by narahari sumadhwa
ಏಕಶ್ಲೋಕಿ ರಾಮಾಯಣ
ಆದೌ ರಾಮತಪೋವನಾಭಿಗಮನಂ
ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ
ಸುಗ್ರೀವ ಸಂಭಾಷಣಂ
ವಾಲೀ ನಿರ್ದಲನಂ ಸಮುದ್ರ ತರಣಂ
ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ
ಏತದ್ಧಿ ರಾಮಾಯಣಂ |
ನಮ್ಮ ತಂದೆ ದಿವಂಗತ ಶತಾಯುಷಿ
ಶ್ರೀ ರಾಮಚಂದ್ರಾಚಾರ್ಯರು ನಿತ್ಯ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಕೆಲವೊಮ್ಮೆ ಪಾರಾಯಣ ಮಾಡಲು ಅಸಾಧ್ಯವಾದಾಗ ಏಕಶ್ಲೋಕೀ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಇದು ಯಾರ ರಚನೆ ಎಂದು ಗೊತ್ತಿಲ್ಲ, ಆದರೂ ಸಂಪೂರ್ಣ ರಾಮಾಯಣ ಸಂಕ್ಷಿಪ್ತ ಚಿಂತನೆ ಇಲ್ಲಿದೆ. ಆ ಶ್ಲೋಕವನ್ನು ಇಲ್ಲಿ ಹಾಕಿದ್ದೇನೆ :
ಅಯೋಧ್ಯೆಯಲಿ ಜನಿಸಿದ ರಾಮಚಂದ್ರನು ವಿಶ್ವಾಮಿತ್ರರ ಯಜ್ಞ ರಕ್ಷಿಸಲು ಅವರೊಂದಿಗೆ ತೆರಳಿ ; ಕೈಕೆಯ ಪ್ರಾಪ್ತವಾದ ವರದಂತೆ ರಾಜ್ಯಾಭಿಷೇಕ ಬಿಟ್ಟು ಪತ್ನಿ ಅನುಜರೊಡೆ ವನಗಮಿಸಿ ; ಮಾಯಾಮೃಗದಿಂದ ಮೋಹಗೊಂಡವಳಂತೆ ತೋರಿದ ಸೀತೆಗಾಗಿ ಕಾಂಚನಮೃಗ ಕೊಂದು ; ರಾವಣನಿಂದ ಅಪಹರಿಸಲ್ಪಟ್ಟ ಜಾನಕಿಯನರಸಿ ಕಿಷ್ಕಿಂಧೆ ಸೇರಿ ಕಿಷ್ಕಿಂಧೆ ಸೇರಿದ. ಜಾನಕಿಯ ರಕ್ಷಣೆಗೆ ಬಂದ ಜಟಾಯು ರಾವಣನಿಂದ ಕೊಲ್ಲಲ್ಪಟ್ಟ.
ಕಿಷ್ಕಿಂಧೆಯಲ್ಲಿ ಹನುಮನ ಕೂಡಿ ಸುಗ್ರೀವನ ಜೊತೆ ಸೇರಿ, ವಾಲಿಯ ನಿಗ್ರಹಿಸಿ, ಸಮುದ್ರ ದಾಟಿ ಲಂಕೆಯ ದಹಿಸಿ; ರಾವಣಾದಿಗಳ ಮಣಿಸಿ ಸೀತೆಯೊಡನೆ ಪುಷ್ಪಕ ವಿಮಾನವೇರಿ ಸಂಭ್ರಮದಿ ಸಾವಿರಾರು ವರುಷ ರಾಮರಾಜ್ಯವ ನೀಡಿದ ಕಥೆಯೇ ರಾಮಾಯಣ.
ಶ್ರೀ ಸೀತಾಪತಿ ರಾಮಚಂದ್ರನಿಗೆ ನಮೋ ನಮೋ: !
ನರಹರಿ ಸುಮಧ್ವ
ಸುಮಧ್ವಸೇವಾ
***
No comments:
Post a Comment