SEARCH HERE

Friday, 1 October 2021

ಸಮಸ್ಯೆ ಭಾದೆ ನಷ್ಟ ಅಶಾಂತಿ ಕಿರಿ ಕಿರಿಗೆ ಪರಿಹಾರ

ಯಾರಿಗೆ ಅತಿಯಾಗಿ ಮೈ ಕೈ ನೋವಿದೆಯೋ ಮತ್ತು ಆಗಾಗ ಕೆಟ್ಟ ಕನಸು ಬೀಳುತ್ತಾ ಇದ್ದರೆ ಅವರು 21 ಅಥವಾ 48 ದಿನ ಬನ್ನಿ ಮರವನ್ನು ದಿನವೂ 108 ಬಾರಿ ಪ್ರದಕ್ಷಿಣೆ ಹಾಕಿ.....


ಯಾವ  ವ್ಯಕ್ತಿಗೆ ಉದ್ಯೋಗದ ವಿಷಯದಲ್ಲಿ ತೊಂದರೆ ಇದ್ದರೆ ಆ ವ್ಯಕ್ತಿಯು ಸರಿಯಾಗಿ 48 ದಿನ ಖಾಲಿ ಹೊಟ್ಟೆಯಲ್ಲಿ" ಓಂ ದ್ರಾಂ ಓಂ ಗುರುದತ್ತಾಯ ನಮಃ" ಎಂದು ಮಂತ್ರ ಹೇಳುತ್ತಾ 108 ಪ್ರದಕ್ಷಿಣೆ ಅತ್ತಿ ಮರಕ್ಕೆ 48 ದಿನ ತಪ್ಪದೆ ಹಾಕಬೇಕು... ಆಗ ಉದ್ಯೋಗಕ್ಕೆ ಸಂಬಂಧ ಪಟ್ಟ ವಿಷಯ ದಲ್ಲಿ ಜಯ ಸಿಗುತ್ತದೆ... ಒಳ್ಳೆ ಉದ್ಯೋಗಕ್ಕೆ ನಿಲ್ಲುತ್ತೀರಾ..


" ಓಂ ಬಾಂ ಭೈರವ ಭೈರವಾಯ

ಬಾಂ ಭೈರವ ಭೈರವ ಭಯಂಕರ

        ಭಯಂ ಹರ ಹರ

           ಮಾಂ ರಕ್ಷ ರಕ್ಷ

          ಹುಂ ಪಟ್ ಸ್ವಾಹ"

ಈ  ಮಂತ್ರ ವನ್ನು ದಿನವೂ ಜಪ ಮಾಡುವುದರಿಂದ ನಿದ್ರಾ ಹೀನತೆ ಇದ್ದರೆ  ಹಾಗು ನರ ದೌರ್ಬಲ್ಯ ಸಮಸ್ಯೆ ಇದ್ದರೆ ಮಾನಸಿಕ ಖಿನ್ನತೆ ಹಾಗು ಆತ್ಮ ವಿಶ್ವಾಸ ಕೊರತೆ ಇದ್ದರೆ ಈ ಎಲ್ಲ ಸಮಸ್ಯೆ ಯು ನಿವಾರಣೆ ಆಗುತ್ತದೆ... ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ  ಮಾಡಿ  ದಿನ 108 ಬಾರಿ ಜಪಿಸಿ...

ಮುದ್ರೆ  -  ಶಿವಲಿಂಗ ಮುದ್ರೆ( ವೀರ ಭೈರವ ಮುದ್ರೆ )

ತಂತ್ರ  - ಇದೆ ಮಂತ್ರವನ್ನು 21 ಬಾರಿ ನಿಂಬೆಹಣ್ಣಿಗೆ ಅಭಿಮಂತ್ರಿಸಿ ಜ್ಯೂಸ್ ಮಾಡಿ ಕುಡಿಯಿರಿ...


ಗಂಡ ಹೆಂಡತಿ ಯೊಂದಿಗೆ ಸರಿಯಾಗಿ ಸಂಬಂಧ ನಿರ್ವಹಿಸದೆ ಇದ್ದರೆ ಅಥವಾ ಅವಳನ್ನ ಬಿಟ್ಟು ದೂರ ಇದ್ದರೆ


ಮಂತ್ರ  - " ಓಂ ನಮೋ ಭಗವತೇ

                ಕಾಮರೂಪಿಣಿ ಮಹಾಬಲಾಯ

                ನಾಗಧಿಪತಯೇ ಅನಂತಾಯ ನಮಃ

ಕಾಳಹಸ್ತಿ ಅಥವಾ  ಸುಬ್ರಮಣ್ಯ ದೇವಸ್ಥಾನದಲ್ಲಿ ಸರ್ಪ ಶಿರ ಮುದ್ರೆ ಯಿಂದ ಮೇಲಿನ ಮಂತ್ರ ಹೇಳುತ್ತಾ 108 ಬಾರಿ ಪ್ರದಕ್ಷಿಣೆ ಹಾಕ್ಬೇಕು... ಹಾಗು ಇನ್ನೊಮ್ಮೆ ಅದೇ ಗಂಡನ ಜೊತೆ ಹಿಂದೆ ಮದುವೆ ಆದ ತಿಂಗಳಲ್ಲೇ ಅದೇ ನಕ್ಷತ್ರ ದಂದು ಮದುವೆಯಾಗಬೇಕು ಅಂದರೆ ಮಾಂಗಲ್ಯ ಧಾರಣೆ ಆಗ್ಬೇಕು....


ದುಡಿದ ಹಣ ಎಲ್ಲವು ವಿಚಿತ್ರ ರೀತಿಯಲ್ಲಿ ಏನು ಆಗುತ್ತೆ ಎಂದು ಗೊತ್ತಿಲ್ಲದೇ ಖರ್ಚಗುವುದು ಮತ್ತು ಕೆಲಸದಿಂದ ತೆಗೆದು ಹಾಕುವುದು ಇದ್ದರೆ ದಿನವೂ ಹರಿಯುವ ನದಿಯಲ್ಲಿ 21 ದಿನ ಮಂಡಕ್ಕಿ ಹಾಕಿದರೆ ಈ ದೋಷ ಹೋಗುತ್ತದೆ


ಓಂ ತಕ್ಷಕಾಯ ನಮಃ

ಓಂ ಕಾರ್ತ್ಯವಿರಾರ್ಜುನಾಯ ನಮಃ

ಈ ಮಂತ್ರ ಜಪಿಸುವುದರಿಂದ ಕನಸಿನಲ್ಲಿ ಕಳೆದು ಹೋದ ವಸ್ತು ಕಾಣಿಸುವುದು ಅಥವಾ ತನ್ನಿಂದ ತಾನೇ ಸಿಗಬಹುದು...


ನಿಮ್ಮ ಪಕ್ಕದ ಮನೆಯವರೇ ನಿಮಗೆ ನಿಮ್ಮ ಹತ್ತಿರ ದವರೇ ನಿಮಗೆ ನಿಮ್ಮದು ತಪ್ಪಿಲ್ಲದೇ ಇದ್ದರು ನಿಮಗೆ ತೊಂದರೆ ಕೊಡುತಿದ್ದರೆ  ಆಗ  ನೀವು "ಓಂ ಕ್ರೀಮ್ ಕಾಳಿ ಶತ್ರು ಶಮನಮ್ ಕುರು ಕುರು ಪಟ್" ಈ ಮಂತ್ರವನ್ನು ನಿಮ್ಮ ಶತ್ರುವನ್ನು ನೆನೆಸಿ ಬೆಳಿಗ್ಗೆ ಮತ್ತು ಸಂಜೆ 108 ಬಾರಿ 21 ದಿನ ಕಾಳಿ ಮುದ್ರೆ ಯೊಂದಿಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಜಪಿಸಿ ಆಮೇಲೆ ನೋಡಿ ಶತ್ರುವಿನ ಪರಿಸ್ಥಿತಿ ನೀವೇ ನಿಮ್ಮ ಕಣ್ಣಾರೆ.....(ನೀವು ಧರ್ಮ ವಾಗಿದ್ದರೆ ಮಾತ್ರ ಇದನ್ನು ಮಾಡಿ ಇಲ್ಲ ವಾದರೆ ನಿಮಗೆ ತೊಂದರೆ ಆಗುತ್ತೆ )


ಮನೆಯಲ್ಲಿ ದಿನೇ ದಿನೇ ದರಿದ್ರತನ ಹೆಚ್ಚಾಗುತ್ತಾ ಹೋದರೆ ಹಣದ ಸಮಸ್ಯೆ ಕೈ ಮೀರಿ ಹೋಗುತ್ತಿದ್ದರೆ ಮನೆಯಲ್ಲಿ ದಿನವೂ ಒಂದು ಅದ್ಯಾಯದಂತೆ, "ಸುಂದರ ಕಾಂಡ " ಪಾರಾಯಣ ಮಾಡಿ ಆಗ ನೋಡಿ ನಿಮಗೆ ವಿಚಿತ್ರ ಎಂಬಂತೆ ಒಂದು ದಾರಿ ಕಾಣುವುದು...


ಕೆಲಸದ ಮೇಲೆ ಕೆಲವರು ಒಮ್ಮಿಂದ ಒಮ್ಮೆಲೇ ಆಸಕ್ತಿ ಕಳೆದು ಕೊಳ್ಳುತ್ತಾರೆ ಇದ್ದಲ್ಲೇ ಸೋಮಾರಿ ತನ ಹೆಚ್ಚಾಗುತ್ತದೆ ಬುದ್ದಿ ಮಾಂಕಾಗುತ್ತದೆ ಆಗ ಅದನ್ನು ಸರಿಪಡಿಸಲು  ಬೆಳಿಗ್ಗೆ 48 ದಿನ " ಓಂ ಚಂದ್ರಾಯ ನಮಃ "ಈ  ಮಂತ್ರ ಜಪಿಸಿ  108 ಬಾರಿ.. ಹಾಗು 48 ದಿನ ಕಾಲ ಬನ್ನಿ ಮರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರದಕ್ಷಿಣೆ ಹಾಕಿ...


ಯಾರಿಗೆ ಮಾಡುವಂತ ಉದ್ಯಮದಲ್ಲಿ ತುಂಬಾ ನಷ್ಟ ಆಗುತ್ತಾ ಇದೆಯೋ ಅವರು ಕುಲದೇವರಿಗೆ ಹೋಗಿ ಅಲ್ಲಿ ಉರುಳು ಸೇವೆ ಮಾಡಿ ಮತ್ತು ದೇವರಿಗೆ ಅಕ್ಕಿ ಅಥವಾ ಗೋದಿ ಅಥವಾ ಬೆಲ್ಲ ತುಲಭಾರ ಸೇವೆ ನೀಡಿದರೆ ಉದ್ಯಮದಲ್ಲಿ ಯಶಸ್ಸು ಲಾಭ  ಖಂಡಿತವಾಗಿಯೂ ಕಾಣುವಿರಿ 🙏🙏


ವಿವಾಹ ಭಂಗ ಪ್ರಯೋಗ :- ಕೆಲವರಿಗೆ ಜಾತಕದಲ್ಲಿ ಯಾವ ಸರ್ಪ ದೋಷವು ಕಂಡು ಬರುವದಿಲ್ಲ ಮತ್ತು ಯಾವ ಶಾಪವು ಇಲ್ಲ ಜಾತಕ ಚೆನ್ನಾಗಿದೆ ಎಂದು ತಿಳಿಸುತ್ತಾರೆ ಆದರೆ ಮದುವೆ ಮಾತ್ರ ಎಲ್ಲೂ ಕೂಡಿ ಬರುವದಿಲ್ಲ.... ಕೆಲವೊಮ್ಮೆ ಮಾಟ ಮಂತ್ರ ಆಗಿದ್ದರೆ ಈ ರೀತಿ ಆಗತ್ತೆ ಇದಕ್ಕೆ ವಿವಾಹ ಭಂಗ ಪ್ರಯೋಗ ಎಂದು ಕರೆಯುತ್ತೇವೆ... ಅದಕ್ಕೆ ಪರಿಹಾರ ಅಂದ್ರೆ 21 ದಿನ ಹತ್ತಿರ ದಲ್ಲಿರೋ ಕಾಳಿ ಅಥವಾ ದುರ್ಗಾ ದೇವಸ್ಥಾನ ಕ್ಕೆ 108 ಪ್ರದಕ್ಷಿಣೆ ಡೈಲಿ 21 ದಿನ ಹಾಕಬೇಕು...22 ನೇ ದಿನ ಅದೇ ದೇವಸ್ಥಾನ ದಲ್ಲಿ ತುಲಾಭಾರ ಸೇವೆ ಅರ್ಪಿಸಬೇಕು... ಆಗ ಈ ದೋಷ ಪರಿಹಾರವಾಗಿ ವಿವಾಹ ಬಂಧನ ಶೀಘ್ರದಲ್ಲಿ ಏರ್ಪಡುತ್ತದೆ.... 🌹🌹


ಮನೆ ಮಾರಾಟ ಮಾಡಬೇಕು ಎಂದು ಕೆಲವರು ಪ್ರಯತ್ನ ಪಡುತ್ತಾರೆ ಆದರೆ ಏನು ಮಾಡಿದರು ಮನೆ ಮಾರಾಟ ಆಗಲ್ಲ ಜನ ಬರ್ತಾರೆ ಮನೆ ನೋಡುತ್ತಾರೆ ಹೋಗುತ್ತಾರೆ ಆದರೆ ಮನೆ ಮಾತ್ರ ಮಾರಾಟ ಆಗಲ್ಲ. ಎಷ್ಟೊಂದು ಪೂಜೆ ಮತ್ತು ಹೋಮಗಳನ್ನು ಮಾಡಿದರು ಮನೆ ಮಾರಾಟ ಆಗಲ್ಲ ಆಗ ಅದಕ್ಕೆ ಅರ್ಕ ಗಣಪತಿ ತಂತ್ರ ಮಾಡಿ. ಏನೆಂದರೆ ಒಂದು ಹಿಡಿ ಮಂತ್ರಾಕ್ಷತೆ ಹಿಡಿದು ಬಲ ಕೈ ಅಂಗೈಲಿ ಬಿಳಿ ಎಕ್ಕೆ ಗಿಡಕ್ಕೆ ಪ್ರತಿ ದಿನ ಬೆಳಿಗ್ಗೆ 108 ಸಾರಿ ಪ್ರದಕ್ಷಿಣೆ ಹಾಕಬೇಕು. ಇದೆ ರೀತಿ 7 ದಿನ ಅದೇ ಮಂತ್ರಾಕ್ಷತೆಯಿಂದ ಅದೇ ಎಕ್ಕೆ ಗಿಡಕ್ಕೆ 108 ಬಾರಿ ಪ್ರದಕ್ಷಿಣೆ ಹಾಕಿ.. ಪ್ರತಿ ದಿನದ ಪ್ರದಕ್ಷಿಣೆ ಮುಗಿದಮೇಲೆ ಆ ಮಂತ್ರಾಕ್ಷತೆ ಯನ್ನು ನಿಮ್ಮ ಮನೆಯಲ್ಲಿ ಒಂದು ತಟ್ಟೆಯಲ್ಲಿ ಹಾಕಿ ಇಡಬೇಕು..8 ನೇ ದಿನ ನೀವು 7 ದಿನ ಪ್ರದಕ್ಷಿಣೆ ಹಾಕಿದ ಆ ಮಂತ್ರಾಕ್ಷತೆ ಯನ್ನು ತೆಗೆದುಕೊಂಡು ಹೋಗಿ ನೀವು ಮಾರಾಟ ಮಾಡಬೇಕಾದ ಮನೆಯ ದೇವರ ಕೋಣೆಯಲ್ಲಿ ಆ ಮಂತ್ರಾಕ್ಷತೆ ಯನ್ನು ತಟ್ಟೆಯಲ್ಲಿ ಇಟ್ಟುಬಿಡಿ.... ಆಗ ಜನ ಮತ್ತು ಧನ ಎರಡು ಆಕರ್ಷಣೆ ಆ ಮನೆಯಲ್ಲಿ ಉಂಟಾಗುತ್ತದೆ... 🙏🙏🌹


ಕೆಲವರಿಗೆ ತುಂಬಾ ಆಸಿಡಿಟಿ ಮತ್ತು ಗ್ಯಾಸ್ ಟ್ರಬಲ್ ಇರತ್ತೆ ಸ್ವಲ್ಪ ಏನಾದ್ರೂ ತಿಂದರು ಹೊಟ್ಟೆ ಉಬ್ಬಿಕೊಳ್ಳುತ್ತೇ ಅವರು ಮಾಡ್ಬೇಕಾದ್ದು ಇಷ್ಟೇ ಬೆಳಿಗ್ಗೆ ಎದ್ದ ತಕ್ಷಣವೇ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿ ನೀರು ಕುಡಿಯಬೇಕು ಮತ್ತು ಅರ್ಧ ಗಂಟೆ ಬಿಟ್ಟು 30 ml ಗೋ ಮೂತ್ರ ಅರ್ಕ ಕ್ಕೆ 60 ml ನೀರನ್ನು ಬೆರೆಸಿ ಕುಡಿಯಬೇಕು ಆಮೇಲೆ 10 ನಿಮಿಷ ಬಿಟ್ಟು ತಿಂಡಿ ತಿನ್ನಿ ಈ ರೀತಿ ದಿನವೂ ಮಾಡಿ.ಒಂದು ತಿಂಗಳ ನಂತರ ನೀವೇ ಬದಲಾವಣೆ ನೋಡಿ 🙏🙏


ಮನೆಯಲ್ಲಿ ತುಂಬಾ ಕಿರಿ ಕಿರಿ ಮತ್ತು ಒಬ್ಬರಿಗೆ ಕಂಡರೆ ಒಬ್ಬರಿಗೆ ಆಗಲ್ಲ. ಪದೇ ಪದೇ ಜಗಳ ಮನೆಯಲ್ಲಿ ಕಿತ್ತಾಟ ಆಗುತ್ತೆ. ಇದೆ ಗೃಹ ಕಲಹ ಎಂದು ಕರೆಯುತ್ತಾರೆ.. ಈ ರೀತಿ ಇದ್ದಾಗ ಹುಣ್ಣಿಮೆ ದಿನ ಮುಸ್ಸಂಜೆಯಲ್ಲಿ ಗೊದುಳಿ ಸಮಯದಲ್ಲಿ ಹಸು ಮತ್ತು ಕರುವಿಗೆ ಮನೆಗೆ ತಂದು ಪೂಜಿಸಿ ಅದರ ಬಾಲಕ್ಕೆ ನಮಸ್ಕಾರ ಮಾಡಿ ಅದಕ್ಕೆ ಬೆಲ್ಲ ಗೋದಿ ತುಪ್ಪ ಬೆರೆಸಿ ತಿನ್ನಿಸಿ ಪ್ರದಕ್ಷಿಣೆ ಹಾಕಿ ಇದರಿಂದ ಮನೆಯಲ್ಲಿ ತುಂಬಾ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ... ಇದೆ ರೀತಿ 5 ಹುಣ್ಣಿಮೆ ಮಾಡಿದರೆ ಅದ್ಭುತ ಬದಲಾವಣೆ ಸಾಧ್ಯವಿದೆ 🙏🙏🌹


ಕೆಲಸದ ಮೇಲೆ ಕೆಲವರು ಒಮ್ಮಿಂದ ಒಮ್ಮೆಲೇ ಆಸಕ್ತಿ ಕಳೆದು ಕೊಳ್ಳುತ್ತಾರೆ ಇದ್ದಲ್ಲೇ ಸೋಮಾರಿ ತನ ಹೆಚ್ಚಾಗುತ್ತದೆ ಬುದ್ದಿ ಮಾಂಕಾಗುತ್ತದೆ ಆಗ ಅದನ್ನು ಸರಿಪಡಿಸಲು  ಬೆಳಿಗ್ಗೆ 48 ದಿನ " ಓಂ ಚಂದ್ರಾಯ ನಮಃ "ಈ  ಮಂತ್ರ ಜಪಿಸಿ  108 ಬಾರಿ.. ಹಾಗು 48 ದಿನ ಕಾಲ ಬನ್ನಿ ಮರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರದಕ್ಷಿಣೆ ಹಾಕಿ...


ಯಾರಿಗೆ ಮನಸ್ಸಿನಲ್ಲಿ ಭಯ ಭಯ ಆಗುತ್ತಾ ಇರತ್ತೋ ಬೇರೆಯವರ ಹತ್ತಿರ ಮಾತಾಡಲಿಕ್ಕು ಹಿಂಜರಿಕೆ ಉಂಟಾಗುತ್ತದೋ ಕೈ ಕಾಲುಗಳಲ್ಲಿ ಆ ಸಮಯದಲ್ಲಿ ನಡುಕ ಬರುತ್ತೋ ಅದು ಸಾಮಾನ್ಯವಾಗಿ ಪ್ರೇತ ಸೊಂಕಿದ್ದರೆ ಆ ರೀತಿ ಆಗುತ್ತೆ ಪರಿಹಾರ

                         " ಓಂ ಬಾಂ  ಭಂ

                   ವೀರಬೈರವಾಯ ನಮಃ

ಈ ಮಂತ್ರವನ್ನು ಕುಂತಾಗ ನಿಂತಾಗ ಕೆಲಸ ಮಾಡುವಾಗ ನಿರಂತರ 7 ದಿನ ಜಪ ಮಾಡಿ ಸಂಪೂರ್ಣ ಗುಣವಾಗುತ್ತದೆ...


ಕೆಲವೊಮ್ಮೆ ಕೆಲವರಿಗೆ ಒಮ್ಮೆಲೇ ತಲೆ ಸುತ್ತುವುದು.... ಹಾಗು ಕಾಲು ತುಂಬಾ ಎಳೆತ ಬಂದ ಹಾಗೆ ಆಗತ್ತೆ... ವೈದ್ಯರಲ್ಲಿ ಭೇಟಿ ಮಾಡಿದರು ಕೂಡ ತಾತ್ಕಾಲಿಕ ಪರಿಹಾರ ಆಗುತ್ತೆ ಆಮೇಲೆ ಮತ್ತೆ ಅದೇ ರೀತಿ ಸಮಸ್ಯೆ ಆಗುತ್ತೆ ಹೀಗಾದರೆ ಇದು ಸಾಮಾನ್ಯವಾಗಿ ಮಾಟ ಮಂತ್ರ ಮಾಡಿದ ವಸ್ತುಗಳನ್ನು ದಾಟಿದರು ಅಥವಾ ಭೂತ ಮತ್ತು ಪ್ರೇತ ಬಾದೆಯಿಂದ ನರಳುತ್ತ ಇದ್ದವರ ಸ್ಪರ್ಶ ದಿಂದ ಇನ್ಫೆಕ್ಷನ್ ಆಗಿ ಕೂಡ ಈ ರೀತಿ ಆಗತ್ತೆ ಇದಕ್ಕೆ ತಂತ್ರ ಎಂದರೆ ಯಾವುದಾದರೂ ಶಕ್ತಿ ದೇವತೆ ದೇವಸ್ಥಾನ ಕ್ಕೆ ಹೋಗಿ ಒಂದು ದಾರಕ್ಕೆ ಅರಿಶಿನ ಹಚ್ಚಿ ಒಂದು ಅರಿಶಿನ ಕೊಂಬಿಗೆ ಆ ದಾರ ಕಟ್ಟಿ ಅದನ್ನು ಕೈಲ್ಲಿ ಹಿಡಿದು ಅಲ್ಲಿ 108 ಪ್ರದಕ್ಷಿಣೆ ಹಾಕಿ ಅದನ್ನು ದೇವಸ್ಥಾನದ ಹತ್ತಿರದಲ್ಲೇ ಇರುವ ಮರಕ್ಕೆ ಕಟ್ಟಿಬಿಡಿ ಅದರಿಂದ ಸಮಸ್ಯೆ ಪರಿಹಾರವಾಗುತ್ತೆ


ಯಾವುದಾದರೂ ಬ್ಯಾಂಕ್ ಲ್ಲಿ ಲೋನ್ ಗೆ ಪ್ರಯತ್ನ ಪಟ್ಟಾಗ ಅದರ ಬಗ್ಗೆ ಮಾಹಿತಿ ಸರಿಯಾಗಿ ಸಿಗದೇ ಇದ್ದಾಗ ಲೋನ್ ಸಿಗೋದು ಮುಂದೆ ಮುಂದೇ ಹೋದಾಗ  ನೀವು ಬೆಳಿಗ್ಗೆ ಎದ್ದು ಸ್ನಾನ ಮಾಡಿ ನಂತರ ಒಂದು ಚಂಬು ನೀರು ತೆಗೆದುಕೊಂಡು ಹೋಗಿ ಬಿಳಿ ಎಕ್ಕದ ಗಿಡದ ಬುಡಕ್ಕೆ ಸುರಿಯಿರಿ... ಮತ್ತು " ಓಂ ವಕ್ರತುಂದಾಯ ಹುಂ " ಈ ಮಂತ್ರ ಹೇಳುತ್ತಾ 108 ಸುತ್ತು ಎಕ್ಕೆ ಗಿಡಕ್ಕೆ ಪ್ರದಕ್ಷಿಣೆ ಹಾಕಿ ಆಮೇಲೆ ಅದೇ ಗಿಡಕ್ಕೆ ತಬ್ಬಿಕೊಂಡು ಪ್ರಾರ್ಥನೆ ಮಾಡಿಕೊಳ್ಳಿ ನನಗೆ ಇಂತ ಬ್ಯಾಂಕ್ ನಿಂದ ಲೋನ್ ಬಂದಿಲ್ಲ ಬರೋ ಹಾಗೆ ಮಾಡಿ ಎಂದು... ಆಮೇಲೆ 2 ವಾರ ದಲ್ಲಿ ನಿಮಗೆ ಅದಕ್ಕೆ ಸಂಬಂಧ ಪಟ್ಟ ಕೆಲಸ ಆಗತ್ತೆ... ಇದು ಅರ್ಕ ಗಣಪತಿ ತಂತ್ರ... 🙏🙏🌹🌹


ಕೆಲವೊಂದು ಕುಟುಂಬ ದಲ್ಲಿ ಅತ್ಯಂತ ಕಷ್ಟ ವಾದ ಜೀವನ ಇರುತ್ತೆ ಒಬ್ಬರಿಗೆ ಕೆಲಸ ಇರೋಲ್ಲ ಒಬ್ಬರಿಗೆ ಉದ್ಯೋಗ ಇದ್ದರು ಏಳಿಗೆ ಇರೋಲ್ಲ ಇನ್ನೊಬ್ಬರಿಗೆ ಆರೋಗ್ಯ ಸರಿ ಇರಲ್ಲ ಇದಿಷ್ಟು ಸಮಸ್ಯೆ ಒಂದೇ ಕುಟುಂಬ ದಲ್ಲೇ ಇರುತ್ತೆ ಒಟ್ಟಿನಲ್ಲಿ ಅವರ ಜೀವನ ಸಂಘರ್ಷ ಜೀವನವಾಗಿರತ್ತೆ ಇದಕ್ಕೆ ಕಾರಣ ಸಾಮಾನ್ಯವಾಗಿ ಕಾಳ ಸರ್ಪ ದೋಷವಾಗಿರುತ್ತೆ.... ನೀವು ಮನೆಯಲ್ಲೇ

"ಓಂ ಸ್ಕಂದಾಯ ನಮಃ

 ಓಂ ಗುಹಾಯ  ನಮಃ

 ಓಂ ಷಣ್ಮುಕಾಯ ನಮಃ "

ಈ ಮೇಲಿನ ಮಂತ್ರವನ್ನು ಸಾದ್ಯವಾದರೆ ಮನೆ ಮಂದಿಯೆಲ್ಲಾ ದಿನ 108 ಬಾರಿ ಹೇಳುತ್ತಾ ಬನ್ನಿ ಸಮಸ್ಯೆ ತಿವ್ರತೆ ದಿನೇ ದಿನೇ ಕಡಿಮೆ ಆಗುತ್ತಾ ಬರತ್ತೆ.. 🙏🙏🌹


ಕೆಲವರಿಗೆ ಸೋರಿಯಾಸಿಸ್ ಸಮಸ್ಯೆ ಇರುತ್ತೆ ಅದಕ್ಕೆ ಸಂಪೂರ್ಣ ಗುಣವಾಗೋ ಔಷದಿ ಸಿಗೋದು ಕಷ್ಟ... ಇದು ಪೂರ್ವ ಜನ್ಮದ ಕರ್ಮದ ಫಲ ಹಾಗು ಸರ್ಪ ದೋಷ ದಿಂದ ಈ ಕಾಯಿಲೆ ಬರುತ್ತೆ

ಪರಿಹಾರ - "ಓಂ ನಮೋ ಭಗವತೇ ಕಾಮರೂಪಿಣಿ ಮಹಾಭಲಾಯ ನಾಗಧೀಪತಯೇ ಅನಂತಾಯ ನಮಃ "

ಈ ಮಂತ್ರ ಹೇಳುತ್ತಾ ಬೇವಿನ ಮರ ಮತ್ತು ಅರಳಿ ಮರದ ಕೆಳಗೆ ನಾಗ ಪ್ರತಿಷ್ಠೆ ಮಾಡಿರುತ್ತಾರೆ ಅಲ್ಲಿ ಹೋಗಿ 3 ತಿಂಗಳು ದಿನ 108 ಪ್ರಧಕ್ಷಿಣೆ ಖಾಲಿ ಹೊಟ್ಟೆಯಲ್ಲಿ ಹಾಕಿದರೆ ಈ ಸಮಸ್ಯೆ ಸಂಪೂರ್ಣ ಗುಣವಾಗುತ್ತೆ.. 🙏🌹


ಕೆಲವು ಗಂಡಂದಿರು ತಮ್ಮ ಹೆಂಡತಿಗೆ ಹೊಡಿಯೋದು ಬಡಿಯೋದು ಮಾಡ್ತಾರೆ ತುಂಬಾ ಕುಡಿದು ಬಂದು ಗಲಾಟೆ ಮಾಡೋದೆಲ್ಲ ಮಾಡ್ತಾರೆ ತಮ್ಮ ಪತ್ನಿಗೆ ಆಗಾಗ ಹೊಡಿಯೋದು ಈ ರೀತಿ ಹಿಂಸೆ ಕೊಡ್ತಾರೆ ಇದಕ್ಕೆ ಪರಿಹಾರ ಏನಂದರೆ ಬೇವಿನ ಮರಕ್ಕೆ ಹೋಗಿ ಪೂಜಿಸಿ ಮೃತ್ಯುಂಜಯ ಮಂತ್ರ ಹೇಳುತ್ತಾ 108 ಬಾರಿ ಪ್ರದಕ್ಷಿಣೆ ಖಾಲಿ ಹೊಟ್ಟೆ ಯಲ್ಲಿ ಹಾಕ್ಬೇಕು... ನಂತರ 10 ರಿಂದ 15 ಬೇವಿನ ಎಲೆಗಳನ್ನು ಟೊಂಗೆ ಸಹಿತ ಕಿತ್ತು ತಂದು ಗಂಡ ಮಲಗುವ ದಿಂಬಿನ ಕೆಳಗಡೆ ಇಡಿ 3 ದಿನ ದಲ್ಲಿ ಗಂಡನ ಮತಿ ಬದಲಾಗುತ್ತೆ... ಹೊಡಿಯೋದು ಬಡಿಯೋದು ನಿಲ್ಲಿಸ್ತಾನೆ ಮತ್ತು ಕುಡಿಯೋದು ನಿಲ್ಲಿಸಬೇಕು ಎಂದ್ರೆ ಒಂದು ನಿಂಬೆಹಣ್ಣಿಗೆ ಭದ್ರಕಾಳಿ ಪ್ರತ್ಯಂಗಿರಾ ಮಂತ್ರದಿಂದ 108 ಬಾರಿ ಮಂತ್ರಿಸಿ ಆ ನಿಂಬೆಹಣ್ಣಿನ ಜ್ಯೂಸ್ ಮಾಡಿ ಕೊಡಿ 7 ದಿನ ಈ ರೀತಿ ಮಾಡಿ ಕುಡಿಯೋದನ್ನ ನಿಲ್ಲಿಸುತ್ತಾರೆ..... (ನೀವು ನಿಂಬೆಹಣ್ಣಿನ ಜ್ಯೂಸ್ ಗೆ ಮಂತ್ರಿಸಿದ್ದು ನಿಮ್ಮ ಗಂಡನಿಂದ ಗುಪ್ತವಾಗಿಡಬೇಕು )


ಹಲವು ಜನ ಕಿಡ್ನಿ ಸಮಸ್ಯೆಯಿಂದ ಬೇಸತ್ತು ಎಲ್ಲೂ ಕೂಡ ಪರಿಹಾರ ಕಾಣದೆ ಡಯಾಲಿಸಿಸ್  ಮಾಡಿಸಿ ಮಾಡಿಸಿ ನೊಂದಿರುತ್ತಾರೆ... ಇದಕ್ಕೆ ಒಂದು ಚಿಕ್ಕ ಮಂತ್ರವಿದೆ ಇದನ್ನು ದಿನ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಚಿನ್ಮದ್ರೆ

 (ಧ್ಯಾನ ಮುದ್ರೆ ) ಧರಿಸಿ ಜಪಿಸುವದರಿಂದ

ಡಯಾಲಿಸಿಸ್ ಮಾಡುವ ಸಂಖ್ಯೆ ಕಡಿಮೆ ಆಗ್ತಾ ಹೋಗತ್ತೆ ವಾರಕ್ಕೆ 2 ಡಯಾಲಿಸಿಸ್ ಇದ್ದರೆ ಕ್ರಮೇಣ ಒಂದಕ್ಕೆ ಇಳಿಯುತ್ತೆ ಹಾಗೆ ಹಂತ ಹಂತವಾಗಿ ತಿಂಗಳಿಗೆ ಒಂದು ಡಯಲಿಸೀಸ್ ಹಾಗೆ ಮುಂದೆ 2 ತಿಂಗಳಿಗೆ ಒಮ್ಮೆ ಆಗತ್ತೆ ಹಾಗೆ ಕ್ರಮೇಣ ನಾರ್ಮಲ್ ಹಂತಕ್ಕೆ ಬರತ್ತೆ.... ನಿಮ್ಮ ದೇಹಕ್ಕೆ ರಕ್ಷಣೆ ಸಿಗುತ್ತೆ...

 ಮಂತ್ರ - "ಓಂ ಲಂ ಲಲಿತಾಭ್ಯೋ ನಮಃ "

               " ಓಂ ವಂ ವರುಣಾಯ ನಮಃ "

ಮುದ್ರೆ - ಚಿನ್ಮದ್ರೆ (ಧ್ಯಾನ ಮುದ್ರೆ )


ಎಷ್ಟೋ ಜನರಿಗೆ ನಾವು ಹಣದ ಹೆಲ್ಪ್ ಮಾಡಿ ಇರ್ತಿವಿ ಆದರೆ ನಮ್ಮ ಕಷ್ಟ ಕಾಲದಲ್ಲಿ ನಮಗೆ ನಾವು ಕೊಟ್ಟ ಹಣ ನಮಗೆ ವಾಪಾಸ್ ಮಾಡೋದೇ ಇಲ್ಲ...

ಪರಿಹಾರ  - "ಓಂ ಕ್ರೀಂ ಕಾಳಿ ಶತ್ರು (ಶತ್ರುವಿನ  ಹೆಸರು ) ಶಮನಮ್ ಕುರು ಕುರು ಪಟ್ "

ಈ ಮಂತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಬೆಳಿಗ್ಗೆ ಸಂಜೆ 108 ಬಾರಿ ಪಟಿಸಿ...


ತಂತ್ರ - ಬಾಳೆ ಗಿಡದ ಬುಡಕ್ಕೆ ಪೂಜೆ ಮಾಡಿ ಯಾರ್ಯಾರು ಯಾವ ಹೆಸರಿನವರು ಎಷ್ಟೆಷ್ಟು ಹಣ ಕೊಡ್ಬೇಕೋ ಅದನ್ನು ಪ್ರಾರ್ಥಿಸಿ ಕೈ ತುಂಬಾ ಮಣ್ಣನ್ನು ಹಿಡಿದು ಇನ್ನೊಮ್ಮೆ ಪ್ರಾರ್ಥಿಸಿ ಅದರ ಮೇಲೆ ಆ ಮಣ್ಣನ್ನು ಸುರಿದು ಬನ್ನಿ ಆಗ ಹಣ ಕೊಡುವವರಿಗೆ ಹಣ ಕೊಡೊ ತನಕ ನಿದ್ರೆ ಬರಲ್ಲ....


ಕೆಲವರಿಗೆ ಹೊರಗಡೆ ಹೋಗ್ಲಿಕ್ಕು ಭಯ ವಾಗುತ್ತೆ ಏನಾದ್ರೂ ತೊಂದ್ರೆ ಆಗತ್ತೆ ಅಂತ ಅಥವಾ ಹೊರಗಡೆ ಹೋದಾಗಲು ಅವರಿಗೆ ಜನರಿಂದ ಅಥವಾ ಇನ್ಯಾವುದಾದ್ರೂ ಕಾರಣದಿಂದ ಎನಾದ್ರೂ ಸಮಸ್ಯೆ ಆಗತ್ತೆ...

ಪರಿಹಾರ  - " ಓಂ ಐಂ ಐಂ ಶ್ರೀಂ ಶ್ರೀಂ ನಮಃ "

                          ಅಥವಾ

                  " ಓಂ ತ್ರಿವಿಕ್ರಮಾಯ ನಮಃ "

ಮೇಲಿನ ಯಾವುದಾದರೂ ಒಂದು ಮಂತ್ರ ವನ್ನು ಹೊರಗಡೆ ಹೋಗುವ ಮುಂಚೆ ಮನೆಯ ಹೊಸ್ತಿಲು ದಾಟುವ ಮುಂಚೆ 11 ಬಾರಿ ಜಪ ಮಾಡಿ ಹೊರಗಡೆ ಹೋಗಿ ಆಗ ನೀವು ವಾಪಸ್ ಮನೆಗೆ ಬರೋವರೆಗೂ ನಿಮಗೆ ತೊಂದ್ರೆ ಆಗಲ್ಲ...


ಕೆಲವು ಜನರು ತಮ್ಮ ಸುತ್ತಲೂ ಯಾವಾಗಲೂ ಒಂದು ದೈವ ಶಕ್ತಿ ರಕ್ಷಣಾ ಕವಚದಂತೆ ಇರಬೇಕು ಎಂದು ಬಾವಿಸುತ್ತಾರೆ...

 ಮಂತ್ರ  - " ಓಂ ನಮೋ ಭಗವತೇ ಶರಭಾಯ"


ಈ ಮಂತ್ರ ಯಾವಾಗಲೂ ಕುಂತಾಗ ನಿಂತಾಗ ಕೆಲಸ ಮಾಡೋ ಸಮಯದಲ್ಲಿ ಯಾವಾಗಲೂ ಜಪಿಸುತ್ತ ಇರಿ... ಆಗ ನೀವು ಸದಾ ದೈವ ರಕ್ಷಣೆ ಯಲ್ಲಿ ಇರುತ್ತೀರಾ...


ನಮಸ್ಕಾರ ಬಂಧುಗಳೇ ಕೆಲವರಿಗೆ ಕೊಟ್ಟ ಹಣ ವಾಪಸ್ ಬಂದಿರುವದಿಲ್ಲ ಮತ್ತು ಮನೆಯಲ್ಲಿ ದಾರಿದ್ರತನವು ಇರುತ್ತದೆ

ಪರಿಹಾರ -  ನಿಮ್ಮ ಮನೆಯ ಅಥವಾ ಊರಿನಲ್ಲಿ ಎಲ್ಲಾದರೂ ಹುತ್ತ ಇದ್ದರೆ ಮೊದಲು ಹುತ್ತಕ್ಕೆ ಪೂಜೆ ಮಾಡಿ ಹುತ್ತದ ಬುಡದಲ್ಲಿ ಒಂದು ಚಂಬು ನೀರನ್ನು ಹಾಕಿ ಕಡ್ಡಿಯಿಂದ ನಿಮಗೆ ಯಾರು ಹಣ ಕೊಡಬೇಕೋ ಅವರ ಹೆಸರು ಬರೆಯಿರಿ ಮತ್ತು ಅವರಿಂದ ಹಣ ಬರಬೇಕು ಎಂದು ಪ್ರಾರ್ಥಿಸಿ 108 ಸುತ್ತು ಪ್ರದಕ್ಷಿಣೆ ಹಾಕಿ ಈ ರೀತಿ 21 ದಿನ ಮಾಡಿ...ಆಗ ನಿಮ್ಮ ಹಣ ಒಮ್ಮೆಲೇ ಸಿಗದಿದ್ದರೂ ಹಂತ ಹಂತವಾಗಿ ಆದ್ರೂ ಸಿಗತ್ತೆ.. ಮನೆಯ ದಾರಿದ್ರವು ದೂರ ಆಗುತ್ತೆ 🙏🙏


ಮುಖದ ಮೇಲೆ ಕೆಲವರಿಗೆ ಬಂಗು ಆಗತ್ತೆ ಬಂಗಿಗೆ ಪರಿಹಾರ..


ಬೆಳಿಗ್ಗೆ ಎದ್ದಕೂಡಲೇ ಹಲ್ಲು ತಿಕ್ಕುವ ಪೂರ್ವದಲ್ಲೆ ನಿಮ್ಮ ಎಂಜಲನ್ನು ನಿಮ್ಮ ಅಂಗೈ ಮೇಲೆ ಹಾಕಿ ಆ ಎಂಜಲನಿಂದ ನಿಮ್ಮ ಮುಖಕ್ಕೆ ಮಸಾಜ ಮಾಡಿಕೊಳ್ಳಿ... ಈ ರೀತಿ 2 ತಿಂಗಳು ಮಾಡಿ

ಮತ್ತು ಬನ್ನಿ ಮರಕ್ಕೆ "ಓಂ ಶಂ ಶನೈಶ್ಚರಾಯ ನಮಃ "ಈ ಮಂತ್ರ ಹೇಳುತ್ತಾ 108 ಸುತ್ತು ಹಾಕಿ ಈ ರೀತಿ 2 ತಿಂಗಳು ಮಾಡಿ... ಇದೆ ಬಂಗಿಗೆ ಪರಿಹಾರ...


ಹಲವರಿಗೆ ಕಾರ್ಯಾಲಯದಲ್ಲಿ ತಮಗಿಂತ ಚಿಕ್ಕವರಿಗೆಲ್ಲ ಬಡ್ತಿ ಸಿಕ್ಕಿದರು ಅವ್ರಿಗೆ ಮಾತ್ರ ಬಡ್ತಿ ಸಿಗುವ ಸಮಯ ಬಂದು ಮೀರಿ ಹೋಗ್ತಾ ಇದ್ರು ಅವರಿಗೆ ಬಡ್ತಿ ಸಿಗಲ್ಲ

ಪರಿಹಾರ - 2 ಚಮಚ ಸಕ್ಕರೆ ಬಲಗೈಲ್ಲಿ ಹಿಡಿದು "ಓಂ ದ್ರಾಂ ಓಂ ಗುರುದತ್ತಾಯ ನಮಃ " ಎಂಬ ಮಂತ್ರ ಹೇಳುತ್ತಾ ಅತ್ತಿ ಮರಕ್ಕೆ 108 ಪ್ರದಕ್ಷಿಣೆ ಹಾಕಬೇಕು.109 ನೇ ಪ್ರದಕ್ಷಿಣೆಗೆ ಸಕ್ಕರೆಯನ್ನು ಮರದ ಬುಡಕ್ಕೆ ಹಾಕಬೇಕು.. ಇದನ್ನು ವ್ಯಕ್ತಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ದಿನ ಉದಾಹರಣೆಗೆ 54 ವಯಸ್ಸಾದರೆ 54 ದಿನ ಬಿಡದೆ ಈ ರೀತಿ ಖಾಲಿ ಹೊಟ್ಟೆಯಲ್ಲಿ ಪ್ರದಕ್ಷಿಣೆ ಹಾಕಬೇಕು... ಇದ್ರಿಂದ ಸಿಗಬೇಕಾದ ಬಡ್ತಿ ಯು ಆದಷ್ಟು ಬೇಗ ಸಿಗುವುದು... 🙏🙏🌹


ತುಂಬಾ ಕೆಟ್ಟ ಕೆಟ್ಟ ಕನಸು ಕೆಲವರಿಗೆ ಬೀಳ್ತಾ ಇರತ್ತೆ ಪದೇ ಪದೇ ಇದೆ ರೀತಿ ಆಗ್ತಾ ಇದ್ದರೆ...

ಪರಿಹಾರ - " ಓಂ ಕಾಳಿ ಕಾಳಿ ಮಹಾಕಾಳಿ

                  ಕೋಲೆ ಕಿನ್ನೆ ಸ್ವಾಹ "

 ಈ ಮಂತ್ರ ಮಲಗುವ ಮುಂಚೆ 21 ಬಾರಿ ಜಪಿಸಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಉತ್ತರಕ್ಕೆ ಕಾಲು ಚಾಚಿ ಮಲಗಿ ದಿನವೂ ಹೀಗೆ ಮಾಡಿ ಯಾವರೀತಿ ಕೆಟ್ಟ ಕನಸು ಬಿಳುವದಿಲ್ಲ...


ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ನೆನಪಿರಲ್ಲ ಗ್ರಹಿಕಾ ಶಕ್ತಿ ಕಡಿಮೆ ಇರತ್ತೆ

ಪರಿಹಾರ  - "ಐಂ ಹ್ರೀಂ ಐಂ ಹ್ರೀಂ ಓಂ ಸರಸ್ವತ್ಯೆ ನಮಃ "

ಮುದ್ರೆ - ಚಿನ್ಮದ್ರೆ (ಧ್ಯಾನ ಮುದ್ರೆ)

ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ 1/2 ಗಂಟೆ ಜಪಿಸಿ...

ಲಾಭ - ಸ್ಮರಣ್ ಶಕ್ತಿ ಅತ್ಯುತ್ತಮ ಮತ್ತು ಗ್ರಹಿಕಾ ಶಕ್ತಿಯ ಬೆಳವಣಿಗೆ...


ಯಾವಾಗಲೂ ಉಗುರು ಕಚ್ಚುವ ಮತ್ತು ಬೆರಳು ಚೀಪುವ ಅಭ್ಯಾಸ ಇರುತ್ತದೆ ಇದೊಂದು ರೀತಿಯ ಮನೋ ವ್ಯಾದಿ ಆಗಿದೆ... ಇದಕ್ಕೆ ಮೆಡಿಕಲ್ ನಲ್ಲಿ ಎಲ್ಲೂ ಮದ್ದಿಲ್ಲ...

ಆದ್ಯಾತ್ಮಿಕ ಪರಿಹಾರ - ಒಂದು ರವಿವಾರ ಯಾರು ಉಗುರು ಕಚ್ಚುತ್ತಾರೋ ಅವರಿಂದ ಕೈ ಉಗುರು ಮತ್ತು ಕಾಲಿನ ಉಗುರು ನೆಲ ಕಟರ್ನಿಂದ ತೆಗಿಸಿ ಅದನ್ನು ಒಂದು ಚಿಕ್ಕ ಪೇಪರನಲ್ಲಿ ಸಂಗ್ರಹಿಸಿ "ಓಂ ಕಾಳಿ ಕಂಗಾಳಿ ಕಿಲಿ ಕಿಲಿ ಸ್ವಾಹ" ಈ ಮಂತ್ರ ಹೇಳುತ್ತಾ ಆ ಪೇಪರ್ ನಲ್ಲಿ ಸಂಗ್ರಹಿಸಿದ ಉಗುರಿನಿಂದ ಮೇಲೆ ಕೊಟ್ಟ ಮಂತ್ರದಿಂದ 108 ಬಾರಿ ಮೇಲಿನಿಂದ ಕೆಳಗೆ 21 ಬಾರಿ ಇಳೆ ತೆಗೆದು ಆ ಉಗುರನ್ನು ತೆಗೆದುಕೊಂಡು ದೂರದ ಪ್ರದೇಶ ದಲ್ಲಿ ಅರ್ಧ ಅಡಿ ಗುಂಡಿ ತೆಗೆದು ಆ ಉಗುರನ್ನು ಮಣ್ಣು ಹಾಕಿ ಮುಚ್ಚಿಬಿಡಿ...ಈ ಸಮಸ್ಯೆ ನಿವಾರಣೆ ಆಗತ್ತೆ.... ಉಗುರು ಕಚ್ಚೋದು ಬೆರಳು ಚೀಪೋದು ಬಿಡ್ತಾರೆ....


ಬಾಲ ಗೃಹನಿವಾರಣೆಯ ಜಪ ಮಾಡಿಸಿಕೊಳ್ಳುವುದು.ಅಥವಾ ಅದಕ್ಕೆ ಸಂಬಂಧ ಪಟ್ಟ ಯಂತ್ರ ಮಾಡಿಸಿಕೊಳ್ಳುವುದು ಅಥವಾ ತಂತ್ರ ಇದಕ್ಕೆ ಪರಿಹಾರ 12 ವರ್ಷದ ತನಕ ಈ ತೊಂದರೆ ಇರುತ್ತೆ ಕೆಲವು ಮಕ್ಕಳಿಗೆ ಇದನ್ನು ಸರಿಯಾಗಿ ಪತ್ತೆ ಹಚ್ಚಿ ಪರಿಹಾರ ಮಾಡಬೇಕು ಕೆಲವು ಸಲ

ಕೆಲವು ಮಕ್ಕಳಿಗೆ ಬಾಲಗೃಹ ದಿಂದ ತುಂಬಾ ತೊಂದರೆ ಯಾಗುವ ಸಂಭವ ಇರುತ್ತದೆ...ಯಾವಾಗ  ಮಗು ಹುಟ್ಟಿದ ದಿನದಿಂದ 12 ನೇ ದಿಂದವರೆಗೂ  ಜ್ವರ, ವಾಂತಿ, ಭೇದಿ, ಬೆಚ್ಚಿ ಬೀಳುವುದು ಮತ್ತು ಬಿಕ್ಕಳಿಕೆ ಇಲ್ಲವೋ ಹಾಗು ನಿರಂತರವಾಗಿ 12 ನೇ ದಿನದವರೆಗೆ ತಾಯಿ ಹಾಲು ಕುಡಿಯುತ್ತಿದೆಯೋ ಅಂತ ಮಗುವಿಗೆ ಸಾಮಾನ್ಯವಾಗಿ ಯಾವುದೇ ಬಾಲಗೃಹ ದೋಷವಿಲ್ಲ ಎಂದು ತಿಳಿಯಬಹುದು..


ಥೈರಾಯಿಡ್ ಸಮಸ್ಯೆ ಇದ್ದವರು ಧೂಮಾವತಿ ಮಂತ್ರ ವನ್ನು ಧೂಮಾವತಿ ಮುದ್ರೆಯೊಂದಿಗೆ ಜಪಿಸಿ... ಪರಿಹಾರವಾಗುವುದು


ಸೋರಿಯಾಸಿಸ್ ಇದ್ದರೆ ಗೋ ಮೂತ್ರಕ್ಕೆ ಚೂರು ಅಗ್ನಿ ಹೊತ್ರಿಯ ಭಸ್ಮ ಬೆರಿಸಿ ರಾತ್ರಿ ಮಲಗ್ಬೇಕಿದ್ರೆ ಆ ಜಾಗದಲ್ಲಿ ಹಚ್ಚಿಕೊಳ್ಳಿ ಒಂದು ತಿಂಗಳು ಈ ರೀತಿ ಮಾಡಿ... ಸಂಪೂರ್ಣ ಗುಣವಾಗತ್ತೆ 🙏🙏🌹


ರಾತ್ರಿಯಲ್ಲಿ ಯಾವಾಗಲು ಸರಿಯಾಗಿ ನಿದ್ದೆ ಬರಲ್ಲ ಅವರು ಸಂಪೂರ್ಣ ಸುಖವಾಗಿ ನಿದ್ರೆ ಬೀಳ್ಬೇಕು ಎಂದ್ರೆ ರಾತ್ರಿ ಊಟ ಆದ  ನಂತರ ಒಂದು ಲೋಟ ಬಿಸಿ ಹಾಲಿಗೆ ಗಸ ಗಸೆಯನ್ನು ಪುಡಿ ಮಾಡಿ ಹಾಲಿಗೆ ಬೆರೆಸಿ ಕುಡಿಯಿರಿ ಮತ್ತು ಮಲಗುವ ಮುಂಚೆ ನಿಮ್ಮ ಹಾಸಿಗೆಯ ಮೇಲೆಯೇ ಚಿನ್ಮದ್ರೆ ಹಾಕಿ ಕುಳಿತು ಒಂದು 20 ನಿಮಿಷ "ಓಂ " ಎಂಬ ಮಂತ್ರ ದೀರ್ಘವಾಗಿ 21 ಸಲ ಹೇಳ್ಬೇಕು ಆಮೇಲೆ ನಿದ್ರೆ ಮಾತ್ರೆ ತೆಗೆದುಕೊಂಡು ಮಲಗಿದರೆ ಯಾವ ರೀತಿ ನಿದ್ರೆ ಬರುತ್ತೋ ಆ ರೀತಿಯಲ್ಲಿ ನಿದ್ರೆ ಬರುತ್ತೆ.... ಧನ್ಯವಾದಗಳು 🙏🙏🌹


ತುಂಬಾ ಜನರಿಗೆ ಎಷ್ಟು ಪ್ರಯತ್ನ ಪಟ್ಟರು ಉದ್ಯೋಗ ಸಿಗಲ್ಲ

ಪರಿಹಾರ ತಂತ್ರ - ದಿನ ಬೆಳಿಗ್ಗೆ ಸ್ನಾನ ಮಾಡಿ ಬಿಳಿ ಎಕ್ಕೆ ಗಿಡಕ್ಕೆ ಒಂದು ಚಂಬು ನೀರು ಹಾಕಿ ನಿಮಗೆ ಹೇಗೆಬರುತ್ತೋ ಹಾಗೆ ಪೂಜೆ ಮಾಡಿ ಕೆಲಸದ ಬಗ್ಗೆ ಪ್ರಾರ್ಥಿಸಿ ಒಂದು ಬಿಳಿ ಎಕ್ಕದ ಗಿಡದ ಎಲೆ ಕೊಯ್ದು ಅದರ ಮೇಲೆ "ಓಂ  ಕ್ಲೀಂ ಪದ್ಮಾವತಿಯೇ ನಮಃ " ಎಂದು ಬರೆದು ರಾತ್ರಿ ದಿಂಬಿನ ಕೆಳಗಡೆ ಇಟ್ಟು ಮಲಗಿ ಇದೆ ರೀತಿ 21 ದಿನ ಮಾಡಿ 21 ಎಲೆ ಆಗುತ್ತೆ.... ಆಗ ಕೆಲಸಕ್ಕೆ ಇದ್ದ ತೊಂದರೆ ದೂರವಾಗಿ ಸೂಕ್ತ ಕೆಲಸ ಸಿಗುವುದು


* ಮನೆಯಲ್ಲಿ ಸದಾ ಕಿರಿ ಕಿರಿ ಅನಾರೋಗ್ಯ ಒಬ್ಬರಿಗೆ ಕಂಡರೆ ಒಬ್ಬರಿಗೆ ಆಗಲ್ಲ ಕಲಹ ಅಶಾಂತಿ ಮನೆ ಬಿಟ್ಟು ಹೋಗುವಷ್ಟು ಅಶಾಂತಿ ಇರತ್ತೆ

ಪರಿಹಾರ - ತಂತ್ರ - 2 ಅಮಾವಾಸ್ಯೆ 2 ಹುಣ್ಣಿಮೆ ಮನೆಗೆ ಹಸು ಮತ್ತು ಕರು ವನ್ನು ಎರಡನ್ನು ಮನೆಗೆ ತಂದು ಅದಕ್ಕೆ ಪೂಜಿಸಿ ಗೋದಿ ಹಿಟ್ಟು ತುಪ್ಪ ಬೆಲ್ಲವನ್ನು ಪುಡಿ ಮಾಡಿ ಬೆರೆಸಿ ಅವನ್ನೆಲ್ಲ ಬೆರೆಸಿ ಅವುಗಳಿಗೆ ತಿನ್ನಲು ಕೊಡಿ ಹಾಗು ಅವುಗಳ ಬಾಲ ಮತ್ತು ಬಾಲ ಗುಚ್ಚ ಮುಟ್ಟಿ 3 ಅಥವಾ 5 ಪ್ರಧಾಕ್ಷಿಣೆ ಹಾಕಿ...

* ಮನೆಯಲ್ಲಿ ಸದಾ ತುಪ್ಪದ ದೀಪ ಹಚ್ಚಿ.

* " ಓಂ ಕ್ಲೀಂ ಕಾಮದೇವಾಯ

     ಸರ್ವ ಜನ ಪ್ರಿಯಾಯ ನಮಃ "

ಈ ಮಂತ್ರ ದಿನವೂ ಜಪಿಸಿ.......ಕಲಹ, ಅಶಾಂತಿ, ಒಬ್ಬರಿಗೆ ಕಂಡರೆ ಒಬ್ಬರಿಗೆ ಆಗದಿರುವುದು ಈ ಸಮಸ್ಯೆ ದೂರವಾಗಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯತ್ತೆ ಹಾಗು ಮೇಲಿನ ಸಮಸ್ಯೆ ಎಲ್ಲವು ದೂರವಾಗುತ್ತೆ...


" ಓಂ ಹೌಂ ಕಾಳಿ ಮಹಾಕಾಳಿ ಕಿಲಿ ಕಿಲಿ ಪಟ್ ಸ್ವಾಹ"

ಈ ಮಂತ್ರದಿಂದ ಒಂದು ನಿಂಬೆಹಣ್ಣು 21 ಸಲ ಅಭಿ ಮಂತ್ರಿಸಿ ಅಮವಾಸ್ಯೆ ಅಥವಾ ಹುಣ್ಣಿಮೆಗೆ ಯಾವ ಮಕ್ಕಳು ಹೇಳಿದ ಮಾತು ಕೇಳೋದಿಲ್ಲ ಮತ್ತು ಒರಟುತನ ಆಲಸ್ಯ ಹಾಗು ಮೊಂಡುತನ ಕೋಪ ಇವೆಲ್ಲ ಇರುತ್ತೋ ಅವರಿಗೆ ಮಂತ್ರಿಸಿದ ನಿಂಬೆಹಣ್ಣನ್ನು 21 ಸಲ ಇಳೆ ತೆಗೀಬೇಕು ಇಳೆ ತೆಗೆಬೇಕಾದರೂ ಮೇಲಿನ ಮಂತ್ರ ಹೇಳುತ್ತಾ ತೆಗಿಯಬೇಕು..


ಯಾರಿಗೆ ಮಾಡುವಂತ ಉದ್ಯಮದಲ್ಲಿ ತುಂಬಾ ನಷ್ಟ ಆಗುತ್ತಾ ಇದೆಯೋ ಅವರು ಕುಲದೇವರಿಗೆ ಹೋಗಿ ಅಲ್ಲಿ ಉರುಳು ಸೇವೆ ಮಾಡಿ ಮತ್ತು ದೇವರಿಗೆ ಅಕ್ಕಿ ಅಥವಾ ಗೋದಿ ಅಥವಾ ಬೆಲ್ಲ ತುಲಭಾರ ಸೇವೆ ನೀಡಿದರೆ ಉದ್ಯಮದಲ್ಲಿ ಯಶಸ್ಸು ಲಾಭ  ಖಂಡಿತವಾಗಿಯೂ ಕಾಣುವಿರಿ


 ಪ್ರತಾಪಾಂಜನೇಯ ....:

ಕೆಲವರು ಒಬ್ಬೊಬ್ಬರೇ ಮಾತಾಡಿಕೊಳ್ಳುವುದು ಹಾಗು ಮನಸ್ಸಿನಲ್ಲಿ ಯಾರೋ ಮಾತಾಡಿದ ಹಾಗೆ ಆಗುತ್ತೆ ಅಂತ ಹೇಳ್ತಾರೆ ಮತ್ತು ಯಾರೋ ನನ್ನ ಹತ್ತಿರದಿಂದ ಸುಳಿದು ಹೋಗುವ ಅನುಭವ ಆಗುತ್ತದೆ ಎನ್ನುತ್ತಾರೆ... ಮತ್ತು ಮನಸ್ಸಿನಲ್ಲಿ ಏನೋ ಒಂಥರಾ ಗಾಬರಿ ಗಾಬರಿ ಆದ ಅನುಭವ ಆಗತ್ತೆ ಅಂತ ಹೇಳ್ತಾರೆ ಇದಕ್ಕೆ ವೈದ್ಯಕೀಯ ವಾಗಿ ಉತ್ತರ ಕೊಡಬೇಕೆಂದರೆ ಸ್ಕಿಸೋಪರ್ನಿಯ ಎಂದು ಕರೆಯುತ್ತಾರೆ...ಆದ್ಯಾತ್ಮಿಕ ವಾಗಿ ಇದನ್ನ ಪ್ರೇತಭಾದೆ ಎಂದು ಹೇಳುತ್ತಾರೆ... ಇದಕ್ಕೆ ಪರಿಹಾರ ಎಂದರೆ ಯಾವುದಾದರೂ ಆಂಜನೇಯ ಅಥವಾ ಲಕ್ಷ್ಮಿನರಸಿಂಹ ದೇವಸ್ಥಾನ ಕ್ಕೆ ಖಾಲಿ ಹೊಟ್ಟೆಯಲ್ಲಿ ಹೋಗಿ ಬೆಳಿಗ್ಗೆ 108 ಸುತ್ತು 48 ದಿನ ಅಂದರೆ ಒಂದು ಮಂಡಲ ಪರ್ಯಂತ ದಿನ 108 ಪ್ರದಕ್ಷಿಣೆ ಹಾಕಬೇಕು ಆಗ ನಿಮ್ಮಲಾದ ಬದಲಾವಣೆ ನಿಮಗೆ ಅನುಭವ ಕ್ಕೆ ಬರುತ್ತೆ... ಆ ಸಮಸ್ಯೆಯಿಂದ ಭಾಧಿತ ವ್ಯಕ್ತಿಯು ಹೊರಬರುತ್ತಾನೆ... 🌹🌹🙏 🙏

***


No comments:

Post a Comment