾಯಣ, ಉಡುಪಿ ಜಿಲ್ಲೆ ) ಹೊಸಗನ್ನಡದ ಆದ್ಯ ಕವಿಗಳಲ್ಲಿ ಪ್ರಮುಖರು. ತನ್ನ ಮುದ್ದಿನ ಮಡದಿಯನ್ನು ಹಲವು ಹೆಸರುಗಳಿಂದ (ಶ್ರೀ ರಾಮೇಶ್ವಮೇಧ ಕೃತಿಯಲ್ಲಿ ) ಕರೆಯುತಿದ್ದ ಈ ಕವಿಯ ಜನ್ಮದಿನದಂದು (24.1.1870-16.2.1901)ಇಷ್ಟೆಲ್ಲಾ ನೆನಪಿಸಿಕೊಳ್ಳಲು ಸಂತಸ ಎನಿಸುತ್ತದೆ.
*******
5 December at 20:20 ·
ಟಿ. ಎನ್. ಸೀತಾರಾಂ
ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ ರೆಡೀಮೇಡ್ ಉತ್ತರವಾಗಿ ಸದಾ ನೆನಪಿಗೆ ಬರುವವರು ಕಿರುತೆರೆಯ ಮೂಲಕ ಮನೆ ಮನೆಗಳ, ಮನಗಳ ಆಪ್ತ ಮಾತಾಗಿರುವ ಟಿ. ಎನ್. ಸೀತಾರಾಂ.
ತಳಗವಾರ ನಾರಾಯಣರಾವ್ ಸೀತಾರಾಂ ಅವರು ಜನಿಸಿದ್ದು ಡಿಸೆಂಬರ್ 6, 1948ರ ವರ್ಷದಲ್ಲಿ. ಇಂದು ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಮತ್ತು ನಿರ್ದೇಶನಗಳ ಮೂಲಕ ಜನಪ್ರಿಯರಾಗಿರುವ ಅವರು ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರ ನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಹರಡಿಕೊಂಡವರು. ಮೂಲತಃ ಗೌರಿಬಿದನೂರಿನವರಾದ ಸೀತಾರಾಂ ಅವರ ಹೆಸರಿನ ಪ್ರಾರಂಭದಲ್ಲಿರುವ ‘ತಳಗವಾರ’ ಅವರ ತಂದೆಯವರ ಸ್ಥಳ. ತಂದೆಯವರು ನಾರಾಯಣರಾಯರು ಮತ್ತು ತಾಯಿ ಸುಂದರಮ್ಮನವರು. ಕೃಷಿಯನ್ನಾಶ್ರಯಿಸಿದ ಕುಟುಂಬ ಅವರದ್ದು. ಪ್ರಾರಂಭಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಸೀತಾರಾಂ ಮುಂದೆ ಬೆಂಗಳೂರು ನ್ಯಾಷನಲ್ ಕಾಲೇಜಿನ ವಿದಾರ್ಥಿಯಾದರು. ಬಿ.ಎಸ್ಸಿ, ಬಿ.ಎಲ್ ಓದಿದ ಅವರು ತಾವು ತಮ್ಮ ಹಲವು ಧಾರಾವಾಹಿಗಳಲ್ಲಿ ಕಂಡಂತೆಯೇ ನ್ಯಾಯವಾದದ ಕಾಯಕವನ್ನು ಒಂದಷ್ಟು ನಡೆಸಿದರಾದರೂ, ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು. ಲೋಹಿಯಾ ತತ್ತ್ವಗಳನ್ನು ನಂಬಿದವರಾದ ಸೀತಾರಾಂ, ತಮ್ಮ ಬದುಕು ಮತ್ತು ಕಾರ್ಯ ಕ್ಷೇತ್ರಗಳೆಲ್ಲದರಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಂಡು ಬಂದ ಅಪೂರ್ವ ವ್ಯಕ್ತಿತ್ವದವರು.
1969ರ ಸುಮಾರಿನಲ್ಲಿ ಟಿ. ಎನ್. ಸೀತಾರಾಂ ಅವರ ಪ್ರಥಮ ಬರಹ ಪ್ರಕಟಗೊಂಡಿತು. ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲಿ ಚಿಗುರಿದ ಅವರ ಪ್ರಥಮ ನಾಟಕ ‘ಯಾರಾದರೇನಂತೆ?’. ನಂತರದ ದಿನಗಳಲ್ಲಿ ಮೂಡಿ ಬಂದಿದ್ದ ‘ಮನ್ನಿಸು ಪ್ರಭುವೆ’. ಈ ಎರಡೂ ನಾಟಕಗಳು ಅವರಿಗೆ ಹೆಸರು ಮತ್ತು ಪ್ರಶಸ್ತಿಗಳನ್ನು ತಂದಿತು. ಮುಂದೆ ಬಂದ ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ನೂರಾರು ಪ್ರಯೋಗಗಳನ್ನು ಕಂಡು ಜನಪ್ರಿಯಗೊಂಡಿವೆ. ಈ ನಾಟಕಗಳು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಗೊಂಡಷ್ಟು ವ್ಯಾಪ್ತಿ ಪಡೆದಂತಹವು. 300ಕ್ಕೂ ಹೆಚ್ಚು ಯಶಸ್ವೀ ಪ್ರಯೋಗ ಕಂಡ ‘ಆಸ್ಪೋಟ’ ನಾಟಕ, ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದ ಕೃತಿಯೂ ಹೌದು. ಅದು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿ, ದೂರದರ್ಶನದ ಟೆಲಿ ಧಾರಾವಾಹಿಯಾಗಿ ಸಹಾ ಹೆಸರಾಗಿತ್ತು. ನಮ್ಮೊಳಗೊಬ್ಬ ನಾಜೂಕಯ್ಯ ನಾಟಕವೂ ಕೂಡ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಗೆ ಪಾತ್ರವಾದ ಕೃತಿ.
ಸೀತಾರಾಂ ಅವರ 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಕ್ರೌರ್ಯ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಆ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.
ಎಲ್ಲೆಲ್ಲಿಯೂ ಸಂದ ಸೀತಾರಾಂ ರಂಗಭೂಮಿ, ಚಲನಚಿತ್ರ, ಕಿರುತೆರೆಯ ನಟರಾಗಿಯೂ ಸಾಕಷ್ಟು ಹೆಸರು ಮಾಡಿದವರು. ಆದ್ದಾಗ್ಯೂ ಪಿ. ಲಂಕೇಶರನ್ನು ಗುರುಗಳನ್ನಾಗಿ ಭಾವಿಸಿದ್ದ ಸೀತಾರಾಂ, ಲಂಕೇಶರ ಮಾರ್ಗದರ್ಶನದಂತೆ ತಮ್ಮನ್ನು ವ್ಯಾಪಾರೀ ಚಲನಚಿತ್ರಗಳಲ್ಲಿ ಕಳೆದುಹೋಗದಂತೆ ಎಚ್ಚರವಹಿಸಿಕೊಂಡವರು. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಪಲ್ಲವಿ’ ಚಿತ್ರದ ನಾಯಕರಾಗಿ ಅಭಿನಯಿಸಿದ್ದ ಸೀತಾರಾಂ, ಆ ಚಿತ್ರಕ್ಕೆ ಲಂಕೇಶರೊಂದಿಗೆ ಚಿತ್ರಕತೆ ಮತ್ತು ಸಂಭಾಷಣೆ ರಚನೆಯಲ್ಲೂ ಕಾರ್ಯನಿರ್ವಹಿಸಿದ್ದರು.
ಸೀತಾರಾಂ ಪುಟ್ಟಣ್ಣ ಕಣಗಾಲರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾದವರು. ಪುಟ್ಟಣ್ಣನವರ ‘ಮಾನಸ ಸರೋವರ’ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ‘ಪಂಚಮವೇದ’ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಆರ್. ಕೆ ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿ ಆಧಾರಿತ ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರಕ್ಕೂ ಸೀತಾರಾಂ ಅವರ ಸಂಭಾಷಣೆಯಿತ್ತು. 1991ರಲ್ಲಿ ಆ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತು.
ಸೀತಾರಾಮ್ ನಿರ್ದೇಶಿಸಿದ ಮೊದಲ ಚಲನಚಿತ್ರ ಎಸ್. ಎಲ್. ಭೈರಪ್ಪನವರ ‘ಮತದಾನ’ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರವೆಂಬ ಮನ್ನಣೆ – ಪ್ರಶಸ್ತಿಗೆ ಪಾತ್ರವಾಯಿತು. ಅವರ ನಿರ್ದೇಶನದ ಮತ್ತೊಂದು ಸದಭಿರುಚಿಯ ಚಲನಚಿತ್ರ ‘ಮೀರಾ, ಮಾಧವ, ರಾಘವ’.
ಮುಂದಿನದು ಸೀತಾರಾಂ ಅವರು ಎಲ್ಲೆಲ್ಲೂ ಹೆಸರಾಗಿರುವ ಕಿರುತೆರೆಯ ಬೃಹತ್ ಕ್ಷೇತ್ರ. ಸೀತಾರಾಂ ಅವರು ಕಿರುತೆರೆಗೆ ನಿರ್ಮಿಸಿದ ಟಿ.ಪಿ. ಕೈಲಾಸಂ, ಆಸ್ಫೋಟ, ಮುಖಾಮುಖಿ, ಪತ್ತೇದಾರ ಪ್ರಭಾಕರ, ಕಾಲೇಜುತರಂಗ, ಎಲ್ಲ ಮರೆತಿರುವಾಗ, ನಾವೆಲ್ಲರೂ ಒಂದೇ, ದಶಾವತಾರ, ಕಾಮನಬಿಲ್ಲು, ಕತೆಗಾರ, ಜ್ವಾಲಾಮುಖಿ ಧಾರಾವಾಹಿಗಳು ಅತ್ಯಂತ ಮೆಚ್ಚುಗೆ ಗಳಿಸಿದಂತಹವು.
ಸೀತಾರಾಂ ಅವರು ಬೆಂಗಳೂರು ದೂರದರ್ಶನಕ್ಕಾಗಿ ನಿರ್ದೇಶಿಸಿದ ‘ಮಾಯಾಮೃಗ’ ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯಗೊಂಡಿದೆ. ಇಂದಿನ ದಿನಗಳಲ್ಲೂ ಪುನಃ ಪ್ರದರ್ಶನಗೊಳ್ಳುವಷ್ಟು ಜನಪ್ರಿಯ ಧಾರಾವಾಹಿ ಇದಾಗಿದೆ.
ಮುಂದೆ ಖಾಸಗಿ ವಾಹಿನಿಯಲ್ಲಿ 484 ಕಂತುಗಳಲ್ಲಿ ಪ್ರಸಾರಗೊಂಡು ಜನಪ್ರಿಯವಾದಂತಹವು ‘ಮನ್ವಂತರ’ ಮತ್ತು ‘ಮುಕ್ತ’ ಜನಪ್ರಿಯವಾದ ಧಾರಾವಾಹಿಗಳು. ಪ್ರಸಕ್ತದಲ್ಲಿ ಅವರ ‘ಮಗಳು ಜಾನಕಿ’ ಧಾರಾವಾಹಿ ಜನಪ್ರಿಯ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಗಳಲ್ಲಿನ ಚುರುಕಿನ ಸಂಭಾಷಣೆ, ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುವ ವಿಧಾನ ವೀಕ್ಷಕರನ್ನು ಸಾಮಾಜಿಕ ಸಮಸ್ಯೆಗಳತ್ತ ಗಂಭೀರವಾಗಿ ಚಿಂತಿಸುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ಸೀತಾರಾಂ ಅವರು ನ್ಯಾಯಾಲಯದ ದೃಶ್ಯಗಳನ್ನು ಜೋಡಿಸುವ ವಿಧಾನ, ಜಾಣ್ಮೆಯ ಮಾತುಗಳು ಪ್ರಜ್ಞಾವಂತರಲ್ಲಿ ಸಹಾ ಸಂಚಲನೆಯನ್ನು ತರುವಂಥವು.
ಇಂದು ಕಲಾರಂಗದಲ್ಲಿರುವ ಅನೇಕರು ಟಿ.ಎನ್. ಸೀತಾರಾಂ ಅವರ ಗರಡಿಯಲ್ಲಿ ಬೆಳೆದಂತಹವರು. ತಾವಿರುವ ಸಮಾಜಕ್ಕೆ ಸದಭಿರುಚಿಯಲ್ಲಿ ಮತ್ತು ಸೃಜನಶೀಲತೆಯಲ್ಲಿ ಬದ್ಧರಾಗಿರುವ ನಮ್ಮ ಟಿ. ಎನ್. ಸೀತಾರಾಂ ಅವರ ಕಾರ್ಯ ನಮ್ಮ ಬದುಕನ್ನು ನಿರಂತರ ಪ್ರೇರಿಸುತ್ತಿರಲಿ ಮತ್ತು ಅವರ ಬದುಕು ಸುಂದರವಾಗಿರಲಿ ಎಂದು ಆಶಿಸುತ್ತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
*****
ಎಸ್. ಎಲ್. ಭೈರಪ್ಪ
ನಮ್ಮ ಕಾಲದ ಮಹಾನ್ ಕಾದಂಬರಿಕಾರರಾದ 'ಡಾ.ಎಸ್.ಎಲ್. ಭೈರಪ್ಪ'ನವರು ಜನಿಸಿದ್ದು 1931ರ ಆಗಸ್ಟ್ 20ರಂದು ಜನಿಸಿದರು.
ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು. 1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕನ್ನಡಿಗರಿಗೆ ನೀಡಿವೆ. ಅವರ ಪ್ರತಿ ಕಾದಂಬರಿಯೂ ಪುನರ್ ಮುದ್ರಣಗಳನ್ನು ಕಾಣುತ್ತಲೇ ಇರುವುದು ಅವರ ಜನಪ್ರಿಯತೆಗೆ ಅಷ್ಟೇ ಅಲ್ಲ, ಅವರ ಬರಹಗಳಲ್ಲಿನ ಸತ್ವದ ಸಾರ್ವಕಾಲಿಕತೆಯ ಪ್ರತೀಕವೂ ಆಗಿದೆ. ಭೈರಪ್ಪನವರ ಬರಹಗಳಲ್ಲಿ ಒಬ್ಬ ಶ್ರೇಷ್ಠ ಸಂಶೋಧನಕಾರನ ಸತ್ಯಾನ್ವೇಷಣೆ, ಇತಿಹಾಸದ ಬಗೆಗಿನ ಸುದೀರ್ಘ ಅಧ್ಯಯನ, ಭಾರತೀಯ ಸಂಸ್ಕೃತಿಯ ಆಳವಾದ ಪ್ರಜ್ಞೆಗಳು ವಿಶಿಷ್ಟವಾಗಿ ಕಂಗೊಳಿಸುತ್ತಿದ್ದು, ಸಾಮಾನ್ಯ ಓದುಗನಿಗೆ ಅದರ ಅನುಭಾವದ ಸಿಂಚನ ನೀಡುವುದರ ಜೊತೆಗೆ ವಿದ್ವಾಂಸರ ಮನಮೆಚ್ಚುಗೆಯನ್ನೂ ಪಡೆದಿವೆ.
ಚನ್ನರಾಯಪಟ್ಟಣದ ಬಳಿಯ ಸಂತೆ ಶಿವರದಲ್ಲಿ ಜನಿಸಿದ ಸಂತೆ ಶಿವರದ ಭೈರಪ್ಪನವರು, ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ ಈ ಎಲ್ಲಾ ಪ್ರತೀಕೂಲ ಸಂದರ್ಭಗಳ ನಡುವೆಯೂ ಸಣ್ಣವಯಸ್ಸಿನಿಂದಲೇ, ಅವರ ‘ಗೃಹಭಂಗ’ ಕಾದಂಬರಿಯಲ್ಲಿ ನಂಜಮ್ಮನ ಪಾತ್ರದಲ್ಲಿ ಕಾಣಬಹುದಾದ, ತಮ್ಮ ತಾಯಿಯಲ್ಲಿದ್ದ ಧೀಮಂತತೆಯನ್ನು ಮೈಗೂಡಿಸಿಕೊಂಡರು. ವಯಸ್ಸು 5ರ ಆಸು ಪಾಸಿನಲ್ಲಿ ಅವರ ತಾಯಿಯೂ ಬಡತನ - ಪ್ಲೇಗ್‍ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಬದುಕಿನ ವಿಶ್ವ ವಿಶಾಲತೆಯ ಈ ರಂಗದಲ್ಲಿ ತಮ್ಮ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳತೊಡಗಿದರು. ಅವರ ಗೃಹಭಂಗ, ಅನ್ವೇಷಣ ಕಾದಂಬರಿಗಳು ಮತ್ತು ಭಿತ್ತಿ ಎಂಬ ಅವರ ಆತ್ಮಚರಿತ್ರೆಯಲ್ಲಿನ ಅವರ ಬದುಕಿನ ಈ ಭಾಗಗಳನ್ನು ಓದುವುದೇ ಒಂದು ರೋಮಾಂಚನಕಾರಿ ಅನುಭವ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಕಷ್ಟಗಳನ್ನು ಅನುಭವಗಳನ್ನಾಗಿ ಪರಿವರ್ತಿಸಿಕೊಂಡು, ಇಡೀ ವ್ಯವಸ್ಥೆಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬದುಕಬಹುದು ಎಂಬುದಕ್ಕೆ ಭೈರಪ್ಪನವರ ಸಾಧನೆಗಳು ಒಂದು ಮಹಾನ್ ನಿದರ್ಶನವಾಗಬಲ್ಲವು.
ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾವು ಹುಟ್ಟಿದ ಹಳ್ಳಿಯಲ್ಲಿ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭೈರಪ್ಪನವರು ಸಾಗಿಸಿದರು. ಶುದ್ಧಮೌಲ್ಯಗಳ ದೃಷ್ಟಿಯಿಂದ ಗಾಂಧೀಜಿ ಒಬ್ಬರನ್ನೇ ಮಹೋನ್ನತ ನಾಯಕರೆಂದು ಪರಿಗಣಿಸುವ ಭೈರಪ್ಪನವರು ಕೇವಲ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಂಡದ ಲಾರಿಗಳನ್ನು ತಡೆದು ಪೋಲೀಸ್ ಸ್ಟೇಷನ್ನಿಗೆ ಹೋದವರೂ, ಭಾಷಣಗಳನ್ನು ಮಾಡಿದವರೂ ಆಗಿದ್ದಾರೆ.
ಮೈಸೂರಿನ ಹಲವು ಹಾಸ್ಟೆಲುಗಳು ಮತ್ತು ಅಂದಿನ ಕೆಲವೊಂದು ಸಜ್ಜನರ ಕೃಪೆಗಳಲ್ಲಿ ಬದುಕು ಸಾಗಿಸಿದ ಎಸ್. ಎಲ್. ಭೈರಪ್ಪನವರು ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ. ಆನರ್ಸ್ ಪದವಿ ಗಳಿಸಿದರು. 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಪ್ರಥಮ ಶ್ರೇಣಿಯ ಸಾಧನೆ ಮಾಡಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಗಳಿಸಿದರು. ಎಂ. ಎ. ವಿದ್ಯಾಭ್ಯಾಸದ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, ಅನಂತರ 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1967ರಿಂದ 1971ರ ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ತತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ 1991ರಲ್ಲಿ ನಿವೃತ್ತರಾದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ನಾಡಿನಲ್ಲಿ ಸಾಮಾಜಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿರುವ ಡಾ. ಎಸ್. ಎಲ್. ಭೈರಪ್ಪನವರ ಹೆಚ್ಚಿನ ಆಸಕ್ತಿ ಕ್ಷೇತ್ರವೆಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಅವರ ‘ಮಂದ್ರ’ ಕಾದಂಬರಿಯಲ್ಲಿ ಸಂಗೀತದ ಕುರಿತಾದ ಆಸಕ್ತಿಗಳ ಸುದೀರ್ಘ ವಿಸ್ತಾರವನ್ನೇ ಕಾಣಬಹುದು. ಅವರು ‘ಗಂಗೂಬಾಯ್ ಹಾನಗಲ್’ ಎಂಬ ಗ್ರಂಥದ ಸಂಪಾದನೆಯನ್ನು ಮಾಡಿದ್ದಾರೆ ಎಂಬುದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.
ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ಬದುಕಿನ ಪಾತ್ರಗಳು ಎಲ್ಲೆಲ್ಲೂ ನಮ್ಮ ಕಣ್ಣ ಮುಂದೆ ಕಾಣುತ್ತಿರುವ ವ್ಯಕ್ತಿಗಳ ಹಾಗೇ ಇರುತ್ತವೆ. ಇದು ಅವರ ಮಹಾಭಾರತವನ್ನು ಇಂದಿನ ಕಾಲಕ್ಕೆ ಹೊಂದಿಸಿ ನೋಡುವಂತಹ 'ಪರ್ವ' ಕಾದಂಬರಿಯಂತಹ ಪಾತ್ರಗಳಲ್ಲೂ ಕಾಣಬರುತ್ತವೆ. ಅವರ ಕಾದಂಬರಿಗಳ ಭಾಷೆಯಲ್ಲಿರುವ ಗ್ರಾಮೀಣ, ನಗರ ಮತ್ತು ಇತ್ತೀಚಿನ ಆಧುನಿಕತೆಯವರೆಗಿನ ವರಸೆಯ ಸೊಗಡುಗಳಂತೂ ನಮ್ಮನ್ನು ಅಪೂರ್ವ ರೀತಿಯಲ್ಲಿ ಹಿಡಿದಿಟ್ಟುಕೊಂಡುಕೊಂಡು ಬಿಡುತ್ತವೆ. ಅವರ ಪ್ರತಿಯೊಂದು ಕಾದಂಬರಿಯೂ ನಾವು ಅದನ್ನು ತೆರೆದಾಗಿನಿಂದ ಅದನ್ನು ಓದು ಮುಗಿಸುವ ತನಕ ಕೆಳಗಿರಿಸಲು ಬಿಡುವುದೇ ಇಲ್ಲ. ಅಂತಹ ಭಾಷೆಯ ಸೊಗಸು, ಪಾತ್ರ ವ್ಯವಸ್ಥೆ ಮತ್ತು ಅಪೂರ್ವ ಕಥಾನಕಗುಣ ಅವರ ಬರಹಗಳಲ್ಲಿದೆ. ಇಷ್ಟು ತೀವ್ರವಾಗಿ ಓದುಗರನ್ನು ಆವರಿಸುವ ಕಥಾ ಶೈಲಿ, ಓದುಗರನ್ನು ಯಾವುದೋ ಭಾವುಕತೆ, ತಲ್ಲೀನತೆ, ಚಿಂತನೆಗೆ ಒಡ್ಡುವ ಮನೋಜ್ಞತೆ, ಸಾಹಿತ್ಯ ಲೋಕದಲ್ಲಿಯೇ ಅಪರೂಪವಾಗಿದ್ದು, ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.
ಆಧ್ಯಾತ್ಮ, ಮನಃ ಶಾಸ್ತ್ರ, ಮತ್ತು ತರ್ಕ ಶಾಸ್ತ್ರ, ಸಮಾಜ ಶಾಸ್ತ್ರ, ನ್ಯಾಯಮೀಮಾಂಸೆ, ಸೌಂದರ್ಯ ಮೀಮಾಂಸೆ, ಇತಿಹಾಸ, ವಿಜ್ಞಾನ, ರಾಜಕೀಯ ಘಟನೆಗಳು, ವೇದ ಪುರಾಣಗಳು ಇವು ನಮ್ಮ ಚಿಂತನೆಗಳಲ್ಲಿ ಹುಟ್ಟಿಸುವ ತಾದ್ಯಾತ್ಮಗಳು ಮತ್ತು ಅವುಗಳು ವಿವಿಧ ಮನಸ್ಸುಗಳ ನಡುವೆ ತರುವ ಸಂಘರ್ಷಗಳನ್ನು ಓದುಗನ ಅನುಭಾವಕ್ಕೆ ತರುವ ಎಸ್. ಎಲ್. ಭೈರಪ್ಪನವರ ಮೋಡಿಗೆ ಸಿಗದ ಓದುಗ ಮನಸ್ಸುಗಳೇ ಇಲ್ಲವೆನ್ನಬೇಕು. ಕನ್ನಡವಲ್ಲದೆ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳ, ತಮಿಳು, ತೆಲುಗು, ಇಂಗ್ಲೀಷ್ ಭಾಷೆಗಳಿಗೂ ತರ್ಜುಮೆಗೊಂಡ ಅವರ ಕೃತಿಗಳ ಸಾಲು ಸಾಲುಗಳು ಅವು ಹೇಗೆ ಭಾಷೆಯ ಗಡಿಯನ್ನೂ ದಾಟಬಲ್ಲವು ಎಂಬುದಕ್ಕೆ ಸಾಕ್ಷಿ.
ಭಾರತದಂತಹ ಹಲವು ಧರ್ಮಗಳ ಪರಂಪರೆಯ, ಮಾರ್ಕ್ಸ್, ಕಮ್ಯುನಿಸ್ಟ್, ಸಮಾಜವಾದ, ಪ್ರಜಾಪ್ರಭುತ್ವ, ಬಂಡವಾಳಶಾಹಿ, ಬಹು ರಾಜಕೀಯ ವ್ಯವಸ್ಥೆ, ಅಂತರರಾಷ್ಟ್ರೀಯ ಮಾರುಕಟ್ಟೆ ಪರಿಣಾಮ ಇತ್ಯಾದಿ ಹತ್ತು ಹಲವು ಚಿಂತನೆಗಳ ಬದುಕಿನ ರೀತಿ ಮತ್ತು ವೈರುಧ್ಯಗಳ ಸಮಾಜದಲ್ಲಿ, ಭೈರಪ್ಪನವರು ಎಲ್ಲ ರೀತಿಯ ವಿಚಾರಗಳನ್ನು ಮುಕ್ತತೆ, ಸತ್ಯದ ಆಧಾರತೆ ಮತ್ತು ನಿಷ್ಠುರತೆಗಳೊಂದಿಗೆ ಮಂಡಿಸುವುದರೊಂದಿಗೆ ಹಲವು ರೀತಿಯ ಟೀಕಾಕಾರರಿಗೆ ಯಾವುದೇ ರೀತಿಯ ಸೊಪ್ಪು ಹಾಕದೆ ಸ್ಪಷ್ಟ ಉತ್ತರಗಳನ್ನೂ ನೀಡುತ್ತಾ ಸಾಗಿದ್ದಾರೆ.
ಭೈರಪ್ಪನವರ ಸಾಹಿತ್ಯಸೃಷ್ಟಿಯ ಕಾರ್ಯ ಅವರು ಹೈಸ್ಕೂಲಿನಲ್ಲಿದ್ದಾಗ ಹಾಸ್ಟೆಲ್ ಮ್ಯಾಗಜೈನಿಗೆ ಕೆಲವು ಕಥೆಗಳನ್ನು ಬರೆಯುವುದರಿಂದ ಪ್ರಾರಂಭವಾಯಿತು. ಇಂಟರ್ ಮೀಡಿಯಟ್ ಓದುತ್ತಿದ್ದಾಗಲೇ ‘ಗತಜನ್ಮ’ ಎಂಬ ನೀಳ್ಗತೆ, ‘ಭೀಮಕಾಯ’ ಮತ್ತು ‘ಬೆಳಕು ಮೂಡಿತು’ ಎಂಬ ಎರಡು ಕಾದಂಬರಿಗಳನ್ನು ಅವರು ಬರೆದಿದ್ದರು. ಈ ಕೃತಿಗಳು ಅಪಕ್ವವಾಗಿದ್ದವು, ಅಲ್ಲದೆ ಅನಕೃ ಅವರ ಪ್ರಭಾವವಿತ್ತು ಎಂದು ಸ್ವತಃ ಅಭಿಪ್ರಾಯ ಪಡುವ ಭೈರಪ್ಪನವರು, ಅವರ ಬರಹದ ಲೋಕವನ್ನು 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ’ಯಿಂದ ಪರಿಗಣಿಸುತ್ತಾರೆ.
ಬದುಕು ಮತ್ತು ಅನುಭವಗಳ ಸಂಕೀರ್ಣತೆಯನ್ನು ಗ್ರಹಿಸಲು ಮತ್ತು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾದಂಬರಿ ಉಪಯುಕ್ತ ಮಾಧ್ಯಮ ಎಂದು ಭಾವಿಸುವ ಭೈರಪ್ಪನವರು ‘ಧರ್ಮಶ್ರೀ’ಯಿಂದ ಮೊದಲ್ಗೊಂಡು 'ಉತ್ತರಕಾಂಡ'ದವರೆಗೆ ಇಪ್ಪತ್ಮೂರು ಮಹತ್ವಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ. ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’, ‘ನಿರಾಕರಣ’, ‘ಗ್ರಹಣ’, ‘ದಾಟು’, ‘ಅನ್ವೇಷಣ’, ‘ಪರ್ವ’, ‘ನೆಲೆ’, ‘ಸಾಕ್ಷಿ’, ‘ಅಂಚು’, ‘ತಂತು’, ‘ಸಾರ್ಥ’, ‘ಮಂದ್ರ’, ‘ಆವರಣ’, ‘ಕವಲು’ , 'ಯಾನ', 'ಉತ್ತರಕಾಂಡ' ಇವು ಡಾ. ಎಸ್. ಎಲ್. ಭೈರಪ್ಪನವರ ಇದುವರೆಗಿನ ಪ್ರಕಟಿತ ಕಾದಂಬರಿಗಳು. ಭೈರಪ್ಪನವರ ಬಹುತೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಮರಾಠಿಯಂತಹ ಹಲವು ಭಾಷಿಗರಂತೂ ಭೈರಪ್ಪನವರನ್ನು ತಮ್ಮ ಭಾಷೆಯ ಶ್ರೇಷ್ಠ ಕೃತಿಗಾರರಂತೆಯೇ ಅಭಿಮಾನಿಸುತ್ತಾರೆ.
ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ಸಹಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆಗಟ್ಟಿನಿಂತಿದೆ.
ಡಾ. ಎಸ್. ಎಲ್. ಭೈರಪ್ಪನವರ ಇತರ ಕನ್ನಡ ಗ್ರಂಥಗಳೆಂದರೆ ಸಾಹಿತ್ಯ ಮೀಮಾಂಸೆಗೆ ಸೇರಿದ ‘ಸಾಹಿತ್ಯ ಮತ್ತು ಪ್ರತೀಕ’, ‘ಕಥೆ ಮತ್ತು ಕಥಾವಸ್ತು’, ‘ನಾನೇಕೆ ಬರೆಯುತ್ತೇನೆ’ ಎಂಬ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಗ್ರಹ; ಪ್ರೌಢ ಪ್ರಬಂಧವಾದ ಸೌಂದರ್ಯ ಮತ್ತು ಮೀಮಾಂಸೆಗೆ ಸಂಬಂಧಿಸಿದ ‘ಸತ್ಯ ಮತ್ತು ಸೌಂದರ್ಯ’ ಕೃತಿ ಮತ್ತು ಆತ್ಮವೃತ್ತಾಂತವಾದ ‘ಭಿತ್ತಿ’. ಬಹಳಷ್ಟು ಸಂಶೋಧನಾ ಲೇಖನಗಳನ್ನೂ ಭೈರಪ್ಪನವರು ಬರೆದಿರುವುದಲ್ಲದೆ ‘ವಿದ್ಯಾಭ್ಯಾಸದಲ್ಲಿ ಸಮಾನಾವಕಾಶ’, ‘ಭಾರತೀಯ ಶಿಕ್ಷಣದಲ್ಲಿ ಮೌಲ್ಯಗಳ ಸ್ಥಾನ ಮತ್ತು ವ್ಯಕ್ತಿತ್ವ’, ‘ಚಾರಿತ್ರಿಕ ವಿಕಾಸದಲ್ಲಿ ತತ್ವಶಾಸ್ತ್ರ’ ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ. ‘ಸಾಕ್ಷೀಭಾವ’ ಎಂಬ ಭೈರಪ್ಪನವರ ಅಂಕಣದಲ್ಲಿ ಮೂಡಿದ ನಮ್ಮ ಕಾಲದ ರಾಜಕೀಯ, ಆರ್ಥಿಕ, ಸಾಮಾಜಿಕ, ಚಾರಿತ್ರಿಕ ಚಿಂತನೆಗಳು ವಿವಿಧ ರೀತಿಯಲ್ಲಿ ಓದುಗರ ಗಮನ ಸೆಳೆದು ಜನಪ್ರಿಯಗೊಂಡಿವೆ.
ಇತ್ತೀಚಿನ ವರ್ಷದಲ್ಲಿ ಸಂದಿರುವ ಪದ್ಮಶ್ರೀ ಪ್ರಶಸ್ತಿ, ಸಾಹಿತ್ಯಕ ಹಿರಿಯ ಪ್ರಶಸ್ತಿ 'ಸರಸ್ವತಿ ಸಂಮಾನ್' ಸೇರಿದಂತೆ ಹಲವು ರೀತಿಯ ಮನ್ನಣೆಗಳು, ಪ್ರಶಸ್ತಿಗಳು ಭೈರಪ್ಪನವರಿಗೆ ಬಂದಿವೆ. ಜ್ಞಾನಪೀಠ ಅವರಿಗೆ ಇನ್ನೂ ಸಂದಿಲ್ಲ ಎಂಬ ಬಗ್ಗೆ ಅವರ ಸಾಹಿತ್ಯ ಪ್ರೇಮಿಗಳಿಗೆ ಅಸಹನೆಯಿದೆ. ಪ್ರಶಸ್ತಿಗಳು ಕೇವಲ ಒಂದೆರಡು ದಿನದ ಉತ್ಸವಗಳಿಗಿಂತ ಮೇಲೆ ಮುಟ್ಟಲಾರವು. ಆದರೆ ಓದುಗರ ಹೃದಯಾಂತರಾಳವನ್ನು ಇಷ್ಟು ಅದಮ್ಯವಾಗಿ ಆಕ್ರಮಿಸಿಕೊಂಡಿರುವ ಮತ್ತೊಬ್ಬ ಬರಹಗಾರರಿಲ್ಲ ಎಂಬುದು ಮಾತ್ರ ಸಾರ್ವಕಾಲಿಕ ಸತ್ಯ.
ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವ ಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭಾವ ಇದರ ಬಗ್ಗೆಯೇ ಹಲವಾರು ಗ್ರಂಥಗಳು ಮೂಡಬಹುದಾದಷ್ಟು ಸಾಹಿತ್ಯ ವಲಯದಲ್ಲಿ ವಿವಿಧ ಚಿಂತಕರ ಅಭಿಪ್ರಾಯಗಳು ಪ್ರಚಲಿತವಿದೆ.
ಭೈರಪ್ಪನವರ ಕಾದಂಬರಿಗಳನ್ನು ಅವಲೋಕಿಸಿದವರಿಗೆ, ಅವರು ಕನ್ನಡ ಕಾದಂಬರಿ ಲೋಕಕ್ಕೆ ವಿಶಿಷ್ಟ ಕಾಣಿಕೆಗಳನ್ನು ನೀಡಿ, ಕಾದಂಬರಿಯನ್ನು ಲಘು ಮನರಂಜನೆಯ ಮಟ್ಟದಿಂದ ಮಹಾಕಾವ್ಯದ ಮಟ್ಟಕ್ಕೆ ಕರೆದೊಯ್ದ ಬೆರಳೆಣಿಕೆಯಷ್ಟು ಮಹಾನ್ ಲೇಖಕರಲ್ಲಿ ಒಬ್ಬರಾಗಿದ್ದಾರೆ ಎನಿಸದಿರದು. ಕನ್ನಡದಲ್ಲಿ ಚದುರಂಗ, ಕುವೆಂಪು, ಗೋಕಾಕ್, ರಾವ್ ಬಹದ್ದೂರ್, ಅನಕೃ, ಕಟ್ಟೀಮನಿ, ದೇವುಡು, ಶ್ರೀರಂಗ, ಮೊದಲಾದವರು ತಮ್ಮ ಬಾಳಿನ ಒಂದೆರಡು ಉತ್ಕಟ ಕ್ಷಣಗಳ ಪರಿಣಾಮವಾಗಿ ಒಂದು ಅಥವಾ ಎರಡು ಮೇರು ಕೃತಿಗಳನ್ನು ಕನ್ನಡ ಕಾದಂಬರಿ ಲೋಕಕ್ಕೆ ನೀಡಿದ್ದರೆ, ಕಾರಂತರಂತೆ ಭೈರಪ್ಪನವರು ಹಲವಾರು ಬೃಹತ್ತಾದ, ಮಹತ್ತಾದ ಅತಿ ಶ್ರೇಷ್ಠ ಗದ್ಯ ಮಹಾಕಾವ್ಯಗಳನ್ನು ಅರ್ಥಾತ್ ಕಾದಂಬರಿಗಳನ್ನು ನೀಡಿದವರು.
ಪ್ರಾದೇಶಿಕ ಭಾಷೆಯನ್ನು ವೈವಿಧ್ಯಮಯವನ್ನಾಗಿ, ಗ್ರಾಂಥಿಕ ಭಾಷೆಯನ್ನು ಚಿಂತನದ ಎಲ್ಲ ಹಂತಗಳನ್ನೂ ನಿರೂಪಿಸುವ ಹಾಗೆ ಬಳಸಿರುವುದು ಭೈರಪ್ಪನವರ ಕೃತಿಗಳ ವೈಶಿಷ್ಟ್ಯವಾಗಿವೆ. ಶ್ರೇಷ್ಠ ತತ್ವಶಾಸ್ತ್ರ ಗ್ರಂಥಗಳು ಕಾದಂಬರಿ ರೂಪದಲ್ಲಿ ಕಾಣಿಸಿಕೊಂಡಿವೆಯೇನೋ ಎಂಬಷ್ಟರಮಟ್ಟಿಗೆ ವೈಚಾರಿಕತೆ ದಟ್ಟವಾಗಿ, ವಿಪುಲವಾಗಿ ಭೈರಪ್ಪನವರ ಬರಹಗಳಲ್ಲಿ ಚಿತ್ರಿತವಾಗಿವೆ.
ಈ ಮಹಾನ್ ಕಾದಂಬರಿಕಾರರು ಕಳೆದ ಆರು ದಶಕಗಳಲ್ಲಿ ಕನ್ನಡದ ಓದುಗರ ಹೃದಯ ಸಿಂಹಾಸನವನ್ನು ಆಳುತ್ತಿರುವ ಪರಿ ಅನನ್ಯವಾದದ್ದು. ಈ ಬರಹಗಳು ಮುಂದೂ ನಿರಂತರವಾಗಿ ಮೂಡುತ್ತಿರಲಿ. ಭೈರಪ್ಪನವರು ನಮ್ಮೊಂದಿಗೆ ಸುಧೀರ್ಘ ಕಾಲ, ನಿತ್ಯ ಸಂತಸದಲ್ಲಿ ರಾರಾಜಿಸುತ್ತಿರಲಿ. ಈ ಮಹಾನ್ ಬರವಣಿಗೆಯ ಸರಸ್ವತೀ ಶಕ್ತಿಗೆ ಶಿರಬಾಗಿ ನಮನಗಳು. ಈ ಪುಣ್ಯ ನಮ್ಮೊಂದಿಗೆ ಬಹುಕಾಲದವರೆಗೆ ನೆಲೆ ನಿಂತಿರಲಿ ಎಂದು ಆಶಿಸುತ್ತಾ ಡಾ. ಎಸ್. ಎಲ್. ಭೈರಪ್ಪನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು
*********
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ
ಜನನ - ೧೮೯೬ ಜನವರಿ ೩೧, ಧಾರವಾಡ
ಮರಣ - ೧೯೮೧ ಅಕ್ಟೋಬರ ೨೬, ಮುಂಬಯಿ
ಕಾವ್ಯನಾಮ - ಅಂಬಿಕಾತನಯದತ್ತ
ವೃತ್ತಿ - ವರಕವಿ, ಶಿಕ್ಷಕರು
ರಾಷ್ಟ್ರೀಯತೆ - ಭಾರತೀಯ 🇮🇳
ಕಾಲ - (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿ - ಕಥೆ, ಕವನ, ವಿಮರ್ಷೆ, ಅನುವಾದ
ವಿಷಯ - ಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ
ಸಾಹಿತ್ಯ ಚಳುವಳಿ - ನವೋದಯ
ಪ್ರಭಾವಗಳು - ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವಿಂದ್ರನಾಥ ಟಾಗೂರ್
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.
🌹 ಜೀವನ 🌹
ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.
⭕ ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
⭕ ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.
ಸಾಹಿತ್ಯ 🖊
⭕ ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
⭕ ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
⭕ ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
⭕ ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
⭕ ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.
👇 ಬೇಂದ್ರೆಯವರ ಸಾಹಿತ್ಯ 👇
🌹 ಕವನ ಸಂಕಲನ 🌹
(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು
▪೧೯೨೨: ಕೃಷ್ಣಾಕುಮಾರಿ;
▪೧೯೩೨: ಗರಿ;
▪೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
▪೧೯೩೭: ಸಖೀಗೀತ;
▪೧೯೩೮: ಉಯ್ಯಾಲೆ;
▪೧೯೩೮: ನಾದಲೀಲೆ;
▪೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
▪೧೯೪೬: ಹಾಡುಪಾಡು;
▪೧೯೫೧: ಗಂಗಾವತರಣ;
▪೧೯೫೬: ಸೂರ್ಯಪಾನ;
▪೧೯೫೬: ಹೃದಯಸಮುದ್ರ;
▪೧೯೫೬: ಮುಕ್ತಕಂಠ;
▪೧೯೫೭: ಚೈತ್ಯಾಲಯ;
▪೧೯೫೭: ಜೀವಲಹರಿ;
▪೧೯೫೭: ಅರಳು ಮರಳು;
▪೧೯೫೮: ನಮನ;
▪೧೯೫೯: ಸಂಚಯ;
▪೧೯೬೦: ಉತ್ತರಾಯಣ;
▪೧೯೬೧: ಮುಗಿಲಮಲ್ಲಿಗೆ;
▪೧೯೬೨: ಯಕ್ಷ ಯಕ್ಷಿ;
▪೧೯೬೪: ನಾಕುತಂತಿ;
▪೧೯೬೬: ಮರ್ಯಾದೆ;
▪೧೯೬೮: ಶ್ರೀಮಾತಾ;
▪೧೯೬೯: ಬಾ ಹತ್ತರ;
▪೧೯೭೦: ಇದು ನಭೋವಾಣಿ;
▪೧೯೭೨: ವಿನಯ;
▪೧೯೭೩: ಮತ್ತೆ ಶ್ರಾವಣಾ ಬಂತು;
▪೧೯೭೭: ಒಲವೇ ನಮ್ಮ ಬದುಕು;
▪೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
▪೧೯೮೨: ಪರಾಕಿ;
▪೧೯೮೨: ಕಾವ್ಯವೈಖರಿ;
▪೧೯೮೩: ತಾ ಲೆಕ್ಕಣಕಿ ತಾ ದೌತಿ;
▪೧೯೮೩: ಬಾಲಬೋಧೆ;
೧೯೮೬: ಚೈತನ್ಯದ ಪೂಜೆ;
▪೧೯೮೭: ಪ್ರತಿಬಿಂಬಗಳು;
ವಿಮರ್ಶೆ
▪೧೯೪೦: ಸಾಹಿತ್ಯಸಂಶೋಧನೆ;
▪೧೯೪೫: ವಿಚಾರ ಮಂಜರಿ;
▪೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
▪೧೯೫೯: ಮಹಾರಾಷ್ಟ್ರ ಸಾಹಿತ್ಯ;
ಸಾಯೋ ಆಟ (ನಾಟಕ)
▪೧೯೬೨: ಕಾವ್ಯೋದ್ಯೋಗ;
▪೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
▪೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
▪೧೯೭೬: ಕುಮಾರವ್ಯಾಸ ಪುಸ್ತಿಕೆ;
ಪ್ರಶಸ್ತಿ, ಪುರಸ್ಕಾರ, ಬಿರುದು 💐
▪೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
▪೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
▪೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
▪೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
▪೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
▪೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
*****
ಶ್ರೀಅಜಿತ್ಧೋವಲ್
ಯಾರಿವರು? ಸ್ವಲ್ಪದರಲ್ಲೇ ಪರಿಚಯ
ಮಾಡಹೊರಟರೂ ಜಾಗ ಸಾಲದು.
ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ,
"ಚಾಣಕ್ಯನಂತಹ ತಲೆ, ಬಾಜೀರಾವ್ ನಂತಹ ಧೈರ್ಯ".
1945 ರಲ್ಲಿ ಉತ್ತರಾಖಂಡದಲ್ಲಿರುವ ಗಢವಾಲಿ ಎಂಬಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನ್ಮ. ತಂದೆ ಭಾರತೀಯ ಸೈನ್ಯದಲ್ಲಿ ಬ್ರಿಗೇಡಿಯರ್ ಆಗಿದ್ದರು.
1968 ರಲ್ಲಿ IPS ಪರೀಕ್ಷೆ ಯಲ್ಲಿ ಟಾಪರ್. ಪ್ರಾರಂಭದಲ್ಲಿ ಕೇರಳ batch ನಲ್ಲಿ IPS ಅಧಿಕಾರಿ.
ಹದಿನೇಳು ವರ್ಷಗಳ ಅವಧಿಯ ನಂತರವೇ ಸಿಗಬಹುದಾದ ಮೆಡಲ್, ಕೇವಲ ಆರು ವರ್ಷಗಳಲ್ಲೇ ಪಡೆದಿದ್ದು ಅಸಾಮಾನ್ಯ ಸಾಧನೆ.
ಪಾಕಿಸ್ತಾನದಲ್ಲಿ ಗೂಢಚಾರನಾಗಿ ನೇಮಕಾತಿ. ಪಾಕಿಸ್ತಾನದ ಸೈನ್ಯದಲ್ಲಿ ಮಾರ್ಷಲ್ ಹುದ್ದೆ ಯು ವರೆಗೂ ಬಡ್ತಿ ಹಾಗೂ ಆರು ವರ್ಷಗಳ ಕಾಲ ಭಾರತದ ಪರ ಗೂಢಚಾರಿಕೆ. ಪಾಕಿಸ್ತಾನಕ್ಕೆ ಇದರ ವಾಸನೆಯೇ ಹತ್ತಲಿಲ್ಲ.
1987 ರಲ್ಲಿ, ಖಲಿಸ್ತಾನ ಆತಂಕದ ವೇಳೆ,
ಪಾಕಿಸ್ತಾನದ ಪರ ಗೂಢಚಾರನಾಗಿ ದರ್ಬಾರ್ ಸಾಹೀಬ್ ನಲ್ಲಿ ಪ್ರವೇಶ. ಮೂರು ದಿನ ಆತಂಕವಾದಿಗಳ ಜೊತೆ ವಾಸ. ಆತಂಕವಾದಿಗಳ ಎಲ್ಲ ಮಾಹಿತಿ ಸಂಗ್ರಹಿಸಿ operation black thunder ನ ಸಫಲತೆಗೆ ಮುಖ್ಯ ಕಾರಣರಾದದ್ದು.
1988 ರಲ್ಲಿ 'ಕೀರ್ತಿಚಕ್ರ' ಪ್ರಶಸ್ತಿ. ಈ ಪ್ರಶಸ್ತಿ ಪಡೆದ ಭಾರತದ ಏಕಮೇವ ಸೈನ್ಯೇತರ ವ್ಯಕ್ತಿ.
ನಂತರ ಆಸ್ಸಾಂ ಗೆ ರವಾನೆ. ಉಲ್ಫಾ ಆತಂಕವಾದಿಗಳ ದಮನ.
1999 ರಲ್ಲಿ ವಿಮಾನ ನಡೆದ ಅಪಹರಣದ ವೇಳೆ ಆತಂಕವಾದಿಗಳ ಜೊತೆ ಸಂಧಾನಕ್ಕಾಗಿ ಕಳಿಸಿದ್ದು ಇವರನ್ನೇ.
ನರೇಂದ್ರ ಮೋದಿ ಪ್ರಧಾನಿ ಆದ ತಕ್ಷಣ ಮಾಡಿದ ಮೊದಲ ಕೆಲಸ, ಅಜಿತ್ ರನ್ನು ರಾಷ್ಟ್ರೀಯ ರಕ್ಷಣಾ ಸಲಹಾಗಾರರನ್ನಾಗಿ
(National Security Advisor) ನೇಮಿಸಿದ್ದು.
ಅಜಿತ್ ಮೊದಲು ಕೈಗೆತ್ತಿಕೊಂಡಿದ್ದು ಪಾಕಿಸ್ತಾನದಲ್ಲಿರುವ ಬಲೋಚಿಸ್ತಾನದಲ್ಲಿ RAW ಮತ್ತೆ ಸಕ್ರಿಯ ಮಾಡಿದ್ದು. ಬಲೋಚಿಸ್ತಾನದ ವಿದ್ಯಮಾನವನ್ನ ಅಂತರ್ರಾಷ್ಟ್ರೀಯ ವಿಷಯ ವನ್ನಾಗಿ ಮಾಡಿದ್ದು.
ಕೇರಳದ 45 ಇಸಾಯೀ ನರ್ಸ್ ಗಳನ್ನು ಇರಾಕ್ ನಲ್ಲಿ ISIS ಉಗ್ರವಾದಿಗಳು ಬಂಧಿಸಿ ಇಟ್ಟಾಗ, ಧೋಬಲ್ ಸ್ವತಃ ಇರಾಕ್ ಗೆ ಹೋಗಿ ಸಂಧಾನ ನಡೆಸಿ, ಅವರೆಲ್ಲರ ಕೂದಲೂ ಕೊಂಕದಂತೆ ವಾಪಸ್ ಕರೆದು ತಂದರು.
2015 ರಲ್ಲಿ ಭಾರತದ ಪ್ರಥಮ ಸರ್ಜಿಕಲ್
operation ಗೆ ಚಾಲನೆ ಕೊಟ್ಟರು. ಭಾರತದ ಸೈನ್ಯ ಮ್ಯಾನ್ಮಾರ್ ದ ಗಡಿಯ ಒಳಗೆ 5 ಕಿಲೋ ಮೀಟರ್ ವರೆಗೆ ನುಗ್ಗಿ 50 ಉಗ್ರರನ್ನ ಕೊಂದಿತು. ನಾಗಾಲ್ಯಾಂಡ್ ನ
ಉಗ್ರವಾದಿಗಳು ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿಸಿ ಅವರು ಶಸ್ತ್ರಾಸ್ತ್ರ ತ್ಯಜಿಸುವದಕ್ಕೆ ಕಾರಣರಾದರು.
ಭಾರತದ ರಕ್ಷಣಾ ನೀತಿಯನ್ನು ಆಕ್ರಾಮಕ ವಾಗುವಂತೆ ಮಾರ್ಪಾಡಿಸಿದರು. ಭಾರತದ ಗಡಿಗೆ ನುಗ್ಗಿದ ಪಾಕಿಸ್ತಾನದ ನಾವೆಯನ್ನ ಮುನ್ಸೂಚನೆ ಕೊಡದೇ ಉಡಾಯಿಸಿದರು.
ಕಾಶ್ಮೀರದಲ್ಲಿ ಸೇನೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟರು. ಕಲ್ಲು ತೂರುವ ಕಿಡಿಗೇಡಿಗಳನ್ನು ಹದ್ದುಬಸ್ತಿಗೆ ತರಲು ಸೈನಿಕರ ಕೈಗೆ pallet gun ಕೊಟ್ಟರು. ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರಗಳಿಂದ ದೂರ ಮಾಡಿದರು.
2016 ರ ಸೆಪ್ಟೆಂಬರ್, ಸ್ವತಂತ್ರ ಭಾರತದ ಇತಿಹಾಸದಲ್ಲಿ 1971 ರ ನಂತರ ನೆನೆಪಿಡುವ ಕಾಲ. ಡೋಬಲ್ ಹೆಣೆದ ಸರ್ಜಿಕಲ್ ಸ್ಟ್ರೈಕ್ ಗೆ ಭಾರತೀಯ ಸೇನೆ ರೂಪು ಕೊಟ್ಟಿದ್ದು ಯಾರು ಮರೆತಾರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂರು ಕಿಲೋಮೀಟರ್ ಒಳಗೆ ನುಗ್ಗಿ 40 ಉಗ್ರ ರು ಹಾಗೂ 9 ಪಾಕ್ ಸೈನಿಕರ ಹತ್ಯೆಗೈದ ಭಾರತೀಯ ಸೇನೆ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತು.
26 ಫೆಬ್ರವರಿ ಯ ಬಾಲಾಕೋಟ್ ವೈಮಾನಿಕ ದಾಳಿ ಯೂ ಅಜಿತ್ ರ ತಂತ್ರಗಾರಿಕೆಯಿಂದ ಮೂಡಿದ್ದು. ಈ ಎರಡೂ ದಾಳಿಯಲ್ಲೂ ಭಾರತೀಯ ಸೈನಿಕರ ಪ್ರಾಣಹಾನಿ - 'ಶೂನ್ಯ'
ಶ್ರೀ ಅಜಿತ್ ಧೋವಲ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನೀವು ನಿಜವಾಗಿಯೂ ಅಸಾಮಾನ್ಯರು.
ಜೈಹಿಂದ್. ಜೈ ಭಾರತ.
****
26 nov 2021 - ಸುಪ್ರಸಿದ್ಧ ಲೇಖಕರೂ ಮೇರು ವಿದ್ವಾಂಸರೂ ಹಿಂದುತ್ವ-ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರು ಬೆಳಗಿನ ಜಾವಾ 2 ಗಂಟೆ ಸುಮಾರಿಗೆ ಬೆಂಗಳೂರು ನ್ಯೂ ಬಿ ಇ ಎಲ್ ಲೇ ಔಟ್ ನ ಮನೆಯಲ್ಲಿ ನಿಧನರಾದರು. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ. ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದು ಅವುಗಳ ಬಗ್ಗೆ ಆಗ್ರಹದಿಂದ ಅಧಿಕಾರಪೂರ್ವಕವಾಗಿ ಹೇಳುತ್ತಿದ್ದ ಆಚಾರ್ಯರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ.
****
ಹರಿದಿನದಂದು ಶ್ರೀಹರಿಯ ಪಾದವನ್ನು ಸೇರಿರುವ ಹಿರಿಯ ವಿದ್ವಾಂಸರಾದ ಶ್ರೀಮಳಗಿಜಯತೀರ್ಥಾಚಾರ್ಯರನ್ನು ಕುರಿತು ಹಿಂದೆ ಪ್ರಕಟವಾಗಿದ್ದ ಲೇಖನದ ಪರಿಷ್ಕೃತ ಆವೃತ್ತಿ.
demised in 2022 karteeka bahula ekadashi
ಪಂಡಿತ ಮಳಗಿ ಜಯತೀರ್ಥಾಚಾರ್ಯರು
ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವೇದವ್ಯಾಸ ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷರಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ ಸಂಪಾದಕರಾಗಿ, ಪ್ರವಚನಕಾರರಾಗಿ ಮಾಧ್ವವಾಙ್ಮಯಕ್ಕೆ ವಿಶೇಷವಾಗಿ ಸೇವೆ ಸಲ್ಲಿಸಿದ ವಿದ್ವಾಂಸರು ಪಂಡಿತ ಮಳಗಿ ಜಯತೀರ್ಥಾಚಾರ್ಯರು. ಧಾರವಾಡನಗರವನ್ನು ಮಾಧ್ವಸಿದ್ಧಾಂತದ ಮಹಾಕೇಂದ್ರವನ್ನಾಗಿ ರೂಪಿಸಿದ ಮಹನೀಯರಲ್ಲಿ ಪ್ರಮುಖರಾದ ಶ್ರೀಮಳಗಿ ಜಯತೀರ್ಥಾಚಾರ್ಯರು ಜನಿಸಿದ್ದು 1949ರ ಜೂನ್ 5ರಂದು. ಜವಾಹರಲಾಲ್ ಸಂಸ್ಕೃತವಿದ್ಯಾಲಯದಿಂದ ಸಾಹಿತ್ಯ ಶಿರೋಮಣಿ, ಭಾರತೀಯ ವಿದ್ಯಾಭವನ, ಮುಂಬಯಿಯಿಂದ ಸಂಸ್ಕೃತಕೋವಿದ, ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತವಿಶ್ವವಿದ್ಯಾನಿಲಯದಿಂದ ವೇದಾಂತ ಶಾಸ್ತ್ರಿ, ಧರ್ಮಶಾಸ್ತ್ರಾಚಾರ್ಯ, ಅಲಹಾಬಾದ್ ಹಿಂದಿ ವಿಶ್ವವಿದ್ಯಾಲಯದಿಂದ ದರ್ಶನವಿಶಾರದ, ಹಿಂದಿ ವಿಶಾರದ, ಹಿಂದಿ ಸಾಹಿತ್ಯರತ್ನ, ಭಾರತೀಯ ವಿದ್ಯಾಭವನದಿಂದ ವೇದಾಂತ ವಾಚಸ್ಪತಿ, ಮುಂಬಯಿ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪಡವಿ, ಪೂನಾ ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಶ್ರೀಮಳಗಿ ಜಯತೀರ್ಥಾಚಾರ್ಯರು ಮುಂಬಯಿಯ ಶ್ರೀಸತ್ಯಧ್ಯಾನ ವಿದ್ಯಾಪೀಠದಲ್ಲಿ ವೇದಾಂತ, ನ್ಯಾಯ, ಮೀಮಾಂಸಾ, ಸಾಹಿತ್ಯ,ವ್ಯಾಕರಣ ಮೊದಲಾದ ಶಾಸ್ತ್ರಗಳ ಆಳವಾದ ಅಧ್ಯಯನವನ್ನು ನಡೆಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾಧ್ವ ವಾಙ್ಮಯಕ್ಕೆ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಸಂಖ್ಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಶ್ರೀಮಳಗಿ ಜಯತೀರ್ಥಾಚಾರ್ಯರು ರಚಿಸಿರುವ ಗ್ರಂಥಗಳು 43ಕ್ಕೂ ಹೆಚ್ಚು ಎಂಬುದನ್ನು ಗಮನಿಸಿದಾಗ, ಶ್ರೀಆಚಾರ್ಯರ ಸಾರಸ್ವತ ಸೇವೆಯ ಕಿಂಚಿತ್ತು ಪರಿಚಯ ನಮಗಾಗುತ್ತದೆ. ಶ್ರೀಸತ್ಯಧ್ಯಾನರು, ಶ್ರೀಸತ್ಯಧ್ಯಾನರ ನುಡಿಮುತ್ತುಗಳು, ಕುಲಪತಿ, ಕ್ಷೇಮೇಂದ್ರನ ಸುಭಾಷಿತಗಳು, ಲೇಖನ ತರಂಗಿಣಿ, ಷಟ್ ಪ್ರಶ್ನೋಪನಿಷತ್ತು, ಪ್ರಮೋದ ತರಂಗಿಣೀ, ಸತ್ಯಧ್ಯಾನ ಜೀವನ ರಶ್ಮಿ,ಸತ್ಯಧ್ಯಾನ ಚರಿತಾಮೃತ, ಶ್ರೀಮಧ್ವರು ನಿರೂಪಿಸಿದ ರಾಮ, ಮಧ್ವರು ನಿರೂಪಿಸಿದ ಶ್ರೀಸೀತಾ, ಮಾಧವತೀರ್ಥರು, ಉತ್ತರಾದಿ ಮಠದ ಇತಿಹಾಸ, ಹರಿದಾಸಸಾಹಿತ್ಯದ ಇತಿಹಾಸ, ಶ್ರೀಸತ್ಯಬೋಧತೀರ್ಥರು, ಶ್ರೀಸತ್ಯವೀರತೀರ್ಥರು, ಶ್ರೀಸತ್ಯಧ್ಯಾನತೀರ್ಥರು(ಇಂಗ್ಲೀಷ್), ಶ್ರೀಸತ್ಯಸಂಧರು, ಪ್ರಮೋದ ತರಂಗಿಣೀ(ಇಂಗ್ಲಿಷ್), ಹರಿದಾಸರ ಮುಂಡಿಗೆಗಳು, ಹರಿದಾಸರ ಮುಂಡಿಗೆಗಳು ಭಾಗ 2, ಶ್ರೀಜಯತೀರ್ಥವಿಜಯ, ಶ್ರೀಸತ್ಯಧ್ಯಾನ ವಾಣಿ, ಶ್ರೀವ್ಯಾಸ ಮಧ್ವರ ಭೀಮ, ಶ್ರೀಸತ್ಯಧ್ಯಾನ ಲೇಖನತರಂಗಿಣಿ (ಎರಡು ಭಾಗಗಳಲ್ಲಿ), ಶ್ರೀರಾಘವೇಂದ್ರ ವಿದ್ಯಾವೈಭವ, ಕನಕನ ಮುಂಡಿಗೆಗಳು, ಶ್ರೀಪದ್ಮನಾಭತೀರ್ಥರು, ದೇವಲಸ್ಮೃತಿ ಒಂದು ಅಧ್ಯಯನ, ತೊರವಿ ರಾಮಾಯಣ ಪ್ರಶಸ್ತಿ, ಗೋಪಾಲದಾಸರು ಕಂಡ ಗುರುರಾಜರು, ಶ್ರೀಸತ್ಯಜ್ಞಾನತೀರ್ಥರು, ಶ್ರೀಕೃಷ್ಣಾವತಾರ, ವಾಸ್ತುಶಾಸ್ತ್ರದ ಮಹತ್ತ್ವ, ಶ್ರೀಹನುಮಂತದೇವರು, ಶ್ರೀಕೃಷ್ಣ, ಶ್ರೀಜಯತೀರ್ಥರು, ಪೊಡವಿಗೊಡೆಯ ಕಡಗೋಲಶ್ರೀಕೃಷ್ಣ, ಬೆಳಕಿನ ಬರಹಗಳು-ಹೀಗೆ ತಮ್ಮ ವಿದ್ವತ್ಪೂರ್ಣಗ್ರಂಥಗಳಿಂದ ಮಾಧ್ವವಾಙ್ಮಯವನ್ನು ಶ್ರೀಮಂತಗೊಳಿಸಿರುವ ಶ್ರೀಜಯತೀರ್ಥಾಚಾರ್ಯರು ಉತ್ತರಾದಿಮಠದಿಂದ ಪ್ರಕಟವಾಗುತ್ತಿರುವ ಶ್ರೀಸುಧಾ ಮಾಸಿಕದ ಮುಖ್ಯ ಸಂಪಾದಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಧಾರವಾಡದ ಸತ್ಯಧ್ಯಾನ ಗ್ರಂಥಮಾಲೆ, ಟಿ.ಟಿ.ಡಿಯ ದಾಸಸಾಹಿತ್ಯ ಪ್ರಾಜೆಕ್ಟ್ ನ ಗ್ರಂಥಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸುಗುಣಮಾಲಾ, ಹರಿದಾಸವಾಹಿನಿ, ಹರಿದಾಸ ಅಧ್ಯಾತ್ಮ ಪೀಠ, ಸತ್ಯಧ್ಯಾನವಿದ್ಯಾಪೀಠ, ವಿಶ್ವಮಾಧ್ವ ಮಹಾಪರಿಷತ್ತಿನ ಗ್ರಂಥಗಳ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ವಾಙ್ಮಯಸೇವೆಯನ್ನು ಸಲ್ಲಿಸಿದ ಶ್ರೀಜಯತೀರ್ಥಾಚಾರ್ಯರಿಗೆ ವಿವಿಧ ಮಾಧ್ವ ಮಠಾಧೀಶರು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿ, ಅನುಗ್ರಹಿಸಿದ್ದಾರೆ.
ಶ್ರೀಪಲಿಮಾರು ಶ್ರೀಗಳಿಂದ 'ಪಂಡಿತರತ್ನಂ', ಪ್ರಶಸ್ತಿ, ಸಚ್ಛಾಸ್ತ್ರವಿಚಕ್ಷಣರತ್ನಂ, ಶ್ರೀವಿದ್ಯಾಮಾನ್ಯ ಪ್ರಶಸ್ತಿ,ವಿದ್ಯಾನಿಧಿ ಪ್ರಶಸ್ತಿ, ಶ್ರೀಪೇಜಾವರ ಮಠಾಧೀಶರಿಂದ 'ವಿಜಯಧ್ವಜ ಪ್ರಶಸ್ತಿ', ಶ್ರೀ ಭಂಡಾರಕೇರಿ ಶ್ರೀಗಳಿಂದ 'ವಾಗ್ವೈಖರಿಮಾನ್ಯ'ಪ್ರಶಸ್ತಿ ಹಾಗೂ ಶ್ರೀಉತ್ತರಾದಿಮಠಾಧೀಶರಿಂದ 'ಧ್ಯಾನಪ್ರಮೋದ'ಪ್ರಶಸ್ತಿಗಳು ಇವುಗಳಲ್ಲಿ ಪ್ರಮುಖವಾದವು. ಇದರೊಂದಿಗೆ ತಿರುಚಾನೂರಿನ SMSO ಸಭಾದಿಂದ 'ಪ್ರಧಾನ ಧರ್ಮಾಧಿಕಾರಿ' ಗೌರವ, ವಿದ್ಯಾವರ್ಧಕ ಸಂಘದಿಂದ 'ಪ್ರವಚನ ಸಿಂಹ' ಗೌರವಗಳಿಗೂ ಭಾಜನರಾಗಿರುವ ಶ್ರೀಮಳಗಿ ಜಯತೀರ್ಥಾಚಾರ್ಯರು ಅನೇಕ ನಿಯತಕಾಲಿಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಶ್ರೀಮಧ್ವಸಿದ್ಧಾಂತವನ್ನು ಕುರಿತ ಲೇಖನಗಳನ್ನು ಬರೆಯುವುದರೊಂದಿಗೆ ಅನೇಕ ರಾಷ್ಟ್ರಮಟ್ಟದ ವಿಚಾರಸಂಕಿರಣಗಳಲ್ಲಿ ಪ್ರಬಂಧಗಳನ್ನೂ ಸಹಾ ಮಂಡಿಸಿದ್ದಾರೆ. ಸಂಸ್ಕೃತಸಾಹಿತ್ಯ ಕುರಿತ ಅನೇಕ ರಾಷ್ಟ್ರೀಯ ವಿಚಾರಸಂಕಿರಣಗಳ ಆಯೋಜನೆಯನ್ನೂ ಮಾಡಿರುವ ಶ್ರೀಮಳಗಿ ಜಯತೀರ್ಥಾಚಾರ್ಯರ ಪ್ರವಚನಗಳೆಂದರೆ ಕಂಚಿನ ಕಂಠದ, ಸ್ಪಷ್ಟವಾದ ವಿಚಾರಮಂಡನೆಯ ವಿದ್ವತ್ಸಮಾರಾಧನೆಯೇ ಸರಿ. ಶ್ರೀಮಾಧವ,ಮಧ್ವರ ಸೇವೆಯನ್ನು ಅಪೂರ್ವವಾಗಿ ಮಾಡಿ ಶ್ರೀಹರಿಯ ಪಾದವನ್ನು ಸೇರಿರುವ ಪೂಜ್ಯ ಆಚಾರ್ಯರಿಗೆ ಅನಂತ ನಮನಗಳು.
***
Little unknown facts about UP Chief Minister
I, like many others felt that he is just a “sanaysi” always in saffron dresses
But read below to know facts about him ….
Ajay Mohan Bisht
Alias
Yogi Adithyanath
Highest marks in the history of Uttar Pradesh (100%) from H.N.B Garwal University
Ajay Bisht is also known as Ajay Yogi, he is a Mathematics student who passed with the BSC Mathematics Gold Medal.
Born in 1973 to a very poor family in a backward Panchur village in UP. He is now 49 years old.
A Spiritual Guru of the oldest Gorkha Regiment of the Indian Military.
Nepali newspapers report that Nepal will merge with India if Yogi becomes PM!!
Huge Pro Yogi demonstrations in Nepal
Amazing excellence in martial arts.
Well known swimmer from Uttar Pradesh.
An accounting expert who even beat the computer.
Even Shakuntala Devi has praised Yogi!
Only four hours of sleep a night. Wakes up daily at 3:30 in the morning.
Has a Yoga routine.
Eats only twice a day ..
Completely vegetarian.
He never hospitalised so far for any reason..
Yogi Aditya Nath alias Ajay is one of the best wildlife trainers in Asia
What a profile of a LEADER ...
***
No comments:
Post a Comment