SEARCH HERE

Friday, 1 October 2021

ಡ್ರೈ ಫ್ರೂಟ್ಸ್

 ಡ್ರೈ ಫ್ರೂಟ್ಸ್ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದೇ ರೀತಿ ಗೋಡಂಬಿ ರುಬ್ಬಿ ಹಾಲು ತಯಾರಿಸಿ ಸೇವನೆ ಮಾಡುವುದು ಕೂಡ ಅಷ್ಟೇ ಲಾಭಕಾರಿ.

 ಪ್ರತಿ ದಿನ ನಮಗೆಲ್ಲರಿಗೂ ಹಸುವಿನ ಹಾಲು ಕುಡಿದು ಅಭ್ಯಾಸವಿರುತ್ತದೆ. ಚಿಕ್ಕವಯಸ್ಸಿನಲ್ಲಿ ಮೇಕೆ ಹಾಲು, ಕತ್ತೆ ಹಾಲು, ಕುಡಿದಿರಬಹುದು. 

ಹಾಗಾಗಿ ನಾವು ಇಂದಿಗೂ ಸಹ ಆರೋಗ್ಯಕರವಾಗಿ ಬದುಕುತ್ತಿದ್ದೇವೆ. ಆದರೆ ಗೋಡಂಬಿ ಹಾಲು ಎಂದು ತಕ್ಷಣ ಸ್ವಲ್ಪ ಆಶ್ಚರ್ಯ ಆಗುವುದು ಸಹಜ.

ಏಕೆಂದರೆ ದುಬಾರಿ ಎಂಬ ಕಾರಣಕ್ಕೆ ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಗೋಡಂಬಿಯನ್ನು ಹೆಚ್ಚಾಗಿ ಬಳಕೆ ಮಾಡುವುದಿಲ್ಲ. 

ಯಾವುದಾದರೂ ಹಬ್ಬ-ಹರಿದಿನಗಳಲ್ಲಿ ಅಥವಾ ಕೇವಲ ವಿಶೇಷ ಬಗ್ಗೆ ಅಡುಗೆ ಪದಾರ್ಥಗಳನ್ನು ತಯಾರು ಮಾಡಿದಾಗ ಮಾತ್ರ ಅವುಗಳ ಬಳಕೆ ಮಾಡುತ್ತೇವೆ.

ಆದರೆ ನಿಜ ಹೇಳಬೇಕೆಂದರೆ ಗೋಡಂಬಿಯಿಂದ ಹಾಲು ತಯಾರಿಸಿ ಸೇವನೆ ಮಾಡುವುದರಿಂದ, ಅದರಲ್ಲಿರುವ ಹೇರಳವಾದ ಫಾಸ್ಪರಸ್, ಜಿಂಕ್, ಮೆಗ್ನೀಷಿಯಂ ಮತ್ತು ಸೆಲೆನಿಯಂ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ನಮ್ಮ ದೇಹ ಸೇರುತ್ತವೆ.

 ಇದರ ಜೊತೆಗೆ ಗೋಡಂಬಿ ಹಾಲು ಸೇವನೆ ಮಾಡುವುದರಿಂದ ಎಣಿಸಲಾರದಷ್ಟು ಆರೋಗ್ಯ ಪ್ರಯೋಜನಗಳು ದೊರಕುತ್ತವೆ ಎಂದು ಹೇಳಬಹುದು. 

ಅವುಗಳಲ್ಲಿ ಕೆಲವನ್ನು ನೋಡುವುದಾದರೆ,

1.​ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ನಮ್ಮ ಹೃದಯದ ಎಲ್ಲಾ ಸಮಸ್ಯೆಗಳನ್ನು ದೂರ ಇರಿಸಬೇಕು ಎಂದರೆ ಗೋಡಂಬಿ ಹಾಲು ನಮ್ಮ ಹಾರ ಪದ್ಧತಿಯಲ್ಲಿ ಸೇರಿಕೊಂಡಿದ್ದರೆ ಒಳ್ಳೆಯದು.

ಏಕೆಂದರೆ ಇದರಲ್ಲಿ ಅಪಾರ ಪ್ರಮಾಣದ ಪೊಟ್ಯಾಶಿಯಂ ಮತ್ತು ಮೆಗ್ನಿಸಿಯಮ್ ಅಂಶದ ಲಭ್ಯತೆ ಇರುತ್ತದೆ. 

ಇದು ನಮ್ಮ ಹೃದಯದ ಕಾರ್ಯ ಚಟುವಟಿಕೆಯನ್ನು ಹೆಚ್ಚು ಮಾಡುವ ಜೊತೆಗೆ ಹೃದಯಕ್ಕೆ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರಮಾಡುತ್ತದೆ.

ಹಾಗಾಗಿ ವೈದ್ಯರ ಅನುಮತಿಯಂತೆ ಪ್ರತಿದಿನ ಇಂತಿಷ್ಟು ಪ್ರಮಾಣ ಎಂಬಂತೆ ಗೋಡಂಬಿ ಬೀಜಗಳನ್ನು ಸೇವನೆ ಮಾಡಬಹುದು.

ಹೃದಯದ ಆರೋಗ್ಯಕ್ಕ ಸೇವಿಸಿ ಈ ಆಹಾರ

2.​ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುತ್ತದೆ

ಈಗಾಗಲೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಮುಂಬರುವ ದಿನಗಳಲ್ಲಿ ಮಧುಮೇಹ ಸಮಸ್ಯೆ ಬರಬಹುದು ಎಂದು ನಿರೀಕ್ಷೆ ಮಾಡುವವರು ಅದರಿಂದ ಪಾರಾಗಲು ಗೋಡಂಬಿ ಹಾಲಿನ ಸೇವನೆಯ ಅಭ್ಯಾಸವನ್ನು ಮಾಡಿಕೊಳ್ಳುವುದು ಒಳ್ಳೆಯದು.

ಏಕೆಂದರೆ ಗೋಡಂಬಿ ಹಾಲಿನಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಗುಣವಿದೆ. 

ಸಾಕಷ್ಟು ಸಂಶೋಧನೆಗಳು ಹೇಳುವ ಹಾಗೆ ಗೋಡಂಬಿ ಹಾಲಿನಲ್ಲಿ ಲ್ಯಾಕ್ಟೋಸ್ ಅಂಶ ಇಲ್ಲದೆ ಇರುವುದರಿಂದ ಮತ್ತು ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶಗಳು ಲಭ್ಯವಿರುವುದರಿಂದ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು.

3.​ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ

ಗೋಡಂಬಿ ಹಾಲಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಮತ್ತು ಜಿಂಕ್ ಅಂಶ ಯಥೇಚ್ಛವಾಗಿ ಕಂಡು ಬರುವ ಕಾರಣದಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಯಾವುದೇ ಕೊರತೆ ಇರುವುದಿಲ್ಲ.

ದೇಹದ ಉರಿಯೂತ ಪ್ರತಿರೋಧತೆಯನ್ನು ನಿವಾರಣೆ ಮಾಡುವ ಜೊತೆಗೆ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಮುಖ್ಯವಾಗಿ ಜಿಂಕ್ ಅಂಶ ನಮ್ಮ ದೇಹದಲ್ಲಿ ಸೋಂಕುಗಳ ನಿವಾರಣೆ ಮಾಡುವ ಜೊತೆಗೆ ಕಾಯಿಲೆಗಳನ್ನು ದೂರ ಮಾಡಿ ರೋಗನಿರೋಧಕ ಜೀವಕೋಶಗಳ ಸಂತತಿಯನ್ನು ಹೆಚ್ಚು ಮಾಡುತ್ತದೆ.

​ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು

4.ನಿಯಮಿತವಾಗಿ ಈಗಿನಿಂದಲೇ ಗೋಡಂಬಿ ಬೀಜಗಳ ಅಥವಾ ಗೋಡಂಬಿ ಹಾಲಿನ ಸೇವನೆಯನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಕಣ್ಣುಗಳಿಗೆ ಸಹಕಾರಿಯಾಗಬಹುದಾದ ಅಂಶಗಳ ಪ್ರಮಾಣ ನಿಮ್ಮ ದೇಹಕ್ಕೆ ಸಿಗುತ್ತಾ ಹೋಗುತ್ತದೆ.

ಇದರಿಂದ ಮುಂಬರುವ ದಿನಗಳಲ್ಲಿ ಮಧ್ಯ ವಯಸ್ಸಿಗೆ ಕಣ್ಣುಗಳು ಮಂಜಾಗುವುದು, ಕಣ್ಣಿನ ಪೊರೆ ಉಂಟಾಗುವುದು ಅಥವಾ ಕಣ್ಣುಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಎದುರಾಗುವುದು ಇರುವುದಿಲ್ಲ.

ವಯಸ್ಸಾದವರು ಕೂಡ ತಮ್ಮ ಕಣ್ಣುಗಳು ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಲು ಗೋಡಂಬಿ ಹಾಲಿನ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಬಹುದು.

6.​ಕೊನೆಮಾತು

ಕೆಲವರಿಗೆ ಗೋಡಂಬಿ ಆರೋಗ್ಯದ ವಿಚಾರದಲ್ಲಿ ಅಲರ್ಜಿ ಉಂಟುಮಾಡುತ್ತದೆ. ಉದಾಹರಣೆಗೆ ಸಣ್ಣ ಮಕ್ಕಳಿಗೆ ಗೋಡಂಬಿ ಆಗಿಬರುವುದಿಲ್ಲ.

 ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಅತ್ಯಗತ್ಯವಾಗಿ ಬೇಕಾಗುತ್ತದೆ

(ಮಾಹಿತಿ ಸಂಗ್ರಹ) 

***


No comments:

Post a Comment