SEARCH HERE

Friday 1 October 2021

ಬೆಳ್ಳಿಯ ದೀಪಗಳ ವಿಶೇಷತೆಗಳು

 ಬೆಳ್ಳಿಯ ದೀಪಗಳ ವಿಶೇಷತೆಗಳು


1. ಯಾರ ಮನೆಯಲ್ಲಿ ದೇವರಿಗೆ ಬೆಳ್ಳಿಯ ದೀಪದಲ್ಲಿ ಹಸುವಿನ ತುಪ್ಪ, ಕೊಬ್ಬರೀ ಎಣ್ಣೆ, ಅಥವ ಸೂರ್ಯಕಾಂತಿ ಎಣ್ಣೆಯಿಂದ ಯಾರು ದೀಪವನ್ನು ಹಚ್ಚುತ್ತಾರೆಯೋ, ಅವರಿಗೂ ಮತ್ತು ಆ ಮನೆಯವರಿಗೂ ಅಷ್ಟನಿಧಿ ಹಾಗೂ ನವನಿಧಿ ಪ್ರಾಪ್ತಿಯಾಗುತ್ತದೆ..

ದೀಪ ದುರ್ಗಾ ದೇವಿ ಮತ್ತು ಮಹಾಲಕ್ಷ್ಮಿಯು ಅನುಗ್ರಹವಾಗಿ, ಉತ್ತಮ ಜೀವನ ನಡೆಸುತ್ತಾರೆ..

ಅಂತಹ ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ..


2. ಯಾರ ಮನೆಯಲ್ಲಿ ಶ್ರೀ ಬಲಮುರಿ ಗಣೇಶನ ಮುಂದೆ, ಶ್ರೀ ಚಕ್ರೇಶ್ವರೀ ದೇವಿ, ಶ್ರೀ ರಾಜರಾಜೇಶ್ವರೀ ದೇವಿ, ಶ್ರೀ ಲಲಿತಾ ತ್ರಿಪುರ ಸುಂದರೀ ದೇವಿ ಅಥವಾ ಶ್ರೀ ಲಕ್ಷ್ಮೀ ನಾರಾಯಣ, ಸಾಲಿಗ್ರಾಮ ದೇವರಿಗೇ ಆಗಲಿ , ಬಲಮುರಿ ಶಂಖದ ಮುಂದೆಯೇ ಆಗಲಿ ಹಚ್ಚಿದರೆ, ನೆನೆದ ಕಾರ್ಯಗಳು ಬಹಳ ಬೇಗ ಆಗುತ್ತವೆ..

ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಅಧಿಕ ಲಾಭವಾಗುತ್ತದೆ ...


🌹ದೀಪದ ಮುಖಗಳು ಅಥವಾ ಬತ್ತಿಗಳು🌹


ಒಂದು ಮುಖ ಅಥವ ಬತ್ತಿಯಿಂದ : ಮಧ್ಯಮ ಲಾಭವಾಗುತ್ತದೆ ..,


ಎರಡು ಮುಖದಿಂದ : ಕುಟುಂಬದಲ್ಲಿ ಒಗ್ಗಟ್ಟು ಇರುತ್ತದೆ..,


ತ್ರಿಮುಖದಿಂದ : ಸಂತಾನ ಭಾಗ್ಯ ಮತ್ತು ಉತ್ತಮ ಸಂತಾನವಾಗುತ್ತದೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..!,


ಚತುರ್ಮುಖದಿಂದ : ಧನಸಂಪತ್ತು ಹಾಗೂ ಐಶ್ವರ್ಯ ಭಾಗ್ಯಗಳು ಲಭಿಸುತ್ತವೆ..


ಪಂಚಮುಖದಿಂದ : ಸಂಪತ್ತು ಮತ್ತು ಅಧಿಕ ಲಾಭವಾಗುತ್ತದೆ, ನೆಮ್ಮದಿ ..

..


🌹ಬತ್ತಿಯ ಸಂಖ್ಯೆಗಳು ಮತ್ತು ಮಹತ್ವಗಳು🌹


ಒಂದೊಂದು ದೀಪಕ್ಕೆ ಒಂದರಂತೆ ಎರಡು ದೀಪ ಹಚ್ಚಿದರೆ

ಮನೆಯಲ್ಲಿ ಸುಖ ಸಂತೋಷ ಎಂದೆಂದೂ ಇರುತ್ತದೆ ..


2+2 =4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ..


3+3 =6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತಿರುತ್ತದೆ ..


4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೇ ಆರೋಗ್ಯವಂತರಾಗಿ ಆಗುತ್ತಾರೆ..


5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಮತ್ತು ಗುರುಗಳ ಅನುಗ್ರಹದಿಂದ ಸಕಲ ಕಾರ್ಯಗಳೂ ನಡೆದೂ ಮನೆಯಲ್ಲಿ ಸುಖ ಸಂತೋಷಗಳು ಸಿಗುತ್ತವೆ..

(ಸಂಗ್ರಹ : ದೇವರ ದೀಪಗಳು)

***



No comments:

Post a Comment