SEARCH HERE

Tuesday, 27 April 2021

ವೈಶಾಖ ಮಾಸದ ಮಹತ್ವ importance of vaishakha masa

ವೈಶಾಖ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು

ಅಕ್ಷಯ ತೃತೀಯ (ಶುಕ್ಲ ತದಿಗೆ)

ಗಂಗಾ ಪೂಜ (ಶುಕ್ಲ ಸಪ್ತಮಿ)

ಮೋಹಿನೀ ಏಕಾದಶಿ (ಶುಕ್ಲ ಏಕಾದಶಿ)

ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ (ಹುಣ್ಣಿಮೆ)

ಅಪರಾ ಏಕಾದಶಿ (ಕೃಷ್ಣ ಏಕಾದಶಿ)

ನರಸಿಂಹ ಜಯಂತಿ

ವೇದವ್ಯಾಸ ಜಯಂತಿ

ಕೂರ್ಮ ಜಯಂತಿ

ಶಂಕರಾಚಾರ್ಯ ಜಯಂತಿ 

ಬಸವ ಜಯಂತಿ

ರಾಮಾನುಜ ಜಯಂತಿ

 

ವೈಶಾಖಮಾಸದ ಮಹತ್ವ 🌺🌷


              ||ಭಾಗ-1||

         

ವೈಶಾಖಮಾಸಕ್ಕೆ  ಮಧುಸೂದನರೂಪಿ ಪರಮಾತ್ಮ ನಿಯಾಮಕ

ವೈಶಾಖಮಾಸವು ಪ್ರಧಾನವಾಗಿ ತಾಪವನ್ನುಂಟು ಮಾಡುವ ಮಾಸವಾಗಿದೆ. ಆದ್ದರಿಂದ ಈ ಮಾಸದಲ್ಲಿ ಪ್ರಾತಃ ಸ್ನಾನ, ದೇವರಿಗೆ  ಗಂಧಲೇಪನ ಗಂಧವನ್ನು ಹಚ್ಚಿಕೊಳ್ಳಲು ಬ್ರಾಹ್ಮಣರಿಗೆ ಕೊಡಬೇಕು. ಶೀತಲವಾದ ಜಲವನ್ನು ದಾನ ಮಾಡುವುದರಿಂದ ಮಧುಸೂದನನು ಪ್ರೀತನಾಗುವನು.


ಪ್ರಾತಃಸ್ನಾಯಿ ನರಃ  ಸ್ತ್ರೀ ವಾ ಜಾತೀನಾಂ ಶ್ರೇಷ್ಠತಾವ್ರಜೇತ್ |

ಗಂಧಮಾಲ್ಯಾನಿ ಚ ತಥಾ  ವೈಶಾಖೇ ಸುರುಭೀಣಿ ಚ |

ದೇಯಾನಿ ದ್ವಿಜಮುಖ್ಯೇಭ್ಯೋ ಮಧುಸೂದನ ತುಷ್ಟಯೇ ||

   **********


vaishakha SNANA from Chaitra Bahula Pratipat to Vaishakha Hunnime

    🌷ವೈಶಾಖಮಾಸದ ಮಹತ್ವ ಭಾಗ -2🌷 


       || ವೈಶಾಖಸ್ನಾನದ ಮಹತ್ವ ||


ಮಾಸಾನಾಂ ಧರ್ಮಹೇತೂನಾಂ ವೈಶಾಖಶ್ಚೋತ್ತಮ ಸ್ತಥಾ |

ನಾನೇನ ಸಧೃಶೋ ಲೋಕೇ ವಿಷ್ಣುಪ್ರೀತಿವಿಧಾಯಕಃ ||


 ಈ ವೈಶಾಖಮಾಸವು ಎಲ್ಲಾ ಮಾಸಗಳಲ್ಲಿ ಸರ್ವಶ್ರೇಷ್ಠವಾಗಿದೆ .ಧರ್ಮಕಾರ್ಯಗಳನ್ನು ಮಾಡಲು ವೈಶಾಖಮಾಸವು ಉಳಿದೆಲ್ಲ ಮಾಸಗಳಿಗಿಂತ ಉತ್ತಮವಾಗಿದೆ. ಶ್ರೀವಿಷ್ಣುವಿನ ಪ್ರೀತಿಯನ್ನು ಸಂಪಾದಿಸಲು ಲೋಕದಲ್ಲಿ ಈ ಮಾಸಕ್ಕೆ ಸಧೃಶವಾದ ಬೇರೊಂದು ಮಾಸವಿಲ್ಲ. ವೈಶಾಖಮಾಸದಲ್ಲಿ ಸೂರ್ಯೋದಯದ ಮೊದಲು ಸ್ನಾನಮಾಡುವ ಸ್ತ್ರೀ ಪುರುಷರನ್ನು ಶ್ರೀಲಕ್ಷ್ಮೀಸಹಿತನಾದ ನಾರಾಯಣನು ಅನುಗ್ರಹ ಮಾಡುವನು ಆಹಾರಸೇವನೆಯಿಂದ ಎಲ್ಲ ಪ್ರಾಣಿಗಳಿಗೆ ಸಂತೋಷವಾಗುವಂತೆ  ವೈಶಾಖ  ಸ್ನಾನದಿಂದ ವಿಷ್ಣುವಿಗೆ ಪ್ರೀತಿಯಾಗುತ್ತದೆ ಇದರಲ್ಲಿ ಸಂದೇಹ ಬೇಡ ವೈಶಾಖಸ್ನಾನವನ್ನು ತಪ್ಪದೇ ಮಾಡುವವವರನ್ನು  ಕಂಡು ಅವರಿಗೆ ಅನುಮೋದನೆ ಮಾಡುವವರೂ ಕೂಡ ಸಕಲಪಾಪಗಳಿಂದ ಮುಕ್ತರಾಗಿ ವಿಷ್ಣುಲೋಕವನ್ನು ಹೊಂದುವರು. ಸೂರ್ಯನು ಮೇಷರಾಶಿಯಲ್ಲಿರುವಾಗ ಪ್ರತಿದಿನ ಯಾರು  ಪ್ರಾತಃಸ್ನಾನಮಾಡಿ ಅಹ್ನೀಕಮಾಡುವವನು ಹಿoದೆ ತಾನು ಮಾಡಿದ ಪಾಪಗಳಿಂದ ಮುಕ್ತನಾಗಿ ವಿಷ್ಣು ಸಾಯುಜ್ಯವನ್ನು ಪಡೆಯುವನು .


ಸ್ನಾನಾರ್ಥಂ ಮಾಸಿ ವೈಶಾಖೇ ಪಾದಮೆಕಂ ಚರೇದ್ಯದಿ |

ಸೋsಶ್ವಮೇಧಾಯುತಾನಾಂ ಚ ಫಲಂ ಪ್ರಾಪ್ನೋತ್ಯಸಂಶಯಃ ||


ವೈಶಾಖಮಾಸದಲ್ಲಿ ಪ್ರಾತಃಸ್ನಾನ ಮಾಡುವುದಕ್ಕಾಗಿ ಜಲಾಶಯಕ್ಕೆ ಹೋಗುವಾಗ ನಾವು ಇಡುವ ಒಂದೊoದು ಹೆಜ್ಜೆಗೂ ಹತ್ತು ಸಹಸ್ರ  ಅಶ್ವಮೇಧಯಾಗಗಳನ್ನು ಮಾಡಿದ ಫಲವು ಪ್ರಾತಃಸ್ನಾನದಿಂದ ಪ್ರಾಪ್ತವಾಗುವುದು. ಏಕಾಗ್ರಮನಸ್ಕರಾಗಿ ಯಾರು ಪ್ರಾತಃ ಸ್ನಾನದ ಸಂಕಲ್ಪವನ್ನು ಮಾಡುವರೊ ಅಷ್ಟು ಮಾತ್ರದಿoದಲೇ ಅವರು  ನೂರು ಯಜ್ಞಗಳನ್ನು ಮಾಡಿದ ಫಲವನ್ನು ಪಡೆಯುವರು ಈ ವಿಷಯದಲ್ಲಿ ಸಂದೇಹ ಬೇಡ .


ಯೋ ಗಚ್ಛೇದ್ಧನುರಾಯಾಮಾo ಸ್ನಾತುಂ ಮೇಷಂ ಗತೇ ರವೌ |

ಸರ್ವಬಂಧವಿನಿರ್ಮೂಕ್ತೋ  ವಿಷ್ಣೋಃ ಸಾಯುಜ್ಯ ಮಾಪ್ನುಯಾತ್ |

ತ್ರೈಲೋಕ್ಯೇ ಯಾನಿ ತೀರ್ಥಾನಿ ಬ್ರಹ್ಮಾಂಡಾಂತರ್ಗತಾನಿ ಚ |

ತಾನಿ ಸರ್ವಾಣಿ ರಾಜೇಂದ್ರ  ಸಂತಿ ಬಾಹ್ಯೇsಲ್ಪಕೆ ಜಲೇ |

ತಾವಲ್ಲಿಖಿತಾಪಾಪಾನಿ ಗರ್ಜಂತಿ ಯಮಶಾಸನೇ ||


ವೈಶಾಖ ಮಾಸದಲ್ಲಿ ಪ್ರಾತಃಸ್ನಾನ  ಮಾಡಲು ಜಲಾಶಯಕ್ಕೆ ಹೋಗುವಾಗ ಯಾರು ಒಂದು ಧನುಸ್ಸಿನ ಪ್ರಮಾಣದಷ್ಟು (4 ಮೊಳ) ಮುಂದಕ್ಕೆ ನಡೆಯುವನೋ ಅವನು ಸರ್ವಬಂಧಗಳಿಂದ ಮುಕ್ತನಾಗಿ  ವಿಷ್ಣುವಿನ ಸಾಯುಜ್ಯವನ್ನು ಪಡೆಯುವನು ಮೂರೂಲೋಕಗಳಲ್ಲಿ ಬ್ರಹ್ಮಾoಡಾಂತರ್ಗತವಾದ ತೀರ್ಥಗಳು ಎಷ್ಟಿವೆಯೋ ಅವೆಲ್ಲವೂ ಈ ವೈಶಾಖ ಮಾಸದಲ್ಲಿ ಜಲಾಶಯದಲ್ಲಿರುವ ಅಲ್ಪ ನೀರಿನಲ್ಲಿಯೂ ಸನ್ನಿಹಿತವಾಗಿರುವುವು. ವೈಶಾಖಮಾಸದಲ್ಲಿ ಇಂಥ ಜಲಾಶಯದೊಳಗೆ ಸ್ನಾನ ಮಾಡುವ ಹಿಂದಿನಕಾಲದವರೆಗೆ ಮಾತ್ರ ಯಮನ ಆಜ್ಞೆಯಂತೆ ಗರ್ಜಿಸುತ್ತಿರುತ್ತವೆ.  ಪ್ರಾತಃಸ್ನಾನಮಾಡಿದ ತಕ್ಷಣ ಸ್ನಾನಮಾಡಿದವನ ಪಾಪಗಳು ಅಂಜಿ ಓಡಿಹೋಗುತ್ತವೆ .


 ಯಾವನ್ನ ಕುರುತೇಜಂತು ರ್ವೈಶಾಖೇ ಸ್ನಾನಮಂಭಂಸಿ |

ತೀರ್ಥಾದಿದೇವತಾಃ ಸರ್ವಾಃ ವೈಶಾಖೇ ಮಾಸಿ ಭೂಮಿಪ ||

ಬಹಿರ್ಜಲಂ ಸಮಾಶ್ರಿತ್ಯ  ಸದಾ ಸನ್ನಿಹಿತಾ  ನೃಪ |

ಸೂರ್ಯೋದಯಂ ಸಮಾರಭ್ಯ ಯಾವತ್ ಷಡ್ ಘಟಿಕಾವಧಿ ||

ತಿಷ್ಠಂತಿ ಚಾssಜ್ಞಯಾ  ವಿಷ್ಣೋನರಾಣಾಂ ಹಿತಕಾಮ್ಯಯ |

ತಾವನ್ನಾಗಚ್ಛತಾಂ ಪುಂಸಾಂ  ಶಾಪಂ ದತ್ವಾ ಸುದಾರುಣಮ್  ||


ವೈಶಾಖಮಾಸದಲ್ಲಿ ತೀರ್ಥಾದಿದೇವತೆಗಳೆಲ್ಲರೂ  ಬಹಿರ್ಜಲಶಯವನ್ನು ಆಶ್ರಯಿಸಿಕೊoಡು ಅಲ್ಲಿರುವ ಜಲದಲ್ಲಿ ಸದಾ ಸನ್ನಿಹಿತರಾಗಿರುವರು ಸೂರ್ಯೋದಯದಿಂದ ಹಿಡಿದು ಆರುಘಳಿಗೆ (2ವರೆಘಂಟೆ)ಯವರೆಗೆ  ಈ ತೀರ್ಥಾದಿ ದೇವತೆಗಳು ಶ್ರೀವಿಷ್ಣುವಿನ ಆಜ್ಞಾನುಸಾರ ಮನುಷ್ಯರೆಲ್ಲರಿಗೆ ಕಲ್ಯಾಣವನ್ನುಂಟುಮಾಡುವ ಉದ್ದೇಶದಿಂದ ಜಲಾಶಯದಲ್ಲಿ  ಸನ್ನಿಹಿತರಾಗಿರುವರು. ಈ ಅವಧಿಯೊಳಗೆ ಜಲಶಯದಲ್ಲಿ  ಸ್ನಾನಮಾಡಲು ಬಾರದಿರುವ ಮನುಷ್ಯರಿಗೆ ಘೋರವಾದ ಶಾಪವನ್ನು ಕೊಟ್ಟು ತಮ್ಮ ತಮ್ಮ ಸ್ಥಾನಕ್ಕೆ ಹೊರಟುಹೋಗುವರು. ಆದ್ದರಿಂದ ಆ ಅವಧಿಯೊಳಗೆ ಬಹಿರ್ಜಲಶಯದಲ್ಲಿ ತಪ್ಪದೆ ಪ್ರಾತಃಸ್ನಾನವನ್ನು ಮಾಡಬೇಕು ಎಂದು ನಾರದರು ಅಂಬರೀಷಮಹಾರಾಜನಿಗೆ ವೈಶಾಖಸ್ನಾನದ  ಫಲವನ್ನು  ವೈಶಾಖಮಾಸ ಮಹಾತ್ಮೆಯಲ್ಲಿ  ಹೇಳಿದ್ದಾರೆ.

    **********


🌷ಸಂಕ್ಷಿಪ್ತ ವೈಶಾಖಸ್ನಾನವಿಧಿ🌷


ಆಚಮನಮಾಡಿ ಸ್ನಾನ ಸಂಕಲ್ಪವನ್ನು  ಮಾಡುವುದು.


ಶುಭೇ ಶೋಭನೇ ಮಹೂರ್ತೇ, ಆದ್ಯಬ್ರಹ್ಮಣಃ,  ದ್ವಿತೀಯ ಪರಾರ್ಧೇ, ಶ್ವೇತ ವರಾಹ ಕಲ್ಪೇ, ಅಷ್ಟಾವಿಂಶತಿ ಚತುರ್ಯುಗೇ, ಕಲಿಯುಗೇ, ಪ್ರಥಮ ಚರಣೇ, ಜಂಬೂ ದ್ವೀಪೇ, ಭರತ ಖಂಡೇ, ಭರತ ವರ್ಷೇ,  ಗೋದಾವರಿಯಃ ದಕ್ಷಿಣೆ ತೀರೇ,  ಅಸ್ಮಿನ್ ವರ್ತಮಾನೇ, ಬೌದ್ಧಾವತಾರೇ, ಶ್ರೀ ರಾಮಕ್ಷೆತ್ರೇ, ವ್ಯಾವಹಾರಿಕೇ - ಸ್ವಸ್ತಿ ಶ್ರೀ ಪ್ಲವನಾಮ ಸಂವತ್ಸರೇ, ಉತ್ತರಾಯಣೇ, ------ಋತೌ-------- ಮಾಸೇ -------ಪಕ್ಷೆ --------ತಿಥೌ -------ವಾಸರೇ -----ನಕ್ಷತ್ರೇ -----ಯೋಗೆ -----ಕರಣೆ -ಏವಂಗುಣವಿಶಿಷ್ಟಾಯಾಂ ಶುಭವಾಸರ ಶುಭನಕ್ಷತ್ರ ಶುಭತಿಥೌ

-ಸಾರ್ಧತ್ರಿಕೋಟಿ  ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ, ಸಾಲಿಗ್ರಾಮ ,ಚಕ್ರಾಂಕಿತ -ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮಧುಸೂದನಪ್ರೀತ್ಯರ್ಥಂ


ವೈಶಾಖಸ್ನಾನಮಹಂ ಕರಿಷ್ಯೇ ಎಂದು ಸಂಕಲ್ಪಿಸಿ ನಂತರ  ಮಧುಸೂದನನನ್ನು  ಪ್ರಾರ್ಥಿಸಿ  ಮೌನಿಯಾಗಿ  ಸ್ನಾನವನ್ನು  ಮಾಡಬೇಕು .

*******


ವೈಶಾಖಸ್ನಾನ ಮಂತ್ರ:


ವೈಶಾಖಂ ಸಕಲಂ ಮಾಸಂ ಮೇಷಸಂಕ್ರಮಣೇ ರವೇಃ  |

ಪ್ರಾತಃ ಸನಿಯಮಃ  ಸ್ನಾಸ್ಯೇ ಪ್ರೀಯತಾಂ ಮಧುಸೂದನಃ  ||

ಮಧುಹಂತುಃ  ಪ್ರಸಾದೇನ ಬ್ರಾಹ್ಮಣಾನಾಮನುಗ್ರಹಾತ್ |

ನಿರ್ವಿಘ್ನಮಸ್ತು ಮೇ ಪುಣ್ಯಂ ವೈಶಾಖಸ್ನಾನಮನ್ವಹಮ್ ||

ಮಾಧವೇ ಮೇಷಗೇ ಭಾನೌ ಮುರಾರೇ ಮಧುಸೂದನ |

ಪ್ರಾತಃಸ್ನಾನೇನ ಮೇ ನಾಥ ಫಲದೋ ಭವ ಪಾಪಹನ್ ||

ವೈಶಾಖೇ ಮೇಷಗೇ ಭಾನೌ ಪ್ರಾತಃಸ್ನಾನಂ ಕರೋಮ್ಯಹಮ್ |

ತೀರ್ಥೇ ಜಲಮಯೇ ಪುಣ್ಯೇ ಪುನೀಹಿ ಮಧುಸೂದನ ||


******

ಅರ್ಘ್ಯಮಂತ್ರ:


******


ವೈಶಾಖೇ ಮೇಷಗೇ ಭಾನೌ ಪ್ರಾತಃಸ್ನಾನ ಪರಾಯಣಃ |

ಅರ್ಘ್ಯಂ ತೇsಹಂ ಪ್ರದಾಸ್ಯಾಮಿ ಗೃಹಾಣ ಮಧುಸೂದನ ||

ಗಂಗಾದ್ಯಾಃ ಸರಿತ್ಸರ್ವಾಸ್ತೀರ್ಥಾನಿ ಚ ಹೃದಾಶ್ಚಯೇ |

ಪ್ರಗೃಹ್ಣಿತ ಮಯಾ ದತ್ತಮರ್ಘ್ಯಂ ಸಮ್ಯಕ್ ಪ್ರಸೀದಥ ||

ಋಷಭಃ ಪಾಪಿನಾಂ ಶಾಸ್ತಾ ತ್ವಂ ಯಮಃ ಸಮದರ್ಶಿನಃ |

ಗೃಹಾಣಾರ್ಘ್ಯಂ ಮಯಾ ದತ್ತಂ ಯಥೋಕ್ತಫಲದೋ ಭವ ||

*********


ಸೂರ್ಯಾರ್ಘ್ಯ ಮಂತ್ರ:


ಏಹಿ ಸೂರ್ಯ ಸಹಸ್ರಂಶೋ ತೇಜೋರಾಶೇ ಜಗತ್ಪತೇ |

ಅನುಕಂಪಯ ಮಾಂ ಭಕ್ತ್ಯಾ ಗೃಹಾಣಾರ್ಘ್ಯಂ ನಮೋಸ್ತುತೇ ||


(ಸೂಚನೆ -ಮನೆಯಲ್ಲಿ ವೈಶಾಖ ಸ್ನಾನಮಾಡುವವರು  ಸ್ನಾನಸಂಕಲ್ಪ ಮಾಡಿ ವೈಶಾಖ ಸ್ನಾನಮಂತ್ರ ಅರ್ಘ್ಯಮಂತ್ರಗಳನ್ನು ಹೇಳಿದರೆ ಸಾಕು ಸ್ನಾನಾನಂತರ ಅರ್ಘಮಂತ್ರಗಳಿಂದ ಅರ್ಘ್ಯಕೊಡುವುದು ನದಿಸ್ನಾನವಿಧಿಯನ್ನು ಪ್ರತ್ಯೇಕವಾಗಿ ಕಳಿಸಲಾಗುವುದು )

ಸಂಗ್ರಹ - ಫಣೀಂದ್ರ ಕೌಲಗಿ

      || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್

*******

ನಾರದರು ಹೇಳಿದ ವೈಶಾಖ ಮಾಸದ ಪುಣ್ಯಸ್ನಾನ ಮಹತ್ವ

ಈ ಮಾಸದಲ್ಲಿ ಗಂಗಾ, ಯಮುನಾ, ಕಾವೇರಿ, ನರ್ಮದಾ, ಕೃಷ್ಣ ನದಿ ಸ್ನಾನ ಶ್ರೇಷ್ಠವೆಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಜಲ ದಾನ, ಜಲ ಸಂಗ್ರಹಣೆ, ಜಲ ರಕ್ಷಣೆಗೂ ಅಷ್ಟೇ ಮಹತ್ವವಿದೆ. ಬಾಯಾರಿ ಮನೆ ಬಾಗಿಲಿಗೆ ಬಂದ ಅತಿಥಿಗೆ ತಂಪನೆಯ ನೀರು ಕೊಟ್ಟು ಉಪಚರಿಸುವುದು ಶ್ರೇಷ್ಠ ಕರ್ಮ. ವೈಶಾಖ ಸ್ನಾನ ಮಾಡುವ ಮುನ್ನ ಈ ಮಂತ್ರವನ್ನು ಹೇಳಿಕೊಳ್ಳಿ.

ಚುರು ಚುರು ಬೇಸಿಗೆ ಬಿಸಿಗೆ ನದಿ ನೀರಿನ ಸ್ನಾನ ಸಕತ್‌ ಖುಷಿ ಕೊಡುತ್ತದೆ. ಹಾಗೆಂದೇ ವೈಶಾಖ ಮಾಸ ನದಿ ಸ್ನಾನಕ್ಕೆ ಮಹತ್ವವಿದೆ. ಅದರೊಂದಿಗೆ ನಾಳೆಯ ಬದುಕಿಗೆ ನೀರು ಉಳಿಸಬೇಕೆಂಬ ಕಾಳಜಿಯೂ ಇದೆ. ವೈಶಾಖ ಮಾಸದ ಮಹತ್ವವನ್ನು ಮೊದಲಿಗೆ ನಾರದರು ರಾಜಾ ಅಂಬರೀಷರಿಗೆ ಹೇಳಿದರು. ಶ್ರೀಹರಿಗೆ ಪ್ರಿಯವಾದ ಮಾಸವಿದು. ಈ ಮಾಸದಲ್ಲಿ ಗಂಗಾ, ಯಮುನಾ, ಕಾವೇರಿ, ನರ್ಮದಾ, ಕೃಷ್ಣ ನದಿ ಸ್ನಾನ ಶ್ರೇಷ್ಠವೆಂದು ಹೇಳಲಾಗುತ್ತದೆ.

ಈ ಮಾಸದಲ್ಲಿ ಜಲ ದಾನ, ಜಲ ಸಂಗ್ರಹಣೆ, ಜಲ ರಕ್ಷಣೆಗೂ ಅಷ್ಟೇ ಮಹತ್ವವಿದೆ. ಬಾಯಾರಿ ಮನೆ ಬಾಗಿಲಿಗೆ ಬಂದ ಅತಿಥಿಗೆ ತಂಪನೆಯ ನೀರು ಕೊಟ್ಟು ಉಪಚರಿಸುವುದು ಶ್ರೇಷ್ಠ ಕರ್ಮ. ವೈಶಾಖ ಸ್ನಾನ ಮಾಡುವ ಮುನ್ನ ಈ ಮಂತ್ರವನ್ನು ಹೇಳಿಕೊಳ್ಳಿ.


ಮಧುಸೂಧನ ದೇವೇಶ ವೈಶಾಖೇ ಮೇಷಗೇ ರವೈ|

ಪ್ರಾತಃಸ್ನಾನಮ್‌ ಕರಿಷ್ಯಾಮಿ ನಿರ್ವಿಘ್ನಮ್‌ ಕುರು ಮಾಧವ||


ಅಂದರೆ, ಹೇ ಮಧುಸೂಧನ ಶ್ರೀಹರಿ, ದೇವ ದೇವೇಶನೇ ನಾನೀಗ ವೈಶಾಖ ಮಾಸದ ಪುಣ್ಯ ಸ್ನಾನವನ್ನು ಮಾಡಲು ನದಿ ತೀರಕ್ಕೆ ಬಂದಿರುವೆ. ಬ್ರಾಹ್ಮೀ ಮುಹೂರ್ತದ ಈ ದಿನಗಳಲ್ಲಿ ಸೂರ್ಯದೇವನು ಮೇಷ ರಾಶಿಯಲ್ಲಿರುತ್ತಾನೆ. ಯಾವುದೇ ವಿಘ್ನಗಳು ಕಾಡದೇ ಕೈಗೊಂಡ ಕಾರ್ಯ ಪೂರ್ಣಗೊಳ್ಳುವಂತೆ ಮಾಡು. ಸ್ನಾನಾನಂತರ ಕೊಡುವ ಅಘ್ರ್ಯವನ್ನು ಸೂರ್ಯನಾರಾಯಣನೇ ಸ್ವೀಕರಿಸು. ಜಲಕ್ಷಾಮ ಬಾರದಂತೆ ಹರಸು ಮಾಧವ.

******




ಸಂಕ್ಷಿಪ್ತ ವೈಶಾಖಸ್ನಾನವಿಧಿ - 

ಆಚಮನಮಾಡಿ ಸ್ನಾನ ಸಂಕಲ್ಪ ವನ್ನು ಮಾಡುವುದು.

ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ,ಬೌದ್ಧಾವತಾರೆ -ರಾಮಕ್ಷೆತ್ರೇ-ಅಸ್ಮಿನ್ ವರ್ತಮಾನೇ -ವಿಕಾರಿ ನಾಮ ಸಂವತ್ಸರೇ -ಉತ್ತರಾಯಣೆ -ಋತೌ-ಮಾಸೇ-ಪಕ್ಷೆ-ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-

ಏವಂ ಗುಣವಿಶಿಷ್ಟಾಯಾಂ-ಶುಭತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ, ಸಾಲಿಗ್ರಾಮ ,ಚಕ್ರಾಂಕಿತ -ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮಧುಸೂದನಪ್ರೀತ್ಯರ್ಥಂ ವೈಶಾಖಸ್ನಾನಮಹಂ ಕರಿಷ್ಯೇ ಎಂದು ಸಂಕಲ್ಪಿಸಿ ನಂತರ ಮಧುಸೂದನನನ್ನು ಪ್ರಾರ್ಥಿಸಿ ಮೌನಿಯಾಗಿ ಸ್ನಾನವನ್ನು ಮಾಡಬೇಕು


ವೈಶಾಖಸ್ನಾನ ಮಂತ್ರ

ವೈಶಾಖಂ ಸಕಲಂ ಮಾಸಂ ಮೇಷಸಂಕ್ರಮಣೇ ರವೇಃ |
ಪ್ರಾತಃ ಸನಿಯಮಃ ಸ್ನಾಸ್ಯೇ ಪ್ರೀಯತಾಂ ಮಧುಸೂದನಃ ||

ಮಧುಹಂತುಃ ಪ್ರಸಾದೇನ ಬ್ರಾಹ್ಮಣಾನಾಮನುಗ್ರಹಾತ್ |
ನಿರ್ವಿಘ್ನಮಸ್ತು ಮೇ ಪುಣ್ಯಂ ವೈಶಾಖಸ್ನಾನಮನ್ವಹಮ್ ||

ಮಾಧವೇ ಮೇಷಗೇ ಭಾನೌ ಮುರಾರೇ ಮಧುಸೂದನ |
ಪ್ರಾತಃಸ್ನಾನೇನ ಮೇ ನಾಥ ಫಲದೋ ಭವ ಪಾಪಹನ್ ||

ವೈಶಾಖೇ ಮೇಷಗೇ ಭಾನೌ ಪ್ರಾತಃಸ್ನಾನಂ ಕರೋಮ್ಯಹಮ್ |
ತೀರ್ಥೇ ಜಲಮಯೇ ಪುಣ್ಯೇ ಪುನೀಹಿ ಮಧುಸೂದನ ||

ಅರ್ಘ್ಯಮಂತ್ರ

ವೈಶಾಖೇ ಮೇಷಗೇ ಭಾನೌ ಪ್ರಾತಃಸ್ನಾನ ಪರಾಯಣಃ |
ಅರ್ಘ್ಯಂ ತೇsಹಂ ಪ್ರದಾಸ್ಯಾಮಿ ಗೃಹಾಣ ಮಧುಸೂದನ ||

ಗಂಗಾದ್ಯಾಃ ಸರಿತ್ಸರ್ವಾಸ್ತೀರ್ಥಾನಿ ಚ ಹೃದಾಶ್ಚಯೇ |
ಪ್ರಗೃಹ್ಣಿತ ಮಯಾ ದತ್ತಮರ್ಘ್ಯಂ ಸಮ್ಯಕ್ ಪ್ರಸೀದಥ ||

ಋಷಭಃ ಪಾಪಿನಾಂ ಶಾಸ್ತಾ ತ್ವಂ ಯಮಃ ಸಮದರ್ಶಿನಃ |
ಗೃಹಾಣಾರ್ಘ್ಯಂ ಮಯಾ ದತ್ತಂ ಯಥೋಕ್ತಫಲದೋ ಭವ ||

ಸೂರ್ಯಾರ್ಘ್ಯ ಮಂತ್ರ

ಏಹಿ ಸೂರ್ಯ ಸಹಸ್ರಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಯ ಮಾಂ ಭಕ್ತ್ಯಾ ಗೃಹಾಣಾರ್ಘ್ಯಂ ನಮೋಸ್ತುತೇ ||

ಶ್ರೀಕೃಷ್ಣಾರ್ಪಣಮಸ್ತು

( ಸೂಚನೆ -ಮನೆಯಲ್ಲಿ ವೈಶಾಖ ಸ್ನಾನಮಾಡುವವರು ಸ್ನಾನಸಂಕಲ್ಪ ಮಾಡಿ ವೈಶಾಖ ಸ್ನಾನಮಂತ್ರ ಅರ್ಘ್ಯಮಂತ್ರಗಳನ್ನು ಹೇಳಿದರೆ ಸಾಕು ಸ್ನಾನಾನಂತರ ಅರ್ಘಮಂತ್ರಗಳಿಂದ ಅರ್ಘ್ಯಕೊಡುವುದು)
|| ಶ್ರೀಕೃಷ್ಣಾರ್ಪಣಮಸ್ತು ||
ಸಂಗ್ರಹ - ಫಣೀಂದ್ರ ಕೌಲಗಿ
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*********
ನದಿಸ್ನಾನವಿಧಿ ಪ್ರತ್ಯೇಕವಾಗಿವುದು

ನಾರದರು ಹೇಳಿದ ವೈಶಾಖ ಮಾಸದ ಪುಣ್ಯಸ್ನಾನ ಮಹತ್ವ
ಈ ಮಾಸದಲ್ಲಿ ಗಂಗಾ, ಯಮುನಾ, ಕಾವೇರಿ, ನರ್ಮದಾ, ಕೃಷ್ಣ ನದಿ ಸ್ನಾನ ಶ್ರೇಷ್ಠವೆಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಜಲ ದಾನ, ಜಲ ಸಂಗ್ರಹಣೆ, ಜಲ ರಕ್ಷಣೆಗೂ ಅಷ್ಟೇ ಮಹತ್ವವಿದೆ. ಬಾಯಾರಿ ಮನೆ ಬಾಗಿಲಿಗೆ ಬಂದ ಅತಿಥಿಗೆ ತಂಪನೆಯ ನೀರು ಕೊಟ್ಟು ಉಪಚರಿಸುವುದು ಶ್ರೇಷ್ಠ ಕರ್ಮ. ವೈಶಾಖ ಸ್ನಾನ ಮಾಡುವ ಮುನ್ನ ಈ ಮಂತ್ರವನ್ನು ಹೇಳಿಕೊಳ್ಳಿ.
ಚುರು ಚುರು ಬೇಸಿಗೆ ಬಿಸಿಗೆ ನದಿ ನೀರಿನ ಸ್ನಾನ ಸಕತ್‌ ಖುಷಿ ಕೊಡುತ್ತದೆ. ಹಾಗೆಂದೇ ವೈಶಾಖ ಮಾಸ ನದಿ ಸ್ನಾನಕ್ಕೆ ಮಹತ್ವವಿದೆ. ಅದರೊಂದಿಗೆ ನಾಳೆಯ ಬದುಕಿಗೆ ನೀರು ಉಳಿಸಬೇಕೆಂಬ ಕಾಳಜಿಯೂ ಇದೆ. ವೈಶಾಖ ಮಾಸದ ಮಹತ್ವವನ್ನು ಮೊದಲಿಗೆ ನಾರದರು ರಾಜಾ ಅಂಬರೀಷರಿಗೆ ಹೇಳಿದರು. ಶ್ರೀಹರಿಗೆ ಪ್ರಿಯವಾದ ಮಾಸವಿದು. ಈ ಮಾಸದಲ್ಲಿ ಗಂಗಾ, ಯಮುನಾ, ಕಾವೇರಿ, ನರ್ಮದಾ, ಕೃಷ್ಣ ನದಿ ಸ್ನಾನ ಶ್ರೇಷ್ಠವೆಂದು ಹೇಳಲಾಗುತ್ತದೆ.
ಈ ಮಾಸದಲ್ಲಿ ಜಲ ದಾನ, ಜಲ ಸಂಗ್ರಹಣೆ, ಜಲ ರಕ್ಷಣೆಗೂ ಅಷ್ಟೇ ಮಹತ್ವವಿದೆ. ಬಾಯಾರಿ ಮನೆ ಬಾಗಿಲಿಗೆ ಬಂದ ಅತಿಥಿಗೆ ತಂಪನೆಯ ನೀರು ಕೊಟ್ಟು ಉಪಚರಿಸುವುದು ಶ್ರೇಷ್ಠ ಕರ್ಮ. ವೈಶಾಖ ಸ್ನಾನ ಮಾಡುವ ಮುನ್ನ ಈ ಮಂತ್ರವನ್ನು ಹೇಳಿಕೊಳ್ಳಿ.

ಮಧುಸೂಧನ ದೇವೇಶ ವೈಶಾಖೇ ಮೇಷಗೇ ರವೈ|

ಪ್ರಾತಃಸ್ನಾನಮ್‌ ಕರಿಷ್ಯಾಮಿ ನಿರ್ವಿಘ್ನಮ್‌ ಕುರು ಮಾಧವ||

ಅಂದರೆ, ಹೇ ಮಧುಸೂಧನ ಶ್ರೀಹರಿ, ದೇವ ದೇವೇಶನೇ ನಾನೀಗ ವೈಶಾಖ ಮಾಸದ ಪುಣ್ಯ ಸ್ನಾನವನ್ನು ಮಾಡಲು ನದಿ ತೀರಕ್ಕೆ ಬಂದಿರುವೆ. ಬ್ರಾಹ್ಮೀ ಮುಹೂರ್ತದ ಈ ದಿನಗಳಲ್ಲಿ ಸೂರ್ಯದೇವನು ಮೇಷ ರಾಶಿಯಲ್ಲಿರುತ್ತಾನೆ. ಯಾವುದೇ ವಿಘ್ನಗಳು ಕಾಡದೇ ಕೈಗೊಂಡ ಕಾರ್ಯ ಪೂರ್ಣಗೊಳ್ಳುವಂತೆ ಮಾಡು. ಸ್ನಾನಾನಂತರ ಕೊಡುವ ಅಘ್ರ್ಯವನ್ನು ಸೂರ್ಯನಾರಾಯಣನೇ ಸ್ವೀಕರಿಸು. ಜಲಕ್ಷಾಮ ಬಾರದಂತೆ ಹರಸು ಮಾಧವ.
***

ವೈಶಾಖಮಾಸದ ಮಹತ್ವ 🌷
*************
ಧರ್ಮಘಟ ದಾನದ ಮಹತ್ವ

ವೈಶಾಖಮಾಸ ಪೂರ್ತಿಯಾಗಿ ಜಲಕುಂಭವನ್ನು  ದಾನವನ್ನು ಮಾಡಬೇಕು ಮಾಸ ಪೂರ್ತಿ  ಕೊಡಲು ಆಶಕ್ತರಾದವರು ಒಂದು ದಿನವಾದರೂ  ಧರ್ಮಘಟದಾನವನ್ನು ಮಾಡಬೇಕು

ಒಂದು ತಾಮ್ರದ ತಂಬಿಗೆಯಲ್ಲಿ ಗಂಧ ನೀರು, ತುಲಸಿ ತಿಲ, (ಎಳ್ಳು) ಗಳನ್ನು ಹಾಕಿದ ಧರ್ಮಘಟವನ್ನು ಬ್ರಾಹ್ಮಣನಿಗೆ ಭೋಜನವನ್ನು ಮಾಡಿಸಿ   ದಕ್ಷಿಣೆ ಸಮೇತ ದಾನ  ಮಾಡಬೇಕು. ಇದರಿoದ ಪಿತೃಗಳಿಗೆ ಸಹಸ್ರ ವರ್ಷಗಳ ಕಾಲ ಶ್ರಾದ್ಧ ಮಾಡಿದ ತೃಪ್ತಿಯುಂಟಾಗುತ್ತದೆ.

 🌷ಧರ್ಮಘಟದಾನ ಮಂತ್ರ🌷

ಏಷ ಧರ್ಮಘಟೋ ದತ್ತಃ ಬ್ರಹ್ಮ -ವಿಷ್ಣು –ಶಿವಾತ್ಮಕಃ |
ಅಸ್ಯ ಪ್ರಧಾನಾತ್ ಸಕಲಾ ಮಮ ಸಂತು ಮನೋರಥಾಃ |
ಅಸ್ಯ ಪ್ರಧಾನಾತ್ ತೃಪ್ಯoತು ಪಿತರೋsಥ ಪಿತಾಮಹಾಃ |
ಗಂಧೋಧಕ ತಿಲೈರ್ಮಿಶ್ರo ಸ್ನಾನo ಕುoಭಂ ಫಲಾನ್ವಿತಂ |
ಪಿತೃಭ್ಯಃ ಸಂಪ್ರಾದಾಸ್ಯಾಮಿ ಅಕ್ಷಯ್ಯಮುಪತಿಷ್ಠತು ||

ಆಕ್ಷಯ ತೃತೀಯದಿನ ವಿಶೇಷವಾಗಿ ಈ ದಾನ ಮಾಡಬೇಕು.

  **************

ವೈಶಾಖಮಾಸದಲ್ಲಿ ಕೊಡಬೇಕಾದ ದಾನಗಳು ಅವುಗಳ ಫಲಗಳು

1) ಜಲದಾನ - ಸಂಪತ್ತು - ಹಲ್ಲಿ ಜನ್ಮ ನಿವೃತ್ತಿ, ವಿಷ್ಣುಲೋಕಪ್ರಾಪ್ತಿ

2) ಪ್ರಪಾದಾನ (ಆರವಟ್ಟಿಗೆ) - ವಿಷ್ಣುಲೋಕಪ್ರಾಪ್ತಿ

3) ಶಯ್ಯಾ (ಹಾಸಿಗೆ) ದಾನ - ಸರ್ವಭೋಗ

4) ಚಾಪೆ - ಸಂಸಾರದಿಂದ ಮುಕ್ತಿ

5) ಕಂಬಳಿ - ಅಪಮೃತ್ಯು ಪರಿಹಾರ

6) ವಸ್ತ್ರದಾನ - ಪೂರ್ಣಾಯುಷ್ಯ ಪ್ರಾಪ್ತಿ

7)  ಕುಸುಮ - ಕುoಕುಮದಾನ - ರಾಜ್ಯ ಪದವೀ

8)  ಚಂದನ - ತಾಪತ್ರಾಯನಾಶ

9)  ತಂಬೂಲ -ಸಾರ್ವಬೌಮಪದವೀ

10) ನಾರಿಕೇಲ (ಎಳನೀರು) - ಸಪ್ತಜನ್ಮವಿಪ್ರತ್ವ

11) ಮಜ್ಜಿಗೆ - ವಿದ್ಯಾ ಮತ್ತು ಧನ ಪ್ರಾಪ್ತಿ

12) ಮೊಸರು - ಅಖಂಡಫಲ

13) ತುಪ್ಪ - ಅಶ್ವಮೇಧಯಜ್ಞಫಲ

14) ಕೋಸಂಬರಿ ಸೌತೆಕಾಯಿ,ಬೆಲ್ಲ  - ಶ್ವೇತ ದ್ವೀಪವಾಸ

15) ಪಾನಕ - ಪಿತೃಗಳ ತೃಪ್ತಿ

16) ಉದಕುಂಭದಾನ - ಗಯಾಶತಶ್ರಾದ್ಧ ಫಲ

17) ಪಾದರಕ್ಷೆ - ನರಕ ಪ್ರವೇಶವಿಲ್ಲ

18) ಛತ್ರಿ - ತಾಪತ್ರಾಯನಾಶ

19) ಬಿಸಣಿಗೆ - ರಾಜಸೂಯಯಾಗಫಲ

20) ಅಕ್ಕಿದಾನ - ಪೂರ್ಣಾಯುಷ್ಯ ಸರ್ವಯಜ್ಞಫಲ

21) ಕಬ್ಬಿನರಸದದಾನ - ಪಿತೃಗಳಿಗೆ ಅಮೃತಪಾನಫಲ

22) ಗಡ್ಡೆ - ಗೆಣಸು, ಹಣ್ಣು, ತರಕಾರಿ, ಉಪ್ಪು, ಬೆಲ್ಲ, ಮೆಣಸು, ಪತ್ರೆ, ನೀರು ಮಜ್ಜಿಗೆ

ಇವುಗಳಲ್ಲಿ ಯಾವುದನ್ನು ದಾನಮಾಡಿದರೂ ಆ ಪದಾರ್ಥಗಳು ದಾನಿಗೆ ಅನಂತವಾಗುವುದು   ಎಂದು “ವೈಶಾಖಮಾಸ  ಮಹಾತ್ಮೆ”ಯಲ್ಲಿ ನಾರದರು ಅಂಬರೀಷ ಮಹಾರಾಜನಿಗೆ  ಹೇಳಿದ್ದಾರೆ

               || ಶ್ರೀಕೃಷ್ಣಾರ್ಪಣಮಸ್ತು ||

✍️ ಫಣೀಂದ್ರ ಕೌಲಗಿ

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***
ವೈಶಾಖ ಮಾಸ: ಈ ಮಾಸದ ಮಹತ್ವವೇನು..? ಈ ಕೆಲಸಗಳನ್ನು ಮಾಡಿದರೆ ಪುಣ್ಯ..!

ಇಂದಿನಿಂದ ವೈಶಾಖ ಮಾಸ.
ಈ ಪವಿತ್ರ ವೈಶಾಖ ಮಾಸದ ಮಹತ್ವವೇನು..? ವೈಶಾಖ ಮಾಸದಲ್ಲಿ ನಾವು ಯಾವ ಕೆಲಸಗಳನ್ನು ಮಾಡಿದರೆ ಶುಭ..? ಹಾಗೂ ಯಾವ ಕೆಲಸಗಳು ಪುಣ್ಯವನ್ನು ಕರುಣಿಸುತ್ತದೆ ಗೊತ್ತೇ..?

ಹಿಂದೂ ಹೊಸ ವರ್ಷದ ಎರಡನೇ ಮಾಸವಾದ ವೈಶಾಖ ಮಾಸ. ದಾನ, ಪುಣ್ಯಕ್ಷೇತ್ರ ದರ್ಶನ, ಶ್ರೀ ಮಹಾವಿಷ್ಣು ಮತ್ತು ಗಂಗಾ ದೇವಿಯ ಆರಾಧನೆ, ಜಲದಾನ, ಏಕಾದಶಿಯಂದು ವ್ರತವನ್ನು ಇಟ್ಟುಕೊಳ್ಳುವುದು, ಗಂಗಾ ಸ್ನಾನ ಇತ್ಯಾದಿಗಳ ಮಹತ್ವವನ್ನು ಈ ಮಾಸದಲ್ಲಿ ಹೇಳಲಾಗಿದೆ. ಈ ಮಾಸದಲ್ಲಿ ಯಾವ ಪುಣ್ಯ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

​ಮಹಾವಿಷ್ಣುವನ್ನು ಹೀಗೆ ಪೂಜಿಸಿ

ವೈಶಾಖ ಮಾಸದಲ್ಲಿ ಮಹಾವಿಷ್ಣುವಿನ ಪೂಜೆ ಮಾಡಬೇಕೆಂಬ ನಿಯಮವಿದೆ. ಈ ಸಮಯದಲ್ಲಿ, ವಿಷ್ಣುವಿನ ಮಾಧವ ರೂಪವನ್ನು ತುಳಸಿ ಎಲೆಗಳಿಂದ ಪೂಜಿಸಲಾಗುತ್ತದೆ. ವಿಷ್ಣುವಿಗೆ ಪಂಚಾಮೃತವನ್ನು ಅರ್ಪಿಸಿ ಮತ್ತು ಆ ಪಂಚಾಮೃತದಲ್ಲಿ ತುಳಸಿ ಎಲೆಗಳನ್ನು ಹಾಕಲು ಮರೆಯದಿರಿ. ಅಲ್ಲದೆ ಬಿಳಿ ಅಥವಾ ಹಳದಿ ಹೂವುಗಳನ್ನು ಅವರಿಗೆ ಅರ್ಪಿಸಬೇಕು.

​ಈ ಮಂತ್ರವನ್ನು ಪಠಿಸಿ

ಈ ಮಾಸದಲ್ಲಿ ನೀವು ಮಂತ್ರವನ್ನು ಪಠಿಸಬೇಕು. ' ಓಂ ಮಾಧವಾಯ ನಮಃ' ಈ ಮಂತ್ರವನ್ನು ದಿನಕ್ಕೆ ಕನಿಷ್ಠ 11 ಬಾರಿ ಪಠಿಸಿ. ಹಾಗೆಯೇ ವಿಷ್ಣುವಿನ ಹೆಸರುಗಳಾದ ಕೇಶವ, ನಾರಾಯಣ, ಶ್ರೀಹರಿ, ಗೋವಿಂದ, ತ್ರಿವಿಕ್ರಮ, ಪದ್ಮನಾಭ, ಮಧುಸೂದನ, ಅಚ್ಯುತ ಮತ್ತು ಹೃಷಿಕೇಶ ಈ ಹೆಸರನ್ನು ಧ್ಯಾನಿಸಿ.

​​ವಿಷ್ಣುವಿನ ನಾನಾ ಅವತಾರ

ಇದೇ ತಿಂಗಳಲ್ಲಿ, ಅಕ್ಷಯ ತೃತೀಯ ದಿನದಂದು, ಪರಶುರಾಮ ಜಯಂತಿ ಮತ್ತು ಹಯಗ್ರೀವ ಸಹಿತ ವಿಷ್ಣುವಿನ ನರ-ನಾರಾಯಣನ ಅವತಾರವು ಪ್ರಕಟಗೊಂಡಿತು. ಈ ಮಾಸದಲ್ಲಿ ನರಸಿಂಹ, ಕೂರ್ಮ ಅವತಾರ, ಗಂಗಾ ಮಾತೆ, ಚಿತ್ರಗುಪ್ತನನ್ನು ಪೂಜಿಸಲಾಗುತ್ತದೆ.

ಶ್ರಾದ್ಧ

ವೈಶಾಖ ಮಾಸದಲ್ಲಿ ಅಮಾವಾಸ್ಯೆ ಮತ್ತು ಪೂರ್ಣಿಮೆಯಂದು ಪೂರ್ವಜರಿಗೆ ತರ್ಪಣ ಮತ್ತು ಪಿಂಡದಾನ ಮಾಡಬೇಕು. ಇದರ ಮಹತ್ವವನ್ನು ವೈಶಾಖ ಮಾಸದ ಕಥೆಯಲ್ಲಿ ಹೇಳಲಾಗಿದೆ. ಪುರಾಣದ ಪ್ರಕಾರ, ಧರ್ಮವರ್ಣ ಎಂಬ ವಿಪ್ರನು ವೈಶಾಖ ಅಮಾವಾಸ್ಯೆಯಂದು ವಿಧಿ ವಿಧಾನಗಳ ಮೂಲಕ ಪಿಂಡದಾನ ಮಾಡುವುದರಿಂದ ತನ್ನ ಪೂರ್ವಜರನ್ನು ಮುಕ್ತಗೊಳಿಸಿದನು. ಶ್ರಾದ್ಧ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ.

​ಶಿವನ ಪೂಜೆ

ಈ ಮಾಸದಲ್ಲಿ ಭಗವಾನ್ ಶಿವನನ್ನು ಪೂಜಿಸುವುದರಿಂದ ಬಹುವಿಧವಾದ ಶುಭ ಫಲಗಳು ದೊರೆಯುತ್ತವೆ ಮತ್ತು ಪರಮೇಶ್ವರನು ಸಂತುಷ್ಟನಾಗಿ ಅನುಗ್ರಹಿಸುತ್ತಾನೆ. .

​ಜಲದಾನ

ಈ ಮಾಸದಲ್ಲಿ ಜಲದಾನವನ್ನು ಮಾಡುವುದು ಅತ್ಯಂತ ದೊಡ್ಡ ಪುಣ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದಾರಿಹೋಕರಿಗೆ ಅಥವಾ ಬಾಯಾರಿ ಬಂದವರಿಗೆ ನೀರನ್ನು ನೀಡುವ ಮೂಲಕ ಅವರ ಬಾಯಾರಿಕೆಯನ್ನು ನೀಗಿಸಿ. ಈ ಸದ್ಗುಣದ ಮೂಲಕ, ವ್ಯಕ್ತಿಯು ತ್ರಿದೇವನ ಅನುಗ್ರಹವನ್ನು ಪಡೆಯುತ್ತಾನೆ.

ವಾಯು ಪಂಕ ​(ಫ್ಯಾನ್‌) ದಾನ

ಈ ವೈಶಾಖ ಮಾಸದಲ್ಲಿ ಹೆಸರೇ ಹೇಳುವಂತೆ ಶಾಖ ಅಧಿಕವಾಗಿರುತ್ತದೆ. ಅದಕ್ಕಾಗಿ ಫ್ಯಾನ್ ದಾನ ಮಾಡುವುದು ಕೂಡ ಪುಣ್ಯದ ಕಾರ್ಯ. ಸೂರ್ಯನ ಬೆಳಕಿನಿಂದ ಬಳಲುತ್ತಿರುವ ಜನರಿಗೆ ಮತ್ತು ಫ್ಯಾನ್‌ನಿಂದ ಗಾಳಿಯನ್ನು ಬೀಸುವ ಮೂಲಕ ತಂಪು ನೀಡುವವನು ಪಾಪರಹಿತನಾಗುತ್ತಾನೆ ಮತ್ತು ಭಗವಂತನಿಗೆ ಪ್ರಿಯನಾಗುತ್ತಾನೆ. ಹಿಂದಿನ ಕಾಲದಲ್ಲಿ ತಾಳೆ ಬೀಸನ್ನು ದಾನ ಮಾಡಲಾಗುತ್ತಿತ್ತು. ಇದರಿಂದ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ. ಬಿದಿರಿನ ಬೀಸಣಿಗೆಯನ್ನು ಸಹ ದಾನ ಮಾಡುವುದು ಉತ್ತಮ.

​ಅನ್ನದಾನ

ಅನ್ನದಾನಕ್ಕಿಂತ ದೊಡ್ಡ ಪುಣ್ಯವಿಲ್ಲ. ಮಧ್ಯಾಹ್ನ ಮನೆಗೆ ಬಂದ ಬ್ರಾಹ್ಮಣ, ಅತಿಥಿ ಅಥವಾ ಹಸಿದ ಜೀವಿಗಳಿಗೆ ಯಾವುದೇ ಆಹಾರವನ್ನು ನೀಡಿದರೆ, ಅವನು ಅನಂತ ಪುಣ್ಯವನ್ನು ಪಡೆಯುತ್ತಾನೆ. ಸಾಧ್ಯವಿಲ್ಲದಿದ್ದರೆ ಆಹಾರ ಪದಾರ್ಥಗಳನ್ನು ದಾನ ಮಾಡಬಹುದು.

​ಶಯ್ಯಾ (ಹಾಸಿಗೆ) ದಾನ

ನಿದ್ರೆಯು ದುಃಖವನ್ನು ನಾಶಪಡಿಸುತ್ತದೆ, ನಿದ್ರೆಯು ಆಯಾಸವನ್ನು ಹೋಗಲಾಡಿಸುತ್ತದೆ, ನಿದ್ರೆಯು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದ್ದರಿಂದ ಯಾರು ಒಣಹುಲ್ಲಿನ ಅಥವಾ ತಾಳೆ ಎಲೆಗಳಿಂದ ಮಾಡಿದ ಚಾಪೆಯನ್ನು ದಾನ ಮಾಡುತ್ತಾರೋ ಅವರ ಎಲ್ಲಾ ದುಃಖಗಳು ನಾಶವಾಗುತ್ತವೆ ಮತ್ತು ಪರಲೋಕದಲ್ಲಿ ಉತ್ತಮವಾದವುಗಳನ್ನು ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ. ಬಿದಿರಿನ ಚಾಪೆ ಅಥವಾ ಹಾಸಿಗೆಯನ್ನು ದಾನ ಮಾಡಬಹುದು.

​ಪಾದುಕೆ ದಾನ ಮಾಡಿ

ಒಬ್ಬ ನಿರ್ಗತಿಕನಿಗೆ ಅಥವಾ ಅವಶ್ಯಕತೆ ಇರುವವರಿಗೆ ಪಾದುಕೆ ಅಥವಾ ಪಾದರಕ್ಷೆಯನ್ನು ದಾನ ಮಾಡಿದವನು ಯಮಧೂತನನ್ನು ಧಿಕ್ಕರಿಸಿ ಭಗವಂತ ಶ್ರೀ ಹರಿ ಲೋಕಕ್ಕೆ ಹೋಗುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.

​ಪವಿತ್ರ ನದಿ ಸ್ನಾನ

ಈ ಮಾಸದಲ್ಲಿ ವಿಶೇಷ ದಿನಗಳಲ್ಲಿ ನದಿ, ಸಮುದ್ರ, ಜಲಾಶಯ ಅಥವಾ ಕಲ್ಯಾಣಿ ಇತ್ಯಾದಿಗಳಲ್ಲಿ ಸ್ನಾನ ಮಾಡಬೇಕು. 

​ಸೂರ್ಯದೇವನಿಗೆ ಅರ್ಘ್ಯ

ಈ ಮಾಸದಲ್ಲಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ, ಹರಿಯುವ ನೀರಿನಲ್ಲಿ ಎಳ್ಳನ್ನು ಹಾಕಬೇಕು.

​ಕಾಳ ಸರ್ಪ ದೋಷಕ್ಕೆ ಪರಿಹಾರ

ಈ ಮಾಸದಲ್ಲಿಯೂ ಕಾಳ ಸರ್ಪದೋಷವನ್ನು ಹೋಗಲಾಡಿಸಲು ಅಮಾವಾಸ್ಯೆ ತಿಥಿಯಂದು ಜ್ಯೋತಿಷ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಮಾವಾಸ್ಯೆಯಂದು ಬೆಳಗ್ಗೆ ಹಲಸಿನ ಮರಕ್ಕೆ ನೀರು ಹಾಕಿ ಸಂಜೆ ದೀಪ ಹಚ್ಚಬೇಕು.

​ಶನಿ ದೇವರಿಗೆ ಇವುಗಳನ್ನು ಅರ್ಪಿಸಿ

ಈ ಮಾಸದಲ್ಲಿ ಶನಿ ದೇವನ ಪೂಜೆಗೂ ವಿಶೇಷ ಮಹತ್ವವಿದೆ. ಹಾಗಾಗಿ ಈ ಮಾಸದಲ್ಲಿ ಶನಿದೇವನಿಗೆ ಎಳ್ಳು, ಎಣ್ಣೆ ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸಬೇಕು.

​ವೈಶಾಖ ಕಥೆಯನ್ನು ಓದಿ

ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕಲು, ವೈಶಾಖ ಕಥೆಯನ್ನು ಆಲಿಸಿ ಮತ್ತು ಗೀತೆಯನ್ನು ಪಠಿಸಿ.

​​ಇದು ಪುಣ್ಯದ ಕೆಲಸ

ವೈಶಾಖ ಮಾಸದ ಪೌರಾಣಿಕ ಕಥೆಯನ್ನು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

​ದಾನ ಮಾಡಿ

ಈ ತಿಂಗಳಲ್ಲಿ ದಾನದ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ವರ್ಷವಿಡೀ ಏನನ್ನೂ ದಾನ ಮಾಡದೇ ಇದ್ದರೆ ಈ ಮಾಸದಲ್ಲಿ ದಾನ ಮಾಡಬೇಕು. ಇದರಿಂದ ವರ್ಷವಿಡೀ ದಾನ ಮಾಡಿದ ಫಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

​ಏಕಾದಶಿ ವ್ರತ ಆಚರಿಸಿ

ವೈಶಾಖ ಮಾಸದ ಎರಡೂ ಏಕಾದಶಿಯಂದು ಉಪವಾಸವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ಪುಣ್ಯದ ಕೆಲಸ.

​ಗಂಗಾ ಪೂಜೆ

ಈ ಮಾಸದಲ್ಲಿ ಗಂಗಾಮಾತೆಯನ್ನು ಪೂಜಿಸುವುದು ಪುಣ್ಯವನ್ನು ತರುತ್ತದೆ. ಇದರೊಂದಿಗೆ ಅಮಾವಾಸ್ಯೆಯಂದು ಕೂಡ ವಿಶೇಷವಾಗಿ ಪೂಜೆಯನ್ನೂ ಮಾಡಬೇಕು.
***



No comments:

Post a Comment