SEARCH HERE

Friday 1 October 2021

ದೀಪ ಹಿತ್ತಾಳೆ ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ

ಹಿತ್ತಾಳೆ ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ🪷


1. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪವನ್ನು ಹಚ್ವುತ್ತಾರೆಯೋ ಆ ಮನೆಯಲ್ಲಿ ದೇವರಿಗೆ ತೇಜಸ್ಸು ಜಾಸ್ತಿಯಾಗುತ್ತದೆ, ಮನೆಗೆ ದೈವಬಲ ಬರುವುದು..


2. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪ ಹಚ್ಚಿ ದೇವರನ್ನು ಪೂಜಿಸುತ್ತಾರೋ ಆ ಮನೆಯಲ್ಲಿ ರೋಗಭಾದೆಗಳು, ಅಪಮೃತ್ಯುಗಳು ಬರುವುದಿಲ್ಲ..!


3. ಯಾರ ಮನೆಯಲ್ಲಿ ಸಂಕಲ್ಪ ಸಮೇತ ಹಿತ್ತಾಳೆ ದೀಪವನ್ನು ಹಚ್ಚಿ, ದೀಪಕ್ಕೆ ಪೂಜಿಸಿ, ದೇವರ ಪೂಜೆ ಮಾಡುತ್ತಾರೋ, ಆ ಮನೆಯಲ್ಲಿ ನ ಸರ್ವ ವಿವಾಹ ದೋಷ ನಿವಾರಣೆಯಾಗಿ, ವಿಘ್ನಗಳು ನಿವಾರಣೆಯಾಗಿ ವಿವಾಹ ಯೋಗವು ಬರುತ್ತದೆ..!


4. ಮಂತ್ರಸಿದ್ಧಿ ಬೇಕೆನ್ನುವರು ಹಿತ್ತಾಳೆ ದೀಪ ಹಚ್ಚಿ ಪೂಜಿಸಿದರೆ ಮಂತ್ರವು ಬೇಗ ಸಿದ್ಧಿಯಾಗುವುದು..!


🌹“ದೇವರ ದೀಪ”🌹 ಹಚ್ಚೋವಾಗ ಯಾವಾಗಲು ಕುಳಿತು ಹಚ್ಚಬೇಕು‌🪷


“ಮನೆಯಲ್ಲಿ ” ಬೆಣ್ಣೆ” ಕಾಯಿಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ , ಆ ಮನೆಯಲ್ಲಿ ಅಭಿಷ್ಟ ಸಿದ್ಧಿಗಳು ಲಭಿಸುತ್ತವೆ..


ಲಕ್ಷ್ಮೀಕಟಾಕ್ಷ ಎಂದೆಂದೂ ಇರುತ್ತದೆ.‌.!


1. “ತುಪ್ಪದ ದೀಪಗಳನ್ನು” ಸುಬ್ರಹ್ಮಣ್ಯ ಸ್ವಾಮಿ, ಸರ್ಪದೇವತೆಗಳ ಮುಂದೆ ಹಚ್ಚಿದರೆ , ಆ ಕುಟುಂಬದವರಿಗೆ ಎಂದೂ ಸರ್ಪದೋಷಗಳು ಬರುವುದುಲ್ಲ..!


2. “ಮಹಾಗಣಪತಿಗೆ” ೨೧ ದಿನ ತುಪ್ಪದ ದೀಪ ಹಚ್ಚಿದರೆ ನೆನೆದ ಕಾರ್ಯಗಳು ನೆರವೇರುತ್ತವೆ‌‌..


3. ದೇವಿ ದೇವಾಲಯಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ “ತುಪ್ಪದ ದೀಪ” ಹಚ್ಚಿ ಪ್ರಾರ್ಥಿಸಿದರೆ “ಕುಜದೋಷ” ನಿವಾರಣೆಯಾಗುತ್ತದೆ..


4. ಶ್ರೀಚಕ್ರ ದೇವತೆಗಳಿಗೆ, ಗಾಯತ್ರೀದೇವಿಗೆ, ಕಾಮಾಕ್ಷಿ ದೇವಿಗೆ, ಮೀನಾಕ್ಷಿ ದೇವಿ, ತ್ರಿಪುರಸುಂದರಿ ದೇವಿ .. ಇತ್ಯಾದಿ ದೇವತೆಗಳಿಗೆ “ತುಪ್ಪದ ದೀಪ” ಹಚ್ಚಿದರೆ “ನೆನೆದ ಕಾರ್ಯಗಳು” ಕ್ಷಿಪ್ರವಾಗಿ ನೆರವೇರುತ್ತವೆ..!


5. ” ಶ್ರೀ ರಾಮನವಮಿ” ದಿವಸ “ಶ್ರೀ ರಾಮಚಂದ್ರ” ದೇವರಿಗೆ “ತುಪ್ಪದ ದೀಪ” ಹಚ್ಚಿ ಯಾರು ಪೂಜಿಸುತ್ತಾರೋ , ಅವರ ಮನೆಯಲ್ಲಿ ಅಣ್ಣ ತಮ್ಮಂದಿರ ಕಲಹಗಳು ಇರುವುದಿಲ್ಲ..!


6. “ಶ್ರೀ ಕೃಷ್ಣಾಷ್ಟಮಿ” ದಿವಸ “ಶ್ರೀ ಕೃಷ್ಣನಿಗೆ” ತುಪ್ಪದ ದೀಪ ಹಚ್ಚಿ , “ಶ್ರೀ ಕೃಷ್ಣ ಸಹಸ್ರನಾಮ” ಹೇಳುತ್ತಾರೋ, ಅವರಿಗೆ ಪುತ್ರ ಸಂತಾನವಾಗುತ್ತದೆ..!

ಮಕ್ಕಳಿರುವವರು ಓದಿದರೆ ಮಕ್ಕಳು ಆರೋಗ್ಯವಾಗಿದ್ದು ಸನ್ಮಾರ್ಗದಲ್ಲಿ ನಡೆಯುತ್ತಾರೆ‌..!


7. ಯಾರಿಗೆ ಮಕ್ಕಳು ಆಗಿ ಹೋಗುತ್ತಿರುತ್ತವೆಯೋ ಮತ್ತು ಮಕ್ಕಳು ಬದುಕುವುದಿಲ್ಲವೋ, ಅಂಥವರು “ಸಂತಾನ ಗೋಪಾಲಕೃಷ್ಣ” ಸ್ವಾಮಿಗೆ, ತುಪ್ಪದ ದೀಪವನ್ನು ಹಚ್ಚಿ, “ಸಂತಾನಗೋಪಾಲಕೃಷ್ಣ” ಸ್ವಾಮಿ‌ಯ ಮೂಲಮಂತ್ರವನ್ನು ಭಕ್ತಿಯಿಂದ “ಜಪ” ಮಾಡಿದರೆ, ಅವರಿಗೆ “ಒಂದು ವರ್ಷದ ಒಳಗೆ ಪುತ್ರಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮಗುವು ಆಯುಷ್ಯವಂತನಾಗಿ ಇರುತ್ತಾರೆ…!


8. ” ಸ್ತ್ರೀ ಸಂತಾನ” ಬೇಕೆಂದು ಅಪೇಕ್ಷೆ ಪಡುವವರು, “ಶ್ರೀ ದುರ್ಗಾ ಸಪ್ತಶತಿ” ಪಾರಾಯಣ ಮಾಡುವಾಗ “ತುಪ್ಪದದೀಪ” ಹಚ್ಚಿ ಪ್ರಾರ್ಥನೆಯನ್ನು ಮಾಡುತ್ತಾರೋ ಅವರಿಗೆ, ಸಂವತ್ರದೊಳಗೆ ದೈವಭಕ್ತಳಾದ “ಸ್ತ್ರೀ” ಸಂತಾನವಾಗುತ್ತದೆ…!


9. ಯಾರಿಗೆ “ಸಂತಾನಭಾಗ್ಯ” ಇರುವುದಿಲ್ಲವೋ , ಅಂಥವರು ” ಶ್ರೀ ಷಷ್ಠೀದೇವತೆ” ಪೂಜೆ ಮಾಡಿ , ತುಪ್ಪದ ದೀಪ ಹಚ್ಚಿ, ಷೋಡಶೋಪಚಾರ ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ, ದೈವಸಂಕಲ್ಪದಿಂದ ಸಂತಾನಭಾಗ್ಯವಾಗುತ್ತದೆ.


10. ಇಷ್ಟದೇವತೆ ಮತ್ರು ಕುಲದೇವತೆಯ ಮುಂದೆ ಯಾರು ತುಪ್ಪದ ದೀಪ ಹಚ್ಚಿ ಪೂಜಿಸುತ್ತಾರೋ, ಅವರ ಮನೆಯು ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ..


11. ನವರಾತ್ರಿ ಸಮಯದಲ್ಲಿ ದೇವಿಗೆ ತುಪ್ಪದ ದೀಪ ಹಚ್ಚಿ ಯಾರು ಪೂಜಿಸುತ್ತಾರೋ, ಅವರಿಗಿರುವ ಸಕಲ ಶತೃಕಾಟವು ನಿವಾರಣೆಯಾಗುತ್ತದೆ.. ಸಕಲ ದುಃಖಗಳಿಂದ ಬಿಡುಗಡೆ ಹೊಂದುತ್ತಾರೆ..


12. ಆಶ್ವೀಜ ಮಾಸ , ಕೃಷ್ಣಪಕ್ಷ, ಅಮವಾಸ್ಯೆಯ ದಿವಸ(ದೀಪಾವಳಿ ಅಮಾವಾಸ್ಯೆ) ಯಲ್ಲಿ ಯಾರು ಸಾಯಂಕಾಲ “ಗೋಧೂಳಿ” ಲಗ್ನದಲ್ಲಿ “ಶ್ರೀಮಹಾಲಕ್ಷ್ಮೀ” ದೇವಿಗೆ ತುಪ್ಪದ ದೀಪ ಹಚ್ಚಿ , ಶಾಸ್ತ್ರೋಕ್ತವಾಗಿ ಪೂಜಿಸಿ, ಸಿಹಿ ತಿಂಡಿ ನೈವೇದ್ಯ ಮಾಡಿ, ಮಕ್ಕಳಿಗೆ ಹಂಚುತ್ತಾರೋ, ಅಂಥವರಿಗೆ ಮತ್ತು ಆ ಮನೆಯವರಿಗೆ, ವರ್ಷಪೂರ್ತಿ ಹಣಕಾಸಿನ ಸಮಸ್ಯೆ ಬರದೆ ನೆಮ್ಮದಿಯಾಗಿ ಜೀವನ ಮಾಡುತ್ತಾರೆ..


ಓಂ ಅಸತೋಮ ಸದ್ಗಮಯ,

ತಮಸೋಮ ಜ್ಯೋತಿರ್ಗಮಯ

ಮೃತ್ಯೋರ್ಮ ಅಮೃತಂಗಮಯ

ಓಂ ಶಾಂತಿ ಶಾಂತಿ ಶಾಂತಿ:


ಕತ್ತಲೆಯನ್ನು ಹಿ೦ದಕ್ಕೆ ಬಿಟ್ಟು ಬೆಳಕನ್ನು ಪಡೆಯುವತ್ತ – ಪಡೆದ ಬೆಳಕನ್ನು ಎಲ್ಲರೊ೦ದಿಗೆ ಹ೦ಚಿಕೊ೦ಡು ಬದುಕಬೇಕೆ೦ಬ ಸನ್ಮಸನ್ನು ಪಡೆಯುವತ್ತ, ಸಮಸ್ತ ಜೀವಿಗಳ ಮೇಲೆ ದೃಷ್ಟಿ ನೆಟ್ಟಿರಬೇಕು.


ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು ಎಲ್ಲಾ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ.


ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.


ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ, ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.

***


No comments:

Post a Comment