ತಥಾಸ್ತು ದೇವತೆಗಳು ಸಂಚರಿಸುವ ವೇಳೆ ಯಾವುದು ಗೊತ್ತೇ ನಿಮಗೆ ?*
ತಥಾಸ್ತು ದೇವತೆಗಳು ಸಂಚರಿಸುವ ಈ ಒಂದು ಸಮಯದಲ್ಲಿ ನೀವು ಯಾವ ಮಾತನ್ನು ಅಂದುಕೊಳ್ಳುತ್ತೀರೋ ಅಂತಹ ಮಾತುಗಳು ನಡೆದೇ ನಡೆಯುತ್ತದೆ. ತಥಾಸ್ತು ಎಂದರೆ ಒಳ್ಳೆಯದಾಗುತ್ತದಾ ಹಾಗೂ ಯಾವ ಸಮಯದಲ್ಲಿ ದೇವತೆಗಳ ಸಂಚಾರವಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮನೆಯಲ್ಲಿ ಏನಾದರೂ ಕೆಟ್ಟದನ್ನು ಮಾತನಾಡಿದರೆ ಹಿರಿಯರು ಮುಸ್ಸಂಜೆ ವೇಳೆಯಲ್ಲಿ ಏನು ಈ ರೀತಿ ಮಾತನಾಡುತ್ತಿರುವುದು ಬಾಯಿಯನ್ನು ಮುಚ್ಚು ಎಂದು ಹೇಳಿರುವ ಉದಾಹರಣೆ ಇದೆ, ಒಂದು ವೇಳೆ ಮನುಷ್ಯನು ಜೀವನದಲ್ಲಿ ಧರ್ಮದ ವಿರುದ್ಧ ಏನಾದರೂ ಮಾತನಾಡಿದರೆ ತಥಾಸ್ತು ದೇವತೆಗಳು ತಥಾಸ್ತು ಎನ್ನುತ್ತಾರೆ. ಪುರಾಣಗಳ ಪ್ರಕಾರ ತಥಾಸ್ತು ದೇವತೆಗಳು ಯಾರೆಂದರೆ ಸೂರ್ಯದೇವನ ಪತ್ನಿಯಾದ ಸನ್ಯಾದೇವಿ ಸೂರ್ಯನ ಅತಿ ಪ್ರಕಾಶಮಾನವನ್ನು ತಾಳಲಾರದೆ ಅಶ್ವದ ರೂಪದಲ್ಲಿ ತನ್ನ ರೂಪವನ್ನು ತಾಳುತ್ತಾರೆ.
ತದನಂತರ ಕುದುರೆಯ ರೂಪದಲ್ಲಿ ಕುರು ದೇಶಕ್ಕೆ ಹೋಗುತ್ತಾಳೆ , ಆಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವುದನ್ನು ಕಂಡು ತಾನು ಕೂಡ ಕುದುರೆ ಯಾಗುತ್ತಾನೆ, ಆಗ ಜನಿಸಿದವರು ತಥಾಸ್ತು ದೇವತೆಗಳು ಹಾಗೂ ಅಶ್ವಿನಿ ಕುಮಾರರು. ಇವರನ್ನು ದೇವತಾ ವೈದ್ಯರು ಎಂದು ಕರೆಯಲಾಗುತ್ತದೆ.
ಇವರು ಯಜ್ಞವನ್ನು ಮಾಡುವ ಜಾಗದಲ್ಲಿ ತಥಾಸ್ತು ಎಂದು ಹೇಳುತ್ತಿರುತ್ತಾರೆ ಹಾಗೂ ಸಂಚಾರ ಮಾಡುವಾಗ ತಥಾಸ್ತು ಎಂದು ಹೇಳುತ್ತಿರುತ್ತಾರೆ. ಯಾರು ತಮ್ಮ ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಬೆಳಗ್ಗೆ ಪೂಜೆಯನ್ನು ಮಾಡುತ್ತಾರೋ ಇಂಥವರಿಗೆ ತಥಾಸ್ತು ದೇವತೆಯವರ ಆಶೀರ್ವಾದ ಬೇಗ ದೊರೆಯುತ್ತದೆ.
ಮನುಷ್ಯನು ಸಾಯಂಕಾಲದ ಸಮಯದಲ್ಲಿ ಯಾವಾಗಲೂ ಒಳ್ಳೆಯ ಮಾತುಗಳನ್ನು ಆಡಬೇಕು, ಒಂದು ವೇಳೆ ಭಗವಂತ ನಮಗೆ ಎಲ್ಲವನ್ನೂ ನೀಡಿದ್ದರೂ ಇಲ್ಲ ಎಂದು ಹೇಳಿದರೆ ಅವನ ಜೀವನದಲ್ಲಿ ಏನೂ ಇಲ್ಲದಂತೆ ಆಗುತ್ತದೆ. ಆದ್ದರಿಂದ ಮುಸ್ಸಂಜೆ ವೇಳೆಯಲ್ಲಿ ಸಾಧ್ಯವಾದಷ್ಟು ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸಬೇಕು.
ತಥಾಸ್ತು ದೇವತೆಗಳು ಸಂಚರಿಸುವ ವೇಳೆ ಯಾವುದೆಂದರೆ ಅದು ಸಾಯಂಕಾಲದ ವೇಳೆ, ಆದ್ದರಿಂದ ಸಾಯಂಕಾಲದ ವೇಳೆಯಲ್ಲಿ ಮನುಷ್ಯನು ತಮಗಿರುವ ಕಷ್ಟಗಳು ದೂರವಾಗಲಿ ಎಂದು ಸ್ಮರಿಸಿಕೊಳ್ಳಬೇಕು, ಆಗ ಮಾತ್ರ ಅವನ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ.
ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಬಯಸುತ್ತಾ ಬಂದರೆ ತಥಾಸ್ತು ದೇವತೆಗಳು ಸಂತೋಷಗೊಂಡು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಬರದ ಹಾಗೆ ಆಶೀರ್ವಾದವನ್ನು ಮಾಡುತ್ತಾರೆ.
***
No comments:
Post a Comment