SEARCH HERE

Friday 1 October 2021

ತೆಂಗಿನ ಎಣ್ಣೆ ಚರ್ಮದ ಸಮಸ್ಯೆಯಿಂದ ರಕ್ಷಣೆ

 ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚೋದರ ಪ್ರಯೋಜನಗಳು ಇಲ್ಲಿವೆ

ತೆಂಗಿನ ಎಣ್ಣೆಯಲ್ಲಿ ಪೋಷಣೆಯ ಕೊಬ್ಬಿನಾಂಶ ಸಮೃದ್ಧವಾಗಿದೆ ಮತ್ತು ಅದು ಚರ್ಮವನ್ನು ಮೃದುವಾಗಿಸುತ್ತದೆ. ನೀವು ಒಣ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ತೆಂಗಿನ ಎಣ್ಣೆಯ ಲೇಪನ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಬಲ್ಲದು.

ಬಹಳ ಹಿಂದಿನ ಕಾಲದಿಂದಲೂ ತೆಂಗಿನಎಣ್ಣೆ ಭಾರತೀಯರ ಮನೆಗಳಲ್ಲಿ  ಒಂದು ಸಾಮಾನ್ಯ ಸಾಮಾಗ್ರಿಯಾಗಿ ಬಳಕೆಯಲ್ಲಿದೆ. ಕಲ್ಪವೃಕ್ಷದ ಕೊಡುಗೆಯಾಗಿರುವ ಈ ಎಣ್ಣೆಯ ಉಪಯೋಗಗಳು ಅಗಣಿತ. ಇನ್ನು ನಮ್ಮ ಪೂರ್ವಜರಿಗಂತೂ ತೆಂಗಿನ ಎಣ್ಣೆಯ ಪ್ರಯೋಜನಗಳ ಕುರಿತು ಅಪಾರ ನಂಬಿಕೆಯಿತ್ತು. ತೆಂಗಿನ ಎಣ್ಣೆಯನ್ನು ಕೂದಲಿನ ಪೋಷಣೆಗೆ  ಮತ್ತು ಅಡುಗೆಗೆ  ಬಳಸುತ್ತಾರೆ ಎಂಬುವುದು ಗೊತ್ತೇ ಇದೆ. ಆದರೆ ಇದು ಚರ್ಮಕ್ಕೂ  ಲಾಭದಾಯಕ ಎಂಬುವುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಹೌದು, ನಿತ್ಯವೂ ನಿಮ್ಮ ಚರ್ಮಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚುತ್ತಾ ಬನ್ನಿ, ನಿಮ್ಮ ಚರ್ಮ ಮೃದುವಾಗುತ್ತದೆ, ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮದ ಸೋಂಕುಗಳಿಂದ ರಕ್ಷಣೆ ಪಡೆಯಬಹುದು.

ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿ, ರಾತ್ರಿಯೆಲ್ಲಾ ಇಡುವುದರಿಂದ ಆಗುವ ಲಾಭಗಳು

ತೆಂಗಿನ ಎಣ್ಣೆಯಲ್ಲಿ ಪೋಷಣೆಯ ಕೊಬ್ಬಿನಾಂಶ ಸಮೃದ್ಧವಾಗಿದೆ ಮತ್ತು ಅದು ಚರ್ಮವನ್ನು ಮೃದುವಾಗಿಸುತ್ತದೆ. ನೀವು ಒಣ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ತೆಂಗಿನ ಎಣ್ಣೆಯ ಲೇಪನ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಬಲ್ಲದು.

ತೆಂಗಿನ ಎಣ್ಣೆಯಲ್ಲಿರುವ ಲಿನೋಲಿಕ್ ಆಮ್ಲ, ಚರ್ಮವನ್ನು ಹೈಡ್ರೇಟ್ ಆಗಿಡುತ್ತದೆ. ಆ್ಯಂಟಿಬ್ಯಾಕ್ಟೀರಿಯಲ್ ಅಂಶವನ್ನು ಹೊಂದಿರುವ ಲಾರಿಕ್ ಆಮ್ಲ ಕೂಡ ತೆಂಗಿನ ಎಣ್ಣೆಯಲ್ಲಿ ಇದೆ.

1.ತೆಂಗಿನ ಎಣ್ಣೆ ಚರ್ಮದ ಒಳಭಾಗದಲ್ಲಿ ಒಂದು ತಡೆಗೋಡೆಯನ್ನು ಸೃಷ್ಟಿಸಿ, ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಕೋಲ್ಡ್ ಪ್ರೆಸ್ಡ್ ವರ್ಜಿನ್ ತೆಂಗಿನ ಎಣ್ಣೆಯನ್ನು ಬಳಸಿ. ಏಕೆಂದರೆ, ಅದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲ ಇದ್ದು, ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಸಹಾಯವಾಗುತ್ತದೆ.

2.ಕಿರಿಕಿರಿ ಉಂಟು ಮಾಡುವ ಚರ್ಮ ನಿಮ್ಮದಾಗಿದ್ದಲ್ಲಿ, ರಾತ್ರಿ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಆ ಸಮಸ್ಯೆ ಶಮನಗೊಳ್ಳಬಹುದು.

3.ನಿತ್ಯವೂ ರಾತ್ರಿ ತೆಂಗಿನ ಎಣ್ಣೆ ಹಚ್ಚಿಕೊಳ್ಳುವುದರಿಂದ, ಕಪ್ಪು ಕಲೆಗಳು ಮತ್ತು ಅಸಮ ಚರ್ಮದ ಬಣ್ಣ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

4.ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ಕೊಲಾಜೆನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕೊಲಾಜೆನ್ ಚರ್ಮದ ಇಲಾಸ್ಟಿಸಿಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಬೇಗನೇ ವಯಸ್ಸಿನ ಲಕ್ಷಣಗಳು ಮೂಡುವುದನ್ನು, ಕಪ್ಪು ಕಲೆಗಳನ್ನು ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಅದು ಫ್ರೀ ರ‍್ಯಾಡಿಕಲ್ಸ್ ವಿರುದ್ಧ ಕೆಲಸ ಮಾಡುತ್ತದೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳಿಂದ ದೂರ ಇಡುತ್ತದೆ.

ರಾತ್ರಿಯಿಡೀ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಟ್ಟುಕೊಳ್ಳುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು

ತೆಂಗಿನ ಎಣ್ಣೆಯಲ್ಲಿ ಅನೇಕ ಪ್ರಯೋಜನಕಾರಿ ಅಂಶಗಳಿವೆ ಎನ್ನುವುದು ಅಕ್ಷರಶಃ ನಿಜ, ಆದರೆ ತೆಂಗಿನ ಎಣ್ಣೆ ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುತ್ತದೆ ಎನ್ನಲು ಸಾಧ್ಯವಿಲ್ಲ.

1.ಒಣ ಚರ್ಮದವರಿಗೆ ತೆಂಗಿನ ಎಣ್ಣೆ ಲಾಭದಾಯಕ ಹೌದು, ಆದರೆ ಎಣ್ಣೆ ಚರ್ಮ ಹೊಂದಿರುವವರು ತೆಂಗಿನೆಣ್ಣೆಯನ್ನು ರಾತ್ರಿಯಿಡೀ ಮುಖಕ್ಕೆ ಹಚ್ಚುವುದು ಬಹುಶ: ಸೂಕ್ತವಲ್ಲ.

2.ತೆಂಗಿನ ಎಣ್ಣೆ ದಪ್ಪವಾಗಿರುತ್ತದೆ ಮತ್ತು ಕಾಮೆಡೋಜೆನಿಕ್ ಆಗಿದೆ, ಅಂದರೆ ತೆಂಗಿನ ಎಣ್ಣೆ ಚರ್ಮದ ರಂಧ್ರಗಳನ್ನು ಮುಚ್ಚಬಹುದು. ಹಾಗಾಗಿ ಎಣ್ಣೆ ಚರ್ಮದವರು ತೆಂಗಿನ ಎಣ್ಣೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೇ ಇಟ್ಟುಕೊಂಡರೆ, ಮುಖದ ಮೇಲೆ ಮೊಡವೆಗಳು, ಕಪ್ಪು ಚುಕ್ಕೆಗಳು ಅಥವಾ ವೈಟ್‍ಹೆಡ್‍ಗಳು ಉಂಟಾಗುವ ಸಾಧ್ಯತೆ ಇರುತ್ತದೆ.

3.ನೀವು ದೀರ್ಘಕಾಲದಿಂದ ಆ್ಯಂಟಿ ಬಯಾಟಿಕ್ಸ್‌ ಗಳನ್ನು ಬಳಸುತ್ತಿದ್ದರೆ ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದರೆ ತೆಂಗಿನ ಎಣ್ಣೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೇ ಇಟ್ಟುಕೊಳ್ಳುವುದು ಸೂಕ್ತವಲ್ಲ. ಹಾಗೆ ಮಾಡುವುದರಿಂದ ಚರ್ಮದ ರಂಧ್ರಗಳು ಮುಚ್ಚಿ ಹೋಗಿ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣ ಆಗಬಹುದು.

4.ನಿಮಗೆ ತೆಂಗಿನ ಕಾಯಿ ಅಥವಾ ಹೇಜಲ್‌ನಟ್‍ನಂತಹ ಇನ್ಯಾವುದೇ ಬೀಜಗಳ ಅಲರ್ಜಿ ಇದ್ದಲ್ಲಿ, ಮುಖಕ್ಕೆ ತೆಂಗಿನ ಎಣ್ಣೆ ಹಾಕಬೇಡಿ. ಅದನ್ನು ಎಣ್ಣೆಯನ್ನು ಹಚ್ಚುವ ಮುನ್ನ , ಆ ಎಣ್ಣೆಯಿಂದ ನಿಮಗೆ ಅಲರ್ಜಿ ಇದೆಯೇ ಎಂದು ತಿಳಿಯಲು ಪ್ಯಾಚ್ ಪರೀಕ್ಷೆಯನ್ನು ಮಾಡಿ.

***


No comments:

Post a Comment