SEARCH HERE

Friday, 1 October 2021

ಶುಭಕೃತ್ ನಾಮ ಸಂವತ್ಸರ ಪಂಚಾಂಗ 2022-2023 SHUBHAKRUT nama samvatsara panchanga calender 2022-2023

 


panchanga by Uttaradi Mutt

click

SHOBHAKRUT 2023-2024 PANCHANGA



click

2022-2023 SHUBHAKRUT SAMVATSARA 

***



ಯುಗಾದಿ ಎಂದರೇನು ?


ಯುಗ + ಆದಿ = ಯುಗಾದಿ. ಯುಗದ ಆರಂಭ ದಿನ


ಕಲಿಯುಗದ ಆರಂಭ ದಿನ


Yuga + aadi  = Yugadi – Meaning starting day  of yuga.   i.e.,  Yuga  = era,      Aadi = beginning.


It is the starting day of Kaliyuga.


Kali Yuga began on Feb 20, midnight 3102 BC.   Kaliyuga started the day when Sri Krishna paramathma finished his avatara of dusta jana bhanjana at Dwaraka and at the same time Duryodhana breathed his last.


There are 4 yugadees.


Vaishaka Shukla Triteeya – Tretayuga

Bhadrapada Krishna Trayodashi – Kaliyuga

Kartika Shukla Navami – Krutayuga

Maga Shukla pournami – Dwaparayuga

(Brahma did the srusti of this world in suryodaya kaala on Chaitra Shukla Paadya – that is why it is termed Yugadi)


ಬ್ರಹ್ಮ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯ ದಿನ ಆರಂಭಿಸಿದ್ದರಿಂದ ಯುಗಾದಿ.


Yugadi as per Kaliyuga starts from Chaitra Shudda Paadya (Vasanta Rutu) “Samvatsara” means varsha, i.e., year.  As per Hindu tradition, there are 60 samvatsaraas, each has different names. As per pouranika belief, we are in the 51st year of Chaturmukha Brahma.   One day of Chaturmukha brahma =   chaturyuga sahasraani brahmaNO dinamuchyatE – 4 Yugachakras to be rotated 1000 times.    One time rotation of yugachakra would be 4320000 years.  In Brahma’s one morning, there will be 14 manvantaraas.  Now, we are in the seventh manvantara, the Vaivasvata Manvantara.  Out of 432000 years, only 5122 years have been completed and we are in the 5123rd year.  We are in the 1944 Shaalivaahana Shaka.  That is a shaka based on the date of founding of the empire by Shalivahana,   The initiation of the era known as Shalivahana Saka to celebrate his victory against the Sakas in the year 78AD.


On this day, we have to get up at Arunodayakala itself (daily we have to get up at Arunodaya kaala) with bhagavannamasmarane – we have to take abhyanjana snaana.    We have to get the idols of Srihari with Abhyanjana snaana  using Oil and seegepudi (sheekakai).    After doing the same the remaining portion of oil and seegepudi to be used for our oil bath.


*We must have the smarane of 

sapta chiranjeevigalu* –


ashwathaamaa balirvyaasa: hanUmaanscha vibhIShaNa: |

kRupa: parashuraamaScha saptaitE chiranjIvina: |

अश्वत्तामा बलिर्व्यास: हनूमांश्च विभीषण: । 

कृप: परशुरामश्च सप्तैते चिरंजीविन: ।

ಅಶ್ವತ್ತಾಮಾ ಬಲಿರ್ವ್ಯಾಸ: 

ಹನೂಮಾಂಶ್ಚ ವಿಭೀಷಣ: |

ಕೃಪ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |

After this, we have to do the vishesha pooja Then we must have the panchangashravana brahmana mukhena.


If in the morning it is not possible, then we can do the same in the evening also.  We will get the punya of Gangasnaanadhi punya with the panchanga shravana


Bevu bella  Samarpane –    During Naivedya we must do the samarpana of Bevu-bella (nimbaka dala) and after samarpana to Srihari, Lakshmidevaru, Mukyapraanadigalu, we have to take that Bevu – bella by chanting the following mantra


ಬೇವು ಬೆಲ್ಲ ಸ್ವೀಕಾರ ಮಂತ್ರ 


shataayurvajradEhaaya sarvasampatkaraaya cha |

sarvaariShTavinaashaaya nimbakadaLabhakShaNam |

शतायुर्वज्रदेहाय सर्वसंपत्कराय च । 

सर्वारिष्टविनाशाय निंबकदळभक्षणम् ।


ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |


Meaning – With the bhakshana of Nimbaka dala (bevu-bella, Our body will be fit and strong as a Diamond and it is sarvaarista naashaka.  It raises our ayassu.)

Ingredients required – Jaggery, Bevu (neem), water,


How to prepare? – We have to clean the neem leaves, grind with a bit of water and mix jiggery into it,   Bevu-bella mixture is ready.   This we have to take after taking Theertha on the Yugadi Day.


Bevu or Neem leaf preparation symbolically represents the different facets of life – sweet and bitter experiences of life.  Bevu Bella is just a simple mixture of fresh neem leaves and unprocessed broken jaggery.  It ls symbolic to  welcome the new year by first taking a mixture of neem flowers (Bevu) and jaggery  (bella),  which represents that we treat the bitterness and sweetness of life alike. Its significance is that life is a mixture of joys and sorrows and we should accept both in the right spirit.


Why is  Panchanga shravana required?

ಪಂಚಾಂಗ ಶ್ರವಣ ಫಲ


Panchanga = 5 angaas = 

 tithi (day)+ Vaara (ವಾರ) + Nakshatra (star) + Yoga + Karana.


By knowing the Tithi for the day - We will get wealth (shriya)

By knowing the "Week" for the day - We will have vruddhi in ayushya

By knowing the "Nakshatra" - Our sins will be destroyed

By knowing the "Yogas" -  "Rogaas (diseases) will be removed"

By knowing the "Karana" - Karyasiddi


In this way the panchanga shravana brings us good to every one who hears/reads :


ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ |

ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗನಿವಾರಣಂ |

ಕರಣಾತ್ಕಾರ್ಯಸಿದ್ಧಿಂ ಚ ಪಂಚಾಂಗ ಫಲಮುತ್ತಮಂ |

ಯ:ಶೃಣೋತಿ ಮಧುಶುಕ್ಲಪಕ್ಷಕೇ ವರ್ಷನಾಥ ಸಚಿವಾದಿಕಂ ಫಲಂ |


ಪ್ರಾಪ್ನೋಯಾದ್ದುರಿತ ಮುಕ್ತವಿಗ್ರಹಶ್ಚ ಆಯುರರ್ಥಮತುಲಂ ಯಶಸ್ಸುಖಂ |

ಆಯುರ್ವೃದ್ಧಿಂ ಪುತ್ರಪೌತ್ರಾಭಿವೃದ್ಧಿಂ 

ನಿತ್ಯಾರೋಗ್ಯಂ ಸಂಪದಂಚಾನಪಾಯಾಂ |

ಅಚ್ಚಿನಾನಾಮುತ್ಸವಾನಾಮವಾಪ್ತಿಂ 

ಯಚ್ಚಂತ್ಯೇತೇ ವತ್ಸರಾಧೀಶ ಮುಖ್ಯಾ: |


पंचांग श्रवण फल

तिथेश्च श्रियमाप्नोति वारादायुष्यवर्धनं ।

नक्षत्राद्धरतेपापं योगाद्रोगनिवारणं ।

करणात्कार्यसिद्धिं च पंचांग फलमुत्तमं ।

य:शृणोति मधुशुक्लपक्षके वर्षनाथ सचिवादिकं फलं । प्राप्नोयाद्दुरित मुक्तविग्रहश्च आयुरर्थमतुलं यशस्सुखं । आयुर्वृद्धिं पुत्रपौत्राभिवृद्धिं नित्यारोग्यं संपदंचानपायां । अच्चिनानामुत्सवानामवाप्तिं यच्चंत्येते वत्सराधीश मुख्या: ।

***


2022-2023 predictions

ಯುಗಾದಿ - 

ಶ್ರೀಮತ್ಪುಣ್ಯತರಾಖ್ಯ ಶೋಭನದಿನೇ ಸೂರ್ಯೋದಯಾ ನಂತರೇ 

ತೇ ವಕ್ಷಾಮ್ಯಹಮಾಶ್ರಿತೋ ಮರುತರಃ ಕೋದಂಡ ದೀಕ್ಷಾಗುರುಃ | 

ಮೇಘಶ್ಯಾಮಲರಾಮ ಚಂದ್ರ ಕರುಣಾ ಸಿಂಧೋ ರಘೂಣಾಂ ಪತೇ 

ಹೇ ಸೀತಾಧಿಪ ಮಂಗಲಂ ಪ್ರತಿದಿನಂ ಪಂಚಾಂಗಂ ಆಕರ್ಣ್ಯತಾಂ ||೧||


ಆಯುರ್ದ್ರೋಣಸುತೇ ಶ್ರೀಯಂ ದಶರಥೇ ಶತೃಕ್ಷಯಂ ರಾಘವೇ 

ಐಶ್ವರ್ಯಂ ನಹುಷೇ ಗತಿಸ್ತು ಪವನೇ ಮಾನಂ ಚ ದುರ್ಯೋದನೇ |

ಶೌರ್ಯಂ ಶಾಂತನಯೇ ಬಲಂ ಹರಿಹರೇ ಸತ್ಯಂ ಚ ಕುಂತೀಸುತೇ 

ವಿಜ್ಞಾನೇ ವಿಹರೇ ಭವಂತಿ ಭವತಾಂ ಕೀರ್ತಿಸ್ತು ನಾರಾಯಣೇ ||೨||


ಶ್ರೀ ಮಹಾವಿಷ್ಣುವಿನ ನಾಭಿಕಮಲದಲ್ಲಿ  ಜನಿಸಿದ ಬ್ರಹ್ಮದೇವರ ಆಯುಷ್ಯವು ನೂರು ವರ್ಷ. ಅದರ  ಅರ್ಧ ಅಂದರೇ ಐವತ್ತು ವರ್ಷಗಳು ಕಳೆದು ಈಗ ಐವತ್ತೊಂದನೇ ವರ್ಷದ ಪ್ರಥಮ ಮಾಸದ, ಶುಕ್ಲ ಪಕ್ಷದ, ಪ್ರತಿಪದ ತಿಥಿಯಲ್ಲಿ ಹದಿಮೂರು ಘಟಿ ನಾಲ್ವತ್ತೆರಡು ಪಳ, ಮೂರು ಅಕ್ಷರಗಳು ಪೂರ್ಣವಾಗಿವೆ. ನಾಲ್ಕು ಯುಗಗಳ ಒಂದು ಸಾವಿರ ಚಕ್ರವಾದಾಗ ಬ್ರಹ್ಮ ದೇವರಿಗೆ ಒಂದು ಹಗಲು. ಅದೇ ರೀತಿ ಒಂದು ರಾತ್ರಿಯೂ ಇರುವದು.


ಕೃತಯುಗದ ೧೭ಲಕ್ಷ, ೨೮ಸಾವಿರ ವರ್ಷಗಳು, ತ್ರೇತಾಯುಗದ ೧೨ಲಕ್ಷ, ೯೬ ಸಾವಿರ ವರ್ಷಗಳು, ದ್ವಾಪರ ಯುಗದ ೮ ಲಕ್ಷ ೬೪ ಸಾವಿರ ವರ್ಷಗಳು ಪೂರ್ಣಗೊಂಡಿವೆ. ಕಲಿಯುಗಕ್ಕೆ ೪ಲಕ್ಷ ೩೨ ಸಾವಿರ (೪,೩೨,೦೦೦). ವರ್ಷಗಳಿವೆ. ಈ ನಾಲ್ಕೂ ಯುಗಕಾಲದ ಸಂಖ್ಯೆಯನ್ನು ಕೂಡಿಸಿದರೆ ೪೩,೨೦,೦೦೦.   


ಇಲ್ಲಿ ೪, ೩, ೨ ಮತ್ತು ಸೊನ್ನೆ ಮಹತ್ವದ ಸಂಖ್ಯೆಗಳಾಗಿವೆ.  ೪ ಚತುರ್ವಿಧ ಪುರುಷಾರ್ಥವನ್ನೂ, ವೇದಗಳ ನ್ನೂ ಹೇಳಿದರೆ ೩ ತ್ರಿಕಾಲವನ್ನೂ, ತ್ರಿಕರಣಗಳನ್ನೂ ಹೇಳುತ್ತದೆ. ೨ ಆತ್ಮ ಪರಮಾತ್ಮ, ಅಂತರ್ಬಾಹ್ಯ ವ್ಯಾಪ್ತನಾದ ಭಗವಂತನ ವಿಭೂತಿ ರೂಪದ ಸಂಕೇತವಾಗಿದೆ.

೪+೩+೨=೯ ಇದು ನವಗ್ರಹಗಳನ್ನು ಸೂಚಿಸುತ್ತದೆ.

೪ x ೩ = ೧೨ ಇದು ದ್ವಾದಶ ಆದಿತ್ಯ ರೂಪ, ದ್ವಾದಶ ಜ್ಯೋತಿಲಿಂಗ, ದ್ವಾದಶ ರಾಶಿ, ಮಾಸಗಳ ಸಂಕೇತವಾಗಿದೆ.

೪ x ೩ = ೧೨, ೧೨ x  ೨ =೨೪  ಇದು ಮಹಾವಿಷ್ಣುವಿನ ೨೪ ರೂಪಗಳ ಸಂಕೇತ.  


ಶೂನ್ಯ ಅಂದರೆ ಬ್ರಹ್ಮದೇವರನ್ನು ಸೂಚಿಸುತ್ತದೆ, ಜ್ಞಾನ, ಪೂರ್ಣತೆಯ ಸಂಕೇತವಾಗಿದೆ. ಹೀಗೆ ಯುಗಗಳ ಕಾಲದ ಸಂಖ್ಯೆಯಲ್ಲಿ ಸೃಷ್ಟಿಯ ಮಹತ್ವದ ವಿಷಯಗಳು ಸೂಚ್ಯವಾಗಿವೆ.


ಬ್ರಹ್ಮದೇವರ ಒಂದು ಹಗಲಿನಲ್ಲಿ ಹದಿನಾಲ್ಕು ಮನ್ವಂತರಗಳು ಆಗುತ್ತವೆ. ೧) ಸ್ವಾಯಂಭುವ ೨) ಸ್ವಾರೋಚಿಷ ೩) ಉತ್ತಮ ೪) ತಾಪಸ ೫) ರೈವತ ೬) ಚಾಕ್ಷುಷ ೭) ವೈವಸ್ವತ ೮) ಸಾವರ್ಣಿ ೯) ದಕ್ಷಸಾವರ್ಣಿ ೧೦) ಬ್ರಹ್ಮಸಾವರ್ಣಿ ೧೧) ಧರ್ಮಸಾವರ್ಣಿ ೧೨) ರುದ್ರಸಾವರ್ಣಿ ೧೩) ದೇವಸಾವರ್ಣಿ ೧೪) ಇಂದ್ರಸಾರ್ವರ್ಣಿ ಎಂಬ ಮನು ಚತುರ್ದಶರು ಮನ್ವಂತರದ  ದೇವತೆಗಳಾಗುವರು.


ಕಲಿಯುಗದಲ್ಲಿ ಯುಧಿಷ್ಠಿರ ಶಕೆ, ವಿಕ್ರಮಶಕೆ, ಶಾಲಿವಾಹನ ಶಕೆ, ವಿಜಯಾಭಿನಂದ ಶಕೆ, ನಾಗಾರ್ಜುನ ಶಕೆ ಮತ್ತು ಕಲ್ಕಿಭೂಪತಿ ಶಕೆ ಎಂಬ ೬ ಶಕಕರ್ತರು ಇರುವರು. 


ಈಗ ಕಲಿಯುಗದ ೫,೧೨೩ ಕಳೆದ ವರ್ಷಗಳು ಕಳೆದಿವೆ ಅಂದರೆ ೪,೨೬,೮೭೭ ವರ್ಷಗಳು ಉಳಿದಿವೆ. ಇಂದಿನಿಂದ ವೈವಸ್ವತ ಮನ್ವಂತರ, ಶಾಲಿವಾಹನ ಶಕೆ ೧೯೪೪, ಶ್ರೀಶುಭಕೃತ ನಾಮ ಸಂವತ್ಸರ ಆರಂಭವಾಗಿದೆ.


ಶ್ರೀಶುಭಕೃತ ಸಂವತ್ಸರ ಫಲ


ಶುಭಕೃದ್ ವತ್ಸರೆ ಸರ್ವಸಸ್ಯಾನಾಮತಿವೃದ್ಧಯಃ |

ನೃಪಾಣಾಂ ಸ್ನೇಹಮನ್ಯೋನ್ಯಂ ಪ್ರಜಾನಾಂ ಚ ಪರಸ್ಪರಮ್ ||


ಶುಭಕೃತ ಸಂವತ್ಸರದಲ್ಲಿ ಎಲ್ಲ ಸಸ್ಯಗಳೂ ಸಮೃದ್ಧವಾಗಿ ಬೆಳೆಯುವವು. ಭುವಿಯಲ್ಲಿ ಜೀವಸಂಕುಲ ಸಂತೋಷದಿಂದ ಇರುವದು. ಭಾರತದೊಂದಿಗೆ ಅಂತರಾಷ್ಟ್ರೀಯ ಸ್ನೇಹ ಸಂಬಂಧಗಳು ವೃದ್ಧಿಸುವದರಿಂದ ವ್ಯಾಪಾರ ವಹಿವಾಟು ಹೆಚ್ಚುವದು. ಆರ್ಥಿಕ ಸುಧಾರಣೆ ಕಂಡುಬರುವದು. ಪ್ರಜೆಗಳಲ್ಲಿ ಸ್ವಾರ್ಥ, ದ್ವೇಷ, ಅಸೂಯೆಗಳು ಕಡಿಮೆಯಾಗಿ ಪರಸ್ಪರ ಅಂತಃಕರಣ, ಧರ್ಮ, ಪ್ರೇಮ ವೃದ್ಧಿಸುವದು.


ರಾಜ - ಶನಿ ಫಲ :

ಅತ್ಯಲ್ಪಂ ಅತ್ಯಲ್ಪತರಾ ಚ ವೃಷ್ಟಿಃ ಅಧರ್ಮಯುಕ್ತಾ ಮನುಜಾಶ್ಚ ಸರ್ವೇ| 

ತೇ ನೀಚ ಕರ್ಮಾಣಿ ಮನುಜಾಶ್ಚರಂತಿ ನೀಚಾದಿಕಾನಾಂ ಸುಖಮರ್ಕಜೇಬ್ಜೇ || 


ಸಂವತ್ಸರದ ರಾಜ ಶನಿಯಾಗಿರುವಾಗ ಅಲ್ಪವೃಷ್ಟಿಯಾಗುವದು, ಜನರು ಅಧರ್ಮಯುಕ್ತರಾಗುವರು ಹಾಗೂ ನೀಚಕರ್ಮಗಳಲ್ಲಿ ತೊಡಗುವರು. ದುಷ್ಟಜನರಿಗೆ ಸುಕಾಲ, ಶಿಷ್ಟರಿಗೆ ಕಷ್ಟಕಾಲ ಕಂಡುಬರುವದು.  


ಮಂತ್ರಿ ಗುರು

ಸುವೃಷ್ಟಿ ಸರ್ವಸಸ್ಯಾನಾಂ ಜಾಯಂತೇ ಸುಖಿನೋಜನಾಃ | 

ನಾನಾ ಬುದ್ಧಿವಿಕಾಸಂ ಚ ಮಂತ್ರಿಣೀಜ್ಯಪತೌ ಭವೇತ್ ||

ಗುರು ಮಂತ್ರಿಯಾಗಿರುವಾಗ ಸುವೃಷ್ಟಿಯಾಗುವದು. ಧಾನ್ಯಗಳು ಸಮೃದ್ಧವಾಗಿ ಬೆಳೆಯುವವು. ಪಾಣಿಪಕ್ಷಿಗಳಿಗೆ ಶುಭವಾಗುವದು, ಶೈಕ್ಷಣಿಕ ಅಭಿವೃದ್ಧಿ ಇರುವದು. ಜನರಲ್ಲಿ ಬೌದ್ಧಿಕ ವಿಕಾಸವಾಗುವದು. ಔದ್ಯೋಗಿಕ ಪ್ರಗತಿಯಿಂದ ಜನರು ಸುಖದಿಂದ ಇರುವರು. 


ಅರ್ಘಾಧಿಪ ಬುಧ 

ಸಸ್ಯಾಧಿಪತಿ ಶನಿ 

ಸೇನಾಧಿಪ ಬುಧ 

ರಸಾಧಿಪತಿ ಚಂದ್ರ 

ಧಾನ್ಯಾಧಿಪತಿ ಶುಕ್ರ 

ನಿರಸಾಧಿಪತಿ ಶನಿ 

ಮೇಘಾಧಿಪತಿ ಬುಧ

ಪಶುಪಾಲಕ ಬಲರಾಮ ನಾಗಿರುವನು.


ಗುರುಬಲ

ದಿನಾಂಕ ೧೩/೦೪/೨೦೨೨ರಂದು ಮಧ್ಯಾಹ್ನ ೦೩.೫೧ಕ್ಕೆ ಗುರು ಮೀನರಾಶಿ ಪ್ರವೇಶಿಸುವನು.

ಗುರು ಮೀನರಾಶಿಯಲ್ಲಿ ಸಂಚರಿಸುವಾಗ ವೃಷಭ, ಕರ್ಕ, ಕನ್ಯಾ, ವೃಶ್ಚಿಕ ಹಾಗೂ ಕುಂಭ ರಾಶಿಯವರಿಗೆ ಪೂರ್ಣ ಗುರುಬಲವಿದೆ. ಮಿಥುನ, ತುಲಾ, ಮಕರ ಮತ್ತು ಮೀನ ರಾಶಿಯವರಿಗೆ ಮಧ್ಯಮ ಬಲವಿದೆ. ಮೇಷ, ಸಿಂಹ ಹಾಗೂ ಧನು ರಾಶಿಯವರಿಗೆ ಗುರುಬಲ ಇರುವದಿಲ್ಲ.

ಗುರುಬಲ ಇಲ್ಲದವರು ಮತ್ತು ಮಧ್ಯಮ ಬಲ ಇದ್ದವರೂ ಕೂಡ ಶಾಂತಿಪೂರ್ವಕ ಮಂಗಲಕಾರ್ಯ ಮಾಡಬೇಕು


ಆಯವ್ಯಯ

ಮೇಷ,ವೃಶ್ಚಿಕ 8 ಆಯ, 5 ವ್ಯಯ 

ವೃಷಭ, ತುಲಾ 2 ಆಯ, 14 ವ್ಯಯ 

ಮಿಥುನ, ಕನ್ಯಾ 8 ಆಯ, 11 ವ್ಯಯ 

ಕರ್ಕ 2 ಆಯ, 8 ವ್ಯಯ 

ಸಿಂಹ 5 ಆಯ, 5 ವ್ಯಯ 

ಧನು, ಮೀನ 5 ಆಯ, 11 ವ್ಯಯ 

ಮಕರ, ಕುಂಭ 14 ಆಯ, 11 ವ್ಯಯ



ಭಾನುರ್ಭೂತಿಕರಂ ಶಶಿಃ ಸುಖಕರಂ ಲಕ್ಷ್ಮೀಕರಂ ಶ್ರೀಕರಂ 

ಚಿತ್ತಾನಂದಕರಂ ರಣೇ ಜಯಕರಂ ಶ್ರೋತಸ್ಯ ಪುಣ್ಯಾಕರಂ | 

ಭಾಗ್ಯಾಭೋಗ್ಯ ಕಲತ್ರ ಸಂತತಿಕರಂ ಶ್ರೀಯಸ್ಕರಂ ಸಂಪಾದಾಂ 

ಪಂಚಾಂಗಂ ಶೃಣು ಸಾವಧಾನ ಸಮಯೇ ತ್ರೈಲೋಕ್ಯ ವಶ್ಯಾಕರಂ ||೭||


ತಿಥೇಶ್ಚಶ್ರೀಯಮಾಪ್ನೋತಿ ವಾರಾದಾಯುಷ್ಯವರ್ಧನಂ

ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ |

ಕರಣಾತ್ಕಾರ್ಯ ಸಿದ್ಧಿಸ್ಯಾತ್ ಪಂಚಾಂಗ ಫಲಮುತ್ತಮಂ ||೮||


ಸ್ವಸ್ತಿಸ್ತು ತೇ ಕುಶಲಮಸ್ತು ಚಿರಾಯುರಸ್ತು 

ಗೋ ಹಸ್ತಿ ವಾಜಿ ಧನಧಾನ್ಯ ಸಮೃದ್ಧಿರಸ್ತು | 

ಐಶ್ಚರ್ಯಮಸ್ತು ವಿಜಯಸ್ತು ರಿಪುಕ್ಷಯಸ್ತು 

ಕಲ್ಯಾಣಮಸ್ತು ಸತತಂ ಶ್ರೀಹರಿ  ಭಕ್ತಿರಸ್ತು

***

2023 calender

CLICK

TTD 2023 CALENDER


2021 CALENDER

CLICK

  TTD 2021 CALENDER

No comments:

Post a Comment