ನಾಗರ ಪಂಚಮಿಯ ನಂತರ ಬರುವ ಹಬ್ಬ ಸಿರಿಯಾಳ ಷಷ್ಠಿ. ಸಾಮಾನ್ಯವಾಗಿ ಈ ಹಬ್ಬವನ್ನ ಗಂಡು ಮಕ್ಕಳು ಇರುವ ತಾಯಂದಿರು ಮಾಡುತ್ತಾರೆ. ಈ ಪೂಜೆ ಮಾಡಿದರೆ ಮಕ್ಕಳ ಆಯಸ್ಸು ಹೆಚ್ಚಾಗುತ್ತದೆ ಎನ್ನಲಾಗುತ್ತದೆ
ಭಕ್ತ ಸಿರಿಯಾಳ:
ಒಂದಾನೊಂದು ಕಾಲದಲ್ಲಿ ಸಿರಿಯಾಳನೆಂಬ ಶ್ರೇಷ್ಠ ಶಿವಭಕ್ತನಿದ್ದನು. ಅವನ ಶಿವಭಕ್ತಿ ಲೋಕಪ್ರಸಿದ್ಧವಾಗಿತ್ತು. ಆದರೂ ಶಿವನಿಗೆ ಒಮ್ಮೆ ತನ್ನ ಭಕ್ತನನ್ನು ಪರೀಕ್ಷಿಸಬೇಕೆಂಬ ಮನಸಾಯಿತು. ಅದಕ್ಕಾಗಿ ಜಂಗಮನಂತೆ ವೇಷ ಮರೆಸಿಕೊಂಡು ಸಿರಿಯಾಳನ ಮನೆಗೆ ಬಂದನು. ತನಗೆ ಹಸಿವಾಗಿದೆ ಎಂದು ಉಣ್ಣಲು ಏನಾದರೂ ಕೊಡೆಂದೂ ಕೇಳಿದನು.
ಆ ಕ್ಷಣದಲ್ಲಿ ಸಿರಿಯಾಳನ ಮನೆಯಲ್ಲಿ ಹಿಡಿ ಅಕ್ಕಿಗೂ ತತ್ವಾರವಿತ್ತು. ಇತ್ತ ಜಂಗಮ ವೇಷದ ಶಿವನು ತನ್ನ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ “ಹಸಿವು… ಹಸಿವು…” ಎಂದು ಕ್ರೋಧಗೊಳ್ಳುತ್ತಿದ್ದನು.
ಆದರೆ ಮಾರುವೇಷದಲ್ಲಿದ್ದ ಶಿವ, ಆತನ ಮಗನ ತಲೆಮಾಂಸದ ಅಡುಗೆ ಮಾಡಿಸಿದರೆ ಮಾತ್ರ ಊಟ ಮಾಡುವುದಾಗಿ ಹೇಳುತ್ತಾನೆ. ಅತಿಥಿ ಸತ್ಕಾರದಲ್ಲೇ ದೇವರನ್ನು ಕಾಣುತಿದ್ದ ಶಿರಿಯಾಳನು ಕೊಂಚವೂ ಅಳುಕದೆ ನೆರವೇರಿಸುತ್ತಾನೆ.
ಸಿರಿಯಾಳ ಮತ್ತು ಆಕೆಯ ಪತ್ನಿ ಚಾಂಗುಣಿದೇವಿ ಮಗನನ್ನು ಕೊಂದು, ಒರಳಿನಲ್ಲಿ ಆತನ ತಲೆಯನ್ನು ಶಿವನನ್ನು ಧ್ಯಾನಿಸುತ್ತಾ ಜಜ್ಜಿ,ಬೇಯಿಸಿ, ಅಡುಗೆ ಮಾಡಿ, ಅದನ್ನೇ ಜಂಗಮನಿಗೆ ಉಣಬಡಿಸಿದರು.
ಊಟಕ್ಕೆ ತನ್ನ ಜೊತೆ ಸಿರಿಯಾಳನೂ
ಕೂಡ ಬೇಕೆಂದು ಜಂಗಮನು ಒತ್ತಾಯಿಸಿದಾಗ ಸ್ವಂತ ಮಗನ ದೇಹದ ಮಾಂಸವನ್ನು ಹೇಗೆ ತಿನ್ನಲಿ ಎಂದು ಯೋಚಿಸುತ್ತ ಹಿಂದೇಟು ಹಾಕುತ್ತಿದ್ದ ಸಿರಿಯಾಳನನ್ನು ಪತ್ನಿ ಚಾಂಗುಣಿದೇವಿ ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿಸಲುಹಿದ ಅವನನ್ನು ಅತಿಥಿ ಸೇವೆಗೋಸ್ಕರ ಈಗ ತಾನೆ ಒರಳಿನಲ್ಲಿ ಜಜ್ಜಿ ಅಡುಗೆ ಮಾಡಿದ್ದೇನೆ ಇಷ್ಟು ಸಹಿಸಿಕೊಂಡು ನೀವು ಅತಿಥಿಯ ಜೊತೆ ಊಟಕ್ಕೂ ಕೂಡಿರಿ ಎಂದು ಬೇಡಿಕೊಳ್ಳುತ್ತಾಳೆ ಅದಕ್ಕೆ ಒಪ್ಪಿಗೆ ಸೂಚಿಸಿ ಸಿರಿಯಾಳ ಊಟಕ್ಕೆ ಕೂಡುತ್ತಾನೆ,
ಸಂತೃಪ್ತನಾಗಿ ಉಂಡ ಜಂಗಮನು ಸಿರಿಯಾಳ & ಆಕೆಯ ಧರ್ಮಪತ್ನಿ ಚಾಂಗುಣಿ ದೇವಿಯನ್ನು ಅತಿಥಿ ದೇವೋಭವ ಎಂದು ತಿಳಿದು ಅತಿಥಿಸೇವೆಯನ್ನು ಮಾಡುತ್ತಿರುವ ಇವರಿಬ್ಬರಿಗೂ ಕೊಂಡಾಡಿದನು. ನಂತರದಲ್ಲಿ ಸಂತುಷ್ಟನಾಗಿ “ಅತಿಥಿಗಳನ್ನು ಸಂತೈಸುವವನೇ ಶಿವಭಕ್ತ”ನೆಂದು ಘೋಷಿಸಿ, ಗಂಡ-ಹೆಂಡತಿ ಇಬ್ಬರಿಗೂ ತನ್ನ ನಿಜ ಶಿವ ರೂಪವನ್ನು ತೋರಿಸಿ ಆಶೀರ್ವಾದ ನೀಡಿದನು. ಅವನ ಮಗನನ್ನೂ ಬದುಕಿಸಿಕೊಟ್ಟನು.
ಪ್ರತೀ ಷಷ್ಠೀಯಂದು ಸುಬ್ರಹ್ಮಣ್ಯಸ್ವಾಮಿಗೆ ಪೂಜಿಸುವುದು ಸಾಮಾನ್ಯ. ಆದರೆ ಶ್ರಾವಣ ಮಾಸದಲ್ಲಿ ಸಂಭವಿಸುವ ಷಷ್ಠಿಯಂದು ಶಿವ ಭಕ್ತ ಶಿರಿಯಾಳನ ಜ್ಞಾಪಕಾರ್ಥವಾಗಿ ಶಿರಿಯಾಳಷಷ್ಠಿಯನ್ನು ಆಚರಿಸಲಾಗುತ್ತದೆ.
ಸಿರಿಯಾಳ ಷಷ್ಟಿ ಆಚರಣೆ ಮತ್ತು ಮಹತ್ವ.
ಸಿರಿಯಾಳ ಷಷ್ಠಿ – ಶ್ರಾವಣ ಮಾಸ ಶುಕ್ಲ ಪಕ್ಷದಲ್ಲಿ ಬರುವ ಸಿರಿಯಾಳ ಷಷ್ಠೀಯು ಅತ್ಯಂತ ಪವಿತ್ರವಾದಂತಹ ದಿನ. ಇಂದು ಸಿರಿಯಾಳ ಷಷ್ಠಿ ಸುಬ್ರಮಣ್ಯನ ಆರಾಧನೆ ವಿಶೇಷ ವಟುವಿನ ಆರಾಧನೆ.
ಸಿರಿಯಾಳ ಷಷ್ಠಿ ಪೂಜಾ ವಿಧಿವಿಧಾನ:
ಮಣ್ಣಿನಲ್ಲಿ ಸಿರಿಯಾಳನನ್ನು (ವಿರುದ್ಧ ದಿಕ್ಕಿನಲ್ಲಿ ತಲೆಮಾಡಿ ಮಲಗಿರುವ ಎರಡು ಹಸುಳೆಗಳ ಪ್ರತಿಕೃತಿ) ಮಾಡಿ ಷೋಡಶೋಪಚಾರಗಳಿಂದ ಪೂಜಿಸಿ ಮೊಸರನ್ನವನ್ನೂ ಕಡುಬನ್ನೂ ನೈವೇದ್ಯ ಮಾಡುತ್ತಾರೆ. ಅನಂತರ ಚಿಕ್ಕ ಮಕ್ಕಳಿರುವ ಮನೆಗೆ ಬುತ್ತಿ ಮತ್ತು ಕಡುಬು ಬೀರಿ ಬರುವುದು ವಾಡಿಕೆ.
ಪ್ರಾತಃ ಕಾಲದಲ್ಲಿ ಮಂತ್ರ ಪಠಿಸುವುದರಿಂದ ಯಾವುದೇ ಜನ್ಮದ ಪಾಪವನ್ನು ಕಳೆದುಕೊಳ್ಳಬಹುದಾಗಿದೆ , ಜೊತೆಗೆ ಮಾಂತ್ರಿಕ ಭಾದೆ, ಆರೋಗ್ಯ ವೃದ್ಧಿ, ವಿಜಯ ಪ್ರಾಪ್ತಿ ಸಕಲವು ಸಿದ್ದಿ ಸುತ್ತದೆ.
1).ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
2. ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್
3. ಅನಂತಂ ವಾಸುಕೀಂ ಶೇಷಂ ಪದ್ಮನಭಂ ಚ ಕಂಬಲಂ
ಶಂಖಪಾಲಂ ದಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ
ಸಿರಿಯಾಳ ಷಷ್ಠಿ: ಶ್ರಾವಣ ಶುದ್ದಷಷ್ಟೀಯು ಶಿವಭಕ್ತ ಸಿರಿಯಾಳನ ಸವಿನೆನಪಿನ ದಿನ.ಇವನೊಬ್ಬ ನಿಷ್ಠಾವಂತ ಭಕ್ತನಾಗಿದ್ದು ಈತನ ಕಥೆ ಶೈವ-ವೀರಶೈವದಲ್ಲಿ ಬಹುಮುಖವಾಗಿ ಕಾಣಿಸುತ್ತದೆ.ಗಂಡು ಮಕ್ಕಳನ್ನು ಹೆತ್ತ ತಾಯಿ ಈ ವ್ರತನ್ನು ಮಕ್ಕಳ ಆಯುಸ್ಸು,ಆರೋಗ್ಯ ಐಶ್ವರ್ಯ ಮತ್ತು ಕೀರ್ತಿಯ ಅಭಿವೃದ್ದಿಗಾಗಿ ಮಾಡುತ್ತಾರೆ.ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿಯ ದಿವಸ ಈ ವ್ರತವನ್ನು ಮಾಡಲಾಗುತ್ತದೆ.
॥ಸರ್ವೆಜನಃ ಸುಖಿನೋಭವಂತು॥
***
🙏🏻 ಶಿರಿಯಾಳ ಷಷ್ಠಿ ಕಥೆ🙏🏻
ಕೆಲವು ಕಾಲಗಳ ಹಿಂದೆ ಗ್ರಾಮದಲ್ಲೊಬ್ಬ ಬ್ರಾಹ್ಮಣನಸಂಸಾರ
ಇರುತಿರಲು| ತಂದೆ ತಾಯಿಗಳು ಇಬ್ಬರು ಮಕ್ಕಳೊಂದಿಗೆ
ಅವ್ವ ತಾತ ಕೂಡ ಇರತಿರಲು||ಪಲ್ಲ||
ಊರಿಗೆ ದೊಡ್ಡ ಕೆರೆಯ ಕಟ್ಟಿಸಿರಲು ನೀರು ರಭಸದಿ ತೂಬಿ
ನಿಂದ ಹರಿಯೆ| ಏನು ಮಾಡಲು ತೋಚದೆ ತಾತ ಚಿಂತಾಕ್ರಾಂತ
ನಾಗಿರುತಿರಲು| ಸ್ವಪ್ನದಿ ಪೇಳಿದ ಸ್ವಾಮಿಯು ತಾನು ಚೊಚ್ಚಿಲ
ಮಗನ ತೂಬಿನಲ್ಲಿ ಮಲಗಿಸೆ| ನೀರಿನ ರಭಸಕಡಮೆಯಾಗು
ವುದೆಂದು ನಿರ್ಧಾರವಾಗಿ ಪೇಳಲು||೧||
ಬೆಳಗಾಗಲೆದ್ದು ವನಿತೆಯರು ಮನೆಯ ಕೆಲಸಗಳ ಮಾಡುತ್ತಿರೆ
ಯಾರು ನೋಡದಲೆ ಹಿರಿಯ ತಾತನು ತಾನು ಮೊಮ್ಮಗನನ್ನ
ಎತ್ತಿಕೊಂಡು| ಕೆರೆಯ ಬಳಿಗೆ ಶಾಲಿನಲ್ಲಿ ಸುತ್ತಿದ ಮಗುವನ್ನ
ತೂಬಿನಲ್ಲಿ ಮಲಗಿಸೆ| ಹರಿಯುತಿದ್ದ ನೀರಿನ ರಭಸವು ಹಿಂದ
ಲೆ ಕಡಮೆಯಾಗಲು||೨||
ಮನದಲ್ಲಿ ಚಿಂತಿಸುತ ಬಂದನು ತಾನು ವಿಷಾದ ಮನಸಿನಿಂದ
ಸೊಸೆಯು ಮೊಸರನ್ನ ಕಲಸಿ ಉಪ್ಪಿನಕಾಯಿ ಗಿಲಗಂಚಿತಂದು
ಶಿರಿಯಾಳ ಬಾರೋ ಎಂದು ಕೂಗಲು ತಾತ ಆಶ್ಚರ್ಯ ಪಡು
ತಿರೆ| ಹಿಂದಲೆ ಓಡಿಬಂದನು ಶಿರಿಯಾಳ ಅಮ್ಮನಕರೆಗೆ
ಓಗೊಟ್ಟು||೩||
ಶ್ರಾವಣಮಾಸದಶುಧ್ಧ ಅಷ್ಟಮಿ ದಿನದಿಶಿರಿಯಾಳಷಷ್ಟಿ ಎಂದು| ಮಣ್ಣಿನಿಂದ ತೊಟ್ಟಿಲು ಮಾಡಿ ಕೂಸಿನ ಗೊಂಬಿ ಮಲ
ಗಿಸಿ| ಅರಿಷಿಣ ಕುಂಕುಮ ಹೂವು ಗೆಜ್ಜೆವಸ್ತ್ರದಿ ಭಕ್ತಿಂದ ಪೂ
ಜಿಸಿ| ಹಣ್ಣು ಕಾಯಿ ನೈವೇದ್ಯಮಾಡಿ ಸಂಭ್ರಮದಿ ಹಬ್ಬ ಆಚ
ರಿಸಿ||೪||
ಮೊಸರು ಅನ್ನವು ಉಪ್ಪಿನಕಾಯಿ ಗಿಲಗಂಚಿಗಳನೆ ಮಾಡಿ
ಶ್ಯಾವಿಗೆ ಪಾಯಸದೊಡನೆ ಕೆಲವು ಮನೆಗಳಿಗೆ ಬೀರಿಸಬೇ
ಕೆಂದು| ಮದುವೆ ಆದ ಹೆಣ್ಣುಮಕ್ಕಳು ತಪ್ಪದೆ ಆಚರಿಸಬೇ
ಕೆಂದು| ಮಧ್ವೇಶಕೃಷ್ಣನ ದಯವು ದೊರಕುವುದೆಂದು ಹಿರಿ
ಯರು ಶಿಸ್ತಿಲಿ ಪೇಳುವರು||೫||
***
ನಾಗರ ಪಂಚಮಿಯಷ್ಟೇ ಅಲ್ಲ…
#SIRIYALA #shashti*
#ಸಿರಿಯಾಳ #ಷಷ್ಠಿ #ವಿಶೇಷತೆಗಳೇನು…?
ನೀವು ಮಾಡಲೇಬೇಕಾದ ಕರ್ಮಗಳು
ಉತ್ಸವಗಳು ಭಾರತೀಯ ಜನಜೀವನದ ಅವಿಭಾಜ್ಯ ಅಂಗ. ವರ್ಷಪೂರ್ತಿ ಆಚರಿಸುವಷ್ಟು ಹಬ್ಬ ಹರಿದಿನಗಳು ನಮ್ಮಲ್ಲಿವೆ. ಬೇರೆ ಯಾವ ದೇಶದ ಜನಜೀವನದಲ್ಲೂ ಈ ವೈಶಿಷ್ಟ್ಯವನ್ನು ನಾವು ಕಾಣಲಾರೆವು. ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ ಹಿನ್ನೆಲೆ ಈ ಹಬ್ಬಗಳಿಗಿದೆ. ಹಬ್ಬಗಳನ್ನು ಧಾರ್ಮಿಕ ಹಬ್ಬಗಳು, ನಾಡಹಬ್ಬಗಳು, ರಾಷ್ಟ್ರೀಯ ಹಬ್ಬಗಳು, ಜಯಂತಿ, ಉತ್ಸವಗಳು ಎಂದು ಸ್ಥೂಲವಾಗಿ ವಿಂಗಡಿಸಬಹುದು.
ಹಿಂದು ಧರ್ಮ ಪ್ರತಿಯೊಬ್ಬನಿಗೂ ನಿತ್ಯಕರ್ಮ, ನೈಮಿತ್ತಿಕ ಕರ್ಮ, ಕಾಮ್ಯಕರ್ಮ, ಎಂದು ಮೂರುವಿಧವಾದ ಕರ್ಮಗಳನ್ನು ವಿಧಿಸಿದೆ.
1),ನಿತ್ಯಕರ್ಮಗಳೆಂದರೆ ನಾವು ದಿನನಿತ್ಯ ಮಾಡಬೇಕಾದ ಪೂಜೆ, ಪ್ರಾರ್ಥನೆ, ಧ್ಯಾನ, ಸಂಧ್ಯಾವಂದನೆ ಇತ್ಯಾದಿ.
2),ನೈಮಿತ್ತಿಕ ಕರ್ಮಗಳೆಂದರೆ ಹಬ್ಬ-ಹರಿದಿನ, ಜಯಂತಿ-ಉತ್ಸವಗಳನ್ನು ನಿಮಿತ್ತಿವಾಗಿ ಇಟ್ಟುಕೊಂಡು ಆಚರಿಸುವುದು.
3),ಕಾಮ್ಯಕರ್ಮಗಳೆಂದರೆ ನಮ್ಮ ಮನಸ್ಸಿನ ಇಚ್ಛಾಪೂರ್ತಿಗಾಗಿ ಮಾಡುವ ವ್ರತ, ಯಜ್ಞ, ಇತ್ಯಾದಿ.
ನಿರಂತರವಾಗಿ ಪ್ರತಿಯೊಬ್ಬನನ್ನೂ ಸುಸಂಸ್ಕೃತನನ್ನಾಗಿ ಮಾಡುವ ಮನಶ್ಶಾಸ್ತ್ರಕ್ಕೆ ಅನುಗುಣವಾದ ವೈಜ್ಞಾನಿಕ ವಿಚಾರಗಳ ತಳಹದಿಯಮೇಲೆ ಈ ಕರ್ಮಗಳ ವಿಧಿ-ವಿಧಾನಗಳು ನಿಂತುಕೊಂಡಿವೆ.
ಕೃತಜ್ಞತಾ ಸಮರ್ಪಣೆ ಭಾರತೀಯರ ವೈಶಿಷ್ಟ್ಯ. ಹಬ್ಬಗಳಂತಯೇ ಹಲವು ಮಹಾತ್ಮಾರ ಜಯಂತಿ ಉತ್ಸವಗಳನ್ನು, ಮನೆಗಳಲ್ಲಿ ಹಿರಿಯರ ಶ್ರಾದ್ಧಾದಿ ಕರ್ಮಗಳನ್ನೂ ಇದೇ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದೆ.
ಸಿರಿಯಾಳ ಷಷ್ಠಿ – ಶ್ರಾವಣ ಮಾಸ ಶುಕ್ಲ ಪಕ್ಷದಲ್ಲಿ ಬರುವ ಸಿರಿಯಾಳ ಷಷ್ಠೀಯು ಅತ್ಯಂತ ಪವಿತ್ರವಾದಂತಹ ದಿನ. ಇಂದು ಸಿರಿಯಾಳ ಷಷ್ಠಿ ಸುಬ್ರಮಣ್ಯನ ಆರಾಧನೆ ವಿಶೇಷ ವಟುವಿನ ಆರಾಧನೆ ಕೆಲವರು 5 ತರಹದ ಮಾಡಿ ವಟುಗಳಿಗೆ ಕೊಡುವ ವಾಡಿಕೆ.
ಸಿರಿಯಾಳ ಷಷ್ಠಿ ಪೂಜಾ ವಿಧಿವಿಧಾನ:
ಮಣ್ಣಿನಲ್ಲಿ ಸಿರಿಯಾಳನನ್ನು (ವಿರುದ್ಧ ದಿಕ್ಕಿನಲ್ಲಿ ತಲೆಮಾಡಿ ಮಲಗಿರುವ ಎರಡು ಹಸುಳೆಗಳ ಪ್ರತಿಕೃತಿ) ಮಾಡಿ ಷೋಡಶೋಪಚಾರಗಳಿಂದ ಪೂಜಿಸಿ ಮೊಸರನ್ನವನ್ನೂ ಕಡುಬನ್ನೂ ನೈವೇದ್ಯ ಮಾಡುತ್ತಾರೆ. ಅನಂತರ ಚಿಕ್ಕ ಮಕ್ಕಳಿರುವ ಮನೆಗೆ ಬುತ್ತಿ ಮತ್ತು ಕಡುಬು ಬೀರಿ ಬರುವುದು ವಾಡಿಕೆ.
ಪ್ರಾತಃ ಕಾಲದಲ್ಲಿ ಮಂತ್ರ ಪಠಿಸುವುದರಿಂದ ಯಾವುದೇ ಜನ್ಮದ ಪಾಪವನ್ನು ಕಳೆದುಕೊಳ್ಳಬಹುದಾಗಿದೆ , ಜೊತೆಗೆ ಮಾಂತ್ರಿಕ ಭಾದೆ, ಆರೋಗ್ಯ ವೃದ್ಧಿ, ವಿಜಯ ಪ್ರಾಪ್ತಿ ಸಕಲವು ಸಿದ್ದಿ ಸುತ್ತದೆ.
1).ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್
ಅನಂತಂ ವಾಸುಕೀಂ ಶೇಷಂ ಪದ್ಮನಭಂ ಚ ಕಂಬಲಂ
ಶಂಖಪಾಲಂ ದಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ
ಪೌರಾಣಿಕ ಹಿನ್ನಲೆ
ಒಂದಾನೊಂದು ಕಾಲದಲ್ಲಿ ಸಿರಿಯಾಳನೆಂಬ ಶ್ರೇಷ್ಠ ಶಿವಭಕ್ತನಿದ್ದನು. ಅವನ ಶಿವಭಕ್ತಿ ಲೋಕಪ್ರಸಿದ್ಧವಾಗಿತ್ತು. ಆದರೂ ಶಿವನಿಗೆ ಒಮ್ಮೆ ತನ್ನ ಭಕ್ತನನ್ನು ಪರೀಕ್ಷಿಸಬೇಕೆಂಬ ಮನಸಾಯಿತು. ಅದಕ್ಕಾಗಿ ಜಂಗಮನಂತೆ ವೇಷ ಮರೆಸಿಕೊಂಡು ಸಿರಿಯಾಳನ ಮನೆಗೆ ಬಂದನು. ತನಗೆ ಹಸಿವಾಗಿದೆ ಎಂದು ಉಣ್ಣಲು ಏನಾದರೂ ಕೊಡೆಂದೂ ಕೇಳಿದನು.
ಆ ಕ್ಷಣದಲ್ಲಿ ಸಿರಿಯಾಳನ ಮನೆಯಲ್ಲಿ ಹಿಡಿ ಅಕ್ಕಿಗೂ ತತ್ವಾರವಿತ್ತು. ಇತ್ತ ಜಂಗಮ ವೇಷದ ಶಿವನು ತನ್ನ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ “ಹಸಿವು… ಹಸಿವು…” ಎಂದು ಕ್ರೋಧಗೊಳ್ಳುತ್ತಿದ್ದನು. ಕೊನೆಗೆ ದಿಕ್ಕು ತೋಚದೆ ಸಿರಿಯಾಳನು ತನ್ನ ಮಗನನ್ನು ಕೊಂದು, ಬೇಯಿಸಿ, ಅಡುಗೆ ಮಾಡಿ, ಅದನ್ನೇ ಜಂಗಮನಿಗೆ ಉಣಬಡಿಸಿದನು.
ಸಂತೃಪ್ತನಾಗಿ ಉಂಡ ಜಂಗಮನು ಸಿರಿಯಾಳನ ಅತಿಥಿಸೇವೆಯನ್ನು ಕೊಂಡಾಡಿದನು. ನಂತರದಲ್ಲಿ ಸಂತುಷ್ಟನಾಗಿ “ಅತಿಥಿಗಳನ್ನು ಸಂತೈಸುವವನೇ ಶಿವಭಕ್ತ”ನೆಂದು ಘೋಷಿಸಿ, ಸಿರಿಯಾಳನಿಗೆ ಆಶೀರ್ವಾದ ನೀಡಿದನು. ಅವನ ಮಗನನ್ನೂ ಬದುಕಿಸಿಕೊಟ್ಟನು.
ಸುಬ್ರಹ್ಮಣ್ಯ ಅಷ್ಟೋತ್ತರ ಶತ ನಾಮಾವಳಿ
ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರ ಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಳಾಯ ನಮಃ
ಓಂ ಕ್ರುತ್ತಿಕಾಸೂನವೇ ನಮಃ
ಓಂ ಸಿಖಿವಾಹಾಯ ನಮಃ
ಓಂ ದ್ವಿಷನ್ಣೇ ತ್ರಾಯ ನಮಃ || 10 ||
ಓಂ ಶಕ್ತಿಧರಾಯ ನಮಃ
ಓಂ ಫಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರ್ತ್ರೇ ನಮಃ
ಓಂ ರಕ್ಷೋಬಲವಿಮರ್ದ ನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸ್ಸುರಕ್ಷ ಕಾಯ ನಮಃ
ಓಂ ದೀವಸೇನಾಪತಯೇ ನಮಃ
ಓಂ ಪ್ರಾಙ್ಞಾಯ ನಮಃ || 20 ||
ಓಂ ಕೃಪಾಳವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚ ದಾರಣಾಯ ನಮಃ
ಓಂ ಸೇನಾನಿಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ || 30 ||
ಓಂ ಶಿವಸ್ವಾಮಿನೇ ನಮಃ
ಓಂ ಗುಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತ ಶಕ್ತಿಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತಿಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಸರೋದ್ಭೂತಾಯ ನಮಃ
ಓಂ ಅಹೂತಾಯ ನಮಃ || 40 ||
ಓಂ ಪಾವಕಾತ್ಮಜಾಯ ನಮಃ
ಓಂ ಜ್ರುಂಭಾಯ ನಮಃ
ಓಂ ಪ್ರಜ್ರುಂಭಾಯ ನಮಃ
ಓಂ ಉಜ್ಜ್ರುಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವ ರ್ಣಾಯ ನಮಃ || 50 ||
ಓಂ ಪಂಚ ವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಆಹಾರ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕಾರಾಯ ನಮಃ
ಓಂ ವಟವೇ ನಮಃ || 60 ||
ಓಂ ವಟವೇಷ ಭ್ರುತೇ ನಮಃ
ಓಂ ಪೂಷಾಯ ನಮಃ
ಓಂ ಗಭಸ್ತಿಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಳಾಧರಾಯ ನಮಃ
***
ತಂ ನಾರಸಿಂಹಂ ನಮಾಮಿ !
ಶ್ರೀ ಗುರುಭ್ಯೋ ನಮಃ !
ಇವತ್ತು ನಾಗರಪಂಚಮಿಯ ಮರುದಿನ ಅಂದರೆ ಇವತ್ತಿನ ದಿನವನ್ನು ಮಕ್ಕಳ ಹಬ್ಬ ಅಂತ ಕರಿತಾರೆ. ಯಾಕೆ ಕರಿತಾರೆ? ಇದು ಸ್ತ್ರೀಯರಿಗೆ ಸಂಬಂಧಪಟ್ಟ ಹಬ್ಬ .
ಯಾಕೆ ಮಕ್ಕಳ ಹಬ್ಬ ಅಂತ ಕರಿತಾರೆ? ಅಂದರೆ ಅದಕ್ಕೊಂದು ಕಥೆ ಇದೆ ಪುರಾಣದಲ್ಲಿ ಬಂದಂಥ ಕಥೆ.
ಏನೆಂದರೆ ಹಿಂದೆ ಒಂದು ಸಾತ್ವಿಕ ಕುಟುಂಬ ಇತ್ತು. ಅದರಲ್ಲಿ ಒಬ್ಬಳು ಹೆಣ್ಣುಮಗಳು ಬೆಳೆತಾಯಿದ್ಲು. ಅವಳ ಹೆಸರು ನಾಗಮ್ಮ ಅಂತ. ಅವಳ ಯೋಗ್ಯವಾದ ವಯಸ್ಸಿನಲ್ಲಿ ಯೋಗ್ಯವಾದ ವರನಿಗೆ ಕೊಟ್ಟು ಮದುವೆ ಮಾಡಿದರು. ಅವಳಿಗೆ ಕಾಲಾಂತರದಲ್ಲಿ ಒಂದು ಮಗುವೂ ಆಯಿತು. ಆ ಮಗು ಬೆಳೆತಾಯಿತ್ತು. ಆಗ ನಾಗರಪಂಚಮೀ ಹಬ್ಬ ಬಂತು. ಅದಕ್ಕೆ ಅವಳಿಗೆ (ನಾಗಮ್ಮಳಿಗೆ) ತವರುಮನೆಯಿಂದ ಕರೆ ಬಂತು. ಸರಿ ಹಬ್ಬಕ್ಕೆ ಒಂದೇ ದಿನ ಅಲ್ವಾ ನಾನೊಬ್ಬಳೇ ಹೋದರೆ ಆಯ್ತು ಅಂತ ಮಗುವನ್ನು ಬಿಟ್ಟು ಒಬ್ಬಳೇ ಹೋದಳು. ಅವಳು ಹಬ್ಬ ಆಚರಿಸ್ತಾಯಿರುವಾಗ ಈ ಕಡೆ ನಾಗಮ್ಮನ ಅತ್ತೆಯ ಊರಿನಲ್ಲಿ ನೀರೇ ಇಲ್ಲದ ಕಾರಣ ಒಂದು ಕೆರೆಯನ್ನು ಕಟ್ಟಿಸಬೇಕು ಅಂತ ನಾಗಮ್ಮನ ಮಾವ ಅಂದುಕೊಂಡು ಅದಕ್ಕೆ ಜ್ಯೋತಿಷ್ಕರಿಗೆ ಕೇಳಿದಾಗ ಒಂದು ಮಗುವನ್ನು ಬಲಿ ಕೊಟ್ಟರೆ ನಿಮ್ಮ ಕೆರೆಯಲ್ಲಿ ನೀರು ಬರುತ್ತೆ. ಇಲ್ಲಾಂದರೆ ಇಲ್ಲ ಅಂದರು. ಸರಿ ಅಂತ ಹೇಗೂ ನಾಗಮ್ಮ ಇರಲಿಲ್ಲ ಅವಳ ಮಗುವನ್ನೇ ಬಲಿ ಕೊಟ್ಟರು. ಕೆರೆಯಲ್ಲಿ ನೀರು ತುಂಬಿತು. ಈ ಕಡೆ ನಾಗಮ್ಮ ಪಂಚಮೀಹಬ್ಬ ಮುಗಿಸಿ ಬಿದರಿನಬುಟ್ಟಿಯಲ್ಲಿ ತನ್ನ ತವರುಮಮನೆಯಿಂದ ಕರ್ಚಿಕಾಯಿ, ಶ್ಯಾವಿಗೆಪಾಯಸ, ಮೊಸರುಬುತ್ತಿ , ಚಕ್ಕುಲಿ, ನುಚ್ಚು ಮೊದಲಾದವುಗಳನ್ನು ಇಟ್ಟುಕೊಂಡು ಮನೆಗೆ ಬಂದು ನೋಡ್ತಾಳೆ. ತನ್ನ ಮಗು ಕಾಣೋದಿಲ್ಲ. ಆಗ ಕೇಳ್ತಾಳೆ ಮಾವ ನಡೆದ ವಿಷಯ ಹೇಳ್ತಾನೆ. ಇವಳು ಅಳುತ್ತಾ ಆ ಬುಟ್ಟಿಯನ್ನು ಹಾಗೇ ತಗೊಂಡು ಕೆರೆ ಹತ್ತಿರ ಹೋಗಿ ಬಂದಂಥ ಎಲ್ಲಾ ಮಕ್ಕಳಿಗೂ ಹಂಚುತ್ತಾಳೆ. ದೇವರಿಗೆ ಪ್ರಾರ್ಥನೆ ಮಾಡ್ತಾಳೆ. ಆ ಪ್ರಾರ್ಥನೆಗೆ ಮೆಚ್ಚಿ ಭಗವಂತ ಮಗುವನ್ನು ಕರುಣಿಸುತ್ತಾನೆ. ಕೆರೆಯ ದಂಡೆ ಮೇಲೆ ನಿಂತಿರ್ತಾಳೆ ಆಗ ಒಂದು ತೆಪ್ಪದಲ್ಲಿ ತನ್ನ ಮಗು ಅದರ ಜೊತೆ ಇನ್ನೊಂದು ಮಗು ಬಂದದ್ದನ್ನು ನೋಡಿ ತುಂಬಾ ಖುಷಿಯಿಂದ ಎರಡೂ ಮಕ್ಕಳನ್ನು ಬೆಳೆಸ್ತಾಳೆ. ಆ ಮಕ್ಕಳು ಚಿನ್ನಣ್ಣ & ಬಾಲಣ್ಣ ಅಂತ ಅವರು ದೊಡ್ಡ ವ್ಯಕ್ತಿಗಳಾಗ್ತಾರೆ ಅಂತ ನಾವು ಕಥೆಯನ್ನು ಕೇಳ್ತೆವೆ. ಅವತ್ತಿನಿಂದ ಅದರ ನೆನಪಿಗಾಗಿ ಇವತ್ತೂ ಕೂಡ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ೫ ವರ್ಷ ಆಚರಣೆ ಮಾಡ್ತಾರೆ. ಮೊದಲನೇ ವರ್ಷ ೫ ಮಕ್ಕಳಿಗೆ ಕರ್ಚಿಕಾಯಿ ಮೊದಲಾದವುಗಳನ್ನು ೨ ನೇ ವರ್ಷ ೧೦ ಮಕ್ಕಳಿಗೆ , ೩ ನೇ ವರ್ಷ ೧೫ ಮಕ್ಕಳಿಗೆ , ೪ ನೇ ವರ್ಷ ೨೦ ಮಕ್ಕಳಿಗೆ , ೫ ನೇ ವರ್ಷ (ಕೊನೆ ವರ್ಷ), ೨೫ ಮಕ್ಕಳಿಗೆ ಹಂಚಿ ಈ ಮಕ್ಕಳಹಬ್ಬವನ್ನು ಆಚರಿಸ್ತಾರೆ. ಎಲ್ಲರೂ ಮಣ್ಣಿನಿಂದ ಕೆರೆಯನ್ನು ಕಟ್ಟಿ, ಚಿನ್ನಣ್ಣ ಬಾಲಣ್ಣ ರ ಪ್ರತಿಮೆಯನ್ನು ಮಾಡಿಟ್ಟು ಆಕಳು, ಹೂ ಮಾರುವವಳು, ಮೊದಲಾದ ಪ್ರತಿಮೆ ಮಾಡಿ ಅಂತರ್ಗತ ದೇವರ ಪೂಜೆಯನ್ನು ಪ್ರಾರ್ಥನೆಯನ್ನು ಮಾಡಬೇಕು. ಈ ಕಥೆಯಿಂದ ನಮಗೆ ಏನು ತಿಳಿಯುತ್ತೆ ಅಂದರೆ ನಾವು ಭಗವಂತನನ್ನು ಪ್ರಾರ್ಥನೆ ಮಾಡಿದರೆ ಎರಡು ಪಟ್ಟು ಫಲವನ್ನು ಕೊಡ್ತಾನೆ ಅಷ್ಟು ಕರುಣಾಮಯಿ ನಮ್ಮ ಭಗವಂತ.
ಅಂಥ ಭಗವಂತ
ಎಲ್ಲರಿಗೂ ಅನುಗ್ರಹಿಸಲಿ ಅಂತ ಪ್ರಾರ್ಥನೆ ಮಾಡ್ತಿನಿ
ಮಕ್ಕಳ ಹಬ್ಬದ ಶುಭಾಶಯಗಳು.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
***
No comments:
Post a Comment