SEARCH HERE

Friday, 1 October 2021

ಮನೆಯ ಸಮೃದ್ದಿ ಮತ್ತು ಸಾತ್ವಿಕತೆ

 ಮನೆಯ ಸಮೃದ್ದಿ ಮತ್ತು ಸಾತ್ವಿಕತೆ


ಕುಲದೇವರಿಗೆ ;ಇಷ್ಟ ದೇವರಿಗೆ; ಗ್ರಾಮ ದೇವರಿಗೆ ಮನೆಯ ಎಲ್ಲ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ.


🌷ಆಹಾರ ಸೇವಿಸಿದ ನಂತರ ಎಂಜಲು ಮುಸುರೆಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ.


ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ರಾತ್ರಿಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಸಮಂಜಸವಲ್ಲ.


🌷🌷ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ.


🌷🌷ವರ್ಷಕ್ಕೆ ಒಮ್ಮೆಯಾದರೂ ಬ್ರಾಹ್ಮಣ ಸುವಾಸಿನಿ (ಅತಿಥಿಸತ್ಕಾರ ) ಪೂಜೆ ಮಾಡಿ. ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತೆ


🌷🌷ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು. ಅಡುಗೆ ಮನೆಯಲ್ಲಿ ಔಷಧನ್ನು ಇಡಬೇಡಿ. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.

-ಅಂತರ್ಜಾಲ ಸಂಗ್ರಹ ಮಾಹಿತಿ

***


No comments:

Post a Comment