SEARCH HERE

Friday, 1 October 2021

ಸ್ವಪ್ನ ಫಲಗಳು

 ಸ್ವಪ್ನ ಫಲಗಳು ( DREAMS)💐🌺✍️

   *ಸ್ವಪ್ನದಲ್ಲಿ "ಕುದುರೆ" ಬಂದರೆ : ಶುಭಫಲವಾಗುವುದು, ಶುಭ ಪ್ರಯಾಣವಾಗುವುದು, ಧನಾಗಮನವೂ ಆಗುವುದು..


*"ಆನೆಗಳು" ಆಹಾರ ತಿನ್ನುತ್ತಿರುವುದು, ಗುಂಪಾಗಿ ಇರುವುದು ಸ್ವಪ್ನ ಬಂದರೆ :ಅತ್ಯಂತ ಶುಭ, ಐಶ್ವರ್ಯ ವೃದ್ಧಿ, ಸುಖ ಜೀವನವಾಗುತ್ತದೆ.

*ಆನೆಯು ಓಡಿಸಿಕೊಂಡು ಬಂದಂತೆ ಕಂಡರೆ ಸ್ವಲ್ಪ ಕಷ್ಟದ ಸಮಯವಾಗಿರುತ್ತದೆ..


*ಗೋವುಗಳು ಸ್ವಪ್ನದಲ್ಲಿ ಬಂದರೆ : ಅತ್ಯಂತ ಶುಭ, ಇಷ್ಟಾರ್ಥ ಸಿದ್ಧಿ, ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ, ಶುಭಕಾರ್ಯ ನಡೆಯುತ್ತದೆ.

*ಹಸು ಒದೆಯುವುದು, ತುಂಬಾ ಜೋರಾಗಿ ಕೂಗುವುದು ಅಶುಭವಾಗಿರುತ್ತದೆ.


*ನರಿ ಕಾಣಿಸಿದರೆ : ಕಷ್ಟದ ಮುನ್ಸೂಚನೆ, ಸಂಕಟ ಎದುರಾಗುವ ಸಮಯವಾಗಿರುತ್ತದೆ, ಎಚ್ಚರಿಕೆ ವಹಿಸುವುದು ಒಳ್ಳೆಯದು, ನಂಬಿದವರಿಂದ ಮೋಸವಾಗುವುದು...(ಹಗಲಿನಲ್ಲಿ ನೇರವಾಗಿ ನರಿ ಕಾಣಿಸಿದರೆ ಶುಭ )..


*ನಾಗರ ಹಾವು ಹೆಡೆ ಎತ್ತಿ ಶಾಂತ ರೀತಿಯಿಂದ ನೋಡಿದರೆ ತುಂಬಾ ತುಂಬಾ ಶುಭಪಲ ಉಂಟಾಗುವುದು.

*ಬುಸುಗುಡುತ್ತಾ ಹೆಡೆ ಎತ್ತಿದರೆ, ಪದೇ ಪದೇ ಸ್ವಪ್ನದಲ್ಲಿ ಬರುತ್ತಿದ್ದಾರೆ, ಓಡಿಸಿಕೊಂಡು ಬಂದಂತೆ ಸ್ವಪ್ನ ಬೀಳುತ್ತಿದ್ದರೆ, ಅಶುಭವಾಗಿರುತ್ತದೆ.. ದೋಷವನ್ನೂ ತೋರಿಸುತ್ತದೆ..


*ಕಾಗೆ ಸ್ವಪ್ನದಲ್ಲಿ ಪದೇ ಪದೇ ಬರುತ್ತಿದ್ದರೆ ಅಶುಭ ,ಕೆಲವೊಮ್ಮೆ ಪಿತೃ ದೋಷವಾಗಿರುತ್ತದೆ, ಅಶುಭ ಸಮಾಚಾರಳು ಬರಬಹುದು..

ಪಿತೃಕಾರ್ಯಗಳು ಸರಿಯಾಗಿ ಮಾಡದಿದ್ದಾಗ ಹೀಗೆ ಕಾಗೆಗಳು ಹೆಚ್ಚು ಸ್ವಪ್ನದಲ್ಲಿ ಬರುತ್ತವೆ..


*ಸ್ವಪ್ನದಲ್ಲಿ "ದೀಪಗಳು" ಬಂದರೆ ಶುಭ ಫಲವಾಗುತ್ತದೆ, ಆದರೆ ದೀಪ ಉರಿಯುತ್ತಿರಬೇಕು.

ಆರಿದ ದೀಪ ಕಂಡರೆ ಅಶುಭವಾಗುತ್ತದೆ.


*"ಶವ ಮತ್ತು ಸಂಸ್ಕಾರ" : ತನ್ನ ಶವ ಅಥವಾ ತನ್ನ ಪ್ರಿಯ ಜನರ ಶವ ಅಥವಾ ಶವ ಸಂಸ್ಕಾರ ಮಾಡುವಂತೆ ಸ್ವಪ್ನ ಬಿದ್ದರೆ, ತುಂಬಾ ಶುಭವಾಗುತ್ತದೆ, ಆಯಸ್ಸು ದೀರ್ಘ ವಾಗಿರುತ್ತದೆ, 

*ಸತ್ತಂತಹ ಹಿರಿಯರು ಕನಸಲ್ಲಿ ಬಂದರೆ ಅದು ಎಚ್ಚರಿಕೆಯ ಸಂಕೇತ, ಶ್ರಾದ್ಧ ಕರ್ಮಗಳು ಸರಿಯಾಗಿ ಮಾಡಬೇಕು..


*" ದೇವಸ್ಥಾನಗಳು" ಸ್ವಪ್ನದಲ್ಲಿ ಬಂದರೆ ಶುಭ ಲಕ್ಷಣವಾಗಿರುತ್ತದೆ.., 

ಇಂತಹ ವ್ಯಕ್ತಿ ಆದ್ಯಾತ್ಮಿಕ ,ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಭಾಗವಹಿಸುವರು.

*ಸ್ಪಷ್ಟವಾಗಿ ದೇವಾಲಯ ಕಾಣದೇ ಇದ್ದರೆ ಅಥವಾ ದೇವರ ದರ್ಶನವಾಗದೇ ಇದ್ದರೆ, ಯಾವುದೇ ದೇವರ ಹರಕೆ ಉಳಿದಿರುತ್ತದೆ,ಆ ಹರಕೆಯನ್ನು ತೀರಿಸಿ ಮತ್ತು ಮನೆದೇವರ ದರ್ಶನ ಅವಶ್ಯ ಮಾಡಬೇಕು..

ಶುಭವಾಗಲಿ..

"ಕೆಟ್ಟ ಕನಸುಗಳು, ಪದೇ ಪದೇ ಬರುತ್ತಿದ್ದರೆ,ಅರಿಶಿನಕೊಂಬು ತಲೆಕೆಳಗಡೆ ಇಟ್ಟುಕೊಂಡು ಮಲಗಿದರೆ ಶುಭ".ಮಲಗೋ ಸಮಯದಲ್ಲಿ ಕೈ ಕಾಲು ಮುಖ ತೊಳೆದು ವಿಭೂತಿ  ಇತರೆ ತಿಲಕ ಧಾರಣೆ ಮಾಡಿ ಮಲಗಿ. ಹಾಗೂ.... ಸಮಸ್ಯೆ ಪರಿಹಾರ ಆಗಲಿಲ್ಲ ಎಂದರೆ ಯಾರಾದ್ರೂ ಧಾರ್ಮಿಕ ವ್ಯಕ್ತಿಗಳ ನಿಮ್ಮ ಮನೆತನದ ಗುರುಗಳ ಹಿರಿಯರ ಪುರೋಹಿತರ  ಜೊತೆ ಚರ್ಚೆ ಮಾಡಿ ಸಲಹೆ ಸೂಚನೆ ಸ್ವೀಕರಿಸಿ. 💐🌺✍️ಲೋಕಾ ಸಮಸ್ತಾ ಸುಖಿನೋ ಭವಂತು. ಚಿತ್ರದಲ್ಲಿ ನನ್ನ ಆತ್ಮೀಯ ಶಿಷ್ಯ ಕೋಟಿ.  ಗುರುವನ್ನೇ ಪರಮಾತ್ಮ ಎಂದು ನಂಬಿರೋ ಎಲ್ಲಾ ಆಧ್ಯಾತ್ಮಿಕ ಬಂಧುಗಳಿಗೆ ಶುಭವಾಗಲಿ 🌺

***


No comments:

Post a Comment