ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದನ್ನ ದಂಟಿನ ಸೊಪ್ಪು ಅಂತ ಕೂಡ ಕರೆಯುತ್ತಾರೆ. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗು ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ.ಈ ಗಿಡದ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂದು ಕರೆಯುತ್ತಾರೆ. ಇದನ್ನ ಸಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಇದನ್ನ ಕೆಲವರು ಹರಿವೆ ಸೊಪ್ಪು ಎಂದು ಕೂಡ ಕರೆಯುತ್ತಾರೆ.ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಈ ದಂಟಿನ ಸೊಪ್ಪು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈ ಸೊಪ್ಪು ಹೆಚ್ಚಿನ ನಾರಿನಂಶವನ್ನು ಹೊಂದಿರುತ್ತದೆ. ಹಾಗೆ ಇದು ಪ್ರೊಟೀನ್, ವಿಟಮಿನ್ಸ, ಕ್ಯಾಲಿಸಿಯಂ, ಐರನ್, ಮೆಗ್ನೇಷಿಯಂ ಇನ್ನು ಮುಂತಾದ ಪೋಷಕಾಂಶಗಳನ್ನು ಹೊಂದಿದೆ. ಮತ್ತು ಸೊಪ್ಪುಗಳು ದೇಹಕ್ಕೆ ತಂಪನ್ನು ನೀಡುತ್ತವೆ. ಇದರ ವೈಜ್ಞಾನಿಕ ಹೆಸರು "Amaranthus" ಹರಿವೆ ಸೊಪ್ಪು ಅನೇಕ ಔಷಧ ಗುಣಗಳನ್ನು ಹೊಂದಿದೆ. ಹರಿವೆ ಸೊಪ್ಪಿನ ಔಷಧ ಗುಣಗಳು ಹರಿವೆ ಸೊಪ್ಪು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹರಿವೆ ಸೊಪ್ಪನ್ನ ಅಥವಾ ಹರಿವೆ ಸೊಪ್ಪನ್ನು ನಾವು ನಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಮಹಿಳೆಯರಲ್ಲಿ ಋತುಸ್ರಾವವನ್ನು ಕಡಿಮೆಮಾಡಲು
ಹಂಚಿ
ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ
ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದನ್ನ ದಂಟಿನ ಸೊಪ್ಪು ಅಂತ ಕೂಡ ಕರೆಯುತ್ತಾರೆ. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗು ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ.ಈ ಗಿಡದ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂದು ಕರೆಯುತ್ತಾರೆ. ಇದನ್ನ ಸಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಇದನ್ನ ಕೆಲವರು ಹರಿವೆ ಸೊಪ್ಪು ಎಂದು ಕೂಡ ಕರೆಯುತ್ತಾರೆ.ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಈ ದಂಟಿನ ಸೊಪ್ಪು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈ ಸೊಪ್ಪು ಹೆಚ್ಚಿನ ನಾರಿನಂಶವನ್ನು ಹೊಂದಿರುತ್ತದೆ. ಹಾಗೆ ಇದು ಪ್ರೊಟೀನ್, ವಿಟಮಿನ್ಸ, ಕ್ಯಾಲಿಸಿಯಂ, ಐರನ್, ಮೆಗ್ನೇಷಿಯಂ ಇನ್ನು ಮುಂತಾದ ಪೋಷಕಾಂಶಗಳನ್ನು ಹೊಂದಿದೆ. ಮತ್ತು ಸೊಪ್ಪುಗಳು ದೇಹಕ್ಕೆ ತಂಪನ್ನು ನೀಡುತ್ತವೆ. ಇದರ ವೈಜ್ಞಾನಿಕ ಹೆಸರು "Amaranthus"ಹರಿವೆ ಸೊಪ್ಪು ಅನೇಕ ಔಷಧ ಗುಣಗಳನ್ನು ಹೊಂದಿದೆ.
ಹರಿವೆ ಸೊಪ್ಪಿನ ಔಷಧ ಗುಣಗಳು
ಹರಿವೆ ಸೊಪ್ಪು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
1.ಹರಿವೆ ಸೊಪ್ಪನ್ನ ಅಥವಾ ಹರಿವೆ ಸೊಪ್ಪನ್ನು ನಾವು ನಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ.
2.ಮಹಿಳೆಯರಲ್ಲಿ ಋತುಸ್ರಾವವನ್ನು ಕಡಿಮೆಮಾಡಲು ಹರಿವೆ ಸೊಪ್ಪು ಸಹಕಾರಿ.
ಕೆಲವು ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಅತಿಯಾದ ಋತುಸ್ರಾವ ಉಂಟಾಗುವ ಸಮಸ್ಯೆ ಇರುತ್ತದೆ. ಇದಕ್ಕೆ ಹರಿವೆಸೊಪ್ಪು ದಿವ್ಯಔಷಧವಾಗಿದೆ. ದಿನನಿತ್ಯ ನಿಯಮಿತವಾಗಿ ಡ್ನಟಿನ ಸೊಪ್ಪು ಹಾಗು ಅದರ ಎಲೆ ಕಾಂಡಗಳನ್ನು ನಮ್ಮ ಆಹಾರದಲ್ಲಿ ಉಪಯೋಗಿಸುವುದರಿಂದ ಅತಿಯಾದ ಋತುಸ್ರಾವವಾದರೆ ಕಡಿಮೆಯಾಗುತ್ತದೆ.
3.ಹರಿವೆ ಸೊಪ್ಪು ಮಕ್ಕಳ ಬೆಳೆವಣಿಗೆಗೆ ತುಂಬಾ ಸಹಕಾರಿ
ಚಿಕ್ಕ ಮಕ್ಕಳಿಗೆ ಹರಿವೆಸೊಪ್ಪಿನ ರಸ , ನಿಂಬೆರಸ ಮತ್ತು ಜೇನುತುಪ್ಪ ಬೆರಸಿ ಕುಡಿಸುವುದರಿಂದ ಇದು ಮಕ್ಕಳ ಬೆಳೆವಣಿಗೆಗೆ ಸಹಾಯವಾಗುತ್ತದೆ.
ಹರಿವೆ ಸೊಪ್ಪು ಬಾಣಂತಿಯರಲ್ಲಿ ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ.
4.ಹರಿವೆ ಸೊಪ್ಪನ್ನು ಬಾಣಂತಿಯರು ತಮ್ಮ ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ಮಗುವಿನ ಆರೋಗ್ಯವು ಚೆನ್ನಾಗಿರುತ್ತದೆ.
5.ಹರಿವೆ ಸೊಪ್ಪು ಮಲಬಧ್ದತೆಯನ್ನು ನಿವಾರಣೆ ಮಾಡುತ್ತದೆ.
ಹರಿವೆ ಸೊಪ್ಪನ್ನು ನಾವು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಗೆ ಸಹಾಯವಾಗಿ ಮಲಬಧ್ದತೆಯನ್ನು ದೂರ ಮಾಡುತ್ತದೆ.
6.ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ.
ಕೆಲವು ಹೆಣ್ಣು ಮಕ್ಕಳಲ್ಲಿ ಕೂದಲು ಉದುರುವ ಸಮಸ್ಯೆ ಇರುತ್ತದೆ. ಅಂತವರು ಹರಿವೆ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಕೂದಲಿಗೆ ದೊರಕುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ.
7.ಬಾಯಿಯ ಹುಣ್ಣನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ
ಬಾಯಿಯಲ್ಲಿ ಹುಣ್ಣು ಆದವರು ಹರಿವೆ ಸೊಪ್ಪನ್ನು ಜಗಿಯುವುದರಿಂದ ಅಥವಾ ಇನ್ನಿತರ ಖಾದ್ಯಗಳನ್ನ ತಯಾರಿಸಿಕೊಂಡು ತಿನ್ನುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.ಅಲ್ಲದೆ ವಸಡುಗಳ ಸಮಸ್ಯೆಯು ಇದರಿಂದ ಕಡಿಮೆಯಾಗುತ್ತದೆ.
8.ಮಧುಮೇಹ ರೋಗಿಗಳಿಗೂ ತುಂಬಾ ಸಹಕಾರಿ
ಹರಿವೆ ಸೊಪ್ಪನ್ನ ಉಪಯೋಗಿಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನ ಸಮತೋಲನದಲ್ಲಿಡುತ್ತದೆ
ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
9.ಹರಿವೆ ಸೊಪ್ಪನ್ನ ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ದೇಹದ ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.
10.ಹರಿವೆ ಸೊಪ್ಪು ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುತ್ತದೆ. ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
11.ಪೋಷಕಾಂಶಗಳ ಉಗ್ರಾಣ
ಹರಿವೆ ಸೊಪ್ಪು ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳ ಉಗ್ರಾಣವಾಗಿದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
12.ರಕ್ತದೊತ್ತಡ ತಗ್ಗಿಸುತ್ತದೆ
ಹರಿವೆ ಸೊಪ್ಪಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲ. ತೂಕವನ್ನು ಕಡಿಮೆ ಮಾಡಲು ಬಯಸುವವರು ಹರಿವೆ ಸೊಪ್ಪಿನ ಪಲ್ಯ ತಿನ್ನುವುದು ಸೂಕ್ತ. ಹರಿವೆ ಸೊಪ್ಪನಲ್ಲಿ ಕರಗಬಲ್ಲ ಮತ್ತು ಕರಗದ ನಾರಿನಂಶವಿದೆ. ಈ ಸೊಪ್ಪನ್ನು ತಿನ್ನುವುದರಿಂದ ನಮ್ಮ ತೂಕವನ್ನು ಕಡಿಮೆಯಾಗುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದರಿಂದ ಹೃದ್ರೋಗವನ್ನು ನಿವಾರಿಸುತ್ತದೆ. ವೈದ್ಯರು ಮತ್ತು ಪೌಷ್ಟಿಕ ತಜ್ಞರು ತೂಕ ನಿರ್ವಹಣೆ ಅಥವಾ ಅಧಿಕ ರಕ್ತದೊತ್ತಡ ಇರುವವರಿಗೆ ಆಹಾರದಲ್ಲಿಣದಲ್ಲಿ ಹರಿವೆ ಸೊಪ್ಪನ್ನು ಬಳಸಲು ಶಿಫಾರಸು ಮಾಡುತ್ತಾರೆ.
13.ಬಿ ವಿಟಮಿನ್ ಸಮೃದ್ಧವಾಗಿದೆ
ಹರಿವೆ ಸೊಪ್ಪು ಬಿ ಗುಂಪಿನ ಜೀವಸತ್ವಗಳಿಂದ ತುಂಬಿರುತ್ತವೆ. ಫೋಲೇಟ್‌ಗಳು, ರಿಬೋಫ್ಲಾವಿನ್, ನಿಯಾಸಿನ್, ಥಯಾಮಿನ್, ವಿಟಮಿನ್ ಬಿ 6 ಈ ಸೊಪ್ಪಿನಲ್ಲಿ ಕಂಡುಬರುತ್ತವೆ. ನವಜಾತ ಶಿಶುಗಳಲ್ಲಿನ ಜನ್ಮ ದೋಷಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.
14.ಜೀರ್ಣಿಸಿಕೊಳ್ಳಲು ಸುಲಭ
ಅತಿಸಾರ ಮತ್ತು ರಕ್ತಸ್ರಾವಗಳಿಗೆ ಚಿಕಿತ್ಸೆ ನೀಡಲು ಹರಿವೆ ಸೊಪ್ಪುಗಳು ಸಹಾಯಕ. ನಿಯಮಿತ ಹರಿವೆ ಸೊಪ್ಪಿನ ಸೇವನೆ ಜೀರ್ಣಕ್ರಿಯೆಗೆ ಪ್ರಯೋಜನವನ್ನು ನೀಡುತ್ತದೆ.
15.ಪೋಷಕಾಂಶಗಳ ಆಗರ
ಹರಿವೆ ಸೊಪ್ಪಿನಲ್ಲಿ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಲಭ್ಯವಿದ್ದು, ಇದು ಉರಿಯೂತ ತಗ್ಗಿಸುವುದು ಮತ್ತು ಆರೋಗ್ಯಕ್ಕೆ ಪೋಷಕಾಂಶಗಳನ್ನು ನೀಡುವುದು.
16.ಕ್ಯಾಲರಿ ಕಡಿಮೆ
ನೂರು ಗ್ರಾಂ ಅಮರನಾಥ ಎಲೆಗಳನ್ನು ಕೇವಲ 23 ಕ್ಯಾಲರಿ ಮಾತ್ರ ಇದೆ. ಸ್ವಲ್ಪವೇ ಸ್ವಲ್ಪ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದು ಒಳ್ಳೆಯ ಆಯ್ಕೆಯಾಗಿದೆ. ತೂಕ ಇಳಿಸಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆ.
17.ನಾರಿನಾಂಶ ಅಧಿಕ
ಹರಿವೆ ಸೊಪ್ಪಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ನಾರಿನಾಂಶವನ್ನು ತಿನ್ನುವುದರಿಂದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಪರಿಣಾಮ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು. ಅಧಿಕ ಪ್ರೋಟೀನ್ ಮತ್ತು ನಾರಿನಾಂಶವನ್ನು ಹೊಂದಿರುವಂತಹ ಹರಿವೆ ಸೊಪ್ಪು ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸುವುದು.
18.ರಕ್ತಹೀನತೆಗೆ ಪರಿಣಾಮಕಾರಿ
ಹರಿವೆ ಸೊಪ್ಪಿನಲ್ಲಿ ಇರುವಂತಹ ಕಬ್ಬಿನಾಂಶವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು ಮತ್ತು ಇದು ಚಯಾಪಚಯ ಕೋಶಗಳಿಗೂ ಅಗತ್ಯವಾಗಿರುವುದು. ಹರಿವೆ ಸೊಪ್ಪಿನಲ್ಲಿಇರುವಂತಹ ಕಬ್ಬಿನಾಂಶದಿಂದ ಅತ್ಯಧಿಕ ಲಾಭ ಪಡೆಯಬೇಕು.
19.ವಿಟಮಿನ್ ಸಿ ಸೇರಿಸಿದರೆ ದೇಹವು ಹೆಚ್ಚಿನ ಪ್ರಮಾಣದ ಕಬ್ಬಿನಾಂಶವನ್ನು ಹೀರಿಕೊಳ್ಳಲು ಸಹಕಾರಿ ಆಗಿರುವುದು. ಹೀಗಾಗಿ ಲಿಂಬೆ ರಸವನ್ನು ಹರಿವೆ ಸೊಪ್ಪಿನ ಖಾದ್ಯಕ್ಕೆ ಹಾಕಿ ಮತ್ತು ರಕ್ತಹೀನತೆ ಸಮಸ್ಯೆ ಇರುವವರಿಗೆ ಇದು ತುಂಬಾ ಸಹಕಾರಿ ಆಗಿರುವುದು.
21.ರಕ್ತಹೀನತೆ ಸಮಸ್ಯೆಯೇ? ಈ ಆಹಾರ ತಿನ್ನಿ
ಪ್ರತಿರೋಧ ಶಕ್ತಿ ವೃದ್ಧಿಸುವುದು
22.ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಅಮರನಾಥ ಎಲೆಗಳನ್ನು ಬಳಸಿಕೊಂಡರೆ ಅದರಿಂದ ಅಧಿಕ ಪೋಷಕಾಂಶಗಳು ಸಿಗುವುದು. ಈ ಹಸಿರೆಲೆಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. 100 ಗ್ರಾಂ ಅಮರನಾಥ ಎಲೆಗಳಲ್ಲಿ ಶೇ.70ರಷ್ಟು ದೇಹಕ್ಕೆ ನಿತ್ಯವೂ ಬೇಕಾಗುಷ್ಟು ವಿಟಮಿನ್ ಸಿ ಇದೆ.
23.ಈ ವಿಟಮಿನ್ ನೀರಿನಲ್ಲಿ ಕರಗಬಲ್ಲಂತಹ ವಿಟಮಿನ್ ಆಗಿದ್ದು, ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಗಾಯವು ಬೇಗನೆ ಒಣಗುವುದು. ವಯಸ್ಸಾಗುವ ಲಕ್ಷಣ ತೋರಿಸುವ ಮತ್ತು ಹಲವಾರು ರೀತಿಯ ಕ್ಯಾನ್ಸರ್ ತಡೆಯುವಂತಹ ಫ್ರೀ ರ್ಯಾಡಿಕಲ್ ಪರಿಣಾಮವನ್ನು ಇದು ಕಡಿಮೆ ಮಾಡುತ್ತದೆ.
24.ವಿಟಮಿನ್ ಎ ಅತ್ಯಧಿಕ
ಹರಿವೆ ಸೊಪ್ಪು ವಿಟಮಿನ್ ಎ ಅತ್ಯಧಿಕವಾಗಿದೆ ಮತ್ತು ಇದು ದೇಹಕ್ಕೆ ದಿನದ ಅಗತ್ಯಕ್ಕೆ ಬೇಕಾಗಿರುವ ಶೇ.97ರಷ್ಟು ವಿಟಮಿನ್ ಒದಗಿಸುವುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಫ್ಲಾವನಾಯ್ಡ್ ಫಾಲಿಫೆನಾಲಿಕ್ ಆಂಟಿಆಕ್ಸಿಡೆಂಟ್ ಗಳಾಘಿರುವಂತಹ ಬೆಟಾ ಕೆರೊಟೆನ್, ಝಿಯಕ್ಸಾಂಥಿನ್ ಮತ್ತು ಲುಟೇನ್ ಅಂಶವಿದೆ. ಇದು ಫ್ರೀ ರ್ಯಾಡಿಕಲ್ ನಿಂದ ಆಗುವಂತಹ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ಒದಗಿಸುವುದು. ವಿಟಮಿನ್ ಎ ಆರೋಗ್ಯಕಾರಿ ಚರ್ಮ ಹಾಗೂ ದೃಷ್ಟಿಗೆ ಅತೀ ಅಗತ್ಯ.
25.ವಿಟಮಿನ್ ಕೆ
ಬೇರೆಲ್ಲಾ ರೀತಿಯ ಹಸಿರೆಲೆ ತರಕಾರಿಗಳಿಗಿಂತಲೂ ಹರಿವೆ ಸೊಪ್ಪಿನಲ್ಲಿ ವಿಟಮಿನ್ ಕೆ ಹೆಚ್ಚಿದೆ. ವಿಟಮಿನ್ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆಸ್ಟಿಯೋಬ್ಲಾಸ್ಟ್ ಚಟುವಟಿಕೆ ವೃದ್ಧಿಸುವುದು ಮತ್ತು ಮೂಳೆಯ ದ್ರವ್ಯರಾಶಿಯನ್ನು ಬಲಪಡಿಸುವುದು. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು.
26.ವಿಟಮಿನ್ ಬಿ
ಹರಿವೆ ಸೊಪ್ಪಿನಲ್ಲಿ ವಿಟಮಿನ್ ಬಿ ಗುಂಪಿನ ಅಂಶವು ಉತ್ತಮವಾಗಿದೆ. ಫಾಲಟೆ, ರಿಬೊಫ್ಲಾವಿನ್, ನಿಯಾಸಿನ್, ಥೈಮೇನ್, ವಿಟಮಿನ್ ಬಿ6 ಮತ್ತು ಇತರ ಕೆಲವೊಂದು ಅಂಶಗಳು ಈ ಹಸಿರೆಲೆ ತರಕಾರಿಗಳಲ್ಲಿ ಇದೆ. ಇದು ಹುಟ್ಟುವ ಮಕ್ಕಳಲ್ಲಿ ಅಂಗನ್ಯೂನ್ಯತೆ ತಡೆಯುವುದು ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವುದು.
27.ಜೀರ್ಣಕ್ರಿಯೆ ಸುಲಭ
ಅನಾರೋಗ್ಯದಿಂದ ಗುಣಮುಖರಾಗುತ್ತಿರುವವರು ಮತ್ತು ಉಪವಾಸ ಬಿಡುವವರಿಗೆ ಹರಿವೆ ಸೊಪ್ಪನ್ನು ನೀಡಲಾಗುತ್ತದೆ. ಯಾಕೆಂದರೆ ಇದು ಸುಲಭವಾಗಿ ಜೀರ್ಣವಾಗುವುದು. ಹರಿವೆ ಸೊಪ್ಪು ಅತಿಸಾರ ಮತ್ತು ರಕ್ತಸ್ರಾವದ ಚಿಕಿತ್ಸೆಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ನಾವು ಇದನ್ನು ಸೇವಿಸಿದರೆ ಅದರಿಂದ ಹೆಚ್ಚಿನ ಲಾಭವಾಗಲಿದೆ.
28.ಕ್ಯಾಲ್ಸಿಯಂ ಅಧಿಕ
ಹರಿವೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಅಸ್ಥಿರಂಧ್ರತೆ ಮತ್ತು ಮೂಳೆಗೆ ಸಂಬಂಧಿಸಿದ ಇತರ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿ. ಕ್ಯಾಲ್ಸಿಯಂ ಕೊರತೆಯನ್ನು ಇದು ನೀಗಿಸುವುದು.
29.ಪ್ರೋಟಿನ್ ಅಧಿಕವಾಗಿದೆ
ಹರಿವೆ ಸೊಪ್ಪಿನಲ್ಲಿ ಪ್ರೋಟೀನ್ ಅತ್ಯಧಿಕವಾಗಿದೆ. ಇದರಲ್ಲಿ ಓಟ್ಸ್ ಗಿಂತಲೂ ಹೆಚ್ಚಿನ ಪ್ರೋಟೀನ್ ಇದೆ. ಪ್ರಾಣಿಜನ್ಯ ಪ್ರೋಟೀನ್ ಸೇವನೆ ಮಾಡುವುದಕ್ಕಿಂತಲೂ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವ ಸಸ್ಯಜನ್ಯ ಪ್ರೋಟೀನ್ ದೇಹಕ್ಕೆ ತುಂಬಾ ಒಳ್ಳೆಯದು.
30.ಹರಿವೆ ಸೊಪ್ಪು ತಿಂದರೆ ಅದರಿಂದ ಬಯಕೆ ಕಡಿಮೆ ಆಗುವುದು. ಪ್ರೋಟೀನ್ ಅಧಿಕವಾಗಿ ಇರುವಂತಹ ಆಹಾರ ಸೇವಿಸಿದರೆ ಅದು ಹಸಿವು ಕಡಿಮೆ ಮಾಡುವುದು ಮತ್ತು ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟ ಕಡಿಮೆ ಮಾಡುವುದು ಮತ್ತು ದೇಹಕ್ಕೆ ತೃಪ್ತಿ ಉಂಟು ಮಾಡುವುದು.
(ಮಾಹಿತಿ ಸಂಗ್ರಹ)
***
No comments:
Post a Comment