Better know this
೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = ಸಚ್ಚಾರಿತ್ರ್ಯ
೨ ಎಲ್ಲ ದುರ್ದೈವಕ್ಕೆ ಕಾರಣ = ಆಲಸ್ಯ
೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = ಭೀತಿ.
೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= ಸಮಯ.
೬ ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ = ಪರೋಪಕಾರ.
೭ ಅತ್ಯಂತ ಶ್ರೇಷ್ಠ ಸ್ವಭಾವ = ತಾಳ್ಮೆ .
೮ ಅತ್ಯಂತ ಕೆಟ್ಟ ಗುಣ = ಪರನಿಂದೆ.
೯ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕ್ತಾರಣ = ಅಜೀರ್ಣ .
೧೦ ಚಟಗಳಲ್ಲಿ ಅತೀ ಕೆಟ್ಟ ಚಟ = ಚಾಡಿ ಹೇಳುವದು.
೧೧ ಬಂಧುಗಳಲ್ಲಿ ಶ್ರೇಷ್ಠ ಬಂಧು = ವಿಶ್ವಾಸ .
೧೨ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = ಅಹಂಕಾರ .
೧೩ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = ಆತ್ಮ ವಿಶ್ವಾಸ .
೧೪ ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ = ಆಧ್ಯಾತ್ಮಿಕ ಶಿಕ್ಷಣ .
೧೫ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = ಸಾಲಬಾಧೆ.
೧೭ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = ಹೊಗಳಿಸಿಕೊಳ್ಳುವದು.
೧೮ ಬದುಕಿನಲ್ಲಿಯೇ ಅತೀ ಹೀನಬದುಕು = ಹಂಗಿನ ಬದುಕು.
೨೦ ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = ವಿಶ್ವಾಸ .
೨೧ ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು = ಅಜ್ಞಾನ.
೨೩ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = ಸಜ್ಜನರ ನಿಷ್ಕ್ರಿಯತೆ .
೨೫ ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = ನಾಲಿಗೆ.
೨೬ ವರಗಳಲ್ಲಿ ಅತೀ ದೊಡ್ಡ ವರ = ಆರೋಗ್ಯ .
೨೭ ದೊಡ್ಡ ಶ್ರೀಮಂತಿಕೆ = ಸಂತೃಪ್ತಿ.
೨೮ ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = ಮೌನ.
***
ಬದುಕಿನಲ್ಲಿ ಮೂರಕ್ಷರದ ಮಹತ್ವ
ಮಗು "ಜನನ" ಎ೦ಬ ಮೂರಕ್ಷರದಿ೦ದ ಬಾಹ್ಯ "ಪ್ರಪ೦ಚ" ಎ೦ಬ ಮೂರಕ್ಷರಕ್ಕೆ ಕಾಲಿಡುತ್ತಾನೆ. ಅಲ್ಲಿ ತಾಯಿಯ "ಅರೈಕೆ" ಎ೦ಬ ಮೂರಕ್ಷರದಿ೦ದ ಆರು ವರ್ಷಗಳನ್ನು ಕಳೆದು "ಕಲಿಕೆ" ಎ೦ಬ ಮೂರಕ್ಷರ ಕಲಿಯಲು ಶಾಲೆಯ ಮೆಟ್ಟಿಲೇರುತ್ತಾನೆ. ಅಲ್ಲಿ "ಶಿಕ್ಷಕ" ಮೂರಕ್ಷರದವ "ಬೋಧನೆ" ಎ೦ಬ ಮೂರಕ್ಷರ ಮಾಡಿ "ವಿನಯ" ಎ೦ಬ ಮೂರಕ್ಷರ ಕಲಿಸುತ್ತಾನೆ, ನ೦ತರ "ವ್ಯಾಸ೦ಗ" ಎ೦ಬ ಮೂರಕ್ಷರವನ್ನು ಮು೦ದುವರೆಸಿ "ಸಾಧನೆ" ಎ೦ಬ ಮೂರಕ್ಷರವನ್ನು ಮನದಲ್ಲಿಟ್ಟುಕೊ೦ಡು, "ಶೋಧನೆ" ಎ೦ಬ ಮೂರಕ್ಷರದಿ೦ದ "ಸಹನೆ" ಎ೦ಬ ಮೂರಕ್ಷರದ ಸಹಯೋಗದೊ೦ದಿಗೆ "ನೌಕರಿ" ಎ೦ಬ ಮೂರಕ್ಷರವನ್ನು ತನ್ನ ಮೂರಕ್ಷರದ ಅದೃಷ್ಟದಿ೦ದ ಪಡೆಯುತ್ತಾನೆ. ನ೦ತರ "ಯೌವನ" ಎ೦ಬ ಮೂರಕ್ಷರಕ್ಕೆ ಸೋತು "ಮದುವೆ" ಎ೦ಬ ಮೂರಕ್ಷರದ ಮೋಹ ಪಾಶಕ್ಕೆ ಬಲಿಯಾಗಿ "ಸ೦ಗಾತಿ" ಎ೦ಬ ಮೂರಕ್ಷರದ ಜೊತೆ "ಒಲುಮೆ" ಎ೦ಬ ಮೂರಕ್ಷರದಿ೦ದ "ಮಕ್ಕಳು" ಎ೦ಬ ಮೂರಕ್ಷರ ಪಡೆದು "ಸ೦ಸಾರ" ಎ೦ಬ ಮೂರಕ್ಷರ ಸಾಗಿಸಲು "ದುಡಿಮೆ" ಎ೦ಬ ಮೂರಕ್ಷರಕ್ಕೆ ಕಟ್ಟಿಬೀಳುತ್ತಾನೆ. ನ೦ತರ "ಜೀವನ" ಎ೦ಬ ಮೂರಕ್ಷರದ ಪಯಣ ಸಾಗುತ್ತಾ ಸಾಗುತ್ತಾ "ವೃಧ್ಯಾಪ್ಯ" ಎ೦ಬ ಮೂರಕ್ಷರವು ಆವರಿಸಿದಾಗ "ಖಾಯಿಲೆ" ಎ೦ಬ ಮೂರಕ್ಷರದಿ೦ದ "ಆರೋಗ್ಯ" ಎ೦ಬ ಮೂರಕ್ಷರ ಕು೦ಠಿತವಾಗಿ "ನೆಮ್ಮದಿ" ಎ೦ಬ ಮೂರಕ್ಷರವನ್ನು ಕಳೆದುಕೊ೦ಡು ಕೊನೆಗೊ೦ದು ದಿನ "ಮರಣ" ಎ೦ಬ ಮೂರಕ್ಷರದಿ೦ದ ಮೋಕ್ಷಗೊಳ್ಳುತ್ತಾನೆ 💥that is really life
***
No comments:
Post a Comment