SEARCH HERE

Friday, 1 October 2021

ಸೋಯಾಬೀನ್

 ಸೋಯಾಬೀನ್

ನಾವು ತಿನ್ನುವ ಅನೇಕ ಪದಾರ್ಥಗಳಲ್ಲಿ ವಿಟಮಿನ್ ಇರುತ್ತವೆ. ಅದರಲ್ಲಿ ಸೋಯಾ ಬೀನ್ ಕೂಡ ಒಂದಾಗಿದ್ದು, ಮಕ್ಕಳಿಗೆ-ವೃದ್ಧರಿಗೆ ಎಲ್ಲರಿಗೂ ಸೋಯಾಬಿನ್ ನಿಂದ ಮಾಡುವ ಅಡುಗೆ ಅಚ್ಚುಮೆಚ್ಚು ಆಗಿದ್ದು ಇದರಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳು  ಅಡಗಿವೆ.ಸೋಯಾಬೀನ್ ನಲ್ಲಿ ಆಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಯಾ ಬೀನ್ ನಲ್ಲಿ ವಿಟಮಿನ್ ಡಿಯಲ್ಲಿ ಸಮೃದ್ಧವಾಗಿದೆ. 100 ಗ್ರಾಂ ಸೋಯಾ ಬೀನ್ ಸುಮಾರು 13 ಗ್ರಾಂ ಪ್ರೊಟೀನ್ ಹೊಂದಿರುತ್ತದೆ. ನೈಸರ್ಗಿಕವಾಗಿ ದೇಹದಲ್ಲಿ ಪ್ರೊಟೀನ್ ಮಟ್ಟವನ್ನು ಹೆಚ್ಚಿಸಬೇಕು ಎನ್ನುವವರು ನಿಯಮಿತವಾಗಿ ಆಹಾರಗಳಲ್ಲಿ ಸೋಯಾ ಬೀನ್ ಬಳಸುವುದು ಒಳ್ಳೆಯದು.

ಸೋಯಾಬೀನ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ನೀವು ಅನೇಕ ರೋಗಗಳಿಂದ ದೂರವಿರಬಹುದು. ಸೋಯಾಬೀನ್‌ನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಮೊಟ್ಟೆ, ಹಾಲು ಮತ್ತು ಮಾಂಸದಲ್ಲಿ ಕಂಡುಬರುವ ಪ್ರೋಟೀನ್‌ಗಿಂತ ಹೆಚ್ಚಾಗಿದೆ. ಇದಲ್ಲದೆ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಇ, ಖನಿಜಗಳು ಮತ್ತು ಅಮೈನೋ ಆಮ್ಲಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ದೇಹದ ವಿವಿಧ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ವಿಶೇಷವೆಂದರೆ ದೈಹಿಕ ಬೆಳವಣಿಗೆ, ಚರ್ಮದ ತೊಂದರೆಗಳು ಮತ್ತು ಕೂದಲಿನ ಸಮಸ್ಯೆಗಳಿಗೆ ಸೋಯಾಬೀನ್ ಬಹಳ ಉಪಯೋಗಕರವಾಗಿದೆ. ಇವೆಲ್ಲದರ ಹೊರತಾಗಿ, ಸೋಯಾಬೀನ್‌ನಿಂದ ಅನೇಕ ಪ್ರಯೋಜನಗಳಿವೆ. ಇಂದು ನಾವು ಈ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಸೋಯಾಬೀನ್ ತಿನ್ನುವುದರಿಂದ ಪ್ರಯೋಜನಗಳು :-

1.ಸೋಯಾಬೀನ್ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ :

ಸೋಯಾಬೀನ್ ಸೇವಿಸುವುದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ತಡೆಯಬಹುದು. ಸೋಯಾಬೀನ್‌ನಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್‌ಗಳು ಅನೇಕ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತವೆ. ಇದು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕೋಶಗಳು ಬೆಳೆಯದಂತೆ ತಡೆಯುತ್ತದೆ. ಸೋಯಾಬೀನ್ ನಲ್ಲಿರುವ ನಾರಿನಂಶವು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಸೋಯಾಬೀನ್ ತಿನ್ನಲು ಸಹ ಶಿಫಾರಸು ಮಾಡುತ್ತಾರೆ.

2.ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ :

ನೀವು ಯಾವುದೇ ಮಾನಸಿಕ ಕಾಯಿಲೆ ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ನೀವು ಸೋಯಾಬೀನ್ ಅನ್ನು ತಪ್ಪದೇ ಸೇರಿಸಿ. ಸೋಯಾಬೀನ್ ಮಾನಸಿಕ ಸಮತೋಲನವನ್ನು ಸರಿಪಡಿಸುವ ಮೂಲಕ ಮನಸ್ಸನ್ನು ವೇಗಗೊಳಿಸುತ್ತದೆ.

3.ಮೂಳೆಗಳನ್ನು ಬಲಪಡಿಸುತ್ತದೆ :

ವಿಟಮಿನ್ ಮತ್ತು ಖನಿಜಗಳು ಸೋಯಾಬೀನ್ ನಲ್ಲಿ ಕಂಡುಬರುತ್ತವೆ. ಇದಲ್ಲದೆ ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ಸೆಲೆನಿಯಮ್ ಮತ್ತು ಸತುವು ಸಹ ಇದರಲ್ಲಿ ಕಂಡುಬರುತ್ತದೆ. ಈ ಎಲ್ಲಾ ಪೋಷಕಾಂಶಗಳು ದೇಹದ ಎಲುಬುಗಳನ್ನು ಬಲಪಡಿಸುವಲ್ಲಿ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆಗೆ ಸೋಯಾಬೀನ್ ಸೇವನೆಯು ಅತ್ಯುತ್ತಮ ಪರಿಹಾರವಾಗಿದೆ.

4.ಮಧುಮೇಹದಲ್ಲಿ ಪ್ರಯೋಜನಕಾರಿ :

ಸಕ್ಕರೆ ಭರಿತ ಆಹಾರವನ್ನು ಸೇವಿಸುವುದರಿಂದ ಮಧುಮೇಹದ  ಸಮಸ್ಯೆ ಹೆಚ್ಚಾಗುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಆಹಾರದ ವರ್ಗದಲ್ಲಿ ಇದನ್ನು ಎಣಿಸಲಾಗುತ್ತದೆ, ಇದರಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬುಗಳಿವೆ. ಆದ್ದರಿಂದ, ಸೋಯಾಬೀನ್ ಸೇವನೆಯು ಮಧುಮೇಹದಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದರಲ್ಲಿ ಕಂಡುಬರುವ ಪ್ರೋಟೀನ್ ಗ್ಲೂಕೋಸ್ ಅನ್ನು ನಿಯಂತ್ರಿಸುತ್ತದೆ.

5.ಹೃದ್ರೋಗಗಳನ್ನು ತಡೆಯುತ್ತದೆ : 

ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ, ನಂತರ ಪ್ರತಿದಿನ ಸೋಯಾಬೀನ್ ತಿನ್ನಿರಿ. ರಕ್ತದೊತ್ತಡವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಹೃದ್ರೋಗದ ಸಂದರ್ಭದಲ್ಲಿ ಸೋಯಾಬೀನ್ ತಿನ್ನಲು ಸಲಹೆ ನೀಡಲಾಗುತ್ತದೆ. 

6.ಮಹಿಳೆಯರಿಗೆ ಪ್ರಯೋಜನಕಾರಿ :

ಸೋಯಾಬೀನ್ ಮಹಿಳೆಯರಿಗೆ  ತುಂಬಾ ಒಳ್ಳೆಯದು. ಸೋಯಾಬೀನ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಮಹಿಳೆಯರಲ್ಲಿ ಮೂಳೆ ದುರ್ಬಲಗೊಳ್ಳುವ ಆಸ್ಟಿಯೊಪೊರೋಸಿಸ್ ಅಪಾಯವನ್ನು ತಡೆಯಬಹುದು. ಆದಾಗ್ಯೂ ಗರ್ಭಿಣಿಯರು ವೈದ್ಯರ ಸಲಹೆಯ ಪ್ರಕಾರ ಸೋಯಾಬೀನ್ ಬಳಸಬೇಕು.

7.ಕೂದಲಿನ ಆರೋಗ್ಯ: ಸೋಯಾಬೀನ್ ಕೂದಲಿಗೆ ಚಿಕಿತ್ಸಕವಾಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಕೂದಲು ಉದುರುವಿಕೆ, ಕೂದಲು ಒಣಗುವುದು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು. ಸೋಯಾಬೀನ್ ಕೂದಲಿನ ವಿನ್ಯಾಸವನ್ನು ಉತ್ತಮಪಡಿಸುವುದು ಮತ್ತು ಸ್ಥಿತಿಸ್ಥಾಪಕವನ್ನು ಒದಗಿಸುವುದು.

8.ರೋಗ ನಿರೋಧಕ ಶಕ್ತಿ: ಸೋಯಾದಲ್ಲಿರುವ ಪೆಪ್ಟೈಡ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುವಂತೆ ಶಕ್ತಿ ನೀಡುತ್ತದೆ. ಇನ್ನಿತರ ಪದಾರ್ಥಗಳಲ್ಲಿ ಲಭ್ಯವಿರದ ವಿಟಮಿನ್ ಮತ್ತು ಖನಿಜಾಂಶಗಳನ್ನೂ ಸೋಯಾ ಸೇವನೆಯಿಂದ ಪಡೆಯಬಹುದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಿಸಿ ಶುದ್ದೀಕರಣಗೊಳಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದವರಿಗೂ ಸೋಯಾ ಹೆಚ್ಚು ಪರಿಣಾಮಕಾರಿ

9.ಚರ್ಮದ ಆರೋಗ್ಯ ರಕ್ಷಣೆ: ಸೋಯಾಬೀನ್ ನ ಪೇಸ್ಟ್ ನ್ನು ಹಚ್ಚಿಕೊಂಡರೆ ಆಗ ಇದರಿಂದ ಚರ್ಮಕ್ಕೆ ಮೊಶ್ಚಿರೈಸ್ ಸಿಗುವುದು ಮತ್ತು ಚರ್ಮವು ನಯವಾಗುವುದು. ಚರ್ಮದಲ್ಲಿ ಇರುವಂತಹ ಹೆಚ್ಚುವರಿ ಎಣ್ಣೆಯಂಶವನ್ನು ಹೊರಗೆ ಹಾಕಬೇಕಿದ್ದರೆ ಆಗ ನೀವು ಸೋಯಾಬೀನ್ ಬಳಕೆ ಮಾಡಿ.

10.ಜ್ಞಾಪಕ ಶಕ್ತಿ ಹೆಚ್ಚಳ: ಸೋಯಾದಲ್ಲಿರುವ ಲೆಸಿತಿನ್ ಅಂಶ ಜ್ಞಾಪಕ ಶಕ್ತಿಯನ್ನು ಅಧಿಕಗೊಳಿಸಿ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ. ಸೋಯಾ ದೇಹಕ್ಕೆ, ಮೆದುಳಿಗೆ ಎಲ್ಲ ರೀತಿಯಿಂದಲೂ ಅನೇಕ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ಮಿತವಾಗಿ ಸೋಯಾ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

11.ಕೊಲೆಸ್ಟ್ರಾಲ್ ಕಡಿಮೆ ಮಾಡುವುದು: ಸೋಯಾದಲ್ಲಿ ವಿಶೇಷವಾದ ಐಸೊಫ್ಲೇವಾನ್ಸ್ ಆಂಟಿಯಾಕ್ಸಿಡಂಟ್ ಜೀವಕಣಗಳನ್ನು ಸಂರಕ್ಷಿಸುವುದಲ್ಲದೆ ವಯಸ್ಸಿಗೆ ಮುನ್ನವೇ ಸುಕ್ಕು ಮೂಡುವುದನ್ನು ತಡೆಯುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲನ್ನೂ ಕರಗಿಸುತ್ತದೆ.

12. ತೂಕ ಇಳಿಕೆಗೆ ಸಹಕಾರಿ: ಸೋಯಾಬೀನ್‌ನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ತೂಕ ಇಳಿಕೆಗೆ ಪ್ರಮುಖವಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು. ಅಲ್ಲದೆ ಈ ಬೀನ್‌ ತಿನ್ನುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ. ಇದರಿಂದ ತೂಕ ಇಳಿಕೆಯಲ್ಲಿ ಸಹಕಾರಿ.

 (ಮಾಹಿತಿ ಸಂಗ್ರಹ) 

***

 

No comments:

Post a Comment