ಒಣಕೊಬ್ಬರಿ ಮತ್ತು ಮಹತ್ವಗಳು...
೧. ಒಣಕೊಬ್ಬರಿಗೆ ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ ..ಒಣಕೊಬ್ಬರಿ ದಾನ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ಕಡಿಮೆಯಾಗುತ್ತದೆ..
೨. ಒಣಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು, ಕೆಂಪು ಅಥವಾ ಬಿಳಿ ಕಲ್ಲುಸಕ್ಕರೆ ಸಮೇತ ಗುರುಗಳಿಗೆ ಸಮರ್ಪಿಸಿದರೆ, ನಿಮ್ಮ ನಿಂತು ಹೋಗಿರುವ ಕಾರ್ಯಗಳು ಬಹಳ ಬೇಗ ಪೂರ್ತಿಯಾಗುತ್ತವೆ..
೩. ಕಡಲೆಹಿಟ್ಟಿನ ಜೊತೆಯಲ್ಲಿ ಒಣಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ, ದಂಪತಿಗಳಿಗೆ ದಾನವನ್ನು ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ, ಕಡಿಮೆಯಾಗುತ್ತದೆ..
೪. ಒಣಕೊಬ್ಬರಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರ ಮಾಡಿ, ಎಲ್ಲರಿಗೂ ಹಂಚಿದರೆ, ಮಂಗಳ ಕಾರ್ಯಗಳು, ಸುಸೂತ್ರವಾಗಿ ನಡೆಯುತ್ತದೆ.. ಈ ಕಾರಣಕ್ಕೆ ಲಗ್ನಪತ್ರಿಕಾ ಹಾಗೂ ವರಪೂಜೆಯ ಸಮಯದಲ್ಲಿ, ಶುಭಕಾರ್ಯದಲ್ಲಿ, ಕೊಬ್ಬರಿ- ಸಕ್ಕರೆ ಹಂಚುತ್ತೇವೆ..
೫. ಶ್ರೀ ಮಹಾಗಣಪತಿಯ ಹೋಮಕ್ಕೆ, ಕೊಬ್ಬರಿ ಸಕ್ಕರೆಯಿಂದ ಮಾಡಿದ ಕಡುಬು ಮಾಡಿಸಿ, ಹೋಮಕ್ಕೆ ಕೊಟ್ಟರೆ, ನಿಮ್ಮ ಋಣಭಾಧೆಗಳು ಕಡಿಮೆಯಾಗಿ ಸಕಲ ಕಾರ್ಯಗಳು,ಇಷ್ಟಾರ್ಥಗಳು ನೆರವೇರುತ್ತದೆ.. ಸಾಲದ ಭಾದೆ ನಿವಾರಣೆಯಾಗುತ್ತದೆ..
೬. ಕೊಬ್ಬರಿ ಒಬ್ಬಟ್ಟನ್ನು ಮಾಡಿಸಿ, ಮನೆದೇವರಿಗೆ, ಸ್ತ್ರೀ ದೇವತೆಗಳ ದೇವಸ್ಥಾನಗಳಲ್ಲಿ ನೈವೇದ್ಯ ಮಾಡಿಸಿ, ಸುಮಂಗಲಿಯರಿಗೆ ಮತ್ತು ಭಕ್ತಾದಿಗಳಿಗೆ ಹಂಚಿದರೆ, ಕುಜದೋಷ ತುಂಬಾ ಕಡಿಮೆಯಾಗುತ್ತದೆ..ರಾಹು ದೋಷ ನಿವಾರಣೆ..ಮದುವೆ ಭಾಗ್ಯವಾಗುತ್ತದೆ..
೭. ಶ್ರೀ ದುರ್ಗಾದೇವಿಗೆ ಪಾರಿಜಾತ ಹೂವಿನ ಮಾಲೆ ಹಾಕಿ, ಅಷ್ಟೋತ್ತರ ಪೂಜೆ ಮಾಡಿ, ಒಬ್ಬಟ್ಟು ನೈವೇದ್ಯ ಮಾಡಿ ದಾನ ಮಾಡಿದರೆ, ಕಾಳಸರ್ಪ ದೋಷ ನಿವಾರಣೆಯಾಗುತ್ತದೆ..ಇಂತಹ ದೋಷಗಳು ಬರಬಾರದು ಅಂತಾನೆ ಗೌರಿ ಹಬ್ಬಗಳಲ್ಲಿ, ಇತ್ಯಾದಿ ಹಬ್ಬಗಳಲ್ಲಿ ಒಬ್ಬಟ್ಟು ಮಾಡಿ ನೈವೇದ್ಯ ಮಾಡ್ತಿದ್ದರು..ಒಬ್ಬಟ್ಟಿಗೆ ಅಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು ..
[8:50 pm, 06/09/2022] +91 99200 49077: 🌹ಓಂ ನಮಃ ಶಿವಾಯ 🌹
💎 ಸರ್ವವಿದ್ಯೆಗಳಿಗೆ ನಿಧಿಯಾಗಿರುವ ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಿ.
💎 ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು.
💎 ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ ಜ್ಞಾನದ ಕಡೆಗೆ ಅಭಿಮುಖ ನಾಗಿರುವುದರಿಂದ
ಈ ಹೆಸರು. ಮಕ್ಕಳಲ್ಲಿ ಜ್ಞಾನ ವಾಕ್ಚಾತುರ್ಯ, ಸಿದ್ಧಿ ಲಭಿಸುತ್ತದೆ.. ಅತ್ಯಂತ ಸರಳ ಸ್ತೋತ್ರ ಪ್ರತಿದಿನ ಹನ್ನೊಂದು ಸಲ ಹೇಳಿಸಿ ನೋಡಿ ...
💎 ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು. ವೀಣಾ, ಸಾಂಬ, ಯೋಗ, ಸಂಹಾರ, ಶಕ್ತಿ, ಜ್ಞಾನ, ಅನುಷ್ಠಾನ, ವ್ಯಾಖ್ಯಾನ, ವಿದ್ಯಾ, ವಟಮೂಲ ಎಂಬ ಹತ್ತು ವಿಧ ಶಿವಮೂರ್ತಿಗಳಲ್ಲಿ ಕೊನೆಯದೇ ಇದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ (ಜ್ಞಾನದ) ಕಡೆಗೆ ಅಭಿಮುಖನಾಗಿರುವುದರಿಂದ ಈ ಹೆಸರು. ಮೂರ್ತಿ ದಕ್ಷಿಣಾಭಿಮುಖವಾಗಿ ಇರುವುದರಿಂದ ಈ ಹೆಸರು ಎಂದು ಕೆಲವರ ಅಭಿಪ್ರಾಯ.
***
No comments:
Post a Comment