"ಸ್ಥಿತಪ್ರಜ್ಞ."
ಸಮಚಿತ್ತ, ಸಮಸ್ಥಿತಿ
"ಸುಖ ದುಃಖ್ಖೆ ಸಮೇ ಕೃತ್ವಾ"
ಮನಸ್ಸಿನ ಸಮಸ್ಥಿತಿ, ಅಥವಾ ಸಮ
ಚಿತ್ತ ಎಂದರೆ ಜೀವನದಲ್ಲಿ ಬರುವ
ಸುಖ ದುಃಖ ಗಳನ್ನು ಒಂದೇ ರೀತಿಯಾಗಿ ತೆಗೆದುಕೊಳ್ಳುವದು.
ಹೀಗಾಗಲು ಸಾಧ್ಯವೇ, ಇದು ಸಾಮಾನ್ಯ ಮನುಷ್ಯನ ಆಳವೇ ಒಂದು ಚಿಂತನೆಯ ವಿಚಾರ. ಯಥಾ ಮತಿ.
ಸುಖ ದುಃಖಗಳನ್ನು ಸಮವಾಗಿ ತೆಗೆದುಕೊಳ್ಳುವದು,
ಸಾಧನೆಯ ಅತಿ ಎತ್ತರದ ಆಚರಣೆ,
ಪರಿಪಕ್ವತೆಯ ಪರಾಕಾಷ್ಠೆ.
ಇದನ್ನು ಪಡೆಯುವದು ಸಾಧನೆಯ ಮೇರು ಎಂದೇ ಹೇಳ ಬಹುದು. ಎಲ್ಲರಿಗೂ ಸುಲಭ ಸಾಧ್ಯ
ವಲ್ಲದ ಮಾತು.
ಸುಖವಾದಾಗ ಹಿಗ್ಗುವದು, ಅದು ನನ್ನ ಪರಿಶ್ರಮದಿಂದ, ಈ ಧನ,ಈ ಮನೆ,ವಾಹನ ಎಂದು
ಅಹಂಕಾರ ಮಾಡುವದು ತಪ್ಪು.
ಇದನ್ನು ದಯಪಾಲಿಸಿದ ಶಕ್ತಿ ಇದ್ದ
ವನನ್ನು ನೆನೆಸಿಕೊಳ್ಳುವದು ದೂರದ ಮಾತು.
ದುಃಖವಾದಾಗವಂತೂ ತಡೆಯಲಾರದೇ ಹಾಗೆ ಆಗಬೇಕಿತ್ತು
ಹೀಗೆ ಆಗಬೇಕಿತ್ತು,ಇನ್ನೂ ಮನುಷ್ಯ ಪ್ರಯತ್ನ ಆಗಿದ್ದರೆ ಜೀವ ಉಳಿಯುತ್ತಿತ್ತೇನೋ ಎಂದು.ಅದು ಅಸಾಧ್ಯದ ಮಾತು. ಜೀವ ಪ್ರಪಂಚಕ್ಕೆ ಬರುವಾಗಲೇ ಅವನ ಹುಟ್ಟು ಸಾವಿನ ಕ್ಷಣಗಳನ್ನು,ಸುಖ ,ದುಃಖ, ಪ್ರಾರಬ್ಧ
ಎಲ್ಲ ಬರೆದು ಕಳಿಸಿರುತ್ತಾನೆ ಆ ಪರಮಾತ್ಮ ನಮ್ಮ ಯೋಗ್ಯತೆ ,ಕರ್ಮಗಳಿಗೆ ಅನುಸಾರ
ವಾಗಿ.
ಒಮ್ಮೊಮ್ಮೆ ಇದೆಲ್ಲ ಅರಿಯದೆ
ದೇವರಿಗೇ ಏನಾದರು ಮಾತಾಡುವ ಸ್ಥಿತಿಯಲ್ಲಿರುತ್ತೇವೆ.
ಇದು ನಮ್ಮ ದುರ್ಬಲತೆ.
ಅದಕ್ಕೇ ದಾಸರು " ಸುಖವಾಗಲಿ ಬಲು ದುಃಖ ವಾಗಲಿ ಸಖ ನೀನಾಗಿರು ಪಾಂಡುರಂಗ" ಎನ್ನುತ್ತಾರೆ. ಕಷ್ಟ ಸುಖಗಳೇನೇ
ಬರಲಿ ನೀನೇ ಸಖನಾಗಿದ್ದು ದಾಟಿಸು,ಭೋಗದಲ್ಲಿ ,ಭಾಗ್ಯದಲ್ಲಿ ನಿನ್ನನ್ನು ನೆನೆಸುವ ಭಾಗ್ಯ ಕೊಡೆಂದು ಕೇಳುತ್ತಾರೆ.
ಬುದ್ಧಿ ನಿನ್ನೊಳು ಕುಣಿದಾಡಲಿ
ಎನ್ನ ಚಿತ್ತ ನಿನ್ನಲಿ ನಲಿದಾಡಲಿ ಹರಿಯೇ ನಿನ್ನ ಭಕ್ತ ಜನರ ಸಂಘವು ದೊರೆಯಲಿ, ರಂಗ ವಿಠ್ಠಲ
ನಿನ್ನ ದಯವಾಗಲಿ
ಎಂದು,ನಿನ್ನ ಸಂಕಲ್ಪವೇ ನನ್ನ
ಆಸೆಯಾಗಲಿ ಎಂದಿದ್ದಾರೆ.
"ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕ್ಕೆ ಬರಲಿ,ಅನ್ಯಥಾ ಬಯಕೆಯ ಕೊಡದಿರೋ.....ಗುರು ಶ್ರೀಶವಿಠ್ಠಲಾ
ದಯಾನಿಧಿ ಎಂದಿದ್ದಾರೆ.
ಚಿತ್ತ ನಿನ್ನ ಚಿಂತೆಯೊಳಿರಲಿ
.......ಅಂತರಂಗದಲ್ಲಾನಂದದಿಂದಿರಲಿ, ಅಹಂಕೃತಿಯನು ಬಿಡಲಿ ವಿಜಯ ವಿಠಲಾ ವಿಶ್ವ ಸುರೇಶ್ವರಾ
ಎಂದಿದ್ದಾರೆ.
ಸಮಸ್ಥಿತಿ ಸಂಪಾದಿಸಲು ಮುಖ್ಯ ಕಾರಣಗಳು.......
1....ಜೀವದ ಯೋಗ್ಯತೆ
2....ಮಾಡಿದ ಕರ್ಮ ಭೋಗ
3....ಸಾಧಿಸಿದ ಅನನ್ಯ ಸಾಧನೆ
4...ಶುದ್ಧ ಆಚರಣೆ
5....ಸದ್ಗುಣಗಳ ಸಾಮರಸ್ಯ
6...ಪರಿಪಕ್ವತೆಯ ಮನಸ್ಸೆಂಬ
ಏಕಾದಶೇಂದ್ರಿಯದ ಅದ್ಭುತ
ಶಕ್ತಿ.
7 ...ಗುರು ಕಾರುಣ್ಯ
8....ಸಜ್ಜನರ ಸಂಗ
9....ಕುಲ ಸಂಸ್ಕಾರ
10...ಶಾಸ್ತ್ರಾಧ್ಯಯನದ ಬೆಳಕು
11..ಪೂರ್ವ ಜನ್ಮದ ಪುಣ್ಯ.
12...ದೊಡ್ಡವರ ಅನುಗ್ರಹ
ಸಮೇತ ಆಶೀರ್ವಾದ.
ಗುರು ಕಾರುಣ್ಯ ಮುಖ್ಯವಾಗಿ ಹಾಯ ಹರಿಗೋಲಾಗಿ
ಹರಿಗೋಲಾಗಿ ಭವಸಾಗರ ದಾಟಿಸಬಲ್ಲದು ಸರಿಯಾದ ಮಾರ್ಗ ತೋರಿಸಿ.
ಮನೋನಿಯಾಮಕರ ಅಂತರ್ಯಾಮಿಯಾಗಿ ಆ ಲಕ್ಷ್ಮೀ
ನರಸಿಂಹರ ಕರುಣಾ ಕಿರಣ ಸ್ಪರ್ಶ
ಸಾಧನೆ ಮಾಡಿಸಿ ಸಮಚಿತ್ತದತ್ತ
ಪಯಣಿಸಲು ಸಹಾಯ ಮಾಡುತ್ತದೆ.
ಅದಕ್ಕೇ ದಾಸರು "ಚದುರಂಗವನಾಡುವ ನೋಡಿರೆ
ಮದನ ಮೋಹನ ಕೃಷ್ಣ ಮನವನ್ನೇ
ಪ್ರಧಾನಿಯಾಗಿಟ್ಟು ಎನ್ನುತ್ತಾರೆ."
ಸುಖವಾಗಲಿ ಬಲು ದುಃಖ ವಾಗಲಿ ಸಖ ನೀನಾಗಿರು ಪಾಂಡುರಂಗ.....ಎಂಬುದು ನಮ್ಮ
ಪ್ರಾರ್ಥನೆಯಾಗಿರಲಿ....ಗುರು
ಕಾರುಣ್ಯ ಹೊನಲಾಗಿ ಹರಿಯಲಿ. ಶ್ರೀಹರಿಯ ಕರುಣೆಯ ಕಿರಣದ ಸ್ಪರ್ಶ ನಮ್ಮನ್ನು ಪಾವನ ಮಾಡಲಿ.
***
No comments:
Post a Comment