ಅಂಗಾರಕ ಸಂಕಷ್ಟ ಚತುರ್ಥಿ ಆಚರಿಸಿದರೆ ಸಾಕು 21 ವ್ರತಗಳು ಮಾಡಿದ ಪುಣ್ಯ ಪ್ರಾಪ್ತವಾಗಲಿದೆ ಎಂಬ ನಂಬಿಕೆ ಇದೆ
ದೇವರುಗಳಲ್ಲಿಯೇ ವಿಶೇಷ ಸ್ಥಾನಮಾನ ಗಣೇಶನಿಗೆ ಇದೆ. ಗಣೇಶನ ಆರಾಧನೆಗೆ ಸಂಕಷ್ಠಿ ವಿಶೇಷ ದಿನ. ಪ್ರತಿ ತಿಂಗಳ ಹುಣ್ಣಿಮೆಯ ಅಂದರೆ ಕೃಷ್ಣ ಪಕ್ಷದ ನಾಲ್ಕನೇ ದಿನವೇ ಈ ಸಂಕಷ್ಠಿ ಬರುತ್ತದೆ. ಈ ಸಂಕಷ್ಟಿ ದಿನ ಗಣೇಶನ ವ್ರತ ಆಚರಿಸಿದರೆ, ಮನೋಭಿಲಾಷೆ ಈಡೇರುತ್ತದೆ ಎಂಬ ಪ್ರತೀತಿ. ಅದರಲ್ಲಿಯೂ ವರ್ಷದಲ್ಲಿ ಕೇವಲ ಒಂದೆರಡು ದಿನ ಬರುವ ಈ ಅಂಗಾರಕ ಸಂಕಷ್ಟಿ ಬಲು ವಿಶೇಷ. ಪ್ರತಿ ತಿಂಗಳು ಸಂಕಷ್ಟಿ ಮಾಡಲು ಸಾಧ್ಯವಾಗದವರು ಅಂಗಾರಕ ಸಂಕಷ್ಟ ಚತುರ್ಥಿ ಆಚರಿಸಿದರೆ ಸಾಕು 21 ವ್ರತಗಳು ಮಾಡಿದ ಪುಣ್ಯ ಪ್ರಾಪ್ತವಾಗಲಿದೆ ಎಂಬ ನಂಬಿಕೆ ಇದೆ. ಅಂಗಾರಕ ಅಂದರೆ ಮಂಗಳವಾರ ಬರುವ ಈ ಸಂಕಷ್ಟಿಯ ವ್ರತದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ
ಅಂಗಾರಕ ಎಂದರೆ ಶುಭ
ಅಂಗಾರಕ ಎಂದರೆ ಮಂಗಳವಾದದ್ದು ಎಂದು ಅರ್ಥ. ಮಂಗಳ ಉಂಟುಮಾಡುವ ಸಂಕಷ್ಟ ಚತುರ್ಥಿಯನ್ನು ಅಂಗಾರಕ ಚತುರ್ಥಿ ಎನ್ನಲಾಗುತ್ತದೆ. ಈ ಅಂಗರಾಗ ಸಂಕಷ್ಟ ಚತುರ್ಥಿಯಂದು ಉಪವಾಸವಿದ್ದು, ಗಣೇಶನ ಪೂಜಿಸಿದರೆ, ನಾವು ಮಾಡಿಕೊಂಡ ಸಂಕಲ್ಪಗಳು ನೆರವೇರುತ್ತದೆ ಎಂಬ ಪ್ರತೀತಿ ಇದೆ.
ಗಣೇಶನ ಭಜಿಸಿ
ಇನ್ನು ಅಂಗಾರಕ ಸಂಕಷ್ಟಿಯಂದು ಮುಂಜಾನೆಯ ಸ್ನಾನ ಮಾಡಿ ಗಣೇಶನ ಪೂಜಿಸಬೇಕು. ಗಣಪನಿಗೆ ಇಷ್ಟವಾದ ಮೋದಕ ಅಥವಾ ಹಾಲು, ಹಣ್ಣು ನೈವೇದ್ಯ ಮಾಡಬೇಕು. ಉಪವಾಸ ವಿದ್ದು ಗಣೇಶ ಸ್ತುತಿಸುತ್ತ ದಿನ ಕಳೆಯಬೇಕು. ರಾತ್ರಿ ಚಂದ್ರ ದರ್ಶನದ ಬಳಿಕ ವ್ರತ ಸಂಪನ್ನಗೊಳಿಸಿ, ಗಣೇಶನ ಪೂಜಿಸಿ ಆಹಾರ ಸೇವಿಸಬೇಕು.
ಗರಿಕೆ ಅರ್ಪಿಸಿ
ಗಣೇಶನಿಗೆ ಗರಿಕೆಗಳು ಎಂದರೆ ಬಲು ಪ್ರೀತಿ. ಈ ಹಿನ್ನಲೆ 27 ಗರಿಕೆಗಳನ್ನು ಗಣೇಶನಿಗೆ ಅರ್ಪಿಸಿ, ಮನೋಬಲ ಈಡೇರಿಕೆಗೆ ಪ್ರಾಪ್ತಿಸಿದರೆ ಒಳಿತು. ಮಾಘ ಮಾಸದಲ್ಲಿ ಬರುವ ಈ ಚೌತಿಯಂದು ಗಣೇಶನನ್ನು ಪ್ರತಿಷ್ಟಾಪಿಸಿ ಆಚರಿಸುವ ಪ್ರತೀತಿ ಕೂಡ ಇದೆ.
***
ಕುಂದಾಪುರದ ಬಳಿ ಗುಡ್ಡೆಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ
ದೇಶದಾದ್ಯಂತ ಇರುವ ಗಣಪತಿ ದೇವಾಲಯದಲ್ಲಿ ಎಲ್ಲೂ ಕಾಣದ ವಿಶೇಷ ಸೇವೆಯೊಂದು ನಡೆಯುತ್ತದೆ..
ಈ ದೇವಾಲಯದಲ್ಲಿರುವ ಗಣಪತಿಗೆ ಪ್ರತಿನಿತ್ಯ ಒಂದು ಸಾವಿರ ಕೊಡಗಳ ನೀರಿನ ಅಭಿಷೇಕ..!!
ಹೌದು .. ಒಂದು ಸಾವಿರ ಕೊಡದಿಂದ ಜಲಾಭಿಷೇಕ..
ಹಾಗಂತ ನೀರನ್ನು ಮೋಟಾರ್ ಬಳಸಿ ಪಂಪ್ ಮಾಡಿ ಎತ್ತುವುದಿಲ್ಲ. ಹಗ್ಗ ಹಾಕಿ ನೀರು ಸೇದುವುದೂ ಇಲ್ಲ..
ಬಾವಿಯೊಳಗೆ ಇಳಿದು ಒಬ್ಬರು ನೀರು ತುಂಬಿಕೊಂಡು ಮತ್ತೊಬ್ಬರಿಗೆ ಹಸ್ತಾಂತರಿಸುತ್ತಾರೆ.. ಹಾಗೇ ಹಸ್ತಾಂತರ ಗೊಳ್ಳುತ್ತಾ ನೀರು , ಗಣಪತಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ
ಗ್ರಾಮದ ಆಸಕ್ತ ಜನರು , ಮತ್ತು ಹರಕೆ ಮಾಡಿಕೊಂಡಿರುವ ಭಕ್ತಾದಿಗಳು ಸೇರಿ ಒಂದು ಸಾವಿರ ಕೊಡ ನೀರಿನಿಂದ ವಿನಾಯಕ ದೇವರಿಗೆ ಅಭಿಷೇಕ ಮಾಡಲಾಗುತ್ತದೆ..
ಇನ್ನೂ ಆಶ್ಚರ್ಯ ವಿಷಯವೆಂದರೆ , ಮಾರನೇ ದಿನ ಬೆಳಿಗ್ಗೆ ನಿನ್ನೆ ಅಭಿಷೇಕ ಮಾಡಿದ್ದ ಅಷ್ಟೂ ನೀರನ್ನು ಹೊರತೆಗೆದು , ಅಂದಿನ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬಳಕೆಯಾಗುತ್ತದೆ.
ಹಾಗೂ ವಿನಾಯಕನ ಮೂರ್ತಿಯನ್ನು ಶುಭ್ರವಾದ ಬಟ್ಟೆಯಿಂದ ಚೂರೂ ನೀರು ಇಲ್ಲದಂತೆ ಒರೆಸಿ , ನಂತರವಷ್ಟೇ ಅಂದಿನ ದಿನದ ಅಭಿಷೇಕ ಮಾಡಲಾಗುತ್ತದೆ..
ಹಾಗಂತ , ನೀವು ಇದ್ದಕ್ಕಿದ್ದಂತೆ ದೇವಸ್ಥಾನಕ್ಕೆ ಹೋಗಿ ನೀರು ಸೇದುವ ಸೇವೆ ಮಾಡಲಾಗುವುದಿಲ್ಲ..
ಈಗ ನೀವು ಹೆಸರು ಬರೆಸಿದರೆ , ಕನಿಷ್ಠ ಆರು ವರ್ಷ ಕಾಯಬೇಕಾಗುತ್ತದೆ.. ಅಂದರೆ , ಮುಂದಿನ ಆರು ವರ್ಷಗಳ ವರೆಗೆ ಸೇವೆಗೆ ಭಕ್ತರು ಹೆಸರು ನೋಂದಾಯಿಸಿದ್ದಾರಂತೆ..!!
ಇದೆಲ್ಲಾ ಸರಿ.. ಆದರೆ ಈ ಪ್ರತೀತಿ ಏಕೆ?? ಸಾವಿರ ಕೊಡ ಪ್ರತಿನಿತ್ಯ ಏಕೆ..??
ಅದಕ್ಕೊಂದು ಹಿನ್ನೆಲೆ ಇದೆ..
ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ.. ಅದು ಪರಮೇಶ್ವರನಿಗೆ ತಿಳಿದು , ತ್ರಿಪುರಾಸುರ ರಾಕ್ಷಸನನ್ನು ಕೊಲ್ಲಲು ಯುದ್ದಕ್ಕೆ ಹೊರಡುವ ಮುನ್ನ , ಪರಮೇಶ್ವರ ಆದಿಯಲ್ಲಿ ಗಣಪನನ್ನು ಪೂಜಿಸದೇ ಯುದ್ದ ಆರಂಭಿಸಿದ್ದಕ್ಕಾಗಿ ರಾಕ್ಷಸನಿಂದ ಸೋಲುಂಟಾಗುತ್ತದೆಯಂತೆ..
ತನಗೆ ಸೋಲಾಗಲು ಗಣಪತಿ ಕಾರಣನೆಂದು , ಕೋಪಗೊಂಡ ಶಿವನು , ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ.. ಆಗ ತ್ರಿಶೂಲದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಗಣಪತಿಯು ಜೇನು ತುಂಬಿದ ಕೊಳದಲ್ಲಿ ಬೀಳುತ್ತಾನೆ.. ಮತ್ತು ಅಲ್ಲಿ ಸಾಕಷ್ಟು ಜೇನುತಿಂದ ಖುಷಿಯಲ್ಲಿ , ಶಿವನಿಗೆ ಜಯವಾಗಲೆಂದು ಹಾರೈಸುತ್ತಾನೆ..
ಶಿವ ತ್ರಿಪುರಾಸುರನನ್ನು ಸಂಹರಿಸಿ , ಕೈಲಾಸಕ್ಕೆ ಮರಳುತ್ತಾನೆ..
ಆದರೆ ಜೇನು ಹೆಚ್ಚಾಗಿ ತಿಂದ ಕಾರಣ ಗಣಪತಿಯ ಮೈಯಲ್ಲಿ ಅಸಾಧ್ಯವಾದ ಪಿತ್ತವಾಗಿ ನರಳವುದನ್ನು ಕಂಡ ಶಿವಪಾರ್ವತಿಯರು , ದೇಹದ ಉರಿಶಮನಕ್ಕೆ ಸಲಹೆ ಕೊಟ್ಟಾಗ , ಅದರಂತೆ ಗಣಪತಿಯು ಈ ದೇವಸ್ಥಾದಲ್ಲಿ ಬಂದು ನೆಲೆಸುತ್ತಾನೆ..
ಹತ್ತಿರದಲ್ಲೇ ಹರಿಯುವ ನರಸಿಂಹ ತೀರ್ಥದ ನೀರು ವಾರಾಹಿ ನದಿಯಿಂದ ಸೇರುತ್ತದೆ..
ಅದೇ ನೀರಿನಲ್ಲಿ ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡ ನೀರು ಬಾವಿಯಿಂದ ತುಂಬಿಕೊಂಡು ಅಭಿಷೇಕ ನಿರಂತರವಾಗಿ ಜರಗುತ್ತಿದ್ದರೆ ಮಾತ್ರ ಗಣಪತಿ ಸ್ವಾಮಿಯ ಮೈಉರಿ ಶಮನವಾಗುತ್ತದೆಯಂತೆ ಎಂದು ಅಲ್ಲಿನ ಅರ್ಚಕರು ಸ್ಥಳ ಮಹಿಮೆಯನ್ನು ತಿಳಿಸಿದರು..
ಇಲ್ಲಿರುವ ಗಣಪತಿ ಬಲಮುರಿ ಗಣಪತಿ ಯಾಗಿದ್ದು ನಂಬಿ ಬರುವ , ಸೇವೆಗೈಯುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ರಾನೆ..
ಮೊದಲ ಬಾರಿಗೆ ಭೇಟಿ ಕೊಡುವ ಭಕ್ತರು ಬೆಳಿಗ್ಗೆ 11-30 ಸಮಯದಲ್ಲಿ ಅಲ್ಲಿ ಇದ್ದರೇ , ನೀರು ತುಂಬುವ ಸೇವೆಯನ್ನು ವೀಕ್ಷಿಸಬಹುದು..
ನಂತರ ಮದ್ಯಾನಃ 1-30 ಗೆ ಪ್ರತಿನಿತ್ಯ ಭಕ್ತಾದಿಗಳಿಗೆ ಪ್ರಸಾದವಿರುತ್ತದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಜೀವನದಲ್ಲಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು , ಅಪರೂಪದ ಸೇವೆಯಲ್ಲಿ ಭಾಗಿಯಾಗಬೇಕು..
***
end
***
No comments:
Post a Comment