ಶಿವ ಪೂಜಾ ವಿಧಾನ .
ಶಿವ ಎಂದರೆ ಮಂಗಳ , ಶುಭ , ಎಂದು ಅರ್ಥ . “ ರುದಿರಂ
ದ್ರಾವಯತೇ ಇತಿ ರುದ್ರಃ . ” ಅಂದರೆ ಎಲ್ಲಾ ಥರವಾದ ಕಷ್ಟಗಳನ್ನು , ತೊಂದರೆಗಳನ್ನು ಪರಿಹಾರ ಮಾಡುವವನು ಶಿವ ( ರುದ್ರ ) ಎಂದು ಅರ್ಥ .
ಹಿನ್ನೆಲೆ :
ಶಿವ ಎಂದರೆ ಮಂಗಳ , ಶುಭ , ಎಂದು ಅರ್ಥ . “ ರುದಿರಂ ದ್ರಾವಯತೇ ಇತಿ ರುದ್ರಃ . ” ಅಂದರೆ ಎಲ್ಲಾ ಥರವಾದ ಕಷ್ಟಗಳನ್ನು , ತೊಂದರೆಗಳನ್ನು ಪರಿಹಾರ ಮಾಡುವವನು ಶಿವ ( ರುದ್ರ ) ಎಂದು ಅರ್ಥ . ಈಶ್ವರನು ರುದ್ರ ಎನ್ನುವ ಇನ್ನೊಂದು ಹೆಸರಿನಿಂದ ಪ್ರಖ್ಯಾತಿಯನ್ನು ಹೊಂದಿರುತ್ತಾನೆ . ಪಾರ್ವತಿ ಸಮೇತನಾಗಿರುವ ( ಸ - ಉಮಾ ) ಈಶ್ವರನ್ನು ಸೋಮ ಎಂದು ಕೂಡ ಕರೆಯುತ್ತಾರೆ . ಹಾಗೆಯೇ ಸೋಮ ಎಂದರೆ “ ಅಮೃತ ” ಎಂದು ಅರ್ಥ . ಈ ಕಾರಣದಿಂದ ಸೋಮವಾರದ ದಿನ ಈಶ್ವರನ ಆರಾಧನೆಯನ್ನು ಮಾಡಿದಲ್ಲಿ ವಿಶೇಷವಾದಂಥಹ ಫಲಗಳನ್ನು ಪಡೆಯಬಹುದು . ಹಾಗೆಯೇ ಈಶ್ವರನನ್ನು “ ಮೃತ್ಯುಂಜಯ ” ಎಂದು ಕೂಡ ಕರೆಯುತ್ತಾರೆ . ಮೃತ್ಯುಂಜಯ ಎಂದರೆ ಮೃತ್ಯುವನ್ನು ಜಯಿಸಿದವನು ಮತ್ತು ಎಲ್ಲಾ ಥರವಾದ ಮೃತ್ಯುಗಳನ್ನು ನಿವಾರಣೆ ಮಾಡುವವನು ಎಂದು ಅರ್ಥ . ಹಾಗೆಯೇ ಶಿವನು ಮನೆಯಲ್ಲಿ ಇರಬಹುದಾದಂಥಹಾ ಎಲ್ಲಾ ಥರವಾದ ದುಷ್ಟ ಶಕ್ತಿಗಳನ್ನು , ಕ್ಷುದ್ರ ಶಕ್ತಿಗಳನ್ನು ನಿವಾರಣೆ ಮಾಡಿ ಮನೆಯಲ್ಲಿ ಸುಖ , ಶಾಂತಿ , ನೆಮ್ಮದಿಯನ್ನು ನೆಲೆಸಿರುವಂತೆ ಮಾಡುತ್ತಾನೆ . “ ಅಭಿಷೇಕ ಪ್ರಿಯೋ ಶಿವಃ ” ಎಂದರೆ ಈಶ್ವರನು ಅಭಿಷೇಕ ಪ್ರಿಯನಾಗಿರುತ್ತಾನೆ . ಆದುದರಿಂದ “ ರುದ್ರಾಭೀಷೇಕ ” , “ ರುದ್ರ ಸೂಕ್ತ ” ಇವುಗಳಿಂದ ಅಭಿಷೇಕವನ್ನು ಮಾಡಿದರೆ ಮನಸ್ಸಿನಲ್ಲಿರುವ ಎಲ್ಲಾ ಇಷ್ಟಾಗ ಈಡೇರುತ್ತವೆ
ಪೂಜಾ ಸಮಯ :
ಈ ಪೂಜೆಗೆ ಬೇಕಾಗುವ ಸಮಯ 30 ರಿಂದ 35 ನಿಮಿಷಗಳು . ಶಿವ ಪೂಜೆಯನ್ನು ಸೋಮವಾರದಂದು ಆಚರಿಸಲಾಗುತ್ತದೆ
ಪೂಜಾ ಬೇಕಾದ ಸಾಮಗ್ರಿಗಳು :
# ಶಿವಲಿಂಗ - 1
ಅರಶಿನ
ಕುಂಕುಮ
# ಅಕ್ಷತೆ
* ಹೂವು
* ಹಣ್ಣುಗಳು
* ವೀಳ್ಯದೆಲೆ
ಅಡಿಕೆ
# ಊದಿನ ಕಡ್ಡಿ - 2 ರಿಂದ 5
# ಕರ್ಪೂರ - 2 ರಿಂದ 5
ದೀಪಗಳು - 1 ರಿಂದ 2
3 ಗಂಧ
ಆರತಿ - 1
* ಘಂಟೆ - 1
* ಪಂಚಪಾತ್ರೆ , ಉದ್ಧರಣೆ - 1 ಜೊತೆ
# ನೀರು - 1 ತಂಬಿಗೆ
5:45 AM
← ಶಿವ ಪೂಜಾ ವಿಧಾನ
ಪೂಜಾ ಐಚ್ಛಿಕ ಸಾಮಗ್ರಿಗಳು :
ಬಿಲ್ವಪತ್ರೆ
ಗೆಜ್ಜೆವಸ್ತ್ರ - 1
# ಉಪವೀತ - 1
ವಿಧಾನ :
1 ) ಪ್ರಾರ್ಥನೆ ಪೂಜಾ ಪ್ರಾರಂಭ
ಓಂ ನಮಃ ಶಿವಾಯ :
ಧ್ಯಾಯಾಮಿ ಆವಾಹಯಾಮಿ
( ಅಕ್ಷತೆಯನ್ನು ಹಾಕುವುದು )
ರತ್ನಮಯ ಸಿಂಹಾಸನಂ ಸಮರ್ಪಯಾಮಿ ಸ್ವಾಗತಂ
( ಹೂವು ಅಕ್ಷತೆಯನ್ನು ಹಾಕುವುದು ) ಪಾದಾರವಿಂದಯೋಃ ಪಾದ್ಯಂ ಪಾದ್ಯಂ
ಸಮರ್ಪಯಾಮಿ
ಹಸ್ತಯೋಃ ಅರ್ಥ್ಯಂ ಅರ್ಥ್ಯಂ ಸಮರ್ಪಯಾಮಿ
ಮುಖೇ ಆಚಮನೀಯಂ ಸಮರ್ಪಯಾಮಿ
( ಈ ಮೂರು ಮಂತ್ರಗಳನ್ನು ಹೇಳಿ ಮೂರು ಉದ್ಧರಣೆ ( ಚಮಚ ) ನೀರನ್ನು ತಟ್ಟೆಯಲ್ಲಿ ಬಿಡುವುದು )
5:47 AM
← ಶಿವ ಪೂಜಾ ವಿಧಾನ
2 ) ಅಲಂಕಾರ
ಓಂ ನಮಃ ಶಿವಾಯ :
ವಸ್ತ್ರಂ ಸಮರ್ಪಯಾಮಿ
( ಗೆಜ್ಜೆ ವಸ್ತ್ರ ಅಥವಾ ಅಕ್ಷತೆಯನ್ನು ಹಾಕುವುದು )
• ಉಪವೀತಂ ಸಮರ್ಪಯಾಮಿ
ಸ್ನಾನಂ ಸಮರ್ಪಯಾಮಿ
( ದೇವರಿಗೆ ನೀರಿನಲ್ಲಿ ಅಥವಾ ಪಂಚಾಮೃತದಲ್ಲಿ ಸ್ನಾನವನ್ನು ಮಾಡಿಸುವುದು )
( ಉಪವೀತ , ಕಂಚುಕ , ಅಕ್ಷತೆಯನ್ನು ಹಾಕುವುದು ) ಗಂಧಂ ಸಮರ್ಪಯಾಮಿ
( ಗಂಧ , ಅರಶಿನ , ಕುಂಕುಮಗಳನ್ನು ದೇವರಿಗೆ ಅರ್ಪಿಸುವುದು )
ಅಕ್ಷತಾನ್ ಸಮರ್ಪಯಾಮಿ
( ಅಕ್ಷತೆಯನ್ನು ಹಾಕುವುದು ) ಪುಷ್ಪಾಣಿ ಸಮರ್ಪಯಮಿ
( ಹೂವಿನಲ್ಲಿ ದೇವರಿಗೆ ಅಲಂಕಾರ ಮಾಡುವುದು )
ಓಂ ನಮಃ ಶಿವಾಯ :
ಧೂಪಂ ಆಘ್ರಾಪಯಾಮಿ ( ಊದಿನ ಕಡ್ಡಿಯನ್ನು ಬೆಳಗುವುದು ) • ದೀಪಂ ದರ್ಶಯಾಮಿ
3 ) ಅರ್ಚನೆ ಮತ್ತು ಆರಾಧನೆ : - ನಾಮ ಪೂಜಾಂ ಕರಿಷ್ಯ
( 108 ಹೆಸರುಗಳಿಂದ ಹೂವು , ಅಕ್ಷತೆ , ಕುಂಕುಮಗಳಿಂದ ದೇವರಿಗೆ ಅರ್ಚನೆ ಮಾಡುವುದು )
ಓಂ ನಮಃ ಶಿವಾಯ
ಧೂಪಂ ಆಘ್ರಾಪಯಾಮಿ ( ಊದಿನ ಕಡ್ಡಿಯನ್ನು ಬೆಳಗುವುದು )
• ದೀಪಂ ದರ್ಶಯಾಮಿ
( ದೀಪವನ್ನು ಬೆಳಗುವುದು ) ನೈವೇದ್ಯಾರ್ಥೈ
( ತೆಂಗಿನಕಾಯಿ , ಹಣ್ಣುಗಳು , ವೀಳ್ಯದೆಲೆ , ಅಡಿಕೆ ಅಥವಾ ಯಾವುದೇ ತಯಾರಿಸಿದಂತಹ
4 ) ಪ್ರಾರ್ಥನೆ ಮತ್ತು ಸಮಾಪ್ತಿ .
ಓಂ ನಮಃ ಶಿವಾಯ :
ನೈವೇದ್ಯಂ ನಿವೇದಯಾಮಿ
ಮಂಗಳ ನೀರಾಜನಂ ಸಮರ್ಪಯಾಮಿ ( ಕರ್ಪೂರದಿಂದ ಆರತಿಯನ್ನು ಮಾಡುವುದು )
ಖಾದ್ಯಗಳನ್ನು ನೈವೇದ್ಯ ಮಾಡಿ ಹೂವು ಅಕ್ಷತೆಗಳನ್ನು ಹಾಕುವುದು )
ಮಂತ್ರ ಪುಷ್ಪಾಂಜಲಿಂ ಕರಿಷ್ಯ
( ಕೈ ತೊಳೆದುಕೊಂಡು ಹೂವು ಅಕ್ಷತೆಗಳನ್ನು ಹಾಕುವುದು )
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ( ಮೂರು ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡುವುದು )
ಪ್ರಸನ್ನಾರ್ಥ್ಯಂ ಸಮರ್ಪಯಾಮಿ ( ಹೂವು ಅಕ್ಷತೆಗಳನ್ನು ಒಂದು ಚಮಚ ನೀರಿ
ಜೊತೆ ತಟ್ಟೆಯಲ್ಲಿ ಬಿಡುವುದು )
?
ಪ್ರಾರ್ಥನಾಂ ಕರಿಷ್ಯ
( ಹೂವು ಅಕ್ಷತೆ ಹಿಡಿದುಕೊಂಡು ಪ್ರಾರ್ಥನೆ ಮಾಡಿ ಹಾಕುವುದು )
ತೀರ್ಥ ಪ್ರಸಾದವನ್ನು ಕೊಟ್ಟು , ತಾನೂ
ತೆಗೆದುಕೊಳ್ಳುವುದರೊಂದಿಗೆ ಪೂಜೆ ಸಮಾಪ್ತಿಯಾಗುವುದು .
ಸಂಕಲ್ಪ
ಓಂ ಶ್ರೀಧರಾಯ ನಮಃ ಓಂ ಹೃಷಿಕೇಶಾಯ ನಮಃ ಓಂ ಪದ್ಮನಾಭಾಯ ನರ್ಮ ಓಂ ದಾಮೋದರಾಯ ನಮಃ ಓಂ ಸಂಕರ್ಷನಾಯ ನಮಃ ಓಂ ವಾಸುದೇವಾಯ ನಮಃ
ಓಂ ಪ್ರದ್ಯುಮ್ನಾಯ ನಮಃ ಓಂ ಅನಿರುದ್ಧಾಯ ನಮಃ ಓಂ ಪುರುಷೋತ್ತಮಾಯ ನಮಃ ಓಂ ಅಧೋಕ್ಷಜಾಯ ನಮಃ ಓಂ ನಾರಸಿಂಹಾಯ ನಮಃ
ಆಚಮ್ಯ : - ಓಂ ಕೇಶವಾಯ ಸ್ವಾಹಾ- ಒಂದು ಉದ್ದರಣೆ ನೀರು ಕುಡಿಯುವುದು .
ಓಂ ನಾರಾಯಣಾಯ ಸ್ವಾಹಾ - ಒಂದು ಉದ್ಧರಣೆ ನೀರು ಕುಡಿಯುವುದು .
ಓಂ ಮಾಧವಾಯ ಸ್ವಾಹಾ - ಒಂದು ಉದ್ದರಣೆ ನೀರು ಕುಡಿಯುವುದು .
ಸಂಕಲ್ಪ
ಓಂ ಪದ್ಮನಾಭಾಯ ನರ್ಮ ಓಂ ದಾಮೋದರಾಯ ನಮಃ ಓಂ ಸಂಕರ್ಷನಾಯ ನಮಃ ಓಂ ವಾಸುದೇವಾಯ ನಮಃ
ಓಂ ಪ್ರದ್ಯುಮ್ನಾಯ ನಮಃ ಓಂ ಅನಿರುದ್ಧಾಯ ನಮಃ ಓಂ ಪುರುಷೋತ್ತಮಾಯ ನಮಃ ಓಂ ಅಧೋಕ್ಷಜಾಯ ನಮಃ ಓಂ ನಾರಸಿಂಹಾಯ ನಮಃ
ಓಂ ಅಚ್ಯುತಾಯ ನಮಃ
ಓಂ ಜನಾರ್ದನಾಯ ನಮಃ ಓಂ ಉಪೇಂದ್ರಾಯ ನಮಃ ಓಂ ಹರಯೇ ನಮಃ ಓಂ ಶ್ರೀ ಕೃಷ್ಣಾಯ ನಮಃ
ಪ್ರಾಣಾಯಾಮ : - ಪ್ರಾಣಾಯಾಮವನ್ನು ಮಾಡುತ್ತಾ ದೇವರನ್ನು
ಪ್ರಾರ್ಥಿಸುವುದು .
ಗಣಪತಿ ಪ್ರಾರ್ಥನೆ : - ಈ ಕೆಳಗಿನ ಮಂತ್ರವನ್ನು ಹೇಳುತ್ತಾ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಬೇಕೆಂದು ಹೂವು ಅಕ್ಷತೆಯನ್ನು ಹಿಡಿದುಕೊಂಡು ಗಣಪತಿಯನ್ನು ಪ್ರಾರ್ಥನೆ ಮಾಡಿಕೊಳ್ಳುವುದು . " ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಶು ಸರ್ವದಾ || ( ಹೂವು ಅಕ್ಷತೆಯನ್ನು ದೇವರ ಮೇಲೆ ಹಾಕುವುದು ) .
ಸಂಕಲ್ಪ : - ನಮಃ ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯೇ ಪ್ರರಾರ್ಧೇ ಶ್ರೀ ಶ್ವೇತ ವರಾಹಕಲ್ಲೇ ವೈವಸ್ವತ ಮನ್ವಂತರೇ - ಕಲಿಯುಗೇ - ಪ್ರಥಮಪಾದೇ - ಭಾರತವರ್ಷೇ - ಭರತಖಂಡೇ - ಜಂಬೂದ್ವೀಪೇ - ದಂಡಕಾರಣ್ಯ - ಗೋದಾವರ್ಯಾಃ - ದಕ್ಷಿಣೇ ತೀರೇ - ಶಾಲೀವಾಹನ ಶಕೇ - ಬೌದ್ಧಾವತಾರೇ - ರಾಮಕ್ಷೇತ್ರೇ - ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಶುಭಕೃತ ನಾಮ ಸಂವತ್ಸರೇ ದಕ್ಷಿಣಾಯಣ ಅಯನೇ ವರ್ಷ ಋತೌ ಭಾದ್ರಪದ ಮಾಸೇ ಶುಕ್ಲ ಪಕ್ಷ ಪಕ್ಷೇ ಶುಕ್ಲ ನವಮಿ ( 08:29:16 ) ತಿರೌ ಸೋಮವಾರ ವಾಸರೇ ಮೂಲ ( 20:07:08 ) ಶುಭ ನಕ್ಷತ್ರೇ ಏವಂ ಗುಣ ವಿಶೇಷೇಣ ವಿಶಿಷ್ಠಾಯಾಂ ಶುಭ ತಿರೌ ಮಮ ( ಹೆಸರು ಗೋತ್ರ ನಕ್ಷತ್ರ ಹೇಳಿಕೊಳ್ಳಬೇಕು ) ಅಸ್ಮಾಕಂ ಸಹ ಕುಟುಂಬಾನಾಂ ಕ್ಷೇಮ , ಧೈರ್ಯ ವೀರ್ಯ , ವಿಜಯ , ಅಭಯ , ಆನಂದ , ಆಯುಃ , ಆರೋಗ್ಯ , ಸಕಲ ಐಶ್ವರ್ಯ ಪ್ರಾಪ್ತರ್ಥಂ ಧರ್ಮ , ಅರ್ಥ , ಕಾಮ , ಮೋಕ್ಷ , ಚತುರ್ವಿಧ ಪುಣ್ಯ ಫಲ ಪುರುಷಾರ್ಥ ಸಿದ್ಯರ್ಥಂ ಶಿವ ದೇವತಾ ಪ್ರೀತ್ಯರ್ಥಂ ಧ್ಯಾನಾ , ವಾಹನಾದಿ ಷೋಡಶ ಉಪಚಾರ ಪೂಜಾಂ ಕರಿಷ್ಯ ....
( ಈ ಮೂರು ಮಂತ್ರಗಳನ್ನು ಹೇಳಿ ಮೂರು ಬಾರಿ)
1. ಓಂ ಶಿವಾಯ ನಮಃ
2. ಓಂ ಮಹೇಶ್ವರಾಯ ನಮಃ
3. ಓಂ ಶಂಭವೇ ನಮಃ
4. ಓಂ ಪಿನಾಕಿನೇ ನಮಃ
5. ಓಂ ಶಶಿಶೇಖರಾಯ ನಮಃ
6. ಓಂ ವಾಮದೇವಾಯ ನಮಃ
7. ಓಂ ವಿರೂಪಾಕ್ಷಾಯ ನಮಃ
8. ಓಂ ಕಪರ್ದಿನೇ ನಮಃ
9. ಓಂ ನೀಲಲೋಹಿತಾಯ ನಮಃ
10. ಓಂ ಶಂಕರಾಯ ನಮಃ
11. ಓಂ ಶೂಲಪಾಣಯೇ ನಮಃ
12. ಓಂ ಖಟ್ವಾಂಗಿನೇ ನಮಃ
13. ಓಂ ವಿಷ್ಣುವಲ್ಲಭಾಯ ನಮಃ
14. ಓಂ ಶಿಪಿವಿಷ್ಟಾಯ ನಮಃ
15. ಓಂ ಅಂಬಿಕಾನಾಥಾಯ ನಮಃ
16. ಓಂ ಶ್ರೀಕಂಠಾಯ ನಮಃ
17. ಓಂ ಭಕ್ತವತ್ಸಲಾಯ ನಮಃ
18. ಓಂ ಭವಾಯ ನಮಃ
19. ಓಂ ಶರ್ವಾಯ ನಮಃ
20. ಓಂ ತ್ರಿಲೋಕೇಶಾಯ ನಮಃ
21. ಓಂ ಶಿತಿಕಂಠಾಯ ನಮಃ
22. ಓಂ ಶಿವಾಪ್ರಿಯಾಯ ನಮಃ
23. ಓಂ ಉಗ್ರಾಯ ನಮಃ
24. ಓಂ ಕಪಾಲಿನೇ ನಮಃ
25. ಓಂ ಕಾಮಾರಯೇ ನಮಃ
26. ಓಂ ಅಂಧಕಾಸುರ ಸೂದನಾಯ ನಮಃ
27. ಓಂ ಗಂಗಾಧರಾಯ ನಮಃ
28. ಓಂ ಲಲಾಟಾಕ್ಷಾಯ ನಮಃ
29. ಓಂ ಕಾಲಕಾಲಾಯ ನಮಃ
30. ಓಂ ಕೃಪಾನಿಧಯೇ ನಮಃ
31. ಓಂ ಭೀಮಾಯ ನಮಃ
32. ಓಂ ಪರಶುಹಸ್ತಾಯ ನಮಃ
33. ಓಂ ಮೃಗಪಾಣಯೇ ನಮಃ
34. ಓಂ ಜಟಾಧರಾಯ ನಮಃ
35. ಓಂ ಕೆಲಾಸವಾಸಿನೇ ನಮಃ
36. ಓಂ ಕವಚಿನೇ ನಮಃ
37. ಓಂ ಕಠೋರಾಯ ನಮಃ
38. ಓಂ ತ್ರಿಪುರಾಂತಕಾಯ ನಮಃ
39. ಓಂ ವೃಷಾಂಕಾಯ ನಮಃ
40. ಓಂ ವೃಷಭಾರೂಢಾಯ ನಮಃ
41. ಓಂ ಭಸ್ಕೋದ್ಧೂಳಿತ ವಿಗ್ರಹಾಯ ನಮಃ
42. ಓಂ ಸಾಮಪ್ರಿಯಾಯ ನಮಃ
43. ಓಂ ಸ್ವರಮಯಾಯ ನಮಃ
44. ಓಂ ತ್ರಯೀಮೂರ್ತಯೇ ನಮಃ
45. ಓಂ ಅನೀಶ್ವರಾಯ ನಮಃ
46. ಓಂ ಸರ್ವಜ್ಞಾಯ ನಮಃ
47. ಓಂ ಪರಮಾತ್ಮನೇ ನಮಃ
48. ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
49. ಓಂ ಹವಿಷೇ ನಮಃ
52. ಓಂ ಪಂಚವಕ್ತಾಯ ನಮಃ
53. ಓಂ ಸದಾಶಿವಾಯ ನಮಃ
54. ಓಂ ವಿಶ್ವೇಶ್ವರಾಯ ನಮಃ
55. ಓಂ ವೀರಭದ್ರಾಯ ನಮಃ
56. ಓಂ ಗಣನಾಥಾಯ ನಮಃ
57. ಓಂ ಪ್ರಜಾಪತಯೇ ನಮಃ
58. ಓಂ ಹಿರಣ್ಯರೇತಸೇ ನಮಃ
59. ಓಂ ದುರ್ಧಷರ್ಾಯ ನಮಃ
60. ಓಂ ಗಿರೀಶಾಯ ನಮಃ
61. ಓಂ ಗಿರಿಶಾಯ ನಮಃ
62. ಓಂ ಅನಘಾಯ ನಮಃ
63. ಓಂ ಭುಜಂಗ ಭೂಷಣಾಯ ನಮಃ
64. ಓಂ ಭರ್ಗಾಯ ನಮಃ
65. ಓಂ ಗಿರಿಧನ್ವನೇ ನಮಃ
66. ಓಂ ಗಿರಿಪ್ರಿಯಾಯ ನಮಃ
67. ಓಂ ಕೃತ್ತಿವಾಸಸೇ ನಮಃ
68. ಓಂ ಪುರಾರಾತಯೇ ನಮಃ
69. ಓಂ ಭಗವತೇ ನಮಃ
70. ಓಂ ಪ್ರಮಧಾಧಿಪಾಯ ನಮಃ
71. ಓಂ ಮೃತ್ಯುಂಜಯಾಯ ನಮಃ
72. ಓಂ ಸೂಕ್ಷ್ಮತನವೇ ನಮಃ
73. ಓಂ ಜಗದ್ವಾಪಿನೇ ನಮಃ
74. ಓಂ ಜಗದ್ಗುರವೇ ನಮಃ
75. ಓಂ ಪ್ರೋಮಕೇಶಾಯ ನಮಃ
76. ಓಂ ಮಹಾಸೇನ ಜನಕಾಯ ನಮಃ
77. ಓಂ ಚಾರುವಿಕ್ರಮಾಯ ನಮಃ
78. ಓಂ ರುದ್ರಾಯ ನಮಃ
79. ಓಂ ಭೂತಪತಯೇ ನಮಃ
80. ಓಂ ಸ್ಥಾಣವೇ ನಮಃ
81. ಓಂ ಅಹಿರ್ಭುಥ್ಯಾಯ ನಮಃ
82. ಓಂ ದಿಗಂಬರಾಯ ನಮಃ
83. ಓಂ ಅಷ್ಟಮೂರ್ತಯೇ ನಮಃ
84. ಓಂ ಅನೇಕಾತ್ಮನೇ ನಮಃ
85. ಓಂ ಸ್ವಾಸ್ಥ್ಯಕಾಯ ನಮಃ
86. ಓಂ ಶುದ್ಧವಿಗ್ರಹಾಯ ನಮಃ
87. ಓಂ ಶಾಶ್ವತಾಯ ನಮಃ
88. ಓಂ ಖಂಡಪರಶವೇ ನಮಃ
89. ಓಂ ಅಜಾಯ ನಮಃ
90. ಓಂ ಪಾಶವಿಮೋಚಕಾಯ ನಮಃ
91. ಓಂ ಮೃಡಾಯ ನಮಃ
92. ಓಂ ಪಶುಪತಯೇ ನಮಃ
93. ಓಂ ದೇವಾಯ ನಮಃ
94. ಓಂ ಮಹಾದೇವಾಯ ನಮಃ
95. ಓಂ ಅವ್ಯಯಾಯ ನಮಃ
96. ಓಂ ಹರಯೇ ನಮಃ
97. ಓಂ ಪೂಷದಂತಭಿದೇ ನಮಃ
98. ಓಂ ಅವ್ಯಗ್ರಾಯ ನಮಃ
99. ಓಂ ದಕ್ಷಾಧ್ವರಹರಾಯ ನಮಃ
100. ಓಂ ಹರಾಯ ನಮಃ
101. ಓಂ ಭಗನೇತ್ರಭಿದೇ ನಮಃ
102. ಓಂ ಅವ್ಯಕ್ತಾಯ ನಮಃ
103. ಓಂ ಸಹಸ್ರಾಕ್ಷಾಯ ನಮಃ
104. ಓಂ ಸಹಸ್ರಪಾದವೇ ನಮಃ
105. ಓಂ ಅಪವರ್ಗಪ್ರದಾಯ ನಮಃ
106. ಓಂ ಅನಂತಾಯ ನಮಃ
107. ಓಂ ತಾರಕಾಯ ನಮಃ
108. ಓಂ ಪರಮೇಶ್ವರಾಯ ನಮಃ🙏
***
No comments:
Post a Comment