SEARCH HERE

Monday, 27 September 2021

ಮಾಘ ನವರಾತ್ರಿ magha shukla pratipada to navami magha navaratri

  

ಆನಂದತೀರ್ಥವರದೇ ದಾನವರಾಣ್ಯಪಾವಕೇ | ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇsಸ್ತುಮೇ ಮನಃ ||
ಶ್ರೀವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭಿಷ್ಟದಂ |  ಚತುರ್ಮುಖೇರತನಯಂ  ಶ್ರೀನಿವಾಸಂ ಭಜೇsನಿಷಮ್ ||

ಎಲ್ಲ ಆಸ್ತಿಕ ಬಂಧುಗಳಿಗೆ ನವರಾತ್ರಿ ಶುಭಾಶಯಗಳು, ಶ್ರೀ ಭೂ ದುರ್ಗಾಂತರ್ಗತ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನು ಸಲಹಲಿ.

ನವರಾತ್ರಿ, ಈ ಶಬ್ದ ಕೇಳಿದರೆ ಸಾಕು ಮನಸ್ಸಿನಲ್ಲಿ ಉಲ್ಲಾಸ ಮೂಡುತ್ತದೆ. ಚೈತನ್ಯ ಗರಿಗೆದರುತ್ತದೆ. ಹೌದು, ಇದು ಉಪಾಸಕರಿಗೆ ಉಪಾಸನೆ ಮಾಡಲು ಅತ್ಯಂತ ಪ್ರಶಸ್ತವಾದ ಕಾಲ. ದೇವಿಯ ಅನುಗ್ರಹದ ಜತೆ ದೇಹದ ಸ್ಥಿರತೆ ಕಾಪಾಡಲು ಈ ಕಾಲ ಅತ್ಯಂತ ಉಪಯುಕ್ತವಾಗಿದೆ.
 
 ಅನಾದಿ ಕಾಲದಿಂದ ಬಂದಿರುವ ಸಂಪ್ರದಾಯಗಳಲ್ಲಿ ಅನೇಕ ವಿಶೇಷಗಳನ್ನು ಕಾಣಬಹುದು. ದೀಪಾವಳಿ, ಯುಗಾದಿ, ಹೋಳಿ, ನಾಗಪಂಚಮಿ, ವಿನಾಯ ಚತುರ್ಥಿ ಮತ್ತಿತರ ಹಬ್ಬಗಳನ್ನು  ವರ್ಷದಲ್ಲಿ ಒಮ್ಮೆ ಮಾತ್ರ ಆಚರಿಸುತ್ತೇವೆ. ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. (ವಿಶೇಷವೆಂದರೆ ಪುರಾತನ ಕಾಲದಲ್ಲಿ ಈ ಹಬ್ಬವನ್ನು ಐದು ನವರಾತ್ರಿಗಳಾಗಿ ಆಚರಿಸುತ್ತಿದ್ದರು. ಕಾಲಕ್ರಮೇಣ ಈಗ ಎರಡು ಬಾರಿ ಆಚರಣೆಗೆ ಮಾತ್ರ ಸೀಮಿತಗೊಂಡಿದೆ). 

 ಸಧ್ಯ ಈಗ ಆಚರಿಸುತ್ತಿರುವ ನವರಾತ್ರಿಗಳು ವಸಂತ ನವರಾತ್ರಿ ಮತ್ತು ಶರನ್ನವರಾತ್ರಿ. ವಸಂತ ನವರಾತ್ರಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೂ, ದಕ್ಷಿಣ ಭಾರತದಲ್ಲಿಯೂ ಇದರ ಆಚರಣೆ ನಡೆಯುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದೇವರಿಗೆ ಈ ನವಮಿ ಮೀಸಲಾಗಿದ್ದು, ರಾಮದೇವರ ಜನ್ಮದಿನಾಚರಣೆ ರೂಪವಾಗಿ ಆಚರಿಸಲಾಗುತ್ತದೆ. ಹಾಗೆಯೇ ಶರನ್ನವರಾತ್ರಿಯನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ದೇವಿ ಆರಾಧನೆ ರೂಪದಲ್ಲಿ ಆಚರಿಸಲಾಗುತ್ತದೆ.
 ಸಾಮಾನ್ಯವಾಗಿ ಶ್ರೀದುರ್ಗಾದೇವಿಯೂ ಕ್ರೋಧ ಹಾಗೂ ರೌದ್ರ ರೂಪದಲ್ಲಿ ಇರುತ್ತಾಳೆಂದು ಜನರ ನಂಬಿಕೆ. ಆದರೆ ನವರಾತ್ರಿ ವೇಳೆ ಆಕೆಯು ಸಾತ್ವಿಕ ರೂಪತಾಳಿ ನಮ್ಮನ್ನು ಅನುಗ್ರಹಿಸಲೆಂದು ಪೂಜಿಸುವುದು ವಾಡಿಕೆಯಾಗಿದೆ. 
 
 ಈ ಎರಡೂ ನವರಾತ್ರಿಗಳ ಆಚರಣೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೇ, ಈ ಹಬ್ಬ ಆಚರಿಸುವ ಎರಡು ತಿಂಗಳು(ಮಾಸ)ಗಳು ಋತು ಬದಲಾವಣೆಯ ತಿಂಗಳಾಗಿವೆ. ವಸಂತ ನವರಾತ್ರಿಯು ಚೈತ್ರಮಾಸದ ಆರಂಭದಲ್ಲಿ ಬರುತ್ತದೆ. ಇದು ಬೇಸಿಗೆ ಆರಂಭದ ವೇಳೆಯಾಗಿದ್ದು, ಆರಂಭದಲ್ಲಿ ಹದವಾದ ಶುಷ್ಕ ವಾತಾವರಣವಿದ್ದರೂ ದಿನಗಳೆದಂತೆ ತಾಪಮಾನ ಏರುತ್ತದೆ. ಇದೇ ರೀತಿ ಶರನ್ನವರಾತ್ರಿಯು ಆಶ್ವಯುಜ ಮಾಸದ ಆರಂಭದಲ್ಲಿ ಆಚರಿಸಲಾಗುತ್ತದೆ. ಈ ದಿನಗಳು ಹದವಾದ ಮಳೆಗಾಲದಿಂದ ಕೂಡಿದ ಅತ್ತ ಬಿಸಿಯೂ ಇಲ್ಲದ ಇತ್ತ ಪೂರ್ತಿ ಚಳಿಯೂ ಅಲ್ಲದ ಕಾಲವಾಗಿದ್ದು ನಂತರ ಚಳಿ ಏರುತ್ತದೆ. ವಿಶೇಷವೆಂದರೆ ಈ ಎರಡೂ ಕಾಲದಲ್ಲಿ ರೈತರಿಗೆ ಬಿಡುವು. ಚೈತ್ರಮಾಸದಲ್ಲಿ ಆಗ ತಾನೇ ಸುಗ್ಗಿ ಮುಗಿದು ರೈತನಿಗೆ ಬಿಡುವು ದೊರೆತಿರುತ್ತದೆ. ಶರನ್ನವರಾತ್ರಿಯಲ್ಲಿ ಬಿತ್ತನೆ ಮಾಡಿದ ಬೆಳೆ ಹುಲುಸಾಗಿ ಬೆಳೆದಿರುತ್ತದೆ, ಇನ್ನೂ ಕಟಾವು ಸಮಯಬಾರದ ಕಾರಣ ಬಿಡುವಾಗಿರುತ್ತಾನೆ. ಇಂತಹ ಸಮಯದಲ್ಲಿ ಭಗವಂತನ ಆರಾಧನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಜತೆಗೆ ಆಹಾರ ಕ್ರಮವೂ ಹೊಸ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ವಸಂತ ನವರಾತ್ರಿ ಸಮಯದಲ್ಲಿ ಹೊಸದಾಗಿ ಬೆಳೆದ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರ ಸಮತೋಲನಕ್ಕಾಗಿ ಹೆಸರುಬೇಳೆ ಕೋಸಂಬರಿ, ಬೆಲ್ಲ – ನಿಂಬೆ - ಕರಬೂಜ ಹಣ್ಣಿನ ಪಾನಕ, ಬೆಣ್ಣೆ ತೆಗೆದು ನೀರು ಸೇರಿಸಿದ ಮಜ್ಜಿಗೆ ಸೇವಿಸಲಾಗುತ್ತದೆ.(ಕೆಲವರು ಉಪವಾಸ ಆಚರಿಸುತ್ತಾರೆ).
 ಹಾಗೆಯೇ ಶರನ್ನವರಾತ್ರಿಯ ನಂತರದ ದಿನಗಳು ಚಳಿಗಾಲವಾಗಿದ್ದು, ಅನ್ನದ ಪದಾರ್ಥಗಳು ಹಾಗೂ ದ್ವಿದಳ ಧಾನ್ಯದ ಪದಾರ್ಥಗಳು ಸರಿಯಾಗಿ ಪಚನವಾಗುವುದಿಲ್ಲ. ಇದರ ಸಮತೋಲನೆಗಾಗಿ ನವರಾತ್ರಿ ವೇಳೆ ಹೆಚ್ಚು ಜನ ಅನ್ನ ಸೇವಿಸದೆ ಉಪವಾಸವಿರುತ್ತಾರೆ. ಈ ಸಮಯದಲ್ಲಿ ಹಾಲು, ಹಣ್ಣು, ಎಳನೀರು, ಅವಲಕ್ಕಿ ತಿಂದು ಕಾಲ ಕಳೆಯುತ್ತಾರೆ. ಉಪ್ಪು, ಸಕ್ಕರೆ ಹೆಚ್ಚಾಗಿ ಸೇವಿಸದ ಕಾರಣ  ಮುಂದಿನ ಚಳಿಗಾಲದ ದಿನಗಳ ಆಹಾರ ಹೊಂದಾಣಿಕೆಗೆ ದಾರಿಯಾಗುತ್ತದೆ. ಜತೆಗೆ ಉಪವಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ದೃಢತೆ ಹೆಚ್ಚುತ್ತದೆ.  

ನವರಾತ್ರಿಗಳು ಐದು:

ಒಂದು ವರ್ಷದಲ್ಲಿ ಒಟ್ಟು ಐದು ನವರಾತ್ರಿಗಳು ಬರುತ್ತವೆ: ೧. ವಸಂತ ನವರಾತ್ರಿ, ೨. ಗುಪ್ತ ನವರಾತ್ರಿ, ೩.ಶರನ್ನವರಾತ್ರಿ, ೪. ಪೌಷ ನವರಾತ್ರಿ ಹಾಗೂ ೫.ಮಾಘ ನವರಾತ್ರಿ. 

೧. ವಸಂತ ನವರಾತ್ರಿ: ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ. ಶ್ರೀರಾಮನವಮಿ ಬರುವುದರಿಂದ ರಾಮನವರಾತ್ರಿ ಎನ್ನಲಾಗುತ್ತದೆ. ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

೨. ಗುಪ್ತ ನವರಾತ್ರಿ: ಆಷಾಢ ಮಾಸದ ಶುಕ್ಲಪಕ್ಷದ ಪಾಡ್ಯಮಿಯಿಂದ ನವಮಿಯವರೆಗೆ. ಈ ವೇಳೆ ಗಾಯತ್ರಿ ದೇವಿಯ ಜತೆ ನವ ಶಕ್ತಿ ಆರಾಧನೆ ನಡೆಯುತ್ತದೆ. 
೩. ಶರನ್ನವರಾತ್ರಿ: ಶ್ರೀದುರ್ಗಾದೇವಿಯ ಒಂಭತ್ತು ರೂಪಗಳನ್ನು ಆರಾಧಿಸಲಾಗುತ್ತದೆ. 
4.ಪುಷ್ಯಮಾಸದ ಪೌಷ ನವರಾತ್ರಿ ಹಾಗೂ 5.ಮಾಘ ಮಾಸದ ಮಾಘ ನವರಾತ್ರಿ ದೇವಿ ಆರಾಧನೆಗೆ ಪ್ರಶಸ್ತಕಾಲಗಳಾದರೂ ಚಾಲನೆಯಲ್ಲಿಲ್ಲ. ಆದರೆ ಮಾಘಮಾಸದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ಸಶರೀರರಾಗಿ ಬದರೀಕಾಶ್ರಮ ಪ್ರವೇಶಿಸಿದರು. ತದಂಗವಾಗಿ ಪ್ರತಿಪದೆಯಿಂದ ನವಮಿವರೆಗೆ ಮಧ್ವನವಮಿ ಆಚರಿಸಲಾಗುತ್ತಿದೆ. 
***

No comments:

Post a Comment