ಮಹಾ ವಿಷ್ಣು ಪೂಜಾ ಪದ್ಧತಿ.
ಮಹಾವಿಷ್ಣು ಎಂದರೆ ಕಾಯುವವನು , ರಕ್ಷಿಸುವವನು ಎಂದು ಅರ್ಥ . ಸುದರ್ಶನ ಚಕ್ರವು ವಿಷ್ಣುವಿನ ಪ್ರಮುಖವಾದ ಆಯುಧವಾಗಿದೆ .
ಹಿನ್ನೆಲೆ :
ಮಹಾವಿಷ್ಣು ಎಂದರೆ ಕಾಯುವವನು , ರಕ್ಷಿಸುವವನು ಎಂದು ಅರ್ಥ . ಸುದರ್ಶನ ಚಕ್ರವು ವಿಷ್ಣುವಿನ ಪ್ರಮುಖವಾದ ಆಯುಧವಾಗಿದೆ . ಮಹಾವಿಷ್ಣುವನ್ನು ನಾರಾಯಣ , ಹರಿ , ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ . ತ್ರಿಮೂರ್ತಿಗಳಲ್ಲಿ ಒಬ್ಬನಾದಂತಹ ವಿಷ್ಣುವು ಸಕಲ ಲೋಕಗಳ ಸ್ಥಿತಿಕರ್ತನಾಗಿರುತ್ತಾನೆ . ಈತನನ್ನು ಪೂಜೆ ಮಾಡುವುದರಿಂದ ದೇಹ , ಮನಸ್ಸು , ಆತ್ಮಗಳಿಗೆ ಆನಂದವನ್ನು ಕೊಡುತ್ತಾನೆ . ವೈಯಕ್ತಿಕ ಮತ್ತು ವ್ಯಾವಹಾರಿಕ ಜೀವನವನ್ನು ನಡೆಸುವಂತೆ ಅನುಗ್ರಹಿಸುತ್ತಾನೆ . ಎಲ್ಲಾ ತರವಾದ ತೊಂದರೆಗಳನ್ನು ಎದುರಿಸುವ ಶಕ್ತಿಯನ್ನು , ಧೈರ್ಯವನ್ನು ನೀಡುತ್ತಾನೆ . ಜ್ಞಾನ , ಐಶ್ವರ್ಯ , ಶಕ್ತಿ , ವೀರ್ಯ , ತೇಜಸ್ಸು , ಬಲ ಇವುಗಳು ವಿಷ್ಣುವಿನ ಪ್ರಮುಖ ಕೀರ್ತಿಗಳಾಗಿರುತ್ತವೆ . ಬುಧಗ್ರಹದ ಅಧಿದೇವತೆ ಹಾಗೂ ಪ್ರತ್ಯಧಿದೇವತೆ ಭಗವಂತನಾದ ಮಹಾವಿಷ್ಣುವೇ ಆಗಿರುತ್ತಾನೆ . ಆದುದರಿಂದ ಬುಧುವಾರದಂದು ವಿಷ್ಣುವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳೂ ಕೂಡ ಸಿದ್ಧಿಸುತ್ತವೆ . ಈತನನ್ನು ತುಳಸಿ ಹಾಗೂ ಕಮಲದ ಹೂವುಗಳಿಂದ ಪೂಜಿಸಿದರೆ ಮನಸ್ಸಿನ ಕಾಮನೆಗಳು ಈಡೇರುತ್ತವೆ ಎಂದು ಪ್ರತೀತಿ ಮತ್ತು ವಿಷ್ಣುಸಹಸ್ರನಾಮ ಪಾರಾಯಣವನ್ನು ಮಾಡುವುದರಿಂದ ಸಕಲ ವಿಧವಾದ ಪಾಪಗಳು ಪರಿಹಾರವಾಗುತ್ತವೆ
ಪೂಜಾ ಸಮಯ :
ಈ ಪೂಜೆಗೆ ಬೇಕಾಗುವ ಸಮಯ 15 ರಿಂದ 20 ನಿಮಿಷಗ ಮಹಾ ವಿಷ್ಣುವಿನ ಪೂಜೆಯನ್ನು ಬುಧುವಾರದಂದು ಆಚರಿಸಲಾಗುತ್ತದೆ . ಗುರುವಾರದಂದು ಕೂಡ ಈ ಪೂಜೆಯನ್ನು ಆಚರಿಸಬಹುದಾಗಿದೆ
ಪೂಜಾ ಬೇಕಾದ ಸಾಮಗ್ರಿಗಳು :
ವಿಷ್ಣುವಿನ ವಿಗ್ರಹ - 1
ಅರಶಿನ
ಕುಂಕುಮ
* ಅಕ್ಷತೆ
* ಹೂವು
ಹಣ್ಣುಗಳು
# ವೀಳ್ಯದೆಲೆ ಅಡಿಕೆ
* ಊದಿನ ಕಡ್ಡಿ - 2 ರಿಂದ 5
# ಕರ್ಪೂರ - 2 ರಿಂದ 5
ದೀಪಗಳು - 1 ರಿಂದ 2
ಗಂಧ
ಆರತಿ - 1
# ಘಂಟೆ - 1
ಪಂಚಪಾತ್ರೆ , ಉದ್ಧರಣೆ - 1 ಜೊತೆ
ನೀರು - 1 ತಂಬಿಗೆ
ಪೂಜಾ ಐಚ್ಛಿಕ ಸಾಮಗ್ರಿಗಳು :
* ತುಳಸಿ
* ಕಮಲದ ಪುಷ್ಪ - 1
ಗೆಜ್ಜೆವಸ್ತ್ರ - 1
ಉಪವೀತ - 1
1 ) ಪ್ರಾರ್ಥನೆ , ಪೂಜಾ ಪ್ರಾರಂಭ
ಮಹಾ ವಿಷ್ಣವೇ ನಮಃ
ಧ್ಯಾಯಾಮಿ ಆವಾಹಯಾಮಿ
( ಅಕ್ಷತೆಯನ್ನು ಹಾಕುವುದು )
ರತ್ನಮಯ ಸಿಂಹಾಸನಂ ಸಮರ್ಪಯಾಮಿ ಸ್ವಾಗತಂ
( ಹೂವು ಅಕ್ಷತೆಯನ್ನು ಹಾಕುವುದು ) ಪಾದಾರವಿಂದಯೋಃ ಪಾದ್ಯಂ ಪಾದ್ಯಂ ಸಮರ್ಪಯಾಮಿ
ಹಸ್ತಯೋಃ ಅರ್ಥ್ಯಂ ಅರ್ಥ್ಯಂ ಸಮರ್ಪಯಾಮಿ
• ಮುಖೇ ಆಚಮನೀಯಂ ಸಮರ್ಪಯಾಮಿ
( ಈ ಮೂರು ಮಂತ್ರಗಳನ್ನು ಹೇಳಿ ಮೂರು ಉದ್ಧರಣೆ ( ಚಮಚ ) ನೀರನ್ನು ತಟ್ಟೆಯಲ್ಲಿ ಬಿಡುವುದು )
2 ) ಅಲಂಕಾರ
ಮಹಾ ವಿಷ್ಣವೇ ನಮಃ
ಸ್ನಾನಂ ಸಮರ್ಪಯಾಮಿ
( ದೇವರಿಗೆ ನೀರಿನಲ್ಲಿ ಅಥವಾ ಪಂಚಾಮೃತದಲ್ಲಿ ಸ್ನಾನವನ್ನು ಮಾಡಿಸುವುದು ) ವಸ್ತ್ರಂ ಸಮರ್ಪಯಾಮಿ
( ಗೆಜ್ಜೆ ವಸ್ತ್ರ ಅಥವಾ ಅಕ್ಷತೆಯನ್ನು ಹಾಕುವುದು )
• ಉಪವೀತಂ ಸಮರ್ಪಯಾಮಿ
( ಉಪವೀತ , ಕಂಚುಕ , ಅಕ್ಷತೆಯನ್ನು ಹಾಕುವುದು ) ಗಂಧಂ ಸಮರ್ಪಯಾಮಿ
( ಗಂಧ , ಅರಶಿನ , ಕುಂಕುಮಗಳನ್ನು ದೇವರಿಗೆ ಅರ್ಪಿಸುವುದು )
ಮಹಾ ವಿಷ್ಣವೇ ನಮಃ
ಅಕ್ಷತಾನ್ ಸಮರ್ಪಯಾಮಿ
( ಅಕ್ಷತೆಯನ್ನು ಹಾಕುವುದು )
ಪುಷ್ಪಾಣಿ ಸಮರ್ಪಯಮಿ
( ಹೂವಿನಲ್ಲಿ ದೇವರಿಗೆ ಅಲಂಕಾರ ಮಾಡುವುದು )
3 ) ಅರ್ಚನೆ ಮತ್ತು ಆರಾಧನೆ : - ನಾಮ ಪೂಜಾಂ ಕರಿಷ್ಯ ( 108 ಹೆಸರುಗಳಿಂದ ಹೂವು , ಅಕ್ಷತೆ , ಕುಂಕುಮಗಳಿಂದ ದೇವರಿಗೆ ಅರ್ಚನೆ ಮಾಡುವುದು )
ಮಹಾ ವಿಷ್ಣವೇ ನಮಃ
ಧೂಪಂ ಆಘ್ರಾಪಯಾಮಿ ( ಊದಿನ ಕಡ್ಡಿಯನ್ನು ಬೆಳಗುವುದು )
ದೀಪಂ ದರ್ಶಯಾಮಿ
●
4 ) ಪ್ರಾರ್ಥನೆ ಮತ್ತು ಸಮಾಪ್ತಿ . ಮಹಾ ವಿಷ್ಣವೇ ನಮಃ
( ದೀಪವನ್ನು ಬೆಳಗುವುದು )
ನೈವೇದ್ಯಾರ್ಥೈ
( ತೆಂಗಿನಕಾಯಿ , ಹಣ್ಣುಗಳು , ವೀಳ್ಯದೆಲೆ , ಅಡಿಕೆ ಅಥವಾ ಯಾವುದೇ ತಯಾರಿಸಿದಂತಹ
ನೈವೇದ್ಯಂ ನಿವೇದಯಾಮಿ
●
• ಮಂಗಳ ನೀರಾಜನಂ ಸಮರ್ಪಯಾಮಿ
( ಕರ್ಪೂರದಿಂದ ಆರತಿಯನ್ನು ಮಾಡುವುದು )
ಖಾದ್ಯಗಳನ್ನು ನೈವೇದ್ಯ ಮಾಡಿ ಹೂವು ಅಕ್ಷತೆಗಳನ್ನು ಹಾಕುವುದು )
ಮಂತ್ರ ಪುಷ್ಪಾಂಜಲಿಂ ಕರಿಷ್ಯ ( ಕೈ ತೊಳೆದುಕೊಂಡು ಹೂವು ಅಕ್ಷತೆಗಳನ್ನು ಹಾಕುವುದು )
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ( ಮೂರು ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡುವುದು )
ಪ್ರಸನ್ನಾರ್ಥ್ಯಂ ಸಮರ್ಪಯಾಮಿ
( ಹೂವು ಅಕ್ಷತೆಗಳನ್ನು ಒಂದು ಚಮಚ ನೀರಿ ಜೊತೆ ತಟ್ಟೆಯಲ್ಲಿ ಬಿಡುವುದು )
ಪ್ರಾರ್ಥನಾಂ ಕರಿಷ್ಯ
( ಹೂವು ಅಕ್ಷತೆ ಹಿಡಿದುಕೊಂಡು ಪ್ರಾರ್ಥನೆ ಮಾಡಿ ಹಾಕುವುದು )
ತೀರ್ಥ ಪ್ರಸಾದವನ್ನು ಕೊಟ್ಟು , ತಾನೂ
ತೆಗೆದುಕೊಳ್ಳುವುದರೊಂದಿಗೆ ಪೂಜೆ ಸಮಾಪ್ತಿಯಾಗುವುದು
← ವಿಷ್ಣು
1. ಓಂ ವಿಷ್ಣವೇ ನಮಃ
2. ಓಂ ಲಕ್ಷ್ಮೀಪತಯೇ ನಮಃ
3. ಓಂ ಕೃಷ್ಣಾಯ ನಮಃ
4. ಓಂ ವೈಕುಂಠಾಯ ನಮಃ
5. ಓಂ ಗರುಡಧ್ವಜಾಯ ನಮಃ
6. ಓಂ ಪರಬ್ರಹ್ಮಣೇ ನಮಃ
7. ಓಂ ಜಗನ್ನಾಥಾಯ ನಮಃ
8. ಓಂ ವಾಸುದೇವಾಯ ನಮಃ
9. ಓಂ ತ್ರಿವಿಕ್ರಮಾಯ ನಮಃ
10. ಓಂ ದೈತ್ಯಾಂತಕಾಯ ನಮಃ
11. ಓಂ ಮಧುರಿಪವೇ ನಮಃ
12. ಓಂ ತಾರ್ಕ್ಷವಾಹನಾಯ ನಮಃ
13. ಓಂ ಸನಾತನಾಯ ನಮಃ
14. ಓಂ ನಾರಾಯಣಾಯ ನಮಃ
15. ಓಂ ಪದ್ಮನಾಭಾಯ ನಮಃ
16. ಓಂ ಹೃಷೀಕೇಶಾಯ ನಮಃ
17. ಓಂ ಸುಧಾಪ್ರದಾಯ ನಮಃ
18. ಓಂ ಮಾಧವಾಯ ನಮಃ
19. ಓಂ ಪುಂಡರೀಕಾಕ್ಷಾಯ ನಮಃ
20. ಓಂ ಸ್ಥಿತಿಕರ್ತ್ರೇ ನಮಃ
21. ಓಂ ಪರಾತ್ಪರಾಯ ನಮಃ
22. ಓಂ ವನಮಾಲಿನೇ ನಮಃ
23. ಓಂ ಯಜ್ಞರೂಪಾಯ ನಮಃ
24. ಓಂ ಚಕ್ರಪಾಣಯೇ ನಮಃ
25. ಓಂ ಗದಾಧರಾಯ ನಮಃ
26. ಓಂ ಉಪೇಂದ್ರಾಯ ನಮಃ
27. ಓಂ ಕೇಶವಾಯ ನಮಃ
28. ಓಂ ಹಂಸಾಯ ನಮಃ
29. ಓಂ ಸಮುದ್ರಮಥನಾಯ ನಮಃ
30. ಓಂ ಹರಯೇ ನಮಃ
31. ಓಂ ಗೋವಿಂದಾಯ ನಮಃ
32. ಓಂ ಬ್ರಹ್ಮಜನಕಾಯ ನಮಃ
33. ಓಂ ಕೈಟಭಾಸುರ Saved ನಮಃ
34. ಓಂ ಶ್ರೀಧರಾಯ ನಮಃ
35. ಓಂ ಕಾಮಜನಕಾಯ ನಮಃ
36. ಓಂ ಶೇಷಶಾಯಿನೇ ನಮಃ
37. ಓಂ ಚತುರ್ಭುಜಾಯ ನಮಃ
38. ಓಂ ಪಾಂಚಜನ್ಯಧರಾಯ ನಮಃ
39. ಓಂ ಶ್ರೀಮತೇ ನಮಃ
40. ಓಂ ಸಾರಂಗಪಾಣಯೇ ನಮಃ
41. ಓಂ ಜನಾರ್ದನಾಯ ನಮಃ
42. ಓಂ ಪೀತಾಂಬರಧರಾಯ ನಮಃ
43. ಓಂ ದೇವಾಯ ನಮಃ
44. ಓಂ ಸೂರ್ಯಚಂದ್ರವಿಲೋಚನಾಯ ನಮಃ
45. ಓಂ ಮತ್ತ್ವರೂಪಾಯ ನಮಃ
46. ಓಂ ಕೂರ್ಮತನವೇ ನಮಃ
47. ಓಂ ಕ್ರೋಡರೂಪಾಯ ನಮಃ
48. ಓಂ ನೃಕೇಸರಿಣೇ ನಮಃ
49. ಓಂ ವಾಮನಾಯ ನಮಃ
50. ಓಂ ಭಾರ್ಗವಾಯ ನಮಃ
51. ಓಂ ರಾಮಾಯ ನಮಃ
52. ಓಂ ಬಲಿನೇ ನಮಃ
53. ಓಂ ಕಲ್ಕಿನೇ ನಮಃ
54. ಓಂ ಹಯಾನನಾಯ ನಮಃ
55. ಓಂ ವಿಶ್ವಂಭರಾಯ ನಮಃ
56. ಓಂ ಶಿಶುಮಾರಾಯ ನಮಃ
57. ಓಂ ಶ್ರೀಕರಾಯ ನಮಃ
58. ಓಂ ಕಪಿಲಾಯ ನಮಃ
59. ಓಂ ಧ್ರುವಾಯ ನಮಃ
60. ಓಂ ದತ್ತಾತ್ರೇಯಾಯ ನಮಃ
61. ಓಂ ಅಚ್ಯುತಾಯ ನಮಃ
62. ಓಂ ಅನಂತಾಯ ನಮಃ
63. ಓಂ ಮುಕುಂದಾಯ ನಮಃ
64. ಓಂ ದಧಿವಾಮನಾಯ ನಮಃ
65. ಓಂ ಧನ್ವಂತರಯೇ ನಮಃ
66. ಓಂ ಶ್ರೀನಿವಾಸಾಯ ನಮಃ
67. ಓಂ ಪ್ರದ್ಯುಮ್ನಾಯ ನಮಃ
68. ಓಂ ಪುರುಷೋತ್ತಮಾಯ ನಮಃ
69. ಓಂ ಶ್ರೀವತ್ಸಕೌಸ್ತುಭಧರಾಯ ನಮಃ
70. ಓಂ ಮುರಾರಾತಯೇ ನಮಃ
71. ಓಂ ಅಧೋಕ್ಷಜಾಯ ನಮಃ
72. ಓಂ ಋಷಭಾಯ ನಮಃ
6:33 PM
← ವಿಷ್ಣು
73. ಓಂ ಮೋಹಿನೀರೂಪಧಾರಿಣೇ ನಮಃ
74. ಓಂ ಸಂಕರ್ಷಣಾಯ ನಮಃ
75. ಓಂ ಪೃಥವೇ ನಮಃ
76. ಓಂ ಕ್ಷೀರಾಭಿಷಾಯಿನೇ ನಮಃ
77. ಓಂ ಭೂತಾತ್ಮನೇ ನಮಃ
78. ಓಂ ಅನಿರುದ್ಧಾಯ ನಮಃ
79. ಓಂ ಭಕ್ತವತ್ಸಲಾಯ ನಮಃ
80. ಓಂ ನರಾಯ ನಮಃ
81. ಓಂ ಗಜೇಂದ್ರವರದಾಯ ನಮಃ
82. ಓಂ ತ್ರಿಧಾಮೈ ನಮಃ
83. ಓಂ ಭೂತಭಾವನಾಯ ನಮಃ
84. ಓಂ ಶ್ವೇತದ್ವೀಪಸುವಾಸ್ತವ್ಯಾಯ ನಮಃ
85. ಓಂ ಸನಕಾದಿಮುನಿಧೇಯಾಯ ನಮಃ
86. ಓಂ ಭಗವತೇ ನಮಃ
87. ಓಂ ಶಂಕರಪ್ರಿಯಾಯ ನಮಃ
88. ಓಂ ನೀಲಕಾಂತಾಯ ನಮಃ
89. ಓಂ ಧರಾಕಾಂತಾಯ ನಮಃ
90. ಓಂ ವೇದಾತ್ಮನೇ ನಮಃ
91. ಓಂ ಬಾದರಾಯಣಾಯ ನಮಃ
94. ಓಂ ಸ್ವಭುವೇ ನಮಃ
95. ಓಂ ವಿಭವೇ ನಮಃ
92. ಓಂ ಭಾಗೀರಥೀಜನ್ಮಭೂಮಿಪಾದಪದ್ಮಾಯ ನಮಃ
93. ಓಂ ಸತಾಂ ಪ್ರಭವೇ ನಮಃ
96. ಓಂ ಘನಶ್ಯಾಮಾಯ ನಮಃ
97. ಓಂ ಜಗತ್ಕಾರಣಾಯ ನಮಃ
98. ಓಂ ಅವ್ಯಯಾಯ ನಮಃ
99. ಓಂ ಬುದ್ಧಾವತಾರಾಯ ನಮಃ
100. ಓಂ ಶಾಂತಾತ್ಮನೇ ನಮಃ
101. ಓಂ ಲೀಲಾಮಾನುಷವಿಗ್ರಹಾಯ ನಮಃ
102 , ಓಂ ದಾಮೋದರಾಯ ನಮಃ
103. ಓಂ ವಿರಾಡೂಪಾಯ ನಮಃ
104. ಓಂ ಭೂತಭವ್ಯಭವತ್ಪಭವೇ ನಮಃ
105. ಓಂ ಆದಿದೇವಾಯ ನಮಃ
106. ಓಂ ದೇವದೇವಾಯ ನಮಃ
107. ಓಂ ಪ್ರಹ್ಲಾದಪರಿಪಾಲಕಾಯ ನಮಃ
108. ಓಂ ಶ್ರೀಮಹಾವಿಷ್ಣವೇ ನಮಃ🙏
***
No comments:
Post a Comment