SEARCH HERE

Thursday, 30 September 2021

ಚಂಪಾ ಷಷ್ಠಿ ಅಥವಾ ಸ್ಕಂದ ಷಷ್ಠಿ champa or skanda shashti margashira shukla shashti

GHATI SUBRAMANYA


 Skanda Mantra :


sEnaavidaaraka skandha mahaasEna mahaabala |

rudrOmaagnija Shadvaktra gaMgaagarbha namOstu tE |

ಸೇನಾವಿದಾರಕ ಸ್ಕಂಧ ಮಹಾಸೇನ ಮಹಾಬಲ | ರುದ್ರೋಮಾಗ್ನಿಜ ಷಡ್ವಕ್ತ್ರ ಗಂಗಾಗರ್ಭ ನಮೋಸ್ತು ತೇ | सेनाविदारक स्कंध महासेन महाबल । रुद्रोमाग्निज षड्वक्त्र गंगागर्भ नमोस्तु ते ।


 


Who is Skanda? –


Skanda is the avatara of Manmatha.

He is in the same kakshya of Indra.

He is the lord of War.  Indra did the abhisheka of him as the devasenaadhipathi after he killed Tarakasura. 

During Srinivasa Kalyana Srinivasa devaru nominated him to invite the audience, as he has six faces and can see all six directions.

He is the pravartaka for Skaanda matha

We have to worship Skanda with the antaryami roopa of Pradyamuna roopa of Srihari.

What are his other names ? –

Kumara, Skanda,  Shanmukha, Subramanya or Kartikeya

 

“ಚಂಪ ಷಷ್ಟಿ” :

ಮಾರ್ಗಶಿರ ಮಾಸದಲ್ಲಿ ಶುಕ್ಲ ಷಷ್ಟಿಯಂದು ಭಾನುವಾರ, ವಿಶಾಖ ನಕ್ಷತ್ರ, ಮತ್ತು ವೈಧೃತಿ ಯೋಗಗಳು ಒಟ್ಟುಗೂಡಿದರೆ ಅದನ್ನು “ಚಂಪ ಷಷ್ಟಿ” ಎಂದು ಕರೆಯುತ್ತಾರೆ .


Subramanya Shasti is termed as “Champa Shasti” if Margashira Shukla Shasti falls on Sunday, Vishaka Nakshatra, and vaidhruti yoga.


He is called as Kumara – as he always looks like a small boy

He is called as Shanmukha as he has six faces

He is called as Kartikeya as he was brought up by six sisters named Kruttika.

He is called as Shanmatura as he was brought up by six mothers

He is called as SharavaNabava –  When he was born out of the tejasstu of Shiva, Agni held it. Even Agni, could not sustain the tejassu of Shiva tejassu, who kept it in Ganga.  Ganga also could not sustain, who kept it on the grass (Shara), that is why he is called as SharavanaBava. 

It is on this day that Sri Subramanya, who was born on Margashira shudda Panchami killed Tarakasura on the next day, shasti.

When is this Skanda Shasti celebrated? –

It will be celebrated on Margashira Shukla Shasti. This day is also called as Subrayana Shasti.

 

Why is Skanda Shasti celebrated? –

Subramanya likes this day very much, because it is on this that he killed Tarakasura.  If one does the skanda darshana, snaana  and daana on this, he will be  from  all his  brahma hatyaadi sins.  If one does this vratha, they have Sarpa bhaya nivruthi, satsantaana yoga, from skin diseases.

 

Why naagaaradhane on Subramanya Shasti ? How is  Subrayana Shasti celebrated? –

 

On this day we have to perform the pooja of  Subramanya. Subramanya swamy is worshipped in the form of five-hooded snake.   While doing the Subraya Shasti we have to do the pooja to mainly to Shankapaala, one of the serpant.


Subramanya protected the snakes,when they were in life trouble.  He then ordered that the snakes shall never be killed.  He also blessed them that the pooja of Skanda shall be done in the form of snakes only.    That is why on Subramanya Shasti day, naagaaradhane is being done.   On this day we have to remember and worship 8 snakes, viz.,  ಶೇಷವಾಸುಕಿತಕ್ಷಾಖ್ಯಾ: ಕರ್ಕೋಟೋಽಭೋ ಮಹಾಂಬುಜ: | ಶಂಖಪಾಲಶ್ಚ ಕುಲಿಶ: ಇತ್ಯಷ್ಟೌ ನಾಗವರ್ಯಕಾ: |

शेषवासुकितक्षाख्या: कर्कोटोऽभो महांबुज: । शंखपालश्च कुलिश: इत्यष्टौ नागवर्यका: ।

SheSha, Vaasuki, takShaka, karkOTaka, padma, mahaapadma, shaMKapaala, kulisha.

 

In the brahmachaari, we have to do the avaahana of sankarshana roopi paramathma.

 

ಶೇಷಾದಿ ಸಕಲ ಸರ್ಪಾಂತರ್ಗತ ಪ್ರಾಣಸ್ಥ ಸಂಕರ್ಷಣ ಪ್ರೀತ್ಯರ್ಥಂ ಬ್ರಹ್ಮಚಾರ್ಯಾರಾಧನಂ ಕರಿಷ್ಯೇ | ಶೇಷಾಯ ನಮ: ಶೇಷಂ ಸ್ವಾಗತಂ | ಶೇಷಸ್ಯ ಇದಮಾಸನಂ | ಶೇಷ ಇದಂ ತೇ ಪಾದ್ಯಂ | ಶೇಷಂ ಭವತ್ಸು ಆವಾಹಯಿಷ್ಯೇ | ಶೇಷಾಯ ನಮ: | ಗಂದಾದಿಸಕಲಾರಾಧನೈ: ಸ್ವರ್ಚಿತಂ |

शेषादि सकल सर्पांतर्गत प्राणस्थ संकर्षण प्रीत्यर्थं ब्रह्मचार्याराधनं करिष्ये । शेषाय नम: शेषं स्वागतं । शेषस्य इदमासनं । शेष इदं ते पाद्यं । शेषं भवत्सु आवाहयिष्ये । शेषाय नम: । गंदादिसकलाराधनै: स्वर्चितं |

Shankapalantargata bharatiramana mukyapranantargatha sri Sankarshanaya nama: |


We have to chant “Om ram skandhaaya nama: Om” while inviting Subramanya.


In this way, we have to do the avaahana of Sheshantargata sankarshana roopi paramathma in the brahmachaari, do the paada prakshalana, give him gopichandana, yajnopaveeta, panchapaatre, phala, vastre, dakshine.


We have to chant “Dhanu:shaktidharO dhyEya: kaamadO bhayanaashana:” for dhyana shloka.


His vehicle – Mayura


Why on this day, Brahmacharis will be invited for bhojana? –


Subramanya has the other name Kumara.   He likes young brahmacharis as they will not be having any dwesha-asuya, and their heart will be pure.  Skanda will be invited to have avaahana on Subramanya on these brahmacharies, and will take the sampoorna pooja done to brahmacharies.  Major bhakshyas done on this day will be from Urid dall.  Brahmachari to be given Vastra, Dakshine, etc.


Birth of Skanda –

Satidevi, after having immolated herself in the Daksha Yagna, was reborn as Parvathidevi, as the daughter of Himavanta.  In the meantime, Rudradevaru did a yogic penance  in the Himalayas.

 

Who is Tarakasura?

Tarakasura is the son of Vajranga (Son of Kashyapa-Diti) and Varangi.    He did severe penance to Brahma and pleased him and sought the boon that no one shall be more powerful than him and with the second boon was that his death could come only from a son born to Shiva.  Tarakasura knew that Rudradevaru had already lost his wife Satidevi and he was in deep penance and he thought the Rudra can’t have son all of a sudden.

After getting the great boons, Taraka was killing all the kings and spoiling the hermitages of sages.


All sages, devategalu, unable to sustain the hindrance by Tarakasura, went to Brahmadevaru, who in turn sent Bruhaspati to negotiate with Tarakasura, but he refused and war was fought between Gods and demons, in which Gods were defeated.


As Shiva was in a severe penance, he was not ready to accept the pleading of Parvati for her marriage with Shiva.


As Shiva was in a severe penance, he was not ready to accept the pleading of Parvati for her marriage with Shiva.


Then Devategalu approached Kamaputra Manmatha, with a plan to stop the meditation of Shiva.  Kamadeva arrived in front of Shiva alongwith Ratidevi, and shot five arrows of flowers at the heart of Shiva.  His intention was to make Shiva look at Parvathi and enable their marriage, which in turn would result in a son for the killing of Tarakasura (as per boon).


But when Rudra devaru’s penance was broken, he was terribly angry and open his third eye on his forehead, and a fierce blazing flame came out of his third eye and Manmatha was burnt to ashes.


The spark of fiery seed of Rudradevaru was unbearable and even Agnideva could not bear them, who threw to River Ganga, wherein it was born as six children.  Parvathi combined these six children to one with six faces and six  Kruttikaas came forward to feed the child (each kruttika feeding six different faces of Skanda).  That is why Skanda is called as Karthikeya, and as Shanmukha.


He then killed Tarakasura and helped the devategalu.


Subramanya in Tirtha prabandha by Sri Vadirajaru –


ಸುಬ್ರಹ್ಮಣ್ಯ ಕ್ಷೇತ್ರ –


ಸುಬ್ರಹ್ಮಣ್ಯಸ್ಯ ಮಹಿಮಾ ವರ್ಣಿತುಂ ಕೇನ ಶಕ್ಯತೇ |


ಯತ್ರೋಚ್ಚಿಷ್ಠಮಪಿ ಸ್ಪಷ್ಠಂ ಶ್ವಿತ್ರಿಣ: ಶೋಧಯತ್ಯಹೋ || ೩೭ ||


ಬ್ರಹ್ಮಹತ್ಯಾದೋಷಶೇಷಂ ಬ್ರಾಹ್ಮಣಾನಾಂ ಹರನ್ನಯಂ |


ವಿರೋಧೇ ತು ಪರಂ ಕಾರ್ಯಮಿತಿ ನ್ಯಾಯಮಮಾನಯತ್ || ೩೮ ||


ಸುಬ್ರಹ್ಮಣ್ಯ ಸ್ತುತಿ –


ಸುಬ್ರಹ್ಮಣ್ಯ ಸುರಾಗ್ರಗಣ್ಯ ಕುಜನಾರಣ್ಯಜ್ವಲತ್ಪಾವಕ ಪ್ರಬ್ರೂಯಾತ್ ತವ ವಿಕ್ರಮಂ ಭುವಿ ಕವಿ: ಕೋ ವಾsಮರೋ ವಾ ದಿವಿ |


ಯ: ಪ್ರಾಗಪ್ರತಿಮಲ್ಲತಾರಕಮಹಾದೈತ್ಯಂ ಸುದೃಪ್ತಂ ಭವಾನ್ ವಿಪ್ರೌಘಪ್ರಿಯ ಸುಪ್ರಭಾವ ಸಮರೇ ಕ್ರೀಡನ್ನಜೈಷೀದ್ದ್ವಿಷಂ || ೩೯ ||


ಅನ್ನಂ ದದಾಸಿ ವಿದಧಾಸ್ಯಖಿಲಸ್ಯ ರಕ್ಷಾಂ ಕ್ಲಿನ್ನಂ ಪುನಾಸಿ ವಿಲುನಾಸಿ ಸಮಸ್ತದೋಷಾನ್ |


ಹೇ ಸ್ಕಂದ ವಂದ್ಯ ಭವತೋ ಭುವನೇ ಭವಾನೀಸೂನೇ ಕೃಪಾಜಲನಿಧೇ ಕತಮ: ಸಮ: ಸ್ಯಾತ್ || ೪೦ ||


ಪ್ರವರ್ತಿತಸ್ಕಾಂದಮತ: ಪೃಥಿವ್ಯಾಂ ಜಗತ್ಪತಿಂ ಶ್ರೀಪತಿಮಾತ್ಮನಾಥಂ |


ರಹಸ್ಯುಪಾರಾಧಯಿತುಂ ಗುಹಾದ್ಯ ಗುಹಾಂಶ್ರಿತೋsಸೀತಿ ಮಮ ಪ್ರಕರ್ಕ: || ೪೧ ||


ಶ್ರೀವಿಷ್ಣುತೀರ್ಥಮುನಿಮಿತ್ರ ಸುರಾರಿಜೈತ್ರ ಶ್ರೀಕೃಷ್ಣಪಜ್ಜಲಜಭೃಂಗ ಕೃತಾಘಭಂಗ |


ಸಹ್ಯೇಶ ದೇಹಿ ಸಕಲೈರುಪಜೀವ್ಯಮನ್ನಂ ಸಂಹರ್ತೃ ಸರ್ವಭುವನಸ್ಯ ಕುಮಾರಮಹ್ಯಂ || ೪೨ ||


सुब्रह्मण्य क्षेत्र –


सुब्रह्मण्यस्य महिमा वर्णितुं केन शक्यते । यत्रोच्चिष्ठमपि स्पष्ठं श्वित्रिण: शोधयत्यहो ॥ ३७ ॥


ब्रह्महत्यादोषशेषं ब्राह्मणानां हरन्नयं । विरोधे तु परं कार्यमिति न्यायममानयत् ॥ ३८ ॥


सुब्रह्मण्य स्तुति –


सुब्रह्मण्य सुराग्रगण्य कुजनारण्यज्वलत्पावक प्रब्रूयात् तव विक्रमं भुवि कवि: को वाsमरो वा दिवि ।


य: प्रागप्रतिमल्लतारकमहादैत्यं सुदृप्तं भवान् विप्रौघप्रिय सुप्रभाव समरे क्र्‍ईडन्नजैषीद्द्विषं ॥ ३९ ॥


अन्नं ददासि विदधास्यखिलस्य रक्षां क्लिन्नं पुनासि विलुनासि समस्तदोषान् ।


हे स्कंद वंद्य भवतो भुवने भवानी- सूने कृपाजलनिधे कतम: सम: स्यात् ॥ ४० ॥


प्रवर्तितस्कांदमत: पृथिव्यां जगत्पतिं श्रीपतिमात्मनाथं ।


रहस्युपाराधयितुं गुहाद्य गुहांश्रितोsसीति मम प्रकर्क: ॥ ४१ ॥


श्रीविष्णुतीर्थमुनिमित्र सुरारिजैत्र श्रीकृष्णपज्जलजभृंग कृताघभंग ।


सह्येश देहि सकलैरुपजीव्यमन्नं संहर्तृ सर्वभुवनस्य कुमारमह्यं ॥ ४२ ॥


The kshetra Subramanya (kukke subramanya) is situated in South Kanara District of Karnataka, which is about 33 km from Puttur.   It is on the banks of the river Kumaradhaara.   The  kshetra is said to have the importance in historical and philosophically.    Sri Vadirajaru in his Tirtha prabandha says that the varNana of Subramanya kshetra is very very difficult to explain.   It is said that even the “kushta” disease (Leprosy) can also be cured, if one rolls over the leftovers of food consumed by brahmin, which is popularly called as “Made snaana”.  But the present day maDe snaana refers to roll over the food consumed by people (but it should be branhmins).


Vadirajaru prays Subramanya as the leader amongst the “Suraas”.  He is like the fire which burns the durjanaas,   He is the annaprada.  He is the protector of all.


Some important Subramanya kshetras – Kukke, Ghati,  Ramanathapuram,


Written by Narahari Sumadhwa

***

ಚಂಪಾ ಷಷ್ಠಿ ಅಥವಾ ಸ್ಕಂದ ಷಷ್ಠಿ 


ಮಾಸಗಳಲ್ಲೇ ಅತ್ಯಂತ ಉತ್ತಮವಾದ ಮಾಸ ಹಾಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ತಾನೇ ಮಾಸಗಳಲ್ಲಿ ಮಾರ್ಗಶೀರ್ಷಮಾಸದಲ್ಲಿ ತನ್ನ ವಿಭೂತಿರೂಪ ಇರುತ್ತದೆ ಎಂದು ಹೇಳಿದ್ದಾನೆ. 


ಇಂತಹ ಪವಿತ್ರವಾದ ಮಾಸದಲ್ಲಿ ಬರುವ ಶುಕ್ಲ ಷಷ್ಠಿಯಂದು ಸ್ಕಂದನ ಅಂತರ್ಯಾಮಿ ಪ್ರದ್ಯುಮ್ನರೂಪಿ ಮತ್ತು ಶೇಷದೇವರಲ್ಲಿ  ಸಂಕರ್ಷಣ ರೂಪಿ  ಪರಮಾತ್ಮನನ್ನು ಅಭಿಷೇಕ ಗಂಧ ಪುಷ್ಪ  ಧೂಪಾದೀಪಾಧಿಗಳಿಂದ ಪೂಜಿಸುವ ದಿನವೇ ಸ್ಕಂದ ಷಷ್ಠಿ, ಚಂಪಾಷಷ್ಠಿ ಅಥವಾ ಸುಬ್ಬರಾಯನ ಷಷ್ಠಿಯಂದು ಹಲವಾರು ಹೆಸರುಗಳಿಂದ ಪೂಜಿಸುತ್ತಾರೆ. 


 ಸ್ಕಂದಷಷ್ಠಿ ಮಹತ್ವ 


ಒಮ್ಮೆ ತಾರಕಾಸುರನೆಂಬ ರಕ್ಕಸನು ತನಗೆ ಮರಣ ಒದಗಬೇಕಾದರೆ ಶಿವ ಮತ್ತು ಪಾರ್ವತಿಯಪುತ್ರ ಷಣ್ಮುಗನಿಂದ ನನಗೆ ಮರಣ ಬರಬೇಕು ಎಂದು ಕೇಳಿದ್ದನು. ಸ್ಕಂದನು ಚೈತ್ರ ಶುದ್ಧ ಷಷ್ಠಿಯಂದು ಜನಿಸಿದನು, ಅದೇ ರೀತಿ ಶಿವ ಮತ್ತು ಪಾರ್ವತಿಯ ಪುತ್ರನಾದ ಷಣ್ಮುಗನು ಈ ದಿನದಂದು ತಾರಕಾಸುರನ ಸಂಹಾರ ಮಾಡಿ ದೇವತೆಗಳ ಸೈನ್ಯದ ಸೇನಾಧಿಪತಿಯಾದ.


ಮತ್ತೊಂದು ಕಥೆಯ ಪ್ರಕಾರ 


ಋಷಿ ಕಶ್ಯಪ ಮಹಾಮುನಿಗೆ ಹದಿಮೂರು ಜನ ಪತ್ನಿಯರು. ಇವರೆಲ್ಲ ದಕ್ಷನ ಮಕ್ಕಳು ಅಂದರೆ ಅಕ್ಕ ತಂಗಿಯರು. ಅದರಲ್ಲಿ ಕದ್ರು ಮತ್ತು ವಿನುತಾ ಕೂಡಾ ಇಬ್ಬರು. ಒಂದು ದಿನ ಕದ್ರು ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ. ಅವರು ಒಪ್ಪದಾಗ ಅವರಿಂದ ವಚನವನ್ನು ಪಡೆದು ಗೆಲುವು ಪಡೆದುಕೊಳ್ಳುತ್ತಾಳೆ. ಇದು ವಿನುತಾಳ ಮಗನಾದ ಗರುಡನಿಗೆ ತಿಳಿದು ಹೋಗುತ್ತದೆ. ಆದರೆ ಕದ್ರು ತನ್ನ ತಾಯಿಗೆ ಸಮಾನಳಾಗಿದ್ದುದರಿಂದ ಅವಳಿಗೆ ಏನೂ ಮಾಡಲಾಗದ ಕಾರಣದಿಂದ ದ್ವೇಷ ಸರ್ಪಗಳ ಮೇಲೆ ತಿರುಗುತ್ತದೆ. ದ್ವೇಷದಿಂದ ಸಹಸ್ರ ಸಹಸ್ರ ಹಾವುಗಳನ್ನು ಕುಕ್ಕಿ ಮುಕ್ಕ ತೊಡಗುತ್ತಾನೆ.


ಗರುಡನಿಂದಾಗಿ ಪ್ರಾಣ ಭಯದಿಂದ ಕೆಲ ಸರ್ಪಗಳು  ಪಾತಾಳವನ್ನು ಸೇರಿಕೊಳ್ಳುತ್ತವೇ.  ಅನಂತನು ವೈಕುಂಠದಲ್ಲಿ ಹರಿಗೆ ತಲ್ಪವಾಗುತ್ತಾನೆ. ನಾಗಗಳು ಶಿವನ ಕೊರಳು ಕೈ ಕಾಲುಗಳನ್ನು ಸುತ್ತಿಕೊಳ್ಳುತ್ತವೆ. ಕಾಳಿಯ ಅನ್ನುವ ಸರ್ಪ  ನಂದ ಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ. ಹಾಗೆಯ ಶಂಕಪಾಲ, ಭೂಧರ, ಅನಘಾದಿ ಸರ್ಪಗಳು ಒಂದೊಂದು ಕಡೆಯಲ್ಲಿ ಅಡಗಿಕೊಳ್ಳುತ್ತವೆ.ವಾಸುಕಿ ಅನ್ನುವ ಮಹಾಸರ್ಪವೊಂದು ಗರುಡ ಭಯದಿಂದ ತುಳುನಾಡಿಗೆ ಓಡಿಬರುತ್ತದೆ.


ತುಳುನಾಡಿನ ತಪ್ಪಲಿನ ಸಹ್ಯಾದ್ರಿ ಮಡಿಲಿನ, ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಅನ್ನುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದು ಹೇಗೋ ಗರುಡನಿಗೆ ತಿಳಿದು ಹೋಗುತ್ತದೆ. ಘನಘೋರ ಯುದ್ಧವಾಗುತ್ತದೆ. ವಿಷಯ ತಿಳಿದ ಇವರೀರ್ವರ ಅಪ್ಪನಾದ ಕಶ್ಯಪ ಓಡೋಡಿ ಬಂದು ಯುದ್ಧವನ್ನು ತಡೆಯುತ್ತಾನೆ.ಮಹಾ ಶಿವ ಭಕ್ತನಾದ ವಾಸುಕಿಯಿಂದ ಹಲವು ಲೋಕ ಕಲ್ಯಾಣ ಕೆಲಸವೂ ನಡೆಯಬೇಕಿರುವುದನ್ನು ಗರುಡನಿಗೆ ಹೇಳುತ್ತಾನೆ. ಗರುಡ ತನ್ನ ಹಸಿವನ್ನು ಇಂಗಿಸುವಂತೆ ಕೇಳಿಕೊಂಡಾಗ ಮನಿಲಾ ದ್ವೀಪದಲ್ಲಿ ದುಷ್ಟ ಬೇಡರು ಮತ್ತು ಹಾವುಗಳನ್ನು ತಿಂದು ಹಸಿವನ್ನು ಇಂಗಿಸಿಕೊಳ್ಳುವಂತೆ ಹೇಳುತ್ತಾನೆ. ವಾಸುಕಿಯು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ತಂದೆಯಾದ ಕಶ್ಯಪರನ್ನು   ಮೊರೆಯಿಡುತ್ತಾನೆ. ಅಪ್ಪ ರುದ್ರದೇವರನ್ನು ಕುರಿತು ತಪಸ್ಸನ್ನು ಆಚರಿಸಲು ಹೇಳುತ್ತಾನೆ. ವಾಸುಕಿಯು ತಪಸ್ಸಿನ ಮೂಲಕ ರುದ್ರದೇವರನ್ನು ಒಲಿಸಿಕೊಂಡು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಹೇಳುತ್ತಾನೆ. ಅದಕ್ಕೆ ರುದ್ರದೇವರು  " ವಾಸುಕಿ ಚಿಂತಿಸಬೇಡ ಮುಂದಿನ ಕಲ್ಪದಲ್ಲಿ ಸರ್ಪ ಕುಲದ ರಕ್ಷಣೆಗಾಗಿ ಕಾಮನು ಸ್ಕಂಧ ಸುಬ್ರಮಣ್ಯನಾಗಿ     ನನ್ನ ಮಗನಾಗಿ ಜನಿಸುತ್ತಾನೆ. ಆ ದಿನವು ಬೇಗ ಸನ್ನಿಹಿತವಾಗುವಂತೆ ಇಲ್ಲೇ ಇದ್ದುಕೊಂಡು ತಪಸ್ಸನ್ನು ಆಚರಿಸು' ಎಂದು ಹೇಳುತ್ತಾನೆ


ಹೀಗೆ ಹಲವು ವರ್ಷಗಳು ಕಳೆಯಲು ಸುಬ್ರಮಣ್ಯ ಸ್ವಾಮಿಯು ತಾರಕಾಸುರನನ್ನು ಕೊಂದು ತನ್ನ ರಕ್ತ ಸಿಕ್ತ ಆಯುಧವನ್ನು ಧಾರಾ ನದಿಗೆ ಬಂದು ತೊಳೆಯುತ್ತಾನೆ. ಅಂದಿನಿಂದ ಆ ನದಿಯು ಕುಮಾರಧಾರ ಅನ್ನುವ ಹೊಸ ನಾಮಧೇಯದಿಂದ ಕರೆಯಲ್ಪಡುತ್ತದೆ


ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಓಡೋಡಿ ಬಂದು ವಿವಾಹವಾಗುವಂತೆ ಪ್ರಾರ್ಥಿಸಿಕೊಳ್ಳುತಾನೆ. ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವತೆಗಳ ಮುಂದೆ ಕುಮಾರಧಾರಾ ತಟದಲ್ಲಿ ಚಂಪಾ ಷಷ್ಟಿಯ ದಿನದ ಸುಘಳಿಗೆಯಲ್ಲಿ ಮದುವೆ ನಡೆಯುತ್ತದೆ . ಮುಂದೆ ವಾಸುಕಿಯ ಇಚ್ಚೆಯಂತೆ ತನ್ನ ಪತ್ನಿಯಾದ ದೇವಸೇನೆ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆ ಕ್ಷೇತ್ರದಲ್ಲಿ ನೆಲೆಸಲು ಸುಬ್ರಹ್ಮಣ್ಯನು ಇಚ್ಛಿಸಿದಾಗ, ವಿಶ್ವಕರ್ಮನು ಮೂರ್ತಿಯನ್ನು ಮಾಡಿಕೊಡುತ್ತಾನೆ. ಬ್ರಹ್ಮ ಅದನ್ನು ಎಲ್ಲ ದೇವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸುತ್ತಾನೆ.


 ಹೀಗೆ ಹೇಮಂತ ಋತುವಿನ ಮಾರ್ಗಶೀರ್ಷಮಾಸದ ಶುದ್ಧ ಷಷ್ಠಿಯಂದು ಇಂದ್ರನ ಪುತ್ರಿಯಾದ ದೇವಸೇನೆಯನ್ನು ಸುಬ್ರಮಣ್ಯ ಮದುವೆಯಾದ ದಿನ ಎಂದು ಹೇಳುತ್ತಾರೆ.  ಹಾಗೆ ಚಂಪಕ ಅಥವಾ ಚಂಪಾ ಹೂಗಳಿಂದ ಪೂಜೆಗೆ ಪ್ರಸನ್ನನಾಗುವವನು ಎಂದು ಆದಿನ ಪೂಜಿಸಲೇ ಬೇಕಾದುದರಿಂದ ಚಂಪಾ ಷಷ್ಠಿ ಎಂದು ಪ್ರಸಿದ್ಧವಾಗಿದೆ, ಹಾಗೆ ಸುಬ್ರಮಣ್ಯ ನಾಗನ ರೂಪದಲ್ಲಿ ಆ ದಿನ ವಿಶೇಷವಾಗಿ ಪೂಜೆಗೊಂಡು ಅನುಗ್ರಹಿಸುವವನು ಎಂದು ಸುಬ್ಬರಾಯನ ಷಷ್ಠಿ ಎಂದು ಕರೆಯುತ್ತಾರೆ. 


 ವೈಷ್ಣವರಿಗೆ ಹೇಗೆ ವಿಶೇಷದಿನ ಮತ್ತು ವಟುಪೂಜೆ ಮಹತ್ವ 


ತಾರತಮ್ಯದ ಎಂಟನೆಯ ಕಕ್ಷೆಯಲ್ಲಿ ಬರುವ ಕಾಮನ ಮತ್ತೊಂದು ರೂಪವೇ ಈ ಸ್ಕಂಧ ಅಥವಾ ಸುಬ್ರಮಣ್ಯ ಇವನ  ಅಂತರ್ಯಾಮಿಯಾಗಿ ಪರಮಾತ್ಮ ವಿಶೇಷ ಪ್ರದ್ಯುಮ್ನ ಮತ್ತು ಸಂಕರ್ಷಣ ರೂಪದಿಂದ ಪೂಜೆಗೊಳ್ಳುವನು. 


ಈ ದಿನ ಸ್ಕಂಧನು ವಟುಗಳಲ್ಲಿ ಇದ್ದು, ಪೂಜಾದಿಗಳನ್ನು ಸ್ವೀಕರಿಸುವುದರಿಂದ ವಿಶೇಷವಾಗಿ ವಟುಗಳನ್ನು ಪೂಜಿಸಿ ಪಾದತೊಳೆದು ಅವರಿಗೆ, ಗೋಪಿಚಂದನ, ಯಜ್ಞೋಪವೀತ, ಪಂಚಪಾತ್ರೆ, ಮಡಿಪಂಚೆ ಫಲ ದಕ್ಷಿಣಾದಿಗಳನ್ನೂ ಕೊಟ್ಟು, ಸಂತೋಷ ಪಡಿಸಬೇಕು. ಉದ್ದಿನ ಭಕ್ಷಗಳು, ಸಿಹಿಭಕ್ಷಗಳು, ಪಾಯಸಾದಿಗಳ ಸಹಿತ ವಟುಭೋಜನ ಮಾಡಿಸಬೇಕು. 


ಇದರಿಂದ ಸರ್ಪಭಯ ನಿವೃತ್ತಿ, ಸತ್ಸಂತಾನಲಾಭ, ಚರ್ಮರೋಗ ಪರಿಹಾರ,ಹಾಗೆ ಈ ದಿನ ವಟುಗಳಿಗೆ ರಜತ ದಾನ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ. 


ಸ್ಕಂಧ ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾರೊಗಗಳ ಪರಿಹಾರ, ಭೂತ ಪೀಡೆ ಪರಿಹಾರ, ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ, ಶತ್ರುಜಯವನ್ನು ವಿಶೇಷವಾಗಿ ಕರುಣಿಸುತ್ತಿದ್ದಾನೆ. ಸುಬ್ರಹ್ಮಣ್ಯನಿಗೆ ಸ್ಕಂದ, ಕಾರ್ತಿಕೇಯ, ಷಣ್ಮುಖ, ಕುಮಾರಸ್ವಾಮಿ ಎಂಬ ನಾಮಗಳಿವೆ. 


||ಷಡಾನನಮ್  ಕುಂಕುಮ  ರಕ್ತ  ವರ್ಣಮ್,

ಮಹಾಮತಿಮ್ ದಿವ್ಯ  ಮಯೂರ  ವಾಹನಂ| .

ರುದ್ರಸ್ಯ  ಸೂನಂ , ಸುರಾ  ಸೈನ್ಯ  ನಾಥಮ್,

ಗುಹಾಂ ಸದಾ ಶರಣಂ  ಮಹಂ  ಪ್ರಪಧ್ಯೇ||


ಹೀಗೆ ಸ್ಕಂಧ ಅಥವಾ ಸುಬ್ರಮಣ್ಯನನು ಆರಾಧಿಸಿ ಅಂತರ್ಯಾಮಿಯಾದ ಪ್ರದ್ಯುಮ್ನ ಮತ್ತು ಸಂಕರ್ಷಣರೂಪಿ ಪರಮಾತ್ಮನ ಅನುಗ್ರಹ ಪಡೆಯೋಣ.

 ಪ್ರೀತೋಸ್ತು ಕೃಷ್ಣ ಪ್ರಭುಃ 

 ಫಣೀಂದ್ರ ಕೆ

***

*ಚಂಪಾ ಷಷ್ಠಿ: 

ಕಾರ್ತಿಕೇಯನು ಸುಬ್ರಹ್ಮಣ್ಯನಾಗಿ ಕುಕ್ಕೆಯಲ್ಲಿ ನೆಲೆನಿಲ್ಲಲು ಕಾರಣವೇನು ಗೊತ್ತಾ?*


ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠೀ. ಕರಾವಳಿಗರಿಗೆ ಇದೊಂದು ವಿಶೇಷ ಹಬ್ಬವೂ ಹೌದು. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನಲೆ ಇದೆ.

ಸ್ಕಂದ ಷಷ್ಠಿ ನಂತರ ಬರುವ ಆಚರಣೆಯೇ ಸುಬ್ರಹ್ಮಣ್ಯ ಷಷ್ಠಿ. ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಪ್ರಸಿದ್ಧಿಯನ್ನು ಪಡೆದಿದೆ. ಶುಕ್ಲಪಕ್ಷದ ಆರನೇ ದಿನ ಅಂದರೆ ನವೆಂಬರ್ 29 ರಂದು ಆಚರಿಸಲ್ಪಡುವ ಷಷ್ಠಿ ಹಿಂದೂಗಳ ಪ್ರಮುಖ ಹಬ್ಬ. ತುಳುನಾಡಿಗೆ ಇದು ಪ್ರಮುಖ ಹಬ್ಬವೂ ಹೌದು.


ಕಾರ್ತಿಕೇಯ, ಮುರುಗ, ಸ್ಕಂದ, ವೇಲಾಯುಧ, ಕುಮಾರಸ್ವಾಮಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಶಿವ ಹಾಗೂ ಪಾರ್ವತಿಯರ ಪುತ್ರ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಚರಿಸಲ್ಪಡುವ ಪ್ರಸಿದ್ಧ ಚಂಪಾಷಷ್ಠಿಯ ಹಿಂದೆ ಪುರಾಣ ಕಥೆಯೊಂದಿದೆ. ಆ ಕಥೆಯ ಹಿನ್ನೆಲೆ ಇಲ್ಲಿದೆ ನೋಡಿ.


ಋಷಿ ಕಶ್ಯಪ ಮಹಾಮುನಿಗೆ ಹದಿಮೂರು ಜನ ಪತ್ನಿಯರು. ಇವರೆಲ್ಲರೂ ದಕ್ಷ ಪ್ರಜಾಪತಿಯ ಮಕ್ಕಳು, ಅಂದರೆ ಅಕ್ಕ ತಂಗಿಯರು. ಅದರಲ್ಲಿ ಕದ್ರು ಮತ್ತು ವಿನುತಾ ಕೂಡಾ ಇಬ್ಬರು. ಒಂದು ದಿನ ಕದ್ರು ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ. ಅವರು ಒಪ್ಪದಿದ್ದಾಗ ಅವರಿಂದ ವಚನವನ್ನು ಪಡೆದು ಗಳಿಸಿಕೊಳ್ಳುತ್ತಾಳೆ. ಇದು ವಿನುತಾಳ ಮಗನಾದ ಗರುಡನಿಗೆ ತಿಳಿದು ಹೋಗುತ್ತದೆ. ಆದರೆ ಕದ್ರು ತನ್ನ ತಾಯಿಗೆ ಸಮಾನಳಾಗಿದ್ದುದರಿಂದ ಅವಳಿಗೆ ಏನೂ ಮಾಡಲಾಗದೆ ದ್ವೇಷ ಸರ್ಪಗಳ ಮೇಲೆ ತಿರುಗುತ್ತದೆ. ದ್ವೇಷದಿಂದ ಸಹಸ್ರ ಸಹಸ್ರ ಹಾವುಗಳನ್ನು ಕುಕ್ಕಿ ಮುಕ್ಕ ತೊಡಗುತ್ತಾನೆ.


ಗರುಡನಿಂದಾಗಿ ಪ್ರಾಣ ಭಯದಿಂದ ಶೇಷ ಪಾತಾಳವನ್ನು ಸೇರಿಕೊಳ್ಳುತ್ತಾನೆ. ಅನಂತನು ವೈಕುಂಠದಲ್ಲಿ ಹರಿಗೆ ತಲ್ಪವಾಗುತ್ತಾನೆ. ನಾಗಗಳು ಶಿವನ ಕೊರಳು ಕೈ ಕಾಲುಗಳನ್ನು ಸುತ್ತಿಕೊಳ್ಳುತ್ತವೆ. ಕಾಳಿಯ ಅನ್ನುವ ಹಾವು ನಂದ ಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ. ಹಾಗೆಯ ಶಂಕಪಾಲ, ಭೂಧರ, ಅನಘಾದಿ ಸರ್ಪಗಳು ಒಂದೊಂದು ಕಡೆಯಲ್ಲಿ ಅಡಗಿಕೊಳ್ಳುತ್ತವೆ. ವಾಸುಕಿ ಅನ್ನುವ ಮಹಾಸರ್ಪವೊಂದು ಗರುಡ ಭಯದಿಂದ ತುಳುನಾಡಿಗೆ ಓಡಿಬರುತ್ತದೆ.


ತುಳುನಾಡಿನ ತಪ್ಪಲಿನ ಸಹ್ಯಾದ್ರಿ ಮಡಿಲಿನ, ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಅನ್ನುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದು ಹೇಗೋ ಗರುಡನಿಗೆ ತಿಳಿದು ಹೋಗುತ್ತದೆ. ಘನಘೋರ ಯುದ್ಧವಾಗುತ್ತದೆ. ವಿಷಯ ತಿಳಿದ ಇವರೀರ್ವರ ಅಪ್ಪನಾದ ಕಶ್ಯಪ ಓಡೋಡಿ ಬಂದು ಯುದ್ಧವನ್ನು ತಡೆಯುತ್ತಾನೆ.ಮಹಾ ಶಿವ ಭಕ್ತನಾದ ವಾಸುಕಿಯಿಂದ ಹಲವು ಲೋಕ ಕಲ್ಯಾಣ ಕೆಲಸವೂ ನಡೆಯಬೇಕಿರುವುದನ್ನು ಗರುಡನಿಗೆ ಹೇಳುತ್ತಾನೆ. ಗರುಡ ತನ್ನ ಹಸಿವನ್ನು ಇಂಗಿಸುವಂತೆ ಕೇಳಿಕೊಂಡಾಗ ಮನಿಲಾ ದ್ವೀಪದಲ್ಲಿ ದುಷ್ಟ ಬೇಡರು ಮತ್ತು ಹಾವುಗಳನ್ನು ತಿಂದು ಹಸಿವನ್ನು ಇಂಗಿಸಿಕೊಳ್ಳುವಂತೆ ಹೇಳುತ್ತಾನೆ.


ವಾಸುಕಿಯು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಅಪ್ಪನನ್ನು ಮೊರೆಯಿಡುತ್ತಾನೆ. ಅಪ್ಪ ಶಿವನನ್ನು ಕುರಿತು ತಪಸ್ಸನ್ನು ಆಚರಿಸಲು ಹೇಳುತ್ತಾನೆ. ವಾಸುಕಿಯು ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಹೇಳುತ್ತಾನೆ. ಅದಕ್ಕೆ ಶಿವನು "ವಾಸುಕಿ, ಚಿಂತಿಸಬೇಡ ಮುಂದಿನ ಕಲ್ಪದಲ್ಲಿ ಸರ್ಪ ಕುಲದ ರಕ್ಷಣೆಗಾಗಿ ಸುಬ್ರಮಣ್ಯ ಸ್ವಾಮಿಯ ನನ್ನ ಮಗನಾಗಿ ಜನಿಸುತ್ತಾನೆ. ಆ ದಿನವು ಬೇಗ ಸನ್ನಿಹಿತವಾಗುವಂತೆ ಇಲ್ಲೇ ಇದ್ದುಕೊಂಡು ತಪಸ್ಸನ್ನು ಆಚರಿಸು' ಎಂದು ಹೇಳುತ್ತಾನೆ.


ಹೀಗೆ ಹಲವು ವರ್ಷಗಳು ಕಳೆಯಲು ಸುಬ್ರಮಣ್ಯ ಸ್ವಾಮಿಯು ತಾರಕಾಸುರನನ್ನು ಕೊಂದು ತನ್ನ ರಕ್ತ ಸಿಕ್ತ ಆಯುಧವನ್ನು ಧಾರಾ ನದಿಗೆ ಬಂದು ತೊಳೆಯುತ್ತಾನೆ. ಅಂದಿನಿಂದ ಆ ನದಿಯು ಕುಮಾರಧಾರ ಅನ್ನುವ ಹೊಸ ನಾಮಧೇಯದಿಂದ ಕರೆಯಲ್ಪಡುತ್ತದೆ.


ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಓಡೋಡಿ ಬಂದು ವಿವಾಹವಾಗುವಂತೆ ಪ್ರಾರ್ಥಿಸಿಕೊಳ್ಳುತಾನೆ. ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವರುಗಳ ಮುಂದೆ ಕುಮಾರಧಾರ ತಟದಲ್ಲಿ ಚಂಪಾ ಷಷ್ಠಿಯ ದಿನದ ಸುಘಳಿಗೆಯಲ್ಲಿ ಮದುವೆ ನಡೆಯುತ್ತದೆ. ಮುಂದೆ ವಾಸುಕಿಯ ಇಚ್ಚೆಯಂತೆ ತನ್ನ ಪತ್ನಿಯಾದ ದೇವಸೇನೆ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆಸಲು ಸುಬ್ರಹ್ಮಣ್ಯನು ಇಚ್ಛಿಸಿದಾಗ, ವಿಶ್ವಕರ್ಮ ಮೂರ್ತಿಯನ್ನು ಮಾಡಿಕೊಡುತ್ತಾನೆ. ಬ್ರಹ್ಮ ಅದನ್ನು ಎಲ್ಲಾ ದೇವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸುತ್ತಾನೆ.


ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ನಾಗಬ್ರಹ್ಮ ಅನ್ನುವ ನಾಮಧೇಯದಿಂದ ಪೂಜಿಸಲಿ ಎಂದು ಸಕಲ ದೇವರುಗಳು ವಾಸುಕಿಯನ್ನು ಹರಸುತ್ತಾರೆ. ಹಾಗಾಗಿ ಸುಬ್ರಮಣ್ಯ ನೆಲೆಸಲು ಕಾರಣನಾದ ಗರುಡ ಬರದೇ ಕೆಲವು ಕಡೆ ಚಂಪಾ ಷಷ್ಟಿಯ ರಥವನ್ನು ಎಳೆಯುವ ಕ್ರಮ ಇಲ್ಲ. ಇದೊಂದು ಸಂಪ್ರದಾಯವಾಗಿ, ಹಬ್ಬವಾಗಿ ಇಂದಿಗೂ ವೈಭವದಿಂದ ಆಚರಿಸಲ್ಪಡುತ್ತದೆ.

***




'ಚಂಪಾ ಷಷ್ಠಿ'ಯ ಕತೆ :-


ಸರ್ಪ ಸಂಕುಲಗಳ ತವರೂರು ಎಂದೇ ಗುರುತಾಗಿರುವ  ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ  'ಕುಕ್ಕೆ' ಎಂಬ  ಹಳ್ಳಿ  'ಸುಬ್ರಮಣ್ಯ'  ನೆಲೆಸಿದ ಪುಣ್ಯಕ್ಷೇತ್ರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ  ಒಂದಾಗಿದೆ.  ನಮ್ಮ ದೇಶದಲ್ಲಿ ಹಿಂದೂಗಳು ನಾಗಾರಾಧನೆಗೆ  ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ.  ಸರ್ಪನಿಗೆ ಸಂಬಂಧಪಟ್ಟ  ದೇವಾಲಯಗಳು ಎಲ್ಲಾ ರಾಜ್ಯಗಳಲ್ಲೂ ಸಾಕಷ್ಟು ಇವೆ. ಕರಾವಳಿಯ ಜನರಿಗೆ ನಾಗಾರಾಧನೆ ವಿಶೇಷ  ಆರಾಧನೆಯಾಗಿದೆ. ಅದರಲ್ಲೂ ಕುಕ್ಕೆಸುಬ್ರಹ್ಮಣ್ಯದಲ್ಲಿ ಆಚರಿಸುವ ಚಂಪಾ 'ಷಷ್ಠಿ' ವಿಶೇಷ ಮಹತ್ವ ಪಡೆದಿದೆ. ಇದನ್ನು ಸ್ಕಂದ, ಸುಬ್ರಹ್ಮಣ್ಯ ಷಷ್ಠಿ ಅಂತಲೂ ಕರೆಯುತ್ತಾರೆ. ಈ ಚಂಪಾ ಷಷ್ಠಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದ (ಆರನೇ ದಿನ)  ಷಷ್ಠಿ ದಿನ ಬರುತ್ತದೆ. ವಿಶೇಷವಾಗಿ ಊರಿನ ಹೆಸರು ಸೇರಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಅಂತ ಕರೆಯುತ್ತಾರೆ. ಇಂಥ 

ಧಾರ್ಮಿಕ ಹಿನ್ನೆಲೆ ಪಡೆದಿರುವ  ಚಂಪಾ ಷಷ್ಠಿ ಆಚರಣೆಗೆ ಪೌರಾಣಿಕ ಹಿನ್ನೆಲೆಯು ಇದೆ.


ಪೌರಾಣಿಕ ಕಥೆ:- ಕಾರ್ತಿಕೇಯ, ಸ್ಕಂದ,  ಕುಮಾರ, ಎಂದು ಕರೆಯುವ ಸುಬ್ರಹ್ಮಣ್ಯ ,ಶಿವ ಪಾರ್ವತಿಯರ ಮಗ. ಬ್ರಹ್ಮನ ಮಾನಸ ಪುತ್ರನಾದ ದಕ್ಷ ಪ್ರಜಾಪತಿಯು ತನ್ನ 13 ಜನ ಹೆಣ್ಣು ಮಕ್ಕಳನ್ನು  'ಕಶ್ಯಪ' ಮಹರ್ಷಿಗಳಿಗೆ  ಕೊಟ್ಟು ವಿವಾಹ ಮಾಡಿದನು. ಈ 13 ಜನ ಹೆಣ್ಣು ಮಕ್ಕಳಲ್ಲಿ ಕದ್ರು ಮತ್ತು ವಿನುತ ಎಂಬ ಅಕ್ಕತಂಗಿಯರು ಇದ್ದಾರೆ. ಕಶ್ಯಪ ಮಹರ್ಷಿಗಳಿಂದ ಕದ್ರು ಶಕ್ತಿಶಾಲಿ ಯಾದ ಸಾವಿರ  ಸರ್ಪ ಮಕ್ಕಳನ್ನು ಪಡೆದಳು. ವಿನುತ  ಸಾವಿರ ಮಕ್ಕಳ ಶಕ್ತಿ ಇರುವಂತಹ  ಮಕ್ಕಳು ಬೇಕೆಂದು, ಎರಡು ಮೊಟ್ಟೆಗಳನ್ನು ಹೆತ್ತಳು. ಆ ಮೊಟ್ಟೆಗಳು ವರ್ಷಗಳು ದಾಟಿದರೂ ಒಡೆಯದೇ ಇದ್ದಾಗ, ವಿನುತ ಅವಸರದಿಂದ ಒಂದು ಮೊಟ್ಟೆ ಒಡೆದಳು ಅದು ದೇಹದ ಮೇಲ್ಭಾಗ ವನ್ನು ಮಾತ್ರ ಪಡೆದಿತ್ತು. ಆ ಮಗುವಿಗೆ ಸಿಟ್ಟು ಬಂದು, ನಿನ್ನ ಅವಸರದಿಂದ ನಾನು ಈ ರೀತಿ ಅರ್ಧ ದೇಹದಿಂದ ಜನಿಸಲು ನೀನೆ ಕಾರಣ ಎಂದು ತಾಯಿಗೆ, 500 ವರ್ಷಗಳ ಕಾಲ ಬೇರೆಯವರಿಗೆ ದಾಸಿಯಾಗಿ ಸೇವೆ ಮಾಡುವಂತಾಗು ಎಂದು ಶಾಪ ಕೊಟ್ಟನು.  ಕೊನೆಗೆ ಪಶ್ಚಾತಾಪವಾಗಿ, ಅಮ್ಮ ಬೇಸರಪಡಬೇಡ ನಿನಗೆ  ಇನ್ನೊಬ್ಬ ಶಕ್ತಿಶಾಲಿ ಮಗ ಹುಟ್ಟಿ ಬಂದು ನಿನ್ನ‌.  ಶಾಪವಿಮೋಚನೆ ಮಾಡುತ್ತಾನೆ ಎಂದು ಹೇಳಿ ಆಕಾಶಕ್ಕೆ ಹಾರಿದನು ಅವನೇ ಸೂರ್ಯನ ರಥಕ್ಕೆ ಸಾರಥಿಯಾದ ಅರುಣ.


ಇನ್ನೊಂದು ಮೊಟ್ಟೆ ಒಡೆದು ಬಂದ ಮಗು ಶಕ್ತಿಶಾಲಿಯಾದ ಗರುಡನಾಗಿದ್ದ.  

ಮುಂದೆ ಒಂದು ದಿನ ಅಹಂಕಾರಿಯಾಗಿದ್ದ  ಕದ್ರು ತನ್ನ ಸಹೋದರಿ ವಿನುತಳ ಜೊತೆ  ಮೋಸದ ಪಂಥ ಕಟ್ಟಿ  ತಂಗಿಯನ್ನು ಸೋಲಿಸಿ, ಪಂಥದಂತೆ 500 ವರ್ಷಗಳ ಕಾಲ ತನ್ನ ಚರಣದಾಸಿಯಾಗಿ ಮಾಡಿಕೊಂಡಳು.( ಶಾಪದ ಕಾರಣವೂ ಸೇರಿತ್ತು) ಕದ್ರು ತಾನಾಡಿದ ಕಪಟ ಪಂಥದ ಆಟದ ಸಹಾಯಕ್ಕೆ  ತನ್ನ ನೂರು ಮಕ್ಕಳಾದ  ಸರ್ಪಗಳನ್ನು ಬಳಸಿಕೊಂಡಳು. ಮೊದ ಮೊದಲು ಸರ್ಪಗಳು  ಮೋಸವನ್ನು ನಾವು ಮಾಡುವುದಿಲ್ಲ ಎಂದು ಹೇಳಿದಾಗ, ಅವುಗಳಿಗೆ ಶಾಪ ಕೊಟ್ಟು ಹೆದರಿಸಿ ತನ್ನ ಕೆಲಸ ಮಾಡಿಸಿಕೊಂಡಳು.‌ ಇದು ವಿನುತಾಳ ಮಗ ಗರುಡನಿಗೆ ತಿಳಿಯುತ್ತದೆ. ಆದರೆ ತಾಯಿ ಸಮಾನಳಾದ ಕದ್ರುವನ್ನು ಕೊಲ್ಲದೆ, ಕ್ರೋದದಿಂದ  ಅವಳ ಮಕ್ಕಳಾದ  ಹಾವುಗಳನ್ನು ತಿನ್ನಲು ಶುರು ಮಾಡಿದ.‌ ಅದು ನೂರಾರು ಸಂಖ್ಯೆಯಲ್ಲಿ, ಕಂಡ ಕಂಡಲ್ಲಿ ಕುಕ್ಕಿ ಕುಕ್ಕಿ  ಮುಕ್ಕುತ್ತಿದ್ದ. ಸರ್ಪಗಳು ಗರುಡನಿಂದ  ಪ್ರಾಣ ಉಳಿಸುಕೊಳ್ಳುವ ಸಲುವಾಗಿ, ಶೇಷನಾಗ ಪಾತಾಳವನ್ನು ಸೇರಿಕೊಂಡ.  ಅನಂತನು ವೈಕುಂಠ ದಲ್ಲಿ ಮಹಾ ವಿಷ್ಣುವಿಗೆ ತಲ್ಪವಾಗುತ್ತಾನೆ. ಇನ್ನು ಉಳಿದ ಹಲವು ನಾಗಗಳೆಲ್ಲ ಶಿವನ ಕೈ ಕಾಲು ಮೈ ಮೇಲೆಲ್ಲಾ ಸುತ್ತಿಕೊಳ್ಳುತ್ತವೆ. ಕಾಳಿ ಎನ್ನುವ ಸರ್ಪ ನಂದಗೋಕುಲದಲ್ಲಿ ಯಮುನಾ ನದಿಯ ಮಡುವಲ್ಲಿ ಅಡಗಿಕೊಳ್ಳುತ್ತದೆ.

ಶಂಖಪಾಲ, ಪದ್ಮನಾಭ, ಕಂಬಲ, ದೃತರಾಷ್ಟ್ರ ಭೂಧರ ಅನಗಾದಿ ಇನ್ನೂ

ಮುಂತಾದ ಸರ್ಪಗಳು ಕಂಡ ಕಂಡಲ್ಲಿ ಅಡಗಿಕೊಳ್ಳುತ್ತವೆ.


ಇದರಲ್ಲಿ ವಾಸುಕಿ ಎಂಬ ಸರ್ಪ ಮಾತ್ರ ಗರುಡನ ಭಯದಿಂದ ತುಳುನಾಡಿಗೆ ಓಡಿ ಬರುತ್ತದೆ. ಸಹ್ಯಾದ್ರಿ ತಪ್ಪಲಲ್ಲಿರುವ 'ಧಾರಾ' ನದಿಯ ಸಮೀಪ ಇರುವ 'ಬಿಲದ್ವಾರ' ಎಂಬ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಆದರೆ ಇದು ಹೇಗೋ ಗರುಡನಿಗೆ ಗೊತ್ತಾಗಿ ಇಲ್ಲಿಗೂ ಬಂದನು. ವಾಸುಕಿಗೂ ಮತ್ತು ಗರುಡನಿಗೂ

ದೊಡ್ಡ ಕಾಳಗ ಆಗುತ್ತದೆ. ಈ ವಿಷಯ ತಿಳಿದ ಇವರಿಬ್ಬರಿಗೂ  ತಂದೆಯಾದ ಕಶ್ಯಪನು  ಅವಸರದಿಂದ ಬಂದು ಯುದ್ಧವನ್ನು ತಡೆಯುತ್ತಾನೆ. ಗರುಡನಿಗೆ ಹೇಳಿದ, ವಾಸುಕಿ ಶಿವನ ಅನನ್ಯ ಭಕ್ತನು. ಇವನು ಮುಂದೆ ಲೋಕ ಕಲ್ಯಾಣಾ ರ್ಥವಾಗಿ ಹಲವು ಕೆಲಸಗಳು ಇವನಿಂದ ಆಗಬೇಕಿದೆ ಆದುದರಿಂದ ವಾಸುಕಿ ಯನ್ನು ಬಿಡು ಎಂದರು. ಆದರೆ ಗರುಡ ಹೇಳಿದ. ನನಗೆ ತಿನ್ನಲು ಆಹಾರ ಬೇಕು ಏನು ಮಾಡಲಿ ಎಂದು ಕೇಳಿದಾಗ, ಕಶ್ಯಪರು ಹೇಳಿದರು ಇಲ್ಲಿಂದ ದೂರದಲ್ಲಿ  'ಮನಿಲಾ' ಎಂಬ ದ್ವೀಪವಿದೆ.‌ ಅಲ್ಲಿರುವ ದುಷ್ಟ ಬೇಡರನ್ನು  ಮತ್ತು  ಹಾವುಗಳನ್ನು ತಿಂದು ನಿನ್ನ ಹಸಿವನ್ನು  ನೀಗಿಸಿ ಕೋ ಎಂದರು.ತಂದೆಯ ಮಾತಿನಂತೆ  ಗರುಡ ಅಲ್ಲಿಂದ ಮನಿಲಾ ದ್ವೀಪಕ್ಕೆ ಹೊರಟನು.


ಆದರೆ ವಾಸುಕಿಗೆ ಇನ್ನೂ ಗರುಡನ ಭಯ ಇದ್ದುದರಿಂದ, ತಂದೆಯ ಹತ್ತಿರ ಈ ಭಯಕ್ಕೆ  ಏನು ಮಾಡಲಿ ಎಂದು ಕೇಳಿದ. ಇದಕ್ಕೆ ಕಶ್ಯಪರು, ನೀನು ಶಿವನನ್ನು ಕುರಿತು  ಕಠಿಣವಾದ ತಪಸ್ಸನ್ನು ಆಚರಿಸು  ಎಂದು ವಾಸುಕಿಗೆ ಹೇಳಿದರು. ಶಿವನ ಕುರಿತು  ಸಾವಿರಾರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ ವಾಸುಕಿ ಶಿವನನ್ನು ಒಲಿಸಿಕೊಂಡನು. ಪ್ರತ್ಯಕ್ಷನಾದ ಶಿವನಿಗೆ,  ತನಗಿರುವ ಪ್ರಾಣ ಭಯ ವನ್ನು ಹೋಗಲಾಡಿಸುವಂತೆ ಪ್ರಾರ್ಥಿಸಿದನು. ಪರಮೇಶ್ವರನು  ವಾಸುಕಿಗೆ ಆಶೀರ್ವದಿಸುತ್ತಾ, ನಿನಗೆ ಗರುಡನ ಭಯ ಬೇಡ. ಸರ್ಪಗಳ ರಕ್ಷಣೆ ಮಾಡುವ ಸಲುವಾಗಿಯೇ ಮುಂದಿನ ಕಲ್ಪದಲ್ಲಿ ಸುಬ್ರಹ್ಮಣ್ಯ ನಮ್ಮ ಮಗನಾಗಿ ಜನಿಸುತ್ತಾನೆ. ಸುಬ್ರಹ್ಮಣ್ಯನ ಜನನ ಬೇಗ ಆಗಲಿ. ಆ ದಿನ ಬೇಗ ಬೇಗ ಬರಲಿ ಎಂದು ನೀನು ಇಲ್ಲೇ ಕುಳಿತು ತಪಸ್ಸನ್ನು ಆಚರಿಸು ಎಂದನು. ವಾಸುಕಿ ಮತ್ತೆ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿದನು. ಕಠಿಣ ತಪಸ್ಸಿನ  ಫಲವಾಗಿ ಶಿವ ಪಾರ್ವತಿಯರಿಗೆ ,ಸುಬ್ರಹ್ಮಣ್ಯನ ಜನನವಾಗಿ ಅವನು, ರಾಕ್ಷಸ  ತಾರಕಾ ಸುರ ನನ್ನು ಸಂಹರಿಸಿ. ತನ್ನ ರಕ್ತ ಸಿಕ್ತ  ಆಯುಧವಾದ  'ವೇಲಾಯುಧ'ವನ್ನು ಸುಬ್ರಹ್ಮಣ್ಯದಲ್ಲಿರುವ 'ಧಾರ' ನದಿಯಲ್ಲಿ ತೊಳೆಯುತ್ತಾನೆ.  ಅಂದಿನಿಂದಲೇ 'ಧಾರ' ನದಿಗೆ 'ಕುಮಾರಧಾರ' ನದಿ ಎಂದು ಹೆಸರು ಬಂದಿತು. ಇಷ್ಟೆಲ್ಲ ಘಟನೆಗಳನ್ನು ಕೇಳಿ, ನೋಡಿದ  ಇಂದ್ರನು ತನ್ನ ಮಗಳಾದ  ದೇವಸೇನೆ ಯೊಂದಿಗೆ ಓಡಿ ಬಂದು ಸುಬ್ರಮಣ್ಯನಿಗೆ ತನ್ನ ಮಗಳನ್ನು  ಮದುವೆಯಾಗು ವಂತೆ ಪ್ರಾರ್ಥಿಸಿಕೊಂಡನು. ಸುಬ್ರಹ್ಮಣ್ಯನು( ಸುಬ್ರಮಣ್ಣಿನ ಇನ್ನೊಂದು ಆರು ಮುಖವಳ್ಳ ರೂಪ)  ಷಣ್ಮುಖನ ಒಪ್ಪಿಗೆಯನ್ನು ಪಡೆದು  ಸಕಲ ದೇವಾನು ದೇವತೆಗಳ ಸಮ್ಮುಖದಲ್ಲಿ ಕುಮಾರಧಾರಾ ನದಿಯ ತಟದಲ್ಲಿಯೇ ಚಂಪಾ ಷಷ್ಟಿಯ ದಿನದ ಶುಭ ಮಹೂರ್ತದಲ್ಲಿ ಇಂದ್ರನ ಮಗಳು ದೇವಸೇನೆ ಯೂಂದಿಗೆ  ಸುಬ್ರಹ್ಮಣ್ಯನ ವಿವಾಹ ಸಂಭ್ರಮ ನಡೆಯುತ್ತದೆ. 


ಮುಂದೆ ವಾಸುಕಿಯ  ಅಪೇಕ್ಷೆಯಂತೆ, ಸುಬ್ರಮಣ್ಯನು ತನ್ನ ಪತ್ನಿ ದೇವಸೇನಾ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲೆಸಲು ಇಚ್ಛೆ ವ್ಯಕ್ತಪಡಿಸಿದಾಗ, ಸ್ವತಹ ವಿಶ್ವಕರ್ಮನೆ  ಮೂರ್ತಿಯನ್ನು  ಕಡೆದುಕೊಡುತ್ತಾನೆ. ಎಲ್ಲಾ ದೇವರ ಸಮ್ಮುಖ ದಲ್ಲಿ ಸುಬ್ರಹ್ಮಣ್ಯ ಮೂರ್ತಿಯನ್ನು ಬ್ರಹ್ಮ ದೇವನು  ಪ್ರತಿಷ್ಠಾಪನೆ ಮಾಡಿದನು. ಗರುಡನ ಭಯದಿಂದ ಕಠಿಣ ತಪಸ್ಸು ಮಾಡುವ ಮೂಲಕ ಸುಬ್ರಮಣ್ಯನನ್ನು ಧರೆಗಿಳಿಸಿದ 'ವಾಸುಕಿ'ಯನ್ನು ದೇವತೆಗಳು ಹೊಗಳಿ, 'ನಾಗಬ್ರಹ್ಮ' ಎಂಬ ಹೆಸರಿನಿಂದ ತುಳುನಾಡಿನವರು ನಿನ್ನನ್ನು ಆರಾಧಿಸಲಿ ಎಂದು ದೇವಾನು ದೇವತೆಗಳೆಲ್ಲ  ವಾಸುಕಿಗೆ ವರಕೊಟ್ಟರು. ಹಾಗೆಯೇ  ಗರುಡನ  ಆಗಮನ ದೊಂದಿಗೆ   ಚಂಪಾಷಷ್ಟಿ ಯ ದಿನ ಜಾತ್ರೆ ನಡೆಯುತ್ತದೆ. ಬಹಳ ದೊಡ್ಡ ಜಾತ್ರೆ. ಈ ದಿನ ಸುಬ್ರಮಣ್ಯ ರಥೋತ್ಸೋವ  ಇರುತ್ತದೆ.  ಗರುಡ ಬರದೆ  ರಥ ಎಳೆಯುವುದಿಲ್ಲ. ಎಲ್ಲೇ ಇದ್ದರೂ ಗರುಡ ರಥ ಎಳೆಯುವ ಸಮಯಕ್ಕೆ ಸರಿಯಾಗಿ ಬಂದು  ಆಕಾಶದ ಮೇಲೆ  ಹಾರಾಡುತ್ತಾ  ಭಕ್ತರ ಕಣ್ಣಿಗೆ ಗೋಚರಿಸುತ್ತಾನೆ. ಆನಂತರವೇ ರಥ ಎಳೆಯುತ್ತಾರೆ.  ಸುಬ್ರಹ್ಮಣ್ಯ ನ ಪ್ರಮುಖ ಕ್ಷೇತ್ರಗಳಲ್ಲಿ ರಥೋತ್ಸವವನ್ನುಸ  ಗರುಡ ಬಂದು ಹಾರಾಡಿದ್ದು ಕಂಡ ಮೇಲೆ  ರಥೋತ್ಸವ ಆರಂಭವಾಗುತ್ತದೆ.  ಹಿಂದಿನಿಂದಲೂ ಸಂಪ್ರದಾಯವಾಗಿ ನಡೆದು ಬಂದಿದೆ. ನಾಗನ ಮೇಲಿರುವ ನಂಬಿಕೆ, ನಾಗ ದೋಷದ  ಆತಂಕದ  ಭಯ, ಜನರ  ಶ್ರದ್ಧಾ ಭಕ್ತಿಗೆ  ಹೆಚ್ಚು ಒತ್ತು ಕೊಟ್ಟಿದೆ.

ನಂಬಿಕೆಯಂತೆ, ನಾಗದೇವರಲ್ಲಿ ಬೇಡಿಕೊಂಡವರಿಗೆ ಸಂತಾನ ಪ್ರಾಪ್ತಿ, ಸಂಪತ್ತು, ಆರೋಗ್ಯ ಭಾಗ್ಯ, ಚರ್ಮ ವ್ಯಾದಿ, ವಾಸಿಯಾಗದ  ಕಾಯಿಲೆಗಳು, ಮನೆಯಲ್ಲಿ ಬರುವ ತೊಂದರೆ ತೊಡಕುಗಳು, ಗೃಹದೋಷ, ಗ್ರಹಗತಿಗಳ ದೋಷಗಳ ನಿವಾರಣೆ ಇಂಥವುಗಳಿಗೆಲ್ಲ ಸುಬ್ರಹ್ಮಣ್ಯನಲ್ಲಿ ಭಕ್ತಿಯಿಂದ ಬೇಡಿಕೊಂಡರೆ, ಎಲ್ಲಾ ಕಷ್ಟ ಕಾರ್ಪಣ್ಯಗಳು ಪರಿಹಾರವಾಗಿ, ಸಂಪತ್ತು, ಸಮೃದ್ಧಿ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಂತೆಯೇ ನಡೆಯುತ್ತಿದೆ. ಸುಬ್ರಮಣ್ಯ ಕ್ಷೇತ್ರಗಳಲ್ಲಿ ಚಂಪಾ ಷಷ್ಟಿಯನ್ನು ವಿಧಿ ವಿಧಾನ ಗಳೊಂದಿಗೆ, ಹಲವು ತರದ ಧಾರ್ಮಿಕ ಆಚರಣೆಗಳು ನಡೆದು, ವಿಜೃಂಭಣೆ ಯಿಂದ ಉತ್ಸವವನ್ನು  ಆಚರಿಸುತ್ತಾರೆ.


ಕಾರ್ತಿಕೇಯ ಮಂತ್ರಾ: 

ಪೂಜಾ ಮಂತ್ರ!

ದೇವಸೇನಾಪತೇ ಸ್ಕಂದ ಕಾರ್ತಿಕೇಯ ಭವೋದ್ಭವ !

ಕುಮಾರ ಗುಹ  ಗಾಂಗೆಯ ಶಕ್ತಿ ಹಸ್ತ ನಮೋಸ್ತುತೆ !!


ಗಾಯತ್ರಿ ಮಂತ್ರ!

ಓಂ ತತ್ಪುರುಷಾಯ ವಿದ್ಮಹೇ

ಮಹಾಸೇನಾಯ ಧೀಮಹಿ

ತನ್ನೋ  ಸ್ಕಂದ: ಪ್ರಚೋದಯಾತ್ !!


ಶತ್ರು ವಿನಾಶಕ ಮಂತ್ರ:-

ಓಂ ಶರವಣ ಭವಾಯ ನಮಃ!!

ಜ್ಞಾನ ಶಕ್ತಿ ಧಾರಾ ಸ್ಕಂದ, 

ವಲ್ಲೀ ಕಲ್ಯಾಣ ಸುಂದರಾ !

ದೇವಸೇನಾ ಮನಃ ಕಾಂತಾ

ಕಾರ್ತಿಕೇಯ ನಮೋಸ್ತುತೇ!!


ಷಡಾನನಂ ಕುಂಕುಮ ರಕ್ತ ವರ್ಣಂ

ಮಹಾ ಮತಿಂ ದಿವ್ಯ ಮಯೂರ ವಾಹನಂ!

ರುದ್ರಸ್ಯ ಸೂನಂ ಸುರ ಸೈನ್ಯನಾಥಂ

ಗುಹಂ ಸದಾ  ಶರಣಮಹಂ ಭಜೇ!!

ಮಯೂರಾಧಿ ರೂಢಂ ಮಹಾ ವಾಕ್ಯ  ಗೂಢಂ

ಮನೋಹಾರಿ ದೇಹಂ ಮಹಾಚ್ಚಿತ ಗೇಹಂ !

ಮಹೀ ದೇವ ದೇವಂ  ಮಹಾ ವೇದ ಭಾವಂ

ಮಹಾದೇವ ಬಾಲಂ ಭಜೇ ಲೋಕಪಾಲಂ !!

ವಂದನೆಗಳೊಂದಿಗೆ,

ಬರಹ:- ಆಶಾ ನಾಗಭೂಷಣ.

***

ಚಂಪಾ ಷಷ್ಠಿ: ಕಾರ್ತಿಕೇಯನು ಸುಬ್ರಹ್ಮಣ್ಯನಾಗಿ ಕುಕ್ಕೆಯಲ್ಲಿ ನೆಲೆನಿಲ್ಲಲು ಕಾರಣವೇನು ಗೊತ್ತಾ?


ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠೀ. ಕರಾವಳಿಗರಿಗೆ ಇದೊಂದು ವಿಶೇಷ ಹಬ್ಬವೂ ಹೌದು. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನಲೆ ಇದೆ.

ಸ್ಕಂದ ಷಷ್ಠಿ ನಂತರ ಬರುವ ಆಚರಣೆಯೇ ಸುಬ್ರಹ್ಮಣ್ಯ ಷಷ್ಠಿ. ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಪ್ರಸಿದ್ಧಿಯನ್ನು ಪಡೆದಿದೆ. ಶುಕ್ಲಪಕ್ಷದ ಆರನೇ ದಿನ ಅಂದರೆ ಡಿಸೆಂಬರ್ 18 ರಂದು ಆಚರಿಸಲ್ಪಡುವ ಷಷ್ಠಿ ಹಿಂದೂಗಳ ಪ್ರಮುಖ ಹಬ್ಬ. ತುಳುನಾಡಿಗೆ ಇದು ಪ್ರಮುಖ ಹಬ್ಬವೂ ಹೌದು.


ಕಾರ್ತಿಕೇಯ, ಮುರುಗ, ಸ್ಕಂದ, ವೇಲಾಯುಧ, ಕುಮಾರಸ್ವಾಮಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಶಿವ ಹಾಗೂ ಪಾರ್ವತಿಯರ ಪುತ್ರ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಚರಿಸಲ್ಪಡುವ ಪ್ರಸಿದ್ಧ ಚಂಪಾಷಷ್ಠಿಯ ಹಿಂದೆ ಪುರಾಣ ಕಥೆಯೊಂದಿದೆ. ಆ ಕಥೆಯ ಹಿನ್ನೆಲೆ ಇಲ್ಲಿದೆ ನೋಡಿ.


ಋಷಿ ಕಶ್ಯಪ ಮಹಾಮುನಿಗೆ ಹದಿಮೂರು ಜನ ಪತ್ನಿಯರು. ಇವರೆಲ್ಲರೂ ದಕ್ಷ ಪ್ರಜಾಪತಿಯ ಮಕ್ಕಳು, ಅಂದರೆ ಅಕ್ಕ ತಂಗಿಯರು. ಅದರಲ್ಲಿ ಕದ್ರು ಮತ್ತು ವಿನುತಾ ಕೂಡಾ ಇಬ್ಬರು. ಒಂದು ದಿನ ಕದ್ರು ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ. ಅವರು ಒಪ್ಪದಿದ್ದಾಗ ಅವರಿಂದ ವಚನವನ್ನು ಪಡೆದು ಗಳಿಸಿಕೊಳ್ಳುತ್ತಾಳೆ. ಇದು ವಿನುತಾಳ ಮಗನಾದ ಗರುಡನಿಗೆ ತಿಳಿದು ಹೋಗುತ್ತದೆ. ಆದರೆ ಕದ್ರು ತನ್ನ ತಾಯಿಗೆ ಸಮಾನಳಾಗಿದ್ದುದರಿಂದ ಅವಳಿಗೆ ಏನೂ ಮಾಡಲಾಗದೆ ದ್ವೇಷ ಸರ್ಪಗಳ ಮೇಲೆ ತಿರುಗುತ್ತದೆ. ದ್ವೇಷದಿಂದ ಸಹಸ್ರ ಸಹಸ್ರ ಹಾವುಗಳನ್ನು ಕುಕ್ಕಿ ಮುಕ್ಕ ತೊಡಗುತ್ತಾನೆ.


ಗರುಡನಿಂದಾಗಿ ಪ್ರಾಣ ಭಯದಿಂದ ಶೇಷ ಪಾತಾಳವನ್ನು ಸೇರಿಕೊಳ್ಳುತ್ತಾನೆ. ಅನಂತನು ವೈಕುಂಠದಲ್ಲಿ ಹರಿಗೆ ತಲ್ಪವಾಗುತ್ತಾನೆ. ನಾಗಗಳು ಶಿವನ ಕೊರಳು ಕೈ ಕಾಲುಗಳನ್ನು ಸುತ್ತಿಕೊಳ್ಳುತ್ತವೆ. ಕಾಳಿಯ ಅನ್ನುವ ಹಾವು ನಂದ ಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ. ಹಾಗೆಯ ಶಂಕಪಾಲ, ಭೂಧರ, ಅನಘಾದಿ ಸರ್ಪಗಳು ಒಂದೊಂದು ಕಡೆಯಲ್ಲಿ ಅಡಗಿಕೊಳ್ಳುತ್ತವೆ. ವಾಸುಕಿ ಅನ್ನುವ ಮಹಾಸರ್ಪವೊಂದು ಗರುಡ ಭಯದಿಂದ ತುಳುನಾಡಿಗೆ ಓಡಿಬರುತ್ತದೆ.


ತುಳುನಾಡಿನ ತಪ್ಪಲಿನ ಸಹ್ಯಾದ್ರಿ ಮಡಿಲಿನ, ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಅನ್ನುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದು ಹೇಗೋ ಗರುಡನಿಗೆ ತಿಳಿದು ಹೋಗುತ್ತದೆ. ಘನಘೋರ ಯುದ್ಧವಾಗುತ್ತದೆ. ವಿಷಯ ತಿಳಿದ ಇವರೀರ್ವರ ಅಪ್ಪನಾದ ಕಶ್ಯಪ ಓಡೋಡಿ ಬಂದು ಯುದ್ಧವನ್ನು ತಡೆಯುತ್ತಾನೆ.ಮಹಾ ಶಿವ ಭಕ್ತನಾದ ವಾಸುಕಿಯಿಂದ ಹಲವು ಲೋಕ ಕಲ್ಯಾಣ ಕೆಲಸವೂ ನಡೆಯಬೇಕಿರುವುದನ್ನು ಗರುಡನಿಗೆ ಹೇಳುತ್ತಾನೆ. ಗರುಡ ತನ್ನ ಹಸಿವನ್ನು ಇಂಗಿಸುವಂತೆ ಕೇಳಿಕೊಂಡಾಗ ಮನಿಲಾ ದ್ವೀಪದಲ್ಲಿ ದುಷ್ಟ ಬೇಡರು ಮತ್ತು ಹಾವುಗಳನ್ನು ತಿಂದು ಹಸಿವನ್ನು ಇಂಗಿಸಿಕೊಳ್ಳುವಂತೆ ಹೇಳುತ್ತಾನೆ.


ವಾಸುಕಿಯು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಅಪ್ಪನನ್ನು ಮೊರೆಯಿಡುತ್ತಾನೆ. ಅಪ್ಪ ಶಿವನನ್ನು ಕುರಿತು ತಪಸ್ಸನ್ನು ಆಚರಿಸಲು ಹೇಳುತ್ತಾನೆ. ವಾಸುಕಿಯು ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಹೇಳುತ್ತಾನೆ. ಅದಕ್ಕೆ ಶಿವನು "ವಾಸುಕಿ, ಚಿಂತಿಸಬೇಡ ಮುಂದಿನ ಕಲ್ಪದಲ್ಲಿ ಸರ್ಪ ಕುಲದ ರಕ್ಷಣೆಗಾಗಿ ಸುಬ್ರಮಣ್ಯ ಸ್ವಾಮಿಯ ನನ್ನ ಮಗನಾಗಿ ಜನಿಸುತ್ತಾನೆ. ಆ ದಿನವು ಬೇಗ ಸನ್ನಿಹಿತವಾಗುವಂತೆ ಇಲ್ಲೇ ಇದ್ದುಕೊಂಡು ತಪಸ್ಸನ್ನು ಆಚರಿಸು' ಎಂದು ಹೇಳುತ್ತಾನೆ.


ಹೀಗೆ ಹಲವು ವರ್ಷಗಳು ಕಳೆಯಲು ಸುಬ್ರಮಣ್ಯ ಸ್ವಾಮಿಯು ತಾರಕಾಸುರನನ್ನು ಕೊಂದು ತನ್ನ ರಕ್ತ ಸಿಕ್ತ ಆಯುಧವನ್ನು ಧಾರಾ ನದಿಗೆ ಬಂದು ತೊಳೆಯುತ್ತಾನೆ. ಅಂದಿನಿಂದ ಆ ನದಿಯು ಕುಮಾರಧಾರ ಅನ್ನುವ ಹೊಸ ನಾಮಧೇಯದಿಂದ ಕರೆಯಲ್ಪಡುತ್ತದೆ.


ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಓಡೋಡಿ ಬಂದು ವಿವಾಹವಾಗುವಂತೆ ಪ್ರಾರ್ಥಿಸಿಕೊಳ್ಳುತಾನೆ. ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವರುಗಳ ಮುಂದೆ ಕುಮಾರಧಾರ ತಟದಲ್ಲಿ ಚಂಪಾ ಷಷ್ಠಿಯ ದಿನದ ಸುಘಳಿಗೆಯಲ್ಲಿ ಮದುವೆ ನಡೆಯುತ್ತದೆ. ಮುಂದೆ ವಾಸುಕಿಯ ಇಚ್ಚೆಯಂತೆ ತನ್ನ ಪತ್ನಿಯಾದ ದೇವಸೇನೆ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆಸಲು ಸುಬ್ರಹ್ಮಣ್ಯನು ಇಚ್ಛಿಸಿದಾಗ, ವಿಶ್ವಕರ್ಮ ಮೂರ್ತಿಯನ್ನು ಮಾಡಿಕೊಡುತ್ತಾನೆ. ಬ್ರಹ್ಮ ಅದನ್ನು ಎಲ್ಲಾ ದೇವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸುತ್ತಾನೆ.


ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ನಾಗಬ್ರಹ್ಮ ಅನ್ನುವ ನಾಮಧೇಯದಿಂದ ಪೂಜಿಸಲಿ ಎಂದು ಸಕಲ ದೇವರುಗಳು ವಾಸುಕಿಯನ್ನು ಹರಸುತ್ತಾರೆ. ಹಾಗಾಗಿ ಸುಬ್ರಮಣ್ಯ ನೆಲೆಸಲು ಕಾರಣನಾದ ಗರುಡ ಬರದೇ ಕೆಲವು ಕಡೆ ಚಂಪಾ ಷಷ್ಟಿಯ ರಥವನ್ನು ಎಳೆಯುವ ಕ್ರಮ ಇಲ್ಲ. ಇದೊಂದು ಸಂಪ್ರದಾಯವಾಗಿ, ಹಬ್ಬವಾಗಿ ಇಂದಿಗೂ ವೈಭವದಿಂದ ಆಚರಿಸಲ್ಪಡುತ್ತದೆ.

***



No comments:

Post a Comment