Comparison between two "Generations"
A youngster asked his father: "How did you people live before with-
No access to technology
No aeroplanes
No internet
No computers
No dramas
No TVs
No air cons
No cars
No mobile phones?"
His Dad replied:
"Just like how your generation lives today with -
No prayers
No compassion
No honor
No respect
No character
No shame
No modesty
No time planning
No sports
No reading"
"We, the people that were born between 1940-1985 are the blessed ones. Our life is a living proof:
👉 While playing and riding bicycles, we never wore helmets.
👉 After school, we played until dusk. We never watched TV.
👉 We played with real friends, not internet friends.
👉 If we ever felt thirsty, we drank tap water not bottled water.
👉 We never got ill although we used to share the same glass of juice with four friends.
👉 We never gained weight although we used to eat a lot of rice everyday.
👉 Nothing happened to our feet despite roaming bare-feet.
👉 our mother and father never used any supplements to keep us healthy.
👉 We used to create our own toys and play with them.
👉 Our parents were not rich. They gave us love, not worldly materials.
👉 We never had cellphones, DVDs, play station, XBox, video games, personal computers, internet chat - but we had real friends.
👉 We visited our friends' homes uninvited and enjoyed food with them.
👉 unlike your world, we had relatives who lived close by so family time and ties were enjoyed together.
👉 We may have been in black and white photos but you will find colourful memories in those photos.
👉 We are a unique and, the most understanding generation, because we are the last generation who listened to their parents.
Also , the first who have had to listen to their children.
and we are the ones who are still smarter and helping you now to use the technology that never existed while we were your age!!!
We are a LIMITED edition!
So you better -
Enjoy us.
Learn from us.
Treasure us.
Before we disappear from Earth and your lives.
***
40 years ago, everyone wanted to have children. Today many people are afraid of having children.
40 years ago, children respected their parents. Now parents have to respect their children.
40 years ago, marriage was easy but divorce was difficult. Nowadays it is difficult to get married but divorce is so easy.
40 years ago, we got to know all the neighbors. Now we are strangers to our neighbors.
40 years ago, villagers were flocking to the city to find jobs. Now the town people are fleeing from the city to find peace.
40 years ago, everyone wanted to be fat to look happy. Nowadays everyone diets to look healthy.
40 years ago, rich people pretended to be poor. Now the poor are pretending to be rich.
40 years ago, only one person worked to support the whole family. Now all have to work to support one child.
40 years ago, people loved to study & read books. Now people love to check Facebook & WhatsApp messages.
40 years ago was just 1980. Now it's 2020
***
ಬದುಕು- ದೇವರ ನಿರ್ಧಾರ
ಅರವತ್ತರವರೆಗೆ ನಮ್ಮ ಬದುಕು, ನಮ್ಮ ನಿರ್ಧಾರ!
ಅರವತ್ತರ ನಂತರ ದೇವರ ಬದುಕು, ದೇವರ ನಿರ್ಧಾರ!!
ಅರವತ್ತರವರೆಗೆ ನಮ್ಮಿಚ್ಛೆ; ಅರವತ್ತರ ನಂತರ ದೇವರಿಚ್ಛೆ.
ಅರವತ್ತರವರೆಗೆ ಸ್ವಾಧೀನ; ಅರವತ್ತರ ನಂತರ ಪರಾಧೀನ.
ಅರವತ್ತರವರೆಗೆ ಸ್ವಾವಲಂಬನದ ಪ್ರವಚನ;
ಅರವತ್ತರ ನಂತರ ಪರಾವಲಂಬನ ಪಾಠ.
ಅರವತ್ತರವರೆಗೆ ನಾವುಗಳು ನಮ್ಮ ಕೈಯಲ್ಲಿ!
ಅರವತ್ತರ ನಂತರ ನಾವುಗಳು ದೇವರ ಕೈಯಲ್ಲಿ!!
ಅರವತ್ತರವರೆಗೆ ಎಲ್ಲವೂ ನಂದೂ- ನನ್ನದು!!
ಅರವತ್ತರ ನಂತರ ಯಾವುದೂ ನಂದಲ್ಲ;
ನನ್ನದೂ ನನ್ನದಲ್ಲ; ನನ್ನ ದೇಹವೂ ನನ್ನದಲ್ಲ!!!
ಅರವತ್ತರವರೆಗೆ ಜೀವನ ಜೋಕಾಲಿ!
ಅರವತ್ತರ ನಂತರ ಜೀವನ ಖಾಲಿ ಖಾಲಿ!!
ಅರವತ್ತರವರೆಗೆ ನಿವೃತ್ತಿ ಐಚ್ಛಿಕ.
ಅರವತ್ತರ ನಂತರ ನಿವೃತ್ತಿ ಕಡ್ಡಾಯ.
ಅರವತ್ತರ ನಂತರವೂ ಹೆಚ್ಚು ಹೆಚ್ಚು
ಉತ್ಸಾಹ, ಲವಲವಿಕೆಯಿಂದ ಬದುಕುತ್ತಿದ್ದೇವೆ ಎಂದರೆ ಅದು ದೇವರ ಕೊಡುಗೆ.
ಅರವತ್ತರ ನಂತರ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಕುಸಿಯುತ್ತಿದ್ದೇವೆ ಎಂದರೆ ಅದು ದೇವರ ಇಚ್ಛೆ.
ಅರವತ್ತರವರೆಗೆ ಕವಿ ಹೇಳಿದಂತೆ
“ಬದುಕು ಜಟಕಾಬಂಡಿ”!
ಅರವತ್ತರ ನಂತರ ಅದೇ ಕವಿ ಹೇಳಿದಂತೆ
“ವಿಧಿಯದರ ಸಾಹೇಬ”!!
ಅರವತ್ತರ ನಂತರವೂ ಆಸೆ, ಆಮಿಷಗಳು ಹೆಚ್ಚುತ್ತಲಿವೆ ಎಂದರೆ ಅದು “ವಿನಾಶ ಕಾಲೇ ವಿಪರೀತ ಬುದ್ಧಿಃ” ಎಂದರ್ಥ.
ಅರವತ್ತರ ನಂತರವೂ ಅಧಿಕಾರದ
ದಾಹ, ಮೋಹಗಳ ವಿಸ್ತಾರ ಅಂಕೆ ಮೀರುತ್ತಲಿದೆ, ಲಂಕೆ ಜಿಗಿಯುತ್ತಲಿದೆ ಎಂದರೆ ಅದು ಆರಲಿರುವ ದೀಪ ಢಾಳಾಗಿ ಉರಿಯುತ್ತಲಿದೆ ಎಂದರ್ಥ.
ಅರವತ್ತರವರೆಗೆ ದೇವರಲ್ಲಿ ನಾವುಗಳು
“ಅವರಿಗೆ ಒಳ್ಳೆಯ ಬುದ್ಧಿ ಕೊಡು”,
“ಇವರಿಗೆ ಒಳ್ಳೆಯ ಬುದ್ಧಿ ಕೊಡು”
ಎಂದು ಕೇಳಿಕೊಂಡರೆ ದೇವರು
ಅದಕ್ಕೆ “ಭಲೇ, ಭೇಷ್” ಎನ್ನುತ್ತಾನೆ.
ಅರವತ್ತರ ನಂತರ ದೇವರಲ್ಲಿ ನಾವುಗಳು,
“ನಮಗೆ ಒಳ್ಳೆಯ ಬುದ್ಧಿ ಕೊಡು”, “ನಮಗೆ ಅಂತರಂಗ ಶುದ್ಧಿ ಕೊಡು” ಎಂದು
ಕೇಳಿಕೊಳ್ಳ ತೊಡಗಿದರೆ ದೇವರು ಅದಕ್ಕೆ “ವಾವ್, ಶಹಬ್ಬಾಶ್” ಹೇಳುತ್ತಾನೆ.
ಅರವತ್ತರ ನಂತರ ನಮಗೆ ನಾವೇ
ಸಾಕು ದೀಕ್ಷೆಯನ್ನು ಕೊಟ್ಟುಕೊಂಡಿದ್ದರೆ
ದೇವರು “ಭಲೇ, ಭಲೇ” ಎನ್ನುತ್ತಾನೆ.
ಅರವತ್ತರ ನಂತರವೂ ನಮಗೆ ನಾವು
ಬೇಕು ದೀಕ್ಷೆಯನ್ನು ಕೊಟ್ಟುಕೊಂಡು
“ಅದು ಬೇಕು, ಇದು ಬೇಕು” ಎನ್ನತೊಡಗಿದರೆ ದೇವರು ನಮ್ಮ ಬದುಕಿಗೆ “ಬ್ರೆಕ್” ಹಾಕುವ ಕುರಿತು
ಯೋಚಿಸತೊಡಗುತ್ತಾನೆ.
ಅರವತ್ತರವರೆಗೆ ಜೀವರಥದ ಹ್ಯಾಂಡಲ್ಲು, ಬ್ರೇಕು ನಮ್ಮ ಕೈಯಲ್ಲಿ!!
ಅರವತ್ತರ ನಂತರ ಜೀವರಥದ
ಹ್ಯಾಂಡಲ್ಲು, ಬ್ರೇಕು ದೇವರ ಕೈಯಲ್ಲಿ!!!
ಸನಾತನ ಹಿಂದೂಧರ್ಮ ಅರವತ್ತರವರೆಗೆ ``ಒನ್ಸ್ ಮೋರ್ '' Once More!!
ಅರವತ್ತರ ನಂತರ ``ಒನ್ಸ್ ಫಾರ್ ಆಲ್''' Once for all !!!
ಇದುವರೆಗೆ ನಾವು ಅರವತ್ತರವರೆಗೆ
ಮತ್ತು ಅರವತ್ತರ ನಂತರದ ಕುರಿತಾಗಿ ಹೇಳಿದ್ದು ಸಾಮಾನ್ಯ ಮತ್ತು ಇದೆಲ್ಲ ಸರ್ವೇಸಾಮಾನ್ಯ.
ಇನ್ನು ಈ “ಅರವತ್ತರವರೆಗೆ” ಮತ್ತು “ಅರವತ್ತರ ನಂತರ”ದ ಕುರಿತಾದ ವಿಷಯದಲ್ಲಿ ಎಲ್ಲರ ಅನುಭವಕ್ಕೆ ಬಂದಿರುವ ಹಾಗೆ
ಆರೋಪಗಳೂ ಇರಬಹುದು.
ಅಪವಾದಗಳೂ ಬರಬಹುದು;
ಏಕೆಂದರೆ ಜೀವನವೂ ಕೂಡ ಅಕ್ಷರ, ಪದ, ವಾಕ್ಯಗಳ ಒಂದು ವ್ಯಾಕರಣ ತಾನೆ?
ಸ್ವೀಟ್ ಸಿಕ್ಸ್‌ಟೀನ್‌ಗೂ (Sweet 16 )
ಸ್ವೀಟ್‌ಲೆಸ್ ಸಿಕ್ಸ್ಟಿಗೂ (Sweet less 60)
ಇರುವ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡು ಬದುಕಿದರೆ ಜೀವನ ನಂದನವನ ವಾಗುತ್ತದೆ; ಸನಾತನ ಹಿಂದೂ ಧರ್ಮದ ಈ ವ್ಯತ್ಯಾಸವನ್ನು ಅರಿಯದೆ ಹೋದರೆ ಜೀವನವದು ಹಾಲಾಹಲವಾಗುತ್ತದೆ; ಅದು ಕೋಲಾಹಲವಾಗುತ್ತದೆ.
***
ಒಂದಾನೊಂದು ಕಾಲ...
ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು.
ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.
ಆಮೇಲೆ ಅಪ್ಪ ಅಮ್ಮನನ್ನು ಪೀಡಿಸಿ ನಾಲ್ಕಾಣೆ, ಎಂಟಾಣೆ ಪಡೆದು ಸೈಕಲ್ ಶಾಪ್ ಸೈಕಲ್ ಓಡಿಸುತ್ತಿದ್ದರೆ BMW ಕಾರ್ ಓಡಿಸಿದಷ್ಟು ಖುಷಿ.
ಬೀದಿಯಲ್ಲಿ ಒಬ್ಬರ ಮನೆಗೆ ಟಿವಿ ತಂದರೆ ಊರಿಗೆಲ್ಲಾ ಅದೇ ಸುದ್ದಿ.ಅದರಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತ ನೋಡಲು ಬೀದಿಯ ಪರಿಚಿತರು, ಹುಡುಗರೆಲ್ಲಾ ಬಂದು ಕೂರುವುದು.ಸಿಗ್ನಲ್ ಹೋದಾಗ ಮೇಲೊಬ್ಬರು ಟಿವಿ ಆಂಟೆನಾ ತಿರುಗಿಸಿತ್ತಿದ್ದರೆ, ಒಳಗಿನಿಂದ
"ಸಾಕು ಸಾಕು ಬಂತು" ಅನ್ನೋ ಸಡಗರ!
ಇರುವ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ.
ವರ್ಷಕ್ಕೊಮ್ಮೆ ಶಾಲೆಯಲ್ಲೇ ಕೊಡುತ್ತಿದ್ದ ಯುನಿಫಾರಂ.ಪಾಸ್ ಆದವರ ಪುಸ್ತಕ ನಮಗೆ.ನಮ್ಮ ಪುಸ್ತಕ ನಮ್ಮ ಜ್ಯೂನಿಯರ್ಸ್ ಗಳಿಗೆ.
ಶಾಲೆ ಬಿಟ್ಟರೆ ರಸ್ತೆಯಲ್ಲೇ ಗೋಲಿ, ಬುಗುರಿ, ಕಣ್ಣಾಮುಚ್ಚಾಲೆ
ಗಿಲ್ಲಿ-ದಾಂಡು ಮುಂತಾದ ಆಟ.
ಬೇಸಿಗೆ ರಜೆ ಬಂತೆಂದರೆ ಅಜ್ಜಿಯ ಮನೆ.
ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಸೇವಿಸುವ ಆಹಾರ.
ಹಬ್ಬಕ್ಕೆ ತಾಯಿ ಹಾಕುತ್ತಿದ್ದ ಎಣ್ಣೆ ನೀರು,ತಂದೆ ಕೊಡಿಸುತ್ತಿದ್ದ ಹೊಸ ಬಟ್ಟೆ,ಪಟಾಕಿಯ ಖುಷಿ.
ಪಟಾಕಿಯನ್ನು ಬಿಸಿಲಿಗಿಟ್ಟು ಒಣಗಿಸಿಯೇ ಹೊಡೆಯಬೇಕು.
ಹೋಳಿಗೆ ತಿನ್ನಲು ಹಬ್ಬವೇ ಬರಬೇಕು!
ಪಾಯಸ ತಿನ್ನಲು ಮನೆಗೆ ಯಾರಾದರೂ ಬಂಧು-ಮಿತ್ರರು ಬರಬೇಕು!.
ಗಣಪತಿ ತಂದರೆ ಅದನ್ನು ಬಿಡೋಕ್ಕೆ ಮನಸಿರಲಿಲ್ಲ.
ಅಪರೂಪಕ್ಕೆ ಅಪ್ಪ ಅಮ್ಮ ಕರೆದುಕೊಂಡು ಹೋಗುತ್ತಿದ್ದದ್ದು ಡಾ:ರಾಜ್ ಚಿತ್ರಗಳು.
ಟಿವಿಯಲ್ಲಿ ಬರುವ ಸಾಪ್ತಾಹಿಕ ಕಾರ್ಯಕ್ರಮಕ್ಕೆ ವಾರವಿಡೀ ಕಾಯುವಿಕೆ!.
ಲ್ಯಾಂಡ್ ಫೋನ್ ಇದ್ದವರು ಅಕ್ಕ ಪಕ್ಕದವರಿಗೆ ಕರೆ ಬಂದರೆ ಕೂಗಿ ಕರೆಯುವುದು.
ಅಪರೂಪಕ್ಕೆ ಯಾರಿಗಾದರೂ ಕರೆ ಮಾಡಬೇಕಾದರೆ ಟೆಲಿಫೋನ್ ಎಕ್ಸ್ ಚೇಂಜ್ ಗೆ ಕರೆ ಮಾಡಿ ಬುಕ್ ಮಾಡಬೇಕು.
ಬಡವ-ಶ್ರೀಮಂತ ಎನ್ನುವುದಿಲ್ಲದೇ ಎಲ್ಲರೂ
ಕೆಎಸ್ಆರ್ ಟಿಸಿ ಕೆಂಪು ಬಸ್ಸಲ್ಲೇ ಖುಷಿಯಾಗಿ ಪ್ರಯಾಣ.
ವರ್ಷಕ್ಕೊಮ್ಮೆ ಊರು ಜಾತ್ರೆಯ ಸಂಭ್ರಮ.
ಜೋರು ಮಳೆಯಲ್ಲೂ ಆಲಿಕಲ್ಲು ಆರಿಸುವ ತವಕ,ಮಳೆ ನೀರನ್ನು ಬಕೇಟಿನಲ್ಲಿ ಹಿಡಿದು ತೊಟ್ಟಿ ತುಂಬಿಸುವ ಆಟ.
ಬಂಧು-ಮಿತ್ರರ ಮನೆಯ ಸುಖ-ದುಃಖದ ಸಂಧರ್ಭದಲ್ಲಿ ಮನೆಯ ಎಲ್ಲರೂ ಹೋಗಿ ಭಾಗಿಯಾಗುವುದು.
ವಾರಗಟ್ಟಲೆ ಅಲ್ಲೇ ಕ್ಯಾ0ಪ್.
ಇಂದು ನಮ್ಮೊಂದಿಗೆ ಇರುವ ಸಾಧನಗಳು ಅಂದಿನ ದಿನದಲ್ಲಿ ಇಲ್ಲದಿದ್ದರೂ ಅದೇ ಸ್ವರ್ಗ.
ಇಂದು ಅಂಗೈಯ್ಯಲ್ಲೇ ಜಗತ್ತು ಇದೆ.
ದುಡ್ಡು ಇದೆ.ಮನೆಗೊಂದು ಕಾರ್ ಇದೆ. ನಲ್ಲಿ ತಿರುಗಿಸಿದರೆ ಬಿಸಿ-ಅಥವಾ ತಣ್ಣೀರು ಬರುತ್ತದೆ.
ಕ್ಷಣ ಮಾತ್ರದಲ್ಲಿ ಎಲ್ಲಿಗೆ ಬೇಕಾದರೂ ತಲುಪುವಷ್ಟು ಸುಖವಾದ ಸಾಧನಗಳಿವೆ.
ಭೂತ-ವರ್ತಮಾನ-ಭವಿಷ್ಯವನ್ನು ಭಗವಂತನಿಗಿಂತ ಚೆನ್ನಾಗಿ ಬಲ್ಲ ಮತ್ತು ಅದನ್ನು ವಿವರಿಸುವ ನ್ಯೂಸ್ ಚಾನೆಲ್ ಗಳಿವೆ!.
ಶೆಖೆ ಆದರೆ ಎಸಿ ಇದೆ.
ಛಳಿ ಆದರೆ ಹೀಟರ್ ಇದೆ.
ರಸ್ತೆಗೊಂದು ಕಾನ್ವೆಂಟ್,ಇದೆ ಹೋಟೆಲ್....ಆಸ್ಪತ್ರೆ ಎಲ್ಲವೂ ಇದೆ.
ಮನೆಯಲ್ಲೇ ಕುಳಿತು ಆರ್ಡರ್ ಮಾಡಿದರೆ ಮೊಬೈಲ್ ಕೆಳಗೆ ಇಡುವಷ್ಟರಲ್ಲಿ ಪಾರ್ಸೆಲ್ ಮನೆ ಬಾಗಿಲಿಗೆ ಬರುತ್ತದೆ.
ಆದರೂ ಒಂದು ಮಾತ್ರ ON LINE ಸೇರಿದಂತೆ ಎಲ್ಲೇ ಹುಡುಕಿದರೂ ಸಿಗ್ತಾ ಇಲ್ಲ!..
ಆಗಿನ ಕಾಲದಲ್ಲಿ ಸಿಗುತ್ತಿದ್ದ ಸಂಬಂಧ,ಸ್ನೇಹ, ಪ್ರೀತಿ-ವಿಶ್ವಾಸ, ಸಂತೋಷ-ಸುಖ, ನೆಮ್ಮದಿ.!!!
***
ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️
ಆಗ : ಕೊಳ, ಬಾವಿಯ ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು.
ಈಗ : ಶುದ್ಧೀಕರಿಸಿದ RO ನೀರು ಕುಡಿದರೂ 40 ವರ್ಷಕ್ಕೇ ರೋಗಗಳು.
ಆಗ : ಗಾಣದಿಂದ ತೆಗೆದ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು.
ಈಗ : ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರೋದು ತಪ್ತಿಲ್ಲ.
ಆಗ : RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು.
ಈಗ : ಅಯೋಡಿನ್ ಉಪ್ಪು ಬಳಸಿದರೂ ಬಿಪಿಯಂತ ಸಮಸ್ಯೆಗಳು.
ಆಗ : ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನೋ ಗಟ್ಟಿ ಹಲ್ಲುಗಳು.
ಈಗ : ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸಿದರೂ ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು.
ಆಗ : ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು.
ಈಗ : ಅಲ್ಟ್ರಾ ಸೌಂಡ್, CT ಸ್ಕ್ಯಾನ್, ಬ್ರೈನ್ ಮ್ಯಾಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಾಗ್ಯೂ ಸಹ ರೋಗವೇನೆಂದು ತಿಳಿಯುತ್ತಿಲ್ಲ.
ಆಗ : 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯೂ ಹೊಲದ ಕೆಲಸಕ್ಕೆ ಹೋಗುವಷ್ಟು ಗಟ್ಟಿಮುಟ್ಟು.
ಈಗ : ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದಾಗ್ಯೂ ಸಿಜೇರಿಯನ್ ಮತ್ತು ಒಂದು ಹೆರಿಗೆಗೆ ಸುಸ್ತೊ ಸುಸ್ತು.
ಆಗ : ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದ ಜೀವನ...
ಈಗ : ಸಿಹಿಯ ಹೆಸರು ತೆಗೆದರೇ ಸಾಕು, ಮಧುಮೇಹವೇ ಬಂದಂತ ನಿರುತ್ಸಾಹ ಜೀವನ...
ಆಗ : ಕೀಲುನೋವು ಇಲ್ಲದ ವೃದ್ಧರು.
ಈಗ : ಯೌವನದಲ್ಲಿಯೇ ಮೊಣಕಾಲು, ಸೊಂಟ, ಮೈ ಕೈ ನೋವುಗಳು.
ಆಗ : ಕತ್ತಲೆಯಲ್ಲಿರುತ್ತಾ, ಕಡಿಮೆ ಬೆಳಕಿನಲ್ಲಿ ಓದಿದರೂ ಹತ್ತಿರ ಬಾರದ ಕಣ್ಣಿನ ಸಮಸ್ಯೆಗಳು.
ಈಗ : ಚಿಕ್ಕ ಮಕ್ಕಳೂ ಕನ್ನಡಕಧಾರಿಗಳು.
ಹಾಗಿದ್ರೆ ಒಂದು ಪ್ರಶ್ನೆ - *ಇಷ್ಟಕ್ಕೂ ನಮ್ಮದು ವಿಜ್ಞಾನ ಯುಗವೇ ⁉️ ಅಥವಾ ಅಜ್ಞಾನ ಯುಗವೇ ⁉️
***
ಮರೆಯಾದ ನೆನೆಪುಗಳು
ಒಂದು ಸಲ ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು ಬಾಯಿಪಾಠ ಆಗ್ತಿತ್ತು
ಕುಳಿತಿರೋ ಕಡೆ ಬಸ್ಸುಗಳಲ್ಲಿ ದಿನ ಪತ್ರಿಕೆ ತಂದು ಮಾರಾಟ ಮಾಡುತಿದ್ರು
ಎಲ್ಲರ ಮನೆಯಲ್ಲೂ ಸೈಕಲ್ ಇತ್ತು
ಎಲ್ಲ ಬಸ್ಸುಗಳಲ್ಲೂ ಸೀಟ್ ಸಿಗ್ತಾ ಇತ್ತು
ಮದುವೆ ಮನೆಗಳಲ್ಲಿ ಕೆಳಗೆ ಕೂರಿಸಿ ಊಟ ಬಡುಸ್ತಿದ್ರು
ಕಪಿಲ್ ದೇವ್ ಕ್ರಿಕೆಟ್ ೫ ದಿನಗಳ ಟೆಸ್ಟ್ ಫೆಂಟಾಸ್ಟಿಕ್
ಪ್ರಜಾಮತ, ಸುಧಾಗಳಲ್ಲಿ ಒಳ್ಳೆಯ ಧಾರವಾಹಿ, ಕಥೆಗಳು ಬರುತ್ತಿತ್ತು.
ಮನೆ ಮನೆಗಳಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಸಂಗೀತ ಕೇಳ್ತಿದ್ರು
ಮನೆ ಮುಂದುಗಡೆ ಹೆಂಗಸರು ಸಾರಿಸಿ ರಂಗೋಲಿ ಹಾಕ್ತಿದ್ರು
ಸಿನೆಮಾಗೆ ಹೋಗೋಕ್ಕೆ ಎರಡು ಮೂರು ದಿನಗಳ ಪ್ಲಾನ್
ಹಾಕ್ಬೇಕಿತ್ತು
ಯುಗಾದಿ, ದೀಪಾವಳಿ ಹಬ್ಬ ಬರೋದಿಕ್ಕೆ ಒಂದು ತಿಂಗಳು ಮುಂಚಿತವಾಗಿ ಕಾಯುತಿದ್ವಿ
ಆ ಕಾಲಕ್ಕೆ ಟಾನ್ಸಿಲ್ಸ್ ದೊಡ್ಡ ಆಪರೇಷನ್
ರೇಡಿಯೋ ನಲ್ಲಿ ನಾಟಕಗಳು ಬಲು ಚೆನ್ನಾಗಿರುತ್ತಿತ್ತು
ಸುಮಾರು ಎಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದ್ವಿ
ರಸ್ತೆಯಲ್ಲಿ ಯಾವಾಗಲೋ ಒಂದು ಕಾರು ಹೋಗ್ತಿತ್ತು
ಕನ್ನಡ ಮೇಷ್ಟರಿಗೆ ಸರಿ ಸಾಟಿ ಯಾರು ಇರಲಿಲ್ಲ
ಸುಲಭವಾಗಿ ವಧು ಸಿಕ್ಕುತಿದ್ಲು
ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸನ್ನು ಗೆಲ್ಲುವುದು ಸಾಧ್ಯವಿರಲಿಲ್ಲ
ಮಾರ್ಕೆಟ್ ಗೆ ಹೋಗಲು ಹತ್ತು ರೂಪಾಯಿ ಸಾಕಾಗುತ್ತಿತ್ತು
ಅಪ್ಪ ಅಮ್ಮನ ಪಕ್ಕದಲ್ಲಿ ಆಗಾಗ ಮಲಗುತಿದ್ವಿ
ಉರಿ ಬಿಸಿಲಿನಲ್ಲೂ ಚಪ್ಪಲಿ ಇಲ್ಲದೆ ನಡೆಯುತ್ತಿದ್ದೆವು
ಹೇರ್ ಕಟ್ ಮಾಡಲು ಎರಡು ರೂಪಾಯಿ ಶೇವಿಂಗ್ ಗೆ ಐವತ್ತು ಪೈಸೆ
ಮದುವೆ ವಯಸ್ಸಿನ ಹೆಣ್ಣು ಮಕ್ಕಳು ಲಂಗ ದಾವಣಿ ಹಾಕುತಿದ್ರು
ರಸ್ತೆಯಲ್ಲಿ ಲಗೋರಿ ಆಟ ಸೈಕಲ್ ಟೈಯರ್ ಓಡಿಸುತಿದ್ವಿ
ಎಸ್ ಎಲ್ ಬೈರಪ್ಪ , ತ್ರಿವೇಣಿ ಕಾದಂಬರಿಗಳು ಮನೆ ಮಾತಾಗಿತ್ತು
ನವಿಲು ಗರಿ ಮರಿ ಹಾಕುವುದು ಎಂದು ಪುಸ್ತಕದ ನಡುವೆ ಇಟ್ಟು ದಿನ ಕಾಯುತ್ತಿದ್ದೆವು
ಐದು ರೂಪಾಯಿ ಕಳೆದುಕೊಂಡೆ ಅಂತ ಅಪ್ಪನ ಹತ್ತಿರ ಒದೆ ತಿಂದೆ.
ನಾಲ್ಕನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಪಾಠ ಎಂಟನೇ ಕ್ಲಾಸ್ ವರೆಗೂ ಅರ್ಧ ನಿಕ್ಕರು
ಉಸಿರಾಡಲು ಶುದ್ಧ ಗಾಳಿ ಇತ್ತು
ಕುಡಿಯುವ ನೀರನ್ನು ಯಾರು ಖರೀದಿಸಲಿಲ್ಲ
ಲವ್ ಮಾಡೋದು ಥ್ರಿಲ್ ಆಗಿತ್ತು
ಸಿನಿಮಾ ಹಾಡಿನ ಪುಸ್ತಕ ಪುಟ ಪಾತ್ ನಲ್ಲಿ ಮಾರುತಿದ್ರು
ಒಟ್ಟಿನಲ್ಲಿ ಬಹಳ ಮರ್ಯಾದೆ ಇದ್ದಂತಹ ಕಾಲ
ಕಳೆದು ಹೋದದ್ದು ದಿನಗಳು ಮಾತ್ರವಲ್ಲ... ನಮ್ಮ ಸುಖಗಳು ಕೂಡ
ಅದ್ಬುತವಾದ ನೆನಪುಗಳು
***
ಆಗಿನ ಕಾಲದಲ್ಲಿ ಹಂಚಿನ ಬಾಡಿಗೆ ಮನೆಗಳು.ಸ್ವಂತ ಮನೆ ಇದ್ದವರು ಅನುಕೂಲಸ್ಥರು.
ವಾರಕ್ಕೆ ಎರೆಡು ಬಾರಿ ಬರುವ ನೀರನ್ನು ಮನೆಯವರೆಲ್ಲಾ ಸೇರಿ ಹಿಡಿದಿಟ್ಟು ಶೇಖರಿಸಿ ಉಪಯೋಗಿಸಬೇಕು. ಖಾಲಿಯಾದರೆ ರಸ್ತೆ ಕೊನೆಯಲ್ಲಿ ಇದ್ದ ಕೈ ಬೋರ್ ವೆಲ್ ನಿಂದ ನೀರನ್ನು ಹೊತ್ತು ತರಬೇಕು.
ನೀರು ಕಾಯಿಸಲು ಸೌದೆ ಒಲೆ.ಆ ಸೌದೆಯನ್ನೂ ಆರು ತಿಂಗಳಿಗಾಗುವಷ್ಟು ಒಡೆಸಿ ಶೇಖರಿಸಿ ಇಟ್ಟು ಬಳಸಬೇಕು.
ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು.
ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.
ಆಮೇಲೆ ಅಪ್ಪ ಅಮ್ಮನನ್ನು ಪೀಡಿಸಿ ನಾಲ್ಕಾಣೆ, ಎಂಟಾಣೆ ಪಡೆದು ಸೈಕಲ್ ಶಾಪ್ ಸೈಕಲ್ ಓಡಿಸುತ್ತಿದ್ದರೆ BMW ಕಾರ್ ಓಡಿಸಿದಷ್ಟು ಖುಷಿ.
ಬೀದಿಯಲ್ಲಿ ಒಬ್ಬರ ಮನೆಗೆ ಟಿವಿ ತಂದರೆ ಊರಿಗೆಲ್ಲಾ ಅದೇ ಸುದ್ದಿ.ಅದರಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತ ನೋಡಲು ಬೀದಿಯ ಪರಿಚಿತರು, ಹುಡುಗರೆಲ್ಲಾ ಬಂದು ಕೂರುವುದು.ಸಿಗ್ನಲ್ ಹೋದಾಗ ಮೇಲೊಬ್ಬರು ಟಿವಿ ಆಂಟೆನಾ ತಿರುಗಿಸಿತ್ತಿದ್ದರೆ, ಒಳಗಿನಿಂದ
"ಸಾಕು ಸಾಕು ಬಂತು" ಅನ್ನೋ ಸಡಗರ!
ಇರುವ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ.
ವರ್ಷಕ್ಕೊಮ್ಮೆ ಶಾಲೆಯಲ್ಲೇ ಕೊಡುತ್ತಿದ್ದ ಯುನಿಫಾರಂ.ಪಾಸ್ ಆದವರ ಪುಸ್ತಕ ನಮಗೆ.ನಮ್ಮ ಪುಸ್ತಕ ನಮ್ಮ ಜ್ಯೂನಿಯರ್ಸ್ ಗಳಿಗೆ.
ಶಾಲೆ ಬಿಟ್ಟರೆ ರಸ್ತೆಯಲ್ಲೇ ಗೋಲಿ, ಬುಗುರಿ, ಕಣ್ಣಾಮುಚ್ಚಾಲೆ
ಗಿಲ್ಲಿ-ದಾಂಡು ಮುಂತಾದ ಆಟ.
ಬೇಸಿಗೆ ರಜೆ ಬಂತೆಂದರೆ ಅಜ್ಜಿಯ ಮನೆ.
ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಸೇವಿಸುವ ಆಹಾರ.
ಹಬ್ಬಕ್ಕೆ ತಾಯಿ ಹಾಕುತ್ತಿದ್ದ ಎಣ್ಣೆ ನೀರು,ತಂದೆ ಕೊಡಿಸುತ್ತಿದ್ದ ಹೊಸ ಬಟ್ಟೆ,ಪಟಾಕಿಯ ಖುಷಿ.
ಪಟಾಕಿಯನ್ನು ಬಿಸಿಲಿಗಿಟ್ಟು ಒಣಗಿಸಿಯೇ ಹೊಡೆಯಬೇಕು.
ಹೋಳಿಗೆ ತಿನ್ನಲು ಹಬ್ಬವೇ ಬರಬೇಕು!
ಪಾಯಸ ತಿನ್ನಲು ಮನೆಗೆ ಯಾರಾದರೂ ಬಂಧು-ಮಿತ್ರರು ಬರಬೇಕು!.
ಗಣಪತಿ ತಂದರೆ ಅದನ್ನು ಬಿಡೋಕ್ಕೆ ಮನಸಿರಲಿಲ್ಲ.
ಅಪರೂಪಕ್ಕೆ ಅಪ್ಪ ಅಮ್ಮ ಕರೆದುಕೊಂಡು ಹೋಗುತ್ತಿದ್ದದ್ದು ಡಾ:ರಾಜ್ ಚಿತ್ರಗಳು.
ಟಿವಿಯಲ್ಲಿ ಬರುವ ಸಾಪ್ತಾಹಿಕ ಕಾರ್ಯಕ್ರಮಕ್ಕೆ ವಾರವಿಡೀ ಕಾಯುವಿಕೆ!.
ಲ್ಯಾಂಡ್ ಫೋನ್ ಇದ್ದವರು ಅಕ್ಕ ಪಕ್ಕದವರಿಗೆ ಕರೆ ಬಂದರೆ ಕೂಗಿ ಕರೆಯುವುದು.
ಅಪರೂಪಕ್ಕೆ ಯಾರಿಗಾದರೂ ಕರೆ ಮಾಡಬೇಕಾದರೆ ಟೆಲಿಫೋನ್ ಎಕ್ಸ್ ಚೇಂಜ್ ಗೆ ಕರೆ ಮಾಡಿ ಬುಕ್ ಮಾಡಬೇಕು.
ಬಡವ-ಶ್ರೀಮಂತ ಎನ್ನುವುದಿಲ್ಲದೇ ಎಲ್ಲರೂ
ಕೆಎಸ್ಆರ್ ಟಿಸಿ ಕೆಂಪು ಬಸ್ಸಲ್ಲೇ ಖುಷಿಯಾಗಿ ಪ್ರಯಾಣ.
ವರ್ಷಕ್ಕೊಮ್ಮೆ ಊರು ಜಾತ್ರೆಯ ಸಂಭ್ರಮ.
ಜೋರು ಮಳೆಯಲ್ಲೂ ಆಲಿಕಲ್ಲು ಆರಿಸುವ ತವಕ,ಮಳೆ ನೀರನ್ನು ಬಕೇಟಿನಲ್ಲಿ ಹಿಡಿದು ತೊಟ್ಟಿ ತುಂಬಿಸುವ ಆಟ.
ಬಂಧು-ಮಿತ್ರರ ಮನೆಯ ಸುಖ-ದುಃಖದ ಸಂಧರ್ಭದಲ್ಲಿ ಮನೆಯ ಎಲ್ಲರೂ ಹೋಗಿ ಭಾಗಿಯಾಗುವುದು.
ವಾರಗಟ್ಟಲೆ ಅಲ್ಲೇ ಕ್ಯಾ0ಪ್.
ಇಂದು ನಮ್ಮೊಂದಿಗೆ ಇರುವ ಸಾಧನಗಳು ಅಂದಿನ ದಿನದಲ್ಲಿ ಇಲ್ಲದಿದ್ದರೂ ಅದೇ ಸ್ವರ್ಗ.
ಇಂದು ಅಂಗೈಯ್ಯಲ್ಲೇ ಜಗತ್ತು ಇದೆ.
ದುಡ್ಡು ಇದೆ.ಮನೆಗೊಂದು ಕಾರ್ ಇದೆ. ನಲ್ಲಿ ತಿರುಗಿಸಿದರೆ ಬಿಸಿ-ಅಥವಾ ತಣ್ಣೀರು ಬರುತ್ತದೆ.
ಕ್ಷಣ ಮಾತ್ರದಲ್ಲಿ ಎಲ್ಲಿಗೆ ಬೇಕಾದರೂ ತಲುಪುವಷ್ಟು ಸುಖವಾದ ಸಾಧನಗಳಿವೆ.
ಭೂತ-ವರ್ತಮಾನ-ಭವಿಷ್ಯವನ್ನು ಭಗವಂತನಿಗಿಂತ ಚೆನ್ನಾಗಿ ಬಲ್ಲ ಮತ್ತು ಅದನ್ನು ವಿವರಿಸುವ ನ್ಯೂಸ್ ಚಾನೆಲ್ ಗಳಿವೆ!.
ಶೆಖೆ ಆದರೆ ಎಸಿ ಇದೆ.
ಛಳಿ ಆದರೆ ಹೀಟರ್ ಇದೆ.
ರಸ್ತೆಗೊಂದು ಕಾನ್ವೆಂಟ್,ಇದೆ ಹೋಟೆಲ್....ಆಸ್ಪತ್ರೆ ಎಲ್ಲವೂ ಇದೆ.
ಮನೆಯಲ್ಲೇ ಕುಳಿತು ಆರ್ಡರ್ ಮಾಡಿದರೆ ಮೊಬೈಲ್ ಕೆಳಗೆ ಇಡುವಷ್ಟರಲ್ಲಿ ಪಾರ್ಸೆಲ್ ಮನೆ ಬಾಗಿಲಿಗೆ ಬರುತ್ತದೆ.
ಆದರೂ ಒಂದು ಮಾತ್ರ ON LINE ಸೇರಿದಂತೆ ಎಲ್ಲೇ ಹುಡುಕಿದರೂ ಸಿಗ್ತಾ ಇಲ್ಲ!..
ಆಗಿನ ಕಾಲದಲ್ಲಿ ಸಿಗುತ್ತಿದ್ದ ಸಂಬಂಧ,ಸ್ನೇಹ, ಪ್ರೀತಿ-ವಿಶ್ವಾಸ, ಸಂತೋಷ-ಸುಖ, ನೆಮ್ಮದಿ.!!!
***
ಅಂದು..? ಇಂದು...?
ಅಂದು..?
ಮನೆಸುತ್ತ ಕಾಂಪೌಂಡು, ಗೇಟು ಭದ್ರ, ಒಳಗಿರುವ ಮನಸುಗಳೇ ಏಕೋ ಛಿದ್ರ ಛಿದ್ರ...!
ಬಂಧುಗಳೇ ಬಾರದ, ಸ್ನೇಹಿತರೂ ಸೇರದ ಮನೆಗಳ ಮುಂದೆ ಸದಾ ಕಾವಲುಗಾರ...!
ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ...!
ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ...!
ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ... ಎತ್ತರ... ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ...ಹತ್ತಿರ...! ಸಂತೋಷ ಏನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ...!
ಅಂದು...ಬಿಸಿಲು, ಮಳೆ, ಚಳಿಗೆ ಮೈ ಒಗ್ಗಿತ್ತು, ಮನೆ ತಣ್ಣಗಿತ್ತು. ಒಲೆ ಹೊಗೆಯಾಡುತ್ತಿತ್ತು. ಬಿಸಿನೀರ ಹಂಡೆ ಹಬೆಯಾಡುತ್ತಿತ್ತು...!
ಕಣಜದ ತುಂಬಾ... ದವಸ ಧಾನ್ಯ ತುಂಬಿತ್ತು. ಬಂಧುಬಳಗದ ನಡುವೆ ಅನುಬಂಧವಿತ್ತು
ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು...!
ಮನೆ ಚಿಕ್ಕದಾದ್ರೂ, ಮನಸು ಚೊಕ್ಕವಾಗಿತ್ತು...!
ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...ನಲಿವಿತ್ತು, ಒಲವಿತ್ತು, ಸಂತಸದ ಸೆಲೆಯಿತ್ತು...!
ಮುಖ್ಯ ಬಾಗಿಲು ಚಿಕ್ಕದಿತ್ತು, ತಲೆಬಾಗಬೇಕಿತ್ತು.
ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು
ಮಾಡು ಚಿಕ್ಕದಿತ್ತು, ಬದುಕು ದೊಡ್ಡದಿತ್ತು. ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು.ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು...!
ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು.ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು.
ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು...ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ...!
ಕೆಲಸಕ್ಕೆ ಶ್ರದ್ಧೆ, ದೇವರ ಮೇಲೆ ನಂಬಿಕೆಯಿತ್ತು...!
ಸಾವಿಗೂ ಸಹ ಮನೆಯೇ ಸಾಕ್ಷಿ ಯಾಗುತ್ತಿತ್ತು...!
ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು.ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು....!
ನೆಂಟರು ಬಂದರೆ, ಹಬ್ಬದ ಸಡಗರವಿತ್ತು. ಕೆಲವು ಸಾವುಗಳ ಸೂತಕವೂ ಇತ್ತು. ಸತ್ತ ಹಿರಿಯರ ನೆನಪು ಅಚ್ಚಳಿಯದೇ ಉಳಿದಿತ್ತು...!
ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕ ವೂ ಇತ್ತು...! ಬದುಕಿನ ಸಾಧಕ ಭಾದಕ ಗಳೆಲ್ಲವೂ ಇತ್ತು...!
ಇಂದು...?
ಇಂದು...? ಮನೆ ರಾಜನಿಲ್ಲದ ಅರಮನೆಯಂತೆ, ಸಕಲ ಸವಲತ್ತು ಗಳಿರುವ ದರ್ಬಾರಿನಂತೆ,ನೆರೆ ಮನೆಯ ಹಂಗಿಲ್ಲದ ಸೆರೆಮನೆ ಯಂತೆ. ಆದ್ರೂ ಮನೆಮಂದಿಗೆಲ್ಲ ಬಹಳ ದುಡ್ಡಿನದೇ ಚಿಂತೆ ಚಿಂತೆ..!
ಬೇಕಾಗಿದ್ದಕ್ಕಿಂತ, ಬೇಕೆನಿಸಿದ್ದೇ ತುಂಬಿದೆ, ದೊಡ್ಡದಿದೆ, ಶ್ರೀಮಂತವಾಗಿದೆ, ಸಜ್ಜಾಗಿದೆ. ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ...!
ಶುಭ ಕಾರ್ಯಗಳು, ಸಂತೋಷ ಕೂಟಗಳು, ಮನೆಬಿಟ್ಟು, ಹೋಟೆಲ್ಲುಗಳ ಸೇರಿಕೊಂಡಿವೆ. ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ...!
ನೆಂಟರಿಷ್ಟರು ಮನೆಗೆ ಬಂದರೆ, ಬರೀ ನಕ್ಕೂ ನಗದೇ... ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆ ಮಕ್ಕಳು.
ಸ್ನೇಹ,ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...!
ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...!
ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...!
ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!
ಇವು ಯಾರೋ ಪುಣ್ಯಾತ್ಮನ ಅನಿಸಿಕೆ ಗಳು....
***
1950-75ರ ಈ ಪೀಳಿಗೆ
1950 ರಿಂದ 1970 ರಲ್ಲಿ ಜನಿಸಿದ ಪೀಳಿಗೆ,
ಇದೊಂದು ವಿಶೇಷ ಅವಿಸ್ಮಣೀಯ ಪೀಳಿಗೆಯ ಜನ!.
ಈಗ ಇವರ ವಯಸ್ಸು 45 ದಾಟಿ 70ರ ಆಸು ಪಾಸು ಇದ್ದಿರಬೇಕು.
ಈ ಪೀಳಿಗೆಯ ವಿಶೇಷ ಅಂದರೆ ಬದಲಾಗುತ್ತಿರುವ ಕಾಲಮಾನದಲ್ಲಿ ತಮ್ಮನ್ನು ತಾವೇ ಬದಲಾಯಿಸಿ ಕೊಂಡು ಅದರೊಂದಿಗೆ adjust ಮಾಡಿಕೊಳ್ಳುತ್ತಾ ಇರೋದು!.
ಮತ್ತೊಂದು ವಿಶೇಷ ಈ ಪೀಳಿಗೆಯ ಜನ ಖಾಯಂ ಆಗಿ ಹೊಸ್ತಿಲ ಮೇಲೆಯೇ ಜೀವಿಸುತ್ತಿದ್ದಾರೆ.
1,2,5,10,20 ಪೈಸೆ ವ್ಯವಹಾರ ಮಾಡುತಿದ್ದ ಈ ಜನ ನಿಜವಾಗಿಯೂ ಒಂದು ತರಹದ ಅದೃಷ್ಟವಂತರು (ದುಡ್ಡಿನ ಬೆಲೆ ತಿಳಿದವರು )
೫ಪೈಸೆಗೆ ಒಂದು ಕಪ್ ಚಹಾ ಕುಡಿದ ಈ ಪೀಳಿಗೆ ಈಗ 10ರೂಪಾಯಿಗೂ ಆ ರುಚಿಯ ಚಹಾ ಕಾಣುತ್ತಿಲ್ಲ.
Ink pen, pencil, ball pen ನಿಂದ ಶುರು ಮಾಡಿದ ಇವರ ಜನ ಜೀವನ ಈಗ smart phone, Lap top ಮೇಲೆ ಕೈ ಆಡಿಸುವದನ್ನು ಕಲಿತಿದೆ.
Cycle ಮೇಲೆ ಓಡಾಡುತ್ತಿದ್ದ ಈ ಪೀಳಿಗೆ ಈ ವಯಸ್ಸಿನಲ್ಲಿ car ನಡೆಸುವುದನ್ನು ಕರಗತ ಮಾಡಿಕೊಂಡಿದೆ.
ತಮ್ಮ ಬಾಲ್ಯವನ್ನು ಕಷ್ಟ ಕಾರ್ಪಣ್ಯಗಳಲ್ಲಿ ಕಳೆದ ಈ ಪೀಳಿಗೆ ಈಗ ಆಧುನಿಕ ಜನ ಜೀವನ ಅನುಭವಿಸುತ್ತಿದ್ದಾರೆ.
Tape recorder, pocket radio ದೊಂದಿಗೆ ಶುರು ಮಾಡಿದ ಇವರ ಮನೋರಂಜನೆ ಈಗ satellite TV ವರೆಗೂ ಹೋಗಿದೆ.
Bycycle ನ ಹಳೆಯ tyre ಅನ್ನೇ ಆಟದ ಚಕ್ರದಂತೆ ಬಳಸುತಿದ್ದ ಈ ಪೀಳಿಗೆ ಅದನ್ನೆಂದೂ ಕೀಳು ಮಟ್ಟದ ಆಟ ಎಂದು ಭಾವಿಸಲೇ ಇಲ್ಲ.
ಬೇಸಿಗೆ ದಿನಗಳಲ್ಲಿ ಮಾವಿನ ಗಿಡದಿಂದ ಮಾವಿನ ಕಾಯಿ ಕದಿಯುವುದು ಕಳ್ಳತನ ಎಂದು ಇವರು ಭಾವಿಸಲೇ ಇಲ್ಲ.
ಯಾವಾಗ ಬೇಕಾದರೂ ಗೆಳೆಯರ ಮನೆಗೆ ಹೋಗುವುದು ಅವರ ಜೊತೆ ಹರಟೆ, ಊಟ, ಆಟ ಆಡುವುದು ಇದಕ್ಕೆಲ್ಲಾ time table ಯಾವುದೂ ಇಲ್ಲ, ಇದು ethics ವಿರುದ್ಧ ಎಂದು ಎಂದೂ ಭಾವಿಸಲೇ ಇಲ್ಲ..
ಶಾಲೆಯಲ್ಲಿ, ಓಣಿಯಲ್ಲಿ, ಭೇಟಿಯಾದಾಗ ಅಕ್ಕನ ಗೆಳತಿಯರ ಜೊತೆ ಮನ ಬಿಚ್ಚಿ ಹರಟೆ ಹೊಡೆಯುವುದು ಈ ಪೀಳಿಗೆಯ ವಿಶೇಷ ವಾಗಿತ್ತು ಇದರಲ್ಲಿ ಯಾವ ತರಹದ ಸಂಕೋಚ ಕಾಣುತ್ತಿರಲಿಲ್ಲ.
ಶಾಲೆಗೆ ಗೆಳೆಯರ parents ಬಂದರೆ ಕೂಡಲೇ 100km speed ನಿಂದ ಓಡುತ್ತ ಹೋಗಿ ಅವನನ್ನು ಎಳೆದು ತರುವ ಹುಮ್ಮಸ್ಸು ಈ ಪೀಳಿಗೆಯಲ್ಲಿ ಇತ್ತು,
ಇದರಲ್ಲಿ ಯಾವ ತರಹದ ego ಅನ್ನಿ, ಅಪಮಾನ ಕಾಣುತ್ತಿರಲಿಲ್ಲ.
ಓಣಿಯ ಮನೆಯಲ್ಲಿ ಮದುವೆ ಅಥವಾ ಇನ್ನಿತರ ಹಬ್ಬ ಹರಿದಿನಗಳಲ್ಲಿ ಯಾವ ಸಂಕೋಚವಿಲ್ಲದೆ ಕಾರ್ಮಿಕನಂತೆ ದುಡಿಯುವುದು ಒಂದು ಹೆಮ್ಮೆಯ ಸಂಗತಿ ಆಗಿತ್ತು.
ಶಾಲೆಯ interval ವೇಳೆಯಲ್ಲಿ ಜೂಟಾಟ ಆಡೋದು,10,20,30.....ಅಂತ ಕಣ್ಣು ಮುಚ್ಚಿ, ಮುಖ ಆ ಕಡೆ ಮಾಡಿ ಕೂಗಿ ಬಂದೇ ಎನ್ನುತ್ತ ಕಣ್ಣು ಮುಚ್ಚಾಲೆ ಆಡೋದು ಈ ಪೀಳಿಗೆಯ ಆಟ ಆಗಿತ್ತು.
ಗವಾಸ್ಕರ್, ವಿಶ್ವನಾಥ್ ಇವರ ಆಟದ ಚರ್ಚೆ ಈ ಇಬ್ಬರಲ್ಲಿ ಯಾರು ಶ್ರೇಷ್ಠರು? ಇದರ ಬಗ್ಗೆ ಗಂಟೆ ಗಟ್ಟಲೆ ಚರ್ಚೆ ಆಗುತಿತ್ತು.
ಡಾ.ರಾಜಕುಮಾರ್ , ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಅಭಿನಯದ ಚಲನ ಚಿತ್ರಗಳ tickets ಸಂತೆಯಲ್ಲಿ ಖರೀದಿಸಿ ನೋಡುವ ಈ ಪೀಳಿಗೆಗೆ
ಬಾಡಿಗೆಯಲ್ಲಿ VCR ತಂದು ಒಂದೇ ರಾತ್ರಿ ೪/೬ movies ನೋಡುವ ಹುಚ್ಚಿತ್ತು ಈ ಪೀಳಿಗೆಯವರಿಗೆ!..
ಎಷ್ಟೇ ಏಟು ತಿಂದರೂ ಗುರುಗಳ complaints ಪಾಲಕರ ಮುಂದೆ ಹೇಳದೆ ಇರೋದು ಈ ಪೀಳಿಗೆಯ ಗುಣ ಧರ್ಮ ಎನ್ನಿ.
ಇಂತಹ ಈ ಪೀಳಿಗೆ
50 ರಿಂದ 70ರಲ್ಲಿ ಹುಟ್ಟಿ ಬೆಳೆದ ಈ ಪೀಳಿಗೆ ಒಂದು ವಿಶೇಷ ಪೀಳಿಗೆ.
ಈಗ ಇದೆಲ್ಲ ನೆನಸಿದರೆ
ಇದೇನು ಕನಸಿನ ಪೀಳಿಗೆಯೇ ? ಹೀಗೆ ಅನಿಸುವುದು ಇಂದಿನ ಯುವ ಪೀಳಿಗೆಗೆ ಅಲ್ಲವೇ?
ಧನ್ಯ ನಾನೂ ಬೆಳೆದಿದ್ದೂ ಹೀಗೇ ಹಾಗಾಗಿ ನಾನೂ ಇದೇ 50 ರಿಂದ 75ರ ಪೀಳಿಗೆ
***
ಮರೆಯಲಾಗದ ಮಧುರ ಬಾಲ್ಯಕಾಲ
- ನಿಕ್ಕರ್ ಮತ್ತು ಹವಾಯ್ ಚಪ್ಪಲಿ ಹಾಕ್ಕೊಂಡು ಓಡಾಡುತ್ತಿದ್ದ ಆ ಕಾಲ
- ತುಂತುರು ಹಾಗು ಬಾಲಮಂಗಳ ಕ್ಕಾಗಿ ಕಾದು ಕುಳಿತ ಅದೆಷ್ಟು ಸೋಮವಾರಗಳು
- ಕಥೆ ಪುಸ್ತಕಗಳಿಗೆ ಬೇಕಾಗಿ ಊರಿನ ಗ್ರಂಥಾಲಯ ಗೆಳೆಯರ ಮನೆಗಳಿಗೆ ಅಲೆದಾಟ ನಡೆಸಿದ ಕಾಲ
- ಹೊಸ ಹಾಡುಗಳಿಗಾಗಿ "ಹಲೋ ಸಂಡೇ" ಗೆ ರೇಡಿಯೊ ಮುಂದೆ ಕಾದು ಕುಳಿತ ಅದೆಷ್ಟೋ ಆದಿತ್ಯವಾರಗಳು
- ತೆಂಗಿನ ಸೋಂಟೆಯ (ಮಟಕಣೆ) ಬ್ಯಾಟು ಹಾಗು ಮೂರು ರೂಪಾಯಿಯಾ ಬಾಲು ಹಿಡಿದು ಆಡಿದ ಕ್ರಿಕೆಟ್ ಆಟ
- ಟಿವಿಯಲ್ಲಿ ಸಿನಿಮಾ ನೋಡಲು ಗೆಳೆಯರ ಮನೆಯಲ್ಲಿ ಕಾದು ಕುಳಿತ ಶನಿವಾರದ ಸಂಜೆಗಳು
- ಸೈಕಲ್ ಟಯರ್ ಹೊಡೆದುಕೊಂಡು ಹಾಲಿಗಾಗಿ ನೆರೆಮನೆಗೆ ಹೋದ ಅದೆಷ್ಟೋ ಸಂಜೆಗಳು
- ಅಂಗಿಯ ಕೈ ಮೇಲೆ ಮಾಡಿ ಕೈಯ ಮಸ್ಲ್ ತೋರಿಸಿ ಹೆಮ್ಮೆ ಪಡುತ್ತಿದ್ದ ದಿನಗಳು
- ಪೆನ್ಸಿಲ್ ಕಡ್ಡಿ, ಡೆಸ್ಟರ್ ಚೊಕ್ ಬಾಕ್ಸ್ ಹೆಸರಲ್ಲಿ ಕ್ಲಾಸ್ಸಲ್ಲಿ ಗಲಾಟೆ ಮಾಡಿ ಶಿಕ್ಷಕರಿಂದ ಬೈಗುಳ ತಿಂದ ಕಾಲ
- ಪರೀಕ್ಷೆಯ ಮುಂದಿನ ದಿವಸ ಬೆಳಗ್ಗೆಯಿಂದ ಸಂಜೆವರೆಗೆ ಆಟವಾಡಿ ರಾತ್ರಿ ಹೊತ್ತು ನಿದ್ದೆಗೆಟ್ಟು ಪರೀಕ್ಷೆಗೆ ಸಿದ್ಧತೆ ನಡೆಸಿದ ದಿನಗಳು
- ಹೋಮ್ವರ್ಕ್ ಮಾಡದಕ್ಕೆ ಶಿಕ್ಷಕರ ಪೆಟ್ಟಿನ ನೋವು ತಪ್ಪಿಸಲು ಎರಡೆರಡು ಚಡ್ಡಿ ಹಾಕಿ ಶಾಲೆಗೆ ಹೋದ ದಿನಗಳು
- ಹಳೆಯ ಚಪ್ಪಲಿ ಮತ್ತು ಉಜಾಲ ಬಾಟಲಿಯಿಂದ ಗಾಡಿ ತಯಾರಿಸಿ ಅದರಿಂದ ಪಡೆದ ಮಜಾಗಳು
- ಸೈಕಲ್ ಬಾಡಿಗೆಗೆ ಪಡೆದು ಊರಿಡೀ ಸುತ್ತಿದ ದಿನಗಳು
- ಶಾಲೆಯ ಸಂಜೆ ಗಂಟೆ ಬಾರಿಸಿದಾಗ ಎಲ್ಲರಿಗಿಂತಲೂ ಮೊದಲು ಗೇಟಿನಿಂದ ಹೊರ ಬರಲು ಓಡಿದ ದಿನಗಳು
- ಮಾವಿನಕಾಯಿಗಾಗಿ ಮರಕ್ಕೆ ಕಲ್ಲೆಸೆದು ಮಾವು ಕೊಯ್ದ ದಿನಗಳು
- ಬುಗರಿ, ನೆಲ್ಲಿಕಾಯಿ ಮತ್ತು ನೇರಳೆ ಕಾಯಿಗಾಗಿ ಗೆಳೆಯರೊಂದಿಗೆ ಗುಡ್ಡ ಕಾಡು ಅಲೆದ ದಿನಗಳು
- ಮಳೆ ಬರುವಾಗ ಛತ್ರಿಯನ್ನು ಗಾಳಿಯಲ್ಲಿ ಆಣಬೆ ಮಾಡಿ ಕೊನೆಗೆ ಮಳೆಯಲಿ ನೆನೆದು ಬ್ಯಾಗು ಪುಸ್ತಕ ಒದ್ದೆ ಮಾಡಿ ಮನೆ ಸೇರಿದ ದಿನಗಳು☔
- ತಪ್ಪು ಉತ್ತರಕ್ಕಾಗಿ ಮತ್ತು ತಪ್ಪು ಹೊಂವರ್ಕ್ ಮಾಡದ್ದಕ್ಕಾಗಿ ಬೆಂಚು ಮೇಲೆ ನಿಂತು ಇಡೀ ತರಗತಿ ಕಳೆದ ದಿನಗಳು
- ಓಡುವಾಗ ಸ್ಪೀಡ್ ಆಗಿ ಓಡುವ ಸಲುವಾಗಿ ಚಪ್ಪಲಿ ಕೈಯಲ್ಲಿ ಹಿಡಿದು ಓಡಿದ ಕಾಲ
- ಇವೆಲ್ಲದರ ಮುಂದೆ ಈಗಿನ ನ್ಯೂಜನರೇಷನ್ ಕಾಲ ಯಾವ ಲೆಕ್ಕ 😆😆
- ಸಾವಿರಗಳು ಬೆಲೆ ಬಾಳುವ ಮೊಬೈಲ್ ಮುಂದೆ ಸೆಲ್ಫಿ ತೆಗೆದು ಆಟವಾಡುವ ನ್ಯೂ ಜನರೇಶನ್ ಮಕ್ಕಳಿಗೆನು ಗೊತ್ತು ಹತ್ತು ರೂಪಾಯಿ ಇಲ್ಲದ ಕಾರಣ ಕ್ಲಾಸ್ ಗ್ರೂಪ್ ಫೋಟೋ ಪಡೆಯಲು ಸಾಧ್ಯವಾಗದ ಓಲ್ಡ್-ಜನರೇಷನ್ ಮನಸ್ಸುಗಳ ಮನದ ನೋವು. ಸತ್ಯ ಅಲ್ಲವೇ
***
ಒಂದು ಆ ಕಾಲ
- ಐದನೇ ಇಯತ್ತೆಯ, ತನಕ ನಾವು ಇಂಗ್ಲಿಷ್ ಓದಲೇ ಇಲ್ಲ.
- ಪೆನ್ಸಿಲ್ ಅಥವಾ ಬಳಪದಿಂದಲೇ ಬರೆಯುವ ಅಭ್ಯಾಸ, ನಾಲಿಗೆಯಿಂದ ಕಡ್ಡಿ ಚೀಪುವುದು ಬಹಳ ಸಾಮಾನ್ಯ ವಾಗಿತ್ತು, ಅದಕ್ಕೆ ಏನೋ ನಮಗ್ಯಾರಿಗೂ, ಕ್ಯಾಲ್ಸಿಯಂ ಗುಳಿಗೆ ಬೇಕಾಗಲಿಲ್ಲ,
- ನಾವು ಎoಜಲು ಕಡ್ಡಿಯಿಂದಾ ಬರೆದರೂ ,ಸರಸ್ವತಿ ದೇವಿಯ ಕೃಪೆ ಇತ್ತು ನಮ್ಮ ಮೇಲೆ, ಅವಳು ಎಂದೂ ನಮ್ಮ ಮೇಲೆ ಸಿಟ್ಟಾಗಲಿಲ್ಲ.
- ಚಾಕಲೇಟ್ ಎಂಬ ಪದ ನಮಗೆ ತಿಳಿದೇ ಇರಲಿಲ್ಲಾ. ಹುಣಿಸೆ ಹಣ್ಣು, ಉಪ್ಪು, ಈರುಳ್ಳಿ, ಹಸಿ ಮೆಣಸಿನ ಕಾಯಿಗಳನ್ನು, ಕಲ್ಲಿನಮೇಲೆ ಕುಟ್ಟಿ, ಉಂಡೆ ಮಾಡಿ, ಕಟ್ಟಿಗೆಗೆ ಸೇರಿಸಿ, ಐಸ್ ಕ್ರೀಮ್ ನಂತೆ ಚೀಪುತ್ತಿದ್ದೆವು. ಅದೇ ನಮಗೆ ಸ್ವರ್ಗವಾಗಿತ್ತು
- ಪುಸ್ತಕಗಳಲ್ಲಿ ಪುಟ ಗಳ ನಡುವೆ ನವಿಲಿನ ಪುಚ್ಚ,(ಗರಿ) ಕೆಲವು ಗಿಡಗಳ ಎಲೆ ಮುಚ್ಚಿಇಡುವ ಚಟ ಇತ್ತು... ಇದರಿಂದ ಸರಸ್ವತಿ ದೇವಿಯ ಕೃಪೆ ಹೆಚ್ಚಾಗುವುದೆಂಬ ಹುಚ್ಚು ಭಾವನೆಇತ್ತು...
- ಹಳೆಯ ಪ್ಯಾಂಟಿನ ಬ್ಯಾಗ್ ನಮ್ಮದು ಅಥವಾ ಅಕ್ಕನ ಹರಿದ ಸೀರೆಯಿಂದ ತಯಾರಿಸಿದ ಶಾಲಾ ಬ್ಯಾಗ್ ನಮ್ಮದು.
- ಎಲ್ಲ ಪುಸ್ತಕ ಮತ್ತು ನೋಟ್ ಬುಕ್ ಗೆ ಕವರ್ ಹಾಕುವುದೇ ಒಂದು ಉತ್ಸವ ನಮಗೆ. ಹಳೆಯ ಕ್ಯಾಲೆಂಡರಿನ ಹಾಳೆಗಳೇ ಕವರಿಗೆ ಸಿಗುವ ಪೇಪರುಗಳಾಗಿದ್ದವು...
- ತಂದೆ ತಾಯಿಗೆ ಶಿಕ್ಷಣದ ಕುರಿತಂತೆ ಹೆಚ್ಚಿನ ಚಿಂತೆ ಇರಲಿಲ್ಲ. ಯಾರೂ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗುವ ಕನಸೂ ಕಂಡಿರಲಿಲ್ಲ.
- ವರ್ಷಕ್ಕೊಮ್ಮೆ, ಒಂದು ಥಾನು ಬಟ್ಟೆ ತಂದು, ಎಲ್ಲಾ ಮಕ್ಕಳಿಗೂ, ಒಂದೇ ತರಹಾ ಧಿರಿಸನ್ನು, ಹೊಲಿಸುತ್ತಿದ್ದರು. ಅದರಲ್ಲೇ ನಾವೆಲ್ಲಾ, ಖುಷಿ ಪಡೆಯುತ್ತಿದ್ದೆವು.
- ಸೈಕಲ್ ಸವಾರಿ, ಡಬ್ಬಲ್ ರೈಡ್, ಒಮ್ಮೊಮ್ಮೆ ತ್ರಿಬಲ್ ರೈಡ್ ಕೂಡ ಮಾಡುತ್ತಿದ್ದೆವು. ಎರಡೂ ಕೈ ಬಿಟ್ಟು ನಡೆಸಿ ಹೀರೋ ಅನ್ನಿಸಿ ಕೊಳ್ಳುವ ಛಲ,....
- ಅದೆಷ್ಟು ಸಲ ಮಾಸ್ಟರ್ ಕೈ ಏಟು ತಿಂದೆವೋ ನೆನಪಿಲ್ಲ, ಆದರೆ ,ಒಂದು ಸಲವೂ ಇದರ ಸುಳಿವು ತಂದೆ ತಾಯಿಗೆ ಗೊತ್ತಾಗದ ಹಾಗೆ, ನೋಡಿಕೊಳ್ಳುತ್ತಿದ್ದೆವು.
- ನಾವು ಎಂದೂ ನಮ್ಮ ಮಾತಾ ಪಿತೃಗಳಿಗೆ, I love you mom, I love you dad.. ಅಂತ ಅನ್ನಲೇ ಇಲ್ಲ,... ತಂದೆ ತಾಯಿಯರ, ಮೇಲಿದ್ದ ನಮ್ಮ ಪ್ರೀತಿಯನ್ನು ನಾವೆಂದೂ ವ್ಯಕ್ತ ಪಡಿಸಲೇ ಇಲ್ಲ. ಆಗ ಅದರ ಅರಿವೂ ನಮಗಿರಲಿಲ್ಲ.
- ಹುಟ್ಟಿದ ಹಬ್ಬ, ಅಂದರೆ ಏನೆಂದು, ಅಥವಾ ಈಗಿನ ಹಾಗೆ ಪಾಕೆಟ್ ಮನಿ, ಅಂದರೆ ಏನು ಅಂತ ನಮಗೆ ತಿಳಿದಿರಲೇ ಇಲ್ಲಾ,
- ಇಂದು ನಾವು ಬಹಳ ಮುಂದು ವರಿದಂತೆ ನಟನೆ ಮಾಡುತ್ತೇವೆ, ಯಾರಿಗೆ ಏನು ಬೇಕೋ ಅದನ್ನು ಗಳಿಸಿದ್ದೇವೆ,
- ಆದರೂ.. ಏನೋ ಕೊರತೆ ಮನವನ್ನು ಕೊರೆಯುತ್ತಲೇ ಇರುತ್ತದೆ... ನಾವು ಈ ಜೀವನದ ಓಟದಲ್ಲಿ, ಎಲ್ಲೋ ಕಳೆದು ಹೋಗಿದ್ದೇವೆ ಅನಿಸುತ್ತಿದೆ.
- ಆದರೆ ಒಂದು ಮಾತು ಮಾತ್ರ ನಿಜಾ,...
- ನಾವು ಬೆಳೆದಿದ್ದು, ವಾಸ್ತವಿಕ ಜಗತ್ತಿನಲ್ಲಿ, ಬಟ್ಟೆ ಗಳ ಇಸ್ತ್ರಿ ಬಗ್ಗೆ, ಕಾಲಿನ ಶೂ ಅಥವಾ ಚಪ್ಪಲಿ ನಾವೆಂದೂ ಧರಿಸಿಯೇ ಇರಲಿಲ್ಲಾ. ಈ ವಿಷಯದಲ್ಲಿ ನಾವು ಮೂರ್ಖರಾಗಿಯೇ ಉಳಿದೆವು. ಇದೆಲ್ಲಾ, ನಮ್ಮ ಹಣೆಬರಹಾ ಎಂದು ಒಪ್ಪಿಕೊಂಡು, ಅದೇ ಸರ್ಕಾರೀ ಶಾಲೆಗೆ ಖುಷಿಯಿಂದಲೇ ಹೋಗುತ್ತಿದ್ದೆವು. ಟಸ್ ಪುಸ್ ಇಂಗ್ಲೀಷ್ ನಮಗೆ ಗೊತ್ತೇ ಇರಲಿಲ್ಲಾ. ಇವಿತ್ತಿಗೂ ನಾವು ಕನಸು ಕಾಣುತ್ತೇವೆ. ಬಹುಶಃ ಈ ಕನಸುಗಳೇ ನಮಗೆ ಜೀವಿಸುವ ಸ್ಪೂರ್ಥಿ. ಈ ಆಸೆಯ ಕನಸುಗಳು ಇಲ್ಲದಿದ್ದರೆ, ಇದುವರೆಗೆ ನಾವು ಹೇಗೆ ಜೀವಿಸುತ್ತಿದ್ದೆವು? ಇದರ ಕಲ್ಪನೆ ಮಾಡುವದೂ ಕಷ್ಟ. ಮುಂದಿನ ಪೀಳಿಗೆಗೆ ಈ ವಿಷಯ ತಿಳಿ ಹೇಳುವದು ಅಸಾಧ್ಯದ ಮಾತು.. ನಾವು ಒಳ್ಳೆಯವರೋ, ಅಥವಾ ಕೆಟ್ಟವರೋ ಗೊತ್ತಿಲ್ಲ.... ಇಷ್ಟಂತೂ ನಿಜ... ನಾವೂ ಬದುಕಿ ಜೀವಿಸಿದೆವು, ಹೊಸ ಪೀಳಿಗೆಗೆ ಜನ್ಮ ಕೊಟ್ಟು ಬೆಳೆಸಿದೆವು...
***
ಅಂದು ಇಂದು
ಅಂದು, ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ ಒಂದು ಸ್ಥಳಕ್ಕೆ ಹೋಗತ್ತಿದ್ದೆವು.
ಇಂದು, ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ.
ಅಂದು, ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು.
ಇಂದು, ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ.
ಅಂದು, ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು.
ಇಂದು, ಒಂದು ಚೀಲ ತುಂಬಾ ಹಣ ಕೊಟ್ಟು ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ.
ಅಂದು, ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು.
ಇಂದು, ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ.
ಅಂದು, ಸಾವಿರ ಮಂದಿಗೆ ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಇಂದು , ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ.
ಅಂದು, ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು.
ಇಂದು, ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ ನಡೆಯುತ್ತೇವೆ.
ಅಂದು, ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು.
ಇಂದು, ತಿನ್ನಲಿಕ್ಕೊ ಸ್ಕರ ಜೀವಿಸುತ್ತಿದ್ದೇವೆ.
ಅಂದು , ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು.
ಇಂದು, ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ.
ಅಂದು, ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು.
ಇಂದು, ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ.
ಅಂದು , ಅಧ್ಯಾಪಕರ ಕೈಯಿಂದ ಪೆಟ್ಟು ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು.
ಇಂದು, ವಿದ್ಯಾರ್ಥಿಗಳ ಕೈಯಿಂದ ಪೆಟ್ಟು ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ.
ಬದಲಾಗಿರುವುದು ನಾವೇ, ಕಾಲವಲ್ಲ.
***
ಮನೆಯ ಹಳೇ ದೀಪಾವಳಿ ಕಣ್ಣಮುಂದೆ ಬಂದಂತಾಯಿತು Deepavali
ಈ ಸಂವತ್ಸರದ ದೀಪಾವಳಿ ಹಬ್ಬದ ಆರಂಭದ ದಿನ ಎಲ್ಲರಿಗೂ ಜಗತ್ತಿಗೂ ಶುಭವನ್ನು ಹಾರೈಸುತ್ತಾ....
ಇಂದು ನೀರು ತುಂಬುವ ಹಬ್ಬ ಹೌದೇ?? ಹೌದು.
ಆದರೆ ನೀರು ತುಂಬಲು
ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ
ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ.
ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ ಇಲ್ಲ.
ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ.
ಸೆಗಣಿ ಕದಡಿದ ನೀರು ಹಾಕಿ ಅಂಗಳ ಸಾರಿಸಿ ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ.
ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ ತಿರುವಿ, ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ .. ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ...
ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ
ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ ಸಾಲಾಗಿ ಕೂರಿಸಿ, ಹಣೆಗೆ ಕುಂಕುಮವಿಟ್ಟು, ಬೆಳ್ಳಿಯ ಬಟ್ಟಲಲ್ಲಿ ಎಣ್ಣೆ ತಂದು, ಹೂವಿನಿಂದ ನೆತ್ತಿಗೆ ಮೂರುಬಾರಿ ಎಣ್ಣೆ ಇಟ್ಟು, ನಂತರ ತಲೆಗೆಲ್ಲಾ ಎಣ್ಣೆ ಹಚ್ಚಿ ಟಪ ಟಪ ಬಡಿದು, ಕೈ ಕಾಲ್ಗಳಿಗೂ ಹಚ್ಚಿ ಎರಡೂ ಕೆನ್ನೆ, ಕೈ ಕಾಲ್ಗಳಿಗೂ ಎಣ್ಣೆಯ ಬೊಟ್ಟಿಟ್ಟು ಆರತಿ ಮಾಡುತ್ತಿದ್ದ... ಹಬ್ಬದ ನೀರು ಇಬ್ಬರಿಗೆ ಒಂದು ಚೊಂಬು ಎಂಬ ಗಾದೆಯಂತೆ ಶೇಖರಿಸಿಡಲು ಸಾಧ್ಯವಾಗುತ್ತಿದ್ದ ಮಿತ ಪ್ರಮಾಣದ ನೀರಿನಲ್ಲೇ ಎಲ್ಲರಿಗೂ ಸ್ವತಃ ಕೈಯಾರೆ, ಸೌದೆ ಉರಿಯಿಂದ ಕಾಯುತ್ತಿದ್ದ ಹಂಡೆಯಿಂದ ಬೋಸಿಯಲ್ಲಿ ತುಂಬಿಕೊಂಡು ನೀರು ಹಾಕುತ್ತಾ, ಒಳ್ಳೆಯ ವಿದ್ಯಾಭ್ಯಾಸ ಪಡ್ದು, ಆಯಸ್ಸು ಆರೋಗ್ಯ, ಐಶ್ವರ್ಯ ಸುಖ ಶಾಂತಿಯಿಂದ ನೂರ್ಕಾಲ ಬಾಳು ಮಗು ಎಂದು ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಿದ್ದ ಅಮ್ಮ...., *ಪೈಪೋಟಿಯ ಮೇಲೆ *ನನಗೆ ಮೊದಲು ನೀರು, ನನಗೆ ಮೊದಲು ನೀರು ಎಂದು ಜಗಳ ಕಾಯುತ್ತಿದ್ದ ನಾವು ಒಡಹುಟ್ಟಿದವರು.....
ಈಗಿನಂತೆ ೩೬೫ ದಿನವೂ ಯಾವ ಹೊತ್ತಿನಲ್ಲಿ ಬೇಕಾದರೂ ತಂದು ತಿನ್ನ ಬಹುದಾದ, ಒಬ್ಬಟ್ಟು ಆಂಬೊಡೆ ಕರಿಗಡುಬು ಚಕ್ಕುಲಿ,ಮುಚ್ಚೊರೆ ಕೋಡುಬಳೆ, ಅತ್ರಾಸ, ಎರೆಯಪ್ಪ ಇತ್ಯಾದಿ ಇತ್ಯಾದಿ ಇತ್ಯಾದಿ ...ಊಹೂಂ ....ಅಂದು ಹಬ್ಬದ ದಿನಗಳಲ್ಲಿ ಮಾತ್ರ ಮಾಡುತ್ತಿದ್ದುದರಿಂದ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲೊಂದು ವಿಶೇಷ ಭಕ್ಷ್ಯಗಳೂ ಆಗಿದ್ದವಲ್ಲವೇ??,
ಧೀಮಂತ ವ್ಯಕ್ತಿತ್ವದ ಆಜಾನುಬಾಹು ಅಪ್ಪ ತಮ್ಮ ಕಂಚಿನ ಕಂಠದಿಂದ ಮಂತ್ರಗಳನ್ನು ಹೇಳುತ್ತಿದ್ದರೆ ಒಂದು ಅಲೌಕಿಕ ವಾತಾವರಣ ಸೃಷ್ಟಿಯಾಗುತ್ತಿತ್ತು
ನಾವು ಮಕ್ಕಳು ಚಿನುಕುರುಳಿ ಚಟಚಟ ಗುಟ್ಟಿಸುತ್ತಾ ಮತಾಪು ಹಚ್ಚಿ ಹಿಗ್ಗುತ್ತಿದ್ದೆವು.
ಸಾಂಗವಾಗಿ, ಸಾವಕಾಶವಾಗಿ ಅಭಿಷೇಕ ಪೂಜೆ ನಡೆದು, ಮಾಡಿದ ಎಲ್ಲಾ ಅಡುಗೆಯ ಸ್ವಲ್ಪ ಭಾಗವನ್ನು ಅಮ್ಮ, ಕುಡಿ ಬಾಳೆ ಎಲೆಯಲ್ಲಿ ಪಾಂಗಿತವಾಗಿ ಬಡಿಸಿಟ್ಟು ತಂದರೆ, ಅಪ್ಪ ಮಂಡಲ
ಮಾಡಿ ಎಲ್ಲವನ್ನೂ ಹಣ್ಣು ಕಾಯಿ ತಾಂಬೂಲದ ಜೊತೆ ನೈವೇದ್ಯ ಮಾಡಿ....
ಚಟಪಟ ಪಟಾಕಿಯ ಆಟದಲ್ಲಿ ಮಗ್ನರಾಗಿದ್ದರೂ ಅಡುಗೆ ಮನೆಯಿಂದ ಹೊಮ್ಮುತ್ತಿದ್ದ ತರೆಹಾವರಿ ಭಕ್ಷ್ಯ ಭೋಜ್ಯಗಳ ಸುವಾಸನೆ ಮೂಗೊಡೆಯುತ್ತಿತ್ತು.....
ಮಂಗಳಾರತಿಗೆ ಬನ್ನಿ ಎಂಬ ಕರೆಗೇ ಕಾಯುತ್ತಿದ್ದ ನಾವೆಲ್ಲ ಒಳಗೆ ದುಡದುಡನೆ ಧಾವಿಸಿ ಬಂದು ..... ಅಪ್ಪನ ಉಚ್ಚ ಕಂಠದಿಂದ ಹೊಮ್ಮುತ್ತಿದ್ದ ಮಂತ್ರದೊಂದಿಗೆ ಮಂಗಳಾರತಿ ಮುಗಿದು.... ನಾವೆಲ್ಲ ಮಂಗಳಾರತಿ ತೆಗೆದುಕೊಂಡು.... ಅಪ್ಪ ದೀರ್ಘದಂಡ ನಮಸ್ಕರಿಸಿದ ಮೇಲೆ.... ನಾವು ಅಕ್ಕತಂಗಿಯರು, ಅಮ್ಮ, ತಮ್ಮನೂ ದನಿಗೂಡಿಸಿ ಒಂದಿಷ್ಟು ದೇವರ ನಾಮವನ್ನು ಹಾಡಿ.... ಅಕ್ಷತೆ ಹೂವು ಹಾಕಿ ನಮಸ್ಕರಿಸಿಯಾದ ಮೇಲೆ... ಅಪ್ಪ ಪ್ರಸಾದದ ಹೂ ಕೊಟ್ಟು ಆಶೀರ್ವದಿಸಿ.. ತೀರ್ಥ ಕೊಡುತ್ತಿದ್ದರು., ನಾವು ಕಣ್ಣಿಗೊತ್ತಿಕೊಂಡು ತೀರ್ಥ ಸೇವಿಸಿದ ತಕ್ಷಣ, ಅಮ್ಮ ಮಾಡಿಟ್ಟಿದ್ದ ಆಂಬೊಡೆಯನ್ನೊ ಬೋಂಡವನ್ನೊ ಒಂದೆರಡನ್ನು ಲಪಟಾಯಿಸಿ ಗಬಕ್ಕೆಂದು ಬಾಯಿಗೆ ಹಾಕಿಕೊಂಡರೆ..... ಆಹಾ!!!! ಆಹಾ!!!!...
ಕೋಸಂಬರಿ ಪ್ರಿಯರಾದ ನಾನು ಮತ್ತು ನನ್ನ ಅಕ್ಕ ಯಥಾಶಕ್ತಿ ಕೋಸಂಬರಿ ಸೇವೆಯನ್ನೂ ಮಾಡಿಕೊಳ್ಳುತ್ತಿದ್ದೆವು....
ಸಾಲಾಗಿ ಕುಡಿ ಬಾಳೆ ಎಲೆ ಹಾಕಿ, ಊಟದ ಚಾಪೆ ಹಾಕಿ ... ಅಭಿಗ್ಯಾರ ಮಾಡಿ... ಶಾತ್ರೊಕ್ತವಾಗಿ ಒಂದೊಂದೇ ವ್ಯಂಜನಗಳನ್ನು ಎಲೆಯ ಮೇಲೆ ಅವುಗಳ ನಿಯತ ಜಾಗದಲ್ಲೆ ಬಡಿಸಿ ಕಡೆಯಲ್ಲಿ ತೊವ್ವೆ ತುಪ್ಪ ಹಾಕಿ..... ಅಪ್ಪ ಪರಿಶಂಚನೆ ಮಾಡಿ, ಅನ್ನ ಬ್ರಹ್ಮನಿಗೆ ನಮಸ್ಕರಿಸಿ ಊಟ ಆರಂಭಿಸಿದ ನಂತರವೇ ನಮ್ಮ ಉದರಾಗ್ನಿ ಶಾಂತಿಯ, ರುಚಿ ರುಚಿ ಪಾಕದ ಸಂತೃಪ್ತ ಭೋಜನದ ರಸಮಯ ಆರಂಭ....
ಸಂಜೆ ದೀಪ ಬೆಳಗಿಸುವ ಸಂಭ್ರಮ.
ಬಲಿಪಾಡ್ಯಮಿಯ ದಿನ ಮರದ ಮಣೆಯ ಮೇಲೆ, ಸಗಣಿಯಲ್ಲಿ ಬಲೀಂದ್ರನ ಕೋಟೆಯ ವಿನ್ಯಾಸ ರಚಿಸಿ, ಚೆಂಡು ಹೂವು ಸೆಕ್ಕಿಸಿ, ಕೆರಕನನ್ನೂ ಸುತ್ತ ಯಥೇಚ್ಛವಾಗಿ ದೀಪಗಳನ್ನೂ ಇಟ್ಟು, ಬಲೀಂದ್ರನನ್ನು ಆವಾಹಿಸಿ, ಪೂಜಿಸಿ ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ ಬಲಿಚಕ್ರವರ್ತಿಯ ರಾಜ್ಯ ಮೂರು ಲೋಕದಲ್ಲೂ ಹರಡಲಿ ಎಂದು ಹೇಳಿ ನಮಸ್ಕರಿಸಿ ನಂತರ, ಬಲೀಂದ್ರನ ಎದುರಿಗೇ ಸುರುಸುರು ಬತ್ತಿ ಹಚ್ಚಿದ ನಂತರವೇ ಬೇರೆ ಢಮ್ ಢಮ್ ಢಮಾರ್ ಆಟಂ ಬಾಂಬ್, ಲಕ್ಷ್ಮೀ ಬಾಂಬ್, ಇತ್ಯಾದಿ ಪಟಾಕಿಗಳ, ಹೂವಿನ ಕುಂಡ, ಭೂಚಕ್ರ, ವಿಷ್ಣುಚಕ್ರಗಳನ್ನು ಹಚ್ಚಿ ಕುಣಿಯುವ ಸಂಭ್ರಮ
ಮನೆಯ ಒಂಭತ್ತು ಜನಕ್ಕೆ ಹೊಸ ಬಟ್ಟೆ ತರಲು ಸಾಧ್ಯವಾಗದಿದ್ದರೂ ಅದೊಂದು ಕೊರತೆ ಎಂದು ಯಾರಿಗೂ ಯಾವತ್ತೂ ಅನಿಸುತ್ತಿರಲಿಲ್ಲ.
🌟 ಹಬ್ಬ 🌟 ಎಂಬ ಪದದಲ್ಲೇ ಸಂಭ್ರಮ ಸಡಗರ ಸಂತೋಷ ತುಂಬಿ ತುಂಬಿ ತುಳುಕುತ್ತಿತ್ತಾಗಿ ಆಗೆಲ್ಲ ನಮಗೆ ಕೊರತೆಗಳ ನಡುವೆಯೂ ಹಬ್ಬ ಹಬ್ಬವೇ ಆಗಿ ಸಂತೋಷ, ಸಡಗರ ಸಂಭ್ರಮಗಳನ್ನೇ ಉಡುತ್ತಿದ್ದೆವು.ತೊಡುತ್ತಿದ್ದೆವು*.
ಒಳಗೂ ಹೊರಗೂ ಹಬ್ಬವನ್ನೇ ತುಂಬಿಕೊಂಡು ನಲಿಯುತ್ತಿದ್ದೆವು....
ಇಂದು......??? ಕಾಲಾಯ ತಸ್ಮೈ ನಮಃ... ಅಷ್ಟೇ
✍🏼ಗೊತ್ತಿಲ್ಲ
***
ಯುಗಾದಿ Yugadi
ತಲೆಗೆ ಎಣ್ಣೆ ಹಚ್ಚುವವರು, ಮೈಗೆ ಎಣ್ಣೆ ತೀಡುವವರು, ಹೊಸ ಬಟ್ಟೆ ಹಾಕಿ ನಲಿಯುವವರು, ಹೊಸ ವರ್ಷ ಸಂಭ್ರಮಿಸುವವರು, ನವ ಜೋಡಿಗಳು, ಹಳೆ ಬೇರುಗಳು, ಬಡತನದ ನೋವುಗಳು, ಸಿರಿತನದ ಖುಷಿಗಳು, ಅಗಲಿದವರ ನೆನಪುಗಳು, ಹುಟ್ಟಿದವರ ನಲಿವುಗಳು, ಯುಗಾದಿ ಎಂದರೆ ಅದೊಂದು ನೆನಪಿನಾ ಹಬ್ಬ.
ಸಿಹಿಯೂ ಇದೆ - ಕಹಿಯೂ ಇದೆ.
ಕಾಲನ ಪಯಣದಲಿ ಸಿಹಿ ಕಹಿಯಾಗಿ - ಕಹಿ ಸಿಹಿಯಾದ ಅನುಭವ
ಆಗ ಮಾವಂದಿರು ತಮ್ಮ ಒರಟು ಕೈಗಳಲ್ಲಿ ಪುಟ್ಟ ಬೆತ್ತಲೆ ಮೈಗೆ ಸುಡುವ ಎಣ್ಣೆ ತಿಕ್ಕುತ್ತಿದ್ದರೆ ಅಲ್ಲೇ ನರಕ ದರ್ಶನ.
ಈಗ Massage parlor ನಲ್ಲಿ ಬಾಡಿ ಮಸಾಜ್ ಮಾಡುತ್ತಾ ಎಷ್ಟೇ ಒತ್ತಿದರೂ ಅದೊಂದು ಸ್ವರ್ಗ ಸುಖ.
ಆಗ ಕಲ್ಲಿನಲಿ ಮೈ ಉಜ್ಜಿ ಬೀದಿಯ ಸುಡು ಬಿಸಿಲಿನಲ್ಲಿ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಿದ್ದರೆ ಅದೊಂದು ಯಾತನಾಮಯ ಸಮಯ.
ಈಗ ಹದ ಬೆರೆತ ಬಿಸಿ ನೀರಿನ ಬಾತ್ ಟಬ್ಬಿನಲಿ ಕುಳಿತು shower ನಲ್ಲಿ ಸ್ನಾನ ಮಾಡುತ್ತಿದ್ದರೆ ಸಮಯದ ಪರಿವೇ ಇರುವುದಿಲ್ಲ.
ಅಂದು ಹೊಸ ಬಟ್ಟೆಗಾಗಿ ತಿಂಗಳ ಮೊದಲೇ ರೋಮಾಂಚನದ ಕನಸಿನ ಅನುಭವವಾಗುತಿತ್ತು.
ಇಂದು ಈ ಸುಡು ಬೇಸಿಗೆಯಲಿ ಬಟ್ಟೆ ತೊಡಲೇ ಉತ್ಸಾಹವಿಲ್ಲ. ಕಪಾಟಿನೊಳಗಿಂದ ಇನ್ನೂ ಧರಿಸದ ಹೊಸ ಬಟ್ಟೆಗಳು ಗಹಗಹಿಸಿ ನಗುತ್ತಿವೆ.
ಅಂದು ಹೋಳಿಗೆಯ ಹೂರಣ ಕದ್ದು ತಿನ್ನಲು ನಾನಾ ಯೋಚನೆ - ನಾನಾ ಯೋಜನೆ.
ಇಂದು ತಟ್ಟೆಯ ಮುಂದೆ ಭಕ್ಷ್ಯಭೋಜನ. ತಿನ್ನಲು ಮಾತ್ರ ನಾನಾ ಭಯ.
ಅಂದು ನೆಂಟರು ಬಂದರೆ ಸಂಭ್ರಮವೋ ಸಂಭ್ರಮ. ಜನ ಹೆಚ್ಚಾದಷ್ಟೂ ಖುಷಿಯೋ ಖುಷಿ.
ಇಂದು ಅತಿಥಿಗಳು ಬಂದರೆ ಏನೋ ಕಸಿವಿಸಿ. ಅದಕ್ಕಿಂತ ಟಿವಿಯೇ ವಾಸಿ ಎನಿಸುತ್ತದೆ.
ಅಂದು ಶಿಸ್ತಿನ ಅಪ್ಪ ದೆವ್ವದಂತೆ ಕಾಣುತ್ತಿದ್ದರು.
ಇಂದು ಅಪ್ಪನೇ ದೇವರು.
ಅಂದು ಸತ್ಯ ಸರಳತೆ ಸ್ವಾಭಿಮಾನ ಮಾನವೀಯ ಮೌಲ್ಯಗಳೇ ಜೀವನ ಧ್ಯೇಯ.
ಇಂದು ಕಾರು ಬಂಗಲೇ ಒಡವೆ ಶ್ರೀಮಂತಿಕೆಗಳೇ ಬದುಕಿನ ಧ್ಯೇಯ.
ಅಂದಿಲ್ಲದ ಅರಿವು ಜ್ಞಾನ ಇಂದಿದೆ. ಅಂದಿಲ್ಲದ ಅನುಭವ ಇಂದಿದೆ.
ಅರಿತು ಬಾಳಿದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲ..
***
ಹಿಂದಿನ ಕಾಲದ ಶಿಕ್ಷೆಗೆ ಅರ್ಥ
ದಿನಗಳು ಕಳೆದವು...
ಹೇಗೆ ಕಳೆದವು.?
ಗೊತ್ತಾಗಲೇ ಇಲ್ಲ..
. ಬದುಕಿನ ಓಟದಲ್ಲಿ
ಉರುಳಿದವು ವರ್ಷಗಳು
. ಗೊತ್ತಾಗಲೇ ಇಲ್ಲ..
ಹೆಗಲೇರಿ ಆಡುತ್ತಿದ್ದ ಮಕ್ಕಳು
. ಹೆಗಲವರೆಗೆ ಬೆಳೆದದ್ದು
ಗೊತ್ತಾಗಲೇ ಇಲ್ಲ...
ಬಾಡಿಗೆಯ ಪುಟ್ಟ ಮನೆಯಿಂದ
ಸ್ವಂತ ಗೂಡಿನೊಳ ಹೊಕ್ಕದ್ದು
. ಗೊತ್ತಾಗಲೇ ಇಲ್ಲ..
ಸೈಕಲ್ನಲ್ಲಿ ' ಏರಿ' ಏರಿ
ಏದುಸಿರು ಬಿಡುತ್ತಿದ್ದ ನಾವು
ಯಾವಾಗ ಕಾರಿನಲ್ಲಿ ನುಸುಳಿದೆವೋ
ಗೊತ್ತಾಗಲೇ ಇಲ್ಲ...
ಅಮ್ಮ- ಅಪ್ಪನ ಹೊರೆಯಾಗಿದ್ದ ನಾವು ಮಕ್ಕಳ ಹೊರೆ ಯಾವಾಗ ಹೊತ್ತೆವೋ
ಗೊತ್ತಾಗಲೇ ಇಲ್ಲ..
. ಗಂಟೆಗಟ್ಟಲೇ ಮಲಗಿ ಗೊರಕೆ
ಹೊಡೆಯುತ್ತಿದ್ದ ನಮ್ಮ
ನಿದ್ರೆ ಯಾವಾಗ ಹಾರಿತೋ
ಗೊತ್ತಾಗಲೇ ಇಲ್ಲ..
ದಟ್ಟ ಕರಿ ಕೂದಲಿನಲ್ಲಿ ಬೆರಳಾಡಿಸಿ
ಸುಖಿಸಿದ ಕ್ಷಣಗಳು ಮನದಲ್ಲಿ
ಹಸಿರಾಗಿರುವ ಮೊದಲೇ.,
ನಮ್ಮ ಕೂದಲು ಬಿಳಿಯಾಗತೊಡಗಿದ್ದು
ಗೊತ್ತಾಗಲೇ ಇಲ್ಲ..
ಕೈಯಲ್ಲಿ ಅರ್ಜಿ ಹಿಡಿದು ಕಚೇರಿ, ಕಚೇರಿ
ಅಲೆದ ನಮಗೆ
ನಿವೃತ್ತಿಯ ಗಳಿಗೆ ಬಂದುದು
ಗೊತ್ತಾಗಲೇ ಇಲ್ಲ..
ಮಕ್ಕಳು, ಮಕ್ಕಳೆಂದು ಹಲುಬುತ್ತ,
ಗಳಿಸಿ ಉಳಿಸುವಲ್ಲಿ
ಆ ಮಕ್ಕಳೇ ದೂರವಾದದ್ದು
ಗೊತ್ತಾಗಲೇ ಇಲ್ಲ..
ನಾವು, ನಮ್ಮವರೆಂದು ಎದೆಯುಬ್ಬಿಸಿ
ಮೆರೆದ ನಮಗೆ ಅವರೆಲ್ಲ ದೂರಾಗಿ,
ಒಂಟಿಯಾದುದು
ಗೊತ್ತಾಗಲೇ ಇಲ್ಲ..
ನಮಗಾಗಿ ಏನಾದರೂ ಮಾಡಬೇಕೆಂದಾಗ
ದೇಹ ಸಹಕರಿಸುವದನ್ನು ನಿಲ್ಲಿಸಿದ್ದು
ಗೊತ್ತಾಗಲೇ ಇಲ್ಲ...
ಹೀಗೆ ಗೊತ್ತಾಗುವ ಮುನ್ನವೇ
ಗತಿಸುವ ಬದುಕಿನ
ಬಗೆಗೆ ಒಂದು ಬೆರಗಿನ
ನೋಟವಿರಲಿ*.!
ಜೊತೆಯಲಿರುವವರನ್ನು
ನೋಯಿಸದ ಮುದ ನೀಡುವ
ಮನಸಿರಲಿ..!
ಇಬ್ಬರ ಕಾಳಜಿಯನ್ನೂ ಚೆನ್ನಾಗಿ ತೆಗೆದುಕೊಳ್ಳಿ. ಹೀಗೆ ಗೊತ್ತಾಗುವ ಮುನ್ನವೇ ಗತಿಸುವ ಬದುಕಿನ ಬಗೆಗೆ ಒಂದು ಬೆರಗಿನ ನೋಟವಿರಲಿ ...!
ಎಷ್ಟೊಂದ ಚೆಂದಿತ್ತು ನಂಬಾಲ್ಯ
No comments:
Post a Comment