ನೆಲ್ಲಿಕಾಯಿ
ನೆಲ್ಲಿ (ಆಮಲಕ): ಹೊಸದಾಗಿ ಕಿತ್ತ ನೆಲ್ಲಿಕಾಯಿಯ ಒಗರು ಸ್ವಲ್ಪ ಹುಳಿ,
ಕಟು, ಮಧುರ, ಲಘು, ರೂಕ್ಷ, ತ್ರಿದೋಷನಾಶಕವೂ, ಭೇದಿಯನ್ನುಂಟು
ಮಾಡುವಂತಹುದೂ, ತಲೆಯ, ಕೂದಲಿಗೆ ಹಿತಕರವೂ ಮತ್ತು ಅರುಚಿ, ದಾಹ,
ಪ್ರಮೇಹ, ಶೋಥ, ವಿಷಮಜ್ಜರ ತೃಷ್ಣಾ, ಮೇದೋವೃದ್ಧಿ, ಮೂತ್ರಕೃಚ್ಛ್ರಾ, ಭ್ರಮೆ, ಅಮ್ಲಪಿತ್ತ
ಕಾಸ, ಶ್ರಮ (ಒಳಲಿಕೆ), ವಿಬಂಧ, ಕುಷ್ಠಾದಿ ರಕ್ತವಿಕಾರ, ರಕ್ತಪಿತ್ತ, ಪಿತ್ತ ಪ್ರಕೋಪಜನ್ಯ
ವ್ಯಾಧಿ ಮತ್ತು ಜರಾ ವ್ಯಾಧಿ (ಮುಪ್ಪಿನವ್ಯಾಧಿ) ನಾಶಕವೂ, ರಸಾಯನವೂ ಆಗಿದೆ;
ಅಲ್ಲದೆ ಇದು ವೀರ್ಯಜನಕವೂ ಹಾಗೂ ವೀರ್ಯದೋಷನಿವಾರಕವೂ
ಆಗಿದೆ. ಶರೀರದಲ್ಲಿ ನಶಿಸಿರುವ ಮಲಯುಕ್ತವಾದ ಸಪ್ತಧಾತುಗಳ ಪರಮಾಣು
ಘಟಕಗಳನ್ನು ಹೊರನೂಕಿ ಆ ಸ್ಥಾನದಲ್ಲಿ ನೂತನ, ಸಬಲಪರಮಾಣುಗಳನ್ನು ಸ್ಥಾಪಿಸುವ
ಕಾರ್ಯಕ್ರಮವನ್ನು ಆಮಲಕವು ಮಾಡುತ್ತದೆ. ಆಮಲಕದ ಸೇವನೆಯಿಂದ ದೇಹಸ್ವಾಸ್ಥ್ಯದ
ಜೊತೆಗೇ ತಾರುಣ್ಯವೂ ಪ್ರಾಪ್ತವಾಗುತ್ತದೆ. ಆದುದರಿಂದಲೇ ಅತೀ ಪ್ರಾಚೀನ
ಕಾಲದಿಂದಲೂ ನೆಲ್ಲಿಕಾಯಿಯನ್ನು ಮೊರಬ್ಬಾ, ಷರಬತ್ತು, ಲೇಹ, ಪಾಕ, ಕಲ್ಪಗಳ
ರೂಪದಲ್ಲಿ ಉಪಯೋಗಿಸುವ ಕ್ರಮವು ನಡೆದು ಬಂದಿದೆ. ನೆಲ್ಲಿಯ ಬೇರಿನಿಂದ
ಹಿಡಿದು ಕಾಯಿಯವರೆಗೆ ಎಲ್ಲ ಭಾಗಗಳೂ ಔಷಧ ದ್ರವ್ಯಗಳೇ ಆಗಿವೆ; ಆದರೆ
ಇದನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ಬೇಕು.
1)ತಾಜಾ ನೆಲ್ಲಿಕಾಯಿ ರಸವನ್ನು ಆಕಳು ತುಪ್ಪದಲ್ಲಿ ಸೇರಿಸಿ ತಿನ್ನುವುದರಿಂದ ಸರ್ಪಸುತ್ತು ಗುಣವಾಗುತ್ತದೆ.
2) ನೆಲ್ಲಿಕಾಯಿ ರಸ ದ ಜೊತೆಗೆ ಹಿಪ್ಪಲಿ ಮತ್ತು ಜೇನುತುಪ್ಪ ಸೇರಿಸಿ ಸೇವಿಸಿ ಬಿಕ್ಕಳಿಕೆ ಗುಣವಾಗುತ್ತದೆ.
3) ನೆಲ್ಲಿಕಾಯಿ ತಾಜಾ ರಸದಲ್ಲಿ ಕಬ್ಬಿನ ಹಾಲು ಸೇರಿಸಿ ಕುಡಿದರೆ ಉರಿಮೂತ್ರ ಗುಣವಾಗುತ್ತದೆ.
4) ಹಸಿ ಅಥವಾ ಒಣಗಿದ ನೆಲ್ಲಿಕಾಯಿ ರುಬ್ಬಿ ಕೂದಲಿಗೆ ವಾರಕ್ಕೊಮ್ಮೆ ಪ್ಯಾಕ್ ಹಾಕಿ ಸ್ನಾನ ಮಾಡಿದರೆ ಕೂದಲು ಕಂಡೀಶನರ್ ಹಾಕಿದಂತೆ ಶೈನಿಂಗ್ ಇರುತ್ತದೆ ಮತ್ತು ಸೊಂಪಾಗಿ ಬೆಳೆಯುತ್ತದೆ.
5) ನೆಲ್ಲಿಕಾಯಿ ಪುಡಿಯನ್ನು ನಿಂಬೆರಸ ಸೇರಿಸಿ ಸೇವಿಸಿದರೆ ರಕ್ತಾತಿಸಾರ ಗುಣವಾಗುತ್ತದೆ.
6) ನೆಲ್ಲಿಕಾಯಿ ಪುಡಿಯನ್ನು ಸಕ್ಕರೆ ಮತ್ತು ತುಪ್ಪವನ್ನು ಸೇರಿಸಿ ತಿಂದರೆ ತಲೆಶೂಲೆ ಗುಣವಾಗುತ್ತದೆ.
7) ಆಕಳ ಹಾಲಿನಲ್ಲಿ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಕುಡಿದರೆ ಸ್ವರಭಂಗ ಗುಣವಾಗುತ್ತದೆ.
8) ತಾಜಾ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ವೃಣಗಳಿಗೆ ಹಚ್ಚಿದರೆ ಬಹುಬೇಗ ಗುಣವಾಗುತ್ತದೆ.
9) ಚಕ್ಕೆಯ ಕಷಾಯದಲ್ಲಿ ಕೆಂಪು ಕಲ್ಲು ಸಕ್ಕರೆ ಹಾಕಿ ಕುಡಿದರೆ ಮೂತ್ರದ ರಕ್ತ ನಿಲ್ಲುತ್ತದೆ.
10) ತಾಜಾಎಲೆಯ ರಸವನ್ನು ಬೆಣ್ಣೆ ಅಥವಾ ಮಜ್ಜಿಗೆ ಯಲ್ಲಿ ಸೇವಿಸಿದರೆ ಅಜೀರ್ಣ ಗುಣವಾಗುತ್ತದೆ.
11) ತಾಜಾಎಲೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುತ್ತದೆ.
12) ನೆಲ್ಲಿಕಾಯಿ ಕಷಾಯದಲ್ಲಿ ಗೋದಿ ಹಿಟ್ಟನ್ನು ಸೇರಿಸಿ ಮೂಖಕ್ಕೆ ಪ್ಯಾಕ್ ಹಾಕಿದರೆ ಕಲೆಗಳು ಗುಣವಾಗುತ್ತದೆ.
13) ನೆಲ್ಲಿಕಾಯಿ ಎಳ್ಳು ಹಾಲು ಸೇರಿಸಿ ನುಣ್ಣಗೆ ಅರೆದು ಪೇಸ್ಟ್ ಮಾಡಿ ಲೇಪಿಸಿ ದರೆ ಸಿಡುಬಿನ ಕಲೆ ಗುಣವಾಗುತ್ತದೆ.
14) ನೆಲ್ಲಿಕಾಯಿ ಪುಡಿ, ಅಳಲೆಕಾಯಿ ಪುಡಿ, ಹಿಪ್ಪಲಿ,ಚಿತ್ರ ಮೂಲ,(ಶುದ್ಧೀಕರಣ ಆಗಿದ್ದು)ಸೈದಲವಣ ಸೇರಿಸಿ ಜೇನುತುಪ್ಪ ದೊಡನೆ ಸೇವಿಸಿ ದರೆ ಜ್ವರ ಗುಣವಾಗುತ್ತದೆ.
15) ನೆಲ್ಲಿಕಾಯಿ ರಸವನ್ನು ಎಳ್ಳೆಣ್ಣೆ ಹಾಕಿ ಕುದಿಸಿ ಮಂದಾಗ್ನಿಯಲ್ಲಿ ಕುದಿಸಿ ಎಣ್ಣೆ ಮಾತ್ರ ಉಳಿದಾಗ ಇಳಿಸುವಾಗ ಪಚ್ಛೆತೆನೆ ಹಾಕಿ ಇಟ್ಟುಕೊಂಡು ಕೂದಲಿಗೆ ಹಚ್ಚಿ ದರೆ ಕಪ್ಪಾಗಿ ತಲೆ ಗೆ ತಂಪಾಗುತ್ತದೆ.
16) ಆಗತಾನೆ ಆದಗಾಯಕ್ಕೆ ನೆಲ್ಲಿಕಾಯಿ ತಾಜಾ ರಸ ಹಚ್ಚಿದರೆ ತಕ್ಷಣ ರಕ್ತ ನಿಲ್ಲುತ್ತದೆ.
17) ನೆಲ್ಲಿಕಾಯಿ ಪುಡಿಯನ್ನು ಗಂಧದ ಪುಡಿ ಸೇರಿಸಿ ನೆಕ್ಕುತ್ತಿದ್ದರೆ ವಾಂತಿ ನಿಲ್ಲುತ್ತದೆ.
18) ನಾಲ್ಕು ಪಾಲು ನೆಲ್ಲಿ,ಎರಡು ಪಾಲು ಅಳಲೆಕಾಯಿ, ಒಂದು ಪಾಲು ತಾರೆಕಾಯಿ ಪುಡಿಯನ್ನು ಸೇರಿಸಿ. ಪ್ರತಿದಿನವೂ ಎರಡು ಹೊತ್ತು ಕಣ್ಣನ್ನು ತೊಳೆದರೆ ಕಣ್ಣಿನ ಅನೇಕ ಸಮಸ್ಯೆ ಗುಣವಾಗುತ್ತದೆ.
19) ನೆಲ್ಲಿಕಾಯಿ ಪುಡಿಯನ್ನು ದೇಸಿ ಗೋಮೂತ್ರ ದಲ್ಲಿ ಏಳು ಬಾರಿ ಬಾವನೆ ಕೊಟ್ಟು ನಂತರ ಒಣಗಿಸಿ ಗೋಮೂತ್ರ ದಲ್ಲಿ ಕಲೆಸಿ ಮಗುವಿನ ಮೈಗೆ ಹಚ್ಚಿ ಸ್ನಾನ ಮಾಡಿದರೆ ಯಾವ ಆಲೊಪತಿ ಮೆಡಿಸಿನ್ ನಿಂದ ಗುಣಪಡಿಸಲು ಆಗದ ಕೆಂಪಿನ ಕಜ್ಜಿ ಗುಣವಾಗುತ್ತದೆ.
20) ನೆಲ್ಲಿಕಾಯಿ ನಯವಾದ ಪುಡಿಯನ್ನು ಮಗುವಿನ ವಸಡಿಗೆ ಹಚ್ಚಿದರೆ ಸದೃಢ ಹಲ್ಲು ಬರುತ್ತದೆ.
21) ನೆಲ್ಲಿ ಬೀಜ ವನ್ನು ಸುಟ್ಟು ಬೂದಿ ಮಾಡಿ ತೆಂಗಿನ ಎಣ್ಣೆ ಸೇರಿಸಿ ತುರಿಕೆ ಗೆ ಹಚ್ಚಿದರೆ ಗುಣವಾಗುತ್ತದೆ.
22) ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಮತ್ತು ಹಚ್ಚುವುದರಿಂದ ಕೈ ಕಾಲು ಒಡಕು ಗುಣವಾಗುತ್ತದೆ.
23) ನೆಲ್ಲಿಎಲೆ ,ನೆಲನೆಲ್ಲಿ ಎಲೆ ಮತ್ತು ಕಟುಕ ರೋಹಿಣಿ ಸೇರಿಸಿ ಆಗತಾನೆ ಕರೆದ ಹಾಲಿನಲ್ಲಿ ತೆಗೆದು ಕೊಂಡರೆ ಜಾಂಡೀಸ್ ಗುಣವಾಗುತ್ತದೆ.
24) ತಮಗೆಲ್ಲ ನಾನು ತಯಾರಿಸಿ ದ ಬೆಟ್ಟದ ನೆಲ್ಲಿಕಾಯಿ ಲೇಹ್ಯ (ಚವನ ಪ್ರಾಶ್) ಉಪಯೋಗಿಸಿ ಅದರ ಬೆನಿಪಿಟ್ಸ್ ಗೊತ್ತು.ಇದನ್ನು ಉಪಯೋಗಿಸುವವರು ಈ ಗುಂಪಿನಲ್ಲಿ ಇದ್ದಿರಾ.
25) ನೆಲ್ಲಿಕಾಯಿ, ಜೀರಿಗೆ,ಕಾಳುಮೆಣಸು ಸ್ವಲ್ಪ ತೆಂಗಿನಕಾಯಿ ತುರಿ ರುಬ್ಬಿ ರುಚಿಗೆ ಉಪ್ಪು ಬೆರೆಸಿ ಮಜ್ಜಿಗೆ ಸೇರಿಸಿ ತುಪ್ಪದ ಒಗ್ಗರಣೆ ಹಾಕಿ ಊಟಕ್ಕೆ ಕುಳಿತಾಗ ದಿನದಕ್ಕಿಂತ ಸ್ವಲ್ಪ ಹೆಚ್ಚು ಅನ್ನು ಬೇಕಾಗುತ್ತದೆ. ಇದು ಆಮಶಂಕೆ ,ಅಜೀರ್ಣ ಗುಣಪಡಿಸುತ್ತದೆ. ಜ್ವರದ ನಂತರದಲ್ಲಿ ಹೋದ ಬಾಯಿ ರುಚಿಯನ್ನು ಮರಳಿಸುತ್ತದೆ.
26) ಉಪ್ಪಿನಕಾಯಿ ಉಪ್ಪು ಖಾರಾ ,...ಎಲ್ಲವೂ ರುಚಿಯನ್ನು ಆರೋಗ್ಯ ವನ್ನು ಹೆಚ್ಚಿಸುತ್ತದೆ.
ಇದೆಲ್ಲಾ ಬೆಟ್ಟದ ನೆಲ್ಲಿಕಾಯಿ ಗುಣ ಹೊಂದಿದೆ ಆದರೆ ಮಾರುಕಟ್ಟೆ ಯಲ್ಲಿ ಸಿಗುವ ಹೈಬ್ರೀಡ್ ನೆಲೆಯಲ್ಲಿ ಅಲ್ಲ ನೆನಪಿರಲಿ.
🖌️ಸುಮನಾ ಮಳಲಗದ್ದೆ.9980182883
***
ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೆಲ್ಲಿಕಾಯಿ ಜ್ಯೂಸ್
⏺️🌺🌺♻️♻️🌻🌻⏺️♻️♻️⏺️
ಯಾವುದೇ ಸೋಂಕು ಅಥವಾ ಕಾಯಿಲೆಯು ದೇಹವನ್ನು ಬಾಧಿಸದೆ ಇರಲು ಪ್ರತಿರೋಧಕ ವ್ಯವಸ್ಥೆ ಬಲಪಡಿಸಬೇಕು. ಇದಕ್ಕಾಗಿ ನೆಲ್ಲಿಕಾಯಿ ಜ್ಯೂಸ್ ಅತೀ ಉಪಯುಕ್ತ.
ದೇಹದಲ್ಲಿ ರೋಗನಿರೋಧಕ ಶಕ್ತಿಯು ಬಲಿಷ್ಠವಾಗಿದ್ದರೆ ಆಗ ಯಾವುದೇ ರೀತಿಯ ಕಾಯಿಲೆಗಳು ದೇಹವನ್ನು ಬಾಧಿಸದು. ಅದರಲ್ಲೂ ಸಾಮಾನ್ಯವಾಗಿ ಕಂಡುಬರುವಂತಹ ಶೀತ ಮತ್ತು ಜ್ವರದ ಸಮಸ್ಯೆಯನ್ನು ನಿವಾರಣೆ ಮಾಡಲು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಬಲವಾಗಿ ಇರುವುದು ತುಂಬಾ ಮುಖ್ಯ. ನಾವು ತಿನ್ನುವಂತಹ ಆಹಾರ ಹಾಗೂ ವ್ಯಾಯಾಮ ಮಾಡಿಕೊಂಡು ಆರೋಗ್ಯಕಾರಿ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ನಮ್ಮ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿ ಇರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಖ್ಯವಾಗಿ ನಾವು ತಿನ್ನುವಂತಹ ಆಹಾರವು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೀಗಾಗಿ ಆಹಾರ ಕ್ರಮವು ಸರಿಯಾಗಿರಬೇಕು. ಆಗ ಯಾವುದೇ ಅನಾರೋಗ್ಯವು ದೇಹವನ್ನು ಕಾಡದು.
ನೆಲ್ಲಿಕಾಯಿ
ಹಾಗಾದರೆ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಎನ್ನುವಂತಹ ಪ್ರಶ್ನೆಯು ಬರುವುದು ಸಹಜ. ಇದಕ್ಕಾಗಿ ಮಾಡಬೇಕಾದ ಕೆಲಸವೆಂದರೆ ವಿಟಮಿನ್ ಸಿ ಅಧಿಕವಾಗಿ ಇರುವಂತಹ ಹಣ್ಣುಗಳು ಹಾಗೂ ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಇದಕ್ಕಾಗಿ ನಾವು ನಿಮಗೆ ತುಂಬಾ ಸುಲಭ ಹಾಗೂ ಸರಳವಾಗಿ ಇರುವ ನೆಲ್ಲಿಕಾಯಿ ಜ್ಯೂಸ್ ನ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ದೇಹದ ಪ್ರತಿರೋಧಕ ವ್ಯವಸ್ಥೆ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದು ಹೇಗೆ ಎಂದು ತಿಳಿಯಿರಿ.
ನೆಲ್ಲಿಕಾಯಿ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ
ನೆಲ್ಲಿಕಾಯಿಯು ಬಹು ಉಪಯೋಗಿ ಹಣ್ಣು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇದನ್ನು ಕೆಲವು ಬೇರೆ ಸಾಮಗ್ರಿಗಳ ಜತೆಗೆ ಬಳಸಿಕೊಂಡು ಜ್ಯೂಸ್ ತಯಾರಿಸಿಕೊಂಡರೆ ಅದು ಆರೋಗ್ಯಕಾರಿ ಮತ್ತು ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ನೆಲ್ಲಿಕಾಯಿ, ಶುಂಠಿ, ಕೊತ್ತಂಬರಿ ಎಲೆಗಳು ಅಥವಾ ಪುದೀನಾ ಎಲೆಗಳನ್ನು ಬಳಸಿಕೊಂಡು ಪ್ರತಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್ ತಯಾರಿಸಿಕೊಳ್ಳಬಹುದು. ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಎಲೆಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದ ಯಾವುದೇ ಸೊಪ್ಪನ್ನು ನೀವು ಇಲ್ಲಿ ಬಳಸಬಹುದು
ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು- ನೆಲ್ಲಿಕಾಯಿ ಆರೋಗ್ಯ ಲಾಭಗಳು
ಶೀತ ಮತ್ತು ಜ್ವರ ನಿವಾರಣೆ ಮಾಡಲು ನೆಲ್ಲಿಕಾಯಿಯು ಅದ್ಭುತವಾದ ಹಣ್ಣು ಎಂದು ನಮಗೆಲ್ಲರಿಗೂ ತಿಳಿದ ವಿಚಾರ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಬಿಳಿ ರಕ್ತದ ಕಣಗಳನ್ನು ಉತ್ಪಾದಿಸುವುದು ಮತ್ತು ಇದರಿಂದ ಹಲವಾರು ರೀತಿಯ ಸೋಂಕು ಮತ್ತು ಕಾಯಿಲೆಗಳನ್ನು ಇದು ತಡೆಯುವುದು. ನೆಲ್ಲಿಕಾಯಿಯಲ್ಲಿ ಕಬ್ಬಿನಾಂಶ, ಕ್ಯಾಲ್ಸಿಯಂ ಮತ್ತು ಇತರ ಹಲವಾರು ರೀತಿಯ ಖನಿಜಾಂಶಗಳು ಇವೆ. ಇದು ಒಂದು ಸಂಪೂರ್ಣ ಪೋಷಕಾಂಶಗಳು ಇರುವ ಹಣ್ಣಾಗಿದೆ.
ಶುಂಠಿಯ ಆರೋಗ್ಯ ಲಾಭಗಳು
ಶುಂಠಿಯಲ್ಲಿ ಜಿಂಜರೊಲ್ ಎನ್ನುವಂತಹ ಅಂಶವಿದೆ ಮತ್ತು ಇದು ಹಲವಾರು ರೀತಿಯ ಚಿಕಿತ್ಸಕ ಗುಣಗಳ್ನು ಹೊಂದಿದೆ. ಜಿಂಜರೊಲ್ ನಲ್ಲಿ ನೋವು ನಿವಾರಕ, ನಿದ್ರಾಜನಕ, ಜ್ವರ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುನಗಳು ಇವೆ. ಜಿಂಜರೊಲ್ ನಲ್ಲಿ ಇರುವಂತಹ ಮತ್ತೊಂದು ಅಂಶವೆಂದರೆ ಅದು ಆಂಟಿಆಕ್ಸಿಡೆಂಟ್. ಜಿಂಜರೊಲ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಶೀತ ಮತ್ತು ಗಂಟಲಿನ ಊತ ಕಡಿಮೆ ಮಾಡುವುದು. ಶುಂಠಿಯು ರಕ್ತದೊತ್ತಡವನ್ನು ಸಾಮಾನ್ಯವಾಗಿಡುವುದು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಕೊತ್ತಂಬರಿ ಸೊಪ್ಪಿನ ಆರೋಗ್ಯ ಲಾಭಗಳು
ಕೊತ್ತಂಬರಿ ಸೊಪ್ಪು ಆಹಾರಕ್ಕೆ ರುಚಿ ಹಾಗೂ ಸುವಾಸನೆ ನೀಡುವುದು ಮಾತ್ರವಲ್ಲದೆ, ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಕೂಡ ಇದೆ. ಇದು ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಕೊತ್ತಂಬರಿ ಸೊಪ್ಪಿನಲ್ಲಿ ನಿರ್ವಿಷಕಾರಿ, ಬ್ಯಾಕ್ಟೀರಿಯಾ ವಿರೋಧ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವ ಗುಣಗಳು ಇವೆ.
ಪುದೀನಾ ಎಲೆಗಳ ಆರೋಗ್ಯ ಲಾಭಗಳು
ಪುದೀನಾದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿದೆ. ಇದು ದೀರ್ಘಕಾಲಿಕ ಕೆಮ್ಮಿನಿಂದಾಗಿ ಉಂಟಾಗುವ ಕಿರಿಕಿರಿಗೆ ಶಮನ ನೀಡುವುದು. ಪ್ರಬಲ ಮತ್ತು ಸುವಾಸನೆ ನೀಡುವಂತಹ ಪುದೀನ ಎಲೆಯು ತಲೆನೋವು ಶಮನಗೊಳಿಸುವುದು.
ನೆಲ್ಲಿಕಾಯಿ ಜ್ಯೂಸ್ ತಯಾರಿಸಿಕೊಳ್ಳುವುದು ಹೇಗೆ
ಮೊದಲ ಹಂತ: 5-6 ಕತ್ತರಿಸಿಕೊಂಡ ನೆಲ್ಲಿಕಾಯಿ, 1 ಚಮಚ ತುಂಡು ಮಾಡಿರುವ ಶುಂಠಿ, 4-5 ಕೊತ್ತಂಬರಿ ಅಥವಾ ಪುದೀನಾ ಎಲೆಗಳು
ಎರಡನೇ ಹಂತ: ಸರಿಯಾಗಿ ತೊಳೆಯಿರಿ ಮತ್ತು ಜ್ಯೂಸರ್ ಗೆ ಹಾಕಿ.
ಮೂರನೇ ಹಂತ: ಸೋಸಿಕೊಂಡು ಒಂದು ಲೋಟಕ್ಕೆ ಹಾಕಿ ಮತ್ತು ಇದಕ್ಕೆ ಕಲ್ಲುಪ್ಪು, ಚಾಟ್ ಮಸಾಲ ಮತ್ತು ಜೇನುತುಪ್ಪ ಬೆರೆಸಿಕೊಳ್ಳಿ. ಚಾಟ್ ಮಸಾಲ ಬದಲಿಗೆ ಜೀರಿಗೆ, ಕೊತ್ತಂಬರಿ ಮತ್ತು ಕೆಂಪುಮೆಣಸಿನ ಹುಡಿ ಮಾಡಿ ಬಳಸಬಹುದು. ಈಗ ಜ್ಯೂಸ್ ತಯಾರಾಗಿದೆ. ಇದನ್ನು ನೀವು ಪ್ರತಿನಿತ್ಯವೂ ಕುಡಿದರೆ ಅದರಿಂದ ಖಂಡಿತವಾಗಿಯೂ ಪ್ರತಿರೋಧಕ ಶಕ್ತಿ ವೃದ್ಧಿಸುವುದು.
(ಮಾಹಿತಿ ಸಂಗ್ರಹ)
***
ನೆಲ್ಲಿಕಾಯಿ ಯಾರು ಸೇವಿಸಬಾರದು? ಇವರು ಅಪ್ಪಿತಪ್ಪಿಯೂ ನೆಲ್ಲಿಕಾಯಿ ಸೇವಿಸಬಾರದು..!
************
ಪ್ರತಿ ಋತುವಿನಲ್ಲೂ ಸೇವಿಸಬಹುದಾದ ಆಹಾರವೇ ನೆಲ್ಲಿಕಾಯಿ, ನೆಲ್ಲಿಕಾಯಿನ್ನು ರುಚಿ, ಆರೋಗ್ಯ ಮತ್ತು ಸೌಂದರ್ಯದಲ್ಲಿ ಹೆಚ್ಚು ಪರಿಗಣಿಸಲಾಗಿದೆ. ಆದರೆ ನೆಲ್ಲಿಕಾಯಿ ಪ್ರಯೋಜನಕಾರಿಯಾದರೆ ಕೆಲವರಿಗೆ ಇದು ಅಪಾಯ.
ನೀವು ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಕೆಲವು ದಿನಗಳವರೆಗೂ ನೆಲ್ಲಿಕಾಯಿ ಸೇವಿಸುವುದನ್ನು ನಿಲ್ಲಿಸಿ. ಏಕೆಂದರೆ ರಕ್ತಸ್ರಾವದ ಅಪಾಯವು ಹೆಚ್ಚಾಗಬಹುದು. ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಅತಿಯಾದ ನೆಲ್ಲಿಕಾಯಿ ಸೇವನೆಯನ್ನು ತಪ್ಪಿಸಬೇಕು.
ಕೆಲವರಿಗೆ ನೆಲ್ಲಿಕಾಯಿ ಸೇವನೆಯು ಪ್ರಯೋಜನಕಾರಿಯಾದರೆ, ಕೆಲವರಿಗೆ ಇದು ಅಪಾಯ. ಲೊ ಬ್ಲಡ್ ಶುಗರ್ ಇದ್ದವರು ರೋಗಿಗಳು ನೆಲ್ಲಿಕಾಯಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
***
No comments:
Post a Comment