SEARCH HERE

Friday 9 April 2021

ವಿಶೇಷ ಕರ್ನಾಟಕ ದೇವಾಲಯಗಳು temples of karnataka

 

Places of interest in Karnataka

tourist attractions in karnataka

******

50 Nrusimha (Narasimha) Kshetra-

click--->  50 nrusimha kshetras


 ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು



ರಾಯರು ತಪಸ್ಸು ಮಾಡಿದ ಸ್ಥಳ- ಪಂಚಮುಖಿ

ಸತ್ಯಬೋಧರು ಜನಿಸಿದ ಸ್ಥಳ-ರಾಯಚೂರು

ವಿಜಯದಾಸರು ಜನಿಸಿದ ಸ್ಥಳ- ಚೀಕಲಪರವಿ

ವಿಜಯದಾಸರು ಕಾಲವಾದ ಸ್ಥಳ- ಚಿಪ್ಪಗಿರಿ

ಗೋಪಾಲದಾಸರು ಜನಿಸಿದ ಸ್ಥಳ- ಮೊಸರಕಲ್ಲು

ಜಗನ್ನಾಥ ದಾಸರು ಜನಿಸಿದ ಸ್ಥಳ-ಬ್ಯಾಗವಾಟ

ಶ್ಯಾಮಸುಂದರ ದಾಸರು ಜನಿಸಿದ ಸ್ಥಳ-ಕುರುಡಿ

ಸ್ವಯಂಉದ್ಭವ ಷೋಡಶಬಾಹು ನರಸಿಂಹ ದೇವರು-ಕೊಪ್ಪರ

ಕಾರ್ಪರ ಅಂಕಿತಸ್ಥರಾದ ಗಿರಿಯಾಚಾರ್ ಜನಿಸಿದ ಸ್ಥಳ-ಕೊಪ್ಪರ

ಲಕ್ಷ್ಮೀನಾರಯಣತೀರ್ಥರಿಗೆ ಶ್ರೀಪಾದರಾಜರು ಅನ್ನುವ ಶುಭನಾಮ ನೀಡಿದ ಸ್ಥಳ ಕೊಪ್ಪರ

ಶ್ರೀಕೃಷ್ಣದ್ವೈಯಪಾಯನತೀರ್ಥರ ಬೃಂದಾವನ-ಕುಸುಮೂರ್ತಿ

ಉತ್ತರಾದಿ ಮಠದ ಯತಿತ್ರಯರ ಬೃಂದಾವನ- ಆತಕೂರು

ಉತ್ತರಾದಿ ಮಠದ ಯತಿಗಳ ಬೃಂದಾವನ- ಕೊಲ್ ಪುರು

ರಾಯರ ಮಠದ ಯತಿಗಳ ಬೃಂದಾವನ- ಮುಡುಮಾಲ

ಗೋವಿಂದದಾಸರು ಜನಿಸಿದ ಸ್ಥಳ-ಅಸ್ಕಿಹಾಳ

ರಾಯರ ಮೂಲಬೃಂದಾವನ ಸ್ಥಳ ಮಂತ್ರಾಲಯ(ಈಗ ಆಂಧ್ರಪ್ರದೇಶದ ಆಡಳಿತದಲ್ಲಿದೆ)

ಉಪೇಂದ್ರತೀರ್ಥರು ಪ್ರತಿಷ್ಠಾಪಿತ ಪ್ರಾಣದೇವರು- ಕಾಡ್ಲೂರು

ವರದೇಶವಿಠಲರು ಜನಿಸಿದ ಸ್ಥಳ-ಲಿಂಗಸೂಗುರ್

ಗೊರೆಬಾಳ್ ಹನುಮಂತರಾಯರು ಜನಿಸಿದ ಸ್ಥಳ- ಗೊರೆಬಾಳ್

ಪ್ರಾಣೇಶದಾಸರು ಜನಿಸಿದ ಸ್ಥಳ- ಲಿಂಗಸೂಗುರ್

ಜಗನ್ನಾಥದಾಸರಿಗೆ ವೆಂಕಟರಮಣ ದರ್ಶನ ನೀಡಿದ ಸ್ಥಳ-ಬಾಗಲವಾಡ(ದ್ವಾರವಾಡ)

ಜಗನ್ನಾಥದಾಸರ ಸ್ಥಂಭ(ಇರುವ ಸ್ಥಳ) ಮಾನವಿ

ರಾಯರು ಚಾತುರ್ಮಾಸ್ಯಕ್ಕೆ ಕುಳಿತ ಸ್ಥಳ-ಮಾನವಿ(ಸಂಜೀವರಾಯ ಗುಡಿ)

ಸುವಿಧ್ಯೇಂದ್ರ ತೀರ್ಥರು ಜನಿಸಿದ ಸ್ಥಳ- ಗಬ್ಬೂರು

ಶ್ರೀರಾಮ ಅಂಕಿತಸ್ಥರಾದ ಜೋಳದಹಡಗಿ ರಾಮರಾಸರು ಜನಿಸಿದ ಸ್ಥಳ- ದೇವದುರ್ಗ

****


 This is LakshmiNarayan temple located in Devdurga taluka of Raichur district of Karnataka.


If water is poured on the head of this idol, the water becomes cold by the time it reaches the feet of the idol. But if this water is poured only on the feet, it boils. 


This temple is believed to be around 1900 years old. Such wonderful secrets are hidden .

MIRACLE

***

Temple in Sea in Karwar 



***

ವೀರನಾರಾಯಣ ಗುಡಿ....ಕಣಗಿನಹಾಳ


 

ಇದು ವೀರನಾರಾಯಣ ಗುಡಿ....ಕಣಗಿನಹಾಳ ನಲ್ಲಿದೆ.

ಗದುಗಿನ ವೀರನಾರಾಯಣ, ಈ ಗುಡಿ ಮತ್ತು ಕೇರಳದ ಅನಂತ ಪದ್ಮನಾಭ ಗುಡಿಯು ಒಂದೇ ರೇಖೆಯಲ್ಲಿ ಇದೆ (ಅಂತರಿಕ್ಷದಿಂದ ಮ್ಯಾಪ್ ನೋಡಿದಾಗ) ಎಂದು ರೈತ ಕಳಕೇಶ ಹೇಳಿದರು.

ಈ ಎರಡು ಗುಡಿಗಳನ್ನು ಕೆಡುವುದಕ್ಕೆ ಶತ್ರುಗಳ ದಂಡೆತ್ತಿ ಬಂದರು....ಆಗ ಅಜ್ಜಿಯೊಬ್ಬಳು ಅವರಿಗೆ ಕಂಡಳು..

ಶತ್ರುಗಳು ವೀರನಾರಾಯಣ ಗುಡಿ ಎಲ್ಲಿದೆ ಎಂದು ಕೇಳಿದಾಗ ಅವಳು ನಾಗ ಸಮುದ್ರ (ಗದಗ್ ನಿಂದ ನರೇಗಲ್ ಮಾರ್ಗದಲ್ಲಿರುವ ಈಗಿನ ನಾಗಸಮುದ್ರ) ದಾಟಿದರೆ ಗುಡಿ ಸಿಗುತ್ತದೆ

ಎಂದಳು. ಅದನ್ನು ಶತ್ರುಗಳು ನಾಲ್ಕು ಸಮುದ್ರ ಎಂದು ತಪ್ಪಾಗಿ ಅರ್ಥೈಸಿಗೊಂಡು ಹಿಂದಿರುಗಿದರು ಎಂಬ ಕಥೆಯನ್ನು ಶಾಂತಪ್ಪ ಹೂಗಾರ್ ಹೇಳಿದರು.

ಆ ಅಜ್ಜಿಯು  ದೇವತೆ ಎಂದು, ದಂಡೆತ್ತಿ ಬಂದವರಿಂದ ಗುಡಿ ಕಾಪಾಡಿದಳೆಂದು ದಂಡಿನ ದುರ್ಗಮ್ಮ ಎಂದು ಕರೆದರು. ಗದಗ್ ಹೊರವಲಯದಲ್ಲಿ ಇಂದಿಗೂ ದಂಡಿನ ದುರ್ಗಮ್ಮ ಗುಡಿ ಇದೆ. ನೂರಾರು ಜನರು ನಿತ್ಯ  ಹೋಗುತ್ತಾರೆ.

ಕಣಗಿನಹಾಳದಲ್ಲಿಯೊ ಒಂದು ವೀರನಾರಾಯಣ ಗುಡಿ ಇದೆ ಎಂಬುದು ತಿಳಿದು ಖುಷಿಯೆನಿಸಿತು...

ಇಂದ - ರಘೋತ್ತಮ ಕೆ ಗದಗ.

****


Toravi Lakshmi Narasimha, 10 kms from Bijapur


vaishakha shukla shashti

click   TORAVI UTSAVA

****




ಈ ಭೋಗೇಶ್ವರ  ದೇವಸ್ಥಾನದ ಮೂರ್ತಿಯಾದ ರುದ್ರದೇವರು ಟಿಪ್ಪು ಸುಲ್ತಾನ್ ಜೊತೆ ಮಾತನಾಡಿದ್ದಾನೆ ಅಂತಲೂ ಚರಿತ್ರೆ ಇದೆ...

ಈ ರುದ್ರದೇವರಿಗೆ ಎಷ್ಟೇ ತೈಲಾಭಿಷೇಕ ಮಾಡಿದರೂ ಲಿಂಗದ ಒಳಗೆ ಹೋಗಿಬಿಡುತ್ತೆ...

ಮತ್ತೆ ಶ್ರೀ ವಿಜಯಪ್ರಭುಗಳ ತಪೋ ಸ್ಥಾನವೂ ಹೌದು. ಅದರ ಫಲವಾಗಿ ದೇವಸ್ಥಾನದ ಅಂದರೆ ರುದ್ರದೇವರ ಎದುರ್ಗಡೆ ಕಂಬದಲ್ಲಿ ಪುಟ್ಟ ಹನುಮಪ್ಪ ಮುಖ ತಿರುಗಿಸಿಕೊಂಡಂತಹಾ ಮೂರ್ತಿ  ಒಡಮೂಡಿದ್ದಾನೆ.  ಮತ್ತೆ ಇದೇ ದೇವಸ್ಥಾನದ ಹೊರಗಡೆ ಶ್ರೀ ವಿಜಯಪ್ರಭುಗಳು ಚಂದಪ್ಪನಿಗೆ ಮುಕ್ತಿಪಥವನ್ನು ತೋರಿದರೆಂತಲೂ ಚರಿತ್ರೆಯಲ್ಲಿ ನಾವು ಕೇಳಿದ್ದೇವೆ. 
ಮತ್ತೆ ವಾಮಾಚಾರ ಮಾಡುತ್ತಿರುವವರಿಗೆ ಸರಿಯಾದ ಮಾರ್ಗವನ್ನೂ  ತೋರಿದರು ಶ್ರೀ ವಿಜಯಪ್ರಭುಗಳು ಅಂತಲೂ ಹೇಳ್ತಾರೆ..

ಅಲ್ಲದೆ... 

ಶ್ರೀ ಸತ್ಯಜ್ಞಾನತೀರ್ಥರು (UTTARADIMUTT PONTIFF - PONTIFF 

Period 1906 – 1912) 

ಒಮ್ಮೆ ಸಂಚಾರತ್ವೇನ ಚಿಪ್ಪಗಿರಿಗೆ ಬಂದಾಗ , ಶಿಷ್ಯರು ರಾಮದೇವರ ಪೆಟ್ಟಿಗೆಯನ್ನು ಶ್ರೀ ಭೋಗೇಶ್ವರ ಆಲಯದಲ್ಲಿ ಇಟ್ಟುಬಿಡ್ತಾರೆ. ಸಂಜೆ ಆಗಿದ್ದ ಕಾರಣ ಪೆಟ್ಟಿಗೆಗೇನೇ ಪೂಜೆ ಮಾಡಿ ಶ್ರೀ ಪ್ರಾಣದೇವರಿಗೆ, ದೇವರಿಗೆ ಮಂಗಳಾರತಿ ನೀಡಿದರು. ನಂತರ ಅದು ರುದ್ರದೇವರ ದೇವಸ್ಥಾನ ಅಂತ ತಿಳಿದು,  ಶಿಷ್ಯರನ್ನ ಕೇಳಿದಾಗ , ಹೌದು ಸ್ವಾಮಿ,  ಆದರೆ ಇದು ಶ್ರೀ ವಿಜಯದಾಸಾರ್ಯರು ಕೈಲಾಸ ವಾಸಾ ಗೌರೀಶ ಈಶ ಪದವನ್ನು ರಚಿಸಿದ ದೇವಸ್ಥಾನ ಅಂತ ಇಲ್ಲಿಯೆ ಪೆಟ್ಟಿಗೆ ಇಟ್ಟಿದ್ದೆವೆ ಅಂತಾರೆ ಶಿಷ್ಯರು.  

ಆಗ ಶ್ರೀಗಳಂತಾರೆ ! ಆಯಿತು ಬಂದಿವಿ. ಮುಗಿತು,  ರಾತ್ರಿ ಕಳೆದು ಬೆಳಿಗ್ಗೆ ಬೇರೇ ದೇವಾಲಯಕ್ಕೆ ಹೋಗೋಣ ಅಂತ ಅಂತಾರೆ. ಆ ರಾತ್ರಿ ಎಲ್ರೂ  ಅಲ್ಲಿಯೇ ಮಲಗ್ತಾರೆ.

ಆ ದಿನ ಬೆಳಗಿನ ಜಾವ 3 ಗಂಟೆ ಗೇ ಸುಮಾರು ಶ್ರೀಗಳಿಗೆ ಪ್ರಾಣದೇವರು ಸ್ವಪ್ನದಲ್ಲಿ ಕಾಣಿಸಿಕೊಂಡು - ನಾನು ಇಲ್ಲಿಯೆ ಇದ್ದೆನೆ ಅಂದಮೇಲೆ ನನ್ನ ತಂದೆನೂ ಇರುವನು. ಅಂತಲೂ ಹೇಳಿ ಅಂತರ್ಹಿತನಾಗ್ತಾನೆ. ಶಿಷ್ಯರನ್ನು ಎಬ್ಬಿಸಿ ಶ್ರೀಗಳು ಎಲ್ಲಿಯೂ ಹೋಗುವದು ಬೇಡ. ಇಲ್ಲಿ ಪ್ರಾಣದೇವರು ಇದ್ದಾರೆಯಂತೆ ನೋಡಿ ಅಂದಾಗ. ಎಲ್ರೂ ಆ ಕತ್ತಲಿನಲ್ಲಿ ದಿವಿಟೀ ಹಿಡಿದು ಹುಡುಕಿದಾಗ ರುದ್ರದೇವರ ಎದುರ್ಗಡೆನೇ ಒಂದು ಕಂಬದಲ್ಲಿ ಪುಟ್ಟ ಹನುಮಪ್ಪನ ಕೆತ್ತನೆ ಇದ್ದದ್ದು ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತೆ. ಮರುದಿನ ವಿಜೃಂಭಣೆಯಿಂದ ಸಂಸ್ಥಾನ ಪೂಜೆ ಅಲ್ಲಿಯೇ ಮಾಡಿ ಪರಿವಾರದೊಂದಿಗೆ ಹೊರಡ್ತಾರೆ ಶ್ರೀ ಸತ್ಯಜ್ಞಾನತೀರ್ಥರು. 
ಈ ವಿಷಯವನ್ನು ಶ್ರೀ ಮೋಹನದಾಸಾರ್ಯರ ವಂಶಸ್ಥರಾದ ಶ್ರೀ ಕೃಷ್ಣದಾಸರು ಪ್ರತ್ಯಕ್ಷವಾಗಿ ನೋಡಿದ್ದೂ ಉಂಟು....

ಶ್ರೀ ವಿಜಯಪ್ರಭುಗಳು ಈ ಪ್ದಾಣದೇವರನ್ನೇ ಆಹ್ವಾನ ಮಾಡಿ ಅದೇ ಕಂಬದಲ್ಲಿ ಪೂಜಿಸುತ್ತಿದ್ದರು ಅಂತಲೂ ಶ್ರೀಗಳಿಗೆ ಸ್ವಪ್ನವೂ ಆಯಿತೆಂದು ಹೇಳುತ್ತಾರೆ.. 

****



Honnali
info from blog samyukta harshita

This small town in recent years had achieved fame as Dwithieya Mantralaya. The town has an interesting history. During the period of the Vijayanagar Emperors, this town was famous for selling gold and gold coins on its streets, Hence, its name Honalli.

Honalli today is a small town, 50 kms from Shimoga. It is located in Davangere district. The town has many religious institutions and maths but the most famous is the Raghavendra Swamy Matha.

The matha is set amongst picturesque surroundings on the banks of the Tungabhadra. Incidentally, Mantralaya too is on the banks of the Tungabhadra.

The matha has given Honalli the name Dwitheya Mantralaya as it is believed that Raghavendra Swamy himself came and did the pratisthapane of the Brindavana.

The Brindavana here is believed to be more than 300 years old.

The people who wanted to construct a Raghavendra Matha were coming in a procession from Mantralaya, carrying the Mrithike from the Moola Brindavana. The people saw an aged person in holy robes going into the matha and never returning. He is believed to be Raghavendra Swamy.

Even today, you can see the Thate (plate), Hanuman idol and other paraphernila that Rayaru himself brought to Honnali. All these things can be seen before 9 a.m., every morning.    

The contact mobile telephone number for Honnali matta  is 9880917328 (Sri Raghavendra). He is very helpful.

The matha has seven rooms and also a Kalyana Mantapa for performing functions. It is advisable to call up the matha if you want Theertha Prasada and accommodation. The matha will take care of all your pooja and seve arrangements.

Apart from the Raghavendra Swamy temple, Honnali has several religious structures. TheTuggalahalli Temple and Thirtha Rameshwartemple of Shiva are worth a visit.

The moola Brindavana of Bidarahalli Sreenivasa Theertha (1590-1640), a sanyasi of the Uttaradhi Matha, is also located here.  Bidarahalli Srinivasa Theertha was a contemporary of Rayaru and he was a noted Madhwa scholar. Raghavendra Swamy met Bidarahalli Srinivasacharya in Bidarahalli near here and appreciated his works. It is from the time of Srinivasacharya that the Rayaru Matha uses mustard during Chaturmasa. This story is too well-known to bear any repetition here.

It is believed that in his later avatar he became Jagannatha Dasaru, the author of  Sri Harikathaamrutasara.

Some of the important works of Srinivasacharya are Srimanyaayasudha, Tatvaprakashika,  Dashaprakaranateeka, Pramanapaddati, Bhagavatha and  Rugbhashya.

Honnali is noted for its holiness and its temples even before the establishment of the Rayaru temple. One of the Madhwa saints, Vadiraja Theertha, in his Theertha Prabanda says, “ 

  Maa yaahi pushkara mahee mathavaa

Prayaagam Kaasheem Gayaam

Badharikaashramamapya saadhyam

Sethu cha Raaghavakrutham

vara Thunga Bhadhraa Theera

Sthapippaalaham harimehi sidhdhai”.

What Vadiraja means is that instead of going with difficulty to places like Kashi, Gaya, Prayag (Ahallabad) and Badari, you can come to the Tungabhadra and it will give you the same sanctity and holiness.

The Tungabhadra flows right in front of the Matha. You can take bath there and perform seve or pooje at the matha. Kooldi is near Honnali. This is the place where the Tunga meets the Bhadra.  

By the way, the Udugani Sri Raghavendra Swami Mutt, which is considered to be the Trutheeya Mantralaya is near Shikaripura in Shimoga district. Shikarapura is near to Honalli.

People will tell you that after Rayaru disappeared into the Garba Gudi at the Honnali Rayara Matha, he came next to Udugani with the same set of articles and once again disappeared into the Garba Gudi, never to be seen again.    

Udugani is also the birthplace of Akka Mahadevi, the famous Vachana poetess and a woman saint. The temple town of Balligavi is nearby.

It is just seven kms from Shikaripura.

There are Rayara Muthas at Shimoga, Bhadravathi, Hosanagara, Teerthahalli and Davangere ofcourse. 

Honnali is taluk headquarters and reaching the town is easy. If you are going by road, go first to Shimoga and from there Honnali is 42 kms towards Harihar.

You can also take the railway route.Peole from Bangalore and Mysor will have to get down at Harihar and take a bus from there to Hoinnali. The bus stand at Harihar is adjacent t the Railway station and there arekud plenty of buses leaving for Shimoga via Honnali.

The distance from Harihar to Honnali can be covered in 45 minutes. The Janashatabdi Express and several other trains stop at Harihar. 

Visitors to Honnali may also visiit Kudli whichi is 10 kms from shimoga town.  The village, Kudli which is famous for Kudli Akshobhya Theertha Mutt click here below--->

KUDLI AKSHOBHYA THEERTHA MUTT

Another 2 kms from Kudli is Holehonnur where uttaradi mutt is there.  Holehonnur is famous for moola vrundavana of Sri. Satyadharma Theertharu (1830) click here below--> SATYADHARMA THEERTHA

**********


ಸಂತೇಬಿದನೂರು 

ಸಾಧ್ಯ ಆದರೆ ಸಂತೇಬಿದನೂರಿಗೆ ಹೋಗಿ ಬನ್ನಿ.

( ಗೌರಿಬಿದನೂರು ಆದ  ಮೇಲೆ ಬರುತ್ತೆ ) 

ಶ್ರೀ ಪ್ರಾಣದೇವರ ಗುಡಿ ಅಲ್ಲದೆ ಉತ್ತರಾದಿ ಮಠದ  ಶ್ರೀ ಸತ್ಯಪಾರಾಯಣರು ಶ್ರೀ ಸತ್ಯ ವರರ brudavana ಇದೆ.

ತುಂಬಾ ಜಾಗ್ರತ ಸ್ಥಳ...

*****




Suvarna river in Udupi, 9 km from Udupi Krishna Mutt

  1. What is Krishnangaaraka ?
  2. What is its significance ?
  3. Where is Krishnangaarakatte Ghat?

During Krishna Paksha if Chaturdashi falls on a Tuesday it is called Krishnangaraka Chaturdashi (abbreviated as Krishnangaraka). Bathing in Suvarna river on this day reaps immense merits.
On the day of Krishnangara Chaturdashi (Chaturdashi of Krishnapaksha if falls on Tuesday), if anyone takes bath in this river at Krishnangaarakatte, they can hear sounds in the river, just like the sounds of seeds cracking meaning, they can hear their sins burning. It is believed that a bath in this river relieves great sins.
There are 7 Mukti Kshetras of Coastal Belt of Western India. The 7 Mukti Kshetras namely Kukke Subrahmanya, Udupi, Kumbhashi, Kodeshwara, Shankaranarayana, Kollur and Gokarna together constitute Parashurama Kshetra. These holy places are compared with seven holy places in Rama Kshetra, namely, Ayodhya, Mathura, Maya, Kashi, Kanchi, Avanthika and Puri. It is also birth place of the famous Saint Madhvacharya who has introduced the Dwaitha Siddantha. There are so many big and small places of divinity like Pajaka Kshetra, Kunjarugiri, Vadabandeshwara, etc., etc.
There is a place which was not so recognised until 1996 is Krishnangaraka Chaturdashi Snana Ghat at the banks of River Suvarna situated on the way Manipal to Kallianpur near Shivalli Shimbra. (8 kms from Sri Krishna Matha) On the day of Krishnangaaraka Chaturdashi, it is believed that the holy Ganga will be arriving at this place. Therefore, the Acharyas of Ashta Mutts come to this place on that day along with their disciples for the holy dip.

His Holiness Sri Vadiraja Swamy in his books has written
वेदाचलह्रुदुद्भूतां सुवर्णां को नु वर्णयेत् |
अंहसो दह्यमानस्य श्रावयन्तीं स्वनं जनान् || ४६ ||
Vedaachala hrududbhutaam suvarnaam ko nu varnayet|
Amhasodahyamaanasya shraavayanteem svanam janaan||
Who can describe, in full glory, the river suvarna, that is born in the heart (a cave) of the veda mountain, and provides the sound of the burning of sins, to people who take a dip (bath) in it?
- which means, if you have a holy dip in this place, you will hear the sounds of the burning evils you have performed all these days.
Madhva members must have visited Udupi on many occasions. Therefore, when members visit Udupi during their next visit, kindly try to take the benefit of holy dip in Suvarna river, by planning their visit on Krishna Paksha Chaturdashi falling on Tuesday.
*****

ಸುವರ್ಣಾನದಿ Suvarna river

 ಮುಕ್ತಿಗೆ ಸಾಧನವಾಗಲೆಂದೇ ಶ್ರೀಹರಿಯ ತದ್ದಾಸರಾದ ದೇವತೆಗಳ & ಋಷಿಗಳ ಸಾನ್ನಿಧ್ಯದ ಕ್ಷೇತ್ರಗಳೂ  ಶ್ರೀಹರಿಯಚರಣೋಧ್ಭವಗಳಾದ ಅನೇಕ ತೀರ್ಥಗಳೂ ಈ ಭಾರತಭೂಮಿಯಲ್ಲಿ ಇವೆ.  ಇಂತಹಾ ಅನೇಕ ತೀರ್ಥಕ್ಷೇತ್ರ ಯಾತ್ರೆ ಮುಮುಕ್ಷುವಿನ ಕರ್ತವ್ಯಗಳಲ್ಲಿ ಮುಖ್ಯವಾದುದು.
ಇಂತಹಾ ಅನೇಕ ತೀರ್ಥಗಳು ಗಂಗೆಯಿಂದಾರಂಭಿಸಿ ಅನೇಕ ನದಿಗಳೂ,  ಸ್ವಾಮಿಪುಷ್ಕರಣಿಯಿಂದಾರಂಭಿಸಿ ಅನೇಕ ಸರೋವರಗಳೂ. ಭಗವದ್ಭಕ್ತರಿಗೆ ಮುಕ್ತಿ ಸೋಪಾನವಾಗಿವೆ.

ಅವುಗಳಲ್ಲಿ ವಿಶಿಷ್ಟವಾದ ಒಂದು ನದಿಯ ಬಗ್ಗೆ ಹೇಳಲೇಬೇಕು..

ಅದೇ ನಮ್ಮ ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರವಾದ ದ್ವೈತಮತಪ್ರವರ್ತಕರಾದ ಶ್ರೀಮಧ್ವಾಚಾರ್ಯರು ಅವತರಿಸಿದ ಪುಣ್ಯಭೂಮಿಯನ್ನೊಳಗೊಂಡ  ರಜತಪೀಠಪುರ (ಉಡುಪಿ)ಯ ಜೀವನಾಡಿ  
ಶುದ್ಧಜಲದನೆಲೆ ಪುಣ್ಯದಭಾಂಡಾಗಾರ  ಸಮೃದ್ಧಧಾನ್ಯವರ್ಧಿನೀ..ಪಾಪೌಘವಿಧ್ವಂಸಿನೀ.. ಶ್ರೀಹರಿಯ ಚರಣಜಲದಿಂದ ಯುಕ್ತಳಾದ...
ಸುವರ್ಣಾ ನದೀ.

ಮಧ್ವಮತಸೇನಾಧಿಪತಿಗಳಾದ ಅಭಿನವ ಆನಂದತೀರ್ಥರೆಂದೇ  ಪ್ರಸಿದ್ಧರಾದ 
ಶ್ರೀಮದ್ವಾದಿರಾಜಗುರಸಾರ್ವಭೌಮರು...  ತಮ್ಮ ತೀರ್ಥಪ್ರಬಂಧವೆಂಬ ಪರಮಪವಿತ್ರವಾದ ಅತ್ಯದ್ಭುತ ತೀರ್ಥಕ್ಷೇತ್ರಯಾತ್ರಾಕೈಪಿಡಿಯಂತಿರುವ ಕೃತಿಯಲ್ಲಿ ಸುವರ್ಣೆಯ ಮಾಹಾತ್ಮ್ಯವನ್ನು  ಪಶ್ಚಿಮಪ್ರಬಂಧದಲ್ಲಿ ಹೀಗೆ ವರ್ಣಿಸಿದ್ದಾರೆ

ವೇದಾಚಲಹೃದುದ್ಭೂತಾಂ 
ಸುವರ್ಣಾಂ ಕೋ$ನುವರ್ಣಯೇತ್|
ಅಂಹಸೋ ದಹ್ಯಮಾನಸ್ಯ
ಶ್ರಾವಯಂತೀಂ ಸ್ವನಂ ಜನಾನ್||46||
                               
ಅರ್ಥ:-
ಯಾವಳು  ತನ್ನಲ್ಲಿ ಮೀಯುವ ಭಕ್ತರಿಗೆ ಪಾಪಗಳು ಸುಡುವ ಶಬ್ದವನ್ನು ಕೇಳಿಸುತ್ತಾಳೋ ಅಂತಹಾ  ವೇದಾಚಲದಲ್ಲಿ ಹುಟ್ಟುವ ಈ 'ಸುವರ್ಣೆ'ಯನ್ನು ಯಾರು ತಾನೇ ವರ್ಣಿಸಬಲ್ಲ.!!!!

 ಶ್ರೀವಾದಿರಾಜಗುರುಸಾರ್ವಭೌಮರು ಇಲ್ಲಿ  
ನದಿಯು ಮಾಹಾತ್ಮ್ಯ ತಿಳಿಸಿದ್ದಾರೆ.

ಕೃಷ್ಣಪಕ್ಷ ಮಂಗಳವಾರ (ಅಂಗಾರಕ=ಮಂಗಳವಾರ)ಚತುರ್ದಶಿಯ 
ಎಂದು ಬರುವುದೋ...  ಅಂತಹಾ
ಕೃಷ್ಣಾಂಗಾರಚತುರ್ದಶಿಯ ಪರ್ವಕಾಲದಲ್ಲಿ
ಯಾರೇ ಬಂದು ಈ ಸುವರ್ಣಾನದಿಯಲ್ಲಿ ಸ್ನಾನಮಾಡುತ್ತಾರೋ ಅವರ ಪಾಪಗಳು ಕುದಿವ ಎಣ್ಣೆಯಲ್ಲಿ ಹಾಕಿದ ಎಳ್ಳು  ಚಟ ಪಟ ಚಟ ಪಟ  ಎಂದು ಶಬ್ದಮಾಡುತ್ತಾ  ಸಿಡಿಯುವಂತೆ...ಸಿಡಿದು ಸುಟ್ಟುಹೋಗುತ್ತದೆ...ಇದು ಇಂದಿಗೂ ನಿವು ನೋಡಬಹುದು..ಕಿವಿಯಾರೆ ಕೇಳಿ ಸಾಕ್ಷಿಯಾಗಬಹುದು.  ಅದೂ ಅಲ್ಲದೆ. ನದಿಯ ಒಂದು ಘಟ್ಟದಲ್ಲಿ ಸುಮಾರು ಮುಕ್ಕಾಲು ಕಿಲೋಮೀಟರ್ ವರೆಗಿನ ಘಟ್ಟದಲ್ಲಿ ಮಾತ್ರ ಈ ಧ್ವನಿಯನ್ನು ಕೇಳಬಹುದು.

ನಾಸ್ತಿಕರಾದವರು ಪುಣ್ಯಪಾಗಳನ್ನೊಪ್ಪದವರು. ಈ ನದಿಯಲ್ಲಿ ಕೃಷ್ಣಾಂಗಾರಚತುರ್ದಶಿಯ ಈ ಪರ್ವಕಾಲದಲ್ಲಿ ಮಿಂದರೆ ಅವರಿಗೂ ಕಿವಿಗಡಚಿಕ್ಕುವ ಚಟಪಟ ಧ್ವನಿ  ಸ್ಪಷ್ಟವಾಗಿ ಕರ್ಣರಂಧ್ರದಲ್ಲಿ ಬೀಳುವುದು.
 
ಪಾಪಗಳನ್ನು ಕಳೆಯಬಲ್ಲ ಅನೇಕ ನದಿಗಳು  ಇವೆ...ಆದರೆ ಪಾಪಗಳು ಸುಡುವುದನ್ನು ಪ್ರತ್ಯಕ್ಷವಾಗಿ ಕೇಳಿ ಅನುಭವಿಸುವಂತೆ ಮಾಡಿ ನಾಸ್ತಿಕನನ್ನೂ ಆಸ್ತಿಕನನ್ನಾಗಿಸಬಲ್ಲ  ಜಗತ್ತಿನ ಏಕೈಕ ನದಿ ಸುವರ್ಣಾನದಿ.
ಇಂತಹಾ ನದಿಯನ್ನು ಹೆಚ್ಚು ಏನೆಂದು ತಾನೇ ವರ್ಣಿಸಬಲ್ಲೆವು.

ಯಾವುದೋ ವೈಜ್ಞಾನಿಕ ಕಾರಣವನ್ನು ಹುಡುಕಿಹೊಂದಿಸಲು ವಿಜ್ಞಾನಿಗಳು ಎಷ್ಟೇ ಪ್ರಯತ್ನಪಟ್ಟರೂ ಹೊಂದಿಸಲಾಗಿದ ಕೇವಲ ಶ್ರೀಹರಿಯ ಮಹಿಮಾತಿಶಯವನ್ನು ಹೊರಸೂಸುವ ಈನದಿ ಶ್ರೀ ಕೃಷ್ಣನ ಪರಮಕರುಣ್ಯಯಲ್ಲದೆ ಮತ್ತೇನು.

ಇಂದಿಗೂ ಅನೇಕರು ವಿಶೇಷವಾಗಿ ಮಾಧ್ವರು  ಮಾಧ್ವಯತಿಗಳು ಈ ಕೃಷ್ಣಾಂಗಾರಚತುರಾದಶಿಯಂದು ಇಲ್ಲಿಗೆ ಆಗಮಿಸಿ   ಭಕ್ತಿಯಿಂದ ಸ್ನಾನವನ್ನು ಮಾಡಿ ಪಾಪ ಸುಡುವ ಫಟ್ ಫಟ್ ಎಂಬ ಧ್ವನಿಯನ್ನೂ ಕೇಳಿ..ಪಾಪಪ್ರಧ್ವಂಸಿನಿಯಾದ ಸುವರ್ಣೆಯನ್ನು ಮನದುಂಬಿ ನಮಸ್ಕರಿಸಿ ಕೃತಾರ್ಥರಾಗುತ್ತಾರೆ.

ಈ ನದಿಯ ದಡದಲ್ಲಿ  ವಿಘ್ನನಿವಾರಕನಾದ
 ಶ್ರೀಹರಿಯ ಪ್ರೀತಿಯ ಮರಿಮೊಮ್ಮಗ ಶ್ರೀಸಿದ್ಧಿವಿನಾಯಕನ ದೇವಸ್ಥಾನವೂ ಇದ್ದು..ಮಾಧ್ವರು ಇಲ್ಲಿ ಪೂಜೆಯನ್ನು ವೈಭವದಿಂದ ನಡೆಸುತ್ತಿದ್ದಾರೆ.

ಸೋದೆಮಠದ ಆಡಳಿತಕ್ಕೊಳಪಟ್ಟ ಈ ನದಿ ಉಡುಪಿಯಿಂದ 7 ಕಿ.ಮೀ ದೂರದಲ್ಲಿಯೇ ಇದೆ
 ಆಟೋ ವ್ಯವಸ್ಥೆಗಳು ಇವೆ.ಸ್ವಂತ ವಾಹನದಿಂದಲೂ  ತಲುಪಬಹುದು.
***

ಕಡೆಗೊಂದು ಮಾತು ಶ್ರೀಮಧ್ವಾಚಾರ್ಯರು ದ್ವಾದಶಸ್ತೋತ್ರದಲ್ಲಿ   ತಿಳಿಸುವಂತೆ...

ಬಹುಚಿತ್ರಜಗದ್ಬಹುಧಾಕರಣಾತ್ ಪರಶಕ್ತಿರನಂತಗುಣ: ಪರಮ:/

 ಈ ಜಗತ್ತು ಚೇತನ& ಅಚೇತನ ಅದರಲ್ಲೂ  ಅಚೇತನವಾದ ನದೀ ಪರ್ವತ ಮುಂತಾದ ಅನೇಕ ವಿಧಗಳನ್ನೊಳಗೊಂಡದ್ದರಿಂದ  ಈ ಜಗತ್ತು ತುಂಬಾ ವೈಚಿತ್ರ್ಯಪೂರ್ಣ& ವೈಶಿಷ್ಟ್ಯಗಳಿಂದ ಕೂಡಿದೆ.
ಇಂತಹಾ ಅದ್ಭುತವಾದ ಜಗತ್ತನ್ನು  ನಿರ್ಮಿಸಿದ ಜಗಜ್ಜನ್ಮಾದಿಕಾರಣನಾದ ಶ್ರೀಹರಿ ಅನಂತಗುಣಪರಿಪೂರ್ಣನಲ್ಲವೇ ..ಸರ್ವೋತ್ತನಲ್ಲವೇ.
ಎಂಬ ಈ ಮಾತಿನಂತೆ
 ತ್ರೈಲೋಕ್ಯಾಚಾರ್ಯರಾದ 
ಶ್ರೀಮಧ್ವಾಚಾರ್ಯರು ತಿಳಿಸಿದಂತೆಯೇ ಇಂತಹ  ಪುಣ್ಯಕ್ಷೇತ್ರನದ್ಯಾದಿಗಳ ಮಹಿಮೆಗಳ ಮೂಲಕ
ಜಗತ್ಸತ್ಯತ್ವವನ್ನೂ ಶ್ರಿಹರಿಯ ಮಹಿಮೆಯನ್ನೂ ಅವನ ಅನಂತಗುಣಪರಿಪೂರ್ಣತ್ವನ್ನೂ  ಸರ್ವೋತ್ತಮತ್ವವನ್ನೂ ತಿಳಿದೆವೆಂದರೆ ನಮ್ಮ ತೀರ್ಥಕ್ಷೇತ್ರಯಾತ್ರೆ  ಸಂದರ್ಶನ...ನಿಜವಾಗಿ ಸಾರ್ಥಕ.
✍️ಅನಿಲ ಜೋಷಿ
•|| मध्वो देदीप्यतेसौ जगति विजयते सत्सभामङ्गलाय ||•
***

Lakshmi Narasimha Temple,Shurpali, near Jamakhandi


****

ಕೋಟದಲ್ಲಿದ್ದಾಳೆ ಮಕ್ಕಳಿಗೆ ಹಾಲು ನೀಡುವ ಅಮೃತೇಶ್ವರಿ..!


ಉಡುಪಿ ಜಿಲ್ಲೆಯಲ್ಲಿದೆ ಹಲವು ಮಕ್ಕಳ ತಾಯಿ ಅಮೃತೇಶ್ವರಿಯ ತಂಗುದಾಣ.  ಈಕೆಯನ್ನು ಪೂಜಿಸಿ ಕೃತಾರ್ಥರಾಗೋಣ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ ಅಪೂರ್ವ ಶಕ್ತಿಪೀಠಗಳಲ್ಲೊಂದಾದ ಕೋಟ ಶ್ರೀ ಅಮೃತೇಶ್ವರೀ ಅಮ್ಮನವರ ದೇವಸ್ಥಾನ. ನವರಾತ್ರಿಯ ಕಾಲದಲ್ಲಿ ಇಲ್ಲಿ ಸಂಭ್ರಮೋತ್ಸಾಹಗಳಿಂದ ಪೂಜೆ ಪುನಸ್ಕಾರ ನೆರವೇರುತ್ತದೆ.

ಒಂದಂಶದಿಂದ ದುಷ್ಟರನ್ನು ದಮನ ಮಾಡುವ ಮಾರಿದೇವತೆಯಾಗಿಯೂ, ಇನ್ನೊಂದಂಶದಿಂದ ಮಕ್ಕಳಿಗೆ ಹಾಲನ್ನ ನೀಡುವ ಅಮೃತೇಶ್ವರೀಯಾಗಿಯೂ ಈಕೆ ವಿರಾಜಿಸುತ್ತಾಳೆ. ದೇವಿಯ ಮುಂಭಾಗದಲ್ಲಿ ಶ್ರೀ ರಕ್ತೇಶ್ವರಿಯ ಶಿಲಾಮೂರ್ತಿ ಇದೆ. ಪರಿವಾರ ದೇವತೆಗಳಾದ ವೀರಭದ್ರ, ನಾಗ, ನಂದಿ ಹಾಗೂ ದೈವಗಳಾದ ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು ಹಾಗೂ ಪಂಜುರ್ಲಿಯರು ಸಮೀಪದಲ್ಲಿ ನೆಲೆಸಿದ್ದಾರೆ. ವರುಣ ತೀರ್ಥವು ದಕ್ಷಿಣದಲ್ಲಿದೆ.

ನಾಥ ಪಂಥದ ಜೋಗಿ ಜನಾಂಗದವರು ದೇವಿಯ ನಿತ್ಯ ಪೂಜೆ ಸಲ್ಲಿಸುವುದು ಈ ಕ್ಷೇತ್ರದ ವೈಶಿಷ್ಟ್ಯ. ನಿತ್ಯ ವರದಾಯಿನಿಯಾದ ಸರ್ವಮಂಗಳೆ ಶಿವನರಸಿ ಅಮೃತೇಶ್ವರೀ ಅಮ್ಮನವರನ್ನು ನವರಾತ್ರಿ ಸಂದರ್ಭದಲ್ಲಿ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುವುದು ಗ್ಯಾರಂಟಿ.ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿಯಾದ ಸ್ಥಳಪುರಾಣ ಇದೆ.

ಹಿಂದೆ ರಾವಣನ ಬಂಧುವಾದ ಖರನೆಂಬ ಅಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. ರಾಕ್ಷಸನಾಗಿದ್ದರೂ, ಧರ್ಮಿಷ್ಠನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಪತಿವ್ರತೆ, ಸಾಧು ಸ್ವಭಾವದವಳು ಆಗಿದ್ದು ಸದಾ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು.

ಒಮ್ಮೆ ಕುಂಭಮುಖಿಯು ಶೂರ್ಪನಖಿಯ ಜೊತೆ ಸೇರಿಕೊಂಡು ವನವಿಹಾರ ಮಾಡುತ್ತಿದ್ದರು. ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಏಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದ್ದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯಪ್ರಬುದ್ದನೂ, ಸುಂದರನೂ, ವಿದ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು.

ಬಾಲವಿಧವೆ ಹಾಗೂ ಅತಿ ಕಾಮುಕಳಾದ ಶೂರ್ಪನಖಿಯು ಅತಿಪ್ರಭೆಯ ಮಗನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಬಲಾತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಏಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ,ಈ ಶಬ್ಧವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂದು ತಿಳಿದು, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ “ಎಲೈ ಶೂರ್ಪನಖಿಯೇ! ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯು ಸ್ವರೂಪಳಾಗೆಂದು“ ಶಾಪಕೊಟ್ಟು ಪ್ರಾಣತ್ಯಾಗ ಮಾಡಿದಳು.

ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನು ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಾಸುರನು ಕುಂಭಮುಖಿಯನ್ನು ಸಂತೈಸಿ, ಈ ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲಪುರೋಹಿತರಾದ ಶುಕ್ರಾಚಾರ್ಯರ ಮೊರೆಹೋದನು. ಶುಕ್ರಾಚಾರ್ಯರು, ಮಾಯಾಸುರನಿಂದ ನಿರ್ಮಿತವಾದ ಜ್ಯೇಷ್ಥ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು, ನಿನ್ನ ಪತ್ನಿಯಾದ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಾಂಬಿಕೆಯಾದ ಅಮೃತೇಶ್ವರೀ ದೇವಿಯನ್ನು ಪೂಜಿಸಬೇಕೆಂದು ತಿಳಿಸಿದರು.

ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ ಶುಕ್ರಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಸಮೀಪದಲ್ಲಿಯೇ ಜಗನ್ಮಾತೆ ಅಮೃತೇಶ್ವರೀ ದೇವಿಯನ್ನು ಪ್ರತಿಷ್ಠಿಸಿ ಪೂಜಿಸುತ್ತಿದ್ದರು. ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಅನುಗ್ರಹಿಸಿದ. “ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ಧ ಮಾಡಿ ಮುಕ್ತಿ ಹೊಂದುವಿ” ಎಂದು ವರವನ್ನು ಅನುಗ್ರಹಿಸಿದನು. ಅಲ್ಲೇ ಸರ್ವತೀರ್ಥ ಸಾನಿಧ್ಯ ಉಳ್ಳ ಸರೋವರವನ್ನು ನಿರ್ಮಿಸಿ, ಅದನ್ನು ವರುಣ ತೀರ್ಥವೆಂದು ಹೆಸರಿಸಿದನು.

ಇದೇ ರೀತಿ ಕುಂಭಮುಖಿಯ ತಪಸ್ಸಿಗೆ ಮೆಚ್ಚಿದ ಅಮೃತೇಶ್ವರಿಯು ಮನೋಹರವೂ, ಕಾಂತಿಯುಕ್ತವೂ ಆದ ರೂಪಾತಿಶಯದಿಂದ ಪ್ರತ್ಯಕ್ಷಳಾದಳು. ದೇವಿಯ ದಿವ್ಯಸ್ವರೂಪ ದರ್ಶನದಿಂದ ಉಂಟಾದ ಸಂತೋಷಾತಿಶಯದಿಂದ ಹಾಗೂ ಋಷಿಪತ್ನಿಯ ಶಾಪ ಪ್ರಭಾವದಿಂದ ಭ್ರಾಂತಳಾಗಿ “ತಾಯೇ ನೀನು ನಿತ್ಯ ಯೌವನೆಯಾಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ” ಎಂದು ಬೇಡಿದಳು. ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಎಲೈ ಕುಂಭಮುಖಿಯೇ ! ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯ ಇಲ್ಲ.

ಆ ಕಾರಣದಿಂದಲೇ, ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು ಎಂದು ಕೇಳುವ ಬದಲು “ನೀನು ಮಕ್ಕಳನ್ನು ಪಡೆ” ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ. ನೀನು ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಳದಲ್ಲಿ ಶಿವಲಿಂಗ ಸದೃಶವಾದ ಲಿಂಗಗಳು ಆಗಾಗ ಉತ್ಪತ್ತಿಯಾಗುತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು “ಹಲವು ಮಕ್ಕಳ ತಾಯಿ” ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ  ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದಳು.

ಕೆಲವು ಕಾಲಗಳ ನಂತರ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನನ್ನು ಕೊಂದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಶಿವಲಿಂಗವು ಉದ್ಭವಿಸತೊಡಗಿತು. ಅಮೃತೇಶ್ವರೀ ದೇವಿಯನ್ನು ಹಲವು ಮಕ್ಕಳ ತಾಯಿ ಎಂದು ಕರೆಯಲಾರಂಭಿಸಿದರು.

ಮುಂದೆ ಶೂರ್ಪನಖಿಯಿಂದ ಅಕಾಲ ಮರಣಕ್ಕೆ ತುತ್ತಾದ ಅತಿಪ್ರಭೆಯ ಮಗನಾದ ಬಹುಶ್ರುತನು ಪೂರ್ವಾರ್ಜಿತ ಪಾಪಶೇಷಗಳಿಂದ ಬ್ರಹ್ಮರಾಕ್ಷಸನಾಗಿ ಇದೇ ಸ್ಥಳದಲ್ಲಿದ್ದು ಇಲ್ಲಿನ ಋಷಿಗಳನ್ನು ಪೀಡಿಸುತ್ತಾ ಇದ್ದನು. ಒಮ್ಮೆ ಶ್ರೀ ಅಮೃತೇಶ್ವರೀ ಸನ್ನಿಧಿಯಲ್ಲಿ ಋಷಿಗಳು ಯಜ್ಞವನ್ನು ನಡೆಸುತ್ತಿರುವಾಗ ಮಾಯಾರೂಪದಿಂದ ಬಂದು ಯಜ್ಞಶಿಷ್ಟವನ್ನು ಅಪಹರಿಸಿಕೊಂಡು ಹೋದನು. ಋಷಿಗಳು ಬ್ರಹ್ಮರಾಕ್ಷಸನನ್ನು ಮಣಿಸುವಂತೆ ಶ್ರೀ ಅಮೃತೇಶ್ವರಿಯನ್ನು ಸ್ತೋತ್ರ ಮಾಡಿದರು. ಋಷಿಗಳ ಭಕ್ತಿಗೆ ಮೆಚ್ಚಿದ ಶ್ರೀ ದೇವಿಯು ಪ್ರತ್ಯಕ್ಷಳಾಗಿ ಋಷಿಗಳಿಗೆ ಅಭಯವನ್ನು ನೀಡಿದಳು.

ನಂತರ ಮಹಾಮಾರಿ ಸ್ವರೂಪಿಣಿಯಾಗಿ ಬ್ರಹ್ಮರಾಕ್ಷಸನನ್ನು ನಾಶ ಮಾಡಿ ಅದಕ್ಕೆ ಮುಕ್ತಿಯನ್ನು ಕರುಣಿಸಿದಳು. ನಂತರ, ಇನ್ನು ಮುಂದೆ ಮಹಾಮಾರೀ ಸ್ವರೂಪಳಾದ ನನ್ನನ್ನು ಮದ್ಯ ಮಾಂಸಾದಿಗಳಿಂದ ಅರ್ಚಿಸಿರಿ. ನಾನು ಸಾತ್ವಿಕರೂಪಿಣಿಯಾದ ಅಮೃತೇಶ್ವರೀಯಾಗಿಯೂ ತಾಮಸರೂಪಿಣಿಯಾದ ಮಾರಿಯಾಗಿಯೂ ಇಲ್ಲಿ ನೆಲೆಸಿ ಇಲ್ಲಿಯ ಜನರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತಾ ಇರುತ್ತೇನೆಂದು ಅಭಯ ನೀಡಿದಳು.

***




One of the 7 Mukti Kshetras of Coastal Belt of Western India, which is also called as Parashurama Sristi is Udupi. It is also birth place of the famous Saint Madhvacharya who has introduced the Dwaitha Siddantha. There are so many big and small places of divinity like Pajaka Kshetra, Kunjarugiri, Vadabandeshwara. 
There is a place which was not so recognised until 1996 is Krishnangaraka Chaturdashi Snana Ghat at the banks of River Swarna situated on the way Manipal to Kallianpur near Shivalli Shimbra. On the day of Krishnangaraka Chaturdashi, the holy Ganga will be arriving at this place. Therefore, the Acharya’s of Ashtamath come to this place on that day along with their disciples for the holy dip. 
His Holiness Sri Vadiraja Swamy in his books has written Vedachala Hradudbhootam Suvarnanko Suvarnayet Ahaso Jahya Manasya Shravayanthim Swanam Janan which means, if you have a holy dip in this place, you will hear the sounds of the burning evils you have performed all these day. Oh what a amazing place!!
If we go deep into the history long ago, His Holiness Sri Gaalava Rishi had performed tapasya here near the holy water. There was a Vinayaka temple nearby. The Rishi was performing pooja in the temple. Gradually when there was a big flood, the temple was flown away. A sailor got the idol and he gave it to Sri Mahalingeshwara Temple at Shivalli and it was kept along with the Mahaganapathi at Sri Mahalingeshwara Temple. When they had a Ashta Mangala Prashna it  was told thet, this Vinayaka should have seperate temple and to be placed in the temple with “Punar-Pratishta”.
With the co-operation of the citizens of Shivalli Shimbra, on the goldenmoments of January 1996, the lord Sri Siddivinayaka was placed at the temple constructed fully by granite and also following all the vaastu shastra at the banks of river Swarna at Sri Krishnangara Chaturdashi Snan Ghat with “Brahmakalashotsava”. Since that day, Trikal Pooja is performed to the Lord. On the day of Sankashta Chaturthi, “gana homa” is performed and lot of people  visit the temple. “Naga” is also placed at the Kshetra. Now it is a full fledged Kshetra.
For all the above, Rs 10 lakh spent. The daily expenses of the temple is around Rs.5000/- p,m. Since, there is no source of income, the Managing Committee is managing to spend the amount. But, it is a difficult task to continue the same for a long time.
Further, there are lot of pending plans, which is required by the Kshetra. The estimated cost of the same is around Rs. 25 lakhs. Pending works are:
1. Pauli
2. Naivedya Shale
3. Godown
4. Roof around the temple
5. Dhyana Mantap
6. Rebuilding of Snan Ghat
7. Steps to Snan Ghat
We, the managing committee earnestly request you the generous followers of Lord Siddivinayaka to visit the divine place and contribute to the improvement of the Kshetra whole heartedly.
Contact:
T Ajith Pai, Manipal Agencies
Shiribeedu, Udupi- 576101
Tel: 91 820 2520182, 2526467
********
ಶೂರ್ಪಾಲಿ ಕ್ಷೇತ್ರ ಮಹಿಮೆ


ಶೂರ್ಪಾಲಿ ಕ್ಷೇತ್ರ ಮಹಿಮೆ
ಶ್ರೀ ಕ್ಷೇತ್ರ ಸುಕ್ಷೇತ್ರ ಶ್ರೀ ಶೂರ್ಪಾಲಯ ಕ್ಷೇತ್ರ ಮಾಹಿತಿ
       ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿಯ ‘ಶೂರ್ಪಾಲಯ’ ಎಂಬುವುದು ಚಿಕ್ಕ ಗ್ರಾಮ. ಇಲ್ಲಿಯ ಕೃಷ್ಣಾನದಿಯ ತೀರದಲ್ಲಿ ಮನಮೋಹಕವಾದ ಪರಮ, ಪವಿತ್ರ, ಪ್ರಾಚೀನ, ಭಾಗವತ ಪುರಾಣ ಪ್ರಸಿದ್ಧವಾದ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನವಿದೆ. ಶ್ರೀ ಕನಕದಾಸರು ಹೇಳಿದಂತೆ ಸಿರಿತನ್ನತೊಡೆಯ ಮೇಲೆರಿಸಿಕೊಂಡ ಪಾದ ಎಂಬಂತೆ ಶ್ರೀ ಲಕ್ಷ್ಮೀ ಸಮೇತ ಶ್ರೀ ನರಸಿಂಹ ದೇವರು ಶಂಖ, ಚಕ್ರ, ಗಧಾ, ಪದ್ಮ. ಮುಕುಟ, ಕಂಠಾಭರಣ, ಚರಣಾಭರಣಗಳಿಂದ ವಿರಾಜಮಾನರಾಗಿ ವಿಜೃಂಭಿಸುತ್ತಿದ್ದಾರೆ. ಏಕಶಿಲೆ ಸಾಲಿಗ್ರಾಮದ ಈ ಮೂರ್ತಿಯು ಒಬ್ಬ ಹುಟ್ಟು ಕುರುಡನಿಂದ ಕೆತ್ತಲ್ಪಟ್ಟಿದೆ ಎಂಬ ಐತಿಹ್ಯವಿದೆ.  
    “ಗಂಗಾ ಸ್ನಾನ ತುಂಗಾ ಪಾನ“ ಎನ್ನುವ ಹಾಗೆ ನಮ್ಮೆಲ್ಲರ ಸಕಲ ಘೋರ ಪಾಪಗಳನ್ನು ಕಳೆಯುವ ಗಾಂಗಾ ಭಾಗೀರಥಿ ದೇವಿ ತಾನು ಎಲ್ಲ ಜನರ ಸಕಲ ಪಾಪಗಳಿಂದ ಭರಿತಳಾಗಿ ಕಾಶೀ ವಿಶ್ವನಾಥನ ಪ್ರೇರಣೆಯಿಂದ ಕೃಷ್ಣಾ ನದಿ ತೀರಕ್ಕೆ ಬಂದು ಮುತ್ತು ರತ್ನ, ವಜ್ರ ವೈಢೂರ್ಯಗಳಿಂದ ತುಂಬಿದ ಮೊರದ ಬಾಗಿಣ ಕೊಟ್ಟು ತನ್ನ ಸಕಲ ಪಾಪಗಳನ್ನು ಕಳೆದುಕೊಳ್ಳುತ್ತಾಳೆ. ಸಂಸ್ಕೃತ ಮೊರಕ್ಕೆ ‘ಶೂರ್ಪ’ ಎಂದು ಹೆಸರು. ಆಲಯ ಸೇರಿ ಈ ಕಾರಣದಿಂದ ಆ ಪವಿತ್ರ ಸ್ಥಳಕ್ಕೆ ಶೂರ್ಪಾಲಯ ಎಂದು ಹೆಸರು ಬಂದಿತು. 
       ನದಿ ತೀರದ ಹತ್ತಿರ ಸನ್ನಿಧಿಯಲ್ಲಿ ಪುಣ್ಯಕರವಾದ ಕೋಟಿತೀರ್ಥ, ಚಲಕತೀರ್ಥ, ಚಕ್ರತೀರ್ಥ, ಕಂಠತೀರ್ಥ, ಉತ್ತುಂಗತೀರ್ಥ, ಮಧುತೀರ್ಥ, ಪಿತೃ ಋಣ ವಿಮೋಚನ ತೀರ್ಥ, ಋಣ ವಿಮೋಚನ ತೀರ್ಥ ಎಂಬ ಅಷ್ಠ ತೀರ್ಥಗಳಿವೆ. ಒಂದೊಂದು ತೀರ್ಥಕ್ಕೂ ಒಂದೊಂದು ಮಹಿಮೆ ಇದ್ದು ಘನಘೋರ ಪಾಪನಾಶಮಾಡುವ ಮಹತ್ವ ಹೊಂದಿವೆ. ರಾಜಸೂಯ ಯಾಗ, ಅಶ್ವಮೇಧಯಾಗ ಮಾಡಿದ ಫಲವನ್ನು ಉತ್ತುಂಗ ತೀರ್ಥದಲ್ಲಿ ಸ್ನಾನ ಮಾಡುವದರಿಂದ ಪಡೆಯುತ್ತಾರೆ ಎಂಬ ಮಾತಿದೆ. ಅನ್ಯ ಕ್ಷೇತ್ರೇ ಕೃತಂ ಪಾಪಂ ಪುಣ್ಯ ಕ್ಷೇತ್ರೆ ವಿನಶ್ಯೆತಿ ಎಂಬ ಪ್ರತೀತಿ ಇದೆ. ಕೃಷ್ಣಾ ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡಿದರೆ ಆರು ತಿಂಗಳಲ್ಲಿ ಅಸ್ತಿಗಳು ಶಂಖದ ರೂಪ ವಾಗುವದೆಂದು ನಂಬಲರ್ಹವಾಗಿದೆ.
      ಕೃಷ್ಣಾ ನದಿಯ ದಕ್ಷಿಣ ತೀರದಲ್ಲಿ ಪರಶುರಾಮ ದೇವರು ನಿಸರ್ಗದ ರಮ್ಯ ಸೌಂದರ್ಯ ನೋಡಿ ಆನಂದ ಭಾಷ್ಪ ಸುರಿಸಿದಾಗ ಅರಳಿಮರ ಉದ್ಭವವಾಯಿತೆಂದು ಹೇಳುತ್ತಾರೆ. ಅದು ದೇವರ ಗುಡಿಯ ಮುಂಭಾಗದಲ್ಲಿದೆ. ಗುಡಿಯ ಹಿಂಭಾಗದಲ್ಲಿ ಶ್ರೀ ಪ್ರಾಣದೇವರ ಚಿಕ್ಕ ಮೂರ್ತಿ ಇದ್ದು ನೋಡಲು ನಯನಮನೋಹರವಾಗಿದ್ದು ಪ್ರಾಣದೇವರ ಕಂಠದಲ್ಲಿ ಯಾವತ್ತೂ ತೇವಾಂಶವಿರುತ್ತದೆ. ಇದರಿಂದ ಅಲ್ಲಿ ಗಂಗಾ ದೇವಿ ಇರುವಳೆಂಬ ಪ್ರತೀತಿ ಕೂಡ ಇದೆ. ಭಕ್ತಪ್ರಲ್ಹಾದನಿಂದ ಪ್ರಾರ್ಥಿತನಾಗಿ ಕಾಶೀ ಕ್ಷೇತ್ರದ ವಿಶ್ವನಾಥನು ಕೋಟೇಶ್ವರನಾಗಿ ಕೃಷ್ಣ ನದಿಯ ಮಧ್ಯದಲ್ಲಿರುತ್ತಾನೆ. ಸಕಲ ತಪೋಮುನಿಗಳಿಂದ ಪ್ರಾರ್ಥಿತನಾಗಿ ಶ್ರೀ ಶಂಕರನು ಶ್ರೀ ಲಕ್ಷಿ÷್ಮÃನರಸಿಂಹದೇವರ ಪೂಜೆಗೋಸ್ಕರ ಬಲಭಾಗದ ಬಯಲು ಜಾಗದಲ್ಲಿ ಗಣಪ ಶೇಷ ನಂದಿಯರೊಡಗೂಡಿ ಬಯಲೇಶ್ವರನಾಗಿ ಸನ್ನಿಹಿತನಾಗಿರುವನು.
    ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವು ವೈಶಾಖ ಶುದ್ಧ ಸಪ್ತಮಿಯಿಂದ ಪ್ರಾರಂಭವಾಗಿ ವೈಶಾಖ ವದ್ಯ ದ್ವಿತಿಯಾವರೆಗೆ ನವರಾತ್ರಿ ನೆರವೇರುವದು. ಉತ್ಸವದ ದಿನಗಳನ್ನು ಪ್ರತಿನಿತ್ಯ ಬೆಳಿಗ್ಗೆ ಪಲ್ಲಕ್ಕಿ ಅವಾಹನೋತ್ಸವ ನೆರವೇರುವದು. ವೈಶಾಖ ಶುದ್ಧ ಹುಣ್ಣಿಮೆ ದಿನ ಶ್ರೀ ಲಕ್ಷಿ÷್ಮÃ ನರಸಿಂಹ ದೇವರ ರಥೋತ್ಸವ ಜಾತ್ರೆ ನಡೆಯುತ್ತದೆ. ಆ ಹುಣ್ಣಿಮೆಯನ್ನು “ಆಗಿ ಹುಣ್ಣಿಮೆ” ಎಂದು ಕರೆಯುವರು. ಆ ದಿನ ಸುಕ್ಷೇತ್ರದ ದೇವಸ್ಥಾನದಲ್ಲಿ ಪುಣ್ಯಾಹವಾಚನ ರಥಾಂಗಹೋಮ ಹವನಗಳನ್ನು ಮಾಡುತ್ತಾರೆ. ಅಲ್ಲದೇ ಕಾರ್ತಿಕ ಮಾಸದಲ್ಲಿ “ವೈಕುಂಠ ಚತುರ್ದಶಿ” ದಿವಸ ದೇವರಿಗೆ ಸುವರ್ಣಭರಿತ ವಿಶೇಷ ಅಲಂಕಾರ ನೈವೇದ್ಯೆ ಪ್ರಸಾದ ಇರುವದು. ಬೆಳ್ಳಿ ಉತ್ಸವ ಪ್ರತಿಮೆಯನ್ನು ನಾವಿನಲ್ಲಿ ಕೂಡಿಸಿ ಕೃಷ್ಣಾ ನದಿಯಲ್ಲಿ ತಪೋತ್ಸವ ದೀಪೋತ್ಸವ ನೆರವೇರುವದು. 
     ಮಹಾರಾಷ್ಟçದ ಶಾಹೂ ಮಹಾರಜರು ಹಾಗೂ ಬಿಜಾಪೂರದ ಆದಿಲ್‌ಶಾಹಿ ಮನೆತನದವರು ಶ್ರೀ ಕ್ಷೇತ್ರದ ಜನರಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟ ಉಡುಗೊರೆ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ಪ್ರತಿಷ್ಟಿತ ಈ ದೇವಾಲಯವೆ ಶ್ರೀ ಕ್ಷೇತ್ರ ಶೂರ್ಪಾಲಯ.
***

ಸ್ಥಳ - "ನಾರ್ಶ್ಯ" 



 ಆಚಾರ್ಯ ಮಧ್ವ ಕರಾರ್ಚಿತ "ಶ್ರೀ ನರಸಿಂಹ ದೇವರು",  

ಸ್ಥಳ - "ನಾರ್ಶ್ಯ" 

(ಸುಮಧ್ವ ವಿಜಯದಲ್ಲಿ ಇದಕ್ಕೆ "ನರಸಿಂಹ ಗೇಹ‌" ಎಂದಿದ್ದಾರೆ)

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನ ಸನಿಹದಲ್ಲಿ ಕಲ್ಲಡಕ ಎಂಬ ಸರ್ಕಲ್ ಸಿಗುತ್ತದೆ. ಅಲ್ಲಿ ವಿಟ್ಲ ದಾರಿಯಲ್ಲಿ ಎಡಕ್ಕೆ ತಿರುಗಿ, ಸುಮಾರು ಒಂದು ಕಿ.ಮೀ ಸಾಗಿದರೆ ಬಲಕ್ಕೆ ತಿರುವು ಇದೆ. ಅಲ್ಲಿಂದ ಸುಮಾರು 6 ಕಿ.ಮೀ ಸಾಗಿದರೆ ಈ ಕ್ಷೇತ್ರವು ಸಿಗುತ್ತದೆ

ಪ್ರಸ್ತುತ ಈ ಕ್ಷೇತ್ರವನ್ನು ಆಡಳಿತ ಮಂಡಳಿಯ ಬಳ್ಳಕ್ಕುರಾಯ ಕುಟುಂಬದವರು ಶ್ರೀಹರಿ ಪ್ರೇರಣೆಯಂತೆ ನಾರ್ಶ್ಯಕ್ಷೇತ್ರವನ್ನು  ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ.

ಶ್ರೀಕ್ಷೇತ್ರದ ಹಿನ್ನಲೆ -

ಶ್ರೀಮಧ್ವಾಚಾರ್ಯರು ಸಜ್ಜನರನ್ನು ಆನಂದಪಡಿಸುತ್ತ, ತಮ್ಮಂತೆ ಪಾವನವಾದ ಸರ್ವಮೂಲಗ್ರಂಥಗಳನ್ನು ತಾಮ್ರದ ತಗಡಿನಲ್ಲಿ ಬರೆಸಿ, ಗುಪ್ತಸ್ಥಳದಲ್ಲಿ ಭೂಗತ ಮಾಡಿ, ಸಂರಕ್ಷಿಸಬೇಕೆಂದು ಸಂಕಲ್ಪಿಸಿದರು. ಇದಕ್ಕಾಗಿ ಉಡುಪಿಯಿಂದ ಪ್ರಯಾಣವನ್ನು ಆರಂಭಿಸಿದರು. ಪಾಜಕ ಕಾಂತಾವರ ಮಾರ್ಗವಾಗಿ ಫಲ್ಗುಣೀ ನದಿಯನ್ನು ದಾಟಿ, ನಡ್ಯಂತಾಡಿಮಠದ ಮಾರ್ಗವಾಗಿ ಕಾವಳಪಡೂರಿನ ಮಧ್ವಕಟ್ಟಿಗೆ ಬರುತ್ತಾರೆ. ಅಲ್ಲಿಯ ಭಕ್ತವರ್ಗವನ್ನು ಅನುಗ್ರಹಿಸಿ, ನಾವೂರು ಅಗ್ರಹಾರಕ್ಕೆ ಆಗಮಿಸುತ್ತಾರೆ. ಅಲ್ಲಿಂದ ನೇತ್ರಾವತೀ ನದಿಯನ್ನು ದಾಟಿ, ದಕ್ಷಿಣ ದಡದಲ್ಲಿರುವ ನಾಟಿ ಅಗ್ರಹಾರಕ್ಕೆ ಬರುತ್ತಾರೆ. ಅಲ್ಲಿ ಭಕ್ತರನ್ನು ಅನುಗ್ರಹಿಸಿ, ನಾರ್ಶ್ಯಕ್ಷೇತ್ರಕ್ಕೆ ಆಗಮಿಸುತ್ತಾರೆ. ನಾರ್ಶ್ಯ ಅತ್ಯಂತ ಪ್ರಾಚೀನವಾದ ಕ್ಷೇತ್ರ, ಈ ಊರಿನ ಹೆಸರೇ ಅದ್ಭುತ. ಸುಮಧ್ವವಿಜಯವು “ನೃಸಿಂಹಗೇಹ” ಎಂದು ಉಲ್ಲೇಖಿಸಿದೆ. ನರಸಿಂಹ ಎಂಬ ಹೆಸರು ಹಳ್ಳಿಗರ ಉಚ್ಚಾರಣೆಯಲ್ಲಿ “ನಾರ್ಶ್ಯ”ವಾಯಿತು.

ತುಂಬಾ ತಗ್ಗುಪ್ರದೇಶದಲ್ಲಿರುವ ಈ ದೇವಸ್ಥಾನವು ಪಶ್ಚಿಮಾಭಿಮುಖವಾಗಿದೆ. ಎದುರಿಗೆ ಪುಷ್ಕರಣಿ. ಸುತ್ತಲೂ ವನಸಿರಿಯ ಪ್ರಶಾಂತತೆ. ಒಳಗಡೆ ಯೋಗಭಂಗಿಯ ನರಸಿಂಹದೇವರ ಸುಂದರವಾದ ವಿಗ್ರಹ. ಈ ದೇವಸ್ಥಾನಕ್ಕೆ ಶ್ರೀಮಧ್ವಾಚಾರ್ಯರು ಶಿಷ್ಯಪರಿವಾರದೊಂದಿಗೆ ಆಗಮಿಸಿದರು. ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿ, ನರಸಿಂಹದೇವರ ಪೂಜೆಯನ್ನು ನೆರವೇರಿಸಿದರು. ಶ್ರೀಮಧ್ವಾಚಾರ್ಯರು ಶ್ರೀನರಸಿಂಹದೇವರ ವಿಶೇಷ ಆರಾಧಕರು.

ಶ್ರೀಮಧ್ವಾಚಾರ್ಯರ ಆಗಮನದಿಂದ ಸಹಜವಾಗಿಯೇ ಜನಸಂದಣಿ ಅಲ್ಲಿ ಸೇರಿತ್ತು. ಭಕ್ತರೊಂದಿಗೆ ದುಷ್ಟರೂ ಬಂದಿದ್ದರು. ಹೇಗಾದರೂ ಇವರನ್ನು ಸೋಲಿಸಬೇಕೆಂಬ ಕನಸು ಅವರದು. ಈ ಹಿನ್ನಲೆಯಲ್ಲಿಯೇ ಶ್ರೀಮಧ್ವಾಚಾರ್ಯರು ಹೋದಲ್ಲೆಲ್ಲ ಇವರೂ ಹೋಗುತ್ತಿದ್ದರು. ಹಾಗೂ ಎಲ್ಲೆಡೆಯೂ ಸೋಲುತ್ತಿದ್ದರು. ಇಲ್ಲಿಯೂ ಇವರು ಬಂದಿದ್ದು ಆಚಾರ್ಯರಿಗೆ ಮೊದಲೇ ಗೊತ್ತಿತ್ತು.

ತಮ್ಮ ಪ್ರತಿಯೊಂದು ಕ್ರಿಯೆಯನ್ನು ಭಗವತ್ಪೂಜಾರೂಪವಾಗಿ ಆಚಾರ್ಯರು ಆಚರಿಸುತ್ತಿದ್ದರು. ಇದ್ದಕ್ಕಿದ್ದಂತೆ ಆಚಾರ್ಯರು ಒಬ್ಬ ವಟುವನ್ನು ಕರೆದರು. ಅವನ ಮೇಲೆ ಕುಳಿತರು. ಆ ವಟು ತನಗೆ ಏನೂ ಆಗಿಲ್ಲವೆಂಬಂತೆ ಸಹಜವಾಗಿ ನಗುಮೊಗದಿಂದಲೇ ಇದ್ದನು. ಆಚಾರ್ಯರ ಪ್ರೇರಣೆಯಂತೆ ದೇವಸ್ಥಾನದ ಸುತ್ತಲೂ ಅನಾಯಾಸವಾಗಿ ಪ್ರದಕ್ಷಿಣೆ ಬಂದನು. ದೇವಾಲಯದ ಪ್ರದಕ್ಷಿಣಪಥ ಬಹಳ ವಿಶಾಲವಾದದ್ದು. ಮುಖದಲ್ಲಿ ಅಥವಾ ದೇಹದಲ್ಲಿ ಯಾವ ವಿಕಾರವೂ ಇಲ್ಲದೇ ಆ ಬ್ರಹ್ಮಚಾರಿ ಲೀಲಾಜಾಲವಾಗಿ ಸಾಗಿಬಂದನು. ನೆರೆದ ಎಲ್ಲರಿಗೂ ಆಶ್ಚರ್ಯ. ಮಹಾಬಲಿಷ್ಠರಾದ ಆಚಾರ್ಯರು ಒಬ್ಬ ಸಣ್ಣವಯಸ್ಸಿನ ವಟುವಿನ ಮೇಲೆ ಕುಳಿತುಕೊಳ್ಳುವುದು ಹೇಗೆ ಸಾಧ್ಯ ? ಮಹಾಜಟ್ಟಿಗಳಿಗೂ ಅಲುಗಾಡಿಸಲಾಗದ ಭಾರಭೂತರಾದ ಆಚಾರ್ಯರು ಈಗ ಅಷ್ಟು ಲಘುವಾ ? ಎಂದೆಲ್ಲ ಚರ್ಚೆಗಳು ನಡೆದವು. ಆಗ ಆಚಾರ್ಯರು ಇದೆಲ್ಲವೂ ಶ್ರೀನರಸಿಂಹದೇವರ ಅನುಗ್ರಹದ ಸುಯೋಗದಿಂದ ಸಾಧ್ಯವೆಂದು ಸಾರಿದರು. ಅಣಿಮಾ-ಗರಿಮಾ-ಲಘಿಮಾ-ಮಹಿಮಾ ಈಶಿತ್ವ-ವಶಿತ್ವ-ಪ್ರಾಪ್ತಿ-ಪ್ರಾಕಾಶ್ಯ ಎಂಬ ಅಷ್ಟೆಶ್ವರ್ಯಗಳು ಪ್ರಸಿದ್ಧವಾಗಿವೆ. ಇವುಗಳನ್ನು ಸಿದ್ಧಿಸಿಕೊಂಡಿದ್ದ ಆಚಾರ್ಯರು ಈ ಹಿಂದೆ ಕಾಂತಾವರದಲ್ಲಿ “ಗರಿಮಾ”ಸಿದ್ಧಿಯನ್ನು ತೋರಿಸಿದ್ದರು. ಅಲ್ಲಿಯೂ ಶ್ರೀನರಸಿಂಹದೇವರ ಅನುಗ್ರಹದಿಂದ ಎಂದು ಸಾರಿದ್ದರು. ಇಲ್ಲಿ ಶ್ರೀನರಸಿಂಹದೇವರ ದಿವ್ಯಸನ್ನಿಧಿಯಲ್ಲಿ “ಲಘಿಮಾ”ಸಿದ್ಧಿಯನ್ನು ತೋರಿಸಿ ದುಷ್ಟರನ್ನು ನಿರುತ್ತರರನ್ನಾಗಿಸಿದರು. ಲಘಿಮಾಸಿದ್ಧಿಯ ಮೂಲಕ ಆಚಾರ್ಯರು ಗರ್ವಿಷ್ಠರಾದ ದುಷ್ಟರಾದ ಬಲಿಷ್ಠರನ್ನೂ ಪಲಾಯನಗೊಳಿಸಿದರು. ಇಂಥಹ ಅದ್ಭುತವಾದ ಆಚಾರ್ಯರ ಲೀಲೆಗೆ ಈ ದೇವಸ್ಥಾನವು ಸಾಕ್ಷಿಯಾಯಿತು.

ನಿರ್ಯತ್ನಂ ವಟುಮಧಿರುಹ್ಯ ಮಂದಹಾಸೀ ಸ ಪ್ರಾಯಾದಿಹ ಪರಿತೋ ನೃಸಿಂಹಗೇಹಮ್ |

ಐಶ್ವರ್ಯೈರಿತಿ ಲಘಿಮಾದಿಕೈರುಪೇತೋ ಮಧ್ವೋऽಭೂತ್ ತ್ರಿಭುವನಚಿತ್ರರತ್ನರಾಜಃ II ಸುಮಧ್ವವಿಜಯ 16/30 II

ಈ ಸಂದರ್ಭದಲ್ಲಿ ಸುಮಧ್ವವಿಜಯದಲ್ಲಿ ಪಂಡಿತಾಚಾರ್ಯರು “ತ್ರಿಭುವನಚಿತ್ರ ರತ್ನರಾಜ” ಎಂದು ಗುರುಗಳನ್ನು ಕೊಂಡಾಡಿದ್ದಾರೆ. ಇದನ್ನೇ ಹನುಮಂತದೇವರ ವರ್ಣನೆಯ ಪ್ರಾರಂಭದಲ್ಲಿ

“ಯೇ ಯೇ ಗುಣಾ ನಾಮ ಜಗತ್ಪಸಿದ್ಧಾಃ ಯಂ ತೇಷು ತೇಷು ಸ್ಮ ನಿದರ್ಶಯಂತಿ |

ಸಾಕ್ಷಾನ್ಮಹಾಭಾಗವತಪ್ರಬರ್ಹಂ ಶ್ರೀಮಂತಮೇನಂ ಹನುಮಂತವಾಹುಃ ॥” 1/10

ಎಂದು ವರ್ಣಿಸಿದ್ದನ್ನು ಸ್ಮರಿಸಬೇಕು.

ಹೀಗೆ ಅಗಾಧವಾದ ಮಹತ್ವವನ್ನು ಹೊಂದಿದ, ಸಾವಿರಾರು ವರ್ಷಗಳ ಪುರಾತನವಾದ ಈ ಕ್ಷೇತ್ರವು “ಬಳ್ಳಕ್ಕುರಾಯ” ವಂಶದವರ ಆಡಳಿತದಲ್ಲಿ ನೂರಾರು ವರ್ಷಗಳಿಂದ ಪೂಜೆಗೊಂಡಿದೆ. ನಿರಂತರವಾಗಿ ಶ್ರೀನರಸಿಂಹದೇವರ ಆರಾಧಕರಾದ ಇವರು ಕ್ಷೇತ್ರವನ್ನು ಅನೇಕ ಕಷ್ಟದ ಪ್ರಸಂಗದಲ್ಲಿಯೂ ಸಂರಕ್ಷಿಸಿಕೊಂಡಿದ್ದಾರೆ. ಗ್ರಾಮದ ಸುತ್ತಲೂ ಅನ್ಯಮತೀಯರ ಪ್ರಭಾವವಿದೆ. ಬೆರಳೆಣಿಕೆಯ ಹಿಂದುಗಳಿರುವ ಪ್ರದೇಶವಿದು. ಪ್ರಸಕ್ತ ಈ ಕುಟುಂಬದ ಹಿರಿಯರಾದ ಶ್ರೀವೆಂಕಟರಮಣ ಬಳ್ಳಕ್ಕುರಾಯರು ಮತ್ತು ಶ್ರೀಗೋಪಾಲಕೃಷ್ಣ ಬಳ್ಳಕ್ಕುರಾಯರ ಮನೆಯ ಸದಸ್ಯರೆಲ್ಲರೂ ಜಗದ್ಗುರು ಶ್ರೀಮನ್ಮಧ್ವಾಚಾರ್ಯಮೂಲ ಮಹಾಸಂಸ್ಥಾನ ಶ್ರೀಮದುತ್ತರಾದಿಮಠದ ಅಧಿಪತಿಗಳಾದ, ವಿಶೇಷವಾಗಿ ಶ್ರೀನರಸಿಂಹ ಮಂತ್ರೋಪಾಸಕರಾದ ಪರಮಪೂಜ್ಯ ಶ್ರೀ 1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಮೇಲೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ದೇವಸ್ಥಾನದ ಸರ್ವತೋಮುಖವಾದ ಅಭಿವೃದ್ಧಿ ಹಾಗೂ ನಿರಂತರವಾದ ಧಾರ್ಮಿಕ ಕೈಂಕರ್ಯಗಳಿಗಾಗಿ ದೇವರ ಸಂಕಲ್ಪದಂತೆ ಇತ್ತೀಚೆಗೆ ಈ ದೇವಸ್ಥಾನವನ್ನು ನಿಸ್ವಾರ್ಥವಾಗಿ ಶುದ್ಧವಾದ ಭಕ್ತಿಯಿಂದ ಪರಮಪೂಜ್ಯ ಶ್ರೀಪಾದರಿಗೆ ಸಮರ್ಪಿಸಿ ಧನ್ಯರಾಗಿದ್ದಾರೆ.

ಅತ್ಯಂತ ಶಿಥಿಲವಾಗಿರುವ ಈ ದೇವಸ್ಥಾನವು ಪರಮಪೂಜ್ಯ ಶ್ರೀಪಾದರ ನೇತೃತ್ವದಲ್ಲಿ ಅತ್ಯಂತ ವೈಭವದ ಮಂದಿರವಾಗಿ ನಿರ್ಮಾಣಗೊಂಡು, ಭಕ್ತರಿಗೆ ವಿಶೇಷ ಸಾಧನೆಯ ಪ್ರಧಾನ ತಾಣವಾಗಲಿದೆ.

ತೌಳವಕ್ಷೇತ್ರಗಳ ಯಾತ್ರೆಗಾಗಿ ಆಗಮಿಸುವ ಭಕ್ತರು ಇಲ್ಲಿಗೆ ಆಗಮಿಸಲು 

ಪಂ. ಶ್ರೀಸತ್ಯಾಭಿಜ್ಞಾಚಾರ್ಯ-8217648583 ಇವರನ್ನು ಸಂಪರ್ಕಿಸಿ ವಿವರಣೆಯನ್ನು ಪಡೆಯಬಹುದು.

ಈ ಕ್ಷೇತ್ರದ ಸುತ್ತಲೂ ಶ್ರೀಮಧ್ವಾಚಾರ್ಯರ ಸಂಪರ್ಕದ ಕಟತ್ತಿಲ-ಕುಕ್ಕೆಸುಬ್ರಹ್ಮಣ್ಯ-ಪಾರಂತಿ-ಎರ್ಕಿಮಠ-ಕೊಡಿಪಾಡಿದೇವಸ್ಥಾನ-ವರ್ಕಾಡಿ-ಕಾರ್ನೂರುಮಠ-ಅಡೂರುದೇವಸ್ಥಾನ ಮುಂತಾದ ಅನೇಕ ಕ್ಷೇತ್ರಗಳಿವೆ. ಈ ಸನ್ನಿಧಿಯಲ್ಲಿ ಸೇವೆಯನ್ನು ಮಾಡಿ, ಸಕಲ ಸಂಪದಗಳನ್ನೂ ಪಡೆದು, ಧನ್ಯರಾಗಬಹುದು.

ಬದುಕಿನ ಭಾರವನ್ನು ಹಗುರಾಯಿಸಿ, ಭಕ್ತಿಯಲ್ಲಿ ತೇಲುವಂತೆ ಮಾಡುವ ಈ ಕ್ಷೇತ್ರವನ್ನು ಭಕ್ತರು ತಪ್ಪದೇ ದರ್ಶನ ಮಾಡಬೇಕು.

***

  ಗರುಡ ದೇವಾಲಯ

  ಗರುಡ ದೇವಾಲಯವಿದು. ಹಾಗೂ ಗರುಡ ದೇವರ ಜನ್ಮಸ್ಥಳ ಹಾಗೂ ವಿಶ್ವದಲ್ಲೇ ಗರುಡ ರಿಗೆ ಕಲ್ಯಾಣೋತ್ಸವ ನಡೆಯುವ ಏಕೈಕ ಸ್ಥಳ. ಇಲ್ಲಿರುವ ಗರುಡ ಶ್ರೀ ಗಂಧ ಮರದಿಂದ ಕೆತ್ತನೆ ಯಾಗಿದೆ ಮತ್ತು ಆಂಜನೇಯ ಇಬ್ಬರು ಇರುವುದು ವಿಶೇಷ ಈ ವಿಗ್ರಹವನ್ನು ಕಾಂಚೀಪುರದಿಂದ ಈ ಮಾರ್ಗದಲ್ಲಿ ಬೇಲೂರು ಚೆನ್ನ ಕೇಶವ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕಾದರೆ ಗರುಡ ನನ್ನ ಜನ್ಮಸ್ಥಳ ಬಿಂಡಿಗನವಿಲೆಯಾಗಿರುವುದರಿಂದ ನಾನು ಇಲ್ಲೇ ನೆಲೆಸುತ್ತೇನೆಂದು ನಾಗಮಂಗಲ ಪಾಳೆಗಾರನಿಗೆ ಕನಸಿನಲ್ಲಿ ಹೇಳಿದ್ದರಿಂದ ಪಾಳೆಗಾರರೆ ಬಂದು ವೈನತೆಯರಿಗೆ ದೇವಸ್ಥಾನ ಕಟ್ಟಿಸಿದ್ದಾರೆ ಇದು ತಿರುಪತಿಯಲ್ಲೂ ಮತ್ತು ಬ್ರಹ್ಮಾಂಡ ಪುರಾಣದ 11 ನೇ ಅಧ್ಯಾಯದಲ್ಲಿ ಉಲ್ಲೇಖವಿದೆ ಎಂದು ಹೇಳಲಾಗಿದೆ ಹಾಗೂ  ಸಾವಿರಾರು ವರ್ಷಗಳ ಹಿಂದೆ  ಬ್ರಹ್ಮ ಸರಸ್ವತಿ  ದೇವರು ಬಂದು ಇಲ್ಲಿರುವ ಚನ್ನಕೇಶವಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ ಮತ್ತು 900 ವರ್ಷಗಳ ಹಿಂದೆ ಜಗದ್ಗುರು ಶ್ರೀ ರಾಮಾನುಜಚಾರ್ಯರು ಈ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿದ್ದರು  ಹೀಗಾಗಿ ಇಲ್ಲಿಗೆ ದೇಶ ವಿದೇಶಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ........ಈ ಕ್ಷೇತ್ರ  ಬೆಂಗಳೂರು  - ಹಾಸನ NH 75 ರಸ್ತೆ ಮದ್ಯದಲ್ಲಿ ಬರುವ ಬೆಳ್ಳೂರ್ ಕ್ರಾಸ್ ಮತ್ತು ಕದಬಳ್ಳಿ ಇಂದ 15 ಕಿ ಮಿ ದೂರದಲ್ಲಿದೆ.....

***

ಯಂತ್ರೋದ್ದಾರಕ ಶ್ರೀ ಮುಖ್ಯಪ್ರಾಣದೇವರು.

ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥ ಗಿರೌ ಸದಾ...

#ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ #ಹಂಪಿಯ #ಚಕ್ರತೀರ್ಥದ, ಶ್ರೀ ಕೋದಂಡರಾಮ ದೇವರ ದೇವಾಲಯದ,ಶ್ರೀ #ಸೂರ್ಯನಾರಾಯಣ ದೇವರ ಗುಡಿಗೆ ಹೊಂದಿಕೊಂಡಂತೆ ದಕ್ಷಿಣಕ್ಕೆ ಇರುವ ಪುಟ್ಟ ಗುಡ್ಡದಲ್ಲಿ ಶ್ರೀ #ಹನುಮಂತದೇವರು ಸದಾಕಾಲದಲ್ಲೂ ಇರುತ್ತಾರೆ ಎಂದು ಶ್ರೀ ವ್ಯಾಸರಾಜರು ತಿಳಿಸುತ್ತಾರೆ...

ಪ್ರಪಂಚದಲ್ಲೇ ಶ್ರೀ ಹನುಮಂತನ ಅತ್ಯಂತ ಪವಿತ್ರ, ಜಾಗೃತ,ಕಾರಣಿಕ ಮತ್ತು ಶಕ್ತಿಶಾಲಿ

ದೇವಾಲಯವಿದು...ಮೂರು ಕೋಟಿ ಬೀಜಮಂತ್ರಗಳ ಪ್ರಭಾವ ನಿರಂತರ ಹೊಮ್ಮುವ ಶ್ರೀ ಹನುಮಂತನ ಕ್ಷೇತ್ರವಿದು.

ತ್ರೇತಾಯುಗದ..ರಾಮಾಯಣ ಕಾಲದ ಕಿಷ್ಕಿಂದಾ ಪ್ರದೇಶವಾಗಿದ್ದ ಇಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಋಷ್ಯಮೂಖ,ಮಾಲ್ಯವಂತ,ಮಾಲ್ಯವಂತ,ಅಂಜನಾದ್ರಿಯೇ ಮೊದಲಾದ ಪರ್ವತಗಳಂತೆಯೇ ಪಂಪಾಸರೋವರ ಮತ್ತು ಚಕ್ರತೀರ್ಥ(ಪೂರ್ವಕ್ಕೆ ಹರಿಯುವ ತುಂಘಭದ್ರಾ ನದಿ ಇಲ್ಲಿ ಮಡುಗಟ್ಟಿ ತಿರುಗಿ ಉತ್ತರಕ್ಕೆ ಹರಿಯುತ್ತದೆ)..ಸುಗ್ರೀವನ ಸಚಿವನಾಗಿದ್ದ ಶ್ರೀ ಹನೂಮಂತನು ಶ್ರೀ ರಾಮಚಂದ್ರನನ್ನು ಮೊದಲು ಇಲ್ಲಿಯೇ ಭೇಟಿಯಾದದ್ದು..ರಾಮ ಲಕ್ಷ್ಮಣ ಸೀತಾ ಸುಗ್ರೀವರ 10 ಅಡಿಎತ್ತರದ ವಿಗ್ರಹಗಳಿವೆ (ರಾಮದೇವರ ಕಣ್ಣಿನ ನೇರದಲ್ಲಿ ವಾಲಿಯ ಭಂಡಾರವಿದೆ).

#ಯಂತ್ರೋದ್ದಾರ ಶ್ರೀ ಹನುಮಂತ ದೇವರ ಗುಡಿ #ಪಂಪಾಪತಿ ಶ್ರೀ #ವಿರೂಪಾಕ್ಷ ದೇವಾಲದಿಂದ 2 ಕಿ.ಮೀ. ದೂರದಲ್ಲಿದೆ (ಪುಟ್ಟ ಗುಹೆಯನೊಳಗೊಂಡ ರಸ್ತೆ).

ಅತ್ಯಂತ ವೈಭವದಿಂದ ಇದ್ದ ವಿಜಯನಗರದ ಅರಸರ ರಾಜಧಾನಿಯಾಗಿದ್ದ ಹಂಪೆಯ ಮತ್ತು 6 ಜನ ಅರಸರಿಗೆ ಗುರುಗಳಾಗಿದ್ದ ಮಧ್ವಯತಿ ಶ್ರೀ ವ್ಯಾಸರಾಜರ ಸ್ವಹಸ್ತದಿಂದ ಮೂಡಿಬಂದ ಹನುಮನಿವನು..

ರಾಮಾಯಣದ ಕಾಲದಲ್ಲಿ ಶ್ರೀ ರಾಮಚಂದ್ರನು ವಿರಮಿಸಿದ್ದ ಬಂಡೆಯೊಂದರ ಮೇಲೆ ಶ್ರೀ ವ್ಯಾಸರಾಜರು ಶ್ರೀ ಹನುಮನ ಚಿತ್ರ ಬಿಡಿಸಿದಾಗ ಅದು ಮತ್ತೆ ಮತ್ತೆ ಮಾಯವಾಗುತ್ತಿತ್ತು...ಧ್ಯಾನಸ್ತರಾದಾಗ ತಾವು ಹಿಂದೆ ತಮ್ಮ ಪೂರ್ವಜನ್ಮದಲ್ಲಿ ಬಾಹ್ಲಿಕರಾಜನಾಗಿ ಮರುತವತಾರಿ ಶ್ರೀ ಭೀಮಸೇನದೇವರ ವಿರುದ್ಧ 732 ಬಾರಿ ಗದೆ ಝಳಪಿಸಿದ್ದು, ಅದರ ಪ್ರಾಯಶ್ಚಿತ್ತ ರೂಪವಾಗಿ 732 ಶ್ರೀ ಹನುಮಂತ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ನಿಶ್ಚಯಸಿ 12 ಕಪಿಗಳ ಕಪಿಬಂಧವನ್ನು ಹೆಣೆದು ವಲಯಾಕಾರ ಚಿತ್ರಿಸಿ.. ಚಿತ್ರಕೋಣ ಯಂತ್ರವನ್ನು ಏರ್ಪಡಿಸಿ ಅದರ ಮಧ್ಯ ಜಪಸರ ಹಿಡಿದು ಧ್ಯಾನಮಾಡುವ ಶ್ರೀ ಹನುಮಂತನನ್ನು ಮಾಯವಾಗದಂತೆ ಕುಳ್ಳಿರಿಸಿದರು. ಮೂರುಕೋಟಿ ಜಪದ ಪುಣ್ಯವಿಶೇಷ ದಿಂದ ಶ್ರೀಮುಖ್ಯಪ್ರಾಣನನ್ನು ಆರಾಧಿಸಿದ್ದಾರೆ..ಪುಟ್ಟದೊಂದು ಗುಡಿಯನ್ನೂ ಏರ್ಪಡಿಸಿದ್ದರು.

ಶ್ರೀ ವ್ಯಾಸರಾಜರ ಶಿಷ್ಯರಾಗಿದ್ದ ಅನೇಕಾನೇಕ ರಾಜರು, ಅವರ ಲೋಕಪಾವನಿ ಮಠದ ವಿದ್ಯಾರ್ಥಿಗಳಗಿದ್ದ ಶ್ರೀ ವಿಜಯೇಂದ್ರರು, ಶ್ರೀ ವಾದಿರಾಜರು ಮತ್ತಿತರ ವ್ಯಾಸಕೂಟ ಮತ್ತು ಶ್ರೀ ಪುರಂದರದಾಸರು,ಶ್ರೀ ಕನಕದಾಸರು ಅಲ್ಲದೇ ದಾಸಕೂಟದ ಎಲ್ಲರೂ,ಅಪರೋಕ್ಷ ಜ್ಞಾನಿಗಳಾಗಿದ್ದ ಎಲ್ಲ ಹರಿದಾಸರೂ ನಿಶ್ಚಿತವಾಗಿ  ತಪ್ಪದೇ ದರ್ಶಿಸಿ ತಮ್ಮ ಪಾದ ಧೂಳಿಯಿಂದ ಪಾವನಮಾಡಿದ ಕ್ಷೇತ್ರವಿದು..

ಶ್ರೀ ಮೊದಲಕಲ್ ಶೇಷದಾಸರು ತಮ್ಮ ಮೊದಲ ಕೃತಿ ನಂಬಿದೆ ನಿನ್ನ ಪಾದಾ ಗುರುಮುಖ್ಯಪ್ರಾಣಾ ಎಂದು..

ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥರಿಗೆ ಸನ್ಯಾಸವಾದ ಸ್ಥಳ..

ಮಧು..ಜೇನುತುಪ್ಪದ ಅಭಿಶೇಖ ವೀಶೇಷವಿಲ್ಲಿ..  ರಾಮ ನವಮಿ, ಶ್ರೀಹನುಮಜಯಂತಿಯಂತೆಯೇ ಮೊದಲಾದ ವಿಶೇಷ ಪೂಜೆಗಳೂ, ಮಾರ್ಗಶಿರ ಮಾಸದ ಪಾಡ್ಯದಿಂದ ಪ್ರಾರಂಭಿಸಿ 13 ದಿನಗಳ ಶ್ರೀ ಹನುಮದ್ವ್ರತ ಮತ್ತು ಹುಣ್ಣಿಮೆಯ ರಥೋತ್ಸವ ವಿಶೇಷ ಪೂಜೆಗಳು ಅತಿ ಭಕ್ತಿ ಶ್ರದ್ಧಾ ಗಳಿಂದ ಆಚರಿಸಲಾಗುತ್ತದೆ.

ನಮಾಮಿ ದೂತಮ್ ರಾಮಸ್ಯ ಎಂಬ ಶ್ರೀ ಯಂತ್ರೋದ್ದರಕ ಸ್ತೋತ್ರ, ಮನೋ ಕಾಮನೆಗಳು ಫಲಗಳನ್ನು ಖಂಡಿತಾ ಈಡೇರಿಸಲ್ಪಡುತ್ತೆ ಎಂದು ಶ್ರೀವ್ಯಾಸರಾಜರೇ ತಿಳಿಸಿದ್ದಾರೆ...ಇದು ಏನೋ ಚರಿತಾ ಎಂದು  ಶ್ರೀ ಪುರಂದರ ಶ್ರೀ ವಿಜಯ ದಾಸರಾದಿಯಾಗಿ ಅನೇಕ ಅಪರೋಕ್ಷ ಜ್ಞಾನಿಗಳಿಂದ ಸ್ತುತಿಸಲ್ಪಟ್ಟ

ಶ್ರೀ #ಯಂತ್ರೋದ್ದಾರಕ #ಹನುಮಂತನು ತನ್ನ ದರ್ಶನ ಮಾತ್ರದಿಂದ ಸಕಲ ಸಂಕಟಗಳಿಂದ ನಮ್ಮನ್ನು ಪಾರುಮಾಡುತ್ತಾನೆ..

***

Second Yantroddharka temple



This is the second yantroddharaka consecrated by Sri. Vyasarajaru . This place is called Halaharvi is a village and a Mandal in Kurnool district in the state of Andhra Pradesh
****




 ಶ್ರೀವೀರನಾರಾಯಣ ದೇವಸ್ಥಾನ, ಗದಗ (ಕೃತಪುರ)

ಹೊಯ್ಸಳ ವಿಷ್ಣುವರ್ಧನನು ಕ್ರಿ.ಶ.೧೧೧೨ ರಲ್ಲಿ ಶ್ರೀ ವೈಷ್ಣವ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಜ್ಞೆಯ ಪ್ರಕಾರ ಈ ವೀರನಾರಾಯಣ ದೇವಸ್ಥಾನವನ್ನು ಕಟ್ಟಿಸಿದನು.ಅವನು ಕಟ್ಟಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ಇದೂ ಒಂದು.ಶ್ರೀತ್ರಿಕೂಟೇಶ್ವರ ದೇವಸ್ಥಾನದಲ್ಲಿರುವ ಕ್ರಿ.ಶ.೧೨೧೩ರ ಶಿಲಾಶಾಸನ ಪ್ರಕಾರ ಯಾದವ ನಾರಾಯಣನೆಂಬ ರಾಜನು ಕ್ರಿಯಾಶಕ್ತಿದೇವ ಎನ್ನುವವನನ್ನು ಈ ದೇವಸ್ಥಾನದ ಸ್ಥಾನಿಕ ಅರ್ಚಕನನ್ನಾಗಿ ನೇಮಿಸಿದ್ದುದು ತಿಳಿದುಬರುತ್ತದೆ.

ವಿಜಯನಗರದ ಇಮ್ಮಡಿ ಹರಿಹರನ ಕ್ರಿ.ಶ.೧೩೭೯ರ ತಾಮ್ರ ಫಲಕದ ಪ್ರಕಾರ ಗದುಗಿನ ೨೨ ಗ್ರಾಮಗಳು ಈ ದೇವರಿಗೆ ಉಂಬಳಿಯಾಗಿದ್ದವು.

ಇದೇ ದೇವಸ್ಥಾನದಲ್ಲಿರುವ ವಿಜಯನಗರದ ಅರಸು ಅಚ್ಯುತರಾಯನ ಕಾಲದ ಕ್ರಿ.ಶ.೧೫೩೯ರ (ಶಕ ವರ್ಷ ೧೪೬೧ ವಿಕಾರಿ ಸಂವತ್ಸರ,ಭಾದ್ರಪದ ಮಾಸದ ಶುಕ್ಲ ಪಕ್ಷ ದ್ವಾದಶೀ) ಶಾಸನದಲ್ಲಿ ಕವಿ ಕುಮಾರವ್ಯಾಸನಿಗೆ ಒಲಿದ ಗದುಗಿನ ಶ್ರೀ ವೀರನಾರಾಯಣನ ಸನ್ನಿಧಿಯಲ್ಲಿ ’ಆನಂದನಿಧಿ’ ಎಂಬ ದಾನವನ್ನು ಕೊಟ್ಟ ಉಲ್ಲೇಖವಿದೆ. ಈ ಶಾಸನವನ್ನು ೨೬-೦೮-೧೫೩೯ರಂದು ಸ್ಥಾಪಿಸಲಾಗಿದೆ.

ಶ್ರೀವೀರನಾರಾಯಣ ದೇವಸ್ಥಾನದ ಗರ್ಭಗುಡಿಯು ಚಾಲುಕ್ಯ ಶಿಲ್ಪ. ಗರುಡಗಂಭ,ರಂಗಮಂಟಪಗಳು ಹೊಯ್ಸಳ ಶಿಲ್ಪ ಹಾಗೂ ಗೋಪುರವು ವಿಜಯನಗರ ಶಿಲ್ಪಗಳನ್ನು ಹೊಂದಿ ಇದು ಚಾಳುಕ್ಯ,ಹೊಯ್ಸಳ ಹಾಗೂ ವಿಜಯನಗರ ಶಿಲ್ಪಕಲೆಗಳ ತ್ರಿವೇಣಿ ಸಂಗಮವಾಗಿದೆ.

ಶ್ರೀಲಕ್ಷ್ಮೀನರಸಿಂಹ ಮಂದಿರವು ಚಾಲುಕ್ಯ ಮಾದರಿಯಲ್ಲಿದೆ.ಇದು ಶ್ರೀವೀರನಾರಯಣ ದೇವರಿಗಿಂತ ಮೊದಲೇ ಸ್ಥಾಪಿತವಾಗಿದೆ.

ಕ್ರಿ.ಶ.೧೫೦೦, ನಂತರ ೧೮೫೦ ಬಳಿಕ ೧೯೬೨ರಲ್ಲಿ - ಹೀಗೆ ಈ ದೇವಸ್ಥಾನವು ಮೂರು ಸಲ ಜೀರ್ಣೊದ್ಧಾರಗೊಂಡಿದೆ.

ಕ್ರಿ.ಶ. ೧೮೫೦ನೇ ಇಸ್ವಿ ಫೆಬ್ರುವರಿ ದಿ.೨೦ರಂದು ಬ್ರಿಟಿಷ್ ಸರ್ಕಾರವು ಈ ದೇವಸ್ಥಾನಕ್ಕೆ ಪ್ರಪ್ರಥಮ ಪಂಚ ಕಮೀಟಿ ನೇಮಿಸಿತು.ಆಗ ೬೪ ಗ್ರಾಮಗಳು ಈ ದೇವಸ್ಥಾನಕ್ಕೆ ದತ್ತಿಯಾಗಿದ್ದವು.

ಗದುಗಿದೆ ಎರಡು ಸಾವಿರ ವರುಷಗಳ ಇತಿಹಾಸವಿದೆ.ಇದು ಪುರಾಣ ಕಾಲದಿಂದಲೂ ಪ್ರಸಿದ್ಧ ನಗರ.ಕೃತಕ,ಕೃತಪುರ,ಕರ್ದುಗ,ಕಳ್‍ದುಗು,ಗದಗು ಮುಂತಾಗಿ ಗದಗಿದೆ ಹೆಸರುಗಳುಂಟು.

’ಕ್ರತು’ ಎಂದರೆ ಸಂಸ್ಕೃತದಲ್ಲಿ ’ಯಜ್ಞ’ ಎಂದರ್ಥ.ಹಿಂದೆ ಜನಮೇಜಯ ರಾಜನು ಸರ್ಪಯಜ್ಞವನ್ನು ಇದೇ ಸ್ಥಳದಲ್ಲಿ ಮಾಡಿದ್ದರಿಂದ (ಶ್ರೀವೀರನಾರಾಯಣ ದೇವಸ್ಥಾನದಲ್ಲಿ ಈಗಲೂ ದಕ್ಷಿಣ ದ್ವಾರದ ಮಗ್ಗುಲಿಗೆ ಸರ್ಪೇಶ್ವರ ದೇವಸ್ಥಾನವಿದೆ) ಗದುಗಿದೆ’ಕೃತಪುರ’ ಎಂಬ ಹೆಸರು ಬಂದಿತೆಂದು "ಕೃತಪುರ ಮಹಾತ್ಮೆ"ಯಿಂದ ತಿಳಿದು ಬರುತ್ತದೆ.

|| ನಾಹಂ ಕರ್ತಾ ಹರಿಃ ಕರ್ತಾ ||
|| ಅಸ್ಮದ್ಗುರ್ವಂತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀಹಯಗ್ರೀವಾರ್ಪಣಮಸ್ತು ||

********






ಮಹಿಮಾನ್ವಿತ ನಾರಸಿಂಹ ಕ್ಷೇತ್ರ-ಶೀಬಿ
ಶಿಬಿ ತಪವನ್ನಾಚರಿಸಿ, ಹಿರಣ್ಯ ಕಶಿಪುವನ್ನು ಕೊಂದ ನರಸಿಂಹನ ಕೋಪ ಶಾಂತಗೊಳಿಸಿದ ಪುಣ್ಯ ಕ್ಷೇತ್ರವೇ ಶೀಬಿ.
*ಲೇಖಕರು- ಟಿ.ಎಂ.ಸತೀಶ್, ಸಂಪಾದಕರು, ourtemples.in
ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ನಾರಸಿಂಹ ಅಥವಾ ನರಸಿಂಹಾವತಾರ ಅತ್ಯಂತ ಮಹತ್ವವಾದ್ದು. ನರಸಿಂಹನನ್ನು ಉಗ್ರ ನರಸಿಂಹ, ಲಕ್ಷ್ಮೀ ನರಸಿಂಹ, ಯೋಗಾ ನರಸಿಂಹ ಹೀಗೆ ನಾನಾ ಹೆಸರುಗಳಿಂದ ಪೂಜಿಸುತ್ತಾರೆ. ಕರ್ನಾಟಕದಲ್ಲಿ ಹಲವಾರು ನಾರಸಿಂಹ ಕ್ಷೇತ್ರಗಳಿವೆ. ಇವುಗಳಲ್ಲಿ ಪ್ರಮುಖ ಹಾಗೂ ಮಹಿಮಾನ್ವಿತ ಕ್ಷೇತ್ರಗಳಲ್ಲಿ ಶೀಬಿಯೂ ಒಂದು.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತುಮಕೂರಿನಿಂದ 24 ಕಿಲೋ ಮೀಟರ್ ದೂರದಲ್ಲಿ, ಹೆದ್ದಾರಿಯ ಅಂಚಿನಲ್ಲೇ ಇರುವ ಪುರಾತನ ಕ್ಷೇತ್ರವೇ ಶೀಬಿ. ಶಿಬಿ ಎಂಬ ಮಹಾ ಮುನಿ ಈ ಕ್ಷೇತ್ರದಲ್ಲಿ ದೀರ್ಘ ತಪವನ್ನಾಚರಿಸಿದ್ದರಂತೆ ಹೀಗಾಗಿ ಶಿಬಿ ನೆಲೆಸಿದ್ದ ಈ ಕ್ಷೇತ್ರ ಶೀಬಿ ಎಂದೇ ಹೆಸರು ಪಡೆದಿದೆ ಎಂಬುದು ಐತಿಹ್ಯ.
ಲೋಕ ಕಂಟಕನಾಗಿ ಮೆರೆಯುತ್ತಿದ್ದ, ದೇವಾನು ದೇವತೆಗಳ ಆದಿಯಾಗಿ ಮೂರು ಲೋಕಗಳನ್ನೂ ಕಾಡುತ್ತಿದ್ದು ರಕ್ಕಸ ಹಿರಣ್ಯ ಕಶಿಪುವನ್ನು ಸಂಹಾರ ಮಾಡಲು ಭಕ್ತ ಪ್ರಹ್ಲಾದ ತೋರಿದ ಕಂಬ ಸೀಳಿ ಹೊರಬಂದ ಉಗ್ರನರಸಿಂಹ ತನ್ನ ಎರಡು ಕೈಗಳಲ್ಲಿ ಹಿರಣ್ಯ ಕಶಿಪುವನ್ನು ಎತ್ತಿಕೊಂಡು ಹೋಗಿ, ಹೊಸ್ತಿಲ ಮೇಲೆ ಕುಳಿತು, ಇನ್ನೆರೆಡು ಕೈಗಳಿಂದ ಹಿರಣ್ಯ ಕಶಿಪು ಹೊಟ್ಟೆಯನ್ನು ಬಗೆದು, ಮಗದೆರಡು ಕೈಗಳಿಂದ ಅವನ ಕರುಳನ್ನು ಮಾಲೆ ಹಾಕಿಕೊಂಡರೂ ಕೋಪ ಶಮನವಾಗದೆ ಉಗ್ರನಾಗಿದ್ದಾಗ, ಪ್ರಹ್ಲಾದರಾದಿಯಾಗಿ ಎಲ್ಲರೂ ಶಾಂತನಾಗೋ ನರಸಿಂಹ ಎಂದು ಬೇಡಿದರೂ ಉಗ್ರ ಸ್ವರೂಪದಲ್ಲೇ ನಿಂತಿದ್ದ ನರಸಿಂಹನನ್ನು ಹೇಗಾದರೂ ಶಾಂತಗೊಳಿಸಲೇಬೇಕು ಇಲ್ಲ, ಜಗತ್ತೇ ಉಳಿಯದು ಎಂದು ಹೆದರಿ, ಎಲ್ಲ ದೇವತೆಗಳೂ ಶೀಬಿ ಮುನಿಯ ಬಳಿ ಬಂದು ವಿಷ್ಣು ಭಕ್ತನಾದ ನರಸಿಂಹನ ಕೋಪ ಶಮನ ಮಾಡುವಂತೆ ಕೋರಿದರಂತೆ. ಆಗ ಶೀಬಿ ಮಹಾಮುನಿ ನರಸಿಂಹನ ಪ್ರಾರ್ಥಿಸಿ, ಪೂಜಿಸಿ, ಸ್ತುತಿಸಿದನಂತೆ, ಶಿಬಿ ಮಹಾಮುನಿಯ ಭಕ್ತಿಗೆ ಕರಗಿದ ಉಗ್ರ ನರಸಿಂಹ ಶಾಂತನಾದನಂತೆ. ಬಳಿಕ ಶಿಬಿ ಮಹಾ ಮುನಿಯ ಪ್ರಾರ್ಥನೆಯಂತೆ ಲಕ್ಷ್ಮೀಸಹಿತನಾಗಿ ಸಾಲಿಗ್ರಾಮಶಿಲೆಯಾಗಿ ನಾರಸಿಂಹ ಈ ಕ್ಷೇತ್ರದಲ್ಲಿ ನೆಲೆಸಿದನೆಂದು ಸ್ಥಳಪುರಾಣ ಹೇಳುತ್ತದೆ.
ಯುಗಗಳು ಉರುಳಿದ ಪರಿಣಾಮ, ಈ ಕ್ಷೇತ್ರ ಗಿಡಗಂಟೆ ಬೆಳೆದು ಕಾಡಾಗಿ ಹೋಗಿತ್ತು. ಕಲಿಯುಗದಲ್ಲಿ ಒಂದು ದಿನ ಸಿರಾದ ಅಮರಯ್ಯ ಎಂಬ ಅಡಿಕೆ ವ್ಯಾಪಾರಿಯೊಬ್ಬರು, ವ್ಯಾಪಾರಕ್ಕೆ ತೆರಳಿದ್ದಾಗ, ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು, ಇಲ್ಲಿ ಬಿಡಾರ ಹೂಡಿ, ತಮ್ಮ ಸಹಚರರಿಗೆ ಅಲ್ಲಿಯೇ ಇದ್ದ ಬಂಡೆಯ ಮೇಲೆ ಅಡುಗೆ ಮಾಡಲು ಹೇಳಿ, ತಾವು ಮೊಸರು ತರಲು ಸಮೀಪದಲ್ಲೇ ಇದ್ದ ಗ್ರಾಮಕ್ಕೆ ಹೋದರಂತೆ, ಮತ್ತೆ ಬಂದು ನೋಡಿದಾಗ ಎಲ್ಲರೂ ಮೂರ್ಛೆಹೋಗಿ ಬಿದ್ದಿರುವುದನ್ನು ನೋಡಿ ಗಾಬರಿಗೊಂಡರು. ಜೊತೆಗೆ ಅವರ ಸಹಚರರು ಮಾಡಿದ್ದ ಅಡುಗೆ ಎಲ್ಲ ರಕ್ತಮಯವಾಗಿತ್ತಂತೆ. ಈ ಬೀಭತ್ಸ ನೋಟ ನೋಡಿ ಹೆಸರಿ ಅವರೂ ಕುಸಿದರಂತೆ. ಅವರಿಗೆ ನಾರಸಿಂಹ ಕನಸಿನಲ್ಲಿ ಕಾಣಿಸಿಕೊಂಡು, ನಿಮ್ಮೆಲ್ಲರಿಂದ ಅರಿಯದೇ ಲೋಪವಾಗಿದೆ. ನಿನ್ನ ಸಹಚರರು ನಾನು ನೆಲೆಸಿಹ ಸಾಲಿಗ್ರಾಮ ಶಿಲೆಯ ಮೇಲೆ ಅಡುಗೆ ಮಾಡಿ, ನನಗೆ ಬೆಂಕಿ ತಾಕಿಸಿ ನನ್ನ ಕೋಪಕ್ಕೆ ಗುರಿಯಾಗಿದ್ದಾರೆ. ನೀನು ತಪ್ಪು ಕಾಣಿಕೆ ಸಲ್ಲಿಸಿ, ಇಲ್ಲಿ ನನಗೊಂದು ದೇವಾಲಯ ಕಟ್ಟು ಎಂದು ಹೇಳಿ ಅದೃಶ್ಯನಾದನಂತೆ.
ಆಗ ಅಮರಯ್ಯ ಪಕ್ಕದ ಗ್ರಾಮಕ್ಕೆ ತೆರಳಿ ಊರಿನವರಿಗೆ ವಿಚಾರ ತಿಳಿಸಿ, ಎಲ್ಲರನ್ನೂ ಕರೆದುಕೊಂಡು ಬಂದು, ಅಲ್ಲಿ ನಡೆದಿದ್ದ ಎಲ್ಲ ದೃಶ್ಯ ತೋರಿಸಿ, ಮೂರ್ಛೆ ಹೋಗಿದ್ದ ಎಲ್ಲರಿಗೂ ನೀರು ಆರೈಕೆ ಮಾಡಿ ಅವರಿಗೆ ಜ್ಞಾನ ಬಂದ ಬಳಿಕ, ಅವರಿಗೂ ತಮ್ಮ ಕನಸಿನ ವಿಚಾರ ತಿಳಿಸಿದರಂತೆ. ಆಗ ಎಲ್ಲ ವ್ಯಾಪಾರಿಗಳೂ ಗ್ರಾಮಸ್ಥರೂ ಸೇರಿ, ಅಲ್ಲಿ ದೇವಾಲಯ ಕಟ್ಟಿಸಿ ಪೂಜಿಸಿದರಂತೆ. ಈ ಸ್ಥಳದ ಮಹಿಮೆ ಕೇಳಿದ ಅಂದಿನ ಮೈಸೂರು ಮಹಾರಾಜರು ದೇವಾಲಯಕ್ಕೆ ಭೇಟಿ ನೀಡಿ, ನರಸಿಂಹನ ಪೂಜಿಸಿ, ಕಾಣಿಕೆ ಅರ್ಪಿಸದರಂತೆ.
1799ರಲ್ಲಿ ಕಾರಣಿಕ ನಲ್ಲಪ್ಪ ಎಂಬುವವರು ಹಳೆಯ ದೇವಾಲಯವಿದ್ದ ಜಾಗದಲ್ಲಿ ಈಗಿರುವ ಭವ್ಯ ದೇವಾಲಯ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ಸುಂದರ ದೇವಾಲಯದ ಭಿತ್ತಿಯಲ್ಲಿ ರಚಿಸಲಾಗಿರುವ ಸುವರ್ಣ ಲೇಪಿತ ವರ್ಣ ಚಿತ್ರಗಳು ನಯನ ಮನೋಹರವಾಗಿವೆ. ಪ್ರಧಾನ ಗರ್ಭಗೃಹದಲ್ಲಿ ಸಾಲಿಗ್ರಾಮ ರೂಪಿಯಾದ ನಾರಸಿಂಹ ದೇವರನ್ನು ಕಾಣಬಹುದು. ಎಡಬಲದಲ್ಲಿ ಲೋಕಾಂಬ ಮತ್ತು ಚೆಂಚುಮಾಂಬರ ದೇವಾಲಯಗಳಿವೆ.
ಇನ್ನು ತುಮಕೂರು ಹರಿಹರ ಕ್ಷೇತ್ರ ಎಂದೇ ಖ್ಯಾತಿ. ಇಲ್ಲಿ ಹರಿ-ಹರರಿಗೆ ಯಾವುದೇ ಭೇದ ಇಲ್ಲ. ಹೀಗಾಗಿ ಈ ದೇವಾಲಯದಲ್ಲಿ ಶಿವನೂ ನೆಲೆಸಿದ್ದಾನೆ. ಇಲ್ಲಿರುವ ಶಿವಲಿಂಗದಲ್ಲೂ ಒಂದು ವೈಶಿಷ್ಟ್ಯ ಇದೆ. ಲಿಂಗ ಅರ್ಧ ಕಪ್ಪು, ಅರ್ಧ ಕೇಸರಿಬಣ್ಣದ ಶಿಲೆಯದಾಗಿರುವುದು ವಿಶೇಷ., ಇದನ್ನು ಅರ್ಧನಾರೀಶ್ವರ, ಚಂದ್ರಮೌಳೇಶ್ವರ ಎಂದು ಕರೆಯುತ್ತಾರೆ.
ಪ್ರತಿವರ್ಷ ಮಾಘ ಮಾಸದ ರಥಸಪ್ತಮಿಯ ಬಳಿಕ ಬರುವ ಪುಬ್ಬಾ ನಕ್ಷತ್ರದಲ್ಲಿ ಇಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.
ವಿಶಾಲವಾದ ಪ್ರಾಕಾರದಲ್ಲಿ ಹಲವು ಆಲದ ಎಲೆಯ ಮೇಲೆ ಮಲಗಿರುವ ಕೃಷ್ಣ, ವೇಣುಗೋಪಾಲ, ರಂಗನಾಥಸ್ವಾಮಿಯೇ ಮೊದಲಾದ ದೇವಾನು ದೇವತೆಗಳ ವಿಗ್ರಹಗಳು ಹಾಗೂ ಗರುಡವಾಹನ ಸೇರಿದಂತೆ ವಿವಿಧ ವಾಹನಗಳೂ ಇವೆ.
***


ಕ್ಯಾಮೇನಹಳ್ಳಿ ಆಂಜನೇಯ
ಕಮನೀಯ ಕ್ಷೇತ್ರ.
#ಕ್ಯಾಮೇನಹಳ್ಳಿ...#ಕಮನೀಯ ಕ್ಷೇತ್ರ ಬೆಂಗಳೂರಿನಿಂದ 80 ಕಿ.ಮೀ., ದೂರದಲ್ಲಿ ಕೊರಟಗೆರೆ( ತಾಲ್ಲೂಕು) 3 ಕಿ.ಮೀ., ಮತ್ತು ತುಮಕೂರು (ಜಿಲ್ಲೆ) 33 ಕಿ.ಮೀ. ದೂರದಲ್ಲಿದೆ.. ಸಮೀಪದಲ್ಲೇ ಗೋರವನಹಳ್ಳಿ ಶ್ರೀ ಲಕ್ಷ್ಮೀ ದೇವಾಲಯವಿದೆ..
ಬ್ರಹ್ಮದೇವರಿಂದ ಮತ್ತು ದುರ್ವಾಸರಿಂದ ಪೂಜಿಸಲ್ಪಟ್ಟ ಯೋಗಾನರಸಿಂಹ ಸ್ವಾಮಿ ದೇವರಾಯನದುರ್ಗದ ಕುಂಭಿ ಬೆಟ್ಟದಮೇಲೆ ನೆಲೆಸಿದ್ದಾನೆ...
ಶ್ರೀ ನಾರಸಿಂಹದೇವರ ಆಜ್ಞಾಪಾಲಿಸಲು ಉದ್ಯುಕ್ತನಾದಂತೆ ಎದುರುಮುಖದ ರೋಮಹರ್ಷಿತನಾದ ಅಗಲಕಿವಿಯ ಶ್ರೀ ಆಂಜನೆಯನು ಕಮನೀಯ ಕ್ಷೇತ್ರದಲ್ಲಿ ನೆಲೆಸಿದ್ದಾನೆ..ಇಲ್ಲಿ ಜಯ,ಮಂಗಳಾ ಮತ್ತು ಗರುಡಾಚಲ ಮೂರೂ ನದಿಗಳ ಸಂಗಮವಿದೆ.
ಆರಡಿ ಎತ್ತರ ನಿಲುವಿನ  ದೈತ್ಯನ ಕಾಲಲಿ ತುಳಿಯುತ್ತಾ , ರೋಮಹರ್ಷಿತನಾದ,
ಭಕ್ತರ ಕಷ್ಟಗಳನ್ನು ಕೇಳಲು ಕಿವಿಗಳ ಆಗಲಿಸಿ ನೇರ ನಮ್ಮನ್ನೇ ನೋಡುತ್ತಾ, ಅಭಯಹಸ್ತನಾದ ಶ್ರೀ ಆಂಜನೇಯ ಸ್ವಾಮಿಯು ದ್ವಾಪರ ಯುಗದ ಕಡೆಯ ರಾಜ, ಅರ್ಜುನನ ಮೊಮ್ಮಗನಾದ ಜನಮೇಜಯ ಮಹಾರಾಜನಿಂದ ಸುಮಾರು 4500 ವರುಷಗಳ ಹಿಂದೆ ಪ್ರತಿಷ್ಠಿತನಾಗಿದ್ದಾನೆ.
ದೇವರ ತಲೆಯ ಕೂದಲುಗಳು ಸೂರ್ಯನ ಪ್ರಭಾವಳಿಯಂತೆ ಮೇಲೆದ್ದಿವೆ ಮತ್ತು ಶಂಖವು ಸ್ವಾಮಿಯ ಬಲಭಾಗದಲ್ಲೂ, ಚಕ್ರವು ಸ್ವಾಮಿಯ ಎಡಭಾಗದಲ್ಲೂ ಇದೆ..
ಸಂತಾನ ಅಪೇಕ್ಷಿಗಳ, ಜೀವನದಲ್ಲಿನ ಎಲ್ಲ ಎಡರು ತೊಡರುಗಳ, ಕಷ್ಟ ಕಾರ್ಪಣ್ಯಗಳ,ರೋಗ ರುಜಿನಗಳ, ನಕ್ಷತ್ರ ಗ್ರಹ ಪೀಡಾದಿಗಳ ಉಪದ್ರವ ಗಳು ಸ್ವಾಮಿಯ ದರ್ಶನದಿಂದ ಉಪಶಮನಗೊಳ್ಳುತ್ತವೆ..ಬೇಡಿಕೆ ಹರಕೆಗಳು ಶೀಘ್ರ ನೆರವೇರುತ್ತದೆ..
ವರುಷಕ್ಕೊಮ್ಮೆ ವಾರದಾದ್ಯಂತ ನಡೆಯುವ ಕ್ಯಾಮೇನಹಳ್ಳಿಯದ ಜಾತ್ರೆ, ದನಗಳ ಪರಿಷೆ, ರಥೋತ್ಸವವು ತುಮಕೂರುಜಿಲ್ಲೆಯ ಒಂದು ಪ್ರಮುಖ,ಸುಪ್ರಸಿದ್ಧ ಧಾರ್ಮಿಕ ಆಚರಣೆಯಾಗಿದೆ. ಶನಿವಾರ ಮತ್ತು ಮಂಗಳವಾರ ವೇ ಮೊದಲಾಗಿ ಎಲ್ಲ ಪರ್ವದಿನಗಳಂದು ಜನಸಂದಣಿ ಇರುತ್ತದೆ.
ಶ್ರೀ ವಾಯುದೇವರ  ಹನುಮ,ಭೀಮ,ಮಧ್ವರ ..ಮೂರೂ ಅವತಾರಗಳನ್ನು ಬಿಂಬಿಸುವ.. ಸ್ಕಂದಪುರಾಣದಲ್ಲಿ ಉಲ್ಲೇಖ ಹೊಂದಿರುವ ಕಮನೀಯ ಕ್ಷೇತ್ರದಲ್ಲಿ ಭಕ್ತರ ಎಲ್ಲ ಕಾಮನೆಗಳು ಈಡೇರುವುದರಲ್ಲಿ ಸಂದೇಹವೇ ಇಲ್ಲ.
ಭಕ್ತರನ್ನೇ ನೋಡುತ್ತಾ ಅವರ ಕಷ್ಟಗಳ ಕೇಳಲು ದೊಡ್ಡದಾದ ತನ್ನ ಕಿವಿಗಳಾಗಳಿಸಿ,ಅಭಯನೀಡುವ ಹನುಮ ಭೀಮ ಮಧ್ವ ಅವತಾರೀ ಶ್ರೀಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ
ನಮ್ಮೆಲ್ಲರ ಕಷ್ಟಗಳನ್ನು ಪರಿಹರಿಸಿ ಕಾಪಾಡಲಿ.
******

ನೆಲದಡಿಯಲ್ಲಿರುವ ರಾಯರ ಬೃಂದಾವನ .


ಕರ್ನಾಟಕದ ಉತ್ತರಭಾಗದಲ್ಲಿರುವ ವಿಜಯಪುರದಲ್ಲಿ ಒಂದು ರಾಯರ ನೆಲದಡಿಯಲ್ಲಿರುವ  (ಅಂಡರ್ಗ್ರೌಂಡ್) ಬೃಂದಾವನವಿದೆ. ಅದರ ಪ್ರತಿಷ್ಠಾಪನೆಯಾಗಿ ಸುಮಾರು ೯೦ ವರ್ಷಗಳೇ ಕಳೆದಿವೆ. ಮಧ್ವ ಪ್ರತಿಪಾದಕರಾದಂತಹ ಶ್ರೀರಘುಪ್ರೇಮತೀರ್ಥ ಎಂಬುವರು ಈ ಬೃಂದಾವನವನ್ನು ೧೯೩೦ರಲ್ಲಿ ಪ್ರತಿಷ್ಟಾಪನೆ ಮಾಡಿದರು. ಈ ಬೃಂದಾವನ ಗರ್ಭಗುಡಿಯನ್ನು ಮಧ್ವಾಚಾರ್ಯರ ತಂತ್ರಸಾರ ಸಂಗ್ರಹ (ದೇವಾಲಯ ವಾಸ್ತುಶಿಲ್ಪದ ಮೇಲೆ ಬರೆದ) ಗ್ರಂಥದ ಪ್ರಕಾರ ನಿರ್ಮಿಸಲಾಗಿದೆ. ರಘುಪ್ರೇಮತೀರ್ಥರು ಕೂಡ್ಲಿ ಅಕ್ಷೋಭ ತೀರ್ಥ ಮಠಕ್ಕೆ ಸೇರಿದವರಾಗಿರುತ್ತಾರೆ. ಅವರು ತುಂಗಾಬಾಯಿ ಮತ್ತು ಸ್ವಾಮಿರಾಯಾಚಾರ್ಯರ ಸುಪುತ್ರನಾಗಿ ೧೮೬೦ ರಲ್ಲಿ ಕಡಪ ಜಿಲ್ಲೆಯ ಆಯಾಚೊತಿ ಎಂಬಲ್ಲಿ ಜನಿಸಿ, ೧೯೪೩ ರಲ್ಲಿ ಬೃಂದಾವನಸ್ಥರಾದರು.

    ಬಿಜಾಪುರದ ಈ ಮಠದ ಆಚಾರ್ಯ ಪವಮಾನಾಚಾರ  ಹೇಳುವಂತೆ, ರಘುಪ್ರೇಮತೀರ್ಥರು ಮೊದಲು ತಾವೇ ಈ ಸ್ಥಳದಲ್ಲಿ ತಮ್ಮ ಬೃಂದಾವನ ಇರಲಿ ಎಂದು ಯೋಜನೆಮಾಡಿಕೊಂಡಿದ್ದರು. ಆದರೆ ನಂತರದಲ್ಲಿ ಅವರಿಗೆ ಕನಸಿನಲ್ಲಿ ರಾಯರ ಸಾಕ್ಷಾತ್ಕಾರ ಆದಮೇಲೆ ತಮ್ಮ ಈ ವಿಚಾರವನ್ನು ಕೈಬಿಟ್ಟರು. ಆವಾಗಿನ ತಹಶೀಲ್ದಾರರಾಗಿದ್ದ ಗುಂಡೂರಾವ್ ಜೊತೆ ಸೇರಿ ದೇವಾಲಯ ರಾಯರ ಬೃಂದಾವನ ಪ್ರತಿಷ್ಠಾಪಿಸಿದರು.

    ಒಮ್ಮೆ ಬಿಜಾಪುರದ ನಿವಾಸಿಗಳಾದ ಗುಂಡೂರಾವ್ ಮತ್ತು Dr. ಗೋವಿಂದರಾವ್ಎಂಬುವರು ತಮ್ಮ ಕಷ್ಟ ಪರಿಹಾರಾರ್ಥ ಸಹಾಯ ಕೇಳಲು ಅದೋನಿಯಲ್ಲಿ ಶ್ರೀರಘುಪ್ರೇಮತೀರ್ಥರನ್ನಾ ಭೇಟಿಯಾದರು. ಶ್ರೀಗಳು ಖುದ್ದಾಗಿ ವಿಜಯಪುರಕ್ಕೆ ಬಂದು, ಸ್ವತಃ  ಅವರೇ ಕಷ್ಟಕ್ಕೆ ಪರಿಹಾರಾರ್ಥವಾಗಿ ನಿಂತರು. "ಇಲ್ಲಿ ನಿಮ್ಮ ಮತ್ತು ನಿಮ್ಮ ಕುಟುಂಬವರ್ಗದವರ ಹಾಗೂ ಲೋಕಕಲ್ಯಾಣಾರ್ಥವಾಗಿ ಶ್ರೀಗುರುಸಾರ್ವಭೌಮರ ಒಂದು ಬೃಂದಾವನವನ್ನು ಪ್ರತಿಷ್ಠಾಪಿಸೋಣ" ಎಂದು ಸೂಚಿಸಿದರು.

    ಗುರುಗಳ ಆಜ್ಞೆಯನ್ನು ಶಿರಸಾವಹಿಸಿಕೊಡುವುದಾಗಿ ಇಬ್ಬರೂ ಒಪ್ಪಿಕೊಂಡರು. ರಘುಪ್ರೇಮತೀರ್ಥರು ಸ್ವತಹ ತಾವೇ ಗರ್ಭಗುಡಿಯ ವಿನ್ಯಾಸವನ್ನು ರೂಪಿಸಿ, ಅದರ ರಚನೆಯನ್ನು ಮಧ್ವಾಚಾರ್ಯರ - ತಂತ್ರಸಾರ ಸಂಗ್ರಹ ಗ್ರಂಥದ ಅನುಸಾರವಾಗಿ ಇರುವುದು ಎಂದು ಹೇಳಿದರು. ಈ ಗ್ರಂಥದ ಅಂಶಗಳು - ಕಟ್ಟಡ ನಿರ್ಮಾಣ ಪದ್ಧತಿ, ನಿರ್ಮಾಣದ ಹಂತ-ಹಂತದಲ್ಲಿರುವ ಆಚರಣೆಗಳು ಮತ್ತು ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೇಗೆ ಕಟ್ಟಡ ನಿರ್ಮಾಣ ಮಾಡಬೇಕು ಇತ್ಯಾದಿ.

       ರಾಯರ ಈ ಬೃಂದಾವನವು ಕೇವಲ ೬ ತಿಂಗಳೊಳಗೆ ನಿರ್ಮಾಣವಾಗಿ ಪೂರ್ಣಗೊಂಡಿತ್ತು ಮತ್ತು ೧೯೩೦ ರಲ್ಲಿ ಈ ಬೃಂದಾವನದ ಉದ್ಘಾಟನೆಯಾಗಿತ್ತು. ಈ ಬೃಂದಾವನವು ವಿಜಯಪುರದ ಬಬಲೇಶ್ವರ ರಸ್ತೆಯಲ್ಲಿ ಜೋರಾಪುರ್ ಪೇಠ ಎಂಬ ಪ್ರದೇಶದಲ್ಲಿದೆ. ದೇವಾಲಯದಲ್ಲಿ, ರಾಯರ ಬೃಂದಾವನಕ್ಕೆ ಹೋಗಲು, ನೆಲದಿಂದ ಕೆಳಕ್ಕೆ ೨೩ ಮೆಟ್ಟಿಲುಗಳಿವೆ. ಕೊನೆಯ ಮೆಟ್ಟಿಲು ಹೊರತುಪಡಿಸಿ, ಉಳಿದೆಲ್ಲ ಮೆಟ್ಟಿಲುಗಳು ೧ ಅಡಿ ಎತ್ತರ ಇವೆ.


  ರಾಯರ ಬೃಂದಾವನವು ನೆಲದ ಮೇಲ್ಮೈಯಿಂದ ೨೩ ಅಡಿಗಳಷ್ಟು ಕೆಳಗಡೆ ಇದೆ. ಬೃಂದಾವನದ ಗರ್ಭಗುಡಿಯ ಹಿಂದೆ ಒಂದು ಬಾವಿಯಿದೆ. ಗರ್ಭಗುಡಿಯ ಹಿಂದಿನ ಗೋಡೆ ಮತ್ತು ಬಾವಿ ಒಂದಕ್ಕೊಂದು ಹೊಂದಿಕೊಂಡಂತೆಯೇ ಇವೆ. ರಾಯರ ಪೂಜೆ, ಅಭಿಷೇಕ ಇತ್ಯಾದಿಗಳಿಗೆ ಈ ಬಾವಿಯಿಂದಲೇ ನೀರು. ಈ ಬಾವಿಯಲ್ಲಿ ನೀರು ಯಾವಾಗಲೂ, ಬೃಂದಾವನದ ಗರ್ಭಗುಡಿಯ ಕೆಳಮೈಯಿಂದ, ಇನ್ನೂ ಕೆಳಗಡೇನೇ ಇರುತ್ತೆ ಮತ್ತು ವಿಜಯಪುರದ ಉರಿಬಿಸಿಲಿಗೂ ಈ ಬಾವಿ ಎಂದೂ ಬತ್ತಿಲ್ಲ. ಈ ಬೃಂದಾವನಕ್ಕೆ ಪೂಜೆ ಆದ ಬಳಿಕ,  ತೀರ್ಥ ಪ್ರಸಾದಗಳು ಎಲ್ಲವೂ ಮೇಲೆ ನೆಲದ ಮೇಲೆನೇ. ಈ ಬೃಂದಾವನದ ಗರ್ಭಗುಡಿ ಎಷ್ಟು ತಂಪಾಗಿರುತ್ತದೆ ಎಂದರೆ ಹೂವುಗಳು, ಮಲ್ಲಿಗೆ ಗುಲಾಬಿ ಇತ್ಯಾದಿಗಳು ೨-೩ ದಿನ ಬಾಡುವುದಿಲ್ಲವಂತೆ. 



    ಈ ಬೃಂದಾವನದ ಮಾಲೀಕತ್ವ ಇನ್ನೂ ಗುಂಡೂರಾವ್ ಅವರ ವಂಶಸ್ಥರಲ್ಲಿ ಇದೆ. ಅವರು ಈ ದೇವಸ್ಥಾನದ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಕೆಲವು ಬಾರಿ ಭೂಗತವಿರುವ ಗರ್ಭಗುಡಿ ಮೇಲ್ಚಾವಣಿಯ ದುರಸ್ತಿ ಮಾಡಲು ಪ್ರಯತ್ನಿಸಿದ್ದರು. ಎಲ್ಲ ಎಂಜಿನೀರಗಳು ಚಾವಣಿಯನ್ನು ಪರಿಶೀಲಿಸಿ, ಇಲ್ಲಿ ಏನೂ ಬದಲಾವಣೆ ಮಾಡುವುದು ಅಸಾಧ್ಯ. ಇದೊಂದು ಇಂಜಿನಿಯರಿಂಗ್ ಅದ್ಭುತವೇ ಸರಿ. ಹೀಗಾಗಿ, ಇಲ್ಲಿ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಇಲ್ಲಿ ನೆಲದ್ವಾರ, ಮೊದಲನೆಯ ಮೆಟ್ಟಿಲುನಿಂದಲೂ ಕೂಡ ರಾಯರ ಬೃಂದಾವನವು/ ಗರ್ಭಗುಡಿ ಸಂಪೂರ್ಣವಾಗಿ ಕಾಣುತ್ತೆ. ಈ ಬೃಂದಾವನವೂ ನೆಲದ್ವಾರ ಪವಾಡಗಳಿಗೆ ಹೆಸರುವಾಸಿ. ನೀವು ಎಂದಾದರೂ ಬಿಜಾಪುರಕ್ಕೆ ಹೋದರೆ, ಈ ಬೃಂದಾವನದ ದರ್ಶನ ಪಡೆದು ಬನ್ನಿ. ಇಲ್ಲಿನ ಆಚಾರ್ಯರಿಗೆ ಕೇಳಿ ತಿಳಿದುಕೊಳ್ಳಿರಿ, ಅವರು ಬೇಸರವಿಲ್ಲದೆ ರಾಯರ ಪವಾಡಗಳನ್ನು ಸದೃಶ್ಯವಾಗಿ ವಿವರಿಸುತ್ತಾರೆ ಎಂದು ತಿಳಿಸುತ್ತ ಈ ಭಾಗವನ್ನು ಮುಗಿಸುತ್ತೇನೆ.

|| ಶ್ರೀರಾಘವೇಂದ್ರಾಯ ನಮಃ ||

****











ಶ್ರೀ ಕ್ಷೇತ್ರ ಗೋಕರ್ಣವು ಮಹಾನ್ ಮುಕ್ತಿ ಕ್ಷೇತ್ರಗಳಲ್ಲಿ ಒಂದು. ಅಲ್ಲದೇ ಪರಶುರಾನ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪರಮಪವಿತ್ರವಾದ ಮುಕ್ತಿ ಸ್ಥಳವೆಂದೆ ಖ್ಯಾತಿಯನ್ನು ಹೊಂದಿದೆ. ಇಲ್ಲಿ ಪರಮೇಶನು 'ಮಹಾಬಲೇಶ್ವರ' ಎಂಬ ನಾಮದಿಂದ ನೆಲೆಸಿ ಮಹಾಮುಕ್ತಿದಾಯಕನಾಗಿದ್ದಾನೆ. ಇಲ್ಲಿ ದಿನ ನಿತ್ಯ ಸಾವಿರಾರು ಜನರು ಬಂದು ಶ್ರಾಧ್ಧ ಕರ್ಮಾದಿಗಳನ್ನು ನೆರೆವೆರೆಸಿ ತೆರಳುತ್ತಾರೆ. ಈ ಮೂಲಕ ತಮ್ಮ ಪಿತೃಗಳಿಗೆ ಅಥವಾ ಗತಿಸಿದ ಅತೃಪ್ತ ಜೀವಗಳಿಗೆ ಮೋಕ್ಷವನ್ನು ಕರುಣಿಸುವ ದೇವನಲ್ಲಿ ಮೊರೆಯಿಟ್ಟು ಆ ಮಹಾದೇವನಲ್ಲಿ ಲೀನಗೊಳಿಸುತ್ತಾರೆ.

ಶ್ರೀ ಮುಕ್ತಿ ಗಣಪತಿ, ಗೋಕರ್ಣ 

ಹೀಗೆ ಮುಕ್ತಿಸ್ಥಳವೆಂದೆ ಪ್ರಖ್ಯಾತಿಯನ್ನು ಪಡೆದು, ಕಾಶಿಯೆಂದೆ ಬಿಂಬಿಸಲ್ಪಡುವ ಈ ದೇವಾಯಲದಲ್ಲಿ ಪರಮೇಶ್ವರ ಬಂದು ನೆಲೆಸಿದ ಸಂಗತಿಗೆ ಪುರಾಣದಲ್ಲಿ ಮಾಹಿತಿ ದೊರಕುತ್ತದೆ. ಹೀಗೆ ಮಹಾದೇವನ ಬಗೆಗಿನ ಒಂದು ಇಂತಿದೆ........

ಐತಿಹ್ಯ : ಅನಾದಿಕಾಲದಲ್ಲಿ ರಾವಣನು ಪರಮೇಶ್ವರನ ಪರಮ ಭಕ್ತನಾಗಿದ್ದ. ರಾವಣನಲ್ಲದೆ ಆತನ ತಾಯಿಯೂ ಕೂಡಾ ಪರಮೇಶ್ವರನ ಮಹಾನ್ ಭಕ್ತೆಯಾಗಿದ್ದಳು. ಹೀಗೆ ದಿನಕಳೆಯುತ್ತಾ ರಾವಣನ ತಾಯಿ ಒಂದು ಆಸೆಯನ್ನು ತೋಡಿಕೊಳ್ಳುತ್ತಾಳೆ. ತನ್ನ ಮಗನಲ್ಲಿ ನನಗೆ ಪರಮೇಶ್ವರನ ಪೂಜೆ ಮಾಡಲು, ಸದಾ ಪರಮೇಶ್ವರನನ್ನು ಸೇವಿಸಲು ಸಾಕ್ಷಾತ್ ದೇವನ ಆತ್ಮಲಿಂಗವನ್ನು ತಂದುಕೊಡುವಂತೆ ಹೇಳುತ್ತಾಳೆ. ಆಗ ರಾವಣನು ತಾಯಿಯ ಭಯಕೆಯನ್ನು ಈಡೇರಿಸಲು ಕೈಲಾಸಕ್ಕೆ ನಡೆಯುತ್ತಾನೆ.

ಹೀಗೆ ಕೈಲಾಸಕ್ಕೆ ಮುಂದುವರೆದು ಸಾಗುವ ರಾವಣನ ಆರ್ಭಟವನ್ನು ಕಂಡು ದೇವಾನು ದೇವತೆಗಳು ಭಯ-ಭೀತರಾಗುತ್ತಾರೆ. ಹೀಗೆ ಭಯಗೊಂಡ ದೇವತೆಗಳು ಸಮಾಲೋಚಿಸಿ ನಾರದರ ಮೂಲಕ ಒಂದು ಉಪಾಯವನ್ನು ಹೂಡುತ್ತಾರೆ. ಅಂತೆಯೇ ನಾರದರು ರಾವಣನು ಬರುತ್ತಿರುವ ಮಾರ್ಗ ಮಧ್ಯದಲ್ಲಿ ರಾವಣನನ್ನು ತಡೆದು ಒಂದು ಉಪಾಯವನ್ನು ಹೂಡುತ್ತಾರೆ. ರಾವನಲ್ಲಿ ನೀನು ದೂರ ಹೊರಟಿರುವೇ? ಎಂದು ಕೇಳುತ್ತಾರೆ. ಆಗ ನಾನು ಶಿವನ ಆತ್ಮಲಿಂಗ ತರಲು ಕೈಲಾಸಕ್ಕೆ ಹೊರಟಿರುವೆ ಎಂದು ಹೇಳುತ್ತಾನೆ. ಅದನ್ನು ಕೇಳಿದ ನಾರದರು ನಗಲು ಆರಂಭಿಸುತ್ತಾರೆ. ಆಗ ರಾವಣನು ಏಕೆ ನಗುತ್ತೀರಿ ಎಂದು ನಾರದರಿಗೆ ಪುನಃ ಪ್ರಶ್ನೆ ಮಾಡಲು ನಾರದರು ರಾವಣ ನೀನು ಮೂರ್ಖನಾಗಿದ್ದಿ, ಪರಶಿವನು ತನ್ನ ಸತಿಯನ್ನು ಬಿಟ್ಟು ಬಂದಾನೇ, ಆತನು ಪಾರ್ವತಿಯೊಡನೆ ಕೈಲಾಸದಲ್ಲಿ ಇರುವಾಗ ನೀನು ಹೇಗೆ ತಾನೇ ಆತ್ಮಲಿಂಗವನ್ನು ತರಲು ಸಾಧ್ಯ ಎಂದು. ಆಗ ರಾವಣ ಅದಕ್ಕೆನು ಉಪಾಯ ಎಂದು ಕೇಳಲು ಪರಮೇಶ್ವರನ ರಾಣಿ ಪರಮೇಶ್ವರೀಯನ್ನೆ ನೀನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು. ಅವಳನ್ನು ನೀನು ಪಡೆದೆ ಎಂದಾದರೆ ಜಗತ್ತೆ ನಿನ್ನ ಪರವಾಗುತ್ತದೆ ಎಂದು ಹೇಳುತ್ತಾರೆ. ಕೋಟಿತೀರ್ಥ ಸರೋವರ


ಆಗ ರಾವಣನು ಅಹುದು ಅಲ್ಲವೇ? ಆದರೆ ಪರಮೇಶ್ವರನು ತನ್ನ ಸತಿಯನ್ನು ಕೊಡುವನೇ ಎಂದು ಮರುಪ್ರಶ್ನಿಸಿದಾಗ, ನಾರದನು ರಾವಣ ಶಿವನು ಭಕ್ತಪ್ರಿಯ. ಅವನು ಬೇಡಿದ್ದನ್ನು ಕೋಡುವನು ಎಂದು ಹೇಳುತ್ತಾನೆ. ಅದೇ ರೀತಿ ಪಾರ್ವತಿಯು ಪರಮಸುಂದರಿ ಎಂದು ವರ್ಣಿಸುತ್ತಾರೆ. ಅದರಂತೆ ರಾವಣನು ಕೈಲಾಸಕ್ಕೆ ತೆರಳಿ ಅಲ್ಲಿ ಪರಶಿವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತಂದೆಯೇ ನನಗೊಂದು ವರವನ್ನು ಕೊಡಬೇಕು ಎಂದು ಹೇಳುತ್ತಾನೆ. ಅದರಂತೆ ಪರಮೇಶ್ವರನು ಆಯಿತು ಏನು ಬೇಕು ಕೇಳು ಎಂದಾಗ ಪರಮೇಶ್ವರ ನಿನ್ನ ಪಟ್ಟದ ಅರಸಿಯಾದ ಮಹಾದೇವಿಯನ್ನು ನನ್ನೊಂದಿಗೆ ಕಳಿಸಬೇಕು ಎಂದು ಕೇಳುತ್ತಾನೆ. ಆಗ ಪರಮೇಶ್ವರನು ತಥಾಸ್ತು ಎಂದನು, ಆದರೆ ನೀನು ಪಾರ್ವತಿಯನ್ನು ಕರೆದುಕೊಂಡು ಹೋಗುವಾಗ ತಿರುಗಿ ನೋಡಬಾರದು ಎಂದು ಹೇಳುತ್ತಾನೆ. ಅದಕ್ಕೆ ಆಯಿತು ಎಂದು ಹೇಳುತ್ತಾನೆ.
ಹೀಗೆ ಪಾರ್ವತಿಯನ್ನು ಕರೆದಿಕೊಂಡು ರಾವಣನು ಮುಂದೆ ಸಾಗುತ್ತಾ ನಡೆಯಲು ಆದಿಶಕ್ತಿಯಾದ ಮಹಾದೇವಿಯು ರಾವಣನನ್ನು ಹಿಂಬಾಲಿಸಲು ದಟ್ಟ ಕಾನನದ ಬಳಿಸಾಗಿದಾಗ ಅಲ್ಲಿ ನಾರದರು ಪ್ರತ್ಯಕ್ಷರಾಗಿ ರಾವಣ....!! ನೀನು ನಿಜವಾಗಿ ಮೂರ್ಖನೆ ಸರಿ. ನಿನ್ನೊಂದಿಗೆ ಶಿವನು ಪಾರ್ವತಿಯನ್ನು ಕಳಿಸಿದ್ದಾನೆಂದು ನೀನು ತಿಳಿದಿದ್ದಿಯೇ? ಆದರೆ ಪರಮೇಶ್ವರನು ನಿನಗೆ ಮೋಸವೆಸಗಿದ್ದಾನೆ. ಅವನು ನಿನ್ನೊಂದಿಗೆ ಉಗ್ರರೂಪಿಣಿಯಾದ ಕಾಳಿಕೆಯನ್ನು ಕಳಿಸಿರುವುದು ಎಂದು ಹೇಳಿ, ಬೇಕಾದರೆ ನೀನೆ ತಿರುಗಿ ನೋಡು ಎಂದು ಹೇಳುತ್ತಾನೆ. ಆಗ ರಾವಣನು ಕೋಪಗೊಂಡು ತಿರುಗಿ ನೋಡುವಾಗ ಆದಿಶಕ್ತಿಯಾದ ಮಹಾದೇವಿಯು ಭದ್ರಕಾಳಿ ರೂಪವನ್ನು ತಾಳಿರುತ್ತಾಳೆ. ಆಗ ಭಯಭಿತನಾದ ರಾವಣ ತನ್ನ ಅಂದಕಾರದ ಪೊರೆಯನ್ನು ಕಳಚಿ ತಾಯೇ ನನ್ನಿಂದ ತಪ್ಪಾಯ್ತು. ಸರ್ವರಿಗೂ ತಾಯಿಯಾದ ನಿನ್ನನ್ನೆ ನಾನು ಮೋಹಿಸಿದೆ. ಅಮ್ಮಾ ಶಾಂತಳಾಗು ಎಂದು ಗೋಗೆರೆಯುತ್ತಾನೆ. ಆಗ ಮಾತೆಯು ನಾನು ಈ ಕ್ಷೇತ್ರದಲ್ಲಿ ಭದ್ರಕಾಳಿಯಾಗಿ ನೆಲೆಸುತ್ತೇನೆ, ಮುಂದೆ ಈ ಕ್ಷೇತ್ರವು ಪ್ರಸಿದ್ದಿಯನ್ನು ಪಡೆದಾಗ ನಾನು ಇದೇ ಸ್ಥಳದಲ್ಲಿ ನೆಲೆಸುತ್ತೇನೆ ಎಂದು ಅಭಯವನ್ನಿಟ್ಟು ಮಾತೆಯು ಅದೃಶ್ಯಳಾಗುತ್ತಾಳೆ.

ಶ್ರೀ ಗೋಕರ್ಣ ಮಹಾಬಲೇಶ್ವರ ದೇವಸ್ತಾನ
ಹೀಗೆ ರಾವಣನು ತಾನು ಬಂದ ಕಾರ್ಯವನ್ನು ಮರೆತು ಬೆರಾವುದೋ ಕಾರ್ಯವನ್ನು ಎಸಗಿ ಪುನಃ ಪರಶಿವನನ್ನು ಕುರಿತು ಅಖಂಡ ತಪಸ್ಸನ್ನು ಮಾಡುತ್ತಾನೆ. ರಾವಣನ ತಪಸ್ಸಿಗೆ ಒಲಿದು ಪರಮೇಶ್ವರ ಏನು ವರ ಬೇಕು ಎಂದು ಕೇಳುತ್ತಾನೆ. ಆಗ ರಾವಣನು ದೇವಾ ನನಗೆ ನಿನ್ನ ಆತ್ಮಲಿಂಗ ಬೇಕು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಪರಮೇಶ್ವರ ಭಕ್ತ ನಿನ್ನ ಭಕ್ತಿಗೆ ಮೆಚ್ಚಿ ರಾವಣನಾದ ನಿನಗೆ ರಾವಣೇಶ್ವರ ಎಂಬು ಬಿರುದನ್ನು ನೀಡುತ್ತಿದ್ದೇನೆ. ಅಂತೆ ನನ್ನ ಈ ಆತ್ಮಲಿಂಗವನ್ನು ನೀನು ಭೂಮಿಗೆ ಸ್ಪರ್ಶಿಸಿದರೆ ಅದು ಅಲ್ಲಿ ನೆಲೆಯಾಗುತ್ತದೆ ಎಂದು ಹೇಳಿ ಅದೃಶ್ಯನಾಗುತ್ತಾನೆ.
ಇತ್ತ ಆತ್ಮಲಿಂಗವನ್ನು ಪಡೆದು ಭೀಕರ ನಗುವಿನಿಂದ ಆರ್ಭಟಮಾಡುತ್ತಾ ರಾವಣ ನಗಲು ದೇವಾನು ದೇವತೆಗಳು ಭಯಗೊಳ್ಳುತ್ತಾರೆ. ಆಗ ಪುನಃ ದೇವತೆಗಳೆಲ್ಲ ಒಂದಾಗಿ ಪುನಃ ಒಂದು ಉಪಾಯವನ್ನು ಹೂಡಿ ಗಣಪತಿಯನ್ನು ಬ್ರಾಹ್ಮಣ ವಟುವಿನ ವೇಷವನ್ನು ಧರಿಸಿ ಭೂಮಿಗೆ ಕಳಿಸುತ್ತಾರೆ. ಹೀಗೆ ಸಂಜೆಯಾಗುತ್ತಾ ರಾವಣೇಶ್ವರನು ಸಮುದ್ರ ತಟದಲ್ಲಿ ನಡೆದು ಸಾಗುವಾಗ ಸಂದ್ಯಾವಂದನೆ ಮಾಡುವ ಸಮಯ ಆಗುತ್ತದೆ. ಆಗ ಅತ್ತಿತ್ತ ಕಣ್ಣು ಹಾಯಿಸಿದಾಗ ಅಲ್ಲಿ ವಟು ವೇಷದಾರಿ ಗಣಪತಿ ಕಾಣುತ್ತಾನೆ. ಅದನ್ನು ಕಂಡ ರಾವಣ ಏ ಬಾಲಕ ಇಲ್ಲಿ ಬಾ ಎಂದು ಕರೆಯುತ್ತಾನೆ. ಆಗ ವಟು ವೇಷಧಾರಿ ಗಣಪತಿಯು ಹತ್ತಿರ ಬಂದು ಏನು ಕರೆದ ಕಾರಣ ಎಂದು ಕೇಳಲು, ರಾವಣೇಶ್ವರನು ಬಾಲಕ ಈ ಆತ್ಮಲಿಂಗವನ್ನು ಸ್ವಲ್ಪ ಹಿಡಿದುಕೊಳ್ಳಬಹುದೆ? ಎಂದು ಕೇಳುತ್ತಾನೆ. ಆಗ ಬಾಲಕ ಆಗಬಹುದು, ಆದರೆ ನಾನು ಮೂರು ಬಾರಿ ಕೂಗುವುದರೊಳಗೆ ನೀನು ಮೇಲೆ ಬರಬೇಕು. ಇಲ್ಲವಾದರೆ ನಾನು ಇದನ್ನು ಇಲ್ಲೇ ಇಡುತ್ತೇನೆ ಎಂದು ಹೇಳುತ್ತಾನೆ.
ಅದಕ್ಕೆ ಆಗಬಹುದು, ನಾನು ಬೇಗನೆ ಬರುತ್ತೇನೆ ಎಂದು ಸಮುದ್ರಕ್ಕೆ ತೆರಳಿದ ರಾವಣೇಶ್ವರ ಹೋಗುತ್ತಲೇ ಬಾಲಕ ಒಮ್ಮೆ ಕೂಗುತ್ತಾನೆ. ಆಗ ರಾವಣ ಬಂದೇ ಎಂದು ಹೇಳುತ್ತಾನೆ. ಮತ್ತೇ ಪುನಃ ಕೂಗುತ್ತಾನೆ, ಹಾಗೇ ಮೂರನೇ ಬಾರಿ ಕೂಗಿ ರಾವಣ ಬರದೇ ಇರುವುದನ್ನು ಕಂಡು ಆತ್ಮ ಲಿಂಗವನ್ನು ಅಲ್ಲಿಯೇ ನೆಲದ ಮೇಲೆ ಇಡುತ್ತಾನೆ. ಆಗ ರಾವಣ ಕೋಪದಿಂದ ಮೇಲೋಡಿ ಬಂದ ಬಾಲಕನ ಶಿರದ ಮೇಲೆ ಒಂದು ಗುದ್ದನ್ನು ನೀಡುತ್ತಾನೆ. ಇಂದಿಗೂ ಗೋಕರ್ಣ ಕ್ಷೇತ್ರದ ಮಹಾಗಣಪತಿಯ ಶಿರದ ಮೇಲೆ ಒಂದು ಚಿಕ್ಕ ರಂದ್ರದಂತಿರುವುದನ್ನು ಕಾಣಬಹುದು. ಹೀಗೆ ರಾವಣನು ನೆಲಕ್ಕೆ ಸ್ಪರ್ಶವಾದ ಆತ್ಮಲಿಂಗವನ್ನು ಅಲ್ಲಿಂದ ಕೀಳಲು ಪ್ರಯತ್ನಿಸುತ್ತಾನೆ. ಆದರೆ ಅದು ಮತ್ತೂ ದೊಡ್ಡದಾಗಿ ಬೆಳೆಯಲಾರಂಬಿಸುತ್ತದೆ.
ಹೀಗೆ ಈ ರೀತಿಯಾಗಿ ಭದ್ರಕಾಳಿ(ತಾಮ್ರ ಗೌರಿ) ಮೊದಲೆ ಇಲ್ಲಿ ನೆಲೆಸಿ, ಮುಂದೆ ಪರಶಿವನು ಇಲ್ಲಿ ಮಹಾಬಲೇಶ್ವರ ಎಂಬ ನಾಮದಿಂದ ಪ್ರಸಿದ್ದಿಯನ್ನು ಪಡೆಯುತ್ತಾನೆ. ಹೀಗೆ ಪರಶಿವನು ನೆಲೆಸಿ ನಿಂತ ಈ ಪರಮ ಪುಣ್ಯ ಸ್ಥಳವು ಮುಂದೆ ಗೋಕರ್ಣ ಎಂದು ಪ್ರಸಿದ್ದಿಯನ್ನು ಪಡೆಯುತ್ತದೆ. ಆತ್ಮಲಿಂಗವು ಗೋವಿನ ಕಿವಿಯನ್ನು ಹೋಲುವುದರಿಂದ ಈ ಕ್ಷೇತ್ರವು ಗೊಕರ್ಣ ಎಂದು ಪ್ರಸಿದ್ದಿಯನ್ನು ಪಡೆಯುತ್ತದೆ.
ಗೋಕರ್ಣದಲ್ಲಿ ಅನೇಕ ದೇವ ದೇವತೆಗಳ ಗುಡಿಗಳಿವೆ. ಇಲ್ಲಿಯ ವಿಶೇಷ ಆಕರ್ಷಣೆ, ಗೋಕರ್ಣದ ಮಹಾಬಲೇಶ್ವರ ದೇವಾಲಯದ ಸಭಾಮಂಟಪದಲ್ಲಿರುವುದು ಪಾರ್ವತಿ, ನಂದಿ ಮತ್ತು ಗಣಪತಿಯ ಮೂರ್ತಿಗಳು. ಇಲ್ಲಿ ಭೂತನಾಥ ಸತಿಯಾದ ಆದಿಶಕ್ತಿ ಭದ್ರಕಾಳಿ ರೂಪದಲ್ಲಿ ಭೀಭತ್ಸಳಾಗಿದ್ದಾಳೆ. ಗಣಪತಿ ದೇವರ ಗರ್ಭಗುಡಿಯ ಮೇಲೆ ಅಷ್ಟದಿಕ್ಪಾಲಕರು, ನಾಗ ಮತ್ತು ದಶಾವತಾರ ಪಡೆದು ಸ್ಥಾಪಿಸಿದ ಆತ್ಮಲಿಂಗ ಸಾಲಿಗ್ರಾಮ ಪೀಠದ ಮಧ್ಯದಲ್ಲಿದೆ. ನಮಗೆ ತೋರುವುದು ಅಂಗುಷ್ಟಗಾತ್ರದ ಲಿಂಗ ಮಾತ್ರ. ಮಹಾಬಲೇಶ್ವರ ದೇವಾಲಯದಲ್ಲಿ ಸುಂದರ ಶಿಲ್ಪಗಳೂ ಇವೆ.
ಊರೊಳಗಿನ ಕೋಟಿತೀರ್ಥ ಒಂದು ದೊಡ್ಡ ಕೆರೆ. ಕೆರೆಯ ಮಧ್ಯದಲ್ಲಿರುವುದು ಸಪ್ತಕೋಟೀಶ್ವರ ಲಿಂಗ. ಹಿಂದೆ ಅದರ ಎದುರು ಎರಡು ಸಂದಿಗಳಿದ್ದವು. ಕೆರೆಯ ಸುತ್ತಲೂ ದೇವದೇವತೆಗಳ ಗುಡಿಗಳಿವೆ. ದಕ್ಷಿಣಕ್ಕೆ ಕಾಲಭೈರವ, ಪೂರ್ವದಲ್ಲಿ ಶಂಕರ ನಾರಾಯಣ ದೇವಾಲಯಗಳಿವೆ. ಆಗ್ನೇಯದಲ್ಲಿ ಪಟ್ಟದ ವಿನಾಯಕ ಇದ್ದಾನೆ. ದಕ್ಷಿಣ ಮತ್ತು ಉತ್ತರದಲ್ಲಿ ಸ್ವರ್ಣವಳ್ಳಿ ಮತ್ತು ರಾಮಚಂದ್ರಾಪುರ ಮಠಗಳಿವೆ. ಗೋಕರ್ಣ ಗ್ರಾಮದ ಅಧಿದೇವತೆ ಭದ್ರಕಾಳಿ ಗೋಕರ್ಣ ಪ್ರವೇಶಿಸುವಾಗಲೇ ಈ ಗುಡಿ ಕಾಣಿಸುವುದು. ಈ ದೇವಿಗೆ ದಸರೆಯಲ್ಲಿ ವಿಶೇಷ ಉತ್ಸವ. ಇಲ್ಲಿ ನಡೆಯುವ ಅಮ್ಮ ನವರ ಕಲಶ, ಬಂಡಿ ಹಬ್ಬ ವಿಶೇಷವಾದದ್ದು.
“ಮಹಾಬಲೇಶ್ವರ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ”
***


ಪಾವಗಡದಶನೀಶ್ವರದೇವಾಲಯ

ನವಗ್ರಹಗಳಲ್ಲಿ ಶನಿ ಅತ್ಯಂತ ಪ್ರಬಲ. ಶನಿಯನ್ನು ಮಹಾತ್ಮ, 

#ಶನೀಶ್ವರ ಎಂದು ಕರೆಯುವ ಪರಿಪಾಠವಿದೆ. ಜನ ಸಾಮಾನ್ಯರಿಗೆ ಶನಿ ದೇವರ ಬಗ್ಗೆ ಎಲ್ಲಿಲ್ಲದ ಭಯ. ಈ ಭಯ ಶನೀಶ್ವರನ ಬಗ್ಗೆ ಭಕ್ತಿ ಬೆಳೆಯಲು ಕಾರಣವಾಗಿದೆ. ‘ಶನಿ ನಿಮ್ಮ ಹೆಗಲೇರಿದ್ದಾನೆ... 

ಪಾವಗಡಕ್ಕೆ ಹೋಗಿ ಆ ಮಹಾತ್ಮನಿಗೆ ಪೂಜೆ ಸಲ್ಲಿಸಿ ಅವನ ಕೃಪೆಗೆ ಪಾತ್ರರಾಗಿ’ ಎಂದು ಜ್ಯೋತಿಷಿಗಳು ಸಲಹೆ ಕೊಡುತ್ತಾರೆ. ‘ಎಲ್ಲ ಅನಿಷ್ಟಗಳಿಗೂ ಶನೀಶ್ವರನೇ ಕಾರಣ’ ಎಂಬ ಮಾತು ಜನ ಮಾನಸದಲ್ಲಿದೆ.

ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶನೀಶ್ವರನ ದೇವಸ್ಥಾನಗಳಿದ್ದರೂ ತುಮಕೂರು ಜಿಲ್ಲೆಯ ಪಾವಗಡ ಪ್ರಮುಖ ಶನಿ ದೇವರ ಕ್ಷೇತ್ರ. 1955ರಲ್ಲಿ ಆಂಧ್ರಪ್ರದೇಶದ ಕಲ್ಯಾಣದುರ್ಗ ಬಳಿಯ ಶ್ರೀಧರಘಟ್ಟದ ಅವಧೂತರಾದ ಶ್ರೀಧರಸ್ವಾಮಿಗಳು ಪಾವಗಡದಲ್ಲಿ ಶನೀಶ್ವರನನ್ನು ಸ್ಥಾಪಿಸಿದರು.

ಪಾವಗಡದಲ್ಲಿ ‘#ಶನಿಮಹಾತ್ಮೆ’ ಪೌರಾಣಿಕ ನಾಟಕ ಪ್ರದರ್ಶನವೇ ಈ ದೇವಸ್ಥಾನ ಆರಂಭಕ್ಕೆ ಪ್ರೇರಣೆ. ಐದು ದಶಕ ಕಳೆಯುವಷ್ಟರಲ್ಲಿ ಪಾವಗಡದ  ಶನೀಶ್ವರ ಸನ್ನಿಧಿಯ ಪ್ರಭಾವ ರಾಜ್ಯದ ಉದ್ದಗಲ ದಾಟಿ ಹೊರ ರಾಜ್ಯಗಳಿಗೂ ವಿಸ್ತರಿಸಿತು. 

ಶನಿ ದೋಷ ನಿವಾರಣೆ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪಾವಗಡಕ್ಕೆ ಹೋಗಿ ಶನಿ ದೇವರನ್ನು ಆರಾಧಿಸುವ ಪರಿಪಾಠ ಆರಂಭವಾಯಿತು.

ಜನ ಸಾಮಾನ್ಯರು, ರಾಜಕಾರಣಿಗಳು, ಸಿನಿಮಾ ತಾರೆಯರು, ಉದ್ಯಮಿಗಳು... ಹೀಗೆ ಸಮಾಜದ ಎಲ್ಲ ವರ್ಗಗಳ ಜನರೂ ಶನೀಶ್ವರನ ಕೃಪೆಗಾಗಿ ಪಾವಗಡಕ್ಕೆ ಬರುತ್ತಾರೆ.

#ಮಕ್ಕಳಿಲ್ಲದವರುಮದುವೆಯೋಗ ಇಲ್ಲದವರು, ಉದ್ಯೋಗ ಆಕಾಂಕ್ಷಿಗಳು ಶನಿ ದೇವರಿಗೆ ಹರಕೆ ಹೊತ್ತು ಬರುತ್ತಾರೆ. ಹರಕೆ ಹೊತ್ತ ಮೂರು ತಿಂಗಳಲ್ಲಿ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಪಾವಗಡದ ಮತ್ತೊಂದು ಆಕರ್ಷಣೆ ವಿಶಿಷ್ಟ ಶಕ್ತಿದೇವತೆ ಸೀತಲಾದೇವಿ ಮತ್ತು ಸೀತಲಾ ಯಂತ್ರ. ಕಲ್ಲಿನಲ್ಲಿ ಕೆತ್ತಿರುವ ಸೀತಲಾ ಯಂತ್ರ ಉತ್ತರ ಭಾರತದ ಪುರಿಯ ಜಗನ್ನಾಥ ಸನ್ನಿಧಿಯಲ್ಲಿದೆ. ದಕ್ಷಿಣ ಭಾರತದಲ್ಲಿ ಅದು ಪಾವಗಡದ ಶನಿದೇವರ ಸನ್ನಿಧಿಯಲ್ಲಿದೆ.

ಜಾನುವಾರುಗಳಿಗೆ ಕಾಯಿಲೆ ಬಂದರೆ ಸೀತಲಾದೇವಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಹಸು ಕರು ಹಾಕಿದರೆ ಮೊದಲ ಸಲ ಕರೆದ ಹಾಲನ್ನು ತಂದು ಸೀತಲಾ ಯಂತ್ರಕ್ಕೆ ಅಭಿಷೇಕ ಮಾಡಿ ಹರಕೆ  ತೀರಿಸುತ್ತಾರೆ.

ಪಾವಗಡ ಮರಾಠರ ಮುರಾರಿ ರಾಯನ ಆಳ್ವಿಕೆಗೆ ಒಳಪಟ್ಟಿತ್ತು. ಈ ಬೆಟ್ಟ ಪ್ರದೇಶದ ಊರಿಗೆ ಮರಾಠರಿಂದಲೇ ಪಾವಗಡ ಎಂಬ ಹೆಸರು ಬಂದಿದೆ. ಇತಿಹಾಸ ಪ್ರಸಿದ್ಧ ಏಳು ಸುತ್ತಿನ ಕೋಟೆಯನ್ನು ಪಾಳೇಗಾರ ಬಾಲಪ್ಪ ನಾಯಕರು ಕಟ್ಟಿಸಿದರು. ಆನಂತರದಲ್ಲಿ ಹೈದರಾಲಿ ಕಾಲದಲ್ಲಿ ಕೋಟೆ ಪುನರುಜ್ಜೀವನಗೊಂಡಿತು ಎನ್ನಲಾಗಿದೆ. ಪಾವಗಡಕ್ಕೆ ಪಾವನ ಗಡ, ಪಾಮಕೊಂಡ ಎಂಬ ಹೆಸರುಗಳಿದ್ದವು.

#ಸೇವೆಗಳು: ಪಾವಗಡದ ಶನೀಶ್ವರ ದೇವಸ್ಥಾನದಲ್ಲಿ ನಿತ್ಯ ನಡೆಯುವ ‘ಸರ್ವ ಸೇವೆ’ ಪ್ರಮುಖವಾದದು. ಭಕ್ತರು ಇಲ್ಲಿಗೆ ಬರುವುದು ಸರ್ವ ಸೇವೆಗಾಗಿ. ಶನೇಶ್ವರ ಸ್ವಾಮಿಗೆ ಇಲ್ಲಿ ಪ್ರಧಾನ ಪೂಜೆ, ಸೀತಲಾಂಬೆಗೆ ಕುಂಕುಮಾರ್ಚನೆ, ನವಗ್ರಹಗಳಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ ಇತ್ಯಾದಿಗಳೂ ‘ಸರ್ವ ಸೇವೆ’ಯಲ್ಲಿ ಒಳಗೊಂಡಿವೆ. ವೇದಬ್ರಹ್ಮ ರಾಮ ಭಟ್ ಅವರು ಈ ದೇವಸ್ಥಾನದ ಪ್ರಧಾನ ಅರ್ಚಕರು.

ಶನೀಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ, ದತ್ತಾತ್ರೇಯ, ರಾಜರಾಜೇಶ್ವರಿ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ನಿತ್ಯ ಬೆಳಿಗ್ಗೆ 5.30ರಿಂದ ರಾತ್ರಿ 8ಗಂಟೆ ವರೆಗೆ ನಿರಂತರ ಪೂಜೆ ಇರುತ್ತದೆ. ಶನಿ ತ್ರಯೋದಶಿ ದಿನ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಫೆಬ್ರುವರಿ ತಿಂಗಳ ಹುಣ್ಣಿಮೆಯಂದು ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದ ಎಲ್ಲ ಶನಿವಾರಗಳಂದು ಇಲ್ಲಿ ನಡೆಯುವ ವಿಶೇಷ ಪೂಜೆಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ದೇವಸ್ಥಾನದ ಆಡಳಿತವನ್ನು ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹಕ ಸಂಘ ನೋಡಿಕೊಳ್ಳುತ್ತದೆ. ಜಿ.ಎಸ್. ಧರ್ಮಪಾಲ್ ದೇವಸ್ಥಾನ ಸಂಘದ ಅಧ್ಯಕ್ಷರು. ಸಿ.ಎನ್. ಆನಂದರಾವ್ ಕಾರ್ಯದರ್ಶಿ. ಹೆಚ್ಚಿನ ಮಾಹಿತಿಗೆ: 08136- 244278.

#ಪಾವಗಡದ_ದಾರಿ

ಪಾವಗಡಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸೌಕರ್ಯವಿದೆ. ಪಾವಗಡ ತುಮಕೂರಿನಿಂದ 100 ಕಿ.ಮೀ, ಚಿತ್ರದುರ್ಗದಿಂದ 95 ಕಿ.ಮೀ, ಅನಂತಪುರದಿಂದ 100 ಕಿ.ಮೀ, ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ.
*******

ಗೋಕರ್ಣ ಕ್ಷೇತ್ರ

 ಸಾಕ್ಷಾತ್ ಪರಮೇಶ್ವರ ಆತ್ಮಲಿಂಗವೇ ಪ್ರತಿಷ್ಟಾನಗೊಃಡಿರುವ ಅತ್ಯಂತ ಜಾಗ್ರತ ಪ್ರದೇಶವಾದ ಗೋಕರ್ಣ  ರಾಮಾಯಣ ಕಾಲದಷ್ಟು ಹಳೆಯ ಇತಿಹಾಸ ಹೊಂದಿರುವಂತದ್ದು....  
ಇತಿಹಾಸ ತಿಳಿಯುವ ಮುನ್ನ ಆತ್ಮಲಿಂಗದ ಕಥೆ ಕೇಳಿ..‌

ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬುವಳು. ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚೈಸಿ ಸಮುದ್ರದಲ್ಲಿ ಸ್ನಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗ ವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ನೆನೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯೆ, ದುಃಖಿಸಬೇಡ. ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಪ್ರಾಣ ಲಿಂಗವನ್ನೇ ತಂದುಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು.
ಅಲ್ಲಿ ಆತನಿಗೆ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ಬುಧ್ಧಿ ಹುಟ್ಟಿತು. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನ ಅಂಗುಷ್ಠದಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ಬಲಾತ್ಕಾರದಿಂದ ತನ್ನ ಕೆಲಸವಾಗುವುದೆಂದು ತಿಳಿದು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಮೈದಡವಿ ಬೇಕಾದ ವರವನ್ನು ಬೇಡೆಂದನು.
ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಪೂಜಿಸುವವರ ಸಕಲ ಇಷ್ಟಾರ್ಥಗಳೂ ಕೈಗೂಡುವವು. ಅವರು ಈಶ್ವರನನ್ನೇ ಪಡೆಯುವರು. ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಘಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು.
ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು "ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪಸ್ಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ಷ, ಕಿನ್ನರ ಮನುಷ್ಯರಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಪ್ರಾಣ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದನು ಹೊರಟು ಹೋದನು.
ದೇವತೆಗಳು ಗಾಬರಿಯಿಂದ ಏನೊಂದೂ ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿ ಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನಿನಗೆ ಮೋದಕ ಕಡಬು ಕರ್ಜೀಕಾಯಿ ಪಂಚಖಾದ್ಯ ಕಬ್ಬು ಮೊದಲಾದವುಗಳನ್ನು ಕೊಡುತ್ತೇನೆ. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು.
ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬುಗಳನ್ನು ತಿನ್ನುತ್ತಿದ್ದನು. ಆ ಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಸಂಧ್ಯಾಕಾಲವೆಂಬ ಭ್ರ ಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ನಾನಿಯೂ ಕರ್ಮನಿಷ್ಠನೂ ಆದ್ದರಿಂದ, ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು.
ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು. ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು; ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ; ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ನಿನ್ನನ್ನು ಕರೆಯುತ್ತೇನೆ ನೀನು ಬರಬೇಕು. ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು. ರಾವಣನು ಶೌಚವನ್ನು ಪೂರೈಸಿ ಕಾಲು ತೊಳೆ ಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು. ಅರ್ಘ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು. ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದರೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು.
ರಾವಣನು ಸಿಟ್ಟಿನಿಂದ ಗಣಪತಿಯ ನೆತ್ತಿಯ ಮೇಲೆ ಮುಷ್ಟಿಯಿಂದ ಗುದ್ದಿದನು. ಬಲಿಷ್ಟನಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಫಲವಾದ ಸಿಟ್ಟಿನಿಂದ ಅಲ್ಲಿಯೇ ಬಿದ್ದ ಲಿಂಗದ ಸಂಪುಟವನ್ನು ದಾರವನ್ನೂ ಲಾಲ್ಕು ದಿಕ್ಕಿಗೆ ಬೀಸಿದನು. ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ. ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾಥವಾಯಿತು.
ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆ ಕಾಲಕ್ಕೆ ದೇವತೆಗೆಳು ಮಂದಾರದ ಮಳೆಗಳನ್ನು(ಪುಷ್ಪವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ಕಿಲಕಿಲನೆ ನಕ್ಕರು. ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು. ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪ ಪಟ್ಟನು. ತಾನು ಲಿಂಗವನ್ನು ಪೂಜಿಸಿದನು.
ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಲವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೇನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು.
ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಾಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ..

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿದೆ. 
ಮಹಾಗಣಪತಿ ದೇವಾಲಯ, ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕರ್ಷಣೀಯವಾಗಿದೆ

ಗೋಕರ್ಣ ಹೆಸರು ಬರಲು ಕಾರಣ:

ರಾವಣನು ಆತ್ಮಲಿಂಗವನ್ನು ಶಕ್ತಿಯ ಬಲ ಪಯೋಗಿಸಿ ಎಳೆದಾಗ ಆ ಆತ್ಮಲಿಂಗ ಆಕಳ ಕರ್ಣದ. ಹಾಗೆ ಆಕಾರ ಪಡೆಯುತ್ತೆ ಅದಕ್ಕೆ ಗೋಕರ್ಣ ಅಂತ ಕರೆದರು  ಅಂತ ಆದರೆ ಇನ್ನೊಂದು ಆಧಾರ ಪ್ರಕಾರ..

ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು(ಆತನಿಗೆ ಕರ್ಣಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ.
ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಅನೇಕ ಧಾರ್ಮಿಕ ಕ್ಷೇತ್ರಗಳು ಇದ್ದರೂ ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ.

 ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ. ವಾಯುಪುರಾಣದಲ್ಲಿ 48 ನೇ ಅಧ್ಯಾಯದಲ್ಲಿ
ತಸ್ಯ ದ್ವೀಪಸ್ಯ ವೈ ಪೂರ್ವೇ ತೀರೇ ನದನದೀಪತೇಃ | ಗೋಕರ್ಣ ನಾಮಧೇಯಸ್ಯ ಶಂಕರಸ್ಯಾಲಯಂ ಮಹತ್ || ಎನ್ನಲಾಗಿದೆ.

ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಕಡೆ ಗೋಕರ್ಣದ ಬಗೆಗಿನ ವಿಷಯಗಳು ಕಂಡು ಬರುತ್ತವೆ.  57 ನೇ ಅಧ್ಯಾಯದಲ್ಲಿ ಗೋಕರ್ಣ ಕ್ಷೇತ್ರ ಹೇಗೆ ಪರಶುರಾಮ ಸೃಷ್ಟಿ ಎಂಬುಧನ್ನು ವಿವರಿಸಲಾಗಿದೆ.

ಗೋಕರ್ಣ ನಾಮ ವಿಖ್ಯಾತಂ ಕ್ಷೇತ್ರಂ ಸರ್ವ ಸುರಾರ್ಚಿತಮ್ | ಸಾರ್ಧಯೋಜನ ವಿಸ್ತಾರಮ್ ತೀರೇ ಪಶ್ಚಿಮ ವಾರಿಧೇಃ ||
ಇತ್ಯಾದಿಯಾಗಿ ಗೋಕರ್ಣದ ವಿಖ್ಯಾತಿಯನ್ನು ಅನೇಕ ಪುರಾಣಗಳಲ್ಲಿ ವಿವರಿಸಲಾಗಿದೆ. ಗೋಕರ್ಣ ಕ್ಷೇತ್ರ ಮಂಡಲದ ಕುರಿತಾಗಿ ವಿವರಣೆ=

ಪಂಚಕ್ರೋಶ ಪರೀಣಾಹಂ ಗೋಕರ್ಣ ಕ್ಷೇತ್ರ ಮಂದಲಮ್ || ಎಂಬುದಾಗಿ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹದಿನೈದು ಮೈಲಿಯ ಸುತ್ತಳತೆಯ ಕ್ಷೇತ್ರ ಗೋಕರ್ಣ ಮಂಡಲ ಎನ್ನಲಾಗಿದೆ.
ಜೊತೆಗೆ ಸಾರ್ಧ ಯೋಜನ ವಿಸ್ತೀರ್ಣಂ ಅರ್ಧ ಯೋಜನಮಾಯತಮ್ | ಕ್ಷೇತ್ರ ರೂಪೇಣ ತಿಷ್ಠಂತಂ ಶಿವಮ್ ಪಶ್ಯಂತಿ ಸೂರಯಃ || 
ಎನ್ನಲಾಗಿದೆ...
*****














*

"ಲವ-ಕುಶ"ರ ಜನ್ಮಸ್ಥಳ ಮುಳಬಾಗಿಲು ತಾಲ್ಲೂಕಿನ ಆವಣಿ ಗ್ರಾಮ.*


ಕೋಲಾರದಿಂದ 34 ಕಿ.ಮೀ.ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ NH -4 ನಲ್ಲಿ ಸಾಗಿದರೆ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ "ಆವಣಿ" ಸೇರಿಕೊಳ್ಳಬಹುದು.

ಕೋಲಾರ ಜಿಲ್ಲೆಯ ದೇವಾಲಯಗಳ ನಾಡು ಮುಳಬಾಗಿಲು ತಾಲ್ಲೂಕಿನ ಆವಣಿ ಗ್ರಾಮ.

ಈ ಆವಣಿ ಗ್ರಾಮವು ಲವ-ಕುಶರ ಜನ್ಮ ಸ್ಥಾನವೆಂದು ಉತ್ತರ ರಾಮಾಯಣದ ಪುರಾಣಗಳು ಹೇಳುತ್ತವೆ.ಇಲ್ಲಿ ರಾಮಾಯಣದ ಕಾಲದಲ್ಲಿ ವಾಲ್ಮೀಕಿ ಮಹಾಮುನಿಗಳು ಮನಃಪರಿವರ್ತನೆಗೊಂಡ ನಂತರ ತಪಸ್ಸು ಕೈಗೊಂಡಿದ್ದ ಸ್ಥಳವೂ ಇದೆ.ಇದೇ ಸ್ಥಳದಲ್ಲಿ ಶ್ರೀರಾಮ ಸೀತಾ ಮಾತೆಯನ್ನು ವನವಾಸಕ್ಕೆ ಕಳುಹಿಸಿದಾಗ ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ನೆಲೆಸಿದ್ದರು.ಆ ಸಮಯದಲ್ಲಿ ಸೀತಾಮಾತೆಯು ತುಂಬು ಗರ್ಭಿಣಿ ಆಗಿದ್ದರಂತೆ.ಆ ಸಮಯದಲ್ಲಿ ವಾಲ್ಮೀಕಿಯ ಆಶ್ರಮದಲ್ಲಿನ ಸೇವಾಕಾರ್ಯಗಳಲ್ಲಿ ನಿರತರಾಗಿದ್ದರು ಸೀತಾದೇವಿ.ಇದೇ ಸ್ಥಳದಲ್ಲಿ ಸೀತಾ ಮಾತೆಯು ಅವಳಿ ಮಕ್ಕಳಾದ ಲವ-ಕುಶರಿಗೆ ಜನ್ಮ ನೀಡುತ್ತಾಳೆ.
ಇಲ್ಲಿ ಅದ್ಭುತ ದ್ರಾವಿಡ ಪ್ರತಿಮಾ ಶಾಸ್ತ್ರ ಆಧರಿತ ಶಿಲ್ಪಕಲೆಯನ್ನು ಒಳಗೊಂಡ ರಾಮಲಿಂಗೇಶ್ವರ ದೇವಾಲಯವು ಪ್ರಮುಖವಾದುದು.ಅಷ್ಟೇ ಅಲ್ಲದೆ ಇಲ್ಲಿ ಐತಿಹಾಸಿಕ ಲಕ್ಷಣ ತೀರ್ಥ,ತಾಯಿ ಸೀತಾ ಮಾತೆ ನೀರು ಸೇದುತ್ತಿದ್ದ ಬಾವಿ, ಭರತೇಶ್ವರ, ಶತೃಘ್ನೇಶ್ವರ ದೇವಾಲಯ ಹಾಗೂ ವಾಲ್ಮೀಕಿ ಮಹಾಮುನಿಗಳು ತಪಸ್ಸು ಕೈಗೊಂಡ ಸ್ಥಳ ಹಾಗೂ ಆಶ್ರಮ ಇಲ್ಲಿನ ಮುಖ್ಯಾಕರ್ಷಣೆಗಳು.ಇಲ್ಲಿ ಪ್ರತಿ ವರ್ಷ ಅದ್ದೂರಿ ಜಾತ್ರೆ ನಡೆಯುತ್ತದೆ.ಮಕ್ಕಳಿಲ್ಲದವರು ಇಲ್ಲಿನ ದೇವಾಲಯಗಳನ್ನು ದರ್ಶಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿಯಿದೆ.
ಆವಣಿಯ ಮತ್ತಷ್ಟು ಐತಿಹಾಸಿಕ ಸ್ಥಳಗಳೆಂದರೆ :


#ಉರುಳು ಬಂಡೆ: ಸೀತಾ ಮಾತೆಯು ತನ್ನ ಹೊಟ್ಟೆ ನೋವು ಪರಿಹರಿಸಿಕೊಳ್ಳಲು ಬಂಡೆಯಡಿ ಉರುಳಿದ್ದ ಬಂಡೆ.

#ಸೀತಾ ಮಾತೆಯು ವಾಸವಿದ್ದ ಸಣ್ಣ ಗುಹೆ ಹಾಗೂ ಆಕೆ ಉಪಯೋಗಿಸುತ್ತಿದ್ದ ಪಾತ್ರೆಗಳು.

#ಸೀತಾ ಪಾರ್ವತಿ ದೇವಸ್ಥಾನ.

#ಸೀತಾ ಮಾತೆ ಲವ-ಕುಶರ ಬಟ್ಟೆ ಒಗೆಯುತ್ತಿದ್ದ ಕೊಳ.

#ರಾಮ-ಲಕ್ಷ್ಮಣ ಹಾಗೂ ಲವ-ಕುಶರ ಮಧ್ಯೆ ಯುದ್ದ ನಡೆದಿದ್ದ ಸ್ಥಳ.
#ಲಕ್ಷ್ಮಣನು ಸೀತೆಗೆ ದಾಹ ನೀಗಿಸಲು ನಿರ್ಮಿಸಿದ್ದ ಲಕ್ಷ್ಮಣ ತೀರ್ಥ.
#ಲವ ಕುಶರು ನಿರ್ಮಿಸಿದ್ದ ಕೊಳ ಹಾಗೂ ಹೂದೋಟ.
#ಲವ ಕುಶರು ಶ್ರೀರಾಮನ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದ ಸ್ಥಳ.
#ಶ್ರೀರಾಮನು ಪ್ರತಿಷ್ಠಾಪಿಸಿದ್ದ ಶಿವಲಿಂಗ.

ಹೀಗೆ ಹತ್ತು ಹಲವು ಪ್ರಮುಖ ಐತಿಹಾಸಿಕ ಘಟನೆಗಳು ಉತ್ತರ ರಾಮಣಯದಲ್ಲಿ ಉಲ್ಲೇಖಿಸಿರುವಂತೆ ಸೀತಾ ಮಾತೆಯ ಅರಣ್ಯವಾಸಾನಂತರ ರಾಮಾಯಣದ ಬಹುಭಾಗವು ,ಇದೇ ಆವಣಿ ಮಹಾಕ್ಷೇತ್ರದಲ್ಲಿಯೇ ಘಟಿಸಿರುವಂತದ್ದಾಗಿದೆ.
*****



 
Manvi

Vijayadasaru Aradhane is performed in grand scale for all three days in the ShukLa PakSha of Kaartika Maasa ,namely Navami ,dashami and Dwadashi with at most devotion. During the Aradhane,PaaraYaNa of all the 500 plus SamaGra Suladi's of Vijaya Dasaru and HariKathaMruThaSara of Sri Jagannatha dasaru is performed. This process usually kicks of a week before aradhane and will follow through out the event.

Historical significance:once, while performing Shradha Karma of his father, Sri vijaya dasaru invited all the Brahmins to his home to have Teertha Prasada. After performing all the rituals , he said to the assembled Brahmins that he will perform the Pinda PraDana in Kaashi and come back. Hearing this people gathered there took his words lightly and asked how can he go to Kaashi from Chikalparvi and come back. Sri Vijaya dasaru took a plunge into the Tungabhadra river and emerged from Ganga in Kaashi and after doing Pinda PradaNa there he again took a dip in Kaashi and emerged out from the TungaBhadra River in Chikalparvi.As mark to show that he indeed visited Kaashi ,he brought SaaNe KaLLu,IsHwara Linga,and Ganga from there and showed it to all the assembled people in his home. Just goes to show how ApaRoKsha GyanaNi and Devata Purusha he is who had all the SamPoorNa AnuGraha of Sri Hari...

Every one who comes to chikalparvi takes the Darshan of Saane Kallu kept in his home and it is believed that by taking Akki which is placed in Saanekallu and using it in there home, any kind of VyaaDhi(illness) will be cured. Any Kind of Udara ShuuLe is believed to be cured. Every year thousands of devotees come here and take Akki Placed from Saane Kallu.

Sri Ashwatha Lakshmi Narasimha temple is very pictures and beautiful temple situated near the banks of river TungaBhadra and a big Ashwatha Vruksha surrounding the temple premises makes it even more beautiful. Rightly so because this historic temple is established by Sri Sri Sripada Rayaru and he also planted the Ashwatha VruKsha some 600 years back even before Sri Vijayadasaru could take birth in this village. It is understood that Sri SriPada Rayaru had founded this temple keeping in vision that Sri Dasaru will be taking birth in this place.

It is due to the blessings of sri Ashwatha Narasimha that , AraLLamma and Srinivas Archar( the parents of vijaya dasaru ) gave birth to sri vijaya dasaru.

The above picture shows Sri vijaya Dasara katte and aswatha vruksha and sri Ashwatha lakshmi Narasimha temple

Sri Ashwatha Lakshmi Narasimha temple is very pictures and beautiful temple situated near the banks of river TungaBhadra and a big Ashwatha Vruksha surrounding the temple premises makes it even more beautiful. Rightly so because this historic temple is established by Sri Sri Sripada Rayaru and he also planted the Ashwatha VruKsha some 600 years back even before Sri Vijayadasaru could take birth in this village. It is understood that Sri SriPada Rayaru had founded this temple keeping in vision that Sri Dasaru will be taking birth in this place.

It is due to the blessings of sri Ashwatha Narasimha that , AraLLamma and Srinivas Archar( the parents of vijaya dasaru ) gave birth to sri vijaya dasaru.

The above picture shows Sri vijaya Dasara katte and aswatha vruksha and sri Ashwatha lakshmi Narasimha temple

During JayanTi ,Anna SanTarPane seva is performed for two days by Sri Hanumesh Rao Kulkarni and family who are native of chikalparvi and one day Anna SantaRpane Seva is performed by DaaSaRa VamshiKaru..

This place(temple PraKaara) is called Vijaya DaaSara Katte as Sri Dasaru used to do TapaSSu on this Katte and AlaNkaaRa is done to the AshWatha VruKsha during AraDhane symbolizing that Dasaru is in this place doing TapaSSu.
****



Chikalparvi

Chikalparvi is in Karnataka and it is at a distance of 55kms from Raichur district and 10 Kms from Manvi town, which is the nearest place to reach Chikalparvi.There are no direct buses from Raichur to Chikalparvi so one needs to come to Manvi from Raichur and then take the buses or private jeeps running from Manvi town. The last bus which leaves for Chikalparvi from Manvi is at 8PM.so make sure u are in Manvi latest by 8PM.

Raichur is well connected by trains and busses. Many trains like Hampi link express,Udyan express,KK Express and kurla run daily from Banglore.

U may also know that Raichur is at a distance of 45 kms from MantRalaYa.

Via Bus, there are two ways, if u are coming to Raichur from Andhra route like Anantpur,Adoni,Mantralaya then u need to get down at Raichur and then take a bus to Manvi.
If not, if u are coming to Raichur Via Bellary, then u will hit Manvi itself first before Raichur.

Whom to contact?

U can contact the following numbers for any info for visiting Chikalparvi.

1) Jagannatha Das Chikalparvi -9448241628
2) Krishna Das Chikalparvi -9448160113, 08532-223429


Once u reach chikalparvi, u can get in touch with Sri Ramachar, who is the ArchaKa of Ashwatha Narasimha temple. He will arrange for HasToDaka Seva if informed .

info of the year 2006---> 
U can also contact mr. M.J.Das at this cell number 9845822663 for more. He is  put up at Bangalore.

the following e-mail ID's may also help u to get in touch 
giri.das@gmail.com
mohandasv@yahoomail.com
dassrinivas@gmail.com
Just in case u miss the last bus to chikalparvi from Manvi bus stand, do not panic. U can spend a night in Sri Narayana TeerthaRa AshRamaor at Sri Jagannatha Dasara Gudi in Manvi and take the blessings of Sri HariVayu GuruGalu and jagannatha dasaru before coming to Chikalparvi.Rikshaws will take u to these places at some nominal fare.
*********

ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

೧.  ರಾಯರು ತಪಸ್ಸು ಮಾಡಿದ ಸ್ಥಳ- ಪಂಚಮುಖಿ

೨.  ಸತ್ಯಬೋಧರು ಜನಿಸಿದ ಸ್ಥಳ-ರಾಯಚೂರು

೩.  ವಿಜಯದಾಸರು ಜನಿಸಿದ ಸ್ಥಳ- ಚಿಪ್ಪಗಿರಿ

೪.  ಗೋಪಾಲದಾಸರು ಜನಿಸಿದ ಸ್ಥಳ- ಮೊಸರಕಲ್ಲು

೫.  ಜಗನ್ನಾಥ ದಾಸರು ಜನಿಸಿದ ಸ್ಥಳ-ಬ್ಯಾಗವಾಟ

೬.  ಶ್ಯಾಮಸುಂದರ ದಾಸರು ಜನಿಸಿದ ಸ್ಥಳ-ಕುರುಡಿ

೭.  ಸ್ವಯಂಉದ್ಭವ ಷೋಡಶಬಾಹು ನರಸಿಂಹ ದೇವರು-ಕೊಪ್ಪರ

೮.  ಕಾರ್ಪರ ಅಂಕಿತಸ್ಥರಾದ ಗಿರಿಯಾಚಾರ್ ಜನಿಸಿದ ಸ್ಥಳ-ಕೊಪ್ಪರ
ಲಕ್ಷ್ಮೀನಾರಯಣತೀರ್ಥರಿಗೆ ಶ್ರೀಪಾದರಾಜರು ಅನ್ನುವ ಶುಭನಾಮ ನೀಡಿದ ಸ್ಥಳ ಕೊಪ್ಪರ

೯.  ಶ್ರೀಕೃಷ್ಣದ್ವೈಯಪಾಯನತೀರ್ಥರ ಬೃಂದಾವನ-ಕುಸುಮೂರ್ತಿ

೧೦.  ಉತ್ತರಾದಿ ಮಠದ ಯತಿತ್ರಯರ ಬೃಂದಾವನ- ಆತಕೂರು

೧೧.  ಉತ್ತರಾದಿ ಮಠದ ಯತಿಗಳ ಬೃಂದಾವನ- ಕೊಲ್ ಪುರು

೧೩.  ರಾಯರ ಮಠದ ಯತಿಗಳ ಬೃಂದಾವನ- ಮುಡುಮಾಲ

೧೪.  ಗೋವಿಂದದಾಸರು ಜನಿಸಿದ ಸ್ಥಳ-ಅಸ್ಕಿಹಾಳ

೧೫.  ರಾಯರ ಮೂಲಬೃಂದಾವನ ಸ್ಥಳ ಮಂತ್ರಾಲಯ(ಈಗ ಆಂಧ್ರಪ್ರದೇಶದ ಆಡಳಿತದಲ್ಲಿದೆ

೧೬.  ಮೋಹನ ದಾಸರಿಗೆ ಅಪಮೃತ್ಯು ಪರಿಹಾರವಾದ ಸ್ಥಳ ಚಿಕಲಪರವಿ

೧೭.  ಕಮಲೇಶವಿಠಲ(ಸುರಪುರದ ಆನಂದ ದಾಸರು)  ಜನಿಸಿದ ಸ್ಥಳ ಚಿಕಲಪರವಿ

೧೮.  ನರಹರಿತೀರ್ಥರು ಪ್ರತಿಷ್ಠಾಪಿಸಿದ ವೆಂಕಟರಮಣ ದೇವರು ಕಲಮಲಾ

೧೯.  ಉಪೇಂದ್ರತೀರ್ಥರು ಪ್ರತಿಷ್ಠಾಪಿತ ಪ್ರಾಣದೇವರು- ಕಾಡ್ಲೂರು

೨೦.  ವರದೇಶವಿಠಲರು ಜನಿಸಿದ ಸ್ಥಳ-ಲಿಂಗಸೂಗುರ್

೨೧.  ಗೊರೆಬಾಳ್ ಹನುಮಂತರಾಯರು ಜನಿಸಿದ ಸ್ಥಳ- ಗೊರೆಬಾಳ್

೨೨.  ಪ್ರಾಣೇಶದಾಸರು ಜನಿಸಿದ ಸ್ಥಳ- ಲಿಂಗಸೂಗುರ್

೨೩.  ಜಗನ್ನಾಥದಾಸರಿಗೆ ವೆಂಕಟರಮಣ ದರ್ಶನ ನೀಡಿದ ಸ್ಥಳ-ಬಾಗಲವಾಡ(ದ್ವಾರವಾಡ)

೨೪.  ಜಗನ್ನಾಥದಾಸರ ಸ್ಥಂಭ(ಇರುವ ಸ್ಥಳ) ಮಾನವಿ

೨೫.  ರಾಯರು ಚಾತುರ್ಮಾಸ್ಯಕ್ಕೆ ಕುಳಿತ ಸ್ಥಳ-ಮಾನವಿ(ಸಂಜೀವರಾಯ ಗುಡಿ)
೨೬ .ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನ  & ಅರ್ಚಕ ವಂಶಸ್ಥರಾದ ಶ್ರೀಕರವಿಠ್ಠಲದಾಸರ ಜನ್ಮ ಸ್ಥಳ
೨೭.  ಶ್ರೀರಾಮ ಅಂಕಿತಸ್ಥರಾದ ಜೋಳದಹಡಗಿ ರಾಮರಾಸರು ಜನಿಸಿದ ಸ್ಥಳ- ದೇವದುರ್ಗ

ಷೋಡಶಬಾಹು ನರಸಿಂಹ, ಶ್ರೀ ವ್ಯಾಸಾತತ್ವಜ್ಞ ತೀರ್ಥ - ವೇಣೀಸೋಮಪುರ  .

See Mantralaya and then

In mantralayam u can visit venkateshwar temple

Next Bichchali

After Punchamukhi Hanuman.  

Above two place Raichur road only...

In Raichur kote Anjaneya temple

Manvi Jagannadasuru

Kallur mahalakshmi
******** 




ಒಮ್ಮೆ ವ್ಯಾಸರಾಜರು ಚಕ್ರತೀರ್ಥದ ಬಳಿಯ ಬೆಟ್ಟವೊಂದರಲ್ಲಿ ತಮ್ಮ ಆಹಿ°ಕ, ಜಪ ತಪಗಳನ್ನು ಆಚರಿಸುತ್ತಿರುವಾಗ ಬೆಟ್ಟದ ದೊಡ್ಡ ಬಂಡೆಮೇಲೆ ಅಂಗಾರ (ಇಜ್ಜಲು ) ದಿಂದ ಆಂಜನೇಯನ ಚಿತ್ರ ಬಿಡಿಸಿದರಂತೆ.  ಅದರ ಫ‌ಲವಾಗಿ ಸುಂದರ ಆಂಜನೇಯನ ಮೂರುತಿ ಆ ಬಂಡೆಯಲ್ಲಿ ರೂಪುಗೊಂಡಿತು.
ಹಂಪೆಯು ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಎಂಬುದು ಪಂಪಾ ಕ್ಷೇತ್ರವೆಂದು ಈ ಸ್ಥಳದ ಹಿಂದಿನ ಹೆಸರು. ರಾಮಾಯಣದ ಕಾಲದಿಂದಲೇ ಪ್ರಸಿದ್ಧಿ ಹೊಂದಿದ ಇದು ರಾಮ ಮತ್ತು ಹನುಮಂತರ ಪ್ರಥಮ ಸಮಾಗಮ ಕ್ಷೇತ್ರವೆಂದು, ರಾಮಾಯಣದ ಕಿಷ್ಕಿಂದೆ ಎಂದು ಗುರುತಿಸಿಕೊಂಡಿದೆ. ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಅಪಾರ ಶಿಲ್ಪ ಕಲೆಗಳಿಂದ ಸಮ್ಮಿಲನ ಗೊಂಡ ಅಪರೂಪದ ಸ್ಥಳ ಈ ಹಂಪೆ.  ಇಂತಹ ಪಾವನ ಕ್ಷೇತ್ರದಲ್ಲಿ ನೆಲೆನಿಂತವನೇ ಚಕ್ರತೀರ್ಥದಬಳಿ ಯಂತ್ರದಿಂದ ಬಂಧಿಸಿದ ಆಂಜನೇಯ ಸ್ವಾಮಿ.
ಮಧ್ವಮತದ ಮಹಾ ಗುರುಗಳು, ಶ್ರೀ ವ್ಯಾಸರಾಜರು. ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿ, ಶ್ರೀ ಕೃಷ್ಣ ದೇವರಾಯನಿಗೆ ಸಮರ್ಥವಾಗಿ ರಾಜ್ಯಭಾರಮಾಡುವಂತೆ ಕಾಲ ಕಾಲಕ್ಕೂ ಉಪದೇಶಿಸಿ, ವಿಜಯನಗರ ಸಾಮ್ರಾಜ್ಯವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಶ್ರೀ ವ್ಯಾಸರಾಜರದು.  ಈ ಕ್ಷೇತ್ರದ ಚಕ್ರತೀರ್ಥದ ಬಳಿ ನೆಲೆ ನಿಂತಿರುವ ವ್ಯಾಸರಾಜರಿಂದ ಪ್ರತಿಷ್ಠಿತ ಯಂತ್ರಗಳಿಂದ ಬಂಧಿತನಾದ ಹನುಮಂತದೇವರಿಗೆ  ಅದ್ಭುತ ಇತಿಹಾಸವಿದೆ. 
ಹಂಪೆಯ ಪಾವನ ತುಂಗಭದ್ರಾ ನದಿಯು, ಪೂರ್ವಾಭಿಮುಖವಾಗಿ ಹರಿದು ನಂತರ ಉತ್ತರದ ಕಡೆಗೆ ತನ್ನ ದಿಕ್ಕು ಬದಲಾಯಿಸುವ ವಿಶಿಷ್ಟ ಸ್ಥಳವೇ ಚಕ್ರತೀರ್ಥ. ಜುಳು ಜುಳು ಹರಿಯುವ ತುಂಗೆಯ ಸನಿಹದಲ್ಲಿ ರಮಣೀಯವಾದ ನಿಸರ್ಗದ ಮಡಿಲಲ್ಲಿರುವ ಬೆಟ್ಟದ ಹೆಬ್ಬಂಡೆಯ ಮೇಲೆ ಸುಂದರವಾದ ಪ್ರಾಣದೇವರಿದೆ.  ಅದುವೇ ಶ್ರೀ ವ್ಯಾಸರಾಜರಿದ ಪ್ರತಿಷ್ಟಾಪಿತವಾದ 

ಚಕ್ರತೀರ್ಥದ ಯಂತ್ರೋಧಾರಕ ಆಂಜನೇಯ. ವ್ಯಾಸರಾಜರು ತಮ್ಮ ಕಾಲದಲ್ಲಿ ನಾಡಿನುದ್ದಕ್ಕೂ ಸಂಚರಿಸಿ ಬರಿ ಒಂದೇ ಸಂವತ್ಸರದಲ್ಲಿ ಒಟ್ಟು 732 ಪ್ರಾಣದೇವರನ್ನು ಪ್ರತಿಷ್ಠಾಪನೆ ಮಾಡಿದರು.  ಅವುಗಳಲ್ಲಿ ಹಂಪೆಯ ಈ ಆಂಜನೇಯನಿಗೆ ಐತಿಹಾಸಿಕ ಹಿನ್ನಲೆಯಿದೆ.

ಕ್ಷೇತ್ರದ ಇತಿಹಾಸ

ಒಮ್ಮೆ ವ್ಯಾಸರಾಜರು ಚಕ್ರತೀರ್ಥದ ಬಳಿಯ ಬೆಟ್ಟವೊಂದರಲ್ಲಿ ತಮ್ಮ ಆಹಿ°ಕ, ಜಪ ತಪಗಳನ್ನು ಆಚರಿಸುತ್ತಿರುವಾಗ ಬೆಟ್ಟದ ದೊಡ್ಡ ಬಂಡೆಮೇಲೆ ಅಂಗಾರ (ಇಜ್ಜಲು ) ದಿಂದ ಆಂಜನೇಯನ ಚಿತ್ರ ಬಿಡಿಸಿದರಂತೆ.  ಅದರ ಫ‌ಲವಾಗಿ ಸುಂದರ ಆಂಜನೇಯನ ಮೂರುತಿ ಆ ಬಂಡೆಯಲ್ಲಿ ರೂಪುಗೊಂಡಿತು.  ಆದರೆ ಕ್ಷಣಾರ್ಧದಲ್ಲಿ ಕಪಿ ರೂಪ ಧರಿಸಿ ಅಲ್ಲಿಂದ ಜಿಗಿದು ಕಣ್ಮರೆಯಾಯಿತು.

 ಆಶ್ಚರ್ಯಗೊಂಡು ವ್ಯಾಸರಾಜರು ಮತ್ತಮ್ಮೆ ಚಿತ್ರಬಿಡಿಸಿದಾಗ ಕೂಡ  ಇದೇ ಘಟನೆ ಮರುಕಳಿಸಿತು.  ಈ ರೀತಿ 12 ಬಾರಿ ಪುನರಾವರ್ತನೆಯಾದಾಗ ವ್ಯಾಸರಾಜರು ಆ ಬಂಡೆಮೇಲೆ ಷಟ್ಕೊàನ ಚಕ್ರ ಬರೆದು ಮಧ್ಯದಲ್ಲಿ ಪುನಃ ಆಂಜನೇಯನ ಚಿತ್ರ ಬರೆದು, ಸುತ್ತಲೂ ಯಂತ್ರ ಬೀಜಾಕ್ಷರ ಬರೆದು, ಪ್ರಾಣದೇವರನ್ನು ದಿಗ½ಂಧಿಸಿದರು. ಅದಾದ ನಂತರ ಸ್ವಯಂ ಒಡಮೂಡಿದ ಆಂಜನೇಯನ ಮೂರುತಿ ಶಾಶ್ವತವ್ವಾಗಿ ಆ ಕಲ್ಲು ಬಂಡೆಯಲ್ಲಿ ಪ್ರತಿಷ್ಠಾಪನೆ ಗೊಂಡಿತು. ಯಂತ್ರಗಳ ಮಧ್ಯ ಉದ್ಭವಿಸಿದ ಮೂರ್ತಿ ಎನ್ನುವ ಹಿನ್ನಲೆ ಇರುವುದರಿಂದ ಇದು  ಯಂತ್ರೋಧಾರಕ ಪ್ರಾಣದೇವರೆಂದೇ ಪ್ರಸಿದ್ಧವಾಯಿತು. ಮುಂದೆ ಪುರಂದರದಾಸರು, ವಿಜಯದಾಸರು ಮುಂತಾದವರು ಈ ಕ್ಷೇತ್ರಕ್ಕೆ ಬಂದು, ಯಂತ್ರೋದ್ಧಾರಕನ ಕುರಿತು ಅನೇಕ ಸ್ತೋತ್ರ ರಚಿಸಿ ಹಾಡಿ ಹೊಗಳಿದರು. ವ್ಯಾಸರಾಜರು ಸಕಲ ಅಭೀಷ್ಟವನ್ನು ಕೊಡುವ ಯಂತ್ರೋದ್ಧಾರಕ ಪ್ರಾಣದೇವರ ಕುರಿತು ಸ್ತೋತ್ರ ರಚಿಸಿ ಜಿಜ್ಞಾಸುಗಳಿಗೆ ಕೊಡುಗೆಯಾಗಿ ನೀಡಿದ್ದು ಇದೆ ಸ್ಥಳದಲ್ಲಿ.  ವ್ಯಾಸರಾಜರಿಂದ ಇದೊಂದು ನಾಡಿನ ಜಾಗ್ರತ ಹನುಮಂತ ಕ್ಷೇತ್ರವೆಂದು ಪ್ರಸಿದ್ದಿ ಹೊಂದಿತು.

ಮನೋಹರ ಜೋಶಿ 

Historical Capital Hampi HajaraRama temple Garudhagambha rested the Red Sun in the evening
Courtesy : R S Sthavarimath.


*****



*





ಕೊಲ್ಲೂರು ಶ್ರೀ ಮೂಕಾಂಬಿಕೆ. 

ಅದು ಕಾಲಡಿ ಅಂದಿನ ಕೇರಳದ ಒಂದು ಪುಟ್ಟ ಊರು.ತಂದೆ ಇಲ್ಲದ ತಬ್ಬಲಿಯಾದ ಬಾಲ ಶಂಕರ ತನ್ನ ಎಳವೆಯ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ. ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ ' ನಾನು ಸಾಯುವಾಗ ಒಂದು ತೊಟ್ಟು ನೀರು ಬಿಟ್ಟು ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ ? ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ ?" ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ.


" ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸಿನಿಂದ ನನ್ನನ್ನು ಜ್ಞಾನಿಸು, ನೀನು ಜ್ಞಾನ ಮಾಡಿ ಕರೆದ ಅರೆ ಕ್ಷಣದಲ್ಲಿ ನಿನ್ನ ಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲಾ ನಡೆಸಿಕೊದುತ್ತೇನೆ" ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ

ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮಿಸುತ್ತಿದೆ ಅನ್ನುವಾಗ ಮಗ ಶಂಕರ ಹೇಳಿದಂತೆ ಮನಸೀನಲ್ಲೆ ಸಾವಿನ ಮಂಚದಿಂದ ಮಗನನ್ನು ಕೂಗಿ ಕರೆಯುತ್ತಾಳೆ. ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡ ಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು!!. ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ.
ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ ತಾಯಿಯ ಸಾವು. ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ. ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರೂ ಸಹಾಯ ಮಾಡುವುದಿಲ್ಲ. ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ. ನಿಸಾಹಯಕರಾಗಿ ತಾಯಿ ಕೊಲ್ಲೂರ ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ. ತಾಯಿ ದೇಹ ಯೋಗ ಮಾಯೆಯ ಅಗ್ನಿಯಿಂದ ಸುಡುತ್ತಾರೆ.
ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ. ವಿಧವೆ ಎಂದು ತಾತ್ಸಾರದಿಂದ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ. ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ. ಮೂಢ ನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚರ್ಯರಲ್ಲಿ ಕ್ಷಮೆಯನ್ನು ಕೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ.
ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ' ಮಂಗಳ ಪ್ರದಾಯಿನಿಯಾದ ಕೊಲ್ಲೂರ ಮೂಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳೂ ದೂರವಾಗಿ, ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ಪರಿಮಾರ್ಜನೆಯ ದಾರಿ ತೋರಿಸುತ್ತಾರೆ. ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ
ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ
ಶುರುವಾಗುತ್ತದೆ.

ಸೌಪರ್ಣಿಕಾ ನದಿಯ ದಂಡೆಯ ಬಳಿ, ಆದಿಶಂಕರರಿಂದ ಪ್ರತಿಷ್ಟಾಪಿಸಲ್ಪಟ್ಟ ಕೊಲ್ಲೂರಿನ ಮೂಕಾಂಬಿಕೆಯ ಮಂದಿರ, ಪರ್ವತಶ್ರೇಣಿಗಳಿಂದ ಆವೃತವಾಗಿದೆ. ವಿದ್ಯಾದೇವತೆಯೆಂದೇ ಹೆಸರಾದ ಮೂಕಾಂಬಿಕೆ ಮಾತೆ, ದಟ್ಟವಾದ ಕಾನನದ ನಡುವೆ, ಕೊಡಚಾದ್ರಿ ತಳದಲ್ಲಿ, ಈಶ್ವರ ಸ್ವರೂಪಿ ಲಿಂಗದಲ್ಲಿ ನೆಲೆಸಿದ್ದಾಳೆ. ಮೂಕಾಂಬಿಕೆ ಮಾತೆಯ ಮಂದಿರ, ಸಪ್ತಮುಕ್ತಿಸ್ಥಳ ತೀರ್ಥಯಾತ್ರಾ ತಾಣಗಳಲ್ಲೊಂದು.

ಮೂಕಾಂಬಿಕೆ ಮಾತೆಯ ಮೂರ್ತಿ, ಪೂರ್ವಾಭಿಮುಖವಾಗಿ ಪ್ರತಿಷ್ಟಾಪಿಸಲ್ಪಟ್ಟಿದೆ. ಮಂದಿರವನ್ನು ಪ್ರವೇಶಿಸುತ್ತಿದ್ದಂತೆಯೇ, ಆದಿಶಂಕರರಿಂದ ಪ್ರತಿಷ್ಟಾಪಿಸಲ್ಪಟ್ಟ, ಪಂಚಲೋಹದಿಂದ ನಿರ್ಮಿತ ಮೂಕಾಂಬಿಕೆ ಮಾತೆಯ ದರ್ಶನವಾಗುತ್ತದೆ. ಶ್ರೀಚಕ್ರದ ಮೇಲೆ ವಿರಾಜಮಾಳಾಗಿರುವ ಚತುರ್ಭುಜೆ ಮೂಕಾಂಬಿಕೆ, ಶಂಖ, ಚಕ್ರಗಳನ್ನು ಕೈಗಳಲ್ಲಿ ಹಿಡಿದು, ಪದ್ಮಾಸನಾರೂಢಳಾಗಿ, ಅಭಯದಾಯಿನಿಯಾಗಿ, ವರದಹಸ್ತೆಯಾಗಿ ಭಕ್ತರನ್ನು ಪೊರೆಯುತ್ತಿದ್ದಾಳೆ. ಮೂಕಾಂಬಿಕೆಯ ಲಿಂಗದ ಎಡ ಹಾಗೂ ಬಲ ಭಾಗಗಳು ಒಂದು ಚಿನ್ನದ ಎಳೆಯಿಂದ ವಿಂಗಡಿಸಲ್ಪಟ್ಟಿವೆ. ಒಳ ಆವರಣದಲ್ಲಿ, ವಿದ್ಯಾಗಣಪತಿ, ನಾಗೇಶ್ವರ ಹಾಗೂ ಶಂಕರಪೀಠಗಳಿವೆ. ಮಂದಿರದ ಗೋಪುರ ದ್ರಾವಿಡ ಶೈಲಿಯಲ್ಲಿದೆ. ದೇವಸ್ಥಾನದ ಮುಂಬಾಗದಲ್ಲಿರುವ ಅಗ್ನಿತೀರ್ಥ ನದಿ, ಮುಂದೆ ಸಾಗಿ, ಕೊಡಚಾದ್ರಿ ಬೆಟ್ಟದಿಂದ ಹರಿದು ಬರುವ, ಸೌಪರ್ಣಿಕಾ ನದಿಯನ್ನು ಸೇರುತ್ತದೆ. ಮಂಟಪದೊಳಗೆ ವಿಶ್ವವಿಖ್ಯಾತ ರಾಜಾ ರವಿವರ್ಮನ ಚಿತ್ರಪಟಗಳ ಅಲಂಕರಣೆ ಇದೆ.


ಆದಿಶಂಕರಾಚಾರ್ಯರ ತಪಸ್ಸು ಮಾಡಿದ ಸ್ಥಳವೆನಿಸಿದ ಕೊಡಚಾದ್ರಿ ಪರ್ವತ ಶ್ರೇಣಿ, ಕೊಲ್ಲೂರಿನಿಂದ ಸುಮಾರು ಹನ್ನೆರಡು ಕಿಮೀ ದೂರದಲ್ಲಿದೆ. ಕೊಡಚಾದ್ರಿಯ ತುತ್ತ ತುದಿಯಲ್ಲಿ ಸರ್ವಜ್ಞ ಪೀಠ ಎಂಬ ಕಲ್ಲು ಇದ್ದು, ಇದನ್ನು ಶಂಕರಾಚಾರ್ಯರು ಸ್ಥಾಪಿಸಿದರೆಂಬ ಐತಿಹ್ಯವಿದೆ. ಕಾಶ್ಮೀರ ದೇಶದ ಶಾರದಾಪೀಠದಲ್ಲಿರುವ ಸರ್ವಜ್ಞ ಪೀಠವೇ, ಈ ಕಲ್ಲು ಮಂಟಪಕ್ಕೆ ಸ್ಫೂರ್ತಿ ಎಂದು ತಿಳಿಯಲಾಗಿದೆ.

ಪೌರಾಣಿಕ ಹಿನ್ನೆಲೆ: ಮಹಾರಣ್ಯಪುರವೆಂದು ಹೆಸರಾಗಿದ್ದ ಈ ಪ್ರದೇಶದಲ್ಲಿ, ಕೋಲ ಎಂಬ ಮಹರ್ಷಿಯೊಬ್ಬರು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಪರಶಿವನು ಪ್ರತ್ಯಕ್ಷನಾಗಿ, ಜ್ಯೋತಿರ್ಮಯಲಿಂಗವನ್ನು ಪೂಜಿಸಿದರೆ, ಮಹಾಲಕ್ಷ್ಮಿ ಪ್ರತ್ಯಕ್ಷಳಾಗಿ ವರವಿತ್ತು, ಆಕೆ ಇಲ್ಲಿಯೇ ನೆಲೆಸುವುದಾಗಿ ಅಭಯವಿತ್ತನು. ಕೋಲಮುನಿಯ ತಪೋಬಲದಿಂದ ಈ ಮಹಾರಣ್ಯಕ್ಕೆ ಕೋಲಾಪುರವೆಂದು ಹೆಸರಾಗಿ, ನಂತರ ಕೊಲ್ಲೂರು ಎಂದು ಕೋಲ ಋಷಿಗಳ ತಪಸ್ಸಿಗೆ, ಕಂಹಾಸುರನೆಂಬ ದೈತ್ಯ ಅಡ್ಡಿಪಡಿಸುತ್ತಿದ್ದ. ಅಸುರ ಕಂಹಾಸುರ, ದೈತ್ಯರ ಗುರು ಶುಕ್ರಾಚಾರ್ಯರಿಂದ ಮಂತ್ರೋಪದೇಶ ಪಡೆದು, ಮಹಾಭೈರವಿಯನ್ನು ಉಪಾಸಿಸಿ, ತನಗೆ ಸ್ತ್ರೀಯರ ಹೊರತು ಬೇರಾರಿಂದಲೂ ಸಾವು ಬರಕೂಡದೆಂದು ವರ ಪಡೆದಿದ್ದ. ವರ ಪಡೆದ ಕಂಹಾಸುರ ಮದೋನ್ಮತನಾಗಿ, ಎಲ್ಲರನ್ನೂ ಹಿಂಸಿಸಲಾರಂಭಿಸಿದನಂತೆ. ಅಸುರನ ಹಾವಳಿಯಿಂದ ನೊಂದ ದೇವತೆಗಳು ತ್ರಿಪುರ ಭೈರವಿಯನ್ನು ಅರ್ಚಿಸಿದಾಗ, ಆಕೆ ಅಸುರನ ಮೇಲೆ ಯುದ್ಧ ಸಾರಿದಳಂತೆ.
ದೇವತೆಗಳ ಸಂಚು ತಿಳಿದ ದೈತ್ಯಗುರು ಶುಕ್ರಾಚಾರ್ಯರು, ಕಂಹಾಸುರನಿಗೆ, ಶಿವನನ್ನು ಕುರಿತು ಮಾಡಿ, ಕೇವಲ ಸ್ತ್ರೀಯರಿಂದ ಮಾತ್ರವಲ್ಲ, ಯಾವ ಜೀವಿಯಿಂದಲೂ ಆತನಿಗೆ ಮರಣವುಂಟಾಗಬಾರದೆಂದು ವರ ಪಡೆದು, ಅಮರತ್ವವನ್ನು ಪಡೆಯಬೇಕೆಂದು ಆದೇಶಿಸಿದರಂತೆ. ಕಂಹಾಸುರನು ಋಷ್ಯಮೂಕ ಪರ್ವತದಲ್ಲಿ ಉಗ್ರ ತಪಸ್ಸು ಕೈಗೊಂಡಾಗ, ಆತನ ತಪೋಜ್ವಾಲೆ ಎಲ್ಲೆಡೆ ಪಸರಿಸಲಾರಂಭಿಸಿತು. ಆಗ ಕೋಲ ಮಹರ್ಷಿಗಳೊಡಗೂಡಿ ದೇವಿಯ ಮೊರೆ ಹೊಕ್ಕರು. ಮಾತೆ ಮಹಾಲಕ್ಷ್ಮಿ, ತ್ರಿಮೂರ್ತಿಗಳು ಹಾಗೂ ದೇವತೆಗಳ ತೇಜಸ್ಸು, ಪರಾಕ್ರಮ ಹೊತ್ತು ಜ್ಯೋತಿರ್ಮಯಲಿಂಗದಿಂದ ಅವತರಿಸಿದಳು. ಮಹಾಲಕ್ಷ್ಮಿ ಕಂಹಾಸುರನ ನಾಲಿಗೆಯ ಮೆಲೆ ಕುಳಿತು, ಮೂಕನನ್ನಾಗಿಸಿದಳು. ಅಂದಿನಿಂದ ಆತ ಮೂಕಾಸುರನೆಂದೇ ಹೆಸರಾದ. ಮತ್ತು ಆತನ ಪರಿವಾರ, ಲೋಕಕಂಟಕರಾದರು. ಮೂಕಾಸುರನ ಮೇಲೆ ಯುದ್ಧ ಸಾರಿ, ಆತನನ್ನು ವಧಿಸುವ ಮುಂಚೆ, ಆತನ ಮೂಕತ್ವವನ್ನು ಹೋಗಲಾಡಿಸಿದಳು. ಅಂದಿನಿಂದ ಮಹಾಲಕ್ಷ್ಮಿ ಕೊಲ್ಲೂರಿನಲ್ಲಿ ಮೂಕಾಂಬಿಕೆ ಎಂಬ ಹೆಸರಿನಲ್ಲಿಯೇ ಭಕ್ತರನ್ನು ಪೊರೆಯುತ್ತಿದ್ದಾಳೆ.
ಕೊಡಚಾದ್ರಿ ಬೆಟ್ಟದಲ್ಲಿ ಆದಿಶಂಕರರು ತಪಸ್ಸು ಮಾಡಿದಾಗ, ದೇವಿ ಪ್ರತಕ್ಷಳಾಗಿ ವರವನ್ನು ಬೇಡಲು ಹೇಳಿದಳಂತೆ. ಮಮತಾಮಯಿ ಮಹಾಲಕ್ಷ್ಮಿ ಕುರಿತು ಶಂಕರರು ತಾನು ಹೇಳಿದ ಸ್ಥಳಕ್ಕೆ ಆಗಮಿಸಿ ನೆಲೆಸಬೇಕು, ಎಂದು ಕೋರಿದರಂತೆ. ಮಾತೆ, ಶಂಕರರ ಮಾತೆಗೆ ಸಮ್ಮಿತಿಸಿ, ಹಿಂದಿರುಗಿ ನೋಡಬಾರದೆಂಬ ಅವರನನ್ನನುಸರಿಸಿ ನಡೆದಳಂತೆ. ಸ್ವಲ್ಪ ದೂರ ಸಾಗಿದ ನಂತರ, ಮಾತೆಯ ಗೆಜ್ಜೆಯ ನಾದದ ಸದ್ದು ಕೇಳದಾದಾಗ, ಶಂಕರರು ಹಿಂತಿರುಗಿ ನೋಡಿದಾಗ, ಮಾತೆ ತಾನು ಅದೇ ಸ್ಥಳದಲ್ಲಿ ನೆಲೆಸುವುದಾಗಿಯೂ ತನಗಾಗಿ, ಮಂದಿರವೊಂದನ್ನು ನಿರ್ಮಿಸಬೇಕೆಂದು ಶಂಕರರಿಗೆ ಆದೇಶಿಸಿದಳಂತೆ. ಒಂಬತ್ತನೆಯ ಶತಮಾನದಲ್ಲಿ ಶ್ರೀಚಕ್ರಸಹಿತ ಜ್ಯೋತಿರ್ಮಯ ಮೂಕಾಂಬಿಕೆ ವಿಗ್ರಹವನ್ನು ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಹಾಗೂ ನವರಾತ್ರಿಯ ಸಮಯದಲ್ಲಿ ಆಚರಿಸಬೇಕಾದ ವಿಧಿವಿಧಾನಗಳನ್ನು ನಿಗದಿಪಡಿಸಿದರು. ಆದಿಶಂಕರರು, ದೇವಸ್ಥಾನದ ಸರಸ್ವತಿ ಮಂಟಪದಲ್ಲಿ ಕುಳಿತು ಜಗತ್ತಿಗೆ ಮಾತೆಯ ವಿಶ್ವರೂಪ ತಿಳಿಯಪಡಿಸುವ ಸೌಂದರ್ಯ ರಚಿಸಿದರು.


ಕೆಳದಿ ಸಂಸ್ಥಾನದ ಅರಸನಾದ ವೆಂಕಟಪ್ಪ ನಾಯಕನು, ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ವಿಸ್ತಾರವಾಗಿ ನಿರ್ಮಿಸಿದನು. ರಾಣಿ ಕೆಳದಿ ಚನ್ನಮ್ಮ, ಜ್ಯೋತಿರ್ಮಯ ಲಿಂಗಕ್ಕೆ ಚಿನ್ನದ ಮುಖವಾಡ ಮಾಡಿಸಿಕೊಟ್ಟಳು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಎಮ್ ಜಿ ರಾಮಚಂದ್ರನ್ ಈ ದೇವಸ್ಥಾನಕ್ಕೆ ಬಂಗಾರದ ಕತ್ತಿಯನ್ನು ಕಾಣಿಕೆಯಾಗಿ ನೀಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರು, ಬೆಳ್ಳಿಯ ಕತ್ತಿಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ.

ಪೂಜಾ ಕೈಂಕರ್ಯಗಳು: ಇಲ್ಲಿ, ಪೂಜಾ ವಿಧಿ-ವಿಧಾನಗಳನ್ನು ಆದಿ ಶಂಕರರು ನಿರ್ದೇಶಿಸಿದ ರೀತಿಯಲ್ಲಿಯೇ ಶುಂಠಿ, ಮೆಣಸುಕಾಳು, ಏಲಕ್ಕಿ, ಲವಂಗ ಮುಂತಾದ ಮಸಾಲೆಗಳಿಂದ ತಯಾರಿಸಿದ ಕಷಾಯವನ್ನು ನೈವೇದ್ಯ ರೂಪದಲ್ಲಿ ಮಾತೆಗೆ ಸಲ್ಲಿಸಿ, ಭಕ್ತಾದಿಗಳಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಮೂಕಾಂಬಿಕೆಯನ್ನು ಆರಾಧಿಸಿದರೆ, ಮೂಕರಿಗೂ ಮಾತು ಬರುತ್ತದೆಂಬ ನಂಬಿಕೆಯಿದೆ. ಮೂಕಾಂಬಿಕೆಯ ಸನ್ನಿಧಿಯಲ್ಲಿ, ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪದ್ಧತಿಯಿದೆ. ನವರಾತ್ರಿ ಸಮಯದಲ್ಲಿ, ವಿಶೇಷ ಪೂಜೆಗಳಲ್ಲದೆ, ಶತರುದ್ರಾಭಿಷೇಕಗಳನ್ನು ದೇವಿಗೆ ಸಲ್ಲಿಸಲಾಗುತ್ತದೆ. ವಿಜಯ ದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಖ್ಯಾತ ಗಾಯಕರಾದ ಯೇಸುದಾಸ್ ಅವರು ಮಾತೆಗೆ ಸಂಗೀತ ಸೇವೆ ಸಲ್ಲಿಸಿ, ತಮ್ಮ ಇಲ್ಲಿಯೇ ಆಚರಿಸಿಕೊಳ್ಳುತ್ತಾರೆ. ಪ್ರತಿದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇದೆ.


ಹೋಗುವ ದಾರಿ: ಹತ್ತಿರದ ರೈಲು ನಿಲ್ದಾಣ, ಸುಮಾರು 30ಕಿಮೀ ದೂರದಲ್ಲಿರುವ ಬೈಂದೂರು. ಬೈಂದೂರಿನಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಕೊಲ್ಲೂರು ತಲುಪಬಹುದು. ಬೆಂಗಳೂರು, ಮಂಗಳೂರು ಮತ್ತು ಇತರ ಪ್ರಮುಖ ನಗರಗಳಿಂದ ನೇರ ಬಸ್ ವ್ಯವಸ್ಥೆ ಇದೆ. ಮಂಗಳೂರಿನ ವಿಮಾನ ನಿಲ್ದಾಣ ಸುಮಾರು 130ಕಿಮೀ ದೂರದಲ್ಲಿದೆ.
***

'ಚಪ್ಪಾಳೆ ಕೊಳ' ಗೌರೀತೀರ್ಥ gowri teertha *

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬಳಿ ಇರುವ ಗೌರಿತೀರ್ಥವೇ ಈ ಕೊಳ.  ಸುಮಾರು ೧೨೦೦ ವರ್ಷಗಳ ಹಿಂದೆ ಚಂಪಕ ಮಹರ್ಷಿಗಳು ತಪಸ್ಸು ಮಾಡಿ ಚಪ್ಪಾಳೆಯಿಂದ ಸೃಷ್ಟಿಸಿದ ಕೊಳ ಎಂದು ಅಲ್ಲಿನ ಫಲಕದಲ್ಲಿ ಬರೆಯಲಾಗಿದೆ. ಅದಕ್ಕೆ ನೀರುಗುಳೈ ಕೊಳವೆಂದೂ ಹೇಳುತ್ತಾರೆ.  ಇದರ ವಿಶೇಷವೆಂದರೆ ಕೊಳದ ದಡದಲ್ಲಿ ನಿಂತು ಚಪ್ಪಾಳೆ ಹೊಡೆದರೆ ಕೊಳದ ನೀರು ಗುಳ್ಳೆ ಗುಳ್ಳೆಯಾಗಿ  ಮೇಲಕ್ಕೆ ಬಂದು ತರಂಗಗಳೇಳುತ್ತವೆ. 

******


ಕಾರ್ಪರ ನರಸಿಂಹ ದೇವರು, ದೇವಗಿರಿ
ಈ  ಕ್ಷೇತ್ರವು ಕರ್ನಾಟಕ ರಾಜ್ಯದ ರಾಯಚೂರ್ ಜಿಲ್ಲೆಯ ಲಿಂಗಸೂರ ಬಳಿಯ ದೇವದುರ್ಗದ ಹತ್ತಿರ ಕೃಷ್ಣಾ ನದಿ ದಂಡೆಯಲ್ಲಿ ಇದೆ.  ಇಲ್ಲಿ ಪುರಾಣ ಕಾಲದಲ್ಲಿ ಕಾರ್ಪರ  ಎಂಬ ಋಷಿಯು ಇಲ್ಲಿ ತಪಸ್ಸು ಮಾಡಿದ್ದಾನೆ. ಋಷಿಯ ತಪಸ್ಸಿಗೆ ಮೆಚ್ಚಿ ಭಗವಂತನು ವೃಕ್ಷರೂಪದಿಂದ ಪ್ರತ್ಯಕ್ಷ ನಾದನು. ಆಗ ಋಷಿಯು ದೇವಾ ನೀನು ವೃಕ್ಷರೂಪದಿಂದ ಇದ್ದಿದ್ದು ನನಗೆ ತಿಳಿದಿದೆ.  ಆದರೆ ನೀನು ಭಕ್ತರ ಒಳಿತಿಗಾಗಿ ಇಲ್ಲಿಯೇ ಇರು ಎಂದು ಬೇಡಿಕೊಂಡನು. ಅದಕ್ಕೆ ಭಗವಂತನು ಒಪ್ಪಿ ಅರಳಿಗಿಡದಲ್ಲಿ ಸನ್ನಿಹಿತನಾಗಿ ಇದ್ದನು.  ಗಿಡಕ್ಕೆ ಪೂಜೆ ನಡೆಯುತ್ತಿತ್ತು. ಆಗಿನ ಕಾಲಕ್ಕೆ ಅದನ್ನು ದೇವರಗಿಡವೆಂದು ಕರೆಯುತ್ತಿದ್ದರು. 

ಈಗಿನ ಅರ್ಚಕರ ಪೂರ್ವಜರು ಸಮೀಪದ ಹಳ್ಳಿಯವರು. ಮನೆಯಲ್ಲಿಯ ಬಡತನ, ಬಂಧು ಬಾಂಧವರಲ್ಲಿಯ ವಿರಸ ವಾತಾವರಣಕ್ಕೆ ಬೇಸತ್ತು ತಿರುಪತಿಗೆ ಹೋದರು. ಅಲ್ಲಿ ಅವರಿಗೆ ಅಂಧತ್ವ ಬಂದಿತು.  ಪಾಪಿ ಸಮುದ್ರಕ್ಕೆ ಹೋದರೆ ಮೊಣಕಾಲು ವರೆಗೆ ನೀರು ಎಂಬಂತೆ ಅವರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರಕ್ಕೆ ಬಂದರು. ಊರಲ್ಲಿ ದಾಯಾದಿಗಳ ಕಾಟ ಎಲ್ಲವನ್ನು ಬಿಟ್ಟು ದೇವರೆಡೆಗೆ ಬಂದರೆ ದೇವರ ದರ್ಶನ ಭಾಗ್ಯವೂ  ಇಲ್ಲ. ಎಂದುಕೊಂಡು ಆತ್ಮಹತ್ಯೆ ವಿಚಾರ ಮಾಡುತ್ತಾ  ಮಲಗಿದರು. ರಾತ್ರಿ ಕನಸಿನಲ್ಲಿ ವೆಂಕಟೇಶ ಕಾಣಿಸಿಕೊಂಡು ನಾಳೆ ನೀನು ಊರಿಗೆ ತಿರುಗಿ ಹೋಗು. ನಿನಗೆ ಕಣ್ಣು ಕಾಣುವವು. ನನ್ನ ದರ್ಶನಕ್ಕೆ ನಿಲ್ಲಬೇಡ. ನಿನ್ನ ಊರ ನದಿ ದಂಡೆಯ ಅರಳಿಗಿಡದಲ್ಲಿ ನನ್ನ ಸನ್ನಿಧಾನವಿದ್ದು, ನೀನು ಅಲ್ಲಿಯೇ ಪೂಜೆ ಮಾಡಿಕೊಂಡು ಇರು ಎಂದನು.  ಆಗ ಬ್ರಾಹ್ಮಣ ದೇವಾ ಅಡವಿಯಲ್ಲಿ ಎಷ್ಟೋ ಗಿಡಮರಗಳಿವೆ ಯಾವದೆಂದು ನಾನು ತಿಳಿಯಲಿ ಎಂದು ಕೇಳಿದಾಗ, ದೇವರು ಚಿಂತಿಸಬೇಡ ನಾನು  ಗೋರೂಪದಿಂದ ನಿನ್ನ ಹಿಂದೆ ಬರುತ್ತೇನೆ. ಒಂದು ಗಿಡದ ಕೆಳಗೆ ನಾನು ಹಾಲು ಕರೆಯುವೆನು. ಅದೇ ಗಿಡವನ್ನು ಪೂಜಿಸು ಎಂದು ಹೇಳಿದಂತಾಯಿತು. ಬ್ರಾಹ್ಮಣ ಬೇಗನೆ ಎದ್ದನು. ದೃಷ್ಟಿ ಬಂದಿತ್ತು ಆಹ್ನಿಕ ಮುಗಿಸಿಕೊಂಡು ನಿಂತ ಸ್ಥಳದಿಂದಲೇ ವೆಂಕಟೇಶನಿಗೆ ಕೈಮುಗಿದು ಊರಿಗೆ ಪ್ರಯಾಣ ಬೆಳಸಿದನು. 

ದಾರಿ ಸಾಗುತ್ತಾ ಹೋದಂತೆ ಗೋವು ಹಿಂದಿನಿಂದಲೇ ಬರುತ್ತಿತ್ತು.  ಬ್ರಾಹ್ಮಣ ಊರು ತಲುಪಿದ. ಅಡವಿಯಲ್ಲಿ ಅಶ್ವತ್ಥ ಮರದ ಪೊಟರೆಯಲ್ಲಿ ಗೋವು ಹಾಲು ಕರೆಯಿತು.  ಬ್ರಾಹ್ಮಣ ಅಂದಿನಿಂದಲೇ ವೃಕ್ಷ ಪೂಜೆಗೆ ಪ್ರಾರಂಭಿಸಿದನು. ಮತ್ತೆ ಕನಸಿನಲ್ಲಿ ಅಯ್ಯಾ ಬ್ರಹ್ಮಣಾ ನಾನು ತಿರುಪತಿಯಿಂದ ಬಂದೆನೆಂದು ನಿನಗೆ ಗೊತ್ತು. ಆದರೆ ಮುಂದಿನ ಪೀಳಿಗೆಯವರಿಗೆ ಗೊತ್ತಾಗಲು ನಾನು ನದಿಯಲ್ಲಿ ಇರುವೆನು.  ನನ್ನನ್ನು ತಂದು ಸ್ಥಾಪಿಸು ಎಂದು ಹೇಳಿದಂತಾಯಿತು. ಬ್ರಾಹ್ಮಣ ಕನಸಿನಲ್ಲಿ ಹೇಳಿದಂತೆ ನದಿಗೆ ಸ್ನಾನಕ್ಕೆ ಹೋದಾಗ ಷೋಡಶಬಾಹು ನರಸಿಂಹ ಮೂರ್ತಿ ಸಿಕ್ಕಿತು.  ಅದನ್ನು ತಂದು ಅರಳೀ ಗಿಡದ ಪಕ್ಕಕ್ಕೆ ಸ್ಥಾಪಿಸಿದನು. ನಂತರ ಹಳೆ ಗಿಡದ  ಬುಡದಲ್ಲಿ ಸಾವಿರಾರು ಸಾಲಿಗ್ರಾಮ ಸಿಕ್ಕವು. ಅವುಗಳನ್ನು ಅಲ್ಲಿಯೇ ಗಿಡದ ಬುಡದಲ್ಲಿ ಹಾಕಿ ಸಾಲಿಗ್ರಾಮ ಶಿಲೆಯ ನರಸಿಂಹ ದೇವರನ್ನೂ  ಅಲ್ಲಿಯೇ ಸ್ಥಾಪಿಸಿದರು. ಆ ಬ್ರಾಹ್ಮಣನೇ ಈಗಿನ ಅರ್ಚಕರ ಪೂರ್ವಜರು ಮತ್ತು ಮೂಲ ಪುರುಷ ಆಗಿದ್ದಾರೆ. 

ಕೆಲವು ವರ್ಷ ಕಳೆದ ಮೇಲೆ ನದಿಯ ಆಚೆ ದಂಡಿಗೆ ಇರುವ ಹಳ್ಳಿಯ ಮುಖಂಡನಿಗ ಕನಸು ಬಿತ್ತು. ನಾನು ಆಚೆಯ ದಂಡೆಯ ಅರಳಿಗಿಡದಲ್ಲಿ  ಇರುವೆನು. ನೀನು ಅದಕ್ಕೆ ಗುಡಿ ಕಟ್ಟಿಸು.  ಪ್ರವಾಹದಳೀ ಮುಳುಗದಂತೆ ವ್ಯವಸ್ಥೆ ಮಾಡು ಎಂದು ದೇವರು ಹೇಳಿದಂತೆ ಆಯಿತು. ಮುಖಂಡನು ಕನಸಿನ ಪ್ರಕಾರ ಬಂದನು. ಅಲ್ಲಿ ದೇವರ ವಿಗ್ರಹವಿತ್ತು. ಪೂಜೆ ಸಾಗುತ್ತಿತ್ತು. ಅರ್ಚಕರಿಗೆ ಹೇಳಿ ಗಿಡಕ್ಕೆ ಎತ್ತರವಾದ ಕಟ್ಟೆ, ಮತ್ತು ದೇವರಿಗೆ ಗುಡಿ ಕಟ್ಟಿಸಿದನು. ಇಂದಿಗೂ ನರಸಿಂಹದೇವರು ಅದೆಷ್ಟೋ ಮುನಿಯೋಗಿಗಳಿಂದ ಸೇವೆ ತೆಗೆದುಕೊಂಡಿದ್ದಾನೆ. 

ಪದ್ಮನಾಭತೀರ್ಥರ ಪರಂಪರೆಯಲ್ಲಿ ಬಂದ ಲಕ್ಷ್ಮೀನಾರಾಯಣ ಯೋಗಿಗಳು, ರಾಯರಮಠದ ಪೂರ್ವ ಯೋಗಿ ಭುವನೇಂದ್ರರು ಮತ್ತು ಉತ್ತರಾದಿಮಠದ ರಘುನಾಥ ತೀರ್ಥರು ಒಂದು ಬಾರಿ ಈ ಕ್ಷೇತ್ರದಲ್ಲಿ ಭೆಟ್ಟಿಯಾಗುವ ಸಂದರ್ಭ ಒದಗಿತು. ಲಕ್ಷ್ಮೀನಾರಾಯಣ ಯೋಗಿಗಳು ಇನ್ನೂ ತರುಣರು. ರಘುನಾಥರು ಅವರಲ್ಲಿ ಸುಧಾ ಗ್ರಂಥದ ವಾಕ್ಯಕ್ಕೆ ಅರ್ಥವನ್ನು ಸಹಜವಾಗಿ ಕೇಳಿದರು.ಲಕ್ಷ್ಮೀನಾರಾಯಣ ಯೋಗಿಗಳು ಇಡೀ ಸುಧಾಗ್ರಂಥವನ್ನೇ ಭಾಷಾಂತರ ಮಾಡಿ ಹೇಳಿ ಗುರುದ್ವಯರಿಗೆ ಅಚ್ಚರಿ ಉಂಟು ಮಾಡಿದರು. ಊಟಕ್ಕೆ ಕುಳಿತಾಗ ರಘುನಾಥರು ತರುಣ ಯತಿಗಳ ವಿದ್ವತ್ತಿಗೆ ಮೆಚ್ಚಿದರು. ಆಗ ತರುಣ ಯತಿ ನೀವು ಸಂಸ್ಥಾನಾಧಿಪತಿಗಳು, ಶ್ರೀಪಾದಂಗಳವರು, ನಾನು ಚಿಕ್ಕವರು ಕೇವಲ ಯೋಗಿ  ಎಂದರು ಅದಕ್ಕೆ ರಘುನಾಥರು ಇಲ್ಲ ನಾವು ಶ್ರೀಪಾದಂಗಳವರು ಆದರೆ ನೀವು ಇಂದಿನಿಂದ ನಮಗೆಲ್ಲರಿಗೂ ರಾಜರು. ಶ್ರೀಪಾದರಾಜರು ಎಂದು ಬಿರುದು ಕೊಟ್ಟ ಸ್ಥಳ ಇದಾಗಿದೆ. ಶ್ರೀ ವಿಜಯೇಂದ್ರ ತೀರ್ಥರು ಇಲ್ಲಿ ನರಸಿಂಹಾಷ್ಟಕ ರಚಿಸಿದ್ದಾರೆ. ಪುರಂದರದಾಸರು ರಘುನಾಥರ ಪೂಜೆ ನೋಡಿ ಎಂಬ ಪದ್ಯ ರಚಿಸಿ ಉತ್ತರಾದಿ ಮಠದಲ್ಲಿಯ ಪ್ರತಿಮೆಗಳ ವರ್ಣನೆ ಮಾಡಿದ್ದಾರೆ. ವಿಜಯ ದಾಸರಿಗೆ  ಈ ವೃಕ್ಷದ ಕಟ್ಟೆ ಸಾಲಿಗ್ರಾಮಮಯವಾಗಿ ಕಂಡು ಮೊಣಕಾಲಿನಿಂದ ಪ್ರದಕ್ಷಿಣೆ ಹಾಕಿದ್ದಾರೆ. ಆದ್ಯ ಮನೆತನದವರಿಗೆ ಆದ್ಯ ಎಂಬ ಬಿರಿದನ್ನು ಇದೇ  ಕ್ಷೇತ್ರದಲ್ಲಿ ಕೊಡಲಾಗಿದೆ. 
ಇಂದಿಗೂ ನರಸಿಂಹದೇವರು ಎಷ್ಟೋ ಜನರ ಆರಾಧ್ಯದೈವ ಕುಲದೇವರರಾಗಿ ಅವರನ್ನು ಅನುಗ್ರಹಿಸಿದ್ದಾನೆ.  ಹೀಗೆ ಪೌರಾಣಿಕ ಹಿನ್ನೆಲೆಯ ನರಸಿಂಹ ಎಲ್ಲ ಭಕರನ್ನು ಕಾಪಾಡಲಿ.
**************


ರಾಯರ ಮಹಿಮೆ 
ಕರ್ನಾಟಕದ 34 ಜಿಲ್ಲೆಗಳಲ್ಲಿ ಗದಗ ಒಂದು. ಅಲ್ಲಿಂದ 12km ದೂರದಲ್ಲಿ ಕಿರೀಟಗಿರಿ ಎಂಬ ಗ್ರಾಮವಿದೆ. ಊರಿನ ಬಾಗಿಲಲ್ಲಿ “ಕಿರಾಣಿ ಅಂಗಡಿ” ಎಂಬ ಮನಯಿದೆ. ಆ ಮನೆಯ ಹಿಂಬಾಗದಲ್ಲಿ ಅನೇಕ ಶತಮಾನಗಳಷ್ಟು ಹಿಂದಿನ ಮನೆ ಇದೆ. ಮನೆಯೆಲ್ಲಾ ಪಾಳು ಬಿದ್ದಿದೆ (2009ರಲ್ಲಿ). ಆ ಕಾಲದಲ್ಲಿ ಉಪಯೋಗಿಸಿದ ಪಾತ್ರೆಗಳು-ಪಡಗಗಳು ಹಾಗೇ ಬಿದ್ದೆವೆ. ಹೆಗ್ಗಣಗಳು ಮನೆಯೆಲ್ಲಾ ತೋಡಿಬಿಟ್ಟಿವೆ.

ಅಲ್ಲಿ ಒಂದು ದೇವರ ಮನೆ. ಕಡಪಾ ಕಲ್ಲಿನ ಕಟ್ಟೆ. ಮುಂದೆ ಒಂದು ರಾಯರ ಬಹಳ ಹಳೆಯ ಚಿತ್ರಪಟ. ಅದಕ್ಕೆ ತುಳಸೀಮಣಿ ಹಾರ. 
ಆ ಮನೆ ಬೇರೆ ಯಾರದ್ದೂ ಅಲ್ಲ!! ರಾಯರು ಸಂಚಾರ ಕಾಲದಲ್ಲಿ ಬಂದಾಗ, ರಘುನಾಥ ದೇಸಾಯಿ ಮನೆಯಲ್ಲಿ ಸಂಸ್ಥಾನ ಪೂಜೆ ಮಾಡಿದ್ದರು. ಅದೇ ಮನೆ. ಇನ್ನೂ ಹಾಗೇ ಇದೆ. ಆ ಕಟ್ಟೆಯ ಮೇಲೆಯೇ, ದೇಸಾಯಿಯ ಮಗ ಮಾವಿನಹಣ್ಣಿನ ಸೀಕರಣೆಯಲ್ಲಿ ಬಿದ್ದು ಮೄತನಾದಾಗ, ಅವನ ಮೄತದೇಹವನ್ನು ತಂದು ಮಲಗಿಸಿ, ರಾಯರು ಅವನಿಗೆ ಜೀವದಾನ ಮಾಡಿ ಎಬ್ಬಿಸಿ ಕೂಡಿಸಿದ್ದು.

ನೋಡುತ್ತಿದ್ದರೆ ರೋಮಾಂಚನ. ಆ ಮನೆಯ ಉಸ್ತುವಾರಿ (ಆಗ ೨೦೦೯ರಲ್ಲಿ) ಒಬ್ಬ ವೀರಶೈವ ಸಂಪ್ರದಾಯದವರ ಕೈಯಲ್ಲಿತ್ತು. ಶೈವರಾದರೂ ಕೂಡ ಮಗನಿಗೆ ರಾಘವೇಂದ್ರ ಎಂಬ ಹೆಸರಿಟ್ಟಿದ್ದರು. ಜೀವಿತಾವಧಿಯಲ್ಲಿ ನೋಡಬೇಕಾದ ಪುಣ್ಯಸ್ಥಳ.

(ಶೇಷಾದ್ರಿ ಪಾರಾ ರಾವ್ 18/Mar/2020)

https://drive.google.com/file/d/130HbSaUxOziL5eMwFV_eLtmu-payI8E-/view?usp=drivesdk
*********




ಬೆಟ್ಟದ ರಂಗನಾಥಸ್ವಾಮಿ ದೇವಾಲಯ 

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆಯಲ್ಲಿ ಬೆಟ್ಟದ ರಂಗನಾಥಸ್ವಾಮಿ ದೇವಾಲಯವು 500-600 ಅಡಿ ಎತ್ತರದ ಬೆಟ್ಟದಿಂದ ಶಿಲ್ಪ ಕಲೆಯ ಸೌಂದರ್ಯವನ್ನು ಪುರಾತನ ಸಂಸ್ಕೃತಿಯನ್ನು ಸುರಿದು ಮಾನವನಿಗೆ ಮೋಕ್ಷ ನೀಡುವ ಮಾಹಾಕ್ಷೇತ್ರವಿದು.

ಈ ಬೆಟ್ಟವು ರೈಲು ಮಾರ್ಗದ ಇನ್ನೊಂದು ಬದಿಯಿದ್ದು. ಹಳ್ಳಿಯಿಂದ ಸ್ವಲ್ಪ ದೂರದಲ್ಲಿದೆ. ಈ ಬೆಟ್ಟದ ತುದಿಯಲ್ಲಿ ರಂಗನಾಥ ಸ್ವಾಮಿಯ ದೇವಾಲಯವು ಮರಕ್ಕೆ ಹೊಂದಿಕೊಂಡಿರುವ ಗುಹೆಯಲ್ಲಿಯೇ ಕಟ್ಟಲ್ಪಟ್ಟಿದೆ. ಈ ದೇವಾಲಯವು ನಕ್ಷತ್ರಾಕೃತಿಯಲ್ಲಿದೆ. ದೇವಾಲಯದ ಸುತ್ತಲಿನ ಪರಿಸರಗಳಿಂದ ನಮಗೆ ಪಕ್ಕದ ಹಳ್ಳಿಯ ಬಗ್ಗೆ ಸಾಕಷ್ಟು ತಿಳುವಳಿಕೆಯುಂಟಾಗುತ್ತದೆ. ಈ ಹಳ್ಳಿಯು ಬೆಟ್ಟದ ಸಾತೇನಹಳ್ಳಿ ಎಂದು ಹೆಸರಾಗಿದೆ. ಸುತ್ತಲೂ ಹಸುರಿನ ಹೊಲಗದ್ದೆಗಳು ಕಂಡು ಬರುವವು. ರಂಗನಾಥ ಸ್ವಾಮಿಯ ದೇವಾಲಯಕ್ಕೆ ಎರಡು ಮುಖ್ಯ ಪ್ರವೇಶ ದ್ವಾರಗಳಿದ್ದು, ಒಂದು ನೇರವಾಗಿ ಗರ್ಭಗುಡಿಗೆ ಕರೆದೊಯ್ಯುತ್ತದೆ. ಇನ್ನೊಂದು ಮಾರ್ಗವು ಹನುಮಂತನ ಮೂರ್ತಿ ಇರುವಲ್ಲಿಯೂ ನಂತರ ಮೊಗಸಾಲೆಗೂ ಕರೆದೊಯ್ಯುತ್ತದೆ.

ವೈಖಾನಸ ಆಗಮವೆಂಬ ಒಂದು ವಿಶಿಷ್ಟ ಕ್ರಮದಲ್ಲಿ ದೇವಾಲಯವನ್ನು ಶುದ್ದಗೊಳಿಸಲಾಗುತ್ತದೆ. ಮತ್ತು ಪೂಜಾದಿಗಳನ್ನು ನೆರವೇರಿಸುತ್ತಾರೆ. ಮೇಘ ಮಾಸದಲ್ಲಿ ಪುಷ್ಯ ನಕ್ಷತ್ರದ ದಿನ ಅಂದರೆ ಪೌರ್ಣಮಿಯ ಹಿಂದಿನ ದಿನ ತ್ರಯೋದಶಿ ಚತುರ್ದಶಿಯಂದು ನಡೆಯುವ ಸ್ವಾಮಿಯ ರಥೋತ್ಸವ ಕಾಲದಿಂದ 15 ದಿನಗಳವರೆಗೆ ದೊಡ್ಡದೊಂದು ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ನಾಡಿನ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಮಿಯ ಭಕ್ತಾಧಿಗಳು ಸೇರುವರು.

ಬೆಟ್ಟದ ರಂಗನಾಥ ಸ್ವಾಮಿಯ ಈ ದೇವಾಲಯವು ಹೊಯ್ಸಳರ ಶೈಲಿಯದಾಗಿದೆ. ರಂಗನಾಥಸ್ವಾಮಿಯ ಈ ದೇವಾಲಯವು ಹರಿಹರರ ಅಭಿನ್ನತೆಯ ಸ್ಥಾನವೆಂದು ಕರ್ನಾಟಕದಲ್ಲ್ರಿ ಕ್ರಿ. ಶ. 13, 14 ನೇ ಶತಮಾನಗಳಿಂದ ಪೂಜಿಸಲ್ಪಡುತ್ತಿದೆ. ವಿಜಯನಗರ ಹಾಗೂ ಹೊಯ್ಸಳ ದೊರೆಗಳ ಅನೇಕರು ತಮ್ಮ ರಾಜ್ಯಗಳಲ್ಲಿನ ಜಾತಿಗಳ ಮಧ್ಯದಲ್ಲಿನ ಬೇದಾಂತರಗಳನ್ನು ತೊರೆದು ಹಾಕುವ ಪ್ರಯತ್ನ ಮಾಡಿದರು. ಇದರಿಂದಾಗಿ ಪೂಜೆಗಳಲ್ಲಿ ಭಾಂಧವ್ಯದ ಬೆಸುಗೆಯನ್ನುಂಟು ಮಾಡಿದರು. ಇದರಂತೆಯೇ ವಿಜಯನಗರ ಸಾಮ್ರಾಜ್ಯ ಸ್ಥಾಪಕರಲೊಬ್ಬರಾದ ಬುಕ್ಕ ದೊರೆಯು ತನ್ನ ರಾಜ್ಯದಲ್ಲಿನ ಜೈನ ಮತ್ತು ವೈಷ್ಣವರ ನಡುವಿನ ಜಗಳಗಳನ್ನು ವಾದ ವಿವಾದಗಳನ್ನು ತೊಡೆದು ಹಾಕಿ ಅವರು ಒಂದಾಗಿ ಬಾಳುವಂತೆ ಮಾಡಿದನು. ಆತ ಸರ್ವಮತ ಪ್ರಿಯ ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಶ್ರೀ ರಾಮಾನುಜಾಚಾರ್ಯರು ಈ ಬೆಟ್ಟದ ಮೇಲೆ ಕೆಲಕಾಲ ತಂಗಿ ತಮ್ಮ ಭಕ್ತಿ ಪೂರ್ವಕವಾದ ಭಜನೆಗಳಿಂದ ಶ್ರೀ ರಂಗನಾಥನ ದರ್ಶನವನ್ನು ಮಾಡಿಕೊಂಡರೆಂದು ಇಲ್ಲಿಯ ಜನರು ಹೇಳುವುದುಂಟು.

ಇದು ಆ ವಿಭಾಗದ ಪಾಳೆಯಗಾರರಿಗೆ ಸಂಬಂಧಿಸಿದ್ದು, ಆತ ಸ್ವಾಮಿಯ ಅಭಿಷೇಕಕ್ಕಾಗಿ 12 ಕೊಡ ಪಂಚಾಮ್ರೃತದ ವಸ್ತುಗಳನ್ನು ತೆಗೆದುಕೊಂಡು ಬಂದನಂತೆ ಈ ಮೊದಲೇ ತಿಳಿಸಿದಂತೆ ಅಭಿಷೇಕವಾದ ಮೇಲೆ ಎಲ್ಲಾ ವಸ್ತುಗಳೂ ಇಂಗಿ ಹೋಗಿ ಒಂದು ಚಮಚದಷ್ಟು ಮಾತ್ರ ಉಳಿಯಿತಂತೆ ಅದನ್ನೇ ತೀರ್ಥವೆಂದು ಸ್ವೀಕರಿಸಲಾಯಿತು. ಆ ಪಾಳೆಯಗಾರರಿಗೆ ತಾನು 12 ಕೊಡಗಳಷ್ಟು ಪಂಚಾಮೃತ ಅಭಿಷೇಕವನ್ನು ಮಾಡಿಸಿದರೂ ಸ್ವಲ್ಪವೂ ಉಳಿಯಿಲಿಲ್ಲವೆಂದು ಅಸಮಾದಾನವಾಯಿತು. ಅಲ್ಲದೆ ಈವರೆಗೂ ಯಾರು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಷೇಕ ಮಾಡಿಸಿರಲಿಲ್ಲ. ತಾನೇ ಮೊದಲಿಗನೆಂಬ ಗರ್ವವೂ ಉಂಟಾಯಿತು. ಅಂದೇ ರಾತ್ರಿ ಆತನಿಗೊಂದು ಕನಸು ಬಿತ್ತು. ಅದರಲ್ಲಿ ಆತನಿಗೆ ಪಂಚಾಮೃತ ವಸ್ತುಗಳಿದ್ದ 12 ಕೊಡಗಳು ಕಾಣಿಸಿ ಕೊಂಡವಲ್ಲದೆ ಅವುಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸ್ವಾಮಿಯ ಅಪ್ಪಣೆ ಆಯಿತಂತೆ. ಮರುದಿನ ಮುಂಜಾನೆ ಅವನು ದೇವಾಲಯಕ್ಕೆ ಹೋಗಿ ತನ್ನ ತಪ್ಪನ್ನು ಮನ್ನಿಸುವಂತೆ ತನ್ನ ಗರ್ವಕ್ಕೆ ಪ್ರಾಯಶ್ಚಿತ ಮಾಡಿಕೊಂಡನೆಂಬ ಪ್ರತೀತಿ ಇದೆ.
ಕೃಪೆ: ಸಂಚಾರಿ ಟ್ರಾವಲ್ಸ್
*******

ಶ್ರೀ ಚಂದ್ರಲಾ ಪರಮೇಶ್ವರಿ ಮಹಿಮೆ ನಲಾವರದಿಂದ 20 ಕಿ.ಮೀ ಕರ್ನಾಟಕ

ರಾಜಸೇನ ಎಂಬ ರಾಜನಿಗೆ ಚಂದ್ರಲಾ ಎಂಬ ಮಗಳು ಇದ್ದಳು. ರಾಜನು ತನ್ನ ಪ್ರೀತಿಯ ಮಗಳಿಗೆ ವರನನ್ನು ಹುಡುಕಲು ಪ್ರಾರಂಭಿಸಿದನು ಮತ್ತು ಈ ಉದ್ದೇಶಕ್ಕಾಗಿ ‘ಸ್ವಯಂವರ’ ಆಯೋಜಿಸಿದನು. ರಾಜಕುಮಾರರು ನೀರಿನಲ್ಲಿ ಲೋಹದ ಕಂಬದ ಪ್ರತಿಬಿಂಬವನ್ನು ನೋಡಬೇಕಾಗಿತ್ತು ಮತ್ತು ರಾಜಕುಮಾರಿಯ ಕೈಯನ್ನು ಗೆಲ್ಲಲು ಅದನ್ನು ಕೆಳಕ್ಕೆ ತರಬೇಕಾಯಿತು. ಅಂತಹ ರಾಜಕುಮಾರನು ಅಂತಹ ಸವಾಲಿನ ಕೆಲಸವನ್ನು ತೆಗೆದುಕೊಳ್ಳಲು ಸಿದ್ಧರಿರಲಿಲ್ಲ ಮತ್ತು ರಾಜನು ಹತಾಶೆಯಲ್ಲಿದ್ದನು. ಕೆಲವು ದಿನಗಳ ನಂತರ, ಒಬ್ಬ ದೇವಿಯು ತನ್ನ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಮಗಳನ್ನು ಮದುವೆಯಾಗುವವನು ಮರುದಿನ ಪಟ್ಟಣ ತೋಟಕ್ಕೆ ಬರುತ್ತಾನೆ ಎಂದು ಹೇಳಿದನು. ಮರುದಿನ, ನಾರಾಯಣ ಮುನಿ ಎಂಬ ಸುಂದರ ಯುವಕನು ಪಟ್ಟಣಕ್ಕೆ ಬಂದು ರಾಜನಿಂದ ಭರ್ಜರಿ ಸ್ವಾಗತವನ್ನು ನೀಡಿದನು, ಅವನು ಕೆಲಸವನ್ನು ಕೈಗೆತ್ತಿಕೊಂಡು ತನ್ನ ಮಗಳನ್ನು ಮದುವೆಯಾಗುವಂತೆ ವಿನಂತಿಸಿದನು. ಅವರು ಆರಂಭದಲ್ಲಿ ನಿರಾಕರಿಸಿದರೂ, ನಂತರ ಅವರು ಒಪ್ಪಿದರು. ದಂಪತಿಗಳು ವಿವಾಹವಾದರು ಮತ್ತು ಭೀಮಾ ನದಿಯ ದಡದಲ್ಲಿ ವಾಸಿಸುತ್ತಿದ್ದಾಗ ದುಷ್ಟ ರಾಜನ ಕಣ್ಣುಗಳು ಸುಂದರವಾದ ಚಂದ್ರಲಾ ಮೇಲೆ ಬಿದ್ದವು. ರಾಜನ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚಂದ್ರಲಾ 40 ದಿನಗಳ ಕಾಲ ತಪಸ್ಸು ಮಾಡುವುದಾಗಿ ಪ್ರತಿಜ್ಞೆ ಮಾಡಿದ. ನಂತರ ಅವಳು ಸೋಮೇಶ್ವರ ದೇವಸ್ಥಾನಕ್ಕೆ ಹೋಗಿ ರಾಜನ ದುಷ್ಟ ವಿನ್ಯಾಸಗಳಿಂದ ಅಭಯಾರಣ್ಯವನ್ನು ಹುಡುಕಿದಳು. ಏತನ್ಮಧ್ಯೆ, ನಾರಾಯಣ ಮುನಿ, ತನ್ನ ಹೆಂಡತಿ ಕಾಣೆಯಾಗಿದ್ದನ್ನು ನೋಡಿ ಮತ್ತು ಅವಳ ಕಣ್ಮರೆಗೆ ರಾಜನು ಇರಬೇಕು ಎಂದು ing ಹಿಸಿ, ವಿಷಯಗಳನ್ನು ಸರಿಯಾಗಿ ಹೊಂದಿಸುವುದಾಗಿ ಪ್ರತಿಜ್ಞೆ ಮಾಡಿದನು. ಅವರು ಕಾಶ್ಮೀರದ ಬಳಿಯ ಹಿಂಗುಲಾ ಪೀತ್‌ಗೆ ಹೋಗಿ ಹಿಂಗುಲಾಂಬಕೆ ದೇವಿಯನ್ನು ಪ್ರಾರ್ಥಿಸಿದರು. ದೇವಿಯು ಒಂದು ಷರತ್ತಿನ ಮೇಲೆ ಅವನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದನು: ಅವನು ಅವಳ ಮುಂದೆ ನಡೆಯಬೇಕು, ಅವಳ ದಾರಿಯನ್ನು ತೋರಿಸಬೇಕು ಆದರೆ ಅವನು ತನ್ನ ಪಟ್ಟಣವನ್ನು ತಲುಪುವವರೆಗೆ ಹಿಂತಿರುಗಿ ನೋಡಬಾರದು. ನಾರಾಯಣ ಮುನಿ ಒಪ್ಪಿದರು. ದೇವಿಯ ಕಣಕಾಲುಗಳ ಕ್ಲ್ಯಾಂಕಿಂಗ್ ಅವಳು ಅವನನ್ನು ಅನುಸರಿಸುತ್ತಿದ್ದಾಳೆ ಎಂಬುದರ ಏಕೈಕ ಸುಳಿವು. ಆದರೆ ಭೀಮಾ ನದಿಯ ದಡದಲ್ಲಿ, ಪಕ್ಷಿಗಳ ಟ್ವಿಟ್ಟರ್ ಮತ್ತು ನದಿಯ ಈಜುವಿಕೆಯು ಪಾದದ ಶಬ್ದವನ್ನು ಮುಳುಗಿಸಿತು ಮತ್ತು ಅವನು ಅಜಾಗರೂಕತೆಯಿಂದ ತಿರುಗಿದನು. ಕೂಡಲೇ, ದೇವಿಯು ಕಲ್ಲು ಆಗಿ, ಅವಳು ಅಲ್ಲಿಯೇ ಇರುವುದಾಗಿ ಹೇಳಿದಳು. ಅವಳು ಅವನಿಗೆ ತೆಂಗಿನಕಾಯಿಯನ್ನು ಕೊಟ್ಟಳು, ಅದರೊಳಗೆ ಜೇನುನೊಣಗಳಿವೆ ಮತ್ತು ಅವನು ಅದನ್ನು ದುಷ್ಟ ರಾಜನ ಬಳಿಗೆ ತೆಗೆದುಕೊಳ್ಳಬೇಕು. ರಾಜನ ಅರಮನೆಯಲ್ಲಿ ತೆಂಗಿನಕಾಯಿ ಒಡೆದಾಗ, ಅದರಿಂದ ಹಲವಾರು ಸಾವಿರ ಜೇನುನೊಣಗಳು ಹೊರಬಂದು ನದಿಗೆ ಹಾರಿ ಮುಳುಗಿದ ರಾಜನ ಮೇಲೆ ಹಲ್ಲೆ ಮಾಡಿದವು. ಇಂದಿಗೂ ನದಿಯ ಬಳಿ ‘ಸೀತುರಾಜ ಮಧು’ ಇದೆ. ತನ್ನ ತಪಸ್ಸನ್ನು ಪೂರ್ಣಗೊಳಿಸುವ ಮೊದಲೇ ಚಂದ್ರಲಾ ದೇವರೊಂದಿಗೆ ಒಬ್ಬಳಾದಳು. ಈ ದಂತಕಥೆಯ ನೆನಪಿಗಾಗಿ, ಪ್ರತಿವರ್ಷ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಚಂದ್ರಲ ಪರಮೇಶ್ವರಿ ದೇವಿ ಮಹೋತ್ಸವವನ್ನು ನಡೆಸಲಾಗುತ್ತದೆ. ಈ ದೇವಾಲಯವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಇದನ್ನು 1985 ರಲ್ಲಿ ನವೀಕರಿಸಲಾಯಿತು. ಸ್ಥಳೀಯವಾಗಿ ‘ಸನ್ನತಿ’ ಎಂದು ಕರೆಯಲ್ಪಡುವ ಭಕ್ತರು ನಲಾವರದಿಂದ 20 ಕಿ.ಮೀ ದೂರದಲ್ಲಿರುವ ಈ ಪುರಾತನ ದೇವಾಲಯದ ದರ್ಶನಕ್ಕಾಗಿ ರಾಜ್ಯದ ಎಲ್ಲೆಡೆಯಿಂದ ಬರುತ್ತಾರೆ.

*******


ನವಲಿ‌ ಶ್ರೀ ಭೋಗಾಪುರೇಶನ  ರಥೋತ್ಸವ ಮತ್ತು ಜಾತ್ರೆ.

ಇಂದು ಪಾಂಡವರ ಮರಿಮೊಮ್ಮಗನಾದ ಶ್ರೀ ಜನುಮೇಜಯ ಮಹಾರಾಜ ಪ್ರತಿಷ್ಠಾಪಿಸಿದ ಐತಿಹಾಸಿಕ ಶ್ರೀ ನವಲಿ ಭೋಗಪುರೇಶ ಜಾತ್ರಾ ಮಹೋತ್ಸವ.

ನವಲಿ ಗ್ರಾಮ ಕೊಪ್ಪಳ ಜಿಲ್ಲೆಯ, ಕನಕಗಿರಿ ತಾಲೂಕಿನಲ್ಲಿದ್ದು ತನ್ನದೇ ಆದ ಶ್ರೇಷ್ಠತೆತನ್ನ ಪಡೆದುಕೊಂಡಿದೆ. ಈ ಪ್ರಾಣದೇವರು ಜಾಗೃತನಾಗಿ ನಿಂದು ಭಕ್ತರ ಮನೋರಥವನ್ನ ಇಂದಿಗೂ ನೆರವೇರಿಸುತ್ತಿದ್ದಾನೆ.

ಶ್ರೀಮದ್ಭೋಗಾಪುರೇಶೋ ಭವತು ಭವಗುರುರ್ಭೂತಯೇ ಮೇ ದಯಾಲುಃ |
ಜ್ಞಾನಂ ಭಕ್ತಿಂ ವಿರಕ್ತಿಂ ಪ್ರದಿತ ಶಮದಮಾದ್ಯಂಗಜಾತಂ ಸುಖಾಯ ||
**

ಹಿಂದೂ ಧರ್ಮದಲ್ಲಿ ಭಿನ್ನವಾದ ಅಂದರೆ ತುಂಡಾದ,ಮುಕ್ಕಾದ ವಿಗ್ರಹಗಳನ್ನ ಪೂಜಿಸುವುದು ನಿಷೇಧ.

ಆದರೆ ಇಂತಹ ಭಿನ್ನವಾದ ವಿಗ್ರಹದ ಪೂಜೆಯು ಎರಡು ಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

 ಭೋಗಾಪುರೇಶನೆಂಬ ಹೆಸರಿನಿಂದ ಈ ರೀತಿಯಲ್ಲಿ ಪೂಜೆಗೊಳ್ಳುತ್ತಿರುವ ಜನಮೇಜಯ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಹನುಮಂತ ದೇವರ ದೇವಸ್ಥಾನವು ನಮ್ಮ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿದೆ.

ಸುಮಾರು ಕ್ರಿ.ಶ.1822 ರಲ್ಲಿ ಕಳ್ಳರು,ಈ ದೇವಸ್ಥಾನವು ವಿಜಯನಗರದ ಆಳ್ವಿಕೆಯಲ್ಲಿ ಜೀರ್ಣೋದ್ಧಾರಗೊಂಡಿದ್ದರಿಂದ ದೇವಸ್ಥಾನದಲ್ಲಿ ನಿಧಿ ಅಡಗಿಸಿಟ್ಟಿರಬೇಕೆಂಬ ಅನುಮಾನದಿಂದ ಗರ್ಭಗುಡಿಯನ್ನು ಅಗೆದಾಗ ಯಾವುದೇ ನಿಧಿಯು ದೊರಕದೇ,ಕೋಪದಿಂದ ಹನುಮಂತ ದೇವರ ವಿಗ್ರಹವನ್ನೇ ಒಡೆದು ಚೂರು ಮಾಡಿ ದೇವಸ್ಥಾನದ ಹಿಂದೆ ಹರಿಯುತ್ತಿದ್ದ ಹಳ್ಳದಲ್ಲಿ ಎಸೆದು ಹೋಗುತ್ತಾರೆ.

ಶ್ರೀ ಭೋಗಾಪುರೇಶನ ಅರ್ಚಕರಾದ ಶ್ರೀ ಹಿರೆ ಕೂರ್ಮಾಚಾರ್ಯರು ಮರುದಿನ ಪೂಜೆಗೆಂದು ಬಂದಾಗ ಭೋಗಾಪುರೇಶನ ವಿಗ್ರಹ ಕಾಣದೇ ದಿಗ್ಭ್ರಾಂತರಾಗಿ ಕಣ್ಮುಚ್ಚಿ ಕುಳಿತಾಗ,ಹಳ್ಳದಲ್ಲಿ ವಿಗ್ರಹದ ಚೂರುಗಳು  ಇರುವ ಸೂಚನೆಯನ್ನ ಹನುಮಂತ ದೇವರು ನೀಡುತ್ತಾನೆ.
ನಂತರದಲ್ಲಿ ಊರಿನ ಹಿರಿಯರು ಹಾಗೂ ಭೋಗಾಪುರೇಶನ ಭಕ್ತ ಜನರೊಡನೆ ಹಳ್ಳದ ಮಡುವಿನಲ್ಲಿ ನೋಡಿದಾಗ ಭೋಗಾಪುರೇಶನ ಅನುಗ್ರಹದಿಂದ ವಿಗ್ರಹದ ಚೂರುಗಳು ನೀರಿನಲ್ಲಿ ತೇಲುತ್ತಿದ್ದವು.
ಭೋಗಾಪುರೇಶನ ಸೂಚನೆಯಂತೆ ಅವೆಲ್ಲ ಚೂರುಗಳನ್ನು ತಂದು ಮೊದಲಿನಂತೆ ಜೋಡಿಸಿ,೧೧ ದಿನಗಳವರೆಗೆ ಗರ್ಭಗುಡಿಯ ಬಾಗಿಲನ್ನು ತೆರೆಯದೆ,ಹೊರಗಿನಿಂದಲೇ ಪೂಜೆ ನೈವೇದ್ಯಗಳನ್ನು ಸಮರ್ಪಿಸಬೇಕೆಂದು ಆಜ್ಞೆಯಾಯಿತು. 
ಭೋಗಾಪುರೇಶನ ಆಜ್ಞೆಯಂತೆ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಬೆಳಗಾವಿಯ ಪಾಂಘ್ರಿ ಆಚಾರ್ಯರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ಹೋಮ ಹವನಾದಿಗಳನ್ನು ನಿರ್ವಿಘ್ನವಾಗಿ ಮಾಡುತ್ತಿರಲು,ಹತ್ತನೆಯ ದಿನ ಕೊಡಗಲಿ ಗ್ರಾಮದ ಭಕ್ತರೊಬ್ಬರು ೩ ದಿನಗಳ ಸತತ ಪ್ರಯಾಣ ಮಾಡಿ ಭೋಗಾಪುರೇಶನ ದರ್ಶನಕ್ಕೆ ಬಂದಿರುತ್ತಾರೆ.
ನಾನು ಭೋಗಾಪುರೇಶನ ದರ್ಶನ ಮಾಡಬೇಕು ಗರ್ಭಗುಡಿಯ ಬಾಗಿಲು ತೆರೆಯಿರಿ ಅಂತ ಅರ್ಚಕ ಕೂರ್ಮಾಚಾರ್ಯರಲ್ಲಿ ಒತ್ತಾಯಿಸುತ್ತಾರೆ.
ಹನ್ನೊಂದು ದಿನಗಳ ಕಾಲ ಬಾಗಿಲು ತೆರೆಯದಂತೆ ಭೋಗಾಪುರೇಶನ ಆಜ್ಞನೆಯಾಗಿದೆ ಎಂದು ಹೇಳಿದರೂ,ಅವರು ಒಪ್ಪದೇ ದೇವರ ದರ್ಶನವಿಲ್ಲದೇ ಒಂದು ಹನಿ ನೀರನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಹಠ ಹಿಡಿಯುತ್ತಾರೆ.ಅದಾಗಲೇ ಆ ಬ್ರಾಹ್ಮಣ ಮೂರು ದಿನಗಳಿಂದ ಆಹಾರವನ್ನೇ ಸ್ವೀಕರಿಸಿದ್ದಿಲ್ಲವಾದ್ದರಿಂದ ಅವರ ದೇಹದ ಪರಿಸ್ಥಿತಿ ಕಳವಳಕಾರಿಯಾಗಿದ್ದರಿಂದ,ಅವರ ಜೀವಕ್ಕೆ ಅಪಾಯವಾದಲ್ಲಿ ತಮಗೆ ಬ್ರಹ್ಮಹತ್ಯಾ ದೋಷ ಬಂದೀತೆಂಬ ಭಯದಿಂದ ಅರ್ಚಕರು ಒಂದು ದಿನ ಮೊದಲೇ ಬಾಗಿಲನ್ನು ತೆರೆದು ದರ್ಶನ ಮಾಡಿಸುತ್ತಾರೆ.
ಒಂದು ದಿನ ಮೊದಲೇ ಬಾಗಿಲು ತೆರೆದಿದ್ದರಿಂದ ಕೆಲವೊಂದು ಕಡೆ ವಿಗ್ರಹವು ಹೊಂದಿಕೊಳ್ಳದೇ ಭಿನ್ನವಾಗಿ ಉಳಿದುಬಿಡುತ್ತದೆ.
ಭಿನ್ನ ವಿಗ್ರಹವು ಪೂಜೆಗೆ ಅರ್ಹವಲ್ಲ ಎಂದು ಅರ್ಚಕರು ಚಿಂತಾಕ್ರಾಂತರಾದಾಗ,
ಶ್ರೀ ಭೋಗಾಪುರೇಶನು "ನನ್ನ ವಿಗ್ರಹವು ಭಿನ್ನವಾದರೂ ಕೂಡ ನನ್ನ ಸನ್ನಿಧಾನ ಈ ಶಿಲೆಯಲ್ಲಿ ಇರುತ್ತದೆ.ಹಾಗಾಗಿ ನಿತ್ಯದಂತೆ ಪೂಜೆಗಳು ನಡೆಯಲಿ" ಎಂದು ಸೂಚನೆ ಕೊಡುತ್ತಾನೆ.
ಹೀಗಾಗಿ ಅಂದಿನಿಂದಲೂ ಈ ಭಿನ್ನ ಮೂರ್ತಿಗೆ ಪೂಜೆ,ನೈವೇದ್ಯ ನಡೆಯತ್ತಲಿದೆ.

ಒಂದು ಬಾರಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಪರಾಯಣ ತೀರ್ಥರು ಚಾತುರ್ಮಾಸ ಸಮಯದಲ್ಲಿ ಭೋಗಾಪುರೇಶನ ದೇವಸ್ಥಾನಕ್ಕೆ ಬಂದಾಗ ಅರ್ಚಕರು ಭಿನ್ನ ಮೂರ್ತಿ ಪೂಜೆ ಮಾಡಿದುದಲ್ಲದೇ,ಶಾಕವ್ರತದಲ್ಲಿ ತೆಂಗಿನಕಾಯಿಯನ್ನು ಸಮರ್ಪಣೆ ಮಾಡಿದುದನ್ನು ನೋಡಿ,ಇದು ಶಾಸ್ತ್ರಕ್ಕೆ ವಿರೋಧವಾದುದರಿಂದ ಅರ್ಚಕ ಮನೆತನದವರಿಗೆ ಬಹಿಷ್ಕಾರ ಹಾಕುತ್ತಾರೆ.
ಭೋಗಾಪುರೇಶನ ಆಜ್ಞೆಯಂತೆ ಮಾಡುತ್ತಿರುವುದಾಗಿ ಹೇಳಿದರೂ ಕೇಳಲಿಲ್ಲ.ಭೋಗಾಪುರೇಶನಿಗೆ ಶ್ರೀಗಳು ಮಂಗಳಾರತಿಯನ್ನೂ ಮಾಡಲಿಲ್ಲ.

ಅಂದು ರಾತ್ರಿ ದೇವಸ್ಥಾನದಲ್ಲಿ ತಂಗಿದ್ದ ಶ್ರೀಗಳಿಗೆ ಸ್ವಪ್ನದಲ್ಲಿ ಭೋಗಾಪುರೇಶನು "ನನ್ನ ಆಜ್ಞನೆಯಂತೆ ಇಲ್ಲಿ ನನಗೆ ಪೂಜೆಗಳು ನಡೆಯುತ್ತಿದೆ" ಎಂದು ಹೇಳಲಾಗಿ,ತಮ್ಮ ತಪ್ಪನ್ನು ಅರಿತ ಶ್ರೀ ಸತ್ಯಪರಾಯಣತೀರ್ಥರು ಬಹಿಷ್ಕಾರವನ್ನು ಹಿಂತೆಗೆದುಕೊಂಡು ,ಪೂಜೆ,ನೈವೇದ್ಯವನ್ನು ಮಾಡಿ ಭೋಗಾಪುರೇಶನ ಶ್ಲೋಕವನ್ನು ರಚಿಸಿದರು.

ಶ್ರೀ ಭೋಗಾಪುರೇಶ ಧ್ಯಾನ‌ ಶ್ಲೋಕ

ಪೂರ್ವಂಭಿನ್ನಕಳೇವರಾಃ ಸಮನಸಾಮೀಶಾಃ ನಪೂಜ್ಯಾ ಇತಿ |
ಪ್ರೋತ್ಥಾಂತಾಂಚ ಜನಶ್ರುತಿಂ ಸುವಿತಥಾಂ ಕರ್ತುಂ ಸಮರ್ಥೋವಿಭುಃ ||

ಶ್ರೀ ಮದ್ಭೋಗಪುರಾಧಿಪೋಹಿ ಹನೂಮಾನ್ ಮಾಹಾತ್ಮ್ಯಮತ್ಯದ್ಭುತಂ|
ಭಕ್ತಾನಾಂ ಪ್ರಕಟಂ ವಿಧಾತುಮನಿಶಂ ಛಿನ್ನಾಂಗವತ್ ಸಂಬಭೌ ||

(ಶ್ರೀ ಸತ್ಯಪರಾಯಣತೀರ್ಥರು, ಉತ್ತರಾದಿಮಠ ವಿರಚಿತ)

ಶ್ರೀ ಭೋಗಾಪುರೇಶನ ರಥೋತ್ಸವವು ಪ್ರತಿ ವರ್ಷ ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಜರಗುವುದು.
ಅಕಸ್ಮಾತ್ ತಿಥಿಗಳು ಏರುಪೇರಾದರೂ ಯುಗಾದಿ ಪಾಡ್ಯದ ಹಿಂದಿನ ಅಮಾವಾಸ್ಯೆಯು ಯಾವ ವಾರ ಇರುತ್ತದೋ ಮುಂದೆ ಅದೇ ವಾರದಂದು ರಥೋತ್ಸವ ವಿಜೃಂಭಣೆಯಿಂದ ಜರಗುತ್ತದೆ.

ಇವತ್ತು ಭೋಗಾಪುರೇಶನ ರಥೋತ್ಸವ ನಡೆಯಬೇಕಾಗಿತ್ತು.ಆದರೆ ಕೊರೊನ ವೈರಸ್ಸಿನ ಕಾರಣದಿಂದ ಜಾತ್ರಾ,ರಥೋತ್ಸವವನ್ನು ಮುಂದೂಡಲಾಗಿದೆ.

ನವಲಿ ಭೋಗಾಪುರೇಶ ದೇವಸ್ಥಾನವು ಗಂಗಾವತಿಯಿಂದ 40 ಕಿ.ಮೀ ಹಾಗೂ ಕಾರಟಗಿಯಿಂದ 20 ಕಿ.ಮೀ ದೂರದಲ್ಲಿರುವುದು.


ಬಹಳ ಜಾಗೃತನಾದ ಭೋಗಾಪುರೇಶನು ಭಕ್ತಿಯಿಂದ ಬೇಡಿದ ವರವನೀಯುವನು.
******


ಪಾಂಡವರ ಮರಿಮೊಮ್ಮಗನಾದ, ಜನಮೇಜಯ ರಾಜನಿಂದ 
ಸಪ್ತ ಋಷಿಗಳ ದ್ವಾರಾ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಭೋಗಾಪುರೇಶನ ಚರಿತ್ರೆ.. 
ಪರೀಕ್ಷಿತರಾಜನು ತಕ್ಷಕನಿಂದ ಹತನಾದ್ದರಿಂದ ಕೋಪಗೊಂಡ ಜನಮೇಜಯರಾಜನು ಸಾವಿರಾರು ಸರ್ಪ(ಹಾವು)ಗಳನ್ನು ಹತ್ಯೆ ಮಾಡಿ, ಸರ್ಪದೋಷಕ್ಕೆ ತುತ್ತಾಗುತ್ತಾನೆ.. 
ಈ ಸರ್ಪದೋಷದ ನಿವಾರಣೆಗಾಗಿ ಸಪ್ತ ಋಷಿಗಳು
ಶ್ರೀ ಹನುಮಂತದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲು ಆಜ್ಞೆ ಮಾಡುತ್ತಾರೆ. 
ಜನಮೇಜಯ ರಾಜನು ಸಪ್ತ ಋಷಿಗಳ ಆಜ್ಞೆಯಂತೆ ಅಖಂಡ ಭಾರತದಲ್ಲಿ ಶ್ರೀ ಹನುಮಂತದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾನೆ. ಅದರಲ್ಲಿ ನಮ್ಮ ಕುಲಸ್ವಾಮಿಯಾದ ಶ್ರೀ ಭೋಗಾಪುರೇಶನು ಒಬ್ಬನು.. 
'ವಾಯುದೇವರು ಹರಿಯನ್ನು ಬಿಟ್ಟು ಒಂದು ಕ್ಷಣವು ಇರಲಾರರು. ಅದರಂತೆ ಶ್ರೀ ಭೋಗಾಪುರೇಶನು ಸಹ ಮುದ್ದಾದ ಶ್ರೀ ಗೋಪಾಲಕೃಷ್ಣ, ಶ್ರೀ ಪಾಂಡುರಂಗವಿಟ್ಠಲ, ಶ್ರೀ ರುಕ್ಮಿಣೀ ಸಹಿತ ನವಲಿಯಲ್ಲಿ ನೆಲೆಸಿದ್ದಾನೆ.". "ಭೋಗಾಪುರೇಶನ ಬಲಭಾಗದಲ್ಲಿ ಶ್ರೀ ರುಕ್ಮಿಣೀ ಸಹಿತ ಪಾಂಡುರಂಗ ವಿಟ್ಠಲ ದೇವರು ಹಾಗೂ ಎಡ ಭಾಗದಲ್ಲಿ ಶ್ರೀ ಗೋಪಾಲಕೃಷ್ಣ ದೇವರು ಸನ್ನಿಹಿತರಾಗಿದ್ದಾರೆ.." 
ಭೋಗಾಪುರೇಶನ ದೇವಸ್ಥಾನದ ಗರ್ಭಗುಡಿ ಬಿಟ್ಟು ಉಳಿದ ಪ್ರಾಂಗಣವು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡಿದೆ.
ಸುಮಾರು ೧೮೨೨ ರಲ್ಲಿ ಕಳ್ಳರು , ಭೋಗಾಪುರೇಶ ದೇವಸ್ಥಾನವು ವಿಜಯನಗರದ ಆಳ್ವಿಕೆಯಲ್ಲಿ ಜೀರ್ಣೋದ್ಧಾರ ಆಗಿದ್ದು ಎಂದರಿತು, ದೇವಸ್ಥಾನದಲ್ಲಿ ನಿಧಿ ಅಡಗಿಸಿಟ್ಟಿರಬಹುದು ಎಂದು ನಿರೀಕ್ಷಿಸಿ, ಕಳ್ಳತನದ ದುರಾಸೆಯಿಂದ ದೇವಸ್ಥಾನಕ್ಕೆ ಬರುತ್ತಾರೆ... 
ಅವರಿಗೆ ಎಲ್ಲಿಯೂ ನಿಧಿ ಸಿಗದೇ ಇದ್ದಾಗ, ಶ್ರೀ ಭೋಗಾಪುರೇಶನ ವಿಗ್ರಹವನ್ನು ಒಡೆದು, ಚೂರು ಚೂರು ಮಾಡಿ, ಆಗಿನ ಕಾಲದಲ್ಲಿ ದೇವಸ್ಥಾನದ ಹಿಂದೆ ಹರಿಯುತ್ತಿದ್ದ ಹಳ್ಳದಲ್ಲಿ ಹಾಕಿದ್ದರು... 
ನಮ್ಮ ಪೂರ್ವಜರಾದ, 
ಶ್ರೀ ಭೋಗಾಪುರೇಶನ ಅರ್ಚಕರಾದ 
ಶ್ರೀ ಹಿರೆ ಕೂರ್ಮಾಚಾರ್ಯರು ಮರುದಿನ ಪೂಜೆಗೆಂದು ದೇವಸ್ಥಾನಕ್ಕೆ ಬರಲು, ಅಲ್ಲಿ ಭೋಗಾಪುರೇಶನ ವಿಗ್ರಹ ಕಾಣದೇ ದಿಗ್ಭ್ರಾಂತರಾಗಿ, ಆ ಕ್ಷಣ ಧ್ಯಾನಮಗ್ನರಾಗಿ ಕುಳಿತಾಗ ಶ್ರೀ ಭೋಗಾಪುರೇಶನಿಂದ ತನ್ನ ವಿಗ್ರಹದ ಚೂರುಗಳನ್ನು ಹಳ್ಳದಲ್ಲಿ ಹಾಕಿದ ಸೂಚನೆ ಲಭ್ಯವಾಗುತ್ತದೆ.. 
ಹಾಗೆಯೇ  
ಅದೇ ಪ್ರಕಾರ ಕಾರ್ಯಪ್ರವೃತ್ತರಾದ ಅರ್ಚಕರು, ಊರಿನ ಪ್ರಮುಖರು ಹಾಗೂ ಶ್ರೀ ಭೋಗಾಪುರೇಶನ ಭಕ್ತಜನರು, ಆ ಮಡುವಿನಲ್ಲಿ ಹೋಗಿ ನೋಡಿದಾಗ ಶ್ರೀ ಭೋಗಾಪುರೇಶನ ಅನುಗ್ರಹದಿಂದ ವಿಗ್ರಹದ ಚೂರುಗಳು ನೀರಿನಲ್ಲಿ ತೇಲುತ್ತಿದ್ದವು...
ಕಲ್ಲು ನೀರಿನಲ್ಲಿ ತೇಲುವ ದು ಸಾಧ್ಯ ವೇ??
ಹನುಮಂತ ದೇವರ ಲೀಲೆ ಅಪಾರ..
ವಿಗ್ರಹದ ಚೂರುಗಳನ್ನು ತಂದು, ಭೋಗಾಪುರೇಶನ ಸೂಚನೆಯಂತೆ ಗೋಮಯ, ಗೋಘೃತ, ಮಧು ಇವುಗಳಿಂದ ವಿಗ್ರಹವನ್ನು ಮೊದಲಿನಂತೆ ಜೋಡಿಸಿ,೧೧ದಿನಗಳವರೆಗು ಗರ್ಭಗುಡಿಯ ಬಾಗಿಲು ತೆಗೆಯದೇ ಹೊರಗಿನಿಂದಲೆ ಪೂಜೆ ನೈವೇದ್ಯ ಗಳನ್ನು ಸಮರ್ಪಿಸಿ, ಎಂದು ಭೋಗಾಪುರೇಶನ ಆಜ್ಞೆಯಂತೆ ಗರ್ಭಗುಡಿಯ ಬಾಗಿಲನ್ನು ಮುಚ್ಚಿದರು.. 
ಹೊರಗಡೆ ಶ್ರೀ ಪಾಂಘ್ರಿ ಆಚಾರ್ಯರ ಸಮಕ್ಷಮದಲ್ಲಿ ಸರ್ವಮೂಲ, ಭಾಗವತಗಳ ಪ್ರವಚನ, ಪಾರಾಯಣಾದಿಗಳು, ಪವಮಾನ ಮುಂತಾದ ಹೋಮಗಳು ನಡೆಯುತ್ತಿದ್ದವು. ಇದೇ ರೀತಿ ನಿರ್ವಿಘ್ನವಾಗಿ ೧೦ ದಿನಗಳು ಸಾಗಿರಲು, 
೧೦ನೇ ದಿನ ಕೊಡಗಲಿ ಗ್ರಾಮದ ಭಕ್ತರೊಬ್ಬರು ಭೋಗಾಪುರೇಶನ ದರ್ಶನಕ್ಕೆ ಬಂದರು. 
೩ ದಿನಗಳ ಸತತ ಪ್ರಯಾಣದಿಂದ, ಹಸಿವೆ,ನೀರಡಿಕೆಗಳಿಂದ ಬಳಲಿದ ಬ್ರಾಹ್ಮಣರು ಭೋಗಾಪುರೇಶನ ದರ್ಶನ ಮಾಡಿಸಲು ಒತ್ತಾಯಿಸಿದರು... 
ಅರ್ಚಕರು   ಬಂದಂತಹ ಬ್ರಾಹ್ಮಣರಿಗೆ  ಇಲ್ಲಿ ನಡೆದ ಘಟನೆಯನ್ನು ಸವಿಸ್ತಾರವಾಗಿ ತಿಳಿಸಿ, ೧೧ ದಿನಗಳವರೆಗೆ ಬಾಗಿಲು ತೆಗೆಯಕೂಡದೆಂದು ಭೋಗಾಪುರೇಶನ ಆಜ್ಞೆಯಾಗಿದೆ, ತಾವು ತೀರ್ಥಪ್ರಸಾದ ಸ್ವೀಕರಿಸಿ, ೧ ದಿನ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯಿರಿ, ನಾಳೆ ದೇವರ ದರ್ಶನ ಮಾಡಿರಿ ಎಂದು ಎಷ್ಟು ಪರಿಯಾಗಿ ಹೇಳಿದರೂ, 
ಬಂದಂತಹ ಬ್ರಾಹ್ಮಣರು ಭೋಗಾಪುರೇಶನ ದರ್ಶನವಿಲ್ಲದೇ ಒಂದು ಹನಿ ನೀರನ್ನೂ ಕುಡಿಯುವುದಿಲ್ಲ ಎಂದು ಹೇಳಿದರು... ಬ್ರಾಹ್ಮಣರ ಪರಿಸ್ಥಿತಿ ತುಂಬ ಹದಗೆಟ್ಟಿತ್ತು. ಅರ್ಚಕರು ಯೋಚಿಸಿ "ಒಂದು ವೇಳೆ  ಬ್ರಾಹ್ಮಣ ಸತ್ತರೆ ಇನ್ನೂ ಬ್ರಹ್ಮಹತ್ಯೆದೋಷಕ್ಕೆ ಗುರಿಯಾಗಬೇಕಾದೀತು,!! ದೇವರ ಇಚ್ಛೆ ಏನಿದೇಯೋ?? ಎಂದುಕೊಂಡು, ನೆರೆದ ಎಲ್ಲ ಬ್ರಾಹ್ಮಣರ, ಪ್ರಮುಖರ ಒಪ್ಪಿಗೆ ಮೇರೆಗೆ ಗರ್ಭ ಗುಡಿ ಬಾಗಿಲು ತೆಗೆದು ಬಂದ ಬ್ರಾಹ್ಮಣರಿಗೆ ಭೋಗಾಪುರೇಶನ ದರ್ಶನ ಮಾಡಿಸಿದರು.."..
ಆದರೆ ಭೋಗಾಪುರೇಶನ ಆಜ್ಞೆಯಂತೆ ೧೧ ದಿನಗಳವರೆಗೆ ಬಾಗಿಲು ಮುಚ್ಚಿದೆ., 
೧ ದಿನ ಮುಂಚಿತವಾಗಿ ಬಾಗಿಲು ತೆಗೆದುದ್ದರಿಂದ ಕೆಲವೊಂದು ಕಡೆ ವಿಗ್ರಹ ಹೊಂದಿಕೊಳ್ಳದೇ ಭಿನ್ನವಾಗಿ ಉಳಿದಿತ್ತು. ಭಿನ್ನ ಮೂರ್ತಿ ಪೂಜೆಗೆ ಅರ್ಹವಲ್ಲ ಎಂದು ಅರ್ಚಕರು ಮತ್ತೆ ಚಿಂತಾಕ್ರಾಂತರಾದರು... 
ಆಗ ಮತ್ತೆ ಭೋಗಪುರೇಶನು
"ನನ್ನ ವಿಗ್ರಹ ಭಿನ್ನವಾದರೂ ಸಹ ನನ್ನ ಸನ್ನಿಧಾನ ಈ ಶಿಲೆಯಲ್ಲಿ ಇರುವುದು, ಯಥಾಪ್ರಕಾರ ನಿತ್ಯ ಪೂಜಾದಿಗಳು ಎಂದಿನಂತೆ ಮುಂದುವರೆಸಿ. ನನ್ನ ವಿಗ್ರಹ ಭಿನ್ನ ಆದುದರಿಂದ ನಾನು ಇನ್ನು ಮೇಲೆ ಪಥ್ಯದಲ್ಲಿ ಇರುತ್ತೇನೆ, ತುಪ್ಪದ ನಂದಾದೀಪ, ತುಪ್ಪದಲ್ಲಿ ಕರಿದ ಕಡಬು ಅಥವಾ ಕುದಿಸಿದ ಕಡಬು ನೈವೇದ್ಯ ಮಾಡಿರಿ" ಎಂದು ಸೂಚನೆ ಕೊಟ್ಟ. 
ಇಂದಿಗೂ ಗರ್ಭಗುಡಿಯಲ್ಲಿ ತುಪ್ಪದ ನಂದಾದೀಪ ಮತ್ತು ಪುರುಷರು ಮಾಡಿದ ಅಡಿಗೆ ನೈವೇದ್ಯ ಸ್ವಾಮಿಗೆ.
ಇನ್ನೊಂದು ವೈಶಿಷ್ಟ್ಯವೆಂದರೆ "ಭೋಗಾಪುರೇಶನಿಗೆ ಚಾತುರ್ಮಾಸ್ಯದ ಶಾಕವ್ರತದಲ್ಲಿ ತೆಂಗು ನೈವೇದ್ಯ ಮಾಡುವುದು ಮೊದಲಿಂದಲೂ ಬಂದ ಸಂಪ್ರದಾಯ.."
🙏
"ಇರುವದಿಂದಿಗು ಹೀಗೆ ಮರುತದೇವನ ಮಹಿಮೆ|" "ವರ್ಣಿಸಲು ಸಾಧ್ಯವೇ ಹುಲು ಮನುಜನಿಗೆ||"
ಅದೇ ರೀತಿ ನಿತ್ಯದಲ್ಲಿ ನಿರ್ವಿಘ್ನವಾಗಿ ಪೂಜಾದಿಗಳು ನಡೆದಿರಲು,
ಒಂದು ಸಲ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಪರಾಯಣ ತೀರ್ಥರು ಚಾತುರ್ಮಾಸ್ಯದ ಶಾಕವ್ರತದ ಸಂದರ್ಭದಲ್ಲಿ ಭೋಗಾಪುರೇಶನ ದೇವಸ್ಥಾನಕ್ಕೆ ಬಂದರು.. ಅವಾಗ್ಗೆ ಅಲ್ಲಿದ್ದ ಅರ್ಚಕರಾದ ಶ್ರೀ ಹಿರೇ ಕೂರ್ಮಾಚಾರ್ಯರು ಭೋಗಾಪುರೇಶನ ಭಿನ್ನ ಮೂರ್ತಿ ಪೂಜೆ ಮಾಡುತ್ತಿರುವುದನ್ನು ಹಾಗೂ ಶಾಕವ್ರತದಲ್ಲಿ ತೆಂಗನ್ನು ಸಮರ್ಪಣೆ ಮಾಡುವುದನ್ನು ನೋಡಿ, ಶ್ರೀಗಳು ಭಿನ್ನ ಮೂರ್ತಿ ಪೂಜೆ ಹಾಗೂ ಶಾಕವ್ರತದಲ್ಲಿ ತೆಂಗಿನಕಾಯಿ ಉಪಯೋಗಿಸುವುದು ಎರಡೂ ಶಾಸ್ತ್ರಕ್ಕೆ ವಿರುದ್ಧ ಎಂದು ಅರ್ಚಕರಿಗೆ ಬಹಿಷ್ಕಾರ ಹಾಕಿದರು. ಅರ್ಚಕರು ಶ್ರೀಗಳವರಿಗೆ "ಇದರಲ್ಲಿ ನನ್ನ ಸ್ವಂತ ಅಭಿಪ್ರಾಯ ಏನೂ ಇಲ್ಲ, ಎಲ್ಲಾ ಭೋಗಾಪುರೇಶನ ಆಜ್ಞೆ ಮೇರೆಗೆ ನಡೆಯಿತ್ತಿದೆ" ಎಂದು ಎಷ್ಟು  ಪರಿಯಾಗಿ ಹೇಳಿದರೂ
ಶ್ರೀಗಳವರು ಅರ್ಚಕರಿಗೆ ಹಾಕಿದ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಲಿಲ್ಲ... ಶ್ರೀಗಳವರು ಸಂಸ್ಥಾನ ಪೂಜೆ ಯನ್ನುಮಾಡಿದರು ಮತ್ತು, ಶ್ರೀಭೋಗಾಪುರೇಶನಿಗೆ ಮಂಗಳಾರತಿಯನ್ನು ಸಹ ಮಾಡಲಿಲ್ಲ.. ಅನಿವಾರ್ಯವಾಗಿ ಶ್ರೀಗಳವರಿಗೆ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುವ ಪ್ರಸಂಗ ಆ ದಿನ ಬಂತು.. 
ರಾತ್ರಿ ವಿಶ್ರಾಂತಿಯಲ್ಲಿದ್ದಾಗ ಶ್ರೀಗಳವರಿಗೆ ಭೋಗಾಪುರೇಶನು ಸ್ವಪ್ನದಲ್ಲಿ ಬಂದು 
"ಇಲ್ಲಿ ನನ್ನ ಆಜ್ಞೆ ಪ್ರಕಾರವೇ ಪೂಜೆಗಳು ನಡೆಯುತ್ತಿವೆ, ಅದರಲ್ಲಿ ಅರ್ಚಕರ ಯಾವ ತಪ್ಪು ಇಲ್ಲ, ಮುಂದೆ ಕೂಡ ಇದೇ ರೀತಿ ಪೂಜಾದಿಗಳು ನಡೆಯುತ್ತವೆ" ಎಂದು ಅಜ್ಞೆ ಮಾಡಿದ.. 
ಭೋಗಾಪುರೇಶನ ಸೂಚನೆ ಮೇರೆಗೆ ಶ್ರೀಗಳವರು ಅರ್ಚಕರಿಗೆ ಹಾಕಿದ್ದ ಬಹಿಷ್ಕಾರವನ್ನು ಹಿಂತೆಗೆದುಕೊಂಡು, ಭೋಗಾಪುರೇಶನ ಪೂಜೆ ಮುಂದುವರೆಸಿಕೊಂಡು ಹೋಗಿ ಎಂದು ಅನುಗ್ರಹ ಮಾಡಿದರು.. 
ಶ್ರೀಗಳವರು ತಾವೂ ಸಹ ಭೋಗಾಪುರೇಶನಿಗೆ ಪೂಜೆ, ಮಂಗಳಾರತಿ ಮಾಡಿ, ಭೋಗಾಪುರೇಶನ ಶ್ಲೋಕವನ್ನು ರಚಿಸಿದರು.
ಶ್ರೀ ಸತ್ಯಪರಾಯಣತೀರ್ಥರು ವಿರಚಿಸಿದ ಭೋಗಾಪುರೇಶನ ಶ್ಲೋಕ...
👇👇
ಪೂರ್ವಂ ಭಿನ್ನ ಕಳೇವರಾಃ ಸುಮನಸಾಮೀಶಾಃ ನ ಪೂಜ್ಯಾ ಇತಿ |
ಪ್ರೋತ್ಥಾಂತಾಂಚ ಜನಶ್ರುತಿಂ ಸುವಿತತಾಂ ಹರ್ತುಂ ಸಮರ್ಥೋವಿಭುಃ |
ಶ್ರೀಮದ್ ಭೋಗಪುರಾಧಿಪೋಹಿ ಹನುಮಾನ್ ಮಾಹಾತ್ಮ್ಯಮದ್ಭುತಂ |
ಭಕ್ತಾನಾಂ ಪ್ರಕಟ ವಿಧಾತು ಮನಿಶಂ ಛಿನ್ನಾಂಗವತ್ ಸಂಬಭೌ ||

ಶ್ರೀಗಳವರು ಪ್ರಾಯಶ್ಚಿತ್ತವಾಗಿ ನೂರಾರು ತೆಂಗಿನಕಾಯಿಗಳನ್ನು ಭೋಗಾಪುರೇಶನಿಗೆ ಸಮರ್ಪಣೆ ಮಾಡಿದರು.. 
ಭೋಗಾಪುರೇಶನ ಆಜ್ಞೆಯಂತೆ ನಿತ್ಯದಲ್ಲಿ ನಿರ್ವಿಘ್ನವಾಗಿ ಪೂಜಾದಿಗಳು ನಡೆದುಕೊಂಡು ಬರುತ್ತಿವೆ. 
✍ಈ ಚರಿತ್ರೆ  ಅಲ್ಲಿನ ಅರ್ಚಕರಾದ,
ಶ್ರೀ ಗೋವಿಂದಾಚಾರ್ಯ ಪೂಜಾರ ನವಲಿ ಯವರು ಹೇಳಿದ್ದು..
ಶ್ರೀ ಕೃಷ್ಣಾರ್ಪಣಮಸ್ತು ||  

received in WhatsApp)

************




ತುರುವೇಕೆರೆಯ ನೂರೊಂದು ದೇವರ ಗುಡಿ ವಿಶಿಷ್ಠ ದೇವಾಲಯ

*ಲೇಖಕರು, ಟಿ.ಎಂ.ಸತೀಶ್, ಕನ್ನಡರತ್ನ.ಕಾಂ

ತೆಂಗಿನಮರಗಳು ಹೆಚ್ಚಾಗಿರುವ ಕಾರಣ ಕಲ್ಪತರುವಿನ ನಾಡು ಎಂದೇ ಖ್ಯಾತವಾಗಿರುವ ತುರುವೇಕೆರೆ. ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ತುರುವೇಕೆರೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ಬಹಳ ಹಿಂದೆ ತುರುವೇಕೆರೆ ಸರ್ವಜ್ಞ ವಿಜಯ ನರಸಿಂಹಪುರಿ ಎಂದು ಕರೆಸಿಕೊಂಡಿತ್ತು ಎಂದು ತಿಳಿದುಬರುತ್ತದೆ. ತುರುವೇಕೆರೆ ಮಹಾನ್ ಪಂಡಿತರಿಂದ, ದಾರ್ಶನಿಕರು, ಚತುರ್ವೇದ ಪಾರಂಗತರು, ಮಹಾಜನರಿಂದ ಕೂಡಿದ ಅಗ್ರಹಾರಗಳು ಇಲ್ಲಿತ್ತು ಎಂಬುದಕ್ಕೆ 1260ರ ಶಿಲಾ ಶಾಸನಗಳ ಪುರಾವೆಯೂ ಇದೆ.

13ನೇ ಶತಮಾನದಲ್ಲಿ ಹೊಯ್ಸಳರ 3ನೇ ನರಸಿಂಹನ ದಂಡನಾಯಕ ಸೋಮಣ್ಣ ದಣ್ಣಾಯಕ ಈ ಊರು ನಿರ್ಮಿಸಿ ಸರ್ವಜ್ಞ ವಿಜಯ ನಾರಸಿಂಹನಿಗೆ ಅಗ್ರಹಾರವಾಗಿ ದತ್ತಿ ಕೊಟ್ಟಿದ್ದನಂತೆ. ಹೀಗಾಗಿ ಈ ಊರಿಗೆ ಸರ್ವಜ್ಞ ವಿಜಯನಾರಸಿಂಹಪುರಿ ಎಂಬ ಹೆಸರು ಇತ್ತು ಎಂದೂ ಹೇಳಲಾಗುತ್ತದೆ.

ತುರುವೇಕೆರೆಗೆ ಈ ಹೆಸರು ಬರಲು ಉತ್ತರ ದಿಕ್ಕಿನಲ್ಲಿರುವ ಕೆರೆಯೇ ಕಾರಣ ಎಂಬ ವಾದವೂ ಇದೆ. 16ನೇ ಶತಮಾನದಲ್ಲಿ ಈ ಕೆರೆಯನ್ನು ಹಾಗಲವಾಡಿಯ ಸಾಳ ನಾಯಕ ಗೆದ್ದು, ತುರುವೇಕೆರೆಯ ಆಡಳಿತವನ್ನು ತನ್ನ ಸೋದರರಾದ ಚಿಕ್ಕನಾಯಕನಿಗೆ ಮತ್ತು ಅಣ್ಣೇನಾಯಕನಿಗೆ ವಹಿಸಿದನಂತೆ. ಈ ಸೋದರರು ಹೊರಕೋಟೆ ಮತ್ತು ಕೆರೆಯನ್ನು ನಿರ್ಮಿಸಿದರೆಂಬ ಉಲ್ಲೇಖಗಳಿವೆ. 1676ರಲ್ಲಿ ತುರುವೇಕೆರೆಯನ್ನು ಮೈಸೂರು ಅರಸು ಚಿಕ್ಕದೇವರಾಯರು ವಶಪಡಿಸಿಕೊಂಡರು ಎಂದು ತಿಳಿದುಬರುತ್ತದೆ.

ತುರುವೇಕೆರೆಗೆ ಧೇನುಪುರಿ ಎಂಬ ಹೆಸರೂ ಇತ್ತೆಂದು ಹೇಳಲಾಗಿದೆ. ಧೇನು ಎಂದರೆ ಹಸು, ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಹಸುಗಳು ಇದ್ದುದರಿಂದ ಹಾಗೂ ಇಲ್ಲಿ ಸಂಸ್ಕೃತ ಪಂಡಿತರೇ ಹೆಚ್ಚಾಗಿದ್ದ ಕಾರಣ ಇದಕ್ಕೆ ಧೇನುಪುರಿ ಎಂಬ ಹೆಸರು ಬಂದಿತ್ತು. ಕಾಲಾನಂತರದಲ್ಲಿ ಪಶು ಸಂಪತ್ತು ಮತ್ತು ಜಲಸಂಪತ್ತು ಹೊಂದಿದ್ದ ಊರು ತುರು ಎಂದರೆ ಧನಕರುಗಳ ಊರಾಗಿ ತುರುವೇಕೆರೆಯಾಯ್ತು ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ.

ತುರುವೇಕೆರೆ ಎಂಬ ಹೆಸರು ಬರುವ ಮುನ್ನ ಈ ಊರಿಗೆ ಅರಳೇಪೇಟೆ ಎಂಬ ಹೆಸರೂ ಇತ್ತೆಂದು ತಿಳಿದುಬರುತ್ತದೆ. ತುರುವೇಕೆರೆ ಸುತ್ತಮುತ್ತ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರಂತೆ. ತುರುವೇಕೆರೆ ಅರಳೆ ಅರ್ಥಾತ್ ಹತ್ತಿಯ ವಾಣಿಜ್ಯ ಕೇಂದ್ರವಾಗಿತ್ತು. ಊರಿನ ಪೂರ್ವದಲ್ಲಿರುವ ಬಸವಣ್ಣನ ಗುಡಿಯ ಮುಂದೆ ಇರುವ ಎರಡು ಕಲ್ಲಿನ ಕಂಬಗಳ ಮೇಲೆ ಅಡ್ಡಲಾಗಿರುವ ತೊಲೆಯಲ್ಲಿ ಕಬ್ಬಿಣದ ಬಳೆಗಳಿದ್ದು, ಇಲ್ಲಿ ಹತ್ತಿಯ ಪಿಂಡಿಗಳನ್ನು ತೂಗಲಾಗುತ್ತಿತ್ತು, ನಿಖರ ತೂಕಕ್ಕೆ ಇದು ಅತ್ಯಂತ ಹೆಸರವಾಸಿಯಾಗಿತ್ತಂತೆ. ಇಲ್ಲಿಗೆ ಹತ್ತಿ ಖರೀದಿಸಲು ಕತ್ತೆಗಳ ಜೊತೆ ಗೋವೆಯಿಂದ ಬರುತ್ತಿದ್ದ ಪೋರ್ಚುಗೀಸರು ಬರುವಾಗ ತೆಂಗಿನ ಸಸಿಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಬರುತ್ತಿದ್ದರಂತೆ. ಅದನ್ನು ಇಲ್ಲಿ ಮಾರಾಟ ಮಾಡಿ, ಹತ್ತಿಯನ್ನು ಖರೀದಿಸಿ ಅದೇ ಕತ್ತೆಗಳ ಮೇಲೆ ಹೇರಿಕೊಂಡು ಹೋಗುತ್ತಿದ್ದರಂತೆ. ಹೀಗಾಗಿ ಹತ್ತಿಯ ಕಣಜವಾಗಿದ್ದ ತುರುವೇಕೆರೆ ತಾಲೂಕು ತೆಂಗಿನ ಬೀಡಾಗಿ, ಇಲ್ಲಿವ ಬೆಳೆ ಪದ್ಧತಿಯೇ ಬದಲಾಗಿ ಹೋಯಿತು ಎಂದೂ ಕೆಲವು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಈ ಊರಿನಲ್ಲಿ ಹಲವು ದೇವಾನು ದೇವತೆಗಳಿರುವ ಹಾಗೂ ನೂರಾರು ಸಾಲಿಗ್ರಾಮಗಳಿರುವ ಒಂದು ವಿಶಿಷ್ಟ ದೇವಾಲಯವಿದೆ. ಗಣಪತಿ, ನಾರಾಯಣ, ರಂಗನಾಥ, ಗರುಡ, ವಿಠ್ಠಲ, ನರಸಿಂಹ, ಗಜಲಕ್ಷ್ಮೀ ಹೀಗೆ ಹಲವಾರು ದೇವರುಗಳ ಪಚ್ಚೆ, ಕಂಚು, ಪಂಚಲೋಹ, ಬೆಳ್ಳಿ, ಚಿನ್ನದ ಚಿಕ್ಕಪುಟ್ಟ ವಿಗ್ರಹಗಳಿವೆ. ಹೀಗಾಗಿಯೇ ಊರಿನ ಜನ ಇದಕ್ಕೆ ಆಡು ಮಾತಿನಲ್ಲಿ ನೂರೊಂದು ದೇವರ ಗುಡಿ ಎಂದು ಕರೆಯುತ್ತಾರೆ ಎಂದು ದೇವಾಲಯದ ಧರ್ಮದರ್ಶಿಗಳು ಕನ್ನಡರತ್ನ.ಕಾಂಗೆ ತಿಳಿಸಿದ್ದಾರೆ.

ದೇವನೊಬ್ಬ ನಾಮ ಹಲವು, ಹರಿಹರರಲ್ಲಿ ಭೇದವಿಲ್ಲ ಎಲ್ಲ ದೇವರೂ ಒಂದೇ ಎಂದು ಸಾರುವಂತಿರುವ ಈ ದೇವಾಲಯ. ಈ ದೇವಾಲಯದಲ್ಲಿ ನೂರಾರು ವಿಷ್ಣು ರೇಖೆಯ ಸಾಲಿಗ್ರಾಮಗಳಿವೆ. ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಈ ಎಲ್ಲ ಸಾಲಿಗ್ರಾಮಗಳಿಗೆ ಶಾಸ್ತ್ರೋಕ್ತವಾಗಿ ಅಭಿಷೇಕ, ಪೂಜೆ ನಡೆಯುತ್ತದೆ. ಈ ಸಮಯದಲ್ಲಿ ಮಾತ್ರವೇ ಇದರ ದರ್ಶನ ಸಾಧ್ಯ. ಶ್ರೀಮದ್ ಅಚಲಾನಂದ ಸೇವಾ ಸಮಿತಿ ಈ ದೇವಾಲಯ ನಿರ್ವಹಣೆ ಮಾಡುತ್ತಿದೆ.

ತುರುವೇಕೆರೆಯಲ್ಲಿರುವ ವೈಭವದ ಗಂಗಾಧರೇಶ್ವರ ಗುಡಿಯ ಪಕ್ಕದಲ್ಲಿರುವ ಓಣಿಯಲ್ಲಿ ಈ ದೇವಾಲಯವಿದೆ.
******



ಯಲಗೂರ ಕ್ಷೇತ್ರದಲ್ಲಿ ಪ್ರಾಣದೇವರ ಕಾರ್ತೀಕೋತ್ಸವ.

PRANADEVARA KARTIKOTSAVA In YALAGUR KSHETRA.

ಯಲಗೂರದ ಸುತ್ತಮುತ್ತಲ ಪ್ರದೇಶದಲ್ಲಿ ಶ್ರೀ ರಾಮದೇವರ ವಾಸ್ತವ್ಯವಿತ್ತು ಎಂದು ತಿಳಿದುಬಂದಿದೆ..
ಯಲಗೂರದ ಸುತ್ತಮುತ್ತಲ ಪ್ರದೇಶದಲ್ಲಿ ಶ್ರೀ ರಾಮದೇವರ ವಾಸ್ತವ್ಯವಿತ್ತು ಎಂದು ತಿಳಿದುಬಂದಿದೆ...
ಚಿನ್ನದ ಮೃಗದ ವೇಷಧಾರಿ ಮಾರೀಚನನ್ನು ಶ್ರೀರಾಮ ಬಹಳ ದೂರದವರೆಗೂ ಅಟ್ಟಿಸಿಕೊಂಡು ಬಂದ..ಅವನನ್ನು ಆಲಮಟ್ಟಿಯ ಸಮೀಪದಲ್ಲಿರು ಅರಣ್ಯದಲ್ಲಿ ಕೊಂದ ಎಂದು..ಚಿನ್ನದ ಮೃಗವನ್ನು ಕೊಂದ ಪ್ರದೇಶವೇ ಈಗಿನ ಚಿಮ್ಮಲಗಿ...

ಸೀತಾದೇವಿಯನ್ನು ಅಪಹರಿಸಿ ಜಟಾಯು ಅಡ್ಡಗಟ್ಟಿ ತೊಂದರೆ ಕೊಡುತ್ತಾ ಅಟ್ಟಿಸಿಕೊಂಡು ಹೋದನಂತೆ..ಅದನ್ನೇ ಈಗ "ಅಡ್ಡಗಟ್ಟಿ ಹಳ್ಳಿ" ಎಂದು ಕರೆಯುತ್ತಾರೆ...
ಆಲಮಟ್ಟಿಯ ಹತ್ತಿರವೇ ಇರುವ ಇನ್ನೊಂದು ಸೀತಾಮನೆ ಅಥವಾ ಇಂದಿನ ಸೀತಿಮನಿ ಎಂಬಲ್ಲಿ ಸೀತಾದೇವಿ ವಾಸವಿದ್ದಳು ಎಂದು..ಇಲ್ಲಿ ಇಂದಿಗೂ ಅರಿಶಿಣ ಹೊಂಡ, ಲವ ಕುಶ ಹೊಂಡ ಎಂಬ ಹೊಂಡಗಳಿವೆ.. ಇಲ್ಲಿ ಇಂದು ಶ್ರೀ ವೆಂಕಟೇಶನ ದೇವಸ್ಥಾನವಿದ್ದು ಮಹಾನವಮಿಯಲ್ಲಿ ವಿಶೇಷ ಪೂಜೆ ನಡೆಯುತ್ತವೆ...
ಶ್ರೀರಾಮ ಕೃಷ್ಣಾತೀರದ ಹಸಿರು ವನದ ಪ್ರಶಾಂತ ವಾತಾವರಣದಲ್ಲಿ ಇರಲು ಇಚ್ಛಿಸಿ ವಾಸ್ತವ್ಯ ಮಾಡಿದನಂತೆ..
ಸೀತಾದೇವಿ ತಾವು ತಂಗಿದ್ದ ಪ್ರದೇಶ ಶ್ರೀರಾಮನ ಸನ್ನಿಧಾನವಾಗಬೇಕೆಂದು ಕೇಳಿದಳಂತೆ.. ಮಾರುತಿಯು ಪ್ರಭು ಶ್ರೀರಾಮ ನೀವಿರುಲ್ಲೇ ನನಗೊಂದು ಜಾಗ ಕೊಡಿರಿ . ನಿಮ್ಮ ಸೇವೆ ಮಾಡಿಕೊಂಡಿರುವೆ ಎಂದನಂತೆ...ನೀನು 7 ಊರಿನ ಒಡೆಯನಾಗಿ ಕೃಷ್ಣಾತೀರದಲ್ಲಿ ನೆಲೆಸಿ , ಭಕ್ತರ ಬೇಡಿಕೆಗಳನ್ನು ನಿನ್ನ ಮುಖಾಂತರ ಈಡೇರಿಸುವೆ ಎಂದು ಹೇಳಿದನಂತೆ...ಅದರಂತೆ ಯಲಗೂರೇಶ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ಎಲ್ಲರ ದೈವವಾಗಿದ್ದಾನೆ...
ಯಲಗೂರ ದೇವಸ್ಥಾನದ ಹಿನ್ನಲೆ...by#Rekha. Mutalik
**
ಯಲಗೂರು ದೇವಸ್ಥಾನದಲ್ಲಿರುವ ಹನುಮಂತನನ್ನು 'ಮಾತನಾಡುವ ಹನುಮಂತ' ಎಂದು ಕರೆಯಲಾಗುತ್ತದೆ, ಇದು ಅತ್ಯಂತ ಶಕ್ತಿಶಾಲಿ ಮತ್ತು ದೇಶದಾದ್ಯಂತ ಜನಪ್ರಿಯವಾಗಿದೆ ಮತ್ತು ಪ್ರೀತಿಯಿಂದ 'ಯಲಗೂರು ಹನುಮಪ್ಪ' ಎಂದು ಕರೆಯಲ್ಪಡುತ್ತದೆ. ಯಲಗೂರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಒಂದು ಪುಟ್ಟ ಗ್ರಾಮ. ಇದು ಕೃಷ್ಣಾ ನದಿಯ ದಡದಲ್ಲಿದೆ. ಈ ದೇವಾಲಯವು ಭವ್ಯವಾದ ಹಸಿರು ಮತ್ತು ಪ್ರಶಾಂತವಾದ ನೀರಿನ ನಡುವೆ ನೆಲೆಗೊಂಡಿದೆ, ಇದು ಸುತ್ತಲೂ ಶಾಂತ ವಾತಾವರಣದೊಂದಿಗೆ  ಅತ್ಯಂತ ಶಾಂತಗೊಳಿಸುತ್ತದೆ.
ಯಲಗೂರಿನ ಇತಿಹಾಸವು ವಸಿಷ್ಠ ರಾಮಾಯಣದ ಕಾಲಕ್ಕೆ ಹೋಗುತ್ತದೆ ಮತ್ತು ಶ್ರೀ ಯಲಗೂರೇಶನು ಯಲಗೂರು ಗ್ರಾಮದಲ್ಲಿ ಏಳು ಗ್ರಾಮಗಳಿಗೆ ಶ್ರೀರಾಮನ ಆದೇಶದ ಮೇರೆಗೆ ನಿಂತಿದ್ದಾನೆ (ಏಳು ಊರೇಶ == ಯಲಗೂರೇಶ)ಶ್ರೀ ಹನುಮಾನ್ ವಿಗ್ರಹವು ಗೋವಿಂದರಾಜ್ ಕೆರೆಯಲ್ಲಿ (ಕೆರೆ) ಕಂಡುಬಂದಿದೆ; (ಈಗ ಗೊಂಡಿ ಕೆರೆ ಎಂದು ಕರೆಯುತ್ತಾರೆ). ಗೊಂದಿ ಕೆರೆಯ ವಾಯುವ್ಯದಲ್ಲಿ ಶ್ರೀ ವೆಂಕಟೇಶ ದೇವರ ಸನ್ನಿಧಾನವಿರುವ ಅಡ್ಕಲ್ ಗುಡಿಗೆ ಸಮೀಪದಲ್ಲಿ ಶ್ರೀ ವೆಂಕಟೇಶ್ವರ ಮತ್ತು ಪದ್ಮಾವತಿಯ ವಿಗ್ರಹಗಳನ್ನು ಇರಿಸಲಾಗಿದೆ ಮತ್ತು ದೊಡ್ಡ ಕಲ್ಲಿನ ಮಧ್ಯದಲ್ಲಿ ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ. ಬಿಜಾಪುರದ ಮುಸ್ಲಿಂ ರಾಜರ ಭಯ ಬಿಜಾಪುರ ಸಾಮ್ರಾಜ್ಯದ ಪತನದ ನಂತರ ಒಂದು ರಾತ್ರಿ ಒಬ್ಬ ಪೂಜಾರಿ (ಹಿಂದೂ ಪುರೋಹಿತ) ಒಂದು ಕನಸು ಇತ್ತು; ಶ್ರೀ ಹನುಮಂತನ ವಿಗ್ರಹವನ್ನು ಅಡಗಿಸಿಟ್ಟ ಕಲ್ಲಿನ ಮೇಲೆ ಪೂಜೆ ಮಾಡುತ್ತಿದ್ದ, ಕಲ್ಲನ್ನು ಒಡೆದು ವಿಗ್ರಹವನ್ನು ಪಡೆಯಲು, ಪೂಜಾರಿ ಅನಿಯಮಿತವಾಗಿ ಕಲ್ಲು ಒಡೆಯುತ್ತಿದ್ದರಿಂದ ವಿಗ್ರಹವೂ ತುಂಡಾಗಿದೆ. . ಪೂಜಾರಿಯು ಕಾಯಿಗಳು ಮತ್ತು ಮಾಡಬೇಕಾದ ಪೂಜೆಯ ಬಗ್ಗೆ ಚಿಂತಿತನಾಗಿದ್ದನು ಮತ್ತು ರಾತ್ರಿಯಲ್ಲಿ ಅವನು ಮತ್ತೆ ಕನಸು ಕಂಡನು ಮತ್ತು ಆ ಕಾಯಿಗಳನ್ನು ಸ್ಥಳಕ್ಕೆ (ಈಗ ನಮ್ಮ ದೇವಾಲಯವಿದೆ) ತಂದು ಸರಿಯಾದ ರೀತಿಯಲ್ಲಿ ಇರಿಸಿ ಮತ್ತು ಮುಚ್ಚಲು ಆದೇಶಿಸಲಾಯಿತು. ಏಳು ದಿನಗಳ ಕಾಲ ಬಾಗಿಲು ಹಾಕಿದ್ದರು, ಆದರೆ ಪೂಜಾರಿಯು ವಿಗ್ರಹವನ್ನು ನೋಡಲು ತುಂಬಾ ಆಸಕ್ತಿ ಹೊಂದಿದ್ದರು ಮತ್ತು ಆತಂಕವನ್ನು ತಡೆಯಲು ಸಾಧ್ಯವಾಗಲಿಲ್ಲ, ಅವರು ಏಳನೇ ದಿನ ಬೆಳಿಗ್ಗೆ ಬಾಗಿಲು ತೆರೆದರು; ವಿಗ್ರಹವು ವಿಗ್ರಹದ ಮೇಲ್ಬಾಗದಲ್ಲಿ ಸಂಪೂರ್ಣವಾಗಿ ಸೇರಿಕೊಂಡಿರುವುದನ್ನು ಅವನು ನೋಡಿದನು ಮತ್ತು ಕೆಲವು ತುಣುಕುಗಳು ವಿಗ್ರಹದ ಕೆಳಗಿನ ಭಾಗದಲ್ಲಿ ಸಂಪೂರ್ಣವಾಗಿ ಸೇರಿಕೊಂಡಿಲ್ಲ (ಈಗಲೂ ನಾವು ಜೋಡಿಸದ ಭಾಗಗಳನ್ನು ನೋಡಬಹುದು).ಕೃಷ್ಣಾ ನದಿಯಿಂದ ಪವಿತ್ರ ನೀರು ಮತ್ತು ಅಭಿಷೇಕ ಮತ್ತು ಪ್ರತಿಷ್ಠಾಪನೆ ಮಾಡಿ. ಆದ್ದರಿಂದ ಅವನು ದೇವರ ಆಜ್ಞೆಯಂತೆ ಎಲ್ಲಾ ಕೆಲಸಗಳನ್ನು ಮಾಡಿದನು. ಮತ್ತು ಈಗ ಭಕ್ತರನ್ನು ಆಶೀರ್ವದಿಸಲು ದೇವರು ಪೂರ್ಣ ಶಕ್ತಿಯಿಂದ ಇದ್ದಾನೆ. ಇಂದಿಗೂ ಪ್ರತಿದಿನ ಪೂಜಾರಿ ಕೃಷ್ಣನದಿಯಿಂದ ಪವಿತ್ರ ಜಲವನ್ನು ತಂದು ಅಭಿಷೇಕ ಮಾಡುತ್ತಾರೆ.
morning pooja 2022
*****

ಮಾವಿನಕೆರೆ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ

ಹೇಮಾವತಿ ನದಿ ದಂಡೆಯ ಮೇಲಿರುವ ಪುಣ್ಯ ಕ್ಷೇತ್ರ - ದೇವಾಲಯಗಳ ಬೀಡು, ಶಿಲ್ಪಕಲೆಗಳ ನಾಡು ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ 25 ಕಿಲೋ ಮೀಟರ್ ಹಾಗೂ ಹೇಮಾವತಿ ದಂಡೆಯಲ್ಲಿರುವ ಹೊಳೆ ನರಸೀಪುರ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವ ಗ್ರಾಮ ಮಾವಿನಕೆರೆ, ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿಯ ನೆಲೆವೀಡೂ ಹೌದು.
ಹಾಸನ ಮತ್ತು ಹೊಳೆ ನರಸೀಪುರದ ನಡುವೆ ಪವಿತ್ರ ಹೇಮಾವತಿ ನದಿಯ ತಟದಲ್ಲಿ ನೆಲೆಸಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿಯನ್ನು ಭಕ್ತರು...
ಹೇಮಾವತೀ ತಟವಾಸಂ ಹೇಮಾಭರಣ ಭೂಷಿತಂ|
ಮಾವಿನಕೆರೆ ಮಹಾಕ್ಷೇತ್ರೇ ಪರ್ವತೇ ಮಂಡಿತಾತನೇ||
ಎಂಬ ಶ್ಲೋಕದಿಂದ ಪೂಜಿಸುತ್ತಾರೆ.
ಐತಿಹ್ಯದ ಪ್ರಕಾರ ಒಮ್ಮೆ ಶಿವಮೊಗ್ಗ ಬಳಿಯ ನಗರ್ತಹಳ್ಳಿಯ  ದೊಡ್ಡಮನೆ ಕುಟುಂಬದ ಭಕ್ತರೊಬ್ಬರ ಕನಸಲ್ಲಿ ಬಂದ ಲಕ್ಷ್ಮೀ ವೆಂಕಟರಮಣಸ್ವಾಮಿ, ತಾನು  ಶಿಲಾರೂಪದಲ್ಲಿ ಇರುವ ಸ್ಥಳ ತಿಳಿಸಿ, ಶಿಲಾ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಜಲಾಧಿವಾಸದಲ್ಲಿಟ್ಟು, ಹೇಮಾವತಿ ನದಿ ದಂಡೆಯ ಮೇಲೆ ಗುಡಿ ಕಟ್ಟಿಸಿ ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನಂತೆ.  ಕನಸಿನಿಂದ ಎಚ್ಚೆತ್ತ ಅವರು, ತಮ್ಮ ಸ್ವಪ್ನ ವೃತ್ತಾಂತವನ್ನು ಮನೆಯವರಿಗೆಲ್ಲಾ ತಿಳಿಸಿ, ದೇವರು ಕನಸಿನಲ್ಲಿ ಹೇಳಿದ ಸ್ಥಳಕ್ಕೆ ಹೋಗಿ ನೋಡಿದಾಗ, ವಿಗ್ರಹ ದೊರಕಿತಂತೆ. ಶ್ರೀನಿವಾಸ ಕನಸಲ್ಲಿ ಅಪ್ಪಣೆ ಕೊಡಿಸಿದ ರೀತಿಯಲ್ಲೇ ಆ ಮೂರ್ತಿಯನ್ನು ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ,  ವಸ್ತ್ರಾಧಿವಾಸದಲ್ಲಿಟ್ಟು, ಹೇವಾವತಿ ನದಿ ದಂಡೆಯಲ್ಲಿ ಈಗಿರುವ ಸ್ಥಳದಲ್ಲಿ ಗುಡಿ ಕಟ್ಟಿಸಿ ನಂತರ ವಿಗ್ರಹವನ್ನು ಇಲ್ಲಿ ತಂದು ಹೋಮ ಹವನಾದಿಗಳನ್ನು ಮಾಡಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿದೆಯಂತೆ. ಈ ರೀತಿಯಾಗಿ ಇಲ್ಲಿಗೆ ವೆಂಕಟರಮಣ ಸ್ವಾಮಿ ಒಂಟಿಯಾಗಿ ಬಂದು ನೆಲೆಸಿದನೆಂದೂ, ಬಳಿಕ ತಮ್ಮ ಮುತ್ತಜ್ಜನ ಕಾಲದಲ್ಲಿ ಇಲ್ಲಿ ಪದ್ಮಾವತಿ ದೇವರ ಪ್ರತಿಷ್ಠಾಪನೆ ಮಾಡಲಾಯಿತು ಎಂದು ದೇಗುಲದ ಅರ್ಚಕರಾದ ಶೇಷ ಭಟ್ಟರು ತಿಳಿಸುತ್ತಾರೆ.
ದೇವಾಲಯದಲ್ಲಿ ಸುಂದರ ಉತ್ಸವ ಮೂರ್ತಿ ಇದ್ದು, ಇದನ್ನು ವೃತ್ತಿಯಲ್ಲಿ ವಕೀಲರಾದ ತಿಪಟೂರಿನ ಭಕ್ತರೊಬ್ಬರು ನೀಡಿದ್ದಾರೆ ಎಂದೂ ಹೇಳುತ್ತಾರೆ.
ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಈ ದೇವಾಲಯದಲ್ಲಿ ವೈಖಾನಸಾಗಮ ಶಾಸ್ತ್ರದ ಪ್ರಕಾರ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ. ದೇಗುಲದ ಹಿಂಭಾಗದಲ್ಲಿ ಹೇಮಾವತಿ ನದಿ ಹರಿಯುತ್ತದೆ. ಇಲ್ಲಿ ಭಕ್ತರು ಸ್ನಾನ ಮಾಡಿ ಇಲ್ಲವೇ ಕೈಕಾಲು ತೊಳೆದು, ತಲೆಯ ಮೇಲೆ ಹೇಮಾವತಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವರ ದರ್ಶನ ಮಾಡುತ್ತಾರೆ.
ದೇವಾಲಯಕ್ಕೆ ಭವ್ಯವಾದ ರಾಜಗೋಪುರ, ದ್ವಾರಬಂಧವಿದೆ.  ಗೋಪುರದಲ್ಲಿ ದ್ವಾರಪಾಲಕರು, ವಾದ್ಯಗಾರರು ಮತ್ತು ಹಲವು ದೇವತೆಗಳ ಗಾರೆಯ ಕೆತ್ತನೆ ಇದೆ. ದೇವಾಲಯದ ಎದುರು ಬೃಹತ್ ಗರುಡಗಂಬವಿದೆ. ಎತ್ತರದ ಜಗಲಿಯ ಮೇಲಿರುವ ದೇವಾಲಯಕ್ಕೆ ವಿಶಾಲ ಪ್ರದಕ್ಷಿಣ ಪಥ ಮತ್ತು ಸಭಾ ಮಂಟಪವಿದೆ. ಗರ್ಭಗೃಹದ ಬಾಗಿಲವಾಡಕ್ಕೆ ಹಿತ್ತಾಳೆಯ ತಗಡಿನ ಕವಚ ಹಾಕಲಾಗಿದ್ದು, ಇದು ಕಲಾತ್ಮಕವಾಗಿದೆ. ಗರ್ಭಗೃಹದಲ್ಲಿರುವ ಕೃಷ್ಣ ಶಿಲೆಯ ನಿಂತಿರುವ ಶ್ರೀ. ಶ್ರೀನಿವಾಸ ದೇವರು ಶಂಖ, ಚಕ್ರಧಾರಿಯಾಗಿದ್ದು, ಅಭಯ ಹಾಗೂ ವರದ ಹಸ್ತನಾಗಿ ಬರುವ ಭಕ್ತರನ್ನು ಹರಸುತ್ತಿದ್ದಾನೆ. ಪ್ರಭಾವಳಿ ಮತ್ತು ಕಿರೀಟ ಸೂಕ್ಷ್ಮ ಸುಂದರ ಕೆತ್ತನೆಗಳಿಂದ ಕೂಡಿ, ನಯನ ಮನೋಹರವಾಗಿದೆ.
ಶ್ರಾವಣಮಾಸದ ಎಲ್ಲ ಶನಿವಾರಗಳಂದು, ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೊಮ್ಮೆ ರಥೋತ್ಸವ ಜರುಗುತ್ತದೆ.
*****


ಅಬ್ಬೂರು 

ಇದು ಚನ್ನಪಟ್ಟಣದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟ ಗ್ರಾಮ. ಸೂರ್ಯಾಂಶ ಸಂಭೂತರೆಂದೇ ಪ್ರಸಿದ್ಧರಾದ ಮಧ್ವಮತದ ಮುನಿಪುಂಗವರಾಗ ಶ್ರೀ ಬ್ರಹ್ಮಣ್ಯ ತೀರ್ಥರಿಂದ ಪವಿತ್ರಗೊಂಡ ಕ್ಷೇತ್ರ. ಶ್ರೀ ಬ್ರಹ್ಮಣ್ಯ ತೀರ್ಥರು ನೆಲೆಸಿದ ಪುಣ್ಯಭೂಮಿ ಇದು. ಕಣ್ವ ತೀರ್ಥ ಎಂಬ ನದಿಯಿಂದ ಸುತ್ತುವರಿದ ಈ ಗ್ರಾಮವು ಕಣ್ವ ಮಹಾಋಷಿಗಳು ನಡೆದಾಡಿ ಪವಿತ್ರಗೊಳಿಸಿದ ತಪೋಭೂಮಿ. ಐತಿಹಾಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗುರುತಿಸಿಕೊಂಡ ಸಾಧನ ಭೂಮಿ ಅಬ್ಬೂರು. ಶ್ರೀ ಬ್ರಹ್ಮಣ್ಯ ತೀರ್ಥರೆಂಬ ಮಹಾಮುನಿಗಳ ಮೂಲ ವೃಂದಾವನ ಸನ್ನಿದಾನ ಈ ಅಬ್ಬೂರು.

ಸಂಚಾರ ಮತ್ತು ಪವಾಡ
ಬ್ರಹ್ಮಣ್ಯ ತೀರ್ಥರು ಒಬ್ಬ ಅಪ್ರತಿಮ ಪಾಂಡಿತ್ಯದ ಘನಿ. ಮಧ್ವಮತದ ಪ್ರಚಾರಕ್ಕಾಗಿ ಆಸೇತು ಹಿಮಾಚಲದವರೆಗೂ ಸಂಚರಿಸಿ, ದುರ್ವಾದಿಗಳನ್ನು ಖಂಡಿಸುತ್ತಾ ಜಯಪ್ರತಗಳು ಮಾನ ಸನ್ಮಾನಗಳನ್ನು ಗಳಿಸಿಕೊಂಡು ಬ್ರಹ್ಮ ಜ್ಞಾನಿಗಳು. ತಮ್ಮ ಕಾಲದಲ್ಲಿ ಅಬ್ಬೂರು ಮತ್ತು ಚನ್ನಪಟ್ಟಣದ ಸುತ್ತಮುತ್ತಲಿನಲ್ಲಿ ಬೇಡಿ ಬಂದ ಆರ್ತರಿಗೆ ಆಹಾರ ಮತ್ತು ಆಶ್ರಯಗಳನ್ನು ಕೊಟ್ಟು ಅನೇಕ ಕೆರೆ ಅಗ್ರಹಾರಗಳು ನಿರ್ಮಿಸಿ ಸಮಾಜ ಸುಧಾರಣೆ ಗೈದ ಧೀಮಂತರು. ವಿಜಯನಗರ ಸಾಮ್ರಾಜ್ಯದ ಆರು ರಾಜರಿಗೆ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು ಇವರ ಆಶ್ರಮ ಶಿಷ್ಯರು. ವ್ಯಾಸರಾಜರಂತಹ ಅಪ್ರತಿಮ ಜ್ಞಾನಿಗಳನ್ನು ನಾಡಿಗೆ ನೀಡಿದ ಕೀರ್ತಿ ಬ್ರಹ್ಮಣ್ಯ ಗುರುಗಳದು.
ಒಮ್ಮೆ ಸಂಚಾರ ಮಾಡುತ್ತಾ ಕೃಷ್ಣ ದೇವರಾಯನ ಆಳ್ವಿಕೆಯಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಕೃಷ್ಣದೇವರಾಯನ ಪ್ರಾರ್ಥನೆಯಂತೆ ಆಗಮಿಸಿದಾಗ ಅಲ್ಲಿ ಜಲಕ್ಷಾವ, ಭೀಕರ ಬರಗಾಲ ಉಂಟಾಗಿತ್ತು. ಕೃಷ್ಣದೇವರಾಯ ಮತ್ತು ಅಲ್ಲಿನ ಜನರು ಬ್ರಹ್ಮಣ್ಯ ತೀರ್ಥರಲ್ಲಿ ತಮಗೆ ಬಂದೊದಗಿದ ಸಮಸ್ಯೆ ಪರಿಹರಿಸಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿದಾಗ ಲೋಕ ಕಲ್ಯಾಣಕ್ಕಾಗಿ ತಮ್ಮ ಶಿಷ್ಯರಿಂದ ಪರ್ಜನ್ಯ ಹೋಮ ಮಾಡಿಸಿದರು. ಹೋಮ ನಡೆಯುತ್ತಿರುವಾಗಲೇ ಧಾರಾಕಾರವಾಗಿ ಮಳೆ ಸುರಿದ ಕೆರೆಗಳು ತುಂಬಿಕೊಂಡು ಜಲಕ್ಷಾಮ, ಬರಗಾಲ ನೀಗಿಸಿದರು ತಮ್ಮ ಅಗಾಧ ತಪಃಶಕ್ತಿಯಿಂದ. ಸಂತುಷ್ಟನಾದ ಕೃಷ್ಣದೇವರಾಯನು ಅನೇಕ ಗ್ರಾಮಗಳು ಉಂಬುಳಿಯಾಗಿ ಭಕ್ತಿಯಿಂದ ಬ್ರಹ್ಮಣ್ಯ ತೀರ್ಥರ ಮಠಕ್ಕೆ ಕೊಟ್ಟಿನು. ಅದರಲ್ಲಿ ಚನ್ನಪಟ್ಟಣದ ಹತ್ತಿರವಿರುವ ಬ್ರಹ್ಮಣ್ಯಪುರವು ಒಂದು.

ವೃಂದಾವನ ಪ್ರವೇಶ
ಇಂತಹ ಮಹಾಮಹಿಮರಾದ, ಸಮಾಜೋದ್ಧಾರಕರಾದ ಭಾಸ್ಕರ ಸಂಭೂತರಾದ ಶ್ರೀ ಬ್ರಹ್ಮಣ್ಯ ತೀರ್ಥರು ಸಾರ್ವಜಿತ್ ನಾಮ ಸಂವತ್ಸರದ ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿಯಂದು ೧೪೬೭ರಲ್ಲಿ ಅಬ್ಬೂರಿನ ಕಣ್ವ ನದಿ ತಟದಲ್ಲಿ ವೃಂದಾವನ ಪ್ರವೇಶ ಮಾಡಿದರು. ಇವರ ವೃಂದಾವನ ದರ್ಶನ, ಪ್ರದಕ್ಷಿಣೆ, ನಮಸ್ಕಾರ ಮಾತ್ರದಿಂದಲೇ ಅನೇಕ ರೋಗಗಳ ಪರಿಹಾರ ಮತ್ತು ಬೇಡಿ ಬಂದ ಭಕ್ತರಿಗೆ ಆರೋಗ್ಯ, ಐಶ್ವರ್ಯಾದಿಗಳು ಇಂದಿಗೂ ಒಂದಂಶದಿಂದ ವೃಂದಾವನದಲ್ಲಿ ನೆಲೆಸಿ ಅನುಗ್ರಹಿಸುತ್ತಿದ್ದಾರೆ. ವೃಂದಾವನದಲ್ಲಿ ಇದ್ದುಕೊಂಡೇ ಅನೇಕ ಕಾಯಿಲೆಗಳು ಪರಿಹರಿಸಿದ ದೃಷ್ಟಾಂತಗಳಿವೆ.
ಶ್ರೀ ಬ್ರಹ್ಮಣ್ಯ ತೀರ್ಥರ ಮೂಲ ಬೃಂದಾವನ ಅಬ್ಬೂರು. 
ಕಲಿಯುಗದ ಕಲ್ಪವೃಕ್ಷ ಕಾಮಧೇನುಗಳಾದ, ಸೂರ್ಯಾಂಶ ಸಂಭೂತರಾದ, ಶ್ರೀ ವ್ಯಾಸರಾಯರ ಆಶ್ರಮದ ಗುರುಗಳಾದ ಈ ಅವತಾರ ಪುರುಷರು ಈ ದಿನ ( ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ , ಕ್ರಿಸ್ತಶಕ 1467 )  ಬೃಂದಾವನ ಪ್ರವೇಶ ಮಾಡಿದ ಸುದಿನ.  
ವೈಶಾಖ ಕೃಷ್ಣಪಕ್ಷೇಸಾವೇಕಾದಶ್ಯಾಂ ಗುರೂತ್ತಮ: 
ನಭೋ ಮಧ್ಯಗತೇರ್ಯಮ್ಣಿ ಸ್ವರೂಪೇಲೀಯತ  ಪ್ರಭು: 
( ಶ್ರೀ ಬ್ರಹ್ಮಣ್ಯ ತೀರ್ಥ ವಿಜಯ:)
       ಶ್ರೀ ಬ್ರಹ್ಮಣ್ಯತೀರ್ಥರು ಉಡುಪಿ ಪ್ರಾಂತ್ಯದ ತೋಟಂತಿಲ್ಲಾಯ  ಮನೆತನದವರು ಎಂಬುದು ಘಟ್ಟದ ಮೇಲಿನ ಮಠಗಳಿಗೂ, ಉಡುಪಿ ಪ್ರಾಂತ್ಯಕ್ಕೂ ಇರುವ ಸಂಬಂಧದ ಬಗ್ಗೆ ಹೊಸ ಬೆಳಕನ್ನು ಚೆಲ್ಲುವ ಅಪೂರ್ವವಾದ ವಿಷಯ. ಜಗದ್ಗುರುಗಳಾದ ಶ್ರೀ ವ್ಯಾಸರಾಜಂತಹ ಯತಿವರೇಣ್ಯರನ್ನು ಜಗತ್ತಿಗೆ ನೀಡಿದ ಮಹಾಪ್ರಭುಗಳು ಶ್ರೀ ಬ್ರಹ್ಮಣ್ಯತೀರ್ಥರು.
ಜ್ಞಾನ ಮಂಟಪ ಕ್ಷೇತ್ರವಾದ ಅಬ್ಬೂರಿನಲ್ಲಿ ಇಂದಿಗೂ ತಮ್ಮ ವೃಂದಾವನದ ಒಳಗೆ ಇದ್ದುಕೊಂಡು ಭಕ್ತರ ಸಕಲಾಭಿಷ್ಠ ಗಳನ್ನು ಈಡೇರಿಸುವ ಕಲ್ಪವೃಕ್ಷ ಕಾಮಧೇನು, ನೊಂದವರನ್ನು ಕರುಣಾ ಮೃತಲೋಚನದಿಂದ ಸಂತೈಸುವ ಕೃಪಾಪೂರ್ಣರು, ಪುಣ್ಯ ಚರಿತರು, ಸತ್ತವರನ್ನು ಬದುಕಿಸಬಲ್ಲ ಅಸಾಧಾರಣ ಮಹಿಮೆಯ ಅಮೃತ ಹಸ್ತರು,  ಇವರ ಸ್ಮರಣೆ, ನಾಮೋಚ್ಚಾರಣೆ, ಗುಣ ಕೀರ್ತನೆ,  ಚರಿತ್ರೆ ಚಿಂತನೆ ಮೊದಲಾದುವುಗಳು ಸಹ ಭಕ್ತಜನರ ಉದ್ಧಾರ ಸಾಧನ. 
     ಬ್ರಾಹ್ಮಣರು ಮಾತ್ರವಲ್ಲದೆ, ಎಲ್ಲ ಪಂಗಡದ ಜನರು ಶ್ರೀ ಬ್ರಹ್ಮಣ್ಯತೀರ್ಥರ ಬೃಂದಾವನ ಸೇವೆಯನ್ನು ಯಥೋಚಿತವಾಗಿ ಮಾಡಿ ಇಷ್ಟಾರ್ಥಗಳನ್ನು ಪಡೆಯುತ್ತಿರುವರು. ದನಕರುಗಳ ವ್ಯಾಧಿಗಳನ್ನು ಸಹ ಈ ಬೃಂದಾವನ ಸೇವೆಯಿಂದ ಪರಿಹರಿಸಿಕೊಳ್ಳುವ ಭಕ್ತರೂ ಆ  ಪ್ರಾಂತ್ಯದಲ್ಲಿ ಕಂಡುಬರುವರು. 
     ಇಂತಹ ಮಹಾನ್ ಯತಿವರೇಣ್ಯರ ನಾಮಸ್ಮರಣೆಯಿಂದ, ಬೃಂದಾವನ ಸೇವೆಯಿಂದ, ಮೃತ್ತಿಕಾ ಧಾರಣೆಯಿಂದ, ಎಲ್ಲಾ ಕಠಿಣ ತರದ ವ್ಯಾಧಿಗಳೂ ಗುಣವಾಗುವುದು, ಭೂತ ಪ್ರೇತಾದಿ ಪೀಡೆಗಳು ನಾಶವಾಗುವುದು, ಎಂಬುದನ್ನು ಸ್ವತಃ ಶಿಷ್ಯರಾದ ಶ್ರೀ ವ್ಯಾಸರಾಯರು ತಮ್ಮ " ಶ್ರೀ ಬ್ರಹ್ಮಣ್ಯ ತೀರ್ಥ ಪಂಚರತ್ನ ಮಾಲಿಕ ಸ್ತೋತ್ರಂ "  ವಿಶೇಷ ಕೃತಿಯಲ್ಲಿ ತಮ್ಮ ಗುರುಗಳನ್ನು ವಿಶೇಷವಾದ ರೀತಿಯಲ್ಲಿ ಬಣ್ಣಿಸಿದ್ದಾರೆ ಅಲ್ಲದೆ ಈ ಸ್ತೋತ್ರವು ನಿತ್ಯ ಪಠನೀಯವೂ ಆಗಿದೆ.  ಶ್ರೀ ವ್ಯಾಸರಾಜರ ಆಶ್ರಮದ ಶಿಷ್ಯರಾದ ಶ್ರೀ ಶ್ರೀನಿವಾಸ ತೀರ್ಥರು ಅನೇಕ ಕೃತಿಗಳಲ್ಲಿ ಬ್ರಹ್ಮಣ್ಯತೀರ್ಥರ ಮಹಿಮೆಗಳನ್ನು ಕೊಂಡಾಡಿದ್ದಾರೆ. 
     ಇಂತಹಾ ಶ್ರೀ ಅಬ್ಬೂರು ಕ್ಷೇತ್ರವು ಸಕಲ ಮಾಧ್ವರಿಗೆ ಸಕಲ ಆಸ್ತಿಕರಿಗೆ ಅತ್ಯಂತ ಪಾವನವಾದ ಕ್ಷೇತ್ರವಾಗಿದೆ.
******





ಶೃಂಗೇರಿಯಲ್ಲಿ  ವಿಜಯದಶಮಿ 






****



ದೇವರಾಯನದುರ್ಗ ರಥೋತ್ಸವ  ಫಾಲ್ಗುಣ ಪೌರ್ಣಿಮ 
dEvaraayanadurga rathotsava
The Rathotsava or the Car festival or the Jatre of the Devarayana Durga Sri Bhoga Narasimhaswamy is held during Phalguna shuddha poornima (Full moon day ) in Devarayana durga.
On this day the chariot/car/Ratha of Sri Bhoga Narasimhaswamy is drawn in the main Ratha beedhi of the hill town.
Even though the Rathotsava day is Phalguna Shudda pournami, it will be done on the day on which pubba nakshatra falls. As such, a day prior or after pournami also a possibility of rathotsava day. 
It was called Ulkeladri in Kritayuga, Simhadri in Tretayuga, Siddhagiri in Dwaparayuga and Karigiri in Kaliyuga.
Karigiri – Once Bhrigu Maharshi cursed Gandharva brothers, Devadatta and Dhanunjaya to take shape of a mountain and one as an elephant. Kari – Means elephant; and Giri – means mountain, so the name Karigiri.
As Srihari in his Narasimha roopa is there at Karigiri, he is also called as “Karigireesha”.
Every year more than 20000 people are expected to attend the great rathotsava. Hundreds of special buses ply between the hills and Tumkur.
It is about 65 kms from Bangalore and 25 kms from Dabaspet and 15 kms from Tumkur.
Route to Devarayanadurga from Bangalore – Bangalore to Tumkur Highway – Next Nelamangala – Next Dabaspet – …….. Devarayanadurga.
There will be so many madhwa camps, wherein Panaka, Neeru Majjige, Kosambari will be served throughout the day.
karigiri yOga-bhOga narasimha dEvara pAdAravindakke gOvinda gOvinda...

********




ಶ್ರೀ ಮದಲಗಟ್ಟಿ ಪ್ರಾಣದೇವರು
ಜಗತ್ರಾಣೋತ್ಸವ
ಆತ್ಮೀಯ ಶ್ರೀ ಹರಿವಾಯುಗುರು ಭಕ್ತರೇ,
ತುಂಗಭದ್ರಾ ನದಿಯ ಪವಿತ್ರ, ರಮಣೀಯ ಕ್ಷೇತ್ರದಲ್ಲಿ ಶ್ರೀ ಕೃಷ್ಣಕೃಪಾ ಪಾತ್ರರಾದ ಶ್ರೀ ಶ್ರೀ ಜನಮೇಜಯ ಮಹಾರಾಜರು ಪ್ರತಿಷ್ಠಾಪಿಸಿದ ಹಾಗೂ ಶ್ರೀಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರಿಂದ ಪುನಃ ಪ್ರತಿಷ್ಠಾಪಿತರಾದ ಶ್ರೀ ಮದಲಗಟ್ಟಿ ಪ್ರಾಣರಾಜರ ವಾರ್ಷಿಕ ಮಹಾರಥೋತ್ಸವವು ಶತಮಾನೋತ್ಸವ ಸಂಭ್ರಮದಲ್ಲಿದ್ದು ಸ್ವಸ್ತಿಶ್ರೀ ಶಾಲಿವಾಹನಶಕೆ ವಿಳಂಬಿನಾಮ ಸಂವತ್ಸರ ಮಾರ್ಗಶೀರ್ಷ ಶುಕ್ಲ ಚತುರ್ದಶಿಯಿಂದ ಮಾರ್ಗಶೀರ್ಷ ಕೃಷ್ಣ ತೃತಿಯಾದವರೆಗೆ ನಡೆಯಲಿರುವುದು.
ಮಾತನಾಡುವ ದೇವರೆಂದು ಪ್ರಸಿದ್ಧರಾದ ಹಾಗೂ ಶೀಘ್ರಫಲಪ್ರದರಾದ ಶ್ರೀ ಪ್ರಾಣರಾಜರ ಮಹಾರಥೋತ್ಸವವು ಸಮಸ್ತ ಜಗತ್ತಿನ ರಕ್ಷಣೆ ಹಾಗೂ ಕ್ಷೇಮಗಳಿಗಾಗಿ ನಡೆಯುವುದು. ಜಗನ್ಮಾತಾಪಿತೃಗಳಾದ ಶ್ರೀ ಲಕ್ಷ್ಮೀನಾರಾಯಣರ ಅಧ್ಯಕ್ಷತೆಯಲ್ಲಿ ಅವರಿಬ್ಬರ ಪ್ರೀತಿಗಾಗಿ ಅವರೀರ್ವರ ಪ್ರೇರಣೆಯಂತೆ ಅವರ ಪ್ರೀತಿಯ ಪುತ್ರರಾದ ಶ್ರೀ ಪ್ರಾಣರಾಜರ ಈ ಮಹಾರಥೋತ್ಸವವನ್ನು ಅವರ ಪ್ರಿಯಶಿಷ್ಯರಾದ ಶ್ರೀ ಗರುಡಶೇಷರುದ್ರಾದಿ ದೇವತೆಗಳು ಹಾಗೂ ಶ್ರೀ ಜನಮೇಜಯರಾಜರು, ಶ್ರಿಮದ್ವ್ಯಾಸರಾಜರು,ಶ್ರೀ ಸತ್ಯವೀರತೀರ್ಥ ಶ್ರೀಪಾದರು ನಡೆಸುವರು. ಈ ಪರ್ವಕಾಲದಲ್ಲಿ ಶ್ರೀ ಪ್ರಾಣರಾಜರಿಗೆ ಹಾಗೂ ಶ್ರೀ ಸೀತಾಪತಿ ಶ್ರೀ ರಾಮಚಂದ್ರ ದೇವರಿಗೆ ಪ್ರೀತಿಕರವಾದ ಅನೇಕ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ಸಕಲಭಗವದ್ಭಕ್ತರು ಪಾಲ್ಗೊಂಡು ಶ್ರೀಕ್ಷೇತ್ರ ಮದಲಗಟ್ಟಿ ಶ್ರೀ ಪ್ರಾಣರಾಜರ ಹಾಗೂ ತದಂತರ್ಗತ ಶ್ರೀ ಸೀತಾಪತಿರಾಮಚಂದ್ರ ದೇವರ ಪೂರ್ಣಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ವಿನಂತಿ.

ಶ್ರೀ  ಮದಲಗಟ್ಟಿ ಪ್ರಾಣರಾಜ ಉತ್ಸವ ಸೇವಾ ಸಮಿತಿ (ರಿ) ಕಂಪ್ಲಿ & ಮುಂಡರಗಿ.

*******

ಶ್ರೀ ಮದಲಗಟ್ಟಿ ಪ್ರಾಣದೇವರು

ಕಪಿ ಎನ್ನುವರೆ ಇವಗೆ ಕುಪಿತ ಜನರುಗಳು
ಅಪರ ಭಕುತಿಯದೂತ ಮದಲಗಟ್ಟೇಶ||ಪಲ್ಲ||

ಶೂರತನದಲಿ ನೋಡೆ ಸಂಜೀವಿನಯತಂದ
 ವೀರ ತನದಲಿ ನೋಡೆ ವಾರುಧಿಯ ನ್ಹಾರಿದವ
ಮಾತಿನಾ ಬಗೆ ನೋಡೆ ವ್ಯಾಕರಣ ಪಂಡಿತನು
ರೂಪದಲಿ ನೋಡಿವನು ಹೇಮಕಾಂತಿಯ ಚೆಲುವ||೧||

ಬಲದಲ್ಲಿ ನೋಡಿವನು ಬಲಭೀಮ ನೆನಿಸಿದನೆ
ಛಲದಲ್ಲಿ ನೋಡಿವನುದುಶ್ಶಾಸನನ ನೆಗಹಿ
ಸಿಟ್ಟಿನಲಿ ನೋಡಿವನ ಜಟ್ಟಿಗಳ ಕುಟ್ಟಿಹನೆ
ಹುಟ್ಟು ಹಿಡಿದರು ಸರಳ ಸೌಗಂಧಿಕವ ತಂದ||೨||

ಪಾಂಡಿತ್ಯದಲಿ ನೋಡೆ ಮಧ್ವಮತ ಉಧ್ಧರಿಸೆ
ಭಕ್ತಿಯಲಿ ನೋಡಿವನು ಕೃಷ್ಣನನು ತಂದಿಹನೆ
 ಸೌಜನ್ಯದಲಿ ನೋಡೆ ಶಿಷ್ಯರನ ಮಾಡಿಹನೆ
ಮಧ್ವೇಶಕೃಷ್ಣ ನ್ನ ಮನದಲ್ಲಿ ನಿಲಿಸಿದನೆ||೩||

~~~ಹರೇಶ್ರೀನಿವಾಸ



******


ಯೋಗನರಸಿಂಹ, ತ್ರಿಕೂಟೇಶ್ವರ ನೆಲೆಸಿಹ ಗೊರೂರು - 

ಪ್ರಕೃತಿ ಸೌಂದರ್ಯದ ಮಲೆನಾಡಿನ ಸೆರಗಲ್ಲೇ ಮುಂದುವರಿದಿರುವ ಹಾಸನ ಜಿಲ್ಲೆ ಶಿಲ್ಪ ಕಲೆಗಳ ತವರು. ಬೇಲೂರು, ಹಳೆಬೀಡು, ಶ್ರವಣಬೆಳಗೊಳದಂತಹ ಕಲಾ ಶ್ರೀಮಂತಿಕೆಯ ದೇಗುಲಗಳ ನೆಲೆವೀಡಾದ ಹಾಸನ ಜಿಲ್ಲೆ ಪವಿತ್ರ ಪುಣ್ಯಕ್ಷೇತ್ರಗಳ ತವರೂ ಹೌದು. ಇಂಥ ಪವಿತ್ರ ತಾಣಗಳಲ್ಲಿ ಗೊರೂರು ಸಹ ಒಂದು.
ಹಾಸನ ಜಿಲ್ಲೆ ಅರಕಲಗೂಡಿನಿಂದ 8 ಕಿ.ಮೀಟರ್ ದೂರದಲ್ಲಿ ಹೇಮಾವತಿ ದಂಡೆಯ ಮೇಲೆ ಇರುವ ಗೊರೂರು, ಯೋಗಾನರಸಿಂಹ ಸ್ವಾಮಿಯ ನೆಲೆವೀಡು. ಸಾಹಿತಿ ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟೂರೂ ಆದ ಇದು ಸಾಹಿತ್ಯದ ಕರುನಾಡು.
ಈ ಊರಿಗೆ ಗೋಕರ್ಣ ಪುರಿ ಕ್ಷೇತ್ರ ಎಂಬ ಹೆಸರೂ ಇದೆ. ಗೋಕರ್ಣ ಋಷಿಗಳು ಈ ಪುಣ್ಯ ಕ್ಷೇತ್ರದಲ್ಲಿ, ಹೇಮಾವತಿ ನದಿ ತಟದಲ್ಲಿ ಪೂರ್ವಾಭಿಮುಖವಾಗಿ ಕುಳಿತು ತಪವನ್ನು ಆಚರಿಸಿದ್ದರು. ಅವರ ಭಕ್ತಿಗೆ ತಪಸ್ಸಿಗೆ ಮೆಚ್ಚಿದ ವಿಷ್ಣು ಯೋಗಾನರಸಿಂಹನಾಗಿ ಅವರ ಎದುರು ಪ್ರತ್ಯಕ್ಷನಾದನಂತೆ. ಗೋಕರ್ಣ ಋಷಿಗಳು ಪೂರ್ವಾಭಿಮುಖವಾಗಿ ಕುಳಿತಿದ್ದರಿಂದ ಅವರ ಎದುರು ಪ್ರತ್ಯಕ್ಷನಾದ ನರಸಿಂಹ ಪಶ್ಚಿಮದತ್ತ ಮುಖ ಮಾಡಿ ನಿಂತು ದರ್ಶನ ನೀಡಿ ಶಿಲೆಯಾಗಿದ್ದಾನೆ. ಹೀಗಾಗಿ ಇದನ್ನು ಉದ್ಭವ ಮೂರ್ತಿ ಎಂದೂ ಹೇಳಲಾಗುತ್ತದೆ. ಪಶ್ಚಿಮಾಭಿಮುಖವಾದ ಮೂರ್ತಿ ಅಪರೂಪವಾಗಿದ್ದು, ಮತ್ತೆಲ್ಲಿಯೂ ಇಲ್ಲ ಎಂದೂ ಹೇಳಲಾಗುತ್ತದೆ. ಹೀಗಾಗಿಯೇ ಇದು ಪವಿತ್ರ ಪುಣ್ಯ ಭೂಮಿ ಆಗಿದೆ. ಈ ವಿಷಯವನ್ನು ದೇವಾಲಯದಲ್ಲಿರುವ ಇತಿಹಾಸ ಫಲಕ ಪುಷ್ಪೀಕರಿಸುತ್ತದೆ.

ಹಿಂದೆ ಈ ಊರಿಗೆ ಗೂರವೂರು ಮತ್ತು ವಿಜಯಾದಿತ್ಯಪುರಿ ಎಂದು ಕರೆಯಲಾಗುತ್ತಿತ್ತು ಎಂಬ ಉಲ್ಲೇಖವೂ ಇದೆ. ಗೊರವೂರು ಬಳಿಕ ಗೊರೂರು ಆಯಿತು ಎಂದೂ ಹೇಳಲಾಗುತ್ತದೆ. ಈ ಊರಿನಲ್ಲಿ ಅತ್ಯಂತ ಸುಂದರ ಹಾಗೂ ಪ್ರಾಚೀನವಾದ ತ್ರಿಕೂಟಲಿಂಗ ದೇವಾಲಯವಿದೆ. ಇದನ್ನು ವಿಜಯಾದಿತ್ಯ ಹೆಗ್ಗಡೆ ನಿರ್ಮಿಸಿದನೆಂದು ಶಾಸನಗಳು ತಿಳಿಸುತ್ತದೆ. ಇಲ್ಲಿರುವ  ದೇವಾಲಯ ಸುಂದರ ಶಿಲ್ಪಕಲಾವೈಭವದಿಂದ ಕೂಡಿದೆ. ೧೫೮೬ರಲ್ಲಿ ಈ ದೇವಾಲಯ ನಿರ್ಮಾಣವಾಗಿದೆ.
ಮುಂಭಾಗದ ಗೊಪುರ ಹೊಯ್ಸಳರ ಶಿಲ್ಪಕಲೆಯಿಂದ ಸಮೃದ್ಧವಾಗಿದೆ. ಸಮೀಪದಲ್ಲೇ ಕೈಲಾಸೇಶ್ವರ ದೇಗುಲವೂ ಇದೆ. ಪ್ರಶಾಂತವಾಗಿ ಹರಿವ ಹೇಮಾವತಿ ನದಿ ದಂಡೆಯಲ್ಲಿ ಮೆಟ್ಟಿಲುಗಳಿಂದ ಕೂಡಿದ ಸುಂದರವಾದ ಸ್ನಾನಘಟ್ಟವಿದೆ.
ಯೋಗಾನರಸಿಂಹ ದೇಗುಲ: ಹೇಮಾವತಿ ಹೊಳೆಯ ದಂಡೆಯಲ್ಲೇ ಇರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯ ಮನೋಹರವಾಗಿದೆ. ಪ್ರಶಾಂತವಾಗಿ ಹರಿಯುವ ಹೇಮಾವತಿಯನ್ನು ಕಣ್ತುಂಬಿಕೊಂಡು, ಕೈಕಾಲು ತೊಳೆದು ದೇಗುಲದ ಬಳಿ ಬಂದರೆ ಮೊದಲು ಮಂಟಪ ಹಾಗೂ ರಾಜಗೋಪುರ ಮನಸೆಳೆಯುತ್ತದೆ. ಮಂಟಪ ಹಾಗೂ ದೇವಾಲಯದ ಗೋಪುರಗಳಲ್ಲಿ ನರಸಿಂಹ, ಗೋಕರ್ಣ ಋಷಿ, ನಾರದನೇ ಮೊದಲಾದ ಹಲವು ಗಾರೆಯ ಶಿಲ್ಪಗಳಿವೆ.
ದೇಗುಲದ ದ್ವಾರದ ಮೇಲೆ ಶಂಖ, ಚಕ್ರ ಹಾಗೂ ತ್ರಿಪುಂಡರದ ಚಿತ್ರಗಳಿವೆ.
ದೇವಾಲಯದ ಒಳ ಪ್ರವೇಶಿಸಿದರೆ ಎತ್ತರವಾದ ಗರುಡಗಂಬ, ಹಾಗೂ ದೇವಾಲಯದ ಮಂಟಪ ಕಾಣುತ್ತದೆ. ದೇವಾಲಯದ ಭಿತ್ತಿಗಳಲ್ಲಿ ಯಾವುದೇ ಕೆತ್ತನೆಗಳು ಇಲ್ಲ. ಆದರೆ ದೇವಾಲಯದ ಮೇಲಿನ ಗೋಪುರದಲ್ಲಿ ದಶಾವತಾರದ ಗಾರೆಯ ಸುಂದರ ಶಿಲ್ಪಗಳಿವೆ. ಮಧ್ಯದಲ್ಲಿ ಹಿರಣ್ಯ ಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ಉಗ್ರ ನರಸಿಂಹ ಸ್ವಾಮಿಯ ಸುಂದರ ಮೂರ್ತಿಯೂ ಇದೆ.
 ಗರ್ಭಗುಡಿಯಲ್ಲಿ ಒಂದೂವರೆ ಅಡಿಯಷ್ಟು ಎತ್ತರದ ಸುಂದರ ಶಿಲ್ಪಕಲಾ ಪೀಠದ ಮೇಲೆ ಹೊಯ್ಸಳರ ಕಾಲದ ಮನಮೋಹಕವಾದ ಆರು ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿಯ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಈ ವಿಗ್ರಹ ನಯನ ಮನೋಹರವಾಗಿದೆ.
ನಿತ್ಯ ಪೂಜೆ ಇಲ್ಲಿ ನಡೆಯುತ್ತದೆ. ಅಲಂಕಾರಗೊಂಡ ಯೋಗಾನರಸಿಂಹ ಸ್ವಾಮಿಯನ್ನು ನೋಡುವುದೇ ಒಂದು ಸೊಬಗು. ಪ್ರತಿವರ್ಷ ರಥಸಪ್ತಮಿಯಂದು ಇಲ್ಲಿ ರಥೋತ್ಸವ ಜರುಗುತ್ತದೆ. ಸುಗ್ಗಿಯ ಬಳಿಕ ಜಿಲ್ಲೆಯಲ್ಲಿ ನಡೆಯುವ ಪ್ರಥಮ ರಥೋತ್ಸವ ಎಂಬ ಖ್ಯಾತಿಯೂ ಇದಕ್ಕಿದೆ.
ಹಾಸನದಿಂದ ೨೩ ಕಿ.ಮೀಟರ್ ದೂರದಲ್ಲಿರುವ ಗೊರೂರಿಗೆ ಸಾಕಷ್ಟು ಬಸ್ ಸೌಕರ್ಯವಿದೆ.. ಅತಿ ಸಮೀಪದಲ್ಲೇ ೧೯೭೭ರಲ್ಲಿ ನಿರ್ಮಿಸಲಾದ ಗೊರೂರು ಡ್ಯಾಮ್ ಕೂಡ ಇದೆ, ಕ್ರೆಸ್ಟ್ ಗೇಟ್ ತೆರೆದು ನೀರು ಹೊರಬಿಟ್ಟಾಗ ಅದನ್ನು ನೋಡುವುದು ನಿಜಕ್ಕೂ ಅವರ್ಣನೀಯ ಆನಂದ ತರುತ್ತದೆ.
********





ಶ್ರೀ ಚೆನ್ನಕೇಶ ದೇವ ಉಡುಪಿ ಜಿಲ್ಲೆ

ತಾಲೂಕು ಹಕ್ಲಾಡಿ ಗ್ರಾಮ ಮಾಣಿಕೊಳಲು ಶ್ರೀ ಚೆನ್ನಕೇಶ ಸನ್ಯಾಸಿಗಳಿಗಾಗಿ ಪಶ್ಚಿಮಕ್ಕೆ ತಿರುಗಿದ ದೇವರು. ಪುರಾಣ ಪ್ರಸಿದ್ಧ ದ.ಕ, ಉಡುಪಿ ಜಿಲ್ಲೆ ಪರುಶುರಾಮ ಸೃಷ್ಟಿ ಎಂದೇ ಪ್ರತೀತಿ. ಇಂತಹ ಪುಣ್ಯ ಕ್ಷೇತ್ರದಲ್ಲಿ ಅನೇಕ ಪೌರಾಣಿಕ, ಚಾರಿತ್ರಿಕ ಹಿನ್ನೆಲೆಯುಳ್ಳ ದೇವಸ್ಥಾನಗಳಿದ್ದು, ಅವುಗಳಲ್ಲಿ ಶ್ರೀ ಚೆನ್ನಕೇಶ ದೇವಸ್ಥಾನ ಕೂಡ ಒಂದು.
ಬಹಳ ಕಾಲದ ಹಿಂದೆ ಇಲ್ಲಿಯ ಮಕ್ಕಳು ದೇವರ ಆಟವಾಡುತ್ತಿದ್ದು, ಚೆನ್ನಕೇಶವ ಹೆಸರಿನ ಮಾಣಿ ಕೈಗೊಂದು ಕೋಲು ಕೊಟ್ಟು, ಇತರ ಮಕ್ಕಳು ಸ್ವಲ್ಪ ಎತ್ತರ ಗುಡ್ಡೆಯ ಮೇಲೆ ಕೂರಿಸಿದ್ದರು. ಮಾಣಿ ಕೊಳಲಿನ ರೀತಿಯಲ್ಲಿ ಕೋಲು ಹಿಡಿದು ಕೃಷ್ಣ ಭಂಗಿಯಲ್ಲಿ ಕುಳಿತಿರುತ್ತಾನೆ. ಅಷ್ಟರಲ್ಲಿ ಅಚಾನಕ್ಕಾಗಿ ಮಳೆ ಬಂದು, ಮಕ್ಕಳೆಲ್ಲ ಓಡಿಹೋಗುತ್ತಾರೆ. ಕೃಷ್ಣನ ಭಂಗಿಯಲ್ಲಿ ಕುಳಿತ ಚೆನ್ನಕೇಶವ ಮಾತ್ರ ಕುಳಿತಲ್ಲಿಂದ ಏಳುವುದಿಲ್ಲ. ಚೆನ್ನಕೇಶವನ ತಂದೆ ತಾಯಿಗೆ ಮಗ ಮನೆಗೆ ಬಾರದಿದ್ದರಿಂದ ಗಾಬರಿಯಾಗಿ, ಚೆನ್ನಕೇಶವನ ಸ್ನೇಹಿತರ ಬಳಿ ಕೇಳಿದಾಗ ನಿಜ ವಿಷಯ ತಿಳಿಯುತ್ತದೆ. ಕೂಡಲೇ ಚೆನ್ನಕೇಶವ ಕುಳಿತಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಮಾಣಿ ಪತ್ತೆಯಿಲ್ಲ. ಎಷ್ಟು ಹುಡುಕಾಡಿದರೂ ಮಗ ಸಿಗದೇ ನೊಂದು ಮನೆಗೆ ಹಿಂದಿರುಗಿದ ಅವರಿಗೆ ಮಂಪರು ಕವಿದಂತಾಗುತ್ತದೆ. ಆಗ ಕನಸಿನಲ್ಲಿ ದಿವ್ಯ ಪುರುಷರೊಬ್ಬರು ಬಂದು ಮಗು ಕುಳಿತ ಜಾಗದಲ್ಲಿ ತಾಮ್ರ ಹಂಡೆ ಕವುಚಿ ಹಾಕಿ ಏಳು ದಿನಗಳ ನಂತರ ತೆಗೆದರೆ ನಿಮ್ಮ ಮಗ ಸಿಗುತ್ತಾನೆ ಎಂದು ಹೇಳಿ ಮಾಯವಾಗುತ್ತಾರೆ!
ದಂಪತಿ ಮಗನಿದ್ದ ಜಾಗದಲ್ಲಿ ಹಂಡೆ ಕವುಚಿಟ್ಟು ಬರುತ್ತಾರೆ. ಹೀಗೆ ಮೂರು ದಿನ ಕಳೆಯುತ್ತದೆ, ಕುತೂಹಲ ತಡೆಯದೇ ದಂಪತಿ ಹಂಡೆ ಎತ್ತಿ ನೋಡಿದರೆ ಅದರಲ್ಲಿ ಕೊಳಲುಧಾರಿ ಪೂರ್ವಾಭಿಮುಖವಾಗಿ ನಿಂತಿರುವ ಬಾಲಕೃಷ್ಣನ ಮೂರ್ತಿ! ಸುಂದರ ಮೂರ್ತಿ ತಮ್ಮ ಮಗ ಚೆನ್ನಕೇಶವ ಎಂದು ದಂಪತಿ ಒಪ್ಪಿಕೊಳ್ಳುತ್ತಾರೆ.
ಶ್ರೀ ಕೃಷ್ಣನೇ ತಮ್ಮನ್ನು ಉದ್ಧರಿಸಲು ಮಾಣಿ ಚನ್ನಕೇಶವ ರೂಪದಲ್ಲಿ ಬಂದಿದ್ದಾನೆಂದು ತಿಳಿದು ಭಕ್ತಿಯಿಂದ ಅಲ್ಲೇ ಮೂಡಿನ ಕೆರೆಯ ಎದುರಿನಲ್ಲೇ ಗುಡಿ ಕಟ್ಟಿ ಪೂಜಿಸತೊಡಗುತ್ತಾರೆ. ಮಾಣಿ ಕೊಳಲಿನ ಮಾದರಿಯಲ್ಲಿ ಕೋಲು ಹಿಡಿದಿದ್ದರಿಂದ ಮಾಣಿಕೊಳಲು, ಮಾಣಿ ಹೆಸರು ಚೆನ್ನಕೇಶವ ಇದ್ದರಿಂದ ಮಾಣಿಕೊಳಲು ಚೆನ್ನಕೇಶ ದೇವಸ್ಥಾನ ಎಂದು ಹೆಸರು ಬಂತು.
ಕಣ್ಮರೆಯಾದ ಸನ್ಯಾಸಿಗಳು
ಚೆನ್ನಕೇಶವ ದೇವಸ್ಥಾನಕ್ಕೆ ಒಂದು ದಿನ ಇಬ್ಬರು ಅಲೆಮಾರಿ ಸನ್ಯಾಸಿಗಳು ಬಂದು ದೇವಸ್ಥಾನದಲ್ಲೇ ಬೀಡು ಬಿಡುತ್ತಾರೆ. ಇದಕ್ಕೂ ಮೊದಲು ಇಬ್ಬರು ಊರಿನ ಸನ್ಯಾಸಿಗಳು ಅದೇ ದೇವಸ್ಥಾನಲ್ಲೇ ಇರುತ್ತಾರೆ. ಊರ ಸನ್ಯಾಸಿ, ಪರವೂರ ಸನ್ಯಾಸಿಗಳಿಗೂ ಊರ ಜನರ ಸಮ್ಮುಖ ಪಂದ್ಯ ನಡೆಯುತ್ತದೆ. ದೇವಸ್ಥಾನದ ಕೆರೆಯಲ್ಲಿ ಯಾರು ಜಾಸ್ತಿ ಹೊತ್ತು ಮುಳುಗಿರುತ್ತಾರೋ ಅವರು ಗೆದ್ದಂತೆ ಎನ್ನುವುದು ನಿಯಮ.
ಕೆರೆಯಲ್ಲಿ ಸನ್ಯಾಸಿಗಳು ನಿಂತು ಜತೆಗೇ ಮುಳುಗುತ್ತಾರೆ, ಸ್ವಲ್ಪ ಹೊತ್ತಿನಲ್ಲೇ ಊರ ಸನ್ಯಾಸಿಗಳು ಮೇಲೆದ್ದು ದಣಿವಾರಿಸಿಕೊಳ್ಳುತ್ತಾರೆ. ಅಲೆಮಾರಿ ಸನ್ಯಾಸಿಗಳು ಏಳುವ ಸಮಯಕ್ಕೆ ಮುಳುಗುತ್ತಾರೆ. ಊರಿನವರು ಅವರಿನ್ನೂ ಏಳಲಿಲ್ಲವೆಂದು ಸುಳ್ಳು ಹೇಳುತ್ತಾರೆ. ಹೀಗೇ ಪುನಃ ಪುನಃ ಆಗುತ್ತದೆ ಕೊನೆಯ ಬಾರಿ ಮುಳುಗಿದ ಅಲೆಮಾರಿ ಸನ್ಯಾಸಿಗಳು ಮೇಲೇಳಲೇ ಇಲ್ಲ! ಹೀಗಾದ ತಕ್ಷಣ ಪೂರ್ವಾಭಿಮುಖವಾಗಿದ್ದ ಮಾಣಿ ಚೆನ್ನಕೇಶವ ಪಶ್ಚಿಮಕ್ಕೆ ತಿರುಗುತ್ತಾನೆ ಎನ್ನುವುದು ನಂಬಿಕೆ.
ಮಾರನೇ ದಿನ ಬೆಳೆಗೆದ್ದು ನೋಡಿದರೆ ಆ ಕೆರೆಯ ಎದುರಿನಲ್ಲಿ ಬೇರೆಲ್ಲೂ ಕಂಡುಬರದ ಎರಡು ವಿಚಿತ್ರ ವೃಕ್ಷಗಳು ಕಂಡು ಬರುತ್ತವೆ. ಆ ಸನ್ಯಾಸಿಗಳೇ ವೃಕ್ಷಗಳಾಗಿರಬಹುದೆಂಬ ನಂಬಿಕೆಯಿದ್ದು, ಈ ವೃಕ್ಷಗಳನ್ನು ಈಗಲೂ ನೋಡಬಹುದಾಗಿದೆ.
ಏಪ್ರಿಲ್ನಲ್ಲಿ ಅಷ್ಟಬಂಧ, ಜಾತ್ರೆ
ಪ್ರತಿ ವರ್ಷ ಏಪ್ರಿಲ್ನಲ್ಲಿ ವೈಭವದ ಜಾತ್ರೆ ನಡೆಯುತ್ತದೆ. ಈ ವರ್ಷ ಏಪ್ರಿಲ್ 12ರಿಂದ 19ರವರೆಗೆ ಅಷ್ಟಬಂಧ ಹಾಗೂ ಇತರ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ ನಡೆಯಲಿದೆ. ಪೌರಾಣಿಕ ಹಿನ್ನೆಲೆಯಿರುವ ಶ್ರೀ ಚೆನ್ನಕೇಶವ ದೇವಸ್ಥಾನ ಅಭಿವೃದ್ಧಿಪಡಿಸಲಾಗಿದೆ. ಹಳೇ ದೇವಸ್ಥಾನ ಅಚ್ಚುಕಟ್ಟಿನಲ್ಲಿ ಪುನಃ ನಿರ್ಮಿಸಿ ದೇವಸ್ಥಾನದ ಕಳೆ ಹೆಚ್ಚಿಸಿದ್ದಾರೆ. ಜಾತ್ರೆಯಲ್ಲಿ ಹಲವು ಊರಿನ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ಹೇಗೆ ಹೋಗಬೇಕು
ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮುಳ್ಳಿಕಟ್ಟೆಯಿಂದ ಬಲಕ್ಕೆ 4 ಕಿ.ಮೀ ತೆರಳಿದ ಬಳಿಕ ಕಟ್ಟಿನಮಕ್ಕಿಯಿಂದ ಬಲಕ್ಕೆ ತಿರುಗಿ 2 ಕಿ.ಮೀ. ಒಳಗಡೆ ಹೋದರೆ ಮಾಣಿಕೊಳಲು ಸಿಗುತ್ತದೆ. ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ ವಿಶಾಲ ಪ್ರಾಂಗಣ, ಹೊರಭಾಗದಲ್ಲಿ ವಿಸ್ತಾರ ಕಲ್ಯಾಣಿ, ಅದರ ಎದುರಿಗೆ ಆಂಜನೇಯ ಸ್ವಾಮಿ ಪುಟ್ಟ ಗುಡಿ, ಪಕ್ಕದಲ್ಲೇ ತುಸು ಮುಂದೆ ತೇರಿನ ಮನೆ ಇದೆ. ವಿಶಾಲ ಪ್ರಾಂಗಣದ ಮೂಲಕ ದೇವಸ್ಥಾನದ ಒಳಹೊಕ್ಕರೆ ಕಾಣಿಸುವುದು ಚೆನ್ನಕೇಶವ ದೇವರ ಮೂರ್ತಿ. ಪ್ರತಿವರ್ಷ ಏಪ್ರಿಲ್ ಎರಡನೇ ವಾರದಲ್ಲಿ ರಥೋತ್ಸವ ನಡೆಯುತ್ತದೆ. ಕುಂದಕನ್ನಡ ಭಾಷೆಯಲ್ಲಿ ಮಾಣಿಕೊಳಲಿನ ತೇರು ಎಂದೂ ಕರೆಯುತ್ತಾರೆ.
*****

Mangalapura Mangalore ಮಂಗಳಮ್ಮನಿಗೆ ವರ್ಷಾವಧಿ ಜಾತ್ರಾಮಹೋತ್ಸವ

ಭಾರ್ಗವ ಕ್ಷೇತ್ರದ ಪ್ರಜಾ ಪರಿಪಾಲಕಳಾಗಿ ಮೆರೆಯಲ್ಪಡುವ ಜಗನ್ಮಾತೆ ಶ್ರೀ ಮಂಗಳಾದೇವಿಯ ಸಾನಿಧ್ಯ ವಿಶೇಷದಿಂದ ಪರಮಪವಿತ್ರವಾದ ಭೂಮಿ ಮಂಗಳಾಪುರ.
ಈ ಪಾವನ ಕ್ಷೇತ್ರದಲ್ಲಿ ಸದ್ಭಕ್ತರ ಭಕ್ತಿಗೆ ಫಲವನ್ನು ಈಯುತ್ತಾ ಇಷ್ಟಾರ್ಥ ಪ್ರದಾಯಿನಿಯಾಗಿ ಸೌಭಾಗ್ಯವನ್ನು ಕರಣಿಸುವ ಭಾಗ್ಯ ದೇವತೆಯಾಗಿ
ಮಹಾದೇವಿಯು ನಮ್ಮೆಲ್ಲರನ್ನು ತನ್ನೆಡೆಗೆ ಅನುದಿನವೂ ಬರಮಾಡಿ ಕೊಳ್ಳುತ್ತಿರುವಳು.

ಅನೇಕ ವರ್ಷಗಳಿಂದ ಪೂರ್ವ ಪರಂಪರೆಗೆ ಸ್ವಲ್ಪವೂ ಲೋಪ ಬಾರದಂತೆ ಸಂಪ್ರದಾಯಕ್ಕೆ ಚ್ಯುತಿ ಒದಗದಂತೆ ಆಧೂನಿಕತೆಯ ಲೇಪದೊಂದಿಗೆ ಜಗದ್ವ್ಯಾಪಿಯಾದ ಶ್ರೀ ಮಂಗಳಾದೇವಿ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ.

ಶ್ರೀ ದೇವಿಯ ಕೃಪಾವಲೋಕನದಿಂದ ಸಕಲ ಮನೋಭೀಷ್ಠಗಳನ್ನು ಪಡೆದು ಸಂತುಷ್ಟರಾಗಿರಲು ಜಗವೇ ಮಾತೆಯ ಪಾದ ಕಮಲಗಳಿಗೆ ಎರಗುತ್ತಿರೆ.... ಇದೀಗ ವರ್ಷಾವಧಿ ಜಾತ್ರ ಮಹೋತ್ಸವದ ವೈಭವೀಕರಣಕ್ಕೆ ಶ್ರೀ ಕ್ಷೇತ್ರವು ಸಜ್ಜಾಗಿದೆ.

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪಾಲ್ಗುಣ ಮಾಸದ ಹುಣ್ಣಿಮೆಯಂದು ಧ್ವಜಾರೋಹಣ ವಾಗುವುದರೊಂದಿಗೆ, ಆರು ದಿವಸಗಳ ಪರ್ಯಂತ
ಶ್ರೀ ದೇವಿಯ ಕಾಲಾವಧಿ ಉತ್ಸವ ಅಥವ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯುವುದು ವಾಡಿಕೆ.

ಇದೇ ಪ್ರಯುಕ್ತ ಈ ಬಾರಿಯ ಪಂಚಾಂಗದ ಅನುಸಾರ 'ವಿಳಂಬಿ ನಾಮ' ಸಂವತ್ಸರದ ಫಾಲ್ಗುಣ ಮಾಸದ ಉತ್ತರಾಯಣ ಶುಕ್ಲ ಪಕ್ಷದ ಬಹುಳ ತದಿಗೆಯ ದಿನವಾದ ನಾಳಿನ ಶನಿವಾರ 2019 ಮಾರ್ಚಿ ೨೩'ರಿಂದ ಮೊದಲ್ಗೊಂಡು ಬರುವ ಮುಂದಿನ ೨೮'ಗುರುವಾರದ ವರೆಗೆ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವವು ಬಹು ವಿಜೃಂಭಣೆಯಿಂದ ನಡೆಯಲಿದೆ.

ಉತ್ಸವ ಕಾಲದ ಪ್ರತಿದಿನವೂ ದೇವಿಯ ಪೂಜಾ-ವಿಧಿ ವಿಧಾನಗಳು ,ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ವೈಶಿಷ್ಟಪೂರ್ಣ ರೀತಿಯಲ್ಲಿ ನಡೆಯಲಿರುವುದು.

ಅಭಯ-ವರದ ಹಸ್ತಳಾಗಿ ಸ್ವರ್ಣಾಭರಣಗಳನ್ನು ಧರಿಸಿ ಆಯುಧ ಪಾಣಿಯಾದ ಸಿಂಹವಾಹನೆ ದೇವಿಯು ಸರ್ವಾಲಂಕಾರಯುಕ್ತಳಾಗಿ ಮಹಾರಾಣಿಯಂತೆ ಸರ್ವತ್ರ ಆರಾಧಿಸಲ್ಪಡುತ್ತಾಳೆ.
ಧರೆಗಿಳಿದ ಸಾಕ್ಷಾತ್ ಇಂದ್ರನ ಅಮರಾವತಿಯಂತೆ  ಸೀಯಾಳಾದಿಗಳ ಪುಷ್ಪಾಲಂಕಾರದಿಂದ ಶೃಂಗಾರಾಲಂಕೃತಗೊಂಡ ದೇವಸ್ಥಾನವು ವಿದ್ಯುದ್ದೀಪಗಳಿಂದ ಬೆಳಗುತ್ತಾ ನೋಡುಗರ ಹೃನ್ಮನಕ್ಕೆ ಧನ್ಯತಾ ಭಾವವನ್ನು ಒದಗಿಸುತ್ತದೆ.

ಧ್ವಜಾರೋಹಣದ ಹಿಂದಿನ ದಿನವಾದ ಇಂದಿನ ಶುಕ್ರವಾರ ಕೆಲವೊಂದು ವೈದಿಕ ವಿಧಿ-ವಿಧಾನಗಳನ್ನು ಜಾತ್ರೆಯ ಪೂರ್ವಭಾವಿಯಂತೆ ಶಾಸ್ತ್ರೋಕ್ತವಾಗಿ ದೇವಳದಲ್ಲಿ ಸಾಯಂಕಾಲ ನಡೆಸಲಾಗುತ್ತದೆ.

ಪ್ರಥಮವಾಗಿ ಇಂದಿನ ಸಾಯಂಕಾಲ ಸೂರ್ಯಾಸ್ತದ ಗೋಧೋಳಿ ಲಗ್ನ ಸನ್ನಿಹಿತವಾಗಿರುವ ಸುಮೂಹೂರ್ತದಲ್ಲಿ ದೇವಿಯಲ್ಲಿ ಪ್ರಾರ್ಥನೆಯೊಂದಿಗೆ  ನಾಂದಿ ಬಂಧನವಾಗಿ ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ(ರಕ್ಷಣೆಯನ್ನು ಬಯಸಲು), ವಾಸ್ತುಪೂಜೆ
(ವಾಸ್ತು ದೇವನ ಕೃಪೆಗಾಗಿ), ಪುಣ್ಯಾಹ
( ದೇವಳವನ್ನು ಶುದ್ಧಗೊಳಿಸುವ ಪ್ರಕ್ರಿಯೆ), ದ್ವಿಕಾಲ ಬಲಿ ಪ್ರಧಾನ (ದಿಕ್ಪಾಲಕರಿಗಾಗಿ ತಂತ್ರ)...
ಹೀಗೆ ಶಾಸ್ತ್ರದನ್ವಯ ವಿಧಿವತ್ತಾಗಿ ಕೈಂಕರ್ಯಗಳು ನಡೆದು 'ಅಂಕುರಾರ್ಪಣೆ'ಯು ನಡೆಯುತ್ತದೆ.
ಪ್ರಥ್ವಿ ತತ್ವಕ್ಕೆ ಸಂಬಂಧಿಸಿದ ಅಂಕುರಾರೋಪಣ ಬೀಜಾಂಕುರಗಳನ್ನು ಪುಷ್ಪಿತಗೊಳಿಸುವ ಕ್ರಿಯೆ ; ಮೃತ್ತಿಕೆಯಲ್ಲಿ ಧಾನ್ಯ ಬೀಜಗಳನ್ನು ಬಿತ್ತಿ ಇಡಲಾಗುವುದು. ಈ ರೀತಿ ಬಿತ್ತಿದ ಬೀಜವು ಉತ್ಸವದ ದಿನ ಮೊಳಕೆಯೊಡೆದು ಪುಷ್ಪಿತವಾಗುತ್ತದೆ.
ಹೀಗೆ ಅಂಕುರಾರೋಪಣವು ನಡೆದು, ಮಹಾಪೂಜೆಯೊಡನೆ ಶ್ರೀ ದೇವಿಗೆ ಸಣ್ಣ ರಂಗಪೂಜೆಯು ನಡೆಯುತ್ತದೆ.

ನಾಳಿನ ಸೂರ್ಯೋದಯದ ಪೂಜೆಯ ಬಳಿಕ ಸಾನಿಧ್ಯ ವೃದ್ಧಿಗೆ, ದೇವಿಯ ಕಲಾ ಸಾನಿಧ್ಯವೃದ್ಧಿಗೆ ಬಿಂಬಶುದ್ಧಿ, ಬಳಿಕ ೨೫' ಪಂಚ ವಿಶಂತಿ ಕಲಶಾಭಿಷೇಕ, ಮಹಾಗಣಪತಿ ಸಹಿತ ಪರಿವಾರ ದೈವಗಳಿಗೆ ಕಲಶಾಭಿಷೇಕವು ನಡೆಯುತ್ತಿದ್ದಂತೆಯೇ ಜಾತ್ರಾ ಮಹೋತ್ಸವದ ಧ್ವಜಾರೋಹಣಕ್ಕೆ ಕ್ಷಣಗಣನೆ ಆರಂಭಗೊಳ್ಳುತ್ತದೆ.😀

'ಜಾತ್ರ' ಎಂದರೆ ಹಲವು ಉತ್ಸವಗಳ ಸೇವೆಯನ್ನು ಧ್ವಜವನ್ನೇರಿಸಿ ದೇವಿಗೆ ರಾಜೋಚಿತವಾಗಿ ಅರ್ಪಿಸವ ಕಾಲಾವಧಿಯ ಉತ್ಸವವಾಗಿದೆ.
ಅಭಿಷೇಕಾದಿಗಳು, ಹೋಮ, ಬಲಿ ಉತ್ಸವಾದಿಗಳು, ರಥ ಸವಾರಿ, ಶಯನ, ಅವಭೃತ, ಸಂಪ್ರೋಕ್ಷಣೆ ಮುಂತಾದ ಉತ್ಸವಗಳ ಸಲ್ಲಿಸುವ ವಾರ್ಷಿಕ ಪರ್ವ ಕಾಲಕ್ಕೆ ಜಾತ್ರಾ ಮಹೋತ್ಸವ ಎಂದು ಹೇಳುವರು.

 ಶ್ರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವವು ಪ್ರಾರಂಭಗೊಳ್ಳುವುದು 'ಸಿಂಹ ಧ್ವಜ' ಧ್ವಜಾರೋಹಣದೊಂದಿಗೆ.
ದೇವಸ್ಥಾನದಲ್ಲಿ ನಡೆಯುವ ಧ್ವಜಾರೋಹಣಕ್ಕೆ ಒಂದು ಪ್ರಮುಖ ಉದ್ದೇಶವಿದ್ದು ಭವಿಷ್ಯದಲ್ಲಿ ಗ್ರಾಮಕ್ಕೆ ಒದಗಿ ಬರತಕ್ಕಂತಹ ಕ್ಷೋಭೆ, ಅಪಕೀರ್ತಿ, ಆಪತ್ತು, ರೋಗ-ರುಜಿನಗಳು, ಅತಿವೃಷ್ಟಿ-ಅನಾವೃಷ್ಟಿ,ಮುಂತಾದ ಸಕಲ ಅರಿಷ್ಟಗಳ ನಿವಾರಣೆಗಾಗಿ; ದೇವಿಯ ಸಮ್ಮುಖದಲ್ಲಿ ಪ್ರಾರ್ಥನೆಯೊಂದಿಗೆ ಸಿಂಹ ಲಾಂಛನವಿರುವ ಧ್ವಜವನ್ನು ಏರಿಸಲಾಗುತ್ತದೆ.

ಯಾವುದೇಯೊಂದು ಕ್ಷೇತ್ರದಲ್ಲಿ ಆಯಾ ಅಧಿದೇವರ ವಾಹನವು ಧ್ವಜವೇರುವುದು ವಾಡಿಕೆ. ಅಂತೆಯೇ ನಮ್ಮ ಮಂಗಳಾದೇವಿಯ ಸನ್ನಿಧಾನದಲ್ಲಿ ಶ್ರೀ ದೇವಿಗೆ 'ಸಿಂಹ ರಾಜನು' ವಾಹನನೆಂಬ ಪ್ರತೀತಿ.
ಅಲ್ಲದೆ ಗ್ರಾಮಕ್ಕೆ ಬರತಕ್ಕಂತಹ ಸಕಲಾರಿಷ್ಟಗಳನ್ನು ನಿವೃತ್ತಿಗೊಳಿಸಿ ಗ್ರಾಮಕ್ಕೆ ರಕ್ಷಣೆಯನ್ನು ಸಿಂಹನು ತಂದೊದಗಿಸುವನು. ಈ ಸಂದರ್ಭದಲ್ಲಿ ಯಾವುದೇ ಕೆಡುಕುಗಳು, ಅವಘಡಗಳು,ಕಂಟಕಾದಿಗಳ ಸಂಭವವು ಮುಂದಿನ ದಿನಗಳಲ್ಲಿ ಕಂಡುಬಂದಲ್ಲಿ ಸಿಂಹನು ಅದನ್ನು ದೇವಿಯಲ್ಲಿ ಅರುಹಿದಲ್ಲಿ ,ಈ ಮುಖಾಂತರ ಶ್ರೀ ದೇವಿಯು ಅವೆಲ್ಲವನ್ನು ಉಪಶಮನ ಗೊಳಿಸುವಳು ಎಂಬ ದೃಢವಾದ ನಂಬಿಕೆಯಿದೆ.

ಈ ಹಿನ್ನೆಲೆಯಲ್ಲಿ ಸಿಂಹ ಧ್ವಜವನ್ನು ಆಳೆತ್ತರದ ಧ್ವಜ ಸ್ತಂಭದ ತುತ್ತತುದಿಗೆ ಏರಿಸಲಾಗುತ್ತದೆ. ಈ ಕಾರಣದಿಂದಲೇ ಎಲ್ಲಾ ಮಂಗಳಾದೇವಿ ಗ್ರಾಮದ ನಿವಾಸಿಗಳು ಕಡ್ಡಾಯವಾಗಿ ಧ್ವಜಾರೋಹಣದ ಸಂದರ್ಭದಲ್ಲಿ ಹಾಜರಾಗಿದ್ದು, ಯಾವುದೇ ಕಾರಣಕ್ಕೂ ಧ್ವಜಾರೋಹಣವಾದ ಬಳಿಕ ಗ್ರಾಮದ ಊರನ್ನು ತೊರೆದು, ಪರವೂರುಗಳಿಗೆ ಪ್ರಯಾಣ ಬೆಳೆಸಿ ಹೋಗ ಕೂಡದು. ಒಂದು ಪಕ್ಷ ಹೊರಟರೂ ಸೂರ್ಯಾಸ್ತದ ಒಳಗಾಗಿ ಹಿಂದಿರುಗಿ ಗ್ರಾಮಕ್ಕೆ ಬರಬೇಕು ಎಂಬ ಪದ್ದತಿ ಅನಾದಿ ಕಾಲದಿಂದ ಇಂದಿಗೂ ಪ್ರಚಲಿತದಲ್ಲಿದೆ. ಹೀಗೆ ತಾಂತ್ರಿಕವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯಾವತ್ತೂ ಸಿಂಹ ರಾಜನು ದೇವಿಗೆ ಆಜ್ಞಾಧಾರಕನಾಗಿ ಇರುತ್ತಾನೆಂಬ ನಂಬಿಕೆ.

ಇನ್ನು ಮಂಗಳಾದೇವಿ ದೇವಸ್ಥಾನದ ಧ್ವಜಸ್ತಂಭಕ್ಕೆ ತನ್ನದೇಯಾದ ವಿಶೇಷ ಗೌರವ, ಮನ್ನಣೆಯಿದೆ. ದೇವಳದ ಪ್ರಧಾನ ಪ್ರವೇಶ ಮಹಾದ್ವಾರದ ಹೊರಗೆ ರಾಜಾಂಗಣದಲ್ಲಿ ದೇವಿಯ ಸನ್ನಿಧಿಗೆ ನೇರ ಅಭಿಮುಖವಾಗಿ ;ಮಹಾಬಲಿ ಪೀಠದ ಹಿಂಭಾಗದಲ್ಲಿ ಸ್ಥಾಪಿತಗೊಂಡಿರುವ ಧ್ವಜ ಸ್ತಂಭ(ಕೊಡಿ ಮರ)ವು ಒಂದೇ ಸಾಗುವನಿ ಮರದ ಬೃಹತ್ ಗಾತ್ರವು ದೇಗುಲದ ಎತ್ತರಕ್ಕಿಂತ ೨'ಪಟ್ಟು ಎತ್ತರವಿದ್ದು, ಧ್ವಜ ಸ್ತಂಭಕ್ಕೆ ಹಿತ್ತಾಳೆ-ತಾಮ್ರದ ಕವಚವನ್ನು ಹೊದಿಸಲಾಗಿದೆ. ಅಲ್ಲದೆ ಕೆಳ ಭಾಗದಲ್ಲಿ ದೇವೇಂದ್ರ, ಈಶಾನ, ಕೃತಾಂತಾದಿ ಅಷ್ಟ ದಿಕ್ಪಾಲಕರ ಸುಂದರ ಕಲಾ ಮೂರ್ತಿಗಳು ಧ್ವಜ ಸ್ತಂಭದ ಸೌಂದರ್ಯವನ್ನು ಹೆಚ್ಚಿಸಿವೆ. ಇನ್ನು ಸ್ತಂಭದ ತುತ್ತತುದಿಯಲ್ಲಿ ಪಶ್ಚಿಮ ದಿಕ್ಕಿಗೆ ದೇವಳಕ್ಕೆ ಮುಖಮಾಡಿ ಕುಳಿತಿರುವ ಸಿಂಹನ ರಾಜನ ಮೂರ್ತಿಯನ್ನೂ ಕಾಣಬಹುದು.

ಹಿಂದೆ ಇದಕ್ಕೂಮೊದಲು ಅಮ್ಮನವರಿಗೆ ನೂತನ ಧ್ವಜ ಸ್ತಂಭವನ್ನು ನಿರ್ಮಿಸಲು ಯೋಜನೆಯೊಂದು ನಡೆದಿತ್ತು.
'ಏಕ ಶಿಲಾ' ಶಿಲೆಯ ಭಾಗವನ್ನು ತಂದು ಸುಮಾರು ಒಂದು ವರ್ಷಗಳ ಕಾಲ ನಿರಂತರವಾಗಿ ಸ್ತಂಭದ ಶಿಲ್ಪಕಲೆಯ ನಿರ್ಮಾಣದ ಕಾರ್ಯವೂ ಕ್ಷೇತ್ರದಲ್ಲಿ ನಡೆಯಿತು. ಆದರೆ ಸೋಜಿಗವೆಂಬಂತೆ ನವೀಕೃತಗೊಂಡು ಸ್ಥಾಪನೆಗೆ ಸಿದ್ಧವಾದ ಕಲ್ಲಿನಿಂದ ನಿರ್ಮಿಸಿದ ಶಿಲಾ ಧ್ವಜ ಸ್ತಂಭವು ಇನ್ನೇನು ಏರಿಸಬೇಕೆನ್ನುವಷ್ಟರಲ್ಲಿ ಯಾರ ಹಸ್ತಾಕ್ಷೇಪವು ಇಲ್ಲದೆ, ತನ್ನಿಂತಾನಾಗೆ ಮುರಿದು ಬಿದ್ದು ಇಗ್ಭಾಗವಾಗಿ ಹೋಗಿತ್ತು. ಮುಂದೆ ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಿಗೆ ಶಿಲೆಯಿಂದ ನಿರ್ಮಿತವಾದ ಧ್ವಜಸ್ತಂಭವು ಸಂತೃಪ್ತಿಯಿಲ್ಲದಿರುವುದಾಗಿಯೂ, ಆಕೆಗೆ ವೃಕ್ಷದಿಂದ ನಿರ್ಮಿಸಿದ ಧ್ವಜಸ್ತಂಭವನ್ನೇ ಸ್ಥಾಪಿಸಬೇಕೆಂಬ ಆಜ್ಞೆಯು ಪಡಿಮೂಡಿತು. ಅಲ್ಲದೆ, ಶಿಲೆಯಿಂದ ಮಾಡಿದ ಸ್ಥಂಭವನ್ನು ಸ್ಥಾಪಿಸಿದಲ್ಲಿ ಅದು ಮುಂದೆ  ಮಳೆ, ಬಿಸಿಲು ಮೊದಲಾದ ಪ್ರಾಕೃತಿಕ ಅಂಶಗಳಿಂದ ಕುಸಿದು ಅಜೀರ್ಣಾವಸ್ಥೆಯನ್ನು ಹೊಂದುವ ಸಂಭವವಿದ್ದರಿಂದ ಈ ವಿದ್ಯಮಾನ ನಡೆಯಿತೆಂಬುದಾಗಿ ತಿಳಿದು ಬಂದಿತು.

ಮುಂದೆ ಇದಕ್ಕೆ ಸೂಕ್ತವಾದ ಪ್ರಾಯಶ್ಚಿತಗಳನ್ನು ನಡೆಸಿ, ಕೊನೆಗೂ ದೇವಿಯ ಸ್ವಯೀಚ್ಛೆಯಂತೆ ಏಕ ವೃಕ್ಷದಿಂದ ನಿರ್ಮಿಸಿದ ಧ್ವಜಸ್ತಂಭವನ್ನು ಮಾರ್ಚಿ ೧೫ ಭಾನುವಾರ ೧೯೯೮ ರಂದು 'ಶೃಂಗೇರಿ ಶಾರದ ಮಠದ ದಕ್ಷಿಣಾಮ್ಮಾಯ ಪೀಠದ ಪೀಠಾದಿಪತಿಗಳಾಗಿರುವ ಪರಮಪೂಜ್ಯ 'ಜಗದ್ಗುರು ಶ್ರೀ ಭಾರತೀ ತೀರ್ಥ' ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೂತನ ಧ್ವಜಸ್ತಂಭದ ಪುನಃ ಪ್ರತಿಷ್ಟಾಪನಾ ಕಾರ್ಯವು ನೆರವೇರಿತು. ಈ ಎಲ್ಲಾ ಕಾರಣಗಳಿಂದಾಗಿ ದೇವಳದ ಧ್ವಜಸ್ತಂಭಕ್ಕೆ ತನ್ನದೇಯಾದ ಮಹತ್ವವಿದೆ.

ನಾಳಿನ ಅಪರಾಹ್ನ ೧೨'ಗಂಟೆಗೆ ಮಹಾಪೂಜೆಯ ಬಳಿಕ ಸಿಂಹ ಲಾಂಛನವಿರುವ ರಜತ ಸಿಂಹ ಧ್ವಜವನ್ನು ಶ್ರೀ ದೇವಿಯ ಸಮ್ಮುಖದಲ್ಲಿ ಏರಿಸಲಾಗುತ್ತದೆ.
ದೇವಳದ ಕೀರ್ತಿ ಉದಾತ್ತತೆ ಸ್ಫುರಿಸಿ, ಸಂಪೂರ್ಣ ಗ್ರಾಮಕ್ಕೆ ಸುಖಶಾಂತಿ ಶ್ರೇಯೋಭಿವೃದ್ಧಿ ಲಭಿಸಿ ಶ್ರೇಷ್ಟತೆಗೇರ ಬೇಕೆಂಬ ಸಂಕಲ್ಪವನ್ನಿಟ್ಟುಕೊಂಡು ಧ್ವಜಾರೋಹಣವಾಗುತ್ತದೆ. ನಂತರ ಸೀಯಾಳ,ಎಳೆತೆಂಗು,ಅಡಿಕೆ ಗೊನೆ, ಗೊನೆಗಳುಳ್ಳ ಬಾಳೆಗಿಡ, ಹಲಸಿನ ಕಾಯಿ,ಹಿಂಗಾರ ಮೊದಲಾದ ಸುವಸ್ತುಗಳಿಂದ ಧ್ವಜ ಸ್ತಂಭವನ್ನು ಅಲಂಕರಿಸಾಗುತ್ತದೆ.

ಉತ್ಸವ ಕಾಲದಲ್ಲಿ ಪ್ರತಿದಿನ ಪ್ರಾತಃಕಾಲ ಶ್ರೀ ದೇವಿಗೆ ನಿತ್ಯ ಪೂಜೆಯು ಜರುಗಿ 'ನವಕ ಕಲಶಾಭಿಷೇಕ'ವು ನಡೆಯಲಿದ್ದು, ನಾಡಿದ್ದಿನ ಭಾನುವಾರ ಅಷ್ಟೋತ್ತರ(೧೦೮) ಶತ ನಾರೀ ಕೇಳ ಗಣಯಾಗ ಮೂರನೇ ದಿನ ಸೋಮವಾರದಂದು ಶತ ರುದ್ರಾಭಿಷೇಕವೂ ನಡೆಯಲಿದೆ.
ಅಭಿಷೇಕದ ಬಳಿಕ ಬಿಂಬದಲ್ಲಿ ಪೂರ್ಣ ಕಳಾ ಸಾನಿಧ್ಯಳಾಗಿ ದಿವ್ಯ ತೇಜಸ್ಸಿನಿಂದ ಪ್ರಸನ್ನಳಾದ ಮಾತೆಗೆ ನಡೆಸುವ ಅಲಂಕಾರಗಳು ಪ್ರೇಕ್ಷಣೇಯವಾಗಿದ್ದು ಎಷ್ಟೇ ನೋಡಿದರು ದಣಿಯದೆ ಇನ್ನೂ ನೋಡಬೇಕೆಂದು ಮನಸ್ಸು ತವಕಿಸುತ್ತದೆ.
ದೇವಿಯ ಸಂಪೂರ್ಣ ಅಲಂಕಾರದ ಸೊಬಗ ಸರ್ವಾವಯಗಳನ್ನು ಬಿಡದೆ ದರ್ಶನ ಮಾಡುವುದು ನಮಗೊದಗುವ ಪುಣ್ಯವೇ ಸರಿ .

ಶ್ರೀ ದೇವಿಯ ಜಾತ್ರ ಮಹೋತ್ಸವದ ಉತ್ಸವಗಳಲ್ಲಿ ಪ್ರಧಾನ ಆಕರ್ಷಣೆಯೆಂದರೆ ಅದು ಬಲಿ ಉತ್ಸವಾದಿಗಳು. ದೇವಾಲಯದ ಒಳ ಆಗು ಹೊರ ಪ್ರಾಕಾರದಲ್ಲಿ ದೈವೀಶಕ್ತಿ ಸದಾ ಜಾಗೃತವಾಗಿರಲು ಬಲಿ ಉತ್ಸವವನ್ನು ನಡಸುತ್ತಾರೆ.
'ಬಲಿ' ಎಂದರೆ ದೇವಳದ ಬಲ ಭಾಗದಿಂದ ವರ್ತುಲಾಕಾರದಲ್ಲಿ ಸಂಪೂರ್ಣ ದೇವಳವನ್ನು, ದೇವಿಯ ಉತ್ಸವ ಮೂರ್ತಿಯನ್ನು ಶಿರದಲ್ಲಿರಿಸಿ ಸರ್ವ ವಾದ್ಯ-ಘೋಷಾದಿಗಳ ಸಹಿತ ಪ್ರದಕ್ಷಿಣಾಕಾರವಾಗಿ ಸುತ್ತು ಬರುವುದು, ಅನಂತರ ಹೊರಟ ಸ್ಥಾನವನ್ನು ಸೇರುವುದು ಎಂದರ್ಥ.
ಬಲಿ ಸುತ್ತುಗಳಿಗೆ ಬಾರಿಸುವ ವಾದ್ಯಗಳಿಗೆ ಕೆಲವೊಂದು ಹೆಸರುಗಳನ್ನಿಟ್ಟ ಕರೆಯುವ ವಾಡಿಕೆಯಿದೆ.
ಉಡುಕೆ ಸುತ್ತು, ಚಂಡೆ ಸುತ್ತು, ಚಕ್ರ ವಾದ್ಯ ಸುತ್ತು, ಓಟದ/ಓಡ ಬಲಿ, ದೀಪದ ಬಲಿ, ದರ್ಶನ ಬಲಿ ಇತ್ಯಾದಿ. ಈ ಬಲಿ ಪ್ರದಕ್ಷಿಣೆಯಿಂದ ಗಣಗಳು ದೇವಿಯ ಅನುವರ್ತಿಯಾಗುವುದೆಂಬ ನಂಬಿಕೆ.

ಕಾಲಾವಧಿ ಉತ್ಸವದ ಈ ಉತ್ತಮಕಲ್ಪದಲ್ಲಿ ಅಕ್ಷಯ ಫಲವನ್ನು ಕರುಣಿಸುವ ಮಂಗಳಾಂಭೆಯು ಸ್ವರ್ಣಮಯ ಪುಷ್ಪ ಕನ್ನಡಿಯ ಮೆರುಗಿನೊಂದಿಗೆ ಉತ್ಸವ ಮೂರ್ತಿಯಲ್ಲಿ ಅಲಂಕೃತಳಾಗಿ ಆಭರಣಾದಿ ಸುಮಪುಷ್ಪಗಳಿಂದ ಶೋಭಿತ ಪಟ್ಟದ ರಾಣಿಯಂತೆ ತನ್ನ ಉತ್ಸವಕ್ಕಾಗಿ ಗರ್ಭಗೃಹದಿಂದ ಹೊರಬಂದು ಸಮೀಪ ದರ್ಶನವನ್ನೀವ ಆಕೆಗೆ ಸಾಷ್ಟಾಂಗ ನಮನ ಸಲ್ಲಿಸುವ ಅಪೂರ್ವ ಸಂದರ್ಭ ಈ ಬಲಿ ಉತ್ಸವದ್ದು.

'ಬ್ರಹ್ಮವಾಹಕ'ರಾದ ಮೂರ್ತಿಭಟ್ಟರು ಉತ್ಸವ ಮೂರ್ತಿಯನ್ನುಗರ್ಭಗೃಹದಿಂದ ಹೊರಗೆ ತಂದೊಡನೆಯೆ 'ಭೇರಿ ತಾಡನ'ದೊಡನೆ ದೇವಳದ ಒಳ ಪ್ರಾಕಾರದಲ್ಲಿರುವ ಬಲಿಗಲ್ಲುಗಳಿಗೆ ಬಲಿಹರಣವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯದ ಒಳಾಂಗಣದ ಸುತ್ತುಗಳಲ್ಲಿ ದೇವಿಯ ಮೂರ್ತಿಯನ್ನು ಎದೆಗೆ ಆನಿಸಿ ಹಸ್ತಗಳಲ್ಲಿ ಹಿಡಿದು, ಬಲಿ ಹರಣವಾದ ಬಳಿಕ ವೇದಮಂತ್ರ ಪಠಣದೊಂದಿಗೆ ಆದರಾತೀಥ್ಯದಿಂದ ಮೂರ್ತಿಯನ್ನು ರಾಜಾಂಗಣಕ್ಕೆ ತಂದು ಶಿರದಲ್ಲಿರಿಸಿ ಆರತಿಯಾಗಿ ಹೊರ ಬಲಿ ಸುತ್ತು ಮೊದಲ್ಗೊಳ್ಳುತ್ತದೆ.

ಬಲಿಯು ಆರಂಭಗೊಳ್ಳುವುದು ಭೇರಿ ತಾಡನದೊಡನೆ. ಮೊದಲ ಸುತ್ತು ಅಷ್ಟ ದಿಕ್ಪಾಲಕರಿಗೆ, ಎರಡನೇ ಸುತ್ತು ಗಣ ದೇವತೆಗಳಿಗೆ ಪ್ರಧಾನ  ಬಲಿಪೀಠದಲ್ಲಿ ತಂತ್ರತೂಗಿ, ಅಂತರ್ಮಂಡಲದಲ್ಲಿರ್ಪ ದಿಕ್ಪಾಲಕರಿಗೆ ಬಲಿಗಲ್ಲುಗಳ ಮೇಲೆ  ಅಕ್ಕಿಯ ಚರುವನ್ನು ಸಮರ್ಪಿಸಲಾಗುತ್ತದೆ.
ನಂತರ 'ಪದಾರ್ಥಿ ಪಾಣಿ'ಗಳಿಂದ ಉಡುಕೆ ಸುತ್ತು, ಪಂಚವಾದ್ಯಗಳಿಂದ ಕೂಡಿದ ಚಂಡೆ ಸುತ್ತು, ಭೈರವಿ(ಸ್ಯಾಕ್ಸೋಫೋನ್) ಸುತ್ತು, ಓಟದ (ಓಡ)ಬಲಿ ಸುತ್ತು, ಮುಂತಾದ ಬಲಿ ಸುತ್ತುಗಳೊಂದಿಗೆ ಬಲಿಯುತ್ಸವವು ನಡೆಯುತ್ತದೆ.

ಜಾತ್ರಾ ಕಾಲದಲ್ಲಿ ನಡೆಯುವ ಈ ವಿಶೇಷವಾದ ಬಲಿ ಉತ್ಸವವನ್ನು ಸಂಕ್ಷಿಪ್ತವಾಗಿ ದೇವಿಯ
ಬಯನ ಬಲಿ ಎಂದು ವ್ಯಾಖ್ಯಾನಿಸಲಾಗುವುದು. ಉತ್ಸವ ಕಾಲದ ಮೊದಲ ನಾಲ್ಕೂ ದಿನಗಳಲ್ಲಿ ಸೂರ್ಯಾಸ್ತದ ಬಳಿಕ ದೇವಸ್ಥಾನದ ಹೊರ ಪ್ರಾಂಗಣದ ರಾಜಾಂಗಣದಲ್ಲಿ ವಿವಿಧ ವಾಧ್ಯಘೋಷಾದಿಗಳ, ಸಿಂಹ ದಂಡ, ಛತ್ರ ಚಾಮರ, ಬಿರುದು-ಬಾವಲಿಯ ಸಹಿತ ವೖೆಭವದಿಂದ ಎರಡೂ ಬದಿಯ ದೀವಟಿಕೆಗಳ ಬೆಳಕಿನಲ್ಲಿ
ಶ್ರೀ ದೇವಿಯ ಬಯನ ಬಲಿ ಉತ್ಸವವು ನಡೆಯುತ್ತದೆ. ಆದರಿಂದ ಜಾತ್ರೆಯ ಸಂಭ್ರಮದಲ್ಲಿ ಸಿಂಹಪಾಲು ಬಯನ ಬಲಿ ಉತ್ಸವದ್ದು.

ಮಂಗಳೆ ಯಕ್ಷಗಾನ ಪ್ರಿಯೆ. ನಾಲ್ಕನೇಯ ದಿನವಾದ ಮಂಗಳವಾರದ ಬಯನ ಬಲಿಯ ಸುತ್ತಿನಲ್ಲಿ ಯಕ್ಷಗಾನದ ಸುತ್ತು ದೇವಿಗೆ ಸಮರ್ಪಿತವಾಗುತ್ತದೆ. ತಾಳಮದ್ದಲೆಯ ಹಿನ್ನೆಲೆಯಲ್ಲಿ ಭಾಗವತರ ಹಾಡುಗಾರಿಕೆಯೊಂದಿಗೆ 'ರಾಧಾ-ಕೃಷ್ಣರ' ವೇಷಭೂಷಣ ಪಾತ್ರಧಾರಿಗಳು ಶ್ರೀ ದೇವಿಗೆ ನಡೆಸುವ ಯಕ್ಷಗಾನ ನಾಟ್ಯದ ಸುತ್ತನ್ನು ಕಾಣಬಹುದು.
ಅಲ್ಲದೆ ಅದೇ ದಿನ ದೇವಿಗೆ ಸಣ್ಣ ಭಂಡಿ ಉತ್ಸವವೂ ದೇವಳದ ಹೊರ ಪ್ರಾಕಾರದಲ್ಲಿ ನಡೆಯಲಿರುವುದು.

ಈ ತೆರನಾಗಿ ಬಯನ ಬಲಿ ಉತ್ಸವವು ಜರುಗಿ ದೇವಳದ ಆಗ್ನೇಯ ಭಾಗದಲ್ಲಿರುವ ವಸಂತ ಮಂಟಪದಲ್ಲಿ ದೇವಿಯ ವಸಂತ ಪೂಜೆಯು ನಡೆದು ದೇವಿ ಗರ್ಭಗೃಹವನ್ನು ಸೇರುವಲ್ಲಿ ಆರತಿಯಾಗಿ ದೇವಿಯ ಬಯನ ಬಲಿ ಉತ್ಸವವು ಸಂಪನ್ನಗೊಳ್ಳುತ್ತದೆ. ನಂತರ ನಿತ್ಯಾನುಷ್ಟನದ ಪ್ರಕಾರ ಮಹಾ ಪೂಜೆಯು ರಾತ್ರಿ ೯.೩೦ ರಿಂದ ೧೦ ರ ನಡುವಿನ ಸುಮಾರಿಗೆ ಮಹಾಪೂಜೆಯು ನಡೆಯಲಿದೆ.

ತದನಂತರ ಶುರುವಾಗುವುದೇ ಭೂತಬಲಿ.
ಪ್ರತಿ ಪ್ರಧಾನ ದೇವತೆಯು ತನ್ನದೇಯಾದ ಪೀಠ, ದ್ವಾರ, ಶಕ್ತಿ ಆವರಣಗಳಿಂದ ಕೂಡಿರಬೇಕು ಎಂಬ ಆಗಮ ನಿಯಮವಿರುತ್ತದೆ. ಈ ಕಾರಣದಿಂದಲೇ ದೇವಳದ ಸುತ್ತು ಪೌಳಿಯಲ್ಲಿ ಆವರಣ ದೇವತೆಗಳನ್ನು ಬಲಿಗಲ್ಲಿನಲ್ಲಿ ಪ್ರತಿಷ್ಟಾಪಿಸಿರುತ್ತಾರೆ. ಹೀಗೆ ಚತುರಾವಣರನ್ನು, ಬಲಿ ದೇವತೆಗಳನ್ನು ಕಲ್ಪಿಸಲಾಗಿದೆ. ಆದ್ದರಿಂದಲೇ ಉತ್ಸವ ಕಾಲದಲ್ಲಿ ದೇವಿಯು ಗರ್ಭಗುಡಿಯಿಂದ ಹೊರಬಂದಾಗ ಅವರಿಗೆಲ್ಲಾ ಭೇರಿ ತಾಡನದ ಮೂಲಕ ತಾಂತ್ರಿಕ ವಿಧಾನದಲ್ಲಿ ಬೇಯಿಸಿದ ಅನ್ನದ ಚರುವನ್ನು ಪಾಲ್ಯ ಬಲಿಯೆಲೆ ಗಳನ್ನು ತಂತ್ರ ವಿಧಾನದಲ್ಲಿ ಹಾಕುವುದರೊಂದಿಗೆ ತೃಪ್ತಿ ಪಡಿಸಬೇಕು.
ಮುಂದೆ ದೇವಳದ ನೈರುತ್ಯ ಭಾಗದಲ್ಲಿರುವ 'ಕ್ಷೇತ್ರ ಪಾಲ' ಎಂಬ ಪ್ರಧಾನ ಬಲಿಗಲ್ಲಿಗೆ ದೇವಿಯ ಮೂರ್ತಿಯನ್ನು ಶಿರದಲ್ಲಿರಿಸಿದ ಬ್ರಹ್ಮವಾಹಕರಾದ ಮೂರ್ತಿ ಭಟ್ಟರ ಮೂಲಕ ಚರು ಸಮರ್ಪಣೆಯಾದ ಬಳಿಕ ಬಲಿಗಲ್ಲಿಗೆ ಆರತಿಯಾದಲ್ಲಿ ಭೂತ ಬಲಿಯು ಸಂಪನ್ನ ಗೊಳ್ಳುತ್ತದೆ. ಉತ್ಸವದ ಪ್ರತೀ ದಿನ ಪ್ರಾತಃಕಾಲದಲ್ಲೂ ಇದೇ ಭೂತಬಲಿಯು ನಡೆಯುತ್ತದೆ.

ಮೂಲಾ ನಕ್ಷತ್ರದ ಸಪ್ತಮಿಯ ದಿನವಾದ ಶನಿವಾರದಂದು ಶ್ರೀ ದೇವಿಯ ಮಹಾ ರಥೋತ್ಸವದ ಸಂಭ್ರಮ. ಅಪರಾಹ್ನ ೧೨'ಕ್ಕೆ ಮಹಾಪೂಜೆಯ ಬಳಿಕ ಬಲಿ ಹೊರಟು,ರಥದ ಶುದ್ಧೀಕರಣವಾಗಿ ರಥ ಕಲಶವನ್ನಿಟ್ಟು ರಥದ ಮುಂದೆ ಅಷ್ಟ ದಿಕ್ಪಾಲಕರಿಗೆ ಚರು ಸಹಿತ ಬಲಿ ಸಮರ್ಪಣೆಯಾಗಿ ಮುಗಿಲು ಮುಟ್ಟುವ ಜಯಘೋಷದೊಡನೆ ದೇವಿಗೆ ಅಕ್ಷತೆ, ಅರಳನ್ನ ಭಕ್ತಿಯಿಂದೆಸೆದು ರಥಬಲಿಯೊಂದಿಗೆ ದೇವಿಯ ರಥಾರೋಹಣವಾಗುವುದು.
ರಥಾರೋಹಣದ ಬಲಿಯ ಸಂದರ್ಭದಲ್ಲಿ ದೇವಿಯಲ್ಲಿ ಏನನ್ನು ಪ್ರಾರ್ಥಿಸುತ್ತೇವೆಯೋ, ಅದನ್ನು ಅವಧರಿಸಿ ಖಂಡಿತವಾಗಿಯೂ ನೆರವೇರಿಸುತ್ತಾಳೆಂಬ ರೂಢಿಯಿದೆ.

ರಥಾರೂಢಳಾದ ದೇವಿಗೆ ಆರತಿಗಳು ನಡೆದು,ರಥ ಪ್ರಸಾದ ರೂಪದಲ್ಲಿ ನಾಣ್ಯ ವೃಷ್ಟಿ, ಫಲವೃಷ್ಟಿ ಯಾಗುವುದು.
ರಾತ್ರೆ ಸುಮಾರು ೯'ಗಂಟೆಯ ಸುಮಾರಿಗೆ 'ರಥ ಸವಾರಿ'ಎಂದೇ ಕರೆಯಲ್ಪಡುವ ರಥೋತ್ಸವವು ನಡೆಯಲಿದ್ದು ,ರಥಾರೂಢಳಾದ ಪ್ರೀತಿಯ ತಾಯಿಯು ಸಾಲಂಕೃತಳಾಗಿ ರಥವನ್ನೇರಿ ಬರುವ ಆ ಕ್ಷಣವನ್ನು ಕಂಡು ಅನುಗ್ರಹಿತರಾಗಿ ಮಹಾ ನವಮಿ ಕಟ್ಟೆಯವರೆಗೂ ರಥ ಬೀದಿಯಲ್ಲಿ ಸಹಸ್ರ ಸದ್ಭಕ್ತರು ತೇರನ್ನೆಳೆದು ಕೃತಾರ್ಥರಾಗುತ್ತರೆ.
ಇದರೊಂದಿಗೆ  ಶಮೀ ಕಟ್ಟೆಯಲ್ಲಿರುವ ಶಮೀ ವೃಕ್ಷ ಪೀಠಕ್ಕೆ ಪೂಜೆಯು ನಡೆದು ರಥವು ಹಿಂದಿರುಗಿ ಬಂದು, ಪಲ್ಲಕಿಯೊಡನೆ ರಾಜಾಂಗಣದುದ್ದಕ್ಕೂ ಕರ್ಪೂರವನ್ನು ಬೆಳಗಿಸಿ ಸರ್ವ ಮಂಗಳವಾದ್ಯಗಳೊಡನೆ ದೇವಿಯನ್ನು ಆದರದಿ ದೇವಳಕ್ಕೆ ಬರಮಾಡಿಕೊಂಡು, ಬಲಿ ಉತ್ಸವವು ನಡೆದು 'ಬಟ್ಟಲು ಕಾಣೆಕೆ'ಯ ಪ್ರಸಾದವು ದೊರೆತ ತರುವಾಯ ಮಹಾಪೂಜೆಯು ನಡೆಯುತ್ತದೆ.
ತದನಂತರ ದೇವಿಗೆ ನಡೆಯುವುದೇ ಶಯನೋತ್ಸವ.

ರಾತ್ರಿ ಮಹಾಪೂಜೆಯಾಗಿ, 'ಶ್ರೀ ಭೂತಬಲಿ'ಯು ನಡೆಯುವುದು. ಈ ದಿನ ನಡೆಯುವ ಭೂತ ಬಲಿ ಭಕ್ತಾದಿಗಳಿಗೆ ವೀಕ್ಷಣೆಗೆ ನಿಷಿದ್ಧ. ಅರ್ಚಕರ ಹೊರತಾಗಿ ಗೌಪ್ಯ ರೀತಿಯಲ್ಲಿ ಶ್ರೀ ಭೂತ ಬಲಿಯನ್ನು ನಡೆಸಲಾಗುತ್ತದೆ.
ನಿಶೆಯು ಕವಿದ ನೀರವ ಕಾಲಕ್ಕೆ, ಮಲ್ಲಿಗೆಯ ಸುಮ ಪುಷ್ಪಾದಿಗಳನ್ನು ಗರ್ಭಗೃಹದ ಒಳಗೆ ದೇವಿಯ ಸುತ್ತಲೂ, ಪಾಣಿ ಪೀಠದಿಂದ ಹಿಡಿದು ಸಂಪೂರ್ಣ ಮೂಲಬಿಂಬವನ್ನು ಉತ್ಸವ ಮೂರ್ತಿ ಸಮೇತ ಹೂವುಗಳಿಂದ ಅಲಂಕರಿಸಿ, ಕಿರೀಟ ಆಭರಣಗಳನ್ನು ತೊಡಿಸಿ  ಬಿಂಬದ ಶಯನಾಲಂಕಾರವನ್ನು ಶ್ವೇತ ವರ್ಣದ ವಸ್ತ್ರದಿಂದ ಮುಚ್ಚಿ ಬಿಡುತ್ತಾರೆ. ಹೂವುಗಳು ಪರಿಮಳಿತವಾಗಿ ದೇವಿಗೆ ಅಪ್ಯಾಯಮಾನವಾಗಿದೆ. ಅಲ್ಲದೆ ಬಾಳೆನಾರಿನಿಂದ ಪೋಣಿಸಿದ ಹೂಗಳು ಸಲ್ಲಿಕೆಯಾಗುವುದರೊಂದಿಗೆ, ನೂಲಿನಿಂದ ಹೆಣೆದ ಮಾಲೆಗಳು ವರ್ಜ್ಯ. ಮುಂದೆ ಕವಾಟ ಬಂಧನವಾದ ನಂತರ, ಪ್ರದೋಷ ೬.೪೫'ರ ಸುಮಾರಿಗೆ ಪ್ರಾರ್ಥನೆಯೊಂದಿಗೆ ಕವಾಟೋದ್ಘಾಟನೆಯಾಗಿ ಅಭಿಷೇಕವಾದಲ್ಲಿ, ಶಯನಾಲಂಕಾರವಾಗಿ ದೇವಿಗೆ ಶಯನ ಮಹಾಪೂಜೆಯು ನಡೆದು 'ಅಷ್ಟಾವಧಾನ'ವು ನೆರವೇರಿ ಮುಂದೆ ತುಲಾಭಾರ ಸೇವೆಯು ನಡೆದು, ರಾತ್ರಿ ಅವಭೃತೋತ್ಸವವು ನಡೆಯುತ್ತದೆ.

ಅಂದು ಗುರುವಾರ ರಾತ್ರಿ ಬಲಿ ಹೊರಟು ದೇವಿಗೆ ವಸಂತ ಮಂಟಪದಲ್ಲಿ ,ಅಷ್ಟಾವಧಾನ ಸೇವೆಯೊಂದಿಗೆ ಕುಂಕುಮದ ಓಕುಳಿಯ ಹನಿಗಳ ಸಂಪ್ರೋಕ್ಷಣೆ ಯಾಗುತ್ತದೆ.
ಮುಂದೆ ದೇವಿಯ ಉತ್ಸವ ಮೂರ್ತಿಯನ್ನು ಸಣ್ಣ ಭಂಡಿಯಲ್ಲಿ ನೇತ್ರಾವತಿ- ಫಲ್ಗುಣೀ ನದಿಗಳ ಸಂಗಮತೀರದಲ್ಲಿ ಎಳೆದೊಯ್ಯಲಾಗುತ್ತದೆ.
ಪವಿತ್ರತಮೆಯಾಗಿ ಹರಿಯುತ್ತಾ ಪಶ್ಚಿಮ ಸಾಗರವನ್ನು ಸಂಗತಳಾಗುವ ನೇತ್ರಾವತಿಯ ಪವಿತ್ರ ಜಲಸೇಚನದಲ್ಲಿ ನಿರಾಭರಣ ಸುಂದರಿಯಾಗಿ ಕಂಗೊಳಿಸುತ್ತಾ ದೇವಿಯು ಅವಭೃತ ಮಂಗಳಸ್ನಾನದಿಂದ ಸಂತುಷ್ಟಳಾಗಿ ಹಿಂದಿರುಗಿ ಬಂದ ಬಳಿಕ ರಾಜಾಂಗಣದಲ್ಲಿ ದರ್ಶನ ಬಲಿಯು ನಡೆಯುತ್ತದೆ.

ಮುಂದೆ ಬಟ್ಟಲು ಕಾಣಿಕೆಯ ಪ್ರಸಾದವಾದ ಬಳಿಕ..
ರಜತ ಸಿಂಹ ಧ್ವಜವನ್ನು ಧ್ವಜಸ್ತಂಭದಿಂದ ಉದ್ಯಾಪನೆ (ಅವರೋಹಣ)ಗೊಳಿಸಿ ಮಂಗಳಾಂಭೆಯು ಜಾತ್ರೆಯ ಐಸಿರಿಯ ಉತ್ಸವಾದಿಗಳನ್ನು ಸಂತೋಷದಿಂದ ಸ್ವೀಕಾರ ಮಾಡಿಕೊಂಡು ಗರ್ಭಗೃಹವನ್ನು ಸೇರುವಲ್ಲಿ ಮಹಾಪೂಜೆಯೊಡನೆ ದೇವಿಯ ಅವಭೃತೋತ್ಸವವು ಮುಕ್ತಾಯಗೊಳ್ಳುತ್ತದೆ.

ಇದರ ಮಾರನೇ ದಿನವಾದ ಶುಕ್ರವಾರದಂದು ಅಪರಾಹ್ನ ಮಹಾಪೂಜೆಯ ನಂತರ ವಿಪ್ರೋತ್ತಮರಿಂದ 'ಫಲ ಮಂತ್ರಾಕ್ಷತೆ'.
ಉತ್ಸವಗಳು ಸಾಂಗವಾಗಿ ನಡೆದ ನಂತರ ತೀರ್ಥ ಪ್ರಾಶಾನ ಹಾಗೂ ಮಂತ್ರಾಕ್ಷತೆಯ ಪ್ರಸಾದವನ್ನು  ಪಡೆಯುವಿಕೆ ಅಗತ್ಯ. ಮಂತ್ರಾಕ್ಷತೆ ಎಂದರೆ ಅದು ದೇವಿಯ ಪೂರ್ಣೋಚ್ಛ ಅಂತರ್ಭಾಹ್ಯಗಳನ್ನು ನಿರ್ಮಲಗೊಳಿಸುವ ಪವಿತ್ರ ಅಕ್ಷತೆ ಪ್ರಸಾದ. ಉತ್ಸವಾದಿಗಳಿಂದ ದೇವಿಯು ಅನುಗ್ರಹಿತಳಾದಳೆಂದು ಬಗೆದು, ಅರ್ಚಕರಿಂದ ಅದನ್ನು ಸ್ವೀಕರಿಸಿದಲ್ಲಿ ಅದು ಗಂಧಾಕ್ಷತೆ ಅಥವ ಸಂಪ್ರೋಕ್ಷಣೆ ಎಂದು ಕರೆಯಲ್ಪಡುತ್ತದೆ. ಈ ರೀತಿಯಾಗಿ ಮಂತ್ರಾಕ್ಷತೆಯ ಪ್ರಸಾದವನ್ನು  ಸ್ವೀಕರಿಸಿ
ಕಲಶ ಶುದ್ಧಿ ಸಂಪ್ರೋಕ್ಷಣೆಯೊಂದಿಗೆ ಮಂಗಳಾದೇವಿ ಅಮ್ಮನವರ  ವರ್ಷಾವಧಿ ಜಾತ್ರಾ ಮಹೋತ್ಸವವು ಮಂಗಳಕರವಾಗಿ ಸುಸಂಪನ್ನಗೊಳ್ಳಲಿದೆ.

ಅದೇ ದಿನದಂದು ರಾತ್ರಿ ಕ್ಷೇತ್ರದ ಪರಿವಾರ ದೈವಗಳಾದ ರಕ್ತೇಶ್ವರಿ,ನಂದಿಕೋಣ, ಹಾಗು ಗುಳಿಗೇಶ್ವರ ದೈವಗಳಿಗೆ ನೇಮೋತ್ಸವ (ನೃತ್ಯ ಸೇವೆ)ವು ನಡೆಯಲಿದೆ. ಸ್ವಪರಿವಾರ ಸಮನ್ವಿತರಾದ ದೈವಗಳು ಮಂಗಳೆಯ ಆಜ್ಞಾನುಸಾರ ,ದೇವಾಲಯದ ರಕ್ಷಣೆಯೊಂದಿಗೆ ,ಕ್ಷೇತ್ರಪಾಲ ದೈವಗಳಾಗಿ ನೆಲೆನಿಂತಿವೆ. ಅದರಲ್ಲೂ ಶಕ್ತಿ ರಕ್ತೇಶ್ವರಿಯೆಂದರೆ ಅತಿಯಾದ ಭಯ ಭಕ್ತಿ, ದೇವಳದ ಮೇಲುಸ್ತುವಾರಿ ದೈವವಾಗಿ ಈಕೆ ಮೆರೆಯುತ್ತಿರುವಳು. ಮಂಗಳೆಯ ಅಣತಿಯಂತೆ ಕ್ಷೇತ್ರದಲ್ಲಿ ಕಿಂಚಿತ್ತೂ ಲೋಪವಾಗದಂತೆ ಧರ್ಮದೊಂದಿಗೆ ಸಕಲ ಇಚ್ಛಿತ ಕಾರ್ಯಗಳನ್ನು ನಡೆಸಿಕೊಡುವಳು. ನೇಮೋತ್ಸವದ ನೃತ್ಯ ಸೇವೆದೊಂದಿಗೆ ತನ್ನ ಪರಿವಾರ ದೈವಗಳನ್ನು ತೃಪ್ತಿಪಡಿಸುವುದರಿಂದ ಶ್ರೀ ದೇವಿ ಸಂತೋಷಗೊಳ್ಳುತ್ತಾಳೆ.

ತನ್ನ ಕಾಲಾವಧಿ ಉತ್ಸವದಿಂದ ಪ್ರೀತ್ಯರ್ಥಳಾಗುವ ಮಹಾತಾಯಿ ಮಂಗಳಾದೇವಿಯು😘 ಸರ್ವರಿಗೂ ದೀರ್ಫಾಯುರಾರೋಗ್ಯವನ್ನಿತ್ತು ,ಸಕಲ ಉತ್ಸವಾದಿಗಳಲ್ಲಿ ಪಾಲ್ಗೊಂಡು ಇನ್ನೂ ಅಧಿಕವಾಗಿ ಅವಳ ಸೇವೆಯನ್ನು ಮಾಡುವ ಸೌಭಾಗ್ಯವನ್ನು ದೇವಿಯು ಕರುಣಿಸಲಿ. ಕ್ಷೇತ್ರದ ಕೀರ್ತಿ ಖ್ಯಾತಿಯನ್ನು ಬೆಳಗಿ ಈ ಪುಣ್ಯೋತ್ಸವದ ಕಾರ್ಯದಲ್ಲಿ ಪಾಲ್ಗೊಂಡು ಜನ್ಮಜನ್ಮಾಂತರದ ಪಾಪಗಳನ್ನು ಕಳೆದು ಪುನೀತರಾಗೋಣ.
*****

19 feb 2019 rathotsava celebration Harihareshwara, Harihar



*****

Venkataramana in Mulki 
🙌🏻Wonderful news coming in from the ancient temple of lord Venkataramana in Mulki in remote coastal Karnataka!

The temple is one of the holy places for the Saraswat Brahmin and GSB community.

A short thread about the latest news with some history follows. 🙂

Situated on the bank of river Shambhavi, the little town of Mulki is home to numerous temples dating back to 6th century. Among those are the Venkataramana and Ugra Narasimhaswamy temples.

It was a peaceful little town filled with scores of devout All this changed when Islamic invaders began attacking and looting temples across the region. Don't want to get into those gory details now.

The priests of the Mulki dropped the Utsava murthis of Lord Narasimha into a well inside the temple to keep it safe from invaders.
This reminded me of the first chapter from 'The Idol Thief' authored by @poetryinstone.

Lord Narasimha stayed in the well for all these centuries!

A couple of days ago, the priests found centuries-old manuscripts that gave them a clue. They began searching around the temple.

They arrived at the spot described but found no well. Only thick slabs of stone!

They began digging at the said spot. Soon they found the mouth of an ancient well, hidden few feet below the slabs!

They dug further
They cleared everything around soon and dug the whole well out!

The priests got into the well slowly amidst divine chants of Vedic mantras! Imagine it was locked for last many centuries!

And they emerged with this!!

The little pooja murti of Ugra Narasimha Swamy!

🙏🙏🙏
The Ugra Narasimha murti here is so unique!

Has trinetra, ashta-bhuja, is in Ugra roopam slaying Hiranyakashipu on his right thigh as he stands on his left leg. He also has a Naabhi kamalam and Brighu Lanchanam on his chest!

 🙏 🙏 🙏

After so many centuries, he decided to emerge! May Lord Narasimha protect all of us! and our ancient country from enemies who continue to attack our Dharma!

After all, didn't he say "धर्मसंस्थापनार्थाय सम्भवामि युगे युगे ॥" ?
*****


ಚಂದ್ರಗುಪ್ತ ಬಸದಿ 247 BC ಶ್ರವಣಬೆಳಗೋಳ chandragupta basadi

ಶ್ರವಣಬೆಳಗೋಳ ಎಂದರೆ ಸಾಕು ಭಗವಾನ್ ಬಾಹುಬಲಿಯ ಭವ್ಯ ಮೂರ್ತಿ ನಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಆದರೆ ಶ್ರವಣಬೆಳಗೋಳದಲ್ಲಿ ಅಖಂಡ ಭಾರತವನ್ನು ಬೆಸೆದ ಭಾರತದ ಮಹಾನ್ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಸಮಾಧಿಯೂ ಇದೆ ಎನ್ನುವುದು ಬಹುತೇಕರಿಗೆ ಗೊತ್ತೆ ಇಲ್ಲ!! ಬಹುಶಃ ಕನ್ನಡಿಗರಿಗಂತೂ ಇದರ ಪರಿವೆಯೂ ಇಲ್ಲ ಎಂದೆಣಿಸುತ್ತದೆ. ನಮ್ಮ ದೇಶದಲ್ಲಿ ಅಕಬರ-ಬಾಬರ-ಹುಮಾಯೂನನ ಸಮಾಧಿ ಎಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮಹಾನ್ ಹಿಂದೂ ಸಾಮ್ರಾಟ ಚಂದ್ರಗುಪ್ತ ಮೌರ್ಯ ಸಮಾಧಿ ಎಲ್ಲಿದೆ ಎನ್ನುವುದು ಗೊತ್ತಿಲ್ಲ! ಅಲೆಗ್ಸಾಂಡರನ ಸಮಕಾಲೀನ ಚಂದ್ರಗುಪ್ತ ಮೌರ್ಯ ಭಾರತದ ಶ್ರೇಷ್ಠ ಸಾಮ್ರಾಟರಲ್ಲೊಬ್ಬ. ಭಾರತದಲ್ಲಿ ಚಂದ್ರಗುಪ್ತ ಮೌರ್ಯನ ಪರಾಕ್ರಮ ಹೇಗಿತ್ತೆಂದರೆ ಸ್ವತಃ ಅಲೆಕ್ಸಾಂಡರನೂ ಭಾರತಕ್ಕೆ ದಂಡೆತ್ತಿ ಬರಲು ಹಿಂದೇಟು ಹಾಕುತ್ತಿದ್ದ ಎನ್ನಲಾಗುತ್ತದೆ.
ಭಾರತದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹಬ್ಬಿಸಿದ ಜೋಡಿ ಚಾಣಕ್ಯ-ಚಂದ್ರಗುಪ್ತರದ್ದು. ಚಂದ್ರಗುಪ್ತ ಮೌರ್ಯನ ಜನನ 340BCE ನಲ್ಲಿ ಬಿಹಾರದ ಪಾಟಲೀ ಪುತ್ರದಲ್ಲಾಗಿದ್ದರೆ, ಆತನ ದೇಹಾಂತ್ಯ 297BCE ನಲ್ಲಿ ಕರ್ನಾಟಕದ ಶ್ರವಣ ಬೆಳಗೋಳದಲ್ಲಾಯ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಅಖಂಡ ಭಾರತವನ್ನು ನಿರ್ಮಾಣ ಮಾಡಿದ ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ಮಗ ಬಿಂದುಸಾರನ ಕೈಗಿತ್ತು ತಾನು ದಕ್ಷಿಣ ಭಾರತೆದೆಡೆಗೆ ಪಯಣಿಸಿದ್ದ. ಒಂದು ಸಾವಿರ ವರ್ಷಗಳ ನಂತರ ಬರೆದ ಜೈನ ಗ್ರಂಥಗಳಾದ ಹರಿಶೇನನ ಬೃಹತ್ ಕಥಾ ಕೋಶ, ರತ್ನ ನಂದಿಯ ಭದ್ರಬಾಹು ಚರಿತ, ಮುನಿವಂಸಾಭ್ಯುದಯ ಮತ್ತು ರಾಜವಳಿ ಕಥೆಗಳ ಪ್ರಕಾರ, ಸಾಮ್ರಾಟ ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ತ್ಯಜಿಸಿ ಜೈನ ಮುನಿ ಭದ್ರಬಾಹುವಿನ ಜೊತೆ ದಕ್ಷಿಣ ಭಾರತದಲ್ಲಿ ನೆಲೆಸಿದ್ದ.
ತನ್ನ ಜೀವನದ ಬಹುತೇಕ ವರ್ಷಗಳನ್ನು ಆತ ಶ್ರವಣಬೆಳಗೋಳದಲ್ಲಿ ಕಳೆದಿದ್ದ ಮತ್ತು ಜೈನ ಪರಂಪರೆಯ ಪ್ರಕಾರ “ಸಲ್ಲೇಖನ” ವೃತ ಕೈಗೊಂಡು ದೇಹ ತ್ಯಾಗ ಮಾಡಿದ್ದ ಎಂದು ಹೇಳಲಾಗುತ್ತದೆ. ಈ ಗ್ರಂಥಗಳ ಜೊತೆಗೆ, 7 ರಿಂದ 15 ನೇ ಶತಮಾನದವರೆಗಿನ ಹಲವಾರು ಜೈನ ಸ್ಮಾರಕ ಮತ್ತು ಶಿಲಾಶಾಸನಗಳು ಭದ್ರಬಾಹು ಮತ್ತು ಚಂದ್ರಗುಪ್ತರ ಸಂಯೋಗಗಳನ್ನು ಸೂಚಿಸುತ್ತವೆ. ಈ ಸಂಯೋಗಗಳಿಂದ ಚಂದ್ರಗುಪ್ತ ಮೌರ್ಯ ಜೈನ ಮತಕ್ಕೆ ಪರಿವರ್ತನೆ ಹೊಂದಿರಬಹುದು ಎನ್ನಲಾಗುತ್ತದೆ. ಸನ್ಯಾಸಿ ಜೀವನಕ್ಕೆ ಮೊರೆ ಹೋದ ಚಂದ್ರಗುಪ್ತ ತನ್ನ ಗುರು ಭದ್ರಬಾಹುವಿನ ಮಾರ್ಗದರ್ಶನದಲ್ಲಿ ನಿತ್ಯವೂ ಶ್ಲೋಕ ಪಠಣೆ ಮಾಡುತ್ತಿದ್ದ ಮತ್ತು ಚಂದ್ರಗಿರಿ ಬೆಟ್ಟದಲ್ಲಿ ಹತ್ತಿಳಿದು ತನ್ನ ಅಧ್ಯಾತ್ಮಿಕ ಜೀವನವನ್ನು ಮುನ್ನಡೆಸುತ್ತಿದ್ದ ಎನ್ನುತ್ತಾರೆ.
ಅಧಿಕಾರದ ಉತ್ತುಂಗದಲ್ಲಿರುವಾಗಲೆ ಮತ್ತು ಅತಿ ಕಿರಿಯ ಪ್ರಾಯದಲ್ಲೆ ಹಠಾತ್ತಾಗಿ ಚಂದ್ರಗುಪ್ತ ತನ್ನ ಅಧಿಕಾರವನ್ನು ತ್ಯಜಿಸಲು ಆತ ಜೈನ ಮತದ ಪ್ರಭಾವಕ್ಕೆ ಒಳಗಾಗಿದ್ದು ಕಾರಣವಿರಬಹುದೆನ್ನುವುದನ್ನು ವಿನ್ಸೆಂಟ್ ಸ್ಮಿತ್ ಉಲ್ಲೇಖಿಸಿದ್ದ ಎಂದು ಮೂಕರ್ಜಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಶ್ರವಣಬೆಳಗೋಳದ ಯಾವ ಬೆಟ್ಟದ ಮೇಲೆ ಚಂದ್ರಗುಪ್ತ ಮೌರ್ಯ ಸಂನ್ಯಾಸತ್ವವನ್ನು ಪಾಲಿಸಿದ್ದನೋ ಅದನ್ನು “ಚಂದ್ರಗಿರಿ ಬೆಟ್ಟ” ಎಂದು ಕರೆಯಲಾಗುತ್ತದೆ ಮತ್ತು ಅಲ್ಲಿಯೇ ಚಂದ್ರಗುಪ್ತನ ಸ್ಮರಣಾರ್ಥ ಕಟ್ಟಿದ ಚಂದ್ರಗುಪ್ತ ಬಸದಿಯೂ ಇದೆ.
ಹಿಂದೂ ಗ್ರಂಥಗಳು ಕೂಡಾ ಪಾಟಲಿಪುತ್ರದ ಆಸ್ಥಾನದಲ್ಲಿ ಚಂದ್ರಗುಪ್ತ ಮತ್ತು ಜೈನ ಸಮುದಾಯದ ನಡುವೆ ನಿಕಟ ಸಂಬಂಧವನ್ನು ಒಪ್ಪಿಕೊಳ್ಳುತ್ತವೆ. ಮೂಲತಃ ಬ್ರಾಹ್ಮಣ ಪ್ರಿಯ ಚಂದ್ರಗುಪ್ತ ತನ್ನ ಆಸ್ಥಾನದಲ್ಲಿ ಜೈನರನ್ನು ತನ್ನ ದೂತರಂತೆ ನೇಮಿಸಿಕೊಂಡಿದ್ದ ಮತ್ತು ಇದು ಪರೋಕ್ಷವಾಗಿ ಚಂದ್ರಗುಪ್ತನ ಮೇಲೆ ಜೈನ ಚಿಂತನೆಯ ಪ್ರಭಾವವನ್ನು ಬೀರಿರಬಹುದು ಎಂದು ಗ್ರಂಥಗಳು ದೃಢೀಕರಿಸುತ್ತವೆ. ಜೈನ ಮತದ ಪ್ರಭಾವಕ್ಕೊಳಗಾಗಿ ಶ್ರವಣಬೆಳಗೋಳದಲ್ಲಿ ನೆಲೆಸಿ, ಚಂದ್ರಗಿರಿ ಬೆಟ್ಟದಲ್ಲಿರುವ ಗುರು ಭದ್ರಬಾಹುವಿನ ಗುಹೆಯಲ್ಲಿ ಚಂದ್ರಗುಪ್ತ ಮೌರ್ಯ ಸಲ್ಲೇಖನ ವೃತ ಕೈಗೊಂಡು ದೇಹ ತ್ಯಜಿಸುತ್ತಾರೆ ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಅಖಂಡ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಭಾರತದ ಒಬ್ಬ ಮಹಾನ್ ಸಾಮ್ರಾಟನ ಸಮಾಧಿ ಇವತ್ತು ಅನಾಥರಂತೆ ಬಿದ್ದುಕೊಂಡಿದೆ. ಮುಘಲ ಮತಾಂಧರ ಗೋರಿಗಳಿಗೆ ಅಡ್ಡಡ್ಡ ಉದ್ದುದ್ದ ಬೀಳುವ, ಅವರ ದರ್ಗಾಗಳನ್ನು ಪೂಜಿಸುವ ನಮಗೆ ನಮ್ಮ ಸನಾತನ ಪ್ರಂಪರೆಯ ಭವ್ಯ ಇತಿಹಾಸದ ಪರಿವೆಯೆ ಇಲ್ಲ. ಎಂತಹ ದೌರ್ಭಾಗ್ಯವಿದು? ಭಾರತದ ಮೂಲೆ ಮೂಲೆಗಳನ್ನು ಮೌರ್ಯ ಸಾಮ್ರಾಜ್ಯದ ಏಕ ಛತ್ರದಡಿ ತಂದ ಚಂದ್ರಗುಪ್ತ ಮೌರ್ಯ ಅಂತಿಮ ದಿನಗಳನ್ನು ಕರ್ನಾಟಕದಲ್ಲಿ ಕಳೆದು, ಕನ್ನಡ ಮಣ್ಣಿನಲ್ಲಿ ಪ್ರಾಣ ತ್ಯಜಿಸಿದ್ದರೆನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಶ್ರವಣಬೆಳಗೋಳಕ್ಕೆ ಭೇಟಿ ನೀಡಿದರೆ, ನಮ್ಮ ಮಹಾನ್ ಸಮ್ರಾಟ ಓಡಾಡಿದ ಚಂದ್ರಗಿರಿ ಬೆಟ್ಟಕ್ಕೆ ಮತ್ತು ಆತ ಸಲ್ಲೇಖನ ಕೈಗೊಂಡು ಸಮಾಧಿಯಾದ ಸ್ಥಳಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿ ಬನ್ನಿ.

********


Chandra Mouleshwara temple, Hubballi, Karnataka.

900 years ago, our temple builders were well versed with Sun's movement across seasons. On Shivaratri day, sun rays enter from the east on the main Linga, as well as a four faced Shiva in the second garbha griha, sequentially!
*******




ಹಿಮವದ್ ಗೋಪಾಲಸ್ವಾಮಿ ಬೆಟ್ಟ - HIMAVAD NEAR MYSURU




ತುಂಬಾ ಬಿಸಿಲು ಬಿಸಿ ಪ್ಯಾನಿನ ಗಾಳಿ , ಎ, ಸಿ ಯಿಂದ ಅಲರ್ಜಿ ಅನಿಸುತ್ತಿದ್ದರೆ , ಹೇಗಿದ್ದರೂ ಮಕ್ಕಳಿಗೆ ರಜೆ , ಒಂದು ಒಳ್ಳೆಯ ತಂಪಾದ ಸ್ಥಳ , ನಯನ ಮನೋಹರವಾದ. ಎಲ್ಲಿ ನೋಡಿದರೂ ಹಸುರಿನ ರಾಶಿ ,ಕೃಷ್ಣನ ಕೊಳಲಿನ ಗಾನ ಇಷ್ಟೇಲ್ಲವೂ ಮನಕೆ ಆನಂದವನ್ನು ಕೊಡುತ್ತವೆ ಹೋಗಿ ಬನ್ನಿ ಹಿಮವದ್ ಗೋಪಾಲಕೃಷ್ಣನಿಗೆ . ಹೆಸರೆ ಹೇಳುವಂತೆ ಈ ಬೆಟ್ಟ ಹಿಮವನ್ನು ಹೊದ್ದುಕೊಂಡಂತೆ ಕಾಣುತ್ತದೆ...ಮೈಸೂರಿನಿಂದ ಊಟಿಗೆ ಹೋಗುವ ಮದ್ಯದಲ್ಲಿ ಸಿಗುವ ಈ ದೇವಸ್ಥಾನ . ತುಂಬಾ ತಂಪಾದ ಪ್ರದೇಶ..‌ ನಿಮಗೆ ವಸತಿ ಅನಕೂಲ ಬೇಕಾದರೆ ಮೈಸೂರೆ ಒಳ್ಳೆಯದು... ಮುಂದೆ ಊಟಿ ಕೂಡಾ ಹೋಗಬಹುದು...

ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಕರ್ನಾಟಕ ರಾಜ್ಯದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಚಾಮರಾಜನಗರ ಜಿಲ್ಲೆಯ , ಮೈಸೂರಿನ ದಕ್ಷಿಣಕ್ಕೆ ಸುಮಾರು 80 ಕಿ.ಮೀ. ದೂರದಲ್ಲಿ ಊಟಿ ಹೆದ್ದಾರಿಯ ಅಂಚಿನಲ್ಲಿರುವ ಈ ಬೆಟ್ಟವು ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಸಮುದ್ರಮಟ್ಟದಿಂದ ಸುಮಾರು 1440 ಮೀ. ಎತ್ತರದಲ್ಲಿ ಮಲೆಯ ಮೇಲೆ ಶ್ರೀಕೃಷ್ಣನ ದೇವಾಲಯವಿದೆ.
ಪುರಾಣ ಹಿನ್ನೆಲೆ
, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸುತ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲು ಅಮೋಘವಾಗಿ ನರ್ತಿಸುತ್ತಿದ್ದಾಳೆ. ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ 365 ದಿನಗಳೂ ನೀರು ಜಿನುಗುತ್ತಿರುತ್ತದೆ.

ಈ ಬೆಟ್ಟದಲ್ಲಿ ಸುಮಾರು ೭೭ ತೀರ್ಥ ಸ್ಥಳಗಳಿವೆ. ಇವುಗಳಲ್ಲಿ ಕೆಲವನ್ನು ದೇವಸ್ಥಾನದ ಸುತ್ತ ಮುತ್ತ ನೋಡಬಹುದು. ಮತ್ತೊಂದು ಅಚ್ಚರಿ ಎಂದರೆ ಇಲ್ಲಿ ಕಾಗೆಗಳು ಕಾಣ ಸಿಗುವುದಿಲ್ಲ. ಒಂದು ಐತಿಹ್ಯದ ಪ್ರಕಾರ ಕಾಗೆಗಳು ಇಲ್ಲಿರುವ ತೀರ್ಥ ಸ್ಥಳಗಳಲ್ಲಿ ಮಿಂದು ಹಂಸಗಳಾಗಿ ಹಾರಿ ಹೋದವು ಎನ್ನುತ್ತಾರೆ.

6 ಕಿ.ಮಿ. ಕೆಳಗಿನ ಪ್ರದೇಶದಲ್ಲಿ ಶೆಖೆ. ಅಲ್ಲಿ ಮೇಲೆ ಗಡಗಡ ನಡುಗಿಸೋ ಚಳಿ. ಬೆಟ್ಟದ ತುದಿ ತಲುಪುತ್ತಿದ್ದಂತೆ ಬೆಕ್ಕಸ ಬೆರೆಗಿನ ಉದ್ಗಾರ. ಅರಳಿದ ಕಂಗಳು, ಮೂಕ ವಿಸ್ಮಿತ ನೋಟ, ಮಾತು ಮರೆತ ಮೆದುಳು, ಭೂಲೋಕವೋ, ಗಂಧರ್ವ ಲೋಕವೋ, ಒಂದು ತಿಳಿಯದ ಗೊಂದಲ. ಇದು ತಕ್ಷಣಕ್ಕಾಗುವ ಅನುಭವ.

ಎತ್ತಣಿಂದೆತ್ತ ನೋಡಿದರೂ ಹಚ್ಚ ಹಸುರಿನ ರಾಶಿ. ಅತ್ತ ಓಡುವಾಸೆ, ಆದರೆ ಗೋಪಾಲನನ್ನು ಕಾಣದೆ ಹೋಗುವುದಾದ್ರು ಹೇಗೆ. ದೈವ ಭಕ್ತಿ ನಮ್ಮ ಕಾಲುಗಳನ್ನು ದೇವಾಲಯದೆಡೆಗೆ ಎಳೆದರೆ, ಕಣ್ಣು ಮತ್ತು ಮನಸ್ಸು ಮಾತ್ರ ಕೃಷ್ಣನ ಲೀಲಾಲೋಕದ ಕಡೆ. ನಮಗೆ ಅರಿವಿಲ್ಲದಂತೆ ದೇವಾಲಯದ ಬಳಿ ಬಂದಿರುತ್ತೀವಿ. ಆ ಕಾಡಿನ ಸೌಂದರ್ಯಕ್ಕೆ ಮನಸೋತ ಆ ಕೃಷ್ಣನೇ ನಾಟ್ಯಭಂಗಿಯಲ್ಲಿ ನಿಂತು, ಕೊಳಲು ನುಡಿಸುತ್ತಾ ಮಂದಸ್ಮಿತವಾಗಿ ನಸುನಗುತ್ತಾ ಗರ್ಭಗುಡಿಯಲ್ಲಿ ನಿಂತಿದ್ದಾನೆ. ಅದೆಂತಹ ಸುಂದರ ಮೂರ್ತಿ. * ಅವನೆದುರು ನಿಂತು ಕಣ್ಮುಚ್ಚಿದರೆ, ಕಿವಿಗೆ ಕೊಳಲಿನ ಇಂಪಿನ ದನಿ. ಮನದಲ್ಲಿ ಹೊರಗಿನ, ಪ್ರಕೃತಿಸೌಂದರ್ಯ, ಇವೆರೆಡರಲ್ಲು ಲೀನವಾಗಿ ನಾನು ನಿನ್ನೊಳಗೋ, ನೀನು ನನ್ನೊಳಗೊ ಎಂಬಂತೆ ದರುಶನ ನೀಡುವ ಆ ಭಗವಂತ. ದರುಶನ ಮುಗಿಸಿ ಅಲ್ಲಿನ ಅರ್ಚಕರು ಕೊಡುವ ಅಮೃತ ಸಮಾನವಾದ, ರುಚಿಯಾದ ಸಿಹಿ ಪೊಂಗಲ್ ಮತ್ತು ಪುಳಿಯೋಗರೆ ಎಂಬ ಪ್ರಸಾದ ಸವಿದು ಹೊರ ಬಂದರೆ ಕೃಷ್ಣನ ಲೀಲಾ ಲೋಕ, ಕಾಡಿನ ರೂಪದಲ್ಲಿ ನಮ್ಮನ್ನು ಕೈ ಬೀಸಿ ಕರೆಯುತ್ತೆ.
ಪುಟಿದೇಳುವ ಮನಸ್ಸು, ಚಿಗರೆಯಂತ ಉತ್ಸಾಹ, ಕಾಡಿನ ಗರ್ಭದಲ್ಲಿ ಲೀನವಾಗಿ ಬಿಡಬೇಕೆಂಬ ಬಯಕೆ. ಕಾಡಿನೊಳಗೆ ಪ್ರಯಾಣ ಶುರುವಾದ್ರೆ ಅವರ್ಣನೀಯ ಅನುಭವ. ಹಚ್ಚ ಹಸಿರಿನ ಬೋಳುಗುಡ್ಡ. ಅದರ ಹಿಂದೆ ಅಗಾಧ ಮರಗಳಿಂದ ತುಂಬಿದ ದಟ್ಟ ಹಸಿರಿನ ವನ, ಅಲ್ಲಲ್ಲಿ ಬಂಡೆಗಳು, ಕೊಳಗಳು, ಎಲ್ಲಿಂದಲೋ ಕೇಳುವ ಹಕ್ಕಿಗಳ ಗಾನ, ತಂಪಾದ ಗಾಳಿ, ಅವುಗಳ ಕೂಗು, ಸಾರಂಗ, ಜಿಂಕೆಗಳ ನೆಗೆದಾಟ. ಅಬ್ಬಬ್ಬ ಇದೇ ಇರಬೇಕು ಕೃಷ್ಣನ ಗೋವರ್ಧನ ಗಿರಿ..‌‌..
******

ಪ್ರಕೃತಿಯ ಮಡಿಲ ರಮ್ಯ, ಮನೋಹರ ಕ್ಷೇತ್ರ - ಲೇಖಕರು -ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ
ಚಾಮರಾಜನಗರ ಜಿಲ್ಲೆಯ ದಟ್ಟಾರಣ್ಯದ ಗಿರಿಶ್ರೇಣಿಯಲ್ಲಿ ಅಷ್ಟ ಗಿರಿಗಳಿಂದ ಆವೃತವಾಗಿ ಕಮಲ ದಳಗಳ ನಡುವೆ ಇರುವಂತೆ ಕಾಣುವ ಸುಂದರ ಪವಿತ್ರ ಪುಣ್ಯಕ್ಷೇತ್ರ ಗೋಪಾಲಸ್ವಾಮಿ ಬೆಟ್ಟ.
ನೀಲಾದ್ರಿ, ತ್ರಯಂಬಕಾದ್ರಿ, ಗರುಡಾದ್ರಿ, ಹಂಸಾದ್ರಿ, ಶಂಖರಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನ ಗಿರಿ ಹಾಗೂ ಗೋವರ್ಧನಗಿರಿ ಎಂಬ ಎಂಟು ಬೆಟ್ಟಗಳ ಶ್ರೇಣಿ ಇಲ್ಲಿ ಕಮಲಾಚಲ ಎಂದು ಕರೆಸಿಕೊಂಡಿದ್ದು, ಎಂಟು ದಳದ ಕಮಲದಂತೆ ಕಾಣುತ್ತವೆ.
ಮೈಸೂರಿನಿಂದ 95 ಕಿಲೋ ಮೀಟರ್ ದೂರದಲ್ಲಿರುವ ಈ ಬೆಟ್ಟದ ಮೇಲೆ ವರ್ಷದ 365 ದಿನವೂ ಪ್ರತಿನಿತ್ಯ ಮಂಜು (ಹಿಮ) ಕವಿಯುವ ಕಾರಣ ಹಾಗೂ ಇಲ್ಲಿ ಪುರಾತನವಾದ ಗೋಪಾಲಸ್ವಾಮಿಯ ದೇವಾಲಯವಿರುವ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ.
ಇಲ್ಲಿರುವ ದೇವಾಲಯಕ್ಕೆ ಸುಂದರವಾದ ಗಾರೆಯ ಗೋಪುರವಿದ್ದು, ಇದರಲ್ಲಿ ದಶಾವತಾರದ ಗಾರೆಯ ಶಿಲ್ಪಗಳಿವೆ. ಮಧ್ಯದ ಗೂಡಿನಲ್ಲಿ ನಾರಾಯಣ ಕಲ್ಯಾಣದ ಶಿಲ್ಪವಿದೆ.
ದೇವಾಲಯದ ಗರ್ಭಗೃಹದಲ್ಲಿ ಸುಂದರವಾದ ಕೊಳಲನು ಊದುತ್ತಿರುವ ಶ್ರೀಕೃಷ್ಣನ ಮೂರ್ತಿಯಿದೆ. ಈ ದೇವರ ಹಿಂದೆ ನಿತ್ಯ ಹಿಮ ಶೇಖರಣೆ ಆಗುತ್ತದೆ. ಪೂಜೆಯ ಬಳಿಕ ಭಕ್ತರಿಗೆ ಪುಳಿಯೋಗರೆ, ಪೊಂಗಲ್ ಪ್ರಸಾದವನ್ನೂ ನೀಡಲಾಗುತ್ತದೆ.
ಸಮುದ್ರಮಟ್ಟದಿಂದ 1,454 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಚಳಿಗಾಲ ಹಾಗೂ ಮಳೆಗಾಲದಲ್ಲಿ ಮಂಜು ಮುಸುಕಿದ ಪರಿಸರ ನೋಡುವುದೇ ಒಂದು ಸೊಬಗು ಅರಣ್ಯ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶದಲ್ಲಿ ಆನೆಗಳು, ಹುಲಿಗಳೂ ಸೇರಿದಂತೆ ಲಕ್ಷಾಂತರ ಪ್ರಬೇಧದ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಹೀಗಾಗಿ ಇಲ್ಲಿರುವ ಪ್ರಾಣಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ದೇವಾಲಯಕ್ಕೆ ಪ್ರವೇಶ ಸಮಯ ನಿಗದಿ ಮಾಡಿದೆ. ಬೆಳಗ್ಗೆ 8-30ರಿಂದ ಸಂಜೆ 4ಗಂಟೆಯವರೆಗೆ ಮಾತ್ರವೇ ದೇವಾಲಯಕ್ಕೆ ಪ್ರವೇಶ.
ಬೆಳಗಿನ ವೇಳೆ ಹಾಗೂ ಸಂಜೆ ಇಲ್ಲಿ ಹೆಚ್ಚಾಗಿ ಮಂಜು (ಹಿಮ) ಮುಸುಕಿದ ವಾತಾವರಣ ಇರುವ ಕಾರಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ ನೋಡಲು ಬೆಳಗ್ಗೆ 8-30ರ ಹೊತ್ತಿಗೆ ಅಥವಾ ಸಂಜೆ 3-30ರ ಹೊತ್ತಿಗೆ ದೇವಾಲಯ ದರ್ಶನಕ್ಕೆ ಹೋದರೆ, ಸುತ್ತಲಿನ ಪರಿಸರ, ರಭಸದಿಂದ ಬೀಸುವ ತಂಗಾಳಿ, ಚಲಿಸುವ ಮಂಜಿನ ಮೋಡಗಳು ಊಟಿ, ಕೊಡೈಕೆನಾಲ್, ಸಿಮ್ಲಾಗೆ ಕರ್ನಾಟಕವೇನೂ ಕಡಿಮೆ ಇಲ್ಲ ಎಂಬುದನ್ನು ಸಾರುತ್ತವೆ. ಪ್ರಕೃತಿ ಪ್ರೇಮಿಗಳಿಗೂ ಚಾರಣ ಪ್ರಿಯರಿಗೂ ಈ ತಾಣ ಅಚ್ಚುಮೆಚ್ಚು. ಛಾಯಾಗ್ರಾಹಕರಂತೂ ಈ ತಾಣದಲ್ಲಿ ಪ್ರಕೃತಿಯ ರಮಣೀಯತೆಯನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುತ್ತಾರೆ. ದೂರ ದೂರದವರೆಗೆ ಕಾಣುವ ಹಸಿರು ಬೆಟ್ಟ ಗುಡ್ಡದ ಶ್ರೇಣಿ, ಬೆಟ್ಟದ ಅಂಚಿನಲ್ಲಿ ನಿಂತು ಕೆಳಗೆ ನೋಡಿದರೆ ದಟ್ಟವಾಗಿ ಕವಿದ ಮೋಡ, ರಭಸದಿಂದ ಬೀಸುವ ತಂಗಾಳಿ, ಆಹ್ಲಾದ ನೀಡುವ ಹಕ್ಕಿಗಳ ಚಿಲಿಪಿಲಿ ಅಲ್ಲಲ್ಲಿ ಕಾಣುವ ನೀರಿನ ಒರತೆಗಳು ಮದು ನೀಡುತ್ತವೆ.
ಐತಿಹ್ಯ : ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರು. ಬೆಟ್ಟ ದೂರದಿಂದ ನೋಡಲು ಹಸುವಿನ ಆಕಾರದಲ್ಲಿರುವ ಕಾರಣ ಇದನ್ನು ಗೋವರ್ಧನಗಿರಿ ಎನ್ನುತ್ತಿದ್ದರು ಎಂಬುದು ಸ್ಥಳೀಯರ ಅನಿಸಿಕೆ. ಹಚ್ಚ ಹಸುರಿನಿಂದ ಕೂಡಿದ ಈ ಬೆಟ್ಟದಲ್ಲಿ ದನ, ಕರು ಮೇಯಿಸಲು ಬೆಟ್ಟದ ತಪ್ಪಲಿನ ಗೋಪಾಲಪುರದ ಗೋಪಾಲಕರು ಬರುತ್ತಿದ್ದರು, ಅವರು ಇಲ್ಲಿ ಗೋವರ್ಧನ ಗಿರಿಯನ್ನೇ ಎತ್ತಿ ಗೋಪಾಲಕರನ್ನು ರಕ್ಷಿಸಿದ ಕೃಷ್ಣನ ಮೂರ್ತಿಯನ್ನು ಪೂಜಿಸುತ್ತಿದ್ದರು ಹೀಗಾಗಿ ಈ ಬೆಟ್ಟ ಗೋವರ್ಧನಗಿರಿ ಎಂದು ಹೆಸರಾಯಿತು ಎಂದೂ ಊರ ಹಿರಿಯರು ವಾದಿಸುತ್ತಾರೆ. ಕಮಲಾಚಲ, ಕಾಮಾದ್ರಿ, ಕಂಜಗಿರಿ ಎಂಬ ಹೆಸರುಗಳೂ ಬೆಟ್ಟಕ್ಕೆ ಇದ್ದ ಬಗ್ಗೆ ಉಲ್ಲೇಖವಿದೆ. 1315ರಲ್ಲಿ ಮಾಧವ ಗಾಯಕ್ ವಾಡರು ಇಲ್ಲಿ ಗೋಪಾಲಸ್ವಾಮಿ ದೇವಾಲಯ ಕಟ್ಟಿಸಿದ ಬಗ್ಗೆ ದಾಖಲೆಗಳಿವೆ.
ಬೆಟ್ಟದ ಮೇಲೆ ನಿಂತು ಸುತ್ತಮುತ್ತ ಕಣ್ಣು ಹಾಯಿಸಿದರೆ ಬಂಡಿಪುರ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶ ಗೋಚರಿಸುತ್ತದೆ. ಬೆಟ್ಟದ ಮೇಲೆ 750 ವರ್ಷಗಳಷ್ಟು ಹಳೆಯದಾದ ದ್ರಾವಿಡ ಶೈಲಿಯ ಭವ್ಯ ದೇವಾಲಯವಿದೆ. ಈಗ ಇದನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನಿಗೆ ಸಂತಾನ ಗೋಪಾಲಕೃಷ್ಣ ಎಂಬ ಹೆಸರೂ ಇದೆ. ಮೂಲ ದೇವರನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ.
ಈ ಪ್ರದೇಶದಲ್ಲಿ 8 ಪುಣ್ಯ ತೀರ್ಥಗಳಿವೆ. ಈ ಪೈಕಿ ಹಂಸತೀರ್ಥ ಮಹಿಮಾನ್ವಿತವಾದುದು. ಪುರಾಣದಲ್ಲಿನ ಕಥೆಗಳ ಪ್ರಕಾರ ಒಮ್ಮೆ ಕಾಗೆಗಳ ಹಿಂಡು ಈ ತೀರ್ಥದಲ್ಲಿ ಸ್ನಾನ ಮಾಡಿ ಹಂಸಗಳಾಗಿ ಪರಿವರ್ತನೆಯಾದವಂತೆ ಹೀಗಾಗೇ ಇದಕ್ಕೆ ಹಂಸತೀರ್ಥ ಎಂಬ ಹೆಸರು ಬಂತೆಂದು ಪ್ರತೀತಿ.
ಸುಂದರ ಗಿರಿಧಾಮವೂ ಆದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಾಸ್ತಿಕರು, ಆಸ್ತಿಕರು ಇಬ್ಬರೂ ಆಗಮಿಸುತ್ತಾರೆ. ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಹೋಗುವುದು ಹೇಗೆ: ಗುಂಡ್ಲುಪೇಟೆಯಿಂದ 22 ಕಿಲೋ ಮೀಟರ್ ಹಾಗೂ ಬಂಡೀಪುರದಿಂದ 10 ಕಿ.ಮೀ. ದೂರದಲ್ಲಿ ಈ ಸುಂದರ ತಾಣವಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ಈ ದೇವಾಲಯ ಪ್ರದೇಶ ದಟ್ಟ ಕಾನನವಾಗಿರುವ ಹಿನ್ನೆಲೆಯಲ್ಲಿ ಹಾಗೂ ಇಲ್ಲಿ ಹಲವು ಪಶು, ಪಕ್ಷಿ ಪ್ರಾಣಿಗಳು ಇರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ಹಾಕಿದೆ. ಬೆಟ್ಟಕ್ಕೆ ಹೋಗಲು ವಾಹನ ಸೌಕರ್ಯವೂ ಇದೆ.
*******




ಲಕ್ಷ್ಮೀ ನರಸಿಂಹ ದೇವಾಲಯ ಬನ್ನೇರುಘಟ್ಟ lakshmi narasimha temple bannerughatta

ಚಂಪಕಧಾಮಸ್ವಾಮಿ ದೇವಾಲಯದ ಬಳಿಯ ದೇಗುಲ
*ಲೇಖಕರು- ಟಿ.ಎಂ.ಸತೀಶ್, ಸಂಪಾದಕರು ಕನ್ನಡರತ್ನ.ಕಾಂ
ಬೆಂಗಳೂರು ಮಹಾ ನಗರದಿಂದ 26 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಉದ್ಯಾನದ ಬಳಿಯ ಪುರಾತನ ಗ್ರಾಮವೇ ಬನ್ನೇರುಘಟ್ಟ. 997 ಅಡಿ ಎತ್ತರವಾದ ಗಿರಿಶ್ರೇಣಿ, ಏಕ ಶಿಲಾ ಬೆಟ್ಟಗಳು, ದಟ್ಟವಾದ ಅರಣ್ಯವನ್ನು ಒಳಗೊಂಡ ಈ ಸ್ಥಳ ಲಕ್ಷ್ಮೀ ನರಸಿಂಹ ಸ್ವಾಮಿಯ ನೆಲೆವೀಡೂ ಹೌದು.
ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಬನ್ನೇರುಘಟ್ಟದಲ್ಲಿ ಜನವಸತಿ ಇತ್ತು ಎಂದು ಶಾಸನಗಳಿಂದ ವೇದ್ಯವಾಗುತ್ತದೆ. ಬನ್ನೇರುಘಟ್ಟ ತಮಿಳುನಾಡಿಗೆ ಕೇವಲ 30-35 ಕಿ.ಮೀ. ದೂರದಲ್ಲಿರುವ ಕಾರಣ ಇಲ್ಲಿ ತಮಿಳು ಪ್ರಭಾವವೂ ಕಂಡು ಬರುತ್ತದೆ. ಬಹಳ ಹಿಂದೆ ಈ ಪ್ರದೇಶಕ್ಕೆ ವನ್ನಿಯಾರ್ ಘಟ್ಟಂ ಎಂಬ ಹೆಸರಿತ್ತಂತೆ. ತರುವಾಯ ಅದು ಗ್ರಾಮೀಣರ ಬಾಯಲ್ಲಿ ಬನ್ನೇರುಘಟ್ಟವಾಯಿತು ಎಂದೂ ಅಭಿಪ್ರಾಯಪಡಲಾಗುತ್ತದೆ.
ಬಹಳ ಹಿಂದೆ ಈ ಪ್ರದೇಶದಲ್ಲಿ ದಾಮೋದರ ದೇವಾಲಯವಿತ್ತು ಎಂದು ಇತಿಹಾಸ ಸಾರುತ್ತದೆ. ಈ ದೇವಾಲಯವನ್ನು ಹೊಯ್ಸಳರ ಸಾಮಂತನಾಗಿದ್ದ ಪೂರ್ವಾದಿರಾಯನೆಂಬ ತಮಿಳರಸ 1257ರಲ್ಲಿ ಕಟ್ಟಿಸಿದನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಈ ದೇಗುಲ ಪ್ರದೇಶಧಲ್ಲಿ ಚಂಪಕ ಪುಷ್ಪ ಹೇರಳವಾಗಿ ಸಿಗುತ್ತಿದ್ದ ಕಾರಣ ಇಲ್ಲಿನ ದೇವರಿಗೆ ಚಂಪಕಧಾಮಸ್ವಾಮಿ ಎಂದು ಹೆಸರು ಬಂತೆಂದೂ ಹೇಳುತ್ತಾರೆ. ತಿರುಪತಿಯ ಶ್ರೀನಿವಾಸ ದೇವರು ಸಪ್ತಗಿರಿಯಲ್ಲಿ ನೆಲೆಸುವ ಮುನ್ನ ಈ ಬೆಟ್ಟದ ಮೇಲೆ ಪಾದವೂರಿದ್ದ ಎಂಬ ಐತಿಹ್ಯವೂ ಇಲ್ಲಿದೆ.
ಇದು ಸುವರ್ಣಮುಖಿ ಕ್ಷೇತ್ರ ಎಂದೂ ಖ್ಯಾತವಾಗಿದೆ. ತನ್ನ ತಂದೆ ಪರೀಕ್ಷಿತ ಮಹಾರಾಜನನ್ನು ತಕ್ಷಕನೆಂಬ ಹಾವು ಕಚ್ಚಿ ಸಾಯಿಸಿದ್ದರಿಂದ ಕೋಪಗೊಂಡ ಜನಮೇ ಜಯ ರಾಜ ಸರ್ಪಯಾಗ ಮಾಡಿ ನೂರಾರು ಹಾವುಗಳನ್ನು ಸಾಯಿಸಿದನಂತೆ. ಸರ್ಪದೋಷದಿಂದಾಗಿ ಅವನಿಗೆ ಕುಷ್ಠ ರೋಗ ಬಂದಿತಂದೆ. ಪಾಪ ಪರಿಹಾರಕ್ಕಾಗಿ ಅವರು ಎಲ್ಲ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಾ, ಬನ್ನೇರುಘಟ್ಟ ಪ್ರದೇಶಕ್ಕೆ ಬಂದಾಗ, ಅವನ ಜೊತೆಗಿದ್ದ ನಾಯಿ ಅಲ್ಲಿಯೇ ಇದ್ದ ನೀರಿನ ಗುಂಡಿಯಲ್ಲಿ ಮುಳುಗೆದ್ದು ಬಂದು ಮೈ ಕೊಡವಿದಾಗ ಅದರ ಮೈಯಿಂದ ಹಾರಿದ ನೀರು ರಾಜನ ಮೈ ಮೇಲೆ ಬಿದ್ದು, ಅವನ ಚರ್ಮರೋಗ ವಾಸಿಯಾಯಿತಂತೆ. ಆಗ ಜನಮೇಜಯ ಇಲ್ಲಿಸುವರ್ಣಮುಖಿ ಕೊಳವನ್ನು ನಿರ್ಮಿಸಿದ್ದಾರೆ ಎಂಬುದು ಪ್ರತೀತಿಯೂ ಇದೆ.
ಇಷ್ಟೆಲ್ಲಾ ಮಹಿಮಾನ್ವಿತವಾದ ಈ ಕ್ಷೇತ್ರದಲ್ಲಿರುವ ಚಂಪಕಧಾಮಸ್ವಾಮಿ ದೇಗುಲದ ಹಿಂಬದಿಯ ವಹನಿಗಿರಿ (ವಹ್ನಿ ಗಿರಿ) ಎಂಬ ಏಕಾ ಶಿಲಾ ಬೆಟ್ಟದಲ್ಲಿ ಲಕ್ಷ್ಮೀ ನರಸಿಂಹ ದೇವಾಲಯವಿದೆ. ಈ ದೇವಾಲಯವನ್ನು ಇತ್ತೀಚೆಗೆ ನವೀಕರಣ ಮಾಡಲಾಗಿದ್ದು, ಮೂರು ಅಂತಸ್ತುಗಳ ಭವ್ಯ ರಾಜಗೋಪುರ ನಿರ್ಮಿಸಲಾಗಿದೆ. ಈ ಗೋಪುರದಲ್ಲಿ ನಾರಾಯಣನ ವಿವಿಧ ಅವತಾರಗಳನ್ನು ಹಾಗೂ ದ್ವಾರಪಾಲಕರ ಗಾರೆಯ ಮೂರ್ತಿಗಳನ್ನು ಅಳವಡಿಸಲಾಗಿದೆ. ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಬೃಹತ್ ಗರುಡಗಂಬವಿದೆ. ದೇವಾಲಯದ ಪ್ರವೇಶದಲ್ಲಿ ಯಾಳಿಯ ಗಾರೆಯ ಶಿಲ್ಪವಿದೆ. ಕಲ್ಲಿನ ಬೃಹತ್ ಬಾಗಿಲವಾಡದಲ್ಲಿ ಸುಂದರ ಕಲಾತ್ಮಕ ಕೆತ್ತನೆಗಳಿವೆ.
ಮುಖಮಂಟಪ, ಗರ್ಭಗೃಹವನ್ನು ಒಳಗೊಂಡ ಈ ದೇವಾಲಯದ ಗರ್ಭಗೃಹದಲ್ಲಿ ಸುಂದರವಾದ ಕೃಷ್ಣ ಶಿಲೆಯ ಲಕ್ಷ್ಮೀನರಸಿಂಹಸ್ವಾಮಿಯ ಸುಂದರ ಮೂರ್ತಿ ಇದೆ. ನಿತ್ಯ ಪೂಜೆ ಇಲ್ಲಿ ನಡೆಯುತ್ತದೆ. ದೇವಾಲಯದ ಪ್ರಾಕಾರದಲ್ಲಿ ದೇವರಿಗೆ ಎದುರಾಗಿ ರೆಕ್ಕೆ ಬಿಚ್ಚಿ ಅಂಜಲೀಬದ್ಧನಾಗಿ ಕುಳಿತ ಗರುಡನ ಕೃಷ್ಣ ಶಿಲಾ ಮೂರ್ತಿಯಿದೆ. ಮುಖ ಮಂಟಪದಲ್ಲಿ ರತ್ನಖಚಿತವಾದ ಲಕ್ಷ್ಮೀನರಸಿಂಹ ಸ್ವಾಮಿಯ ವಿಗ್ರಹವಿದ್ದು, ಅತ್ಯಂತ ಆಕರ್ಷಕವಾಗಿದೆ.
ಸಂಜೆಯ ವೇಳೆ ಈ ಗಿರಿಶಿಖರದ ಮೇಲೆ ನಿಂತು ಉತ್ತರದಿಕ್ಕಿಗೆ ಕಣ್ಣು ಹಾಯಿಸಿದರೆ ಬೆಂಗಳೂರಿನ ಝಗಮಗಿಸುವ ವಿದ್ಯುತ್ ದೀಪಗಳ ನೋಟ ಮನಸೆಳೆಯುತ್ತದೆ. ಚಾಮುಂಡಿ ಬೆಟ್ಟದ ಮೇಲೆ ನಿಂತು ಮೈಸೂರು ನೋಡಿದ ಅನುಭವ ಇಲ್ಲೂ ಸಿಗುತ್ತದೆ. ತುಸು ಮಬ್ಬು ಗತ್ತಲಿರುವಾಗ ದಕ್ಷಿಣದಿಕ್ಕಿಗೆ ಹಾಗೂ ಪೂರ್ವಕ್ಕೆ ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ದಟ್ಟವಾದ ಕಾನನ ಕಣ್ಮನ ಸೆಳೆಯುತ್ತದೆ.
******



ವಿನಾಯಕ  ದೇವಾಲಯ ಬೆಂಗಳೂರು vinayaka temple bangalore bengaluru

by ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ - ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಒಂದು ಪುರಾತನ ದೇವಾಲಯವಿದೆ. ಅದುವೇ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ.

ವೃತ್ತದ ಒಳಗೇ ಇರುವ ದೇವಾಲಯದಲ್ಲಿನ ಈ ಗಣಪ ಅಲಂಕಾರ ಪ್ರಿಯ. ಈ ದೇವಾಲಯಕ್ಕೆ ಬರುವ ಭಕ್ತರು ತಮ್ಮದೇ ಬೇಡಿಕೆಗಳನ್ನು ಹೊತ್ತು ಬರುತ್ತಾರೆ. ತಮ್ಮ ಅಪೇಕ್ಷೆ ಈಡೇರಿದರೆ ಅಲಂಕಾರ ಮಾಡಿಸುವುದಾಗಿ ಹರಕೆ ಹೊರುತ್ತಾರೆ. ಹೀಗಾಗಿಯೇ ಈ ಗಣಪನಿಗೆ ದಿನಕ್ಕೊಂದು ಅಲಂಕಾರ ಮಾಡಲಾಗುತ್ತದೆ. ಒಂದು ವರ್ಷದವರೆಗೆ ವಿನಾಯಕಸ್ವಾಮಿಗೆ ಅಲಂಕಾರ ಮಾಡಲು ಭಕ್ತರು ಮುಂಗಡ ಹಣ ಪಾವತಿಸಿದ್ದಾರೆ ಎಂದರೆ ಈ ಗಣಪನ ಮಹಿಮೆ ಎಷ್ಟೆಂಬುದು ವೇದ್ಯವಾಗುತ್ತದೆ.
ನೆಟ್ಟಕಲ್ಲಪ್ಪ ವೃತ್ತದ ಈ ಗಣಪನನ್ನು ಕ್ಷಿಪ್ರವರಪ್ರದ ಗಣಪ ಎಂದೂ ಕರೆಯುತ್ತಾರೆ. ವಿಘ್ನ ನಿವಾರಕನಾದ ಈ ವಿನಾಯಕ ತನ್ನ ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂದೂ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತಾನೆಂಬುದು ಭಕ್ತರ ಅಚಲ ನಂಬಿಕೆ.
ಅಷ್ಟೇ ಅಲ್ಲ, ಈ ಪ್ರದೇಶದ ಸುತ್ತಮುತ್ತ ಇರುವ ಅನೇಕರು ತೀರ್ಥಯಾತ್ರೆಗೆ ಹೋಗುವಾಗ ಇಲ್ಲ ಪ್ರವಾಸ ಕೈಗೊಳ್ಳುವಾಗ ಈ ವರಸಿದ್ಧಿ ವಿನಾಯಕ ಸ್ವಾಮಿ ದರ್ಶನ ಮಾಡಿ ಹೋಗುತ್ತಾರೆ. ಹೀಗೆ ಮಾಡುವುದರಿಂದ ಯಾತ್ರೆಯಲ್ಲಿ ದೇವರ ದರ್ಶನ ಚೆನ್ನಾಗಿ ಆಗುತ್ತದೆ ಮತ್ತು ಯಾವುದೇ ತೊಂದರೆ ಇಲ್ಲದೆ ಯಾತ್ರೆ ಅಥವಾ ಪ್ರವಾಸ ಪೂರ್ಣವಾಗುತ್ತದೆ ಎಂಬುದೂ ಭಕ್ತರ ನಂಬಿಕೆ.
ಈ ಪ್ರದೇಶದಲ್ಲಿ ಅತಿ ಹೆಚ್ಚು ಹೊಸ ವಾಹನ ಪೂಜೆ ನಡೆಯುವುದೂ ಈ ದೇವಾಲಯದಲ್ಲೇ ಎಂಬುದು ಮತ್ತೊಂದು ವಿಶೇಷ. ನೂತನ ವಾಹನ ಖರೀದಿಸುವವರು ತಮಗೆ ಯಾವುದೇ ರೀತಿಯ ಅಪಘಾತ ಆಗದಿರಲೆಂದು ಪ್ರಾರ್ಥಿಸಿ ಈ ದೇವಾಲಯಕ್ಕೆ ಬಂದು ಗಣಪತಿಯ ಮುಂದೆ ವಾಹನ ಪೂಜೆ ಮಾಡಿಸುತ್ತಾರೆ.
ವಿಶಾಲವಾದ ವೃತ್ತದ ಅಂಚಿನಲ್ಲಿರುವ ಈ ದೇವಾಲಯಕ್ಕೆ ಸುಂದರ ಗೋಪುರವಿದೆ. ಗೋಪುರದಲ್ಲಿ ಗಣಪತಿಯ ವಿವಿಧ ರೂಪಗಳ ಗಾರೆಯ ಶಿಲ್ಪಗಳಿವೆ. ದೇವಾಲಯದ ಮುಂದೆ ಅಶ್ವತ್ಥಕಟ್ಟೆ ಇದ್ದು, ಅದರ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಕ್ಕದಲ್ಲೇ ನವಗ್ರಹ ಗುಡಿಯೂ ಇದೆ. ಗಣಪನ ಗುಡಿನ ಹಿಂಭಾಗದಲ್ಲಿ ಸುಂದರ ಕಲಾತ್ಮಕ ಮಂಟಪ ಇದ್ದು, ಅದರಲ್ಲಿ ಶಿವನ ವಿಗ್ರಹ ಮತ್ತು ಲಿಂಗವಿದೆ. ಇದನ್ನು ದೆಹಲಿಯ ಭಕ್ತರೊಬ್ಬರು ಈ ದೇವಾಲಯಕ್ಕೆ ನೀಡಿದ್ದಾರೆ.
ಕಲಾತ್ಮಕ ಕೆತ್ತನೆಯಿಂದ ಕೂಡಿದ ಬೆಳ್ಳಿಯ ತಗಡಿನ ಬಾಗಿಲು ಇರುವ ಪ್ರಧಾನ ಗರ್ಭಗೃಹದಲ್ಲಿ ಮೂಷಿಕ ಪೀಠದ ಮೇಲೆ ಕುಳಿತ ವರಸಿದ್ಧಿ ವಿನಾಯಕ ಸ್ವಾಮಿಯ ವಿಗ್ರಹವಿದೆ. ಮೇಲ್ಭಾಗದ ಒಂದು ಕೈಯಲ್ಲಿ ಪಾಶವನ್ನೂ ಮತ್ತೊಂದು ಕೈಯಲ್ಲಿ ಅಂಕುಶವನ್ನೂ ಹಿಡಿದ ಈ ಗಣಪನ ಮತ್ತೆರೆಡು ಕೈಗಳಲ್ಲಿ ಮುರಿದ ದಂತ ಹಾಗೂ ಮೋದಕವಿದೆ. ಗಣಪನ ಹಿಂದೆ ಬೆಳ್ಳಿಯ ಪ್ರಭಾವಳಿ ಇದೆ. ಗರ್ಭಗೃಹದ ಮುಂದೆ ಮೂಷಿಕ ವಾಹನವಿದೆ.
ದೇವಾಲಯದಲ್ಲಿ ಸಂಕಷ್ಟ ಹರ ಚತುರ್ಥಿಯ ದಿನ ಗಣಹೋಮ ಹಾಗೂ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ನವಗ್ರಹ ಹೋಮ ಹಾಗೂ ಪೌರ್ಣಿಮೆಯಂದು ಸತ್ಯನಾರಾಯಣ ಪೂಜೆ ನೆರವೇರುತ್ತದೆ.
ನಿತ್ಯ ಗಣಪನಿಗೆ ಒಂದೊಂದು ರೀತಿಯ ಅಲಂಕಾರ ಮಾಡಲಾಗುತ್ತದೆ, ಪುಷ್ಪಾಲಂಕಾರ, ತರಕಾರಿ ಅಲಂಕಾರ, ಹಣ್ಣಿನ ಅಲಂಕಾರ, ವಿಭೂತಿ ಅಲಂಕಾರ, ಗೋಡಂಬಿ ಅಲಂಕಾರ ಹೀಗೆ ನಾನಾ ಬಗೆಯ ಅಲಂಕಾರದಲ್ಲಿ ಕಂಗೊಳಿಸುವ ಈ ಗಣಪನನ್ನು ನೋಡಲು ನಿತ್ಯ ಬರುವ ಭಕ್ತರೂ ಇದ್ದಾರೆ.
********



ರಾಗೀಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ 
ಬೆಂಗಳೂರಿನಲ್ಲಿರುವ ಪುರಾತನ ದೇವಾಲಯಗಳ ಪೈಕಿ ರಾಗೀಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು.
ರಾಜಧಾನಿಯ ಪ್ರಸಿದ್ದ ದೇವಾಲಯಗಳಲ್ಲೊಂದಾದ ಜಯನಗರ 9ನೇ ಬ್ಲಾಕ್ ನಲ್ಲಿರುವ ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ. 50ನೇ ವರ್ಷದ ಪ್ರಯುಕ್ತ ಮತ್ತು ವಾರ್ಷಿಕವಾಗಿ ಅದ್ದೂರಿಯಾಗಿ ಹನುಮ ಜಯಂತಿಯ ಜೊತೆಗೆ ಈ ಬಾರಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಟ್ಟದ ಮೇಲೆ ರಾಗಿದಿಬ್ಬದಿಂದ ಉದ್ಭವಿಸಿದ್ದರಿಂದ ಇದಕ್ಕೆ ರಾಗೀಗುಡ್ಡ ಎನ್ನಲಾಗುತ್ತದೆ.  ಪ್ರತಿ ಶನಿವಾರ ಆಂಜನೇಯನಿಗೆ ವಿಶೇಷವಾದ ದಿನವಾಗಿರುವುದರಿಂದ ರಾಗೀಗುಡ್ಡದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.  
ಈ ಹಿನ್ನಲೆಯಲ್ಲಿ ಬೆಂಗಳೂರಿನ ಅಕ್ಕಪಕ್ಕದ ಏರಿಯಾದ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗಾಗಿ ಈ ದೇವಸ್ಥಾನ ಪ್ರಸಿದ್ಧಿ ಪಡೆದುಕೊಂಡಿದೆ. 
ಇನ್ನು ಮುಖ್ಯವಾಗಿ ರಾಗೀಗುಡ್ಡದಲ್ಲಿ ಹನುಮ ಜಯಂತಿಯ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದ್ದು, ಡಿ. 23 ರ ವರೆಗೆ ಉತ್ಸವ ನಡೆಯಲಿದೆ. 50ನೇ ವರ್ಷದ ಪ್ರಯುಕ್ತ ಮತ್ತು ವಾರ್ಷಿಕವಾಗಿ ಅದ್ದೂರಿಯಾಗಿ ನಡೆಯುವ ಹನುಮಜ್ಜಯಂತಿಯ ಜೊತೆಗೆ ಈ ಬಾರಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈಗಾಗಲೇ ಬುಧವಾರ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಚಾಲನೆ ದೊರೆತಿದ್ದು,  ಡಿ.23ರ ವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
 ಎಲ್ಲಿದೆ ಈ ದೇವಾಲಯ? 
ರಾಗೀಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿರುವ ರಾಗಿಗುಡ್ಡ ಪ್ರಸನ್ನಾಂಜನೇಯ ದೇವಾಲಯವು ಬೆಂಗಳೂರಿನ ಜಯನಗರ 9 ನೇಯ ಬ್ಲಾಕ್ ನಲ್ಲಿರುವ ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ.
**********




ಕುರುಡುಮಲೆ ಮಹಾ ಗಣೇಶ - ಕೋಲಾರ ಬಳಿಯ ಪರಮ ಪವಿತ್ರ ಕ್ಷೇತ್ರ
*ಲೇಖಕರು: ಟಿ.ಎಂ.ಸತೀಶ್,ಸಂಪಾದಕರು, ಕನ್ನಡರತ್ನ.ಕಾಂ

ಕರ್ನಾಟಕದ ಪ್ರಸಿದ್ಧ ಗಣಪ ಕ್ಷೇತ್ರಗಳಲ್ಲಿ ಕುರುಡು ಮಲೆಯೂ ಒಂದು. ಬೆಂಗಳೂರಿನಿಂದ 108 ಕಿಲೋ ಮೀಟರ್ ದೂರದಲ್ಲಿರುವ ಕುರುಡುಮಲೆ ಮುಳಬಾಗಲಿನಿಂದ 9 ಕಿಲೋ ಮೀಟರ್ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಗ್ರಾಮ. ಚೋಳರ ಕಾಲದಲ್ಲಿ ಇದು ಪ್ರಮುಖ ತಾಣವಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಸ್ಥಳ ಪುರಾಣದ ಪ್ರಕಾರ ಇದು ಕೌಂಡಿನ್ಯ ಕ್ಷೇತ್ರ. ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ ಉಲ್ಲೇಖವಿದೆ. ಕೌಂಡಿನ್ಯ ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಎರಡು ಬೆಟ್ಟಗಳು ಕೂಡುವ ಕಾರಣ ಇದನ್ನು ಕೂಡು ಮಲೆ ಎನ್ನುತ್ತಿದ್ದರು. ಕಾಲಾಂತರದಲ್ಲಿ ಇದು ಕುರುಡುಮಲೆ ಆಗರಬಹುದು ಎಂಬುದು ತಜ್ಞರ ವಾದ.
ಪುರಾಣ ಪ್ರಸಂಗದ ರೀತ್ಯ ತ್ರಿಪುರಾಸುರ ಸಂಹಾರವಾದ ಬಳಿಕ ದೇವಾನು ದೇವತೆಗಳು ಈ ಗಿರಿಯ ಮೇಲೆ ಕೂಡಿ ಸಂಭ್ರಮ ಪಟ್ಟರಂತೆ. ದೇವತೆಗಳೆಲ್ಲರೂ ಒಂದೇ ಕಡೆ ಕೂಡಿದ ಈ ಬೆಟ್ಟ ಕೂಡು ಮಲೆ ಎಂದು ಖ್ಯಾತವಾಯಿತಂತೆ. 
ಕೃತಯುಗದಲ್ಲಿ, ದ್ವಾಪರದಲ್ಲಿ ಇದು ಗಣೇಶಗಿರಿ ಎನಿಸಿಕೊಂಡಿತ್ತಂತೆ. ಇಲ್ಲಿ ಮಹಾಗಣಪತಿಯ ಪ್ರಾಚೀನ ಮಂದಿರವಿದೆ. ಚೋಳರ ಕಾಲದಲ್ಲಿ ಈ ದೇವಾಲಯವನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಸುಂದರವಾದ ಈ ದೇವಾಲಯದ ಮುಂದೆ ಗಣಪತಿಯ ವಾಹನ ಇಲಿಯ ಬೃಹತ್ ಗಾತ್ರದ ಕಲಾತ್ಮಕ ವಿಗ್ರಹವಿದೆ. ಇಲ್ಲಿ ಮೂಷಿಕನಿಗೂ ನಿತ್ಯ ಪೂಜೆ ನಡೆಯುವುದು ವಿಶೇಷ.
ದೇವಾಲಯದ ಗರ್ಭಗೃಹದಲ್ಲಿ ಸುಂದರ 3 ಅಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ 15 ಅಡಿ ಎತ್ತರದ ತುಸು ಹಸಿರು ಬಣ್ಣದ ಸಾಲಿಗ್ರಾಮ ಶಿಲೆಯ ಗಣಪನ ವಿಗ್ರಹವಿದೆ. ಒಂದು ಕೈಯಲ್ಲಿ ಪಾಶ, ಮತ್ತೊಂದರಲ್ಲಿ ಅಂಕುಶ ಹಿಡಿದ ಗಣಪ ಮತ್ತೊಂದು ಕೈಯಲ್ಲಿ ತನಗೆ ಪ್ರಿಯವಾದ ಮೋದಕವನ್ನು ಹಿಡಿದಿರುವುದನ್ನು ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ. ಈ ಗಣಪನಿಗೆ ಬೆಣ್ಣೆಯ ಅಲಂಕಾರ ಹಾಕಿದಾಗಲಂತೂ ವಿಘ್ನೇಶ್ವರನ ನೋಡಲು ನಿಜಕ್ಕೂ ನೂರು ಕಣ್ಣು ಸಾಲದು. 
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗಣೇಶ ಚತುರ್ಥಿಯ ಮಾರನೇ ದಿನ ಇಲ್ಲಿ ಗಣಪತಿಗೆ ಬ್ರಹ್ಮ ರಥೋತ್ಸವವೂ ಜರುಗುತ್ತದೆ.
ಬಯಲು ಆಲಯದೊಳಗೋ, ಆಲಯವು ಬಯಲೊಳಗೋ ಎನ್ನುವಂತೆ ಇಲ್ಲಿ ಗಣಪತಿ ಬಯಲಿನಲ್ಲಿ ಪ್ರತಿಷ್ಠಾಪಿತನಾಗಿದ್ದನಂತೆ. ವಿಜಯನಗರದ ಅರಸರು ಈ ಗಣಪನಿಗೆ ಆಲಯ ಕಟ್ಟಿದರು, ನಂತರ ಮೈಸೂರು ಒಡೆಯರು ಇದನ್ನು ಜೀರ್ಣೋದ್ಧಾರ ಮಾಡಿದರು ಎಂದು ಹೇಳಲಾಗುತ್ತದೆ.
ಇಲ್ಲಿರುವ ಗಣಪನ ಪ್ರತಿರೂಪದಂತೆ ಇರುವ ಆದರೆ ಅಷ್ಟು ಬೃಹತ್ ಅಲ್ಲದ ಮತ್ತೊಂದು ಗಣಪನ ವಿಗ್ರಹ ಸನಿಹದಲ್ಲೇ ಇರುವ ಕ್ಷಮಾಂಬಾ ಸೋಮೇಶ್ವರ ದೇವಾಲಯದ ಆವರಣದ ಬಯಲಿನಲ್ಲಿದೆ. 
ದೇವಾಲಯದ ಪ್ರಾಕಾರದಲ್ಲಿ 6 ಅಡಿ ಎತ್ತರದ ಹನ್ನೆರಡು ಕೈಗಳುಳ್ಳ ಸುಬ್ರಹ್ಮಣ್ಯ ಸ್ವಾಮಿಯ ಸುಂದರ ಪ್ರತಿಮೆಯಿದೆ. ಬೃಹತ್ ಗುಂಡುಕಲ್ಲುಗಳಿಂದ ಕೂಡಿದ ಬೆಟ್ಟದ ತಪ್ಪಲಿನಲ್ಲಿರುವ ವಿಶಾಲವಾದ ಜಾಗದಲ್ಲಿ ದೇವಾಲಯವನ್ನು ಬೃಹತ್ತಾಗಿಯೇ ನಿರ್ಮಿಸಲಾಗಿದೆ. ಆದರೆ ದೇವಾಲಯದ ಭಿತ್ತಿಗಳಲ್ಲಿ ಹೇಳಿಕೊಳ್ಳುವಂಥ ಶಿಲ್ಪಗಳೇನಿಲ್ಲ. ದ್ವಾರದ ಬಳಿ ಮತ್ತು ಬಲಭಾಗದ ಹೊರಬಿತ್ತಿಯಲ್ಲಿ ಆನೆ ಹಸು ಎರಡೂ ಒಂದೇ ಶಿರದಲ್ಲಿರುವ ಕೆತ್ತನೆ ಇದೆ. ದೇವಾಲಯಕ್ಕೆ ವಿಶೇಷವಾದ ಗೋಪುರವೂ ಇಲ್ಲ.
ಗರ್ಭಗೃಹದ ಎದುರು ನೇರವಾಗಿ ಎರಡು ಬೃಹತ್ ಕಂಬಗಳನ್ನು ನಿಲ್ಲಿಸಲಾಗಿದೆ. ಈ ಕಲ್ಲುಕಂಬದಲ್ಲಿ ಸಾಧಾರಣ ಕೆತ್ತನೆ ಇದೆ. ಈ ಕಂಬಗಳು ಸಮಾನಾಂತರವಾಗಿ ಕಮಾನಿನಂತೆ ಬಾಗಿವೆ. ಗಣಪನ ಗುಡಿಯ ಪ್ರಾಂಗಣದಲ್ಲಿ ನವಗ್ರಹ ಗುಡಿಯೂ ಇದೆ.
****

ಬಾಳಗಂಚಿಯ ಶ್ರೀ ಲಕ್ಷ್ಮೀನರಸಿಂಹ ದೇವಾಲಯ - ಹಾಸನ ಜಿಲ್ಲೆ ಹಿರೇಸಾವೆ ಬಳಿಯ ಪ್ರಾಚೀನ ಮಂದಿರ

*ಟಿ.ಎಂ. ಸತೀಶ್, ಸಂಪಾದಕ, ಕನ್ನಡರತ್ನ.ಕಾಂ ourtemples.in
ಹಾಸನ ಜಿಲ್ಲೆಯ ಹಿರೇಸಾವೆ ಬಳಿಯ ಬಾಳಗಂಚಿ ಹೊನ್ನಾದೇವಿಯ ಕ್ಷೇತ್ರವಷ್ಟೇ ಅಲ್ಲ, ಲಕ್ಷ್ಮೀನರಸಿಂಹಸ್ವಾಮಿಯ ನೆಲೆವೀಡೂ ಹೌದು.

ಬಾಳಗಂಚಿ ಪುಟ್ಟ ಹಳ್ಳಿ. ರಾಷ್ಟ್ರೀಯ ಹೆದ್ದಾರಿಗೆ ಅತಿ ಸಮೀಪದಲ್ಲೇ ಇದ್ದರೂ ಕೂಡ ಹೆಚ್ಚಿನ ಅಭಿವೃದ್ಧಿ ಕಾಣದೆ ಕುಗ್ರಾಮವಾಗೇ ಉಳಿದಿರುವ ಈ ಗ್ರಾಮಕ್ಕೆ ಸಾವಿರಾರು ವರ್ಷಗಳಷ್ಟು ಸುದೀರ್ಘ ಇತಿಹಾಸ ಇದೆ. ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ ವೇದಾಗಮಶಾಸ್ತ್ರ ಪಾಂಡಿತ್ಯ ಹೊಂದಿದ್ದ 76 ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು ಅಗ್ರಹಾರ ಮಾಡಿದ್ದ ಎಂದು 1256ರ ಶಾಸನ ಸಾರುತ್ತದೆ.
ಅಗ್ರಹಾರದ ರಚನೆಗೆ ನಿರ್ದಿಷ್ಟ ನಿಯಮವಿದೆ. ಅಂದರೆ ಊರಿನ ಮಧ್ಯದಲ್ಲಿ ನಾರಾಯಣನ ದೇವಾಲಯ ಇರಬೇಕು. ಊರಿನ ಈಶಾನ್ಯಕ್ಕೆ ಈಶ್ವರನ ಗುಡಿ ಇರಬೇಕು, ಅದರ ಎದುರು ಕೆರೆ, ಕಟ್ಟೆ, ನದಿ ಇರಬೇಕು. ಊರಿನಲ್ಲಿ ವೇದಪಾಠ (ವಿದ್ಯಾಭ್ಯಾಸ) ನಡೆಯಬೇಕು. ಈ ಎಲ್ಲವೂ ಬಾಳಗಂಚಿಯಲ್ಲಿದ್ದು, ಇದು ಅಗ್ರಹಾರ ಎಂಬುದನ್ನು ನಿರೂಪಿಸುತ್ತದೆ.
ಬಾಳಗಂಚಿಯ ಮಧ್ಯದಲ್ಲಿ ನಾರಾಯಣನ ಒಂದು ಅವತಾರವಾದ ನರಸಿಂಹ (ಲಕ್ಷ್ಮೀ ನರಸಿಂಹ) ದೇವಾಲಯವಿದೆ, ಈಶಾನ್ಯ ಮೂಲೆಯಲ್ಲಿ ಪಂಚಲಿಂಗೇಶ್ವರ ಗುಡಿ ಇದೆ. ಇದರ ಎದುರು ಕೆರೆ ಇದೆ. ಈ ಊರಿನಲ್ಲಿ ವೇದಶಾಸ್ತ್ರ ಪಾರಂಗತರಿದ್ದರೆಂದೂ ಇದು ಪಂಡಿತರ ಆವಾಸಸ್ಥಾನವಾಗಿ ವೇದಾಧ್ಯಯನ ಕೇಂದ್ರವಾಗಿತ್ತು ಎಂಬುದೂ ಇತಿಹಾಸದಿಂದ ತಿಳಿದುಬರುತ್ತದೆ.
ತಮಿಳುನಾಡಿನ ಕಂಚಿ ಸಾವಿರಾರು ವರ್ಷಗಳಿಂದ ವೇದಾಧ್ಯಯನಕ್ಕೆ ಹೆಸರಾಗಿದ್ದ ಸ್ಥಳವಾಗಿತ್ತು. ಅದೇ ರೀತಿ ಬಾಳಗಂಚಿಯಲ್ಲೂ ವೇದಪಾಠ ಹೇಳುವ ಪಂಡಿತರಿದ್ದರೆಂಬ ಉಲ್ಲೇಖವಿದೆ. ಹೀಗಾಗಿ ಇದನ್ನು ಬಾಲ ಕಂಚಿ ಎಂದು ಕರೆಯುತ್ತಿದ್ದರು. ಬಳಿಕ ಇದುವೇ ಬಾಳಗಂಚಿ ಆಯಿತು ಎಂದು ಇದೇ ಊರಿನಲ್ಲಿ ಹುಟ್ಟಿ ಬೆಳೆಯ ಹಿರಿಯರಾದ ಗಮಕಿ ಶಿವಮೂರ್ತಿಗಳು ಹೇಳುತ್ತಾರೆ.
ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ ಬುಕ್ಕರ ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯರು ಕೂಡ ತಮ್ಮ ಶಿಷ್ಯರೊಂದಿಗೆ ಬಾಳಗಂಚಿಯಲ್ಲಿ ಕೆಲ ಕಾಲ ನೆಲೆಸಿ ಇಲ್ಲಿ ಮಠವನ್ನು ಸ್ಥಾಪಿಸಿದ್ದರು ಎಂದೂ ಹೇಳಲಾಗುತ್ತದೆ. ಹಕ್ಕಬುಕ್ಕರು ಇಲ್ಲಿದ್ದರು ಎಂಬುದಕ್ಕೆ ಊರಿಗೆ ಸಮೀಪದಲ್ಲೇ ಇರುವ ಬುಕ್ಕನ ಬೆಟ್ಟ ಮತ್ತು ಹಕ್ಕನ ಕೆರೆ ಸಾಕ್ಷಿಯಾಗಿದೆ ಎಂದೂ ಹೇಳಲಾಗುತ್ತದೆ.
ವಿದ್ಯಾರಣ್ಯರು ಸ್ಥಾಪಿಸಿದ್ದರೆಂದು ಹೇಳಲಾಗುವ ಮಠ (ಇಂದು ಅಂಗನವಾಡಿ ಕೇಂದ್ರ)ಕ್ಕೆ ಹೊಂದಿಕೊಂಡಂತೆಯೇ ಪುರಾತನವಾದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ. ಭೂಮಿಯಿಂದ ಐದು ಅಡಿ ಎತ್ತರದ ಕಲ್ಲಿನ ಜಗಲಿಯ ಮೇಲೆ ಕಲ್ಲು, ಮಣ್ಣು, ಗಾರೆಯಿಂದ ನಿರ್ಮಿಸಿರುವ ಪುರಾತನ ದೇವಾಲಯವಿದೆ. ದೇವಾಲಯದ ದ್ವಾರದ ಮೇಲಿನ ಗಾರೆಗಚ್ಚಿನ ಮೂರು ಗೋಪುರ ಗೂಡುಗಳಿದ್ದು, ಮಧ್ಯದ ಗೂಡಿನಲ್ಲಿ ಲಕ್ಷ್ಮೀನರಸಿಂಹ ಹಾಗೂ ಎಡ ಬಲದಲ್ಲಿರುವ ಗೋಪುರ ಗೂಡುಗಳಲ್ಲಿ ಗಣಪತಿ ಮತ್ತು ಕೃಷ್ಣನ ಗಾರೆ ಶಿಲ್ಪಗಳಿವೆ. ಸುತ್ತಲೂ ಮೂಲೆಗಳಲ್ಲಿ ಸಿಂಹದ ಪ್ರತಿಮೆಗಳಿವೆ. ಕಲ್ಲಿನ ಜಗಲಿಯಲ್ಲೇ ದೇವಾಲಯಕ್ಕೆ ಪ್ರದಕ್ಷಿಣ ಪಥ ನಿರ್ಮಿಸಲಾಗಿದೆ.
ದೇವಾಲಯದ ಮೆಟ್ಟಿಲು ಹತ್ತುತ್ತಿದ್ದಂತೆ ಪುಟ್ಟ ಮುಖಮಂಟಪವಿದೆ. ದ್ವಾರದ ಮೂಲಕ ಪ್ರವೇಶಿಸಿದರೆ ನವರಂಗ, ಹಾಗೂ ಗರ್ಭಗೃಹ ಕಾಣುತ್ತದೆ. ಗರ್ಭಗೃಹದಲ್ಲಿ ಅರೆಕಂಬಗಳ ಕೆತ್ತನೆ ಇದ್ದು, ಸುಂದರವಾದ ಸಾಲಿಗ್ರಾಮಶಿಲೆಯ ಲಕ್ಷ್ಮೀನರಸಿಂಹಸ್ವಾಮಿಯ ಶಾಂತಮೂರ್ತಿ ಮನಸೂರೆಗೊಳ್ಳುತ್ತದೆ. ನಿತ್ಯ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನಡೆಯುತ್ತದೆ.
ಬೆಂಗಳೂರು – ಮಂಗಳೂರು ರಸ್ತೆಗೆ 2 ಕಿ.ಮೀ. ದೂರದಲ್ಲಿ ಬಾಳಗಂಚಿ ಇದೆ. ಬೆಳ್ಳೂರು ಕ್ರಾಸ್ ದಾಟಿದ ಬಳಿಕ ಕಿರೆಸಾವೆ ಬಳಿ ಇರುವ ಟೂಲ್ ದಾಟುತ್ತಿದ್ದಂತೆ ಬಲಕ್ಕೆ ತಿರುಗಿದರೆ ಹೊನ್ನಾದೇವಿ ಹಳ್ಳಿ ಮೂಲಕ ಬಾಳಗಂಚಿಗೆ ಹೋಗಬಹುದು. ತುರುವೇಕೆರೆ ಮಾರ್ಗವಾಗಿ ಬೆನಕಿನಕೆರೆಯ ಕಡೆಯಿಂದ ಬಾಳಗಂಚಿಗೆ ಬರಲೂ ರಸ್ತೆ ಇದೆ.
********





ಉಡುಪಿ ಕೃಷ್ಣಾ udupi krishna

ಕೃಷ್ಣಾ ವಿಗ್ರಹ ದ್ವಾರಕೆಯಿಂದ ಉಡುಪಿಗೆ ಬಂದದ್ದಕ್ಕಂತೂ ಇತಿಹಾಸದ ಸ್ಪಷ್ಟ ಮಾಹಿತಿಗಳಿವೆಅಥವಾ ಇದೂ ಸಹಾ ಮಧ್ವಾಚಾರ್ಯರ ಕೃಷ್ಣಭಕ್ತಿಯ ಪರಾಕಾಷ್ಠೆಯ ಫಲವೇ..? ಯಾರಿಗೆ ಗೊತ್ತು.
ಇನ್ನೇನು ಕೃಷ್ಣಾವತಾರ ಅಂತ್ಯಗೊಳ್ಳುವ ಸಮಯ ಸಮೀಪಿಸುತ್ತಿದ್ದಂತೆ, ದೇವಕಿಗೆ ಉಳಿದಿದ್ದ ಕೊನೆ ಆಸೆ..ತಾನು ಕಾಣದ ಕೃಷ್ಣನ ಬಾಲಲೀಲೆಗಳನ್ನು ಒಮ್ಮೆ ನಾನೂ ಸಹ ಕಣ್ತುಂಬ ನೋಡಬೇಕು ಎಂದಿದ್ದಕ್ಕೆ..ಸರಿ ಹಾಗೇ ಆಗಲಿ ಎಂದು ಕೃಷ್ಣ ಪುನಃ ಬಾಲಗೋಪಾಲನಾಗಿ, ಕಡಗೋಲು, ಹಗ್ಗಗಳನ್ನಿಡಿದು, ಚಿನ್ನಾಟವಾಡುತ್ತಾ, ಕುಣಿಯುತ್ತಾ, ಬಾಯಿತುಂಬಾ ಬೆಣ್ಣೆ ಮೆತ್ತಿಕೊಂಡು ದೇವಕಿಯ ಮುಂದೆ ನಿಂತುಬಿಡುತ್ತಾನೆ. ರುಕ್ಮಿಣಿಯೂ ತಾನು ಕಂಡಿರದ ಕೃಷ್ಣನ ಈ ಅವತಾರವನ್ನು ಕಂಡು ಆನಂದತುಲಲಿತಳಾಗಿ, ನನಗೆ ನಿಮ್ಮ ಈ ಬಾಲಲೋಲನ ವಿಗ್ರಹವನ್ನು ಮಾಡಿಸಿಕೊಡಿ ಎಂದು ಬೇಡಿಕೊಳ್ಳುತ್ತಾಳೆ. ಸರಿ ಹಾಗೇ ಆಗಲಿ ಎಂದು ಕೃಷ್ಣ ಹೀಗೊಂದು ವಿಗ್ರಹವನ್ನು ಸೃಷ್ಟಿಸಿ ಎಂದು ವಿಶ್ವಕರ್ಮರಲ್ಲಿ ಅರಿಕೆ ಮಾಡಿಕೊಂಡು, ಆಗ ಅವರು ಸಾಲಿಗ್ರಾಮದ ಕಲ್ಲಿನಲ್ಲಿ ಬಾಲಗೋಪಾಲ ಮೂರ್ತಿಯನ್ನು ಕೆತ್ತಿಕೊಡುತ್ತಾರೆ. ಜೀವನವಿಡೀ ರುಕ್ಮಿಣಿ ಇದೇ ವಿಗ್ರಹವನ್ನು ಪೂಜಿಸುತ್ತಾ ಪಾವನಳಾಗುತ್ತಾಳೆ. ರುಕ್ಮಿಣಿಯ ನಿರ್ಗಮನದ ನಂತರ ಅರ್ಜುನ ದ್ವಾರಕೆಯ ರುಕ್ಮಿಣಿವನದಲ್ಲಿ ಈ ವಿಗ್ರಹವನ್ನು ಪ್ರತಿಷ್ಟಾಪಿಸಿ ತಾನೂ ನಿರ್ಗಮಿಸುತ್ತಾನೆ. ನಂತರ ಭಕ್ತಾದಿಗಳು ಗೋಪಿ ಚಂದನವನ್ನು ಲೇಪಿಸಿ ನಿರಂತರವಾಗಿ ಪೂಜೆ ಸಲ್ಲಿಸುತ್ತಿರುತ್ತಾರೆ. ಭಕ್ತಾದಿಗಳು ಹಚ್ಚಿದ್ದ ಗೋಪಿಚಂದನ ಹಾಗೇ ಮೆತ್ತಿಕೊಳ್ಳುತ್ತಾ ಹೋಯಿತು, ಅಭಿಷೇಕ ಮಾಡಲು ಯಾವ ಅರ್ಚಕರೂ ಇರಲಿಲ್ಲ ಅಂತಾ ಕಾಣುತ್ತದೆ, ಮುಂದೊಂದು ದಿನ ಜಲಪ್ರಳಯದಲ್ಲಿ ದ್ವಾರಕೆ ಸಮುದ್ರದಲ್ಲಿ ಮುಳುಗವಷ್ಟು ಹೊತ್ತಿಗೆ ಅದೊಂದು ಗೋಪಿಚಂದನದ ಬಂಡೆಯಾಗಿ ಬಿಟ್ಟಿತ್ತಂತೆ.
ಆದರೆ ಇದೆಲ್ಲಾ ನಡೆದಿದ್ದು ದ್ವಾರಕೆಯಲ್ಲಲ್ಲವೇ, ದ್ವಾಪರಯುಗದಲ್ಲಿ, ಆದರೆ ಈ ಯುಗಕ್ಕೆ ಮತ್ತು ಉಡುಪಿಗೆ ಹೇಗೆ ಬಂತು ಎನ್ನುವ ಸ್ವಾರಸ್ಯಕರ ಘಟನೆ.  ದ್ವಾಪರದಿಂದ ಈ ಯುಗಕ್ಕೆ ಸೇತುವೆ ಕಟ್ಟಿದ ಬಾಲಕೃಷ್ಣನ ವಿಗ್ರಹ ದ್ವಾರಕೆಯಿಂದ ಉಡುಪಿ ತಲಪಿದ್ದು ಹೇಗೆ ಅಂತಾ.

ಸತತವಾಗಿ ಗೋಪಿಚಂದನದ ಲೇಪನದಿಂದ ಆ ಬಾಲಕೃಷ್ಣನ ಮೂಲವಿಗ್ರಹ ಚಂದನದ ಬಂಡೆಯಲ್ಲಿ ಹುದುಗಿಹೋಯಿತಂತೆ. ದ್ವಾಪರದ ಅಂತ್ಯದ ಜಲಪ್ರಳಯದಲ್ಲಿ ಈ ಚಂದನದ ಬಂಡೆ ಸಮುದ್ರತಟದಲ್ಲಿ ನಿಂತಿತ್ತಂತೆ.
ಮುಂದೊಮ್ಮೆ ಹದಿಮೂರನೇ ಶತಮಾನದಲ್ಲಿ ನಾವಿಕನೊಬ್ಬ ಈ ಬಂಡೆಯನ್ನು ತನ್ನ ಹಡಗಿನಲ್ಲಿ ನೌಕೆಯ ಸಮತೋಲದ ಸಾಧನದಂತೆ ಬಳಸಿಕೊಂಡು ದ್ವಾರಕೆಯಿಂದ ದಕ್ಷಿಣದ ಕಡೆ ಪ್ರಯಾಣ ಬೆಳೆಸುತ್ತಾರೆ. ಹಡಗು ಉಡುಪಿಯ ಸಮೀಪದಲ್ಲಿದ್ದಾಗ ಭಯಂಕರವಾದ ಚಂಡಮಾರುತ ಅಪ್ಪಳಿಸಿ ಹಡಗು ಇನ್ನೇನು ಮುಳುಗುವ ಸ್ಥಿತಿಯಲ್ಲಿದ್ದಾಗ, ಅದೇ ಸಮಯಕ್ಕೆ ಸಮುದ್ರಸ್ನಾನಕ್ಕೆಂದು ಬಂದ ಮಧ್ವಾಚಾರ್ಯರು ಈ ಅಪಘಾತವನ್ನು ನೋಡಿ, ಕೃಷ್ಣನನ್ನು ಪ್ರಾರ್ಥಿಸುತ್ತಾ..ತಮ್ಮ ಶಲ್ಯದಿಂದ ಆ ಚಂಡಮಾರುತವನ್ನು ದೂರಮಾಡುತ್ತಾರೆ.
ಈ ಪವಾಡವನ್ನು ಕಣ್ಣಾರೆ ನೋಡಿದ ನಾವಿಕ ಕೃತಜ್ಞತೆಯಿಂದ ನಮಸ್ಕರಿಸಿ, ನಾನೇನಾದರೂ ನಿಮಗೆ ಕೊಡಬಹುದೇ ಎಂದು ಕೇಳಿದಾಗ, ಮಧ್ವಾಚಾರ್ಯರು ನಿಮ್ಮ ಹಡಗಿನಲ್ಲಿ ಒಂದು ಗೋಪಿಚಂದನದ ಬಂಡೆಯಿದೆ...ಅದು ಬೇಕು ಎಂದಾಗ ನಾವಿಕನಿಗೆ ಮಹದಾಶ್ಚರ್ಯ..ಈ ಬಂಡೆಯಲ್ಲೇನಿದೆ ಅಂತ್ತಾದ್ದು ಎಂದು ಕೇಳಿದ್ದಕ್ಕೆ, ಈ ಬಂಡೆಯಲ್ಲಿ ಶ್ರೀಕೃಷ್ಣನಿದ್ದಾನೆ, ಜಾಗ್ರತೆವಹಿಸಿ ಈ ಬಂಡೆಯನ್ನು ತೊಳಸಿಕೊಡಿ ಎನ್ನುತ್ತಾರೆ...
‎ಆಗ ಪ್ರತ್ಯಕ್ಷ ವಾಗುತ್ತದೆ ನೋಡಿ ಕಪ್ಪನೆಯ ಸಾಲಿಗ್ರಾಮದ ಈ ಬಾಲಕೃಷ್ಣನ ವಿಗ್ರಹ.!!
ಚಂದ್ರಮೌಳೇಶ್ವರ ದೇವಸ್ಥಾನ. ಹೌದು ಉಡುಪಿಯ ಮೂಲ ದೇವಸ್ಥಾನವದು. ಪುರಾಣಗಳಲ್ಲಿ ಬರುವಂತೆ...
ಒಮ್ಮೆ ಚಂದ್ರನಿಗೆ ತನ್ನ ಪ್ರಕಾಶ ಕ್ಷೀಣಿಸುವಂತೆ ಶಾಪ ತಟ್ಟಿತ್ತಂತೆ. ಇಲ್ಲಿ ಚಂದ್ರಮೌಳೇಶ್ವರನ ಬಳಿ ಬಂದು ತಪಸ್ಸು ಮಾಡಿ ಶಿವನ ವರದಿಂದ ತನ್ನ ಪ್ರಕಾಶವನ್ನು ಮರಳಿ ಪಡೆದನಂತೆ. 'ಉಡು'..ನಕ್ಷತ್ರಗಳು, ಅವುಗಳ ರಾಜ, ಚಂದ್ರ 'ಉಡುಪ'..ಹಾಗೆ ಚಂದ್ರನ ಹೆಸರಿನಲ್ಲಿ ಈ ಸ್ಥಳ ಪ್ರಸಿದ್ಧಿ ಪಡೆದಿದೆ.
ಆದರೆ ಈಗ ಆ ದ್ವಾರಕೆಯಿಂದ ಈ ಉಡುಪಿಗೆ ಬಂದ ಬಾಲಗೋಪಾಲನದೇ ಇಲ್ಲಿ ದರ್ಬಾರು.

ಶ್ರೀಕೃಷ್ಣನ ಹದಿನಾಲ್ಕು ವಿಧಾನದ ಪೂಜೆಗಳು ಪ್ರತೀದಿನ ಚಾಚೂ ತಪ್ಪದೆ ನಡೆಯಬೇಕು. ವ್ಯಾಸತೀರ್ಥರು ಶ್ರೀಕೃಷ್ಣದೇವರಾಯ  ಅವರ ಧರ್ಮಗುರು. ವ್ಯಾಸತೀರ್ಥರ ಆದೇಶದ ಮೇರೆಗೆ ಶ್ರೀಕೃಷ್ಣದೇವರಾಯರು ರಾಣಿಯರೊಂದಿಗೆ ಉಡುಪಿಗೆ ಭೇಟಿ ಕೊಟ್ಟಿದ್ದರು.  ಕೃಷ್ಣದೇವರಾಯರು ಎಲ್ಲಾ ಹದಿನಾಲ್ಕು ಪೂಜೆಗಳಲ್ಲೂ ಭಾಗವಹಿಸುತ್ತಾರೆ. ಅದೇನು ಭಕ್ತಿ ಕೃಷ್ಣನಲ್ಲಿ. ಒಂದು ಬಾಲಕೃಷ್ಣ ದೇವಸ್ಥಾನವನ್ನು ಹಂಪೆಯಲ್ಲೂ ಕಟ್ಟಿಸಿದ್ದಾರಂತೆ. 
ಇಲ್ಲಿಯ ಪೂಜಾಪ್ರತಿ ಅಷ್ಟಮಠಗಳಲ್ಲಿ ಹಂಚಿಹೋಗಿದೆ. ಪರ್ಯಾಯಕ್ಕೊಬ್ಬರ ಸರದಿ. ಮೊದಲು ಎರಡು ತಿಂಗಳಿಗೆ ಪರ್ಯಾಯ ನಡೆಯುತ್ತಿತ್ತಂತೆ, ಆದರೆ ಶ್ರೀವಾದಿರಾಜರಿಂದ ಎರಡು ವರ್ಷಗಳ ಪರ್ಯಾಯ ಪ್ರಾರಂಭವಾಗಿದೆಯಂತೆ.
ಬೆಳಗಿನ ಜಾವದ ನಾಲ್ಕು ಗಂಟೆಯಿಂದ ನಿರ್ಮಾಲ್ಯ ವಿಸರ್ಜನೆಯಿಂದ ಪ್ರಾರಂಭವಾಗುವ ಸರಣಿಪೂಜೆ, ನಂತರ ಉಷಃ ಕಾಲ ಪೂಜೆ, ಅಕ್ಷಯಪಾತ್ರೆ, ಗೋಪೂಜೆ, ಪಂಚಾಮೃತ ಮಹಾಭಿಷೇಕ, ಉದ್ವರ್ತನ ಪೂಜೆ, ಸುವರ್ಣ ಕಲಶ ಕುಂಭಾಭಿಷೇಕ, ಅಲಂಕಾರ ಪೂಜೆ, ಅವಸರ ಸನಕಾದಿ ಪೂಜೆ, ಮಹಾಪೂಜೆ, ಚಾಮರ ಸೇವೆ, ರಾತ್ರಿ ಪೂಜೆ, ಉತ್ಸವ ಮಂಟಪ ಪೂಜೆ, ಕೊಳಲು ಸೇವೆ, ಅಂತ್ಯದಲ್ಲಿ ಏಕಾಂತ ಶಯನೋತ್ಸವ ಸೇವೆ...ಇಷ್ಟೆಲ್ಲಾ ಸೇವೆಗಳ ಮಧ್ಯದಲ್ಲಿ ಕೆಲಸಮಯ ಮಧ್ವಾಚಾರ್ಯರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ ಎನ್ನುವ ಪ್ರತೀತಿಯೂ ಇದೆ. ಆಗ ಇಲ್ಲಿಂದ ಕೆಲಕಾಲ ಎಲ್ಲರೂ ನಿರ್ಗಮಿಸುತ್ತಾರೆ.

ರಥೋತ್ಸವವೆಂಬ ಅದ್ಭುತವಾದ ಮಕ್ಕಳಾಟ
ಕಾರ್ತಿಕ ಮಾಸದ ದ್ವಾದಶಿ. ಎಲ್ಲ ದೇವತೆಗಳಿಗೆ ಯೋಗನಿದ್ರೆಯಲ್ಲಿ ತೊಡಗಿದ ದಾಮೋದರನನ್ನು ಎಬ್ಬಿಸುವ ಕೆಲಸ. ಇದನ್ನು ಪ್ರಬೋಧೋತ್ಸವ ಎಂದು ಕರೆವರು. ಮಲಗಿದ ಮಹಾಶಿಶುವನ್ನು ಅವರು ಎಬ್ಬಿಸಿದ ನಂತರ ಅವನಿಗೆ ಬಗೆಬಗೆಯ ಅಲಂಕಾರಗಳಿಂದ ಸಿಂಗರಿಸಿ, ಮುದ್ದಾಡಿ, ಆಟವಾಡಿಸಿ ತಾವು ದಣಿವ ತವಕ ಭುವಿಯಲ್ಲಿರುವ ದೇವತಾಂಶರಿಗೆ. ದೇವತೆಗಳ ಮತ್ತು ದೇವತಾಂಶರ ಈ ವ್ಯಾಪಾರಗಳನ್ನು ನೋಡಿ ಹೃದಯದಲ್ಲಿಯೇ ನಲಿವ ಭಾಗ್ಯ ಸಾತ್ವಿಕರಿಗೆ. ಈ ಆನಂದೋದ್ಯಾನಕ್ಕೆ ಕಾರ್ತಿಕ ಶುದ್ಧ ದ್ವಾದಶಿಯು ಹೆಬ್ಬಾಗಿಲು. ಜ್ಞಾನ ಮತ್ತು ಭಕ್ತಿಗಳು ಎರಡು ಕೀಲಿಕೈಗಳು.
ರಜೆಯ ಮೇಲೆ ಹೋಗಿದ್ದ ರಥಗಳು ರಥಬೀದಿಗೆ ಬಂದಾಗಿದೆ. ಬಗೆಬಗೆಯ ಬಾವುಟಗಳು, ದೇವರ ಚಿತ್ರಪಟಗಳು ಮತ್ತು ವರ್ಣಮಯವಾದ ಲೈಟಿನ ಸರಗಳನ್ನು ತಮ್ಮ ಮೈಮೇಲೆಲ್ಲ ಧರಿಸಿಕೊಂಡಾಗಿದೆ. ನಾಳೆಯಿಂದ ಅವುಗಳಿಗೆ ತ್ರಿಭುವನಮೋಹನನನ್ನು ತಿರುಗಾಡಿಸುವ ಕೆಲಸ! ರಥೋತ್ಸವವನ್ನೂ ಅದರಿಂದ ಹೊರಹೊಮ್ಮುವ ಬೆಳಕನ್ನೂ ನೋಡುವುದು ಒಂದು ಆನಂದದಾಯಕವಾದ ಅನುಭವವು. ರಥಬೀದಿಯಲ್ಲಿ ಮತ್ತೊಂದು ಎಂಟು ತಿಂಗಳುಗಳ ಕಾಲ ಈ ಅನುಭವವನ್ನು ಪಡೆಯುವ ಅವಕಾಶವು ದೊರೆಯಲಿದೆ.
ಮನೆಯಲ್ಲಿ ಶಿಶುಗಳನ್ನು ಬೆನ್ನಮೇಲೆ ಹೊತ್ತುಕೊಂಡು ಆನೆಯಾಗಿ ಆಟವಾಡಿಸುವ ಅಪ್ಪ, ಅಜ್ಜ, ಮಾಮಂದಿರಿಗೇ ಎಷ್ಟೋ ಸಂತೋಷವೆನಿಸುವುದು. ಮೊಣಕಾಲು ನೋವಾದರೂ ಲೆಕ್ಕಿಸದೆ ಈ ಆನೆಗಳು ಮನೆಯ ಮೂಲೆಯಲ್ಲೆಲ್ಲ ತಿರುಗಬಲ್ಲವು. ಹೀಗಿರುವಾಗ ಸಂತಸದ ಸೆಲೆಯೇ ಆಗಿರುವ ಶ್ರೀಕೃಷ್ಣನನ್ನು ತಮ್ಮ ಬೆನ್ನ ಮೇಲೆ ಹೊತ್ತು ತಿರುಗಾಡಿಸುವ ರಥಾಭಿಮಾನಿಗಳಿಗೆ ಆಗುವ ಸಂತಸದ ತೀವ್ರತೆಯನ್ನು ಅದಾರು ಹೇಳಬಲ್ಲರು? ಈ ಒಂದು ದೃಷ್ಟಾಂತವನ್ನು ಇಟ್ಟು ಕೊಂಡು ನೋಡಿದಾಗ ದೇವತಾವರ್ಗದಲ್ಲೆಲ್ಲ ರಥಾಭಿಮಾನಿದೇವತೆಗಳಿಗೇನೆ ಶ್ರೀಕೃಷ್ಣನನ್ನು ಅತಿ ಹೆಚ್ಚು ಆಟವಾಡಿಸುವ ಅದೃಷ್ಟ ದೊರಕಿದೆಯೆನಿಸುತ್ತದೆ.
ಆದರೆ ಈ ವಿಷಯವನ್ನು ಕುರಿತು ಇನ್ನೂ ಆಳವಾಗಿ ನೋಡಿದರೆ ಶ್ರೀಕೃಷ್ಣನ ನಿಜವಾದ ರಥವೆಂದರೆ ಪ್ರಾಣದೇವರೇ ಆಗಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಶ್ರೀವಿಷ್ಣುಸಹಸ್ರನಾಮದಲ್ಲಿ ವರದೋ ವಾಯುವಾಹನಃ ಎಂದಿರುವುದು ಇದನ್ನೇ. ವಿಷ್ಣುವು ವಾಯುವಿನ ಮೇಲೆ ಕುಳಿತು ವರಗಳನ್ನು ಕೊಡುವವನು ಎಂದು ಇದರ ಅರ್ಥ. ಈ ಅರ್ಥದಲ್ಲಿ ರಥಾಭಿಮಾನಿದೇವತೆಗಳ ಅಂತರಂಗ ಮತ್ತು ರಥವನ್ನು ಎಳೆವ ಅದೃಷ್ಟಶಾಲಿಗಳ ಅಂತರಂಗದಲ್ಲೂ ನಿಂತು ಕಮಲಾನಾಥನನ್ನು ಹೊತ್ತು ತಿರುಗಾಡಿಸುವವರು ಪ್ರಾಣದೇವರೇ ಆಗಿದ್ದಾರೆ. ಸಹಜವಾಗಿಯೇ ಸಂತಸದ ಸರ್ವಶ್ರೇಷ್ಠಾನುಭವವು ದೊರೆಯುವುದು ಮುಖ್ಯಪ್ರಾಣದೇವರಿಗೆ ಮಾತ್ರ. ಉಳಿದವರಿಗೆಲ್ಲ ಆಗುವುದು ಅವರವರ ಯೋಗ್ಯತಾನುಸಾರವಾದ ಆನಂದಾನುಭವ.
ರಥವನ್ನು ಎಳೆವವರು ಅದೃಷ್ಟಶಾಲಿಗಳು ಎಂದು ಹೇಳಿರುವುದರಲ್ಲಿ ಕೂಡ ಅರ್ಥವಿದೆ. ರಥದ ಹಿಂದೆ ಮುಂದೆಯೇ ತಿರುಗಾಡಿಕೊಂಡಿದ್ದರೂ ಎಲ್ಲರಿಗೂ ರಥವನ್ನು ಎಳೆವ ಪ್ರೇರಣೆಯಾಗುತ್ತದೆ ಎಂದೇನಿಲ್ಲ. ರಥವನ್ನು ಎಳೆಯುತ್ತಿರುವವರು “ಗೋವಿಂದಾ ಗೋವಿಂದಾ” ಎಂದು ತಾರಕ ಸ್ವರದಲ್ಲಿ ಘೋಷಿಸುತ್ತಾ ರಥವನ್ನು ಎಳೆಯುತ್ತಿದ್ದರೂ ಬಹಳಷ್ಟು ಮಂದಿಗೆ ತಾವೂ ಹೋಗಿ ಕೈಜೋಡಿಸುವ ಮನಸ್ಸು ಆಗುವುದೇ ಇಲ್ಲ. ಬಹುತೇಕರು ಬದಿಯಲ್ಲಿ ನಿಂತು ಚಿಪ್ಸ್ ಮೆಲ್ಲುವುದರಲ್ಲೋ, ಸೆಲ್ಫೀ ತೆಗೆದುಕೊಳ್ಳುವುದರಲ್ಲೋ, ಲೈವ್ ಪ್ರಸಾರಮಾಡುವುದರಲ್ಲೋ ಮಗ್ನರು. ಅನೇಕ ಬಾರಿ ಮುದ್ದುಕೃಷ್ಣನು “ನಾನು ಮುಂದೆ ಹೊರಡುವುದೇ ಇಲ್ಲ, ಇಲ್ಲಿಯೆ ನಿಲ್ಲುವೆ” ಎಂದು ಹಟ ತೆಗೆಯುತ್ತಾನೆ. ಅವನ ರಥವಾದ ಹನುಮಂತದೇವರಿಗೋ ತನ್ನ ಒಡೆಯನ ಮಾತನ್ನು ನಡೆಸುವುದರಲ್ಲೇ ಆನಂದವಿದೆ. ಕೃಷ್ಣ ಹೇಳಿದಾಕ್ಷಣ ಕಾಣಿಯೂರು ಮಠದ ಮೂಲೆಗೋ ಅದಮಾರುಮಠದ ಮೂಲೆಗೋ ಹೋಗಿ ನಿಂತು ಬಿಡುತ್ತಾರೆ. ಅವರ ಬೆನ್ನ ಮೇಲಿರುವ ಕೃಷ್ಣನು “ಸಾಕು ಇನ್ನು, ಮುಂದೆ ಹೊರಡೋಣ ನಡಿ” ಎಂದ ನಂತರವೇ ಅವರು ಹಗ್ಗ ಹಿಡಿದ ಅದೃಷ್ಟಶಾಲಿಗಳ ಕೈಗಳಲ್ಲಿರುವ ದೇವತೆಗಳಿಗೆ ವಿಶೇಷಬಲವನ್ನು ಕೊಟ್ಟು ಅವರ ಮೂಲಕ ತಾವು ಮುಂದುವರೆಯುತ್ತಾರೆ. ಆದರೆ ಇಷ್ಟೆಲ್ಲ ಸಮಯ ಮತ್ತು ಅವಕಾಶ ಎರಡನ್ನು ಕೊಟ್ಟರೂ ಕೂಡ ಚಿಪ್ಸ್ ಅಥವಾ ಭೇಲ್ ಪುರಿ ಮೆಲ್ಲುವ ಕೈಗಳಿಂದ ಎಂಜಲರೂಪಿ ಕಲಿಯನ್ನು ದೂರ ಮಾಡಿಕೊಳ್ಳುವ ಮನಸ್ಸು ಹಗ್ಗದಾಚೆ ಇರುವವರಿಗೆ ಆಗುವುದೇ ಇಲ್ಲ. ಇದಕ್ಕೆಂದೇ ರಥವನೆಳೆವವರು ಅದೃಷ್ಟಶಾಲಿಗಳು ಎಂದು ಹೇಳಿದ್ದು. ಆದರೆ ಇದು ಕೇವಲ ಉತ್ಪ್ರೇಕ್ಷೆಯ ಮಾತಲ್ಲ. ಶ್ರೀವಿಜಯದಾಸರು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ ಮಾತು.
*****

Places of interest in Udupi and nearby 

Udupi - Near to Dharmasthala, Subramanya,Kollur, Karkala Gommateshwara, Athur Church,Kateel lots of spiritual place hardly redious (70kms)

Udupi - St. Mary's Island -Around 15 km[
Udupi - Malpe one of the Largest fishing ports in Asia
Udupi - St Mary's Syrian Orthodox Cathedral, Brahmavar, aound 13 km
Udupi - Sri Manjunatha Swamy Temple, Dharmasthala 110 kms.
Udupi - Sri Subramanya Kshetra, Subramanya  164 kms.
Udupi - Sri Sahasralingeshwara Temple, Uppinangadi  108 kms.
Udupi - Sri Karinjeshwar Temple, Bantwal 100 kms.
Udupi - Sri Durgaparameshwari Temple, Kateel  60 kms.
Udupi - Sri Ananthapadmanabha Temple, Kudupu  69 kms.
Udupi - Sri Mangaladevi Temple, Mangalore  63 kms.
Udupi - Sri Rajarajeshwari Temple, Polali  84 kms.
Udupi - Sri Kadri Manjunatha Temple, Mangalore  63 kms.
Udupi - Sri Durgaparameshwari Temple, Bappanadu  35 kms.
Udupi - Sri Gokarnanatha Temple, Kudroli, Mangalore  60 kms.
Udupi - Maravante Beach  45 kms.
Udupi - Sri Mookambika Devi Temple, Kollur 70 kms.
Udupi - Sri Sharadamba Temple, Sringeri  90 kms.
Udupi - Thousand Pillars Basadi, Moodabidri  55 kms.
Udupi - Gomateshwara, Karkala  40 kms.
Udupi - Chaturmukha Basadi, Karkala 40 kms.
Udupi - Jog Falls 100 kms. 
Udupi - Jamalabad Ghada  125 kms.
Udupi - Gomateshwara, Venoor  70 kms.
Udupi - St. Aloysius Chapel, Mangalore  61 kms.
Udupi - St. Lawrence Church, Attur, Karkala 40 kms.
***


Shiva Temple Hubballi

ಈ ಶಿವನ ಮಂದಿರದ ವಿಶೇಷತೆ ನೋಡಿರಿ

*******



ಕುಪ್ಪಿ ಭೀಮರಾಯನ ಗುಡಿ ರಾಯಚೂರು ಜಿಲ್ಲೆ 
Kuppi Bheemaraya Gudi Raichur District

ಕುಪ್ಪಿ ಭೀಮರಾಯನ ಜಾತ್ರೆ.  ನಮ್ಮ ಬದುಕಿಗೆ, ಉಸಿರಿಗೆ ದೇವತೆಯಾಗಿದ್ದು, ಸಂಜೀವ ಎಂದೇ ಹೆಸರಿನಿಂದ ಕರೆಯಲ್ಪಡುವ ಶ್ರೀ ಮುಖ್ಯ ಪ್ರಾಣ ದೇವರನ್ನು ಸ್ಮರಿಸುತ್ತಾ ಅನೇಕ ಹರಿದಾಸರಿಂದ ಪೂಜೆ ಕೈಗೊಂಡ, ಇವಾಗಲು ಬಂದ ಭಕುತರ ಮನೋಭಿಷ್ಟೆಯನ್ನು ಪೂರೈಸುವ ಕುಪ್ಪಿ ಭೀಮರಾಯನ ಚರಿತ್ರೆ
🙏🙏🙏
ಮರುತ ದೇವನೆ ನಿನ್ನ ಚರಿತೆ ಬಣ್ಣಿಸಲಳವೆ|
ಗುರುಗಳ ಕರುಣದಿ ಅರಿತಷ್ಟು ಬಣ್ಣಿಸುವೆ||

ಶ್ರೀ ಕುಪ್ಪಿ ಭೀಮರಾಯನ ಚರಿತ್ರೆ

ಕುಪ್ಪಿ ಭೀಮರಾಯನ ಗುಡಿ ರಾಯಚೂರು ಜಿಲ್ಲೆಯ, ಲಿಂಗಸೂಗುರು ಹತ್ತಿರ ಬರುತ್ತದೆ. ಲಿಂಗಸೂಗುರು ಇಂದ ೬ಕಿ.ಮೀ ದೂರದಲ್ಲಿ  ಕಸಬಾ ಲಿಂಗಸೂಗುರು ಅನ್ನುವ ಕ್ಚೇತ್ರದಲ್ಲಿ ಇದೆ.
ಈ ಊರು ಶ್ರೀ ಪ್ರಾಣೇಶದಾಸರ ಊರು.
ಶ್ರೀ ವರದೇಂದ್ರ ಗುರುಗಳು ತಾವು ಬಂದಂತಹ ,ತಿರುಗಾಡಿದ ಮತ್ತು ಸ್ವಪ್ನದಲ್ಲಿ ಬಂದು ತಾವೇ ನಿಂತಂತಹ, ಪವಿತ್ರ ಭೂಮಿ.
ಶ್ರೀ ಗುರು ಜಗನ್ನಾಥ ದಾಸರು,
ಶ್ರೀವರದೇಶದಾಸರು,
ಶ್ರೀ ಸುಂದರ ವಿಠ್ಠಲ ದಾಸರು(ಶ್ರೀ ಗೋರೆಬಾಳ ಹನುಮಂತ ರಾಯರು)
ಶ್ರೀ ಅಭಿನವ ಪ್ರಾಣೇಶದಾಸರು,ಸುಳಾದಿ ಕುಪ್ಪೇರಾಯರು ಇನ್ನು ಮುಂತಾದ ಹರಿದಾಸರು ತಿರುಗಾಡಿ ದ  ಪರಮ ಪಾವನವಾದ ಸ್ಥಳ.
ಇಂತಹ ಕ್ಷೇತ್ರದಲ್ಲಿ ಸ್ವಾಮಿ ಬಂದು ನಿಂತ ಬಗ್ಗೆ ಹೇಳುವೆ.
ಶ್ರೀ ಗುರು ವ್ಯಾಸರಾಯರು ಪ್ರತಿಷ್ಠಿತ ಮಾಡಿದ ಸ್ಥಾಪಿಸಿರುವ ವಿಗ್ರಹ ಕುಪ್ಪಿ ಭೀಮರಾಯ
ನಮ್ಮ ಹಿರಿಯರು ಹೇಳಿದ ಇತಿಹಾಸ ವನ್ನು ಹೇಳುವ ಯತ್ನ.
🙏
ಅವಾಗ್ಗೆ ದೇಸಾಯಿ ಯರ ದಂಡು ಪ್ರತಿಯೊಂದು ಊರಿಗೆ ಹೋಗಿ ಊರನ್ನು ಕೊಳ್ಳೆ ಹೊಡೆದು ಅಲ್ಲಿ ಇರುವುದನ್ನು ತೆಗೆದುಕೊಂಡು ಹೋಗುವ ಕೆಲಸ.
ಒಂದು ದಿನ ರಾತ್ರಿ ದೇಸಾಯಿ ತನ್ನ ತಂಡವನ್ನು ಕರೆದುಕೊಂಡು  ಲಿಂಗಸೂಗುರು ಗೆ ಬರುತ್ತಾನೆ.
ಆ ಸಮಯದಲ್ಲಿ ವರ ಕುಪ್ಪಿ ಭೀಮರಾಯ ತಳವಾರ ವೇಷದಿಂದ, ಕರಿಯ ಕಂಬಳಿ ಹೊದ್ದು ,ಕಾಲ್ಮರಿ(ಚಪ್ಪಲಿ) ಹಾಕಿಕೊಂಡು ಊರು ಕಾಯುತ್ತಾ ಇರುತ್ತಾನೆ..
ಸ್ವಾಮಿಯು ಆ ರೂಪ ದಲ್ಲಿ ತಿರುಗಾಡುವದನ್ನು ಕಂಡು ದೇಸಾಯಿ ಈ ಊರಿಗೆ ಹೋಗುವ ಮಾರ್ಗ ಕೇಳಿದಾಗ
ಅವಾಗ್ಗೆ ಸ್ವಾಮಿಯು
ಅವರನ್ನು ಕೆಲವೂರಿಗೆ(ಸಂತಿಕೆಲ್ಲೂರು) ಕಡೆ ದಾರಿ ತೋರಿಸುವ
ಆ ಸಮಯದಲ್ಲಿ ಊರ ಗ್ರಾಮದೇವತೆಯಾದ
ಶ್ರೀ ಭೂ ದುರ್ಗಾನಾಮಕಳಾದ ದ್ಯಾವಮ್ಮ ಊರಿನ ರಕ್ಷಣಾ ಮಾಡುತ್ತಾ ಇರುತ್ತಾಳೆ
ದೇಸಾಯಿ ಯರ ದಂಡು ಊರಿಗೆ ಬರುವುದನ್ನು ಕಂಡು ಅವರೊಡನೆ ಹೋರಾಡಿ ಎಲ್ಲಾ ರನ್ನು ಊರೊಳಗೆ ಬರಲು ಬಿಡುವುದಿಲ್ಲ.
ಅವಾಗ ದೇಸಾಯಿ ತನ್ನ ಪರಿವಾರದವರು ಹತರಾದರು ಕಂಡು ಕೋಪದಿಂದ ತಿರುಗಿ ಬಂದು
ತಳವಾರ ವೇಷದಲ್ಲಿ ಇದ್ದ ಸ್ವಾಮಿ ಯ ತಲೆಗೆ ಖಡ್ಗ ಪ್ರಹಾರ ಮಾಡುತ್ತಾನೆ .
ತಲೆ ಇಂದ ಬಂದ ರಕ್ತ ವನ್ನು ಕಂಡು ಎಲ್ಲಾ ರು ಭೀತರಾಗಿ ಓಡಿ ಹೋಗುತ್ತಾರೆ.
ಆ ದಿನ ಸ್ವಾಮಿಯು ತನ್ನ ಗುಡಿಯ ಅರ್ಚಕನಿಗೆ ಸ್ವಪ್ನದಲ್ಲಿ ಹೇಳುತ್ತಾನೆ .
ಏಳು ದಿನಗಳ ಕಾಲ ಗುಡಿಯ ಬಾಗಿಲನ್ನು ತೆರೆಯಬೇಡ ಅಂತ ಸೂಚನೆ ನೀಡುತ್ತಾನೆ..
ಆರುದಿನ ಕಳೆಯಿತು..
ಅರ್ಚಕನಿಗೆ ಸ್ವಾಮಿಯು ದರುಶನ ಮಾಡಬೇಕೆಂದು ಆತುರದಿಂದ ಗುಡಿಯ ಬಾಗಿಲನ್ನು ತೆರೆದಾಗ ತಲೆಯ ಮೇಲಿನ ಗಾಯ ಸ್ವಲ್ಪ ಹಾಗೇಯೆ ಉಳಿದಿತ್ತು..
ಅದನ್ನು ಕಂಡು ಅರ್ಚಕ ಮರುಗುತ್ತಾನೆ,..
ಶೋಕದಿಂದ ಎಂತಹ ಕೆಲಸವಾಯಿತು ನನ್ನ ಇಂದ ಅಂತ ದುಃಖ ಪಡುತ್ತಾನೆ..
ಅವಾಗ
ಸ್ವಾಮಿ ಅವನ ಕನಸಿನಲ್ಲಿ ಬಂದು
ಮರುಗದಿರು , ಮರುಗದಿರು,
ಈ ಶಿರ ಹೀಗೆ ಇರುವದೆಂದು,
ಇವತ್ತಿಗು ಸ್ವಾಮಿಯ ತಲೆಯ ಮೇಲೆ ಗಾಯದ ಗುರುತು ಹಾಗೆಯೇ ಇದೆ ಅಂತ ಹಿರಿಯರ ಆಪ್ತ ವಚನ.
ಇರುವದಿಂದಿಗುಹೀಗೆ| ಮರುತ ದೇವನ ಮಹಿಮೆ| ವರ್ಣಿಸಲು ಸಾಧ್ಯ ವೇ ಹುಲುಮನುಜನಿಗೆ|
ಸಿರಿ ಕುಪ್ಪಿಭೀಮ ಇರುವ ಕಾರಣದಿಂದ| ವರ ಕ್ಷೇತ್ರ ವಾಯಿತು ಲಿಂಗಸೂಗುರು|
ಕೆಳಗಡೆ ಸ್ವಾಮಿ ಯ ಚಿತ್ರ ಇದೆ.
🙏🙏🙏🙏
ಕುಪ್ಪಿ ಭೀಮನ ಪಾದ ತಪ್ಪದೇ ಭಜಿಸಲು
ಅಪ್ಪ ಅಭಿನವ ಪ್ರಾಣೇಶ ವಿಠ್ಠಲ ಒಲಿವ
🙏
ಕುಪ್ಪೇರಾಯನ ಸುಳಾದಿ ಯನ್ನು ಅಭಿನವ ಪ್ರಾಣೇಶ ವಿಠ್ಠಲ ದಾಸರು ರಚನೆಯನ್ನು ಮಾಡಿದ್ದಾರೆ.ಅದರಲ್ಲಿ ಅದರ ಚರಿತ್ರೆ ಸಂಪೂರ್ಣ ಇದೆ.
ಅದನ್ನು ಬಹಳ ಚೆನ್ನಾಗಿ ಶ್ರೀಮತಿ ತ್ರಿವೇಣಿ ಬಾಯಿ ಆಶ್ರಿತ ಅವರು ಹೇಳಿದ್ದಾರೆ.
ಅದರ ಆಡಿಯೋ ಸಹ ಇದೆ.
********





ನುಗ್ಗೆಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ದೇವಾಲಯ - ಹೊಯ್ಸಳರ ಕಾಲದ ಅದ್ಭುತ ಕಲಾಶ್ರೀಮಂತಿಕೆಯ ಪುರಾತನ ಮಂದಿರ

*ಲೇಖಕರು: ಟಿ.ಎಂ. ಸತೀಶ್,ಸಂಪಾದಕರು, ಕನ್ನಡರತ್ನ.ಕಾಂ ಮತ್ತು ourtemples.in
ನುಗ್ಗೆಹಳ್ಳಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಹಾಗೂ ಹಿರೇಸಾವೆ ಬಳಿ ಇರುವ ಒಂದು ಪುಟ್ಟ ಪಟ್ಟಣ. ಈ ಊರಿನಲ್ಲಿ ಹೊಯ್ಸಳರ ಕಾಲದ ಭವ್ಯ ದೇವಾಲಯಗಳಿವೆ. ಈ ಪೈಕಿ ಶ್ರೀ. ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಪ್ರಮುಖವಾದದ್ದು.
ಸುಮಾರು 14-15ನೇ ಶತಮಾನದಲ್ಲಿ ಈ ಊರಿಗೆ ನುಗ್ಗೆಹಳ್ಳಿ ಎಂಬ ಹೆಸರು ಬಂತು ಎಂದು ತಿಳಿದುಬರುತ್ತದೆ. ಅಂದಿನ ಪಾಳೆಯಗಾರರು ಶತ್ರು ಸೈನ್ಯದ ಮೇಲೆ ತಮ್ಮ ಪಡೆಯನ್ನು ನುಗ್ಗಿಸಲು ಇಲ್ಲಿ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದರಂತೆ. ಒಮ್ಮೆಲೇ ಸೈನಿಕರು ದಾಳಿ ಮಾಡಲು ನುಗ್ಗುತ್ತಿದ್ದ ಊರು ನುಗ್ಗೆಹಳ್ಳಿಯಾಯಿತು ಎಂಬ ಹೆಸರು ಪಡೆಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ಇಲ್ಲಿ 14ನೇ ಶತಮಾನದಲ್ಲಿ ಅಂದರೆ ವಿಜಯನಗರದ ಅರಸರ ಕಾಲದಲ್ಲಿ ಈ ಊರಿಗೆ ನುಗ್ಗೆ ಹಳ್ಳಿ ಎಂಬ ಹೆಸರು ಬಂತಾದರೂ, ಅದಕ್ಕೂ ಮೊದಲೇ ಇಲ್ಲಿ ಊರಿತ್ತು, ದೇವಾಲಯವಿತ್ತು ಎಂದು ತಿಳಿದುಬರುತ್ತದೆ. ಇಲ್ಲಿ ಚೋಳರ ಕಾಲದಲ್ಲಿಯೇ ಜಯಗೊಂಡೇಶ್ವರ ದೇವಾಲಯ ನಿರ್ಮಾಣವಾಗಿತ್ತೆಂದೂ, ಇದಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ 1121ರಲ್ಲಿ ದತ್ತಿ ನೀಡಿದ್ದನೆಂದು ಶಾಸನ ಸಾರುತ್ತದೆ.
ದೇವಾಲಯದಲ್ಲಿರುವ ಫಲಕದಲ್ಲಿ ಸೋಮೇಶ್ವರ ಹೊಯ್ಸಳನ ಕಾಲದಲ್ಲಿ ಬೊಮ್ಮಣ್ಣ ದಂಡನಾಯಕ ತನ್ನ ಗುರುಗಳಾದ ಪುಂಡರೀಕಾಕ್ಷ ಸೋಮಯಾಜಿ ಅವರೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದನ್ನೆಂದೂ, ಆತ ತನ್ನ ಗುರುಗಳಾದ ಪುಂಡರೀಕಾಕ್ಷ ಸೋಮಯಾಜಿಗಳ ಆದೇಶದಂತೆ ಇಲ್ಲಿ ದೇವಾಲಯ ಕಟ್ಟಿಸಿ, ವಿಜಯ ಸೋಮನಾಥಪುರ ಎಂದು ಹೆಸರಿಟ್ಟು ಅಗ್ರಹಾರ ಮಾಡಿದನೆಂಬ ಉಲ್ಲೇಖವಿದೆ.
ಬೊಮ್ಮಣ್ಣ ದಂಡನಾಯಕ 1168ರಲ್ಲಿ ಅಂದರೆ ಪ್ರಭವ ಸಂವತ್ಸರ ಚೈತ್ರ ಮಾಸದ ಬುಧವಾರ ಶುಕ್ಲ ಪಂಚಮಿಯಂದು ತ್ರಿಕೂಟಾಚಲ ಅಂದರೆ ಮೂರು ಗರ್ಭಗೃಹ ಮೂರು ಗೋಪುರದ ದೇಗುಲವನ್ನು ಲಕ್ಷ್ಮೀನರಸಿಂಹ, ವೇಣುಗೋಪಾಲ ಮತ್ತು ಕೇಶವ ದೇವರಿಗಾಗಿ ಕಟ್ಟಿಸಿ, ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾನೆ. ವಾಸ್ತವವಾಗಿ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಕೇಶವನ ಮೂರ್ತಿಯಿದ್ದರೂ, ದೇವಾಲಯ ಲಕ್ಷ್ಮೀನರಸಿಂಹ ದೇವಾಲಯ ಎಂದೇ ಖ್ಯಾತವಾಗಿದೆ. ದೇವಾಲಯದ ಪಶ್ಚಿಮ ಭಾಗದಲ್ಲಿ ಋಷಭ ಎಂಬ ಮುನಿ ತಪಸ್ಸು ಮಾಡಿ ಲಕ್ಷ್ಮೀನರಸಿಂಹನ ಒಲಿಸಿಕೊಂಡಿದ್ದ ಕಾರಣ ಇದು ಲಕ್ಷ್ಮೀನರಸಿಂಹ ದೇವಾಲಯ ಎಂದೇ ಖ್ಯಾತವಾಗಿದೆ ಎನ್ನುತ್ತಾರೆ ಕೆಲವರು. ಸೋಮನಾಥಪುರದ ಸುಂದರ ದೇವಾಲಯಗಳ ನಿರ್ಮಾಣಕ್ಕೂ ಮೊದಲೇ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ತಿಳಿದುಬರುತ್ತದೆ. ಜಾವಗಲ್ ಲಕ್ಷ್ಮೀನರಸಿಂಹ ದೇವಾಲಯ ಹೊಸ ಹೊಳಲು ಲಕ್ಷ್ಮೀನಾರಾಯಣ ದೇವಾಲಯಗಳ ರೀತಿಯಲ್ಲೇ ಈ ದೇವಾಲಯವೂ ಇದೆ.
ಪ್ರಧಾನಗರ್ಭಗೃಹದಲ್ಲಿ 3 ಅಡಿ ಎತ್ತರದ ಗರುಡ ಪೀಠದ ಮೇಲೆ ಶಂಖ, ಚಕ್ರ, ಗದಾ, ಪದ್ಮ ಧಾರಿಯಾದ ಕೇಶವನ ಮೂರ್ತಿಯಿದ್ದರೆ, ಬಲಭಾಗದಲ್ಲಿರುವ ಗರ್ಭಗೃಹದಲ್ಲಿ ತೊಡೆಯ ಮೇಲೆ ಲಕ್ಷ್ಮಿಯನ್ನು ಕೂರಿಸಿಕೊಂಡಿರುವ ನರಸಿಂಹಸ್ವಾಮಿಯ ವಿಗ್ರಹವಿದೆ. ಅದರ ಎದುರು ಇರುವ ಮತ್ತೊಂದು ಗರ್ಭಗೃಹದಲ್ಲಿ ಕೊಳಲನ್ನು ಊದುತ್ತಿರುವ ಗೋಪಾಲಕೃಷ್ಣ ಸ್ವಾಮಿಯ ಗುಡಿ ಇದೆ. ಮೂರೂ ಗರ್ಭಗೃಹಕ್ಕೆ ಸೇರಿದಂತೆ ನವರಂಗವಿದೆ.
ದೇವಾಲಯ ಸಂಪೂರ್ಣ ಹೊಯ್ಸಳ ಶೈಲಿಯಲ್ಲಿದೆ. ದ್ವಾರಬಂಧದ ಮೇಲೆ ಮೂರು ಗಾರೆ ಗಚ್ಚಿನ ಗೋಪುರ ಇದೆ. ಸುತ್ತಲೂ ಕೋಟೆಯಂಥ ಆವರಣವಿದೆ. ವಿಶಾಲ ಪ್ರದೇಶದ ಮಧ್ಯೆ ದೇವಾಲಯವಿದೆ. ಮುಖಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆ ಇದೆ. ಒಳ ಪ್ರವೇಶಿಸಿದರೆ ಹಿಂಭಾಗದಲ್ಲಿ ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲೆ ಇರುವ ಭವ್ಯ ಕೆತ್ತನೆಯ ಸುಂದರ ದೇವಾಲಯ ಕಾಣುತ್ತದೆ. ಪ್ರವೇಶದಲ್ಲಿನ ಆನೆಯ ಕೆತ್ತನೆ ಸುಂದರವಾಗಿದೆ. ಮುಂಭಾಗದಲ್ಲಿ ಆನಂತರ ವಿಸ್ತರಣೆ ಆಗಿರುವುದು ಗೋಚರಿಸುತ್ತದೆ. ಹಿಂಬದಿಯಲ್ಲಿ ಸುಂದರ ಗೋಪುರ ಹಾಗೂ ಬಳಪದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯದ ಭಿತ್ತಿಗಳಲ್ಲಿ ಪುರಾಣದ ಕಥಾನಕಗಳ ಸುಂದರ ಸೂಕ್ಷ್ಮ ಕೆತ್ತನೆಗಳಿವೆ.
ಪಟ್ಟಿಕೆಗಳಲ್ಲಿ ಮಕರ, ಬಂಡಿಗಳು, ಯುದ್ಧ ಪುರಾಣ ಇತ್ಯಾದಿ ಪ್ರಸಂಗಗಳು, ಲತಾ ಸುರುಳಿಗಳು, ಆನೆ ಹಾಗೂ ಕುದುರೆ ಸವಾರರ ಪಟ್ಟಿಕೆಗಳಿವೆ. ಪಟ್ಟಿಕೆಗಳ ಮೇಲ್ಭಾಗದಲ್ಲಿ ಮೂರು ಅಡಿ ಎತ್ತರದ ಸೂಕ್ಷ್ಮ ಕೆತ್ತನೆಯ ದೇವಾನು ದೇವತೆಗಳ, ಭಾಗವತ ಪ್ರಸಂಗಗಳ ಕೆತ್ತನೆ ಇದೆ. ಇದರಲ್ಲಿ ಬ್ರಹ್ಮ, ರತಿ ಮನ್ಮಥ, ನಾರಾಯಣ, ನರಸಿಂಹ, ನಾಟ್ಯ ಗಣಪತಿ, ಮದನಿಕೆಯರು, ಕಾಳಿಂಗ ಮರ್ದನ, ಪೂತನಿ ಸಂಹಾರ, ಶಕಟಾಸುರ ವಧೆ, ಬೆಣ್ಣೆ ಕಳ್ಳತನ, ಗೋಪಾಲಕರೊಂದಿಗೆ ಆಟವಾಡುತ್ತಿರುವುದೇ ಮೊದಲಾದ ಸುಂದರ ಶಿಲ್ಪಗಳಿವೆ. ಲಕ್ಷ್ಮೀ ನಾರಾಯಣರು ಉಯ್ಯಾಲೆಯಲ್ಲಿ ಕುಳಿತಿರುವ ಶಿಲ್ಪವಂತೂ ಅತ್ಯಂತ ಮನೋಹರವಾಗಿದೆ. ಆದರೆ ಕೆಲವು ಶಿಲ್ಪಗಳನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿರುವುದನ್ನು ನೋಡಿದಾಗ ವೇದನೆಯಾಗುತ್ತದೆ. ನುಗ್ಗೇಹಳ್ಳಿಯಲ್ಲಿ ಭೂ ವರಹನಾಥ ಸ್ವಾಮಿ, ಸದಾಶಿವ ದೇವಾಲಯಗಳೂ ಇದ್ದು, ನೋಡಲೇಬೇಕಾದ ಸ್ಥಳವಾಗಿದೆ.
ಹೋಗುವುದು ಹೇಗೆ: ನುಗ್ಗೆಹಳ್ಳಿಗೆ ಹೋಗಲು ಹೆಚ್ಚಿನ ಬಸ್ ಸೌಕರ್ಯ ಇಲ್ಲದ ಕಾರಣ, ಸ್ವಂತ ವಾಹನ ಬಳಕೆ ಉತ್ತಮ. ಚನ್ನರಾಯಪಟ್ಟಣದಿಂದ 18 ಹಾಗೂ ಬೆಂಗಳೂರಿನಿಂದ 139 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಹಿರೇಸಾವೆ ದಾಟಿದ ತರುವಾಯ ಸ್ವಲ್ಪ ದೂರ ಸಾಗಿ ಬಲಕ್ಕೆ ತಿರುಗಿದರೆ ನುಗ್ಗೆಹಳ್ಳಿಗೆ ಹೋಗಬಹುದು. ಹಿರೇಸಾವೆಯಿಂದ ನುಗ್ಗೆ ಹಳ್ಳಿಗೆ 16 ಕಿ.ಮೀ. ಮಾತ್ರ.
*****

ದೇವದುರ್ಗ ತಾಲೂಕಿನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯ


ಇದು ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯವಾಗಿದೆ.
   ಈ ಮೂರ್ತಿಯ ತಲೆಯ ಮೇಲೆ ನೀರು ಸುರಿದರೆ ಬಿಸಿಯಾಗಿ ಹೊಗೆ ಬರುತ್ತೆ ಕಾಲುಗಳಿಗೆ ನೀರು ಬಂದಾಗ ತಣ್ಣಗಾಗುತ್ತದೆ. ಆದರೆ ಈ ನೀರನ್ನು ಪಾದಗಳ ಮೇಲೆ ಸುರಿದರೆ ಅದು ಕುದಿಯುತ್ತದೆ, ಈ ದೇವಾಲಯವು ಸುಮಾರು 1900 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಇಂತಹ ಅದ್ಭುತ ರಹಸ್ಯಗಳು ನಮ್ಮ ಹಿಂದೂ ಧರ್ಮದಲ್ಲಿ ಅಡಗಿವೆ.





ಕೈವಾರ ಪುಣ್ಯಕ್ಷೇತ್ರ ಕೈವಾರ ತಾತಯ್ಯ #ಯೋಗಿನಾರೇಯಣರು

#ಕೈವಾರಕರ್ನಾಟಕಚಿಕ್ಕಬಳ್ಳಾಪುರ_ಜಿಲ್ಲೆಯ ಒಂದು ಪುಣ್ಯಕ್ಷೇತ್ರ. #ದ್ವಾಪರ ಯುಗದಲ್ಲಿ ಇದು  #ಏಕಚಕ್ರನಗರ.

ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿಗೆ ಬಂದಿದ್ದರು. ಇಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನ ಭಿಮಸೇನ ಸ್ಥಾಪಿಸಿದನೆಂದು ಐತಿಹ್ಯವಿದೆ. ಇದಕ್ಕೆ "#ಕೈವಾರನಾಡು" ಎಂಬ ಹೆಸರೂ ಇತ್ತೆಂಬ ಉಲ್ಲೇಖವಿದೆ. ಮಹಾನ್ ಸಂತ ಕಾಲಜ್ಞಾನ-ಭವಿಷ್ಯವಾಣಿ ನುಡಿದ ಶ್ರೀ ಯೋಗಿನಾರೇಯಣ  ಯತೀಂದ್ರರು ಜನ್ಮವೆತ್ತಿದ ಸ್ಥಳವಿದು.

🌻#ಐತಿಹ್ಯ:-
                  ೧೭೨೬ ರಲ್ಲಿ #ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ #ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ #ಆದಿಶೇಷನೇ ಬಂದು ಕಾಪಾಡುತ್ತಾನೆ. ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ #ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ವಿಷಯೋಪ ಭೋಗಗಳೆಂದರೆ ವಿರಕ್ತಭಾವವೇ. ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ, ಹಿರಿಯರು ಮುಂದೆ ನಿಂತ ಸೋದರತ್ತೆಯ ಮಗಳು ಮುನಿಯಮ್ಮ(ಲಕ್ಷ್ಮಮ್ಮ)ನನ್ನು ಕೊಟ್ಟು ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿ ಗಂಡ ದುಡಿಮೆಸ್ತನಲ್ಲ ಸದಾ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತ ಕುಳಿತರೆ ಹೊಟ್ಟೆ ತುಂಬುವುದಾದರೂ ಹೇಗೆ..? ಹೆಂಡತಿ ಮುನಿಯಮ್ಮನ ವರಾತ ಹೆಚ್ಚಿತ್ತು. ಬಳೆಮಲಾರ ಕೈಗಿತ್ತು ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ತಾಕೀತು ಮಾಡುತ್ತಿದ್ದಳು. ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸತೊಡಗಿದ್ದ ನಾರಾಣಪ್ಪ ಹೆಣ್ಣುಮಕ್ಕಳಿಗೆ, ಸುಮಂಗಲಿಯರಿಗೆಲ್ಲ ಶುದ್ಧಭಾವದಿಂದ ಬಳೆತೊಡಿಸುತ್ತಿದ್ದರು. ಅವರು ಕಾಸುಕೊಟ್ಟಷ್ಟೇ.. ಕೊಡದೇ ತಾತಯ್ಯ ಕಾಸಿಲ್ಲವೆಂದರೆ ಎಲ್ಲ ಅವನಿಚ್ಛೆ ಎಂದು ಮುನ್ನಡೆದು ಸಂಜೆ ವೇಳೆಗೆ ಬಳೆಯಲ್ಲ ಮಾರಿ ಬರಿಗೈಲಿ ಮನೆಸೇರುತ್ತಿದ್ದರು. ಹೆಂಡತಿ ಮುನಿಯಮ್ಮ ಶುದ್ಧ ಮುಠ್ಠಾಳ ಗಂಡ ದೊರೆತನೆಂದು ಗೊಣಗುತ್ತ ಹೇಗೋ ಸಂಸಾರ ನೀಚುವುದಾಗಿತ್ತು.. ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು.

🏵#ಭಗವದ್_ಸಾಕ್ಷಾತ್ಕಾರ:-
                           ಅದೊಂದು ದಿನ ನಾರಾಣಪ್ಪ ಬಳೆಮ ಲಾರ ಹೆಗಲಿಗೇರಿಸಿ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ ’ಓಂ ನಮೋ ನಾರಾಯಣ” ಎಂಬ ಬೀಜಾಕ್ಷರಿ ಮಂತ್ರೋಪದೇಶ ಪಡೆದಿದ್ದರು. ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಹರಸಿದ್ದರು. ಅನಂತರ, ತಪಸ್ಸಿಗೆ ಪ್ರಶಸ್ತವೆನಿಸಿದ #ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುವಾಗ ಅದು ಬೆಣಚುಕಲ್ಲಿದ್ದ ಬಾಯಲ್ಲಿ “ಓಂ ನಮೋ ನಾರೇಯಣಾಯ” ಎಂಬ ಉಚ್ಛಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ಅದನ್ನೇ ಮುಂದುವರೆಸು "ನೀನು ಯೋಗಿ ನಾರೇಯಣ" ಎಂದೇ ಹೆಸರಾಗುವೆ ಎಂಬ ಅಶರೀರವಾಣಿಯಾಯಿತು. ಮೂರುವರುಷಗಳ ಕಠಿಣ ತಪದ ಫಲವಾಗಿ ಬೆಣಚು ಕಲ್ಲು ಸಕ್ಕರೆಯಾಗಿತ್ತು. ಅಮರ ನಾರಾಯಣನ ಪರಮ ಭಕ್ತರಾದರು. 

                         ಆಧ್ಯಾತ್ಮಿರಹಸ್ಯಗಳನ್ನು ಅನುಭವವೇದ್ಯ ಸತ್ಯಸಂಗತಿಗಳನ್ನು ಅರಿತು ಜನತೆಗೆ ವೇದಾಂತದ ವಿಷಯಗಳನ್ನು ಬೋಧಿಸುತ್ತಾ ದೈವಿಕ ಪವಾಡಗಳನ್ನೆ ಮಾಡಿದರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದರು. ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು. ಅದು ಇಂದಿನ ಕಾಲಕ್ಕೆ ಪ್ರಸ್ತುತವೆನಿಸುತ್ತದೆ. ಕೈವಾರ ತಾತಯ್ಯ #ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. ತಾತಯ್ಯನವರು ೧೧೦ ವರುಷಗಳಷ್ಟು ಸುದೀರ್ಘ ಕಾಲ (೧೭೨೬-೧೮೩೬) ಇಲ್ಲಿ ನೆಲೆಸಿದ್ದರು.

🌺#ಸದ್ಗುರುವಿನ_ಪವಾಡಗಳು:-
                         ಬೆಣಚುಕಲ್ಲನ್ನು ಸಿಹಿಯಾದ ಕಲ್ಲುಸಕ್ಕರೆಯಾಗಿಸಿ ದನಕಾಯುವ ಹುಡುಗರಿಗೆ ಊರಿನ ಮಕ್ಕಳಿಗೆ ನೀಡಿ ಸಂತೋಷಪಡುತ್ತಿದ್ದರು.
ಆಲೆಮನೆಯಲ್ಲಿ ಕಾದ ಕುದಿಯುವ ಕೊಪ್ಪರಿಗೆಯಿಂದ ಕೈಹಾಕಿ ಬೆಲ್ಲವ ತೆಗೆದು ಹಸಿದ ಕುರಿಕಾಯುವವರಿಗೆ ನೀಡುತ್ತಿದ್ದರು.

ಭಕ್ತರು ನಶ್ಯ ತಯಾರಿಸುವ ಸಂಬಂಧ ಬೇಕಾಗುವ ನೀರನ್ನು ಸರ್ಪದಿಂದ ಕೊಡಿಸುವರು.
ಪ್ರತಿದಿವಸ ಮುಂಜಾನೆ #ಗರುಡ ದರ್ಶನ ಮಾಡಿ ಕೈ ಮುಗಿಯುತ್ತಿದ್ದ ತಾತಯ್ಯನವರನ್ನು ಅವಮಾನಿಸಲು ಮಹಮದೀಯರು ಕೃತಕ ಮಣ್ಣಿನ ಗರುಡ ಪಕ್ಷಿಯನ್ನು ಮಾಡಿ ಮರದ ಮೇಲೆ ಇಟ್ಟಾಗ ತಾತಯ್ಯನವರು ಆ ಮಣ್ಣಿನ ಕೃತಕ ಪಕ್ಷಿಗೆ ಜೀವ ಬರಿಸಿ ಹಾರುವಂತೆ ಮಾಡಿದರು.

ತಮ್ಮ ಬಳಿ ಬಂದು ಘಟಸರ್ಪಗಳಂತೆ ಹೆಡೆಆಡಿಸುತ್ತಾ ವೇದಾಂತ ವಿಚಾರಗಳ ಬಗ್ಗೆ ಬೇಧವಾದಮಾಡಿ ಜಯಿಸಬೇಕೆಂದಿದ್ದವರನ್ನು ಮಣಿಸಿದರು.
ಕುರುಡ ಮಲಯ್ಯ ಶ್ರೀ #ವೆಂಕಟರಮಣನನ್ನು ಪ್ರಾರ್ಥಿಸಿ ಒಂದು ಕಣ್ಣು ಪಡೆದು, ಇನ್ನೊಂದು ಕಣ್ಣನ್ನು ಯೋಗೀಂದ್ರರಲ್ಲಿ ಬೇಡಿದಾಗ ಕಣ್ಣನ್ನು ಕರುಣಿಸಿದರು.

ಶಿಷ್ಯ ಪೂವಯ್ಯ ನನ್ನು ನೋಡಲು ವಡಿಗೇನ ಹಳ್ಳಿಗೆ ಹೋಗಿದ್ದಾಗ ಅನಾವೃಷ್ಟಿಗೆ ತುತ್ತಾಗಿದ್ದ ಜನರು ತಾತಯ್ಯನವರನ್ನು ಮಳೆಬರಿಸಲು ಪ್ರಾರ್ಥಿಸಿದಾಗ ಅಷ್ಟದಿಕ್ಪಾಲಕರನ್ನು ಪ್ರಾರ್ಥಿಸಿ ಮಳೆ ಸುರಿಸಿದರು.
ಪೂಜಾರಿಗಳ ತಪ್ಪನ್ನು ಮನ್ನಿಸಿ ತಿರುಪತಿಯಲ್ಲಿ ಬಾಲಾಜಿಯ ರಥ ಚಲಿಸುವಂತೆ ಮಾಡಿದರು.

ಒಮ್ಮೆ ತಾತಯ್ಯನವರು ಶಿಷ್ಯರ ಸಮ್ಮುಖದಲ್ಲಿ ಕೈಯನ್ನು ಉಜ್ಜಿಕೊಂಡಾಗ ಹೊಗೆ ಏಳುತ್ತಿತ್ತು. ಅದನ್ನು ನೋಡಿ ಶಿಷ್ಯರು ಏಕೆಂದು ಕೇಳಿದಾಗ ತಿರುಪತಿಯಲ್ಲಿ ಶ್ರೀನಿವಾಸನ ಪೀತಾಂಬರಕ್ಕೆ ಬೆಂಕಿ ಹತ್ತಿಕೊಂಡಿತ್ತು ಆರಿಸಿದೆ ಎಂದರು.

ತಿರುಪತಿಯಲ್ಲೂ ಬೆಂಕಿಯ ಆರಿಸುವುದನ್ನು ನೋಡಿದ್ದ ಅರ್ಚಕರು ಯತೀಂದ್ರರ ಮಹಿಮೆಯನ್ನು ಕೊಂಡಾಡಿ ಪ್ರಚಾರ ಮಾಡಿದರು.
ಮಠದ ಆವರಣದಲ್ಲಿರುವ ಕೊಳದಲ್ಲಿ ಬಹಳ ಹೊತ್ತು ಮುಳುಗಿ ಮೇಲಕ್ಕೆ ಬರುತ್ತಿದ್ದರು. #ಪಾದ್ರಿಯೊಬ್ಬರು ಇಷ್ಟು ಹೊತ್ತು ನೀರಿನಲ್ಲಿ ಏನು ಮಾಡುತ್ತಿದ್ದಿರೆಂದು ಕಾರಣ ಕೇಳಿದಾಗ ತಿರುಪತಿಗೆ ಪೂಜಾ ಸಮಯದಲ್ಲಿ ಅಲ್ಲಿಗೆ ಹೋಗಿ ಬರುತ್ತಿರುವೆನೆಂದು ಹೇಳಿದರು. ಇದನ್ನು ಖಾತ್ರಿ ಪಡಿಸಿಕೊಳ್ಳಲೆಂದು ತಿರುಪತಿ ಧರ್ಮಾದಿಕಾರಿಗಳಿಗೆ ಪತ್ರ ಬರೆದ ಪಾದ್ರಿ, ಅದು ಸತ್ಯವೆಂದು ತಿಳಿದು ತಾತಯ್ಯನವರ ಅಪಾರ ಮಹಿಮೆಯನ್ನು ಕೊಂಡಾಡಿದರು.
ಪರಾಕಾಯ ಪ್ರವೇಶಮಾಡಿ ಸಜೀವರಾಗಿ ಸಮಾಧಿಯಾದರು(೧೮೩೬)....

🌼""#ಕೈವಾರದಲ್ಲಿ_ನಡೆಯುವ #ಸಮಾರಂಭಗಳು""
                             ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಜರಗುವ ಶ್ರೀ ಅಮರನಾರೇಯಣ ಸ್ವಾಮಿ ರಥೋತ್ಸವ.

ಫಾಲ್ಗುಣ ಬಹುಳ ಪಾಡ್ಯಮಿಯಂದು ಶ್ರೀ ಗುರುದೇವ ನಾರಾಯಣ ಯೋಗೀಂದ್ರರ ರಥೋತ್ಸವ.

ಜೇಷ್ಠಮಾಸದ ಶುದ್ಧ ತದಿಗೆಯಂದು ನಡೆಯುವ ಶ್ರೀ ಯೋಗಿನಾರೇಯಣರ ಆರಾಧನೆಯೊಂದಿಗೆ ಸಾಧು ಸಂತರ ಸಮಾಗಮ. ಉಚಿತ ಸಾಮೂಹಿಕ ವಿವಾಹ ಮಹೋತ್ಸವ.
ಕಾರ್ತೀಕ ಹುಣ್ಣಿಮೆಯಂದು ಶ್ರೀ ಭೀಮಲಿಂಗೇಶ್ವರ ಲಕ್ಷದೀಪೋತ್ಸವ.
ಶ್ರಾವಣ ಎರಡನೆಯ ಶನಿವಾರದಂದು ಶ್ರೀ ವರಮಹಾಲಕ್ಷ್ಮಿ ಮತ್ತು ಸತ್ಯನಾರಾಯಣ ವ್ರತಾಚರಣೆಗಳು.

🍓#ಶ್ರೀಕೈವಾರಕ್ಷೇತ್ರ:-
           ಶ್ರೀ ಯೋಗಿನಾರೇಯಣ ಯತೀಂದ್ರ ಆಶ್ರಮ ಟ್ರಸ್ಟ್ ಅನೇಕ ಅಭಿವೃದ್ಧಿಕಾರ್ಯಗಳಾಗಿವೆ. ಯತೀಂದ್ರರ ಸಮಾಧಿ ಸ್ಥಾನ ಎರಡು ಅಂತಸ್ತುಗಳ ಭವನದಲ್ಲಿ ಬೃಂದಾವನವಾಗಿದೆ. ತಾತಯ್ಯನವರ ಲೋಹದ ಪ್ರತಿಮೆ ಸುಂದರ ಪೀಠದ ಮೇಲೆ ಪ್ರತಿಷ್ಠಾಪನೆ. ಸಾಮೂಹಿಕ ವಿವಾಹಕ್ಕೆ ವಿಶಾಲವಾದ ಕಲ್ಯಾಣ ಮಂದಿರ. ಧರ್ಮಚತ್ರಗಳು ವಸತಿಗೃಹಗಳು,ಅನ್ನದಾಸೋಹ ಭೋಜನ ಮಂದಿರ. ಶಿಲ್ಪಕಲೆಯಿಂದ ಅಮರ ನಾರೇಯಣ ಸ್ವಾಮಿ ದೇಗುಲದ ಜೀರ್ಣೋದ್ಧಾರ. ತಾತಯ್ಯನವರ ಜೀವನ ಚರಿತ್ರೆಯ ಚಿತ್ರ ಕಲಾಕೃತಿಗಳು. ಅಲಂಕರಣಗೊಂಡ ಸ್ವಾಮಿ ನರಸಿಂಹ ಗುಹೆ. ಯೋಗಿನಾರೇಯಣ ಪ್ರೌಢಶಾಲೆ,ಅನಾಥಾಲಯ. ಯತೀಂದ್ರರ ಕುರಿತು ಪ್ರಕಟಣೆಗೆ ವ್ಯವಸ್ಥೆ. ಆರಂಭದಲ್ಲಿ ಧರ್ಮಾಧಿಕಾರಿಗಳು ಮತ್ತು ಅಧ್ಯಕ್ಷರಾಗಿದ್ದ ಎಂ.ಎಸ್.ರಾಮಯ್ಯನವರು ಮತ್ತು ಅವರ ಕುಟುಂಬದವರ ಶ್ರದ್ಧಾ ಕೇಂದ್ರವಾಗಿದ್ದು, ಪ್ರಸ್ತುತ ಡಾ.ಎಂ.ಆರ್.#ಜಯರಾಂ ಧರ್ಮಾಧಿಕಾರಿಗಳಾಗಿದ್ದು ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರವು ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಲ್ಲಿ ಮನ್ನಡೆದಿದೆ. ಡಾ.ರಾಜಕುಮಾರ್ ಅಭಿನಯದ "ಕೈವಾರ ಮಹಾತ್ಮೆ" ಚಲನಚಿತ್ರವಲ್ಲದೇ, ಡಾ. ಎಂ. ಆರ್. ಜಯರಾಂ ರವರ ಶ್ರದ್ಧೆಯ ಫಲವಾಗಿ "ಕೈವಾರ ತಾತಯ್ಯ" ಚಲನಚಿತ್ರ ನಿರ್ಮಾಣವಾಗಿದೆ.(ಹಿರಿಯ ನಟ ಸಾಯಿ ಕುಮಾರ್ ಮತ್ತು ರಾಷ್ಟ್ರ ಪಶಸ್ತಿ ವಿಜೇತೆ ತಾರಾ ಪ್ರಮುಖ ಪಾತ್ರಗಳಲ್ಲಿದ್ದು ಚಿತ್ರ ಹೃದಯಂಗಮವಾಗಿದೆ). ಇತರ ದಾನಿಗಳಲ್ಲಿ ಈಡಿಗರ ನಾಗಮ್ಮ, ಸೊಣಪ್ಪ ನಾರಾಯಣ ಸಿಂಗ್, ಕೈಪು ಲಕ್ಷ್ಮಿ ನರಸಿಂಹ ಶಾಸ್ತ್ರಿ, ಇನ್ನು ಮುಂತಾದ ಕೊಡುಗೈ ದಾನಿಗಳಿದ್ದಾರೆ.

🍁#ಕೈವಾರಕ್ಕೆಹೋಗುವಮಾರ್ಗ:-
                           ಶ್ರೀ ಕ್ಷೇತ್ರ ಕೈವಾರಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿವೆ. ಬೆಂಗಳೂರುಮತ್ತು ಹೊಸಕೋಟೆ ಮಾರ್ಗವಾಗಿ ಕೈವಾರಕ್ಕೆ ೬೦ ಕಿ.ಮೀ. ದೂರ ಇದೆ. ಕೈವಾರ ಬೆಟ್ಟ ಹತ್ತಲು ಮೆಟ್ಟಿಲುಗಳನ್ನು ವ್ಯವಸ್ಥಿತಗೊಳಿಸಲಾಗಿದೆ.
*********




ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮ ಗರುಡ ದೇವಸ್ಥಾನ mulabagilu garuda temple

ಸರ್ಪ ದೋಷ ನಿವಾರಣೆಗಾಗಿ ಈ ದೇವಸ್ಥಾನಕ್ಕೆ ಭೇಟಿಕೊಡಿ.
ಓಂ ನಮೋಃ ನಾರಾಯಣಾಯಃ ನಮಃ
ಇಲ್ಲಿ ಒಮ್ಮೆ ಬೇಟಿ ನೀಡಿದರೆ 8 ರೀತಿಯ ಸರ್ಪ ದೋಷ ನಿವಾರಣೆಯಾಗುತ್ತಂತೆ… ವಿಶ್ವದ ಏಕೈಕ ಗರುಡ ದೇವಾಲಯ ಎಲ್ಲಿದೆ ಗೊತ್ತಾ..?

ಇಡಿ ವಿಶ್ವದಲ್ಲೇ ಕೆಲವೇ ಕೆಲವು ಗರುಡ ದೇವಸ್ಥಾನಗಳಲ್ಲಿ ಈ ದೇವಸ್ಥಾನ ಮುಂಚೂಣಿಯಲ್ಲಿದೆ ಮತ್ತು ಇಲ್ಲಿ ಗರುಡನ ದರ್ಶನ ಮಾಡಿದರೆ ಸಾಕು ಅದೃಷ್ಟ ಕುಲಾಹಿಸುತ್ತೆ ಅನ್ನುವ ಮಾತಿದೆ ಸಂತಾನ ಭಾಗ್ಯ, ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಹಾಗೆ ಇಡಿ ವೈದ್ಯಲೋಕಕ್ಕೆ ಸವಾಲಾಗಿರುವ ಈ ದೇವರು ನಂಬಿ ಬಂದ ಭಕ್ತರ ಕೈ ಎಂದಿಗೂ ಬಿಡುವುದಿಲ್ಲವಂತೆ ಹಾಗೆ ಈ ಸ್ಥಳಕ್ಕೆ ಒಮ್ಮೆ ಬೇಟಿ ನೀಡಿದರೆ ಸಾಕು 8 ರೀತಿಯ ಸರ್ಪ ದೋಷಗಳು ಪರಿಹಾರವಾಗುತ್ತವೆಯಂತೆ….

ಈ ಐತಿಹಾಸಿಕ ಪುಣ್ಯ ಸ್ಥಳವಿರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬ ಗ್ರಾಮದಲ್ಲಿ…

ಹಲವು ಪವಾಡಗಳ ಮೂಲಕವೇ ಜಗತ್ ಪ್ರಸಿದ್ದವಾಗಿರುವ ಈ ಕ್ಷೇತ್ರಕ್ಕೆ ಒಮ್ಮೆ ಬಂದರೆ ಸಾಕು ನಿಮಗೆ ಋಣಾತ್ಮಕ ಶಕ್ತಿಯ ಅರಿವಾಗುತ್ತದೆ.
ಇದೆ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಇದ್ದು ಅವರ ದರ್ಶನವು ಪಡೆಯಬಹುದಾಗಿದೆ
ಹಾಗೆ ಮತ್ತೊಂದು ವಿಶೇಷವೆಂದರೆ ಮೂಲ ವಿಗ್ರಹದಲ್ಲಿ ಗರುಡನ ಒಂದು ಭುಜದ ಮೇಲೆ ವಿಷ್ಣು ಮತ್ತು ಇನ್ನೊಂದು ಭುಜದ ಮೇಲೆ ಲಕ್ಷ್ಮಿ ಇರುವುದು ಕಾಣಬಹುದು ಹಾಗಾಗಿ ಗರುಡ ಸ್ವಾಮಿಯೊಂದಿಗೆ ಭಗವಾನ್ ವಿಷ್ಣುವಿನ ಆಶೀರ್ವಾದವೂ ಪಡೆಯಬಹುದಾಗಿದೆ…

ಪುರಾಣಗಳ ಪ್ರಕಾರ ದ್ವಾಪರ ಯುಗದಲ್ಲಿ, ಅರ್ಜುನ ಬೇಟೆಗಾಗಿ ಕಾಡಿಗೆ ಹೋಗಿದ್ದಾಗ ಉತ್ಸಾಹದಲ್ಲಿ ಬಿಟ್ಟ ಉಗ್ರ ಬಾಣಗಳು ಕಾಡಿನಲ್ಲಿ ಬೆಂಕಿಯನ್ನು ಸೃಷ್ಟಿಸೋದಲ್ಲದೆ ಆ ಅಗ್ನಿಯಲ್ಲಿ ಹಲವಾರು ಸರ್ಪಗಳು ಸಹ ಕೊಲ್ಲಲ್ಪಡುತ್ತದೆ.
ಅರ್ಜುನನು ಸತ್ತ ಹಾವುಗಳಿಂದ ಶಾಪಗ್ರಸ್ತನಾಗಿರುತ್ತಾನೆ (ಅವನು ಸರ್ಪ ದೋಷವನ್ನು ಪಡೆಯುತ್ತಾನೆ). ಈ ಶಾಪದಿಂದ ಬಿಡುಗಡೆ ಹೊಂದಲು, ಪಂಡಿತರು ಅರ್ಜುನನಿಗೆ ಗರುಡನಿಗೆ ಪ್ರಾರ್ಥಿಸಲು ಸಲಹೆ ನೀಡುತ್ತಾರೆ. ಆದ್ದರಿಂದ, ಅರ್ಜುನನು ಕೋಲದೇವಿ ಗರುಡ ದೇವಸ್ಥಾನದಲ್ಲಿ ಗರುಡ ದೇವತೆಯನ್ನು ಸ್ಥಾಪಿಸಿದನೆಂದು ಸ್ಥಳೀಯ ನಂಬಿಕೆ.

ಮತ್ತೊಂದು ಜನಪ್ರಿಯ ದಂತಕಥೆಯ ಪ್ರಕಾರ ರಾಮಾಯಣದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಪುಷ್ಪಕವಿಮಾನದಲ್ಲಿ ಕರೆದುಕೊಂಡು ಹೋಗುವಾಗ,
 ಜಟಾಯು (ಗರುಡ) ಸೀತೆಯನ್ನು ರಕ್ಷಿಸಲು ಬರುತ್ತದೆ.
ದುರದೃಷ್ಟವಶಾತ್, ಜಟಾಯು ರಾವಣನ ಕೈಯಿಂದ ಕೊಲ್ಲಲ್ಪತ್ತಿತಂತೆ.
 ಈ ಸ್ಥಳದಲ್ಲಿ ಜಟಾಯು ಕುಸಿಯಿತು ಎಂದು ನಂಬಲಾಗಿದೆ,
ಆದ್ದರಿಂದ ‘ಕೋಲದೇವಿ’ ಎಂಬ ಹೆಸರು ಬಂದಿದೆ. ಕನ್ನಡದಲ್ಲಿ, ಕೊಲ್ಲು ಎಂದರೆ ಕೊಲ್ಲುವುದು. ಜಟಾಯುವಿನ ಪ್ರಯತ್ನಗಳಿಂದ ಸಂತೋಷಗೊಂಡ ವಿಷ್ಣು, ಜಟಾಯುವನ್ನು ಆಶೀರ್ವದಿಸುತ್ತಾನೆ ಮತ್ತು ಆದ್ದರಿಂದ ಗರುಡ ಮತ್ತೆ ಈ ಸ್ಥಳಕ್ಕೆ ದೇವರಾಗಿ ಬರುತ್ತದೆ.

ಜಟಾಯು_ಸಂಪಾತಿ. ಜಟಾಯು ಮತ್ತು ಸಂಪಾತಿ ಸೂರ್ಯನ ಸಾರಥಿ ಯಾದ ಅರುಣನ  ಮಕ್ಕಳು,

ಇವರಿಬ್ಬರು ಪರ್ವತಾಕಾರದ ಪಕ್ಷಿಗಳಾಗಿದ್ದರು, ತಮ್ಮ ಚಿಕ್ಕಪ್ಪನಾದ ಗರುಡನಂತೆ ಇವರು ಸಹ ಸಾಹಸಿಗಳು,

ಒಮ್ಮೆ ಇವರು ತಮ್ಮ ತಮ್ಮ ಶಕ್ತಿಯನ್ನು ಪರೀಕ್ಷಿಸಲು ಬಯಸಿ ಸೂರ್ಯನೊಂದಿಗೆ ಸ್ಪರ್ಧಿಸಿ ಗಗನಕ್ಕೆ  ಹಾರಿದರು,ಚಿಕ್ಕವನಾದ ಜಟಾಯು ತುಂಟನಾಗಿದ್ದುದರಿಂದ ಅಣ್ಣನನ್ನು ಹಿಂದೆ ಹಾಕಲು ಯೋಚಿಸಿ ಮೇಲೆ ಮೇಲಕ್ಕೆ ಹಾರಿದನು,ಆದರೆ ಸೂರ್ಯನ ಪ್ರಖರತೆಯನ್ನು ತಾಳಲಾರದೆ ಕೆಳಗೆ ಬೀಳತೊಡಗಿದನು,

ಆಗ ಸಂಪಾತಿಯು ತಮ್ಮನನ್ನು ರಕ್ಷಿಸಲು ತನ್ನ ರೆಕ್ಕೆಗಳನ್ನು ಜಟಾಯುವಿನ ಮೇಲೆ ಹರಡಿ ಸೂರ್ಯನಿಂದ ರಕ್ಷಿಸಿದನು,ಆದರೆ ಸಂಪಾತಿಯ ರೆಕ್ಕೆಗಳು ಸುಟ್ಟು ಭಸ್ಮವಾಗಿ ದಕ್ಷಿಣ ಸಮುದ್ರದ ತೀರದಲ್ಲಿ  ಬಿದ್ದು ಬಿಟ್ಟನು,ಜಟಾಯು ದಂಡಕಾರಣ್ಯದಲ್ಲಿ ಬಿದ್ದನು.                                                                ರಾಮ ಲಕ್ಷ್ಮಣರು ಸೀತೆಯೊಂದಿಗೆ ದಂಡಕಾರಣ್ಯಕ್ಕೆ ಬಂದಾಗ ದಂಡಕಾರಣ್ಯಕ್ಕೆ ಬಂದಾಗ ರಾವಣನು ಸೀತೆಯನ್ನು ಅಪಹರಿಸಿ ಒಯ್ಯುತ್ತಿದ್ದಾಗ ಜಟಾಯು ಅವನನ್ನು ಅಡ್ಡಗಟ್ಟಿ ಯುದ್ಧ ಮಾಡಿದನು ಆದರೆ ಯುದ್ಧದಲ್ಲಿ ರೆಕ್ಕೆಗಳನ್ನು  ಕಳೆದುಕೊಂಡು ಕೆಳಗೆ ಬಿದ್ದು ಬಿಟ್ಟನು, ನಂತರ ಸೀತೆಯನ್ನು ಹುಡುಕುತ್ತಾ  ರಾಮ ಲಕ್ಷ್ಮಣರು ಬಂದಾಗ ಅವರಿಗೆ ಸಂಗತಿಯನ್ನು ವಿವರಿಸಿ ಸಾವನ್ನಪ್ಪಿದ,

ಶ್ರೀರಾಮನೇ ಜಟಾಯುವಿನ ಅಂತ್ಯ ಸಂಸ್ಕಾರಗಳನ್ನು ಮಾಡಿ ಮುಗಿಸಿದ  ಕಾರಣದಿಂದ ಚಟ ಯುವಿಗೆ ಮೋಕ್ಷ ಪ್ರಾಪ್ತವಾಯಿತು .     

ಸುಗ್ರೀವನ ಆಜ್ಞೆಯಂತೆ ಹನುಮಂತ ಮುಂತಾದ ವಾನರ ವೀರರು ಸೀತೆಯನ್ನು ಹುಡುಕುತ್ತಾ ದಕ್ಷಿಣ ಸಮುದ್ರ ತೀರಕ್ಕೆ ಬಂದಾಗ ಅಲ್ಲೇ ಬಿದ್ದಿದ್ದ ಸಂಪಾತಿಯನ್ನು ನೋಡಿದರು, ಆಗ ಸಂಪಾತಿಯು  "ಸೀತೆಯನ್ನು ರಾವಣನು ಅಪಹರಿಸಿ ಲಂಕೆಯಲ್ಲಿ ಇಟ್ಟಿದ್ದಾನೆ,ಲಂಕೆ ಈ ಸಮುದ್ರದ ಆಚೆ ತೀರದಲ್ಲಿದೆ ಎಂದು ಹೇಳಿದನು.

ಈ ರೀತಿ ಶ್ರೀರಾಮ ಕಾರ್ಯಕ್ಕೆ ನೆರವು ನೀಡಿದ್ದರಿಂದ ಸಂಪಾತಿಯ ರೆಕ್ಕೆಗಳು ಪುನಃ ಮೂಡಿದವು.
ಕೃಷ್ಣಪ್ರಸನ್ನ


ಅಷ್ಟ ಸರ್ಪದೋಷ ನಿವಾರಿಸುವ ಗರುಡ ದೇವಾಲಯ

ಮುಳಬಾಗಿಲು ಬಳಿಯ ಪವಿತ್ರ ಪುಣ್ಯ ಕ್ಷೇತ್ರ
* ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ
ಜಟಾಯು ಪಕ್ಷಿ ರಾವಣನನ್ನು ತಡೆದಿದ್ದು ಎಲ್ಲಿ, ಹೋರಾಡಿ ರೆಕ್ಕೆ ಕಳೆದುಕೊಂಡು ಕೆಳಗೆ ಬಿದ್ದಿದ್ದು ಎಲ್ಲಿ ಎಂಬುದು ಹಲವರಿಗೆ ಗೊತ್ತಿಲ್ಲ. ಆ ಸ್ಥಳ ಕರ್ನಾಟಕದಲ್ಲೇ ಇದೆ ಎಂಬುದೂ ಅನೇಕರಿಗೆ ತಿಳಿದಿಲ್ಲ. ಹೌದು ಈ ಸ್ಥಳ ಇರುವುದು ಕರ್ನಾಟಕದಲ್ಲೇ ಅದು ರಾಜ್ಯದ ರಾಜಧಾನಿ ಬೆಂಗಳೂರಿಗೆ ಅತಿ ಸಮೀಪದಲ್ಲೇ. ಅದುವೇ ಕೊಲದೇವಿ ಗ್ರಾಮದ ರಾಜ್ಯದ ಏಕೈಕ ಗರುಡ ದೇವಾಲಯ ಇರುವ ಕ್ಷೇತ್ರವಂತೆ.
ಅಷ್ಟ ಸರ್ಪದೋಷ ನಿವಾರಣಾ ಕ್ಷೇತ್ರ ಎಂದೇ ಖ್ಯಾತವಾಗಿರುವ ಇಲ್ಲಿ ಗರುಡ ದೇವರ ದರ್ಶನ ಮಾಡಿ, ಪೂಜೆ ಸಲ್ಲಿಸಿದರೆ ಎಂಟು ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಹೆಚ್ಚಿನ ಮಾಹಿತಿಗೆ ಹಾಗೂ ಚಿತ್ರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
http://www.ourtemples.in/garuda_temple.html
*****


Kshetra Palaka Sri Anjaneya Temple

Anjaneya Swamy Temple is located in Mulabagilu. Tired after epic war, Arjuna went on a pilgrimage and brought his flag used during war consisting of an image of Vayu Putra. He established this temple in Mulabagilu, which was then called Shathaka Vatipuri.
Sripadarajamutt and Narasimha Thirtha
The Narasimha tirtha is about 2 km from the town of Mulabagilu towards the east on NH-4. It is the sacred place where Sri Sreepadaraaja Swamiji, or simply Sripadaraja a disciple of Saint Madhwacharya lived and had his vrindavan (sacred resting place for Hindu sages) made. It is now the headquarters of the Sripadarajamutt that he founded. There is a Swayamvyakta Yoga Narasimha temple near the vrindavan.
Someshwara Temple

Someshvara temple, Mulabagilu

A sculpture on display at the Someshvara temple, Mulabagilu
Apart from the famous Hanuman 9Temple, this town has a Poorna Prasidda Someshwara Temple dedicated to Lord Shiva. The childless couples pray here for a child by making pradhakshinas.
Baba Hyder Vali of Mulabagilu
Mulbagal is also sacred for Muslims as the dargah or mausoleum of Sufi Saint Baba Hyder Vali of Mulbagal. Baba Hyder Vali of Mulbagal or Syed Shah Baba Hyder Auliya Hussaini Suharwardi was a 12th-century Sufi saint of Suharwardi order. He was the disciple of Tabr-e-Aalam Baadshah Nathar Vali, of Tirchy. Both Muslims and Hindus worship at the dargah. Urs of Baba Hyder-e-Safdar is celebrated every year on 11th of Rajab (according to the lunar calendar).
Virupakshi Swamy Temple
Sri Virupakshi Swamy Temple[10] is in Virupakshi village about 4 km from Mulabagilu. This temple was built in the 13th century by Vijayanagara rulers and resembles the Virupaksheshwara Temple in Hampi. One family has been doing the pooja here since the temple was constructed, and dates back about eight generations. The mythology tells that the Virupaskha ling was installed by great sage Atri Maharshi, father of Shriguru Dattatreya. The linga changes its color in 3 ways from sunrise to sunset.
The temple complex also has goddess Bagulamukhi or Bagalamukhi devi temple. As per tantra, Bagulamukhi is one of the devi's of Dashamahavidya. She is keeper of Brahmaastra. One of the most powerful goddesses and its rare to find temple of such. It is believed that King Vikramaaditya built the Bagulamukhi temple at Virupakshi.
Venugopala swamy temple, Gujjanahalli
Located 14 km far from mulabagal, it is on the way to Srinivasapura. There is an ancient temple of venugopala swamy' built in Chola style temple. Pilgrims can visit this temple.
Garuda Temple and Sri Prasanna Chowdeshwari Temple, Koladevi
Garuda Temple is one of the ancient epic Ramayana-related temples located at Koladevi 18 km from Mulabagilu national highway, 19 km from Srinivaspur and 4 km from Mudianur. It was built under the supervision of Sri Ramanujacharya, but only came to light recently. Sri Prasanna Chowdeshwari Temple is 300 years old.
Kurudumale, Maha Ganapathi Temple and Someshwara Temple
Kurudumale, 8 km northwest from Mulabagilu, is famous for Lord Ganapati Temple. The idol of Ganapati is made of a single "Shaligram rock" and is about 21 feet from ground level. The idol and temple are estimated to be 5,000 years old.
Sri Varadaraja Swamy Temple, Uttanur
The great Saint Brugu Maharshi have built a Sri Varadaraja Swamy temple in Uttanur or Uthanur. The Uttanur is a called as a Uttama Kanchi. Every year in the day of Bharatha Hunime the Rathothsava will happening. It is importanat place for Saints for doing Japa Thapas. The Gangas build the Sri Uttameshwara Temple in Uttanur.
Chowdeswaramma Temple, Mandikal
Mandikal Chowdeswaramma temple is at least 1000 years old and popular for miracles, situated at a distance of 8 miles. Recently this temple has been renovated by devotees of nearing villages like, Mandikal, Koladevi, Gollahalli Harapanakana halli.
Avani
Known as the Gaya of the south, Avani has a cluster of Ramalingeshwara temple all within one courtyard dedicated to Lakshmana, Bharata and Shatrugna as well as a Shankar Math built by the Nolamba dynasty. Legend has it, that the hill above was home to Valmiki’s ashram, where Lava & Kusha were born and raised. GUNIGANTIPALYA. Ranaberamma temple gunugantipalya, Gangamma temple gunigantipalya circle
****
******

January 2018 news in Star of Mysore Daily news paper








ವೇಣುಗೋಪಾಲಸ್ವಾಮಿ ದೇವಸ್ಥಾನ

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ..

ಕನ್ನಂಬಾಡಿ (ಕೆ.ಆರ್.ಎಸ್.)ನಲ್ಲಿ ಮುಳುಗಿದ್ದ ಪುರಾತನ ದೇವಾಲಯಕ್ಕೆ ಮರುಜೀವ...


ಕರುನಾಡ ಶಾಲಿಮಾರ್ ಎಂದೇ ಖ್ಯಾತವಾದ ಬೃಂದಾವನ ಉದ್ಯಾನ ಹಾಗೂ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿದ ಬಳಿಕ ಈ ಪ್ರದೇಶ ಕೆ.ಆರ್.ಎಸ್. ಎಂದೇ ಖ್ಯಾತವಾಗಿದೆ. ಆದರೆ, ಅಣೆಕಟ್ಟು ಕಟ್ಟುವ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಹಿಂದೆ ಇಲ್ಲಿ ಕಣ್ವ ಮಹರ್ಷಿಗಳು ಘೋರ ತಪವನ್ನಾಚರಿಸಿದ್ದ ಕಾರಣ ಈ ಪ್ರದೇಶ ಕಣ್ವಪುರಿ ಎಂದೂ ಕರೆಸಿಕೊಂಡಿತ್ತೆಂದು ತಿಳಿದುಬರುತ್ತದೆ.

ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶದಲ್ಲಿ ಕಣ್ವೇಶ್ವರ, ಲಕ್ಷ್ಮೀದೇವಿ ಹಾಗೂ ವೇಣುಗೋಪಾಲಸ್ವಾಮಿ ದೇವಸ್ಥಾನಗಳಿದ್ದವು ಎಂದು ಇತಿಹಾಸ ಸಾರುತ್ತದೆ. ಈ ದೇವಾಲಯಗಳ ಪೈಕಿ ಕಣ್ವೇಶ್ವರ ದೇವಸ್ಥಾನ ತುಂಬಾ ಪ್ರಾಚೀನವಾದುದಾಗಿತ್ತು ಮತ್ತು ಇದನ್ನು ಕ್ರಿ.ಶ. 8ನೇ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ ಒಂದನೇ ಕೃಷ್ಣ ಕಟ್ಟಿಸಿದ್ದನೆಂದೂ ಹೇಳಲಾಗುತ್ತದೆ.



ಈ ಪ್ರದೇಶದಲ್ಲಿದ್ದ ಮತ್ತೊಂದು ಭವ್ಯ ದೇವಾಲಯ ವೇಣುಗೋಪಾಲಸ್ವಾಮಿಯದು. ಈ ದೇವಸ್ಥಾನವನ್ನು ಕ್ರಿ.ಶ.1300ರಲ್ಲಿ ತಲಕಾಡು ಗಂಗರು ನಿರ್ಮಿಸಿದ್ದರೆಂದೂ ಬಳಿಕ, ವಿಜಯನಗರಸರು ಮತ್ತು ಮೈಸೂರು ಒಡೆಯರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದರು ಎಂದೂ ಇತಿಹಾಸದಿಂದ ತಿಳಿದುಬರುತ್ತದೆ. ದೇವಾಲಯದ ಹೊರಬಿತ್ತಗಳಲ್ಲಿ ಅಮೃತಾಪುರದಲ್ಲಿರುವಂತೆ ಅರೆಗೋಪುರಗಳ ಕೆತ್ತನೆಗಳಿವೆ.

ಅಣೆಕಟ್ಟೆ ನಿರ್ಮಾಣವಾದ ನಂತರ ವೇಣುಗೋಪಾಲಸ್ವಾಮಿಯ ಸುಂದರ ದೇವಸ್ಥಾನ ಹಿನ್ನೀರಿನಲ್ಲಿ ಸಂಪೂರ್ಣ ಮುಳುಗಿ ಹೋಯಿತು. ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸಿ, ಕಾವೇರಿ ನದಿಯ ಪ್ರಮುಖ ಅಣೆಕಟ್ಟೆ ಕೆ.ಆರ್.ಎಸ್. ನಲ್ಲಿ ನೀರಿನ ಮಟ್ಟ ಕಡಿಮೆ ಆದಾಗ, ಮೊದಲಿಗೆ 1958ರಲ್ಲಿ ದೇವಾಲಯ ಗೋಚರಿಸಿತ್ತು. ಆದಾದ ಬಳಿಕ 2000ದ ಮೇ 24ರಂದು ದೇವಾಲಯ ಗೋಚರಿಸಿತ್ತು ಮತ್ತೆ 2004ರಲ್ಲಿ ಈ ದೇವಾಲಯ ಸಂಪೂರ್ಣ ಗೋಚರವಾಯಿತು. ಮುಳುಗಡೆಯಾಗಿದ್ದ ದೇವಾಲಯ ದರ್ಶನಕ್ಕಾಗಿ ಲಕ್ಷಾಂತರ ಜನರು ಮುಗಿಬಿದ್ದಿದ್ದರು. ದ್ರಾವಿಡ ಶೈಲಿಯಲ್ಲಿದ್ದ ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆಗಳು, ದೊಡ್ಡ ಪ್ರಾಕಾರ ಎಲ್ಲವೂ ಹಿಂದೆ ಇಲ್ಲಿ ಊರಿತ್ತು ಎಂಬುದನ್ನು ಸಾಕ್ಷೀಕರಿಸಿದವು.

ಇಷ್ಟು ಭವ್ಯ ದೇವಾಲಯ ಮುಳುಗಿ ಹೋಗಿರುವುದನ್ನು ನೋಡಿದ ಉದ್ಯಮಿ ಹರಿ ಖೋಡೆ ಅವರು ದೇವಾಲಯವನ್ನು ಜಲಾಶಯ ಪ್ರದೇಶದಿಂದ ಹೊರಕ್ಕೆ ತೆಗೆದು ಹಿನ್ನೀರಿನ ದಡದಲ್ಲಿ ಪುನರ್ ನಿರ್ಮಿಸಲು ಮುಂದಾದರು. ಈಗ ದೇವಾಲಯ ಬಹುತೇಕ ಮೂಲ ಸ್ವರೂಪದಲ್ಲೇ ಪುನರ್ ನಿರ್ಮಾಣವಾಗಿದ್ದು, ದೇವರ ಪ್ರತಿಷ್ಠಾಪನೆ ನೆರವೇರಿದೆ.

ದೇವಾಲಯ ಪ್ರವೇಶಿಸುತ್ತಿದ್ದಂತೆ ಮೂಲ ದೇವಾಲಯದ ಸುತ್ತಲೂ ಪರಿವಾರ ದೇವತೆಗಳ ಪುಟ್ಟ ಸಾಲು ಗುಡಿಗಳಿವೆ. ಪ್ರದಕ್ಷಿಣಾಕಾರದಲ್ಲಿ ಸಾಗಿದರೆ ಮೊದಲಿಗೆ ವಿಘ್ನೇಶ್ವರನ ದರ್ಶನವಾಗುತ್ತದೆ. ನಂತರ ಶಿವಪಾರ್ವತಿ, ಸುಬ್ರಹ್ಮಣ್ಯ, ದತ್ತಾತ್ರೇಯ; ಆದಿ ಲಕ್ಷ್ಮೀ, ಧನ ಲಕ್ಷ್ಮೀ, ಧೈರ್ಯಲಕ್ಷ್ಮೀ, ಸಂತಾನಲಕ್ಷ್ಮೀ, ಧಾನ್ಯಲಕ್ಷ್ಮೀ, ವಿದ್ಯಾಲಕ್ಷ್ಮೀ, ಗಜಲಕ್ಷ್ಮೀ, ವಿಜಯಲಕ್ಷ್ಮೀ- ಅಷ್ಟಲಕ್ಷ್ಮೀ ವಿಗ್ರಹಗಳು; ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ - ಸಪ್ತ ಮಹಾ ನದಿಗಳು; ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು –ನವಗ್ರಹಗಳು; ಮತ್ಸ್ಯನಾರಾಯಣ, ಕೂರ್ಮ ನಾರಾಯಣ, ವರಾಹಸ್ವಾಮಿ, ನರಸಿಂಹಸ್ವಾಮಿ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ – ದಶಾವತಾರ; ವಾಸಿಷ್ಠ, ಗೌತಮ ಸೇರಿದಂತೆ ಮಹರ್ಷಿಗಳ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇನ್ನು ಪ್ರಧಾನ ಗರ್ಭಗೃಹದಲ್ಲಿ ವೇಣುಗೋಪಾಲಸ್ವಾಮಿಯ ಸುಂದರ ಮೂರ್ತಿ ಇದೆ. ಚಿನ್ನದ ಕೃಷ್ಣನ ಮೂರ್ತಿಯೂ ಇದೆ.

ಮೂರು ಭಾಗದಲ್ಲಿ ಕಾವೇರಿ ನದಿ ಆವರಿಸಿರುವ ಸುಂತರ ಪರಿಸರದಲ್ಲಿರುವ ಈ ದೇವಾಲಯ ಮುಂದೆ ಮುಖ ಮಂಟಪವಿದ್ದು, ದುಂಡಾಕಾರದ ಕಂಬಗಳಿಂದ ನಿರ್ಮಿಸಲಾಗಿದೆ. ದೇವಾಲಯದ ಪ್ರಧಾನ ದ್ವಾರದ ಎಡ ಬಲದಲ್ಲಿ ಸಹ ದ್ವಾರಪಾಲಕರ ಬದಲಾಗಿ ಅರೆಗೋಪುರಗಳನ್ನೇ ಕೆತ್ತಲಾಗಿದೆ.

ಈಗ ದೇವಾಲಯ ಅತ್ಯಂತ ಸುಂದರವಾಗಿ ಪುನರ್ ನಿರ್ಮಾಣಗೊಂಡಿದೆ. ದೇವಾಲಯದ ಪ್ರವೇಶದಲ್ಲಿ ಸುಂದರ ಮಂಟಪವಿದೆ. ಎದುರು ಗರುಡಗಂಬವಿದೆ. ದೇವಾಲಯದ ನಾಲ್ಕೂ ಮೂಲೆಯಲ್ಲಿ ಮಂಟಪಗಳನ್ನು ನಿರ್ಮಿಸಲಾಗಿದೆ. ಹಂಪೆಯ ಕಲ್ಲಿನರಥದ ಪ್ರತಿರೂಪದಂತೆ ಇಲ್ಲಿಯೂ ಒಂದು ಕಲ್ಲಿನ ರಥ ನಿರ್ಮಿಸಲಾಗಿದೆ.

ಈ ತ್ರಿಕೂಟಾಚಲ ದೇವಾಲಯವು ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದೆ. ಹಿಂದೆ ಈ ದೇಗುಲ 18 ಕಂಬಗಳಿಂದ ಕೂಡಿ ಸುಭದ್ರವಾಗಿತ್ತು. ಈಗ ಹೆಚ್ಚುವರಿ ಕಂಬಗಳನ್ನೂ ಸೇರಿಸಿ ಬೃಹತ್ ದೇವಾಲಯ ನಿರ್ಮಿಸಲಾಗಿದೆ. ಪ್ರತಿಷ್ಠಾಪನೆಗೆ ಮುನ್ನವೇ ಈದೇವಾಲಯ ನೋಡಲು ಈಗಲೂ ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ನೂರಾರು ಜನ ಆಗಮಿಸುತ್ತಾರೆ.

ಕಣ್ಣು ಹಾಯಿಸಿದಷ್ಟು ದೂರದವರೆಗೆ ಕಾಣುವ ಕಾವೇರಿ ನದಿಯ ದಂಡೆಯಲ್ಲೇ ಇರುವ ಈ ಭವ್ಯ ದೇವಾಲಯ ನೋಡಿ ನಿಬ್ಬೆರಗಾಗುತ್ತಾರೆ. ಮಳೆಗಾಲದಲ್ಲಿ ಸಾಗರದ ಅಲೆಯಂತೆ ದಡಕ್ಕೆ ಅಪ್ಪಳಿಸುವ ಕಾವೇರಿ ನದಿಯ ನೀರಿನ ಅಬ್ಬರ, ಕೆರೆಯ ಮೇಲೆ ಬೀಸುವ ಕುಳಿರ್ಗಾಳಿ, ಸೂರ್ಯಾಸ್ತದ ಸಂದರ್ಭದಲ್ಲಿ ನದಿಯ ನೀರಿನ ಬೀಳುವ ಬಿಂಬ ಸುತ್ತಲೂ ಇರುವ ಹಚ್ಚ ಹಸಿರು ರಮಣೀಯವಾಗಿದೆ.

ಸ್ವಚ್ಛತೆಗೆ ಆದ್ಯತೆ – ಈ ದೇವಾಲಯದಲ್ಲಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಉಳಿದಂತೆ ಇಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ತೀರ್ಥ ಪ್ರಸಾದ, ಮಂಗಳಾರತಿ ದೊರಕುವುದಿಲ್ಲ. ಮಿಗಿಲಾಗಿ ದೇವಾಲಯದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ದೇವಾಲಯದ ಆವರಣದಲ್ಲಾಗಲೀ, ಹೊರಗಡೆಯಾಗಲೀ ಕಸ ಕಣ್ಣಿಗೆ ಬೀಳದಷ್ಟು ಎಚ್ಚರಿಕೆ ವಹಿಸಲಾಗಿದೆ. ಯಾವುದಾದರೂ ದೇವಾಲಯಕ್ಕೆ ಸ್ವಚ್ಛತೆಗಾಗಿ ಪ್ರಶಸ್ತಿ ನೀಡುವುದಿದ್ದರೆ. ಈ ದೇವಾಲಯಕ್ಕೆ ಸಿಗುವುದರಲ್ಲಿ ಸಂದೇಹವಿಲ್ಲ.
******

(*ಲೇಖಕರು-ಟಿ.ಎಂ. ಸತೀಶ್ , ಸಂಪಾದಕರು, ಕನ್ನಡರತ್ನ.ಕಾಂ)
*****





ಗದಗ ಜಿಲ್ಲೆಯ ಲಕ್ಕುಂಡಿ

ಲಕು಼ಂಡಿ - ಕಲಾೄಣಿ ಚಾಲುಕೄರ ಹಿರಿಮೆ
#ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿ. #ಹುಬ್ಬಳಿಯಿಂದ ಹಂಪಿ (ಹೋಸಪೀಟೆ) ಗೆ ಹೋಗುವ ಮಾರ್ಗದಲ್ಲಿ ಒಂದು ಸಣ್ಣ ಹಳ್ಳಿಯಾಗಿದೆ. ಪೂರ್ವದಲ್ಲಿ ಗದಗದಿಂದ 11 ಕಿಮೀ ದೂರದಲ್ಲಿರುವ ಲಕುಂಡಿ. ಇದು ದಂಬಲ್ ನಿಂದ 14 ಕಿಮೀ ಮತ್ತು ಮಹಾದೇವ ದೇವಸ್ಥಾನದಿಂದ 25 ಕಿಮೀ (ಇಟಾಗಿ) ಆಗಿದೆ.
ಲಕುಂಡಿ, ಮಲ್ಲಿಕಾರ್ಜುನ, ವೀರಭದ್ರ, ಮನಿಕೇಶ್ವರ, ನಾನೇಶ್ವರ, ಲಕ್ಷ್ಮಿನಾರಾಯಣ, ಸೋಮೇಶ್ವರ, ನೀಲಕಂಠೇಶ್ವರ ಮತ್ತಿತರ ಹಲವು ಪಾಳುಬಿದ್ದ ದೇವಾಲಯಗಳು.
#ಲಕುಂಡಿ ಸಂಸ್ಕೃತಿಯ ಸ್ಥಳವಾಗಿದ್ದು, ಸುಮಾರು 50 ದೇವಾಲಯಗಳು, 101 ಕೊಳದ ಬಾವಿಗಳು (ಕಲ್ಯಾಣಿ ಅಥವಾ ಪುಷ್ಕರ್ಣಿ ಎಂದು ಕರೆಯಲ್ಪಡುವ) ಮತ್ತು 29 ಶಾಸನಗಳನ್ನು ನಂತರದ ಚಾಲುಕ್ಯರು, ಕಲಚೂರಿಗಳು, ಸೀನಾ ಮತ್ತು ಹೊಯ್ಸಳರ ಕಾಲದಲ್ಲಿ ಹರಡುತ್ತವೆ. ಕಲ್ಯಾಣಿ ಚಾಲುಕ್ಯರ ಕಲೆಯ ಒಂದು ದೊಡ್ಡ ಕೇಂದ್ರವಾಗಿದೆ, ಇಲ್ಲಿ ಹಲವಾರು ಟಿಪ್ಪಣಿಗಳಿವೆ. ಅವುಗಳಲ್ಲಿ ಕಾಶಿವಿಶ್ವೇಶ್ವರ ದೇವಸ್ಥಾನ, 

ಅಲಂಕೃತ ಮತ್ತು ವಿಸ್ತಾರವಾಗಿ ಒದಗಿಸಲ್ಪಟ್ಟಿದೆ. ಬ್ರಹ್ಮ ಜೈನಳ, ಜೈನ ದೇವಸ್ಥಾನ, ಲಕುಂಡಿಯ ಅತ್ಯಂತ ದೊಡ್ಡ ಮತ್ತು ಅತ್ಯಂತ ಹಳೆಯ ದೇವಾಲಯವೂ ಇದೆ. ಎಎಸ್ಐ (ಭಾರತದ ಪುರಾತತ್ವ ಸಮೀಕ್ಷೆ) ನಿರ್ವಹಿಸುತ್ತಿರುವ ಶಿಲ್ಪ ಗ್ಯಾಲರಿ (ಮ್ಯೂಸಿಯಂ) ಇದೆ.
ಲಕುಂಡಿ ಕೂಡ ಜಿಂದೇಶಾ ವಾಲಿ ದರ್ಗಾವನ್ನು ಹೊಂದಿದೆ.
#ಇತಿಹಾಸ
ಆಕುಕುಂಡಿ ದೇವಸ್ಥಾನದ ವಾಸ್ತುಶೈಲಿಗೆ ಹೆಸರುವಾಸಿಯಾಗಿದೆ ಮತ್ತು ನ ದ್ಯಾನಚಿಂತ ಮಣಿ ತ್ತಿಮಾಬ್ಬೆ (ಕನ್ನಡ ಸಾಹಿತ್ಯ ಮತ್ತು ಜೈನ ಧರ್ಮಕ್ಕೆ ಪ್ರೋತ್ಸಾಹ).
ಶಾಸನಗಳಲ್ಲಿ ಲಕ್ಕುಂಡಿಯ ಇತರ ಹೆಸರುಗಳನ್ನು #ಲೋಕಿಗಂಡಿ ಎಂದು ಕರೆಯುತ್ತಾರೆ.
ಲಕುಂಡಿಯನ್ನು ನಂತರ ಚಾಲುಕ್ಯರು, ಕಲಚೂರಿಗಳು, ಸೀನು ಮತ್ತು ಹೊಯ್ಸಳರು ಆಳಿದರು. ರಾಷ್ಟ್ರಕೂಟರಿಂದ (9 ನೇ -10 ನೇ ಶತಮಾನ) ಅಧಿಕಾರವನ್ನು ವಶಪಡಿಸಿಕೊಂಡ ಚಾಲುಕ್ಯರು ಕಲ್ಯಾಣಿ ಅವರ ರಾಜಧಾನಿಯಾಗಿ ಮಾಡಿದರು. ಈಗ ಈ ನಗರದ ಉಳಿದಿದೆ. ನಂತರದ ಚಾಲುಕ್ಯ ದೇವಾಲಯಗಳನ್ನು ಲಕ್ಕುಂಡಿಯಲ್ಲಿ ಸಂರಕ್ಷಿಸಲಾಗಿದೆ. #ಗದಗ ದಲ್ಲಿರುವ ಲಕ್ಕುಂಡಿಯ ಜೈನ ಮಂದಿರವು ಕಲ್ಯಾಣಿ ಚಾಲುಕ್ಯರ. ಶೈಲಿಯ ಬೆಳವಣಿಗೆಯಲ್ಲಿ ಮುಂದಿನ ಹಂತವನ್ನು ರೂಪಿಸುತ್ತದೆ. ಮೇಲ್ಮೈಯ ಚಿಕಿತ್ಸೆಯಲ್ಲಿ ಹೆಚ್ಚಿನ ಅಲಂಕಾರಿಕ ಪರಿಣಾಮವನ್ನು ಅದು ಪರಿಚಯಿಸುತ್ತದೆ.
12 ನೇ ಶತಮಾನದಲ್ಲಿ, #ಕಲ್ಯಾಣಿ ಚಾಲುಕ್ಯರ ವಾಸ್ತುಶೈಲಿಯು ತನ್ನ ಮುಕ್ತಾಯ ಮತ್ತು ಪರಾಕಾಷ್ಠೆಯನ್ನು ತಲುಪುತ್ತದೆ. #ಕಾಶಿ ವಿಶ್ವೇಶ್ವರ ದೇವಸ್ಥಾನ, ಲಕುಂಡಿ, ಕುರುವತಿ ಮತ್ತು ಮಹದೇವ ದೇವಸ್ಥಾನ (ಇಟಾಗಿ) ನಲ್ಲಿ #ಮಲ್ಲಿಕಾರ್ಜುನ ನಂತರದ ಚಾಲುಕ್ಯ ವಾಸ್ತುಶಿಲ್ಪಿಗಳು ನಿರ್ಮಿಸಿದ #ಅತ್ಯುತ್ತಮ ಉದಾಹರಣೆಗಳಾಗಿವೆ. #ಕಲ್ಯಾಣಿ ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪವು ಬಾದಾಮಿಯ ಆರಂಭಿಕ ಚಾಲುಕ್ಯರು ಮತ್ತು ಅವರ ನಂತರದ ಹೊಯ್ಸಳರ ನಡುವಿನ ಸಂಬಂಧ ಎಂದು ಹೇಳಲಾಗುತ್ತದೆ.
ಲಕುಂಡಿಯಲ್ಲಿ ಎಲ್ಲಾ ದೇವಾಲಯಗಳು ಹಸಿರು ಛಿದ್ರದಿಂದ ಮಾಡಲ್ಪಟ್ಟಿದೆ ಮತ್ತು ಹೊರಗಿನ ಗೋಡೆಗಳು ಮತ್ತು ಪ್ರವೇಶದ್ವಾರಗಳು ಅತ್ಯಂತ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿವೆ. ಶಿಖರಾ ಎಂಬುದು ಮಧ್ಯದಲ್ಲಿ-ಶೈಲಿಯ ಪ್ರಕಾರ ಮತ್ತು ಪ್ಯಾರಪೆಟ್ ಮತ್ತು ಪೈಲಸ್ಟರ್ಗಳೊಂದಿಗೆ ಗೋಡೆಯ ಕಲಾತ್ಮಕ ವಿಭಾಗ ದಕ್ಷಿಣ-ಭಾರತೀಯ ಶೈಲಿಯ ವಿಶಿಷ್ಟವಾಗಿದೆ.
ಪ್ರಸ್ತುತ ಲಕುಂಡಿಗೆ ಸುಮಾರು 50 ವಿವಿಧ ದೇವಾಲಯಗಳು ಮತ್ತು ಪುರಾತನ ದೇವಾಲಯಗಳಿವೆ. ಹಳಗುಂಡ ಬಸವಣ್ಣ ದೇವಸ್ಥಾನ, ಲಕ್ಷ್ಮೀನಾರಾಯಣ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಮಣಿಕೇಶ್ವರ ದೇವಸ್ಥಾನ, ನಡಾಯದೇವ ದೇವಸ್ಥಾನ, ನಾಗರೇದೇವ ದೇವಾಲಯ, ನೀಲಕಂಠೇಶ್ವರ ದೇವಸ್ಥಾನ, ಸೂರ್ಯನಾರಾಯಣ ದೇವಸ್ಥಾನ (ಕಾಶಿ ವಿಶ್ವೇಶ್ವರ ದೇವಸ್ಥಾನವನ್ನು ಎದುರಿಸುತ್ತಿರುವ ಸೂರ್ಯ ದೇವತೆ), ಸೋಮೇಶ್ವರ ದೇವಸ್ಥಾನ, ವೀರಭದಾರ್ ದೇವಾಲಯ, ವಿಶ್ವನಾಥ ದೇವಾಲಯ , ವಿರೂಪಾಕ್ಷ ದೇವಾಲಯ. ಅವುಗಳಲ್ಲಿ ಹೆಚ್ಚಿನವುಗಳು #ಶಿವ ಮತ್ತು ಅವನ ವಿವಿಧ ಹೆಸರಿನಲ್ಲಿ ಮೀಸಲಾಗಿವೆ.
ಲಕುಂಡಿ ಹಲವಾರು ಮುಖ್ಯ ಶಾಸನಗಳು [7] (ಸುಮಾರು 29) ನ ನಿಧಿ ಮನೆಯಾಗಿದೆ.
#ಕಲ್ಯಾಣಿ ಚಾಲುಕ್ಯರ ರಾಜ ಇರಿವೇ ಬೆದಂಗನ ಶಾಸನಗಳು ಅಜಿಥನಾಥ ಪುರಾಣದಲ್ಲಿ ಅತ್ತಿಮಾಬ್ಬೆ ಮತ್ತು ದೇಣಿಗೆಗಳ ಮೂಲಕ ಬ್ರಹ್ಮಜಿನಾಲಯ ನಿರ್ಮಾಣದ ವಿವರಗಳನ್ನು ವಿವರಿಸುತ್ತವೆ.
ಕಲ್ಯಾಣಿ ಕಿಂಗ್ ಸೋವಿದೇವ (1173 A.D.) ನ ಕಲಚೂರಿಗಳ ಶಾಸನಗಳು ಗುನನಿಡಿ ಕೇಶವರಿಂದ ಬಸದಿಗೆ ಚಿನ್ನದ ದಾನವನ್ನು ತಿಳಿಸುತ್ತದೆ.
ಕಲ್ಯಾಣಿ ಚಾಲುಕ್ಯರು ಸೋಮಶೇಖರ VI (1185 A.D.) ನ ಪ್ರಮುಖ ಶಾಸನಗಳಲ್ಲಿ, ಅಷ್ಟವಿಧರಚನವನ್ನು ನಡೆಸಲು ದೇಣಿಗೆ ನೀಡಲಾಗಿದೆ. ಇನ್ನೊಂದು 12 ನೇ ಶತಮಾನದ ಶಾಸನವು ಭೂಮಿಗೆ ಕೊಡುಗೆ ನೀಡುವ ಬಗ್ಗೆ ಟ್ರಿಬುವನ ತಿಲಕ ಶಾಂತಿನಾಥರಿಗೆ ತಿಳಿಸುತ್ತದೆ. ಒಂದು ಶಾಸನವು ಜೈನ ಸಂತರು ಮೂಲಸಂಘ ದೇವಾಂಗ ಅಸ್ತಿತ್ವವನ್ನು ಉಲ್ಲೇಖಿಸುತ್ತದೆ.
#ಕಾಶಿ ವಿಶ್ವನಾಥ ದೇವಾಲಯ
ಶಿವನಿಗೆ ಸಮರ್ಪಿತವಾದ ಕಾಶಿಶ್ವೇಶ್ವರ ದೇವಸ್ಥಾನವು ಗೋಪುರಗಳು ಮತ್ತು ಬಾಗಿಲುಗಳ ಮೇಲೆ ಅದರ ಕೆತ್ತನೆಗಳಿಗೆ ಯೋಗ್ಯವಾಗಿದೆ. ಭಾರವಾದ ವೃತ್ತಾಕಾರದ ಕಂಬಗಳನ್ನು ಕೆಲವು ರೀತಿಯ ಲೇಥ್ ಬಳಸಿ ತಯಾರಿಸಲಾಗುತ್ತಿತ್ತು.
ಲಕ್ಷಂಡಿಯ ಕಾಶಿವಿಶ್ವನಾಥ ದೇವಾಲಯದ ನಿರ್ಮಾಣಕ್ಕೆ ಸಾಕಷ್ಟು ಕಾಳಜಿಯಿದೆ, ಇದು ಶಿವನನ್ನು ವಿರೂಪಗೊಳಿಸುತ್ತದೆ. ಈ ದೇವಾಲಯವು ಒಂದು ವಿಶಿಷ್ಟ ಲಕ್ಷಣವನ್ನು ಹೊಂದಿದೆ: ಒಂದು ಸಣ್ಣ ಸೂರ್ಯ ದೇವಾಲಯವು ಪಶ್ಚಿಮದಲ್ಲಿ ಮುಖ್ಯ ದೇವಾಲಯವನ್ನು ಎದುರಿಸುತ್ತದೆ. ಮೂಲತಃ ತೆರೆದ ಮಂಟಪವನ್ನು ಹೊಂದಿರಬೇಕಾದರೆ ಎರಡೂ ನಡುವೆ ಸಾಮಾನ್ಯ ವೇದಿಕೆ ಇದೆ. ಆದ್ದರಿಂದ ಕಾಶಿವಿಶ್ವನಾಥ ದೇವಸ್ಥಾನವು ಪೂರ್ವ ಭಾಗದಲ್ಲಿ ಮತ್ತು ಮಂಟಪದ ದಕ್ಷಿಣ ಭಾಗದಲ್ಲಿ ಪ್ರವೇಶದ್ವಾರವನ್ನು ಹೊಂದಿದೆ. ಪ್ರವೇಶದ್ವಾರದ ದ್ವಾರದ ಮತ್ತು ಗೋಪುರಗಳು ಹತ್ತಿರದಲ್ಲಿ ಸಂಕೀರ್ಣವಾದ ಕೆತ್ತನೆಗಳಿಂದ ಆವೃತವಾಗಿವೆ. ಶಿಖರಾ ಉತ್ತರ-ಭಾರತೀಯ ಶೈಲಿಯಲ್ಲಿದೆ ಮತ್ತು ಇದು ಸಂಕೀರ್ಣ ವೃತ್ತಾಕಾರದ ಕಂಬಗಳನ್ನು ಮಾಡಲು ಬಳಸಬೇಕಾದ ಒಂದು ಲೇಥೆನಂತೆ ಕಾಣುತ್ತದೆ.
****




Holekatte Shree mukhyaprana 
This is one of the first 50,of 732 hanuman idols consecrated by Sri rnVyasarajaru.  On the banks of the river Arkavathi at Kanakapura,which is rn55 kms from Bangalore.

Hanuma, Bheema,and Madhwa avataras and also bhavishat bramha padavi of sri vaayu devaru is indicated . Hanuma roopa is very  beautiful with shanka, chakra, shikha, vajra nakha, bracelets, neck lace etc.,  Sougandhika pushpa below shankha indicates the shree bheemaavatara.  Hanuman without janivaara indicates sri Madhwacharya.  Lotus buds hanging from shoulders indicates the bhavishat bramha padavi of sri vaayu devaru.

following is from http://pranadevaru.blogspot.com:

Holekatte Sri Mukhyapranadevaru' temple is located on the banks of the river 'Arkaavati' in Kanakapura taluk, Ramanagara district, Karnataka state. This holy place is also known as 'Jagruta sthala' in kannada language. This idol is one among the 732 Hanuman idols installed by Sri Vyasaajaru approximately 500 years back.

Here, this deity is also called as 'Sopaanakatte Anjaneyaswamy, by the devotees. It is said to have installed by Sri Vyasarajaru in 1500, Shalivahana Shaka 1422,in the year of Raudranama samvatsara. This magnificent idol is 7 and 1/2 ft tall having impressions of Shankha(conch), chakra , 'Saugandhika' flowers around the waist, urdhwa pundra(tilak worn on the forehead) and a bell in the tail same as all other idols installed by Sri Vyasarajaru, great Saint. One can notice the very finely sculpted finger nails in this idol.

It is said that only a stone-built 'mantapa' was present around the idol  at the time of Sri Vyasarajaru. Later on 250 years back the sanctum sanctorum was constructed around the idol. 

This historically famous very old temple was renovated by the temple Dharmadarshi mandali with the inspiration of His Holiness108 Sri 'Vidyavachaspati teertha' sreepadangalavaru. This whole temple was built within a short period of 98 days.Swamiji came to this Holekatte Anjaneya tample and stayed here for a night after taking the Sanyasa deeksha from his guru His Holiness 108 Sri Vidyapayonidhi teertharu. 

ಶ್ರೀ ವ್ಯಾಸರಾಜ ಯತಿರಾಜ ಕರಾರವಿಂದ ಸೇವಾ ಸುತೃಪ್ತೋ ಹೃದಯoಗಮೇ 
ಶ್ರೀ ರಾಮಚಂದ್ರ ಪಾದಪಂಕಜ ಚಂಚರೀಕಃ ಭಾರತೀ ಪತಿರಯಂ ಶುಭಮಾತ ನೋತು 
ಆರ್ಕಾವತೀ ನದೀ ತೀರೇ ಹೃರ್ಕಮಂಡಲಗಂ ಹರಿಮ್ 
ಸಂಪೂಜ್ಯ ದೇವ ದೇವೇಶಂ ಮೊದತೆ ಭಾರತೀಪತಿಃ 

Lord Hanuman came into his dream that night. Then Swamiji wrote the above said sloka.

Here, they perform Dhatrihavana, Amavaasya pooja, pournami and Mesha sankramana special pooja. Festivals like Hanuman jayanti, Ramanavami will be celebrated every year. Samoohika Sri Satyanarayana vrata pooja will be performed on the day of Pournami on the banks of river 'Arkaavati'.

Thousands of devotees visit this temple every year and have darshan of the lord Hanuman. There are rooms with hot water facility for the devotees to stay here.
||जय हनुमान ||

There is bus transportation to Kanakapura from Bangalore and Kalasi palyam bus stations. It is at a distance of 54km from Bangalore, 96 km from Mysore, 25km from Ramanagara.


How to reach

From Bangalore after banashankari on kanakapura road it is 55 kms. Or from bangalore go towards Ramanagara on Mysore road,  after ramanagara, take left turn, road leads towrads Kanakapura. 

Reach kanakapura, ask for arkavathi theatre-take left rnturn-Malagal road, come along the arkavathi theatre compound to reach arkavathi river.  on the bank of the river is the temple. 

ನಮಸ್ತೇ ಪ್ರಾಣೇಶ ಪ್ರಾಣತವಿಭವಾಯಾವನಿಮಗಾ:,ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮನ್ ಗುರುಗುಣ,ನಮಸ್ತುಭ್ಯ0 ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್,ನಮಃ ಶ್ರೀಮನ್ ಮಧ್ವ ಪ್ರದಿಶ ಸುದೃಶಂನೋ ಜಯ ಜಯ.        ಇಂದಿನ ದರ್ಶನ 15.12.2018.        ಹನುಮನ ಹಬ್ಬ 20.12.2018 ಡಿಸೆಂಬರ್ ಗುರುವಾರ ಹೊಳೆಕಟ್ಟೆಯಲ್ಲಿ. ಪವಮಾನ,ವಾಯುಸ್ತುತಿ, ಮನ್ಯು ಸೂಕ್ತ, ಬಳಿತ್ತಾಸೂಕ್ತ,ಸುಂದರ ಕಾಂಡ,ಸುಮಧ್ವವಿಜಯ ಪಾರಾಯಣ, ಮಧು,ಪಂಚಾಮೃತ ಅಭಿಷೇಕ, ಗೋಪೂಜಾ, ದಾಸರ ಪದಗಳ ಗುಂಪು ಗಾಯನ: ದಾಸ ಮಾಲಾ. ಬನ್ನಿ, ಭಾಗವಹಿಸಿ, ಧನ್ಯರಾಗಿ. ಪಾರಾಯಣ, ಗಾಯನಗಳ ನೋಂದಾವಣೆ, ವಿಚಾರಣೆ:  ವ್ಯಾಟ್ಸಪ್ಪ್ 9341056087: ವೆಂಕಟೇಶ.       ಹೊಳೆಕಟ್ಟೆ ಶ್ರೀ ಮುಖ್ಯಪ್ರಾಣದೇವರು, ಕನಕಪುರ. ಪೇಜ್ ಗೆ ಭೇಟಿಕೊಡಿ.
*****

Savadatti Chidambareshwara









ರಾಮನಾಥಪುರ

2018 ರಾಮನಾಥಪುರ - ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ. ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಪ್ರಖ್ಯಾತಿಗೊಂಡ್ಡು ರಾರಾಜಿಸುತ್ತದೆ.

ತ್ರೇತಾಯುಗದ ರಾಮಾಯಣಕ್ಕೂ ಈ ಕಲಿಯುಗದ ರಾಮನಾಥಪುರಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಈ ಸ್ಥಳವನ್ನು ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರ ಹಾಗೂ ಈ ಕಲಿಯುಗದಲ್ಲಿ ರಾಮನಾಥಪುರ, ದಕ್ಷಿಣಕಾಶಿ, ಭಾಸ್ಕರ ಕ್ಷೇತ್ರವೆಂದು ಕರೆಯಲಾಗುತ್ತಿದ್ದು ಇವುಗಳಿಗೆ ಗ್ರಾಮದಲ್ಲಿರುವ ಕುರುಹುಗಳೇ ಸಾಕ್ಷಿಯನ್ನು ಬದಗಿಸುತ್ತಿದೆ.

ತ್ರೇತಯುಗದಲ್ಲಿ ಲಂಕಾಧಿಪತಿ ಬ್ರಾಹ್ಮಣವಾದ ರಾವಣನನ್ನು ಲೋಕೋದ್ಧಾಕ್ಕಾಗಿ ಸಂಹರಿಸಿದ ನಂತರ ಶ್ರೀರಾಮ ಅಯೋಧ್ಯೆಗೆ ಮರಳಿದ ಮೇಲೆ ಬ್ರಾಹ್ಮಣನಾದ ರಾವಣನ ಅಸುರ ಪರಿವಾರವನ್ನು ಸಂಹರಿಸಿದ್ದರಿಂದ ಬ್ರಹ್ಮಹತ್ಯಾ ದೋಷಪರಿಹರಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಅಲ್ಲದೇ ಕುಲಗುರು ವಶಿಷ್ಠರ ಬತ್ತಾಸೆ ಮೇರೆಗೆ ಪುಷ್ಟಕ ವಿಮಾನದಲ್ಲಿ ಪರಿವಾರ ಸಮೇತ ರಾಮನಾಥಪುರ(ವಾಸವಾಪುರಿ)ಕ್ಕೆ ಬಂದು ಅಗಸ್ತ್ಯ ಋಷಿಗಳು ವಿಹ್ನಿ ಪುಷ್ಕರಣಿಯ ಸಮೀಪದಲ್ಲಿ ಉದ್ಭವಿಸಿರುವ ಶಿವಲಿಂಗದ ವಿಷಯವನ್ನು ರಾಮನಿಗೆ ತಿಳಿಸಿದಾಗ ಅದನ್ನು ಹುಡುಕಿ ಪುಷ್ಕರಣಿಯಲ್ಲಿರುವ ಉದ್ಭವ ಶಿವಲಿಂಗವನ್ನು ಪೂಜಿಸುತ್ತಾನೆ. ಈ ಮೂಲಕ ದೋಷ ಪರಿಹರಿಸಿಕೊಂಡ ಎಂಬುದು ಇತಿಹಾಸ ತಿಳಿಸುತ್ತದೆ. ವಾಸವಾಪುರಿ ಎಂದು ಕರೆಸಿಕೊಂಡಿದ್ದ ಗ್ರಾಮ ಅಂದಿನಿಂದ ರಾಮನಾಥಪುರ ಎಂದಾಯಿತು ಎನ್ನುತ್ತವೆ ಸ್ಥಳ ಪುರಣ.
ರಾಮನಾಥಪುರದಲ್ಲಿ ಸುಬ್ರಹ್ಮಣ್ಯ, ಅಗಸ್ತ್ಯೇಶ್ವರ, ರಾವೇಶ್ವರ, ಪಟ್ಟಬಿರಾಮ, ಲಕ್ಷಿನರಸಿಂಹ, ವಾಸವಪುರಿ ಆಂಜನೇಯ, ಶ್ರೀ ಪರಕಾಲ ಮಠದ ಹಯಗ್ರೀವಸ್ವಾವ, ಆರ್ಯ ವೈಶ್ಯ ಛತ್ರದಲ್ಲಿ ಕನ್ನಿಕಾಪರವೇಶ್ವರಿ, ವರದಾನ ಬಸವೇಶ್ವರ, ಕಾಲುವೆಯಮ್ಮ, ಲಕ್ಷ್ಮಣೇಶ್ವರ ದೇವಾಲಯಗಳಿಂದ ಧರ್ಮಪರಂಪರೆಯ ಮತ್ತು ಭಕ್ತಿಯ ಕೇಂದ್ರವಾಗಿದೆ.
2011ರ ಜನಗಣತಿಯ ಪ್ರಕಾರ 1578 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ 787 ಪುರುಷರು ಹಾಗೂ 791 ಮಹಿಳೆಯರಾಗಿದ್ದಾರೆ. 6 ವರ್ಷದೊಳಗಿನ ಮಕ್ಕಳ ಸಂಖ್ಯೆ 152ಇದ್ದು ಈ ಪೈಕಿ 83 ಗಂಡು 69 ಹೆಣ್ಣು ಮಕ್ಕಳವನ್ನು ಒಳಗೊಂಡಿದೆ. ಇಲ್ಲಿ ವಾಸಿಸುವ ಬಹುತೇಕ ಕುಟುಂಬಳು ವೈರಿಕ ಧರ್ಮವನ್ನು ಅನುಸರಿಸುತ್ತಾರೆ. ಇವರುಗಳು ಭಗವದ್ಗೀತೆಯ ಆರಾಧಕರಾಗಿರುವರು. ಈ ಗ್ರಾಮವು ತಾಲೂಕಿನ ಒಂದು ಪ್ರಮುಖ ಹೋಬಳಿ ಕೇಂದ್ರವಾಗಿದ್ದು ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಸಹ ದೆ. ವಾಣಿಜ್ಯ ಬ್ಯಾಂಕುಗಳು, ಸರ್ಕಾರಿ ಕಛೇರಿಗಳು ಸಹ ಇಲ್ಲಿವೆ.
ದಕ್ಷಿಣ ಗಂಗೆ ಎಂದು ಪ್ರಸಿದ್ದಿಯನ್ನು ಪಡೇದಿರುವ ಕಾವೇರಿ ನದಿ. ಗಂಗಾ ನದಿಯಲ್ಲಿ ಸ್ನಾನಮಾಡಿ ಕಾಶಿ ರಾಮೇಶ್ವರನ ದರ್ಶನ ಪಡೆದರೆ ಪಾಪನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೆ ಉತ್ತರಭಾರತದ ಪ್ರವಾಸಿಗರಿಗೆ ಇದೆಯೋ ಹಾಗೆಯೇ ದಕ್ಷಿಣದ ಕಾವೇರಿ ನದಿಯಲ್ಲಿ ಮಿಂದು ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ದಕ್ಷಿಣ ಪ್ರವಾಸಿಗರಿಗೆ ಇದೆ. ಶ್ರೀ ಗಂಗಾದಿ ಸಮಸ್ತ ದೇವತೆಗಳು ವರ್ಷಕೊಮ್ಮೆ ತುಲಾಸಂಕ್ರಮಣದ ಮುಹೊರ್ತದಲ್ಲಿ ಕಾವೇರಿಯನ್ನು ಕೂರಿ ಒಂದು ತಿಂಗಳು ಅವಳೊಡನೆ ನೆಲೆಸಿರುತ್ತಾರೆ ಎಂದು ಸ್ಕಂದ ಪುರಾಣದಲ್ಲಿರುವ ಕಾವೇರಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಪ್ರಾಚೀನ ಋಷಿಗಳು ಸ್ಮರಿಸುತ್ತಾ ಬಂದ ಸಪ್ತನದಿಗಳಲ್ಲಿ ಶ್ರೀ ಕಾವೇರಿಯು ಸೇರಿದ್ದಾಳೆ. ಈ ಕ್ಷೇತ್ರದ ಕಾವೇರಿ ನದಿಯಲ್ಲಿ ಪವಿತ್ರ ವಹ್ನಿಪುಷ್ಕರಣಿ, ಗಾಯಿತ್ರಿ ಶಿಲೆ, ಗೋಗರ್ಭ, ಮೇನಕಾಶಿಲೆ, ಹನುಮಂತನ ಗೋವು, ಕಪಿಲಾತೀರ್ಥ, ಕುಮಾರಧಾರಾ ತೀರ್ಥಗಳು ಇಲ್ಲಿಗೆ ಬರುವ ಭಕ್ತರ ಪಾಲಿನ ಪವಿತ್ರ ಸ್ಥಳವಾಗಿವೆ.
ಇಲ್ಲಿಯ ಕಾವೇರಿ ನದಿಯಲ್ಲಿ ಗೌತಮಶಿಲೆ ಇತ್ತು. ಇದರ ಜೊತೆಗಿಲ್ಲಿ ಗೌತಮ ಮಹರ್ಷಿಗಳ ಪಾದದ ಗುರುತು ಸಹಾ ಇಲ್ಲಿ ಇತ್ತು. ಆದರೆ ಈಗ ಇಲ್ಲ, ಕ್ರಿ.ಶ 1935ರ ಡಿಸೆಂಬರ್ 9ರಂದು ರಾಮನಾಥಪುರ ಮತ್ತು ಮಲ್ಲಿಪಟ್ಟಣ ನಡುವೆ ಸೇತುವೆಯನ್ನು ನಿರ್ಮಾಣವನ್ನು ಮಾಡಬೇಕಾದರೆ ಬ್ರೀಟಿಷ್ ಚಕ್ರವರ್ತಿ 5ನೆಯ ಜಾರ್ಜನ ಅಜ್ಞೆಯಂತೆ ಆ ಶಿಲೆಗೆ ಸಿಡಿಮದ್ದು ಸ್ಪೋಟಿಸಲಾಯಿತು ಆ ಸ್ಪೋಟಗೊಂಡಾಗ 3 ಭಾರಿ ರಾಮ-ಕೃಷ್ಣ-ಗೋವಿಂದ ದು ಧ್ವನಿ ಕೇಳಿತೆಂದು ಇಲ್ಲಿನ ಹಿರಿಯರು ಹೆಳುತ್ತರೆ.
ಕಾವೇರಿ ನದಿಯ ಮಧ್ಯದಲ್ಲಿರುವ ಲಿಂಗವನ್ನು ಆಗಸ್ತ್ಯೇಶ್ವರ ಲಿಂಗ ವೆಂದು ಹೆಸರು.ನದಿ ರೂಪದಲ್ಲಿ ಹರಿದು ಬರುತ್ತಿರುವ ಕಾವೇರಿಗೆ ಅಗಸ್ತ್ಯರು ತನ್ನ ಸತಿ ಮೇಲಿನ ವ್ಯಾಮೋಹದಿಂದ 12 ಯೋಜನೆಗಳಿಗೊಂದರಂತೆ ಶಿವಲಿಂಗವನ್ನು ಪ್ರತಿಷ್ಟಾಪಿಸಿದರು. ಅಗಸ್ತ್ಯರು ಪ್ರತಿಷ್ಠಾಪಿಸಿದ ಲಿಂಗಕ್ಕೆ ಅವರ ಹೆಸರೆ ಬಂದಿದೆ.
ಗುರುಸಾರ್ವಭೌಮರಾದ ಶ್ರೀ ವ್ಯಾಸರಾಜರು ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಗಸ್ತ್ಯೇಶ್ವರ ದೇಗುಲದ ಬಲಗಡೆ ಹನುಮಂತನನ್ನು ಪ್ರತಿಷ್ಠಾಪಿಸಿದರು. ಅದ್ದರಿಂದ ವಿಗ್ರಹಕ್ಕೆ ಶ್ರೀ ವ್ಯಾಸಾಂಜನೇಯ ಎಂದು ಹೆಸರು ಬಂದಿದೆ.
ಇನ್ನು ಕಾವೇರಿ ನದಿ ನಡುವೆ ಇರುವ ಗೋಗಲ್ಲು (ಗೋಗರ್ಭ)ಕ್ಕೆ ಒಂದು ಐತಿಹ್ಯವಿದೆ. ಇದ್ಕಕೆ “ವೃತಸಂಜೀವಿನಿ” ಎಂದು ಕರೆಯುತ್ತರೆ. ದೇವ-ದಾನವರ ಯುದ್ಧದಲ್ಲಿ ವಿಷ್ಣುವಿನಿಂದ ಅಮೃತ ಪಾನ ಮಾಡಿದ ದೇವತೆಗಳು ರಾಕ್ಷಸರನ್ನು ಸೋಲಿಸಿದರು. ಸೋತ ರಾಕ್ಷಸರು ತಮ್ಮ ಪೂಜ್ಯ ಗುರುಗಳಾದ ಶುಕ್ರಾಚಾರ್ಯರಲ್ಲಿಗೆ ಬಂದು ನಮ್ಮನು ದೇವತೆಗಳಗಿಂದ ರಕ್ಷಿಸಬೇಕೆಂದು ಮೊರೆಯಿಟ್ಟಾಗ ಶುಕ್ರಾಚರ್ಯರು ನಿಮ್ಮ ಸುಖಕ್ಕಾಗಿ ಸತ್ತವರನ್ನು ಬದುಕಿಸುವ ‘ಮೃತಸಂಜೀವಿನಿ’ ಎಂಬ ಮಂತ್ರವನ್ನು ಕಲಿಯಲು ರಾಮನಾಥಪುರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.
ಈ ವಿಷಯ ತಿಳಿದ ಇಂದ್ರ, ಈ ವಿದ್ಯೆ ದಕ್ಕಬಾರದೆಂದು ಅವರ ತಪಸ್ಸನ್ನು ಭಂಗ ಮಾಡಲು ಇಂದ್ರನು ದೇವಲೋಕದಿಂದ ಊರ್ವಶಿ, ರತಿ-ಮನ್ಮಥ, ಕಾಮಧೇನು, ವಸಂತಕರನ್ನು ಕಳುಹಿಸುತ್ತಾನೆ. ತಪೋಭಂಗ ಪಡಿಸಿ ಶುಕ್ರಾಚಾರ್ಯರ ಕೋಪಕ್ಕೆ ತುತ್ತಾಗಿ ಕಾಮಧೇನುವಿಗೆ ಶಿಲೆಯಾಗು ಎಂದು ಶಾಪಕೊಟ್ಟರು. ಆದ್ದರಿಂದ ಶಿಲೆಯಾದ ಕಾಮಧೇನುವನ್ನು ಗೋವುಗಲ್ಲು, ಗೋಗಲ್ಲು ಎಂದು ಕರೆಯುತ್ತಾರೆ. ಅನಂತರ ಊರ್ವಶಿಯ ಪ್ರಾರ್ಥನೆಗೆ ಕ್ಷಮಾಶೀಲರಾದ ಶುಕ್ರಾಚಾರ್ಯರು. ರಾವಣನನ್ನು ಕೊಂದ ರಾಮ ನಿನ್ನ ಸಮೀಪಕ್ಕೆ ಬಂದಾಗ ಶಾಪದಿಂದ ಮುಕ್ತಿ ಹೊಂದು ಎಂದು ಶಾಪ ವಿಮೋಚನೆಯನ್ನು ಹೇಳಿ ತೆರಳುತ್ತಾರೆ.
ವಸಿಷ್ಠರಿಂದ ಪ್ರೇರಿತನಾಗಿ ಬಂದಾ ಶ್ರೀರಾಮ ಶಿಲೆಯಾಗಿದ್ದ ಕಾಮಧೇನು ಮುಂಭಾಗದಿಂದ ನುಸುಳಿ ಹಿಂಭಾಗದಿಂದ ಬಂದ ಈ ಗೋಗರ್ಭದಲ್ಲಿ ರಾಮನ ಪರಿವಾರದವರೆಲ್ಲರು ನುಸುಳಿದರೆಂದು ಐತಿಹ್ಯ ತಿಳಿಸುತ್ತದೆ. ಈ ಗೋಗರ್ಭದಲ್ಲಿ ಜನರು ಇತ್ತಲಿಂದ ಅತ್ತ ನುಸುಳಿ ತಮ್ಮ ಪಾಪ ನಿವಾರಣೆ ಆಯಿತೆಂದು ಅಂದು ಕೊಳ್ಳುತ್ತಾರೆ. ಇದರ ಪಕ್ಕದಲ್ಲಿಯೇ “ಯಮತೀರ್ಥ”ವೂ ಇದೆ. ವರ್ಷಕ್ಕೊಂದು ಸಾರಿ ಇದಕ್ಕೆ ಬಾಳೆ ದಿಂಡನ್ನು ಬಿಡುತ್ತಾರೆ. ಅದು ಕತ್ತರಿಸಿ ಕತ್ತರಿಸಿ ಬಿಡುತ್ತದೆ. ಆದ್ದರಿಂದ ಇದನ್ನು ಕತ್ತರಿ ಗೋವುಗಲ್ ಎನ್ನುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ
ರಾಮನಾಥಪುರದಲ್ಲಿ ಹಲವಾರು ದೇಗುಲಗಳಿದ್ದೂ ಹೆಚ್ಚು ಪ್ರಖ್ಯಾತಿಯನ್ನು ಪಡೆದ ದೇಗುಲ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಈ ದೇವಾಲಯನ್ನು ನಿರ್ಮಿಸಲು ಒಂದು ಐತಿಹ್ಯವಿದೆ.ಕುಕ್ಕೆ ಸುಬ್ರಹ್ಮಣ್ಯದ ಮಠದ ಗುರು ಪರಂಪರೆಯ 14ನೆಯ ಶ್ರೀ ಶ್ರೀ ವಿಭುದೇಶ ತೀರ್ಥ ಪಾದಂಗಳವರು ಯಾತ್ರಾರ್ಥವಾಗಿ ಹೊರಟು ಶ್ರೀ ಕ್ಷೇತ್ರ ರಾಮನಾಥಪುರಕ್ಕೆ ಬಂದು ಇಲ್ಲಿಯ ಸಂಕ್ರಾಂತಿ ಮಂಟದಲ್ಲಿ ಬಿಡಾರ ಹೊಡಿದರು. ಆಗ ಸ್ವಪ್ನದಲ್ಲಿ ಶ್ರೀ ಸುಬ್ರಹ್ಮಣ್ಯನು ಬಂದು ಇಲ್ಲಿಯವರೆವಿಗೂ ನಾನು ನಿನ್ನನ್ನು ಹಿಂಬಾಲಿಸಿದ್ದೇನೆ ನಾನು ಇಲ್ಲಯೇ ನೆಲೆಸಲು ಅಪೇಕ್ಷಿಸುತ್ತೇನೆ. ನಿನ್ನ ಬಳಿಗೆ ಬಲ್ಲಾಳರಾಯನನ್ನು ಎಚ್ಚರಿಸಿ ಇಲ್ಲಿಗೆ ಕಳಿಸುತ್ತೇನೆ ಅವನ ಜೊತೆಗೆ ಹೊಳನರಸೀಪುರದ ಪಾಳೇಗಾರ ನರಸಪ್ಪನಾಯಕನ ಸಹಾಯದಿಂದ ನನ್ನನ್ನು ಇಲ್ಲಿ ಪ್ರತಿಷ್ಠೆ ಮಾಡು ಎಂದು ಹೇಳಿದನೆಂದು ಹೇಳಿ ಹೊಳೆನರಸೀಪುರ ಪಾಳೇಯಗಾರ ನರಸಪ್ಪನಾಯಕನಿಗೂ ಕಾಣಿಕೋಂಡು ರಾಮನಾಥಪುರದಲ್ಲಿ ಗುರುಗಳ ಚ್ಚೆಯಂತೆ ನಡೆದುಕೊಂಡರೆ ನಿನಗೆ ಸಂತಾನಪ್ರಾಪ್ತಿಯಾಗುವುದು ಎಂದು ಕಳುಹಿಸಿ ಶ್ರೀಗಳ ಮರ್ಗ ದರ್ಶಣದಲ್ಲಿ ಶ್ರೀ ವಿಭುದೇಶ ತೀರ್ಥರು ಇಲ್ಲಿ ಸುಬ್ರಹ್ಮಣ್ಯನನ್ನು ಪ್ರತಿಷ್ಟಾಪಿಸಿದರು.
ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು ಸಾಕಷ್ಟು ದೊಡ್ಡದಾದ ದೇವಾಲಯವಾಗಿದೆ. ಅಂದಿನಿಂದಲೂ ಜಾತ್ರೆ ಉತ್ಸವಗಳು ಇಲ್ಲಿ ನಡೆಯುತ್ತಿವೆ. ಪಂಚಮಿಯಂದು ರತೋತ್ಸಮ ನಡೆಯುತ್ತದೆ.
ಶ್ರೀ ಪಟ್ಟಾಬಿರಾಮ ದೇವಾಲಯ
ಈ ದೇವಾಲಯ 15ನೆಯ ಶತಮಾನದಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯವನ್ನು ಸೌಬರಿ ವಹರ್ಷಿಗಳು ಪ್ರತಿಷ್ಟಾಪಿಸಿದರು. ಶ್ರೀ ಪಟ್ಟಾಭಿರಾಮನ ಮೂರ್ತಿ ಅತಿ ಮನೋಹರವಾಗಿದ್ದು ಇದನ್ನು ಸೀತಾದೇವಿ, ಲಕ್ಷ್ಮಣ, ಭರತ, ಶತೃಘ್ನ ಮತ್ತು ಹನುಮಂತನು ಈ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ಅರ್ಚಿಸಿದರು. ದೇವಾಲಯದಲ್ಲಿರುವ ಮೂಲ ಮೂರ್ತಿ ಶ್ರೀ ರಾಮ ಕುಳಿತಿದ್ದು ಸೀತಾದೇವೊಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಪ್ರತಿಮೆ ಇಲ್ಲದೆ. ಈ ದೇವಾಲಯದಲ್ಲಿ ರಾಮನವಮಿ ಉತ್ಸಮ, ಪವಿತ್ರೋತ್ಸವ ದು ವಿಶೇಷೋತ್ಸಗಳು ಪ್ರತಿವರ್ಷ ವೈಶಾಖ ಶುಕ್ಲಪಕ್ಷದಲ್ಲಿ ಈ ದೇವರ ತೇರು (ರಥೋತ್ಸವ) ಎಳೆಯಲ್ಪಡುತ್ತದೆ.
ರಾಮೇಶ್ವರ ದೇವಾಲಯ
ಹೊಯ್ಸಳರ ಅರಸ 3ನೆಯ ನರಸಿಂಹನ ಕಾಲ (1235-1292)ದಲ್ಲಿ ಸೋಮದಂಡನಾಯಕ ಶ್ರೀ ರಾಮೇಶ್ವರ ದೇವಾಲಯವನ್ನು ನಿರ್ಮಾಣಮಾಡಿದ. ಈ ದೇವಾಲಯ ನಕ್ಷತ್ರಾಕಾರದ ಗರ್ಭಗುಡಿ, ಸುಕನಾಸಿ, ಕಲಾಕುಸುರಿಯ 9 ಅಂಕಣ ಹೊಂದಿರುವ ನವರಂಗದ ಮನೋಹರ ಸ್ತಂಭಗಳು, ಹೊಯ್ಸಳ ಶಿಖರದ ಮುಂದೆ ಅವರ ಲಾಂಛನವನ್ನು ನಿರ್ಮಿಸಿದ. ನಂತರ ವಿಜಯನಗರ ಅರಸರ ಕಾಲದಲ್ಲಿ ಪ್ರಥಮ ಗೋಪುರ ಮತ್ತು ಸುತ್ತಲೂ ಭದ್ರವಾದ ರಕ್ಷಣಾ ತಡೆಗೋಡೆ ಮಂಟಪಗಳನ್ನು ಕಟ್ಟಿಸಿದ ಎಂಬುದು ತಿಳಿಯುತ್ತದೆ. ಮತ್ತು ಸ್ಥಳೀಯ ಪಾಳೆಯಗಾರರ ಕಾಲಕ್ಕೆ ಅಭಿವೃದ್ಧಿಗೊಂಡಿತೆಂದು ಹೇಳಲಾಗಿದೆ.
ದೇವಾಲಯದ ಒಳ ಭಾಗದಲ್ಲಿ ಮೇಣುಗೋಪಾಲ, ಭೈರವ, ಕೇಶವ, ಸೂರ್ಯ, ಗಣಪತಿ, ಮಹಿಷಮರ್ಧಿನಿ ವಿಗ್ರಹಗಳಿದ್ದು. ದೇವಾಲಯದ ಗರ್ಭಗುಡಿಯ ದಕ್ಷಿಣಕ್ಕೆ ದಕ್ಷಿಣಾಮೂರ್ತಿ, ಉತ್ತರಕ್ಕೆ ಚಂಡಿಕೇಶ್ವರಮೂರ್ತಿ, ಈಶಾನ್ಯಕ್ಕೆ ಈಶ್ಯಾನೇಶ್ವರ ದೇವರ ಮಂಟಪಗಳಿವೆ.ವಿಜಯನಗರದ ಆಳರಸರ ಕಾಲದಲ್ಲಾದ ಪ್ರಾಂಗಣದ ಮಂಟಪ ವಿಶಾಲವಾಗಿದ್ದು. ಮಂಟಪದ ಪೌಳಿ ಅನೇಕ ಚಿತ್ರಕಲಾ ಕೌಶಲ್ಯದಿಂದ ಶಿಲ್ಪಭಿತ್ತಿ ರಂದ್ರಜಾಲವನ್ನು ನೆಯ್ದುಕೊಂಡಿದೆ.
ಹೊಯ್ಸಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ರಾಮನಾಥೇಶ್ವರದ ದೇವಸ್ಥಾನದ ಮೇಲ್ವಿಚಾರಣೆಗೆ ನೀಡಿದ ಭೂದಾನ ಕುರಿತು ಎರಡು ಶಿಲಾಶಾಸನಗಳಲ್ಲಿ ಉಲ್ಲೇಖವಿದೆ. ರಾಮೇಶ್ವರ ದೇವಲಯದ ಗರ್ಭಗೃಹದ ಹೊರಭಿತ್ತಿಯಲ್ಲಿ ದಕ್ಷಿಣಾಮೂರ್ತಿ ದೇವಸ್ಥಾನದ ಹಿಂದಿರುವ ನಾಲ್ಕು ಕಲ್ಲುಗಳ ಮೇಲಿನ (ಅಗೂ. 46) ಶಾಸನ ಹಲವು ವಿಧಗಳಿಂದ ಕುತೂಹಲಕಾರಿಯಾಗಿದೆ. ರಾಮೇಶ್ವರ ದೇವಾಲಯದೊಳಗೆ ದಕ್ಷಿಣಾಮೂರ್ತಿ ಗುಡಿದ ಹಿಂದೆ ಒಂದರ ಪಕ್ಕ ಇನ್ನೊಂದರಂತೆ ನಿಲ್ಲಿಸಿದ ನಾಲ್ಕು ಬೇರೆ ಬೇರೆ ಕಲ್ಲುಗಳ ಮೇಲೆ ಶಾಸವನ್ನು ಕಂಡರಿಸಿರುವುದು ಒಂದು ಅರಪರೂಪದ ನಿದರ್ಶನವಾಗಿದೆ. ಈ ಶಾಸನವು ಕ್ರಿ.ಶ1250ರ ಅಕ್ಟೋಬರ್ 27 ಮತ್ತು 1251ರ ಜೂನ್ 21ರ ವೆಂದು ಎರಡು ದಿನಗಳನ್ನು ಹೊಂದಿದೆ. ಮೊದಲನೆಯ ತೇದಿಯಂದು ನಡುವೆ ನಡೆದಂತಹ ಘಟನೆಯನ್ನು ಮುಂದಿನ 8 ತಿಂಗಳ ಅನಂತರ ಸೂಚಿಸುತ್ತದೆ. ಹಿರಿಯ ಸಂಧಿ ವಿಗ್ರಹಿಯಾದ ಹಾಗೂ ಕೊಂಗಮಂಡಲದ ಅಧ್ಯಕ್ಷನಾದ ಬೊಮ್ಮಣ್ಣದಣ್ಣಾಯಕರ ಕೈಕೆಳಗಿದ್ದ ವಾಮರಸನ ಮಗ ಕಲ್ಲಯ್ಯನೆಂಬಾತ ರಾಮನಾಥದೇವರ ಪೂಜೆಗಾಗಿ ಹೂದೋಟವೊಂದನ್ನು ಮಾಡಿಸಲು ದೇವಾಲಯದ ಸ್ಥಾನಿಕರಿಂದ 95 ಕಂಬ ಭೂಮಿಯನ್ನು ಕ್ರಯಕ್ಕೆ ಪಡೆದು ದಾನ ನೀಡಿದ. ಇದರಲ್ಲಿ ಮೂವತ್ತು ಕೊಳಗ ತೋಟಗನ ಜೀವಿತಕ್ಕೆ ಸಂದಿತು. ತೋಟಕ್ಕೆ ಮತ್ತು ತೋಟಿಗನ ಮನೆಗೆ ತೆರಿಗೆಯನ್ನು ಮಾನ್ಯಮಾಡಲಾಯಿತು. ಕೆಲವು ತಿಂಗಳುಗಳ ಅನಂತರ ದತ್ತಿಯನ್ನು ಸ್ವಲ್ಪ ಮಾರ್ಪಡಿಸಲಾಯಿತಿ. ತೋಟಿಗನಿಗೆ ಕೊಟ್ಟಿದ್ದ 30 ಕೊಳಗ ಭೂಮಿಯನ್ನು ಈಗ ದೇವರಿಗೆ ಬಿಡಲಾಯಿತು. ಇದಕ್ಕೆ ಪ್ರತಿಯಾಗಿ, ಹೊಸದಾಗಿ 80 ಕಂಬ ಭೂಮಿಯನ್ನು ಸ್ಥಾನಿಕರಿಂದ ತತ್ಕಾಲೋಚಿತ ಕ್ರಯಕ್ಕೆ ಪಡೆದು ತೋಟಗನ ಜೀವಿತಕ್ಕಾಗಿ ನೀಡಲಾಯಿತು. ಅಲ್ಲದೆ, ಹದೋಟಕ್ಕೆ ನೀರುಣಿಸಲು ಬಳಸುವ ರಾಟಣಕ್ಕೆ ಹೂಡಿದ ಎತ್ತುಗಳ ಮೇವಿಗಾಗಿ ವರಗುಳಿಯ ವಾರ್ಷಿಕ ಸಿದ್ಧಾಯದಿಂದ 3 ಗದ್ಯಾಣಗಳನ್ನು ಮತ್ತು ನೆಲುವಾಗಿಲಿನ ವಾರ್ಷಿಕ ಆದಾಯದಿಂದ ಒಂದು ಗದ್ಯಾಣ ಮತ್ತು ಒಂದು ಹಣವನ್ನು ಕ್ರಮವಾಗಿ ಶ್ರೀಕರಣದ ನಾಕಣ್ಣ ವಿಜಯಣ್ಣನ ಅಳಿಯ ಸೋಮಣ್ಣ ಹಾಗೂ ಶ್ರೀ ಕರಣದ ಕಾವಣ್ಣನ ಮಗ ಮದುಕಯ್ಯ ಇವರುಗಳು ದಾನಕೊಟ್ಟರು.
ಈ ಶಾಸನವು ಹದಿನಾರು ಮೆಟ್ಟಿನ ಹಾಸಗಳೆಯ ಉದ್ದಳತೆಯ ಉಪಕರಣವನ್ನು ಉಲ್ಲೇಖಿಸುತ್ತದೆ. ಈ ಅಳತೆ ಕೋಲಿನಿಂದ ದಾನ ಭೂಮಿಯನ್ನು ಅಳೆಯಲಾಯಿತು. ಭೂಮಿಯ ಸೀಮಾವಿವರನ್ನು ತಿಳಿಸುವಾಗ ಅದು ಸಿದ್ಧನಾಥನ ದೇವಾಲಯವನ್ನು ಉಲ್ಲೇಖಿಸುತ್ತ. ಈ ವ್ಯವಹಾರದ ಸಂಬಂಧದಲ್ಲಿ ದಾನಿಯು ಸ್ಥಾನಿಕರಿಂದ ಭೂಮಿಯನ್ನು ಯಥೋಚಿತ ಬೆಲೆಗೆ ಕೊಂಡುಕೊಳ್ಳಬೆಕಾಯಿತೆಂಬುದನ್ನು ಗಮನಿಸಿದರೆ. ಆ ಭೂಮಿಭಾಗಗಳು ಸ್ಥಾನಿಕರ ಖಾಸಗಿ ಆಸ್ತಿಯಾಗಿತ್ತೆಂದು ಸ್ಪಷ್ಟವಾಗಿ ವಿದಿತವಾಗುತ್ತದೆ.
ಈ ದೇವಾಲಯದ ಬಳಪ್ರಾಕಾರದಲ್ಲಿ ರಂಗಮಂಟಪದ ಹೊರಭಿತ್ತಿಯ ಬಳಿ ದಕ್ಷಿಣದ ಕಡೆ ನೆಟ್ಟಿರು (ಅಗೂ 44) ಕ್ರಿ.ಶ.1252ರ ಶಾಸನವು ಕೂಡ ಶ್ರೀರಂಗಪಟ್ಟಣದಿಂದ ಆಳುತ್ತಿದ್ದ ಚಂಗಾಳ್ವದೊರೆಗಳಾದ ಸೋಮದೇವ ಮತ್ತು ಬೊಪ್ಪದೇವರು ನೀಡಿದ್ದ ದಾನವನ್ನು ಕುರಿತು ಪ್ರಸ್ತಾಪಿಸುತ್ತದೆ. ಈ ಶಾಸನ ಕೂಡ ಹಾನಿಗೀಡಾಗಿರುವುದರಿಂದ ವಿವರಗಳು ನಷ್ಟವಾಗಿವೆ. ಆದರೆ ಕಾವೇರೀ ತೀರದಲ್ಲಿ ರಾಮದೇವರ ವಿಗ್ರಹದ ಪ್ರತಿಷ್ಠಾಪನೆಗೆ ಪ್ರಾಯಶಃ ಇವರಿಬ್ಬರೇ ಕಾರಣಕರ್ತರೆಂದು ಕಾಣುತ್ತದೆ. ಕ್ರಿ.ಶ1245-46ರಲ್ಲಿ ಅವರು ಮಾಡಿದ ದಾನವಾದರೋ ಮೂಲದತ್ತಿಯ ಪುನರೂರ್ಜಿತವಾಗಿತ್ತು. ಮತ್ತೆ ಈಗ ಇವರಿಬ್ಬರೂ ಅರಸ ಮತ್ತು ರಾಯಸ ಕೂಸುಗಳ ಜೊತೆಗೂಡಿ ಮಾವನೂರು ಗ್ರಾಮವನ್ನು ದಾವಿತ್ತರಲ್ಲದೆ ದೇವಾಲಯದ ಮುಂದೆ ನಂದಿಕಂಬವನ್ನು ಪ್ರತಿಷ್ಠೆ ಮಾಡಿಸಿದರು.
ದೇವಾಲಯದ ಉತ್ತರ ದಿಕ್ಕಿನ ಹೊರ ಭಾಗದ ಗೋಡೆ ಮೇಲೆ(ಅಗೂ 48) ಕ್ರಿ.ಶ. 1383ನೆಯ ಅಕ್ಟೋಬರ್ 26ರ ಶಾಸನ ವಿಜಯನಗರ ಅರಸ ಎರಡನೆಯ ಹರಿಹರನ ಸೇವಕ ಕರಿಯ ಮಾಯಣ್ಣನು ರಾಮನಾಥಪುರ ಗ್ರಾಮವನ್ನು ಶ್ರೀ ರಾಮನಾಥ ಮತ್ತು ಶ್ರೀ ಗೋಪಿನಾಥ ದೇವರ ಪೂಜೆಗಾಗಿ ದತ್ತಿಕೊಟ್ಟು ಅದರ ಸುಂಕಗಳಾದ ಆಡುದರೆ, ಮಗ್ಗದರೆ, ಆನದೆರೆ, ಕುಮ್ಮರ-ಗಾಣಿಗರ- ನಾಯಿಂದರ ದೆರೆ (ಸುಂಕ) ಸಲ್ಲುವಂತೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ . ಈ ದೇವಾಲಯದ ತಾಂಡವೇಶ್ವರ ಸ್ವಾಮಿಯವರ ಉತ್ಸವ ವಿಗ್ರಹವನ್ನು ಮೀರ ರಾಜೈಯ್ಯನವರ ಮಗ ನಂಜರಾಜೈಯ್ಯನವರು ದಾನವನ್ನು ಮಾಡಿರುವ ವಿಷಯವನ್ನು (ಅಗೂ 71) ಶಾಸನ ತಿಳಿಸುತ್ತದೆ.
ಗ್ರಾಮದ ಗೋಗರ್ಭದ ಸಮೀಪದ ಬಂಡೆಯ ಮೇಲೆ (ಅಗೂ72) ಶಾಸನವು ಕ್ರಿ.ಶ.1607ರಲ್ಲಿ ರಾಮರಾಜ ತಿರುಮಲರಾಜನು ನಂಜರಾಯಪಟ್ಟಣದ ರುದ್ರಗಣನಿಗೆ ಸ್ಥಿರ ಶಾಸನವೊಂದನ್ನು ಕೊಡುವುದನ್ನು ಕಾಣುತ್ತೇವೆ. ಈ ದಾನಿಯನ್ನು ಕ್ರಮವಾಗಿ ಬೆಟ್ಟದಪುರ ಮತ್ತು ಕಿಲಗೆರೆಯ ಎರಡು ಶಾಸನಗಳಲ್ಲಿ ಕಾಣಿಸಿಕೊಳ್ಳುವ ಇದೇ ಹೆಸರಿನ ವ್ಯಕ್ತಿಯೆಂದು ಗುರುತಿಸಿದೆ.
ಈ ಗ್ರಾಮದಲ್ಲಿ ಆದಿಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯರು ಮತ್ತು ವ್ಯಾಸರಾಜರು ರಾಮನಾಥಪುರಕ್ಕೆ ಭೇಟಿ ನೀಡಿದ್ದಕ್ಕೆ ಕುರುಹುಗಳಿವೆ. ಆದಿಶಂಕರಾಚಾರ್ಯರು ಶ್ರೀರಾಮೇಶ್ವರ ದೇವಾಲಯದಲ್ಲಿ. ಇಂದ್ರಾಕ್ಷಿ ಎದುರಿಗೆ ಗ್ರಹ ಪೀಡಾದಿಗಳಿಗೆ ಮಾರಕವಾದ ತಾಮ್ರದ ಶ್ರೀಚಕ್ರ ಸ್ಥಾಪನೆಯನ್ನು ಮಾಡಿದ್ದಾರೆ.
ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಪ್ರಸಿದ್ಧ ಪುಷ್ಕರಿಣಿಗಲ್ಲಿ ಒಂದು “ವಹ್ನಿ ಪುಷ್ಕರಣಿ” ಇದೆ. ಇನ್ನೂ ಎರಡು ಕೆ.ಆರ್. ನಗರದ ಬಳಿಯಲ್ಲಿ “ಅರ್ಕಪುಪ್ಕರಣಿ” ತಮಿಳುನಾಡಿನ ಶ್ರೀ ರಂಗದಲ್ಲಿ “ಚಂದ್ರ ಪುಷ್ಕರಣಿ” ಇದೆ. ಈ ಪುಷ್ಕರಣಿಯಲ್ಲಿರುವ ಮೀನುಗಳು ದೇವತೆಗಳ ಅವರಾರವೆಂಬ ನಂಬಿಕೆಯಿದ್ದು ಎಂತಹ ಭಯಂಕರವಾದ ಪ್ರವಾಹ ಬಂದರೂ ಈ ಮೀನಿಗಳು ಮಾತ್ರ ಅತ್ತಿತ್ತ ಚಲಿಸದೆ ಇಲ್ಲಿಯೆ ಇದೆ. ಇಲ್ಲಗೆ ಬರುವ ಪ್ರವಾಸಿಗಾರು ಪುರಿ ಕಡ್ಲೆ ಕಾಯಿಯನ್ನು ಇಲ್ಲಿಯ ನೀರಿಗೆ ಎಸೆದರೆ ಬಾರಿ ಗಾತ್ರದ ಮೀನುಗಳು ಮೇಳಕ್ಕೆ ಬರುತ್ತವೆ. ಅವುಗಳನ್ನು ನೋಡಿ ಮಕ್ಕಳಿಗೆ ಆಗುವ ನಂದ ವರ್ಣನಾತೀತ. ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ಕ್ಷೇತ್ರಕ್ಕೆ ಆಗಮಿಸಿದಾಗ ಮೀನಿಗೆ ಮುಗುತಿಯನ್ನು ಚುಚ್ಚಿದ್ದರೆಂದು ಹೇಳುತ್ತಾರೆ. ಈ ಪುಷ್ಕರಣಿಯ ಒಂದು ಕಿ.ಮೀ ಅಂತರದಲ್ಲಿ ಯಾವುದೆ ರೀತಿಯ ಮೀನುಗಳನ್ನು ಹಿಡಿಯಬಾರದೆಂದು ಸರ್ಕಾರ ನಿಷೇಧಿಸಿದೆ.
ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ
ಈ ದೇವಾಲಯ ಚಿಕ್ಕದೇವರಾಜ ಒಡೆಯರ್ ಕಾಲದ್ದು ಎಂದು ಹೇಳಲಾಗಿದೆ. ಈ ಪ್ರತಿಮೆಯನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿಭುದೇಶ ತೀರ್ಥರು ಈ ಕ್ಷೇತ್ರಕ್ಕೆ ಬಂದು ಪೂರ್ವಾಭಿಮುಖವಾಗಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿದ್ದಾರು ಎಂದು ಕೂಡ ಹೇಳವಾಗುತ್ತದೆ. ಇಲ್ಲಿನ ನರಸಿಂಹ ಮೂರ್ತಿಯ ಮೇಲೆ ಲಕ್ಷ್ಮಿಯು ಕುಳಿತಿರುವುದನ್ನು ನಾವು ನೋಡ ಬಹುದಾಗಿದೆ.
ಮಾರ್ಗಶಿರ ಶುದ್ಧ ಷಷ್ಠಿಯೆಂದು ನಡೆಯು ರಥೋತ್ಸವ ಮೈಸೂರು ಸೀಮೆಯ ಜಾತ್ರೆಯ (ದನಗಳ) ಪೈಕಿ ರಾಮನಾಥಪುರದ ಜಾತ್ರೆಯೇ (ರಥೋತ್ಸವ) ಪ್ರಥಮವಾಗಿದೆ. ರಥವನ್ನು ವಿವಿಧ ಅಲಂಕಾರಗಳಿಂದ ಮರ್ಣರಂಜಿತವಾಗಿ ಅಲಂಕರಿಸಿ ರಥದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯನ್ನು ಪ್ರತಿಷ್ಠಪಿಸಿರುವ ರಥವನ್ನು ನೋಡಲು ಸಾವಿರಾರು ಯಾತ್ರಾರ್ಥಿಗಳು ಪಾಲ್ಗೊಂದು ಪೂಜಿಸುತ್ತರೆ. ಇಲ್ಲಿ ನಡೆಯುವ ದನಗಳ ಜಾತ್ರೆ ಸುಪ್ರಸಿದ್ಧವಾಗಿದ್ದ. ಇದು ರಥೋತ್ಸವ ನಡೆಯುವು ಮುಚ್ಚೆನೆ ಮುಗಿದು ಹೋಗಿರುತ್ತದೆ. ರಥೋತ್ಸವ ಜರುಗಿದ ದಿನದಿಂದ ಹಿಡಿದು ಒಂದು ತಿಂಗಳವರೆಗೂ ಜಾತ್ರೆ ನಡೆಯುತ್ತದೆ. ತಿಂಗಳ ನಂತರ ‘ತಿಂಗಳಶ್ರಷ್ಟಿ’ ತೇರು ಹರಿಯುತ್ತದೆ.ಏಪ್ರಿಲ್ ಮೇ ತಿಂಗಳ ವೈಶಾಖಮಾಸದಲ್ಲಿ ಇಂದ್ರಾಕ್ಷಮ ವಿಗ್ರಹದ ರಥೋತ್ಸವ ಇರುತ್ತದೆ. ಈ ಕ್ಷೇತ್ರದಲ್ಲಿ ಮಾಘ ಬಹುಳ ಮಹಾಶಿವರಾತ್ರಿ ಮರುದಿನ ಅಗಸ್ತ್ಯೇಶ್ವರ, ವೈಶಾಖ ಶುದ್ಧ ಮೃಗಶಿರ ನಕ್ಷತ್ರದಲ್ಲಿ ಪಟ್ಟಾಭಿರಾಮ ಮತ್ತು ವೈಶಾಖ ಶುದ್ಧ ಚತುರ್ದಶಿ ನರಸಿಂಹ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
***









ಬಸವನಗುಡಿಯ ಕಡಲೇಕಾಯಿ ಪರಿಷೆ

2018 ಡಿ.1ರಿಂದ 4ರವರೆಗೆ ಕಡಲೆಕಾಯಿ ಪರ್ವ
* ಟಿ.ಎಂ.ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ

ಇಂದು ಕೊನೆಯ ಕಾರ್ತೀಕ ಸೋಮವಾರ. ಶಿವನಿಗೆ ಶ್ರೇಷ್ಠವಾದ ಈ ದಿನದಂದು ರಾಜ್ಯದ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ನಡೆಯುತ್ತಿದ್ದರೆ, ಶಿವನ ವಾಹನ ಬಸವನ ತೃಪ್ತಿಗಾಗಿ ಸಿಲಿಕಾನ್ ಸಿಟಿ, ಬೆಂಗಳೂರು ನಗರದಲ್ಲಿ ಕಡಲೆಕಾಯಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಇದೇನಿದು ಕಡಲೇಕಾಯಿಗೂ ಜಾತ್ರೆಯೇ ಎಂದು ಹುಬ್ಬೇರಿಸಬೇಡಿ. ಇದು ಅಚ್ಚರಿ ಎನಿಸಿದರೂ ಸತ್ಯ. ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಬಡಾವಣೆ ಬಸವನಗುಡಿಯಲ್ಲಿ ಪ್ರತಿವರ್ಷ ಕೊನೆಯ ಕಾರ್ತೀಕ ಸೋಮವಾರದ ಹಿಂದಿನ ಭಾನುವಾರದಿಂದ 3 ದಿನಗಳ ಕಾಲ ಕಡಲೇ ಕಾಯಿ ಸಂತೆ ನಡೆಯುತ್ತದೆ. ಆದರೆ ಈ ಬಾರಿ ಒಂದು ವಾರ ಮೊದಲೇ ಬಸವನಗುಡಿ ರಸ್ತೆಯಲ್ಲಿ ಕಡಲೆಕಾಯಿ ಜಾತ್ರೆಯ ಸಂಭ್ರಮ ಮನೆ ಮಾಡುತ್ತಿದೆ. ರಸ್ತೆಯಂಚಿನಲ್ಲಿ ಈಗಾಗಲೇ ಅಂಗಡಿಗಳು, ತಲೆ ಎತ್ತುತ್ತಿವೆ.

ಆಧುನಿಕತೆ, ತಾಂತ್ರಿಕತೆಯ ನಡುವೆಯೂ ಸಂಪ್ರದಾಯ, ಪರಂಪರೆ ಹಾಗೂ ತನ್ನದೇ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಬೆಂಗಳೂರು ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ (ಜಾತ್ರೆ) ನಡೆಯುತ್ತಿದೆ. ಈ ಬಡಾವಣೆಯಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು 1786ರಲ್ಲಿ ಕಟ್ಟಿಸಿರುವ ದೊಡ್ಡ ಬಸವಣ್ಣನ ಗುಡಿಗೆ ಆಗಮಿಸುವ ರೈತರು ತಾವು ಬೆಳೆದ ಕಡೆಲೆಕಾಯಿಯ ಮೊದಲ ಬೆಳೆಯನ್ನು ಅರ್ಪಿಸುತ್ತಾರೆ. ಸನಿಹದಲ್ಲೇ ಇರುವ ದೊಡ್ಡ ಗಣಪನಿಗೂ ಕಡಲೆ ಕಾಯಿಯಿಂದಲೇ ಅಭಿಷೇಕ ಮಾಡಿಸುತ್ತಾರೆ. ಪರಿಷೆಯ ಮೊದಲ ದಿನ (ಭಾನುವಾರ) ಸಂಪ್ರದಾಯದಂತೆ ದೊಡ್ಡ ಬಸವನ ಉತ್ಸವ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಪ್ರತಿ ವರ್ಷ ಪರಿಷೆಗೆ ಚಾಲನೆ ನೀಡಲಾಗುತ್ತದೆ. 

ಅದೆಲ್ಲಾ ಸರಿ ಬಸವನಿಗೇಕೆ ರೈತರು ಕಡೆಲೆ ಕಾಯಿ ಅರ್ಪಿಸುತ್ತಾರೆ ಎನ್ನುತ್ತೀರಾ. ಐತಿಹ್ಯದ ಪ್ರಕಾರ ಬಹಳ ವರ್ಷಗಳ ಹಿಂದೆ ಈಗಿನ ಬಸವನಗುಡಿ ಹಾಗೂ ಅಂಚಿನ ಪ್ರದೇಶ ಸುಂಕೇನ ಹಳ್ಳಿ ಸೇರಿದಂತೆ ಹತ್ತು ಹತ್ತು ಹಳ್ಳಿಗಳಿಂದ ಕೂಡಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇ ಕಾಯಿ ಬೆಳೆಯುತ್ತಿದ್ದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತರು, ಸಾಮಾನ್ಯವಾಗಿ ಕಾರ್ತೀಕ ಮಾಸದಲ್ಲಿ ಕೊಯ್ಲಿಗೆ ಬರುವ ಕಡಲೆಕಾಯಿಯನ್ನು ಕಿತ್ತು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಎಲ್ಲ ರೈತರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿನ್ನುತ್ತಿತ್ತಂತೆ.

ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಬಸವ ತಿನ್ನುತ್ತಿರುವುದನ್ನು ಕಂಡು ಆಕ್ರೋಶಗೊಂಡ ರೈತರು ಬಡಿಗೆ ಹಿಡಿದು ಬಸವನ ಬೆನ್ನಟ್ಟಿದರು. ರೈತರ ಹೊಡೆತ ತಪ್ಪಿಸಿಕೊಳ್ಳಲು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿ ಬಂದು ಈಗ ದೊಡ್ಡ ಬಸವನ ಗುಡಿ ಇರುವ ಸ್ಥಳದಲ್ಲಿ ಬಂದು ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಸಾಕ್ಷಾತ್ ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದು ಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತತ್‌ ಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ಒಪ್ಪಿಸಿ ನೇವೇದ್ಯ ಮಾಡಿ, ಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಜಾತ್ರೆಗೆ ಬಸವನ ಭಕ್ತರು ಬಂದು ಬಂದು ಕಡಲೇ ಕಾಯಿ ತಿಂದರೆ, ನಂದಿ ತೃಪ್ತನಾಗುತ್ತಾನೆಂಬುದು ಹಲವು ಹಿರಿಯರ ನಂಬಿಕೆ. 

ರಾಜ್ಯದ ರೈತರಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶದ ರೈತರು, ವ್ಯಾಪಾರಿಗಳೂ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೆಂಗಳೂರಿನಲ್ಲಿ ಕರಗ ಎಷ್ಟು ಖ್ಯಾತಿಯೋ ಬಸವನ ಗುಡಿಯ ಕಡಲೆಕಾಯಿ ಪರಿಷೆಯೂ ಅಷ್ಟೇ ಪ್ರಖ್ಯಾತ.
ಕಾರ್ತೀಕದ ಕೊನೆಯ ಸೋಮವಾರದ ಹಿಂದಿನ ದಿನ ಹಾಗೂ ಮಾರನೇ ದಿನ ಅಂದರೆ ಭಾನುವಾರದಿಂದ ಮಂಗಳವಾರದವರೆಗೆ 3 ದಿನಗಳ ಕಾಲ ಬುಲ್‌ಟೆಂಪಲ್ ರಸ್ತೆಯ ಸುತ್ತ ಮುತ್ತಲ ಎಲ್ಲ ರಸ್ತೆಗಳ ಬದಿಯಲ್ಲೂ ಕಡಲೆಕಾಯಿ ರಾಶಿಯೇ ಕಾಣಿಸುತ್ತದೆ. ಈ ಜಾತ್ರೆ ನೋಡಲು ಜನಜಾತ್ರೆಯೂ ನೆರೆಯುವುದರಿಂದ. ಇಲ್ಲಿ ಗ್ರಾಮೀಣ ಸೊಗಡು ಮನೆ ಮಾಡುತ್ತದೆ. ವ್ಯಾಪಾರಿಗಳು ಕಡಲೆಕಾಯಿ ಜೊತೆಗೆ ನಾನಾ ಬಗೆಯ ವಸ್ತುಗಳನ್ನು ಮಾರಾಟಕ್ಕೆ ಇಡುತ್ತಾರೆ. ಮಕ್ಕಳನ್ನೂ ಹಿರಿಯರು ಕರೆದುಕೊಂಡು ಬರುವುದರಿಂದ ಮಕ್ಕಳ ಮನರಂಜನೆಗಾಗಿ ಗಿರಗಿಟ್ಟಲೆ, ತಿರುಗುವ ತೊಟ್ಟಿಲೇ ಮೊದಲಾದ ಹತ್ತು ಹಲವು ಸಂಚಾರಿ ಆಟಿಕೆಗಳೂ ಇಲ್ಲಿಗೆ ಬರುತ್ತವೆ. ದೂರದೂರುಗಳಿಂದ ಬರುವ ಜನ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಕಡಲೆ ಕಾಯಿ ಪರಿಷೆಯಲ್ಲಿ ಪಾಲ್ಗೊಂಡು ಹೊಸಬಗೆಯ ಆನಂದವನ್ನು ಅನುಭವಿಸುತ್ತಾರೆ.
ಬೆಂಗಳೂರು ನಗರ ಸಿಲಿಕಾನ್ ಸಿಟಿ. ಇಲ್ಲಿ ಯಾಂತ್ರಿಕತೆ, ತಾಂತ್ರಿಕತೆ ಎಷ್ಟು ಪ್ರಗತಿ ಸಾಸಿದ್ದರೂ ಜನರ ಧಾರ್ಮಿಕ ಭಾವನೆಗಳು ಅಚಲವಾಗಿವೆ ಎಂಬುದನ್ನು ಈ ಜಾತ್ರೆ ಸಾಬೀತು ಪಡಿಸುತ್ತದೆ.
ದೊಡ್ಡ ಬಸವನ ದೇವಾಲಯ : ಇಲ್ಲಿ ಮಾಗಡಿ ಕೆಂಪೇಗೌಡರ ಕಾಲದಲ್ಲಿ ಸುಂದರವಾದ ದೇವಾಲಯ ನಿರ್ಮಿಸಲಾಗಿದೆ.15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ಮೂರ್ತಿಯಿದೆ. ಕೆಳಗೆ ರಸ್ತೆಯ ಮಗ್ಗುಲಲ್ಲಿ ದೊಡ್ಡಗಣಪನ ಗುಡಿಇದೆ. ಪಕ್ಕದಲ್ಲೇ ಸುಂದರವಾದ ಕಹಳೆ ಬಂಡೆ (ಬ್ಯೂಗಲ್ ರಾಕ್) ಉದ್ಯಾನವಿದೆ.
****

ಸೌತಡ್ಕ ಮಹಾಗಣಪತಿ :


ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ.ಗೋಪಾಲಕರಿಗೆ ಕಾಡಿನಲ್ಲಿ ಒಂದು ಕಲ್ಲಿನ ಗಣಪತಿ ವಿಗ್ರಹ ಸಿಗುತ್ತದೆ. ಆ ಗಣಪತಿಯನ್ನು ಗೋಪಾಲಕರು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಇಂದು ಸೌತಡ್ಕ ಕ್ಷೇತ್ರ ಎಂದೆನಿಸಿದೆ.
ಗೋಪಾಲಕರು ಸೌತೆಕಾಯಿಯನ್ನು ಸಮರ್ಪಿಸಿದ್ದರಿಂದ ಸೌತಡ್ಕ ಎನ್ನುವ ಹೆಸರು ಬಂದಿತು. ಇಂದಿಗೂ ಕೆಲವರು ಇಲ್ಲಿನ ಗಣೇಶನಿಗೆ ಸೌತೆಕಾಯಿಯನ್ನು ಅರ್ಪಿಸುವ ಆಚರಣೆಯನ್ನು ಕಾಣಬಹುದು.
ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ.
ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ ೨ ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.
ಸಂಕಷ್ಟಿ ದಿನ ಹಾಗೂ ಚೌತಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಯ ಗಣೇಶನಿಗೆ ಬಹಳ ಕಾರಣಿಕವಿದ್ದು, ಭಕ್ತರಿಗೆಲ್ಲರಿಗೂ ಒಳ್ಳೆಯದ್ದೇ ಆಗಿದೆ ಎನ್ನುವುದು ಇಲ್ಲಿನ ಭಕ್ತರ ಅನಿಸಿಕೆ.
ವಿದ್ಯೆ ಕರುಣಿಸಿ ಹೋದವರಿಗೆ ವಿದ್ಯೆ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ಇದ್ದರೆ ಅದೂ ದೂರವಾಗುತ್ತಂತೆ. ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತದೆ ಎನ್ನಲಾಗುತ್ತದೆ. ಮಕ್ಕಳನ್ನು ಅನ್ನಪ್ರಾಶನಕ್ಕೂ ಇಲ್ಲಿಗೆ ಕರೆತರುತ್ತಾರೆ.
ಧರ್ಮಸ್ಥಳದಿಂದ ೧೬ ಕಿ.ಮೀ ದೂರದಲ್ಲಿದೆ ಸೌತಡ್ಕ. ಧರ್ಮಸ್ಥಳಕ್ಕೆ ಹೋಗೋ ಬಸ್‌ಗಳು ಸೌತಡ್ಕಕ್ಕೆ ಹೋಗುತ್ತದೆ. ಸುಬ್ರಹ್ಮಣ್ಯದಿಂದ 45 ಕಿ.ಮೀ, ಮಂಗಳೂರಿನಿಂದ 82 ಕಿ.ಮೀ ಮತ್ತು ಕೊಕ್ಕಡದಿಂದ 2 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ, ಸೌತಡ್ಕವನ್ನು ನೆಲ್ಯಾಡಿ ಮತ್ತು ಧರ್ಮಸ್ಥಳದ ನಡುವೆ ರಸ್ತೆಯ ಮೂಲಕ ಪ್ರವೇಶಿಸಬಹುದು.
***
ಶಕ್ತಿಶಾಲಿ ಶಿವನ ದೇವಾಲಯಗಳು🪷

🪷ತ್ರಿಮೂರ್ತಿ ದೇವರುಗಳಲ್ಲಿ ಶಿವನು ಕೂಡ ಒಬ್ಬನು ಹಾಗೂ ಅತ್ಯಂತ ಶಕ್ತಿಶಾಲಿ ದೇವ. ಕರ್ನಾಟಕದಲ್ಲೂ ನಾವು ಅನೇಕ ಶಿವನ ದೇವಾಲಯಗಳನ್ನು ನೋಡಬಹುದು. ಕರ್ನಾಟಕದಲ್ಲಿರುವ ಪ್ರಮುಖ ಶಿವನ ದೇವಾಲಯಗಳಾವುವು🪷

🔱ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ :

🌸ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬೀಚ್ಗೆ ಅಭಿಮುಖವಾಗಿ ಶಾಸ್ತ್ರೀಯ ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲ್ಪಟ್ಟ ದೇವಾಲಯ ಇದಾಗಿದೆ. ಈ ದೇವಾಲಯವು ಆತ್ಮಲಿಂಗವನ್ನು ಹೊಂದಿದೆ ಮತ್ತು ಕರ್ನಾಟಕದ ಮೋಕ್ಷದ ಏಳು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ🌸

🔱ಮುರುಡೇಶ್ವರ ದೇವಾಲಯ, ಭಟ್ಕಳ :

🌸ಕಂದುಕ ಬೆಟ್ಟದ ಮೇಲೆ ಮುರುಡೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ ಮತ್ತು ಮೂರು ಕಡೆ ಅರಬ್ಬಿ ಸಮುದ್ರದ ನೀರಿನಿಂದ ಆವೃತವಾಗಿದೆ. ಈ ದೇವಾಲಯವು 20 ಅಂತಸ್ತಿನ ಗೋಪುರವನ್ನು ಹೊಂದಿದೆ ಮತ್ತು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನವೆಂಬ ಪ್ರತೀತಿಗೆ ಪಾತ್ರವಾಗಿದೆ🌸

🔱ಮಂಜುನಾಥ ದೇವಸ್ಥಾನ, ಧರ್ಮಸ್ಥಳ :

🌸ಧರ್ಮಸ್ಥಳ ಮಂಜುನಾಥ ದೇವಾಲಯವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಈ ದೇವಾಲಯದಲ್ಲಿ ಶಿವನನ್ನು ಮುಖ್ಯ ಆರಾಧನಾ ದೇವನಾಗಿ ಪೂಜಿಸಲಾಗುತ್ತದೆ ಮತ್ತು ಜೈನ ಧರ್ಮದ ದೇವರುಗಳನ್ನು ಹೊಂದಿದೆ🌸

🔱ಶ್ರೀಕಂಠೇಶ್ವರ ದೇವಸ್ಥಾನ, ನಂಜನಗೂಡು :

🌸ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಕಪಿಲಾ ನದಿಯ ಬಲದಂಡೆಯಲ್ಲಿರುವ ನಂಜನಗೂಡು ಪಟ್ಟಣದಲ್ಲಿರುವ ಪುರಾತನ ಹಿಂದೂ ದೇವಾಲಯವಾಗಿದೆ. ನಂಜನಗೂಡನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ ಮತ್ತು ಶ್ರೀಕಂಠೇಶ್ವರ ದೇವರ ಪುರಾತನ ದೇವಾಲಯವು ಇದಾಗಿದೆ🌸

🔱ಕೋಟಿಲಿಂಗೇಶ್ವರ ದೇವಸ್ಥಾನ, ಕೋಲಾರ

🌸ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿರುವ ಕೋಟಿಲಿಂಗೇಶ್ವರ ದೇವಾಲಯವು ಪ್ರಪಂಚದಲ್ಲೇ ಅತಿ ದೊಡ್ಡ ಲಿಂಗವನ್ನು ಹೊಂದಿರುವ ಶಿವ ದೇವಾಲಯವಾಗಿದೆ. ಈ ದೇವಾಲಯವು 108 ಅಡಿ ಎತ್ತರದ ಬೃಹತ್ ಲಿಂಗವನ್ನು ಮತ್ತು 35 ಅಡಿ ಎತ್ತರದ ನಂದಿ ವಿಗ್ರಹವನ್ನು ಹೊಂದಿದೆ🌸


🔱ಬಡವಿಲಿಂಗ ದೇವಸ್ಥಾನ, ಹಂಪಿ :

🌸ಹಂಪಿಯಲ್ಲಿರುವ ಬಡವಿಲಿಂಗ ದೇವಾಲಯವು ಕರ್ನಾಟಕದಲ್ಲಿರುವ ಭಗವಾನ್ ಶಿವನ ದೇವಾಲಯವಾಗಿದೆ, ಇದು ಭಾರತದ ಅತಿ ಎತ್ತರದ ಶಿವಲಿಂಗಗಳಲ್ಲಿ ಒಂದಾಗಿದೆ🌸

🔱ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು :

🌸ಹೊಯ್ಸಳೇಶ್ವರ ದೇವಸ್ಥಾನವು ಹಳೇಬೀಡುನಲ್ಲಿರುವ ಅತಿ ದೊಡ್ಡ ಹಿಂದೂ ದೇವಾಲಯವಾಗಿದ್ದು, ಹೊಯ್ಸಳೇಶ್ವರ ಮತ್ತು ಸಂತಾಲೇಶ್ವರ ಶಿವಲಿಂಗಗಳ ಹೆಸರುಗಳಿಂದ ಶಿವನಿಗೆ ಸಮರ್ಪಿತವಾಗಿದೆ. ಹೊಯ್ಸಳೇಶ್ವರ ದೇವಸ್ಥಾನದ ಜೊತೆಗೆ ಹಳೇಬೀಡು ಕೇದಾರೇಶ್ವರ ದೇವಸ್ಥಾನವನ್ನು ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಪ್ರಾಯೋಜಿಸಿದನು🌸

🔱ವಿರೂಪಾಕ್ಷ ದೇವಸ್ಥಾನ, ಹಂಪಿ :

🌸ವಿರೂಪಾಕ್ಷ ದೇವಾಲಯವು ತುಂಗಭದ್ರಾ ನದಿಯ ದಡದಲ್ಲಿರುವ ಭಗವಾನ್ ಶಿವನ ರೂಪವಾದ ವಿರೂಪಾಕ್ಷ ದೇವರಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ನಿರ್ಮಿಸಲಾಯಿತು ಮತ್ತು ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಶಿವ ದೇವಾಲಯವಾಗಿದೆ.🌸

🔱ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ, ಬೆಂಗಳೂರು :

🌸ದ್ವಾದಶ ಜ್ಯೋತಿರ್ಲಿಂಗ ದೇವಾಲಯವು ಬೆಂಗಳೂರಿನ ಓಂಕಾರ್ ಹಿಲ್ಸ್ನಲ್ಲಿದೆ, ಇದು ಕರ್ನಾಟಕದ ಅತ್ಯಂತ ಭವ್ಯವಾದ ಮತ್ತು ದೈತ್ಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಹೊಂದಿದೆ ಮತ್ತು ಓಂಕಾರೇಶ್ವರ ಜ್ಯೋತಿರ್ಲಿಂಗವು ದೇವಾಲಯದ ಮುಖ್ಯ ಜ್ಯೋತಿರ್ಲಿಂಗವಾಗಿದೆ🌸

🔱ಶಿವೋಹಂ ಶಿವ ದೇವಾಲಯ, ಬೆಂಗಳೂರು :

🌸ಶಿವೋಹಂ ಶಿವ ದೇವಾಲಯವು 65 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಹೊಂದಿದೆ ಮತ್ತು ಬೆಂಗಳೂರಿನ ಜನಪ್ರಿಯ ಆಧ್ಯಾತ್ಮಿಕ ತಾಣವಾಗಿದೆ. ಈ ದೇವಾಲಯವು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿದೆ ಮತ್ತು ಮಹಾ ಶಿವರಾತ್ರಿಯಂದು 2 ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ🌸

🔱ಲಡ್ಖಾನ್ ದೇವಸ್ಥಾನ, ಐಹೊಳೆ :

🌸ಲಡ್ ಖಾನ್ ದೇವಾಲಯವು ಐಹೊಳೆಯಲ್ಲಿದೆ, ಇದು ಐಹೊಳೆಯ ಪ್ರಸಿದ್ಧ ದುರ್ಗಾ ದೇವಾಲಯದ ಸಮೀಪದಲ್ಲಿದೆ ಮತ್ತು ಇದು ಚಾಲುಕ್ಯ ರಾಜವಂಶದ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಪ್ರಮುಖದೇವಾಲಯವಾಗಿದೆ. ಈ ದೇವಾಲಯವು ನಂದಿ ಪ್ರತಿಮೆಯೊಂದಿಗೆ ಶಿವಲಿಂಗವನ್ನು ಹೊಂದಿದೆ ಮತ್ತು ಪಂಚಾಯತಾನ ಶೈಲಿಯಲ್ಲಿ ನಿರ್ಮಿಸಲಾಗಿದೆ🌸

🔱ಮಹಾದೇವ ದೇವಸ್ಥಾನ, ಇಟಗಿ :

🌸ಇಟಗಿಯಲ್ಲಿರುವ ಮಹಾದೇವ ದೇವಾಲಯವನ್ನು ಚಾಲುಕ್ಯ ಸಾಮ್ರಾಜ್ಯದ ರಾಜ 6ನೇ ವಿಕ್ರಮಾದಿತ್ಯನು ನಿರ್ಮಿಸಿದನು ಮತ್ತು ಸಂಪೂರ್ಣ ಪಾಶ್ಚಾತ್ಯ ಚಾಲುಕ್ಯ ಕಲೆಯ ಉತ್ತಮ ಉದಾಹರಣೆಯಾಗಿ ಇದನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಪ್ರಧಾನ ದೇವತೆಯಾಗಿ ಶಿವಲಿಂಗವನ್ನು ಹೊಂದಿದೆ, ದೊಡ್ಡಬಸಪ್ಪ ದೇವಾಲಯ, ಗುಡೆ ಮಹಾಲಿಂಗೇಶ್ವರ ದೇವಾಲಯ ಮತ್ತು ಕದ್ರಿ ಮಂಜುನಾಥ ದೇವಾಲಯಗಳು ಕರ್ನಾಟಕದ ಇನ್ನಿತರ ಕೆಲವು ಶಿವ ದೇವಾಲಯಗಳಾಗಿವೆ🌸

🙏"ಓಂ ನಮಃ ಶಿವಾಯ"🙏
***

muttagi village near bagalkot. a place to visit when you visit Yalagur or Bagalkot

ಮುತ್ತಗಿಯಲ್ಲಿ ಶ್ರೀ ಜಯತಿಥ೯ರ ಆರಾಧನೆ 


***

#ಶ್ರೀ #ಬ್ರಹ್ಮಲಿಂಗೇಶ್ವರ #ದೇವಸ್ಥಾನ #ಮಾರಣಕಟ್ಟೆ, #ಕುಂದಾಪುರ

 ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ. ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ. 

ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ದೇವಿಯಿಂದ ವರ ಪಡೆದು ಕಾರಣೀಕ ದೈವ  ಶ್ರೀ ಬ್ರಹ್ಮಲಿಂಗೇಶ್ವರನಾಗಿ  ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ. - 

#ಪೌರಾಣಿಕ #ಹಿನ್ನೆಲೆ:

          ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. 

ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ ಶಿಕ್ಷೆ ಮೂಕನಾದ, ದೇವಿಯ ಭಕ್ತನಾಗಬೇಕೆಂಬ ತುಡಿತದಿಂದ ಭಕ್ತನಾದ.
         
ದೇವಿಯನ್ನು ಸೇರಬೇಕು, ಮೋಕ್ಷ ಪಡೆಯಬೇಕೆಂಬ ಹಂಬಲ , ತಾಯಿಯನ್ನು ಮಹಾತ್ವಾಕಾಂಕ್ಷೆಯಿಂದ ವಿರೋಧಿಸಿ ಕುಕೃತ್ಯ ಎಸಗಿದ. ಕುಪಿತಳಾದ ಮಾತೆ ಬುದ್ಧಿಯ ಮಾತು ಕೇಳದ ಅಸುರನೊಂದಿಗೆ ಮಹಾರಣ. ರಾಕ್ಷಸ ಅಸುನೀಗಿದ ಈ ಸ್ಥಳವೇ ಮಾರಣಕಟ್ಟೆ . 

ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರನೆಂಬ ನಾಮವನ್ನಿತ್ತು, ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಅಂತಹ ಮಹಾಸ್ಥಳವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿ.
     
ಮುಂದೆ ಕೊಲ್ಲೂರಿಗೆ ಬಂದ ಶ್ರೀ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾ ಪುರುಷರ ಪಾದದೂಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು.
**



ದಕ್ಷಿಣಕಾಶಿಎಂದೇಪ್ರಸಿದ್ದಿಯಾಗಿರುವಶಿವಗಂಗೆಬೆಟ್ಟದವಿಶೇಷತೆ 

ಶಿವಗಂಗೆ ಒಂದು ಕಪ್ಪು ಗ್ರಾನೈಟ್ ಬೆಟ್ಟ ಇದು ಸಮುದ್ರ ಮಟ್ಟದಿಂದ ೧೩೮೦ ಮೀಟರ್ ಎತ್ತರದಲ್ಲಿ ಇದೆ.ಇದು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರ ಸ್ಥಳಗಳಲ್ಲಿ ಒಂದು.

ಇದು ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಡಾಬಸ್ ಪೇಟೆ ಇಂದ ಸುಮಾರು ೬ ಕಿ.ಮೀ ಹಾಗೂ ತುಮಕೂರಿನಿಂದ ಇಂದ 20 ಕಿಮಿ ದೂರದಲ್ಲಿದೆ.

ಬೆಟ್ಟದ ಮೇಲೆ #ಗಂಗಾಧರೇಶ್ವರ ದೇವಾಲಯವಿದೆ. ಬೆಟ್ಟದ ಪ್ರಾರಂಭದಲ್ಲಿ ಶಿವನ ದೇವಾಲಯವಿದೆ. 

ಇಲ್ಲಿ ಶಿವ ಲಿಂಗದ ಮೇಲೆ #ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎಂದು ಪ್ರತೀತಿ. 

ಹಾಗೆಯೆ ಇಲ್ಲಿ ಒಂದು ಸಣ್ಣ ಸುರಂಗವಿದೆ. ಈ ಸುರಂಗದಲ್ಲಿ ಮುಂದುವರೆದರೆ ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆ.

ಈ ಬೆಟ್ಟದಲ್ಲಿ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳವಿದೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ ೩೬೫ ದಿನಗಳೂ ನೀರು ದೊರೆಯುತ್ತದೆ.

ಹಾಗೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹವಿದೆ. 

ಇದನ್ನು ಪ್ರದಕ್ಷಿಣೆ ಹಾಕುವುದೆ ಒಂದು ಸಾಹಸದ ಕೆಲಸ. ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗು ಮತ್ತೊಂದು ಕಡೆ ಆಳವಾದ ಪ್ರಪಾತ. ನಂತರ ಮುಂದುವರೆದರೆ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯ ನೋಡಬಹುದು.

ಇಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳಿ ಗಂಟೆಗಳು. 

ಈ ಗಂಟೆಗಳನ್ನು ಕಟ್ಟಿದವರು ಎಂಟೆದೆಯ ಭಂಟರೇ ಇರಬೇಕು. ಇಲ್ಲಿ ನೋಡಬೇಕಾದ ಮತ್ತೊಂದು ಜಾಗ ನಾಟ್ಯ ರಾಣಿ ಶಾಂತಲೆಯು ಕೆಳಗೆ ಬಿದ್ದ ಜಾಗ. 

ಇಲ್ಲಿ #ಶ್ರೀ_ಹೊನ್ನಾದೇವಿ ದೇವಸ್ಥಾನವೂ ಅಷ್ಟೇ ಪ್ರಮುಖವಾದ ದೇವಸ್ಥಾನವಾಗಿದೆ. ಶ್ರೀ ಗಂಗಾಧರೇಶ್ವರ ಮತ್ತು ಶ್ರೀ ಹೊನ್ನಾದೇವಿ ದೇವಸ್ಥಾನಗಳು ಗವಿಗಳಲ್ಲಿವೆ.

ಪ್ರತಿ ವರ್ಷ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. 

ಆ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. 

ಆದೇ ಜಲವನ್ನು ವಾದ್ಯಗೋಷ್ಠಿಗಳ ಸಹಿತದೊಂದಿಗೆ ತಂದು ಅದೇ ಪವಿತ್ರವಾದ ನೀರಿನಿಂದ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ.

ಇಲ್ಲಿ #ಶಂಕರಾಚಾರ್ಯರ ಶಾಖಾ ಮಠವಿರುತ್ತದೆ. ಶಾರದಾಂಬೆಯ ದೇವಸ್ಥಾನವಿರುತ್ತದೆ. 

ತೋಪಿನ ಗಣೇಶ ಬೃಹದಾಕಾರದಲ್ಲಿರುತ್ತದೆ. 108 ಲಿಂಗಗಳನ್ನುಳ್ಳ ಅಗಸ್ತ್ಯರ ದೇವಸ್ಥಾನವಿರುತ್ತದೆ. ಪಾತಾಳ ಗಂಗೆ ಇದ್ದು ಸದಾ ನೀರಿನಿಂದ ತುಂಬಿರುತ್ತದೆ. 

ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತದೆ. ಬೇಸಿಗೆಯಲ್ಲಿ ನೀರು ಹೆಚ್ಚಾಗಿ ಮೇಲಕ್ಕೆ ಬರುತ್ತದೆ. 

ಈ ಕ್ಷೇತ್ರವನ್ನು “ದಕ್ಷಿಣ ಕಾಶಿ” ಎಂದೂ ಕರೆಯುತ್ತಾರೆ.

ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುವ ಶಿವಗಂಗೆಯ ಬೆಟ್ಟ, ಸಕಲ ಚರಾಚರಗಳಲ್ಲಿಯೂ ಸೃಷ್ಠಿಕರ್ತನ ಸಾನ್ನಿಧ್ಯವಿದೆ ಎಂಬ ಭಗವದ್ಗೀತೆಯನ್ನು ನೆನಪಿಸುವುದು ಶಿವಗಂಗೆಯ ಮತ್ತೊಂದು ವೈಶಿಷ್ಟ್ಯ.

ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುತ್ತದೆ.
***


Keshava temple , somanathapura,  ಸೋಮನಾಥಪುರ 

ಮೈಸೂರು ನಗರದಿಂದ ೩೦ ಕಿ.ಮಿ ದೂರದಲ್ಲಿರುವ ಒಂದು ಪಟ್ಟಣ. ಇದು ಹೊಯ್ಸಳರು ಕಟ್ಟಿಸಿದ ಚೆನ್ನಕೇಶವ ದೇವಾಲಯಕ್ಕೆ ಹೆಸರುವಾಸಿ. ಈ ದೇವಾಲಯವನ್ನು ೧೨೬೮ರಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ದಂಡನಾಯಕನಾಗಿದ್ದ ಸೋಮ ಎಂಬಾತನು ಕಟ್ಟಿಸಿದನು. ಇದು ಇಂದು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಬೆಳೆದಿದೆ.

ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು....ರಾಷ್ಟ್ರಕವಿ ಕುವೆಂಪು ತಮ್ಮ ಭಾವಪೂರ್ಣ ಕವನದ ಒಂದೇ ಒಂದು ಸಾಲಿನಲ್ಲಿ ಕರ್ನಾಟಕದ ಶಿಲ್ಪಕಲೆಗೆ ಸೂಕ್ತ ಗೌರವ ಮನ್ನಣೆ ನೀಡಿದ್ದಾರೆ. ಕರ್ನಾಟಕ ಕಲೆಗಳ ತವರು, ಶಿಲ್ಪಕಲೆಗಳ ಬೀಡು, ಬೇಲೂರು, ಹಳೆಬೀಡು, ಸೋಮನಾಥಪುರಗಳನ್ನು ನೋಡಿದಾಗ ಕುವೆಂಪು ಹೇಳಿದಂತೆ ಪ್ರತಿಯೊಬ್ಬ ಪ್ರವಾಸಿಗನೂ ಶಿಲ್ಪಿಯ ಕಲಾತ್ಮಕತೆಗೆ ತಲೆ ಬಾಗಿಯೇ ಬಾಗುತ್ತಾನೆ.ಇಂಥ ಒಂದು ಕಲಾಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹುಲ್ಲುಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾಲೋಕವೇ ತೆರೆದುಕೊಳ್ಳುತ್ತದೆ. ಜೀವಕಳೆಯಿಂದ ಕಂಗೊಳಿಸುತ್ತಿರುವ ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ, ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ.
ಐತಿಹ್ಯ: 13ನೆಯ ಶತಮಾನದಲ್ಲಿ ಸೋಮನಾಥಪುರ ಒಂದು ಪುಟ್ಟ ಅಗ್ರಹಾರವಾಗಿತ್ತು. ಚತುರ್ವೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬುದು ಇದರ ಪೂರ್ವ ಹೆಸರು. ಇಲ್ಲಿರುವ 7 ಶಾಸನಗಳು ಈ ಅಪೂರ್ವ ದೇವಾಲಯದ ಬಗ್ಗೆ ಹಾಗೂ ಕಲೆಗೆ ಹಾಗೂ ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ ಮಹತ್ವದ ಮಾಹಿತಿ ಒದಗಿಸುತ್ತವೆ. ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರ ಸುಮಾರಿನಲ್ಲಿ ನಿರ್ಮಿಸಿ, ತನ್ನ ಹೆಸರನ್ನೇ ಇಟ್ಟು ಸೋಮನಾಥಪುರವೆಂದು ಕರೆದ. ಪ್ರಶಾಂತವಾಗಿ ಕಾವೇರಿ ನದಿ ಹರಿಯುವ ಈ ಸ್ಥಳದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.
ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ಶಿಖರಪ್ರಾಯ: ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಮೂರು ಶಿಖರಗಳೇ. ಹೀಗಾಗೇ ಇದನ್ನು ತ್ರಿಕುಟಾಚಲವೆನ್ನುತ್ತಾರೆ. ಹದಿನಾರು ಕೋಣಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ದೇವಾಲಯ ರಮ್ಯತೆಯನ್ನು ನೂರ್ಮಡಿಗೊಳಿಸಿವೆ. ಎಲ್ಲ ಹೊಯ್ಸಳ ದೇವಾಲಯದಲ್ಲಿರುವಂತೆ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳು ಇಲ್ಲೂ ಇವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಮನಮೋಹಕ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರ ಗರ್ಭಗೃಹದಲ್ಲಿ ಜನಾರ್ದನ ದಕ್ಷಿಣ ಗರ್ಭಗೃಹದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹ ಇದೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ. ಇಂದು ಈ ದೇವಾಲಯದಲ್ಲಿ ಹಲವು ಭಗ್ನಗೊಂಡ ವಿಗ್ರಹಗಳನ್ನು ಕಂಡಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. 19ನೆಯ ಶತಮಾನದಲ್ಲಿ ಆಂಗ್ಲವಿದ್ವಾಂಸರು ಈ ದೇವಾಲಯದ ಶಿಲ್ಪಕಲಾವೈಭವ ಕಂಡು ಅದರ ಮಾಹಿತಿ ಮುದ್ರಿಸಿದ ಕಾರಣ, ಅಂದಿನ ಮೈಸೂರು ಅರಸರು ಈ ದೇವಾಲಯವನ್ನು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದರು. 1924ರಲ್ಲಿ ಬಿದ್ದುಹೋಗಿದ್ದ ಗೋಡೆಗಳ ದುರಸ್ತಿ ಮಾಡಿ, ದೇವಾಲಯ ಶಿಥಿಲವಾಗದಂತೆ ಭದ್ರಗೊಳಿಸಲಾಯಿತು. 1953ರಲ್ಲಿ ಈ ದೇವಾಲಯದ ಒಳಭಾಗದ ಅಪರಿಮಿತ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲೆಂದು ವಿದ್ಯುದ್ದೀಪದ ವ್ಯವಸ್ಥೆ ಮಾಡಲಾಗಿದೆ.
*****


ಇಷ್ಟಾರ್ಥಸಿದ್ದಿಗೆಹೆಸರು_ವಾಸಿ - ಪಂಚಪಕ್ಷಿಮಾರುತಿ_ಕ್ಷೇತ್ರ

#ಅಮೃತಘಳಿಗೆಯ ಕಾಲದಲ್ಲಿ ನಿರ್ಮಾಣವಾದ ದೇಗುಲ ಎಂಬ ಹೆಗ್ಗಳಿಕೆ ಪಂಚಪಕ್ಷಿ ಮಾರುತಿ ಕ್ಷೇತ್ರಕ್ಕಿದೆ.

#ವಿಜಯನಗರದ ಅರಸರ ಕಾಲದ್ದೆಂದು ಹೇಳಲಾಗುವ ಈ ದೇವಾಲಯ, #ಹಿಂದೂ_ಮುಸ್ಲಿಂ ಭಾವೈಕ್ಯತೆಯ ತಾಣವೂ ಆಗಿದೆ...

ಪಂಚ ಪಕ್ಷಿಶಾಸ್ತ್ರದ ಆಧಾರದ ಮೇಲೆ ನಿಮ್ಮ ಅಮೃತ ಗಳಿಗೆಯಲ್ಲಿ ತುಂಬಿದ ಕಾಯಿ ತಂದು ದರ್ಶನ ಮಾಡಿ, ದೇವರಲ್ಲಿ ಬೇಡಿಕೆ ಸಲ್ಲಿಸಿ, ಕಾಯಿಯನ್ನು ದೇಗುಲದಲ್ಲಿಟ್ಟು, ಎಡಗಡೆಯಿಂದ 5 ಬಾರಿ ಪ್ರದಕ್ಷಿಣೆ ಹಾಕಬೇಕು.

ಒಟ್ಟು 41 ದಿನಗಳ ಒಳಗೆ 3 ಬಾರಿ ದರ್ಶನ ಮಾಡಿದರೆ, ನೀವು ಅಂದುಕೊಂಡ ಕೆಲಸ ಆಗುವುದು ಶತಸಿದ್ಧ.

ಆಗ ನೀವಿಟ್ಟ ಕಾಯಿ ಹೊಡೆಯಿಸಿ, ಬಲಗಡೆಯಿಂದ 5 ಬಾರಿ ದರ್ಶನ ಮಾಬೇಕು. ಆರೋಗ್ಯ, ಉದ್ಯೋಗ, ಸಂತಾನ ಫ‌ಲ.. ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಈ #ಮಾರುತೇಶ್ವರನಲ್ಲಿ ನಂಬಿಕೆ ಇಟ್ಟು, ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಬೇಡಿಕೊಂಡರೆ ಸರ್ವ ಸಮಸ್ಯೆಗಳೂ ನಿವಾರಣೆ ಆಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ.

ಇಂಥ ದಿವ್ಯ ಶಕ್ತಿ,  ಶ್ರೀ ಪಂಚಪಕ್ಷಿ ಮಾರುತೇಶ್ವರನಿಗಿದೆ. 

ಈತ ಇರುವುದು #ಕೊಪ್ಪಳ ಜಿಲ್ಲೆಯಕುಷ್ಟಗಿತಾಲ್ಲೂಕಿನಎಸ್‌ಗಂಗನಹಾಳ ಎಂಬಲ್ಲಿ.

ರಾಜ್ಯ-ಹೊರ ರಾಜ್ಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಂಚ ಪಕ್ಷಿ ಮಾರುತೇಶ್ವ ದೇವರಿಗಿದ್ದಾರೆ.

ಹೀಗೆ ಸಾವಿರಾರು ಭಕ್ತರ  ಇಷ್ಟಾರ್ಥ, ಕೋರಿಕೆಗಳನ್ನು ಈಡೇರಿಸುವ ಪಂಚಪಕ್ಷಿ$ ಮಾರುತಿ ಮೂಲತಃ ಉದ್ಭವ ಮೂರ್ತಿ.

ದಕ್ಷಿಣಾಭಿಮುಖವಾಗಿ ನಿಂತಿರುವ ಈ ಪಂಚಪಕ್ಷಿ ಮಾರುತಿ ದೇಗುಲ,

ಮೂಲತಃ ವಿಜಯನಗರದ ಕೃಷ್ಣ ದೇವರಾಯ ಕಾಲದ್ದು.

#ತಾತಾ_ತಿರುಮಲಾಚಾರ್ಯರು ನಿರ್ಮಿಸಿದ್ದು.

ಕಾಲಾ ನಂತರದಲ್ಲಿ ಇದು ಅವಸಾನ ಹೊಂದಿತ್ತು.

ಗಂಗನಹಾಳದ #ಶುಕುರ್‌ಭಾಷ ಶರಣರ ಶಿಷ್ಯ ದಿ. ರುದ್ರಗೌಡ ಶರಣರು ಇದರ ಪುನರ್‌ ನಿರ್ಮಾತೃಗಳು!.

ಪಂಚಪಕ್ಷಿ ಸಮಯ ಅಂದರೆ ಅಮೃತ ಗಳಿಗೆಯಲ್ಲಿ ಮಾತ್ರ ಈ ದೇಗುಲ ನಿರ್ಮಾಣ ಮಾಡಿದ್ದು. ಈ ಗಳಿಗೆಯಲ್ಲಿ ಮೊದಲನೆಯದಾಗಿ ವಿಶ್ವವಿಖ್ಯಾತ ಜಗನ್ನಾಥ ಪುರಿ ದೇಗುಲ ಕಟ್ಟಲಾಗಿದೆ.

ಅದನ್ನು ಬಿಟ್ಟರೆ, ಅಮೃತ ಗಳಿಗೆಯಲ್ಲಿ ನಿರ್ಮಾಣವಾಗಿರುವ ದೇವಾಲಯ ಇದೊಂದೇ ಎನ್ನುತ್ತದೆ ಇತಿಹಾಸ. 

ಹೀಗಾಗಿ, ದೇಗುಲದ ಕಟ್ಟಡ ಕಾರ್ಯ ಪೂರ್ಣಗೊಳ್ಳಲಿಕ್ಕೆ 11 ವರ್ಷಗಳೇ ಬೇಕಾಯಿತಂತೆ.

ಈ ದೇಗುಲದ ಆವರಣದಲ್ಲಿ ಈ ಗುರು-ಶಿಷ್ಯರ ಸಮಾಗಮ ಸನ್ನಿಧಿ ಇದ್ದು, ಇದಕ್ಕೆ ನಿತ್ಯವೂ ಪೂಜೆ-ಪುನಸ್ಕಾರಗಳು ಸಲ್ಲುತ್ತವೆ. ಆ ಕಾರಣದಿಂದ ಈ ದೇವಾಲಯವು  ಹಿಂದೂ-ಮುಸ್ಲಿಂ ಭಾವೈಕ್ಯತೆಯ ತಾಣವೂ ಆಗಿದೆ. ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೂ ದರ್ಶನಕ್ಕೆ ಬರುವುದು ವಿಶೇಷ.
**

ಬಂಟ್ವಾಳ ತಾಲೂಕಿನ ಕಾರಿಂಜದ #ಕಾರಿಂಜೇಶ್ವರ ದೇವಸ್ಥಾನ 

ಕಾರಿಂಜದ ಬೆಟ್ಟದ ಮೇಲಿರುವ ಕಾರಿಂಜೇಶ್ವರ ದೇವಸ್ಥಾನವು ಸಮುದ್ರ ಮಟ್ಟದಿಂದ ಸುಮಾರು 1600 ಅಡಿ ಎತ್ತರದಲ್ಲಿದೆ. ಈ ಬೆಟ್ಟವು ಬೃಹತ್ ಬಂಡೆಗಳಿಂದ ರೂಪುಗೊಂಡಿದ್ದು ಕಪಿಗಳಿಗೆ ಆಶ್ರಯ ತಾಣ. ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುವ ಇಲ್ಲಿ ಶಿವ ಮತ್ತು ಪಾರ್ವತಿಗೆ ಪ್ರತ್ಯೇಕ ದೇವಸ್ಥಾನವಿರುವುದು ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯ ದೇವಸ್ಥಾನವಿದೆ.

ಇದು ಧಾರ್ಮಿಕವಾಗಿ ನಾಲ್ಕು ಯುಗಗಳಲ್ಲಿ ವಿವಿಧ ಹೆಸರುಗಳಿಂದ ಅಸ್ತಿತ್ವದಲ್ಲಿತ್ತು ಮತ್ತು ಭೂ ಕೈಲಾಸ ಎಂಬ ಪ್ರತೀತಿಯನ್ನು ಕೂಡ ಹೊಂದಿದೆ. ಈ ಕ್ಷೇತ್ರವನ್ನು ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮಶೈಲವೆಂದು ಕರೆಯುತ್ತಿದ್ದರೆಂಬ ಐತಿಹ್ಯವಿದೆ. ಇಡೀ ಬೆಟ್ಟ ಪ್ರದೇಶ ಸುಮಾರು 25 ಎಕರೆ ಜಾಗದಲ್ಲಿ ವ್ಯಾಪಿಸಿದೆ. ಶ್ರೀಕ್ಷೇತ್ರವನ್ನು ಕೊಡ್ಯಮಲೆ ಎಂಬ ಹೆಸರಿನ ದಟ್ಟಅರಣ್ಯ ಆವರಿಸಿಕೊಂಡಿದೆ. ಬೆಟ್ಟದ ಬುಡದಲ್ಲಿ ಗದೆಯ ಆಕಾರದ ವಿಶಾಲ  ಗದಾತೀರ್ಥ’ ಕಾಣಸಿಗುತ್ತದೆ.

ಬೆಟ್ಟದ ಸುಮಾರು 200 ಮೆಟ್ಟಿಲು ಹತ್ತಿ ಪಾರ್ವತಿ  ದೇವಸ್ಥಾನವನ್ನು , ಅಲ್ಲಿಂದ ಮುಂದೆ ಮತ್ತೆ 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿ ಪವಿತ್ರ ಐತಿಹಾಸಿಕ ಶಿಲಾಮಯ ಶಿವ ದೇವಸ್ಥಾನ ಕಾಣಸಿಗುತ್ತದೆ. ಹೋಗುವ ದಾರಿಯ ಮೆಟ್ಟಿಲುಗಳ ಪಕ್ಕದಲ್ಲಿ ಉಂಗುಷ್ಟ ತೀರ್ಥ, ಜಾನು ತೀರ್ಥ ಸಿಗುತ್ತದೆ.  ಆ ಕೆರೆಗಳನ್ನು ಹಾಗೂ ಗದಾತೀರ್ಥವನ್ನು ಮಹಾಭಾರತ ಕಾಲದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆಯಿದೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ವಿಶೇಷ. ದೇವಾಲಯದ ಪಕ್ಕದಲ್ಲಿರುವ ಹಂದಿಕೆರೆ ಅರ್ಜುನನಿಂದಾಗಿ ಸೃಷ್ಟಿಯಾಯಿತು ಎಂಬ ಪ್ರತೀತಿ ಇದೆ.

ಬೆಟ್ಟದ ತುದಿಯಲ್ಲಿರುವ ಶಿವ ದೇವಸ್ಥಾನದ ಬಲಭಾಗದಲ್ಲಿ ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲು ಇದೆ.  ಸತ್ಯವಂತರಾಗಿದ್ದರೆ ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿನ ಮೇಲೆ ಹಾರಲು ಆಗುತ್ತದೆ. ಒಂದು ವೇಳೆ  ಮಾತು ಸುಳ್ಳಾದರೆ ಹಾರಲಾಗದೆ ಬೆಟ್ಟದಿಂದ ಕೆಳಗೆ ಬಿದ್ದು ಸಾಯುತ್ತಾರೆ ಎನ್ನುವ ಪ್ರತೀತಿ ಇದೆ. ಮಹಾ ಪೂಜೆಯ ಬಳಿಕ ವಾನರ ಸೇನೆಗೆ ನೈವೇದ್ಯ ನೀಡುವುದು ಇಲ್ಲಿನ ವಿಶೇಷ. 

ಪ್ರತಿವರ್ಷದ ಆಟಿ(ಭೀಮನ) ಅಮವಾಸ್ಯೆಯಂದು ಸಹಸ್ರಾರು ಭಕ್ತವೃಂದ ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ. ಇಲ್ಲಿಯ ತೀರ್ಥಸ್ನಾನದಿಂದ ಮೈಮೇಲಿನ ಕೆಡು ಸೇರಿದಂತೆ ಚರ್ಮ ರೋಗಗಳು ದೂರವಾಗುವುದಲ್ಲದೆ ನವ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದಲ್ಲಿ ಈ ದೇವಸ್ಥಾನವಿದೆ. ಬಂಟ್ವಾಳದ BCರೋಡಿನಿಂದ 15 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ, ಬಂಟ್ವಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿದಾಗ ಸಿಗುತ್ತದೆ. ಅವಕಾಶ ಸಿಕ್ಕಾಗ ಶಿವಪಾರ್ವತಿ ಭೇಟಿಯಾದ ಈ ಪವಿತ್ರ ಜಾಗದ ದರ್ಶನ ಮಾಡಿ.🙏
***


Anandavana Agadi
10 kms from Haveri on the way to Hosaritti/Savanur

26 June 2021 
Jyeshya Bahula Dwiteeya ಶ್ರೀಚಿದಂಬರಮೂರ್ತಿನಾಂ ಪು (ಆನಂದವನ ಅಗಡಿ).
SHRI CHIDAMBARA MURTYNAM PU (ANANDAVANA - AGADI).
******


Channakeshava swamy Temple, near Dudda, Hassan District

ನಾಸ್ಥಾ ಧಮೇ ನ ವಸುನಿಚಯೇ ನೈವ ಕಾಮೋಪಭೋಗೇ ಯದ್ಯದ್ಭಾವ್ಯಂ ಭವತು ಭಗವನ್ ಪೂರ್ವಕರ್ವನುರೂಪಂ |
ಏತತ್ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ ತ್ವತ್ಪಾದಾಂಭೋರುಹಯುಗಗತಾ
ನಿಶ್ಚಲಾ ಭಕ್ತಿರಸ್ತು || 5 ||
‘ನನಗೆ ಧರ್ಮದಲ್ಲಿ ಆಸಕ್ತಿಯಿಲ್ಲ, ಧನರಾಶಿಯಲ್ಲಿಯೂ ಇಲ್ಲ, ಕಾಮಗಳ ಉಪಭೋಗದಲ್ಲಂತೂ ಇಲ್ಲವೇ ಇಲ್ಲ; ಎಲೈ ಭಗವಂತನೆ, ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳಿಗೆ ಅನುಗುಣವಾಗಿ ಏನೇನು ಆಗಬೇಕೋ ಅದೆಲ್ಲ ಆಗಲಿ! ನನಗೆ ಅತ್ಯಂತವಾಗಿ ಬೇಕಾಗಿರುವುದೆಂದು ನಿನ್ನನ್ನು ಬೇಡಿಕೊಳ್ಳುವುದು ಯಾವುದೆಂದರೆ ಜನ್ಮಜನ್ಮಾಂತರದಲ್ಲಿಯೂ ನಿನ್ನ ಚರಣಕಮಲ ಯುಗದಲ್ಲಿಯೇ ನಿಶ್ಚಲವಾದ ಭಕ್ತಿಯೊಂದಿರಲಿ!’ (ಅನುವಾದ: ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು). ಶ್ರೀ ಕೇಶವನ ಪಾರಮ್ಯವನ್ನು ಸಾರುವ ಮೇಲಿನ ಶ್ಲೋಕವು ಶ್ರೀ ಕುಲಶೇಖರಾಚಾರ್ಯ ವಿರಚಿತ ಮುಕುಂದಮಾಲೆಯದು.
ಹಾಸನದ ದುದ್ದ ಹೋಬಳಿಯ ಹೊನ್ನಾವರ ಎಂಬ ಗ್ರಾಮದಲ್ಲಿ ಶ್ರೀ ಚನ್ನಕೇಶವಸ್ವಾಮಿಯ ದೇವಾಲಯವಿದೆ. ಈ ದೇವಾಲಯವು ಹೊಯ್ಸಳರ ದೊರೆ ವಿಷ್ಣುವರ್ಧನನ ಕಾಲದಲ್ಲಿ ಕೊನೆಯ ಶಂಕರ ದಂಡನಾಥನಿಂದ 1149ರಲ್ಲಿ ಲೋಕಾರ್ಪಣೆಯಾಗಿದೆ ಎಂದು ದೇವಾಲಯದ ಶಾಸನಗಳಿಂದ ತಿಳಿದುಬರುತ್ತದೆ. ಇಲ್ಲಿನ ಮಣ್ಣಿನ ಫಲವತ್ತತೆಯ ಹಿನ್ನೆಲೆಯಲ್ಲಿಯೇ ಈ ಗ್ರಾಮವು ಹೊನ್ನಾವರ ಎಂಬ ಹೆಸರನ್ನು ಪಡೆದಿರಬಹುದು. ಉತ್ತಮವಾದ ಫಸಲಿನ ಆಗರವಾಗಿಯೂ ಹೊನ್ನಾವರ ಎಂದು ಆಗಿರಬಹುದು ಎಂದು ಊಹಿಸಲು ಸಾಧ್ಯವಿದೆ.
ದೇವಾಲಯವು ಸಹಜ ಹೊಯ್ಸಳ ಶೈಲಿಯಲ್ಲಿದ್ದು, ಮುಖಮಂಟಪ – ನವರಂಗ – ಅಂತರಾಳ – ಗರ್ಭಗೃಹಗಳನ್ನು ಒಳಗೊಂಡಿದೆ. ನವರಂಗದ ಮೇಲ್ಚಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬುಶಿಲ್ಪಗಳಿವೆ. ದೇವಾಲಯದ ಪ್ರವೇಶದ್ವಾರ ಮತ್ತು ಗರ್ಭಗೃಹದ ಮೇಲ್ಭಾಗದಲ್ಲಿ ಅಪರೂಪದ ದ್ವಾರಲಕ್ಷ್ಮಿಯ ವಿಗ್ರಹವಿದೆ. ಎರಡು ಆನೆಗಳು ದೇವಿಯ ಪಾದಕ್ಕೆ ನಮಿಸುತ್ತಿದ್ದರೆ, ಚಾಮರಧಾರಿಣಿಯರು ಚಾಮರಸೇವೆ ಮಾಡುತ್ತಿರುವ ಈ ಶಿಲ್ಪ ಮೋಹಕ ವಾಗಿದೆ. ತುದಿಯಲ್ಲಿರುವ ಎರಡು ಸಿಂಹಗಳ ಭಂಗಿ ವಿಶೇಷವಾಗಿದೆ.
ದೇವಾಲಯದ ಮುಂದೆ ಐವತ್ತು ಸಾಲುಗಳ ಶಾಸನವಿದೆ. ಶತ್ರುಗಳ ಹಿಡಿತದಿಂದ ಬಿಡಿಸಿ ಹೊಯ್ಸಳರ ಚಕ್ರವರ್ತಿ ಒಂದನೇ ನರಸಿಂಹನ (ವಿಷ್ಣುವರ್ಧನನ ಮಗ) ಪಟ್ಟಾಭಿಷೇಕಕ್ಕೆ ಕಾರಣಕರ್ತನಾದ ಮಹಾಪ್ರಧಾನ ಹೆಗ್ಗಡೆ ಲಕ್ಷ್ಮಯ್ಯ ದೇವಾಲಯಕ್ಕೆ ಬಿಟ್ಟ ದಾನಶಾಸನದಿಂದ ಕೆಲವು ವಿಚಾರಗಳು ತಿಳಿದುಬರುತ್ತದೆ. ಶಾಸನದ ಧ್ಯಾನಶ್ಲೋಕದಲ್ಲಿ; ಮೂರು ಲೋಕಗಳಲ್ಲೂ ಪೂಜಿತನಾದ ಸರ್ವಕರ್ಮಗಳಿಗೂ ಮತ್ತು ಅವುಗಳ ಫಲಾಫಲಗಳಿಗೂ ಸಾಕ್ಷೀಭೂತನಾದ ಆ ಪರಮಾತ್ಮ ಕೇಶವ ಮತ್ತು ಶಿವನನ್ನು ನಿತ್ಯವೂ ನಮಸ್ಕರಿಸುತ್ತೇನೆ’ ಎಂಬ ಸಾಲುಗಳಿವೆ. ದಾನಶಾಸನದ ಅಂತಿಮ ಚರಣದಲ್ಲಿ, ‘ನಾನು ದೇವಾಲಯಕ್ಕೆ ನೀಡಿರುವ ದಾನವು ಶಾಶ್ವತವಾಗಿದ್ದು, ಯಾರಿಂದಲೂ ಅಪಹರಿಸಲ್ಪಡದೆ ಪರಮಾತ್ಮನ ಸೇವೆಗೆ ಅರ್ಪಿತವಾಗಲಿ’ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ‘ಈ ದಾನವನ್ನು ಅಪಹರಿಸುವ ವ್ಯಕ್ತಿಯು ಅರವತ್ತು ಸಹಸ್ರ ವರ್ಷಗಳ ಕಾಲ ಭೂಮಿಯಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ’ ಎಂಬ ಎಚ್ಚರಿಕೆಯಿದೆ.
ಇಷ್ಟೆಲ್ಲ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಹಿರಿಮೆ ಹೊಂದಿರುವ ಈ ದೇವಾಲಯವು ಸಂಪೂರ್ಣ ಅವನತಿಯ ಹಂತದಲ್ಲಿತ್ತು. ಈ ಬಗ್ಗೆ ಎಚ್ಚೆತ್ತ ಊರಿನ ಜನತೆ ಮತ್ತು ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ, ಇವರ ಪ್ರಯತ್ನದಿಂದ ಎರಡು ವರ್ಷಗಳ ಹಿಂದೆ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಇಲಾಖೆಯು ಒಂದು ಕೋಟಿ ರೂ. ವೆಚ್ಚದಲ್ಲಿ ದೇವಾಲಯದ ಜೀಣೋದ್ಧಾರ ಮಾಡಿದೆ.
| ಟಿ.ವಿ. ನಟರಾಜ್ ಪಂಡಿತ್ ಹಾಸನ
***


ಕುಕ್ಕೆ ಸುಬ್ರಮಣ್ಯ kukke subramanya near Dharmastala

99% ಜನರಿಗೆ ಕುಕ್ಕೆ ಸುಬ್ರಮಣ್ಯ ಹೋದವರಿಗೆ ಈ ವಿಷಯವೇ ಗೊತ್ತೇ ಇಲ್ಲ.. ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ

ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ.

ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟ್, ಬನಿಯಾನುಗಳನ್ನು ತೆಗೆಯಬೇಕಾಗುವುದು.

ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.

ನಮ್ಮ ಸುತ್ತಮುತ್ತಲೂ ಸಾಕಷ್ಟು ಇತಿಹಾಸ ಪ್ರಸಿದ್ಧ ಹಾಗೂ ಪೌರಾಣಿಕವಾದ ಹಿನ್ನಲೆಯುಳ್ಳ ದೇವಾಲಯಗಳು ಇವೆ. ಅದರ ಜೊತೆಗೆ ದೇವಾಲಯದ ಸುತ್ತಲೂ ಗುಹೆಗಳು ಇರುವುದನ್ನು ಕಾಣುತ್ತೇವೆ. ಅಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಮಣ್ಯ ದೇವಾಲಯವೂ ಒಂದು. ಸರ್ಪದೋಷ ನಿವಾರಣೆಗೆ ಹೆಸರಾದ ದೇವಾಲಯವೂ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿರುವ ತಾಣ.ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶದಲ್ಲಿ ಸುಬ್ರಮಣ್ಯ ಸ್ವಾಮಿ ನೆಲೆಸಿದ್ದು,ಸರ್ಪದೋಷ ನಿವಾರಣೆ ಮಾಡುತ್ತಾ ನಂಬಿ ಬಂದ ಭಕ್ತರಿಗೆ ಅನುಗ್ರಹ ನೀಡುತ್ತಾ ಇಷ್ಟಾರ್ಥಗಳನ್ನು ಸಿದ್ಧಿಸುತ್ತಾನೆ ಇಲ್ಲಿನ ಸುಬ್ರಮಣ್ಯ ಸ್ವಾಮಿ. ಇನ್ನು ಇಲ್ಲೊಂದು, ರಹಸ್ಯಮಯ ತಾಣವಿದೆ. ಇದಕ್ಕೆ ಬಿಲದ್ವಾರ ಗುಹೆ ಎಂಬ ಹೆಸರಿದೆ.

ಇದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದ ಕುಮಾರ ನದಿಗೆ ಹೋಗುವ ದಾರಿಯಲ್ಲಿದ್ದು, ನಾಗಗಳ ರಾಜ್ಯ ವಾಸುಕಿಯು ಗರುಡ ದೇವನಿಂದ ರಕ್ಷಿಸಿಕೊಳ್ಳಲು ಈ ಗುಹೆಯಲ್ಲಿ ಅಡಗಿ ಕುಳಿತಿದ್ದ ಎನ್ನಲಾಗಿದೆ.ಇನ್ನು,ನೈಸರ್ಗಿಕವಾಗಿ ನಿರ್ಮಾಣವಾಗಿರುವ ಈ ಬಿಲದ್ವಾರ 10 ಕ್ಕಿ. ಮೀ. ಉದ್ದ 35 ಅಡಿ ಆಳವನ್ನು ಹೊಂದಿರುವ ಈ ಗುಹೆ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿದ್ದು ವಿಶೇಷವಾಗಿದೆ. ಆದರೆ ಈ ಗುಹೆಯೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮಣ್ಣು ಕುಸಿದು ಬಿದ್ದು ಅರ್ಧದಷ್ಟು ಮಾತ್ರ ಚಲಿಸಲು ಯೋಗ್ಯವಾಗಿದೆ.ಈ ಗುಹೆಗೆ ಹಿಂದೆ ಪೌರಾಣಿಕ ಕಥೆಯು ಇದ್ದು,ಋಷಿ ಕಶ್ಯಪ ಮುನಿಗೆ ಹದಿಮೂರು ಜನ ಪತ್ನಿಯರು.ಅವರೆಲ್ಲರೂ ಅಕ್ಕ-ತಂಗಿಯರು. ಅವರಲ್ಲಿ ಕದ್ರು ಮತ್ತು ವಿನುತಾ ಇಬ್ಬರು. ಒಂದು ದಿನ ವಿನುತಾ ನಂದಿಗೆ ಮೋಸದ ಪಂದ್ಯ ಕಟ್ಟುತ್ತಾಳೆ.

ಅದರಲ್ಲಿ ತನ್ನ ಮಕ್ಕಳಾದ ಸರ್ಪಗಳ ಸಹಾಯದಿಂದ ತಾನೆ ಜಯಶಾಲಿಯಾಗುತ್ತಾಳೆ. ಇದನ್ನು ತಿಳಿದ ವಿನುತಳ ಮಗ ಗರುಡನಿಗೆ ಕೋಪ ಬರುತ್ತದೆ. ತನ್ನ ತಾಯಿ ವಿನುತಾಳನ್ನು ಮೋಸದಿಂದ ಗೆದ್ದಿರುವ ಸರ್ಪಗಳ ವಿರುದ್ಧ ಹರಿಹಾಯುತ್ತಾನೆ. ಆಗ ಸಾವಿರಾರು ನಾಗಗಳನ್ನು ಹಿಡಿದು ಬಡಿದು ಪ್ರಾಣ ತೆಗೆದು ತಿಂದು ಹಾಕುತ್ತಾನೆ ಗರುಡ. ಗರುಡನಿಂದ ಹೆದರಿ ಶೇಷನಾಗ ಪಾತಾಳ ಸೇರುತ್ತಾನೆ. ಅನಂತನು ಕೂಡ ವೈಕುಂಠಕ್ಕೆ ಹಾರಿ ತನ್ನ ಜೀವ ಉಳಿಸಿಕೊಳ್ಳುತ್ತಾನೆ. ಅದರಂತೆ ಇನ್ನುಳಿದ ನಾಗಗಳು ಶಿವನ ಕೈ, ಕಾಲು, ಕೊರಳನ್ನು ಸುತ್ತಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತವೆ. ಕಾಳಿ ಎಂಬ ಹಾವು ನಂದಗೋಕುಲದಲ್ಲಿ ಅಡಗಿದರೆ, ಶಂಕಪಾಲ, ಭೂಧರ ಅನಘಾದಿ ಬೇರೆಬೇರೆಯಾಗಿ ಅಡಗುತ್ತವೆ.

ಆದರೆ ‘ವಾಸುಕಿ ‘ ಎಂಬ ಸರ್ಪದೇವಾ ಗರುಡನ ಬಯಕ್ಕೆ ಸಹ್ಯಾದ್ರಿಯ ತಪ್ಪಲಿನ ಬಿಲದ್ವಾರ ದಲ್ಲಿ ಅಡಗುತ್ತಾನೆ. ಅಡಗಿದ ತಾಣವನ್ನು ಅರಿತ ಗರುಡ ದೇವ ವಾಸುಕಿಯೊಂದಿಗೆ ದೊಡ್ಡ ಯುದ್ಧವನ್ನೇ ಮಾಡುತ್ತಾನೆ.ಆಗ ತಂದೆ ಕಶ್ಯಪ ಯುದ್ಧವನ್ನು ತಡೆದು ನಿಲ್ಲಿಸಿ, ವಾಸುಕಿಯಿಂದ ಲೋಕಕಲ್ಯಾಣವಾಗುವ ಕೆಲಸವಾಗಬೇಕಿದೆ, ಆದ್ದರಿಂದ ಆತನನ್ನು ಉಳಿಸಲೆಂದು ಗರುಡನನ್ನು ಸಂತೈಸಿ ವಾಪಸ್ಸು ಕಳುಹಿಸುತ್ತಾನೆ. ತನ್ನ ಹಸಿವನ್ನು ನೀಗಿಸುವಂತೆ ಗರುಡ ದೇವ ತಂದೆ ಕಶ್ಯಪನಿಗೆ ಕೇಳಿದಾಗ, ಮನಿಲಾ ದ್ವೀಪದಲ್ಲಿ ಇರುವ ದುಷ್ಟ ಬೇಡರನ್ನು ಮತ್ತು ಹಾವುಗಳನ್ನು ತಿಂದು ಬದುಕು ಎಂದು ಗರುಡನಿಗೆ ಹೇಳುತ್ತಾನೆ.ಅದರಂತೆ ಗರುಡ ದೇವ ಮನಿಲಾ ದ್ವೀಪಕ್ಕೆ ಹೋಗುತ್ತಾನೆ.

ಇನ್ನೊಂದೆಡೆ,ವಾಸುಕಿ ತನ್ನ ಜೀವ ಹೆದರಿಕೆಯನ್ನು ನೀಗಿಸು ಎಂದು ತಂದೆಯ ಬಳಿ ಕೇಳಿದಾಗ, ಶಿವನ ತಪಸ್ಸು ಮಾಡಿ ನಿನ್ನ ಜೀವವನ್ನು ರಕ್ಷಿಸಿ, ಜೀವ ಭಿಕ್ಷೆ ಪಡೆ ಎಂದು ಹೇಳುತ್ತಾನೆ. ಅದರಂತೆ ತಪ್ಪಸ್ಸಿಗೆ ಕೂತ ವಾಸುಕಿಗೆ ಶಿವನು ಕೂಡ ಅನುಗ್ರಹಿಸುತ್ತಾನೆ. ಮುಂದೆ ಸರ್ಪಗಳ ರಕ್ಷಣೆಗೆಂದು ನನ್ನ ಮಗನಾಗಿ ಸುಬ್ರಹ್ಮಣ್ಯ ಸ್ವಾಮಿ ಜನಿಸುತ್ತಾನೆ. ಆಗ ನಿಮ್ಮನ್ನು ರಕ್ಷಿಸುತ್ತಾನೆ ಎಂದು ಹೇಳುತ್ತಾನೆ ಶಿವ. ಅದರಂತೆ ವಾರ್ಷಿಕ ಉತ್ತರ ತಪಸ್ಸನ್ನು ಮುಂದುವರಿಸುತ್ತಾನೆ. ತದನಂತರ ಸುಬ್ರಮಣ್ಯಸ್ವಾಮಿ ಜನನವಾಗುತ್ತದೆ.

ಅಷ್ಟೇ ಅಲ್ಲದೇ, ತಾರಕಾಸುರನನ್ನು ಕೊಂದು ಆಯುಧದ ರಕ್ತವನ್ನು ಧಾರಾ ನದಿಯಲ್ಲಿ ತೊಳೆಯುತ್ತಾನೆ ಸುಬ್ರಮಣ್ಯಸ್ವಾಮಿ. ಹೀಗಾಗಿ ಧಾರಾ ನದಿಗೆ ಕುಮಾರಧಾರ ನದಿ ಎಂದು ಹೆಸರು ಬರುತ್ತದೆ.ವಾಸುಕಿಯು ಸುಬ್ರಮಣ್ಯ ಸ್ವಾಮಿಯೊಂದಿಗೆ ವಾಸವಾಗಿರಲು ಇಚ್ಛೆಪಡುತ್ತಾನೆ. ಮುಂದೆ ಸುಬ್ರಹ್ಮಣ್ಯ ಸ್ವಾಮಿ ದೇವರನ್ನು ಭೂಲೋಕದಲ್ಲಿ ವಾಸವಾಗುವಂತೆ ಮಾಡಿದ ವಾಸುಕಿಯನ್ನು’ ನಾಗಬ್ರಹ್ಮ’ ಎಂಬ ಹೆಸರಿನಿಂದ ಪ್ರತಿಮನೆಯಲ್ಲೂ ಪೂಜಿಸುತ್ತಿದ್ದಾರೆ. ಇದು ಬಿಲದ್ವಾರ ಗುಹೆ ಯ ಪುರಾಣ ಕಥೆಯಾಗಿದ್ದು, ಇಲ್ಲಿ ಗರುಡ ದೇವನನ್ನು ಸಹ ಪೂಜಿಸಲಾಗುತ್ತಿದೆ. ಈ ದೇವಸ್ಥಾನವೂ ಪ್ರಸಿದ್ಧಿಯನ್ನು ಪಡೆದಿದ್ದು ವಿವಿಧ ಕಡೆಯಿಂದ ಭಕ್ತರು ಇಲ್ಲಿಗೆ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.
***

ಶ್ರೀ ಕ್ಷೇತ್ರ ಪಡುಬಿದ್ರಿ - ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನ - ಕ್ಷೇತ್ರ ಪರಿಚಯ - Ganesh Padubidri

ಇಲ್ಲಿ ದೇವಿಯು ಕಾನನದ ಮಧ್ಯೆ ಸ್ವಯಂ ಉದ್ಭವಳಾಗಿ ತನಗೆ ಅಲಯವೂ ಬೇಡ ನಿತ್ಯಪೂಜೆಯೂ ಬೇಡ ಮಕ್ಕಳ ಭಕ್ತಿ ವಿಶ್ವಾಸಗಳೇ ಸಾಕು, ಭಕ್ತಿ ವಿಶ್ವಾಸಗಳಿಂದ ಪೂಜಿಸುವ ಭಕ್ತರ ಕಷ್ಟ ಪರಿಹಾರ ಮಾಡುವುದಕ್ಕೆ ಇರುವ ವನದುರ್ಗ ಸ್ವರೂಪಳಾದ ಶ್ರೀ ಖಡ್ಗೇಶ್ವರಿಯು ನಾಗಬ್ರಹ್ಮಾದಿಗಳೊಂದಿಗೆ ಯಾವ ಕಾಲದಲ್ಲಿ ನೆಲೆಯಾದಳು ಎಂಬುದನ್ನು ನಿಷ್ಕರ್ಷಿಸಿ ಹೇಳುವಂತಿಲ್ಲವಾದರೂ ಬಹು ಪುರಾತನವಾಗಿರುವುದು ಎಂಬುದೇ ಹಿರಿಯರ ಅಭಿಮತ.

ಬ್ರಹ್ಮಸ್ಥಾನ

ಬ್ರಹ್ಮಸ್ಥಾನ ವೆಂದೊಡನೆ ತಟ್ಟನೆ ನಮ್ಮ ಮುಂದೆ ನಿಲ್ಲುವುದು ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಎಂಬ ಪಂಚದೈವಗಳನ್ನೊಳಗೊಂಡ ಪೂಜಾಸ್ಥಳ ಇಂತಹ ಸ್ಥಾನಗಳು ಕುಟುಂಬಕ್ಕೊಂದರಂತೆ ಅಥವಾ ಉರಿಗೊಂದರಂತೆ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿದೆ. ಆದರೆ ಯಾವುದೇ ಬದಲಾವಣೆಗೆ ಒಳಗಾಗದೆ ಆಧುನಿಕ ಪ್ರಭಾವ ವನ್ನೂ ಸ್ವೀಕರಿಸದೆ ಸರಳ ಸಹಜವಾಗಿ ಪ್ರಕೃತಿಯ ಮಡಿಲಿನಲ್ಲಿ ಪ್ರಕೃತಿ ಸಹಜವಾದ ಶಕ್ತಿ ವಿಶೇಷಗಳ ಉಪಾಸನಾ ಕೇಂದ್ರವಾಗಿ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನ ಗಮನಾರ್ಹವಾಗಿದೆ. ಇಲ್ಲಿಯ ಯಾವುದೇ ಸೇವೆಗಳಿರಬಹುದು,ಪೂಜಾವಿಧಾನವಿರಬಹುದು ಇವೆಲ್ಲವೂ ವಿಭಿನ್ನ.ಇಲ್ಲಿ ನಡೆಯುವ ಯಾವ ಸೇವೆಗಳೂ ಬೇರೆ ಯಾವುದೇ ಕ್ಷೇತ್ರಗಳಲ್ಲಿಯೂ ನಡೆಯುವುದಿಲ್ಲ.ಈ ಕ್ಷೇತ್ರದ ಅತ್ಯುನ್ನತ ಸೇವೆಯೆಂದರೆ ಢಕ್ಕೆಬಲಿ ಸೇವೆ.ಈ ಸೇವೆ ಬೇರೆ ಕಡೆ ನಡೆದರೂ ಇಲ್ಲಿಯ ಢಕ್ಕೆಬಲಿ ಸೇವೆಯಲ್ಲಿ ವಿಭಿನ್ನತೆ ಇದೆ.

ಕಟ್ಟಡಗಳು
ಮುಖ್ಯವಾಗಿ ಈ ಕ್ಷೇತ್ರದಲ್ಲಿ ಇತರ ದೇವಾಲಯಗಳಂತೆ ಭವ್ಯವಾದ ಗರ್ಭಗುಡಿಯಾಗಲಿ ಗೋಪುರ ವಾಗಲಿ ಇಲ್ಲ ಇಲ್ಲಿರುವ ಮರ ಬಂಡೆಗಳೆ ಇಲ್ಲಿನ ಮುಖ್ಯ ಆಕರ್ಷಣೆ.

ಮರಳು ಪ್ರಸಾದ
ಬ್ರಹ್ಮಸ್ಥಾನದಲ್ಲಿ ಯಾರಿಗೂ ಕುಳಿತು ಕೊಳ್ಳಲು ಎಂದು ಯಾವುದೇ ಆಸನವಿರುವುದಿಲ್ಲ. ಬಂದವರೆಲ್ಲಾ ಮರಳಿನ ಮೇಲೆಯೇ ಕುಳಿತುಕೊಳ್ಳಬೇಕು. ವಿಶೇಷವೆಂದರೆ ಇತರ ದೇವಳಗಳಂತೆ ಇಲ್ಲಿ ಪ್ರಸಾದವು ಇರುವುದಿಲ್ಲ. ನೆಲದಲ್ಲಿರುವ ಮರಳೇ ಇಲ್ಲಿನ ಪ್ರಮುಖ ಪ್ರಸಾದ. ಅದನ್ನು ಭಕ್ತರೇ ತೆಗೆದುಕೊಳ್ಳುವುದು.

ದೊಂದಿಯ ಬೆಳಕು
ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನ ಇಂದಿಗೂ ದಟ್ಟ ವನದೊಳಗಿದ್ದು ಇಲ್ಲಿ ಯಾವುದೇ ವಿದ್ಯುದ್ಧೀಪಗಳನ್ನು ಬಳಸುವಂತಿಲ್ಲ. ಮುಖ್ಯವಾಗಿ ದೊಂದಿ ಬೆಳಕಿನಲ್ಲಿಯೇ ಧಾರ್ಮಿಕ ವಿಧಿ ವಿಧಾನಗಳು ಜರುಗುತ್ತದೆ( ಇತ್ತೀಚೆಗೆ ಗ್ಯಾಸ್ ಲೈಟ್ ಗಳನ್ನು ಉಪಯೋಗಿಸಲಾಗುತ್ತದೆ).

ಪ್ರಕೃತಿ ಜನ್ಯ ಅಲಂಕಾರ
ಬ್ರಹ್ಮಸ್ಥಾನದಲ್ಲಿ  ಅಲಂಕಾರಕ್ಕೆ ಕೃತಕ ಹೂಗಳನ್ನು ಬಳಸುವಂತಿಲ್ಲ. ತಾಜಾ ಹೂವು, ಹಣ್ಣುಹಂಪಲು, ತಾಳೆ, ಬಾಳೆ, ಅಡಿಕೆ, ಬಿದಿರು ಮತ್ತು ಅಡಿಕೆ ಮರಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ.

ಮೊಬೈಲ್, ಕ್ಯಾಮರಾ ಬಳಕೆ ಸಂಪೂರ್ಣ ನಿಷೇಧ
ಬ್ರಹ್ಮಸ್ಥಾನದಲ್ಲಿ ಇಂದಿಗೂ ಪ್ರಾಚೀನ ಪದ್ಧತಿಯನ್ನು ಉಳಿಸಿಕೊಂಡು ಬರಲಾಗಿದೆ. ಧ್ವನಿವರ್ಧಕ, ವಿದ್ಯುತ್ ಸಂಪರ್ಕ, ಬ್ಯಾಂಡ್, ಪೋಟೋ, ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷಿದ್ಧವಾಗಿದೆ.

ಮೂಲಪ್ರಸಾದ
ಕರ್ಕಾಟಕ ಮಾಸದ ೧೬ ನೇ ದಿನ ಸಮುದ್ರದಾಳದಿಂದ ತಂದ ಶುದ್ಧ ಮರಳನ್ನು ದೇವರ ಗುಂಡದೊಳಗೆ ಹಾಕಲಾಗುತ್ತಿದ್ದು ಇದನ್ನೇ ಮೂಲಪ್ರಸಾದವಾಗಿ ನೀಡುವುದು ಪದ್ಧತಿ.

ಕಾಣಿಕೆ ಡಬ್ಬಿ ರಹಿತ ಕ್ಷೇತ್ರ
ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಯಾವುದೇ ಕಾಣಿಕೆ ಡಬ್ಬಿಗಳಿರುವುದಿಲ್ಲ ಅಥವಾ ದಾನ ದಕ್ಷಿಣೆಗಳ ಕ್ರಮ ಇರುವುದಿಲ್ಲ. ಹಣದ ರೂಪದ ಕಾಣಿಕೆಯನ್ನು ಇಲ್ಲಿ ಅರ್ಪಿಸಲು ಅವಕಾಶ ಇರುವುದಿಲ್ಲ.ದೇವರಿಗೆ ಇಲ್ಲಿ ಮುಖ್ಯವಾಗಿ ಹಿಂಗಾರ ಮತ್ತು ಸೀಯಾಳವನ್ನು ಕಾಣಿಕೆಯಾಗಿ ಸಮರ್ಪಿಸಲಾಗುತ್ತದೆ.

ಢಕ್ಕೆಬಲಿ ಸೇವೆ
   ಪ್ರತಿ ೨ ವರ್ಷಗಳಿಗೊಮ್ಮೆ (ಪರ್ಯಾಯವಿಲ್ಲದ ವರ್ಷ) ಇಲ್ಲಿ ನಡೆಯುವ ಢಕ್ಕೆಬಲಿ ಸೇವೆಯು ಇಲ್ಲಿಯ ವಿಶೇಷ ಸೇವೆಯಾಗಿದೆ. ಮಂಡಲ ರಚನೆ ಎಂಬ ವಿಧಿಯೊಂದಿಗೆ ಈ ಆರಾಧನೆ ಆರಂಭವಾಗುತ್ತದೆ. ಆರಾಧನೆ ಇದ್ದಷ್ಟು ಕಾಲ ಗ್ರಾಮದ ಮಿತಿಯೊಳಗೆ ಯಾವುದೇ ಶುಭ ಸಮಾರಂಭ, ಗ್ರಾಮದ ಇತರ ದೈವ ದೇವಸ್ಥಾನಗಳಲ್ಲಿ ಧಾರ್ಮಿಕ ಉತ್ಸವ ನಡೆಸುವಂತಿಲ್ಲ ಎಂಬ ನಿಯಮವೂ ಚಾಲ್ತಿಯಲ್ಲಿದೆ.ಢಕ್ಕೆಬಲಿ ಸೇವೆಯು ಮಕರ ಮಾಸದಿಂದ ಆರಂಭವಾಗಿ  ಕುಂಭ ಮಾಸದ ಅಂತ್ಯದವರೆಗೆ ನಿಗದಿತ ದಿನಗಳಲ್ಲಿ ನಡೆಯುತ್ತದೆ.
        ಢಕ್ಕೆಬಲಿ ದಿನ ಬೆಳಿಗ್ಗೆ ಪುಣ್ಯಾಹ, ಪಂಚಾಮೃತ ಪುರಸ್ಸರ ಅಭಿಷೇಕ, ಸ್ಥಳಶುದ್ಧಿ, ಮಧ್ಯಾಹ್ನ ಬ್ರಾಹ್ಮಣಾರಾಧನೆ, ಬಳಿಕ ಸಾಯಂಕಾಲ ವಿಜೃಂಭಣೆಯಿಂದ ಸಕಲ ಬಿರುದಾವಳಿ ಸಹಿತ ಹೊರೆಕಾಣಿಕೆ ಮೆರವಣಿಗೆ ಸನ್ನಿಧಿಗೆ ಸಾಗಿ ಬರುತ್ತದೆ. ದೇವತಾ ಪ್ರಾರ್ಥನೆಯಾಗಿ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮಕ್ಷಮ ಹೊರೆಕಾಣಿಕೆಯನ್ನು ಶ್ರೀ ವನದುರ್ಗೆಗೆ ಒಪ್ಪಿಸಲಾಗುವುದು. ಬಳಿಕ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಇಡೀ ಬನವನ್ನು ಹೂವು, ಹಿಂಗಾರ, ಹಣ್ಣುಹಂಪಲಿನಿಂದ ಹೂವಿನ ಅರಮನೆಯಂತೆ ಸಿಂಗರಿಸುತ್ತಾರೆ.

ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡು ಪುಣ್ಯಾಹವಾಚನ, ಶುದ್ಧೀಕರಣ, ಶ್ರೀ ಖಡ್ಗೇಶ್ವರಿ, ನಾಗದೇವರ ಸನ್ನಿಧಿ ಅಲಂಕಾರ (ಅರ್ಚಕರಿಂದ) ನಡೆಯುತ್ತದೆ. ನಂತರ ಸನ್ನಿದಾನದ ಪಾತ್ರಿಗಳು ಊರವರ ಪರವಾಗಿ ಗುರಿಕಾರರಲ್ಲಿ ಕೇಳಿ ಸ್ಥಾನಕ್ಕೆ ತೆರಳುತ್ತಾರೆ. ನಂತರ ನಾಗ ದೇವರಿಗೆ ಪೂಜೆ ನಡೆಯುತ್ತದೆ. ನಂತರ ಮಿಂದು ಸನ್ನಿಧಿಗೆ ಬರುವ ಪಾತ್ರಿಗಳಿಗೆ ಊರವರಲ್ಲಿ ಕೇಳಿ "ದಳ್ಯ" (ಬಿಳಿ ವಸ್ತ್ರ) ಕೊಡುತ್ತಾರೆ. ದಳ್ಯ ಉಟ್ಟ ಪಾತ್ರಿಗಳು ಆಚಮನಾದಿಗಳನ್ನು ಮಾಡಿ ದೇವರ ನಡೆಗೆ ಬರುತ್ತಾರೆ ಆ ಸಮಯದಲ್ಲಿ ವೈದ್ಯರೆಂದು ಕರೆಯಲ್ಪಡುವ ಢಕ್ಕೆಯವರ ಆಗಮನವಾಗುತ್ತದೆ. ಆ ಬಳಿಕ ದೇವರಿಗೆ ಮಹಾಪೂಜೆ ನಡೆದು ತಂಬಿಲ ಸೇವೆ ಜರಗುತ್ತದೆ. ನಂತರ ವೈದ್ಯರು ತೆಂಗಿನ ಗರಿಗಳಿಂದ ಮಂಡಲದ ಚಪ್ಪರದ ಶೃಂಗಾರ ಮಾಡುತ್ತಾರೆ. ಪಂಚವರ್ಣದ ಹುಡಿಗಳಿಂದ ಮಂಡಲವನ್ನು ರಚಿಸುತ್ತಾರೆ. ಇದಾದ ಬಳಿಕ ಸುಮಾರು ೧.೩೦ ಗಂಟೆ ವೇಳೆಗೆ ಮಂಡಲ ಸೇವೆ ಪ್ರಾರಂಭವಾಗುತ್ತದೆ.  ಅರ್ಧನಾರಿ ವೇಷ ತೊಟ್ಟು ಬರುವ ವೈದ್ಯರು ಪಾತ್ರಿಗಳಿಗೆ ಅವೇಶ ಬರಿಸಿ ಮಂಡಲದತ್ತ ಕರೆತರುತ್ತಾರೆ. ನಂತರ ವೈದ್ಯರಿಂದ ಹಾಡು ನೃತ್ಯ ಸಹಿತ ಮಂಡಲ ಸುತ್ತ ಪ್ರದಕ್ಷಿಣೆ ಬರುತ್ತಾರೆ. ಆನಂತರ ಪ್ರತ್ಯೇಕವಾಗಿ ಪಾತ್ರಿಗಳಿಂದ ವಾದ್ಯಘೋಷಗಳ ನಡುವೆ ಹಿಂಗಾರ ಸ್ನಾನವಾಗುತ್ತದೆ ನಂತರ ಮುಂಜಾವದ ವೇಳೆ ಪ್ರಸಾದ ವಿತರಣೆಯಾಗಿ ಆವೇಶ ಬಿಡುಗಡೆಯಾಗುತ್ತದೆ. ಈ ರೀತಿಯಾಗಿ ಢಕ್ಕೆಬಲಿ ಸೇವೆಯು ಶ್ರಿ ದೇವರಿಗೆ ಸಲ್ಲಿಸಲಾಗುತ್ತದೆ.

 ಈ ಬಾರಿ ಜನವರಿ 18 ರಂದು ಮಂಡಲ ಹಾಕುವ ಸೇವೆಯೊಂದಿಗೆ ಆರಂಭಗೊಂಡು ಮಾರ್ಚ್ 12 ರಂದು ಮಂಡಲ ವಿಸರ್ಜನೆ ಸೇವೆಯೊಂದಿಗೆ ಕೊನೆಗೊಳ್ಳುತ್ತದೆ. ಈ ಬಾರಿ ಒಂದು ನಾಗಮಂಡಲ ಸಹಿತ ಒಟ್ಟು 35 ಸೇವೆಗಳು ನಿಗದಿತ ದಿನಗಳಲ್ಲಿ ಶ್ರೀ ದೇವರಿಗೆ ಸಲ್ಲಿಕೆಯಾಗಲಿದೆ
*****

*

 



*ಚನ್ನರಾಯಪಟ್ಟಣದ ಕೋಟೆ ಚಂದ್ರಮೌಳೇಶ್ವರ ಅಥವಾ ಚಂದ್ರಶೇಖರ ದೇಗುಲ 
by ಟಿ.ಎಂ. ಸತೀಶ್- ಚನ್ನರಾಯಪಟ್ಟಣದ ಕೋಟೆ ಚಂದ್ರಮೌಳೇಶ್ವರ ಅಥವಾ ಚಂದ್ರಶೇಖರ ದೇಗುಲ ಶಿವನಿಗೆ ಇಲ್ಲಿ ಮೂರ್ತಿ ಪೂಜೆ ನಡೆಯುವುದು ವಿಶೇಷ 
ಶಿಲ್ಪಕಲೆಗಳ ತವರು, ದೇವಾಲಯಗಳ ಬೀಡು ಹಾಸನಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಚನ್ನರಾಯಪಟ್ಟಣ. ಈ ಊರಿನಲ್ಲಿ ಹಲವಾರು ಪುರಾತನ ದೇವಾಲಯಗಳಿವೆ. ಈ ಪೈಕಿ ಕೋಟೆಯ ಚಂದ್ರಶೇಖರ ದೇವಾಲಯ ಪ್ರಮುಖವಾದದ್ದು. ಕಲ್ಲಿನ ಕಂಬಗಳ ಮಂಟಪ ಹಾಗೂ ಗ್ರಾನೈಟ್ ಕಲ್ಲಿನಿಂದಲೇ ಕಟ್ಟಿದ ಹಳೆಯ ದೇವಾಲಯ ಇದಾಗಿದ್ದು, ಕಲೆಗಳ ಬೀಡಿನಲ್ಲಿರುವ ಈ ದೇವಾಲಯ ಶಿಲ್ಪಕಲಾ ವೈಭವದಿಂದೇನೂ ಕೂಡಿಲ್ಲದಿದ್ದರೂ ತನ್ನದೇ ವಿಶೇಷತೆಯಿಂದ ಭಕ್ತರ ಮನಸೆಳೆಯುತ್ತದೆ.
ಈ ದೇವಾಲಯದಲ್ಲಿ ಶಿವನಿಗೆ ಮೂರ್ತಿಪೂಜೆ ನಡೆಯುವುದು ವಿಶೇಷ. ಪುರಾಣದ ರೀತ್ಯ ಭೃಗು ಮಹರ್ಷಿಗಳ ಶಾಪದ ಫಲವಾಗಿ ಬ್ರಹ್ಮದೇವರಿಗೆ ಭೂಮಿಯಲ್ಲಿ ಪೂಜೆಯಿಲ್ಲ. ಶಿವನನ್ನು ಲಿಂಗರೂಪದಲ್ಲಿ ಮಾತ್ರವೇ ಪೂಜಿಸುತ್ತಾರೆ. ಅಂದರೆ ಶಿವನಿಗೆ ಮೂರ್ತಿಪೂಜೆ ನಿಷಿದ್ಧ. ಆದರೆ, ಚನ್ನರಾಯಪಟ್ಟಣದ ಕೋಟೆಯಲ್ಲಿರುವ ಈ ಪುರಾತನ ದೇವಾಲಯದಲ್ಲಿ ನಂದಿಯಿರುವ ಪೀಠದ ಮೇಲೆ ನಿಂತಿರುವ ಸುಂದರ ಶಿವನ ವಿಗ್ರಹವಿದೆ. ಇಲ್ಲಿ ಶಿವನಿಗೆ ಮೂರ್ತಿ ಪೂಜೆ ನಡೆಯುತ್ತದೆ.
ಆರೂವರೆ ಅಡಿ ಎತ್ತರವಿರುವ ಸಮ ಹಾಗೂ ಕ್ರಮಬದ್ಧ ಪ್ರಮಾಣದಲ್ಲಿ ಕೆತ್ತಲಾಗಿರುವ ಚಂದ್ರಶೇಖರನ ಈ ಮೂರ್ತಿ ಅತ್ಯಂತ ಸುಂದರ ಮತ್ತು ಮನಮೋಹಕವಾಗಿದೆ. ಒಂದು ಕೈಯಲ್ಲಿ ಮೃಗ(ಜಿಂಕೆ) ಮತ್ತೊಂದರಲ್ಲಿ ಪರಶು ಹಿಡಿದ ಶಿವ ಅಭಯ ಮತ್ತು ವರದ ಮುದ್ರೆಯಲ್ಲಿದ್ದಾನೆ. ಮಂದಸ್ಮಿತವಾದ ಸುಂದರ ವದನ ಎಲ್ಲರನ್ನೂ ಆಕರ್ಷಿಸುತ್ತದೆ. ಶಿವನಿಗೆ ವಸ್ತ್ರಾಭರಣಗಳನ್ನು ಶಿಲೆಯಲ್ಲೇ ತೊಡಿಸಿರುವ ಶಿಲ್ಪಿಯ ಕಲಾ ಚಾತುರ್ಯ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತದೆ. ಶಿವ ಗಜ ಚರ್ಮವನ್ನಷ್ಟೇ ಧರಿಸುವುದಿಲ್ಲ. ಪಟ್ಟೆಪೀತಾಂಬರ ಸಹಿತ ವಸ್ತ್ರಾಭರಣವನ್ನೂ ಧರಿಸುತ್ತಾನೆ ಎಂಬುದುನ್ನು ಶಿಲ್ಪಿ ನಿರೂಪಿಸಿದ್ದಾನೆ.
ಶಿವಾಯ ವಿಷ್ಣು ರೂಪಾಯ , ಶಿವರೂಪಾಯ ವಿಷ್ಣವೇ | ಶಿವಶ್ಚಾ ಹೃದಯಂ ವಿಷ್ಣುಃ , ವಿಷ್ಣೋಶ್ಚ ಹೃದಯಂ ಶಿವಃ ಎಂಬ ಶ್ಲೋಕವಿದೆ. ಹರಿ ಹರರಿಗೆ ಯಾವುದೇ ಭೇದವಿಲ್ಲ ಎಂಬುದು ಇದರ ಅರ್ಥ. ಹೀಗಾಗಿಯೇ ಈ ದೇವಾಲಯದಲ್ಲಿ ನಿಂತಿರುವ ಶಿವನಿಗೆ ವಿಷ್ಣುವಿನ ಅಲಂಕಾರವನ್ನೂ ಮಾಡಲಾಗುತ್ತದೆ. ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿ (1939)ಯಲ್ಲಿ ಚಂದ್ರಶೇಖರ (ರಾಮೇಶ್ವರ) ವಿಜಯನಗರ ಕಾಲದ್ದೆಂಬ ಉಲ್ಲೇಖವಿದೆ.
ದೊಡ್ಡ ಬಸವಣ್ಣನ ಗುಡಿ ಎಂದೂ ಖ್ಯಾತವಾದ ಈ ದೇವಾಲಯದಲ್ಲಿ ಸುಂದರವಾದ ಬಸವಣ್ಣನ ಮೂರ್ತಿಯಿದೆ. ಪ್ರಾಕಾರದಲ್ಲಿರುವ ಮತ್ತೊಂದು ಗರ್ಭಗೃಹದಲ್ಲಿ ಅತ್ಯಂತ ಸುಂದರವಾದ ಗೌರಮ್ಮನ ವಿಗ್ರಹವಿದೆ. ಕಮಲ ಹಿಡಿದ ದೇವಿಯ ಸುಂದರ ಕೃಷ್ಣ ಶಿಲೆಯ ವಿಗ್ರಹ ಮನಮೋಹಕವಾಗಿದೆ. ಹಿಂದಿನ ಪ್ರಭಾವಳಿಯಲ್ಲಿ ಹಾಗೂ ಕಿರೀಟದಲ್ಲಿ ಸೂಕ್ಷ್ಮ ಕೆತ್ತನೆ ಇದೆ.ದೇವಾಲಯದಲ್ಲಿ ಸುಂದರವಾದ ಅಮೃತಶಿಲೆಯ ಶಿವಲಿಂಗವಿದೆ. ನಿತ್ಯವೂ ದೇವರಿಗೆ ಪೂಜೆ, ಪುನಸ್ಕಾರಗಳು ಶೈವಾಗಮದ ರೀತ್ಯ ನಡೆಯುತ್ತದೆ.
ಚಂದ್ರಶೇಖರ ಸ್ವಾಮಿಗೆ ಪ್ರತಿ ವರ್ಷ ಮಾಘ ಶುದ್ಧ ಪೌರ್ಣಿಮೆಯಲ್ಲಿ ಅನೇಕ ಉತ್ಸವಾದಿಗಳು ನಡೆಯುತ್ತವೆ. ಈ ವರ್ಷ ಫೆಬ್ರವರಿ 10ರಂದು ಸಂಜೆ ಕಲ್ಯಾಣೋತ್ಸವ ಹಾಗೂ 11ರಂದು ಮಧ್ಯಾಹ್ನ ಬ್ರಹ್ಮ ರಥೋತ್ಸವ ನಡೆಯಲಿದೆ.


ಕಾರ್ತೀಕ ಮಾಸದ ಎಲ್ಲ ಸೋಮವಾರಗಳಂದು, ನವರಾತ್ರಿ/ದಸರೆಯ ಹತ್ತೂ ದಿನ ಹಾಗೂ ಶಿವರಾತ್ರಿಯಂದು ಇಲ್ಲಿ ದೇವರಿಗೆ ವಿಶೇಷ ಅಲಂಕಾರ ನಡೆಯುತ್ತವೆ. ಸುತ್ತಮುತ್ತಲ ಗ್ರಾಮಗಳಿಂದ ಬರುವ ಭಕ್ತರು ನಿತ್ಯ ಇಲ್ಲಿಗೆ ಆಗಮಿಸಿ ಶ್ರೀ ಚಂದ್ರಶೇಖರ ಸ್ವಾಮಿಯ ದರ್ಶನ ಪಡೆಯುತ್ತಾರೆ. ಹೀಗಾಗಿ ಇಲ್ಲಿ ನಿತ್ಯ ಜನಜಾತ್ರೆಯೇ ನಡೆಯುತ್ತದೆ. ಹೆಚ್ಚಿನ ವಿವರಗಳಿಗೆ ದೇವಾಲಯದ ಪ್ರಧಾನ ಅರ್ಚಕರಾದ ವೇ||ಬ್ರ|| ಶ್ರೀ|| ಬಿ.ಎಲ್. ಬಾಲಕೃಷ್ಣ ಭಟ್ (ಗುಡಿ ಭಟ್ಟರು) ಅವರನ್ನು ದೂರವಾಣಿ ಸಂಖ್ಯೆ 9845611426 ಸಂಪರ್ಕಿಸಬಹುದು.
********



ಇಡಗುಂಜಿ idugunji
ಕರ್ನಾಟಕದ ಕರಾವಳಿ ಪ್ರದೇಶಗಳು ತಮ್ಮದೇ ಆದ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಎಲ್ಲಿ ನೋಡಿದರೂ ನದಿ, ಸರೋವರ, ಝರಿ, ಜಲಪಾತಗಳಲ್ಲದೇ ಇಲ್ಲಿರುವ ಪ್ರಾಚೀನ ಪುರಾತನ ದೇವಾಲಯಗಳು ಕೂಡ ತಮ್ಮದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂಥ ಅದ್ಭುತ ಪ್ರಕೃತಿ ಸೊಬಗನ್ನೂ ಮತ್ತು ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದ ಶ್ರೀ ಕ್ಷೇತ್ರವೇ ಇಡಗುಂಜಿ.
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಿಂದ ಕೇವಲ 64 ಕಿ.ಮೀ ಮತ್ತು ಹೊನ್ನಾವರ ತಾಲೂಕಿನಿಂದ ಕೇವಲ 14 ಕಿ.ಮೀ ಅಂತರದಲ್ಲಿದೆ ಇಡಗುಂಜಿ. ಶರಾವತಿ ನದಿಯ ತಟದಲ್ಲಿರುವ ಈ ಕ್ಷೇತ್ರಕ್ಕೆ ಮುಂಚೆ ಇಡಾಕುಂಜ ಎಂದು ಕರೆಯಲಾಗುತ್ತಿತ್ತು. ಇಡಾ ಎಂದರೆ ಆನೆ, ಕುಂಜ ಎಂದರೆ ಸಸ್ಯರಾಶಿ. ದಟ್ಟವಾದ ಗೋಂಡಾರಣ್ಯದ ಮಧ್ಯದಲ್ಲಿರುವ ಈ ಪ್ರದೇಶ ನಂತರ ಇಡಗುಂಜಿಯಾಗಿ ರೂಢಿಯಲ್ಲಿದೆ. ಎಲ್ಲಾ ದೇವರುಗಳಲ್ಲಿ ಗಣೇಶನೇ ಪ್ರಥಮ ಪೂಜ್ಯನು.
ವಕ್ರತುಂಡ, ಏಕದಂತ, ಕೃಷ್ಣ ಪಿಂಗಾಕ್ಷ, ಗಜವಕ್ರ, ಲಂಬೋದರ, ವಿಕಟನಾವ, ವಿಘ್ನರಾಜೇಂದ್ರ, ಧುಮ್ರವರ್ಣ, ಬಾಲಚಂದ್ರ, ವಿನಾಯಕ, ಗಣಪತಿ, ಗಜಾನನ ಹೀಗೆ 12 ಹೆಸರುಗಳನ್ನು ಹೊಂದಿದ ವಿಘ್ನನಿವಾರಕ, ವಿN°àಶ್ವರನಾಗಿ ಭಕ್ತರ ಸಂಕಷ್ಟ ನಿವಾರಕನಾಗಿದ್ದಾನೆ. ಎಲ್ಲಾ ಸಮುದಾಯದವರಿಗೂ ಈ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು ನಂಬಿ ಬಂದ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲು ಗಣೇಶ ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ. ಈ ಬಾಲಗಣಪತಿಯ ಸನ್ನಿದಿಗೆ ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ ನಿದರ್ಶನವಾಗಿದೆ. ಸಂಕಷ್ಟಿ, ವಿನಾಯಕ ಚೌತಿ, ರಥಸಪ್ತಮಿ ಇನ್ನಿತರ ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ.
ಪೌರಾಣಿಕ ಹಿನ್ನೆಲೆ
ಒಂದು ಪುರಾಣದ ಪ್ರಕಾರ ದ್ವಾಪರ ಯುಗದ ಅಂತ್ಯದಲ್ಲಿ ಅಂದರೆ ಕಲಿಯುಗದ ಆರಂಭದಲ್ಲಿ ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ ಬಂದರು. ಸಾಧು ಸಂತರಿಗೆ ಅವರ ಯಜ್ಞ ಯಾಗಕ್ಕೆ ಸಹಾಯವಾಗಲೆಂದು ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು ಹೊಂಡಗಳನ್ನು ಇಲ್ಲಿ ನಿರ್ಮಿಸಿದ್ದರು. ಕೆಲ ಕಾಲದ ನಂತರ ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡಾಗ ನಾರದರು ಗಣೇಶನ ತಾಯಿ ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು ಭೂಲೋಕಕ್ಕೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಗಣೇಶನನ್ನು ಕರೆತಂದು ಮುನಿಗಳ ಮುಖಾಂತರ ಈ ಕ್ಷೇತ್ರದಲ್ಲಿ ನಂತರ ಗಣೇಶನ ಆಶೀರ್ವಾದದಿಂದ ವಾಲಖೀಲ್ಯ ಮುನಿಗಳು ಇಲ್ಲಿ ತಪ್ಪಸ್ಸಾಚರಿಸಿ ಸಿದ್ಧಿ ಪಡೆದುಕೊಂಡರು. ಇಷ್ಟೇ ಅಲ್ಲದೇ ನಾರದರು ಇಲ್ಲಿ ದೇವತೀರ್ಥವೆಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದರು ಎಂಬ ಪ್ರತೀತಿ ಕೂಡ ಇದೆ.
ಸುಮಾರು 4 ರಿಂದ 5 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೆ‌àವಾಲಯ ವಿಶಾಲವಾಗಿದ್ದು ಗರ್ಭಗುಡಿಯಲ್ಲಿ ಸುಂದರವಾದ ಕಪ್ಪು ಶಿಲೆಯಲ್ಲಿ ನಿರ್ಮಿಸಿದ ವಿN°àಶ್ವರ ಪೀಠದ ಮೇಲೆ ನಿಂತಿದ್ದಾನೆ. ಆಭರಣ ಭೂಷಿತನಾದ ಗಣಪನಿಗೆ ಎರಡು ಕೈ, ಎರಡು ದಂತಗಳಿವೆ. ಬಲಗೈಯಲ್ಲಿ ಪದ್ಮವನ್ನು ಹಿಡಿದಿದ್ದಾನೆ. ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯಿದೆ. ತನ್ನ ಸೊಂಡಿಲಿನಿಂದ ಮೊದಕವನ್ನು ಸವಿಯುತ್ತಿರುವ ಗಣೇಶನ ಹೊಟ್ಟೆಗೆ ನಾಗರವಿಲ್ಲ. ತಲೆಯ ಕೂದಲು ಹಿಂದೆ ಹರಡಿಕೊಂಡಂತಿದೆ. ಈ ಬಾಲ ಗಣಪತಿ ವಿಗ್ರಹದ ಒಂದು ವಿಶೇಷತೆ ಏನೆಂದರೆ ಈ ವಿಗ್ರಹವು ಎರಡು ಸಾವಿರ ವರ್ಷ ಪುರಾತನವಾದದ್ದು ಮತ್ತು ಇದಕ್ಕೆ ಎರಡೂ ದಂತಗಳಿವೆ. ಸಾಮಾನ್ಯವಾಗಿ ಪ್ರತಿಯೊಂದು ಗಣೇಶನ ವಿಗ್ರಹಕ್ಕೆ ಒಂದೇ ದಂತವಿರುತ್ತದೆ. ಆ ಕಾರಣದಿಂದ ಗಣೇಶನಿಗೆ ಏಕದಂತ ಎನ್ನಲಾಗುತ್ತದೆ. ಆದರೆ ಇಡಗುಂಜಿಯಲ್ಲಿರುವ ಗಣೇಶನಿಗೆ ಎರಡೂ ದಂತಗಳಿವೆ.
ಇಂಥ ಅಪರೂಪವಾದ ಪುರಾತನ ದೇವಾಲಯದಲ್ಲಿ ರಥ ಸಪ್ತಮಿಯಂದು ವಿಶೇಷ ಜಾತ್ರೆ ನಡೆಯುತ್ತದೆ. ವರ್ಷದಲ್ಲಿ ಒಂದು ದಶಲಕ್ಷ ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾರೆ. ಸಾಗರೋಪಾದಿಯಲ್ಲಿ ಬರುವ ಭಕ್ತಾದಿಗಳು ಬಾಲ ಗಣಪತಿಯ ಆಶೀರ್ವಾದ ಪಡೆದು ಪುನೀತರಾಗುತ್ತಾರೆ ಮತ್ತು ಅವರ ಎಲ್ಲಾ ಇಚ್ಛೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಇಲ್ಲಿರುವ ಗಣೇಶನ ವಿಗ್ರಹಕ್ಕೂ ಮತ್ತು ಗೋಕರ್ಣದಲ್ಲಿರುವ ಗಣೇಶನ ವಿಗ್ರಹಕ್ಕೂ ಸರಿಯಾಗಿ ಹೊಂದಿಕೆಯಿದೆ. ಎರಡೂ ವಿಗ್ರಹಗಳು ಒಂದೇ ತೆರನಾಗಿವೆ.
*****





ತಂಡಗದ ಚನ್ನಕೇಶವ ದೇವಾಲಯ

ತಂಡಗದ ಚನ್ನಕೇಶವ ದೇವಾಲಯ - ಶಕಪುರುಷ ಶಾಲಿವಾಹನನ ಹುಟ್ಟೂರು - ಲೇಖಕರು -ಟಿ.ಎಂ.ಸತೀಶ್, ಸಂಪಾದಕರು ಕನ್ನಡರತ್ನ.ಕಾಂ
ಮದುವೆ, ಮುಂಜಿ, ಗೃಹಪ್ರವೇಶದ ಸಂದರ್ಭದಲ್ಲಿ, ಇಲ್ಲವೇ ದೇವಾಲಯಗಳಲ್ಲಿ ಅರ್ಚಕರು, ಪುರೋಹಿತರು ಪೂಜೆ ಮಾಡುವಾಗ “...ಕಲಿಯುಗೇ ಪ್ರಥಮ ಪಾದೇ ಜಂಬೂ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನಶಕೆ, ಬೌದ್ಧಾವತಾರೇ ರಾಮಕ್ಷೇತ್ರೇ... ಎಂದು ಹೇಳುವುದನ್ನು ಕೇಳಿರಬಹುದು.. ಇದರಲ್ಲಿ ಬರುವ ಶಾಲಿವಾಹನ ಶಕೆ ಎಂದರೇನು ಗೊತ್ತೆ...?
ಶಾಲಿವಾಹನ ಶಕ ಪುರುಷ. ನಾವು ಇಂದಿನ ವ್ಯವಹಾರದಲ್ಲಿ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ಹೇಗೆ ಬಳಸುತ್ತೇವೆಯೋ ಹಾಗೆಯೇ ಹಿಂದೆ ವಿಕ್ರಮ ಶಕೆಯನ್ನು ಅನುಸರಿಸಲಾಗುತ್ತಿತ್ತು. ಕೆಲವು ಉತ್ತರ ಭಾರತೀಯರು ಇಂದಿಗೂ ವಿಕ್ರಮಶಕೆಯನ್ನು ತಮ್ಮ ಸಾಂಪ್ರದಾಯಿಕ ಕಾಲ ಗಣನೆಗೆ ಪರಿಗಣಿಸುತ್ತಾರೆ. ಅದೇ ರೀತಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಶಾಲಿವಾಹನ ಶಕೆ ಕಾಲ ಗಣನೆಯಾಗಿದೆ. ಇಂಥ ಶಕಪುರುಷ ಶಾಲಿವಾಹನ ಹುಟ್ಟಿದ್ದೇ ಕರ್ನಾಟಕದಲ್ಲಿ ಎಂಬುದು ಹಲವರಿಗೆ ತಿಳಿದಿಲ್ಲ. ಶಾಲಿವಾಹನ ಹುಟ್ಟಿದ್ದು ತುಮಕೂರು ಜಿಲ್ಲೆ, ತುರುವೇಕೆರೆ ಬಳಿಯ ತಂಡಗದಲ್ಲಂತೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲೂ ಉಲ್ಲೇಖವಿದೆ.
ಆದರೆ ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಕಡೆಗಣಿಸಲ್ಪಟ್ಟಿರುವ ತಂಡಗ ಶಕಪುರುಷನ ತವರಾದರೂ ಇಂದಿಗೂ ಹೆಚ್ಚಿನ ಪ್ರಚಾರವಿಲ್ಲದ ಪುಟ್ಟ ಗ್ರಾಮವಾಗಿಯೇ ಉಳಿದಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಈ ಊರನ್ನು ಸಂಪೂರ್ಣ ನಿರ್ಲಕ್ಷಿಸಿದೆ.
ಕಲ್ಪತರುವಿನ ನಾಡು ತುರುವೇಕೆರೆಗೆ 12 ಕಿ.ಮೀ. ದೂರದಲ್ಲಿರುವ ಶಕಪುರುಷನ ಹುಟ್ಟೂರಾದ ತಂಡಗ ಪ್ರವೇಶಿಸುತ್ತಿದ್ದಂತೆಯೇ ಗಣಪತಿಯ ದೇವಾಲಯವಿದ್ದು, ಇದರ ಬಿತ್ತಿಯ ಮೇಲಿರುವ ಶಾಲಿವಾಹನ ಮಹಾದ್ವಾರ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಫಲಕ ಸ್ವಾಗತಿಸುತ್ತದೆ.
ಇಲ್ಲಿಗೆ ಕಾಲ್ನಡಿಗೆಯ ದೂರದಲ್ಲಿ ಹೊಯ್ಸಳರ ದೊರೆ 3ನೇ ವೀರ ಬಲ್ಲಾಳನ ಕಾಲದಲ್ಲಿ ಅಂದರೆ 1316ರಲ್ಲಿ ನಿರ್ಮಿಸಲಾದ ಚನ್ನಕೇಶವನ ದೇವಾಲಯವಿದೆ.ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ಗರುಡಗಂಬವಿದ್ದು ಅಲ್ಲಿಯವರೆಗೆ ಹಿಂದೆ ದೇವಾಲಯವಿತ್ತು ಎಂಬುದನ್ನು ಸಾರುತ್ತದೆ. ಆದರೆ ಈಗ ಅಲ್ಲಿ ಮನೆಗಳ ನಿರ್ಮಾಣವಾಗಿದೆ.
ಎಲ್ಲ ಹೊಯ್ಸಳ ದೇವಾಲಯಗಳಂತೆ ನಕ್ಷತ್ರಾಕಾರದ ಜಗತಿಯ ಮೇಲಿಲ್ಲ. ಬದಲಾಗಿ ಮುಖಮಂಟಪ ಮಾತ್ರ ಎತ್ತರದಲ್ಲಿದ್ದು, ಸುತ್ತಲ ಗುಡಿ ನೆಲಮಟ್ಟದಲ್ಲೇ ಇದೆ. ಇದು ಪೂರ್ವಾಭಿಮುಖವಾಗಿರುವ ಒಂದೇ ಗರ್ಭಗೃಹದ ಏಕ ಕೂಟ ದೇವಾಲಯ. ಈ ದೇವಾಲಯದ ಭಿತ್ತಿಗಳಲ್ಲಿ ಬೇಲೂರು, ಹಳೆಬೀಡು, ನಾಗಲಾಪುರಗಳಲ್ಲಿರುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ಷ್ಮ ಕೆತ್ತನೆಯ ಕಲಾಕೃತಿಗಳು ಇಲ್ಲದಿದ್ದರೂ, ಅರೆಕಂಬ, ಅರೆ ಗೋಪುರಗಳಿಂದ ಕೂಡಿದೆ. ಅಲ್ಲಲ್ಲಿ ಉಗ್ರನರಸಿಂಹ, ವಿಷ್ಣು ಇತ್ಯಾದಿ ಶಿಲ್ಪಗಳಿವೆ. ಮೇಲ್ಭಾಗದ ಪಟ್ಟಿಕೆಗಳಲ್ಲಿ ಶೃಂಗೇರಿ ಪೀಠದ ಲಾಂಛನದಂತೆಯೇ ಭಾಸವಾಗುವ ಹಂಸ, ಸರ್ಪ ಹಿಡಿದ ಗರುಡ, ಚನ್ನಕೇಶವನ ಸುಂದರ ಕೆತ್ತನೆ ಇದೆ.
ಮುಖಮಂಟಪದ ಮೇಲೆ ಈಗ ಗಾರೆಗಚ್ಚಿನ ಗೋಪುರ ನಿರ್ಮಿಸಲಾಗುತ್ತಿದ್ದು, ಗೋಪುರ ಗೂಡಿನಲ್ಲಿ ಗೋಪಾಲಕೃಷ್ಣನ ಮೂರ್ತಿಯಿದೆ ದೇವಾಲಯದ ಭುವನೇಶ್ವರಿಗಳ ಕೆತ್ತನೆ ಅದ್ಭುತವಾಗಿದೆ. ಪ್ರಧಾನ ದ್ವಾರದ ಮುಂದೆ ದೀರ್ಘದಂಡ ನಮಸ್ಕಾರ ಮಾಡುತ್ತಿರುವ ಭಕ್ತವಿಗ್ರಹವಿದೆ. ದ್ವಾರದ ಬಾಗಿಲವಾಡದ ಎಡಬಲದಲ್ಲಿ ದ್ವಾರಪಾಲಕರ ವಿಗ್ರಹಗಳಿವೆ. ಮೇಲ್ಭಾಗದಲ್ಲಿ ಶಾಸನವೊಂದಿದೆ. ಶಂಕರನಾರಾಯಣ ಪುರ ಎಂದು ಖ್ಯಾತವಾಗಿದ್ದ ಈ ಗ್ರಾಮವನ್ನು ಬ್ರಾಹ್ಮಣರಿಗೆ ಅಗ್ರಹಾರವಾಗಿ ನೀಡಲಾಗಿತ್ತೆಂದು ತಿಳಿದುಬರುತ್ತದೆ. ಪ್ರವೇಶದ ಬಳಿ ಅಪರೂಪದ ಆಣೆ ಕಲ್ಲೊಂದಿದೆ. ಹಿಂದೆ ನ್ಯಾಯ ಪಂಚಾಯ್ತಿ ಮಾಡುವಾಗ ಈ ಕಲ್ಲು ಮುಟ್ಟಿಸಿ ಆಣೆ ಪ್ರಮಾಣ ಮಾಡುತ್ತಿದ್ದರೆಂದೂ ಇದು ಅತ್ಯಂತ ಶಕ್ತಿಶಾಲಿ ಶಿಲೆಯೆಂದೂ ಹೇಳಲಾಗುತ್ತದೆ. ಈಗಲೂ ಜನ ಇದನ್ನು ಮುಟ್ಟಿ ಆಣೆ ಮಾಡಲು ಹೆದರುತ್ತಾರೆ.
ಒಳಗಿರುವ ನವರಂಗದಲ್ಲಿನ ಕಂಬಗಳ ಕೆತ್ತನೆ ಸುಂದರವಾಗಿದೆ. ಅಂತರಾಳದ ಬಾಗಿಲವಾಡದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ. ಪಕ್ಕದಲ್ಲಿ ಕಾಲ್ಪನಿಕ ಮಕರ ತೋರಣದ ಶಿಲ್ಪವಿದೆ. ಬಾಗಿಲವಾಡದಲ್ಲಿ ಜಾಲಂದ್ರವನ್ನೂ ನಿರ್ಮಿಸಲಾಗಿದೆ. ಅಂತರಾಳದಲ್ಲಿ ಅರೆ ಗೋಪುರಗಳಿವೆ. ಗರ್ಭಗೃಹದ ಬಾಗಿಲವಾಡದಲ್ಲಿ ಗರುಡನ ಕೆತ್ತನೆ ಇದ್ದು, ಅಲ್ಲಿಯೂ ಬಾಗಿಲವಾಡದಲ್ಲಿ ದ್ವಾರಪಾಲಕರ ಉಬ್ಬು ಶಿಲ್ಪವಿದೆ.
ಪ್ರಧಾನಗರ್ಭಗೃಹದಲ್ಲಿ 3 ಅಡಿ ಗರುಡ ಪೀಠದ ಮೇಲೆ ನಿಂತಿರುವ ಶಂಖ, ಚಕ್ರ, ಗದಾ, ಪದ್ಮಧಾರಿಯಾದ ಐದೂವರೆ ಅಡಿ ಎತ್ತರದ ಸುಂದರ ಚನ್ನಕೇಶವನ ಮೂರ್ತಿಯಿದೆ. ಕೇಶವನ ಪಾದದ ಬಳಿ ಎಡ ಬಲದಲ್ಲಿ ಸ್ತ್ರೀವಿಗ್ರಹಗಳಿವೆ. ನಿತ್ಯ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ದೇವಾಲಯದ ಹೊರಗೆ ಕಲ್ಲಿನ ಬೃಂದಾವನವಿದೆ. ಭಗ್ನಗೊಂಡಿರುವ ಚನ್ನಕೇಶವನ ಮೂರ್ತಿಯೂ ಇದೆ. ಗರ್ಭಗೃಹದ ಮೇಲಿರುವ ಗೋಪುರ ಕಲಾತ್ಮಕವಾಗಿದ್ದು, ಮೇಲ್ಭಾಗದಲ್ಲಿ ಕಲ್ಲಿನ ಕಳಶವಿದೆ.

ಸರ್ಕಾರ ಇತ್ತ ಗಮನ ಹರಿಸಿ ಕದಂಬೋತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವದ ರೀತಿಯಲ್ಲಿ ಶಾಲಿವಾಹನೋತ್ಸವ ಮಾಡಿದರೆ ಈ ಪ್ರಾಚೀನ ನಗರಿ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕ್ಷೇತ್ರದ ಜನಪ್ರತಿನಿಧಿಗಳು, ಸ್ಥಳೀಯ ಜನತೆ ಮನಸ್ಸು ಮಾಡಬೇಕಷ್ಟೇ.
******


ಕುಕ್ಕೆ ಸುಬ್ರಹ್ಮಣ್ಯ-ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ. ಪ್ರಾಕೃತಿಕ ಸೌಂದರ್ಯದ ಅದ್ಭುತ ರಮಣೀಯ ದೃಶ್ಯಗಳಿಂದ ಕೂಡಿದ ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿಯ ಪಾವಿತ್ರ್ಯತೆಯು ಹಾಗೂ ದೇವ ಸಾನಿಧ್ಯವು ಅತೀ ವಿರಳ ಸ್ಥಳಗಳಲ್ಲಿ ಮಾತ್ರ ಕಾಣಬಹುದಾಗಿದ್ದು, ಹೆಮ್ಮೆ ಪಡುವಂತಾಗಿದೆ.
ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ.
ಪೌರಾಣಿಕ ಹಿನ್ನೆಲೆ
ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ಪಾಣಿಗ್ರಹಣ ಮಾಡಿದನು. ಅದೇ ವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ತಾನು ದೇವಸೇನಾ ಸಮೇತನಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.
ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಗುಪ್ತ ಕ್ಷೇತ್ರವೆಂಬುವುದಾಗಿಯೂ ಈ ಕ್ಷೇತ್ರವನ್ನು ಕರೆಯುತ್ತಾರೆ. ಮೃತ್ತಿಕಾ ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಮಡೆಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಧರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ದೇವರಿಗೆ ಅನ್ನದಾನ ಸುಬ್ಬಪ್ಪನೆಂಬ ನಾಮಾಭಿದಾನವಿದ್ದು, ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತಿದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿ ದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ. ಜನ್ಮ ಜನ್ಮಾಂತರದ ದುರಿತಗಳ ನಾಶನಾದ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಶ್ರದ್ಧಾ-ಭಕ್ತಿ ಪೂರ್ವಕ ಸೇವಾ ಕೈಂಕರ್ಯಗಳನ್ನು ಸ್ವೀಕರಿಸಿ ಇಷ್ಟಾರ್ಥಗಳನ್ನು ಕರುಣಿಸಿ ಪೊರೆಯುವ ಕಲಿಯುಗ ಪ್ರತ್ಯಕ್ಷ ದೇವರೆನಿಸಿಕೊಂಡಿದ್ದಾನೆ.
ದೇವಸ್ಥಾನದ ಶಂಕುಸ್ಥಾಪನೆ :: (ಸುಮಾರು ಐದು ಸಾವಿರ ವರ್ಷಗಳ ಹಿಂದೆ.)
ಶ್ರೀ ಸುಬ್ರಹ್ಮಣ್ಯ ಕ್ಷೇತ್ರಪೂರ್ವದಲ್ಲಿ ಕುಕ್ಕೆ ಪಟ್ಟಣವೆಂದು ಪ್ರಸಿದ್ಧಿಯಾಗಿತೆಂದು ಶಾಸನಗಳಿಂದಲೂ, ಗ್ರಂಥಗಳಿಂದಲೂ ತಿಳಿದು ಬರುತ್ತದೆ. ಶ್ರೀ ಆದಿ ಶಂಕರಾಚಾರ್ಯರು ದಿಗ್ವಿಜಯಕ್ಕಾಗಿ ಇಲ್ಲಗೆ ಬಂದು ಕೆಲವು ದಿನ ವಾಸ ಮಾಡಿದ್ದರೆಂದೂ ಆನಂದ ವಿರಚಿತ “ಶಂಕರ ವಿಜಯ”ದಲ್ಲಿ ಹೇಳಿದೆ. ಶ್ರೀ ಶಂಕರಾಚಾರ್ಯ ವಿರಚಿತ “ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರ”ದಲ್ಲಿ “ಭಜೇ ಕುಕ್ಕೆಲಿಂಗಂ” ಎಂದು ಈ ಕ್ಷೇತ್ರದಲ್ಲಿ ಉಲ್ಲೇಖವಿದೆ. ಇಲ್ಲಿಯ ಸ್ಥಳ ಪುರಾಣ ಪ್ರಕಾರ ಅನೇಕ ದೇವ ಋಷಿಗಳು ಶಿವಲಿಂಗಗಳನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸಿದ್ದಾಗಿ ತಿಳಿದು ಬರುತ್ತದೆ. ಇಂತಹ ಪ್ರಸಿದ್ಧ ಶಿವಲಿಂಗವನ್ನು ಉಲ್ಲೇಖಿಸುವುದೇ ಕುಕ್ಕೆಲಿಂಗವೆಂಬ ಶಬ್ದದ ಅರ್ಥವಾಗಿರುವುದೆಂದು ತಿಳಿಯಬೇಕು. ಶ್ರೀ ಸ್ಕಂದ ಪುರಾಣದ ಸನತಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರದ ಮಹಿಮಾ ರೂಪಣದೊಳಗೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ತೀರದಲ್ಲಿರುವುದು. ಶ್ರೀ ಷಣ್ಮುಖ ಸ್ವಾಮಿಯು ತಾರಕಾದಿ ಮಹಾ ಅಸುರರನ್ನು ನಿಗ್ರಹಿಸಿ ತಮ್ಮ ಶಕ್ತ್ಯಾಯುಧ ಧಾರೆಯನ್ನು ಈ ತೀರ್ಥದಲ್ಲಿ ತೊಳೆದುದರಿಂದ ಇದಕ್ಕೆ ಕುಮಾರಧಾರಾ ತೀರ್ಥವೆಂದು ಹೆಸರು ಬಂತೆಂದು ಇತಿಹಾಸವಿದೆ. ಸರ್ಪದೋಷ ಪೀಡಿತರಾಗಿ ಔಷಧಗಳಿಂದ ಶಮನವಾಗದಂತಹ ರೋಗಗಳಿಂದ ನರಳುವವರು ಹಾಗೂ ಸಂತಾನವಿಲ್ಲದೆ ಇರುವವರು ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿ ಸಕಲಾಭೀಷ್ಠ ಸಿದ್ಧಿಯನ್ನು ಹೊಂದುತ್ತಿರುವುದು ಪ್ರಸಿದ್ಧವಾಗಿದೆ. ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ “ಬೀದಿ ಮಡೆಸ್ನಾನ” (ಉರುಳು ಸೇವೆ) ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಸಂತರ್ಪಣೆಯ ಉಚ್ಚಿಷ್ಠದಲ್ಲಿ ಹೊರಳಾಡಿಕೊಂಡು ಅಂಗಣದಲ್ಲಿ ಪ್ರದಕ್ಷಿಣೆ ಬರುವ “ಮಡೆಸ್ನಾನ” ಸೇವೆಯು ಮುಖ್ಯ ಹರಕಯಲ್ಲಿ ಒಂದಾಗಿದೆ. “ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು” ಎಂಬ ಪೂರ್ವ ನಾಣ್ಣುಡಿಯಂತೆ ಇಲ್ಲಿ ಅನ್ನದಾನವು ನಡೆಯುತ್ತಿರುವುದು. ಇತಿಹಾಸ ಪ್ರಸಿದ್ಧ “ಮೂಲಮೃತ್ತಿಗೆ” (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿರುತ್ತದೆ.
ಸರ್ಪ ಸಂಸ್ಕಾರ ಬಹಳ ಮುಖ್ಯವಿಧಿ.

ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ "ಆದಿ ಸುಬ್ರಹ್ಮಣ್ಯ ಸ್ವಾಮಿ" ಯ ದೇವಾಲಯ ಮತ್ತು "ಕುಮಾರಧಾರ" ನದಿಯನ್ನು ಸ೦ದರ್ಶಿಸಲು ಮರೆಯ ಬೇಡಿ.ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.
ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ "ಆದಿ ಸುಬ್ರಹ್ಮಣ್ಯ ಸ್ವಾಮಿ" ಯ ದೇವಾಲಯ ಮತ್ತು "ಕುಮಾರಧಾರ" ನದಿಯನ್ನು ಸ೦ದರ್ಶಿಸಲು ಮರೆಯ ಬೇಡಿ.

******





ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ
Kukke Sri Subramanya kshetra kukke.

ನೈಸಗಿಕ ಕಾನನಗಳಿಂದ ಸಂಪದ್ಭರಿತವಾದ ಗಿರಿಶ್ರೇಣಿಯ ಸುಂದರ ಪ್ರಕೃತಿಯ ಮಡಿಲಿನಲ್ಲಿ ಇರುವ ಪುಣ್ಯಕ್ಷೇತ್ರ ಕುಕ್ಕೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಊರಿನ ಮಧ್ಯಭಾಗದಲ್ಲಿ ಸುಬ್ರಹ್ಮಣ್ಯನ ದೇವರ ದೇವಾಲಯವಿದೆ. ಮಂಗಳೂರಿನಿಂದ ಕೇವಲ 100 ಕಿ.ಮೀಟರ್‌ ದೂರದಲ್ಲಿರುವ ಈ ಸುಂದರ ತಾಣಕ್ಕೆ ಬಸ್‌, ಟ್ಯಾಕ್ಸಿ, ಕಾರುಗಳಲ್ಲಿ ಹೋಗಿಬರಬಹುದು. ಭಕ್ತಾದಿಗಳಿಗೆ ಇಲ್ಲಿ ಮೂಲಭೂತ ಸೌಲಭ್ಯಗಳಿಗೆ ಅಂತಹ ತೊಂದರೆ ಏನಿಲ್ಲ.

ಪುರಾಣ : ದುಷ್ಟ ಸಂಹಾರಕ್ಕಾಗಿಯೇ ಹುಟ್ಟಿದ ಶಿವ - ಪಾರ್ವತಿಯರ ಸುತ ಷಣ್ಮುಖ ನೆಲೆಸಿಹ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಮಹತ್ವವಾದದ್ದು. ಗೋಕರ್ಣದಲ್ಲಿ ಶಿವನಾತ್ಮಲಿಂಗ ಭೂಸ್ಪರ್ಶ ಮಾಡಿದರೆ, ಈ ಪುಣ್ಯ ಕ್ಷೇತ್ರದಲ್ಲಿ ಸ್ವತಃ ಸುಬ್ರಹ್ಮಣ್ಯನೇ ನೆಲೆಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಧಾರಾ ನದಿಯ ದಡದಲ್ಲಿರುವ ಈ ಪುಣ್ಯಕ್ಷೇತ್ರದ ಮಹಿಮೆಯ ಬಗ್ಗೆ ಹಲವಾರು ಕಥೆಗಳಿವೆ. ತಾರಕ ಸಂಹಾರದ ನಂತರ ಸುಬ್ರಹ್ಮಣ್ಯನು ಇಲ್ಲಿಗೆ ಬಂದು ತಾರಕ ಹಾಗೂ ಇನ್ನಿತರ ರಕ್ಕಸರ ರುಂಡವನ್ನು ಚೆಂಡಾಡಿದ ತನ್ನ ಶಕ್ತಿ ಆಯುಧವನ್ನು ಧಾರಾ ನದಿಯಲ್ಲಿ ತೊಳೆದನಂತೆ. ಕುಮಾರ ಸ್ವಾಮಿ ತನ್ನ ಆಯುಧ ತೊಳೆದ ಈ ನದಿ ಅಂದಿನಿಂದ ಕುಮಾರಧಾರಾ ಎಂದೇ ಹೆಸರಾಗಿದೆ. ತಾರಕಾದಿಗಳೊಂದಿಗೆ ಹೋರಾಡಿ ದಿಗ್ವಿಜಯ ಸಾಧಿಸಿದ ಕುಮಾರ ಸ್ವಾಮಿಯು ತನ್ನ ಸೋದರನಾದ ಗಣೇಶನೊಂದಿಗೆ ಜತೆಗೂಡಿ ಕುಮಾರ ಪರ್ವತ ಶಿಖರಕ್ಕೂ ಬಂದನಂತೆ, ಅಲ್ಲಿ ಇಂದ್ರಾದಿ ದೇವತೆಗಳು ಅವರನ್ನು ಸ್ವಾಗತಿಸಿದರು ಎಂದು ಪುರಾಣ ಸಾರುತ್ತದೆ. ಮಿಗಿಲಾಗಿ ತಮ್ಮನ್ನು ತಾರಕನ ಕಾಟದಿಂದ ಮುಕ್ತಿಗೊಳಿಸಿದ ಕುಮಾರ ಸ್ವಾಮಿಗೆ ದೇವೇಂದ್ರನು ತನ್ನ ಮಗಳಾದ ದೇವಸೇನಳನ್ನು ಮದುವೆಯಾಗುವಂತೆಯೂ ಪ್ರಾರ್ಥಿಸುತ್ತಾನೆ. ಅದಕ್ಕೆ ಒಪ್ಪಿದ ಷಣ್ಮುಖ ಕುಮಾರಧಾರಾ ನದಿ ತಟದಲ್ಲೇ ಮಾರ್ಗಶಿರ ಶುದ್ಧ ಷಷ್ಠಿಯ ದಿನ ದೇವೇಂದ್ರನ ಕುವರಿಯನ್ನು ವರಿಸುತ್ತಾನೆ. ಇದೇ ಸ್ಥಳದಲ್ಲೇ ವಾಸುಕಿ ಎಂಬ ಸರ್ಪರಾಜನಿಗೂ ಕುಮಾರಸ್ವಾಮಿ ದರ್ಶನ ನೀಡುತ್ತಾನೆ. ವಾಸುಕಿಯು ತನ್ನೊಂದಿಗೆ ಇದೇ ಸ್ಥಳದಲ್ಲೇ ಶಾಶ್ವತವಾಗಿ ನೆಲೆಸುವಂತೆ ಕುಮಾರ ಸ್ವಾಮಿಯನ್ನು ಪ್ರಾರ್ಥಿಸುತ್ತಾನೆ. ತನ್ನ ಭಕ್ತನ ಕೋರಿಕೆಯನ್ನು ಮನ್ನಸಿ ಸುಬ್ರಹ್ಮಣ್ಯನು ನೆಲೆಸಿಹನೆನ್ನುತ್ತದೆ ಸ್ಥಳ ಪುರಾಣ. ದೇವಾನು ದೇವತೆಗಳೆಲ್ಲರ ಪಾದ ಧೂಳಿನಿಂದ ಪುನೀತವಾಗಿರುವ ಈ ಕ್ಷೇತ್ರದಲ್ಲಿ ಹಾಗೂ ಶಕ್ತಿ ಆಯುಧವನ್ನೇ ತೊಳೆದ ಕುಮಾರ ಧಾರಾದಲ್ಲಿ ಸ್ನಾನ ಮಾಡಿದರೆ ಸಕಲ ಸಂಕಷ್ಟಗಳೂ ಪರಿಹಾರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಇಂದೂ ಶಿಲಾಮೂರ್ತಿಯಾಗಿ ಕುಮಾರಸ್ವಾಮಿಯೇ ತನ್ನ ಸತಿ ದೇವಸೇನೆ ಹಾಗೂ ವಾಸುಕಿಯಾಂದಿಗೆ ಈ ಸ್ಥಳದಲ್ಲಿ ನೆಲೆಸಿಹನೆಂದು ಭಕ್ತರು ಭಾವಿಸುತ್ತಾರೆ. ಪ್ರತಿವರ್ಷ ಮಾರ್ಗಶಿರ ಶುದ್ಧ ಷಷ್ಠಿಯ ದಿನ (ಅಂದರೆ ಕುಮಾರ ಸ್ವಾಮಿಯು ದೇವೇಂದ್ರನ ಕುವರಿಯನ್ನು ಇದೇ ಸ್ಥಳದಲ್ಲಿ ವಿವಾಹವಾದ ಎನ್ನಲಾದ ದಿನ ) ಇಲ್ಲಿ ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ. ಕುಕ್ಕೆಯ ಇತಿಹಾಸ : ಹಿಂದೆ ಈ ಪವಿತ್ರ ಪುಣ್ಯಸ್ಥಳ ಕುಕ್ಕೆ ಪಟ್ಟಣ ಎಂದು ಕರೆಯಲ್ಪಡುತ್ತಿತ್ತು. ಈ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರೂ ಕೆಲಕಾಲ ತಂಗಿದ್ದರು. ತಮ್ಮ ಕೃತಿಯಲ್ಲಿ ಆದಿ ಶಂಕರರು ಭಜೆ ಕುಕ್ಕೆ ಲಿಂಗಮ್‌ ಎಂದೂ ಬಳಸಿದ್ದಾರೆ. ಸ್ಕಂದ ಪುರಾಣದಲ್ಲಿ ಕೂಡ ಕುಕ್ಕೆ ಕ್ಷೇತ್ರದ ಪ್ರಸ್ತಾಪ ಇದೆ. ಸುಂದರವಾದ ಪ್ರಾಕಾರ, ರಜತ ಲೇಪಿತ ಗರುಡಗಂಭ, ಸುಂದರವಾದ ಸುಬ್ರಹ್ಮಣ್ಯಮೂರ್ತಿಯುಳ್ಳ ದೇವಾಲಯ ಕೂಡ ಮನಮೋಹಕವಾಗಿದೆ. ಇಂದೂ ಕೂಡ ಸುಬ್ರಹ್ಮಣ್ಯನೊಂದಿಗೆ ಗರ್ಭಗುಡಿಯಲ್ಲಿ ನೆಲೆಸಿಹ ವಾಸುಕಿ (ಸರ್ಪರಾಜ)ಯು ಉಸಿರಾಡುವಾಗ ಹೊರಹೊಮ್ಮುವ ವಿಷದಿಂದ ಜನರನ್ನು ರಕ್ಷಿಸಲೆಂದೇ ಗರುಡ ಇಲ್ಲಿ ಕಂಬವಾಗಿ ನಿಂತಿಹ ಎಂದೂ ಕೆಲವು ಹಿರಿಯರು ಹೇಳುತ್ತಾರೆ. ಕುಕ್ಕೆ ಲಿಂಗ : ಈ ಕ್ಷೇತ್ರದಲ್ಲಿ ಹಿಂದೆ ಜನರು ಕುಕ್ಕೆಗಳಲ್ಲಿ ಈಶ್ವರ ಲಿಂಗವನ್ನಿಟ್ಟು ಪೂಜಿಸುತ್ತಿದ್ದರಂತೆ ಹೀಗಾಗೆ ಇಲ್ಲಿರುವ ಶಿವಲಿಂಗಕ್ಕೆ ಕುಕ್ಕೆಲಿಂಗ ಎಂದು ಹೆಸರು ಬಂದಿದೆ. ಈ ಕ್ಷೇತ್ರ ಕುಕ್ಕೆ ಪಟ್ಟಣ ಎಂದು ಕರೆಸಿಕೊಳ್ಳು ಅದೇ ಕಾರಣ ಎನ್ನುವುದು ಕೆಲವರ ವಾದ. ಆದರೆ, ಮತ್ತೆ ಕೆಲವರು ಕುಕ್ಕೆ ಎಂಬ ಹಳೆಗನ್ನಡದ ಪದ ಗುಹೆ ಎಂಬ ಅರ್ಥ ನೀಡುವ ಸಂಸ್ಕೃತದ ಕುಕ್ಷಿ ಎಂಬ ಪದದಿಂದ ಬಂದಿದೆ. ಗುಹೆಯಾಳಗೆ ಶಿವಲಿಂಗ ಇದ್ದುದರಿಂದ ಇದನ್ನು ಕುಕ್ಕೆ ಲಿಂಗ ಎನ್ನುವುದು ಎಂಬುದು ಅವರ ವಾದ. ವಾದ ಪ್ರತಿವಾದಗಳು ಏನೇ ಇರಲಿ, ಭಕ್ತಾದಿಗಳು ನಿತ್ಯವೂ ಕುಕ್ಕೆಲಿಂಗನನ್ನು ಪೂಜಿಸುತ್ತಾರೆ. ಪ್ರತಿವರ್ಷ ಮಕರ ಸಂಕ್ರಮಣದ ದಿನ ಇಲ್ಲಿ ರಥೋತ್ಸವವೂ ನಡೆಯುತ್ತದೆ. ಮತ್ತೊಂದು ಕಥೆಯ ರೀತ್ಯ ತಾರಕನೇ ಮೊದಲಾದ ರಕ್ಕಸರನ್ನು ಕೊಂದ ಷಣ್ಮುಖನೇ ತನ್ನ ಪಾಪ ಪರಿಹಾರಾರ್ಥವಾಗಿ ಮೂರು ಸ್ಥಳಗಳಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದನಂತೆ. ಆನಂತರ ಋಷಿ ಮುನಿಗಳು ಈ ಸ್ಥಳಗಳಲ್ಲಿ ಮತ್ತಷ್ಟು ಶಿವಲಿಂಗಗನ್ನು ಪ್ರತಿಷ್ಠಾಪಿಸಿದರು ಎಂಬ ಉಲ್ಲೇಖವೂ ಇದೆ. ಸುಬ್ರಹ್ಮಣ್ಯ ಮಠ : ಈ ಕ್ಷೇತ್ರದಲ್ಲಿ ದೈ ್ವತ ಸಿದ್ಧಾಂತ ಪ್ರತಿಪಾದಕರಾದ ಮಧ್ವಾಚಾರ್ಯರು ಸ್ಥಾಪಿಸಿದ ಮಠವೂ ಇದೆ. ಮಧ್ವಾಚಾರ್ಯರು ಇಲ್ಲಿ ಮಠ ಸ್ಥಾಪಿಸಿ ತಮ್ಮ ಸೋದರ ವಿಷ್ಣುತೀರ್ಥಾಚಾರ್ಯರಿಗೆ ಒಪ್ಪಿಸಿದರು. ಹೀಗಾಗೇ ಈ ಮಠ ವಿಷ್ಣುತೀರ್ಥಾಚಾರ್ಯ ಸಂಸ್ಥಾನ ಎಂದೂ ಕರೆಯಲ್ಪಡುತ್ತಿತ್ತು. ಶೃಂಗೇರಿ ಮಠ : ಆದಿ ಶಂಕರಾಚಾರ್ಯರೇ ಕೆಲಕಾಲ ತಂಗಿದ್ದ ಈ ಕ್ಷೇತ್ರದದೇವಾಲಯದ ಆವರಣಗೋಡೆಯ ಈಶಾನ್ಯ ಭಾಗದಲ್ಲಿ ಶೃಂಗೇರಿ ಮಠವೂ ಇದೆ. ಚಂದ್ರಮೌಳೇಶ್ವರನ ದೇವಾಲಯವೂ ಇಲ್ಲಿದೆ. ದೇವಾಲಯದ ಆಡಳಿತಕ್ಕೊಳಪಟ್ಟ ಈ ಮಠದಲ್ಲಿ ನ ಚಂದ್ರಮೌಳೇಶ್ವರನಿಗೆ ಸದಾ ಪಂಚಪರ್ವ ನಂದಾದೀಪದ ಸೇವೆ ನಡೆಯುತ್ತಲೇ ಇರುತ್ತದೆ.
*

ತಸಿಕ್ತವಾದ ತನ್ನ ಶಕ್ತಿಯಾಯುಧವನ್ನು ಈ ನದಿಯಲ್ಲಿ ತೊಳೆದನು. ಈ ಘಟನೆಯ ಆನಂತರ ಈ ನದಿ ಕುಮಾರಧಾರೆಯೆಂದು ಪ್ರಸಿದ್ದವಾಯಿತು. ರಾಕ್ಷಸರೊಂದಿಗಿನ ಯುದ್ದಾನಂತರ ಕುಮಾರಸ್ವಾಮಿಯು ಸೋದರ ಗಣೇಶ, ವೀರಬಾಹು ಮೊದಲಾದ ಸಹಚರರೊಂದಿಗೆ ಕುಮಾರ ಪರ್ವತದ ತುದಿ ಭಾಗಕ್ಕೆ ಬಂದನು.
ದೇವೇಂದ್ರನೇ ಮೊದಲಾದವರು ಆತನನ್ನು ಸ್ವಾಗತಿಸಿದರು. ರಾಕ್ಷಸರೊಂದಿಗಿನ ಯುದ್ದದಲ್ಲಿ ಗೆದ್ದ ಸಂತೋಷಕ್ಕಾಗಿ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ಮದುವೆಯಾಗುವಂತೆ ಯಾಚಿಸಿದರು. ಸ್ವಾಮಿಯು ಈ ಯಾಚನೆಯನ್ನು ಮನ್ನಿಸಿದನು. ಈ ಮದುವೆಯೂ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಸಂಪನ್ನಗೊಂಡಿತು. ಈ ಸ್ಥಳದಲ್ಲಿ ತಪಸ್ಸನ್ನು ಮಾಡಿಕೊಂಡಿದ್ದ ನಾಗರಾಜನಾದ ವಾಸುಕಿಗೆ ಶ್ರೀ ಸ್ವಾಮಿಯ ದರ್ಶನ ನೀಡಿದನು ಹಾಗು ಇಲ್ಲಿ ಆತನೊಂದಿಗೆ ಶಾಶ್ವತವಾಗಿ ನೆಲೆಸಲು ತಿಳಿಸಿ, ಆನೇಕ ವಿಧವಾದ ವರಗಳನ್ನು ನೀಡಿದನು.

ಆ ಸಮಯದಿಂದ ಸ್ವಾಮಿಯು ತನ್ನ ಆಧ್ಯಾತ್ಮಿಕ ಶಕ್ತಿಯೊಂದಿಗೆ(ದೈವಿಕ) ಹಾಗು ಪತ್ನಿ ದೇವಸೇನೆ ಮತ್ತು ವಾಸುಕಿಯೊಂದಿಗೆ ನೆಲೆಸಿರುವನೆಂದು ನಂಬಲಾಗಿದೆ. ಪ್ರತಿ ವರ್ಷ ಇಲ್ಲಿ ಪ್ರಸಿಧ್ದವಾದ ವಾರ್ಷಿಕ ರಥೋತ್ಸವವು ವಿಶೇಷ ಪೂಜೆಯೊಂದಿಗೆ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು 'ಚಂಪಾ ಷಷ್ಠಿ' ಎಂಬ ಹೆಸರಿನಲ್ಲಿ ಜರಗುತ್ತಿರುವುದು. ಇನ್ನೊಂದು ಪುರಾಣ ಹೇಳಿಕೆಯಂತೆ ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಅವರ ಅನುಯಾಯಿಗಳನ್ನು ಯುದ್ದದಲ್ಲಿ ಕೊಂದು ನಂತರ ಷಣ್ಮುಖ ಸ್ವಾಮಿಯು ತನ್ನ ಸೋದರ ಗಣೇಶ ಹಾಗು ಮತ್ತಿತರೊಂದಿಗೆ ಕುಮಾರ ಪರ್ವತಕ್ಕೆ ಬಂದನು.

ಅಲ್ಲಿ ದೇವೇಂದ್ರ ಹಾಗು ಇತರರಿಂದ ಸ್ವಾಗತಿಸಲ್ಪಟ್ಟನು. ಬಹು ಸಂತೋಷನಾದ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ವಿವಾಹವಾಗಿ ಸ್ವೀಕರಿಸಬೇಕೆಂದು ಬೇಡಿಕೊಂಡನು. ಆಗ ಸ್ವಾಮಿಯು ಸಂತೋಷನಾಗಿ ಒಪ್ಪಿದನು. ಈ ದೈವಿಕ ವಿವಾಹವು ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಕುಮಾರ ಪರ್ವತದಲ್ಲಿ ನೆರೆವೇರಿತು. ಬ್ರಹ್ಮ, ವಿಷ್ಣು, ಮಹೆಶ್ವರರೇ ಮೊದಲಾದ ದೇವತೆಗಳು ಈ ವಿವಾಹ ಹಾಗು ಸಿಂಹಾಸನಾರೋಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ನದಿಗಳ ಜಲಗಳನ್ನು ತರಲಾಗಿತ್ತು.

ಮಹಾವೈಷಿಷ್ಟ್ಯದ ಈ ಪವಿತ್ರ ಜಲ ಕೆಳಗೆ ಹರಿದು ನದಿಯ ರೂಪ ತಾಳಿತು ಮತ್ತು ಅದು 'ಕುಮಾರಧಾರಾ' ನದಿಯೆಂಬ ಹೆಸರಿನಿಂದ ಪ್ರಸಿದ್ದವಾಯಿತು. ಮಹಾಶಿವ ಭಕ್ತ ಹಾಗು ನಾಗರಾಜನಾದ ವಾಸುಕಿಯು ಕುಕ್ಕೆ ಸುಬ್ರಹ್ಮಣ್ಯದ ಬಿಲ್ವದ್ವಾರಾ ಎಂಬ ಗುಹೆಯಲ್ಲಿ ಗರುಡನ ದಾಳಿಯಿಂದ ಪಾರಾಗಲು ಆನೇಕ ವರ್ಷಗಳಿಂದ ತಪಸ್ಸನ್ನು ಮಾಡಿ ಬರುತ್ತಿದನು. ಸ್ವಾಮಿ ಶಂಕರನ ಆಶ್ವಾಸನೆಯಂತೆ ಷಣ್ಮುಖನು ವಾಸುಕಿಗೆ ದರ್ಶನ ನೀಡಿದನು ಮತ್ತು ತನ್ನ ಪರಮ ಭಕ್ತನಾದ ಆತನೊಂದಿಗೆ ಶಾಶ್ವತವಾಗಿ ನೆಲೆನಿಲ್ಲುವುದಾಗಿ ಆಭಯ ನೀಡಿದನು. ಹಾಗಾಗಿ ವಾಸುಕಿಗೆ ಸಲ್ಲಿಸುವ ಸೇವೆ, ಪೂಜಾದಿಗಳಲ್ಲಿ ಆದು ಬೇರೆಯಲ್ಲದೆ ಸ್ವಾಮಿ ಸುಬ್ರಹ್ಮಣ್ಯನಿಗೆ ಸಲ್ಲಿಸುವ ಸೇವೆಗಳೇ ಆಗಿದೆ.
**
ಕುಕ್ಕೆ ಸುಬ್ರಹ್ಮಣ್ಯದ 400 ವರ್ಷ ಹಳೆಯ ಬ್ರಹ್ಮರಥಕ್ಕೆ ಕೊನೆಯ ಚಂಪಾಷಷ್ಠಿ :
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಸಹಸ್ರಾರು ಭಕ್ತರ ಸಮ್ಮುಖ ಶ್ರದ್ಧಾಭಕ್ತಿಯಿಂದ ಎಳೆಯುವ ಬ್ರಹ್ಮರಥಕ್ಕೆ 400ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ತೇರನ್ನು ಈ ಬಾರಿಯ ಜಾತ್ರೆಯಲ್ಲಿ ಕೊನೆಯ ಬಾರಿಗೆ ಎಳೆಯಲಾಗುತ್ತಿದ್ದು, ಬಳಿಕ ಅದು ಇತಿಹಾಸದ ಪುಟಗಳನ್ನು ಸೇರಲಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿದ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದ ಕಾರಣ ಇದರ ಬದಲಿಗೆ 1.99 ಕೋಟಿ ರೂ. ವೆಚ್ಚದಲ್ಲಿ ನೂತನ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದೆ. ಈ ಬಾರಿ ಜಾತ್ರೆಯಲ್ಲಿ ಹಳೆಯ ತೇರನ್ನೇ ಎಳೆಯಲಾಗುತ್ತಿದೆ. ಐತಿಹಾಸಿಕ ರಥವನ್ನು ಕೊನೆಯ ಬಾರಿಗೆ ಎಳೆಯುವ ಮೂಲಕ ಇತಿಹಾಸವೊಂದು ಸೃಷ್ಟಿಯಾಗಲಿದೆ. (Follow Beauty of Tulunad facebook page)
ಇಲ್ಲಿನ ಬ್ರಹ್ಮರಥ ಎಷ್ಟು ಪ್ರಾಚೀನ ಎಂದು ನಿಖರವಾಗಿ ತಿಳಿದಿಲ್ಲ. 400 ವರ್ಷಗಳ ಹಿಂದಿನದ್ದೆಂದು ತಿಳಿಯುತ್ತದೆ. ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ (ಕ್ರಿ.ಶ. 1582 -1629) ರಥ ನಿರ್ಮಿಸಿ ಕೊಟ್ಟಿದ್ದ ನೆಂಬುದು ದಾಖಲೆಯಿಂದ ತಿಳಿಯುತ್ತದೆ. 1923ರಲ್ಲಿ ಗಣಪತಿ ರಾವ್‌ಗಳ ಸಂಪಾದಿಸಿದ ಪ್ರಾಚೀನ ಇತಿಹಾಸ ದಾಖಲೆಯಲ್ಲಿ ಈ ಉಲ್ಲೇಖವಿದೆ. ಇದೇ ಕೆಳದಿ ವಂಶಸ್ಥ ವೆಂಕಟಪ್ಪ ನಾಯಕ ಕುಕ್ಕೆ ದೇಗುಲಕ್ಕೆ ಸಮಾನ ಅವಧಿಯಲ್ಲಿ ಕೊಟೇಶ್ವರ ದೇಗುಲಕ್ಕೂ ರಥ ನೀಡಿದ ಕುರಿತು ಸಂಶೋಧನ ಗ್ರಂಥಗಳಲ್ಲಿ ಉಲ್ಲೇಖವಿದೆ.
ಸ್ಯಂದನ ರಥವಿದು :
ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳಿಂದ ಈ ರಥದ ರಚನೆಯಾದಂತಿದೆ. ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ವಿಧಿ-ವಿಧಾನ, ನಿಯಮ ಅನುಸರಿಸಿ ರಚಿಸಿದ್ದಾಗಿದೆ. ಆರು ಚಕ್ರ ಹೊಂದಿರುವ ಬ್ರಹ್ಮರಥವನ್ನು ಶಾಸ್ತ್ರೀಯವಾಗಿ ಸ್ಯಂದನ ರಥವೆನ್ನುವರು. ಅಡಿಪಾಯ, ಅಡಿಸ್ಥಾನ, ಮಂಟಪ, ಗೋಪುರ, ಶಿಖರ ಇವು ರಥದ ಪ್ರಮುಖ ಭಾಗಗಳು. ಅಡಿಪಾಯದಿಂದ ಮಂಟಪದವರೆಗಿನ ಒಟ್ಟು ಭಾಗ ಸ್ಥಿರ ರಥ. ಚಕ್ರದ ಎತ್ತರ 8 ಅಡಿ 6 ಅಂಗುಲ. ಒಂದು ಚಕ್ರದಲ್ಲಿ 5 ಬೃಹತ್‌ ಮರದ ತುಂಡುಗಳು ಇವೆ.
ರಥದ ಚಕ್ರಗಳ ಅಗಲ 21 ಅಂಗುಲ. ರಥದ ಚಕ್ರದ ದಪ್ಪ 10 ಅಂಗುಲ ಎಂಬ ಲೆಕ್ಕವಿದೆ. ಬ್ರಹ್ಮರಥದಲ್ಲಿ ಪ್ರಪಂಚದ ಎಲ್ಲ ರೀತಿಯ ಜೀವರಾಶಿಗಳ ಚಿತ್ರಗಳ ಕೆತ್ತನೆಯಿದೆ. ಈ ಕೆತ್ತನೆಗಳು ಕಾಲಾಂತರದಲ್ಲಿ ನಶಿಸಿ ಹೋಗಿದ್ದು, ಬಹುತೇಕ ಚಿತ್ರಗಳು ಈಗ ಗೋಚರಿಸುತ್ತಿಲ್ಲ. ರಥದ ಮರದ ಚಕ್ರಗಳು ಇತರೆ ಬಿಡಿಭಾಗಗಳು ಬಿರುಕು ಪಡೆದು ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ. ನಡುವೆ ಒಮ್ಮೆ ರಥದ ದುರಸ್ತಿಯೂ ನಡೆದಿದೆ.
ಮಾರ್ಚ್‌ ತಿಂಗಳಲ್ಲಿ ನೂತನ ಬ್ರಹ್ಮರಥ ಹಸ್ತಾಂತರ :
ದೇಗುಲದ ಪ್ರಶ್ನೆ ವೇಳೆ ಈಗಿನ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪುತ್ತಿರುವುದರಿಂದ ನೂತನ ರಥ ಹೊಂದುವ ಕುರಿತು ಕಂಡುಬಂದಿತ್ತು. ಅದರಂತೆ ಬಿಡದಿ ರಿಯಾಲಿಟಿ ವೆಂಚರ್ ಫೋರ್‌ ಗ್ರೂಪ್‌ ಸಂಸ್ಥೆಯ ಪಾಲುದಾರರಾದ ಮುತ್ತಪ್ಪ ರೈ ಮತ್ತು ಅಜಿತ್‌ ರೈ ನೂತನ ಬ್ರಹ್ಮರಥ ನಿರ್ಮಿಸಿಕೊಡುತ್ತಿದ್ದಾರೆ. ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಬ್ರಹ್ಮರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂದಿನ ಮಾರ್ಚ್‌ ತಿಂಗಳಲ್ಲಿ ನೂತನ ಬ್ರಹ್ಮರಥ ಸಿದ್ಧಗೊಂಡು ದೇಗುಲಕ್ಕೆ ಹಸ್ತಾಂತರಗೊಳ್ಳಲಿದೆ. ವರದಿ- ಉದಯವಾಣಿ (Follow Beauty of Tulunad facebook page)

**
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹೋತ್ಸವಕ್ಕೆ ಕ್ಷಣಗಣನೆ.
4-12-2018 : ಕೊಪ್ಪರಿಗೆ ಏರುವುದು(ಜಾತ್ರೆ ಆರಂಭ).
6-12-2018 : ಲಕ್ಷದೀಪೋತ್ಸವ.

11-12-2018: ರಾತ್ರಿ ವೈಭವದ ಹೂವಿನ ತೇರಿನ ಉತ್ಸವ(ಚೌತಿ)
12-12-2018 : ರಾತ್ರಿ ಪಂಚಮಿ ರಥೋತ್ಸವ.
13-12-2018 : ಬೆಳಗ್ಗೆ "ಚಂಪಾಷಷ್ಠಿ" ಮಹೋತ್ಸವ (ಬ್ರಹ್ಮರಥ)
20-12-2018 : ಕೊಪ್ಪರಿಗೆ ಇಳಿಯುವುದು. ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ (ಜಾತ್ರೆ ಸಂಪನ್ನಗೊಳ್ಳುವುದು).
(ಪ್ರಮುಖ ದಿನಗಳನ್ನು ಮಾತ್ರ ಮೇಲೆ ಉಲ್ಲೇಖಿಸಲಾಗಿದೆ)
-ಜಾತ್ರಾ ದಿನಗಳಲ್ಲಿ "ಸರ್ಪಸಂಸ್ಕಾರ" ಸೇವೆ ದೇವಸ್ಥಾನದಲ್ಲಿ ನಡೆಯುವುದಿಲ್ಲ.

ಕುಕ್ಕೆ ಸುಬ್ರಹ್ಮಣ್ಯದ ಸುಂದರ ಹಾಗೂ ಬ್ರಹತ್ ರಥಗಳ ಹಿಂದಿದೆ ಮೂಲ ನಿವಾಸಿಗಳಾದ ಆದಿವಾಸಿ "ಮಲೆಕುಡಿಯ" ಜನಾಂಗದ ಅದ್ಭುತ ಕೈಚಳಕ.
ಹಗ್ಗ ಬಳಸದೆ, ಗಂಟು ಬಿಗಿಯದೆ ರಥ ನಿರ್ಮಾಣ!
ಹೂವಿನಂತೆ ಬೆತ್ತ ಸುರಿದು, ಯಾವುದೇ ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುವುದನ್ನು ನೋಡುವುದೇ ಒಂದು ಆನಂದ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ ಕಲಾಕೃತಿಯಂತೆ ನಿರ್ಮಾಣಗೊಳ್ಳುತ್ತಿದೆ.


ನಾಗರಾಧನೆಗೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಚಾಲನೆ ದೊರಕಿದೆ. ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರಿಂದ ಬೆತ್ತದ ರಥ ನಿರ್ಮಾಣ ನಡೆಯುತ್ತಿದೆ. ಲಕ್ಷದೀಪೋತ್ಸವದಂದು ಕಾಶಿಕಟ್ಟೆ ದೇಗುಲದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಚಲಿಸಲಾಗದ ಗುರ್ಜಿ ರಥದಿಂದ ಹಿಡಿದು ಪಂಚಮಿ, ಬ್ರಹ್ಮರಥಗಳು ಮನಸೂರೆಗೊಳಿಸುತ್ತವೆ.

ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಶುಭಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತ ಸಂಗ್ರಹಿಸಿ, ಬ್ರಹ್ಮರಥವನ್ನು ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರೆ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಬಳಸಿ ಕೌಶಲಭರಿತವಾಗಿ ನಿರ್ಮಿಸುವುದು ವಿಶೇಷ.

ಭಾರೀ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕುವುದಿಲ್ಲ. ಬೆತ್ತವನ್ನು ಹೂವಿನಂತೆ ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ. ತೇರನ್ನೇರುವ ವೇಳೆ ರಥದ ಸುತ್ತ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿಮಾಣ ಕಾರ್ಯದಲ್ಲಿ ಯುವಕರು, ವೃದ್ಧರು ಉತ್ಸಾಹದಿಂದ ಭಾಗವಹಿಸುತ್ತಾರೆ. 20 ಯುವಕರು, 30 ಹಿರಿಯರ ಸಹಿತ 50 ಜನ ಬೆತ್ತದ ರಥ ನಿರ್ಮಿಸುತ್ತಿದ್ದಾರೆ.

#ರೋಮಾಂಚನವಾಗುತ್ತಿದೆ :

ಇಲ್ಲಿ ಅತ್ಯದ್ಭುತವಾಗಿ ರಥ ನಿರ್ಮಾಣ ಆಗುತ್ತಿದೆ. ಕೆಲಸ ನೋಡುವಾಗ ರೋಮಾಂಚನವಾಗುತ್ತಿದೆ. ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯ ಬಂಧುಗಳು ಕರಗತ ಮಾಡಿಕೊಂಡು ಬಂದ ರಥ ನಿರ್ಮಾಣ ಕಲೆ ಅತ್ಯದ್ಭುತ ಎನ್ನುತ್ತಾರೆ ಕ್ಷೇತ್ರದ ಭಕ್ತ ಶ್ಯಾಮಬಸವಪ್ಪ ಬೀದರ್‌.

#ಹಿರಿಯರಿಂದ_ಬಂದಿದೆ :

ಹಿಂದಿನಿಂದಲೂ ರಥ ನಿರ್ಮಾಣ ಕಾರ್ಯವನ್ನು ಮಾಡುತ್ತಿದ್ದೇವೆ. ಹಿರಿಯರು ಅನುಸರಿಸಿದ ಸಂಪ್ರದಾಯದಂತೆ ಕೌಶಲ ಬಳಸಿ ರಚಿಸುತ್ತಿದ್ದೇವೆ. ಸುಮಾರು 50 ಮಂದಿ ಹಿರಿಯ-ಕಿರಿಯರು ಸೇರಿ ನಿಗದಿತ ಸಮಯಕ್ಕೆ ರಥ ನಿರ್ಮಿಸಿಕೊಡುತ್ತೇವೆ :-ಭಾಸ್ಕರ ಮಲೆಕುಡಿಯ
******


ಸೌತಡ್ಕ ಮಹಾಗಣಪತಿ - 

ರಾಜಮನೆತನದ ಆರಾಧ್ಯದೈವನ ಕತೆ- ಬಯಲ ಆಲಯದ ಗಣಪ ಎಂದೇ ಪ್ರಸಿದ್ದಿ ಪಡೆ ದಿರುವ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕ ಶ್ರೀ ಮಹಾಗಣಪತಿ. ವಿಶಾಲ ಮೈದಾನದಲ್ಲಿ ಮಡಿ ಮೈಲಿಗೆ ಮುಂತಾದ ಯಾವುದೇ ಭವ ಬಂದನಗಳಿಂದ ಮುಕ್ತವಾಗಿ ಭಕ್ತರಿಗೆ ಇಲ್ಲಿ ಸರ್ವಕಾಲದಲ್ಲೂ ದರ್ಶನ ನೀಡುತ್ತಿದ್ದಾನೆ.ಸೌತೆಕಾಯಿಗಳಿಂದ ಪೂ ಜಿಸಲ್ಪಡುವುದರಿಂದ ದೇವನ ತಾಣ ಸೌತಡ್ಕ ಎಂಬ ಹೆಸರು ಹೊಂದುವಂತಾಯಿತು.
ಕ್ಷೇತ್ರದ ವಿಶೇಷತೆ
ಇಲ್ಲಿನ ಮುಖ್ಯ ದೇವರು ಎಂದರೆ ಗಣಪತಿ. ಹಾಗೆಯೇ ಗಣಪತಿಯ ಕಪ್ಪು ಶಿಲೆಯ ಮೂರ್ತಿಯ ಪಕ್ಕದಲ್ಲೇ ಸಿದ್ಧಿ ಬುದ್ಧಿಯ ಮೂರ್ತಿಗಳೂ ಇವೆ. ಇಲ್ಲಿ ಬರುವ ಭಕ್ತಾದಿಗಳು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಒಂದು ಘಂಟೆಯನ್ನು ಕಟ್ಟುತ್ತಾರೆ.ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ
ಗರ್ಭಗುಡಿ, ದೇವಸ್ಥಾನವಿಲ್ಲದೆ ವಿಶಾಲವಾದ ಹಚ್ಚ ಹಸುರಿನ ವಿಶಾಲವಾದ ಮೈದಾವನವನ್ನೆ ತನ್ನ ಕ್ಷೇತ್ರವಾಗಿರಿಸಿದ್ದಾನೆ. ಈ ಕ್ಷೇತ್ರವು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 35 ಕಿ.ಮೀ, ಧರ್ಮಸ್ಥಳದಿಂದ ಸುಮಾರು 16 ಕಿ.ಮೀ, ಕಪಿಲ ನದಿ ತೀರದಲ್ಲಿರುವ ಪಟ್ರಮೆಯಿಂದ 6 ಕಿ.ಮೀ ದೂರದಲ್ಲಿರುವುದು.

ಸ್ಥಳ ಪುರಾಣ

ಸುಮಾರು 8೦೦ ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊಂದರಲ್ಲಿ ಅರೆಸೊತ್ತಿಗೆ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು. ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಾಟುಕಲ್ಲುಗಳ ಕಟ್ಟೆ ಇಟ್ಟು ತಾವು ಬೆಳೆಯುತ್ತಿರುವ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪ್ಪೂಜೆಗಳನ್ನು ಮಾಡತೊಡಗಿದರು. ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ) 
ದೇವಾಸ್ಥಾನಗಳು ವಾಸ್ತು ಶಿಲ್ಪಕ್ಕನುಗುಣವಾಗಿ ಗೋಪುರ ಗರ್ಭ ಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವ ಸಂಪ್ರದಾಯ ನಿಯಮವಿದ್ದು, ಸೌತಡ್ಕ ಗಣಪನು ಈ ಎಲ್ಲಾ ಸಂಪ್ರಾದಯಗಳನ್ನು ತಿರಸ್ಕರಿಸಿ, ಪ್ರಕೃತಿ ಸಂದರ ತಾಣದಲ್ಲಿ ಅಗ್ನೇಯ ಮುಖವಾಗಿ, ಬಯಲೇ ಆಲಯಾವಾಗಿರಿಸಿಕೊಂಡು ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ, ಜಾತಿ, ಮತ ಬೇಧವೆಣಿಸದೆ ಮಾನವರಿಗೂ, ಸಕಲ ಜೀವ ರಾಶಿಗಳಿಗೂ ಅಭಯ ಹಸ್ತನಾಗಿ ಹಗಲು ರಾತ್ರಿ ಅನುಗ್ರಹಿಸುತ್ತಾ ರಕ್ಷಿಸಿಕೊಂಡು ಬರುತ್ತಿರುವುದು ಸೌತಡ್ಕ ಮಹತ್ವ ಮೂಡಿಸುವ ವಿಶಿಷ್ಟ ಸಂಪ್ರದಾಯವಾಗಿರುತ್ತದೆ. ಹಿಂದೆ ಈ ಪರಿಸರದ ಶ್ರೀಮಂತ ಬ್ರಾಹ್ಮಣ ಭಕ್ತರೊಬ್ಬರು ಗಣೇಶನಿಗೆ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭ ಮಾಡುವಷ್ಟರಲ್ಲಿ ಗಣಪತಿಯು ದನ ಕಾಯುವ ಹುಡುಗನ ರೂಪದಲ್ಲಿ ಆ ಬ್ರಾಹ್ಮಣನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸುವುದಾದರೆ ಅದರ ಗೋಪುರವು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿರಬೇಕೆಂದು ಕಟ್ಟಾಜ್ಞೆ ನೀಡಿರುವುದರಿಂದ ಆ ಬ್ರಾಹ್ಮಣನಿಗೆ ಆ ಸವಾಲನ್ನು ಎದುರಿಸಲು ತೀರ ಅಸಾಧ್ಯವೆಂದು ಮನಗಂಡು ದೇಗುಲ ನಿರ್ಮಾಣದ ಯೋಜನೆಯನ್ನು ಕೈ ಬಿಡಲಾಯಿತು. ಕೆಲವು ಸಮಯಗಳ ಹಿಂದೆ ಭಕ್ತಾದಿಗಳೆಲ್ಲರೂ ಸೇರಿ ಜ್ಯೋತಿಷ್ಯರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗುಡಿಕಟ್ಟುವ ಬಗ್ಗೆ ವಿಮರ್ಶಿಸಿದಾಗ, ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸಿಲ್ಲವೆಂದು ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೇ ಸಕಲ ಜೀವರಾಶಿಗಳಿಗೂ ಸ್ವ-ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದೆಂದು ತಿಳಿದು ಬಂದಿರುವುದರಿಂದ ಗುಡಿಕಟ್ಟುವ ಆಲೋಚನೆಯನ್ನು ಅಲ್ಲಿಗೆ ಕೈ ಬಿಡಲಾಯಿತು. ಹಾಗಾಗಿ ಭಕ್ತರು ಹಾಗು ತನ್ನ ನಡುವೆ ಯಾವುದೇ ಗೋಡೆ, ಬಾಗಿಲುಗಳ ಅಡ್ಡಿ ಇರಬಾರದೆಂದು ಗಣೇಶನ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. 
ಗಣೇಶನು ಯಾವುದೇ ಆಡಂಬರಗಳನ್ನು ಸ್ವೀಕರಿಸುವುದಿಲ್ಲ, ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತಿರುವ ಗಿಡ ಮರಗಳ ನೆರಳೇ ಆಸರೆ, ತಂಪಾದ ವನ ಸಿರಿಯ ಮಧ್ಯೆ ಚಿಲಿಪಿಲಿಗುಟ್ಟುವ ಪಕ್ಷಿಗಳ ಹಾಡು, ಗಾನ ಕೋಗಿಲೆಯ ನಾದ ಸ್ವರ, ಹಚ್ಚ ಹಸುರಿನ ಎಲೆಗಳ ಮೇಲೆ ಸೂರ್ಯ ಕಿರಣಕ್ಕೆ ಚಿನ್ನದ ಮೊಗ್ಗೆಯಂತೆ ಮಿನುಗುವ ಇಬ್ಬನಿಯ ತುಣುಕುಗಳು, ಸುತ್ತಲಿನ ಬಯಲಿನಲ್ಲಿ ಸಂತಸದಿ ಕುಣಿದಾಡುತ್ತಿರುವ ಗೋವುಗಳು, ಹೀಗೆ ಹತ್ತು ಹಲವು ಪ್ರಕೃತಿ ಸೌಂದರ್ಯ ರಾಶಿಗಳ ಮಧ್ಯೆ ಗೋಪಾಲ ಬಾಲಕರು ನೈವೇಧ್ಯವಾಗಿ ತಂದೊಪ್ಪಿಸುವ ಸೌತೆ ಮಿಡಿಗಳನ್ನು ಸ್ವೀಕರಿಸುತ್ತಾ ಸಂತಸದಿಂದ ನೆಲೆಯಾಗಿರುವ ಗಣೇಶನು ಸೌತಡ್ಕ ಪುಣ್ಯ ಕ್ಷೇತ್ರದಲ್ಲಿ ಹೊರತು ಬೇರೆಲ್ಲಿಯೂ ಕಾಣಸಿಗಲಾರದು.ಈ ಕ್ಷೇತ್ರದಲ್ಲಿ ಭಕ್ತರಿಗೆ ಮಧ್ಯಾಹ್ನದ ಊಟವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು.
ನಿತ್ಯಾನುಷ್ಠಾನ
ಬೆಳಿಗ್ಗೆ: 
ಪ್ರತಿದಿನ ಬೆಳಿಗ್ಗೆ ಅಭಿಷೇಕ ಮಾಡಿ, ಹಣ್ಣು ಕಾಯಿ, ಅವಲಕ್ಕಿ ಪಂಚಕಜ್ಜಾಯ ಸಮರ್ಪಣೆ ಮಾಡಿ 07:15 ಕ್ಕೆ ಬೆಳಗ್ಗಿನ ಪೂಜೆಯನ್ನು ಮಾಡುವುದು.
ಮದ್ಯಾಹ್ನ :
ಮದ್ಯಾಹ್ನ ಒಂದು ಸೇರು ಬೆಳ್ತಿಗೆ ಅಕ್ಕಿಯ ನೈವೇಧ್ಯ, ಹಣ್ಣು ಕಾಯಿ, ತಾಂಬೂಲಾದಿಗಳನ್ನು ಸಮರ್ಪಣೆ ಮಾಡಿ ಮದ್ಯಾಹ್ನ ಗಂಟೆ 12:15 ಕ್ಕೆ ಸರಿಯಾಗಿ ಮಹಾಪೂಜೆಯನ್ನು ಮಾಡುವುದು.
ರಾತ್ರಿ:
ರಾತ್ರಿ 07:15 ಕ್ಕೆ ಹಣ್ಣು ಕಾಯಿ, ಪಂಚಕಜ್ಜಾಯ ನೈವೇಧ್ಯವಾಗಿ ಮಹಾಪೂಜೆ ಜರುಗುವುದು.ದೇವಸ್ಥಾನದ ಅಂಚೆ ವಿಳಾಸ
ಶ್ರೀ ಮಹಾಗಣಪತಿ ದೇವಾಸ್ಥಾನ, ಸೌತಡ್ಕ,
ಕೊಕ್ಕಡ,
ಬೆಳ್ತಂಗಡಿ ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ-574 198
(ಮಾಹಿತಿ ,.ವಾಮದೇವ.)
*********

KESEVE near Udupi

The ancient 'Kamandala Ganapathi Temple' is located in the Village of 'Keseve' which is 23kms from the famous Temple Town of Singeri in Karnataka/India. The Temple is named as 'Kamandala Ganapathi Temple' because there is a perennial groundwater source flowing from the 'Kamandala/Pot like vessel' which is placed right in front of the sacred Idol of God Ganesha. The water continuously flows non-stop throughout the year for 365 days and this sacred water is only used for performing the Abhishekam for God Ganesha in this Temple.
******

ಉಡುಪಿಯ ಸಮೀಪ 'ಕೆಮುಂಡೇಲು'

.ಉಡುಪಿಯ ಸಮೀಪ 'ಕೆಮುಂಡೇಲು' ಎಂಬ ಪುಟ್ಟ ಗ್ರಾಮ. ಈ ಊರಿನ ಹೆಸರಿನ ಹಿಂದೆ ಒಂದು ಇತಿಹಾಸವಿದೆ. ಭಾವಿಸಮೀರ ಶ್ರೀವಾದಿರಾಜರು ಈ ಪ್ರದೇಶಕ್ಕೆ ಬಂದಾಗ ಅಲ್ಲಿರುವ ಕೃಷಿಕರು , ಈ ಸ್ಥಳದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವವಿದೆ ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿದರು. ಆಗ ಶ್ರೀವಾದಿರಾಜರು ಒಂದು ನಿರ್ಧಿಷ್ಟ ಸ್ಥಳದಲ್ಲಿ ತಮ್ಮ ಕಮಂಡಲುವನ್ನು ಇರಿಸಿ ನೀರಿನ ಸೆಲೆಯನ್ನು ಸೃಷ್ಟಿಸಿದರು. ಆ ಪ್ರದೇಶಕ್ಕಿದ್ದ ನೀರಿನ ಅಭಾವವನ್ನು ನೀಗಿಸಿದರು. ಶ್ರೀವಾದಿರಾಜರು ತಮ್ಮ ಕಮಂಡಲುವನ್ನು ಇರಿಸಿ ನೀರನ್ನು ಸೃಷ್ಟಿಸಿದ್ದರಿಂದ ಆ ನೀರಿನ ಕುಂಡಕ್ಕೆ 'ಕಮಂಡಲು ತೀರ್ಥ'ಎಂದೇ ಪ್ರಸಿದ್ಧಿಯಾಯಿತು. ಕಾಲಕ್ರಮೇಣ ಆ ಊರಿನ ಹೆಸರೇ' ಕೆಮುಂಡೇಲು' ಎಂದಾಯಿತು. ಇವತ್ತಿಗೂ ಆ ಕುಂಡದಲ್ಲಿ  ಕಡು ಬೇಸಿಗೆಯ ಸಮಯದಲ್ಲೂ ನೀರು ಬತ್ತುವುದಿಲ್ಲ. ಅಂದು ವಾದಿರಾಜರು ಸೃಷ್ಟಿಸಿದ ನೀರು ಇವತ್ತಿಗೂ ಜೀವಂತವಾಗಿದೆ. ಇವತ್ತಿಗೂ ಈ ಪರಿಸರಕ್ಕೆ ಸೂತಕದವರು , ರಜಸ್ವಲೆಯರು ಪ್ರವೇಶಿಸುವಂತಿಲ್ಲ. ಪ್ರವೇಶಿಸಿದವರು ಅನರ್ಥಗಳನ್ನು ಅನುಭವಿಸಿದ್ದಾರೆ.  
              ಅಲ್ಲೇ ಸಮೀಪದಲ್ಲಿ 'ಜನ್ನಿ' ಎಂಬ ಮನೆತನದವರಿಗೆ ಲಕ್ಷ್ಮೀ ನಾರಾಯಣ ದೇವರ ಪ್ರತಿಮೆಯನ್ನೂ ಶ್ರೀ ವಾದಿರಾಜರು ಅನುಗ್ರಹಿಸಿದ್ದಾರೆ.
****




ಹಲವು ವೈಶಿಷ್ಟ್ಯಗಳ ಹಾಸನಾಂಬಾ ದೇವಾಲಯ
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆವ ದೇವಾಲಯ. 2018ರ ನವೆಂಬರ್ 2ರಿಂದ ನವೆಂಬರ್ 8ರವರೆಗೆ ಮಾತ್ರ ಸಾರ್ವಜನಿಕರಿಗೆ ದೇವಿಯ ದರ್ಶನ
*ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ
ಅದ್ಭುತ ಶಿಲ್ಪಕಲೆಗಳ ಹಾಗೂ ದೇವಾಲಯಗಳ ತವರು ಹಾಸನ ಜಿಲ್ಲೆಯ ಕೇಂದ್ರ ಸ್ಥಳ ಹಾಸನ ಕೂಡ ಮಹಿಮಾನ್ವಿತವಾದ ನಗರ. ಇಲ್ಲಿರುವ ಹಾಸನಾಂಬೆ ನೂರಾರು ವರ್ಷಗಳಿಂದ ಹಾಸನವನ್ನು ಪೊರೆಯುತ್ತಿದ್ದಾಳೆ. ಆದರೆ ಈ ದೇವಿಯ ದರ್ಶನ ಮಿಕ್ಕೆಲ್ಲ ದೇವಾಲಯಗಳಂತೆ ನಿತ್ಯ ದೊರೆಯುವುದಿಲ್ಲ. ವರ್ಷಕ್ಕೊಮ್ಮೆ ಅದೂ 10-12 ದಿನ ಮಾತ್ರ ಲಭ್ಯವಾಗುತ್ತದೆ. ಇದೇನಿದು ವರ್ಷದಲ್ಲಿ 10-12 ದಿನ ಮಾತ್ರವೇ ಎನ್ನುತ್ತೀರಾ.. ಇದು ಅಚ್ಚರಿ ಎನಿಸಿದರೂ ಸತ್ಯ. ಪ್ರತಿ ವರ್ಷ ಆಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ಮಧ್ಯಾಹ್ನ ಬಾಗಿಲು ತೆರೆಯುವ ಈ ದೇವಾಲಯವನ್ನು ಕಾರ್ತೀಕ ಮಾಸದ ಬಲಿಪಾಡ್ಯಮಿಯ ಮಾರನೆ ದಿನ ಬೆಳಗ್ಗೆ ಮುಚ್ಚಲಾಗುತ್ತದೆ. ಮತ್ತೆ ಈ ದೇವಿಯ ದರ್ಶನ ಒಂದು ವರ್ಷದ ನಂತರವಷ್ಟೇ.
ಈ 10-12 ದಿನಗಳಲ್ಲಿ ದೇವಿಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇಕೆ ದೇಶಾದ್ಯಂತದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಎಲ್ಲ ಭಕ್ತರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲು ಹಾಗೂ ಯಾತ್ರಿಕರಿಗೆ ಸಕಲ ಅನುಕೂಲ ಕಲ್ಪಿಸಿಕೊಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತದೆ.
ಹಾಸನ ಎಂಬ ಹೆಸರು ಹೇಗೆ ಬಂತು: ಈ ಊರಿಗೆ ಹಾಸನ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆ ಹಲವು ಕಥೆಗಳಿವೆ. ಸ್ಥಳಪುರಾಣದ ರೀತ್ಯ ಹಾಸನ ಎಂಬ ಹೆಸರು ಸಿಂಹಾಸನಪುರವೆಂಬ ಪೂರ್ವನಾಮದಿಂದ ಬಂದಿದೆ. ದ್ವಾಪರ ಯುಗದಲ್ಲಿ ಈ ಸ್ಥಳ ಮಧ್ಯಮ ಪಾಂಡವ ಅರ್ಜುನನ ಮೊಮ್ಮಗ ಜನಮೇಜಯನ ಸ್ಥಳವೆಂಬ ಪ್ರತೀತಿ ಇದೆ. ಬ್ರಿಟಿಷ್ ಅಧಿಕಾರಿಯೊಬ್ಬರು ಸಿಂಹಾಸನಪುರಿ ಎಂಬ ಹೆಸರು ಹೇಳಲು ಕಷ್ಟ ಪಡುತ್ತಿದ್ದ ಕಾರಣ ಆರಂಭದ ಸಿಂಹವನ್ನು ಅಂತ್ಯದ ಪುರಿ ಎಂಬುದನ್ನು ಬಿಟ್ಟು ಹಾಸನ ಎಂದು ಕರೆಯುತ್ತಿದ್ದನಂತೆ ಹೀಗಾಗಿ ಈ ಊರಿನ ಹೆಸರು ಹಾಸನ ಎಂದಷ್ಟೇ ಉಳಿದುಕೊಂಡಿದೆ ಎಂದು ಕೆಲವರು ಹೇಳುತ್ತಾರೆ.
ಆದರೆ ಬಹುತೇಕರು ಇಲ್ಲಿರುವ ಹಾಸನಾಂಬೆಯ ದೇವಾಲಯದಿಂದಾಗಿ ಈ ಊರಿಗೆ ಹಾಸನ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಇದಕ್ಕೆ ಶಾಸನಗಳ ಪುಷ್ಟಿಯನ್ನೂ ನೀಡುತ್ತಾರೆ. ಹಾಸನ ಬಳಿಯ ಕುದರೆಗುಂಡಿ ಗ್ರಾಮದಲ್ಲಿ ಸಿಕ್ಕಿರುವ 1140ರ ಕಾಲದ ವೀರಗಲ್ಲಿ ಹಾಸನದ ಉಲ್ಲೇಖ ಇದೆಯಂತೆ. ಹೀಗಾಗಿ 11ನೇ ಶತಮಾನದಲ್ಲೇ ಈ ಊರಿಗೆ ಹಾಸನ ಎಂಬ ಹೆಸರಿತ್ತು ಎಂಬುದು ಅರಿವಾಗುತ್ತದೆ. ಇಲ್ಲಿರುವ ದೇವಿ ಹಾಸನಾಂಬೆ. ಸಪ್ತಮಾತೃಕೆಯರಲ್ಲಿ ಒಬ್ಬಳೆಂದು ಹೇಳಲಾಗುತ್ತದೆ.
ಒಮ್ಮೆ ಸಪ್ತಮಾತೆಯರು ವಾರಣಾಸಿಯಿಂದ ದಕ್ಷಿಣ ಭಾರತಕ್ಕೆ ಆಕಾಶ ಮಾರ್ಗದಲ್ಲಿ ಬರುತ್ತಿರುವಾಗ ಈ ಪ್ರದೇಶದ ರಮಣೀಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ ಇಳಿಯುತ್ತಾರೆ. ಕೆಲ ಕಾಲ ಅಲ್ಲೇ ನೆಲೆಸಲು ನಿರ್ಧರಿಸುತ್ತಾರೆ, ಇವರಲ್ಲಿ ಆರು ಮಾತೆಯರು ಹಾಸನದಲ್ಲೂ ಏಳನೇ ಮಾತೃಕೆ ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬ ಸ್ಥಳದಲ್ಲಿ ಕೆಂಚಾಂಬ ಎಂಬ ಹೆಸರಿನಿಂದಲೂ ನೆಲೆಗೊಂಡರೆಂಬುದು ಈ ಜಿಲ್ಲೆಯಲ್ಲಿರುವ ಜನಜನಿತ ಕಥೆ.
ಸುಮಾರು 11ನೆಯ ಶತಮಾನದಲ್ಲಿ ಚೋಳರಸರ ಅಧಿಪತಿಯಾದ ಬುಕ್ಕಾನಾಯಕ ಇಲ್ಲಿ ಕೋಟೆ ಮತ್ತು ಮಾರುಕಟ್ಟೆಯನ್ನು ಕಟ್ಟಿಸಿದ ಎಂದು ತಿಳಿದುಬರುತ್ತದೆ. ಬಳಿಕ 12ನೇ ಶತಮಾನದಲ್ಲಿ ಈ ಸ್ಥಳ ಸಂಜೀವ ಕೃಷ್ಣಪ್ಪ ನಾಯಕ ಎಂಬ ಪಾಳೆಯಗಾರನಿಗೆ ಸೇರಿತೆಂದು ಇತಿಹಾಸದಿಂದ ತಿಳಿಯಬರುತ್ತದೆ.
ಕೃಷ್ಣಪ್ಪ ನಾಯಕ ಒಮ್ಮೆ ತನ್ನ ಪರಿವಾರದೊಂದಿಗೆ ಕೋಟೆಯಿಂದ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಹೆಬ್ಬಾಗಿಲು ಪ್ರವೇಶಿಸಿ ಓಡಿಹೋಯಿತಂತೆ. ಇದನ್ನು ಅಪಶಕುನ ಎಂದು ತಿಳಿದ ನಾಯಕರು ಚಿಂತಾಕ್ರಾಂತರಾಗುತ್ತಾರೆ. ರಾತ್ರಿ ನಾಯಕನಿಗೆ ಸ್ವಪ್ನದಲ್ಲಿ ದರ್ಶನಕೊಟ್ಟ ಹಾಸನಾಂಬೆ ಆ ಸ್ಥಳದಲ್ಲಿ ಕೋಟೆ ಹಾಗೂ ದೇಗುಲ ಕಟ್ಟುವಂತೆ ಸೂಚಿಸಿದಳಂತೆ, ದೇವಿಯ ಆಣತಿಯಂತೆ ಕೋಟೆ ಹಾಗೂ ದೇಗುಲ ಕಟ್ಟಿಸಿದ ಕೃಷ್ಣಪ್ಪ ನಾಯಕರು, ಹಾಸನಾಂಬೆಯೆಂದು ಕರೆದರೆಂದು ಹಾಸನಾಂಬೆ ಇರುವ ಊರಿಗೆ ಹಾಸನವೆಂದು ಹೆಸರಿಟ್ಟರಂತೆ.
ಮತ್ತೊಂದು ಕಥೆ ರೀತ್ಯ ಅತ್ತೆ ಕಾಟದಿಂದ ಬೇಸತ್ತ ಸೊಸೆ ಇಲ್ಲಿ ನಿತ್ಯ ಬಂದು ದೇವಿಯ ದರ್ಶನ ಪಡೆಯುತ್ತಿದ್ದಳು, ತನ್ನ ನೋವು ಹೇಳಿಕೊಳ್ಳುತ್ತಿದ್ದಳು, ಒಮ್ಮೆ ಅವಳನ್ನುಅನುಸರಿಸಿ ಬಂದ ಅತ್ತೆ ತನ್ನ ಸೊಸೆ ದೇವಿಯೊಂದಿಗೆ ಮಾತನಾಡುವುದನ್ನು ಕಂಡು ಆಕೆಯ ತಲೆಗೆ ಕುಕ್ಕಿದಾಗ ಆಕೆ ಕಲ್ಲಾದಳೆಂಬ ಕಥೆಯೂ ಇದೆ. ಇದಕ್ಕೆ ಪುಷ್ಟಿಯಾಗಿ ಇಲ್ಲೊಂದು ಕಲ್ಲಿದೆ ಎನ್ನುತ್ತಾರೆ. ಆದರೆ ಇದಕ್ಕೆ ಸ್ಪಷ್ಟ ಆಧಾರವಿಲ್ಲ.
ದೇವಿಯ ಮಹಿಮೆ: ಹುತ್ತ ರೂಪದಲ್ಲಿ ಇಲ್ಲಿ ನೆಲೆಸಿರುವ ಹಾಸನಾಂಬಾ ದೇವಿಯನ್ನು ಸಾಂಕೇತಿಕವಾಗಿ ಕುಂಭ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕುಂಭಗಳಿಗೆ ಹೆಣ್ಣು ದೇವತೆಗಳಂತೆ ಮುಖವಾಡಗಳನ್ನು ಮಾಡಿ ಅಲಂಕರಿಸಲಾಗುತ್ತದೆ. ಆದರೆ ದೇವಾಲಯ ಬಾಗಿಲು ತೆರೆಯುವ ಮೊದಲ ದಿನ ಮಾತ್ರ ಯಾವುದೇ ಅಲಂಕಾರಗಳಿಲ್ಲದೆ ಮೂಲ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಾರನೇ ದಿನದಿಂದ ಜಿಲ್ಲಾ ಖಜಾನೆಯಿಂದ ಆಭರಣ ತಂದು ಅಲಂಕರಿಸಲಾಗುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ಬೆಳಗ್ಗೆ ಬಾಗಿಲು ಹಾಕುವಾಗ ಹಚ್ಚಿಡುವ ದೀಪ ಮುಂದಿನ ವರ್ಷ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಎಂಬುದು ನಂಬಿಕೆ. ಹಿಂದೆ ಇಲ್ಲಿ ಮೂರು ಪಾತ್ರೆಗಳಲ್ಲಿ ಮಾಡಿಡುತ್ತಿದ್ದ ಎಡೆ ಮುಂದಿನ ವರ್ಷದವರೆಗೂ ಬಿಸಿಯಾಗೇ ಇರುತ್ತಿತ್ತು. ಅದನ್ನೇ ಪ್ರಸಾದ ಎಂದು ನೀಡುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ಆ ಪದ್ಧತಿ ನಿಂತು ಹೋಗಿದೆಯಂತೆ.
ವರ್ಷಕ್ಕೊಮ್ಮೆ ಮಾತ್ರವೇ ಬಾಗಿಲು ತೆರೆಯುವುದರಿಂದ ಬಾಗಿಲು ತೆರೆದ ಕೂಡಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಅದಕ್ಕೆ ಎರಡು ಕಾರಣ ಇದೆಯಂತೆ. ಒಂದು ವರ್ಷವಿಡೀ ಬಾಗಿಲು ಹಾಕುವ ಕಾರಣ ಬಾಗಿಲು ತೆಗೆದ ಕೂಡಲೇ ದೇವಿಯ ನೋಟದ ಶಕ್ತಿ ತಡೆದುಕೊಳ್ಳುವ ಶಕ್ತಿ ಭಕ್ತಿರಿಗೆ ಇರುವುದಿಲ್ಲವಂತೆ ಹೀಗಾಗಿ ದೇವಾಲಯದ ಮುಂದೆ ಬಾಳೆಯ ಕಂದು ಕಡಿದು ದೃಷ್ಟಿ ನಿವಾರಣೆ ಮಾಡುತ್ತಾರಂತೆ. ಮತ್ತೊಂದು ವೈಜ್ಞಾನಿಕ ಕಾರಣ, ದೇವಾಲಯದಲ್ಲಿ ಹುತ್ತ ಇರುವ ಕಾರಣ ಹಾಗೂ ವರ್ಷ ಪೂರ್ತಿ ಮುಚ್ಚಿರುವ ಕಾರಣ ಹಾವುಗಳು ಇತ್ಯಾದಿ ಇರುವ ಅಪಾಯವೂ ಇರುತ್ತದೆ. ಹೀಗಾಗಿ ಆರಂಭದಲ್ಲಿ ವಾದ್ಯಗಳ ಶಬ್ದ ಮಾಡಿ ನಂತರ ದೇಗುಲಕ್ಕೆ ಭಕ್ತರನ್ನು ಬಿಡಲಾಗುತ್ತದೆ ಎನ್ನಲಾಗಿದೆ. ಹಾಸನಾಂಬೆ ಶಕ್ತಿದೇವತೆಯಾದರೂ ಇಲ್ಲಿ ಪ್ರಾಣಿಬಲಿ ನಡೆಯುವುದಿಲ್ಲ. ಜೊತೆಗೆ ದೇವಾಲಯದ ಸುತ್ತಮುತ್ತ ಇರುವ ಮನೆಗಳವರು ದೇವಾಲಯ ತೆರೆದಿರುವ ಅಷ್ಟೂ ದಿನ ಮನೆಯಲ್ಲಿ ಒಗ್ಗರಣೆ ಸಿಡಿಸಿವುದಿಲ್ಲ.
ವರ್ಷಕ್ಕೊಮ್ಮೆ ಮಾತ್ರ ತೆರೆಯುವುದೇಕೆ: ಈ ದೇವಾಲಯವನ್ನು ವರ್ಷಕ್ಕೊಮ್ಮೆ ಮಾತ್ರವೇ ತೆರೆಯುವುದೇಕೆ ಎಂಬುದಕ್ಕೆ ಸೂಕ್ತ ಸಮಜಾಯಿಷಿ ಇಲ್ಲ. ಆದರೆ, ದೀಪಾವಳಿಯ ಸಂದರ್ಭದಲ್ಲಿ ತೆರೆಯುವ ಈ ದೇವಾಲಯದ ಜೊತೆ ದೀಪಾವಳಿ ಹಬ್ಬದ ನಂಟಂತೂ ಇದೆ. ಬ್ರಹ್ಮನ ವರ ಬಲದಿಂದ ಮದಾಂಧನಾದ ಅಂಧಕಾಸುರನೆಂಬ ರಾಕ್ಷಸ ಲೋಕ ಕಂಟಕನಾಗುತ್ತಾನೆ. ಆ ರಕ್ಕಸನ ವಧೆಗೆ ಪರಶಿವ ಸಿದ್ಧನಾಗುತ್ತಾನೆ. ಅಂಧಕಾಸುರನೊಂದಿಗಿನ ಕಾಳಗದಲ್ಲಿ ಆತನ ಮೈಯಿಂದ ಕೆಳಗೆ ಬಿದ್ದ ರಕ್ತದ ಪ್ರತಿ ಹನಿಯಿಂದಲೂ ಒಬ್ಬೊಬ್ಬ ಅಂಧಕಾಸುರ ಹುಟ್ಟುತ್ತಿರುತ್ತಾನೆ. ಅವನ ರಕ್ತ ನೆಲಕ್ಕೆ ಬೀಳುವುದನ್ನು ತಡೆಯುವ ಸಲುವಾಗಿ ತನ್ನ ಬಾಯಿಯಿಂದ ಶಿವನು ಒಬ್ಬ ಶಕ್ತಿಯನ್ನು (ಯೋಗೇಶ್ವರಿ) ಸೃಷ್ಟಿಸಿದನಂತೆ. ಇತರ ದೇವತೆಗಳೂ ಕೂಡ ತಮ್ಮ ತಮ್ಮ ಶಕ್ತಿಯಿಂದ ಆರು ದೇವಿಯರನ್ನು ಸೃಷ್ಟಿಸಿದರು. ಅವರೇ ಸಪ್ತಮಾತೃಕೆಯರು ಎನ್ನಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಅಂಧಕಾಸುರನ ಸಂಹರಿಸಿದ್ದರಿಂದ ಆ ಸಂದರ್ಭದಲ್ಲಿ ಮಾತ್ರ ದೇವಾಲಯ ತೆರೆಯಲಾಗುತ್ತದೆ ಎನ್ನುತ್ತಾರೆ. ಹಾಸನಾಂಬೆ ದೇವಾಲಯದ ದ್ವಾರವನ್ನು ಪ್ರವೇಶ ಮಾಡುತ್ತಿದ್ದಂತೆ ಶ್ರೀ ಸಿದ್ದೇಶ್ವರಸ್ವಾಮಿ ದೇವರ ದರ್ಶನ ಆಗುತ್ತದೆ. ಇಲ್ಲಿನ ಶ್ರೀ ಸಿದ್ದೇಶ್ವರಸ್ವಾಮಿ ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ರೂಪದಲ್ಲಿದ್ದಾನೆ. ಗಣಪತಿಯ ಗುಡಿಯೂ ಇಲ್ಲಿದೆ.
*****
ಶಿವ ದೇವಸ್ಥಾನ ಪಂಚಲಿಂಗ shiva temple panchalinga

ಸದ್ಯೋಜಾತ, ವಾಮದೇವ, ತತ್ಪುರುಷ, ಅಘೊರ ಹಾಗೂ ಈಶಾನ ಎಂಬ ಪಂಚಮುಖಗಳಿಂದ ಶಿವನು ಪರಿಶೋಭಿಸುವ ಪುಣ್ಯಕ್ಷೇತ್ರವೇ ಪಂಚಲಿಂಗ. ತಿರುಮಲಯೋಗಿ ಎಂಬ ಶ್ರೇಷ್ಠ ಹರಿಭಕ್ತರಿಂದ ಸ್ಥಾಪಿತವಾಗಿದೆ ಎನ್ನಲಾಗುವ ಪಂಚಲಿಂಗಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಉತ್ತರಕನ್ನಡ ಜಿಲ್ಲೆ ಶಿರಸಿಯಿಂದ 15 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ದೀಪೋತ್ಸವ ಕಣ್ಮನ ತಣಿಸುತ್ತದೆ.


ಪಂಚಲಿಂಗದ ಐತಿಹ್ಯ: ಪಂಚಲಿಂಗದ ಆದಿದೇವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಕ್ಷೇತ್ರದ ಆರಂಭದಲ್ಲಿಯೇ ಕಾಣಿಸುತ್ತದೆ. ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದ ಹರಿಯ ಪರಮಭಕ್ತ ತಿರುಮಲಯೋಗಿ ‘ಕಂಕಹೃದ’ ಎಂಬಲ್ಲಿಂದ ಶ್ರೀಹರಿಯ ಮೂರ್ತಿಯನ್ನು ಮಂಜಗುಣಿಗೆ ಕೊಂಡೊಯ್ದು ಪ್ರತಿಷ್ಠಾಪನೆಗೈದು ತಪಸ್ಸನ್ನಾಚರಿಸುತ್ತಿದ್ದರು. ಅಲ್ಲಿಂದ ತೆರಳುವ ಸಂದರ್ಭದಲ್ಲಿ ಪರಶಿವನಿಗೆ ಅರ್ಚನೆ ನಡೆಯುತ್ತಿತ್ತು. ಶ್ರೀಹರಿಯ ಸೇವೆಯಲ್ಲೇ ಭಾವವನ್ನು ಕೇಂದ್ರೀಕರಿಸಿಕೊಂಡಿದ್ದ ತಿರುಮಲಯೋಗಿಗಳು ಶಿವ-ಪಾರ್ವತಿಗೆ ನಮಸ್ಕರಿಸದೆ ಹೊರಟುಬಿಟ್ಟರು. ಇದರಿಂದ ವ್ಯಗ್ರಳಾದ ಪಾರ್ವತಿ ‘ದೇವತೆಗಳೆಲ್ಲ ಕಲ್ಲಾಗಿ ಹೋಗಲಿ’ ಎಂದು ಶಪಿಸಿದಳು. ಈ ಶಾಪದಿಂದ ನೊಂದ ಪರಶಿವನು ಪಾರ್ವತಿಯ ಸದ್ಬುದ್ಧಿಗಾಗಿ ಅಲ್ಲಿಂದ ಈಶಾನ್ಯ ದಿಕ್ಕಿಗೆ ಸಾಗಿ ಪಂಚಮುಖನಾಗಿ (ಐದು ಮುಖಗಳಿಂದ ಕೂಡಿದವನಾಗಿ) ತಪಸ್ಸನ್ನಾಚರಿಸಿದ. ತಮ್ಮಿಂದಾದ ಪ್ರಮಾದವನ್ನು ನಾರದರಿಂದ ಅರಿತ ತಿರುಮಲಯೋಗಿ ಪರಶಿವನನ್ನು ಕುರಿತು ಸುದೀರ್ಘ ತಪಸ್ಸನ್ನಾಚರಿಸಿ ಪಂಚಲಿಂಗ ಕ್ಷೇತ್ರದ ಸ್ಥಾಪನೆಗೆ ಕಾರಣರಾದರು.

ಕಣ್ಮನ ತಣಿಸುವ ದೀಪಗಳ ಸೊಬಗು: ಬೇಸಿಗೆ, ಚಳಿಗಾಲ ಎನ್ನದೆ ಸದಾ ಕಾಲವೂ ನೀರಿನಿಂದ ತುಂಬಿರುವ ಎರಡು ಪುಟ್ಟ ಕೊಳಗಳು, ನಿಂತ ಭಂಗಿಯಲ್ಲಿರುವ ಲಕ್ಷ್ಮೀನಾರಾಯಣ ದೇವರು, ನಂದಿಸ್ತಂಭ, ನಂದಿಧ್ವಜ, ಗುರುಮೂರ್ತಿಕಟ್ಟೆ ಇಲ್ಲಿನ ವಿಶೇಷ ಆಕರ್ಷಣೆಗಳು. ಪ್ರತಿವರ್ಷ ಕಾರ್ತಿಕ ಶುದ್ಧ ಚತುರ್ದಶಿಯಂದು ನಡೆಯುವ ಪಲ್ಲಕ್ಕಿ ಉತ್ಸವ, ದೀಪೋತ್ಸವಗಳ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ.

ಐದು ಮುಖಗಳಿಂದ ಶೋಭಿಸುತ್ತಿರುವ ಶಿವನಿಗೆ ಇಲ್ಲಿ ಐದು ನಂದಿಗಳೂ ಇವೆ. ತಿರುಮಲಯೋಗಿಗಳು ತಪಸ್ಸನ್ನಾಚರಿಸಿ ತೀಥೋದ್ಭವ ಮಾಡಿದರು ಎಂದು ಹೇಳಲಾಗುವ ‘ತೀರ್ಥಗಾನ’ ಎಂಬ ಊರಿನಿಂದ ಸ್ವಾಭಾವಿಕ ನೀರು ಪಂಚಲಿಂಗಕ್ಕೆ ಹರಿದುಬರುತ್ತದೆ. ಹೆಣ್ಣು-ಗಂಡು ಪ್ರಸ್ತಾಪ, ಜಮೀನು ಸಾರಾವಳಿಗಳ ವಿಚಾರದಲ್ಲಿ ದೇವರ ಪ್ರಸಾದದ ಮುಖಾಂತರ ಖಚಿತ ಉತ್ತರ ಸಿಗುವುದು ಪಂಚಲಿಂಗೇಶ್ವರನ ವೈಶಿಷ್ಟ್ಯ ಇಂದು (ನ. 22) ಪಂಚಲಿಂಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ಪಂಚಲಿಂಗೇಶ್ವರ ದೇವರ ಕಾರ್ತಿಕ ದೀಪೋತ್ಸವ ಜರುಗಲಿದೆ.

ತನುಜಾ ವಿನಾಯಕ
**



ಪ್ರಾಣದೇವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರ ಗ್ರಾಮ koravara sindagi vijaypura

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರ ಗ್ರಾಮವು ಪ್ರಾಣದೇವರ ಪ್ರಾಚೀನ ಕ್ಷೇತ್ರಗಳಲ್ಲೊಂದು. ಶ್ರೀ ವಾದಿರಾಜರು ತೀರ್ಥಯಾತ್ರೆ ಮಾಡುತ್ತ ವಿಜಯಪುರಕ್ಕೆ ಬಂದರು. ಯುದ್ಧ ವಿಜಯಿಯಾದ ಶ್ರೀರಾಮ ಅಯೋಧ್ಯೆಗೆ ತೆರಳುವ ಮುನ್ನ ಕೋಕಿಲಾಪುರವೆಂಬ ಈ ಗ್ರಾಮದಲ್ಲಿ ತಂಗಿದ್ದನೆಂಬ ತ್ರಿಕಾಲಜ್ಞಾನಿಗಳಾದ ಅವರಿಗೆ ತಿಳಿದಿತ್ತು. ಅಗಸ್ಱರಾದಿಯಾಗಿ ಸರ್ಪ¤ಗಳಿಂದ ಪೂಜಿಸಲ್ಪಟ್ಟ ತನ್ನ ವಿಗ್ರಹವನ್ನು ಕೋರವಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ದಿವ್ಯವಾಣಿಯನ್ನು ವಾದಿರಾಜರು ಗ್ರಾಮನಿವಾಸಿಗಳಿಗೆ ಅರುಹಿದರು. ಪಾವನಮಡಿ ಎಂದು ಕರೆಸಿಕೊಳ್ಳುವ ಕೋರವಾರದ ಈಶಾನ್ಯದಿಕ್ಕಿಗಿರುವ ದಿಬ್ಬದಲ್ಲಿ ಮಣ್ಣುಕಲ್ಲೊಳಗೆ ಮುಚ್ಚಿದ ವಿಗ್ರಹವನ್ನು ಹೊರತೆಗೆಯಲಾಯಿತು. ಕೋರವಾರಕ್ಕೆ ತಂದ ಆ ವಿಗ್ರಹವನ್ನು ಚೈತ್ರ ಶುದ್ಧ ಪ್ರತಿಪದೆಯ ದಿನ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು.
*******



ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ. ಬೆಂಗಳೂರು ಬಳಿಯ ಪುರಾತನ ಪುಣ್ಯಕ್ಷೇತ್ರ ‘ಘಾಟಿ ಸುಬ್ರಹ್ಮಣ್ಯ’ 

ಸೊಂಡೂರು ಅರಸರು ಕಟ್ಟಿದ ಸುಂದರ ದೇಗುಲದಿ ನೆಲೆಸಿಹ ಸುಬ್ರಣ್ಯನ ನೆಲೆವೀಡು ಈ ಘಾಟಿ..

*ಟಿ.ಎಂ.ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ, ourtemples.in
ಪಳನಿ, ಕುಕ್ಕೆಯಷ್ಟೇ ಪ್ರಖ್ಯಾತವಾದ ಸುಬ್ರಹ್ಮಣ್ಯ ಕ್ಷೇತ್ರ ಘಾಟಿ. ಘಾಟಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ. ದಟ್ಟವಾದ ಘಟ್ಟ ಪ್ರದೇಶದ ಮಧ್ಯೆ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿಹ ಈ ಸ್ಥಳಕ್ಕೆ ಘಾಟಿ ಸುಬ್ರಹ್ಮಣ್ಯ ಎಂದೇ ಹೆಸರಾಗಿದೆ. ಇಲ್ಲಿ ಕುಮಾರಸ್ವಾಮಿಯು ಏಳು ಹೆಡೆಯಿಂದ ಕೂಡಿ ಪೂರ್ವಾಭಿಮುಖವಾಗಿರುವ ಏಕಾಶಿಲಾಮೂರ್ತಿಯಾಗಿ ರಾರಾಜಿಸುತ್ತಿದ್ದಾನೆ.
ಐತಿಹ್ಯ : ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರು ಪ್ರಕಟವಾಗಿ ಸುಮಾರು ೬೦೦ ವರ್ಷಗಳು ಕಳೆದಿವೆ. ಈ ಕ್ಷೇತ್ರದ ಪೂರ್ವೇತಿಹಾಸದ ರೀತ್ಯ ವಿಳ್ಳೇದೆಲೆ ವ್ಯಾಪಾರಿಯೊಬ್ಬ ವ್ಯಾಪಾರಾರ್ಥ ಹೋಗಿ ಬರುವಾಗ ಇಲ್ಲಿ ತಂಗುತ್ತಿದ್ದನಂತೆ. ಆ ವ್ಯಾಪಾರಿಯು ಪಕ್ಕದಲ್ಲೇ ಇರುವ ಕುಮಾರತೀರ್ಥದ ಬಳಿ ಊಟ ಮಾಡಿ, ನೀರು ಕುಡಿದು (ಆಗ ಕುಮಾರ ತೀರ್ಥ ಕೇವಲ ಒಂದು ಸಣ್ಣ ದೋಣಿಯೋಪಾದಿಯಲ್ಲಿತ್ತಂತೆ) ಬಂದು, ಈಗ ಮೂಲಸ್ವಾಮಿ ಇರುವ ಬಲಭಾಗದಲ್ಲಿ ಏಳು ಹೆಡೆಗಳು ಉದ್ಭವಿಸಿರುವ ಶಿಲೆಯ ಮೇಲೆಯೇ ಮಲಗುತ್ತಿದ್ದನಂತೆ. ಒಮ್ಮೆ ಆತ ಮಲಗಿದ್ದಾಗ ‘ನೆರಳಾಗಿರುವ ಮರದಡಿಯ ಈ ಶಿಲೆಯ ಮೇಲೆ ಭಾರವಾಗಿ ಏಕೆ ಮಲಗಿರುವೆ ಏಳು ಏಳು’ ಎಂಬ ಮಾತುಗಳು ಕೇಳಿತಂತೆ. ಇದು ಹಲವು ಬಾರಿ ಪುನರಾವರ್ತನೆಯಾಯಿತು. ಆಗ ಆತ ಇದು ಯಾವುದೋ ದುಷ್ಟಶಕ್ತಿಯ ಕೀಟಲೆ ಇರಬೇಕು ಎಂದುಕೊಂಡು ಸುಮ್ಮನಾದನಂತೆ. ಒಂದು ಹಬ್ಬದ ದಿನ ಎಲೆ ಮಾರಿ ಆಯಾಸಗೊಂಡು ಆತ ಅದೇ ಶಿಲೆಯ ಮೇಲೆ ಮಲಗಿದ್ದಾಗ, ಸ್ವಾಮಿಯು ಕನಸಿನಲ್ಲಿ ವ್ಯಾಪಾರಿಗೆ ತನ್ನ ನಿಜ ಸ್ವರೂಪದಲ್ಲಿ ದರ್ಶನ ನೀಡಿ, ತಾನು ಈ ಶಿಲೆಗೆ ೨೦ ಗಜಾಂತರದಲ್ಲಿ ಇರುವುದಾಗಿಯೂ ಈ ವಿಷಯವನ್ನು ತನ್ನ ಭಕ್ತರಾದ ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹಾರಾಜರಿಗೆ ಈ ವಿಷಯ ತಿಳಿಸು, ಅವರು ಇಲ್ಲಿ ಗುಡಿಗೋಪುರ ಕಟ್ಟಿಸುತ್ತಾರೆ, ನಿನಗೆ ನಾನು ಜೀವನಾಂತ್ಯದಲ್ಲಿ ಮುಕ್ತ ನೀಡುವೆನು ಎಂದು ಆಣತಿ ನೀಡಿ, ಅದೃಶ್ಯನಾದನಂತೆ. ಈ ಸ್ವಪ್ನ ದಿಂದ ಎಚ್ಚೆತ್ತ ವ್ಯಾಪಾರಿ ಎದುರು ಒಬ್ಬ ಬ್ರಾಹ್ಮಣನನ್ನು ಕಂಡು, ಎಲ್ಲ ವೃತ್ತಾಂತವನ್ನೂ ಆ ಬ್ರಾಹ್ಮಣನಿಗೆ ತಿಳಿಸಿದನಂತೆ. ಬ್ರಾಹ್ಮಣ ಆ ಶಿಲೆಯ ಬಳಿ ಬಂದಾಗ, ಸ್ವಾಮಿಯು ಕ್ಷಣ ಮಾತ್ರ ಸರ್ಪ ರೂಪದಲ್ಲಿ ಬ್ರಾಹ್ಮಣನಿಗೂ ದರ್ಶನ ನೀಡಿ ಅಂತರ್ಧಾನನಾದನು. ಆಗ ಬ್ರಾಹ್ಮಣ ಮತ್ತು ವ್ಯಾಪಾರಿ ಇಬ್ಬರೂ ಕೂಡಿ ಸೊಂಡೂರಿಗೆ ಹೋಗಿ ರಾಜರ ದರ್ಶನ ನಾಡಿ ತಮ್ಮ ಸ್ವಪ್ನದ ವೃತ್ತಾಂತ ತಿಳಿಸಿದರಂತೆ. ಆದರೆ, ರಾಜನು ತನಗೆ ಹಲವು ರಾಜಕಾರ್ಯಗಳಿದ್ದು, ತತ್‌ಕ್ಷಣವೇ ಅಲ್ಲಿಗೆ ಬರಲಾಗುವುದಿಲ್ಲವೆಂದೂ, ಅಗತ್ಯವಿದ್ದರೆ ಧನಕನಕ ಸಹಾಯ ಮಾಡುವುದಾಗಿಯೂ, ನೀವೇ ದೇಗುಲ ಕಟ್ಟಿ ಎಂದು ಹೇಳಿದನಂತೆ. ಇದರಿಂದ ನೊಂದ ವರ್ತಕ ಮತ್ತು ಬ್ರಾಹ್ಮಣನು, ಮಹಾಸ್ವಾಮಿ ಆ ಭಗವಂತನ ಆಣತಿಯನ್ನು ನಿಮಗೆ ತಿಳಿಸಿದ್ದೇವೆ. ನಮಗೆ ಹೊರಡಲು ಅಪ್ಪಣೆ ಕೊಡಿ ಎಂದು ಹೇಳಿ ಹೊರಟರಂತೆ. ಅಷ್ಟು ದೂರ ಪ್ರಯಾಣ ಮಾಡಿದ್ದ ಆ ಇಬ್ಬರೂ, ಅದೇ ಊರಿನ ಬ್ರಾಹ್ಮಣನ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಲೂ ನಿರ್ಧರಿಸಿದರಂತೆ. ಅದೇ ದಿನ ರಾತ್ರಿ, ರಾಜನ ಸ್ವಪ್ನದಲ್ಲಿ ಉಗ್ರವಾಗಿ ಕಾಣಿಸಿಕೊಂಡ ಸ್ವಾಮಿ, ತನ್ನ ಆಜ್ಞೆಯನ್ನು ತಿರಸ್ಕರಿಸಿದ ರಾಜನ ಮೇಲೆ ವ್ಯಗ್ರನಾದನಂತೆ. ನೀನು ನನ್ನ ಆಣತಿ ತಿರಸ್ಕರಿಸಿರುವ ಫಲವಾಗಿ, ನಿನ್ನ ಖಜಾನೆ ಬರಿದಾಗಿ, ನಿನ್ನ ಪುತ್ರ, ಪೌತ್ರ ಕಳತ್ರಾದಿಗಳಿಗೆ ಕಷ್ಟ ಬರಲಿದೆ ಎಂದು ಎಚ್ಚರಿಸಿದನಂತೆ. ಕೂಡಲೇ ನಿದ್ದೆಯಿಂದೆದ್ದ ರಾಜನು ತನ್ನ ತಪ್ಪಿಗೆ ದೇವರ ಕ್ಷಮೆ ಕೋರಿ, ಆ ವರ್ತಕ ಮತ್ತು ಬ್ರಾಹ್ಮಣನನ್ನು ಹುಡುಕಿ ಕರೆಸಿ ಅವರೊಂದಿಗೇ ಘಾಟಿಯತ್ತ ಪ್ರಯಾಣ ಬೆಳೆಸಿದನಂತೆ. ಆ ಕ್ಷೇತ್ರಕ್ಕೆ ಬಂದು ಮೂಲ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಆಣತಿಯಂತೆ ಗುಡಿ ಗೋಪುರ ಕಟ್ಟಿಸಿ, ಆ ಬ್ರಾಹ್ಮಣನನ್ನೇ ಪೂಜೆಗೆ ನೇಮಿಸಿದರಂತೆ. ಪೂಜಾದಿಗಳಿಗೆ ಭೂಮಿಯನ್ನು ದಾನವಾಗಿ ನೀಡಿದರಂತೆ. ಇಂದೂ ಅದೇ ಅರ್ಚಕರ ವಂಶಸ್ಥರು ಇಲ್ಲಿ ಪೂಜೆ ಮುಂದುವರಿಸಿಕೊಂಡು ಬಂದಿದ್ದಾರೆ.
ಈ ಸ್ಥಳದಲ್ಲಿ ಮಹಾರಾಜರಿಗೆ ಹುತ್ತದಲ್ಲಿ ದೊರೆತ ಲಕ್ಷ್ಮೀನರಸಿಂಹ ಸಮೇತ ಸ್ವಾಮಿಯು ನೆಲೆಸಿದ್ದಾನೆ. ಪೂರ್ವಾಭಿಮುಖನಾದ ಏಳುಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ನೆರವಿನಿಂದ ದರ್ಶಿಸಬಹುದಾಗಿದೆ. ಇಲ್ಲಿ ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಬ್ರಹ್ಮ ರಥೋತ್ಸವ ಜರುಗುತ್ತದೆ. ಅನ್ನದಾನವೂ ನಡೆಯುತ್ತದೆ. ಪ್ರತಿನಿತ್ಯ ಮೂರು ಕಾಲ ದೀಪಾರಾದನೆ ಮೊದಾಲದ ಕೈಂಕರ್ಯಗಳು ನಡೆಯುತ್ತವೆ. ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಘಾಟಿಯ ದನಗಳ ಜಾತ್ರೆಯೂ ಬಹು ವಿಖ್ಯಾತ.
ಕುಮಾರತೀರ್ಥ : ಇಲ್ಲಿರುವ ಕುಮಾರತೀರ್ಥದಲ್ಲಿ ಸ್ವಾಮಿಯು ಪ್ರತಿದಿನ ಸ್ನಾನ ಮಾಡುತ್ತಿದ್ದನೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಹೀಗಾಗಿ ಈ ತೀರ್ಥದಲ್ಲಿ ಸ್ನಾನ ಮಾಡಿ ಭಕ್ತಿಯಿಂದ ದೇವರನ್ನು ಪೂಜಿಸಿದರೆ ಕುಷ್ಟ, ಹುಚ್ಚು, ಭಗಂದರ, ಉದರವ್ಯಾದಿ, ಹೃದಯಶೂಲೆಗಳೇ ಮೊದಲಾದ ರೋಗಗಳು ವಾಸಿಯಾಗುತ್ತವೆ ಎಂದು ಹಿರೀಕರು ಹೇಳುತ್ತಾರೆ. ಈ ಹೊತ್ತು ಇಲ್ಲಿ ಸುಂದರವಾದ ದೇವಾಲಯ ನಿರ್ಮಿಸಲಾಗಿದೆ. ದೇಗುಲದ ಆವರಣದಲ್ಲಿ ಕ್ಷೇತ್ರದ ಇತಿಹಾಸ, ಚರಿತ್ರೆ ಸಾರುವ ನೂರಾರು ದೊಡ್ಡ ದೊಡ್ಡ ಚಿತ್ರಪಟಗಳನ್ನು ತೂಗುಹಾಕಲಾಗಿದೆ.
ದೇಗುಲದ ಬಳಿ ಇರುವ ಅಶ್ವತ್ಥ ಕಟ್ಟೆಯಲ್ಲಿ ಹರಕೆಹೊತ್ತವರು ಬಂದು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸುತ್ತಾರೆ. ನೀರಿನ ಸಂಗ್ರಹಕ್ಕಾಗಿ ದೇವಾಲಯದ ಹಿಂಭಾಗದ ಅನತಿ ದೂರದಲ್ಲಿ ಎರಡು ಬೆಟ್ಟಗಳ ನಡುವೆ ವಿಶ್ವೇಶ್ವರಯ್ಯ ಡ್ಯಾಂ ನಿರ್ಮಿಸಲಾಗಿದೆ. ಬೆಂಗಳೂರು, ಮೈಸೂರು, ಕೋಲಾರ ಇತ್ಯಾದಿ ಊರುಗಳಿಂದ ಘಾಟಿಗೆ ನೇರ ಬಸ್ ಸೌಕರ್ಯವಿದೆ. ಬೆಂಗಳೂರು ಗುಂತಕಲ್ ರೈಲು ಮಾರ್ಗದಲ್ಲಿ ಮಾಕಾಳಿದುರ್ಗದಲ್ಲಿ ಇಳಿದರೆ ಮೂರು ಕಿಲೋ ಮೀಟರ್ ದೂರದಲ್ಲಿ ಈ ಕ್ಷೇತ್ರ ಇದೆ. ಮಧ್ಯಾಹ್ನದ ಹೊತ್ತು ಇಲ್ಲಿ ಭಕ್ತರಿಗೆ ಊಟದ ವ್ಯವಸ್ಥೆಯೂ ಇದೆ. (ಮೂಲ ದೇವರ ಚಿತ್ರಕೃಪೆ - ವಾಟ್ಸ್ ಅಪ್ ಗ್ರೂಪ್. ಈ ಅತ್ಯಂತ ಸುಂದರ ಚಿತ್ರವನ್ನು. -ತೆಗೆದವರಿಗೆ ನಾವು ಆಭಾರಿಗಳು.)
***




ಬೆಳವಾಡಿಯ ವೀರನಾರಾಯಣ ದೇವಾಲಯ 

ನರಸಿಂಹ ಹಾಗೂ ಕೃಷ್ಣನ ನೋಡಲು ಕಣ್ಣು ನೂರು ಸಾಲದು...

ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಣ. ಚಿಕ್ಕಮಗಳೂರಿನಿಂದ ಬಾಣಾವರಕ್ಕೆ ಹೋಗುವ ದಾರಿಯಲ್ಲಿ 20 ಕಿಮೀ ದೂರದಲ್ಲಿರುವ ಇಲ್ಲಿ ಮನಮೋಹಕವಾದ ಹೊಯ್ಸಳ ಶೈಲಿಯ ವೀರನಾರಾಯಣ ಸ್ವಾಮಿ ದೇವಾಲಯವಿದೆ.

ಹೊಯ್ಸಳರ ಕಾಲದಲ್ಲಿ ಜೈನ ಕೇಂದ್ರವಾಗಿದ್ದ ಈ ಗ್ರಾಮವನ್ನು 1760ರಲ್ಲಿ ಮೈಸೂರು ಅರಸು, ಇಮ್ಮಡಿ ಕೃಷ್ಣರಾಜ ಒಡೆಯರು ಈ ಊರನ್ನು ಶೃಂಗೇರಿ ಮಠಕ್ಕೆ ಜಹಗೀರಿ ನೀಡಿದ್ದರು ಎಂದು ತಿಳಿದುಬರುತ್ತದೆ. ಸ್ಥಳ ಪುರಾಣದ ರೀತ್ಯ ಪುರಾಣ ಕಾಲದಲ್ಲಿ ಈ ಗ್ರಾಮ ಏಕಚಕ್ರನಗರ ಎಂದು ಹೆಸರಾಗಿತ್ತು.

ವನವಾಸಿಗಳಾಗಿದ್ದ ಪಾಂಡವರು ಇಲ್ಲಿ ಕೆಲ ಕಾಲ ಕಳೆದರೆಂದೂ ಹೇಳಲಾಗುತ್ತದೆ. ಬಕಾಸುರನೆಂಬ ರಾಕ್ಷಸನು ಪ್ರಜಾಪೀಡಕನಾಗಿದ್ದಾಗ, ಭೀಮ ಊರ ಜನ ಬಂಡಿತುಂಬ ತುಂಬಿಕೊಟ್ಟ ಅನ್ನವನ್ನು ತಾನೇ ತಿಂದು, ಬಕಾಸುರನನ್ನು ಸಂಹರಿಸಿದ್ದು ಇಲ್ಲಿಯೇ ಎಂದು ಜನ ನಂಬಿದ್ದಾರೆ. ಇದರ ಕುರುಹಾಗಿ ಇಲ್ಲಿ ಪ್ರತಿವರ್ಷ ಚೈತ್ರಮಾಸದಲ್ಲಿ ಬಂಡಿಬಾನ ಹಬ್ಬ ನಡೆಯುತ್ತದೆ.

ಇಲ್ಲಿರುವ ವೀರನಾರಾಯಣ ದೇವಾಲಯ ಕಲಾತ್ಮಕವಾಗಿಯೂ ಸುಂದರವಾಗಿಯೂ ಇದೆ. ಹೊರ ಬಿತ್ತಿಗಳಲ್ಲಿ ಬೇಲೂರು ಹಳೇಬೀಡಿನಂತೆ ಸೂಕ್ಷ್ಮಕೆತ್ತನೆಯ ಶಿಲ್ಪಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲವಾದರೂ ಗರ್ಭಗೃಹದಲ್ಲಿರುವ ದೇವತಾಮೂರ್ತಿಗಳ ವಿಗ್ರಹಗಳು ನಯನ ಮನೋಹರವಾಗಿವೆ.

ಏಳು ಬಾಗಿಲುಗಲನ್ನು ದಾಟಿ ಹೋದಾಗ ದೇವಾಲಯದ ಮುಖ್ಯದ್ವಾರಕ್ಕೆ ನೇರವಾಗಿ ಇರುವ ಗರ್ಭಗೃಹದಲ್ಲಿರುವ ವ್ಯಾಘ್ರಮುದ್ರೆಯ ವೀರನಾರಾಯಣನ ಕೃಷ್ಣವರ್ಣದ ವಿಗ್ರಹದ ಸೂಕ್ಷ್ಮ ಕೆತ್ತನೆಗಳಂತೂ ವರ್ಣಿಸಲಸದಳವಾದಷ್ಟು ಸುಂದರವಾಗಿವೆ. ವೀರನಾರಾಯಣನ ಸುಂದರ ಮುಖ, ಪ್ರಭಾವಳಿಯಲ್ಲಿರುವ ಮನಮೋಹಕ ಕೆತ್ತನೆ, ಪಾದದ ಬಳಿ ಇರುವ ಶಿಲಾ ಬಾಲಿಕೆಯರ ಮೂರ್ತಿಗಳಂತೂ ಅತ್ಯಂತ ಸುಂದರವಾಗಿವೆ. ಜೊತೆಗೆ ವೀರನಾರಾಯಣನ ಕೈಯಲ್ಲಿರುವ ಶಂಖ, ಚಕ್ರ, ಗದೆಯಲ್ಲಿನ ಸೂಕ್ಷ್ಮ ಕೆತ್ತನೆ ಶಿಲ್ಪಿಯ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ಕ್ರಿ.ಶ. 1200ರ ಆಸುಪಾಸಿನಲ್ಲಿ ಎರಡನೇ ವೀರಬಲ್ಲಾಳ ನಿರ್ಮಿಸಿದನೆನ್ನಲಾದ ಈ ಹೊಯ್ಸಳ ದೇವಾಲಯ ತ್ರಿಕೂಟಾಚಲವಾಗಿದ್ದು, ದೇವಾಲಯಕ್ಕೆ ಪ್ರತ್ಯೇಕ ಮೂರು ಗೋಪುರ ಹಾಗೂ ಮೂರು ಗರ್ಭಗೃಹಗಳಿವೆ. ಈ ದೇವಾಲಯದ ವಾಸ್ತು ವಿನ್ಯಾಸ ಎಂಥವರನ್ನೂ ಬೆರಗುಗೊಳಿಸುತ್ತದೆ.
ಎದುರುಗಡೆಯಿಂದ ನೋಡಿದರೆ ಇಂಗ್ಲಿಷ್ ವರ್ಣಮಾಲೆಯ ಡಬ್ಲ್ಯುನಂತೆ ಕಾಣುವ ದೇವಾಲಯದ ಮುಂಭಾಗದಲ್ಲಿ ಪೀಠದ ಮೇಲೆ ಆನೆಗಳ ಸುಂದರ ಶಿಲ್ಪವಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಈ ದೇವಾಲಯವನ್ನು ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದು, ದೇವಾಲಯದ ಸುತ್ತಲೂ ಹಚ್ಚ ಹಸುರಿನ ಆವರಣ ಈ ದೇವಾಲಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.ಭಾರತದ ವಾಸ್ತುಶಿಲ್ಪವನ್ನು ಎತ್ತಿ ಹಿಡಿಯುವಲ್ಲಿ ಹೊಯ್ಸಳ ದೊರೆಗಳ ಪಾತ್ರವನ್ನು ಈ ದೇವಾಲಯ ಸಾರುತ್ತದೆ. ವಾಸ್ತುಶಿಲ್ಪದ ಭವ್ಯ ಪರಂಪರೆಗೆ ಸಾಕ್ಷಿಯಾಗರುವ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ವೀರನಾರಾಯಣ ಸ್ವಾಮಿಯಿದ್ದರೆ, ಉಳಿದೆರಡು ಗರ್ಭಗೃಹಗಳಲ್ಲಿ ವೇಣುಗೋಪಾಲ ಹಾಗೂ ಯೋಗಾನರಸಿಂಹ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮರದ ಕೆಳಗೆ ನಿಂತು ಕೊಳಲನ್ನುಊದುತ್ತಿರುವ ಕೃಷ್ಣನ ಮೂರ್ತಿಯ ಸೌಂದರ್ಯ ಮನಮೋಹಕ. ಈ ವಿಗ್ರಹದಲ್ಲಿ ಸನಕಾದಿ ಮುನಿಗಳನ್ನೂ ಕೆತ್ತಲಾಗಿದೆ. ಪಾದದ ಬಳಿ ಇರುವ ಗೋವಿನ ಕೆತ್ತನಯಂತೂ ಜೀವಂತಿಕೆಯನ್ನು ಪಡೆದಿದೆ. ಇನ್ನು ಯೋಗಾನರಸಿಂಹಸ್ವಾಮಿಯ ಮೂರ್ತಿಯಲ್ಲಿರುವ ಸೌಮ್ಯತೆ, ಮುಖಭಾವ ಅತ್ಯಾಕರ್ಷಕವಾಗಿದೆ. ಈ ಎರಡೂ ಗರ್ಭಗೃಹಗಳು ಎದುರು ಬದುರಾಗಿದ್ದು, ಇಲ್ಲಿ ಯೋಗಾನರಸಿಂಹ ಮತ್ತು ಶ್ರೀಕೃಷ್ಣ ಪರಸ್ಪರ ಎದುರು ಮುಖವಾಗಿ ನಿಂತಿದ್ದಾರೆ.
ದೇವಾಲಯದ ಪ್ರವೇಶದ್ವಾರದಲ್ಲಿ ಇರುವ ಆನೆಗಳು ಮನಮೋಹಕವಾಗಿವೆ. ಹೊರಭಿತ್ತಿಗಳ ಕಲಾತ್ಮಕತೆ, ದೇವಾಲಯದ ವಿಶಾಲ ಪ್ರಾಕಾರ ಹಾಗೂ ಕಲ್ಲುಗಳಲ್ಲಿ ಅರಳಿರುವ ಶಿಲೆಗಳು ಮನಸೂರೆಗೊಳ್ಳುತ್ತವೆ.ಎಲ್ಲಕ್ಕಿಂತ ಮಿಗಿಲಾಗಿ ದೇವಾಲಯದ ಒಳ ಭಾಗದಲ್ಲಿರುವ ನುಣುಪಾದ ಸಾಲು ಕಂಬಗಳಂತೂ ಪ್ರವಾಸಿಗರ ಮನಗೆಲ್ಲುತ್ತವೆ. ಭುವನೇಶ್ವರಿಗಳಲ್ಲಿರುವ ಕೆತ್ತನೆಗಳೂ ತಮ್ಮನ್ನೊಮ್ಮೆ ನೋಡಿ ಹೋಗಿ ಎಂದು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ. ಇಷ್ಟು ಸುಂದರವಾದ ಶಿಲ್ಪಕಲೆಯ ತವರು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸದಿರುವುದು ನಿಜಕ್ಕೂ ವಿಷಾದದ ಸಂಗತಿ.
*ಲೇಖಕರು: ಟಿ.ಎಂ. ಸತೀಶ್, ಸಂಪಾದಕರು, ourtemples.in
********



I visited Banavasi in 2011 and in 2018.  This is a very small village and time required to spend here is 30 minutes.

ಬನವಾಸಿಯ ಮಧುಕೇಶ್ವರ ದೇವಾಲಯ

ಆದಿ ಕವಿ ಪಂಪ ವರ್ಣಿಸಿದ ಸುಂದರ ಕನ್ನಡ ನಾಡಿನ ಮನಮೋಹಕ ದೇಗುಲ

* ಲೇಖಕರು: ಟಿ.ಎಂ.ಸತೀಶ್, ಕನ್ನಡರತ್ನ.ಕಾಂ ಮತ್ತು ourtemples.in
ಮಧುಕೇಶ್ವರನ ನೆಲೆವೀಡು ಬನವಾಸಿ, ಶಿರಸಿ ತಾಲ್ಲೂಕಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರ. ಐತಿಹಾಸಿಕವಾಗಿಯೂ ಶ್ರೀಮಂತವಾದ ಈ ನಾಡು ಆದಿ ಕವಿ ಪಂಪನ ನೆಚ್ಚಿನ ತಾಣ. ಪಂಪ ಬನವಾಸಿಯನ್ನು ವರ್ಣಿಸುವಾಗ, ಅಂಕುಶದಿಂದ ತಿವಿದರೂ ಬನವಾಸಿಯನ್ನು ನೆನೆಯುತ್ತೇನೆ ಎನ್ನುತ್ತಾನೆ. ಮರಿದುಂಬಿಯಾಗಿ ಇಲ್ಲ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ ಎನ್ನುತ್ತಾನೆ.
ಇಂಥ ರಮಣೀಯವಾದ ತಾಣ ಬನವಾಸಿ. ಕಂದಂಬರ ರಾಜಧಾನಿಯಾಗಿ ಐತಿಹಾಸಿಕವಾಗಿ ಮಹತ್ವ ಪಡೆದ ಈ ತಾಣ ವರದಾ ನದಿಯ ದಂಡೆಯ ಮೇಲಿದ್ದು, ಪೌರಾಣಿಕವಾಗಿಯೂ ಮಹತ್ವಪಡೆದಿದೆ.
ದ್ವಾಪರಯುಗದಲ್ಲಿ ಪಾಂಡವರು ತಮ್ಮ ವನವಾಸದ ಕೆಲ ಸಮಯವನ್ನು ಇಲ್ಲಿ ಕಳೆದರೆಂದೂ, ಧರ್ಮರಾಜನ ಅಶ್ವಮೇಧ ಯಾಗ ಮಾಡಿದಾಗ, ಕುದುರೆಯ ಕಾವಲಿಗೆ ಹೊರಟ ಸಹದೇವ ವನವಾಸಿಕಾ ಅರ್ಥಾತ್ ಬನವಾಸಿಯನ್ನು ಗೆದ್ದನೆಂದೂ ಉಲ್ಲೇಖವಿದೆ. ಪುರಾಣ ಕಾಲದಲ್ಲಿ ವೈಜಯಂತಿ ಎಂದು ಕರೆಸಿಕೊಂಡಿದ್ದ ಈ ನಗರದಲ್ಲಿ ಮಧು-ಕೈಟಭರೆಂಬ ರಾಕ್ಷಸರಿದ್ದರಂತೆ. ವಿಷ್ಣು ಇವರನ್ನು ಕೊಂದನಂತೆ. ಶಿವಭಕ್ತರಾದ ಈ ಇಬ್ಬರು ರಕ್ಕಸ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯಗಳನ್ನು ನಿರ್ಮಿಸಲಾಯಿತೆಂದು ಹೇಳಲಾಗುತ್ತದೆ. 4ನೆಯ ಶತಮಾನದಲ್ಲಿ ಕದಂಬರು ಬನವಾಸಿಯನ್ನು ತಮ್ಮ ರಾಜಧಾನಿ ಮಾಡಿಕೊಂಡರು.
ವರದಾನದಿಯಿಂದ ಸ್ವಲ್ಪವೇ ದೂರದಲ್ಲಿ 1600 ವರ್ಷಗಳ ಸುದೀರ್ಘ ಇತಿಹಾಸ ಇರುವ ಮಧುಕೇಶ್ವರ ದೇವಾಲಯ ಪ್ರಮುಖವಾದುದು. 3ನೆಯ ಶತಮಾನಕ್ಕೆ ಸೇರಿದ ಮಧುಕೇಶ್ವರ ದೇವಾಲಯದಲ್ಲಿರುವ ಐದುಹೆಡೆಯ ನಾಗಶಿಲ್ಪ, ಗರ್ಭಗೃಹದಲ್ಲಿರುವ ಮಧುಕೇಶ್ವರಲಿಂಗ, ಕಾರ್ತಿಕೇಯ, ಆದಿಮೂರ್ತಿ, ಮಹಿಷಾಸುರ ಮರ್ದಿನಿ, ವೀರಭದ್ರ, ನರಸಿಂಹ, ಗಣಪತಿ, ವೆಂಕಟರಮಣ, ಅಷ್ಟದಿಕ್ಪಾಲಕ ನಯನ ಮನೋಹರವಾಗಿವೆ.
ಮಧುಕೇಶ್ವರ ದೇವಾಲಯದ ಪ್ರವೇಶಕ್ಕೂ ಮುನ್ನ ವೆಂಕಟರಮಣನ ಪುಟ್ಟ ಗುಡಿ ಹಾಗೂ 1608ರಲ್ಲಿ ಸೋದೆಯ ಅರಸ ರಾಮಚಂದ್ರರು ದೇಗುಲಕ್ಕೆ ಅರ್ಪಿಸಿರುವ ಸುಂದರವಾದ ಶ್ರೀ ಮನ್ಮಹಾಸ್ಯಂದನ ಸುಂದರ ಕೆತ್ತನೆಯ ಮರದ ರಥ ಮನಸೆಳೆಯುತ್ತದೆ. ಈ ಪುರಾತನ ರಥದಲ್ಲಿ ಗಣಪ, ಲಕ್ಷ್ಮೀ, ಕುದುರೆಗಳೇ ಮೊದಲಾದ ಸುಂದರ ಶಿಲ್ಪಗಳಿವೆ.
ಇನ್ನು ಮಾತೋಬರ ಶ್ರೀ ಮಧುಕೇಶ್ವರ ದೇವರ ದೇವಾಲಯದ ಮೆಟ್ಟಿಲು ಏರಿದೊಡನೆಯೇ, ಪ್ರವೇಶ ಮಂಟಪದ ಸೌಂದರ್ಯ ಯಾತ್ರಿಕರನ್ನು ತಡೆದು ನಿಲ್ಲಿಸುತ್ತದೆ. ಮೆಟ್ಟಿಲುಗಳ ಪಕ್ಕದಲ್ಲಿರುವ ಸುಂದರವಾದ ಕಲ್ಲಿನ ಆನೆಗಳು ಹಾಗೂ ಮಂಟಪದ ವೈವಿಧ್ಯಮಯ ಸ್ತಂಭಗಳು ಕಲಾತ್ಮಕವಾಗಿವೆ. ಇಲ್ಲಿ ನಿಂತು ಫೋಟೋ ತೆಗೆಸಿಕೊಂಡು ಒಳ ಪ್ರವೇಶಿಸುತ್ತಿದ್ದಂತೆ ಸುಂದರವಾದ ದೇವಾಲಯ, ಎತ್ತರವಾದ ಸ್ತಂಭ ಗಮನ ಸೆಳೆಯುತ್ತದೆ. ವಿಶಾಲವಾದ ಪ್ರಾಕಾರದಲ್ಲಿ ಒಂದುಸುತ್ತು ಹಾಕಿದರೆ ಕದಂಬರಾದಿಯಾಗಿ ಸೋದೆ ಅರಸರವರೆಗಿನ ಶೈಲಿಯ ವಾಸ್ತು ಶಿಲ್ಪದ ಪರಿಚಯ ಆಗುತ್ತದೆ. ಮಧುಕೇಶ್ವರ ದೇವಾಲಯ ಮೂಲತಃ ವಿಷ್ಣುವಿನ ರೂಪವಾದ ಮಾಧನನಿಗೆ ಕಂದಬರು ನಿರ್ಮಿಸಿದ ದೇವಾಲಯ ಎನ್ನುತ್ತಾಗಿದೆ. ಕಲ್ಯಾಣ ಚಾಲುಕ್ಯರ ಕಾಲದಿಂದ ಸೋಂದಾ ಅರಸವರೆಗಿನ ಕಾಲಘಟ್ಟದಲ್ಲಿ ಈ ದೇವಾಲಯಕ್ಕೆ ಹಲವು ಪ್ರಕಾರದ ವಾಸ್ತುಶಿಲ್ಪ ಸೇರ್ಪಡೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ದೇವಾಲಯದ ಕಂಬದ ಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೊರೆತಿವೆ. ಮೌರ್ಯರ ಕಾಲದಲ್ಲಿಯೇ ಬನವಾಸಿ ಇತ್ತೆಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿವೆ.
ಪೂರ್ವಾಭಿಮುಖವಾಗಿರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಪಥವಿದೆ. ಗರ್ಭಗೃಹದಲ್ಲಿ ಮಧುಕೇಶ್ವರಲಿಂಗದ ಎದುರು ಇರುವ ಸಾಲುಗಂಬಗಳ ಮಂಟಪದ ಮಧ್ಯೆ ಇರುವ ಬೃಹದಾಕಾರದ ನಂದಿಯ ಮೂರ್ತಿ ಮನಮೋಹಕವಾಗಿದೆ. ಮಧುಕೇಶ್ವರ ದೇವಾಲಯದ ಪ್ರಧಾನ ಆಕರ್ಷಣೆಯೇ ಈ ನಂದಿ ಎಂದರೂ ತಪ್ಪಾಗಲಾರದು.
ಮಂಟಪದ ಮಧ್ಯೆ ಇರುವ ನಂದಿಯ ಒಂದು ಕಣ್ಣು ಶಿವನನ್ನು ನೋಡುತ್ತಿದ್ದರೆ, ಮತ್ತೊಂದು ಕಣ್ಣು ಪಕ್ಕದಲ್ಲೇ ಇರುವ ಪ್ರತ್ಯೇಕ ಗುಡಿಯಲ್ಲಿರುವ ಪಾರ್ವತಿಯನ್ನು ನೋಡುತ್ತಿದೆ. ಛಾಯಾಗ್ರಾಹಕರಿಗಂತೂ ನರಳು ಬೆಳಕಿನ ಸಂಯೋಗದಲ್ಲಿ ಈ ಮಂಟಪದ ನಂದಿಯನ್ನು ತಮ್ಮ ಕೆಮರಾದಲ್ಲಿ ಸೆರೆ ಹಿಡಿಯಲು ಹಾತೊರೆಯುತ್ತಾರೆ. ಇಲ್ಲಿರುವ ಮತ್ತೊಂದು ಆಕರ್ಷಣೆ ಕಲ್ಲಿನ ಮಂಚ. ಕಲ್ಲಿನ ಮಂಚದಲ್ಲಿನ ಸೂಕ್ಷ್ಮ ಕೆತ್ತನೆ ಹಾಗೂ ಕಲಾತ್ಮಕತೆ ನಿಬ್ಬೆರಗುಗೊಳಿಸುತ್ತದೆ.
ಕದಂಬರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಪುರದ ದೇವಾಲಯದ ಕಂಬಗಳ ಮೇಲಿರುವ ಹಲವು ದೇವತೆಗಳ ಮತ್ತು ಪರಿವಾರ ದೇವತೆಗಳ ಶಿಲ್ಪಗಳು ಕಲ್ಯಾಣ ಚಾಲುಕ್ಯ-ಹೊಯ್ಸಳರ ಕಾಲದವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ (ಶುದ್ಧ) ಮಘ ನಕ್ಷತ್ರದ ದಿನ ರಥೋತ್ಸವ ನಡೆಯುತ್ತದೆ.
ಇಷ್ಟು ಮನಮೋಹಕವೂ, ಪುರಾಣ ಪ್ರಸಿದ್ಧ ಹಾಗೂ 1600 ವರ್ಷಗಳ ಇತಿಹಾಸ ಪ್ರಸಿದ್ಧ ದೇವಾಲಯ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಮಳೆಗಾಲದಲ್ಲಿ ದೇವಾಲಯದ ಮಾಳಿಗೆ ಸೋರುತ್ತದೆ. ನೆಲದಲ್ಲಿ ಹಾಗೂ ಭಿತ್ತಿ, ಕಂಬಗಳಲ್ಲಿ ಪಾಚಿ ಕಟ್ಟಿದೆ. ಕಾಲಿಟ್ಟರೆ ಜಾರುವಂಥ ಸ್ಥಿತಿ ನಿರ್ಮಾಣವಾಗಿದೆ.




ಅಮೃತಾಪುರದ ಅಮೃತೇಶ್ವರ ದೇವಾಲಯ -by ಟಿ.ಎಂ. ಸತೀಶ್

ಹಾಸನ -ಚಿಕ್ಕಮಗಳೂರು ಜಿಲ್ಲೆಗಳು ದೇವಾಲಯಗಳ ತವರು, ಶಿಲ್ಪಕಲೆಗಳ ಬೀಡು ಎಂದೇ ಖ್ಯಾತವಾಗಿವೆ. ಹಾಸನ ಜಿಲ್ಲೆಯಲ್ಲಿ ನೂರಾರು ಶಿಲ್ಪಕಲಾ ವೈಭವದ ದೇಗುಲಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂಥ ವೈಭವದ ಕಲಾ ಶ್ರೀಮಂತಿಕೆಯ ತಾಣಗಳಿದ್ದು, ಅಮೃತಾಪುರದ ದೇವಾಲಯ ಈ ಮಾತಿಗೆ ಸಾಕ್ಷಿಯೂ ಆಗುತ್ತದೆ.

ಅಮೃತಾಪುರ ಬಹು ಪುರಾತನ ನಗರ. ವಿಶಿಷ್ಠ ಶೈಲಿಯ ಸುಂದರ ದೇವಾಲಯದಿಂದ ಕೂಡಿರುವ ಈ ಊರು ಜಗದ್ವಿಖ್ಯಾತಿ ಪಡೆದಿರುವುದು ಇಲ್ಲಿರುವ ಅಮೃತೇಶ್ವರ ದೇವಾಲಯದಿಂದ.

ಹೊಯ್ಸಳರ ದೊರೆ ಎರಡನೇ ಬಲ್ಲಾಳನ ದಂಡನಾಯಕ ಅಮೃತೇಶ್ವರ ಕ್ರಿ.ಶ.1196ರಲ್ಲಿ ಇಲ್ಲಿ ಅಮೃತೇಶ್ವರ ದೇವಾಲಯ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ.

ಸೂಕ್ಷ್ಮ ಕೆತ್ತನೆಗಳ ಕಲಾಶ್ರೀಮಂತಿಕೆಯಿಂದ ಕೂಡಿದ ಈ ದೇವಾಲಯ ನೋಡುಗರ ಹೃನ್ಮನ ಸೆಳೆಯುತ್ತದೆ. ಪ್ರಧಾನ ಗರ್ಭಗೃಹದಲ್ಲಿ ಅಮೃತೇಶ್ವರ ಲಿಂಗವಿದೆ. ದೇವಾಲಯದಲ್ಲಿ ಗಣಪತಿ, ನಾಗ ಕನ್ನಿಕೆಯರು, ಸಪ್ತ ಮಾತೃಕೆಯರ ಸುಂದರ ವಿಗ್ರಹಗಳೂ ಇವೆ.

ಹೊಯ್ಸಳ ದೊರೆಗಳ ಕಲೋಪಾಸನೆಗೆ ಸಾಕ್ಷಿಯಾಗಿರುವ ಈ ದೇವಾಲಯ ಹಚ್ಚಹಸುರಿನಿಂದ ಕೂಡಿದ ನಾಲ್ಕು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿದ್ದು ಆಸ್ತಿಕ, ನಾಸ್ತಿಕರಿಬ್ಬರನ್ನೂ ಕೈಬೀಸಿ ಕರೆಯುತ್ತದೆ. ಎಲ್ಲ ಹೊಯ್ಸಳ ದೇವಾಲಯಗಂತೆಯೇ ಇಲ್ಲಿಯೂ ನಕ್ಷತ್ರಾಕಾರದ ಜಗಲಿಯಿದೆ. ಮಣ್ಣಿನಲ್ಲಿ ಮುಚ್ಚಿಹೋಗಿರುವ ಜಗಲಿಯ ಮೇಲೆ ವಿಶಾಲಮುಖಮಂಟಪ, ಸುಖನಾಸಿ, ಭುವನೇಶ್ವರಿಗಳಿಂದ ಕೂಡಿದ ಬೃಹತ್ ಭವ್ಯ ದೇವಾಲಯವಿದೆ.

ದೇವಾಲಯದ ಹೊರಭಿತ್ತಿಗಳಲ್ಲಿ ಭವ್ಯವಾದ ಶಿಲ್ಪಾಲಂಕರಣಗಳಿವೆ. ಸುತ್ತಲೂ ಇರುವ ಅರೆ ಮಂಟಪ, ಲತಾ ಸುರಳಿಗಳು ಹಾಗೂ ಅರೆಗೋಪುರ ಶಿಲ್ಪದ ಮೇಲಿನ ಪಟ್ಟಿಕೆಯಲ್ಲಿರುವ ಶಿಲ್ಪಗಳಂತೂ ಅತ್ಯಂತ ಮನಮೋಹಕವಾಗಿವೆ. ದೇವಾಲಯಕ್ಕೆ ಒಂದೇ ಒಂದು ವಿಮಾನ ಗೋಪುರ ಇದ್ದು, ಇದು ಏಕ ಕೂಟ ದೇವಾಲಯವಾಗಿದೆ. ಶಿಥಿಲವಾಗಿದ್ದ ಈ ದೇವಾಲಯಕ್ಕೆ ಹೊರಗಿನಿಂದ ಸಾಧಾರಣ ಕಲ್ಲು ಕಂಬಗಳನ್ನು ಆಧಾರವಾಗಿಟ್ಟು ರಕ್ಷಿಸಲಾಗಿದೆ.

ದ್ರಾವಿಡ ಶೈಲಿಯ ಪರಿಪೂರ್ಣವಾದ ದೇವಾಲಯ ದರ್ಶಿಸಲು ಅಮೃತಾಪುರಕ್ಕೆ ಬರಬೇಕು ಎಂಬುದು ದೇವಾಲಯ ವಾಸ್ತು ಶಿಲ್ಪ ಅಧ್ಯಯನಿಗಳ ನಿಲುವಾಗಿದೆ. ಕಾರಣ ಇಲ್ಲಿರುವ ದೇವಾಲಯದ ಹೊರ ಬಿತ್ತಿಗಳಲ್ಲಿರುವ ರಾಮಾಯಣ, ಮಹಾಭಾರತ, ಭಾಗವತದ ಕಥಾನಕ ದೃಶ್ಯಗಳು ಪುರಾಣೇತಿಹಾಸವನ್ನು ದೃಶ್ಯ ಕಾವ್ಯದೋಪಾದಿಯಲ್ಲಿ ಬಿಂಬಿಸುತ್ತವೆ.

ವಿಶಾಲವಾದ ಪ್ರಾಕಾರವಿರುವ ಈ ದೇವಾಲಯದ ಮಂಟಪಗಳಲ್ಲಿ ಛಾವಣಿಗೆ ಆಧಾರವಾಗಿ ನಿಂತಿರುವ ನುಣುಪಾದ 44 ಕಲ್ಲಿನ ಕಂಬಗಳ ಸಾಲುಗಳ ನಡುವೆ ಇರುವ ಬೃಹದಾಕಾರದ ನಂದಿ ವಿಗ್ರಹದ ನೋಟ ರಮಣೀಯ. ನುಣುಪಾದ ಕಂಬಗಳಲ್ಲಿ ಸೂಕ್ಷ್ಮ ಕಲಾತ್ಮಕ ಕೆತ್ತನೆಗಳು ಇಲ್ಲದಿದ್ದರೂ ಭುವನೇಶ್ವರಿಗಳು ಶಿಲ್ಪ ಸೌಂದರ್ಯದ ಗಣಿಯಾಗಿವೆ. ಸುಖನಾಸಿಯ ಮೇಲಿರುವ ಗಜ ಸಂಹಾರದ ಶಿಲ್ಪವಂತೂ ನಯನ ಮನೋಹರವಾಗಿದೆ.

ದೇವಾಲಯದ ಆವರಣದ ಗೋಡೆಗಳ ಮೇಲೆ ಪ್ರಾಚ್ಯವಸ್ತು ಸಂಗ್ರಹಾಲಯದವರು ಭಗ್ನಗೊಂಡ ಅನೇಕ ಶಿಲ್ಪಗಳನ್ನು ಜೋಡಿಸಿಟ್ಟಿದ್ದು, ಅವು ಕೂಡ ತಮ್ಮ ಗತ ವೈಭವ ಸಾರುತ್ತಾ, ಇಂದಿನ ತಮ್ಮ ಸ್ಥಿತಿ ಪ್ರದರ್ಶಿಸಿ ಕಲೋಪಾಸಕರ ಕಣ್ಣಲ್ಲಿ ನೀರು ತರಿಸುತ್ತವೆ. ಆದಾಗ್ಯೂ ಇಲ್ಲಿರುವ ಸುಂದರ ಶಿಲ್ಪಕಲಾ ವೈಭವ ನೋಡುಗರಿಗೆ ಭಾರತೀಯ ಅದರಲ್ಲೂ ಕರ್ನಾಟಕದ ಶಿಲ್ಪಕಲಾ ವೈಭವದ ಅಮೃತಪಾನ ಮಾಡಿಸುವುದರಲ್ಲಿ ಸಂದೇಹವೇ ಇಲ್ಲ.

ದೇವಾಲಯದ ಪ್ರಾಕಾರದ ಎಡ ಭಾಗದಲ್ಲಿ ಅಮ್ಮನವರ ಗುಡಿ ಇದ್ದು, ಇದಲ್ಲಿ ವಿದ್ಯಾಧಿದೇವತೆ ಶಾರದೆಯ ಮನಮೋಹಕ ವಿಗ್ರಹವಿದೆ. ಶಿವ ದೇವಾಲಯದಲ್ಲಿ ಶಾರದೆಯ ಗುಡಿ ಹೇಗೆ ಬಂತು ಎಂಬ ಜಿಜ್ಞಾಸೆ ಹಲವರನ್ನು ಕಾಡುತ್ತದೆ. ಆದರೆ ಹಿಂದೆ ವೇದಾಗಮ ಪಂಡಿತರ ತಾಣವಾಗಿ ವೇದಾಧ್ಯಯನಕ್ಕೆ ಹೆಸರಾಗಿದ್ದ ಅಮೃತಾಪುರದಲ್ಲಿ ತಾಯಿ ಶಾರದೆಯನ್ನು ಪ್ರತಿಷ್ಠಾಪಿಸಲಾಗಿದೆ, ಇಲ್ಲಿ ಪೂಜೆ ಸಲ್ಲಿಸಿ ಮಕ್ಕಳಿಗೆ ವೇದಾಭ್ಯಾಸ ಮಾಡಿಸುತ್ತಿದ್ದರು ಎಂದೂ ಹಿರಿಯರು ಹೇಳುತ್ತಾರೆ.

ಬೆಂಗಳೂರು ಮಹಾನಗರದಿಂದ 245 ಕಿಲೋ ಮೀಟರ್ ದೂರದಲ್ಲಿರುವ ಅಮೃತಾಪುರ, ಚಿಕ್ಕಮಗಳೂರಿನಿಂದ 67 ಹಾಗೂ ತರೀಕೆರೆಯಿಂದ 4 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು,ತರೀಕೆರೆ ಮೂಲಕ ಅಮೃತಾಪುರಕ್ಕೆ ಹೋಗಬಹುದು. ತರಿಕೆರೆವರೆಗೆ ರೈಲು ಸೌಲಭ್ಯವೂ ಇದೆ. ಸಂಜೆ 6 ಗಂಟೆಯ ನಂತರ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ.
********

ಬ್ರಹ್ಮನ ಮಗ ದಕ್ಷಪ್ರಜಾಪತಿ  ಯಜ್ಞ ಮಾಡಿದ ಸ್ಥಳವಾದ ಧೂಳಖೇಡ ಗ್ರಾಮದಲ್ಲಿನ  ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪನೆಗೊಂಡ ಭೀಮಾಶಂಕರ  ದೇವಾಲಯದ ಕಿರು ಮಾಹಿತಿ ಇಲ್ಲಿದೆ.

67 kms from Bijapur/Vijayapura

youtube link  DHULKHED KARNATAKA


***



The Ramalingeshwara group of temples (also spelt Ramalingeshvara or Ramalingesvara and sometimes referred to as Rameshvara group), situated in Avani town of the Kolar district, Karnataka state, India, is constructed in the dravida style. According to the Archaeological Survey of India (ASI), the temple is an ornate 10th-century Nolamba dynasty construction which was partially renovated later by the Chola dynasty.The Vijayanagara kings was built Main Mandapam and Rajagopuram.[1] The temple is protected by the Archaeological Survey of India as a monument of national importance.

***

Holenarasipura Lakshminrusimha Temple




Sri Mangaladevi Temple is an ancient temple that is located in Bolar which is 3 Kms away from Mangalore in the state of Karnataka. The local people believe that the name Mangalore got raised from the God Mangaladevi who enriched this temple in Mangalore. This temple was built during the tenth century with the memories of the famous Rajmata of Malabar who is said to be accompanied with Yogi Matsyendranath, a famous Guru from the Nath tradition.


The sculpture of the Lord Managaladvi is the earliest Durga sculpture that was created in the South Kanra District. This temple is a famous holy place in India and many people from all over India gather at this temple during the festive occasions to get the blessings from the God. One can get stunned by witnessing the architectural brilliance of this temple that was constructed during 986 AD. It does portray the hard work of the architects in sculpting the temple.

***

ಮಂಗಳೂರಿನಲ್ಲಿರುವ ಕಟೀಲು ದುರ್ಗಾಪರಮೆಶ್ವರಿ  durga parameshwari KATILU

ಮಂಗಳೂರಿನಲ್ಲಿರುವ ಕಟೀಲು ಎಂಬ ದುರ್ಗಾಪರಮೆಶ್ವರಿಯ ಪಾವನ ಕ್ಷೇತ್ರದ ಚರೀತ್ರೆ - ಹಿಂದಿನ ಕಾಲದಲ್ಲಿ ದೇವಿಯು ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗಾದೇವಿಯು ಶಾಂಬವಿ ರೂಪದಲ್ಲಿ ಸಂಹರಿಸುವ ಸಮಯದಲ್ಲಿ ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರ ಎಂಬರಾಕ್ಷಸನ್ನು ಯುದ್ದರಂಗದಿಂದ ಹಿಂದೆ ಸರಿಯುವಂತೆ ಶುಂಭದಾನವನ್ನು ಅಜ್ಞಾಪಿಸುತ್ತಾನೆ,
ಅವರ ಅಜ್ಞೆಯನ್ನು ಪಾಲಿಸಿದ ಅರುಣಾಸುರನು ಯುದ್ದಭೂಮಿಯಿಂದ ತನ್ನ ಪ್ರಾಣವನ್ನು ಉಳಿಸಿಕೋಂಡಿರುತ್ತಾನೆ. 
ಕಾಲಕ್ರಮೇಣ ಅವನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಲೂ, ದೇವತೆಗಳಿಂದಾಗಲೀ, ಪುರುಷ ರಿಂದ ಅಥಾವ ಸ್ತ್ರೀಯರಿಂದ, ಚತುಷ್ಟದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು ಹಾಗೂ ಸರಸ್ವತಿ ದೇವಿಯನ್ನು ಒಳಿಸಿಕೊಂಡ ಅಸುರನಿಗೆ ಸರಸ್ವತಿ ದೇವಿಯು ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲದರ ಪರಿಣಾಮವಾಗಿ ಅತ್ಯಂತ ಬಲಿಷ್ಟನಾದ ಅಸುರನು ದೇವಲೋಕವನ್ನು ವಶಪಡಿಸಿಕೊಂಡಿದ್ದನು...
ಕಾಲಕ್ರಮೇಣ ಅಸುರನ ಮಂತ್ರಿಗಳು ಋಷಿಮುನಿಗಳ ತಪಸ್ಸು, ಯಾಗ, ಯಜ್ಞ, ಮುಂತಾದವುಗಳಿಗೆ ತೊಂದರೆಯನ್ನು ಪಡಿಸಿದರು..
ಇದರಿಂದ ಋಷಿಮುನಿಗಳು ಯಾಗ ನಡೆಸದಂತಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆಸುರಿಸುವುದನ್ನು ನಿಲ್ಲಿಸಿದರು. ಪರಿಣಾಮವಾಗಿ ಭೂಮಿಗೆ ಬೀಕರ ಕ್ಷಾಮತಲೆದೋರಿತು, ಎಲ್ಲೆಡೆಯೂ ನೀರು ಆಹಾರಗಳ ಅಬಾವ ಸುರುವಾಯಿತು, ಜನರ ದಾರುಣಸ್ಥಿಯಿಂದ ವಿಚಲಿತರಾದ ಜಾಬಾಲಿಮಹರ್ಷಿಗಳು ದೇವತೆಗಳನ್ನು ತ್ರಪ್ತಿಗೊಳಿಸಿ ತನ್ಮೂಲಕ ಮಳೆಸುರಿಸುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕೆ ಸಹಾಯಕವಾಗುವಂತೆ ಕಾಮದೇನುವನ್ನು ತಮ್ಮೋಡನೆ ಕಳುಹಿಸಿ ಕೊಡಲಪ ದೆವೇಂದ್ರನಲ್ಲಿ ವಿನಂತಿಸಿದರು.
ಅದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವಾಗಿ ಕರೆದೋಯ್ಯಲು ದೇವೆಂದ್ರನು ಅನುಮತಿಸಿದನು, ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೊಲೋಕದ ಜನರನ್ನುನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು.
ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು..
ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು...
ಋಷಿಯ ಮಾತಿನಂತೆ ನಂದಿನಿಯು ಮಾತೆಯ ತಪಸ್ಸುಗೈದಳು. ಪ್ರತ್ಯಕ್ಷಳಾದ ದೇವಿಯು ಋಷಿವಾಕ್ಯವನ್ನು ಸುಳ್ಳಗಿಸುವುದು ಅಸಾದ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದು ಮಂದೆ ತಾನೇ ಅವಳಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೋಡುವುದಾಗಿಯು ಅಭಯವನ್ನಿತ್ತಳು..
ಅದರಂತೆಯೇ ನಂದಿನಿಯು ಮಾಘಶುದ್ದ ಪೂರ್ಣಿಮೇಯಂದು ಕನಕಗಿರಿಯಿಂದ ನದಿಯಾಗಿ ಹರಿದಳು ಇದರಿಂದ ಭೂಮಿಯು ಮತ್ತೆ ಹಸಿರಾಯಿತು.
ಇತ್ತ ದೇವತೆಗಳು ಅರುಣಾಸುರನ ಮುಕ್ತಿಗಾಗಿ ಕೈಲಾಸ ಗಿರಿಯಲ್ಲಿ ಆದಿಶಕ್ತಿಯ ಮೋರೆಹೊಕ್ಕರು.
ಆಗ ಪಾರ್ವತಿಮಾತೆಯು ಅರುಣಾಸುರನು ಗಾಯತ್ರಿ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವದಿಸುವುದು ಅಸಾದ್ಯವೆಂದು ಹೇಳಿ. ದೇವಗುರು ಬ್ರಹಸ್ಪತಿಯ ಸಹಾಯಯಾಚಿಸುವಂತೆ ದೇವತೆಗಳಿಗೆ ತಿಳಿಸಿದಳು..
ದೇವತೆಗಳಿಗೆ ಸಹಾಯನಿಡುವ ಅಭಯವಿತ್ತ ಬ್ರಹಸ್ಪತಿಗಳು ಅರುಣಾಸುರನಲ್ಲಿಗೆ ತೆರಳಿ ಉಪಾಯದಿಂದ ಗಾಯತ್ರಿ ಮಂತ್ರದಿಂದ ಅಸುರನ ವಿಮುಖನನ್ನಾಗಿಸಿದರು..
ಇದರಿಂದಾಗಿ ಅರುಣಾಸುರನು ತಾನು ದೇವರಿಗಿಂತಲೂ ದೋಡ್ಡವನೆಂಬ ಅಹಂ ಬಾವದಿ ಮುನಿಗಳು ಸಹಿತ ಎಲ್ಲಾರು ತನ್ನನೆ ಆರಾಧಿಸಬೇಕೆಂದು ಅದೇಶಿಸಿದನು...
ಅವನ ಅಟ್ಟಹಾಸ ಮೀತಿಮೀರಿದಾಗ ದೇವತೆಗಳಿಗೆ ಇತ್ತಮಾತಿನಂತೆ. ನಂದಿನಿಗೆ ನೀಡಿದ ಅಭಯದಂತೆ ಪಾರ್ವತಿದೇವಿಯು ದಟ್ಟಕಾಡದ ಕುದ್ರುವಿನಲ್ಲಿ ನಂದಿನಿಯ ಕಟಿ(ಸೋಂಟ) ಬಾಗದಲ್ಲಿ ನಂದಿನಿಯ ಮಗಳಾಗಿ ಲಿಂಗರೂಪದಿ ದುರ್ಗಾಪರಮೇಶ್ವರಿ ಎಂಬ ಹೆಸರಿನಿಂದ ಉದ್ಬವಿಸಿದಳು..
ಹೀಗೆ ನಂದಿನಿಯ ಮಗಳಾಗಿ ಕುದ್ರುವಿನಲ್ಲಿ ಉದಿಸಿದ ದುರ್ಗೆಯು ದುಷ್ಟನನಾಶಕ್ಕಾಗಿ ಸುಂದರ ಮೋಹಿನಿಯ ರೂಪವನ್ನು ತಾಳಿ ಕಾನನದಲ್ಲಿ ಸುತ್ತಾಡತೊಡಗಿದಳು...
ಅರುಣಾಸುರನ ಮಂತ್ರಿಗಳಾದ ಚಂಡ.ಪ್ರಚಂಡರು, ಜಯ.ವಿಜಯರು, ಮೋಹಿನಿಯನ್ನು ನೋಡಿ ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು.
ಅರುಣಾಸುರನು ಅವಳನ್ನು ವಿವಾಹವಾಗುವ ಉದೇಶದಿಂದ ಅವಳ ಬಳಿಗೆ ತೆರಳಿ, ತನ್ನ ಒಡೆಯರಾಗಿದ್ದ ಶುಂಭ-ನಿಶುಂಭರನ್ನು ವದಿಸಿದವಳು ಇವಳೆ ಎಂದು ತಿಳಿದ ಅಸುರನು ದೇವಿಯ ಮೇಲೆ ದಾಳಿಮಾಡಿದನು. 
ಅಗದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ದಾನಳಾದಳು. ಅಸುರನು ಕೊಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೋರಟ ದುಂಬಿಗಳು ಅವನನ್ನು ಕಚ್ಚಲಾರಂಬಿಸಿವು. ದೇವಿಯು ಒಂದು ದೊಡ್ಡದಾದ ವಜ್ರದುಂಬಿಯ ರೂಪದಲ್ಲಿ ಅಸುರ ಅರುಣನನ್ನು ಕಚ್ಚಿಕೋಂದಳು..
ತಾಯಿಯು ದುಂಬಿಯ ರೂಪ ದರಿಸಿದ್ದರಿಂದ ತಾಯಿ ಯನ್ನು ಭ್ರಾಮರಿ, ಭ್ರಾಮರಾಂಬಿಕೆ ಎಂದು ಪ್ರಖ್ಯಾತಿಯಾದಳು
ದೇವತೆಗಳು ಹಾಗೂ ಜಾಬಾಲಿ ಮಹರ್ಷಿಗಳು ಕಲ್ಪವ್ರಕ್ಷದಿಂದ ತಂದ ಎಳನೀರಿಂದ ರೌದ್ರರೂಪದಲ್ಲಿದ ದೇವಿಗೆ ಅಭಿಷೆಕವನ್ನು ಮಾಡಿ ದುಂಬಿರೂಪದಿ ಇದ್ದದೇವಿಗೆ ಮಳ್ಳಿಗೆ ಪುಷ್ಪವನ್ನು ಸಮರ್ಪಿಸಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು.
ದೇವಿಯು ನಂದಿನಿಯ ಕಟಿ(ಸೋಂಟ) ಬಾಗದಲ್ಲಿರುವ ಇಳೆ(ಭೂಮಿ)ಯಲ್ಲಿ ಉದ್ಬವಿಸಿದ ಕಾರಣ ಶ್ರೀಕ್ಷೇತ್ರವು ಕಟೀಲು ಎಂಬ ಹೇಸರಾಯಿತು..
ದುರ್ಗಾಪರಮೇಶ್ವರಿಯು ದುಂಬಿರೂಪದಿ ಅಸುರನ ಸಂಹರಿಸಿದರಿಂದ ಈ ಕ್ಷೇತ್ರದಲ್ಲಿ ಸಿಯಾಳ ಅಭಿಷೆಕ ಹಾಗೂ ಮಳ್ಳಿಗೆಯು ಪ್ರಮುಖ ಹರಕೆಯ ರೂಪದಲ್ಲಿ ಭಕ್ತರು ಅರ್ಫಿಸುತ್ತಾರೆ...
ಶ್ರೀದೇವಿಯ ಈ ಪಾವಣ ಕ್ಷೇತ್ರದ ಸನಿಹ ಯಾವುದೇ ಸ್ಥಳದಲ್ಲಿ ಸೀಯಾಳ ಸೇವನೆ ಇಂದಿಗೂ ನಿಷಿದ್ದವಾಗಿದೆ.
ಈ ಕ್ಷೇತ್ರದಲ್ಲಿ ಅರ್ಚಕರಾಗಿ ಅಸ್ರಣರು ಸೇವೆ ಸಲ್ಲಿಸುತಿದ್ದಾರೆ...
ದೇವಿಯು ಕಲಾಪ್ರೀಯಳಾದ್ದರಿಂದ ಯಕ್ಷಗಾಣ ಬಯಲಾಟದ 6 ಮೇಳಗಳಪ ಕಾರ್ಯನಿರ್ವಹಿಸುತ್ತಿದು. ಭಕ್ತದಿಗಳು ಯಕ್ಷಗಾಣಾದ ಹರಕೆಯನ್ನು ಸಮರ್ಪಿಸಬಹುದಾಗಿದೆ
*****



ಮಂಜುಗುಣಿ ಎಂಬ ತಿರುಪತಿ Manjuguni near Sirsi
ಕರ್ನಾಟಕ ದರ್ಶನ- ಮಂಜುಗುಣಿ ಎಂಬ ತಿರುಪತಿ- ಸಹ್ಯಾದ್ರಿ ಶ್ರೇಣಿಯ ಮೇಲಿರುವ ಶಿರಸಿ ತಾಲ್ಲೂಕಿನ ಮಂಜುಗುಣಿ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧ. ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ದರ್ಶನ ಪಡೆದರೆ ತಿರುಪತಿಗೆ ಹೋಗಿ ಬಂದಷ್ಟೇ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.  ಶಿರಸಿಯಿಂದ ಕುಮಟಾ ರಸ್ತೆಯಲ್ಲಿ 26 ಕಿಮೀ ದೂರದಲ್ಲಿ ಹಸಿರು ಹಾಸಿನ ಮಧ್ಯೆ ನೆಲೆಸಿರುವ ವೆಂಕಟೇಶನ ಕ್ಷೇತ್ರ ಮಹಿಮೆ ಕುತೂಹಲ ಹುಟ್ಟಿಸುತ್ತದೆ. 9 ನೇ ಶತಮಾನದಲ್ಲಿ ತಿರುಪತಿಯಿಂದ ತೀರ್ಥಯಾತ್ರೆ ಹೊರಟ ತಿರುಮಲ ಯೋಗಿಗಳು ಮಂಜುಗುಣಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿ ಗಿಳಿಲಗುಂಡಿ ಊರಿನ ಕೊಳದ ಬಳಿ ತಪಸ್ಸಿಗೆ ಕುಳಿತಿದ್ದರು.

ಆಗ ಅವರಿಗೆ ಶಿಲೆಯ ಹಾಸಿನ ಮೇಲೆ ಶಂಖ, ಚಕ್ರ, ಧನುರ್ಬಾಣ ಧರಿಸಿದ ವೆಂಕಟೇಶ ವಿಗ್ರಹದ ದರ್ಶನ ದೊರೆಯಿತು. ಅವರು ಈ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದ ಪುಣ್ಯ ಕ್ಷೇತ್ರವೇ ಮಂಜುಗುಣಿ ಎಂದು ಇತಿಹಾಸ ಹೇಳುತ್ತದೆ.

ಈ ಕ್ಷೇತ್ರದ ಇನ್ನೊಂದು ವಿಶೇಷವೆಂದರೆ ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವಕ್ಕೆ ಶ್ರೀ ವೆಂಕಟೇಶ ತಿರುಪತಿಯಿಂದ ಇಲ್ಲಿಗೆ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ. ಇದಕ್ಕೆ ಪುಷ್ಟಿ ಎಂಬಂತೆ ಅಂದು ತಿರುಪತಿಯಲ್ಲಿ ದೇವರಿಗೆ ಪೂಜೆ ಇರುವುದಿಲ್ಲ.

ವಿಜಯನಗರ ಕಾಲಕ್ಕಿಂತ ಪೂರ್ವದ್ದೆನ್ನಲಾದ ಶೈಲಿಯ ಅನೇಕ ಸುಂದರ ಕೆತ್ತನೆಗಳು ದೇವಾಲಯದ ಒಳಾಂಗಣದಲ್ಲಿವೆ. ಮುಖಮಂಟಪ, ನವರಂಗ, ಅರ್ಧ ಮಂಟಪ ಹಾಗೂ ಗರ್ಭಗೃಹ ಒಳಗೊಂಡ ದೇವಾಲಯದ ನವರಂಗವನ್ನು ಉಡುಪಿಯ ವಾದಿರಾಜ ಯತಿಗಳು ನಿರ್ಮಿಸಿದ್ದಾರೆ ಎಂದು ಕ್ಷೇತ್ರ ಪುರಾಣದಲ್ಲಿ ಉಲ್ಲೇಖವಿದೆ.

ಇದಕ್ಕೆ ಸಾಕ್ಷಿಯಾಗಿ ಕಂಬಗಳ ಮೇಲೆ ಕಡಗೋಲು ಕೃಷ್ಣ ಹಾಗೂ ಹಯಗ್ರೀವ ಮೂರ್ತಿಗಳ ಕೆತ್ತನೆಗಳಿವೆ. ವೆಂಕಟೇಶನ ಪಕ್ಕದಲ್ಲಿ ಪದ್ಮಾವತಿ ನೆಲೆಸಿದ್ದಾಳೆ. ಪದ್ಮಾವತಿ ಅಮ್ಮನವರ ಗುಡಿ ವೆಂಕಟೇಶನ ಬಲಭಾಗದಲ್ಲಿದೆ. ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ರಥ ಇಲ್ಲಿನ ವಿಶೇಷ ಆಕರ್ಷಣೆ. ಔಷಧೀಯ ಗುಣ ಹೊಂದಿರುವ ಮಂಜುಗುಣಿ ಚಕ್ರತೀರ್ಥ ಕೆರೆಯ ಜಲ ಚರ್ಮರೋಗ ನಿವಾರಕ ಗುಣ ಹೊಂದಿದೆ.

ಅಕ್ಕಿ, ತೆಂಗಿನಕಾಯಿ, ನಾಣ್ಯ ತುಲಾಭಾರದ ಜೊತೆಗೆ ನಾಲಿಗೆ, ಕಾಲು ಹೀಗೆ ಶರೀರದ ವಿವಿಧ ಭಾಗಗಳ ಬೆಳ್ಳಿ-ಬಂಗಾರದ ಮುದ್ರಿಕೆಯನ್ನು ಹರಕೆ ಒಪ್ಪಿಸುವ ಪದ್ಧತಿ ಇಲ್ಲಿದೆ. ಭಾಗವತ ಸಂಪ್ರದಾಯದ ರೀತಿಯಲ್ಲಿ ಇಲ್ಲಿ ನಿತ್ಯಪೂಜೆ ನಡೆಯುತ್ತದೆ. ದೇವಾಲಯದ ಒಳ ಪ್ರಾಂಗಣ ಭಕ್ತರ ನೆರವಿನ್ಲ್ಲಲಿ ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ವಿಶೇಷ ದಿನಗಳು: ಚೈತ್ರ ಶುದ್ಧ ಚತುರ್ದಶಿಯ ದಿನ ದೇವರ ವರ್ಧಂತಿ ಉತ್ಸವ. ಮಾರನೇ ದಿನ ಮಹಾ ರಥೋತ್ಸವ. ರಥೋತ್ಸವದ ಮೊದಲ ಐದು ದಿನ ಭಾರತದಲ್ಲೇ ಅಪರೂಪವಾದ ಯಾನ ಯಂತ್ರೋತ್ಸವ ಜರುಗುತ್ತದೆ. ಚಾತುರ್ಮಾಸ್ಯ ಪೂಜೆ, ಶ್ರೀಕೃಷ್ಣಜನ್ಮಾಷ್ಟಮಿ, ಗಣೇಶ ಚತುರ್ಥಿ, ಶರನ್ನವರಾತ್ರಿ ಇಲ್ಲಿನ ವಿಶೇಷ ಉತ್ಸವದ ದಿನಗಳು.

ಮಂಜುಗುಣಿ ಕ್ಷೇತ್ರಕ್ಕೆ ತೆರಳಲು ಶಿರಸಿಯಿಂದ ಮಾತ್ರ ಬಸ್ ಸೌಕರ್ಯ ಇದೆ. ಶಿರಸಿ- ಕುಮಟಾ ಮುಖ್ಯ ರಸ್ತೆಯಿಂದ ನಾಲ್ಕು ಕಿಮೀ ಒಳ ಹೋಗಬೇಕು. ಖಾಸಗಿ ವಾಹನ ದೇವಾಲಯದವರೆಗೆ ತಲುಪುತ್ತದೆ.
***




ಕರಾವಳಿ ಹಾಗೂ ಆಸುಪಾಸಿನಲ್ಲಿ ಚಾಚಿ ಕೊಂಡಿರುವ ಸುಪ್ರಸಿದ್ಧ ದೇವಾಲಯಗಳ ಕಛೇರಿಯ ದೂರವಾಣಿ ಸಂಖ್ಯೆಯ ಮಾಹಿತಿ: (2021)

* ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ: 08256 277121     

* ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: 08257 281224    

* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ: 08254 258221    

* ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಸ್ಥಾನ: 08254 264201  

* ಉಡುಪಿ ಶ್ರೀಕೃಷ್ಣ ಮಠ: 0820  2520592 

* ಆನೆಗುಡ್ಡೆ ವಿನಾಯಕ ದೇವಸ್ಥಾನ: 08254 267397    

* ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ: 08250 2568433      

* ಬಗ್ವಾಡಿ ಮಹಿಷ ಮರ್ದಿನಿ‌ ದೇವಸ್ಥಾನ: 08254 278033          

* ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ: 08254 239231      

* ಬೆಣ್ಣೆಕುದ್ರು ಮಹಾಸತಿ ದೇವಸ್ಥಾನ: 08250 2587121     

* ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ: 0820 2506118    

* ನೀಲಾವರ ಮಹಿಷ ಮರ್ದಿನಿ ದೇವಸ್ಥಾನ: 0820 2001864 

* ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ: 08259 277221     

* ಕೋಟೇಶ್ವರ ಕೋಟಿಲಿಂಗೇಶ್ವರ: 08254 262230  
  
* ಕೋಟ ಅಮೃತೇಶ್ವರಿ ದೇವಸ್ಥಾನ: 0820 2564681

* ಇಡುಗುಂಜಿ ಮಹಾಗಣಪತಿ ದೇವಸ್ಥಾನ: 08387 247227

* ಕುಂದಾಪುರ ಕುಂದೇಶ್ವರ ದೇವಸ್ಥಾನ: 08254 232256     

* ಹಿರಿಯಡ್ಕ ವೀರಭದ್ರ ದೇವಸ್ಥಾನ: 08250 2542605     

* ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನ: 08254 279574    

* ಶಂಕರನಾರಾಯಣ ದೇವಸ್ಥಾನ: 08254  280551  

* ಕಟೀಲು ಭ್ರಮರಾಂಬಿಕೆ ದೇವಸ್ಥಾನ: 0824 2200591 

* ಕದ್ರಿ ಮಂಜುನಾಥೇಶ್ವರ ದೇವಸ್ಥಾನ: 0824 2214176    

* ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ: 0824 2495740     

* ಸಿಗಂದೂರು ಚೌಡೇಶ್ವರಿ ದೇವಸ್ಥಾನ: 08186  210555 
 
* ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ: 0824 2290585  

* ಸೌಕೂರು ದುರ್ಗಾ ಪರಮೇಶ್ವರಿ ದೇವಸ್ಥಾನ: 08254 271202
                        
  * ಬೈಂದೂರು ಸೇನೇಶ್ವರ ದೇವಸ್ಥಾನ: 08254 251900 

* ಮುರ್ಡೇಶ್ವರ ದೇವಸ್ಥಾನ: 08385 268524   

    
* ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನ: 0820 2001214 

* ಶೃಂಗೇರಿ ಶಾರದಾಂಬಾ ದೇವಸ್ಥಾನ: 08265 250123    

* ಹೊರನಾಡು ಅನ್ನಪೂರ್ಣ ದೇವಸ್ಥಾನ: 08263 269714  

* ಗೋಕರ್ಣ ಮಹಾಬಲೇಶ್ವರ ದೇವಸ್ಥಾನ: 08386 257956

* ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ: 0487 2554844        
          
* ತಿರುಪತಿ ವೆಂಕಟೇಶ್ವರ ದೇವಸ್ಥಾನ: 0877 2233333      
              
* ಮಂತ್ರಾಲಯ ರಾಘವೇಂದ್ರ ಸನ್ನಿಧಿ: 08512 279429/459

             
* ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನ: 0820 2520871    
 
* ಶಬರಿಮಲೆ ಅಯ್ಯಪ್ಪ ದೇವಸ್ಥಾನ: 04735 202048

* ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ 0820 2564544 

* ಬಾರ್ಕೂರು ಕಾಳಿಕಾಂಬಾ ದೇವಸ್ಥಾನ: 0820  2587129
***



Melekote Temple


Cheluvanarayana Swamy Temple is located in Melkote in the Mandya District, Karnataka, India. The place is also known as Thirunarayanapura. It is built on rocky hills known as Yadavagiri or Yadugiri overlooking the Cauvery valley. It is about 30 miles (48 km) from Mysore and 97 miles (156 km) from Bangalore.
The temple is a square building of large dimensions but is very plain and only sparsely ornamented with carvings or sculptures. The presiding deity is Cheluva Narayana Swamy, also known as Tirunarayana or Cheluvapille Raya , a form of Lord Vishnu. It appears from inscriptions that in the early centuries after the temple was built, the Lord was also known by the name Ramapriya, but this usage has now completely disappeared.
***

Shankaranarayana, near Udupi


The Shri Shankaranarayana Temple of kundapura Tq Udupi is named after two Gods from the Hindu religion. Lord Shankar as well as Lord Narayan are worshipped together here. This is a unique temple due to this aspect. Two “Linga” have naturally formed with the height of one feet still below the earth. Both idols are visible only through the reflection in the mirror. While the Shiva Linga is round, the Vishnu Linga is flat with the footprints of the Holy Cow. Water surrounds the idols all year round which is a unique addition to this already unique temple.

“Koti Theertha” is a holy pond just outside the temple which adds to the spiritual experience of the devotees, and the temple itself is within the coconut and arecanut plantations. Such tranquil surroundings will surely add to your divine experience.
***

Hulikunte raya bommaghatta ಹುಲಿಕುಂಟೆ ರಾಯ ಬೊಮ್ಮಾಘಟ್ಟ 



Bommaghatta is a village in the southern state of Karnataka, India.[1][2] It is located in the Sandur taluk of Bellary district in Karnataka. The place is popular for its Hindu temple which hosts the deity Hanuman as Hulikunteraya. Annually the Rathostava (chariot fest) is scheduled to commence on Phalguna Shukla Dashami (usually in February/March) and thousands of worshippers and tourists from all over India and particularly from the South gather there to witness it.
It is believed that the Hanuman idol is a 'Udbhava' murthi. The cowherd who was taking the cows belonged to Shanbhoge (village incharge) for gazing in the field was tapping this idol stone every day while supervising the cows. The cowherd heard 'Ashareeravani' from stone not to hit it and he carried the message to the Shanbhoge and villagers (named Bommaiah) found this Hanuman idol (pictured) in the field in the grass bush. The villagers decided to bring this idol and instal in the temple specifically built for in Bommaghatta Village. But, while bringing the idol on a cart, the wheel of the cart was broken on the way. Hence, the idol was kept at that place with the help of broken wheel. The same night the Shanbhoge had a dream insisting for installation of the idol at the place where the wheel of the cart was broken. Hence, the villagers decided to instal the idol at this new place. But, there was shortage of money to build the new temple. In the mean time, a trader was carrying salt in bags and his journey was obstructed at this new place during night due to heavy rain. The trader kept salt bags between idol and wheel and prayed lord Hanuman to safeguard the bags from rain. He vowed to help financially to build a shelter to lord Hanuman if his bags were protected from rain. On the next morning to his surprise, the trader found that the bags were protected from rains. The trader informed about the incident to Shanbhoge and informed the villagers that he will build the shelter for lord Hanuman and the present 'Garbhagudi' is the one which was so built. Lord Hanuman also widely known as Mukhya Praana Devaru, thus got a permanent place for worship.
It is believed on one night, the Shanbhoge had a dream to excavate the land near lord Hanuman idol to find gold coins to be spent for building the temple and pond. The next day villagers found markings near idol and decided to have a pond there. While excavating, they found lord Rudra idol and also gold coins. The Rudra idol is also installed in front of the excavated place where there is now the pond known as 'Pushkarani'.
It is believed that the murthi was discovered by a cowherd, named Bommaiah, in a grass bush named Huli-pode and hence the idol got the name Hulikunteraya/Hulikunteswami.
There is also a small Sri Rama temple beside Hulikunteswami temple. The speciality of this temple is that it has an idol of lord Garuda along with Seetha Rama Lakshmana and Hanuman.
Sri Vyasaraja (Sri Krishnadevaraya period) performed the re-installation (punar-pratishtapana) of Hanuman idol.
There has been great expansion of the temple and its surroundings in the last decade due to the generous donations by devotees. The Brahmin association (Sri Hulikunteswami Seva Sangha Regd) (only for Brahmin, nothing to do with temple) is actively involved by carrying out various programmes for a week. The celebration by the seva sangha ends on Phalguna Shukla Dashami on which day the chariot is pulled. The 'mela' for the public commences on this Rathostava day. The 63rd year Adhiveshana was conducted successfully by seva sangha in March 2016. Since three years they are also conducting 'Jnanayagna Shibira' every year during November. It is a three-day programme for the students to learn pooja customs, etc. Talented students (only for Brahmin) are honoured on this occasion.
Arya vysya Sangha which was formed pre-Independence (1942), is actively involved in the development of the temple by donating and raising funds.

Srihulikunteraya first found to cowherd Sri Bommaiah (his family lives near Bommagatta Gollarahatti village ).

****

5 March 2017 first day of rathotsava week








***
15.02.2019
ಶ್ರೀರಾಮ ರಥೋತ್ಸವ (ಚೋರನೂರು).
 SHRIRAMA RatHotsava (CHORANUR).

Kokkada vaidyanatheshwara 3 km fro Nelyadi 





#ಹೊಳೆಆಂಜನೇಯದೇವಸ್ಥಾನ :

ಈ ಆಂಜನೇಯ ಸ್ವಾಮಿಗೆ 1 ರೂ. 25 ಪೈಸೆ ಇಟ್ರೆ ಸಾಕಂತೆ ಕಂಕಣ ಭಾಗ್ಯ, ಸಂತಾನ ಫಲ , ಅನಾರೋಗ್ಯ ಸಮಸ್ಯೆ ವಾಸಿಯಾಗುತ್ತಂತೆ !

 

ಮಂಡ್ಯ ಜಿಲ್ಲೆಯ #ಮದ್ದೂರಿನ_ಶಿಂಷಾ ನದಿ ದಂಡೆಯ ಮೇಲೆ ಇರುವ ದೇವಾಲಯವೇ ಈ ಹೊಳೆ ಆಂಜನೇಯ ದೇವಸ್ಥಾನ , 

ದೇವಸ್ಥಾನ ಹೊಳೆಯ ಪಕ್ಕದಲ್ಲಿರುವ ಕಾರಣದಿಂದ ಈ ದೇವಸ್ಥಾನಕ್ಕೆ ಹೊಳೆ ಆಂಜನೇಯ ದೇವಸ್ಥಾನ ಎಂಬ ಹೆಸರು ಬಂದಿದೆ. ಈ ದೇವಸ್ಥಾನಕ್ಕೆ ಅದರದೇ ಆದ ಕಥೆ ಇದೆ.ಪುರಾಣಗಳ ಪ್ರಕಾರ ಶ್ರೀ ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಶ್ರೀ ವ್ಯಾಸರಾಜರು 732 ಆಂಜನೇಯ ಮೂರ್ತಿಗಳನ್ನು ಭಾರತದಾದ್ಯಂತ ಪ್ರತಿಷ್ಠಾಪಿಸಿದರು ಅದರಲ್ಲಿ ಪ್ರತಿಷ್ಠಾಪಿಸಿದ ಒಂದು ಆಂಜನೇಯ ಮೂರ್ತಿಯೇ ಈ ಹೊಳೆ ಆಂಜನೇಯ.ಈ ದೇವಸ್ಥಾನಕ್ಕೆ ಒಂದೂಕಾಲ ಆಣೆ ಆಂಜನೇಯ ಎಂದು ಕೂಡ  ಕರೆಯುತ್ತಾರೆ ,ಅದಕ್ಕೆ ಮೂಲ ಕಾರಣ ಇಲ್ಲಿಗೆ ಬರುವಂತಹ ಭಕ್ತರು ಒಂದೂಕಾಲ ಆಣೆ ಇಟ್ಟು ಆಂಜನೇಯನಲ್ಲಿ ಹರಕೆ ಕಟ್ಟಿಕೊಂಡು ಅವರ ಕೋರಿಕೆ ನೆರವೇರಿಸಬೇಕೆಂದು ಬೇಡಿಕೊಳ್ಳುತ್ತಿದ್ದರು .

ಒಂದೂಕಾಲ ಆಣೆ ಈ ದೇವರಿಗೆ ಇರುವಂತ ಶಕ್ತಿ ಭಕ್ತರ ಯಾವ  ಕೋರಿಕೆ ಯಾದರೂ ನೆರವೇರುತ್ತದೆ , ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ, ಅನಾರೋಗ್ಯ ಪೀಡಿತರು ಗುಣಮುಖ ರಾಗುತ್ತಾರೆ, ಮಕ್ಕಳಿಲ್ಲದವರಿಗೆ ಸಂತಾನ ಫಲ ದೊರಕುತ್ತದೆ, ಕೋರ್ಟ್ ವ್ಯಾಜ್ಯ ಬಗೆಹರಿಯುತ್ತದೆ.
***

Kurmagada Karwar Nrusimha Temple (in Arabian Sea)

10 kms from Karwar inside sea. Utsawa and grand celebrations on  Full moon day of January (i think Pushya masa hunnime)
pushya masa hunnime jaatre


***


ಸುವರ್ಣಾನದಿ 

 ಮುಕ್ತಿಗೆ ಸಾಧನವಾಗಲೆಂದೇ ಶ್ರೀಹರಿಯ ತದ್ದಾಸರಾದ ದೇವತೆಗಳ & ಋಷಿಗಳ ಸಾನ್ನಿಧ್ಯದ ಕ್ಷೇತ್ರಗಳೂ  ಶ್ರೀಹರಿಯಚರಣೋಧ್ಭವಗಳಾದ ಅನೇಕ ತೀರ್ಥಗಳೂ ಈ ಭಾರತಭೂಮಿಯಲ್ಲಿ ಇವೆ.  ಇಂತಹಾ ಅನೇಕ ತೀರ್ಥಕ್ಷೇತ್ರ ಯಾತ್ರೆ ಮುಮುಕ್ಷುವಿನ ಕರ್ತವ್ಯಗಳಲ್ಲಿ ಮುಖ್ಯವಾದುದು.
ಇಂತಹಾ ಅನೇಕ ತೀರ್ಥಗಳು ಗಂಗೆಯಿಂದಾರಂಭಿಸಿ ಅನೇಕ ನದಿಗಳೂ,  ಸ್ವಾಮಿಪುಷ್ಕರಣಿಯಿಂದಾರಂಭಿಸಿ ಅನೇಕ ಸರೋವರಗಳೂ. ಭಗವದ್ಭಕ್ತರಿಗೆ ಮುಕ್ತಿ ಸೋಪಾನವಾಗಿವೆ.

ಅವುಗಳಲ್ಲಿ ವಿಶಿಷ್ಟವಾದ ಒಂದು ನದಿಯ ಬಗ್ಗೆ ಹೇಳಲೇಬೇಕು..

ಅದೇ ನಮ್ಮ ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರವಾದ ದ್ವೈತಮತಪ್ರವರ್ತಕರಾದ ಶ್ರೀಮಧ್ವಾಚಾರ್ಯರು ಅವತರಿಸಿದ ಪುಣ್ಯಭೂಮಿಯನ್ನೊಳಗೊಂಡ  ರಜತಪೀಠಪುರ (ಉಡುಪಿ)ಯ ಜೀವನಾಡಿ  
ಶುದ್ಧಜಲದನೆಲೆ ಪುಣ್ಯದಭಾಂಡಾಗಾರ  ಸಮೃದ್ಧಧಾನ್ಯವರ್ಧಿನೀ..ಪಾಪೌಘವಿಧ್ವಂಸಿನೀ.. ಶ್ರೀಹರಿಯ ಚರಣಜಲದಿಂದ ಯುಕ್ತಳಾದ...
ಸುವರ್ಣಾ ನದೀ.

ಮಧ್ವಮತಸೇನಾಧಿಪತಿಗಳಾದ ಅಭಿನವ ಆನಂದತೀರ್ಥರೆಂದೇ  ಪ್ರಸಿದ್ಧರಾದ 
ಶ್ರೀಮದ್ವಾದಿರಾಜಗುರಸಾರ್ವಭೌಮರು...  ತಮ್ಮ ತೀರ್ಥಪ್ರಬಂಧವೆಂಬ ಪರಮಪವಿತ್ರವಾದ ಅತ್ಯದ್ಭುತ ತೀರ್ಥಕ್ಷೇತ್ರಯಾತ್ರಾಕೈಪಿಡಿಯಂತಿರುವ ಕೃತಿಯಲ್ಲಿ ಸುವರ್ಣೆಯ ಮಾಹಾತ್ಮ್ಯವನ್ನು  ಪಶ್ಚಿಮಪ್ರಬಂಧದಲ್ಲಿ ಹೀಗೆ ವರ್ಣಿಸಿದ್ದಾರೆ

ವೇದಾಚಲಹೃದುದ್ಭೂತಾಂ 
ಸುವರ್ಣಾಂ ಕೋ$ನುವರ್ಣಯೇತ್|
ಅಂಹಸೋ ದಹ್ಯಮಾನಸ್ಯ
ಶ್ರಾವಯಂತೀಂ ಸ್ವನಂ ಜನಾನ್||46||
                               
ಅರ್ಥ:-
ಯಾವಳು  ತನ್ನಲ್ಲಿ ಮೀಯುವ ಭಕ್ತರಿಗೆ ಪಾಪಗಳು ಸುಡುವ ಶಬ್ದವನ್ನು ಕೇಳಿಸುತ್ತಾಳೋ ಅಂತಹಾ  ವೇದಾಚಲದಲ್ಲಿ ಹುಟ್ಟುವ ಈ 'ಸುವರ್ಣೆ'ಯನ್ನು ಯಾರು ತಾನೇ ವರ್ಣಿಸಬಲ್ಲ.!!!!

 ಶ್ರೀವಾದಿರಾಜಗುರುಸಾರ್ವಭೌಮರು ಇಲ್ಲಿ  
ನದಿಯು ಮಾಹಾತ್ಮ್ಯ ತಿಳಿಸಿದ್ದಾರೆ.

ಕೃಷ್ಣಪಕ್ಷ ಮಂಗಳವಾರ (ಅಂಗಾರಕ=ಮಂಗಳವಾರ)ಚತುರ್ದಶಿಯ 
ಎಂದು ಬರುವುದೋ...  ಅಂತಹಾ
ಕೃಷ್ಣಾಂಗಾರಚತುರ್ದಶಿಯ ಪರ್ವಕಾಲದಲ್ಲಿ
ಯಾರೇ ಬಂದು ಈ ಸುವರ್ಣಾನದಿಯಲ್ಲಿ ಸ್ನಾನಮಾಡುತ್ತಾರೋ ಅವರ ಪಾಪಗಳು ಕುದಿವ ಎಣ್ಣೆಯಲ್ಲಿ ಹಾಕಿದ ಎಳ್ಳು  ಚಟ ಪಟ ಚಟ ಪಟ  ಎಂದು ಶಬ್ದಮಾಡುತ್ತಾ  ಸಿಡಿಯುವಂತೆ...ಸಿಡಿದು ಸುಟ್ಟುಹೋಗುತ್ತದೆ...ಇದು ಇಂದಿಗೂ ನಿವು ನೋಡಬಹುದು..ಕಿವಿಯಾರೆ ಕೇಳಿ ಸಾಕ್ಷಿಯಾಗಬಹುದು.  ಅದೂ ಅಲ್ಲದೆ. ನದಿಯ ಒಂದು ಘಟ್ಟದಲ್ಲಿ ಸುಮಾರು ಮುಕ್ಕಾಲು ಕಿಲೋಮೀಟರ್ ವರೆಗಿನ ಘಟ್ಟದಲ್ಲಿ ಮಾತ್ರ ಈ ಧ್ವನಿಯನ್ನು ಕೇಳಬಹುದು.

ನಾಸ್ತಿಕರಾದವರು ಪುಣ್ಯಪಾಗಳನ್ನೊಪ್ಪದವರು. ಈ ನದಿಯಲ್ಲಿ ಕೃಷ್ಣಾಂಗಾರಚತುರ್ದಶಿಯ ಈ ಪರ್ವಕಾಲದಲ್ಲಿ ಮಿಂದರೆ ಅವರಿಗೂ ಕಿವಿಗಡಚಿಕ್ಕುವ ಚಟಪಟ ಧ್ವನಿ  ಸ್ಪಷ್ಟವಾಗಿ ಕರ್ಣರಂಧ್ರದಲ್ಲಿ ಬೀಳುವುದು.
 
ಪಾಪಗಳನ್ನು ಕಳೆಯಬಲ್ಲ ಅನೇಕ ನದಿಗಳು  ಇವೆ...ಆದರೆ ಪಾಪಗಳು ಸುಡುವುದನ್ನು ಪ್ರತ್ಯಕ್ಷವಾಗಿ ಕೇಳಿ ಅನುಭವಿಸುವಂತೆ ಮಾಡಿ ನಾಸ್ತಿಕನನ್ನೂ ಆಸ್ತಿಕನನ್ನಾಗಿಸಬಲ್ಲ  ಜಗತ್ತಿನ ಏಕೈಕ ನದಿ ಸುವರ್ಣಾನದಿ.
ಇಂತಹಾ ನದಿಯನ್ನು ಹೆಚ್ಚು ಏನೆಂದು ತಾನೇ ವರ್ಣಿಸಬಲ್ಲೆವು.

ಯಾವುದೋ ವೈಜ್ಞಾನಿಕ ಕಾರಣವನ್ನು ಹುಡುಕಿಹೊಂದಿಸಲು ವಿಜ್ಞಾನಿಗಳು ಎಷ್ಟೇ ಪ್ರಯತ್ನಪಟ್ಟರೂ ಹೊಂದಿಸಲಾಗಿದ ಕೇವಲ ಶ್ರೀಹರಿಯ ಮಹಿಮಾತಿಶಯವನ್ನು ಹೊರಸೂಸುವ ಈನದಿ ಶ್ರೀ ಕೃಷ್ಣನ ಪರಮಕರುಣ್ಯಯಲ್ಲದೆ ಮತ್ತೇನು.

ಇಂದಿಗೂ ಅನೇಕರು ವಿಶೇಷವಾಗಿ ಮಾಧ್ವರು  ಮಾಧ್ವಯತಿಗಳು ಈ ಕೃಷ್ಣಾಂಗಾರಚತುರಾದಶಿಯಂದು ಇಲ್ಲಿಗೆ ಆಗಮಿಸಿ   ಭಕ್ತಿಯಿಂದ ಸ್ನಾನವನ್ನು ಮಾಡಿ ಪಾಪ ಸುಡುವ ಫಟ್ ಫಟ್ ಎಂಬ ಧ್ವನಿಯನ್ನೂ ಕೇಳಿ..ಪಾಪಪ್ರಧ್ವಂಸಿನಿಯಾದ ಸುವರ್ಣೆಯನ್ನು ಮನದುಂಬಿ ನಮಸ್ಕರಿಸಿ ಕೃತಾರ್ಥರಾಗುತ್ತಾರೆ.

ಈ ನದಿಯ ದಡದಲ್ಲಿ  ವಿಘ್ನನಿವಾರಕನಾದ
 ಶ್ರೀಹರಿಯ ಪ್ರೀತಿಯ ಮರಿಮೊಮ್ಮಗ ಶ್ರೀಸಿದ್ಧಿವಿನಾಯಕನ ದೇವಸ್ಥಾನವೂ ಇದ್ದು..ಮಾಧ್ವರು ಇಲ್ಲಿ ಪೂಜೆಯನ್ನು ವೈಭವದಿಂದ ನಡೆಸುತ್ತಿದ್ದಾರೆ.

ಸೋದೆಮಠದ ಆಡಳಿತಕ್ಕೊಳಪಟ್ಟ ಈ ನದಿ ಉಡುಪಿಯಿಂದ 7 ಕಿ.ಮೀ ದೂರದಲ್ಲಿಯೇ ಇದೆ
 ಆಟೋ ವ್ಯವಸ್ಥೆಗಳು ಇವೆ.ಸ್ವಂತ ವಾಹನದಿಂದಲೂ  ತಲುಪಬಹುದು.

🔸🔸🔸🔸🔸🔸🔸🔸🔸🔸🔸🔸✨🔸
ಕಡೆಗೊಂದು ಮಾತು ಶ್ರೀಮಧ್ವಾಚಾರ್ಯರು ದ್ವಾದಶಸ್ತೋತ್ರದಲ್ಲಿ   ತಿಳಿಸುವಂತೆ...

ಬಹುಚಿತ್ರಜಗದ್ಬಹುಧಾಕರಣಾತ್ ಪರಶಕ್ತಿರನಂತಗುಣ: ಪರಮ:/

 ಈ ಜಗತ್ತು ಚೇತನ& ಅಚೇತನ ಅದರಲ್ಲೂ  ಅಚೇತನವಾದ ನದೀ ಪರ್ವತ ಮುಂತಾದ ಅನೇಕ ವಿಧಗಳನ್ನೊಳಗೊಂಡದ್ದರಿಂದ  ಈ ಜಗತ್ತು ತುಂಬಾ ವೈಚಿತ್ರ್ಯಪೂರ್ಣ& ವೈಶಿಷ್ಟ್ಯಗಳಿಂದ ಕೂಡಿದೆ.
ಇಂತಹಾ ಅದ್ಭುತವಾದ ಜಗತ್ತನ್ನು  ನಿರ್ಮಿಸಿದ ಜಗಜ್ಜನ್ಮಾದಿಕಾರಣನಾದ ಶ್ರೀಹರಿ ಅನಂತಗುಣಪರಿಪೂರ್ಣನಲ್ಲವೇ ..ಸರ್ವೋತ್ತನಲ್ಲವೇ.

ಎಂಬ ಈ ಮಾತಿನಂತೆ
 ತ್ರೈಲೋಕ್ಯಾಚಾರ್ಯರಾದ 
ಶ್ರೀಮಧ್ವಾಚಾರ್ಯರು ತಿಳಿಸಿದಂತೆಯೇ ಇಂತಹ  ಪುಣ್ಯಕ್ಷೇತ್ರನದ್ಯಾದಿಗಳ ಮಹಿಮೆಗಳ ಮೂಲಕ
ಜಗತ್ಸತ್ಯತ್ವವನ್ನೂ ಶ್ರಿಹರಿಯ ಮಹಿಮೆಯನ್ನೂ ಅವನ ಅನಂತಗುಣಪರಿಪೂರ್ಣತ್ವನ್ನೂ  ಸರ್ವೋತ್ತಮತ್ವವನ್ನೂ ತಿಳಿದೆವೆಂದರೆ ನಮ್ಮ ತೀರ್ಥಕ್ಷೇತ್ರಯಾತ್ರೆ  ಸಂದರ್ಶನ...ನಿಜವಾಗಿ ಸಾರ್ಥಕ.


✍️ಅನಿಲ ಜೋಷಿ

•|| मध्वो देदीप्यतेसौ जगति विजयते सत्सभामङ्गलाय ||•
***


pajaka kshetra udupi





****
****








***





Melkote Dwadashi special Golden kavacha to Lord Narayana Once in a Year.(Next day of Vaikunta Ekadashi) MELEKOTE

ಶತಮಾನದ ಸಂಪ್ರದಾಯ: ಚೆಲುವ ನಾರಾಯಣನಿಗೆ ಬಂಗಾರದ ಕವಚ ಧಾರಣೆ.

ಶತಮಾನಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ದ್ವಾದಶಿಯ ದಿನ ಮಾತ್ರ ಬಂಗಾರದ ಕವಚವನ್ನು ಮೂರ್ತಿಗೆ ಧಾರಣೆ ಮಾಡಲಾಗುತ್ತದೆ. ಮೇಲುಕೋಟೆಯ ಭೂಲೋಕದ ವೈಕುಂಠ ಆಗಿರುವುದರಿಂದ ಇಲ್ಲಿ ವೈಕುಂಠದ ಬಾಗಿಲು ಇಲ್ಲ.
ಹಾಗಾಗಿ ಎಲ್ಲಾ ದಿನವೂ ಇಲ್ಲಿ ವೈಕುಂಠ ದಿನವೇ ಆಗಿರುತ್ತದೆ ಎಂಬ ಪ್ರತೀತಿ ಇದೆ.
***********

KOPPARA



ಕ್ರಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ|| 
ತತ್ತೀರೇ ಪಿಪ್ಪಲಸ್ಥಂ| ಶ್ರೀ ನ್ರಸಿಂಹಂ ಮನಸಾ ನಮೇ||

Koppar is a Village in Devadurga Taluk in Raichur District of Karnataka State, India. It belongs to Gulbarga Division . It is located 55 KM towards west from District head quarters Raichur. 19 KM from Devadurga. 463 KM from State capital Bangalore

Koppar Pin code is 584111 and postal head office is Deodurga .

Devadurga ( 14 KM ) , Gugal ( 15 KM ) , Hirebudur ( 16 KM ) , Masarkal ( 16 KM ) are the nearby Villages to Koppar. Koppar is surrounded by Shahapur Taluk towards North , Shorapur Taluk towards west , Yadgir Taluk towards North , Maganoor Taluk towards East .

Shorapur , Shahpur , Yadgir , Raichur are the near by Cities to Koppar

Demographics of Koppar

Kannada is the Local Language here.

By Rail


There is no railway station near to Koppar in less than 10 km. are the Rail way stations reachable from near by towns.

By Road


Devdurga , Hatti are the nearby by towns to Koppara
Masihal; Karnataka 584126; India
13.4 KM distance   Hireboodur Bus Stop
Hirebudur; Karnataka 584126; India
14.6 KM distance     Devadurg Bus Stand
SH 15; Devadurga; Karnataka 584111; India 15.0 KM distance
********

 provides following in year 2014:

The temple is located on the right bank at a spot where an ashwath grew out of a crag in a huge boulder. Presently a neem tree is also growing at the spot. Following Sanskrit shlokas in Kannada script are seen on the placard kept above the entrance.
There is a legend that a ‘saligrama’ (a polished stone normally found in a river bed) was discovered between the tree trunks. Narasimha having sixteen arms (shodashabahu) carved on this saligrama is the presiding deity. Smaller saligramas are lumped together and worshipped separately alongwith the utsav moorty, a silver clad replica of the main deity.
A platform and a partially surrounding stone wall are the modern additions. During floods river level comes up to the temple floor. The major festival of this temple falls on Narasimha Jayanti day (Vaishakha Pournami) - sometime in May. 
कृष्णवेणी तीरसंस्थं         On the banks of Krishnaveni
कार्पर ग्राम वासिनम्        The hamlet Karper is situated
तत्तीरे पिप्प अस्थम्         Therein located ashwath tree has within it
श्री नृसिंहं मनसा नमे        Shri Nrusimha; I pray to Him with devotion. 
अश्वत्तः सर्वपापानि          Ashwath tree redeems all sins
शतजन्मार्जितनिच           Accumulated over a hundred births.
क्षमस्व मम देवेश             Forgiven by my merciful Lord       
सर्वाभीष्ट प्रदोभव            I feel all my wishes have been fulfilled.
Contact details :
                                Bhimsenacharya
                                Archak, Sri Laxminarasimha Temple, 
                                Koppar - 585111
                                Ph: 9886991766, 9663967266
Ashok Kulkarni visited Koppar on 5th March 2014.  His  information is as above.
*****

Garuda Temple, Koladevi, Mulabagalu

Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ರಾಕ್ಷಸನಾದ ರಾವಣ ವನವಾಸದಲ್ಲಿದ್ದ ಸೀತಾ ಮಾತೆಯನ್ನು ಅಪಹರಿಸಿ ಪುಷ್ಪಕ ವಿಮಾನದಲ್ಲಿ ಲಂಕೆಗೆ ಹೊತ್ತೊಯ್ಯುತ್ತಿದ್ದಾಗ, ಸೀತೆ  ಕಾಪಾಡಿ ಕಾಪಾಡಿ ಎಂದು ಕೂಗುತ್ತಾಳೆ. ಆಕೆಯ ಆಕ್ರಂದನ ಕೇಳಿದ ಜಟಾಯು ಎಂಬ ಪಕ್ಷಿ  ರಾವಣನನ್ನು ತಡೆಯಲು ಮತ್ತು ಸೀತಾ ದೇವಿಯನ್ನು ಕಾಪಾಡಲು ಪ್ರಯತ್ನಿಸಿತು, ರಾವಣ ಆಗ ಜಟಾಯುವಿನ ಎರಡೂ ರೆಕ್ಕೆಗಳನ್ನು ಕತ್ತರಿಸಿದಾಗ ಅದು ಭೂಮಿಗೆ ಬಿದ್ದು ನರಳಿ, ಸೀತೆಯನ್ನು ಹುಡುಕುತ್ತಾ ಬಂದ ರಾಮನಿಗೆ ವಿಷಯ ತಿಳಿಸಿ ಪ್ರಾಣ ಬಿಟ್ಟಿತು ಎಂಬುದು ರಾಮಾಯಣ ಓದಿದ ನಮಗೆಲ್ಲರಿಗೂ ತಿಳಿದಿದೆ.

ಆದರೆ, ಈ ಜಟಾಯು ಪಕ್ಷಿ ರಾವಣನನ್ನು ತಡೆದಿದ್ದು ಎಲ್ಲಿ, ಹೋರಾಡಿ ರೆಕ್ಕೆ ಕಳೆದುಕೊಂಡು ಕೆಳಗೆ ಬಿದ್ದಿದ್ದು ಎಲ್ಲಿ ಎಂಬುದು ಹಲವರಿಗೆ ಗೊತ್ತಿಲ್ಲ. ಆ ಸ್ಥಳ ಕರ್ನಾಟಕದಲ್ಲೇ ಇದೆ ಎಂಬುದೂ ಅನೇಕರಿಗೆ ತಿಳಿದಿಲ್ಲ. ಹೌದು ಈ ಸ್ಥಳ ಇರುವುದು ಕರ್ನಾಟಕದಲ್ಲೇ ಅದು ರಾಜ್ಯದ ರಾಜಧಾನಿ ಬೆಂಗಳೂರಿಗೆ ಅತಿ ಸಮೀಪದಲ್ಲೇ. ಅದುವೇ ಕೊಲದೇವಿ ಗ್ರಾಮದ ರಾಜ್ಯದ ಏಕೈಕ ಗರುಡ ದೇವಾಲಯ ಇರುವ ಕ್ಷೇತ್ರವಂತೆ.

ಅಷ್ಟ ಸರ್ಪದೋಷ ನಿವಾರಣಾ ಕ್ಷೇತ್ರ ಎಂದೇ ಖ್ಯಾತವಾಗಿರುವ ಇಲ್ಲಿ ಗರುಡ ದೇವರ ದರ್ಶನ ಮಾಡಿ, ಪೂಜೆ ಸಲ್ಲಿಸಿದರೆ ಎಂಟು ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ ಎಂದು ದೇವಾಲಯದ ಅರ್ಚಕರಾದ ಪದ್ಮನಾಭ ಆಚಾರ್ಯ ಮತ್ತು ಶ್ರೀನಿವಾಸ್ ಅವರು ತಿಳಿಸುತ್ತಾರೆ.

Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ದ್ವಾಪರದಲ್ಲಿ ಖಾಂಡವ ದಹನ ಮಾಡಿದಾಗ ಹಲವು ಸರ್ಪಗಳನ್ನು ಕೊಂದ ಅರ್ಜುನನಿಗೆ ಸರ್ಪದೋಷ ಸುತ್ತಿಕೊಂಡಿರುತ್ತದೆ. ಇದನ್ನು ಅರಿತ ಶ್ರೀಕೃಷ್ಣ, ಅರ್ಜುನನಿಗೆ ತ್ರಿಕರಣಶುದ್ಧಿಯಿಂದ ಶ್ರೀಮನ್ನಾರಾಯಣನ ಪ್ರಾರ್ಥನೆ ಮಾಡುವಂತೆ ತಿಳಿಸಿದನಂತೆ. ಕೃಷ್ಣನ ಆಣತಿಯಂತೆ ಶ್ರದ್ಧಾಭಕ್ತಿಯಿಂದ ಅರ್ಜುನ ನಾರಾಯಣನನ್ನು ಸ್ಮರಿಸಿ ಧ್ಯಾನಿಸಿದಾಗ, ನಾರಾಯಣ, ತನ್ನ ವಾಹನವಾದ ಗರುಡನಿಗೆ ಭೂಲೋಕಕ್ಕೆ ಹೋಗಿ ಅರ್ಜುನನ ಸರ್ಪದೋಷ ನಿವಾರಣೆ ಮಾಡು ಎಂದು ಸೂಚಿಸಿದನಂತೆ. ನಾನು ಮಾತಾಪಿತೃ ಸ್ವರೂಪಿಗಳಾದ ನಿಮ್ಮಿಬ್ಬರನ್ನು (ನಾರಾಯಣ –ಲಕ್ಷ್ಮೀ) ಬಿಟ್ಟು ತಾನೊಬ್ಬನೇ ಭೂಲೋಕಕ್ಕೆ ಹೋಗುವುದಿಲ್ಲ. ನೀವೂ ನನ್ನೊಂದಿಗೆ ಬನ್ನಿ ಎಂದು ಪ್ರಾರ್ಥಿಸಿದನಂತೆ. ಹೀಗಾಗಿ ಲೋಕ ಕಲ್ಯಾಣಾರ್ಥ ಗರುಡನ ಜೊತೆಗೆ ಲಕ್ಷ್ಮೀನಾರಾಯಣರೂ ಬಂದರಂತೆ. ಹೀಗಾಗಿಯೇ ದೇವಾಲಯದ ಪ್ರಧಾನಗರ್ಭಗುಡಿಯಲ್ಲಿರುವ ಗರುಡನ ವಿಗ್ರಹದ ಬಲ ಭಾಗದಲ್ಲಿ ನಾರಾಯಣ ಮತ್ತು ಎಡ ಭಾಗದಲ್ಲಿ ಲಕ್ಷ್ಮೀಯ ವಿಗ್ರಹಗಳಿವೆ, ಶಂಖ ಚಕ್ರಗಳೂ ಇವೆ ಎಂದು ಅರ್ಚಕರಾದ ಪದ್ಮನಾಭ ಅವರು ತೋರಿಸುತ್ತಾರೆ. ಅರ್ಜುನನ ಸರ್ಪದೋಷ ನಿವಾರಿಸಿದ ಈ ಗರುಡನ ಮೈ ಮೇಲೆ ಎಂಟು ನಾಗಗಳೂ ಇವೆ. ಆದ್ದರಿಂದಲೇ ಇಲ್ಲಿ ಪೂಜೆ ಮಾಡಿಸಿದರೆ ಎಂಟು ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವಂತೆ.

ದೇವಾಲಯದಲ್ಲಿ ಸುಂದರವಾದ ಆಂಜನೇಯನ ವಿಗ್ರಹವೂ ಇದೆ. ಈ ಕ್ಷೇತ್ರಕ್ಕೆ ಪ್ರಾಣ ದೇವರೂ ಶಕ್ತಿ ತುಂಬಿದ್ದಾನೆ. ಇಲ್ಲಿ ಆಂಜನೇಯ ನೆಲೆಸಿದ ಬಗ್ಗೆಯೂ ಐತಿಹ್ಯವಿದೆ. ಬಲಶಾಲಿಯಾದ ಜಟಾಯು ರಾವಣನೊಂದಿಗೆ ಹೋರಾಡಿ ತನಗೆ ಬಲ ನೀಡಿದ್ದ ರೆಕ್ಕೆಯನ್ನೇ ಕಳೆದುಕೊಂಡು ದುರ್ಬಲನಾಗಿ ಕೆಳಗೆ ಬಿದ್ದು ರಾಮ ರಾಮ ಎಂದು ನರಳುತ್ತಿದ್ದಾಗ ತನ್ನ ಪ್ರಭುವಾದ ರಾಮದೇವರನ್ನು ಕರೆಯುತ್ತಿರುವವರು ಯಾರು?, ಅವರಿಗೆ ತಾನು ಸಹಾಯ ಮಾಡಬೇಕು ಎಂದು ಆಂಜನೇಯನೂ ಇಲ್ಲಿಗೆ ಬಂದನಂತೆ, Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ಆದರೆ, ಶ್ರೀರಾಮ ದೇವರ ಅವತಾರ ಆಗಿರುವುದೇ ರಾವಣ ಸಂಹಾರಕ್ಕಾಗಿ ಹೀಗಾಗಿ ಇದು ತನ್ನ ಕಾರ್ಯವಲ್ಲ ಎಂಬುದನ್ನು ಮನಗಂಡ ಹನುಮಂತ ಜಟಾಯುವಿನ ನೋವನ್ನಷ್ಟೇ ನಿವಾರಿಸಿ, ಅಲ್ಲೇಯೇ ನೆಲೆನಿಂತನಂತೆ. ಹೀಗಾಗಿಯೇ ಈ ಗರುಡ ದೇವರ ದೇವಾಲಯದ ಬಲ ಭಾಗದಲ್ಲಿ ಆಂಜನೇಯನ ಗುಡಿಯೂ ಇದೆ. ವಿಘ್ನ ನಿವಾರಕ ಗಣಪನೂ ಇಲ್ಲಿದ್ದಾನೆ.

ಪುರಾತನವಾದ ಈ ದೇವಾಲಯ ವಾಸ್ತುವಿನ್ಯಾಸದಿಂದ ಸಾಧಾರಣ ದೇವಾಲಯವಷ್ಟೇ. ಗರ್ಭಗೃಹ ಕಲ್ಲಿನ ನಿರ್ಮಾಣವಾಗಿದ್ದು, ಈಗ ಹೊರಗೆ ಗಾರೆಯ ಕಟ್ಟಡ ಇದೆ.  ನಿತ್ಯವೂ ನೂರಾರು ಭಕ್ತರು ಆಗಮಿಸುತ್ತಾರೆ. Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ಇಲ್ಲಿ ಅರ್ಚಕರಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಭವಿಷ್ಯವನ್ನೂ ತಿಳಿಯುತ್ತಾರೆ. ವಿದ್ಯಾಭ್ಯಾಸದಲ್ಲಿ ಹಿಂದಿರುವವರು ಇಲ್ಲಿ ಬಂದು ಪೂಜೆ ಮಾಡಿಸಿದರೆ ಅವರಿಗೆ ಏಕಾಗ್ರತೆ ಹೆಚ್ಚಿ ವಿದ್ಯಾವಂತರಾಗುತ್ತಾರಂತೆ. ಅವಿವಾಹಿತರಿಗೆ ದೋಷ ಪರಿಹಾರವಾಗಿ ಶೀಘ್ರ ವಿವಾಹ ನೆರವೇರುತ್ತದಂತೆ, ಮಕ್ಕಳಿಲ್ಲದವರಿಗೆ ಇಲ್ಲಿ ಲಕ್ಷ್ಮೀನಾರಾಯಣರು ಸಂತಾನ ಭಾಗ್ಯವನ್ನೂ ಕರುಣಿಸುತ್ತಾರಂತೆ. ಒಟ್ಟಾರೆಯಾಗಿ ಕೋಲಾರ ಜಿಲ್ಲೆಯ ಈ ಕ್ಷೇತ್ರ ಪವಾಡಗಳ ನೆಲೆವೀಡಾಗಿದೆ.

ಬೆಂಗಳೂರು ನಗರದಿಂದ 123 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ, ಮುಳಬಾಗಿಲಿನಿಂದ 15 ಕಿ.ಮೀ. ದೂರದಲ್ಲಿದೆ. ಮುಳಬಾಗಲಿನಿಂದ ಶ್ರೀನಿವಾಸಪುರಕ್ಕೆ ಹೋಗುವ ಮಾರ್ಗದಲ್ಲಿ  ಮುಡಿಯನೂರು ಬಳಿ ಬಲಕ್ಕೆ ತಿರುಗಿದರೆ ನೇರವಾಗಿ ಗರುಡ ದೇವಾಲಯಕ್ಕೆ ಹೋಗಬಹುದು.

ಸನಿಹದಲ್ಲೇ ಕುರುಡುಮಲೆ ಗಣಪತಿ, ಸೋಮೇಶ್ವರ ದೇವಾಲಯಗಳೂ ಇವೆ. ಮುಳಬಾಗಲಲ್ಲಿ ಆಂಜನೇಯ ಹಾಗೂ ವಿಠ್ಠಲ ನಾರಾಯಣ ದೇವಾಲಯಗಳೂ ಇವೆ. ಆವನಿಯಲ್ಲಿ ರಾಮಲಿಂಗೇಶ್ವರ ದೇವಾಲಯವಿದ್ದು, ಮಾರ್ಗದಲ್ಲಿ ವಿರೂಪಾಕ್ಷಿ ಮತ್ತು ಪಂಚಮುಖಿಗೂ ಹೋಗಬಹುದು.
by ಟಿ.ಎಂ. ಸತೀಶ್

***



year 2018

ಭಕ್ತರಲ್ಲಿ ವಿಜ್ಞಾಪನೆ, ವೈಕುಂಠ ಏಕಾದಶಿ ಮತ್ತು ಗೀತಾಜಯಂತಿಯ (18.12.2018) ಪ್ರಯುಕ್ತ,ಪವಿತ್ರ ಕ್ರಷ್ಣ ನದಿ ತೀರದಲ್ಲಿರುವ ಶ್ರೀ ನರಸಿಂಹ ದೇವರ ಸನ್ನಿಧಿಯಲ್ಲಿ ಅಖಂಡ ಭಾಗವತ ಪ್ರವಚನ (ಪ್ರಾತಃ 08.00 ರ ಪರ್ಯಂತ,ಪ್ರಖ್ಯಾತ ಪಂ|| ಶ್ರೀ ಅಂಬರೀಶಾಚಾರ್ಯ, ಬೆಂಗಳೂರು ಇವರಿಂದ) ಹಮ್ಮಿಕೊಳ್ಳಲಾಗಿದೆ, ಕಾರಣ ಎಲ್ಲರೂ ಈ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕಾರ್ಪರ ನರಸಿಂಹ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ಎಲ್ಲ ಸದ್ಭಕ್ತರಲ್ಲಿ ವಿನಂತಿ.

To Our Devotees, On The Event Of Vaikunta EkAadashi And Gita JAyanti (18.12.2018), Akhanda Bhagavata Pravachana (From 08.00 AM) By Pt// Ambareeshacharya From Bengaluru,Please All Are Hearty Welcome And Take Blessings From Karpara NaraSimha Swamy.

SHRI BHEEMASENACHARYA N KOPPAR. 
Pooja Paryaya Archak 

Thanks &  Regards 
PRASADACHARYA  09535837843
Information And Broadcasting Team.

SHRI LAXMI NARASIMHA SWAMY Temple,
KOPPARA. 584111 Tq: Devadurga,
Dist: Raichur, KARNATAKA

Kindly Note: Any Queries Please Contact Me Personally, Not in the Group, It May Disturbs to Other Members.
*****


Similar places distance to Koppara
Jalahalli  30 km
Shri Laxmi Venkataramana Temple,Bagalwad.  51 km
Shri Laxmi Venkataramana Betta Bgalawad.  51 km
Kudala Sangama  109 km
Jagadguru Basavanna temple  114 km
Basavana Bagewadi  114 km
Suresh Chalwadi's House,Balbatti  115 km
darur, camp , veerbhadreshwar temple ,sanganabasavana matt, honnurvali durghah.  120 km
Venkateshwar Hill and Hanamasagar fort  125 km
Hemagudda  136 km
***
ನಮ್ಮ ಮನೆತನದಿಂದ   ಕೊಪ್ಪರ  ಕ್ಷೇತ್ರದ ಶ್ರೀ ನರಸಿಂಹ ದೇವರ ಸನ್ನಿಧಿಯಲ್ಲಿ 50 ವರ್ಷಗಳಿಂದ ಪುರಂದರದಾಸರ ಆರಾಧನೆ ಮಾಡುತ್ತಿದ್ದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಗಬ್ಬೂರು ನಾರಾಯಣ ದಾಸರ ಕುಟುಂಬದಿಂದ ಧನ್ಯವಾದಗಳು . .  
ಪ್ರಶಾಂತ ಕುಲಕರ್ಣಿ ಕಿನ್ನಾಳ  9986699386 (kinnala is 10 km fr. Koppala)
***



A small and a heritage village called Ikkeri situated in Sagar Taluk of Shimoga District in the Malanadu region of Karnataka has been of great importance historically. Just about 6 km away from Sagar, lays this ancient Ikkeri village and a temple called Aghoreshwara Temple, dedicated to Lord Shiva.
The erstwhile capital of Keladi Nayaks, the word Ikkeri in the Kannada language means ‘Two Streets”. Ikkeri was the capital of the then rulers Keladi Nayaka Dynasty during the 16-17th century. This ancient heritage temple called Aghoreshwara, even after so many years of existence speaks a lot about its glorious past. 
****

ಅನೇಕರು ವ್ಯಾಸತೀರ್ಥರು ಪ್ರತಿಷ್ಠಾಪನೆ ಮಾಡಿದ ಮೊದಲ ಪ್ರಾಣದೇವರು ಯಂತ್ರೋದ್ಧಾರಕ ಪ್ರಾಣದೇವರು(ಆಂಜನೇಯ ಸ್ವಾಮಿ) ಎಂದು ಹೇಳಿದರು. ವ್ಯಾಸತೀರ್ಥರು individual  ಆಗಿ ಸ್ಥಾಪನೆ ಮಾಡಿದ್ದು ಯಂತ್ರೋದ್ಧಾರಕ ಪ್ರಾಣದೇವರೇ.. ಆದರೆ ಅದಕ್ಕೂ ಮೊದಲೇ ಬ್ರಹ್ಮಣ್ಯಪುರದಲ್ಲಿ ಪ್ರಾಣದೇವರನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ..!

ಹೌದು, ಬ್ರಹ್ಮಣ್ಯತೀರ್ಥರು ವ್ಯಾಸತೀರ್ಥರ ಗುರುಗಳು ಮತ್ತು ಪುರುಷೋತ್ತಮ ತೀರ್ಥರ ಶಿಷ್ಯರು. ಬ್ರಹ್ಮಣ್ಯತೀರ್ಥರ ಮತ್ತೊಬ್ಬ ಶಿಷ್ಯರು ಮುಳಬಾಗಿಲಿನ ಶ್ರೀಪಾದರಾಜರು...!  ಈ ಮೂರು ಯತಿಗಳು ನದಿತೀರದಲ್ಲಿ ಸಂಚಾರ ಮಾಡೋವಾಗ ಸಿಕ್ಕ ಮೂರ್ತಿಯನ್ನು ಮೂವರು ಕೂಡಿ ಬ್ರಹ್ಮಣ್ಯಪುರದಲ್ಲಿ ಸ್ಥಾಪನೆ ಮಾಡುತ್ತಾರೆ. ಈ ಹನುಮ ಬಾಲದಲ್ಲಿನ ಗಂಟೆ ಇರುವುದನ್ನು ನೋಡಿ ಬ್ರಹ್ಮಣ್ಯತೀರ್ಥರು ಶಿಷ್ಯರಾದ ವ್ಯಾಸತೀರ್ಥರಿಗೆ ಹನುಮ ಮಂದಿರಗಳನ್ನು ಸ್ಥಾಪಿಸುವಂತೆ ಮತ್ತು ಸ್ಥಾಪನೆಮಾಡುವ ಮೂರ್ತಿಗಳಲ್ಲಿ ಗಂಟೆ ಚಿನ್ಹೆ ಇರುವಂತೆ ಹೇಳುತ್ತಾರೆ. ವ್ಯಾಸತೀರ್ಥರು ಗುರುಗಳ ಅಣಿತಿಯಂತೆ 732 ಪ್ರಾಣದೇವರನ್ನು ರಾಜ್ಯಾದ್ಯಂತ ಸ್ಥಾಪನೆ ಮಾಡುತ್ತಾರೆ. ಹೆಚ್ಚಿನ ಮಾಹಿತಿ ದೇಗುಲದ ಅರ್ಚಕರು ಪರಿಪೂರ್ಣವಾಗಿ ಹೇಳಿದ್ದು ವಿಡಿಯೋವನ್ನು ಪೂರ್ಣವಾಗಿ ನೋಡಿ.

ವ್ಯಾಸತೀರ್ಥರು, ಬ್ರಹ್ಮಣ್ಯತೀರ್ಥರು ಮತ್ತು ಶ್ರೀಪಾದರಾಜರು ಮೂವರು ಯತಿಗಳು ಕೂಡಿ ಸ್ಥಾಪನೆ ಮಾಡಿದ ಈ ಅಪರೂಪ ಪ್ರಾಣದೇವರ ಕ್ಷೇತ್ರ ಪರಿಚಯವಿರುವ ಈ ವಿಡಿಯೋ


**
ಶ್ರೀಕ್ಷೇತ್ರತಲಕಾವೇರಿ
ಶ್ರೀಕ್ಷೇತ್ರತಲಕಾವೇರಿಯಲ್ಲಿಪವಿತ್ರ_ತೀರ್ಥೋದ್ಭವ
ಮಡಿಕೇರಿ
 ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್ ದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ.
ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ.
"ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆಯು ಇಂದು ಕನ್ಯಾ ಲಗ್ನದಲ್ಲಿ ಜಲರೂಪದಲ್ಲಿ ಭಕ್ತರಿಗೆಲ್ಲ ದರ್ಶನ ನೀಡಲಿದ್ದಾಳೆ".

👉"||ಆಚ್ಛಸ್ವಚ್ಛಲಸದ್ದುಕೂಲ ವಸನಾಂ ಪದ್ಮಾಸನೇ ಧ್ಯಾಸಿನೀಂ
ಹಸ್ತನ್ಯಸ್ತವರಾಭಯಾಬ್ಜಕಲಶಾಂ ರಾಕೇಂದು ಕೋಟಿ ಪ್ರಭಾಮ್
ಭಾಸ್ವದ್ಬೂಷಣ ಗಂಧಮಾಲ್ಯ ರುಚಿರಾಂ ಚಾರುಪ್ರಸನ್ನಾನನಾಂ
ಶ್ರೀ ಗಂಗಾದಿ ಸಮಸ್ತ ತೀರ್ಥ ನಿಲಯಾಂ ಧ್ಯಾಯಾಮಿ ಕಾವೇರಿಕಾಮ್ ||"👈
ಭಾರತೀಯ ಸಂಸ್ಕೃತಿಯಲ್ಲಿ ಪುರಾಣಪ್ರಸಿದ್ದ ಏಳು ನದಿಗಳಾದ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ದಕ್ಷಿಣ ಭಾರತದ ಜೀವ ನದಿಯಾಗಿರುವ ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಪ್ಪಲಲ್ಲಿ ತಲಕಾವೇರಿಯಲ್ಲಿದೆ. ಪ್ರತಿವರ್ಷ ಅಕ್ಟೋಬರ್  ತುಲಾಸಂಕ್ರಮಣದ ನಿಶ್ಚಿತ ಗಳಿಗೆ ಲಗ್ನದಲ್ಲಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ “ತೀರ್ಥ ಉದ್ಭವ” ವಾಗುತ್ತದೆ.
ಅತೀ ಪ್ರಾಚೀನ ಕಾಲದಿಂದಲೂ ದಕ್ಷಿಣ ಭಾರತದ ಜೀವನಾಡಿ ಕಾವೇರಿಯನ್ನು ಪವಿತ್ರ ನದಿಯಾಗಿಯೂ, ಜಲರೂಪಿಯಾದ ಜಗದೀಶ್ವರಿ ಕಾವೇರಿ ಮಹಾತಾಯಿಯನ್ನು ಜನಕೋಟಿ ಆರಾಧಿಸುತ್ತಾ ಬಂದಿದ್ದಾರೆ. ಜಾತ್ರೆ, ಉತ್ಸವ, ತೀರ್ಥಯಾತ್ರೆಗಳನ್ನು ಮಾಡಿಕೊಂಡು, ಲೌಕಿಕ, ಆಧ್ಯಾತ್ಮಿಕ, ಸುಖ ಶಾಂತಿಗಳನ್ನು ಹೊಂದಿದ್ದಾರೆ. ದೇಶದ ಭಾವೈಕ್ಯತೆಯಲ್ಲಿ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಮಹತ್ವದ ಸ್ಥಾನವನ್ನು ಪಡೆದಿದೆ.
👉“ಕಾವೇರಿ” ಪುರಾಣದಲ್ಲಿ"
ಸ್ಕಂದ ಪುರಾಣದಲ್ಲಿ ಉಲ್ಲೇಖದಂತೆ, ಬ್ರಹ್ಮಗಿರಿಯಲ್ಲಿ ಕವೇರ ಮುನಿಯು ಏಕಾಗ್ರಚಿತ್ತದಿಂದ ಸಾವಿರ ವರ್ಷಗಳವರೆಗೆ ಪರಬ್ರಹ್ಮನನ್ನು ಧ್ಯಾನಿಸುತ್ತ ದಿವ್ಯ ತಪಸ್ಸನ್ನು ಆಚರಿಸುವಾಗ ಆತನ ದೇಹದಿಂದ ಅದ್ಭುತವಾದ ಅಗ್ನಿಯು ಉತ್ಪನ್ನವಾಯಿತು. ತಪೋಜ್ವಾಲೆಯು ದಶ ದಿಕ್ಕುಗಳನ್ನು ಬೆಳಗುತ್ತಾ ಮೂರು ಲೋಕವನ್ನು ಕಂಪನಗೊಳಿಸಿತ್ತು. ಭೂಮಿಯು ನಡುಗಿತು; ಮುನಿಗಳೂ, ಪಿತೃದೇವತೆಗಳೂ ಬ್ರಹ್ಮದೇವನಲ್ಲಿ ಜ್ವಾಲೆಯಿಂದ ಪಾರುಮಾಡುವಂತೆ ಬೇಡಿಕೊಂಡರು.
ಹೋಮಾಗ್ನಿಯಂತೆ ಪ್ರಜ್ವಲಿಸುವ ಕವೇರ ಮುನಿಯ ಬಳಿಗೆ ಬಂದು ತನ್ನ ಕೈನೀರಿನಿಂದ ಸಂಪ್ರೋಕ್ಷಣೆ ಮಾಡಿ ಶಮನಗೊಳಿಸಿದ ನಂತರ ಎಲೈ ಮುನಿಯೇ ಈ ತಪಸ್ಸಿನ ಉದ್ಧೇಶವೇನು? ನಿನ್ನ ಮನದ ಬಯಕೆ ಏನು? ಎಂದು ಕೇಳಿ ವರವನ್ನು ಬೇಡಿಕೊಳ್ಳುವಂತೆ ಹೇಳಿದಾಗ, ಮಹಾ ತೇಜೋವಂತನಾದ ಕವೇರ ಮುನಿಯು ಮೆಲ್ಲಗೆ ಕಣ್ಣುಗಳನ್ನು ತೆರೆದು ಆರ್ಘ್ಯಾಧಿಗಳನ್ನು ಕೊಟ್ಟು ಬ್ರಹ್ಮನನ್ನು ಉಪಚರಿಸಿ, ಜಗದೊಡೆಯನೇ ಮಕ್ಕಳಲಿಲ್ಲದ ನನಗೆ ಸಂತಾನ ಭಾಗ್ಯವನ್ನು ಕರುಣಿಸು ಎಂದು ಬೇಡಿಕೊಂಡನು. ಬ್ರಹ್ಮ ದೇವನು ಕವೇರನನು ಕುರಿತು, ಎಲೈ ಮುನಿಯೇ ಮಕ್ಕಳನ್ನು ಪಡೆಯಲು ಬೇಕಾದ ಧರ್ಮವನ್ನು ಹಿಂದಿನ ಜನ್ಮದಲ್ಲಿ ನೀನು ಮಾಡಿರುವುದಿಲ್ಲ, ಅದುದರಿಂದ ನಿನಗೆ ಮಕ್ಕಳ ಭಾಗ್ಯವಿಲ್ಲ ಎಂದು ಹೇಳಿ, ಚಿಂತಿಸಬೇಡ ನಿನಗೆ ಲೋಪಾಮುದ್ರೆಯೆಂಬ ಕುಲೋದ್ಧಾರಕಳಾಗುವ ಕನ್ನಿಕೆಯನ್ನು ನಿನಗೆ ದಯಪಾಲಿಸುವೆನು ಎಂದು ಅನುಗ್ರಹಿಸಿದನು. ಸಂತುಷ್ಟನಾದ ಕವೇರ ಮುನಿಯು ತನ್ನ ಪತ್ನಿಯಿಂದ ಒಡಗೂಡಿ ಅನನ್ಯ ಭಕ್ತಿಯಿಂದ ಭಕ್ತಪ್ರಿಯಳೂ, ಕಲ್ಯಾಣಿಯೂ, ಮಂಗಳಪ್ರಿಯಳೂ ಆದ ಲೋಪಾಮುದ್ರೆಯನ್ನು ಸ್ವೀಕರಿಸಿದನು.
ಜಗತ್ತಿಗೆ ಕ್ಷೇಮವಾಗುವಂತೆ, ಸರ್ವ ಪ್ರಾಣಿ ಪಕ್ಷಿಗಳು, ಮಾನವ ಕುಲಕ್ಕೆ ಕಲ್ಯಾಣ ಉಂಟುಮಾಡುವ ವಿಶೇಷ ತಪಃಶಕ್ತಿಯಿಂದ ನದಿಯಾಗುವಂತೆ ಬ್ರಹ್ಮದೇವನಿಂದ ಅನುಗ್ರಹಿತಳಾದ ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ’ಕಾವೇರಿ’ ಯಾಗಿ ಬೆಳೆಯುತ್ತಿದ್ದಳು. ಕವೇರ ಮುನಿಯ ಅಂತ್ಯಕಾಲ ಸಮೀಪಿಸಿ, ತನ್ನ ಪತ್ನಿ ಸಮೇತ ದೇಹತ್ಯಾಗ ಮಾಡಿ ಬ್ರಹ್ಮ ಲೋಕಕ್ಕೆ ತೆರಳಿದರು. ಲೋಪಾಮುದ್ರೆಯು ತನ್ನ ತಪಸ್ಸಿನಿಂದ ಪರಮೇಶ್ವರನನ್ನು ಮೆಚ್ಚಿಸಿ ನಿರ್ಮಲವಾದ ನದಿರೂಪವನ್ನು ಹೊಂದುವಂತಹ ವರವನ್ನು ಪಡೆದುಕೊಂಡಳು.
ಒಂದು ದಿನ… ಅಗಸ್ತ್ಯ ಮುನಿಯು ತನ್ನ ಶಿಷ್ಯರೊಂದಿಗೆ ಋಷಿ ಆಶ್ರಮಗಳಿಂದ ಕಂಗೊಳಿಸುತ್ತಿರುವ ಬ್ರಹ್ಮಗಿರಿಗೆ ಬಂದು ಆತಿಥ್ಯವನ್ನು ಸ್ವೀಕರಿಸಿದನು. ಆಶ್ರಮದಲ್ಲಿ ಸುಂದರಮುಖಿಯಾದ ಕಾವೇರಿಯನ್ನು ಕಂಡು ಸಂತತಿಗೋಸ್ಕರ ಕಾವೇರಿಯನ್ನು ವಿವಾಹವಾಗುವ ತನ್ನ ಮನದ ಇಚ್ಚೆಯನ್ನು ಕಾವೇರಿಯಲ್ಲಿ ಕೇಳಿಕೊಂಡಾಗ, ಋಷಿವಚನವನ್ನು ಉಲ್ಲಂಘಿಸಬಾರದೆಂದು ನಿರ್ಧರಿಸಿ, ಮುನಿಯ ಕೋರಿಕೆಯನ್ನು ಸಮ್ಮತಿಸಿದಳು. ಬ್ರಹ್ಮನ ಮಗಳಾದ ಲೋಪಾಮುದ್ರೆಯು ಕಾವೇರಿಯಾಗಿ ಅಗಸ್ತ್ಯ ಮುನಿಯನ್ನು ವಿವಾಹವಾಗಿ ಬ್ರಹ್ಮಗಿರಿಯಲ್ಲಿ ವಾಸವಾಗಿದ್ದಳು.
ಕಾವೇರಿಯೂ ತಾನು ನದಿಯಾಗಿ ಹರಿದು ಲೋಕಕಲ್ಯಾಣ ಮಾಡಬೆಕೆಂಬ ತನ್ನ ಮನದ ಬಯಕೆಯನ್ನು ಅಗಸ್ತ್ಯ ಮುನಿಯ ಮುಂದೆ ಇಟ್ಟು ತನಗೆ ಜಲರೂಪಿಯಾಗಲು ವರವನ್ನು ನೀಡಿ ಅನುಗ್ರಹಿಸಲು ಕೇಳಿಕೊಂಡಳು. ಲೋಪಾಮುದ್ರೆಯ ಕೋರಿಕೆಯನ್ನು ಅಗಸ್ತ್ಯ ಮುನಿಯು ಪುರಸ್ಕರಿಸಲಿಲ್ಲ. ನಿನಗೆ ವರವನ್ನು ಈವಾಗ ನೀಡಲಾರೆ, ಮುಂದೊಂದು ದಿನ ನೀಡುತ್ತೇನೆ, ಎಂದು ಹೇಳಿದನು. ಇದರಿಂದ ಕೋಪಗೊಂಡ ಕಾವೇರಿಯೂ ಎಲೈ ಅಗಸ್ತ್ಯನೇ ನೀನು ನನ್ನನ್ನು ಉಪೇಕ್ಷೆ ಮಾಡಿದ ಕ್ಷಣವೇ ನಾನು ನದಿಯಾಗಿ ಹರಿಯುತ್ತೇನೆ ಎಂದು ಎಚ್ಚರಿಸಿದಳು. ಇದರಿಂದ ಬೆಚ್ಚಿದ ಅಗಸ್ತ್ಯಮುನಿಯು ತನ್ನ ತಪಸ್ಸಿನ ಶಕ್ತಿಯಿಂದ ಕಾವೇರಿಯನ್ನು ತನ್ನ ಕಮಂಡಲುವಿನ ಒಳಗೆ ಬಂಧಿಸಿಟ್ಟನು.
ಅಗಸ್ತ್ಯಮುನಿಯು ಕನಕಧಾರಕ್ಕೆ ಸಂಧ್ಯೋಪಾಸನೆಗೆ ತೆರಳುವ ಸಂದರ್ಭದಲ್ಲಿ ಕಮಂಡಲುವನ್ನು ತನ್ನ ಶಿಷ್ಯರ ಕೈಯಲ್ಲಿ ಕೊಟ್ಟು ಹೊರಟು ಹೋದನು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಕಾವೇರಿಯೂ ಕೋಪದಿಂದ ಕಣ್ಣನ್ನು ಕೆರಳಿಸುತ್ತಾ, ಪರ್ವಕಾಲದಲ್ಲಿ ಕಡಲು ವೃದ್ಧಿಯನ್ನು ಹೊಂದುವಂತೆ, ಜಲ ರೂಪಿಯಾಗಿ ಕಮಂಡಲುವಿನಿಂದ ಜಾರಿ ಬಿದ್ದು ಜಲರೂಪಿಯಾಗಿ ಹರಿಯತೊಡಗಿದಳು. ಇದನ್ನು ಕಂಡ ಶಿಷ್ಯರು ಬೆಚ್ಚಿಬಿದ್ದು ಆಕೆಯನ್ನು ತಡೆಯಲು ಯತ್ನಿಸಿದಾಗ, ಕಾವೇರಿಯೂ ಕಣ್ಮರೆಯಾಗಿ ಗುಪ್ತಗಾಮಿನಿಯಾಗಿ ಹರಿಯತೊಡಗಿದಳು. ಇದನ್ನು ಅರಿತ ಅಗಸ್ತ್ಯಮುನಿಯು ಆಗಮಿಸಿ ಕಂಡಾಗ ತನ್ನ ಪತ್ನಿಯು ಜಲರೂಪಿಯಾಗಿ ಮೂರು ಯೋಜನ ದೂರ ಹರಿದು ದಾಟಿ ಹೋಗಿಯಾಗಿತ್ತು.
ಅಗಸ್ತ್ಯ ಮುನಿಗೆ ತನ್ನ ತಪ್ಪಿನ ಅರಿವಾದಾಗ, ಪತ್ನಿಯನ್ನು ಕುರಿತು, ಎಲೈ ಸುಂದರಿಯೇ, ಪಾವನಳೇ, ಪಾಪನಾಶಿನಿಯೇ, ಕವೇರ ಕುವರಿಯೇ ನಾನು ನಿನ್ನನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ನೀನು ನಿರ್ಧರಿಸಿದಂತೆ ನದಿರೂಪ ತಾಳಿ ಲೋಕ ಕಲ್ಯಾಣ ಮಾಡುವಂತವಳಾಗು. ಆದರೆ, ಇನ್ನೊಂದು ರೂಪದಲ್ಲಿ ನನಗೆ ಮಡದಿಯಾಗಿರುವಂತೆ ಕೇಳಿಕೊಂಡಾಗ, ಕಾವೇರಿಯು ಸಮ್ಮತಿಸಿ ತನ್ನ ತನುವನ್ನು ಎರಡಾಗಿ ಪರಿವರ್ತಿಸಿ, ಮೊದಲಿನ ಭಾಗ ಲೋಪಾಮುದ್ರೆಯಾಗಿ ಅಗಸ್ತ್ಯನ ಪತ್ನಿಯಾದಳು. ಇನ್ನೊಂದು ಭಾಗ ಕಾವೇರಿ ಎಂಬ ಹೆಸರಿನಿಂದ ನದೀರೂಪವನ್ನು ತಳೆದು ಸಕಲ ತೀರ್ಥಗಳಿಗಿಂತಲೂ ಶ್ರೇಷ್ಟವೆನಿಸಿ ತನ್ನ ಸಖಿಯಾದ ಮಣಿಕರ್ಣಿಕೆಯೊಡನೆ ಸಮುದ್ರವನ್ನು ಸೇರಿದಳು.
ಇತ್ತ… ಸುಯಜ್ಞನೆಂಬ ಮಕ್ಕಳಿಲ್ಲದ ವಿಷ್ಣು ಭಕ್ತನು ತಪಸ್ಸನ್ನು ಆಚರಿಸಿ, ವಿಷ್ಣುವನ್ನು ಒಲಿಸಿಕೊಂಡು ತನ್ನ ಕೋರಿಕೆಯಂತೆ ವರವಾಗಿ ಸುಜ್ಯೋತಿ ಎಂಬ ಕನ್ನಿಕೆಯನ್ನು ಮಗಳಾಗಿ ಪಡೆದು ನೆಲೆಸಿದ್ದನು. ಇಂದ್ರನು ಆಶ್ರಮಕ್ಕೆ ಬಂದು ಸುಜ್ಯೋತಿಯನ್ನು ಕಂಡು ಮೋಹಿತನಾಗಿ ತನ್ನನ್ನು ವರಿಸುವಂತೆ ಕೇಳಿ ಕೊಂಡನು. ಇದನ್ನು ಒಪ್ಪದ ಸುಜ್ಯೋತಿಯು ತನಗೆ ನದಿ ರೂಪ ತಾಳುವ ಶಕ್ತಿಯನ್ನು ಪಡೆದಿದ್ದರೂ, ಇಂದ್ರನ ಶಾಪಕ್ಕೆ ಗುರಿಯಾಗಿ ಜಲಶೂನ್ಯಳಾಗಿದ್ದಳು. ಶಾಪಕ್ಕೆ ಪರಿಹಾರವಾಗಿ ಕಾವೇರಿಯನ್ನು ದರ್ಶನ ಮಾಡಿದರೆ ಶಾಪ ವಿಮೋಚನೆಯನ್ನು ಅರಿತ ಸುಜ್ಯೋತಿಯು, ತನ್ನ ಸಖಿಯಾದ ಕನ್ನಿಕೆಯೊಡನೆ ಬ್ರಹ್ಮಗಿರಿಯಿಂದ ಕಾವೇರಿ ನದಿರೂಪವಾಗಿ ಬರುತ್ತಿರುವಾಗ ಆಕೆಯನ್ನು ದರ್ಶನ ಮಾಡಿ, ತನ್ನ ಮನದ ಬಯಕೆಯನ್ನು ಹೇಳಿಕೊಂಡು ಬಳಿಕ ಕಾವೇರಿಯ ಜೊತೆಗೆ ಹರಿದು ಸಮುದ್ರವನ್ನು ಸೇರಿದಳು.
👉"ತೀರ್ಥ ಕ್ಷೇತ್ರ ತಲಕಾವೇರಿ"👈
ಕಾವೇರಿ ನದಿಯ ಉಗಮಸ್ಥಾನ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯನ್ನು ಪಡೆದ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಮೇಲಿದೆ. ಸಮುದ್ರ ಮಟ್ಟದಿಂದ 5000 ಅಡಿ ಎತ್ತರದ ಮೇಲಿರುವ ತಲಕಾವೇರಿ ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ 48 ಕಿ. ಮಿ. ದೂರದಲ್ಲಿದೆ. ತ್ರಿವೇಣಿ ಸಂಗಮವಿರುವ ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ತಲುಪಬಹುದು. ತಲಕಾವೇರಿಗೆ ಹೋಗುವ ಯಾತ್ರಿಕರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಕೊಂಡು ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಭಾಗಮಂಡಲದಿಂದ 8 ಕಿ.ಮಿ. ದೂರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಗೆ ವಾಹನಗಳಲ್ಲಿ ತೆರಳಬಹುದು. ಕಾಲ್ನಡಿಗೆಯಲ್ಲಿಯೂ ಸಹ ಹೋಗಬಹುದಾಗಿದೆ. ತಲಕಾವೇರಿಗೆ ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಕಾಸರಗೊಡು, ಕೇರಳದಿಂದ ಪ್ರಯಾಣಿಸುವ ವ್ಯವಸ್ಥೆ ಇದೆ. ಹತ್ತಿರದ ರೈಲು ನಿಲ್ದಾಣ ಮಂಗಳೂರು ಮತ್ತು ಮೈಸೂರು. ವಿಮಾನ ನಿಲ್ದಾಣ – ಮಂಗಳೂರು ಮತ್ತು ಬೆಂಗಳೂರು ಆಗಿರುತ್ತದೆ.
👉"ಪವಿತ್ರ ತೀರ್ಥ ಕುಂಡಿಕೆ"👈
ತಲಕಾವೇರಿಯನ್ನು ತಲುಪಲು ಪ್ರಯಾಣ ಮಾಡುವಾಗ ಗಿರಿ ಕಾನನಗಳ ವಿಹಂಗಮ ದೃಶ್ಯ, ಬೆಟ್ಟಗಳ ಸಾಲು ಸಾಲು, ಕಾಫಿ, ಯಾಲಕ್ಕಿ ತೋಟಗಳು, ಮರದ ಮೇಲಿರುವ ಜೇನುಗೂಡುಗಳು ನಮ್ಮನ್ನು ಸ್ವಾಗತಿಸುತ್ತದೆ. ಬೆಟ್ಟದ ಮೇಲೇರಿಕೊಂಡು ಹೋಗುತಿದ್ದಂತೆ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ದೃಷ್ಟಿ ಹಾಯಿಸುವಷ್ಟು ದೂರದಲ್ಲಿ ತಲಕಾವೇರಿ ಗೋಚರಿಸುತದೆ. ನೋಡು ನೋಡುತಿದ್ದಂತೆ ಶುಭ್ರವಾಗಿ ಇದ್ದ ವಾತಾವರಣ ಮಂಜುಮುಸುಕಿ ತಲಕಾವೇರಿ ದೃಶ್ಯ ಕಾಣದಾಗುತ್ತದೆ. ಮತ್ತೊಮ್ಮೆ ಮಂಜುಕರಗಿ ಅಸ್ಪಷ್ಟತೆಯಿಂದ ಸ್ಪಷ್ಟವಾಗುತ್ತಾ ಗೋಚರಿಸುವ ಪ್ರಕೃತಿಯ ಕಣ್ಣು ಮುಚ್ಚಾಲೆಯಾಟ ನೋಟ ಆವಿಸ್ಮರಣೀಯ ಅನುಭವವಾಗಿರುತ್ತದೆ.
ತಲಕಾವೇರಿಯ ಮಹಾದ್ವಾರವನ್ನು ಪ್ರವೇಶಿಸಿ ಮೆಟ್ಟಲುಗಳನ್ನು ಏರಿ ಮುಂದೆ ಹೋಗುತ್ತಿದ್ದಂತೆ ವಿಶಾಲವಾದ ಪುಷ್ಕರಿಣಿ, ಪವಿತ್ರ ತೀರ್ಥ ಕುಂಡಿಕೆಯ ದರ್ಶನವಾಗುತ್ತದೆ. ಕಾವೇರಿಯ ಉಗಮಸ್ಥಾನವೇ ತೀರ್ಥಕುಂಡಿಕೆ. 2/2 ಅಡಿ ಅಗಲದ ಕುಂಡಿಕೆಯಲ್ಲಿ ಜಲದರ್ಶನ. ಮೊದಲ ನೋಟದಲ್ಲೇ, ಮನಸ್ಸು ಪ್ರಫುಲ್ಲತೆಯಾಗಿ, ತಲೆ ಬಾಗಿ ನಮಸ್ಕರಿಸಿದಾಗ ದೇವಿಯ ದರ್ಶನ ಜಲರೂಪದಲ್ಲಿ ಕಂಡು ಧನ್ಯತಾ ಭಾವನೆ ಮೂಡಿಬರುತ್ತದೆ. ತೀರ್ಥ ಸ್ನಾನ ಮಾಡಬೇಕಾದರೆ ಮೊದಲು ನಮ್ಮ ಎತ್ತರದ ಅರ್ಧದಷ್ಟು ಎತ್ತರವಿರುವ ಪುಷ್ಕರಿಣಿಯಲ್ಲಿರುವ ನೀರಿನಲ್ಲಿ ನಡೆದುಕೊಂಡು ಮುಂದೆ ಹೋಗಿ ಮುಳುಗು ಹಾಕಿ ಎದ್ದು ಕುಂಡಿಕೆಯ ಪಕ್ಕದಲ್ಲಿ ನಿಂತರೆ ಪುರೋಹಿತರು ಕುಂಡಿಕೆಯಿಂದ ಪವಿತ್ರ ಕಾವೇರಿ ತೀರ್ಥವನ್ನು ತಂಬಿಗೆಯಿಂದ ತೆಗೆದು ತಲೆಯ ಮೇಲೆ ಸುರಿದು ತೀರ್ಥ ಸ್ನಾನ ಮಾಡಿಸುತ್ತಾರೆ.
ತೀರ್ಥ ಕುಂಡಿಕೆಯ ಪಕ್ಕದಲ್ಲಿ ಜ್ಯೋತಿ ಮಂಟಪ, ಅದರ ಒಳಬದಿಯಲ್ಲಿ ಜ್ಯೋತಿ ನಿರಂತರವಾಗಿ ಉರಿಯುತ್ತಿರುತ್ತದೆ. ಜ್ಯೊತಿ ಆರದಂತೆ ಬಾಗಿಲನ್ನು ಅಳವಡಿಸಲಾಗಿದೆ. ಇಲ್ಲಿ ಯಾವ ರೀತಿಯ ವಿಗ್ರಹಗಳೂ ಇಲ್ಲ. ಪುರೋಹಿತರು ಜಲಕ್ಕೆ ಪೂಜೆ ಸಲ್ಲಿಸುತ್ತಾರೆ; ಭಕ್ತಾದಿಗಳು ಕುಂಕುಮಾರ್ಚನೆ, ಮಂಗಳಾರತಿ ಮಾಡಿಸುವುದರ ಮೂಲಕ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಾರೆ.
👉"ಬ್ರಹ್ಮಗಿರಿ ಬೆಟ್ಟ"👈
ಪವಿತ್ರ ಕುಂಡಿಕೆಯ ಪಕ್ಕದಲ್ಲಿ ಮೆಟ್ಟಲುಗಳನ್ನು ಏರಿ ಮೇಲೆ ಹೋದರೆ ಗಣಪತಿ, ಅಗಸ್ತೇಶ್ವರ ದೇವಸ್ಥಾನ. ಅದರ ಪಕ್ಕದಲ್ಲಿಯೇ “ಬ್ರಹ್ಮಗಿರಿ” ಬೆಟ್ಟ ಏರಿ ಹೋಗಲು ಮೆಟ್ಟಲುಗಳಿವೆ. 300 ಅಡಿ ಎತ್ತರದ ಬೆಟ್ಟ ಹತ್ತಿ ಮೇಲೆ ತಲುಪಿದರೆ, ತುದಿಯಲ್ಲಿ ಸುತ್ತಲೂ ಗಿರಿ ಕಾನನಗಳು ಬೆಟ್ಟಗಳ ಸಾಲು ಸಾಲು ಬೆಳ್ಳಿ ಮೋಡಗಳನ್ನು ಮುತ್ತಿಕ್ಕುವಂತೆ ಕಾಣುತ್ತದೆ. ವಾತಾವರಣ ಶುಭ್ರವಾಗಿದ್ದರೆ ನೂರಾರು ಕಿ. ಮಿ. ದೂರದಲ್ಲಿರುವ ಕೇರಳದ ಅರಬ್ಬಿ ಸಮುದ್ರವನ್ನು ಕಾಣಬಹುದು. ಬ್ರಹ್ಮಗಿರಿ ಬೆಟ್ಟದ ಮೇಲೆ ಪುರಾಣದಲ್ಲಿ ಉಲ್ಲೇಖವಿದ್ದಂತೆ, ಸಪ್ತ ಮಹರ್ಷಿಗಳು ಬ್ರಹ್ಮಗಿರಿ ಬೆಟ್ಟದ ತುದಿಯಲ್ಲಿ ಏಳು ಯಜ್ಞ ಕುಂಡಗಳನ್ನು ನಿರ್ಮಿಸಿ ಪಕ್ಕದಲ್ಲಿ ಸಣ್ಣ ಸಣ್ಣ ನೀರಿನ ಹೊಂಡಗಳನ್ನೂ ನಿರ್ಮಿಸಿಕೊಂಡು ಯಜ್ಞಗಳನ್ನು ಮಾಡುತಿದ್ದರು. ಆ ಸಣ್ಣ ನೀರಿನ ಹೊಂಡಗಳು ಇಂದಿಗೂ ಅಲ್ಲಿ ಇದೆ. ವರ್ಷ ಪೂರ್ತಿ ಅದರಲ್ಲಿ ನೀರು ಇರುತ್ತದೆ. ಬ್ರಹ್ಮಗಿರಿ ಬೆಟ್ಟದ ಮೇಲಿನಿಂದ ಕೆಳಗೆ ಕಾಣುವ ಕಾವೇರಿಯ ಉಗಮ ಸ್ಥಾನ ಕಾವೇರಿ ನದಿಯಾಗಿ ಹರಿದು ಹೋಗುವಾಗ ತನ್ನ ದಿಕ್ಕನ್ನು ಕೇವಲ ಎರಡು ಅಡಿಯಷ್ಟು ಬದಲಿಸಿದ್ದರೆ ಕಾವೇರಿ ನದಿ ಪೂರ್ತಿಯಾಗಿ ಕೇರಳ ಭಾಗಕ್ಕೆ ಹೋಗುತಿತ್ತು. ಒಂದು ಸಮಯ ಆ ರೀತಿಯಾಗಿದಿದ್ದರೆ ಮೈಸೂರು, ಬೆಂಗಳೂರು, ತಮಿಳುನಾಡನ್ನು ಊಹಿಸಲು ಅಸಾಧ್ಯವಾಗುತಿತ್ತು.
👉"ತುಲಾ ಸಂಕ್ರಮಣ ತೀರ್ಥೋದ್ಭವ"👈
ತಲಕಾವೇರಿಗೆ ವರ್ಷ ಪೂರ್ತಿ ಬೇರೆ ಬೇರೆ ಕಡೆಗಳಿಂದ ಯಾತ್ರಿಕರು ಬಂದು ಹೋಗುತ್ತಾರೆ. ಪ್ರತಿವರ್ಷ ಅಕ್ಟೋಬರ್ 17 ನೇ ತಾರೀಕು ನಿಶ್ಚಿತ ಗಳಿಗೆ (ಒಮ್ಮೊಮ್ಮೆ 18 ನೇ ತಾರೀಕಿಗೆ ಸಹ ಬರುತ್ತದೆ.) ಯಲ್ಲಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಕಾವೇರಿ ತೀರ್ಥ ಉಕ್ಕಿ ಮೇಲೆ ಬರುತ್ತದೆ. ಈ ಕ್ಷಣಕ್ಕಾಗಿ ದೂರ ದೂರದ ಊರುಗಳಿಂದ ಭಕ್ತಿ ಭಾವದಿಂದ ಲಕ್ಷಾಂತರ ಜನರು ಬಂದು ಕಾದು ಕುಳಿತ್ತಿರುತ್ತಾರೆ. ಪುರೋಹಿತರಿಂದ ಮಂತ್ರ ಘೋಷಣೆ, ಕುಂಕುಮಾರ್ಚನೆ ನಡೆಯುತ್ತಿರುತ್ತದೆ. ಕೆಲವು ಕ್ಷಣಗಳು ಮಾತ್ರ ತೀರ್ಥ ಮೇಲೆ ಬರುವುದು. ಆ ಕ್ಷಣವೇ ಜಯ ಘೋಷದೊಂದಿಗೆ ತಂಬಿಗೆಯಲ್ಲಿ ಕಾವೇರಿ ತೀರ್ಥವನ್ನು ಕುಂಡಿಕೆಯಿಂದ ತೆಗೆದು ತೆಗೆದು ಜನಸ್ಥೋಮದ ಮೇಲೆ ಪ್ರೋಕ್ಷಿಸುತ್ತಾರೆ. ನೆರೆದಿದ್ದ ಜನರು ಗುಂಪು ಸರತಿಯಲ್ಲಿ ಪುಷ್ಕರಿಣಿಗೆ ಇಳಿದು ಮುಳುಗಿ ಎದ್ದು ಕುಂಡಿಕೆಯ ಸಮೀಪಕ್ಕೆ ಬಂದು ಸೇರುತ್ತಾರೆ. ಪುರೋಹಿತರುಗಳು ಕುಂಡಿಕೆಯಿಂದ ಪವಿತ್ರ ತೀರ್ಥವನ್ನು ತಂಬಿಗೆಯಿಂದ ಒಬ್ಬೊಬ್ಬರ ತಲೆಯ ಮೇಲೆ ಸುರಿಯುತ್ತಾರೆ. ನಂತರ ಜನರು ತಂದಿರುವ ಬಾಟಲಿ, ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ತೀರ್ಥವನ್ನು ತುಂಬಿಸಿಕೊಂಡು ತೆರಳುತ್ತಾರೆ.
ತಲಕಾವೇರಿ ಜಾತ್ರೆ ಅಕ್ಟೋಬರ್ ನಿಂದ ನವೆಂಬರ್  ಕಿರುಸಂಕ್ರಮಣದ ವರೆಗೆ ನಡೆಯುತ್ತದೆ. ಲಕ್ಷಾಂತರ ಜನರು ಬಂದು ತೀರ್ಥ ಸ್ನಾನ ಮಾಡಿಕೊಂಡು ಹೋಗುತ್ತಾರೆ. ಪೋಲಿಸ್, ಹೊಂಗಾರ್ಡ್ಸ್ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಬೇರೆ ಬೆರೆ ಕಡೆಗಳಿಂದ ಜಾತ್ರಾ ವಿಶೇಷ ಬಸ್ಸುಗಳು ಬಂದು ಭಾಗಮಂಡಲದಲ್ಲಿ ಸೇರುತ್ತದೆ. ಜಾತ್ರೆಯ ಸಂದರ್ಭದಲ್ಲಿ ತಲಕಾವೇರಿಯಿಂದ ಭಾಗಮಂಡಲಗಳ ಮಧ್ಯೆ ಗಂಟೆಗೊಮ್ಮೆ ಏಕಮುಖ ಸಂಚಾರ ವ್ಯವಸ್ಥೆಯಲ್ಲಿ ವಾಹನಗಳ ಓಡಾಟ ನಿಯಂತ್ರಣದಲ್ಲಿರುತ್ತದೆ.
👉"ಭಗಂಡೇಶ್ವರ ಕ್ಷೇತ್ರ – ಭಾಗಮಂಡಲ"👈
ಬ್ರಹ್ಮಗಿರಿಯ ತಲಕಾವೇರಿಯಿಂದ ಕಾವೇರಿ ಹುಟ್ಟಿ ಗುಪ್ತಗಾಮಿನಿಯಾಗಿ ಹರಿದು ಬಂದು ಸುಜ್ಯೋತಿ, ಕನ್ನಿಕೆ ನದಿಗಳೊಡನೆ ಸೇರುವ ಸ್ಥಳವೇ ತ್ರಿವೇಣಿ ಸಂಗಮವಾಗಿದೆ. ಭಗಂಡ ಮುನಿಯು ನಿರ್ಮಿಸಿದ ಭಗಂಡೇಶ್ವರ ದೇವಾಲಯದ ಸಮೀಪದಲ್ಲೇ ತ್ರಿವೇಣಿ ಸಂಗಮ ಇರುವ ಪವಿತ್ರವಾದ ಸ್ಥಳವೇ ಭಾಗಮಂಡಲ.
ತಲಕಾವೇರಿಗೆ ಬರುವ ಯಾತಿಕರು ಮೊದಲು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮುಗಿಸಿ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ಹೋಗುತ್ತಾರೆ.
ಕೊಡಗಿನಲ್ಲಿ ನೆಲೆಸಿರುವವರು ತಲಕಾವೇರಿ ಜಾತ್ರೆಗೆ ಪ್ರತಿವರ್ಷ ತಪ್ಪದೆ ಬಂದು ತೀರ್ಥ ಸ್ನಾನ ಮಾಡಿ ಹೋಗುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬರುತ್ತಿದೆ. ಮೊದಲಿಗೆ ತ್ರಿವೇಣಿ ಸಂಗಮದಲ್ಲಿ ಪುರೋಹಿತರಿಂದ ಪಿಂಡ ಪ್ರದಾನ ಪ್ರಕ್ರಿಯೆ ಮಾಡಿಸಿಕೊಳ್ಳುತ್ತಾರೆ. ಕೊಡವ ಜನಾಂಗದಲ್ಲಿ ಮದುವೆ ಯಾದ ಮೊದಲ ವರ್ಷದ ಒಳಗೆ ನವ ದಂಪತಿಗಳು ತಲಕಾವೇರಿಗೆ ಬಂದು ತೀರ್ಥ ಸ್ನಾನ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ.
👉"ಕೊಡಗಿನ ಕೊಡವರು ಆಚರಿಸುವ ಕಾವೇರಿ ಸಂಕ್ರಮಣ"👈
ಕೊಡಗಿನ ಕೊಡವರು ತಮ್ಮ ಕುಲದೇವತೆಯಾಗಿ ಕಾವೇರಿ ಮಾತೆಯನ್ನು, ಕುಲ ದೈವವಾಗಿ ಇಗ್ಗುತಪ್ಪ (ಸುಬ್ರಮಣ್ಯ) ನನ್ನು ಆರಾಧಿಸುತ್ತಾರೆ.
ಅಕ್ಟೋಬರ್ ತಿಂಗಳಿನಲ್ಲಿ ಹೊಲ ಗದ್ದೆಗಳು ಬತ್ತದ ಪೈರು ಬೆಳೆದು ತೆನೆಯಾಗಲು ಹೂವು ಬಿಡುವ ಸಮಯ, ಆ ಸಮಯದಲ್ಲಿ ಕ್ರಿಮಿ ಕೀಟಗಳು ಹೂವುಗಳನ್ನು ನಾಶಮಾಡುತ್ತವೆ. ರೈತನ ಗೆಳೆಯ ಪಕ್ಷಿಗಳು ಬಂದು ಪೈರಿನ ಮೇಲೆ ಎರಗುವ ಕೀಟಗಳನ್ನು ತಿಂದುಹಾಕಿ ಬೆಳೆಯನ್ನು ರಕ್ಷಿಸುತ್ತದೆ. ಆದುದರಿಂದ ಪಕ್ಷಿಗಳಿಗೆ ಗದ್ದೆಗಳ ಮದ್ಯದಲ್ಲಿ ಕುಳಿತುಕೊಳ್ಳಲು ಒಂದು ಉದ್ದನೆಯ ತೆಳುವಾದ ಕಂಬದ ಮೇಲೆ ಪೀಠವನ್ನು (ಕೊಡವ ಭಾಷೆಯಲ್ಲಿ ಬೆತ್) ರಚಿಸಿ ನಿಲ್ಲಿಸುತ್ತಾರೆ. ಇದನ್ನು ಕಾವೇರಿ ಸಂಕ್ರಮಣದ ದಿನ ಪೂಜೆ ಮಾಡಿ ಇಡಲಾಗುತ್ತದೆ.
ಕಾವೇರಿ ಸಂಕ್ರಮಣದ ದಿನದಂದು ಮನೆಯ ಒಳಗೆ ದೇವರ ಕೋಣೆಯಲ್ಲಿ ಮನೆ ಮಂದಿಯೆಲ್ಲಾ ಒಟ್ಟು ಸೇರಿ ಹಿರಿಯ ಮುತ್ತೈದೆಯ ಮುಂದಾಳತ್ವದಲ್ಲಿ, ಸೌತೆಕಾಯಿ (ಬೆಳ್ಳೆರಿ ಕಾಯಿ) ಅಥವಾ ತೆಂಗಿನಕಾಯಿಗೆ ಕೆಂಪು ರೇಶ್ಮೆ ವಸ್ತ್ರ ಸುತ್ತಿ, ಹೂವು, ಅಭರಣ, ಪತ್ತಾಕ (ಕೊಡವರ ಮಾಂಗಲ್ಯ) ದಿಂದ ಅಲಂಕರಿಸಿ ಮೂರು ವಿಳ್ಯದೆಲೆ ಅಡಿಕೆ, ಹಣ್ಣು ಹಂಪಲು ಇಟ್ಟು, ಅಕ್ಕಿಯಿಂದ ಮಾಡಿದ ದೋಸೆ, ಕುಂಬಳಕಾಯಿಯಿಂದ ಮಾಡಿದ ಸಾರು/ಗೊಜ್ಜು, ಪಾಯಸವನ್ನು ನೈವೇದ್ಯ ಮಾಡಿ ಹಬ್ಬವನ್ನು ಆಚರಿಸುತ್ತಾರೆ.
ಕೊಡಗಿನವರು ತಲಕಾವೇರಿ ಜಾತ್ರೆಗೆ ಬಂದು ತೆಗೆದುಕೊಂಡು ಹೋಗುವ ತೀರ್ಥವನ್ನು, ಮನೆಯಲ್ಲಿ ಒಂದು ತೆಂಗಿನಕಾಯಿಯೊಂದಿಗೆ ಇಟ್ಟಿರುತ್ತಾರೆ. ಮನೆಯಲ್ಲಿ ಮರಣ ಸಂಭವಿಸಿದರೆ, ಮೃತರ ಕೊನೆಯಗಳಿಗೆಯಲ್ಲಿ ಕಾವೇರಿ ತೀರ್ಥವನ್ನು ಬಾಯಿಗೆ ಸುರಿದು, ತೆಂಗಿನ ಕಾಯಿ ಒಡೆದು ಅದರ ನೀರನ್ನು ಕೊಡುವ ಪದ್ದತಿ ಇಂದಿಗೂ ನಡೆದುಕೊಂಡು ಬರುತ್ತಿದೆ.
👉"ತಲಕಾವೇರಿಯ ಯಾತ್ರಿಕರು"👈
ತಲಕಾವೇರಿಗೆ ಬರುವ ಯಾತ್ರಿಕರಲ್ಲಿ ಹೆಚ್ಚಿನವರು ತಮಿಳು ನಾಡಿನವರು. ಕಾವೇರಿಯ ಜಲವನ್ನು ಉಪಯೋಗಿಸುವವರು, ಹಾಗೂ ಪ್ರತಿವರ್ಷ ತುಲಾ ಸಂಕ್ರಮಣ ಜಾತ್ರೆಗೆ ಬಂದು ತೀರ್ಥ ಸ್ನಾನ ಮಾಡಿ, ಹೆಚ್ಚಿನ ಮೊತ್ತದ ಹಣವನ್ನು ಭಂಡಾರಕ್ಕೆ ಕಾಣಿಕೆ ಸಲ್ಲಿಸುತ್ತಾರೆ. ಜಾತ್ರೆಗೆ ಬರುವ ಯಾತ್ರಿಕರೆಲ್ಲರಿಗೂ ಅನ್ನ ಸಂತರ್ಪಣೆ ಮಾಡುವ ಇವರು ಕಾವೇರಿ ಮಾತೆಯ ಪರಮ ಭಕ್ತರು. ವರ್ಷ ಪೂರ್ತಿ ಕಾವೇರಿಯ ನೀರನ್ನು ನಾಲೆಗಳ ಮೂಲಕ ಬಳಸಿಕೊಂಡು ವ್ಯವಸಾಯ ಮಾಡುವ ಮೈಸೂರು, ಮಂಡ್ಯ, ಬೆಂಗಳೂರಿನವರು ಕೇವಲ ಬೆರಳೆಣಿಕೆಯಷ್ಟು ಮಾತ್ರ ಬಂದು ಹೋಗುತ್ತಾರೆ. ಹೆಚ್ಚಾಗಿ ಬರುವವರು ದಕ್ಷಿಣ ಕನ್ನಡ, ಹಾಸನ, ಕೇರಳದವರಾಗಿದ್ದಾರೆ.
👉"ತಲಕಾವೇರಿ ಪ್ರವಾಸಕ್ಕೆ ಸೂಕ್ತ ಸಮಯ"👈
ತಲಕಾವೇರಿಗೆ ಯಾತ್ರಿಕರು ಬರಲು ಅಕ್ಟೋಬರ್ ನಿಂದ ಮೇ ತಿಂಗಳಿನವರೆಗೆ ಒಳ್ಳೆಯ ಸಮಯ; ಆಹ್ಲಾದಕರ ವಾತಾವರಣ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅತ್ಯಧಿಕ ಜಡಿ ಮಳೆ ಸುರಿಯುತ್ತಿರುತ್ತದೆ. ಕೆಲವು ಸಲ ಭಾಗಮಂಡಲ ಜಲಪ್ರವಾಹದಿಂದ ದ್ವೀಪದಂತಾಗಿರುತ್ತದೆ. ರಸ್ತೆ ಕಡಿತವಾಗಿರುತ್ತದೆ.
ತಲಕಾವೇರಿಯಲ್ಲಿ ಯಾತ್ರಿಕರಿಗೆ ಉಳಿದುಕೊಳ್ಳುವ ಲಾಡ್ಜ್, ಹೋಟೆಲ್ ಗಳು ಇಲ್ಲ, ಮಡಿಕೇರಿಯಲ್ಲಿ ಉತ್ತಮ ದರ್ಜೆಯ ಹೋಟೆಲ್ ಗಳಿವೆ. ಕೊಡಗಿನ ಹಲವಾರು ಕಡೆಗಳಲ್ಲಿ ನೂತನವಾಗಿ ವಿಶ್ರಾಂತಿ ಗೃಹಗಳಿವೆ (ಹೊಂ ಸ್ಟೇ) ಅಲ್ಲಿ ಕೊಡಗಿನ ವಿಶೇಷ ತಿಂಡಿ ತಿನಿಸು ಲಭ್ಯವಿದೆ. ನಗರ ಜೀವನದಿಂದ ದೂರವಾಗಿ ಒಂದೆರಡು ದಿನ ಹಾಯಾಗಿ ವಿಶ್ರಾಂತಿ ಪಡೆಯುವ ಅವಕಾಶಗಳಿವೆ.
👉"ಜೀವನದಿ ಕಾವೇರಿ"👈
ಜೀವ ನದಿ ಕಾವೇರಿ ಉಗಮ ಸ್ಥಾನದಿಂದ ಬಂಗಾಳಕೊಲ್ಲಿಯವರೆಗೆ…
ಕಾವೇರಿ ನದಿ ತನ್ನ ಉಗಮ ಸ್ಥಾನದಿಂದ 765 ಕಿ. ಮಿ. ಹರಿದು ಬಂಗಾಳಕೊಲ್ಲಿಯ ಬಳಿ ಇರುವ ಕಾವೇರಿಪಟ್ಟಣದಲ್ಲಿ ಸಮುದ್ರವನ್ನು ಸೇರುತ್ತದೆ..
ಕೊಡಗಿನಲ್ಲಿ ಕಾವೇರಿ ನದಿ ಹರಿಯುವಾಗ ಗಂಧದ ಮರಗಳಿರುವ ವನಶ್ರೇಣಿ, ಕಾಫಿ, ಯಾಲಕ್ಕಿ, ಕಿತ್ತಳೆ ತೋಟಗಳು, ಭತ್ತದ ಗದ್ದೆಗಳಿಗೆ ತನ್ನ ಒಡಲಿನ ಜಲವನ್ನು ನೀಡಿ ಮುಂದೆ ಸಾಗುವಾಗ ಕುಶಾಲನಗರದ ಕಾವೇರಿ ನಿಸರ್ಗಧಾಮ, ಮೈಸೂರಿನ ಬಳಿ ಕೃಷ್ಣ ರಾಜ ಸಾಗರ, ಬೃಂದಾವನ, ಸಂಗೀತ ಕಾರಂಜಿಗಳಲ್ಲಿ ನಲಿದಾಡಿ, ಶ್ರೀರಂಗಪಟ್ಟಣದ ಪಕ್ಷಿದಾಮದ ಪಕ್ಷಿಗಳ ದಾಹ ತೀರಿಸಿ, 1902 ರಲ್ಲಿ ಆರಂಭವಾದ ಏಶ್ಯಾದ ಪ್ರಥಮ ಜಲವಿದ್ಯುತ್ ಉತ್ಪಾದನೆಗೆ (ಬೆಂಗಳೂರಿಗೆ ವಿದ್ಯುತ್ ಒದಗಿಸಿದ ಪ್ರಥಮ ವಿದ್ಯುತ್ ಕೇಂದ್ರ) ಜಲವನ್ನು ನೀಡಿ ಶಿವನ ಸಮುದ್ರದಲ್ಲಿ 320 ಅಡಿ ನೊರೆ ಹಾಲಿನಂತೆ ಧುಮ್ಮಿಕ್ಕಿ ಹರಿದು ಗಗನ ಚುಕ್ಕಿ ಭರ ಚುಕ್ಕಿ ಯಾಗಿ ಮತ್ತೊಮ್ಮೆ ಶಿಂಷಾದಲ್ಲಿ ಧುಮ್ಮಿಕ್ಕಿ, ಹೊಗೇನಕಲ್ಲ್ ನ ಬಳಿ ತಮಿಳುನಾಡನ್ನು ಪ್ರವೇಶಿಸಿ ತಂಜಾವೂರು, ತಿರುಚಿರಾಪಳ್ಳಿ, ಶ್ರೀರಂಗಂ ಬಳಿಯಲ್ಲಿ ಕಾವೇರಿಪಟ್ಟಣದ ಮೂಲಕ ಸಮುದ್ರಕ್ಕೆ ಸೇರ್ಪಡೆಯಾಗುತ್ತದೆ.
ಕಾವೇರಿಯ ಜೊತೆ ಸೇರಿ ಹರಿಯುವ ಉಪ ನದಿಗಳು
ಕಾವೇರಿ ನದಿಯೊಂದಿಗೆ ಸೇರಿ ಕೊಂಡು ಹರಿಯುವ ಉಪ ನದಿಗಳು ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ, ಲೋಕಪಾವನಿ, ಭವಾನಿ, ನೊಯಲ್ ನದಿಗಳನ್ನು ತನ್ನೊಡನೆ ಸೇರಿಸಿಕೊಂಡು ಶೇಕಡಾ 95 ರಷ್ಟು ನೀರನ್ನು ವ್ಯವಸಾಯಕ್ಕೆ ನೀಡಿ ದಕ್ಷಿಣ ಭಾರತದ ಜೀವ ನದಿಯಾಗಿ ಕಾವೇರಿ ಜನಕೋಟಿಯ ಆರಾಧ್ಯ ಮಾತೆಯಾಗಿ, ಜಲರೂಪಿಣಿಯಾಗಿ ಪೂಜ್ಯನೀಯಳಾಗಿದ್ದಾಳೆ.
***
ನವರಾತ್ರಿ ದರ್ಶನ 
 ಮುಂಡ್ಕೂರು ದುರ್ಗಾ ಪರಮೇಶ್ವರಿ ದೇವಸ್ಥಾನ 
ಮಂಗಳೂರಿಗೆ ಸಮೀಪದಲ್ಲಿರುವ ಮುಂಡ್ಕೂರು ಶಾಂಭವಿ ನದಿಯ ದಡದಲ್ಲಿ ಒಂದು ಸುಂದರವಾದ ದೇವಸ್ಥಾನವಿರುವ ಸ್ಥಳ .ಇದು ಕಾರ್ಕಳ ತಾಲೂಕಿನ ,ಉಡುಪಿ ಜಿಲ್ಲೆಯಲ್ಲಿದೆ  
ಮುಂಡ್ಕೂರು ದೇವಸ್ಥಾನವು ಶ್ರೀ ದುರ್ಗಾಪರಮೇಶ್ವರಿಯ ದೇವಸ್ಥಾನವಾಗಿದ್ದು ಇದಕ್ಕೆ 1300  ವರ್ಷಗಳಷ್ಟು ಇತಿಹಾಸವಿದೆ .
ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿಯು ಮಹಿಷಮರ್ಧಿನಿಯ ರೂಪದಲ್ಲಿದ್ದು ತ್ರಿಶೂಲಧಾರಿಯಾಗಿ ಮಹಿಷನನ್ನು ಮರ್ಧಿಸುವ ರೂಪದಲ್ಲಿದೆ. 
ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರಿ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು ಎಂದು ಪ್ರಸಿದ್ಧಿ ಪಡೆದಿದೆ. 
ಸ್ಥಳ ಪುರಾಣ ಅರಿತ ಭಾರ್ಗವ ಋಷಿಗಳು ಸುರಥ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ಧಿನಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. 
ಇದು ಭಾರ್ಗವ ಗೋತ್ರದವರಿಗೆ ಕುಲದೇವರು 
ಮುಂಡಕೂರು  ಮಂಗಳೂರಿನಿಂದ  31  K M ದೂರದಲ್ಲಿದ್ದು  ಬಸ್ ವ್ಯವಸ್ಥೆ ಚೆನ್ನಾಗಿದೆ. . ಮುಂಡಕೂರಿಗೆ ಉಡುಪಿಯಿಂದಲೂ  ಹೋಗಬಹುದು 36  K M  ಬಹಳಷ್ಟು ಸೌಕರ್ಯದ ವ್ಯವಸ್ಥೆ ಇದೆ.
 ಪ್ರೀತೋಸ್ತು ಕೃಷ್ಣ ಪ್ರಭುಃ 
 ಫಣೀಂದ್ರ ಕೆ
***
ನವರಾತ್ರಿ ದರ್ಶನ 9 
 ಕುಂಜಾರಗಿರಿ ಶ್ರೀ ದುರ್ಗಾ ಪರಮೇಶ್ವರಿ 
ಬಹುಶಃ ಈ ದೇವಿಯ ಮಹಿಮೆ ಕೇಳದ ಯಾವ ವೈಷ್ಣವರು ಇಲ್ಲವೇನೋ ಎಂದು ಹೇಳಬಹುದು. ವಿಶ್ವಗುರು ಆಚಾರ್ಯ ಮಧ್ವರ ಅವಾತಾರ ಭೂಮಿ ಪಾಜಕ ಕ್ಷೇತ್ರ ದಿಂದ ತುಂಬಾ ಹತ್ತಿರದಲ್ಲಿ ಕಾಣ ಸಿಗುತ್ತದೆ. ಸುಮಾರು 250 ಮೆಟ್ಟಿಲುಗಳನ್ನು ಹತ್ತಿದರೇ ದೇವಿಯ ಭವ್ಯವಾದ ಆಲಯ. ಸಾಕ್ಷಾತ್ ಪರಶುರಾಮ ದೇವರೇ ಪ್ರಸೃಷ್ಠಿಸಿದ ಹಾಗೆ ಕೃಷ್ಣನ ತಂಗಿಯಾದ ದುರ್ಗಾ ದೇವಿಯ ಇಲ್ಲಿ ನೆಲೆಸಿರುವುದು ಎಂದು ಪ್ರತೀತಿ. ದುರ್ಗೆಯ 3 ವಿಶೇಷ ಸನ್ನಿದ್ದಾನಗಳಲ್ಲಿ ಮೊದಲನೆಯದು ವಿಂದ್ಯಾಚಲ ಕಾಶಿಯ ಸಮೀಪ
ಎರಡನೆಯದು ತ್ರಿಕೂಟ ಪರ್ವತ ಅಥವ ವೈಷ್ಣೋದೇವಿ
ಮೂರನೆಯದು ಶ್ರೀ ಕ್ಷೇತ್ರ ಕುಂಜಾರುಗಿರಿ. ಮುಂದೆ ಕೇರಳದ ಪಯಸ್ವಿನಿ ನದಿ ತೀರದಲಿ ದುರ್ಗೆಯ ಅವತಾರವಾಗುತ್ತದೆ ಎಂದು ಸಪ್ತಶತಿಯಲ್ಲಿ ತಿಳಿಯಬಹುದಾಗಿದೆ. ಸಮಧ್ವ ವಿಜಯದಲ್ಲಿ ತಿಳಿಸಿದ ಹಾಗೆ ಒಂದು ಕಡೆ ಪರಶುರಾಮ ಬೆಟ್ಟದಲ್ಲೀ ತಂದೆಯಾದ ಪರಶುರಾಮ ದೇವರು. ಮತ್ತೊಂದು ಬೆಟ್ಟದಲ್ಲಿ ತಾಯಿಯಾದ ದುರ್ಗೆ, ಜೊತೆಗೇ ವಾಯುದೇವರ ಅವತಾರರಾದ ಶ್ರೀ ಆನಂದ ತೀರ್ಥ ಭಗವದ್ಪಾದರು. ಈಕೆಯನ್ನು ಗಿರಿದುರ್ಗ ಎಂದು ಕರೆಯುತ್ತಾರೆ. ಉಡುಪಿಯಿಂದ ಸುಮಾರು 16 ಕೀ ಮೀ ಪ್ರಕೃತಿಯ ಮಧ್ಯದಲ್ಲಿ ಕಾನನದ ನಡುವೆ ನೆಲೆಸಿಹ ಗಿರಿದುರ್ಗಾ ಸನ್ನಿಧಾನ. ಉಡುಪಿಗೆ ಹೋದಾಗ ಒಮ್ಮೆ ಭೇಟಿನೀಡಿ.
ನವರಾತ್ರಿ ಸಂದರ್ಭದಲ್ಲಿ ಪುರಾಣ ಪ್ರಸಿದ್ದವಾದ ಹಾಗೆ ಪರಶುರಾಮ ಸೃಷ್ಟಿಯ ತುಳುನಾಡಿನ ಅತ್ಯಂತ ಜಾಗೃತ ಮತ್ತು ಲಿಂಗರೂಪದಲ್ಲಿ ಹಾಗೆ ಋಷಿಮುನಿಗಳು ಪ್ರತಿಷ್ಠೆ ಮಾಡಿದ ದುರ್ಗೆಯರ ದರ್ಶನ ಮಾಡಿದ್ದೇವೆ. ದುರ್ಗಾಂತರ್ಗತ ನರಸಿಂಹ ದೇವರಿಗೆ ಅರ್ಪಿಸುತ್ತಾ🙏
 ಶ್ರೀ ಕೃಷ್ಣಾರ್ಪಣಮಸ್ತು 
ನಿಮ್ಮ ಅನಿಸಿಕೆ ತಿಳಿಸಿ ಮತ್ತಷ್ಟು ವಿಷಯಗಳನ್ನು ತಿಳಿಸುವಲ್ಲಿ ಉಪಯೋಗವಾಗುತ್ತದೆ. 
 ಪ್ರೀತೋಸ್ತು ಕೃಷ್ಣ ಪ್ರಭುಃ 
 ಫಣೀಂದ್ರ ಕೆ
***
ನವರಾತ್ರಿ ದರ್ಶನ
 ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 
ಶಿವಳ್ಳಿ ಬ್ರಾಹ್ಮಣರ ಕುಲದೇವತೆ ಯಾದ ಶ್ರೀ ದುರ್ಗಾ ಪರಮೇಶ್ವರಿ ಹಿಂದೆ ಶಾಂಭವಿ ನದಿ ದಡದಲ್ಲಿ ದರಿಗಾಸುರ ಎಂಬ ಅಸುರನನ್ನು ಸಂಹಾರ ಮಾಡಿ ಲಿಂಗ ರೂಪದಲ್ಲಿ ದರ್ಶನ ಕೊಟ್ಟಿದ್ದಳು. ತುಳುನಾಡಿನ ಸಪ್ತದುರ್ಗೆಯರಲ್ಲಿ ಒಬ್ಬಳಾದ ಶ್ರೀ ದುರ್ಗೆ ಒಬ್ಬ ಮುಸಲ್ಮಾನ ವ್ಯಾಪಾರಿಗೆ ಮತ್ತೇ ದರ್ಶನ ಕೊಟ್ಟು ಆ ಸಮುದಾಯದಿಂದ ತನ್ನ ದೇವಾಲಯ ಕಟ್ಟಿಸಿ ಕೊಂಡಳು ಎಂಬಾ ಪ್ರತೀತಿ ಇದೆ.  ಆದರಿಂದ ಆ ಭಕ್ತನ ಹೆಸರನ್ನು ಶ್ರೀ ಕ್ಷೇತ್ರಕ್ಕೆ ಬಪ್ಪನಾಡು ಎಂಬ ಹೆಸರು ಬಂದಿದೆ. ದೇವಿಗೆ ತ್ರಿಕಾಲ ಪೂಜೆ ವಿಶೇಷವಾಗಿ ವೈಷ್ಣವ ಸಂಪ್ರದಾಯದಲ್ಲಿ ನಡೆಯುತ್ತವೆ. ಈ ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಅತ್ಯಂತ ಪ್ರಸಿದ್ಧವಾದದ್ದು ಜಾತಿ ಭೇದ ವಿಲ್ಲದೆ ಎಲ್ಲಾ ವರ್ಗದವರೂ ಸೇರಿ 7 ದಿನಗಳು ಆಚರಿಸುತ್ತಾರೆ. ಆ ಕಾಲದಲ್ಲಿ ಊರಿನಲ್ಲಿ ದೇವಿಯ ಶುಭ ಉತ್ಸವಗಳ ಹೊರತು ಬೇರೆ ಯಾವ ಶುಭಕಾರ್ಯಗಳು ನಡೆಯುವ ಹಾಗಿಲ್ಲ. ಈ ಕ್ಷೇತ್ರದಲ್ಲಿನ ಡೋಲು ಅತ್ಯಂತ ಪ್ರಸಿದ್ದ ಒಂದು ಸರಿ ಬಾರಿಸಿದರೆ ಸುಮಾರು 10 ಕೀ ಮೀ ವರೆಗೂ ಶಬ್ದ ಕೇಳಿಸುತ್ತದೆ. ದೇವಿಗೆ ಇಲ್ಲಿ ಮಂಗಳೂರಿನ ಮಲ್ಲಿಗೆ ಹೂವು ತಂದು ಕೊಟ್ಟು ಪ್ರಶ್ನೆ ಕೇಳುತ್ತಾರೆ, ದೇವಿ ಹೂವಿನ ಪ್ರಸಾದ ರೀತಿಯಲ್ಲಿ ಅನುಗ್ರಹ ಮಾಡುತ್ತಾಳೆ. ವಿವಾಹಕ್ಕಾಗಿ ಈ ಕ್ಷೇತ್ರದಲ್ಲಿ ನಡೆಯುವ ಸಾಯಂಕಾಲ ಪೂಜೆಗೆ ಬಹಳಷ್ಟು ದಿನಗಳ ಹಿಂದೆಯೇ ಸೇವೆಯನ್ನು ಕಾಯ್ದಿರಿಸಬೇಕು. 
ಮಂಗಳೂರು ಉಡುಪಿ ಹೆದ್ದಾರಿಯ ಮುಲ್ಕಿ ಸಮೀಪ ಈ. ದೇವಾಲಯ ಇದೆ. ಒಮ್ಮೆ ಭೇಟಿಕೊಟ್ಟು ದೇವಿಯ ಆಶೀರ್ವಾದ ಪಡೆಯಿರಿ..
 ಪ್ರೀತೋಸ್ತು ಕೃಷ್ಣ ಪ್ರಭುಃ 
 ಫಣೀಂದ್ರ ಕೆ
***


No comments:

Post a Comment