SEARCH HERE

Friday, 1 October 2021

ತುಂಬೆ ಗಿಡ ತುಂಬೆ ಹೂವು

 ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ತುಂಬೆ  ಗಿಡ ಒಳ್ಳೆಯ ಉದಾಹರಣೆ  ಗದ್ದೆ ತುಂಬೆಯಲ್ಲಿ ತುಳಸಿಯಂತೆ  ಆರೋಗ್ಯಕಾರಿ ಗುಣಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯ ಮಾತಿನಂತೆ ತುಂಬೆ ಗಿಡವು ಸಹ ಚಿಕ್ಕವಾಗಿದ್ದರೂ ಅದು ಆರೋಗ್ಯಕರವಾಗಿ ಮನುಷ್ಯನಿಗೆ ತುಂಬ ಉಪಯೋಗಕಾರಿಯಾಗಿದೆ. ತುಂಬೆ ಹೂವನ್ನು ಬಳಸಿಕೊಂಡು ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ತುಂಬೆ ಗಿಡದ ಎಲೆಯ ರಸವನ್ನು ಹಾವು ಕಚ್ಚಿರುವ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷವು ರಕ್ತದಲ್ಲಿ ಸೇರಿಕೊಳ್ಳದೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಅಂತ ಹೇಳಲಾಗುತ್ತದೆ.

ತೆಲುಗಿನವರು ಇದನ್ನು ತುಮ್ಮಿಚೆಟ್ಟು ಎಂದು ಕರೆಯುತ್ತಾರೆ. ಬಣ್ಣಗಳಿಂದಲೂ ಇರುತ್ತದೆ. ಬಿಳಿ ಬಣ್ಣದಲ್ಲಿರುವುದೇ ಹೆಚ್ಚು. ತೀರಾ ದೊಡ್ಡದಾಗಿ ಬೆಳೆಯದ ಈ ಗಿಡ ಅತ್ಯಂತ ಶ್ರೇಷ್ಠವೆನಿಸಿದ್ದು ಔಷಧೀಯವಾಗಿ ಹೆಚ್ಚು ಬಳಕೆಯಲ್ಲಿದೆ. ಹಾಗಿದ್ರೆ ತುಂಬೆ ಗಿಡದಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳನ್ನ ನೋಡೋಣ ಬನ್ನಿ.

1) ಕಣ್ಣಿನ ಸಮಸ್ಯೆಗೆ ಪರಿಹಾರ: ನಿಮ್ಮ ಕಣ್ಣಿನ ಸುತ್ತಲೂ ಇರುವ ಕಪ್ಪು ವರ್ತುಲದ ಸಮಸ್ಯೆ, ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು ಸೇರಿಸಿ ಅದರಿಂದ ಮುಖವನ್ನು ತೊಳೆದರೆ ಕಣ್ಣಿಗೆ ತಂಪೆನಿಸುತ್ತದೆ.

2) ಹಾವು ಕಡಿತಕ್ಕೆ ಮದ್ದು: ತುಂಬೆ ಗಿಡದ ಎಲೆಯ ರಸವನ್ನು ಹಾವು ಕಚ್ಚಿರುವ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷವು ರಕ್ತದಲ್ಲಿ ಸೇರಿಕೊಳ್ಳದೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಅಂತ ಹೇಳಲಾಗುತ್ತದೆ.

3) ಜಂತುಹುಳು ಸಮಸ್ಯೆಗೆ: ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆ ನಿವಾರಿಸಲು ಇದನ್ನು ಮನೆಮದ್ದಾಗಿ ಬಳಸಬಹುದು. ತುಂಬೆ ಹೂ ಹಾಗೂ ಎಲೆಯನ್ನು ಜಜ್ಜಿ ಅದರ ರಸಕ್ಕೆ 2 ಹನಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಕ್ಕಳಿಗೆ ಹೊಟ್ಟೆನೋವು ಕಾಡುವುದಿಲ್ಲ.

4) ಊತ ಕಂಡು ಬಂದರೆ: ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ನಂತರ ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ಹಿಂಡಿ, ಊತ ಇರುವ ಕಡೆ ಒತ್ತಿದರೆ ಊತ ಕಮ್ಮಿಯಾಗುವುದು.

5) ಚರ್ಮ ರೋಗ ನಿವಾರಣೆ: ತುರಿಕೆ, ಚರ್ಮದಲ್ಲಿ ಕಲೆಗಳು ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆ ಇರುವಂಥವರು ತುಂಬೆಗಿಡದ ರಸವನ್ನು ದೇಹಕ್ಕೆ ಹಚ್ಚಿಕೊಳ್ಳೋದು ಅಥವಾ ಸ್ನಾನದ ನೀರಿಗೆ ತುಂಬೆ ರಸವನ್ನು ಸೇರಿಸಿ ಪ್ರತಿನಿತ್ಯ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ಬಗೆಹರಿಯುತ್ತದೆ.

6) ಮಹಿಳೆಯರ ಋತುಚಕ್ರದ ಸಮಸ್ಯೆಗೆ ಮದ್ದು: ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಅಂದರೆ ಅತಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ಸ್ವಲ್ಪ ತುಂಬೆ ರಸದ ಜೊತೆ ಸ್ವಲ್ಪ ಎಳ್ಳೆಣ್ಣೆ ಹಾಗು ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.

7) ಜೀರ್ಣ ಶಕ್ತಿ ಹೆಚ್ಚಳ: ತುಂಬೆಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ. ಸ್ವಲ್ಪ ಉಪ್ಪು ಮಿಶ್ರಣದ ಕಷಾಯವು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಉದರದ ಸಮಸ್ಯೆಯ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

8) ಸೊಳ್ಳೆ ಕಾಟಕ್ಕೆ ಮುಕ್ತಿ: ಸೊಳ್ಳೆಯ ಸಮಸ್ಯೆ ಅದ್ರಿಂದ ಬರುವ ರೋಗಗಳು ಮಹಾನಗರಿಗಳಲ್ಲಿ ಸರ್ವೇಸಾಮಾನ್ಯ. ಆದ್ರೆ ಮನೆಯಲ್ಲಿ ಒಂದು ತುಂಬೆಗಿಡ ನೆಟ್ಟು ನೋಡಿ. ಸೊಳ್ಳೆ ನಿಮ್ಮ ಮನೆಯಿಂದ ಕಾಲ್ಕಿತ್ತಿರುತ್ತೆ. ಸೊಳ್ಳೆಗಳು ಮಾತ್ರವಲ್ಲ ಇತರೆ ಕೀಟಗಳ ಕಾಟ ಕೂಡ ನಿಮ್ಮ ಮನೆಯಲ್ಲಿ ಇರೋದಿಲ್ಲ.

(ಮಾಹಿತಿ ಸಂಗ್ರಹ) 

***


No comments:

Post a Comment