ನೆಲ್ಲಿಕಾಯಿ ಅಥವ ಅಮಲಕ ದೀಪದ ಮಹತ್ವಗಳು..
೧. ನೆಲ್ಲಿಕಾಯಿ ಮಹಾಲಕ್ಷ್ಮಿಗೆ ತುಂಬಾ ಇಷ್ಟ, ಉತ್ತರ ಭಾರತದಲ್ಲಿ ಶುಕ್ರವಾರದ ಸಾಯಂಕಾಲ ಶ್ರೀ ಮಹಾಲಕ್ಷ್ನಿಗೆ ನೆಲ್ಲಿಕಾಯಿ ದೀಪ ಹಚ್ಚುತ್ತಾರೆ, ಇದರಿಂದ ಮಹಾಲಕ್ಷ್ಮಿಯು ಅನುಗ್ರಹ ಬೇಗ ಆಗುತ್ತದೆ..
೨. ಶ್ರೀ ಶಂಕರಾಚಾರ್ಯರು ಬರೆದಿರುವ ಶ್ರೀ ಕನಕಧಾರಾ ಸ್ತೋತ್ರವನ್ನು ಪಠಿಸಿ,
ಶ್ರೀ ಮಹಾಲಕ್ಷ್ಮಿಗೆ ನೆಲ್ಲಿಕಾಯಿ ಮೊರಬ್ಜ ಅಥವಾ ನೆಲ್ಲಿಕಾಯಿ ಚಟ್ನಿ, ನೈವೇದ್ಯ ಮಾಡಿದರೆ, ಶ್ರೀ ಮಹಾಲಕ್ಷ್ಮಿಯು ಆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.. ಹಣದ ಸಮಸ್ಯೆ ನಿವಾರಣೆಯಾಗಿ ಬೇಗ ಶ್ರೀಮಂತರಾಗುತ್ತಾರೆ..
೩. ನೆಲ್ಲಿಕಾಯಿ ಚಟ್ನಿ ಅಥವ ಗೊಜ್ಜು ಶ್ರೀ ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಸುಮಂಗಲಿಯರಿಗೆ ಕೊಟ್ಟರೆ, ನಿಮಗೆ ಬರಬೇಕಾದ ಹಣ ಬೇಗ ಬರುತ್ತದೆ..
೪.ನೆಲ್ಲಿ ರಸವನ್ನು ಹಾಗೂ ತುಲಸೀ ರಸವನ್ನು ಪಾರ್ವತೀ ದೇವಿ ಅಥವಾ ಇಂದ್ರಾಕ್ಷಿ ದೇವಿಗೆ ನೈವೇದ್ಯ ಮಾಡಿ, ಕಾಮಾಲೆ ರೋಗ ಇರುವ ರೋಗಿಗೆ ಕುಡಿಸಿದರೆ, ಕಾಮಾಲೆ ರೋಗ ನಿವಾರಣೆಯಾಗುತ್ತದೆ
೫. ನೆಲ್ಲಿಕಾಯಿಯನ್ನು ಶುಕ್ರವಾರದ ದಿವಸ ಕನ್ಯಾ ಮುತ್ತೈದೆಯರಿಗೆ ಕೊಟ್ಟರೆ, ಇಷ್ಟಾರ್ಥ ಸಿದ್ದಿಯಾಗುತ್ತದೆ..
೬. ಶ್ರೀ ಗಣಪತಿಯ ಹೋಮದಲ್ಲಿ ಶಕ್ತಿ ಗಣಪತಿಯನ್ನು ಧ್ಯಾನಿಸಿ, ಹೋಮದ ಪೂರ್ಣಾಹುತಿಗೆ ನೆಲ್ಲಿಕಾಯಿಯನ್ನು, ಹೋಮ ಕುಂಡಕ್ಕೆ ಹಾಕಿದರೆ ಸಕಲ ಕಾರ್ಯಗಳಲ್ಲಿ ಜಯ ಹಾಗೂ ಅಧಿಕ ಲಾಭವಾಗುತ್ತದೆ..
೬. ಪ್ರತಿದಿವಸ ಪೂಜಾ ಸ್ಥಾನದಲ್ಲಿರುವ ಶಂಕದ ಪಕ್ಕದಲ್ಲಿ, ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ, ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ಇರುತ್ತದೆ..
೭. ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ನಾಲ್ಕಾರು ಮನೆಗಳಿಗೆ ಹಂಚಿದರೆ ಗೃಹ ಕಲಹವು ನಿವಾರಣೆಯಾಗಿ, ಮನೆಯಲ್ಲಿ ಸುಖ ನೆಲೆಸಿ, ಶಾಂತಿಯಿಂದ, ನೆಮ್ಮದಿಯಿಂದ ಬಾಳಬಹುದು..
೭. ನೆಲ್ಲೀಕಾಯಿಯನ್ನು ಯಾರು ತುಳಿಯುತ್ತಾರೋ ಅವರು ನಿತ್ಯದಾರಿದ್ರ್ಯ ಅನುಭವಿಸುತ್ತಾರೆ ..
೮. ನೆಲ್ಲಿಕಾಯಿ ದೀಪಗಳನ್ನು ತುಳಸೀ ಕಟ್ಟೆಯ ಮುಂದೆ ಹಚ್ಚಿದರೆ, ದೈವಭಕ್ತಿ ಜಾಸ್ತಿಯಾಗುತ್ತದೆ, ಹಾಗೂ ಮನೆಯಲ್ಲಿ ಅಪಮೃತ್ಯು ನಿವಾರಣೆಯಾಗಿ ಆರೋಗ್ಯ ಭಾಗ್ಯ ಸಿಕ್ಕುತ್ತದೆ..
೯. ನೆಲ್ಲೀಕಾಯಿಯ ಮರಕ್ಕೆ ಪ್ರತಿದಿವಸ ಪೂಜೆ ಮಾಡಿ,ಮರಕ್ಕೆ ನೀರು ಹಾಕುತ್ತಾ ಬಂದರೆ, ಆ ಮನೆಯಲ್ಲಿ ಅಧಿಕವಾದ ಧನ ಪ್ರಾಪ್ತಿಯಾಗಿ, ಆರೋಗ್ಯ ಭಾಗ್ಯ ದೊರೆತು, ಮನೆಯಲ್ಲಿ ಶಾಂತಿ ವಾತಾವರಣ ಮತ್ತು ನೆಮ್ಮದಿ ಇದ್ದು, ಮಹಾಲಕ್ಷ್ಮಿಯು ಶಾಶ್ವತವಾಗಿ ನೆಲೆಸುತ್ತಾಳೆ..
ಶ್ರೀ ಸುಧಾಕರ
No comments:
Post a Comment