SEARCH HERE

Friday 1 October 2021

ದೃಷ್ಟಿ ದೋಷ ನಿವಾರಣೆಗೆ ಸ್ಪಟಿಕ ಕಲ್ಲು

 ದೃಷ್ಟಿದೋಷ ನಿವಾರಣೆಗೆ ಸ್ಪಟಿಕ ಕಲ್ಲು


ಮನೆಯ ಮುಖ್ಯ ದ್ವಾರ ಬಹಳ ಮುಖ್ಯವಾದದ್ದು.ಒಳ್ಳೆಯದಾಗಲಿ,ಕೆಟ್ಟದ್ದಾಗಲಿ,ಒಳಬರುವುದು ಮುಖ್ಯದ್ವಾರದಿಂದ ಮನೆಯವರು ಕುಟುಂಬ ದವರು ಹೊರಗಡೆ ನಾನಾ ರೀತಿಯ ಕಷ್ಟಗಳು ಕೋಪ, ಅಹಂಕಾರ, ದ್ವೇಷ, ಎಲ್ಲವನ್ನೂ ಅನುಭವಿಸಿ ಬರುತ್ತಾರೆ.ಉದಾರಹಣೆಗೆ ಅಕ್ಕ ಪಕ್ಕದ ಮನೆಯವರ ಕಿರುಕುಳ ಸಹೋದ್ಯೋಗಿ ಸಹೋದರರ ಕಿರುಕುಳ ಅನುಭವಿಸಿರುತ್ತಾರೆ.ಅದನ್ನು ತಂದು ಮನೆಯವರ ಮೇಲೆ ಹೆಂಡತಿಯ ಮೇಲೆ ಕೋಪವನ್ನು ತೀರಿಸಿಕೊಳ್ಳುತ್ತಾರೆ.ಅದಕ್ಕೆ ಆ ರೀತಿಯಾದ ನಕಾರಾತ್ಮಕ ಭಾವನೆಗಳು ಬರಬಾರದೆಂದು ಮನೆಯ ಬಾಗಿಲ ಹೊರಗಡೆ ಸ್ಪಟಿಕ ಕಲ್ಲನ್ನು ಕಟ್ಟಬೇಕು.ಸ್ಪಟಿಕದ ಕಲ್ಲಿನಲ್ಲಿ ಶುದ್ಧೀಕರಿಸುವ ತತ್ವವಿರುತ್ತದೆ.ಆದ್ದರಿಂದ ಸ್ಪಟಿಕದ ಕಲ್ಲು ಕಟ್ಟಿದರೆ ಮನೆಯ ಒಳಗೆ ಪ್ರವೇಶಿಸುವ ವ್ಯಕ್ತಿಯ ಮನಸ್ಸು ಪ್ರಾಶಾಂತವಾಗಿರುತ್ತದೆ.ಹೊರಗಡೆಯ ನಕಾರಾತ್ಮಕವಾದ ಚಿಂತನೆ ಭಾವನೆಗಳೆಲ್ಲವೂ ಒಳಗೆಬಾರದೆ ಹಾಗೆ ಸ್ಪಟಿಕದ ಕಲ್ಲು ನಿಯಂತ್ರಿಸುತ್ತದೆ.ಸ್ಪಟಿಕದ ಕಲ್ಲನ್ನು ಕಪ್ಪು ದಾರದಲ್ಲಿ ಕಟ್ಟಬೇಕು.ಅದನ್ನು ಗಟ್ಟಿಯಾಗಿ ಕೆಳಗೆ ಬೀಳದ ಹಾಗೆ ಕಟ್ಟಬೇಕು ಮತ್ತು ದೃಷ್ಟಿದೋಷದ ನಿವಾರಣೆ ಆಗುತ್ತದೆ.ಸ್ಪಟಿಕದ ಕಲ್ಲನ್ನು ಹೊರಗಡೆಯು ಕಟ್ಟಬಹುದು.ಮನೆಯ ಮುಖ್ಯದ್ವಾರದ ಒಳಗೆ ಕಟ್ಟಿದರೆ ಮನೆಯ ಸದಸ್ಯರ ನಕಾರಾತ್ಮಕ ಭಾವನೆಗಳು ದೂರವಾಗುತ್ತದೆ.ಮುಖ್ಯ ದ್ವಾರದ ಹೊರಗಡೆ ಮೇಲೆ ಕಟ್ಟಿದರೆ ದೃಷ್ಟಿದೋಷವು ಸಹ ನಿವಾರಣೆ ಆಗುತ್ತದೆ.

***


No comments:

Post a Comment