SEARCH HERE

Friday, 1 October 2021

ಪಿತೃ ದೋಷ ಪರಿಹಾರ

 *ಇಂತಹ ತಪ್ಪು ಮಾಡಿದರೆ ಪೂರ್ವಿಕರ ಆಗ್ರಹ‌ ಖಚಿತ*

ಪೂರ್ವಜರ ಆಶೀರ್ವಾದ ಯಾವಾಗಲೂ ಇರಬೇಕು. ದೇವರ ಜೊತೆ ಅವರ ಆಶೀರ್ವಾದ ಸೇರಿದರೆ ಮಾತ್ರ ಕೆಲಸ ಸುಲಭವಾಗುತ್ತದೆ. ಆದರೆ, ಅನೇಕರು ಪಿತೃಗಳನ್ನು ಮರೆತಿರುತ್ತಾರೆ. ಸರಿಯಾದ ಕ್ರಮದಲ್ಲಿ ಶ್ರಾದ್ಧ, ಪಿಂಡದಾನ ಮಾಡದೆಯೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. 

ಪಿತೃ ಪಕ್ಷದಲ್ಲಿ ಪಿತೃಗಳನ್ನು ನೆನೆಯುವುದು ಬಹಳ ಮಹತ್ವ ಪಡೆಯುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವ ನೀಡಲಾಗುತ್ತದೆ. ಪಿತೃ ಪಕ್ಷದ ಅಮಾವಾಸ್ಯೆಯಂದು ಸರ್ವ ಪಿತೃ ಪಿಂಡ ದಾನ ಹಾಗೂ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದ ಪ್ರತಿ ದಿನವೂ ಪಿತೃಗಳಿಗೆ ಅರ್ಪಿತವಾಗಿದೆ. ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸದಾ ಸುಖ, ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಆದರೆ ಪೂರ್ವಜರು ಕೋಪಗೊಂಡರೆ ಸಮಸ್ಯೆ ಎದುರಾಗುತ್ತದೆ. ಪಿತೃ ದೋಷ ಉಂಟಾದರೆ ವಂಶದ ಎಲ್ಲಾ ಪೀಳಿಗೆಯ  ಜನರು ನರಳಬೇಕಾಗುತ್ತದೆ. ಪಿತೃ ದೋಷವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪಿತೃ ಪಕ್ಷದಲ್ಲಿ ಭೂಮಿಗೆ ಬರುವ ಪೂರ್ವಜರು ಕೋಪಗೊಂಡಿರುವ ಬಗ್ಗೆ ಕೆಲ ಸೂಚನೆಯನ್ನು ನೀಡುತ್ತಾರೆ. 


*ಪಿತೃ ದೋಷಕ್ಕೆ ಕಾರಣಗಳು :*

1. ಮರಣಾನಂತರ ನಂತರ ಪೂರ್ಣ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಯ ಪ್ರಕ್ರಿಯೆಯನ್ನು ಮಾಡದಿದ್ದರೆ ಕುಟುಂಬಸ್ಥರು ಪಿತೃ ದೋಷಕ್ಕೆ ಒಳಗಾಗಬೇಕಾಗುತ್ತದೆ.

2. ಅಕಾಲಿಕ ಮರಣದಿಂದಲೂ  ಕುಟುಂಬದ ಜನರು ಅನೇಕ ತಲೆಮಾರುಗಳವರೆಗೆ ಪಿತೃ ದೋಷವನ್ನು ಅನುಭವಿಸಬೇಕಾಗುತ್ತದೆ. 

3. ತಾಯಿ ತಂದೆಗಳಿಗೆ ಅಗೌರವ ತೋರಿದರೆ, ಕುಟುಂಬ ಸದಸ್ಯರ  ಮರಣದ ನಂತರ ಪಿಂಡ ದಾನ ಮಾಡದಿದ್ದರೂ, ಶ್ರಾದ್ಧ ಮಾಡದಿದ್ದರೂ, ಪಿತೃ ದೋಷ ಉಂಟಾಗಬಹುದು.

                                                                                             4. ಪೂರ್ವಜರನ್ನು ಅವಮಾನಿಸುವುದು, ಅಸಹಾಯಕರನ್ನು ಕೊಲ್ಲುವುದು, ಅರಳಿ, ಬೇವು, ಆಲ‌ ಇತ್ಯಾದಿ ದೈವ ವೃಕ್ಷಗಳನ್ನು ಕತ್ತರಿಸುವುದು, ಆಕಸ್ಮಿಕವಾಗಿ ಹಾವನ್ನು ಕೊಲ್ಲುವುದು ಸಹ ಪಿತೃ ದೋಷಕ್ಕೆ ಕಾರಣವಾಗುತ್ತದೆ.


*ಮನೆಯಲ್ಲಿ ಪಿತೃ ದೋಷವನ್ನು ಹೀಗೆ ಪತ್ತೆ ಮಾಡಿ :*

1. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾಗುತ್ತಿದ್ದರೆ ಜೀವನದಲ್ಲಿ ಪಿತೃ ದೋಷವಿದೆ ಎಂದರ್ಥ. ಪತಿ-ಪತ್ನಿ ಸದಾ ಜಗಳವಾಡಿತ್ತಿದ್ದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲವೆಂದಾದರೆ ಪಿತೃದೋಷವಿದೆ ಎಂದರ್ಥ.

2. ಕುಟುಂಬದ ಸದಸ್ಯರಲ್ಲಿ ಸದಾ ಕಲಹ, ಜಗಳವಾಗುತ್ತಿದ್ದರೆ, ಮನೆಯಲ್ಲಿ ನೆಮ್ಮದಿ ಇಲ್ಲವೆಂದಾದರೆ ಇದು ಕೂಡ ಪಿತೃ ದೋಷದ ಸೂಚನೆಯಾಗಿದೆ. ಪಿತೃ ದೋಷವಿದ್ದರೆ ಮನೆಯಲ್ಲಿ ವೈಮನಸ್ಸು ಉಂಟಾಗಬಹುದು. ಮನಸ್ಸು ಚಂಚಲಗೊಳ್ಳುತ್ತದೆ. ಮನೆಯಲ್ಲಿ ಸದಾ ಮೌನ ಇಲ್ಲವೇ ಜಗಳವಿದ್ದರೆ ಅದು ಕೂಡ ಪೂರ್ವಜರು ಮುನಿಸಿಕೊಂಡಿದ್ದಾರೆ ಎಂಬ ಸೂಚನೆಯಾಗಿದೆ.  

3. ವಂಶಾಭಿವೃದ್ಧಿ ಆಗದೇ ಇರುವುದು ಕೂಡ ಪಿತೃ ದೋಷದ ಒಂದು ಕಾರಣವೆಂದು ಹೇಳಲಾಗುತ್ತದೆ. ಅಂಗ ವೈಕಲ್ಯ ಅಥವಾ ಹುಟ್ಟುವ ಮೊದಲೇ ಮಗುವಿನ ಸಾವು ಕೂಡ  ಪಿತೃ ದೋಷದ ಕಾರಣವಾಗಿದೆ. 

                                                                                                               4. ಸದಾ ಒಂದಿಲ್ಲೊಂದು ಕಾಯಿಲೆ, ಕುಟುಂಬದ ಸದಸ್ಯರಲ್ಲಿ  ಅಸ್ವಸ್ಥತೆ, ಕೆಲಸದ ಸ್ಥಳದಲ್ಲಿ ಆರ್ಥಿಕ ಮತ್ತು ಮಾನಸಿಕ ಸಮಸ್ಯೆ, ಉದ್ಯೋಗದಲ್ಲಿ ಪ್ರಗತಿ ಇಲ್ಲದಿರುವುದು, ಆಗಾಗ ನಡೆಯುವ ಅಪಘಾತ ಹಾಗೂ ಕುಟುಂಬಸ್ಥರ ಸಾವು ಕೂಡ ಪಿತೃ ದೋಷದ ಕಾರಣವೆಂದು ಹೇಳಲಾಗುತ್ತದೆ. 

*ಪಿತೃ ದೋಷ ನಿವಾರಣೆಗೆ ಕೆಲವು ಪರಿಹಾರ ಕ್ರಮಗಳು :*

ನಿಮ್ಮ ಮನೆಯಲ್ಲೂ ಈ ರೀತಿಯ ಎಲ್ಲಾ ಸಮಸ್ಯೆಯಿದ್ದು, ಜಾತಕದಲ್ಲಿ ಪಿತೃ ದೋಷವಿದ್ದರೆ ಅದರ ಪರಿಹಾರಕ್ಕೆ ಕೆಲ ಉಪಾಯ ಮಾಡಬಹುದು.

1. ಪಿತೃ ದೋಷವನ್ನು ತೊಡೆದು ಹಾಕಲು, ಪಿತೃ ಪಕ್ಷದಲ್ಲಿ ಪೂರ್ವಜರ ಶ್ರಾದ್ಧವನ್ನು ಪದ್ಧತಿಯಂತೆ ಮಾಡಬೇಕು.  ಬ್ರಾಹ್ಮಣರಿಗೆ ಅಥವಾ ಸಪ್ಪಾತ್ರರಿಗೆ ಅನ್ನದಾನ ಅಥವಾ ಸ್ವಯಂಪಾಕ ದಾನ ಮಾಡಬೇಕು. ಇಲ್ಲವೇ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು.

2. ಪ್ರತಿ ಏಕಾದಶಿ, ಚತುರ್ದಶಿ, ಅಮಾವಾಸ್ಯೆ, ಗ್ರಹಣಗಳ ಸಮಯದಲ್ಲಿ ಪೂರ್ವಜರಿಗೆ ಜಲವನ್ನು ಅರ್ಪಿಸಲು ಮರೆಯಬಾರದು.

3. ಪ್ರತಿದಿನ ಮಧ್ಯಾಹ್ನ ಅಶ್ವತ್ಥ  ವೃಕ್ಷದ ಆರಾಧನೆ ಮಾಡಬೇಕು.  

4. ಮನೆಯ ದಕ್ಷಿಣ ದಿಕ್ಕಿನಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು.  ಪ್ರತಿ ದಿನ ದೀಪ  ಬೆಳಗುವುದರಿಂದ ಸಮಸ್ಯೆ ದೂರವಾಗುತ್ತದೆ.

***


No comments:

Post a Comment