SEARCH HERE

Friday 1 October 2021

ಪರಿಹಾರ ವಿವಾಹ ವಿಳಂಬಕ್ಕೆ

ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು


ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು. 


೧) ಬೆಟ್ಟದ ನೆಲ್ಲಿಕಾಯಿ ೧೧ ಅಥವ ೨೧ ರಲ್ಲಿ ದೀಪವನ್ನು ಮಾಡಿ ತುಪ್ಪದಿಂದ ದೀಪವನ್ನು ಮಾಡಿ ೧೧ ಶುಕ್ರವಾರ ಅಥವ ಗುರುವಾರ ಮುಂಜಾನೆ ಅಥವ ಸಂಜೆ ಯಲ್ಲಿ ಅರಳಿ ಅಥವ ಅತ್ತಿ ಮರದ ಬುಡದಲ್ಲಿ ಇಟ್ಟು ೧೧ ಪ್ರದಕ್ಷಿಣೆ ಮಾಡಿ ಗುರು ಮತ್ತು ಶುಕ್ರರನ್ನು ಪ್ರಾರ್ಥಿಸಿಕೊಂಡು ಬರುವುದು ಮೊದಲ ಮತ್ತು ಕೊನೆಯ ದಿನ ಗಳಂದು ಹಣ್ಣು ಕಾಯಿ ನೈವೇದ್ಯಗಳಿಂದ ವೃಕ್ಷವನ್ನು ಪೂಜಿಸುವುದು. 


೨)ಇದು ವಿಶೇಷವಾದ ಖಚಿತ ಫಲವನ್ನು ನೀಡುವ ಪರಿಹಾರವಾಗಿದೆ


 ನಂಬಿಕೆ,ಶ್ರದ್ದೆ,ಭಕ್ತಿ ಬಹಳ ಮುಖ್ಯ. ಪೂಜೆಗೆ ಬೇಕಾದ ವಸ್ತುಗಳು 


ಒಂದು ತಾಮ್ರದ ಚಂಬು,೫ ಕೆಂಪು ಕುಪ್ಪಸ,೫ ಬೊಗಸೆ ಅಕ್ಕಿ, (೧೫ ಹಿಡಿ ಅಕ್ಕಿ)೫ ಕಗ್ಗಲಿ ೯ ಅಂಗುಲದ ಗಟ್ಟಿಯಾದ ತುಂಡು (ಗಂಧಿಗೆ ಅಂಗಡಿಯಲ್ಲಿ ದೊರೆಯುತ್ತದೆ) ಒಂದು ಮರದ ಮಣೆ ಅಥವ ತಟ್ಟೆ ಪೂಜಾ ಸಾಮಗ್ರಿಗಳು (ಹೂವು,ಹಣ್ಣು,ಎಲೆ ಅಡಿಕೆ,ಕಡ್ಡಿ ಕರ್ಪೂರ ಅರಿಸಿನ ಕುಂಕುಮ ಇತ್ಯಾದಿ) ಮಂಗಳವಾರದ ದಿನ ಮೊದಲು ಮನೆ ಶುಚಿಗೊಳಿಸಿ ನಂತರ ತಾವು ಶುಚಿಯಾಗಿ ದೇವರಮನೆಯಲ್ಲಿ ಒಂದು ಮಣೆಯನ್ನು ಹಾಕಿ ಅದರ ಮೇಲೆ ಒಂದು ಕೆಂಪು ಕುಪ್ಪಸ ಹಾಕಿ ಅದರ ಮೇಲೆ ಒಂದು ಬೊಗಸೆ ಅಕ್ಕಿ ಹಾಕಿ ಅದರ ಮೇಲೆ ತಾಮ್ರದ ಚಂಬು ಇಟ್ಟು ಚಂಬಿನಲ್ಲಿ ತುಗರಿ ಬೇಳೆ ತುಂಬಿ ಅದರ ಮೇಲೆ ೧ ಕಗ್ಗಲಿ ತುಂಡನ್ನು ಇಟ್ಟು ಮೇಲೆ ಒಂದು ಕೆಂಪು ಕುಪ್ಪಸವನ್ನು ಹಾಕಿ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ಯಾವುದಾದರು ಶತನಾಮಾವಳಿ (ದುರ್ಗ,ಚಾಮುಂಡಿ,ಲಕ್ಷ್ಮಿ) ಯನ್ನು ೧೦೮ ಸಲ ಹೇಳಿ ಮಂಗಳಾರತಿ ಮಾಡುವುದು ಸಂಜೆ ಬಟ್ಟೆ ಮತ್ತು ಚಂಬು ಇಟ್ಟು ಕೊಂಡು ಅಕ್ಕಿ ಮತ್ತು ಬೇಳೆಯನ್ನು ಯಾವುದಾದರು ಸ್ತ್ರೀದೇವಾಲಯಕ್ಕೆ ನೀಡುವುದು ಕಗ್ಗಲಿ ತುಂಡನ್ನು ಹಸಿರು ಗಿಡದ ಬಳಿ ಇಟ್ಟು ಬರುವುದು ಈ ರೀತಿ ೩ ದಿನ ಮಾಡಿ ೪ನೇ ದಿನ ೫ ಜನ ಮುತೈದೆಯರನ್ನು ಕರೆದು ಅವರಿಗೆ ಹೋಳಿಗೆ ಉಣಬಡಿಸಿ ಕೆಂಪು ಕುಪ್ಪಸ ನೀಡಿ ಅರಿಸಿನ ಕುಂಕುಮವನ್ನು ನೀಡಬೇಕು ಒಂದು ಕುಪ್ಪಸವನ್ನು ೫ ಜನರಿಂದ ಮುಟ್ಟಿಸಿಕೊಂಡು ಇಟ್ಟುಕೊಳ್ಳಬೇಕು ೫ನೇ ದಿನ ಪೂಜೆಯ ನಂತರ ಪೂಜೆಗೆ ಬಳಸಿದ ಎಲ್ಲಾ ವಸ್ತುಗಳನ್ನು ಅಂದರೆ ಚಂಬನ್ನು ಬಿಟ್ಟು ಉಳಿದ ಅರಿಸಿನ ಕುಂಕುಮ ಒಣಗಿದ ಹೂವು ಇತ್ಯಾದಿ ಗಳನ್ನು ಕುಪ್ಪಸದಲ್ಲಿ ಕಟ್ಟಿಕೊಂಡು ಹರಿವ ನೀರಲ್ಲಿ ಬಿಡುವುದು ಅದೇ ನೀರಲ್ಲಿ ಸ್ನಾನ ಮಾಡಿ ಬರುವುದು. ಕಟ್ಟಿಗೆಯನ್ನು ಹಸಿರು ಗಿಡದ ಬಳಿ ಇಡುವುದು ಅಕ್ಕಿ ಮತ್ತು ಬೇಳೆಯನ್ನು ದೇವಾಲಯದಲ್ಲಿ ನೀಡಿ ಬರುವುದು.


 ೩)ಟಿ ನರಸೀ ಪುರದಲ್ಲಿರುವ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯದಲ್ಲಿರುವ ದೇವಿ ರಕ್ಷಾಂಭರಿ ದೇವಿಯ ದೇವಾಲಯಕ್ಕೆ ಶುಕ್ರವಾರ ಅಥವ ಹುಣ್ಣಿಮೆಯಲ್ಲಿ ಹೋಗಿ ವಿವಾಹ ವಿಳಂಭವಾಗುತ್ತಿರುವ ಸ್ತ್ರೀಯ ಜಾತಕವನ್ನು ತಗೆದುಕೊಂಡು ಹೋಗಿ ದೇವಿಗೆ ೧ಕಿಲೋ ಅರಿಸಿನ ಮತ್ತು ೧ಕಿಲೋ ಕುಂಕುಮವನ್ನು ತಗೆದುಕೊಂಡು ಹೋಗಿ ದೇವಿಯ ಬಲಪಾದಕ್ಕೆ ಅರಿಸಿನ ವನ್ನು ದೇವಿಯ ಎಡಪಾದಕ್ಕೆ ಕುಂಕುಮವನ್ನು ಅರ್ಪಿಸಿ ದೇವಿಯ ಎರಡೂಪಾದದ ಮದ್ಯೆ ಜಾತಕವನ್ನಿಟ್ಟು ದೇವಿಗೆ ಅರ್ಚನೆ ಮಾಡಿಸಿ ನಂತರ ಜಾತಕ ಮತ್ತು ಸ್ವಲ್ಪ ಅರಿಸಿನ ಮತ್ತು ಕುಂಕುಮವನ್ನು ಮನೆಗೆ ತಂದು ದೇವರ ಮನೆಯಲ್ಲಿ ಇಟ್ಟುಕೊಳ್ಳಿ ಕುಂಕುಮವನ್ನು ಮನೆಯ ಎಲ್ಲಾ ಸ್ತ್ರೀಯರು ಇಟ್ಟುಕೊಳ್ಳಿ ಅರಿಸಿನವನ್ನು ವಿವಾಹ ವಿಳಂಭವಾಗಿರುವ ಸ್ತ್ರೀಯು ನಿತ್ಯ ಸ್ನಾನದಲ್ಲಿ ಬಳಸುತ್ತಿರಲಿ ವಿವಾಹ ಆಗುವವರೆಗು ಈ ಕಾರ್ಯ ನಿಲ್ಲಿಸಬಾರದು ವಿವಾಹಾ ನಂತರ ವಧು ವರರು ೩ ತಿಂಗಳ ವರೆಗೆ ಮಾಂಸ ಮದ್ಯವನ್ನು ಸೇವಿಸ ಬಾರದು ೩ ತಿಂಗಳ ನಂತರ ದಂಪತಿಗಳು ದೇವಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ನಂತರ ಮಾಂಸ ಮದ್ಯ ಸೇವಿಸಬಹುದು. ಈ ವಿಚಾರದಲ್ಲಿ ಅಸಡ್ಡೆ ತೋರಿದರೆ ಆಗುವ ತೊಂದರೆಗಳಿಗೆ ನೀವೇ ಜವಾಬ್ದಾರರಿರುತ್ತೀರಿ. 


೪) ಅಕ್ಕಿ ತೌಡು(ಅಕ್ಕಿ ತರಿ),ಬಿಳಿ ಜೋಳ, ಬಟಾಣಿ, ಕಡಲೆ ಬೀಜ, ಗೋಧಿ,ಮುಸುಕಿನಜೋಳ, ಇವುಗಳನ್ನು ತಲಾ ೧ಕಿಲೋ ತಗೆದುಕೊಂಡು ಶುದ್ದಗೊಳಿಸಿ ಎಲ್ಲವನ್ನು ಮಿಶ್ರಣ ಮಾಡಿ ಒಂದು ಪಾತ್ರೆಯಲ್ಲಿ ಇಟ್ಟುಕೊಂಡು ೨೧ ದಿನಗಳಕಾಲ ಬೆಳಗ್ಗೆ ತಮ್ಮ ಹಿಡಿಯಲ್ಲಿ ೭ ಹಿಡಿಯನ್ನು ತಗೆದುಕೊಂಡು ತಮ್ಮ ತಲೆಗೆ ೭ ಸಲ ೭ ಹಿಡಿಯನ್ನು ತಿರುಗಿಸಿ ಒಂದು ಚೀಲದಲ್ಲಿ ಹಾಕಿ ಕೊಂಡು ಎಲ್ಲಾದರು ಪಕ್ಷಿಗಳಿರುವ ಕಡೆಯಲ್ಲಿ ಹಾಕುವುದು ಈ ರೀತಿ ೨೧ ದಿನದಿಂದ ೪೧ ದಿನದ ವರೆಗೆ ಮಾಡಬೇಕು.

 

ಶ್ರದ್ಧೆ, ಭಕ್ತಿ,ನಂಬಿಕೆ ಇಟ್ಟು ಪೂಜಿಸಿ ಇದರಿಂದ ಒಳಿತು ಕಾಣುತ್ತದೆ.

ಸಂಗ್ರಹ ಮಾಹಿತಿ ಕೃಪೆ ಅಂತರ್ಜಾಲ ತಾಣ

***

 

No comments:

Post a Comment