SEARCH HERE

Thursday, 30 September 2021

ನವವಿಧ ದ್ವೇಷ

 ನವವಿಧ ದ್ವೇಷ


ಜೀವಭೇದೋ ನಿರ್ಗುಣತ್ವಂ ಅಪೂರ್ವ ಗುತ್ತಾ ತಥಾ |

ಸಾಮ್ಯಾಧಿಕ್ಯೇ ತದನ್ಯೇಷಾಂ ಭೇದಸ್ತದ್ಗತಃ ||

ಪ್ರಾದುರ್ಭಾವವಿಪರ್ಯಾಸ್ಯಃ ತದ್ಭಕ್ತದೇಷ  ಏವ ಚ |

ತತ್ಪ್ರಮಾಣಸ್ಯ ನಿಂದಾ ಚ ಏತೇs ಕಿಲಾ ಮತಾ: ||


1)ಜೀವೇಶ್ವರರಲ್ಲಿ ಅಭೇದ

2) ಭಗವಂತನು ನಿರ್ಗುಣ ಎನ್ನುವದು

3) ಭಗವಂತನು ಅಪೂರ್ಣಗುಣನು ಎನ್ನುವದು

4, 5) ಇತರ ದೇವತೆಗಳು ಭಗವಂತನಿಗೆ ಸಮಾನರು ಅಧಿಕರು ಎನ್ನುವದು

6 )ಭಗವಂತನಲ್ಲಿ ಅವನ ಗುಣಕ್ರಿಯಾರೂಪಗಳಲ್ಲಿ ಅವತಾರಗಳಲ್ಲಿ ಭೇಧವಿದೆ ಎನ್ನುವುದು ‌

7) ಅವತಾರ ,ರೂಪ,ಆವಿಷ್ಟರೂಪಗಳನ್ನು ವಿಪರೀತವಾಗಿ ತಿಳಿಯುವುದು

8 )ಭಗವದ್ಭಕ್ತರಲ್ಲಿ  ದ್ವೇಷ

9 ) ಭಗವಂತನನ್ನು ತಿಳಿಸುವ ವೇದಾದಿ ಪ್ರಮಾಣಗಳ ನಿಂದೆ .

ಈ ಮೇಲಿನವನ್ನು ಸಜ್ಜನನಾದವನು ಎಂದಿಗೂ ಹೀಗೆಂದು ತಿಳಿಯಬಾರದು . ಹೀಗೆ ತಿಳಿದರೆ ಅಧೋಗತಿಗೆ ಹೋಗುವ.

ಸಮೀಚೀನ ಜ್ಞಾನ ಹೊಂದಿದಾಗ ಮಾತ್ರ ಸದ್ಗತಿ .

-ಶ್ರೀಮಹಾಭಾರತತಾತ್ಪರ್ಯನಿರ್ಣಯ 1-109,110

**


No comments:

Post a Comment