SEARCH HERE

Friday 1 October 2021

ರಕ್ತ ಶುದ್ಧೀಕರಿಸಲು ಹೀಗೆ ಮಾಡಿ

 ರಕ್ತ ಶುದ್ಧವಾಗಿದ್ದರೆ ಆರೋಗ್ಯ ವೃದ್ಧಿ: ರಕ್ತ ಶುದ್ಧೀಕರಿಸಲು ಹೀಗೆ ಮಾಡಿ

ಮಾನವನ ದೇಹಕ್ಕೆ ರಕ್ತ ಅತೀ ಮುಖ್ಯ. ನಾವು ದಿನ ಎದ್ದು ನೂರಾರು ಕೆಲಸಗಳನ್ನು ಸರಾಗವಾಗಿ ಮಾಡುತ್ತೇವೆ ಎಂದಾದರೆ ಅದಕ್ಕೆ ನಮ್ಮ ದೇಹದಲ್ಲಿರುವ ರಕ್ತ ಮುಖ್ಯ ಪಾತ್ರವಹಿಸುತ್ತದೆ. ನಮ್ಮ ರಕ್ತದಲ್ಲಿ ರೋಗಾಣುಗಳು ಸೇರಿದರೆ ಅಪಾಯ ಖಂಡಿತ.


ಹೀಗಾಗಿ ರಕ್ತವನ್ನು ನಾವು ಅತೀ ಶುದ್ದತೆಯಿಂದ ಇರುವಂತೆ ನೋಡಿಕೊಳ್ಳಬೇಕು. ನಮ್ಮ ದೇಹದಲ್ಲಿರುವ ಕೋಟಿಗಟ್ಟಲೇ ಜೀವಕೋಶಗಳಿಗೆ ಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುವ ಕೆಲಸವನ್ನು ರಕ್ತ ಮಾಡುತ್ತದೆ. ಅಲ್ಲದೇ ರಕ್ತವೂ, ನಮ್ಮ ಜೀವಕೋಶಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ಶುದ್ದೀಕರಿಸುವ ಅಂಗಕ್ಕೆ ಕಳುಹಿಸಿ, ಮಾನವನ ದೇಹವನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ.


ಅಲ್ಲದೇ ರಕ್ತವು ನಮ್ಮ ದೇಹದಲ್ಲಿನ ತಾಪಮಾನ, ಪಿ.ಎಚ್ ಮತ್ತು ನೀರಿನ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದ ಶುದ್ಧೀಕರಣದ ಕೊರತಯಿಂದ ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರವಾದ ತಲೆನೋವು, ಆಯಾಸಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಮೊಡವೆ, ಕಪ್ಪು ಕಲೆಗಳು, ಒಣ ಮತ್ತು ಶುಷ್ಕ ತ್ವಚೆಗಳು ಹೀಗೆ ಹತ್ತು ಹಲವು ಸಮಸ್ಯೆಗಳು ತಲೆದೋರುತ್ತದೆ.


ಹಾಗಾದರೆ ರಕ್ತದ ಶುದ್ದೀಕರಣವನ್ನು ಹೇಗೆ ಮಾಡುವುದು? ಇದಕ್ಕೆ ನಾವು ಏನು ಮಾಡಬೇಕು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ:


ವ್ಯಾಯಾಮ ಮಾಡುವುದು!


ವ್ಯಾಯಾಮ ಮಾಡುವುದರಿಂದ ಮನುಷ್ಯನ ದೇಹ ಸೃದಢಗೊಳ್ಳುತ್ತದೆ ಎಂದು ಅನೇಕರು ತಿಳಿದುಕೊಂಡಿರುತ್ತಾರೆ. ಆದರೆ ವ್ಯಾಯಾಮ ಮಾಡುವುದರಿಂದ ರಕ್ತ ಕೂಡ ಶುದ್ದೀಕರಣವಾಗುತ್ತದೆ ಎಂದು ಎಷ್ಟು ಜನರಿಗೆ ಗೊತ್ತು?. ಹೌದು, ವ್ಯಾಯಾಮ ಮಾಡುವುದರಿಂದ ಸರಾಗವಾಗಿ ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತ ಪರಿಚಲನೆ ಹೆಚ್ಚುವುದರಿಂದ ನಮ್ಮ ದೇಹದಲ್ಲಿ ಉಸಿರಾಟ ಸಮತೋಲನದಲ್ಲಿ ಇರುತ್ತದೆ. ಇದರ ಜೊತೆಗೆ ವ್ಯಾಯಾಮದಿಂದ ನಮ್ಮ ದೇಹದಲ್ಲಿ ಬೆವರು ಉತ್ಪತ್ತಿಯಾಗುತ್ತದೆ. ಈ ಮೂಲಕ ದೇಹದಲ್ಲಿನ ವಿಷಕಾರಿ ಅಂಶ ಬಿಡುಗಡೆಯಾಗುತ್ತದೆ. ಅಲ್ಲದೇ ರಕ್ತೆ ಪರಿಚಲನೆಯಿಂದ ಯಕೃತ್ತು ಮತ್ತು ದುಗ್ಧರಸ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ. ಈ ಎಲ್ಲಾ ಚಟುವಟಿಕೆಗಳಿಂದ ರಕ್ತ ಶುದ್ದೀಕರಣಗೊಳ್ಳುತ್ತದೆ. ಹೀಗಾಗಿ ದಿನ ನಿತ್ಯ ವ್ಯಾಯಾಮಗಳನ್ನು ಮಾಡುತ್ತ ರಕ್ತವನ್ನು ಶುದ್ದೀಕರಿಸಬಹುದು.


ನೀರು ಸೇವನೆ!


ನೀರು ಕುಡಿಯುವ ಮೂಲಕ ನಮ್ಮ ರಕ್ತವನ್ನು ನಾವು ಶುದ್ದೀಕರಿಸಬಹುದು. ಹೌದು, ರಕ್ತವನ್ನು ಶುದ್ಧೀಕರಿಸಲು ನೀರು ಕುಡಿಯುವುದು ಸುಲಭವಾದ ಮತ್ತು ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ. ಇನ್ನು ನೀರು ನಮ್ಮ ದೇಹದಿಂದ ಎಲ್ಲಾ ಹಾನಿಕಾರಕ ವಿಷಗಳು ಮತ್ತು ತ್ಯಾಜ್ಯ ರಾಸಾಯನಿಕಗಳನ್ನು ಹೊರಹಾಕುತ್ತದೆ. ಆಯುರ್ವೇದದ ಪ್ರಕಾರ, ನೀರನ್ನು ರಕ್ತ ಶುದ್ಧೀಕರಣವಾಗಿ ಬಳಸುವ ಒಂದು ಉತ್ತಮ ವಿಧಾನವೆಂದರೆ ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸಂಗ್ರಹಿಸಿ ಮರುದಿನ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು. ತಾಮ್ರವು ನಿಮ್ಮ ರಕ್ತದಿಂದ ಕಲ್ಮಶಗಳನ್ನು ನಿವಾರಿಸಿದ ಬಳಿಕ ಬಿಸಿಯಾಗಿದ್ದ ಯಕೃತ್ತನ್ನು ತಣ್ಣಗಾಗಿಸುತ್ತದೆ.


ಬಿಟ್ರೋಟ್ ಸೇವನೆ! 


ತರಕಾರಿಗಳ ಪೈಕಿ ಬಿಟ್ರೋಟ್ ಅತ್ಯಂತ ಉತ್ತಮವಾದ ರಕ್ತ ಶುದ್ದೀಕರಿಸುವ ಆಹಾರವಾಗಿದೆ. ಬಿಟ್ರೋಟ್ ಜ್ಯೂಸ್ ಗೆ ರಕ್ತ ಶುದ್ಧಿಕರಿಸುವ ಸಾಮರ್ಥ್ಯವಿದೆ. ಅಲ್ಲದೇ ರ್ಮವನ್ನು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿಡಲು ಬಿಟ್ರೋಟ್ ಸಮರ್ಥವಾಗಿದೆ. ಇದರಲ್ಲಿರುವ ನೈಟ್ರೇಟುಗಳಿಂದಾಗಿಯೇ ಇದರ ಬಣ್ಣ ಗಾಢಕೆಂಪಾಗಿದೆ. ಸಾಮಾನ್ಯವಾಗಿ ಈ ಬಣ್ಣದಿಂದಾಗಿಯೇ ಹೆಚ್ಚಿನವರು ಬೀಟ್ರೂಟನ್ನು ಇಷ್ಟಪಡುವುದಿಲ್ಲ. ಆದರೆ ವಾಸ್ತವದಲ್ಲಿ ಈ ಪೋಷಕಾಂಶಗಳಲ್ಲಿ ಬೀಟಾಲೈನ್ ಎಂಬ ಆಂಟಿ ಆಕ್ಸಿಡೆಂಟ್ ಗುಣವಿದ್ದು ಉರಿಯೂತ ಮತ್ತು ಯಕೃತ್ತಿಗೆ ಉತ್ಕರ್ಷಣಶೀಲ ಘಾಸಿಯಾಗುವುದನ್ನು ತಡೆಯುತ್ತದೆ. ಅಲ್ಲದೇ ಇದರ ರಸ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ ಮತ್ತು ಕಲ್ಮಶಗಳ ನಿವಾರಣೆಗೆ ನೆರವಾಗುತ್ತದೆ.


ಬೆರಿಗಳ ಸೇವನೆ! 


ಸ್ಟ್ರಾಬೆರಿ, ಬ್ಲೂಬೆರಿ, ಬ್ಲ್ಯಾಕ್ ಬೆರಿಯಂತಹ ಹಣ್ಣುಗಳನ್ನು ಹೆಚ್ಚೆಚ್ಚು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳುವುದರಿಂದ ಸಹ ರಕ್ತವನ್ನು ಶುದ್ಧೀಕರಿಸಬಹುದು. ಮುಖ್ಯವಾಗಿ ನಾರಿನಾಂಶ ಹೆಚ್ಚಿರುವ ಹಣ್ಣು - ತರಕಾರಿಗಳನ್ನು ಸೇವನೆ ಕಡೆ ಹೆಚ್ಚಿನ ಗಮನ ನೀಡಿ. ಇದು ರಕ್ತವನ್ನು ಶುದ್ಧೀಕರಿಸಿ ದೇಹಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ಆಮ್ಲ ತಿಂದರೆ ಅದರಲ್ಲಿ ರಕ್ತ ಶುದ್ದೀಕರಿಸುವ ಶಕ್ತಿಯು ನಿಮ್ಮ ದೇಹಕ್ಕೆ ಸಹಾಯ ಮಾಡಲಿದೆ.


ಬೆಲ್ಲ ಸೇವನೆ! 


ಬೆಲ್ಲ ಅತ್ಯಂತ ಉತ್ತಮ ವಸ್ತುವಾಗಿದ್ದು ರಕ್ತ ಪ್ಯೂರಿಫೈ ಮಾಡುವ ಶಕ್ತಿಯನ್ನು ಹೊಂದಿದೆ. ಬೆಲ್ಲಕ್ಕೆ ದೇಹದಲ್ಲಿರುವ ತ್ಯಾಜ್ಯಗಳು, ವಿಷ ಆಹಾರವನ್ನು ತೆಗೆದು ಹೊರಹ್ಕುವ ಶಕ್ತಿ ಇದೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಾಂಗಗಳನ್ನು ಶುದ್ದೀಕರಿಸಲು, ಮಲಬದ್ದತೆಯಾಗದಂತೆ ತಡೆಯಲು, ಕಲ್ಮಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಬೆಲ್ಲದಲ್ಲಿರುವ ಕಬ್ಬಿಣದ ಅಂಶ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ಆರೊಗ್ಯಕರ ರಕ್ತದ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ.


ನಿಂಬೆ ಹಣ್ಣು! 


ಬಿಸಿ ನೀರು ಹಾಗೂ ನಿಂಬೆ ಹಣ್ಣಿನ 


ರಸದೊಂದಿಗೆ ಮಿಕ್ಸ್ ಮಾಡಿ ಕುಡಿದರೆ ಕೊಬ್ಬು ಕೊಂಚ ದಿನದಲ್ಲೇ ಮಂಗಮಾಯವಾಗುತ್ತದೆ. ಅಲ್ಲದೇ ನಿಂಭೆ ರಸವು ಕಿಡ್ನಿ ಮೇಲಾಗುವ ಒತ್ತಡವನ್ನು ನಿವಾರಿಸುವ ಕೆಲಸ ಮಾಡುತ್ತದೆ. ನಿಂಬೆ ಹಣ್ಣು ತನ್ನಲ್ಲಿ ಸಿಟ್ರಿಕ್ ಅಂಶವನ್ನು ಒಳಗೊಂಡಿದೆ. ಇದು ಕೇವಲ ನಿಮ್ಮ ರಕ್ತವನ್ನು ಮಾತ್ರ ಶುದ್ಧ ಮಾಡುವುದು ಅಲ್ಲದೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ನಿಮ್ಮ ದೇಹದ ರಕ್ತದಲ್ಲಿ ಪಿಹೆಚ್ ಮಟ್ಟವನ್ನು ಸಮತೋಲನ ಮಾಡಿ ರಕ್ತದಿಂದ ಕೆಟ್ಟ ಮತ್ತು ಕಲುಷಿತ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ನಿಂಬೆಹಣ್ಣಿನ ರಸ ನಿಮ್ಮ ದೇಹದಲ್ಲಿ ಅಂದರೆ ನಿಮ್ಮ ರಕ್ತದಲ್ಲಿ ಸೇರ್ಪಡೆಯಾಗಿದ್ದಾರೆ ಅದರಲ್ಲಿ ಹೆಚ್ಚು ರೋಗಕಾರಕ ಸೂಕ್ಷ್ಮಾಣುಗಳು ವಾಸವಿರಲು ಸಾಧ್ಯವಿರುವುದಿಲ್ಲ.


ನಿದ್ದೆ ಮಾಡುವುದು! 


ನಿದ್ದೆಗೂ ರಕ್ತಕ್ಕೂ ಅವಿನಾಭಾವ ಸಂಬಂಧವಿದೆ. ವೈದ್ಯರ ಪ್ರಕಾರ ನಿದ್ದೆಗೆಟ್ಟರೆ ರಕ್ತ ಅಶುದ್ಧಗೊಳ್ಳುತ್ತದೆಯಂತೆ. ಇನ್ನು ಉತ್ತಮ ನಿದ್ದೆಯಿಂದ ರಕ್ತವನ್ನು ಶುದ್ದೀಕರಿಸಬಹುದು. ನಿದ್ದೆಯ ಸಂದರ್ಭ ನಮ್ಮ ದೇಹದ ಅಂಗಾಂಗಳು ದೇಹದ ದುರಸ್ತಿ ಕಾರ್ಯವನ್ನು ಮಾಡುತ್ತದೆ. ಉದಾಹರೆಣೆಗೆ ನಿಮ್ಮ ಕೈ ಮುರಿತವಾಗಿದ್ದರೆ ನಿದ್ದೆ ಸಮಯದಲ್ಲಿ ನಿಮ್ಮ ದೇಹದ ಅಂಗಾಂಗವೂ ಅದನ್ನು ಜೋಡಿಸುವ ಕೆಲಸ ಮಾಡುತ್ತದೆ. ಇದೇ ರೀತಿ ನೀವು ನಿದ್ದೆ ಮಾಡುವ ಸಮಯದಲ್ಲಿ ನಿಮ್ಮ ದೇಹ, ನಿಮ್ಮಲ್ಲಿರುವ ತ್ಯಾಜ್ಯ, ವಿಷಕಾರಿ ಆಹಾರವನ್ನು ಹೊರಗೆ ಹಾಕಿ ರಕ್ತವನ್ನು ಶುದ್ದೀಕರಿಸುತ್ತದೆ.

Kiran Dandole.

ಬೋಲ್ಡ್ ಸ್ಕೈ

***


No comments:

Post a Comment