ಶ್ರೀಮಜ್ಜಯತೀರ್ಥಶ್ರೀಚರಣ ವಿರಚಿತಾ - ಪದ್ಯಮಾಲಾ
ಪ್ರಣಮ್ಯ ಶ್ರೀಪತಿಂ ಸರ್ವಾನ್ ಗುರೂಂಶ್ಚಾಥ ಪ್ರವಚ್ಮ್ಯಹಂ|ಯಥಾಮತಿ ಹರೇಃ ಪೂಜಾವಿಧಿಂ ವೈಷ್ಣವಸಂಮಂತಂ||೧||
ಲಕ್ಷ್ಮೀಪತಿಯಾದ ನಾರಾಯಣನನ್ನು ಮತ್ತು ಎಲ್ಲಾ ಗರುಗಳನ್ನು ಸಹ ಅತ್ಯಂತ ಭಕ್ತಿಪೂರ್ವಕ ನಮಸ್ಕರಿಸಿ , ವೈಷ್ಣವರಿಗೆ ಸಂಮತವಾದ ವಿಷ್ಣುಪೂಜಾವಿಧಿಯನ್ನು ಯಥೋಚಿತವಾಗಿ ವಿವರಸುತ್ತೇವೆ .
ಆದೌ ದೇವಗೃಹೇ ನ್ಯಸ್ಯ ಕಲಶಾನ್ ಸಪ್ತ ಪಂಚ ವಾ |ಆಹರೇತ್ತುಲಸೀಂ ದೂರ್ವಾಂ ಪುಷ್ಪಾಣ್ಯದ್ಯತನಾನಿ ಚ ||೨||
ಮೊದಲಿಗೆ ದೇವಗೃಹದಲ್ಲಿ ಏಳು ಅಥವಾ ಐದು ಕಲಶಗಳನ್ನು ಸ್ಥಾಪಿಸಿ , ಅನಂತರ ತುಲಸಿಯನ್ನು , ಗರಿಕೆಯನ್ನು ತರಬೇಕು . ಅದೇ ದಿನ ಬಿಡಿಸಿದ ಹೂವುಗಳನ್ನು ಸಹ ತಂದಿಟ್ಟುಕೊಳ್ಳಬೇಕು .
ಯಥಾಕಾಲೋಪಪನ್ನಾನಿ ಸ್ವಾರಾಮವನಜಾನ್ಯಪಿ|ಅಕ್ರೀತ್ತಾನ್ಯಪ್ರದತ್ತಾನಿ ಚೌರ್ಯಾಲ್ಲಬ್ಧಾನಿ ಯಾನಿ ಚ ||೩|| ಶೂದ್ರಾಹೃತಾನಿ ವಾ ಭೂಮೌ ಪತಿತಾನಿ ತಥೈವ ಚ |ಏರಂಡಾರ್ಕಜಪತ್ರೇಷು ಚಾಹೃತಾನಿ ಕರೇ ತಥಾ ||೪|| ಪಟಾಹೃತಾನಿ ಯಾನಿ ಸ್ಯುರ್ವರ್ಜಯೇತ್ತಾನಿ ಯತ್ನತಃ||೫||
ಪುಷ್ಪಗಳು ಆಯಾ ಋತುಮಾನಗಳಿಗೆ ಯೋಗ್ಯವಾಗಿರಬೇಕು , ಸಾತ್ವಿಕ ಸುವಾಸಿತ ಹೂವುಗಳು ಆಗಿರಬೇಕು , ತನ್ನ ಮನೆಯ ತೋಟದಲ್ಲಾಗಲೀ , ಕಾಡಿನಲ್ಲಾಗಲೀ ಬೆಳೆದವುಗಳಾಗಿರಬೇಕು . ಶೂದ್ರರ ಕೈಯಿಂದ ತರಲ್ಪಡುವ ಪುಷ್ಪಗಳಾಗಲೀ , ತುಲಸಿಯಾಗಲೀ , ಭೂಮಿಯ ಮೇಲೆ ಉದುರಿ ಬಿದ್ದಂತಹ ಪುಷ್ಪಗಳಾಗಲೀ , ಪೂಜೆಗೆ ನಿಷಿದ್ಧವಾದುವು . ಹರಳು , ಎಕ್ಕೆಗಿಡದ ಎಲೆಗಳಲ್ಲಾಗಲೀ , ವಸ್ತ್ರದಲ್ಲಾಗಲೀ ತರಲ್ಪಡುವ ಪುಷ್ಪಗಳು ಸಹ ಪೂಜೆಗೆ ನಿಷಿದ್ಧವಾದವುಗಳಾಗಿವೆ . ಆದ್ದರಿಂದ ಇಂತಹ ಪುಷ್ಪ , ತುಲಸಿಗಳನ್ನು ಪ್ರಯತ್ನಪೂರ್ವಕವಾಗಿ ತೊರೆಯಬೇಕು .
***
No comments:
Post a Comment